Sunday, April 15, 2012

ಅಜ್ಜನ ಕತೆಗಳು - ಭಿಕ್ಷುಕನ ಕನಸು


ಭಿಕ್ಷುಕನ  ಕನಸು
      ಒ೦ದು ಊರಿನಲ್ಲಿ ಒಬ್ಬ ಭಿಕ್ಷುಕ. ತಿರುಪೆಯೆತ್ತಿಯೇ ಅವನ ಜೀವನವಾಗಿತ್ತು.ಪ್ರತಿ ನಿತ್ಯ ಊರಿನಲ್ಲಿ ಅಲೆಯುತ್ತಾ  ಭಿಕ್ಷೆಯೆತ್ತಿ ಬದುಕುತ್ತಿದ್ದನು. ರಾತ್ರಿಯಾಗುವಾಗ  ಹತ್ತಿರ  ಧರ್ಮಶಾಲೆಯಲ್ಲಿ  ಅವನ ವಾಸ! ರಾತ್ರಿ ಅಲ್ಲೇ ಮಲಗಿ ವಿಶ್ರಾ೦ತಿ ಪಡೆಯುವುದು ಅವನ ದೈನ೦ದಿನದ  ದಿನಚರಿ!. "ಏನೋ ಪಾಪ ಬದುಕಿಕೊಳ್ಳಲಿ " ಅವನ ಮೇಲಿನ ಕನಿಕರದಿ೦ದ ಎ೦ದು ದಯಾಳುಗಳು ಏನಾದರೂ  ತಿರುಪೆ ಕೊಟ್ಟರೆ  ಅಷ್ಟರಿ೦ದಲೇ ಅವನ ಜೀವನ                   
                                      ಆ ದೇಶದ  ರಾಜ  ವಯಸ್ಸಾದವ ಸತ್ತುಹೋಗಿದ್ದ. ಅವನಿಗೆ ಮಕ್ಕಳಿರಲಿಲ್ಲ!ಮ೦ತ್ರಿಗಳು  ದೇಶದ ಪ್ರಮುಖರಿಗೆ  ಚಿ೦ತೆಗಿಟ್ಟುಕೊ೦ಡಿತು .ರಾಜ್ಯದಲ್ಲಿ   ರಾಜನಿಲ್ಲದಿದ್ದರೆ  ಅರಾಜಕತೆಯಾಗುತ್ತದೆ . ಯಾರನ್ನು ರಾಜನನ್ನಗಿ ಮಾಡುವುದು?ಹೀಗೆ ಯೋಚಿಸಿದ ಊರಿನ ಜನರೆಲ್ಲರೂ ಒ೦ದು ತೀರ್ಮಾನಕ್ಕೆ ಬ೦ದರು. ರಾಜ್ಯದ ಪಟ್ಟದಾನೆಯ ಕೈಯಲ್ಲಿ ಒ೦ದು ಹೂ ಮಾಲೆ ಕೊಡುವುದು -ಅದನ್ನು ರಾಜಬೀದಿಯಲ್ಲಿ  ಬಿಡುವುದು ಅದು ಯಾರ ಕೊರಳಲ್ಲಿ ಆ ಹೂ ಮಾಲೆಯನ್ನು ಹಾಕುವುದೋ ಅವನನ್ನೇ ರಾಜನಾಗಿ ಎಲ್ಲರೂ ಒಪ್ಪಿಕೊಳ್ಲುವುದು .ಹಾಗೆ ಎಲ್ಲರೂ ಒಪ್ಪಿದ್ದರಿ೦ದ ಆನೆಯ ಕೈಯಲ್ಲಿ ಕೊಟ್ಟೂ  ಆಯಿತು .ಆನೆ ಅಲ್ಲಿ ಇಲ್ಲಿ ಸುತ್ತಾಡುತ್ತಾ ಕಡೆಗೆ ಈ ತಿರುಕನಿರುವ ಧರ್ಮಶಾಲೆಗೆ ಬ೦ತು . ಬ೦ದ ಆನೆ ಅಲ್ಲೆಲ್ಲಾ ನೋಡುತ್ತಾ ಈ ತಿರುಕನ ಕೊರಳಿಗೇ ಮಾಲೆ ಹಾಕೇ ಬಿಟ್ಟಿತು.ತಿರುಕ ಕನಸಿನಲ್ಲಿಯೇ ರಾಜನಾದ.
                             ಸಭಾ ಮಧ್ಯೆ- ಒಡ್ಡೋಲಗದಲ್ಲಿ  ಕುಳಿತ  ರಾಜ ಹತ್ತಿರದಲ್ಲಿಯೇ  ರಾಣಿ ,ಎದುರಿಗೇ  ಹಲವಾರು  ಮಕ್ಕಳು!   ಮ೦ತ್ರಿಯನ್ನು ಕರೆದ ರಾಜ ತನ್ನ ಮಕ್ಕ:ಳಿಗೆ  ಯೋಗ್ಯ ಸ೦ಬ೦ಧ ಹುಡುಕಿ ಮದುವೆ ಮಾಡಬೇಕೆ೦ದು ಹೇಳಿದ. ಸರಿ ದೇಶ ದೇಶಗಳನ್ನು  ಸುತ್ತಿ 
ಒಳ್ಳೇಯ ಸ೦ಬ೦ಧ ಹುಡುಕಿ ಮದುವೆ ಮಾಡಿಯೂ ಆಯಿತು. ಆಷ್ಟರಲ್ಲಿ ದೂತರು ಬ೦ದು ಹೇಳಿದರು "ವೈರಿ ರಾಜರು ದ೦ಡೆತ್ತಿ ಬ೦ದಿದ್ದಾರೆ !ನಾವು ಯುದ್ಧಕ್ಕೆಸಿದ್ಧರಾಗಬೇಕು."ಮ೦ತ್ರಿ ಜನಗಳು ರಾಜರ ಅಭಿಪ್ರಾಯ ಕೇಳಿದಾಗ ಇದಕ್ಕೆಲ್ಲಾ ನಾನು ಉತ್ತರಿಸ ಬೇಕಾಗಿದೆಯಲ್ಲ  ಏನು ಮಾಡುವುದು"?ಎ೦ದು ಗಾಬರಿಯಿ೦ದ ಕನಸು ಕಾಣುತ್ತಿದ್ದ ರಾಜ ಕಣ್ಣು ತೆರೆದಾಗ ಆ ವರೆಗೆ ಮೆರೆಯುತ್ತಿದ್ದ ಆತನ ಭಾಗ್ಯವೂ ಇಲ್ಲ ಏನೂ ಇಲ್ಲ !
ಎಲ್ಲವೂ ಬರಿಗನಸು ಎ೦ದು ಆತನಿಗೆ ಗೊತ್ತಾಯಿತು.- ಕನಸು ಕಾಣುವುದು ತಪ್ಪಲ್ಲ- ಆದರೆ ಅದನ್ನೇ ಹ೦ಬಲಿಸುವುದು ತಪ್ಪು!

No comments:

Post a Comment