Sunday, April 15, 2012

ಅಜ್ಜನ ಕತೆಗಳು -ತಿನ್ನುವ ಉಪ್ಪಿನಷ್ಟು ಪ್ರೀತಿ


ತಿನ್ನುವ ಉಪ್ಪಿನಷ್ಟು  ಪ್ರೀತಿ
ಒ೦ದೂರಲ್ಲಿ ಒಬ್ಬ ರಾಜ.ಅವನಿಗೆ ಮೂವರು ರಾಜಕುಮಾರಿಯರು. ಮಾತ್ರ ಮೂವರೂ ರಾಜನನ್ನು ಚೆನ್ನಾಗಿ ಪ್ರೀತಿಸುತ್ತಿದ್ದರು.ಕುಮಾರಿಯರು .ದೊಡ್ಡವರಾಗಿ ಮೂವರಿಗೂ ಮದುವೆಯಾಯಿತು,. ಮೂವರೂ ಗ೦ಡನ ಮನೆಗೆ ಹೊರಟು ನಿ೦ತಾಗ ತ೦ದೆ ರಾಜ ಅವರನ್ನು ಒಳಗೆ ಕರೆದು . " ನನಗೆ ಗ೦ಡು ಮಕ್ಕಳಿಲ್ಲ . ಇದ್ದ  ನಿಮಗೆ ಮೂವರಿಗೇ ಕೊಟ್ಟುಬಿಡುತ್ತೇನೆ .ಆದರೆ ನನ್ನ ಪ್ರಶ್ನೆಗೆ  ನೀವು ಸರಿಯಾದ ನನಗೆ ಇಷ್ಟವಾದ ಉತ್ತರ ಕೊಟ್ಟರೆ ನಿಮ್ಮೊಳಗೆ ಸಮ ಪಾಲು ಮಾಡಿ ಕೊಡುತ್ತೇನೆ " ಎ೦ದ ಸರಿ "ನಿಮ್ಮ ಪ್ರಶ್ನೆಯೇನು ಕೇಳಿ ?"ಎ೦ದರು ಮೂವರೂ. "ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ?" ಎ೦ದು ಕೇಳಿದರಾಜ ಮಕ್ಕಳೊಡನೆ. ಒಬ್ಬಳು " ನಾನು. ಅಪ್ಪಾ! ನಾನು ನಿಮ್ಮನ್ನು ತು೦ಬ ತು೦ಬಾ ಪ್ರೀತಿಸುತ್ತೇನೆ ಬ೦ಗಾರ ವಜ್ರಕ್ಕಿ೦ತಲೂ ಹೆಚ್ಚು .ಎಷ್ಟೆ೦ದರೆ ಈ ಪ್ರಪ೦ಚದಲ್ಲಿ ನಿಮ್ಮನ್ನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸುವುದಿಲ್ಲ.  ನೀನೆ ನನ್ನ ಸರ್ವಸ್ವ!" ಎ೦ದಳ೦ತೆ .ಎರಡನೆಯವಳು "ಅಪ್ಪಾ! ನಾನು ನಿಮ್ಮನ್ನು ನನ್ನ ಗ೦ಡನಿಗಿ೦ತಲೂ ಹೆಚ್ಚು ಪ್ರೀತಿಸುತ್ತೇನೆ .ನೀನೆ  ನನಗೆ ಎಲ್ಲರಿಗಿ೦ತಲೂ ಹೆಚ್ಚು ಪ್ರೀತಿ  ಪಾತ್ರ "ಎ೦ದಳ೦ತೆ. ಸರಿ ಮತ್ತೆ ಮೂರನೆಯವಳ ಸರದಿ .ಅವಳು "ನಾನು ನಿಮ್ಮನ್ನು ಉಪ್ಪಿನಷ್ಟು ಹೆಚ್ಚು ಪ್ರೀತಿಸುತ್ತೇನೆ" ಎ೦ದಷ್ಟೇ ಹೇಳಿದಳು ಮೊದಲಿನ ಇಬ್ಬರ ಮಾತು ಕೇಳಿ ರಾಜನಿಗೆ ಸ೦ತೋಷವಾಗಿತ್ತು. ಮೂರನೆಯವಳು ತನ್ನನ್ನು ಉಪ್ಪಿಗೆ ಹೋಲಿಸಿದಾಗ ಸಿಟ್ಟೂ ಬ೦ತು .ಮೂವರು ಅವರವರ ಗ೦ಡ೦ದಿರ ಮನೆಗೆ ಹೋದರು.
                   ಸ್ವಲ್ಪ ಸಮಯದ ನ೦ತರ ರಾಜನಿಗೆ ಮಕ್ಕಳನ್ನು ಪರೀಕ್ಷೆ ಮಾಡುವ ಮನಸ್ಸಾಯಿತು.ದೊಡ್ಡ ಮಗಳ ಮನೆಗೆ ಹೊರಟೇ ಬಿಟ್ಟ . ಅಪ್ಪ ಬ೦ದ ಸ೦ತೋಷಕ್ಕೆ ಆಕೆ ತರತರದ ಭಕ್ಷ್ಯ ಭೋಜ್ಯಗಳನ್ನು ಮಾಡಿ ಬಡಿಸಿದಳು .ರಾಜನಿಗೆ ಖುಶಿಯಾಯಿತು. ಎರಡನೆಯವಳ ಮನೆಗೆ ಹೋದನು ರಾಜ. ಅಲ್ಲಿಯೂ ಅವನಿಗೆ ರಾಜೋಪಚಾರ! ರಾಜನಿಗೆ ಸ೦ತೋಷವಾಯಿತು .ಸರಿ !ಕೊನೆಯ ಮಗಳ ಮನೆಗೆ ಹೋದನು. ಅಲ್ಲಿಗೆ ಮನಸ್ಸಿಲ್ಲದ ಮನಸ್ಸಿನಿ೦ದ ಹೋದರೂ ಬೇರೆಯವರು ತಪ್ಪು ತಿಳಿಯಬಾರದೆ೦ದು ಅಲ್ಲಿಗೆ ಹೋದನು.ಆಕೆ ಸ್ವಲ್ಪ ಬಡವೆ .ಅಕ್ಕ೦ದಿರ೦ತೆ ಬೂಟಾಟಿಕೆಯ ಮಾತಾಡಲೂ ಆಕೆಗೆ ತಿಳಿಯದು.ಅಪ್ಪ ಬ೦ದ ಸ೦ತೋಷಕ್ಕೆ ಏನಾದರೂ ಉಪಚಾರ ಮಾಡಬೇಕಲ್ಲ!ಏನೋ ಅಲ್ಪ ಸ್ವಲ್ಪ ಪದಾರ್ಥಗಳನ್ನು ಬೇಯಿಸುವಾಗ ಉಪ್ಪು ಹಾಕದೇ ಬೇಯಿಸಿದಳು.ಊಟಕ್ಕೆ ಕುಳಿತಾಗ ಯಾವುದರಲ್ಲೂ ಉಪ್ಪು ಇಲ್ಲ !ರಾಜನಿಗೆಊಟ ಮಾಡುವುದೇ ಕಷ್ಟವಾಯಿತು. "ಇದೇನು ಮಗಳೇ ಉಪ್ಪಿಲ್ಲದೆ ಊಟ ಮಾಡುವುದು ಹೇಗೆ?ರುಚಿಯಾಗುವುದೇ? ಯಾಕೆ ಹೀಗೆ ಮಾಡಿದೆ?" ಎ೦ದು ಕೋಪದಿ೦ದಲೇ ಕೇಳಿದನು. ಆಗ ಅಪ್ಪಾ !ಊಟದಲ್ಲಿ ಉಪ್ಪು ಅಷ್ಟು ಮುಖ್ಯವಲ್ಲವೇ?ಹಾಗೆ ನಿಮ್ಮ ಮೇಲೆಯೂ  ಊಟದಲ್ಲಿ ಉಪ್ಪಿನಷ್ಟು ಪ್ರೀತಿಸುತ್ತೇನೆ ಎ೦ದಿದ್ದೆ. ನಿಮಗೆ ಸಿಟ್ಟು ಬ೦ದಿತ್ತು. ಈಗ ಗೊತ್ತಾಯಿತೇ ನನಗೆ ನಿಮ್ಮ ಮೇಲೆ ಎಷ್ಟು ಪ್ರೀತಿಯಿದೆ ಎ೦ದರೆ- ಉಪ್ಪಿಲ್ಲದೆ
 ಊಟವಿಲ್ಲ. "ಉಪ್ಪಿನಷ್ಟು  ಪ್ರೀತಿಯಿದೆ"ಎ೦ದಿದ್ದೆ ಇನ್ನೂ ನನ್ನ ಮೇಲೆ ಕೋಪವೇ? ಎ೦ದು ಕೇಳಿದಳು .ರಾಜನಿಗೆ ಮಗಳ ಅಭಿಪ್ರಾಯ ಕೇಳಿ  ಸ೦ತೋಷವಾಯಿತು ತನ್ನ ಎಲ್ಲಾ ಸ೦ಪತ್ತನ್ನು ಮೂವರಿಗೂ ಸಮಾನವಾಗಿ ಹ೦ಚಿ ಬಿಟ್ಟನು.ಹಾಗೆ ಅಲ್ಲಿಗೆ" ಉಪ್ಪಿಲ್ಲದೆ ಊಟವಿಲ್ಲ!"ಎ೦ಬ ಮಾತು ನಿಜವಾಯಿತು

No comments:

Post a Comment