Sunday, July 29, 2012

ಅಯ್ಯಯ್ಯೋ ಉಳಪ್ಪ

                                       
                            ಮೂಗು ಸಂಬಳ
            ಅಗಜಾನನ ಪದ್ಮಾರ್ಕಂ  ಗಜಾನನಮಹರ್ನಿಶಂ|     ಅನೇಕದಂತಂ ಭಕ್ತಾನಾಂ ಏಕ ದಂತಮುಪಾಸ್ಮಹೇ||
        ಯಾವ ಕೆಲಸಕ್ಕೂ ಮದಲು ನಮ್ಮ ಗಣಪತಿಯ ಪ್ರಾರ್ಥಿಸಿಗೊಂಬದು ಸಂಪ್ರದಾಯ! ನಮ್ಮ ಕೆಲಸಕ್ಕೆ ಯಾವ ವಿಘ್ನವೂ  ಬಪ್ಪಲಾಗ ಅಲ್ಲದೋ? ಈ ಶ್ಲೋಕಲ್ಲಿ ಎಂತ ಹೇಳುತ್ತು? ಅಗಜೆ ಹೇಳಿರೆ ಪಾರ್ವತಿ ಅಲ್ಲದೋ? ಪಾರ್ವತಿ ದೇವಿಯ ಪದ್ಮದಂತಹ ಮೋರೆಗೆ ಸೂರ್ಯನ ಹಾಂಗಿಪ್ಪೋನು ಮಗ ಗಣಪತಿ. ಪಾರ್ವತಿಯ ಮಾನಸ ಪುತ್ರ ಅಲ್ಲದೋ! ಗೊಂತಿಲ್ಲದ್ದೆ ತಲೆ ಕಡುದು, ಮತ್ತೆ ಬದುಕ್ಕುಸುಲೆ ಆನೆ ತಲೆಯ ತಂದು ಮಡಗಿದ್ದಡೊ ಶಿವ. ತಲೆ ಕಡುದಾಗಿ  ಹೋಯಿದು. ಮತ್ತೆ ಹೇಂಗಾದರೂ ಪಾರ್ವತಿ ಹತ್ರೆ ರಾಜಿ ಮಾಡಿಗೊಳ್ಳೆಕ್ಕನ್ನೆ. ಎಲ್ಲಿಂದಲೋ ಶಿವನ ಗಣಂಗೊ ತಂದುಕೊಟ್ಟ ಆನೆ ತಲೆಯ ಜೋಡುಸಿಯೂ ಆತು. ಮತ್ತೆ ಒಂದು ಲೆಕ್ಕಲ್ಲಿ ದೇವರ ಗುರ್ತ ಎಂತ ಕೇಳಿರೆ ಅವಂಗೆ ಆನೆ ತಲೆ ಹೇಳುವಗ ಗುರ್ತ ಹಿಡಿವಲೂ ಒಳ್ಳೆದೇ ಆತು. ಹಾಂಗೆ ಅಹರ್ನಿಶಿಯೂ ಅವ ಗಜಾನನ ಆದ. ಅನೇಕ ದಂತಂಗೊ,ಹಲ್ಲುಗೊ ಅವನ ಭಕ್ತರಿಂಗೆ ಇದ್ದರೂ ಅವಂಗೆ ಒಂದೇ ಹಲ್ಲು (ದಾಡೆ) ಇಪ್ಪದಡೋ. ಅಂಬಗ ನಿಂಗೊ ಕೇಳದ್ದೆ ಇರೆಯಿ. ಆನೆಗೆ ಎರಡು ದಾಡೆ ಇಪ್ಪದಲ್ಲದೋ? ಗಣಪತಿಗೆ ಒಂದೇ ಹಲ್ಲು ಆದ್ದು ಹೇಂಗೆ? ಸರಿ ಒಂದು ದಾಡೆಯ ಚಂದ್ರನ ಮೇಲೆ ಕೋಪ ತಡೆವಲಡಿಯದ್ದೆ ಮುರುದು ಚಂದ್ರನ ಮೇಲಂಗೆ ಇಡುಕ್ಕಿದ್ದಡೊ. ಅಂತು ಗಣಪತಿ ಇದ್ದ ಎರಡು ಹಲ್ಲುಗಳಲ್ಲಿ ಒಂದರ ಕಳಕ್ಕೊಂಡ.  ಆದರು ಒಂದೂವರೆ ಹಲ್ಲು ಆಯೆಕ್ಕಾತು. ಅರ್ಧ ಹಲ್ಲು ಎಂತಾತೊ! ಆದರು ಗಣಪತಿ ಏಕದಂತಡೊ. ಆನೆಯ ಮೋರೆ ಆದರೂ ದಾಡೆ ಒಂದೇ ಒಳುದ್ದದು. ಹಾಂಗೆ ಅನೇಕ ಹಲ್ಲುಗೊ(೩೨) ಇಪ್ಪ ಭಕ್ತರೆಲ್ಲ ಸೇರಿ ಏಕದಂದಂತನಾಗಿಪ್ಪ ನಿನ್ನ ಉಪಾಸನೆ ಮಾಡುತ್ತೆಯೊ ಹೇಳಿ ಅರ್ಥ ಆವುತ್ತು. ಇನ್ನೊಂದು ಅರ್ಥವೂ ಇದ್ದಡೊ. ಅ - ಗಜಾನನ ಪದ್ಮಾರ್ಕಂ- ಆನೆಯದಲ್ಲದ್ದ ಮೋರೆ ಯೆಂಬ ಪದ್ಮಕ್ಕೆ ಗಜಾನನನಾದ ನೀನು ಸೂರ್ಯನ ಹಾಂಗಿಪ್ಪೋನು; ಅನೇಕದಂ ಒಂದಲ್ಲ ಎರಡಲ್ಲ ಅನೇಕದಂ ತುಂಬ ತುಂಬ ಕೊಡುವೋನು ತಂ ಭಕ್ತಾನಾಂ ನಿನ್ನ ಭಕ್ತರಿಂಗೆ ಏಕದಂತನಾಗಿಪ್ಪ ನಿನ್ನ ಉಪಾಸನೆ ಮಾಡುತ್ತೆಯೊ. ಎಂಗೊಗೆಲ್ಲ  ಅನೇಕದಂ  ತುಂಬಾ ಕೊಡುವೋನು  ಹೇಳಿ ಹೇಳಿದ್ದವು. ಇಲ್ಲಿ ಅನೇಕ ಹೇಳುವಲ್ಲಿ ಒಂದು ಸಂಶಯ ಬತ್ತು. ಒಂದಲ್ಲದ್ದದೆಲ್ಲ ಅನೇಕ ಅಪ್ಪಲ್ಲದೋ? ಅಂಬಗ ಒಂದರಿಂದ ಹೆಚ್ಚು ಕೊಡುವೋನು ಹೇಳಿರೆ ಎರಡೂ ಆಯಿಕ್ಕು. ತುಂಬಾ ಹೇಳುವ ಅರ್ಥವೇ ಬತ್ತೋ ಹೇಳಿ ಎನಗೆ ಗೊಂತಿಲ್ಲೆ! ಇಲ್ಲಿ ಎರಡು ವಿಧದ ಅರ್ಥ ಬಪ್ಪ ಕಾರಣ ಶ್ಲೇಷೆ ಆವುತ್ತಡೊ. ಹಿಂದಾಣ ಕವಿಗೊ ಲಕ್ಷ್ಮೀಶನ ಹಾಂಗಿಪ್ಪೋವು ದ್ವಯಾರ್ಥ ಇಪ್ಪ ಪದ್ಯಂಗಳ ಬರದ್ದವಲ್ಲದೋ! ಹರಿಯಂತೆ ಬಲಯುತಂ, ಹೇಳುವಲ್ಲಿ ಶ್ರೀಕೄಷ್ಣನ ಹಾಂಗೆ ಬಲರಾಮ ಸಮೇತನಾಗಿ ಹೇಳಿಯೂ, ಸಿಂಹದ ಹಾಂಗೆ ಪರಾಕ್ರಮಿಯಾಗಿಯೂ ಹೇಳುವ ಎರಡು ಅರ್ಥವನ್ನೂ ತೆಕ್ಕೊಂಬಲಕ್ಕಲ್ಲದೋ?
            ಮನೆಲ್ಲಿಪ್ಪಗ ಎನ್ನ ಮಕ್ಕಳ ಅಬ್ಬಗೂ ಎನಗೂ ಒಂದಲ್ಲದ್ದರೆ ಒಂದು ವಿಷಯಲ್ಲಿ ಚರ್ಚೆ ಆಗುತ್ತಾ ಇರುತ್ತು. ಕೆಲಸ ಎಲ್ಲ ಆಗಿ ಅವಕ್ಕೆ ವಿರಾಮ ಸಿಕ್ಕುವದು ಕಸ್ತಲೆ ಆದ ಮೇಲೆಯೇ ಅಲ್ಲದೋ? ಹಗಲು ನಾವೆಲ್ಲಿಯಾದರು ಹೆರ ಹೋದರೆ ಮನೆಲ್ಲೇ ಇಪ್ಪೋವಕ್ಕೆ ಕೆಲಸಲ್ಲೇ ಹೊತ್ತು ಹೋವುತ್ತು.ಕೆಲಸ ಮಾಡಿ  ಬಚ್ಚಿಪ್ಪಗ ವಿಶ್ರಾಂತಿ ಸಿಕ್ಕುವದೂ ಇರುಳೇ ಅಲ್ಲದೋ? ಕೋಪವ ಎಲ್ಲ ನಮ್ಮ ಮೇಲೆ ತೋರುಸುವದು ಕ್ರಮ. ನಾವು ಮಾಂತ್ರ ಅಲ್ಲ ಕೂಲಿ ಕೆಲಸಕ್ಕೆ ಹೋಪೋವುದೇ ಹಗಲಿಡೀ ಗೆಂಡನ ಕಾಣದ್ದೆ ಕಸ್ತಲೆ ಅಪ್ಪಗ ಬಂದ ಕೂಡ್ಳೇ ಏನಾದರೊಂದು ಹೇಳಿ ಮಾತಾಡುಸುವದು ಕ್ರಮ! ಎಂಗಳ ಮನೆಗೆ ಕೆಲಸಕ್ಕೆ ಬಂದೊಂಡಿದ್ದ, ಆಳಿಂಗೆ ಬಚ್ಚಿಗೊಂಡು ಮನೆಗೆ ಎತ್ತುವಗ ಹೆಂಡತ್ತಿ ಉಪಚಾರ ಜೋರಿತ್ತು. ಆ ಹೊತ್ತಿಂಗೆ ಗೆದ್ದೆ ಕರೆಲ್ಲಿ ನಾವು ಹೋವುತ್ತಿದ್ದರೆ ಕೇಳುಗು ಗಲಾಟೆ. ಗೆಂಡುಗೊ ಬಚ್ಚೆಲು ಹೋಪಲೆ ರಜ ಕಳಿಯೋ, ಶರಾಬೋ ಕುಡುಕ್ಕೊಳ್ಳುತ್ತವು. ಸಿಕ್ಕಿದ ಸಂಬಳ ಅಲ್ಲೇ ಮುಗಿತ್ತು. ಮನೆಗೆ ಹೋಪಗ ಕೈ ಖಾಲಿ. "ಏಕೆ ಅಕ್ಕಿ ತಯಿಂದಿಲ್ಲೆ? ಅಕ್ಕಿ ತಾರದ್ದೆ ಇರುಳು ಉಂಬದೆಂತರ ? ಅಂಗ್ಡಿಂದ ಅಕ್ಕಿ ತರೆಕ್ಕು ಹೇಳಿದ್ದಲ್ಲದಾ? ಏಕೆ ತಯಿಂದಿಲ್ಲೆ? ನಿಂಗೊ ಆದರೆ ಹೊಟ್ಟೆ ತುಂಬ ಕುಡುದಿಕ್ಕಿ ಬತ್ತಿ. ಎಂಗೊ ಎಲ್ಲಿಗೆ ಹೋಯೆಕ್ಕು? ಹೀಂಗೆ ಪ್ರಶ್ನೆಗಳ ಸರಮಾಲೆಯನ್ನೇ ಕೇಳಿಗೊಂಗು. ಉತ್ತರ ಕೊಡುಲೂ ಗೆಂಡುಗೊಕ್ಕೆ ಅಮಲು ಇಳುದ್ದಿಲ್ಲೆ. ಅಂಬಗ ಕೋಪ ತಡೆಯದ್ದೆ ಹೆಂಡತ್ತಿ ಹಿಡಿಸೂಡಿ ತೆಗದು ಗೆಂಡಂಗೆ ಬಡಿಗಡೊ. ಪೆಟ್ಟು ತಿಂದಪ್ಪಗ ರಜಾ ಅಮಲು ಇಳಿಗು. ಫಕ್ಕನೆ ಹೆರ ದಾರಿ ಹೋಪೋರು ಎಂಗಳ ಜಗಳ ಕೇಳುಲೆ ಆಗ ಹೇಳಿಯೋ ಅಥವಾ ಹೆಂಡತ್ತಿ ಬಡುದ್ದಲ್ಲ. ತಾನೇ ಹೆಂಡತ್ತಿಗೆ ಬಡುದ್ದು ಹೇಳಿ ಆಯೆಕ್ಕು ಹೇಳ್ಯೋ ಕೇಳುವದಡೊ. "ಸಾಕೊ ನಿನಗೆ, ಅಲ್ಲ ಇನ್ನೂ ಬೇಕೋ?ನೀನು ಹಾಂಗೆ ಮಾಡಿದ್ದೆಂತಗೆ? ಮತ್ತೆ ಎಷ್ಟು ನಿನ್ನ ಹಾರಾಟ? ಸುಮ್ಮನೆ ಕೂಪಲವುತ್ತಿಲ್ಲೆಯೋ? ಹೇಳಿ ಎಲ್ಲ ಗೆಂಡನೇ ಬಯಿವದಡೊ. ಹೆರ ದಾರಿಲ್ಲಿ ಹೋಪೋರು ಗೆಂಡ ಹೆಂಡತ್ತಿಗೆ ಬಡಿವದು.ಹೇಳಿ ಗ್ರೇಶೆಕ್ಕು. ಹೆಂಡತ್ತಿ ಬಡುದ್ದು ಹೇಳಿ ಆದರೆ ಅವನ  ಮರ್ಯಾದೆ ಪೂರ್ತಿ ಹೋವುತ್ತಿಲ್ಲೆಯೋ.  ಎಂಗಳ ಮನೆಲ್ಲಿ ಎಂಗಳೊಳದಿಕ್ಕೆ ಹಾಂಗಲ್ಲ ಬೇರೊಂದು ಕಾರಣಕ್ಕೆ. ಅಂತೂ ಒಂದು ರೀತಿಲ್ಲಿ ತಾನು ಹೇಳಿದಾಂಗೆ ಗೆಂಡ ಕೇಳುತ್ತ ಹೇಳಿ ಆಯೆಕ್ಕು. ಎಲ್ಲೋರ ಮನೆಯ ದೋಸೆಗಳೂ ತೂತೇ ಅಲ್ಲದೋ? ಒಂದು ದಿನ ಹೀಂಗೆ ಮಾತಾಡುವಗ ಇದೆಂತ ಹೀಂಗೆ ಮೂಗು ಸಂಬಳದೋನ ಹಾಂಗೆ ಮಾಡುತ್ತೆ  ಹೇಳಿ ಕೇಳಿದೆ. ಅದೆಂತರ ಮೂಗು ಸಂಬಳ ಹೇಳಿರೆ? ಹೇಳಿ ಕೇಳಿತ್ತು. ಅದೋ ಹೇಳುತ್ತೆ ಕೇಳು ಹೇಳಿ ಕತೆ ಹೇಳುಲೆ ಶುರು ಮಾಡಿದೆ. ಹೇಂಗಾದರೂ ಕೋಪ ತಣಿಶೆಕ್ಕನ್ನೆ.  ಕತೆ ಕೇಳಿಗೊಂಡಿಪ್ಪಗ ಒರಕ್ಕು ಬತ್ತು. ಎಂತಾದರೂ ಕೋಪ ಇದ್ದರೆ ಮರದು ಹೋವುತ್ತು.
    ಮದಲು ಒಬ್ಬ ಒಬ್ಬ ಹಳ್ಳಿಯೋನು ಕಲ್ತು ವಕೀಲ ಆದ. ವಕೀಲ ಪೇಟೆಗೆ ಹೋಗಿ ಕೂರೆಕ್ಕನ್ನೆ. ಮದುವೆಯೂ ಆಗಿತ್ತು. ಹೆಂಡತ್ತಿಗೆ ಮನೆಯ ಉದ್ದಿ, ಉಡುಗಿ ಮಾಡುವ ಕೆಲಸಕ್ಕೆ ಒಂದು ಆಳು ಬೇಕು ಹೇಳಿ ಆತು. ಮಾತು ಕೇಳದ್ದರೆ ಹೆಂಡತ್ತಿ ಬಿಡುತ್ತೋ? ಮರದಿನಂದ ಬಂದ ಕಕ್ಷಿಗಾರರ ಹತ್ತತ್ರೆ ಒಂದು ಸಂಬಳಕ್ಕೆ ಜನ ಕಳುಸೆಕ್ಕು ಹೇಳಿದ. ಬಂದೋವೆಲ್ಲ ಸರಿಯಿಲ್ಲೆ ಹೇಳಿ ಹಿಂದೆ ಕಳುಸಿಯೂ ಆತು. ಸಂಬಳ ಕೊಡದ್ದರೆ ಅವು ನಿಲ್ಲುತ್ತವೋ? ಹೀಮ್ಗಿಪ್ಪಗ ಹೊಸತಾಗಿ ಒಬ್ಬ ಬಂದಡೊ. ವಕೀಲನ ಸಂಗ ಗೊಂತಿದ್ದ ಅವ ರಜ ಬುದ್ಧಿವಂತಡೊ. ನಿನ್ನ ಹೆಸರೆಂತ ಕೇಳಿದ್ದಕ್ಕೆ ಉಳಪ್ಪ ಹೇಳಿದನಡ. ಮತ್ತೆ ಇವನೂ ಓಡಿ ಹೋಪದು ಬೇಡ ಹೇಳಿ ವಕೀಲ ಒಂದು ಶರತ್ತು ಮಾಡುಗಿ ಅವನತ್ರೆ ಒಪ್ಪಂದವ ಬರದು ದಸ್ಕತ್ತು ತೆಕ್ಕೊಂಡೂ ಆತು. ಶರತ್ತು ಎಂತ ಕೇಳಿರೆ ಕೆಲಸದೋನಾಗಿಯೇ ಆನು ಇಲ್ಲಿಂದ ಹೋವುತ್ತೆ ಹೇಳಿ ಬೊಡುದು ಹೋದರೆ ಅವಂಗೆ ಸಂಬಳ ಕೊಡುಲೆ ಇಲ್ಲೆ. ಆದರೆ ವಕೀಲನೇ" ನೀನು ಒಂದಾರಿ ಹೋಗು ಹೇಲಿ ಕೆಲಸದ್ನ ಹೋಪಲೆ ಹೇಳಿದರೆ ಹತ್ತು ಸಾವಿರ ರುಪಾಯಿಯೂ ಒಂದು ಮೂಗೂ ಕೊಡೆಕ್ಕು ಹೇಳಿ ಶರತ ಇತ್ತಡೊ.ವಕೀಲಂಗೆ ಬುದ್ಧಿ ಕಲಿಶೆಕ್ಕು ಹೇಳಿಯೇ ಅವ ಬಂದದು.ಎರಡು ದಿನ ಕಳುದಪ್ಪಗ ವಕೀಲನ ಹೆಂಡತ್ತಿ ಮುಟ್ಟಾಗಿ ಅಡಿಗೆ ಮಾಡುಲೆ, ಮುಖ್ಯವಗಿ ಅಂದು ಒಲೆಲ್ಲಿಪ್ಪ ಅಶನವ ತೆಗವಲೆ ವಕೀಲ ಕೋರ್ಟಿಂಗೆ ಹೋಯಿದ. ಎಂತ ಮಾದುವದು? ಕೆಲಸದೋನತ್ರೆ ಹೋಗಿ ಅವರ ಬಪ್ಪಲೆ ಹೇಳು ಹೇಳಿತ್ತಡೊ ಹೆಂಡತ್ತಿ. ಇವ ಓಡಿ ಹೋಗಿ ಇದಾ ನಿಂಗಳ ಹೆಂಡತ್ತಿಗೆ ಮುಟ್ಟುಲಾಗಡೊ. ಅಶನ ಒಲೆಲ್ಲಿಪ್ಪದರ ತೆಗೆವಲೆ ಹೋಯೆಕ್ಕಡೊ ಹೇಳಿ ದೊಡ್ಡಕ್ಕೆ ಹೇಳಿದನಡ. ವಕೀಲನ ಮರ್ಯಾದೆ ಎಂತಾಗೆಡ ಎಲ್ಲೋರ ಎದು ಹಾಂಗೆ ಹೇಳಿದ್ದಕ್ಕೆ ಕೋಪುಸಿ ನೀನು ವಕೀಲನ ಆಳು. ಹೀಂಗೆ ಒಬ್ಬ ಸಾಮಾನ್ಯನ ಹಾಂಗೆ ಬಪ್ಪದೋ? ರಜ ಮೈ ಮೋರೆ ಎಲ್ಲ ತೊಳಕ್ಕೊಂಡು ಒಳ್ಳೆ ಅಂಗಿ ಹಾಕಿಗೊಂಡು, ಎನ್ನ ಹತ್ತರೆ ಬಂದು, ಗುಟ್ಟಿಲ್ಲಿ ಹೇಳೆಡದೋ. ಎನ್ನ ಮರ್ಯಾದೆ ಹೋತನ್ನೆ ಹೇಳಿದ್ದಕ್ಕೆ ಇಂದ್ರಾಣದ್ದು ಕಳುತ್ತನ್ನೆ.ಆತು ಇನ್ನು ಹಾಂಗೇ ಮಾಡುತ್ತೆ ಹೇಳಿದನಡ. ಮತ್ತೊಂದು ತಿಂಗಳು ಕಳುತ್ತು. ಮತ್ತೊಂದು ದಿನ ಬೆಶಿನೀರು ಕಾಸುವ ಕೊಟ್ಟಗ್ಗೆ ಕಿಚ್ಚು ಹಿಡುತ್ತಡ. ಹೋಗಿ ವಕೀಲರ ಹತ್ತರೆ ಹೇಳಿ ಬಾ ಹೇಳಿದ್ದಕ್ಕೆ ಸರಿ ರಜ ಎಣ್ಣೆ ಕೊಡಿ, ಸಾಬೂನು ಕೊಡಿ ಒಳ್ಳೆ ಅಂಗಿ ಇದ್ದರೆ ಕೊಡಿ ಹೇಳಿ ತಂದು ಕೊಡುಲೆ ಹೇಳಿದನಡ. ಮಿಂದು ಒಳ್ಳೆ ಅಂಗಿ ಹಾಯ್ಕೊಂಡು ಕೋರ್ಟಿಂಗೆ ಹೋಗಿ ವಕೀಲ ತನ್ನ ನೋಡುವ ವರೆಗೆ ಸುಮ್ಮನೆ ನಿಂದು, ನಿಧಾನಕ್ಕೆ ವಕೀಲ ತಿರುಗಿ ನೋಡುವಗ ಮೆಲ್ಲಂಗೆ, ಹತ್ತರೆ ಹೋಗಿ ಗುಟ್ಟಿಲ್ಲಿ, "ಬೆಶಿ ನೀರ ಕೊಟ್ಟಗ್ಗೆ ಕಿಚ್ಚುಹಿಡುದ್ದು. ನಿಂಗೊ ಮನೆಗೆ ಹೋಯೆಕ್ಕಡ, ಹೇಳಿದನಡ". ವಕೀಲಂಗೆ ಹೇಂಗೆ ಆಗೆಡ ಕೋಪ ಬತ್ತಿದ್ದರೂ ತಡಕ್ಕೊಂಡು ಮನೆಗೆ ಓಡಿಹೋಗಿ ನೋಡುವಗ ಕೊಟ್ಟಗೆ ಎಲ್ಲ ಹೊತ್ತಿ ಮುಗುದ್ದಡೊಇಷ್ಟೆಲ್ಲ ಆದಮೇಲೆ ಇವನ ಮಡಿಕ್ಕೊಂಬದು ಆಪತ್ತು ಹೇಳಿ ಕಂಡತ್ತು ವಕೀಲಂಗೆ. ಗೆಂಡ- ಹೆಂಡತ್ತಿ ಆಲೋಚನೆ ಮಾಡಿ ಅವ ಹೋಯೆಕ್ಕಾರೆ ರುಪಾಯಿ ಆದರೂ ತೊಂದರೆ ಇಲ್ಲೆ ಕೊಡುಲಕ್ಕು. ದರೆ ಮೂಗಿಂಗೆಂತ ಮಾಡುವದು? ವಕೀಲ ಆಗಿಪ್ಪ ಕಾರಣ ಶರತಕ್ಕೆ ತಪ್ಪುಲೆ ಗೊಂತಿಲ್ಲೆನ್ನೆ. ಎಂತ ಮಾಡುವದು ಹೇಳಿ ಯೋಚನೆ ಮಾಡಿ,ಕಡೆಂಗೆ  "ಅಯ್ಯಯ್ಯೊ ಉಳಪ್ಪ" ಹೇಳುವ ಒಂದು ಮದ್ದಿನ ಕಾಡಿಂಗೆ ಹೋಗಿ ಅಗತ್ಯ ತರೆಕ್ಕು ಹೇಳಿ ಹೇಳಿದರೆ, ಹಾಂಗಿಪ್ಪ ಮದ್ದು ಇಲ್ಲದ್ದ ಕಾರಣ ಅವಂಗೆ ತಪ್ಪಲೆಡಿಯ. ಸೋಲುತ್ತ ಅವಂಗೆ ತಂದುಕೊಡುಲೆಡಿಯದ್ದರೆ ಸೋತ ಹಾಂಗೆ ಅಲ್ಲದೋ? ಮತ್ತೆ ಏನೂ ಸಂಬಳ ಕೊಡದ್ದೆ ಅವನ ಅಟ್ಟುಲೆಡಿಗು ಹೇಳಿ ಗ್ರೇಶಿದನಡ.
    ಮಗಂಗೆ " ಅಯ್ಯಯ್ಯೊ ಉಳಪ್ಪ" ಹೇಳುವ ಮದ್ದು ತಂದು ಕೊಡೆಕ್ಕು ಹೇಳಿ ಡಾಕ್ಟ್ರ ಹೇಳಿದ್ದ ಬೇಗ ಹೋಗಿ ತಂದು ಕೊಡು ಹೇಳಿದನಡ ಮದ್ದು ಅಗತ್ಯ ಇದ್ದು ಬೇಗ ತಂದುಕೊಡು ಹೇಳಿ ಕಳಿಸಿದನಡ. ಹಾಂಗಿಪ್ಪ ಮದ್ದು ಇಲ್ಲೆ ಹೇಳುವದು ಕೆಲಸದೋವಂಗೂ ಗೊಂತಿದ್ದಾದರೂ ವಕೀಲನ ಸೋಲುಸೆಕ್ಕನ್ನೆ. ಬುದ್ಧಿ ಕಲಿಶೆಕ್ಕು ಹೇಳಿ ಒಪ್ಪಿಗೊಂಡು ಕಾಡಿಂಗೆ ಹೋದನಡ. ಕಾಡಿಲ್ಲಿ ಅವಂಗೊಂದು ಕೂಡೆಲು ಪಟ್ಟು ಕಂಡತ್ತಡೊ. ಅದರ ಹಿಡಿಯೆಕ್ಕಾರೆ ಇರುಳೇ ಆಯೆಕ್ಕಷ್ಟೆ. ಇರುಳು ಅವಕ್ಕೆ ಕಣ್ಣು ಕಾಣುತ್ತಿಲ್ಲೆಡೊ. ಹಾಂಗೆ ಅಂದು ಇರುಳೇ ಅದರ ಹಿಡುದು ಒಂದು ಗೋಣಿಲ್ಲಿ ಕಟ್ಟಿ ತಂದನಡ. ವಕೀಲನ ಮನೆಗೆ ಬಂದು ಅವರತ್ರೆ "ಇದಾ ಇದರ ಒಂದು ಕೋಣೆಲ್ಲೇ ಬಾಯಿ ಬಿಡುಸೆಕ್ಕಷ್ಟೆ. ನಿಂಗೊ ಎಲ್ಲೋರೂ ಕೋಣೆಯೊಳದಿಕ್ಕೆ ಹೋಗಿ ಒಳಂದ ಬಾಗಿಲು ಹಾಯ್ಕೊಂಡು ಗೋಣಿ ಬಿಡುಸೆಕ್ಕು ಹೇಳಿದನಡ. ಸರಿ ವಕೀಲ,ಅವನ ಹೆಂಡತ್ತಿ ಮಕ್ಕೊ ಎಲ್ಲ ಒಳ ಕೂದು ಗೋಣಿ ಬಯಿ ಬಿಡುಸಿದವು. ಅಂಬಗ ಕೇಳೆಕ್ಕೂ! ಒಳದಿಕ್ಕಿದ್ದ ಹುಳುಗೊ ಇವಕ್ಕೆ ಕುಟ್ಟುಲೆ ಶುರು ಮಾಡಿದವು. ಬಾಗಿಲು ಹೆರಂದ ಇವ ಹಾಕಿತ್ತಿದ್ದ. ಎಲ್ಲೋರಿಂಗೂ ಹುಳುಗೊ ಕಚ್ಚಿ,ಮೋರೆ ಮೈಯೆಲ್ಲ ಬೀಗಿತ್ತಡೊ.ಬೇನೆ ತಡೆಯದ್ದೆ "ಅಯ್ಯಯ್ಯೋ ಉಳಪ್ಪ" ಹೇಳಿಬೊಬ್ಬೆ ಹಾಕಿದವು. ಒಂದಾರಿ ಬಾಗಿಲು ತೆಗೆ ಹೇಳಿ ಕೆಲಸದೋನ ಬೇಡಿಗೊಂಡವು. ಮಾಂತ್ರ ಅಲ್ಲ ನಿನ್ನ ಕೆಲಸ ಸಾಕು ಇಲ್ಲಿಂದ ಬಿಟ್ತಿಕ್ಕಿ ಹೋಗು ಹೇಳಿಯೂ ಹೇಳಿದವಡ. ಆದರೆ ಶರತ ಇದ್ದನ್ನೆ, ಮೂಗುದೇ ಪೈಸೆಯೂ ಕೊಡಿ ಹೇಳಿದನಡ. ಕೆಲಸದೋನು. ಹೆಂಡತ್ತಿ ಮಕ್ಕಳತ್ರೆ ಆಲೋಚನೆ ಮಾಡಿವಕೀಲ ಮೂಗು ಕೊಟ್ಟರೆ ಮೂಗಿಲ್ಲದ್ದೆ ಕೋರ್ಟಿಂಗೆ ಹೋಪದು ಹೇಂಗೆ? ಅದಕ್ಕೆ ಹೆಂಡತ್ತಿ ಮೂಗು ಕೊಡುವದು ಹೇಳಿ ತುಂಡು ಮಾಡಿ ಕೊಡುವಗ ಶರತಲ್ಲಿ ಹೆಮ್ಮಕ್ಕಳ ಮೂಗು ಹೇಳುತ್ತಿಲ್ಲೆ ಎನಗೆ ಗೆಂಡು ಮಕ್ಕಳದ್ದೇ ಆಯೆಕ್ಕು ಹೇಳಿದನಡ.ಒಂದು ಮೂಗು ಧರ್ಮಕ್ಕೆ ಹೋತನ್ನೆ. ಇನ್ನು ಎಂತ ಮಾಡುವದಪ್ಪ ಹೇಳಿ ಮಗನ ಮೂಗು ತುಂಡು ಮಾದಿ ಕೊಡುವಗ ಮಕ್ಕಳದ್ದಾಗ ಹೇಲಿದನಡ., ಮತ್ತೆ ಹೇಂಗಾದರೂ ಈ ಪ್ರಾಣುಇ ಹೋಯೆಕ್ಕನ್ನೆ ಹೇಳಿ ಅವನ ಮೂಗಿನನ್ನೇ ತುಂಡು ಮಾಡಿ ಕೊಟ್ಟನಡ. ಅಂತೂ ಮೂರು ಜನರ ಮೂಗೂ ಹೋತು. ಇದಕ್ಕೆ ಮದಲು ವಕೀಲ ಬೇರೆ ಜನಂಗೊಕ್ಕೆ ಸಂಬಳ ಕೊಡದ್ದೆ ಕೆಲಸ ಮಾಡುಸಿತ್ತಿದ್ದ ಹೇಳಿ ಗೊಂತಿದ್ದೇ ಈ ಉಪಯ ಮಾಡಿದ್ದು ವಕೀಲಂಗೆ ಬುದ್ಧಿ ಕಲಿಶುಲೆ ಬೇಕಾಗಿ. ಹಾಂಗೆ ಮೂಗು ಸಂಬಳ ಹೇಳಿರೆ ಆ ಕೆಲಸದೋನ ಹಾಂಗೆ ಮಾಡಿದರೆ ಅಂತ್ರೋರ ಕೈಂದ ಬುದ್ಧಿ ಕಲಿಯೆಕ್ಕಷ್ಟೆ ಹೇಳುವದು ಮಾತಿನ ಅರ್ಥ ಹೇಳಿ ಎನ್ನ ಹೆಂಡತ್ತಿಗೆ ವಿವರುಸಿದೆ. ಕೊಟ್ಟಗ್ಗೆ ಕಿಚ್ಚು ಹಿಡುದ ಶುದ್ದಿ ಹೇಳುಲೆ ಹೇಳಿದ್ದಕ್ಕೆ ಎಣ್ಣೆ ಕಿಟ್ಟಿಮಿಂದು ಕೋರ್ಟಿಂಗೆ ಹೋದ್ದುದೇ ಬುದ್ಧಿ ಕಲಿಶುಲೇ ಅಲ್ಲದೋ?  ವಕೀಲಂಗೆ ಅವನ ಬುದ್ಧಿವಂತಿಕೆಯೇ ತಿರುಗುಬಾಣವಾತಿಲ್ಲೆಯೋ? ಅದಕ್ಕೆ ಮಲಯಾಳಲ್ಲಿ ಒಂದು ಗಾದೆ ಇದ್ದಡೊ. "ಏರೆ ಬೆಳೆಂಞಂಗ್ಲಿ ಬಿತ್ತಿನಿ ಕೇಡು" ಹೆಚ್ಚು ಬೆಳದರೂ ಅದು ಬಿತ್ತಿಂಗಾಗ ಹೇಳುತ್ತವಲ್ಲದೋ? ಕೋರ್ಟಿಲ್ಲಿ ತೋರುಸೆಕ್ಕಾದ ಬುದ್ಧಿವಂತಿಕೆಯ ಸಾಮಾನ್ಯ ಕೆಲಸದೋರ ಮೇಲೆ ತೋರುಸಿದ್ದಕ್ಕೆ ವಕೀಲ ಬುದ್ಧಿ ಕಲ್ತ. ಗುಡ್ಡೆಗೆ ಗುಡ್ಡೆ ಅಡ್ಡಡೊ!ಆದರೆ ನಮ್ಮ ಹಿಮಾಲಯಕ್ಕೆ ಸರಿಯಾದ ಗುಡ್ಡೆ ಬೇರೆಲ್ಲಿಯೂ ಇಲ್ಲೆಡೊ.

ಹಸುರು ಕಾರ್ಡ್


                                ಹಸುರು ಕಾರ್ಡ್
            ಒಂದು ದೇಶಲ್ಲಿ ಹೊಸತಾಗಿ ವಾಸ ಮಾಡುಲೆ ಒಪ್ಪೆಕ್ಕಾರೆ ಆ ಸರಕಾರದ ಒಪ್ಪಿಗೆ ಬೇಕಾವುತ್ತು. ಸರಕಾರದ ಒಪ್ಪಿಗೆ ಸಿಕ್ಕೆಕ್ಕಾದರೂ ಒಂದೊಂದು ದೇಶದ ಕ್ರಮ ಬೇರೆ ಬೇರೆ ಇರುತ್ತು. ಅರ್ಜಿ ಹಾಕುವಗಳೇ ಅವಕ್ಕೆ ಕೆಲವು ದಾಖಲೆಗಳ ಕೊಡೆಕ್ಕಾವುತ್ತು. ಅವಕ್ಕೆ ಬೇಕಾಗಿಪ್ಪ ದಾಖಲಗೊ ಅವಕ್ಕೆ ಬೇಕಾದ ಹಾಂಗೆ ಇದ್ದರೆ ಅಲ್ಲಿಯಾಣ ಮುಖ್ಯ ಕಚೇರಿಂದ ಒಪ್ಪಿಗೆ ಮತ್ತೆ ಒಟ್ಟಿಂಗೆ ಒಂದು ಹಸುರು ಬಣ್ಣದ ಕಾರ್ಡೂ ಕೊಡುತ್ತವು. ಮತ್ತೆ ಆ ದೇಶಕ್ಕೆ ಬಪ್ಪಲೆ ಅವು ಕೊಟ್ಟ ಕಾರ್ಡಿನ ತೋರುಸಿದರೆ ವಿಮಾನ ನಿಲ್ದಾಣಲ್ಲಿ ಒಳ ಬಿಡುತ್ತವು. ದೇಶದ ಒಳದಿಕ್ಕೇ ಇದ್ದರೆ ಪರವಾಗಿಲ್ಲೆ. ಐದು ವರ್ಷ ಕಳುದು ಆ ದೇಶದ ನಾಗರಿಕನಾಗಿ ಮಾಡುತ್ತವು. ಒಂದು ದೇಶಕ್ಕೆ ಹೊಸತಾಗಿ ಬರೆಕ್ಕಾರೆ ವಿಸಾ ಹೇಳಿರೆ ಅವರ ಒಪ್ಪಿಗೆ ಬೇಕು. ಅದಕ್ಕೂ ನಾವು ಅರ್ಜಿ ಹಾಕಿದರೆ ಒಂದೋ ತಾತ್ಕಾಲಿಕ,  ಹೇಳಿದರೆ ಅದಕ್ಕೆ ಅವಧಿ ಒಂದರಿ ಒಳಬಂದರೆ, ಆರು ತಿಂಗಳು ಆ ದೇಶಲ್ಲಿ ಇಪ್ಪಲಕ್ಕು. ಮತ್ತೆ ಮುಂದುವರುಸುತ್ತರೆ ಪುನಃ ಅರ್ಜಿ ಹಾಕಿ ಕೇಳಿಗೊಂಡರೆ ಸರಿಯಾದ ಕಾರಣ ಇದ್ದರೆ ಒಪ್ಪುತ್ತವು. ಹೆಚ್ಚಾದರೆ ಒಂದು ವರ್ಷಂದ ಒಳ ದೇಶ ಬಿಟ್ಟು ಹೋಯೆಕ್ಕು. ಒಂದರಿ ಕೊಡುವಗ ಹತ್ತು ವರ್ಷದ ವರೆಗೂ ಕೊಡುವದಿದ್ದು. ನಮ್ಮ ಅಪೇಕ್ಷೆ ಹೇಂಗಿದ್ದೋ ಅದಕ್ಕನುಸರುಸಿ ಹೆಚ್ಚು ಕಮ್ಮಿ ಮಾಡುತ್ತವು. ಅಲ್ಲಿ ಕೆಲಸ ಮಾಡೆಕ್ಕಾದರೆ ಬೇರೆ ಕೆಲಸ ಮಾಡುಲೂ ಒಪ್ಪಿಗೆಯಾಗಿ ವರ್ಕ್ ಪರ್ಮಿಟ್ ಪಡಕ್ಕೊಳ್ಳೆಕ್ಕು. ವರ್ಕ್ ಪರ್ಮಿಟ್ ಇಲ್ಲದ್ದೋರಿಂಗೆ ಕೆಲಸ ಮಾಡುಲೆಡಿಯ.ಆರೂ ಕೆಲಸ ಕೊಡವು. ನಮ್ಮ ದೇಶಕ್ಕೆ ಬೇರೆ ದೇಶಂದ ಬಪ್ಪೋರೂ ಹೀಂಗೇ ಮಾಡೆಕ್ಕು.ಎನ್ಗಳ ಮಕ್ಕೊ ಅಮೇರಿಕಲ್ಲಿ ಕೆಲಸಲ್ಲಿದ್ದವು. ಮೂರು ಜನರಲ್ಲಿ ಇಬ್ರು ೨೦೦೦ ಸಾವಿರನೇ ಇಸವಿಂದ ಮದಲೇ ಇದ್ದವು. ಒಬ್ಬ ೨೦೦೭ರಲ್ಲಿ ಕೆನಡಕ್ಕೆ ಹೋಗಿ ಅಲ್ಲಿ ಕೆಲಸ ಮಾದುತ್ತ. ೨೦೦೩ರಲ್ಲಿ ಎಂಗಳನ್ನೂ ಬಪ್ಪಲೇ ಹೇಳಿದ್ದಕ್ಕೆ ಪಾಸ್ ಪೋರ್ಟ್  ಮಾಡಿಸಿಕ್ಕಿ ವಿಸಕ್ಕೆ ಅರ್ಜಿ ಕೊಟ್ಟದಕ್ಕೆ ೨೦೧೩ರ ವರೆಗೆ ವಿಸ ಕೊಟ್ಟವು. ಹಾಂಗೆ ಎರಡು ತಿಂಗಳಿಂಗೆ ಬಂದಿತ್ತಿದ್ದೆಯೋ. ಈಗ ಮೂರು ಜನವೂ ಇಲ್ಲಿಪ್ಪ ಕಾರಣ ವಿಸಾ ಮುಂದುವರುಸುಲೆ ಒಪ್ಪವು ಹೇಳಿ ಮಕ್ಕೊ ಇನ್ನು ಇಲ್ಲಿಯಾಣ ಗ್ರೀನ್ ಕಾರ್ಡಿಂಗೇ ಅರ್ಜಿ ಹಾಕುವದು ಹೇಳಿ ಯೋಚನೆ ಮಾಡಿದವು. ಎನ್ನ ಎಪ್ಪತ್ತನೆಯ ಶಾಂತಿಗೆ ಮೂರು ಜನರನ್ನೂ ಬಪ್ಪಲೆ ಹೇಳಿದ ಕಾರನ ಬಂದಿತ್ತಿದ್ದವು. ಊರಿಂಗೆ ಬಂದೋರಿಂಗೆ ಈ ಅಭಿಪ್ರಾಯ ಬಂದಿತ್ತು. ಹೇಂಗೂ ಮಕ್ಕೊ ಪುಳ್ಯಕ್ಕೊ ಎಲ್ಲ ಇಲ್ಲೇ ಇಪ್ಪ ಕಾರಣ ಎಂಗೊ ಮಾಂತ್ರ ಊರಿಲ್ಲಿ ಇಪ್ಪಲೆ ಸರಿ ಆವುತ್ತಿಲ್ಲೆ. ಊರಿಲ್ಲಿದ್ದರೆ ನಂಟ್ರು ಇಷ್ಟರ ಸಂಪರ್ಕ ಮಾಂತ್ರ ಇಕ್ಕಷ್ಟೆ! ಪುಳ್ಯಕ್ಕೊಗೆ ಇವ ನಿನ್ನ ಅಜ್ಜ ಹೇಳಿ ಗುರ್ತ ಮಾಡೆಕ್ಕಾಗಿ ಬಂದರೆ ಕಷ್ಟ ಅಲ್ಲದೋ? ಮಕ್ಕಳೂ ಹೇಳಿದವು; ಈ ಸರ್ತಿ ಬಂದಿಪ್ಪಗ ಗ್ರೀನ್ ಕಾರ್ಡಿಂಗೆ ಅರ್ಜಿ ಹಾಕೆಕ್ಕು ಹೇಳಿ. ಮತ್ತೆ ಮಕ್ಕೊಗೆ ಅಮೇರಿಕಾಲ್ಲೆ ಇಪ್ಪಲೇ ಮನಸ್ಸಾದರೆ ಎಂಗೊ ಅಲ್ಲಿ ಊರಿಲ್ಲಿ ಇದ್ದು ಎಂತ ಪ್ರಯೋಜನ? ಮಕ್ಕೊ ಪುಳ್ಯಕ್ಕೊ ಇಪ್ಪಲ್ಲೇ ಇಪ್ಪಲಕ್ಕು ಹೇಳುವ ನಿರ್ಧಾರಕ್ಕೆ ಬಂದೂ ಆತು. ಕಳುದ ಜೂನಿಲ್ಲಿ ಅಮೇರಿಕಕ್ಕೆ ಎಂಗೊ ಬಪ್ಪಲೆ ವಿಮಾನದ ಟಿಕೆಟ್ ಮಾಡಿ ಕಳುಸಿಯೂ ಕೊಟ್ಟವು. ಬಪ್ಪಗ ಎಂಗಳ ಬರ್ತ್ ಸರ್ಟಿಫಿಕೇಟ್  ತರೆಕ್ಕು ಹೇಳಿತ್ತಿದ್ದವು. ಮತ್ತೆ ಎನ್ನ ಬರ್ತ್ ಸರ್ಟಿಫಿಕೇಟ್ ಪಂಚಾಯತಿಲ್ಲಿ ಸಿಕ್ಕದ್ದದಕ್ಕೆ, ಬೇರೆ ಆರದ್ದಾದರೂ ಅಫಿದಾವಿತ್ ಬೇಕು ಹೇಳಿತ್ತಿದ್ದವು. ಹಾಂಗೆ ಅಫಿದಾವಿತ್ ಕೊಡೆಕ್ಕಾರೆ ಎನ್ನಂದ ಹೆಚ್ಚು ಪ್ರಾಯದೋವು ಆಯೆಕ್ಕನ್ನೆ. ಹಾಂಗೆ ಅದಕ್ಕೆ ಎನ್ನಂದ ಹಿರಿಪ್ರಾಯದೋರ ಹುಡುಕ್ಕಿ ಅವರ ಅಫಿದಾವಿತ್ ಕೂಡಾ ತಂದಿತ್ತಿದ್ದೆಯೊ. ಆದರೆ ಎನ್ನ ಯಜಮಾಂತಿಯ ಬರ್ತ್ ಸರ್ಟಿಫಿಕೇಟ್ ಪಂಚಾಯತಿಲ್ಲಿ ಸಿಕ್ಕಿದ್ದಕ್ಕೂ ಶಾಲೆಯ ಸರ್ಟಿಫಿಕೇಟಿಲ್ಲಿ ಇದ್ದದಕ್ಕೂ ವ್ಯತ್ಯಾಸ ಕಂಡತ್ತು. ಪಂಚಾಯತಿಂದರ ನೋಡಿರೆ ಶಾಲೆದು ತಪ್ಪಾವುತ್ತು. ಮಾಂತ್ರ ಅಲ್ಲ, ಮದಲು ಪಾಸ್ ಪೋರ್ಟ್ ಮಾಡುವಗ ಕೊಟ್ಟದು ಶಾಲೆ ಸರ್ಟಫಿಕೇಟ್ ನೋಡಿಯೇ ಆಗಿತ್ತು. ಪಾಸ್ ಪೋರ್ಟ್ ನಕಲು ಕೊಡುವಗ ಪಂಚಾಯತ್ ಸರ್ಟಿಫಿಕೇಟ್ ಸರಿ ಆವುತ್ತಿಲ್ಲೆ.ಎಂತ ಮಾಡುವದು ಹೇಳಿ, ದೊಡ್ಡ ತಲೆಬೆಶಿ ಅತು ಮಕ್ಕೊಗೆ. ಒಂದರಿ ಮದಲು ಕೊಟ್ಟದು ತಪ್ಪಿಹೋಯಿದು ಹೇಳಿ ಮಾಡ್ಯೊಂಡು ಪಂಚಾಯತಿಂದರನ್ನೆ ಕೊಡುವದು ಹೇಳುವ ತೀರ್ಮಾನಕ್ಕೂ ಬಂದವು. ಆದರೆ ಪಾಸ್ ಪೋರ್ಟಿಂದರ ವ್ಯತ್ಯಾಸ ಮಾಡುಲೆಡಿಯ . ಈ ಸರ್ತಿ ಒಂದೂ ಸರಿ ಆವುತ್ತಿಲ್ಲೆ, ಎಂತ ಮಾಡುವದಪ್ಪ ಹೇಳಿ ಯೋಚನೆ ಮಾಡ್ಯೊಂಡು ಒಂದರಿ ಸುಮ್ಮನೆ ಕೂದವು.
        ಆನು ಸುಮ್ಮನೆ ಕೂಯಿದಿಲ್ಲೆ. ತುಂಬ ಯೋಚನೆ ಮಾಡಿ ಎನ್ನ ಅಳಿಯ ಕುಂಬ್ಳೆಲ್ಲಿಪ್ಪೋನಿಂಗೆ ಫೋನ್ ಮಾಡಿ ದಿನಿಗೇಳಿ ಕುಂಬ್ಳ ಪಂಚಾಯತಿಂಗೆ  ಗೌರಮ್ಮನ ಬರ್ತ್ ಸರ್ಟಿಫಿಕೇಟ್ ಬೇಕು ಹೇಳಿ ಒಂದು ಅರ್ಜಿ ಕೊಡುಲೆ ಹೇಳಿದೆ. ಮೋಸ ಮಾಡುವದು ಹೇಳಿ ಗೊಂತಿದ್ದರೂ ಮಾಡದ್ದೆ ನಿವೃತ್ತಿ ಇಲ್ಲೆ! ನಿಜಕ್ಕೂ ಮತ್ತೊಂದು ಪಂಚಾಯತಿಲ್ಲಿ ಹೆಸರು ಕೊಟ್ಟ ಕಾರಣ ಅಲ್ಲಿಂದ ಹಾಂಗಿಪ್ಪ ಹೆಸರಿನೋರ ಇಲ್ಲಿಯಾಣ ರಿಜಿಸ್ತ್ರಿಲ್ಲಿ ಕಾಣುತ್ತಿಲ್ಲೆ, ಹೇಳಿ ನೋನ್ ಅವೈಲೇಬ್ಲ್ ಸರ್ಟಿಫಿಕೇಟ್ ಕೊಟ್ಟವು. ಅದುವೇ ಎನಗೆ ಬೇಕಾದ್ದು. ಗೌರಮ್ಮ ಹುಟ್ಟುವಗ ಇದ್ದ ಮನೆ ಒಂದು ಪಂಚಾಯತಿಲ್ಲಿ ಇತ್ತು. ಅಲ್ಲಿಯೇ ಹೆಸರು ಕೊಟ್ಟದಕ್ಕೆ ಆ ರಿಜಿಸ್ತ್ರಿಲ್ಲಿ ಹೆಸರು, ಜನನ ತಾರೀಕು ಇದ್ದು ಹೇಳಿ ಕೊಟ್ಟಿತ್ತಿದ್ದವು. ಈಗ ಕೇಳಿದ್ದು ಮತ್ತೊಂದು ಪಂಚಾಯತಿಲ್ಲಿ. ನಿಜಕ್ಕದರೆ ಆನೂ ಹುಟ್ಟಿದ್ದು ಪೈವಳಿಕೆ ಪಂಚಾಯತ್ ಪ್ರದೇಶಲ್ಲಿ ಹೇಳಿ  ಎನ್ನ ಅಪ್ಪ ಹೇಳಿದ ನೆಂಪು. ಇನ್ನು ಅಲ್ಲೆಲ್ಲೆ ಹೋಗಿ ಕಷ್ಟ ಬಪ್ಪದಕ್ಕೆ ಪುತ್ತಿಗೆಲ್ಲೇ ಕೇಳಿ ಇಲ್ಲೆ ಹೇಳುಸುಗೊಂಡಿದೆ.  ಅವರ ಹತ್ತರೆ ಹೆಸರು ಸಿಕ್ಕನ್ನೆ. ಹಾಂಗೆ ಇಲ್ಲಿ ಈ ಹೆಸರು ಇಲ್ಲೆ ಹೇಳಿ ಕೊಟ್ಟವು. ಮಂಗಳೂರಿಲ್ಲಿಪ್ಪ ಎನ್ನ ಗೆಳೆಯನ ಹತ್ತರೆ  ಗೌರಮ್ಮನ ಡೇಟ್ ಓಫ್ ಬರ್ತ್ ಶಾಲೆ ಲೆಕ್ಕಲ್ಲಿಪ್ಪದೇ ಸರಿ ಹೇಳಿ ಅಫಿದಾವಿತ್ ಮಾಡುಸಿ ಕಳುಸುಲೆ ಹೇಳಿದೆ. ಸರ್ಟಿಫಿಕೇಟಿನ ದೃಢಪಡುಸಿ ಕೊಡೆಕ್ಕು ಹೇಳಿ ಒಬ್ಬ ಗೊಂತಿಪ್ಪ ನೋಟರಿ ಹತ್ತರೆ ಫೋನ್ ಮಾಡಿ ಹೇಳಿದೆ.ಅವು ಹಾಂಗೆ ಮಾಡಿಕೊಟ್ಟವು. ಅಂತೂ ಗೌರಮ್ಮನ ಜನನ ತಾರೀಕು ಶಾಲೆ ರೆಕೋರ್ಡಿಲ್ಲಿಪ್ಪದು ಸರಿ ಹೇಳುವದಕ್ಕೆ ದಾಖಲೆ ಸಿಕ್ಕಿದ ಹಾಂಗೆ ಆತು. ಮತ್ತೆ ಮದುವೆ ಸರ್ಟಿಫಿಕೇಟ್ ಕೇಳಿದವು. ಅಮೇರಿಕಲ್ಲಿ ಕೂದುಗೊಂಡೆ ಅಲ್ಲಿಯಾಣ ಸಬ್ ರಿಜಿಸ್ತ್ರನ ಹತ್ತರೆ ಹೇಳಿ ಮದುವೆ ರಿಜಿಸ್ತ್ರಿ ಆಯಿದಿಲ್ಲೆ ಹೇಳಿಯೂ ದಾಖಲೆ ಸಿಕ್ಕಿತ್ತು. ಮತ್ತೆ ಅದಕ್ಕೂ ಇಬ್ರ ಅಫಿದಾವಿತ್. ಗೌರಮ್ಮ ಮತ್ತು ಸುಬ್ಬಣ್ಣ ಭಟ್ಟರ ಮದುವೆ ಆದ್ದು ನಿಜ ಎಂಗಳೂ ಮದುವೆಗೆ ಹೋಯಿದೆಯೋ ಹೇಳಿ ಇಬ್ರ ಅಫಿದಾವಿತ್ ಮತ್ತು ನೋಟರಿಯ ದೃಢ ಪತ್ರ ಎಲ್ಲ ಆತು.ಇಷ್ಟೆಲ್ಲ ಸರ್ಟಿಫಿಕೇಟ್ ಗಳ ಅಮೇರಿಕಲ್ಲಿ ಕೂದುಗೊಂಡೇ ಮಾಡುಸಿ ಹಸುರು ಕಾರ್ಡಿಂಗೆ ಅರ್ಜಿ ಮಾಡುಲೆ ಒಬ್ಬ ವಕೀಲ ಇದ್ದರೆ ಒಳ್ಳೆದು ಹೇಳಿ ಯೋಚನೆ ಬಂತು. ಇಬ್ರ ಅರ್ಜಿ ತಯಾರು ಮಾಡಿಕೊಡೆಕ್ಕಾದರೆ  ೨೦೦೦ ಡಾಲರ್ ಫೀಸ್ ಕೊಡೆಕ್ಕು ಹೇಳಿ ಒಬ್ಬ ಕನ್ನಡಿಗನೇ ಆದ ವಕೀಲ ಹೇಳಿದ.  ಮತ್ತೆ ಮೆಡಿಕಲ್ ಚೆಕ್ ಉಪ್ ಮಾಡಿ ವರದಿ ಬೇಕು ಹೇಳಿದ. ದಾಕು ಹಾಕಿದ್ದಕ್ಕೆ ಸರ್ಟಿಫಿಕೇಟ್ ಕೇಳಿದ. ಹಾಂಗೆ ಎನ್ನ ಸಣ್ಣ ಮಗನ ಮೇಲ್ವಿಳಾಸಲ್ಲಿ ಅರ್ಜಿ ಕೊಟ್ಟ ಕಾರಣ ಎಲ್ಲೋಡಿಕ್ಕಂಗೂ ಕರಕ್ಕೊಂಡು ಹೋಗಿ ಬೇಕಾದ ದಾಖಲೆಗಳ ಜಮೆ ಮಾಡಿ ಕೊಡುವ ಕೆಲಸ  ವಕೀಲ ಊರಿನೋನೇ ಅಲ್ಲದೋ ಹೇಳಿ ಒಪ್ಪಿ ಅವನತ್ರೆ ಅರ್ಜಿ, ಮತ್ತೆ ದಾಖಲೆ ಎಲ್ಲ ಕೊಟ್ಟಾತು.ಅರ್ಜಿ ಕಳುಸಿ, ಎರಡು ವಾರಲ್ಲಿ ನಿಂಗಳ ಫಿಂಗರ್ ಪ್ರಿಂಟ್ ಬೇಕು. ಅದರ ಓಫೀಸಿಂಗೆ ಬಂದು ಕೊಟ್ಟಿಕ್ಕಿ ಹೋಗಿ ಹೇಳಿ ಕಾಗದ ಬಂತು. ಓಫೀಸಿಂಗೆ ಹೋಗಿ ಬೆರಳಚ್ಚಿನ ಕೊಟ್ಟೂ ಆತು. ಆದರೆ ಮತ್ತೆರಡು ವಾರಲ್ಲಿ ಸುಬ್ಬಣ್ಣ ಭಟ್ಟನ ಬೆರಳಚ್ಚು ಸರಿ ಬಯಿಂದಿಲ್ಲೆ. ಇನ್ನೊಂದರಿ ಬಂದು ಕೊಡೆಕ್ಕು ಹೇಳಿದವು. ಇನ್ನು ನಾಲ್ಕೈದು ತಿಂಗಳಿಲ್ಲ ಸಂದರ್ಶನಕ್ಕೆ ಕರೆ ಬಕ್ಕು ಹೇಳಿ ವಕೀಲ ಹೇಳಿತ್ತಿದ್ದ. ಎಂಗೊ ಶುರುವಿಂಗೆ ಆರು ತಿಂಗಳಿಲ್ಲಿ ವಾಪಾಸು ಊರಿಂಗೆ ಹೋಪ ಯೋಚನೆಲ್ಲಿ ದಶಂಬರ ಹದಿನೈದಕ್ಕೆ ಹೋಯೆಕ್ಕಾಗಿತ್ತು
     ಸಂದರ್ಶನಕ್ಕೆ ಮತ್ತೆ ಬರೆಕ್ಕಾದರೆ ತೊಂದರೆ ಅಕ್ಕು ಹೇಳಿ ಮಕ್ಕೊ ಟಿಕೇಟಿನ ದಿನ ಮುಂದೆ ಹಾಕಿ ಜೂನಿಂಗಪ್ಪಗ ಖಂಡಿತ ಗ್ರೀನ್ ಕಾರ್ಡ್ ಸಿಕ್ಕುಗು,ಕಾರ್ಡ್ ತೆಕ್ಕೊಂಡೆ ಹೋಪಲಕ್ಕು ಹೇಳಿ ದೊಡ್ಡ ಮಗನ ಮನಗೆ ದೇಟ್ರೋಯಿಟಿಂಗೆ ಹೋದೆಯೊ. ಅಲ್ಲಿ ಅಂಬಗ ಸೊಸೆ ಬಸರಿಯಾಗಿದ್ದೋಳು ಒಂದು ಕೂಸಿಂಗೆ ಜನ್ಮ ಕೊಟ್ಟದು, ಎಂಗೊಗೆ ಇನ್ನೊಂದು ಪುಳ್ಳಿಯ ನೋಡುಲಾತು. ಈಗ ನಾಲ್ಕು ಪುಳ್ಯಕ್ಕೊ. ಅಲ್ಲಿಂದ ಟೊರೊಂಟೋಲ್ಲಿಪ್ಪ ಎರಡನೆಯ ಮಗನ ಮನೆಗೆ ಹೋದೆಯೊ. ಒಂದು ತಿಂಗಳಪ್ಪಗ ಸಣ್ಣ ಮಗನ ಫೋನ್. ಕೂಡ್ಳೇ ಅಲ್ಲಿಗೆ ಎಂಗೊ ಬರೆಕ್ಕಾವುತ್ತು. ಅಬ್ಬೆ-ಮಗನ ಡಿ ಯನ್ ಎ ವರದಿ ಬೇಕಡೊ ಅವಕ್ಕೆ ಹೇಳಿ ವಕೀಲ ಹೇಳಿದ್ದ ಕೂಡ್ಳೇ ಬಂದರೆ ಮತ್ತೆ ಎರಡು ತಿಂಗಳಿಲ್ಲಿ ಕಾರ್ಡ್ ಸಿಕ್ಕುಗಡೊ ಹೇಳಿದ ಮಗ.ಹಾಂಗೆ ಅಲ್ಲಿಂದ ಬಸ್ಸಿಲ್ಲಿ ಫಿಲಡೆಲ್ಫಿಯಕ್ಕೆ ಬಂದೆಯೊ. ಮರದಿನವೇ ಡ್ ಯನ್ ಎ ಟೆಸ್ಟ್ ಮಾಡುವಲ್ಲಿಗೆ ಹೋದೆಯೋ. ಹೋಪಲೆ ಕಾರಿಂಗೆ ಮೂರು ಗಂಟೆ ದಾರಿ. ಅದೇ ಊರಿಲ್ಲಿ ಮಗನ ಗೆಳೆಯ ಒಬ್ಬ ಇದ್ದ. ರಾತ್ರಿ ಅಲ್ಲಿ ನಿಂದು ಉದೀಯಪ್ಪಗ  ಓಫೀಸಿಂಗೆ ಹೋಗಿ ಪರೀಕ್ಷೆ ಮಾಡಿದವು. ಅಲ್ಲಿಂದ ಮತ್ತೆ ಬೇರೊಂದು ಮನಗೆ ಬಂದೆಯೊ. ಮರದಿನ ಅಲ್ಲೇ ಹತ್ತರೆ ಹವ್ಯಕ ಕೂಟ ಇತ್ತು ಅದರನ್ನೂ ಮುಗಿಶಿಕ್ಕಿ ಸಣ್ಣ ಮಗನ ಮನೆಗೆ ಬಂದಾತು. ಒಂದು ತಿಂಗಳೊಳದಿಕ್ಕೆ ವರದಿ ಸಿಕ್ಕುಗು ಹೇಳಿತ್ತಿದ್ದವು. ಮತ್ತೆ ಅರ್ಜಿಗೆ ಪೂರಕವಾಗಿ ಎಂಗಳದ್ದೋ,ಮಂದೋ ಮದುವೆ ಕಾಗದ ಇದ್ದರೆ ಒಳ್ಲೆದು ಹೇಳಿ ಅದರ ಒಬ್ಬ ನೋಟರಿ ಹತ್ತರೆ ದೃಢಪಡುಸುಲೆ ಹೇಳಿ ಮನೆಂದ ಒಂದು ಮೈಲು ದೂರದ ಓಫೀಸಿಂಗೆ ಹೋದೆಯೊ, ಆನೂ ಮಗನುದೇ.ಹೋಗಿ ದಸ್ಕತು ಹಾಕುಸಿ ಹೆರ ಬಂದಪ್ಪಗ ಅಲ್ಲಿ ಬಿಸಿ ಗಾಳಿಯ ಬುಗ್ಗೆ( ಹೋಟ್ ಎಯರ್ ಬಲೂನ್) ಹಾರುವುದರಲ್ಲಿತ್ತು. ಮಗಂಗೆ ಅದರ ಫಟ ತೆಗೆಯೆಕ್ಕು ಹೇಳಿ ಆತು.ಈ ಕಾಗತಗಳ ಎಲ್ಲ ಕೈಲ್ಲಿದ್ದದರ ಕಾರಿ ಟೋಪಿಲ್ಲಿ ಮಡಗಿ ಫಟ ತೆಗೆದ .ಇನ್ನು ಹೋಪೊ ಹೇಳಿ ಹೆರಟೆಯೊ.ರಜ ಮುಂದೆ ಬಪ್ಪಗ ಫಕ್ಕನೆ ಮಗಂಗೆ ಕಾಗತಂಗಳ ನೆಂಪಾಗಿ ನೋಡಿದರೆ ಒಂದೂ ಇತ್ತಿಲ್ಲೆ. ಎಲ್ಲಿ ಹೋತಪ್ಪ ಹೇಳಿ ನೆಂಪು ಮಾಡುವಗ ಫಟ ತೆಗವಗ ಕಾರಿನ ಮೇಲೆ ಮಡಗಿದ್ದು ನೆಂಪಾತು. ಸಿಕ್ಕಿದರೆ ಎನ್ನಜ್ಜಿ ಪುಣ್ಯ ಹೇಳ್ಯೊಂಡು ತಿರುಗಿ ಹೋದೆಯೊ. ರಜ ರಜ ಮಳೆಯೂ ಬಂದೊಂಡಿತ್ತು. ದಾರಿಲ್ಲೇ ಎಲ್ಲೋ ಬಿದ್ದಿರೆಕ್ಕು ಹೇಳಿ ನೋಡ್ಯೊಂದು ಹೋಪಗ ಎಂಗಳ ಪುಣ್ಯಂದ ಎಂಗೊ ಬಂದ ದಾರಿಯ ಹೊಡೆಲ್ಲಿ ಕಾಗತಂಗೊ ಎಲ್ಲ ದೂರ ದೂರ ಬಿದ್ದೊಂಡಿಪ್ಪದು ಕಂಡತ್ತು.ಎನ್ನ ಪಾಸ್ ಪೋರ್ಟ್ ಕೂಡಾ ಇತ್ತು ಒಟ್ಟಿಂಗೆ ಪುಣ್ಯಕ್ಕೆ ಎಲ್ಲ ಸಿಕ್ಕಿತ್ತು. ತೆಕ್ಕೊಂಡು ಸೀದಾ ಮನಗೆ ಬಂದೆಯೊ. ಅಂತೂ ಬೇಕದ ದಾಖಲೆಯ ಎಲ್ಲ ವಕೀಲನತ್ರೆ ಕೊಟ್ಟು ಅತು.
        ಮತ್ತೆ ಒಂದು ತಿಂಗಳಿಲ್ಲಿ ಎನ್ನ ಬೆರಳಚ್ಚು ಸರಿ ಕಾಣದ್ದ ಕಾರಣ ಕ್ರಿಮಿನಲ್ ವೆರಿಫಿಕೇಶನ್ ವರದಿ ತರುಸಿ ಕೊಡೆಕ್ಕು ಹೇಳಿ ಅತು. ಒಟ್ಟಿಂಗೆ ಮಕ್ಕಳ ಅಬ್ಬಗೆ ಎಲ್ಲ ಸರಿಯಾಯಿದು ಹೇಳಿ ಎರಡು ದಿನಲ್ಲಿ ಹಸುರು ಕಾರ್ಡು ಬಂದೂ ಆತು. ಅಂತೂ ವಕೀಲಂಗೆ ಮತ್ತೆಯೂ ಪೈಸೆ ಕೊಡೆಕ್ಕಾತು. ಮಾತಾಡಿದರೆ ಪೈಸೆ ಕೇಳುತ್ತವಡೊ ಇಲ್ಲಿ. ಮತ್ತೆ ನ್ಯೂಯೊರ್ಕಿನ ಎಂಬೇಸಿಗೆ ಅರ್ಜಿ ಕೊಟ್ಟಾತು ವರದಿ ತರುಸುಲೆ ಎಲ್ಲ ವಕೀಲ ಹೇಳಿದ ಹಾಂಗೆ ತರುಸಿ ಕೊಟ್ಟರೆ. ಇದಲ್ಲ ಆ ಪ್ರದೇಶದ ಕೋರ್ಟಿಂದ ವರದಿ ಬೇಕು ಹೇಳಿದವು. ಇಲ್ಲಿಯೂ ವಕೀಲ ಪೈಸೆ ಲೆಕ್ಕ ಹಾಕಿದ್ದಷ್ಟೆ ಅಲ್ಲದ್ದೆ ಅವ ಹೇಳಿದ್ದು ಸರಿ ಆತಿಲ್ಲೆ. ಮಕ್ಕಳದ್ದು ಎಂಗಳದ್ದು ಟೆನ್ಶನ್ ಕೇಳೆಡ,ಹೇಳೆಡ. ಎಂತಕೆ ಬೇಕಾತು ಈ ಮರುಳುತನ. ಹಸುರು ಕಾರ್ಡೂ ಬೇಕಾತಿಲ್ಲೆ ಸುಮ್ಮನೆ ಹತ್ತು ಹದಿನೈದು ಸಾವಿರ ಡಾಲರ್ ಮಕ್ಕೊಗೆ ದಂಡ ಮಾಡಿದ ಹಾಂಗೆ ಆತು ಸಣ್ಣ ಮಗ ಪಾಪ! ಇದಕ್ಕಾಗಿ ತುಂಬ ಒದ್ದಾಡಿದ್ದ. ಅವಂಗೆ ಮಾತಾಡುವಗ ಕೋಪ ಬಂದೊಂಡಿತ್ತು. ದೇವರು ಮಡಗಿದ ಹಾಂಗೆ ಆವುತ್ತು ಹೇಳಿ ಕೋರ್ಟಿಂಗೆ ಹೋಗಿ ಕೇಳಿದ್ದಕ್ಕೆ ಕೇಳಿದ ಕೂಡಲೇ ಕೊಟ್ಟವು. ನಮ್ಮ ದೇಶಲ್ಲಿ ಆಗಿದ್ದರೆ ಇಂದು ಅರ್ಜಿ ಕೊಟ್ಟಿಕ್ಕಿ ಹೋಗಿ ಒಂದು ವರ ಬಿಟ್ಟು ಬನ್ನಿ ಹುಡುಕ್ಕಿ ಮಡಗುತ್ತೆಯೊ ಹೇಳಿಯೋ ಮತ್ತುದೆ ಬೇಗ ಕೊಡೆಕ್ಕಾರೆ ಪೈಸೆ ಕೊಡೆಕ್ಕಾತು ಆಮಟ್ಟಿಂಗೆ ಇಲ್ಯಾಣೋವು ಪ್ರಾಮಾಣಿಕರು. ಬೇರೊಬ್ಬನ ಒದ್ದಾಟ ಅವಕ್ಕೆ ಗೊಂತಿದ್ದು. ಈ ವಿಶಯದಲ್ಲಿ ನಮ್ಮ ದೇಶದೋರೇ ಹುಶಾರು. ಅಲ್ಲಿಂದಲೂ ಪೋಲಿಸ್ ವೆರಿಫಿಕೇಶನ್ ತರುಸೆಕ್ಕು ಹೇಳಿ ವಕೀಲ ಹೇಳಿತ್ತಿದ್ದ. ಹಾಂಗೆ ಅಮೇರಿಕಂದಲೇ ಒಂದು ಅರ್ಜಿ ತಯಾರು ಮಾಡಿ ಎನ್ನ ಗೆಳೆಯಂಗೆ ಸ್ಕೇನ್ ಮಾಡಿ ಕಳುಸಿ ಆತು. ಅವ ಅದರ ಕೊಡುವಗ ಈ ಮನುಷ್ಯ ಅದೇ ಮನೆಲ್ಲಿಪ್ಪದು ಹೇಳುವದಕ್ಕೆ ವಿಳಾಸ ಸರಿ ಹೇಳುವದರ ಗೊಂತು ಮಾಡುಲೆ ರುಜುವಾತು ಬೇಕು ಹೇಳಿ ಡಿ ಸಿ ಓಫೀಸಿಲ್ಲಿ ಹೇಳಿದವಡ. ಆನು ಅಮೇರಿಕಲ್ಲಿಪ್ಪದು. ಮಾಂತ್ರ ಅಲ್ಲ ಆನು ದೇಶ ಬಿಡುವಗ ಇದ್ದ ಮನೆ ವಿಳಾಸ ಸರಿ ಹೇಳುಲೆ ದಾಖಲೆಗೊ ಇಲ್ಲೆ. ಅದಕ್ಕೆ ಅವನೇ ಬೇರೊಂದು ಅರ್ಜಿ ತಯಾರು ಮಾಡಿ ಹಳೆಮನೆಯ ವಿಳಾಸಕೊಟ್ಟು ನೋಡಿದನಡ. ಸರಿ ಸ್ಥಳೀಯ ಸ್ಟೇಶನಿಂಗೆ ತನಿಖೆಗೆ ಹೋತುಅರ್ಜಿ. ಅವರ ಭೇಟಿ ಮಾಡಿ ನಿಂಗೊಗೆ ಇಷ್ಟು ಪೈಸೆ ಕೊಡುತ್ತೆ. ಒಂದರಿ ವರದಿ ಮಾಡಿ ಕಳಿಸಿ ಹೇಳಿದನಡ. ಮರದಿನವೇ ಅವರ ಕರಕ್ಕೊಂಡು ಬಂದು ಹೊಸ ಮನೆ, ಹಳೆಮನೆ ತೋರುಸಿ ಅಪ್ಪಗ ಈಗಾಣ ವಾಸಸ್ಥಳ ಇದುವೇ ಹೇಳಿ ಈ ವಠಾರಲ್ಲಿಪ್ಪ ಎರಡು ಮನೆಯೋರ ಕರಕ್ಕೊಂಡು ಬಾ. ಅವರ ಸ್ಟೇಟ್ಮೆಂಟ್ ತೆಕ್ಕೊಡು ವರದಿಯ ಮೇಲೆ ಕಳುಸುತ್ತೆಯೋ ಹೇಳಿ ಮದಲೇ ಕೇಳಿದ್ದ ಪೈಸೆಯ ತೆಕ್ಕೊಂಡು ವರದಿ ಡಿ ಸಿ ಆಫೀಸಿಂಗೆ ಹೋತು. ಅಲ್ಲಿಂದ ಇವ ಹತ್ತು ವರ್ಷಂದ ಇಲ್ಲಿಯೇ ಇದ್ದ ಇವನ ಮೇಲೆ ಯಾವುದೇ ಕ್ರಿಮಿನಲ್ ರೆಕೋರ್ಡ್ ಇಲ್ಲೆ ಹೇಳಿ ವರದಿಯದೃಢಪಡುಸಿ ಇಲ್ಲಿಗೆ ಕಳುಸಿದವು. ಇಲ್ಲಿ ಆನು ಹೇಳುಲೆ ಇಪ್ಪದು ಮಂಗಳೂರಿಂಗೆ ಆನು ಬಂದು ಏಳು ವರ್ಷ ವೇ ಆಯಿದಷ್ಟೆ ಆದರೂ ಪೈಸೆ ಮೂರು ವರ್ಷದ ದೃಢಪತ್ರಿಕೆ ಕೊಟ್ಟಿದು. ಇದು ನಮ್ಮ ದೇಶದ ಪ್ರಾಮಾಣಿಕತೆ. ಅಮೇರಿಕದ ಸ್ಟೇಶನಿಂಗೆ ಹೋಗಿ ಕೇಳಿದ್ದಕ್ಕೆ ಅರ್ಜಿ ತೆಗೆದು ಮಡುಗಿದೋರು, ಮತ್ತೆ ಆನು ಇಪ್ಪ ಜಾಗೆ ಅವರ ವ್ಯಾಪ್ತಿಯದಲ್ಲ ಹೇಳಿ ಗೊಂತಾಗಿ ಅರ್ಜಿಯ ಸೀದಾ ಮತ್ತೊಂದು ಸ್ಟೇಶನಿಂಗೆ ಕಳುಸಿದ್ದಲ್ಲದೆ, ವಿವರವ ಫೋನ್ ಮಾಡಿ ಮಗಸ್ಂಗೆ ಹೇಳಿತ್ತಿದ್ದವಡ. ಮತ್ತೊಂದು ಸ್ಟೇಶನಿನೋವು ಒಂದು ಬೇರೆ ಅರ್ಜಿ ಫೋರಂ ಕಳುಸಿ ದಸ್ಕತ್ ಮಾಡುಲೆ ಹೇಳಿಅದರ ಸ್ಟೇಶನಿನ ಬೋಕ್ಸಿಲ್ಲಿ ಹಾಕುಲೆ ಹೇಳಿತ್ತಿದ್ದವು. ಎರಡು ದಿನಲ್ಲಿ ಇವನ ಮೇಲೆ ಯಾವ ಕ್ರಿಮಿನಲ ದಾಖಲಗೊ ಇಲ್ಲೆ ಹೇಳಿ ದೃಢಪತ್ರವ ಕಳಿಸಿತ್ತಿದ್ದವು. ಯಾವ ಪೋಲಿಸ್ ಒಳ್ಳೆದು ಹೇಳುವದು ಗೊಂತಾತನ್ನೆ!  ವಕ್ಕೀಲಂಗೆ ಮತ್ತೆ ನಾನ್ನೂರು ಡಾಲರ್ ಕೊಟ್ಟು ವರದಿ ಕಳುಸಲೆ ಹೇಳಿತ್ತು. ಮತ್ತೊಂದು ವರ ಅದರ ಮಡಿಕ್ಕೊಂಡು ಹೇಂಗೋ ವಕೀಲ ಕಳುಸಿದ. ಆದರೆ ಓಫೀಸಿನೋವು ಸಿಕ್ಕಿ ಒಂದು ವಾರಲ್ಲಿ ಸಿಕ್ಕಿದ್ದು ಹೇಳಿ ಇಂಟರ್ನೆಟಿಲ್ಲಿ ಹೇಳಿತ್ತಿದ್ದವು. ಮತ್ತೆರಡು ವಾರಲ್ಲಿ ಹಸುರು ಕಾರ್ಡ್ ಎನಗೂ ಸಿಕ್ಕಿತ್ತು.
ಹೀಂಗೆ ಹಸುರು ಕಾರ್ಡಿಂಗೆ ಬೇಕಾಗಿ ಮತ್ತೂ ಒಂದು ತಿಂಗಳಷ್ಟು ಎಂಗಳ ವಿಮಾನದ ಟಿಕೆಟ್ ಮುಂದೆ ಹಾಕುಲೆ ಒಪ್ಪಿದ ಕಾರಣ ಎಂಗೊಗೆ ಅದೊಂದು ಲಾಭವೇ ಆತು. ಅಲ್ಲದ್ದರೆ ಬೇರೆಯೇ ಟಿಕೆಟ್ ತೆಕ್ಕೊಳ್ಳೆಕ್ಕಾತು.ದೈವ ಸಂಕಲ್ಪವೇ ಹೀಂಗಿತ್ತೋ? ಅಥವ ಇದರೆಡೆಲ್ಲಿ ಬಸರಿ ಅಗಿದ್ದ ಸಣ್ನ ಸೊಸೆಯೂ ಒಬ್ಬ ಮಾಣಿಗೆ ಜನ್ಮ ಕೊಟ್ಟಿತ್ತು.ಹೆತ್ತು ಹತ್ತು ದಿನಲ್ಲಿ ಹಸುರು ಕಾರ್ಡ್ ಬಂದಿತ್ತು. ಹೀಂಗೆ ಕಾರ್ಡ್ ಸಿಕ್ಕುಲೆ ತಡ ಆದಕಾರಣ ಆದ ನಷ್ಟ ಕಷ್ಟದ ಎಡೆಲ್ಲಿ ಸಂತೋಷ ವಿಚಾರಎ ಇನ್ನೊಬ್ಬ ಪುಳ್ಳಿಯ ನೋಡುಲೆಡಿಗಾದ್ದು. ಅಥವಾ ಅವನ ನೋಡುವ ಭಾಗ್ಯವೇ ಹೀಂಗೆ ಕಾರ್ಡ್ ಸಿಕ್ಕುಲೆ ತಡವಾದ್ದೋ ಹೇಳುಲೆಡಿಯ! ಎಲ್ಲ ದೈವ ಸಂಕಲ್ಪ ಇದ್ದ ಹಾಂಗೇ ಅಪ್ಪದು. ೨೯ನೇ ತಾರಿಕು ಆದಿತ್ಯವಾರ ಊರಿಂಗೆ ಹೋಪಗ ಸಂತೋಷಲ್ಲಿ ಹೋಪ ಹಾಂಗೆ ಆತು. ಎರಡು ಪುಳ್ಯಕ್ಕ ನೋಡುವುದರೊಟ್ಟಿಂಗೆ ಇಲ್ಲಿ ಬಂದು ಈಗಿಪ್ಪ ಐದು ಜನ ಪುಳಕ್ಕಳೊಟ್ಟಿಂಗೆ ದಿನ ಕಳಿವಲೆಡೆಯಾದ್ದು ಎಂಗಳ ಪುಣ್ಯವೋ ಪುಳ್ಯಕ್ಕಳ ಪುಣ್ಯವೋ ದೇವರಿಂಗೇ ಗೊಂತು. ಅಂತೂ ಅಮೇರಿಕಲ್ಲಿ ಮಕ್ಕಳೊಟ್ಟಿಂಗಇಪ್ಪಲೆ ಹಸುರು ಕಾರ್ಡ್ ಸಿಕ್ಕಿ ತುಂಬ ಸಂತೋಷ ಆತು.

Monday, July 23, 2012

ಟ್ರೆತ್ಲೋನ್ ಮತ್ತು ಎಲೆಯಪ್ಪ



ಟ್ರೆಥ್ಲೊನ್ ಮತ್ತು ಎಲೆಯಪ್ಪ


.ಟ್ರೆಥ್ಲೋನ್
            ಅಮೇರಿಕದಲ್ಲಿ ಪ್ರಚಲಿತವಾಗಿರುವ ಮೂರು ಬಗೆಯ ಈ ಓಟಗಳನ್ನು ಟ್ರೆಥ್ಲೋನ್ ಎನ್ನುತ್ತಾರೆ. ಈಜುವುದು,ಸೈಕ್ಲಿಂಗ್ ಮತ್ತು ಓಟ ಸೇರಿರುತ್ತದೆ. ಸಾಮಾನ್ಯವಾಗಿ ರಜಾದಿನಗಳಲ್ಲಿ ಇಂತಹ ಸಾಹಸಮಯ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಮಾರಥೋನ್ ಓಟ (೪೦ ಕಿ ಮೀ ಓಡುವುದು)ಅದರ ಅರ್ಧ ಯಾ ಕಾಲು ಭಾಗದ ಓಟಗಳನ್ನೂ ನಡೆಸುತ್ತಿರುತ್ತಾರೆ.  ಇಲ್ಲಿಯ ಉತ್ಸಾಹಿಗಳು (ಮುದುಕರೂ ಕೂಡ) ಈ ಓಟಗಳಲ್ಲಿ ಭಾಗವಹಿಸುತ್ತಾರೆ. ಭಾಗವಹಿಸಿದ ಮೇಲೆ ಗೆಲ್ಲುವುದು ಮಾತ್ರ ಉದ್ದೇಶವಲ್ಲ; ಗುರಿಮುಟ್ಟುವುದು ಮುಖ್ಯ. ಪೂರೈಸಿದವರಿಗೆ ಪದಕಗಳನ್ನು ಕೊಡುವುದು ರೂಢಿ. ನನ್ನ  ಸಣ್ಣ ಮಗ ಮಾರಥೋನ್ ಓಟವನ್ನೂ ಪೂರೈಸಿದ್ದಾನೆ. ಮೊನ್ನೆ ಒಮ್ಮೆ ಸರೋವರವೊಂದರಲ್ಲಿ ಈಜುವ ಸಾಹಸವನ್ನೂ ಮಾಡಿದ್ದ. ಈಜುವುದನ್ನು ಅಭ್ಯಾಸ ಮಾಡಿದ್ದೇ ಇತ್ತೀಚೆಗೆ. ಭಾಗವಹಿಸುವ ಹುಮ್ಮಸ್ಸು  ಅವನದು. ಮೊನ್ನೆ ಇಲ್ಲಿ ನೂರು ಅಡಿಗಳಷ್ಟು ಆಳವಾದ ನದಿಯಲ್ಲಿ ಮುಕ್ಕಾಲು ಮೈಲಿನಷ್ಟು ಪ್ರವಾಹದ ಎದುರಾಗಿ ಮತ್ತು ನದಿಯ ಅಡ್ಡಕ್ಕೆ ಹೋಗಿ ಕೆಳಗೆ ಈಜ  ಬೇಕಿತ್ತು. ಈಜಿದ ಮೇಲೆ ೧೭ ಮೈಲು ಸೈಕ್ಲಿಂಗ್ ಮಾಡಬೇಕಿತ್ತು. ಮತ್ತೆ ಮೂರೂವರೆ ಮೈಲು ಓಡಿ, ಗುರಿಮುಟ್ಟಬೇಕಾದ್ದು ಅಗತ್ಯವಾಗಿತ್ತು. ಮೊದಲ ಸ್ಥಾನ ಪಡೆದವರಿಗೆ ಬಹುಮಾನವೂ ಇತ್ತು. ನನ್ನ ಮಗನು ಭಾಗವಹಿಸುವೆನೆಂದು ಹೆಸರು ಕೊಟ್ಟಿದ್ದ. ನಮಗೇನೋ ಅವನು ಸ್ಪರ್ಧೆಯಲ್ಲಿ ಭಾಗವಹಿಸುವುದು ಸುತರಾಂ ಇಷ್ಟವಿರಲಿಲ್ಲ. ಸಾಲದ್ದಕ್ಕೆ ರಾತ್ರಿ ಮಳೆ ಬಂದು ನದಿ ತುಂಬಿ ಹರಿಯುತ್ತಿತ್ತು. ಮಾತ್ರವಲ್ಲ ಸ್ವಲ್ಪ ಕೊಳೆ ಕಶ್ಮಲಗಳು ಮಳೆ ನೀರಿನೊಂದಿಗೆ ಸೇರಿಕೊಂಡಿತ್ತು. ಮನೆಯಿಂದ ೧೮ ಮೈಲು ದೂರವಿತ್ತು ಜಾಗ.ಇಲ್ಲಿಯವರಾದರೋ ಚೆನ್ನಾಗಿ ಅಭ್ಯಾಸ ಮಾಡಿದವರಿರುತ್ತಾರೆ. ಮಗನ ಉತ್ಸಾಹಕ್ಕೆ ತಣ್ಣೀರೆರಚಲು ಮನಸ್ಸಿಲ್ಲದೆ ಕಡೆಗೂ ನಾವೂ ಒಪ್ಪಿದೆವು. ಬೆಳಿಗ್ಗೆ ಆರೂವರೆ ಗಂಟೆಗೆ ಮನೆಯಿಂದ ಹೊರಟೆವು. ಅಲ್ಲಿ ಗೆ ತಲಪುವಾಗ ವಾಹನಗಳ ಒತ್ತಡವಿದ್ದುದರಿಂದ ಏಳೂಕಾಲು ಗಂಟೆಯಾಗಿತ್ತು.  ಬೆಳಿಗ್ಗೆ ಐದು ಗಂಟೆಗೇ ಬಂದಿದ್ದರಂತೆ ಜನ! ನಮ್ಮ ವಾಹನ ನಿಲ್ಲಿಸಲು ಒಂದು ಮೈಲು ದೂರದಲ್ಲಿ ಜಾಗ ಸಿಕ್ಕಿತು. ಮೊದಲೇ ಬಂದಿದ್ದ ವಾಹನಗಳು ತುಂಬಿದ್ದುದರಿಂದ ಎರಡು ಮೈಲು ದೂರದಲ್ಲಿ ವಾಹನ ನಿಲ್ಲಿಸಬೇಕಾಯಿತು. ಮಗನೇನೋ ಅಲ್ಲಿಂದ ಇಳಿದು ಸೈಕಲ್ಲಿನಲ್ಲಿ ಮುಂದೆ ಹೋದ. ಹೆಸರು ನಮೂದಿಸಿದ ಮೇಲೆ ಕೊಡುವ ಬೇಜನ್ನು ತೆಗೆದುಕೊಂಡು ಧರಿಸಿಕೊಳ್ಳಬೇಕಿತ್ತು ಅವನಿಗೆ. ನಾವು ಅಲ್ಲಿಂದ ಮುಂದೆ  ಒಂದು ಮೈಲಿನಷು ಬಸ್ಸಿನಲ್ಲಿಯೂ ಮತ್ತೆ ಒಂದು ಜೀಪಿನಲ್ಲಿಯೂ ಹೋದೆವು. ಸೊಸೆ ತುಂಬು ಗರ್ಭಿಣಿಯಾಗಿದ್ದುದರಿಂದ ನಡೆಯುವುದು ಕಷ್ಟವೆಂದು ಅವರನ್ನು  ಬೇಡಿಕೊಂಡದ್ದಕ್ಕೆ ವಾಹನ ಸಿಕ್ಕಿದ್ದು ಅನುಕೂಲವಾಯಿತು. ನಾವು ತಲಪಿದಾಗ ಮಗನು ಈಜುವುದಕ್ಕೆ ಹೋಗಿದ್ದಿರಬೇಕು. ಈಜಿ ಅಭ್ಯಾಸವಿಲ್ಲದಿದ್ದರೂ ಅವನ ಅದಮ್ಯ ಉತ್ಸಾಹ ಭಾಗವಹಿಸುವಂತೆ ಮಾಡಿತ್ತು. ಭಾಗವಹಿಸುವವರು ೧೫೦ ಡಾಲರ್ ಪ್ರವೇಶ ಧನ ಕೊಡ ಬೇಕಿತ್ತಾದರೂ ಮಗನಿಗೆ ಅವನು ಕೆಲಸ ಮಾಡುವ ಕಂಪೆನಿಯವರೇ ಹಣದ  ವ್ಯವಸ್ಥೆ ಮಾಡಿದ್ದರು.
            ೧೬ ವರ್ಷದವರಿಂದ ತೊಡಗಿ ೭೫ ವರ್ಷ ಪ್ರಾಯದ ಮುದುಕರೂ ಸ್ಪರ್ಧೆಯಲ್ಲಿ ಪಾಲುಗೊಂಡಿದ್ದರಂತೆ. ಎರಡು ಸಾವಿರಕ್ಕಿಂತಲೂ ಹೆಚ್ಚು ನೋಂದಾಯಿಸಿಕೊಂಡಿದ್ದರು. ಗಂಡುಸರೂ ಹೆಂಗುಸರೂ ಸ್ಪರ್ಧಾಳುಗಳು ಆಗಿದ್ದರು. ಒಬ್ಬ ಎರಡು ಕಾಲುಗಳಿಲ್ಲದವನೂ ಇನ್ನೊಬ್ಬ ಒಂದು ಕೈ ಇಲ್ಲದವನೂ ಭಾಗವಹಿಸಿದ್ದು ವಿಶೇಷವಾಗಿತ್ತು.ಅವರ ಉತ್ಸಾಹ ನಮ್ಮನ್ನು ಮೂಕಸಾಕ್ಷಿಗಳನ್ನಾಗಿಸಿತ್ತು. ಅದರೆ ಇಷ್ಟು ಜನರಲ್ಲಿ ಭಾರತೀಯ ಸ್ಪರ್ಧಾಳು ನನ್ನ ಮಗ ಮಾತ್ರವಾಗಿದ್ದುದು ಮತ್ತೊಂದು ವಿಶೇಷ! ಮಗ ಈಜಿ ನದಿಯಿಂದ ಮೇಲೆ ಬಂದ ಮೇಲೆಯೇ ನಾವು ಕಂಡುದು. ಈಜುವ ಜಾಗವು  ಸುತ್ತಲೂ ಮರಗಳಿಂದ ಸುತ್ತುವರಿದಿದ್ದ ಕಾರಣ ನಮಗೆ ಕಾಣಿಸುವುದಿಲ್ಲ. ಅವನನ್ನು ಕಂಡ ಮೇಲೆ ನಮಗೆ ಮನಸ್ಸಿಗೆ ಧೈರ್ಯವಾಯಿತು. ಹೆಮ್ಮೆಯೆನಿಸಿತು. ಯಾವುದೋ ಒಂದು ಹಳ್ಳಿಯ ಕೊಂಪೆಯಲ್ಲಿ ಹುಟ್ಟಿ ಬೆಳೆದವನೊಬ್ಬ ದೂರದ ನೀರಿನ ಆಳ ಹರವು ಅರಿಯದವನೊಬ್ಬ ಗುರಿ ಸಾಧಿಸಿದುದು ಅದ್ಭುತವಾಗಿತ್ತು. ಅವನು ಮತ್ತೆ ಹೇಳಿದ ತನ್ನ ಹುಚ್ಚು ಸಾಹಸದಲ್ಲಿ ಜೊತೆಗೆ ನೀವು ಇದ್ದುದರಿಂದ ಧೈರ್ಯ ಇಮ್ಮಡಿಯಾಗಿತ್ತು ಎಂದ. ಮತ್ತೆ ಸೈಕಲ್ ಸವಾರಿ ಮಾತ್ರ ಸ್ವಲ್ಪ  ವಿಳಂಬವಾಗಿ ಹೋಯಿತು. ಒಂದು ಲಟಾರಿ ಸೈಕಲ್ ಅವನದಾಗಿದ್ದುದರಿಂದ ತುಂಬ ಕಷ್ಟಪಡಬೇಕಾಯಿತು. ಎರಡು ಸಾವಿರ ಡಾಲರ್ ಬೆಲೆ ಬಾಳುವ ಸೈಕಲ್ ತಂದವರೂ ಇದ್ದರು. ಅದು ಓಡುವ ವೇಗ ಅದ್ಭುತವಾಗಿತ್ತು. ಇವನಲ್ಲಿದ್ದುದು ಸ್ಪರ್ಧೆಗಾಗಿ ತೆಗೆದದ್ದಲ್ಲ. ಒಂದು ಹಳತು ಸೈಕಲ್. ಅದನ್ನೂ ಮುಗಿಸಿ ಓಟವನ್ನೂ ಮುಗಿಸಿದವನನ್ನು ನೋಡಿದಾಗ ನಾವೆಲ್ಲ ಹೆಮ್ಮೆ ಪಟ್ಟೆವು ಇಂತಹ ಮಗನನ್ನು ಪಡೆದ ನಾವು ಭಾಗ್ಯವಂತರೆಂದು ನಮ್ಮ ಧನ್ಯತೆಗಾಗಿ ಪುಳಕಗೊಂಡೆವು. ಮೊಮ್ಮಗನಂತೂ ಹಿರಿ ಹಿರಿ ಹಿಗ್ಗಿ ಅಪ್ಪನನ್ನು ಅಪ್ಪಿ ಮುದ್ದಾಡಿದನು. ಸ್ಪರ್ಧೆಯಲ್ಲಿ ಗೆದ್ದವನು ೭೦ ಮಿನಿಟಿನಲ್ಲಿ ಪೂರೈಸಿದ ಗುರಿಯನ್ನು ಇವನು ಎರಡು ಗಂಟೆಯಲ್ಲಿ ಮುಗಿಸಿದ್ದಾದರೂ ಹೆಚ್ಚಿನ ಅಭ್ಯಾಸವಿಲ್ಲದೆ ಗುರಿಮುಟ್ಟಿದ್ದು ನಮಗೆ ಹೆಮ್ಮೆಯ ವಿಷಯವಾಗಿ ಕುಶಿಕೊಟ್ಟಿತು. ಮತ್ತೆ ಅವನ ಕಂಪೆನಿಯವರು ಇವರಿಗೆಲ್ಲ ಉಪಹಾರದ ವ್ಯವಸ್ಥೆ ಮಾಡಿದ್ದರು ನಮಗೂ ಸಿಕ್ಕಿತು. ಎಲ್ಲರೂ ಒಟ್ಟಾಗಿ ಅಲ್ಲಿಂದ ಹೊರಡುವಾಗ ಹನ್ನೊಂದು ಗಂಟೆ. ಆ ಮೇಲೆ ನಾವೆಲ್ಲರೂ ಮನೆಗೆ ಬಂದೆವು. ಅಮೇರಿಕ ಪ್ರವಾಸದಲ್ಲಿ ಚಿರಕಾಲ ಉಳಿಯಬಹುದಾದ ಈ ಸನ್ನಿವೇಶಕ್ಕೆ ಪ್ರತ್ಯಕ್ಷದರ್ಶಿಯನ್ನಾಗಿ ಮಾಡಿಬಿಟ್ಟ ನಮ್ಮ ಮಗ. ಇಲ್ಲಿಯವರಿಗೆ ಇದು ಅವರ ಹವ್ಯಾಸವದರೂ ನಮಗೆ ಹೊಸತಾಗಿತ್ತು
                            ಎಲೆ ಅಪ್ಪ.;- ಅಮೇರಿಕದಲ್ಲಿ ಕೆಲಸಕ್ಕಾಗಿ ಬಂದ ಭಾರತೀಯರು ಇಲ್ಲಿ ಅನ್ಯೋನ್ಯವಾ ಗಿ ಬಾಳುವೆ ನಡೆಸುತ್ತಿರುತ್ತಾರೆ. ವಾರದ ಕೊನೆಗೆ ಅವರೆಲ್ಲ ಸ್ವತಂತ್ರ ಹಕ್ಕಿಗಳು. ಬೇಕೆಂದಲ್ಲಿಗೆ ಹಾರಿ ಹೋಗಲು ಸ್ವತಂತ್ರರು. ಇಲ್ಲಿ ಕೆಲಸ ಮಾಡುವವರ ಹೆತ್ತವರು ಇವರನ್ನು ನೋಡಲೆಂದು ತಾತ್ಕಾಲಿಕ ವಿಸಾ ಅಥವಾ ಖಾಯಂ ಆಗಿ ಇರುವುದಾದರೆ ಗ್ರೀನ್ ಕಾರ್ಡ್ ಮಾಡಿಸಿಕೊಂಡು ಮಕ್ಕಳೊಡನೆ, ಮೊಮ್ಮಕ್ಕಳೊಡನೆ ಬೆರೆಯಲು ಸಂತೋಷ ಪಡುತ್ತಾರೆ. ಜೊತೆಗೆ ಹೀಗೆ ಬಂದವರನ್ನೂ  ಆಚೀಚೆ ಮನೆಯವರು ಆಗಾಗ ಊಟಕ್ಕೆ ಕರೆಯುತ್ತಿರುವುದು ವಾಡಿಕೆ. ಊರವರ ಜೊತೆ ಇದ್ದ ತೃಪ್ತಿ ಅವರದಾಗುವುದಂತೆ. ಹಗೆ ಊಟಕ್ಕೆ ನಾವೂ ಈ ಒಂದು ವರ್ಷದಲ್ಲಿ ಕೆಲವು ಮನೆಗಳಿಗೆ ಮಕ್ಕಳೊಡನೆ ಹೋಗಿದ್ದೆವು. ಮೊನ್ನೆ ಮೈಸೂರಿನವರೊಬ್ಬರ ಮನೆಗೆ ಹೋಗಿದ್ದೆವು.ಅವರ ಮಡದಿ ಮಂಗಳೂರಿನವಳಂತೆ. ಮೂಲ ಎಂದರೆ ಅವಳ ತಾಯಿಮನೆ ಕೇರಳದ ತಿರುವನಂತಪುರವಂತೆ. ೫ ವರ್ಶದ ಒಬ್ಬ ಗಂಡು ಮಗ ಮತ್ತು ಒಂದುವರ್ಷ ಪೂರೈಸಿದ ಹೆಣ್ಣು ಮಗು ಹೀಗಿತ್ತು ಅವರ ಕುಟುಂಬ. ಹೆಣ್ನು ಮಗುವಿನ ಪ್ರಥಮ ವರ್ಷಾಚರಣೆಯನ್ನು ಒಂದು ರೆಸ್ಟೋರೆಂಟ್ ನಲ್ಲಿ ತುಂಬ ಭರ್ಜರಿಯಾಗಿ ಮಾಡಿದ್ದರು. ಕೂಟಕ್ಕೆ ನಾವೂ ಹೋಗಿದ್ದೆವು.೬೦ ಜನಕ್ಕಿಂತಲು ಹೆಚ್ಚು ಜನಕ್ಕೆ ಊಟ ಹಾಕಿದ್ದರು.ಈ ದಿನ ಒಂದು ಸೌಹಾರ್ದ ಕೂಟ. ನಾವೂ ಮಂಗಳೂರವರೆಂಬ ಅಭಿಮಾನದಿಂದ ಕರೆದಿದ್ದರು. ನಾನು ನನ್ನ ಮಡದಿ,ಮಗ ಸೊಸೆ,ಮೊಮ್ಮಗ ಮತ್ತು ಸೊಸೆಯ ತಾಯಿ ಒಟ್ಟು ಆರು ಜನ ಅವರಿಗೆ ಅತಿಥಿಗಳು. ಊರಲ್ಲಿ ಕೂಡಾ ಅಂತಹ ಸತ್ಕಾರ ಸಿಕ್ಕಿರಲಿಲ್ಲ. ತಲಪುವಾಗಲೇ ಒಂದು ಗಂಟೆಯಾಗಿದ್ದುದರಿಂದ ಊಟಕ್ಕೇ ಕುಳಿತೆವು.ಮೊದಲು ಬಡಿಸಿದ್ದು,ಎಲೆಯಪ್ಪ ಎಂಬ ಹೆಸರಿನ ಶಾವಿಗೆಯನ್ನು. ಮತ್ತೆ ನಮ್ಮ ಮನೆಗಳಲ್ಲಿ ಮಾಡುವ ತರದ  ಮೇಲೋಗರ. ಅಚ್ಚ ಹವ್ಯಕ ಶೈಲಿಯ ಮೇಲೋಗರ ರುಚಿ ರುಚಿಯಾಗಿತ್ತು. ಸಾರು,ಹಪ್ಪಳ, ಮತ್ತೆ ಟೊಮೆಟೋದಿಂದ ಮಾಡಿದ ಗೊಜ್ಜು, ಸ್ಪೈನೇಚಿನಿಂದ ಮಾದಿದ ತಂಬುಳಿ,ಮೊಸರು, ಜೊತೆಗೆ ಅಪ್ಪೆ ಮಿಡಿ ಉಪ್ಪಿನ ಕಾಯಿ ತರ ತರದ ಪದಾರ್ಥಗಳನ್ನು ಕೂಡಿ ಉಂಡವರಿಗೆ ಊಖ್ಯವಗಿ ನನಗೆ ಹೊಟ್ಟೆ ಬಂದು ಮಡಿಲಲ್ಲಿ ಕುಳಿತದ್ದು ಗೊತ್ತಾದ ಮೇಲೆಯೇ ಎದ್ದದ್ದು. ಕುಳಿತು ಉಸಿರು ಬಿಡಬೇಕಾದರೆ ಮತ್ತೆ ಬಂತು ಕೇರಟ್ಟಿನ ಜೊತೆ ಕೇಸರಿ ಮತ್ತು ಗೇರುಬೀಜ ಹಾಕಿದ ಖೀರು ಕಂಡ ಮೇಲೆ ಬಿಡುವುದಕ್ಕಗುತ್ತದೆಯೇ! ತಯಾರಿಸಿದ ಮೇಲೆ ಒಂದು ಕಪ್  ಮಾತ್ರ ತಿಂದುದಾದರೂ ಬಾಯಿರುಚಿ ಮರೆಯುವಂತಿಲ್ಲ. ಮತ್ತೆ ತಾಂಬೂಲ ಹಾಕಿಕೊಳ್ಳುವಿರೋ ಎಂದೆಲ್ಲ ಊರಿನ ತರವೆ ಕೇಳಿದರು.    ಎಲೆ ಅಪ್ಪ,ಕೇರಳದಲ್ಲಿ ಕರೆಯುವ ಹೆಸರು. ಶಾವಿಗೆ ಮತ್ರ ನಮ್ಮೂರ ತರ ತಯಾರಿಸುವುದಲ್ಲ ಎಂದು ಸಂಯುಕ್ತ ಎಂಬ ಹೆಸರಿನ ಅಕೆ ಹೇಳಿದರು. ಮೂರು ಕಪ್ ಅಕ್ಕಿ ಹುಡಿಗೆ ನಾಲ್ಕು ಕಪ್ ನೀರು ಸೇರಿಸಿ ಸ್ವಲ್ಪ ರುಬ್ಬಿ ಗಟ್ತಿ ಹಿಟ್ಟನ್ನು ಚಕ್ಕುಲಿ ಮುಟ್ಟಿನಲ್ಲಿ ಶಾವಿಗೆಯ ಅಚ್ಚನ್ನುಪಯೋಗಿಸಿ ಇಡ್ಲಿಯಂತೆ  ತಟ್ಟೆಯಲ್ಲಿ ಹಾಕಿ ಇಡ್ಲಿ ಪಾತ್ರೆಯೊಳಗಿಟ್ಟು ಬೇಯಿಸುವುದು.  ಬೇಯಿಸುವುದು. ಬೇಯುವ ಹೊತ್ತಿಗೆ ಇಡ್ಲಿಯಂತೆ ಗರಿ ಗರಿಯಾಗಿ ಬಾಯಲ್ಲಿ ನೀರೂರುವಂತೆ ಕಾಣುತ್ತಿದೆ. ಕೇರಳದಲ್ಲಿ ಹೀಗೆ ಬೇಯಿಸುವ ತಿಂಡಿಯನ್ನು ಅಪ್ಪ ಎನ್ನುತ್ತಾರೆ.  ಇದನ್ನು ತಯಾರಿಸುವ ವಿಧಾನವನ್ನು ಕೇಳಿಕೊಂಡು ಬಂದ ನನ್ನ ಮಡದಿ ಮರುದಿ ಸಂಜೆಗೆ ಇದೇ ತಿಂಡಿಯನ್ನು ಮಾಡುವೆನೆಂದು ಪ್ರಯತ್ನಿಸಿ ನಮಗೆಲ್ಲ ತಿನಬಡಿಸಿದ್ದು ಆಕೆಯ ಸಾಧನೆ.ಬೆರೆ ಮನೆಗಳಿಗೆ ಹೋದಾಗ ತಿಂದ ಹೊಸ ತಿಂಡಿಯನ್ನು ಮಾಡುವ ವಿಧಾನವನ್ನು ಕೇಳಿಕೊಂಡು ಬಂದು ಪ್ರಯೋಗಿಸುವುದು ಅವಳ ಜಾಯಮನವಾಗಿ ನನಗು ಹೊಸ ತಿಂಡಿಗಳನ್ನು ತಿನ್ನುವ ಭಾಗ್ಯ ಆಗಾಗ ಬಂದೊದಗುತ್ತಿತ್ತು. ಊರಿಗೆ ಹೋದ ಮೇಲೆಯೂ ಹೊಸ ತಿಂಡಿಗಳನ್ನು ತಿಂದುಕೊಂಡಿರಬಹುದೆಂಬ ಆಸೆಯಲ್ಲಿದ್ದೇನೆ.

ಜನ್ಮ ದಿನದ ಕೂಟ

                        ಜನ್ಮ ದಿನದ ಕೂಟ
        ಹುಟ್ಟು ಹಬ್ಬ ಆಚರಿಸುವದು ಈಗ ಸಾಮಾನ್ಯ. ನಮ್ಮೂರಿಲ್ಲಿ  ಜನ್ಮ ದಿನಾಚರಣೆ ಹೇಳುವದು ಈಗ ಚಾಲ್ತಿಲ್ಲಿದ್ದರೂ ಮದಲು ಇತ್ತಿಲ್ಲೆ. ಹುಟ್ಟು ಹಬ್ಬದ ದಿನ ಮನೆಲ್ಲೇ ಭಟ್ರ ಬಪ್ಪಲೆ ಹೇಳಿ ಏನಾದರೂ ವಿಶೇಷ ಪೂಜೆ ಮಾಡುವದೋ, ಅಥವಾ ಹತ್ತರೆ ದೇವಸ್ಥಾನ ಇದ್ದರೆ ಅಲ್ಲಿಗೆ ಹೋಪದೋ ಮಾಡುವದು ಇದ್ದತ್ತು. ಈಗ ನಮ್ಮೂರಿಲ್ಲಿಯೂ ಅದೇ ಪ್ರಾಯದ ನೆರೆಕರೆಲ್ಲಿಪ್ಪ ಮಕ್ಕಳನ್ನೂ ಮನೆಗೆ ಬಪ್ಪಲೆ ಹೇಳುವದು,  ಕೇಕ್ ಕಟ್ ಮಾಡುವದು ಮೇಣದ ಬತ್ತಿ ಹೊತ್ತುಸುವದು ಎಲ್ಲ ಶುರುವಾಯಿದು. ನಿಜಕ್ಕೂ ಈ ಸಂಪ್ರದಾಯ ಇತ್ತೀಚೆಗೆ ವಿದೇಶಿಗರ ಸಂಪರ್ಕಂದಲೇ ಆದ್ದಿರೆಕ್ಕು. ದೀಪ ಹೊತ್ತುಸಿ ಊದಿ ನಂದುಸುವದು ನಮ್ಮ ಧಾರ್ಮಿಕ ಭಾವನೆಗೆ ವಿರೋಧವಾವುತ್ತಾದರೂ, ಜನಂಗೊ ಅದು ಮೂಢನಂಬಿಕೆ ಹೇಳಿ ಬಾಯಿ ಮುಚ್ಚುಸುತ್ತವು. ಎಲ್ಲ ಕಾಲಕ್ಕೆ ತಕ್ಕ ಕೋಲ! ಒಳುದೋರೆಲ್ಲ ಮಾಡಿ ಸಂತೋಷ ಪಡುವಗ, ನಾವುದೇ ಮಾಡದ್ದರೆ ಮಕ್ಕೊಗೂ ಕೊರತ್ತೆಯಾಗಿ ಕಾಣುತ್ತು. ರಾಜಕೀಯ ನಾಯಕಂಗೊಅವರ ದೊಡ್ಡಸ್ತಿಕೆಯ ತೋರುಸಿಗೊಂಬಲೆ ಭಾರೀ ಗೌಜಿಲ್ಲಿ ಆಚರುವದಿದ್ದು. ಸರಕಾರದ ಹೇಳಿದರೆ ಜನರ ಹಣವ, ಬೇಕಾದಷ್ಟು ತಿಂದು ಕೊಬ್ಬಿದ ಮುಂದಾಳುಗೊ, ಅವರ ಶ್ರೀಮಂತಿಕೆಯ ತೋರುಸುಲೆ ಸಾವಿರಾರು ಜನಂಗೊಕ್ಕೆ ಅನ್ನದಾನ, ವಸ್ತ್ರದಾನ ಹೇಳಿ ಮಾಡಿಕ್ಕಿ ಮತ್ತೆ ಆ ಖರ್ಚಿನ ಸಾರ್ವಜನಿಕ ಫಂಡಿಂದ ಭರ್ತಿ ಮಾಡ್ಯೊಳ್ಳುತ್ತವು. ಇದರ ನಾವು ಮಾತಾಡಿ ಪ್ರಯೋಜನ ಇಲ್ಲೆ. ಅಧಿಕಾರ ಸಿಕ್ಕುವನ್ನಾರ ಜನಂಗಳ ಕೈಕಾಲು ಹಿಡುದು ಮತ್ತೆ ಇತ್ಲಾಗ್ಯಂಗೆ ತಿರುಗಿಯೂ ನೋಡವು. ಆದರೆ ವಿದೇಶಲ್ಲಿ ಹುಟ್ಟು ಹಬ್ಬವ ಗೌಜಿಲ್ಲಿ ಆಚರಿಸುವುದರಲ್ಲಿಯೂ ಒಂದು ವಿಶಿಷ್ಟತೆ ಕಂಡತ್ತು.
    ಅಮೇರಿಕಲ್ಲಿ ಆನಿಪ್ಪಗ, ಹತ್ತಿಪ್ಪತ್ತು ಹೀಂಗಿಪ್ಪ ಹುಟ್ಟು ಹಬ್ಬಂಗೊಕ್ಕೆ ಆನು ಹೋಗಿತ್ತಿದ್ದೆ. ಅಮೇರಿಕಲ್ಲಿ ಉದ್ಯೋಗ ಮಾಡ್ಯೊಂಡಿಪ್ಪ ಭಾರತೀಯರು, ಒಬ್ಬಕ್ಕೊಬ್ಬ ಸಂಪರ್ಕ ಮಡಿಕ್ಕೊಂಬಲೆ ಈ ಹುಟ್ಟು ಹಬ್ಬವೂ ಸಹಾಯ ಅವುತ್ತು. ಊರು ಬಿಟ್ಟು ದೂರಲ್ಲಿಪ್ಪವಕ್ಕೆ, ಉದ್ಯೋಗದ ಎಡೆಲ್ಲಿ ಮನಸ್ಸಂತೋಷಕ್ಕಾಗಿ ಪರಸ್ಪರ ಒಟ್ಟು ಸೇರಿಗೊಂಡು,ಕೊಶಿಪಡುತ್ತವು. ಕೆಲವು ಜನ ಅವರ ಮಕ್ಕಳ ಎರಡನೆಯ ಹೇಳಿದರೆ ಹುಟ್ಟಿ ಒಂದು ವರ್ಷ ಕಳುದ ಮೇಲೆ ಕೊಶಿಲ್ಲಿ ಹೆಚ್ಚು ಭರ್ಜರಿಯಾಗಿ ಆಚರುಸುತ್ತವು. ಕೆಲವು ಜನ ಅವರವರ ಮನೆಲ್ಲಿ, ಇನ್ನು ಕೆಲವು ಜನ ಕೆಲವು ರೆಸ್ಟೋರೆಂಟ್ ಗಳಲ್ಲಿ ಊಟದ ವ್ಯವಸ್ಥೆಯೂ ಮಾಡುತ್ತವು . ಐವತ್ತು ಅರುವತ್ತು ಜನ ಸೇರುವದೂ ಇದ್ದು. ಅರುವತ್ತು ಮೈಲು ದೂರಂದಲೂ ಬಂದು ಸೇರುತ್ತವು. ಅದೇ ಪ್ರಾಯದ ಮಕ್ಕಳೂ ಒಟ್ಟು ಸೇರಿ ಆಡುವದು, ಪಿಸ್ಸ ತಿಂಬದು, ಹೀಂಗೆಲ್ಲ. ದೂರಂದ ಬಂದೋರಿಂಗೆ ಆಸರಿಂಗೆ ಹೇಳಿಯೋ, ಎಪಿಟೈಸರ್ ಹೇಳಿಯೋ ಸಣ್ಣ ಪಾರ್ಟಿ, ಬಂದ ಕೂಡಲೇ ಇರುತ್ತು. ಮಕ್ಕಳೂ ಜ್ಯೂಸ್ ಮತ್ತೆ ಕುರು ಕುರು ತಿಂಡಿ ತಿಂದಿಕ್ಕಿ ಆಡಿಗೊಂಡು ಇರುತ್ತವು. ದೊಡ್ಡಾದೋರು, ಸ್ನೇಕ್ಸ್ ತಿಂದು ಜ್ಯೂಸ್ ಕುಡಿತ್ತವು. ಮತ್ತೆ ಒಂದೊಂದು ಶುದ್ದಿ ಮಾತಾಡ್ಯೊಂಡು ಇರುತ್ತವು. ಮತ್ತೆ ಊಟ. ಆದಮೇಲೆ ಕೇಕ್ ಕಟ್ ಮಾಡುವದು ಆದ ಮೇಲೆ , ಕೇಕ್ ಎಲ್ಲೋರು ತಿಂದಿಕ್ಕಿ ಸಭೆ ಬಿರಿತ್ತು. ಮುಖ್ಯವಾಗಿ ಹೀಂಗಿಪ್ಪ ಹೆಳೆಲ್ಲಿ ಒಟ್ಟುಸೇರಿ ವಿಚಾರ ವಿನಿಮಯ ಮಾಡ್ಯೊಂಡು, ಜೀವನದ ಸುಖವ ಸವುಕ್ಕೊಂಡು ಸುಖವಾಗಿ ಇಪ್ಪದರ ನೋಡಿದರೆ ನಮಗೂ ಕೊಶಿ ಆವುತ್ತು.  ಇಲ್ಲಿಪ್ಪ ನಮ್ಮ ಮಕ್ಕಳೊಟ್ಟಿಂಗೆ ನಾವಿದ್ದರೆ ನಮಗೂ ಊರು ಬಿಟ್ಟು ದೂರದ ಒಂದು ರಾಜ್ಯಲ್ಲಿ ಇದ್ದೆಯೊ ಹೇಳುವ ಚಿಂತೆಯೂ ಇರುತ್ತಿಲ್ಲೆ. ಜೀವನ ಸುಖವ ಅನುಭವಿವ ಭಾಗ್ಯ ವಿದೇಶಂಗಲಲ್ಲಿಪ್ಪೋವಕ್ಕೆ ಇದ್ದು ಹೇಳಿರೆ ತಪ್ಪಲ್ಲ. ನಮ್ಮ ದೇಶಲ್ಲಿ ಪೇಪರ್ ನೋಡಿದರೆ ಸಿಕ್ಕುವ ಶುದ್ದಿಗೊ, ಅಲ್ಲಲ್ಲಿ ನಡವ ಗಲಾಟಗೊ,ರಾಜಕೀಯ ಡೊಂಬರಾಟಂಗೊ ತಪ್ಪಿದರೆ ಬೇರೆಂತದೂ ಇಲ್ಲೆ. ವಿದೇಶಲ್ಲಿಪ್ಪೋವಕ್ಕೆ ಒಂದು ರೀತಿಲ್ಲಿ ಅವರ ಕೆಲಸ ಮತ್ತು ಕುಟುಂಬದ ಯೋಚನೆ ಬಿಟ್ಟರೆ ಬೇರೆ ಚಿಂತೆ ಇರುತ್ತಿಲ್ಲೆ. ಅದಕ್ಕೆ ಹೀಂಗೆ ಒಟ್ಟು ಸೇರುವಗ ಅವರ ಕೆಲಸದ ಶುದ್ದಿ, ಮತ್ತೆ ಮಕ್ಕಳ ಶುದ್ದಿ, ಮತ್ತೆ ವಾರದ ಕೊನೆಗೆ ಎಲ್ಲಿಗಾದರೂ ಪ್ರವಾಸ ಹೋದ ಶುದ್ದಿ ಹೀಂಗೆಲ್ಲ ಮಾತಾಡುಲೆ ಇದೇ ಸಮಯ. ಇಂಡಿಯಕ್ಕೆ ಹೋಯಿದೆಯೊ? ಊರಿಲ್ಲೆಲ್ಲ ಎಂತ ಆಡುತ್ತವು? ಇದರ ಎಲ್ಲ ಮಾತಾಡುವಗ ಎಡೆಲ್ಲಿ ಕೇಳಿಗೊಳ್ಳುತ್ತವು.ಸಣ್ಣ ಪುಟ್ಟ ಕಾಯಿಲೆಗೊಕ್ಕೆ ಇನ್ಶೂರೆನ್ಸ್ ಚಿಕಿತ್ಸಾ ಸೌಲಭ್ಯ ಕೊಡುತ್ತು. ವರ್ಷಕ್ಕೊಂದರಿ ನಮ್ಮ ಬಪ್ಪಲೆ ಹೇಳಿ ಚೆಕಪ್ ಮಾಡಿ ಆರೋಗ್ಯದ ಮಟ್ಟಿಂಗೆ ಸಲಹೆ ಕೊಡುತ್ತವು. ಮತ್ತೆ ಸಾಧ್ಯವಾದರೆ ಆಧ್ಯಾತ್ಮಿಕ ಚಿಂತೆ ಮಾಡುಲೂ ಎಡೆ ಇದ್ದು. ಬೇರೆ ಬೇರೆ ದೇವಸ್ಥಾನಂಗಳಲ್ಲಿ ಕೂಟ ಕೂಡುವದೂ ಇದ್ದು. ಅಲ್ಲದ್ದರೆ ಅಲ್ಲಲ್ಲಿ ಟೆನ್ನಿಸ್ ಕೋರ್ಟ್ ಗೊ ಮತ್ತೆ ಕ್ಲಬ್ ಗೊ ಇರುತ್ತು.ಮನಸ್ಸಿಂಗೂ ದೇಹಕ್ಕೂ ಆರೋಗ್ಯ ಕಪಾಡುಲೆ ಬೇರೆಂತ ಬೇಕು!
        ಒಂದು ವರ್ಷಂದಲೂ ಹೆಚ್ಚು ಸಮಯಂದ ಹೀಂಗಿಪ್ಪ ಕೂಟಕ್ಕೆ ಹೋದರೂ ಇಂದ್ರಾಣದ್ದು ಬಹುಶಃ ಈ ಸರ್ತಿ ಅಖೈರಿಯ ಕೂಟ ಹೇಳಿ ಕಾಣುತ್ತು. ಕಾಸರಗೋಡಿನ ಕುಳೂರಿನವಡೊ.ಗೋಪಾಲಣ್ನ ಹೇಳಿ ಹೆಸರು.ಇಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಲ್ಲಿದ್ದವು. ಒಂದು ಕೂಸು ಒಬ್ಬ ಮಾಣಿ ಹೀಂಗೆ ಎರಡು ಮಕ್ಕೊ ಅವಂಗೆ. ಹುಡುಗಿ ಸಣ್ಣದು. ಆರು ವರ್ಷ ಕಳುದು ಏಳನೆಯ ಜನ್ಮ ದಿನದ ಕೂಟಕ್ಕೆ ಐದಾರು ಮನೆಯೋರ ಬಪ್ಪಲೆ ಹೇಳಿ ಶನಿವಾರ ಹೊತ್ತೋಪಗ ಈ ಕೂಟ ಇತ್ತು. ಬಂದೋರೆಲ್ಲ ಹವೀಕರೇ. ಮಾತಾಡಿ ನೋಡುವಗ ಎಲ್ಲೋರುದೆ ಸಂಬಂಧಿಕರೇ ಆಗಿತ್ತಿದ್ದವು. ಬಂದೋರಲ್ಲಿ ಕೆಲವು ಜನಂಗಳ ಒಂದೆರಡು ಸರ್ತಿ ಅವರ ಭೇಟಿಯಾಗಿತ್ತು. ಹೀಂಗಿಪ್ಪ ಕೂಟಂಗಳ ವ್ಯವಸ್ಥೆ ಮಾಡುವದು ಮುಖ್ಯವಾಗಿ ಒಬ್ಬಕ್ಕೊಬ್ಬನ ಸಂಪರ್ಕ ಹೆಚ್ಚಪ್ಪಲೆ ಒಳ್ಳೆದಾವುತ್ತುಎನ್ನ ಎರಡನೆಯ ಮಗನ ಮಗಳು ಪುಳಿಯೂ ಎಂಗಳೊಟ್ಟಿಂಗೆ ಇತ್ತು. ಸಣ್ಣ ಮಗನ ಮಗನೂ ಸೇರಿ ಹತ್ತು ಮಕ್ಕೊ ಇತ್ತಿದ್ದವು. ಮಕ್ಕೊ ಎಲ್ಲ ಹೀಂಗಿಪ್ಪ ಕೂಟಂಗಳಲ್ಲಿ ಕಾಂಬಲೆ ಸಿಕ್ಕಿದೋವೇ. ಒಬ್ಬಕ್ಕೊಬ್ಬಂಗೆ ಪರಿಚಯ ಇತ್ತು. ಹೊಸಬ್ಬೆತ್ತಿ ಹೇಳಿರೆ ಟೊರೊಂಟೋಂದ ಬಂದಿದ್ದ ಪುಳ್ಳಿ ಮಾಂತ್ರ. ಮಕ್ಕೊ ಕಂಡ ಕೂಡಲೇ ಒಬ್ಬಕ್ಕೊಬ್ಬನ ದಿನಿಗೇಳ್ಯೊಂಡು ಜಾಗೆ ಇದ್ದಲ್ಲಿ ಕೂದು ಆಟವೋ ಮೇಲೆ ಉಪ್ಪರಿಗ್ಗೆ ಹತ್ತಿ ಇಳುದು ಮಾಡುವದೋ ಎಂತೆಲ್ಲ ಆಟ ಆಡುಲೆ ಶುರು ಮಾಡಿರೆ ದಿನಿಗೇಳಿರೆ ಕೇಳ ಅವಕ್ಕೆ. ತಿಂಬಲೂ ಒತ್ತಾಯಲ್ಲಿ ತಿನಿಸೆಕ್ಕು.ತುಂಬ ಸಂತೋಷಲ್ಲಿ ಇತ್ತಿದ್ದವು. ಮಕ್ಕೊಗೆ ಬೇಕಪ್ಪ ಆಟದ ಸಾಮಾನು ಪ್ರತಿ ಮನೆಲ್ಲೂ ಇರುತ್ತು. ಆಡುವ ಕ್ರಮವೂ ಅವಕ್ಕೆ ಗೊಂತಿರುತ್ತು.ಎಡೆಯೆಡೆಲ್ಲಿ ಜಗಳ ಬಂದರೂ ಮತ್ತೆ ರಾಜಿ ಆಗ್ಯೊಳ್ಳುತ್ತವು. ಸಾಲದ್ದದಕ್ಕೆ ಈ ಸಮಯಲ್ಲೇ ಅವರ ಸೆಕೆಗಾಲದ ರಜೆಯೂ ಇದ್ದು. ಆಟದ ಸಾಮಾನುಗಳ ಒಬ್ಬಕ್ಕೊಬ್ಬ ಹಂಚಿಗೊ<ಡು ಜಗಳ ಇಲ್ಲದೆ ಆಡುತ್ತವು. ಅವರ ಆಟ ನೋಡುಲೇ ಚೆಂದ. ಬಂದೋರಲ್ಲಿ ಒಬ್ಬ ೮೯ ವರ್ಷ ಪ್ರಾಯದೋನು ಎನ್ನ ಗುರ್ತ ಮಾಡ್ಯೊಂಡು "ನಾವು ಸೀನಿಯರ್ ಸಿಟಿಸನ್ಸ್ ಅಲ್ಲದೋ ಇಲ್ಲಿಯೆ ಮಾತಾಡ್ಯೊಂಡಿಪ್ಪ ಹೇಳಿ ಮಾತಾಡ್ಯೊಂಡಿದ್ದವು. ಅವರ ಮಗಳ ಮಗಳು ಅಮೇರಿಕಲ್ಲಿ ಡಾಕ್ಟರಡೊ. ಅಳಿಯನೂ ಡಾಕ್ಟರೇ ಅಪ್ಪು. ಆದರೆ ಅವು  ಅಜ್ಜನನ್ನೂ ಮಾವ ಅತ್ತೆಯನ್ನೂ ಇಲ್ಲಿ ಬಿಟ್ಟಿಕ್ಕಿ ಹೋಗಿತ್ತವು. ಮತ್ತೆ ಮನೆಯೋನ ದೊಡ್ಡ ಮಾವನ ಹೆಂಡತ್ತಿ. ಉಕ್ಕಿನಡ್ಕದ ಹೆಮ್ಮಕ್ಕೊ. ಮತ್ತೆ ನೋಡುವಗ ಅವರ ಅಜ್ಜನ ಮನೆ ಎಂಗಳ ಬಾಳಿಕೆ ಹತ್ರೆ ಆಗಿತ್ತು. ಹಾಂಗೆ ಮಾತಾಡುಲೆ ತುಂಬ ಅನುಕೂಲ ಆತು. ಹೋದ ಕೂಡಲೇ ಗೋಧಿ ರೊಟ್ಟಿಯೋ,ಚಿಪ್ಸೋ, ಹೀಂಗೆಲ್ಲ ತಿಂಬಲೆ ಮತ್ತೆ ಕುಡಿವಲೆ ಜ್ಯೂಸ್ ಕೊಟ್ಟವು.ಒಂದರ್ಧ ಘಂಟೆ ಕಳುದು ಮಕ್ಕಳ ಬರುಸಿ ಪಿಸ್ಸ ಕುಡಿವಲೆ ಜ್ಯೂಸ್ ಎಲ್ಲ ಕೊಟ್ಟವು. ಈ ಸಮಯಲ್ಲಿ ಸೂರ್ಯ ಕಂತುವಗಳೇ ಎಂಟೂವರೆ ಗಂಟೆ ಲ್ಕಳಿತ್ತು. ಮತ್ತೆ ಊಟದ ವ್ಯವಸ್ಥೆ ಎಲ್ಲ ಮನೆದೇ ಆಡಿಗೆ. ಊರಿಲ್ಲಿ ನೆರೆಕರೆಂಗೆ ಹೋದ ಹಾಂಗೆ . ಆದರೆ ದೂರ ಮಾಂತ್ರ ಮಗನ ಮನೆಂದ ಒಂದೂವರೆ ಗಂಟೆ ದಾರಿ. ಮೇಜಿ ಮೇಲೆ ಸಾರು ಸಾಂಬಾರು, ಮೇಲಾರ.ತಂಬುಳಿ,ಚಟ್ಣಿ. ಮಾವಿನ ಹಣ್ಣಿನ ರಸಾಯನ, ಹಸರು ಪಾಯಸ,ಚಪಾತಿ, ಎರಡು ಬಗೆ ಪಲ್ಯ,ಅನ್ನ, ಮೊಸರು ಹೀಂಗೆಲ್ಲ ಮಡಗಿತ್ತಿದ್ದವು. ಅಂತೂ ಊಟ ಗಡದ್ದಾಗಿತ್ತು. ಸ್ವೀಟ್ ಸೆವೆನ್ ಕಪ್ ಕೂಡಾ ಇತ್ತು. ಬೇಕಾದ್ದರ ಅವವು ಪೇಪರ್ ತಟ್ಟೆಗೆ ಹಾಯ್ಕೊಂಡು ಆಚಿಕೆ ಮೇಜಿನ ಹತ್ತರೆ ಕೂದು ತಿಂದೊಂಬದು.ಎನಗೆ ಶನಿವಾರ ಒಂದೇ ಹೊತ್ತು ಊಟ . ಅದಕ್ಕೆ ಎರಡು ಚಪಾತಿ ತೆಕ್ಕೊಂಡು ಒಂದು ಕಪ್ಪಿಲ್ಲಿ ರಸಾಯನವೂ ಹಾಯ್ಕೊಂಡು ತಿಂಬಲೆ ಶುರು ಮಾಡಿದೆ. ಸಾರು ಕಪ್ಪಿಲ್ಲಿ ತಂದು ಕುಡುದೆ.ಪಾಯಸವನ್ನೂ ತಿಂದೆ. ಎನ್ನ ಊಟ ಅಷ್ಟಕ್ಕೆ ಆತು. ಎಲ್ಲೋರೂ ಮತಾಡ್ಯೊಂಡು ಒಂದರ್ಧ ಗಂಟೆಲ್ಲಿ  ಊಟ ಕಳಾತು. ಎಲ್ಲೋರದ್ದೂ ಊಟ ಮುಗುದ ಮೇಲೆ ಇನ್ನೊಂದು ಹಾಲಿಲ್ಲಿ ಉದ್ದದ ಮೇಜಿತ್ತು ಅದರಲ್ಲಿ ಎರಡು ಕೇಕ್ ತಂದು ಮಡಗಿದವು. ಮಗಲ ಹತ್ತರೆ ಕೇಕ್ ಕಟ್ ಮಾಡುಲೆ ಹೇಳಿದವು. ಅಲ್ಲಿದ್ದ ಮಕ್ಕೊ ಎಲ್ಲ ಒಂದು ಕಾಗದ ಟೊಪ್ಪಿ ಮಡಿಕ್ಕೊಂಡಿಪ್ಪಗ ಫೋಟೋ ತೆಗೆದವು. ಹೇಪ್ಪಿ ಬರ್ತ್ ಡೇ ಹೇಳಿದವು. ಮತ್ತೆ ಕೇಕಿನ ತುಂಡು ತುಂಡು ಮಾಡಿ ಎಲ್ಲೋರೂ ತಿಂದೆಯೋ. ಇಷ್ಟೆಲ್ಲ ಆಗಿ ಮುಗಿವಗ ಒಂಬತ್ತೂವರೆ ಗಂಟೆ. ಮತ್ತೆ ಬಂದೋರಿಂಗೆಲ್ಲ ವಿದಾಯ ಹೇಳಿಕ್ಕಿ ಮನೆಂದ ಹೆರಡುವಗ ಗಂಟೆ ಹತ್ತು ಕಳುದ್ದು. ಒಂದು ಗಂತೆಲ್ಲಿ ಮನಗೆ ಎತ್ತಿದೆಯೋ.ರಾತ್ರಿಯಾದರೂ ವಾಹನಂಗೊ ಸಾರಿಗಟ್ಟಿ ಹೋಯ್ಕೊಂಡಿದ್ದ ಕಾರಣ,ವಾಹನ ಓಡುಸುಲೆ ಕಷ್ಟ ಆದರೂ,ಮಗ ವೆಗವ ಹೊಂದಿಸಿಗೊಂಡು ಮನೆಗೆ ಎತ್ತುವಗ ಹನ್ನೊಂದೂವರೆ. ಇಲ್ಲಿಯಾಣವಕ್ಕೆ ರಾತ್ರಿ ಹಗಲಿನ ವ್ಯತ್ಯಾಸ ಗೊಂತಿಲ್ಲೆಯೊ ಏನೋ! ಮಾಎಗವೂ ಒಳ್ಳೆದಿಪ್ಪ ಕಾರಣ ನಿರ್ಭೀತಿಂದ ಹೆಮ್ಮಕ್ಕೊ ಆದರೂ ಒಂದೂರಿಂದ ಇನ್ನೊಂದು ಊರಿಂಗೆ ವಹನ ಓಡುಸ್ಯೊಂಡು ಹೋಪದು ನೋಡುವಗ ತುಂಬ ಕೊಶಿ ಅವುತ್ತು. ಭಯೋತ್ಪಾದನೆ, ಒಂದು ಸಮುದಾಯಕ್ಕೆ ಮಾಂತ್ರ ರಕ್ಷಣೆ ಕೊಡುವ ಸಂಪ್ರದಾಯ ಓಟಿನ ಆಟಂಗೊ ನಮ್ಮ ದೇಶಲ್ಲಿ ಮುಂದುವರಿತ್ತಾ ಇಪ್ಪದು ಕಾಂಬಗ ನಾಚಿಕೆ ಅವುತ್ತು. ಧಾರ್ಮಿಕತೆ ಒಂದಿಷ್ಟು ಇದ್ದರೂ ನೈತಿಕತೆ, ಭ್ರಷ್ಟಾಚಾರ ಬಿಟ್ಟಿಕ್ಕುಲೆ ಒಂದು ಸಮುದಾಯಕ್ಕೆ ಇನ್ನೂ ಇಷ್ಟ ಇಲ್ಲೆ ಹೇಳಿ ಕಾಣುತ್ತು. ರಾಮ ರಾಜ್ಯ ಹೇಳಿ ಕನಸು ಕಂಡಿದ್ದೋನೊಬ್ಬ ಸತ್ತು ಹೋಯಿದ. ಮತ್ತೆ ಆರೂ ಹುಟ್ಟಿದ್ದವಿಲ್ಲೆ. ಮುಂದೆ ಯಾವಗಲೋ ಹುಟ್ಟಿ ಬಂದು ದೇಶವ ಮುಕ್ತಗೊಳುಸಿದರೆ ಮತ್ತಾದರೂ ಒಳ್ಳೆದಕ್ಕೋ ಏನೋ? ಆದಿನ ಬೇಗ ಬರಲಿ ಹೇಳಿ ಕೇಳಿಗೊಳ್ಳುತ್ತೆ.

Thursday, July 12, 2012

ನಾಲಗೆ


                            ನಾಲಗೆ
                        ನಾರಾಯಣ ದೇವರ ಹಾಸಿಗೆಯಾಗಿಪ್ಪ ಶೇಷಂಗೆ ಸಾವಿರ ನಾಲಗೆಯಡ. ಕವಿಗೊ ಹೇಳುಗು ದೇವರ ಮಹಿಮೆಯ ಹೊಗಳುಲೆ ಆದಿಶೇಷಂಗೂ ಎಡಿಯ ಹೇಳಿ.ಒಂದು ನಾಲಗೆಲ್ಲಿ ಹೊಗಳಿದ್ದರ ಕೇಳುಲೆ ನಮ್ಮ ರಡು ಕಿವಿಯೇ ಸಾಕು. ಚಿತ್ರಂಗಳಲ್ಲಿಪ್ಪಂತೆ ದೇವರಿಂಗೆ ಎರಡೇ ಕೆಮಿ ಇಪ್ಪದು. ಹಾಂಗಾದರೆ ಸಾವಿರ ನಾಲಗೆಲ್ಲಿ ಹೊಗಳಿದ್ದರ ಅವ ಹೇಂಗೆ ಕೇಳಿಗೊಳ್ಳುತ್ತನೋ! ಮತ್ತೆ ನಮಗೆ ಈ ಒಂದು ನಾಲಗೆಯೇ ಕೆಲವೊಂದರಿ ತುಂಬ ಕಷ್ಟ ಆಗಿ ಹೋವುತ್ತು. ಇಪ್ಪದು ಬಾಯಿಯೊಳದಿಕ್ಕಾದರೂ ಅದರ ಕಾರುಭಾರು ಭಯಂಕರ.ಸುತ್ತಲೂ ಇಪ್ಪ ಹಲ್ಲುಗಳ ಬೇಲಿ ದಾಂಟಿಕ್ಕಿ ಅದು ಹೆರ ಬಾರದ್ದರೂ ಒಳಂದಲೇ ಅದರ ಕಾರುಭಾರು ಜಾಸ್ತಿ. ಹೇಳುತ್ತವಪ್ಪ ಅವಂಗೆ ಕೊರಳು ಸುತ್ತಲೂ ನಾಲಗೆ ಹೇಳಿ. ಆದರೆ ನಾಲಗೆ ಒಳದಿಕ್ಕೇ ಇಪ್ಪದಾದರೂ ಹೇಂಗೆ ಬೇಕಾದರೂ ತಿರುಗುತ್ತಲ್ಲದೋ? ನಾವು ತಿಂಬ ಆಹಾರ ಅಗಿವಗ ನಾಲಗೆ ಸಟ್ಟುಗಿನ ಹಾಂಗೆ ಮೊಗಚ್ಚಿ ಕೊಡದ್ದರೆ, ಹಲ್ಲಿಂಗೆ ಅಗಿವಲೆಡಿಯ. ಅಗುದು ಸಣ್ಣ ಆಯೆಕ್ಕಾರೆ ನಾಲಗೆ ತೊಳಸುತ್ತಾ ಇರೆಕ್ಕು. ಹಲ್ಲಿನೆಡೆಲ್ಲಿ ಸಿಕ್ಕಿದ್ದರನ್ನೂ ಹೆರ ಎಳದು ಹಾಕಿ ನುಂಗುಲೆಡಿತ್ತು. ಅಂಬಗ ಆಹಾರ ಜೀರ್ಣಕ್ರಿಯೆಯ ಮೊದಲ ಕಾರಸ್ಥಾನ ಹಲ್ಲಾದರೂ ನಾಲಗೆಯ ಉಪಯೋಗ ದೊಡ್ಡದು.ರುಚಿ ನೊಡೆಕ್ಕಾರೂ ನಾಲಗೆಯೇ ಆಯೆಕ್ಕು. ಮೂಗಿಂಗೆ ವಾಸನೆ ಬಡಿದರೆ ಮತ್ತೆ ತಿನ್ನೆಕ್ಕೋ ಬೇಡದೋ ಹೇಳುವದು ನಾಲಗೆ. ಕೊಡಿನಾಲಗೆಲ್ಲಿ ಉಪ್ಪು ಹಿಡುದ್ದೋ ಇಲ್ಲೆಯೋ ಹೇಳಿ ರುಚಿ ನೋಡಿದ ಮೇಲೆಯೇ ಪಾಕ ಸರಿಮಾಡುವದು. ಷಡ್ರಸಂಗಳ ಬೇರೆ ಬೇರೆ ಗುರ್ತು ಹಿಡಿವದು ನಾಲಗೆ. ರುಚಿಯಾಗಿದ್ದು ಹೇಳಿ ಆದರೆ ಮತ್ತೆ ತಿಂದುಗೊಂಬದು  ಹೇಳಿ ಮನಸ್ಸಿಂಗಾಗಿ ತಿಂಬಲೆ ಶುರು. ನಾಲಗೆಯ ಚಪಲ ಹೆಚ್ಚಾದರೆ ಕೆಲವು ಜನಕ್ಕೆ ಉಪ್ಪು ಸಾಕಾವುತ್ತಿಲ್ಲೆ. ಖಾರ ಸರಿಯಿರುತ್ತಿಲ್ಲೆ. ಕೊದಿಲಿಂಗೂ ಸೀವು ಹಾಯೆಕ್ಕಾವುತ್ತು. ಒಟ್ಟಾರೆ ಮತ್ತೆ ಹೊಟ್ಟೆ ತುಂಬ್ಯೊಂಡು ಬಪ್ಪಗ ಮೆಚ್ಚದ್ದ ಅಶನಲ್ಲಿ, ಮೊಸರಿಲ್ಲೂ ಕಲ್ಲಿರುತ್ತಡೊ.
                        ಕೆಲವು ಜನಕ್ಕೆ ನಾಲಗೆಯ ತೀಟೆ ತೀರುಸುಲೆ ಬೈಗಳು ತಿನ್ನೆಕ್ಕಾಗಿ ಬಂದರೂ ಬೇಜಾರಾವುತ್ತಿಲ್ಲೆ. ಬೇಕು ಹೇಳಿ ಮನಸ್ಸಿಂಗೆ ಕಂಡರೆ ಬೇರೆಯೋರಿಂಗೆ ಕಾಣದ್ದೆ ಆದರೂ ತಿಂದು ಹೋವುತ್ತು. ಆಸೆ ಹುಟ್ತಿದರೆ ಕೊದಿ ತಡಕ್ಕೊಂಬಲಎಡಿತ್ತಿಲ್ಲೆ. ಮಕ್ಕೊ ಅದರೆ ಅರಡಿತ್ತಿಲ್ಲೆ. ದೊಡ್ಡೋರಾದರೂ ತಿನ್ನೆಕ್ಕು ಹೇಳಿ ತೋರಿದರೆ ಕೇಳಿ ಆದರೂ ತಿಂತವು. ಎಲೆ ತಿಂಬೋರು ಹೇಳುವದು ಕೇಳಿದ್ದೆ. ಹೊಗೆಸೊಪ್ಪಿನ ರುಚಿ ಹಿಡುದರೆ ಸಾಮಾನ್ಯ ಹೊಗೆಸೊಪ್ಪು ಅವಕ್ಕೆ ಕಣ್ಣಿಂಗೇ ಕಾಣುತ್ತಿಲ್ಲೆಡೊ. ಕುಣಿಯ ಇದ್ದೋ ಹೇಳಿ ಕೇಳುತ್ತವಡೊ. ಅಲ್ಲಿ ನಾಲಗೆಂದ ಹೆಚ್ಚು ಹಲ್ಲಿಂಗೆ ದೂರು ಬೀಳುತ್ತು. ಅವರವರ ಮನಸ್ಸಿಂಗೆ ಹೀಂಗೆಲ್ಲ ತೋರುವದರ ನಾಲಗೆಯ ಮೇಲಂಗೋ ಹಲ್ಲಿನ ಮೇಲಂಗೊ ದೂರು ಹಾಕುವದು. ಚಾ ಕುಡಿಯದ್ದರೆ ಮನಸ್ಸಿಂಗೆ ಉತ್ಸಾಹವೇ ಬತ್ತಿಲ್ಲೆ ಹೇಳುತ್ತವು. ಕಾಫಿ ಚಾ ಕುಡುದರೆ ಒರಕ್ಕು ಬತ್ತಿಲ್ಲೆ ಹೇಳುತ್ತವು. ಒರಕ್ಕಿಂಗೂ ಚಾ,ಕಾಫಿಗೂ ಎಂತ ಸಂಬಂಧವೊಗೊಂತಿಲ್ಲೆ. ಅಂತೂ ನಾಲಗೆ ರುಚಿ ಹಿಡುದರೆ ಜೊಲ್ಲು ಸುರಿಸುತ್ತ ಇರುತ್ತು. ಒಂದರಿ ಕೊದಿ ಬಿರಿವನ್ನಾರ ತಿಂದರೆ ಮತ್ತೆ ಶುದ್ದಿ ಇಲ್ಲೆ. ನಾಲಗೆ ಮನುಷ್ಯಂಗೆ ತಿಂಬಲೆ ಮಾಂತ್ರ ಅಲ್ಲ. ಯಾವುದೇ ಭಾಷೆಲ್ಲಿ ಮಾತಾಡೆಕ್ಕಾರೆ ನಾಲಗೆಯ ಸಹಾಯ ಬೇಕೇ ಬೇಕು. ಮನುಷ್ಯ ಜೀವಾಳ ಆಗಿಪ್ಪ ಭಾಷೆ ವ್ಯಕ್ತವಾಯೆಕ್ಕಾರೆ ನಾಲಗೆ ಬೇಕಾದ ಹಾಂಗೆ ಹಂದೆಕ್ಕು. ಹೇಳುವ ಕ್ರಮ ಇದ್ದಲ್ಲದೋ? ಎಂತ ನಿನ್ನ ನಾಲಗೆ ಸುಮ್ಮನೆ ಕೂಯಿದು. ಈಗ ಉಸಿರೆಕ್ಕದ್ದೆ ಬಾಯಿ ಹೇಳುವ ಪೆಟ್ಟಿಗೆಯೊಳ ಭದ್ರವಾಗಿ ಸುಮ್ಮನೆ ಕೂಯಿದಲ್ಲದೋ? ಸುತ್ತಲುದೆ ಹಲ್ಲುಗಳ ಬೇಲಿ ಹಾಕಿದಕಾರಣ ಆವುತ್ತು. ನಾಲಗೆ ಜೋರು ಹಂದುಲೆ ಶುರು ಮಾಡಿದರೆ ಹತೋಟಿ ತಪ್ಪಿ, ಮತ್ತೆ ಹಲ್ಲುಗೊಕ್ಕೆ ಶಿಕ್ಷೆ. ಹತೋಟಿ ತಪ್ಪುವದು ನಾಲಗ್ಗೆ ಅಲ್ಲ. ಮನಸ್ಸಿಂಗೆ. ಮನಸ್ಸು ಆಶೆ ಪಡುವದು ಇದ್ದದೇ. ಆದರೆ ಅದರ ಪೂರ್ವಾಪರ ತಿಳುದು, ಹೇಂಗೆ ಅಪೇಕ್ಷೆ ಸರಿಯೋ? ಮುಂದರಿಯೆಕ್ಕೋ ಬೇಡದೋ ಹೇಳುವದರ ರಜ ಯೋಚನೆ ಮಾಡಿದರೆ, ಹತೋಟಿ ಕಳಕ್ಕೊಳ್ಳೆಕ್ಕಾವುತ್ತಿಲ್ಲೆ. ಮಕ್ಕಳ ಹಾಂಗೆ "ಕಂಡದ್ದೆಲ್ಲ ಬೇಕು ಕುಂಡಿಬಟ್ಟಂಗೆ" ಹೇಳಿ ವಿಚರ ವಿಮರ್ಶೆ ಮಾಡದ್ದೆ ದುಡುಕಿದರೆ ಮತ್ತೆ ಹಲ್ಲೂ ಹೋಕು; ತಲೆಯೂ  ಕೆಟ್ಟು ಹೋಕು.
ಹಿಂದಾಣೋರು ಹೇಳಿದ ಮಲಯಾಳದ ಗಾದೆ "ಚಿಂತಿಚ್ಚಾಲ್ ದುಃಖಿಕ್ಕೇಂಡ". ಮದಲೇ ಯೋಚನೆ ಮಾಡದ್ದೆ ಬಾವಿಯ ಆಳ ಎಷ್ಟಿದ್ದು, ಮೀಸುಲೆ ಎಡಿಗೊ ಎಲ್ಲ ವಿಚಾರ ಮಾಡಿಯೇ ಬಾವಿಗೆ ಹಾರೆಕ್ಕಡೊ. ಭಾಷೆ ಮಾತಾಡುವಗ ಅಕ್ಷರ ಉಚ್ಚಾರ ಸರಿ ಮಾಡ್ಯೊಳ್ಳೆಕ್ಕಲ್ಲದೋ? ಸ್ವರ ಉಚ್ಚಾರಣೆಗೆ ನಾಲಗೆಯ ಉಪಯೋಗೆ ಹೆಚ್ಚಿಲ್ಲೆ ಹೇಳಿ ಆದರೂ ವ್ಯಂಜನಾಕ್ಷರಂಗೊಕ್ಕೆ ನಾಲಗೆಯ ಅಗತ್ಯ ತುಂಬ ಇದ್ದು. ಎಲ್ಲಕ್ಕೂ ದೊಂಡೆ ಗುಳಿಲ್ಲಿ ಇಪ್ಪ  ಕುಂಞಿನಾಲಗೆ ಸ್ವರ ಪೆಟ್ಟಿಗೆಯಡೊ.ನಾಭಿಂದ ಹೆರಟ ಸ್ವರ ದೊಂಡೆಗುಳಿಂದ ಹೆರಡುವಗ ಹೆರಂಗೆ ಅಸ್ವರ ಕೇಳುವದಡೊ. ಸ್ವರಾಕ್ಷರ ಉಚ್ಚರಿಸುವಗ ನಾಲಗೆ ಉದ್ದಕ್ಕೆ ಮನಿಕ್ಕೊಂಡಿರುತ್ತು. ವ್ಯಂಜನಾಕ್ಷರ ಉಚ್ಚರಿಸೆಕ್ಕಾರೆ ನಾಲಗೆ ಸರಿಯಾಗಿ ಉಪಯೋಗ ಆವುತ್ತು. ಕವರ್ಗ ಉಚ್ಚರಿಸುವಗ ನಾಲಗೆ ಮನಿಕ್ಕೊಂಡು ಹಲ್ಲಿನ ಒತ್ತಿ ಹಿಡುಕ್ಕೊಂಡರೆ, ಚವರ್ಗ ಉಚ್ಚರಿಸುವಗ ನಾಲಗೆ ಮೂರ್ಧನ್ಯ, ಹೇಳಿರೆ  ಬಾಯಿಯ ಮೇಲ್ಭಾಗ ಒತ್ತಿ ಹಿಡುಕ್ಕೊಳ್ಳೆಕ್ಕು. ಟವರ್ಗ ಉಚ್ಚರಿಸುವಗ ನಾಲಗೆ ಕೊಡಿ ಮಾಂತ್ರ ಮೇಲಂಗೆ ಒತ್ತಿ ಹಿಡುಕೊಳ್ಳೆಕ್ಕು. ತವರ್ಗ ದಂತ್ಯ ನಾಲಗೆ ಕೊಡಿ ಹಲ್ಲುಗಳ ಒತ್ತಿಗೊಳ್ಳೆಕ್ಕು. ಆದರೆ ಪವರ್ಗಕ್ಕೆ ನಾಲಗೆಯ ಹೆಚ್ಚಿನ ಉಪಯೋಗಗ ಬತ್ತಿಲ್ಲೆ. ಅಪ್ಪ,ಅಮ್ಮ ಹೇಳುವ ಪದಂಗಳ ತೊದಲ್ನುಡಿವಲೂ ಎಡಿಗಾವುತ್ತು. ಇನ್ನು ಅವರ್ಗೀಯ ವ್ಯಂಜನಂಗೊ. ಯ, ಚ ಇದ್ದ ಹಾಂಗೆ; ರ- ಟಕ್ಕೆ ಹತ್ತರೆ,ಲ, ಹಲ್ಲುಗಳ ಬುಡಕ್ಕೆ,ಳ ನಾಲಗೆ ಕೊಡಿ ಮೇಲಂಗೆ; ವ ತುಟಿ ಮಾಂತ್ರ ಸಾಕು. ಸ ದಂತ್ಯ. ಶ-ನಾಲಗೆ  ಮೇಲಂಗೆ ಒತ್ತಿ ಹಿಡುದು ಗಾಳಿ ಹೆರಡುಸುವದು; ಇನ್ನು ಪಟ್ಟೆ 'ಷ' ನಾಲಗೆ ಮಡುಸಿ ಗಾಳಿ ಹೆರಡುಸುವದು. ಹ ಉಚ್ಚರುಸುವಗಅಂತೆ ದೊಂಡೆಯೊಳದಿಕ್ಕಂದ ಶಕ್ತಿ ಹಾಕಿ ಗಾಳಿ ಹರಡುಸುವದು ಹೀಂಗೆ ಅಕ್ಷರಂಗಳ ಉಚ್ಚರಿಸುವಲ್ಲಿ  ನಾಲಗೆಯ ಉಪಯೋಗವೇ ಬೇಕು. ನಾಲಗೆ ತೆರ್ಚುವದು ಹೇಳುತ್ತವು . ಸರಿಯಾದ ಸ್ಥಿತಿಲ್ಲಿ ನಾಲಗೆಯ ಮಡಿಕ್ಕೊಂಡು ಉಚ್ಚರುಸುವಗ ಸ್ಥಾನ ಸರಿಯಾಗದ್ದೆ ಉಚ್ಚಾರ ಸರಿಯಗದ್ದೆ ಹೋವುತ್ತು. ಉಚ್ಚರ ಸರಿ ಮಾಡೆಕ್ಕಾರೆ ಬೇರೆಯೋರು ಉಚ್ಚರುಸುವಗ ಅವರ ಮುಖ ಭಾವ ನಲಗೆಯ ಸ್ಥಿತಿಯ ಬದಲುಸುವದರ ನೋಡ್ಯೊಂಡು ಉಚ್ಚರಿಸಿದರೆ ಕ್ರಮೇಣ ಸರಿಯಾವುತ್ತು. ಎಲ್ಲದಕ್ಕು ಶ್ರದ್ಧೆ ಮುಖ್ಯ. ಕಲಿಯೆಕ್ಕು ಹೇಳಿ ಇದ್ದೋನಿಂಗೆ ಮನಸ್ಸು ಶ್ರದ್ಧೆ ತಾನಾಗಿಯೇ ಬತ್ತು.
                ಸಂಗೀತ ಕಲಿವೊರಿಂಗೆ  ನಾಲಗೆಯ ಉಪಯೋಗೆ ಸರಿಯಾಗಿ ಗೊಂತಾವುತ್ತು. ಸಪ್ತ ಸ್ವರಂಗಳ ಉಚ್ಚರುಸುವಗ ನಾಲಗೆ ಬೇಕಾದ ಹಾಂಗೆ ಸ್ಥಿತಿ ಬದಲಾವಣೆ ಮಾಡ್ಯೊಂಡರೆ ಸ್ವರ ಸರಿಯಾಗಿ ಬತ್ತು. ಆಲಾಪನೆಲ್ಲಿ,ಏರು ಇಳಿತಂಗಳಲ್ಲಿಯೂ ನಾಲಗೆ ಬೇಕಾದ ಹಾಂಗೆ ಉಪಯೋಗಿಸಿದರೆ ಕೇಳುವೋರಿಂಗೆ ಕರ್ಣ ರಸಾಯನ ಅವುತ್ತು. ಪ್ರಸಿದ್ಧ ಸಂಗೀತ ವಿದ್ವಾಂಸರುಗೊ,ಅವರ ಹಾಡುಗಾರಿಕೆಯೊಟ್ಟಿಂಗೆ ಸ್ವರ ವಿನ್ಯಾಸಂಗಳಿಂದ ಹಾಡಿನ ಮೋಡಿಂದ ಲೋಕ ವಿಖ್ಯಾತರಾವುತ್ತವು. ಎಲ್ಲ ನಲಗೆಯ ಮಹಿಮೆ! ನಾಟಕ ಸಿನೇಮ ನಟರೂ ಅವರ ಅಭಿನಯದೊಟ್ಟಿಂಗೆ ನಾಲಗೆಯ ಚಮತ್ಕಾರಂದ,ಜನ ಮೆಚ್ಚುಗೆ ಪಡಕ್ಕೊಳ್ಳುತ್ತವು. ರಸಿಕರಿಂಗೆ ರಸದೂಟ ಉಣುಸೆಕ್ಕಾರೆ, ಮಾತಿನ ಮೋಡಿ ವರಸೆ, ಸ್ಪಷ್ಟವಾಗಿ ರೂಪುಸೆಕ್ಕಾರೆ ನಾಲಗೆಯ ಪಾತ್ರ ದೊಡ್ಡದು. ಸ್ತಿಮಿತ ಕಳಕ್ಕೊಂಬೋರಿಂಗೆ ಅಭಿನಯ ಕಷ್ಟ ಆಗದೋ? ನಾಲಗೆಯ ಚಮತ್ಕಾರಿಗೊ ತಾಳಂಗಳನ್ನೂ ಬಾಯಿಲ್ಲೇ ನುಡಿಸುತ್ತವಡೊ.ಮಾತಾಡುವಗಲೂತೂಕದ ಮಾತಾಡುವೋರು ನಾಲಗೆಯ ಹಿಡಿತಲ್ಲಿ ಮಡಿಕ್ಕೊಳ್ಳುತ್ತವು. ಮಾತಿನ ವರಸೆ, ವ್ಯತ್ಯಾಸ ಅಪ್ಪದು, ನಾಲಗೆಲ್ಲಿ ಮಾತಾಡುವ ರೀತಿಲ್ಲೇ ಇದ್ದು. ಹೇಳುವ ವಿಷಯ ಸಮಾಧಾನಲ್ಲಿ ಹೇಳಿದರೆ ಆರುದೇ ಕೇಳುತ್ತವು. ಗಡಿಬಿಡಿಲ್ಲಿ ಹೇಳುವಗ ಒಂದು ಹೋಗಿ ಹೇಳಿದ್ದು ಮತ್ತೊಂದಕ್ಕು. ಬೇರೆಯೋರೊಟ್ಟಿಂಗೆ ಮಾತಾಡುವಗಳೂ ಅವರ ಇಷ್ಟಾನಿಷ್ಟಂಗಳ ತಿಳಿದು ಮಾತಾಡದ್ದರೆ ನಮ್ಮ ಗ್ರಹಿಕೆ ತಪ್ಪಾಗಿ ಹೋಕು.ಮುತ್ತು ಉದುರಿದ್ದರ ಹೆರ್ಕಿಗೊಂಬಲಕ್ಕಡೊ; ಆದರೆ ಆಡಿದ ಮಾತಿನ ಮತ್ತೆ ಹಿಂದೆ ತೆಕ್ಕೊಂಬದು ಮರ್ಯಾದೆ ಅಲ್ಲ. ಅದಲ್ಲ ಇಲ್ಲಿ ಹೇಳಿದ್ದು ನಾಲಗೆ ಅದರ ಕೆಲಸ ಮಾಡಿದರೆ ಕಷ್ಟ ಅಪ್ಪದು ಒಳುದೋವಕ್ಕೆ. ಪೆಟ್ಟು ತಿಂಬದು; ಮಾತಿನ ಪೆಟ್ಟಾದರೂ ನಾವೇ ಅಲ್ಲದೋ? ಕೆಲವೊಂದರಿ ಮೌನಂ ಪಂಡಿತ ಲಕ್ಷಣ ಹೇಳಿ ಸುಮ್ಮನೆ ಇರೆಕ್ಕಾವುತ್ತು. ನಮಗೆ ಗೊಂತಿಲ್ಲೆ ಹೇಳಿ ಆದರೆ ಬೇಜಾರು ಇಲ್ಲೆ. ಎನಗೊಬ್ಬ ಮೇಧಾವಿ ಹೇಳಿತ್ತಿದ್ದ. ನಾವು ತರಗತಿಲ್ಲಿ ಒಂದು ವಿಷಯ ಮಕ್ಕೊಗೆ ಹೇಳೆಕ್ಕಾರೆ ಅದರ ಕುರಿತಾದ ಆಮೂಲಾಗ್ರವಾಗಿ ಹೇಳುಲೆ ಗೊಂತಿದ್ದರೆ ಮಾಂತ್ರ ಹೇಳೆಕ್ಕು;ಗೊಂತಿಲ್ಲದ್ದೆ ಹೇಳಿ ಸಿಕ್ಕಿ ಬೀಳುವದರ ಬದಲು ಅದು ಎನಗೆ ಸರಿಯಾಗಿ ಗೊಂತಿಲ್ಲೆ; ನಾಳಂಗೆ ಬೇರೆ ಪುಸ್ತಕ ನೋಡಿ ಹೇಳುತ್ತೆ ಹೇಳಿದರೆ ನಾಚಿಕೆಯಿಲ್ಲೆ. ತಪ್ಪು ಹೇಳಿಕೊಡೊವದಕ್ಕಿಂತ ಗೊಂತಿಲ್ಲೆ ಹೇಳುವದೇ ಒಳ್ಳೆದು ಹೇಳಿತ್ತಿದ್ದ. ನಾವು ಅವಕ್ಕೆ ಹೇಳುವದು ಅವು ಬೇರೆಯವಕ್ಕೆ ಹೇಳುವದು ಹೀಂಗೆ ಶುದ್ದಿ ಹರಡಿ ನಮಗೆ ಊರೆಲ್ಲ ಬೆಲೆಕಟ್ಟುವದು ಸರಿ ಆವುತ್ತೋ ಹೇಳಿತ್ತಿದ್ದ. ನಮ್ಮ ನಾಲಗೆ ಒಳ್ಳೆದಿದ್ದರೆ ನಾವು ಎಲ್ಲಿಯೂ ಬದುಕ್ಕುಲೆಡಿಗಲ್ಲದೋ? ಎಲುಬಿಲ್ಲದ್ದ ನಾಲಗೆ ಹೇಳಿದ್ದೆಲ್ಲ ಸತ್ಯವೇ ಆಗಿರೆಕ್ಕು. ಗಾಂಧೀಜಿ ಆಶ್ರಮಲ್ಲಿದ್ದ ಮೂರು ಮಂಗಂಗಳ ಶುದ್ದಿ ಹೇಳಿದರೆ ಹೆಚ್ಚಾಗ ಹೇಳಿ ಕಾಣುತ್ತು. ಒಂದು ಮಂಗ "ಆನು ಕೆಟ್ಟದರ ಹೇಳುತ್ತಿಲ್ಲೆ ಹೇಳಿ ಬಾಯಿ ಮುಚ್ಚಿಗೊಂಡಿದಡ; ಇನ್ನೊಂದು ಕೆಟ್ಟದರ ಕೇಳುತ್ತಿಲ್ಲೆ ಹೇಳಿ ಕೆಮಿ ಮುಚ್ಚಿಗೊಂಡಿದಡ; ಮೂರನೇದು ಕೆಟ್ಟದರ ಎನ್ನ ಕಣ್ಣಿಂದ ನೋಡುತ್ತಿಲ್ಲೆ ಹೇಳಿ ಕಣ್ಣುಗಳಮುಚ್ಚಿಗೊಂಡಿದಡ.ನಾವು ಮನುಷ್ಯರಾದ ಕಾರಣ ಮುಚ್ಚಿಗೊಂಡೇ ಇರೆಕ್ಕು ಹೇಳಿ ಇಲ್ಲೆ ನೋಡದ್ದೆ, ಕೇಳದ್ದೆ, ಮಾತಾಡದ್ದೆ ಇದ್ದರೆ ,ನಮ್ಮ ಹಾಂಗೆ ಬೇರೆಯೋರುದೆ ಇದ್ದರೆ ಲೋಕ ಒಳ್ಳೆದಕ್ಕು.   
    ಇನ್ನು "ಈಗ ನಿನ್ನ ನಾಲಗೆ ಬಿದ್ದತ್ತೋ? ಏಕೆ ಮಾತಾಡುತ್ತಿಲ್ಲೆ"ಹೇಳಿ ಕೇಳುವದಿದ್ದು. ಅರ್ಥವೇ ಮಾತು ಬಿದ್ದು ಹೋಪದು ಹೇಳಿರೆ, ಮಾತು ಬಿದ್ದು ಹೋಪದು ಒಂದೋ ಸೌಖ್ಯ ಇಲ್ಲದ್ದರೆ. ಅಲ್ಲದ್ದರೆ ಜೀವ ಹೋಪಗ. ಹೇಳುತ್ತವಿಲ್ಲೆಯೋ ಒಂದರಿ ಮಾತು ಕೊಟ್ಟ ಮೇಲೆ ತಪ್ಪುವ ಮಗ ಆನಲ್ಲ" ಹೇಳುತ್ತವು. ಒಂದರಿ ಒಪ್ಪಿಕ್ಕಿಮಾತಿಂಗೆ ತಪ್ಪಿರೆ ಎಂತ, ನಿನ್ನೆ ಮತ್ತೆಂತೆಗೆ ನಾಲಗೆ ಮಾರಿದ್ದು? ಕೇಳುತ್ತವು.ಸತ್ತ ಮೇಲೆಯೂ ನಾಲಗೆ ಅಡಿಂಗೆ ಚೂರು ಸ್ವರ್ಣ ಹಾಕೆಕ್ಕ ಡೊ. ಸಸ್ರ್ಪ ಜಾತಿಗೆ ಎರಡು ನಾಲಗೆಯಡೊ.ಒಂದರಿ ಒಂದು ಹೇಳಿ ಮತ್ತೆ ತಪ್ಪಿದರೆ ಹೇಳುವದ್ದು ಎಂತ ನಿನಗೆ ಎರಡು ನಾಲಗೆಯೋ ಹೇಳಿ ಕೇಳುತ್ತವು.ಎಲ್ಲವೂ ಕೊಟ್ಟ ಮಾತಿಂಗೆ, ಸಂಬಂಧಿಸಿದ ಅಭಿಪ್ರಾಯ. ಕೆಲವು ಜನ ಮಾತಾಡ್ಯೊಂಡೇ ಇದ್ದರೆ ಎಂತ ನಿನ್ನ ನಾಲಗೆ ಸುಮ್ಮನೆ ಕೂರುತ್ತಿಲ್ಲೆಯೋ? ಹೇಳಿ ಕೇಳುತ್ತವು. ನಾಲಗೆ ಮನಸ್ಸಿಂಗೆ ತೋರಿದ್ದರ ಹೇಳಿರೆ ಸೋಲುವದು ನಾವು. ಅದು ಬಾಯಿಯೊಳದಿಕ್ಕೆ ಹಲ್ಲುಗಳ ಬೇಲಿ ಇಪ್ಪ ಕಾರಣ ಅದಕ್ಕೆ ತೊಂದರೆ ಇಲ್ಲೆ. ಸೋಲುವದು ಹಲ್ಲುಗಳೇ. ದೌಡೆಗೆ ಬಿದ್ದರೆ ಹಲ್ಲು ಉದುರಿ ಹೋಕು ಹೇಳುತ್ತವಿಲ್ಲೆಯೋ?. ನಮ್ಮ ನಾಲಗೆಯ ಬೇಕಾದಷ್ಟೆ ಉಪಯೋಗುಸಿ,ಬಾಯಿಯ ಮೂಲೆಲ್ಲಿ ಸುಮ್ಮನೆ ಇಪ್ಪ ಹಾಂಗೆ ಮಾಡುವದೇ ಕ್ಷೇಮ. ಆದರೆ ದೇವರ ಧ್ಯಾನಿಸುವಗ,ಜಪ ಮಾಡುಲೆ ಮಾಂತ್ರ ನಾಲಗೆ ಉಪಯೋಗೆ ಇದ್ದು. ಮಂತ್ರ ಹೇಳುವಗ ಭಜನೆ ಮಾಡುವಗ, ರಾಮ ಜಪವೋ ಅಥವ ಬೇರೆ ದೇವರ ಜಪ ಮಾಡುವಗ ಭಕ್ತಿಂದ ಜಪ ಮಾಡಿರೆ ನಾಲಗೆಯ ಉಪಯೋಗ ಸರಿಯಾಗಿ ಆದ ಹಾಂಗೆ!ಯಮ ದೂತರು ಬಂದು ಎಳಕ್ಕೊಂಡು ಹೋವುತ್ತವು ಹೇಳಿ ಅಪ್ಪಗ ಒಂದರಿ ಮಗನ ದಿನಿಗೇಳಿದ್ದಡೊ. ನಾರಾಯಣಾ ಶಬ್ದ ಕೇಳಿದ ಕೂಡಲೇ ವಿಷ್ಣು ದೂತರು ಬಂದು ವೈಕುಂಠಕ್ಕೆ ಕೊಂಡು ಹೋದವಡೊ. ನಾವು ಅದಕ್ಕೆ ಮದಲೇ ರಾಮ ಜಪ ಮಾಡ್ಯೊಂಡು ಇಪ್ಪೊ 
                   

ತಲೆ


                                ತಲೆ
                    ತಲೆ ಇದ್ದೋರಿಂಗೆ ತಲೆಯ ಬಗ್ಗೆ ಹೆಚ್ಚು ಹೇಳೆಕ್ಕದ ಅಗತ್ಯ ಇಲ್ಲದ್ದರೂ ಎನ್ನ ತಲೆಗೆ ಹೊಳದ್ದರ ನಿಂಗಳ ತಲೆಗೂ ಕೊಡೆಕ್ಕು ಹೇಳಿ ಕಂಡತ್ತು. ರಾವಣಂಗೆ ಹತ್ತು ತಲೆಯಿತ್ತಡೊ.ಹತ್ತು ತಲೆಗಳನ್ನೂ ತೆಗೆಯೆಕ್ಕಾರೆ ಶ್ರೀರಾಮಂಗೆ ತುಂಬ ಕಷ್ಟ ಅಯಿದಡೊ.ಬ್ರಹ್ಮಂಗೆ ಐದು ತಲೆ ಇದ್ದದರ ಶಿವ ಒಂದು ತಲೆ ಚೂಂಟಿ ಚತುರ್ಮುಖ ಮಾಡಿದ್ದು ಗೊಂತಿದ್ದನ್ನೆ. ಅದರೆ ಬ್ರಹ್ಮ ಕಪಾಲ ಶಿವನ ನೆತ್ತರು ಹೀರುಲೆ ಶುರುಮಾಡಿ, ಉಪಾಯ ಇಲ್ಲದ್ದೆ ಸೀದಾ ನಾರಾಯಣ ದೇವರಲ್ಲಿಗೆ ಹೋದ್ದು, ಶಿವನ ಕೈಂದ ಎನ್ನ ಕೈಗೆ ಬ ಹೇಳಿ ಸೋಲುಸಿದ್ದು, ಮತ್ತೆ ಬ್ರಹ್ಮ ಕಪಾಲದ ರಕ್ತದಾಹ ತೀರುಸುಲೆ, ಮುಂದೆ ಮಹಾಭಾರತ ಯುದ್ಧಲ್ಲಿ ನಿನಗೆ ಬೇಕಾದಷ್ಟು ನೆತ್ತರು ಕೊಡ್ತೆ ಹೇಳಿದ್ದು, ಮಾತು ನಡೆಶುಲೆ ಯುದ್ಧವೇ ಅಪ್ಪ ಹಾಂಗೆ ಮಾಡಿದ್ದು, ಭೂಭಾರ ಕಳವಲೆ ಮಾದಿದ ಅವತಾರ ಎಲ್ಲ ಬ್ರಹ್ಮನ ತಲೆಗೂ ತೃಪ್ತಿ ಕೊಟ್ಟತ್ತು. ಮತ್ತೆ ಆ ತಲೆಯ ಅರ ಕೈಂದ ಅಪ್ಪ ಭೀಮ ಕೈಂದಲೇ ಬಡುದು ನಾಶ ಮಾಡಿದ್ದು ಎಲ್ಲ ಪುರಾಣ ಕತೆ. ದತ್ತಾತ್ರೇಯಂಗೂ ಮೂರು ತಲೆಯಡೊ. ಮೂರು ಮೂರ್ತಿಗಳ ಅವತಾರ ಅಲ್ಲದೋ? ಮತ್ತೆ ರಾಮಾಯಣಲ್ಲಿ ಶ್ರೀರಾಮ ಪಂಚವಟಿಲ್ಲಿಪ್ಪಗ ಮೂರು ತಲೆಯ ದಾನವನನ್ನೂ ಕೊಂದಿದ್ದಡೋ. ನಮಗಿಪ್ಪ ಒಂದು ತಲೆಲ್ಲೇ ವಿವಿಧ ಆಲೋಚನಗೋ ಬತ್ತಿದ್ದರೆ, ತಲೆ ಹೆಚ್ಚಿಪ್ಪೋರ ಒಂದೊಂದು ತಲೆಯ ಯೋಚನೆ ಒಂದೊಂದಾದರೆ... ಎಷ್ಟು ಅಸಬಡುದ್ದವೋ! ವಿಜ್ಞಾನದ ಲೆಕ್ಕಲ್ಲಿಯೂ ಮೆದುಳಿಪ್ಪದು ತಲೆಯೊಳದಿಕ್ಕೇ ಅಲ್ಲದೋ? ನಮ್ಮ ಇಡೀ ದೇಹದ ಹಿತವನ್ನೂ ಹಾಕು ಚೋಕುಗಳನ್ನೂ ಯೋಚನೆ ಮಾಡೆಕ್ಕಾದ್ದು ಮಿದುಳು ಹೇಳುವ ಯಂತ್ರಲ್ಲಿ. ರಕ್ತ ಪರಿಚಲನೆ  ಹದಕ್ಕಿದ್ದರೆ ತೊಂದರೆ ಇಲ್ಲೆ. ತಲೆಲ್ಲಿ ಆಲೋಚನೆ ಹೆಚ್ಚಾದರೆ ರಕ್ತ ಪ್ರವಾಹ ಹೆಚ್ಚೆಕ್ಕಾವುತ್ತು. ಹಾಂಗೆ ಒತ್ತಡಲ್ಲಿ ನೆತ್ತರು ತಲೆಯ ಕಡೆಂಗೆ ಹೋದರೆ ಒತ್ತಡ ಜಾಸ್ತಿ ಆಯೆಕ್ಕನ್ನೆ! ಒಂದರಿಯೋ,ಎರಡು ಸರ್ತಿಯೋ ಪರವಾಗಿಲ್ಲೆ. ಅವರವರ ದೈನಂದಿನದ ಕೆಲಸಂಗಳ ಬಗ್ಗೆ  ಯೋಚನೇ ಹದಕ್ಕೆ ಮಾಡಿದರೆ ತೊಂದರೆ ಇಲ್ಲೆ. ಆದರೆ ಬೇಕಾದ್ದರ ಬೇಡದ್ದದರ ತಲೆಲ್ಲಿ ತುಂಬ್ಯೊಂಡು ತಲೆ ಹಾಳು ಮಾಡಿಗೊಂಬೋರು ಬೆಶಿ ಜೋರಾದರೆ ಸೀದ ಹೋಪದು ಡಾಕ್ಟ್ರ ಹತ್ತರಂಗೆ. ಮತ್ತೆ ಅವಕ್ಕೂ ಉದ್ಯೊಗ ಬೇಕನ್ನೆ. ಹಾಂಗಲ್ಲ ಅನು ಡಾಕ್ಟ್ರಕ್ಕಳ ವಿರೋಧಿ ಅಲ್ಲ. ದೇಹಾರೋಗ್ಯಲ್ಲಿ  ಸೋತು ಹೋದ ಕಾಲಕ್ಕೆ ನಮ್ಮ ಕಾಪಾಡುವದು ಭಿಷಗ್ವರೇಣ್ಯಂಗೊ. ಅವು ನಮಗೆ ಯಾವಾಗಲೂ ಬೇಕು. ಆದರೆ ಡಾಕ್ಟ್ರ ಒಟ್ಟಿಂಗೆ ಇದ್ದ ಹೇಳಿ ಮಧು ಮೇಹ ಇದ್ದೋರು ಸೀವು ಹೆಚ್ಚು ತಿಂದರೆ ಅಕ್ಕೊ. ತತ್ಕಾಲ ಉಪಶಮನ ಒಂದೆರಡು ಸರ್ತಿ ಮಾಡುಗು. ಮತ್ತೆ ಎಲ್ಲ ದೇವರ ಮೇಲೆಯೇ ಭಾರ ಹಾಕೆಕ್ಕಷ್ಟೆ. ಬೇಕು ಬೇಕು ಹೇಳಿ ಬಲುಗಿ ಹಾಕ್ಯೋಂಡು ಮತ್ತೆ ದೇವರ ದೂರುವದೆಂತಗೆ?
    ಇದರ ಎಲ್ಲ, ಮದಲೇ ಯೋಚನೆ ಮಾಡೆಕ್ಕಾದ್ದು ನಮ್ಮ ತಲೆ. ಯೋಚನೆಗೂ ಒಂದು ಮಿತಿಯಿದ್ದಲ್ಲದೋ?ಒಬ್ಬೊಬ್ಬನ ತಲೆ ಒಂದೊಂದು ರೀತಿಲ್ಲಿ ಓಡುತ್ತಾದರೂ ಹಲವು ಜನ ಒಟ್ಟು ಸೇರಿ ಬೇಕಾದಷ್ಟು ಅಭಿಪ್ರಾಯ ಹಂಚ್ಯೊಂಡು ಒಂದು ನಿರ್ಧಾರಕ್ಕೆ ಬರೆಕ್ಕಾದ್ದು ಕ್ರಮ. ದೇಶದ, ರಾಜ್ಯದ ಹಿತವ ಮಂತ್ರಿ ಮಂಡಲ ಒಂದು ನಿರ್ಣಯಕ್ಕೆ ಬಂದು ಶಾಸನ ಸಭೆಲ್ಲಿ ಚರ್ಚಿಸಿ ಕಾನೂನು ರೂಪವ ಕೊಟ್ಟ ಮೇಲೆ,ಎಂಕಿಂಚ ಹೇಳಿ ನ್ಯಾಯ ತಪ್ಪಿ ಹೋಪದು, ಸಿಕ್ಕಿ ಬಿದ್ದರೆ ದೇವಸ್ಥಾನಂಗಳಲ್ಲಿ ಪೂಜೆ ಮಾಡುಸ್ಯೊಂಡೋ, ಹರಕೆ ಪುಜೆ ಒಪ್ಪಿಸಿಯೋ ಬಚಾವಪ್ಪಲೆ ತಲೆ ಖರ್ಚು ಮಾಡುವದಕ್ಕೆ ಎಂತಪ್ಪ ಹಿರಿಯೋರು ಒಂದು ಗಾದೆ ಹೇಳುಗು "ಬೇಕೆಂದು ಮಾಡುಸ್ಯೊಂಡ ಬೇಕು ಹೆಬ್ಬಾರ" ಹೇಳಿ. ಪೂಜೆ ಮಾಡುಸುಲೆ ಆಗ ಹೇಳಿದ್ದಲ್ಲ,ಮಾಡುಸದ್ದರೆ ದೇವರಿಂಗೆ ಪೂಜೆಯೇ ಇಲ್ಲೆ ಹೇಳಿ ಆಗಿ ಹೋಗ. ಪೂಜೆಯೋ, ಯಾಗವೋ ಬರೇ ನಮ್ಮ ಹಿತಕ್ಕಾಗಿ ಮಾಂತ್ರ ಅಲ್ಲ, ಎಲ್ಲೋರ ಹಿತಕ್ಕಾಗಿ ಮಾಡುಸ್ಯೊಳ್ಳೆಕ್ಕು. ಅಖೇರಿಗೆ ಪೂಜೆಯೋ ,ಹೋಮವೋ ಮುಗಿಶುವಗ ನವು ಹೇಳುವದೆಂತರ? ಗೋಬ್ರಾಹ್ಮಣೇಭ್ಯೋ ಶುಭಮಸ್ತು ನಿತ್ಯಂ ಲೋಕಾಸ್ಸಮಸ್ತಾಸ್ಸುಖಿನೋ ಭವಂತು. ಹೇಳುತ್ತನ್ನೇ.
    ಆದರೆ ತಲೆ ಉಪಯೋಗುಸೆಕ್ಕಾದಲ್ಲಿ ತಲೆ ಉಪಯೋಗುಸದ್ದರೆ ತಲೆಯಿದ್ದೂ ಇಲ್ಲದ್ದ ಹಾಂಗೆ ಆಗಿಹೋಕು. ಕೆಲವು ಸರ್ತಿ ಎಷ್ಟು ತಲೆಯಿದ್ದೋನೂ ಸೋತು ಹೋಪದಿದ್ದು. ತಲೆಯಿದ್ದೋವಕ್ಕೇ ಅಡೊ ತಲೆ ಬೇನೆ ಬಪ್ಪದು.ಹಾಮ್ಗೇ ತುಂಬಾ ತಲೆಯಿದ್ದೋವಕ್ಕೆ ತಲೆಲ್ಲಿದ್ದ ಕೂದಲು ಉದುರಿ ಹೋವುತ್ತಡೊ. ಬೋಳು ತಲೆಯೋರೆಲ್ಲ ಬುದ್ಧಿವಂತರು ಹೇಳಿ ಬಾರ.ವಿಷಯ ತಲೆಯಿದ್ದೋರಿಂಗೆ ಅರ್ಥ ಅಕ್ಕು. ಒಂದರಿ ಶಿವ ಪಾರ್ವತಿಯರೊಟ್ಟಿಂಗೆ ಇಬ್ರು ಮಕ್ಕಳುದೆ ಕೂದೊಂಡಿಪ್ಪಗ ಅಲ್ಲಿಗೆ ನಾರದ ಬಂದಡ. ಬಂದೋನು ಎಂತಾರೊಂದು ಕುಸೃ್ಟಿ ತಂದೇ ತತ್ತ. ಒಂದು ಹಣ್ಣಿನ ಶಿವನ ಕೈಲಿ ಕೊಟ್ಟು, ಆರು ಮದಲು ಲೋಕವ ಮೂರು ಪ್ರದಕ್ಷಿಣೆ ಮುಗಿಶಿ ಬತ್ತವೋ ಅವಕ್ಕೆ ಈ ಹಣ್ಣಿನ ಕೊಡು ಹೇಳಿದನಡ.ಕೇಳುವದೇ ತಡವು. ಸುಬ್ರಹ್ಮಣ್ಯ ಹಣ್ಣಿನ ಪಡೆಯೆಕ್ಕು ಹೇಳಿ ಹೆರಟಡೊ ನವಿಲೇರಿಗೊಂಡು. ಗಣಪತಿ ಮಾಂತ್ರ ಅಲ್ಲೇ ಇತ್ತಿದ್ದಡ. ರಜ ಹೊತ್ತು ಕಳುದು ನಿಧಾನಕ್ಕೆ ಎಲಿಯ ಮೇಲೆ ಕೂದೊಂಡು,ಅಬ್ಬೆ ಅಪ್ಪಂಗೆ ಅವು ಕೂದಲ್ಲಿಗೇ ಮೂರುಸುತ್ತು ಬಂದನಡ. ಸುತ್ತು ಹಾಕಿಕ್ಕಿ ಬಂದು ಹಣ್ಣಿನ ಎನಗೆ ಕೊಡಿ ಹೇಳಿದನಡ. ಶಿವ-ಪಾರ್ವತಿಯರು ಮೂರು ಲೋಕಕ್ಕೂ ಒಡೆಯರು.ಅವಕ್ಕೆ ಸುತ್ತು ಬಂದರೆ ಲೋಕಕ್ಕೆ ಸುತ್ತು ಬಂದ ಹಾಂಗೆ ಆತಲ್ಲದೋ/ ಹಣ್ನಿನ ಕೊಡಿ ಹೇಳಿದ್ದಕ್ಕೆ ನಾರದ ಅಲ್ಲೆ ಇದ್ದೋನು ಸರಿ ಗಣಪತಿ ಹೇಳಿದ್ದು ನಿಂಗೊ ಇಬ್ರಿಂಗೆ ಸುತ್ತೂ ಹಾಕಿದರೆ ಜಗತ್ತಿಂಗೇ ಸುತ್ತು ಬಂದ ಹಾಂಗೆ ಆತು. ಹಣ್ಣಿನ ಗಣಪತಿಗೆ ಕೊಡುಲಕ್ಕು" ಹೇಳಿದನಡ. ಮತ್ತೆ ವಿರೋಧ ಇಲ್ಲೆ. ಹಣ್ಣು ಸುಲಭದ ಹಾದಿ ಹಿಡುದ ಗಣಪತಿಯ ತ್ಬುದ್ಧಿವಂತಿಕೆಗೆ ಸಿಕ್ಕಿತ್ತು. ಎಲ್ಲವು ಅಷ್ಟೆ ಸಮಯ ಸಂದರ್ಭ ನೋಡಿ ನಾವು ನಡಕ್ಕೊಳ್ಳೆಕ್ಕು. ಮದಲೊಂದು ಕುಟುಂಬದ ಯಜಮಾನ ಅವ ಬಂದ ಮೇಲೆಯೇ ಎಲ್ಲೋರಿಂಗೂ ಊಟ ಸಿಕ್ಕುವದು. ಕೆಲಸದೋವು ಬಂದು ಹೇಳಿದವಡ.ಗೋಣ ಕಂಜಿ ಹಾಕಿದ್ದು ಹೇಳಿ. ಕೆಲಸದೋನು ಹೇಳಿದ್ದು ಗೋಣ ಕರು ಹೇಳಿ. ಯಜಮಾನ ಯೋಚನೆ ಮಾಡದ್ದೇ ಕೊಟ್ಟಗೆಲ್ಲಿ ಕಟ್ಟು ಹೇಳಿತ್ತಿದ್ದನಡ. ದನಿಯ ತಲೆ ಎಲ್ಲ್ಯೋ  ಕೆಲಸದೋನು ತಲೆ ಎಲ್ಲಿಯೋ?ಕ್ಲಾಸಿಲ್ಲಿ ಪಾಠ ಮಾಡ್ಯೊಂದಿಪ್ಪಗ ಒಬ್ಬ ಮಾಣಿ   ಕ್ಲಾಸಿಲ್ಲಿ ಮೇಲೆಮಾಡಿನ ನೋಡ್ಯೊಂಡಿದ್ದೋನಿಂಗೆ ಒಂದು ಕೇರೆ  ಹಾವು ಗೋಡೆ ಎಡೆಲ್ಲಿ ಹೋಗ್ಯೋಂಡಿಪ್ಪದು ಕಂಡದರ ನೋಡುವರಲ್ಲೆ ತಲ್ಲೀನನಾಗಿತ್ತಿದ್ದನಡ. ಇವ ಬೇರೆಲ್ಲಿಯೋ ನೋಡ್ಯೊಂಡಿದ್ದ ಹೇಳಿ ಮಾಷ್ಟ್ರ ಅವನತ್ರೆ ಪ್ರಶ್ನೆ ಕೇಳಿದನಡ. ಆನು ಹೇಳಿದ್ದು ನಿನಗೆ ಅರ್ಥ ಆತೋ ಹೇಳಿ ಕೇಳಿದನಡ. ಅಂಬಗ ಈ ಮಾಣಿ ಹೇಳಿದ್ದೆಂತರ " ಬೀಲ ಮಾಂತ್ರ ಬಾಕಿ ಇದ್ದು. ಮತ್ತೆ ತಲೆ ಶರೀರ ಒಳ ಹೋಗಿ ಆತು ಹೇಳಿ. ಮುಂಡಾಸನ್ನೇ ಯೋಚನೆ ಮಾಡ್ಯೊಂಡಿದ್ದ ಮದಿಮ್ಮಾಯನತ್ರೆ, ಊಟ ಆತೊ ಕೇಳಿದ್ದಕ್ಕೆ ಮುಂಡಾಸು ಮೂವತ್ತು ಮಳ ಬೇಕಡೊ ಹೇಳಿದನಡ. ನಾವೆಲ್ಲಿಯೋ ನಮ್ಮ ತಲೆ ಎಲ್ಲಿಯೋ ಅಪ್ಪಲಗ. ತಲೆ ನಮ್ಮೊಟ್ಟಿಂಗೇ ಇದ್ದರೂ ಯೋಚನೆ ಬೇರಾದರೆ ಒಂದು ಹೋಗಿ ಮತ್ತೊಂದಕ್ಕು.ಹಾಂಗೆ ತಲೆ ತಿರುಗುಲೆ ಬಿಡ್ಲಾಗ.ಕೆಲವು ಜನಕ್ಕೆ ಚಯ ಕುಡಿಯದ್ದರೆ, ಕಾಫಿ ಕುಡಿಯದ್ದರೆ ತಲೆಬೇನೆ, ತಲೆ ಸೆಳಿವದು ಶುರು ಆವುತ್ತಡೊ. ಚಾ,ಕಾಫಿಯೇ ತಲೆಲ್ಲಿ ತುಂಬ್ಯೊಂಡಿದ್ದರೆ ಬೇರೆಂತಕ್ಕೆ? ಅದು ಸಿಕ್ಕದ್ದರೆ ತಲೆ ಬೆಶಿ ಆಗೆಡದೊ.ಆಶೆಯೇ ದುಃಖಕ್ಕೆ ಕಾರಣ ಹೇಳಿದ ಬುದ್ಧ ಈಗ ಇಲ್ಲೆ. ಆಶೆ ಪಟ್ಟದು ಸಿಕ್ಕದ್ದರೆ, ಬೇಜಾರು ಬಪ್ಪದು ಸ್ವಾಭಾವಿಕ. ನಮ್ಮ ವೇದಾಂತಲ್ಲಿ ಹೇಳುತ್ತವು. ಎಲ್ಲ ಅವರವರ ಭಾಗ್ಯಂದ ಬತ್ತು, ಹೋವುತ್ತು. ಹೋದರೆ ಬೇಜಾರು ಮಾಡದ್ದೆ, ಸಿಕ್ಕ    ರೆ ಹೆಚ್ಚು ಸಂತೋಷಪಡದ್ದೆ, ಸಮಚಿತ್ತಲ್ಲಿ ಇರೆಕ್ಕಡೊ. ಕಳಕ್ಕೊಂಡದಕ್ಕಾಗಿ ಚಿಂತೆ ಮಾಡಿದರೆ ಮತ್ತೆ ಸಿಕ್ಕುಗೋ? ಸಿಕ್ಕಿದರೂ ಎಷ್ಟು ದಿನಕ್ಕೆ? ಎಲ್ಲ ಮೂರು ದಿನದ ಬಾಳ್ವೆ. ಮತ್ತೆ ತಲೆ ತಲೆ ಸೇರಿದರೆ,ಅಲ್ಲಿ ಜಗಳ ಬರೆಕ್ಕಡೊ.ರತ್ನಾಕರ ಕವಿ ಹೇಳಿದ್ದಲ್ಲದೋ? ಸಾವಿರ ಹೆಂಡತ್ಯಕ್ಕಳನ್ನೂ ಭಾಅರತ ಚಕ್ರವರ್ಅವಕ್ಕೆ ಬೇಜಾರು ಆಗದ್ದ ಹಾಂಗೆ ನೋಡ್ಯೊಂಡಿತ್ತಿದ್ದನಡ. ಮತ್ತೆ ಕೃಷ್ಣನ ಕತೆ ಗೊಂತಿದ್ದನ್ನೆ. ಆನು ಅವನತ್ರೆ ಒಂದು ಕೇಳಿದೆ. ಅವ ತಲೆಯಾಡುಸಿದ್ದನೇ ಇಲ್ಲೆ ಹೇಳುತ್ತವು. ಬಾಯಿ ಬಪ್ಪೋನು ತಲೆಯಾಡುಸುವದೆಂತಗೋ? ಶೀತ ಅಪ್ಪಗ ತಲೆ ಬೇನೆ ಅಪ್ಪದು ಇದ್ದು. ಆದರೆ ಕೆಲವು ಜನಕ್ಕೆ ಬೇರೊಬ್ಬ ಒಳ್ಳೆದಪ್ಪದು ನೋಡಿದರೆ ತಲೆ ಬೇನೆಯಾವುತ್ತಡೊ.ಅವಂಗೆ ತಲೆ ಜೆಪ್ಯೊಂಡು ಹೇಳಿದೆ ಕೇಳಿದ ಇಲ್ಲೆ.ಈಗ ಅನುಭವಿಸುತ್ತ ಹೇಳುವದಿದ್ದನ್ನೆ.ಅವ ಒಳ್ಳೆ ಬುದ್ಧಿವಂತ ಹೇಳುವಗಳೂ "ಅವಂಗೆ ತಲೆಯಿದ್ದು ಹೇಳುತ್ತವು. ಕಣ್ಣಿಂಗೆ ಕಾಂಬ ತಲೆ ಅಲ್ಲ. ತಲೆಲ್ಲಿಪ್ಪ ಮೆದುಳು ಶಕ್ತಿ ಒಳ್ಳೆದಿದ್ದು ಹೇಳಿ ಅಲ್ಲದೋ? ಬೇಡದ್ದದರ ಮಾಡ್ಯೊಂಡು ಸಿಕ್ಕಿ ಬಿದ್ದು, ಮತ್ತೆ ತಲೆ ಬೆಶಿ ಮಾಡ್ಯೊಂಡು ಊರೆಲ್ಲ ನಾರುಸುವೋರು ಇದ್ದಷ್ಟು ದಿನ ಲೋಕ ಉದ್ಧಾರ ಅಕ್ಕೋ?ಎಲ್ಲ ಅವರವರ ಮನಸ್ಸಿಲ್ಲಿ ಕೂದುಗೋಂಡು ಒಂದೊಂದು ಬುದ್ಧಿ ಕೊಟ್ಟು, ಒಬ್ಬಕ್ಕೊಬ್ಬ ಜಗಳ ಮಾಡ್ಯೊಂಡಿಪ್ಪದೇ ದೇವರಿಂಗೆ ಬೇಕಾದ್ದೊ ಗೊಂತಿಲ್ಲೆ. ಎಲ್ಲ ಅವಂಗೇ ಅರ್ಪಿತ
        ನಮ್ಮ ಈ ಶರೀರವ ಮೂರು ವಿಭಾಗ ಮಾಡಿದ್ದವು-ರುಂಡ, ಮುಂಡ. ಕೈಕಾಲುಗೊ. ಅಡಿ ಕಂಬ ನಡು ಮಡಕೆ ಕೊಡಿ ಕುಡಿಕೆ ಹೇಳಿಯೂ  ಮೂರು ವಿಭಾಗ ಹೇಳುತ್ತವು. ಕುಡಿಕೆ ಹೇಳುವದು ತಲೆಯ.ಇಡೀ ಶರೀರದ ಕೇಂದ್ರ ಸ್ಥಾನ- ಮೆದುಳು ಇಪ್ಪದು ಇಲ್ಲೇ ಅಲ್ಲದೋ? ಒಳುದ ಎಲ್ಲ ಅಂಗಂಗೊಕ್ಕೆ ಬೇಕಾದ ನಿರ್ದೇಶನ ಕೊಟ್ಟು ನಿಯಂತ್ರಣಲ್ಲಿ ಮಡಿಕ್ಕೊಂಬದು ತಲೆ. ಕೆಲವು ಜನಕ್ಕೆ ನಖ ಶಿಖಾಂತವಾಗಿ ಕೋಪ ಬತ್ತನ್ನೇ! ಹೀಂಗಿಪ್ಪ ಕೋಪವೇ ಮುಂದೆ ರಕ್ತದ ಒತ್ತಡಕ್ಕೆ ಕಾರಣ ಅಪ್ಪದಡೊ. ಕೋಪ ಬಂದರೆ ಅದು ಒಂದು ಕ್ಷಣದ ಆವೇಶ. ಆ ಘಳಿಗೆಲ್ಲಿ ಮನಸ್ಸಿನ ಹತೋಟಿಲ್ಲಿ ಮಡಿಕ್ಕೊಂಡರೆ ಮರುಕ್ಷಣಲ್ಲೇ ಕೋಪ ದೂರ ಹೋವ್ತು. ಆತ್ಮ ಹತ್ಯೆ ಮಾಡಿಗೊಂಬೋರುದೇ ಹಿಂದೆ ಮುಂದೆ ಯೋಚನೆ ಮಾಡದ್ದೆ ಆ ಕ್ಷಣದ ಆವೇಶಕ್ಕೆ ಒಳಗಾದರೆ ಜೀವ ತೆಕ್ಕೊಳ್ಳುತ್ತವು. ಒಂದು ಕ್ಷಣ ಕಳುದರೆ ಮತ್ತೆ ಅವರ ಯೋಚನೆ ಬದಲಾವುತ್ತಡೊ. ಅದಕ್ಕೇ ಹೇಳುತ್ತವು. ತಾಳಿದವನು ಬಾಳಿಯಾನು ಹೇಳಿ. ಸಹನೆ ವಜ್ರದ ಕವಚ ಹೇಳಿ ಡಿ ವಿ ಜಿ ಹೇಳಿದ್ದ. ಕೂಪದೊಳು ನೇಣು ಹರಿದಂತೆ ಕೋಪಿ ತಾನಿಳಿವ ನರಕಕ್ಕೆ ಹೇಳಿ ಸರ್ವಜ್ಞ ಹೇಳಿದ್ದಡೊ. ಹಾಂಗಿಪ್ಪ ಅನುಭವಸ್ಥರ ಮಾತೇ ನಮಗೆ ವೇದ ವಾಕ್ಯ ಆಗಿಪ್ಪಗ, ಯವ ಕೆಲಸಲ್ಲಿ ಮುಂದೆ ಹೋಪಗಳೂ ಸಾಕಷ್ಟು ಚಿಂತನೆ ಮಾಡ್ಯೊಂಡೇ ಮುಂದುವರಿಯೆಕ್ಕು. ಬಿದ್ದ ಹಣ್ಣು ಮತ್ತೆ ಮರಕ್ಕೆ ಹೋಕೋ? ಅದಕ್ಕೇ ತಲೆಯಿಪ್ಪೋರಿಂಗೆ ಇಂತಹ ಮಾತು ಸದಾ ನೆಂಪಿರುತ್ತು. ಲೋಕಲ್ಲಿ ಹೆಚ್ಚು ತಲೆಯಿಪ್ಪ ಹೇಳಿರೆ ಬುದ್ಧಿವಂತ ಜನಂಗೊ ಹೊಸ ಹೊಸ ಸಂಶೋಧನೆ,ಮಾಡ್ಯೊಂಡು ಒಳುದೋರ ತಲಗೂ ಹೊಗುಸಿ ಲೋಕ ಹಿತವ ಯೋಚನೆ ಮಾಡುವ್ಮಾಡ್ಯೊಂಡಿಪ್ಪ ವಿಜ್ಞಾನಿಗಳ ಕೊಡುಗೆ ಲೋಕ ಹಿತಕ್ಕಾಗಿ ನಡದ್ದರಿಂದ ಪ್ರಪಂಚ ವಿಜ್ಞಾನಲ್ಲಿ ಲೋಕ ಮುಂದುವರುದ್ದು.ನಮ್ಮ ದೇಶಲ್ಲಿಯೂ ದೊಡ್ಡ ದೊಡ್ಡ ವಿಜ್ಞಾನಿಗೊ ಇಪ್ಪದು ನಮಗೆ ಹೆಮ್ಮೆ.ಮನ್ನೆ ತಾನೆ ಪತ್ರಿಕೆಲ್ಲಿ ಬಂದದೇವಕಣಂಗಳ ಶುದ್ದಿಲ್ಲಿ ಬೋಸೋನ್ ದೇವಕನ ಹೇಳುವ ಹೆಸರು ಮಡಗಿದ್ದು ನಮ್ಮ ಜನಂಗೊ ವಿಜ್ಞಾನ ಲೋಕಲ್ಲಿ ಮದಲೆ ಪಾದಾರ್ಪಣೆ ಮಾಡಿದ್ದವು ಹೇಳುವದಕ್ಕೆ ಉದಾಹರಣೆ. ನಮ್ಮ ತಲೆಯ ಲೋಕೋದ್ಧರಕ್ಕೆ ಉಪಯೋಗಿಸಿದರೆ ನಮ್ಮ ದೇಶವ ಎಲ್ಲ ದೇಶದೋರುದೆ ಕೊಂಡಾಡುವ ಹಾಂಗೆ ಅಕ್ಕು.ಕೊಡಾಡೆಕ್ಕು ಹೇಳಿ ಅಲ್ಲ ನಮ್ಮ ಪಾಲನ್ನು ಕೊಡುವ ಯೋಗ್ಯತೆ ನಮಗೂ ಬಂದರೆ ಅದಕ್ಕಿಂತ ಹೆಚ್ಚು ನಮಗೇನೂ ಬೇಡ. ದಾಸರ ಪದಲ್ಲಿದ್ದಲ್ಲದೋ? "ಏನ ಬೇಡಲಿ ನಿನ್ನ ಬಳಿಗೆ ನಾ ಬಂದು; ನೀನಿತ್ತ ಸೌಭಾಗ್ಯ ನಿಖಿಳವಾಗಿರಲು" ನಾವು  ಮತ್ತೆ ಏನನ್ನು ಕೇಳುವದು ಬೇಡ. ಅವ ಕೊಟ್ಟದರನ್ನೇ ಸದ್ವಿನಿಯೋಗ ಮಾಡಿ ಸೈ ಎನಿಸಿಗೊಂಡರೆ ಜೀವನ ಸಾರ್ಥಕ!

Sunday, July 8, 2012

ಒಂದು ಮಾವಿನ ಮರ



                            ಒಂದು  ಮಾವಿನ ಮರ
                    ತುಂಬ ಹಿಂದೆ ನಡದ ಘಟನೆ. ಅ  ಕಾಲಲ್ಲಿ ರಾಜಕೀಯವೂ ಇಷ್ಟು ಬದಲಾಯಿದಿಲ್ಲೆ. ಅಂದ್ರಾಣ ಜನಂಗಳೂ ಈಗ ಇಲ್ಲೆ. ಇದ್ದರು ನೆಂಪೂ ಇರ ಹೇಳಿ ಕಾಣುತ್ತು. ಕಾಲವೆ ಎಲ್ಲವನ್ನೂ ನುಂಗಿ ಹಾಕುತ್ತು. ಕೆಲವು ವರ್ಷ ಕಳದ ಮೇಲೆ ಇಂದ್ರಾಣದ್ದೂ ಮುಂದಿನವಕ್ಕೆ ನೆಂಪು ಬಾರ. ಮರೆದುಹೋಪದು ಒಂದು ಲೆಕ್ಕಲ್ಲಿ ಒಳ್ಳೆಯದೇ. ಜೀವನಲ್ಲಿ ಬಂದ ಕಷ್ಟಂಗಳನ್ನೋ, ಸೋಲುಗಳನ್ನೋ ನೆಂಪು ಮಾಡಿಗೊಂಡಿದ್ದರೆ ನಮ್ಮ ತಲೆಯೊಳ ಜಾಗೆಯೇ ಸಾಕಾಗ. ಯಾವಾಗಲೂ ನೆಂಪು ಮಾಡಿಗೊಂಡಿದ್ದರೆ ಮಾಂತ್ರ  ಹಳತ್ತು ನೆಂಪಪ್ಪದು. ಕಷ್ಟ ಸೋಲು ಮನುಷ್ಯಂಗಲ್ಲದ್ದೆ  ಮರಕ್ಕೋ ಬಪ್ಪದು? ಒಂದರಿ ಬಂದ ಕಷ್ಟವ ನುಂಗಿಗೊಂಡರೆ ಮತ್ತೆ ಮರವಲೆಡಿಗು. ಮತ್ತೆ ಮತ್ತೆ ನೆಂಪು ಮಾಡಿಗೊಂಡೇ ಇದ್ದರೆ, ಜೀವನಲ್ಲಿ ಬೇಜಾರು ಹೆಚ್ಚಾವುತ್ತು. ಏನೋ ಇದೆಲ್ಲಾ ಸಾಮಾನ್ಯ ಇಪ್ಪದೇ ಹೇಳಿ ಗ್ರೇಶಿಗೊಂಡರೆ ಕಷ್ಟ. ಆಟಲ್ಲಿ ಬಂದ ಸೋಲಿನ ಹಾಂಗೆ, ಇನ್ನೊಂದರಿ ಪ್ರಯತ್ನ ಮಾಡಿ ಗೆಲ್ಲುಲೆ ಎಡಿತ್ತೋ ನೋಡುವದು. ಆಗದ್ದರೆ ಸುಮ್ಮನೆ ಕೂಪದು. ಹೇಂಗಿದ್ದರೂ ಗೆದ್ದೇ ಗೆಲ್ಲೆಕ್ಕು ಹೇಳುವ ಹಟ ಬಂದರೆ ನಮ್ಮ ಮನಸ್ಸು ಹಟ ಸಾಧುಸುವದು ಹೇಂಗೆ ಹೇಳುವ ಯೋಚನೆಲ್ಲೇ ಇರೆಕ್ಕಾವುತ್ತು. ಕಿಚ್ಚು ಹೊತ್ತಿದರೆ, ಕಿಚ್ಚು ಅಲ್ಲಿದ್ದ ಅದರ ಆಹಾರ ಎಲ್ಲ ಮುಗಿಶಿಕ್ಕಿ ಮತ್ತೆ ತಣ್ಣಂಗಾವುತ್ತು. ಆದರೆ ಆಹುತಿ ಮುಗಿಶದ್ದೆ ಸುಮ್ಮನೆ ಕೂರುತ್ತಿಲ್ಲೆ. ಅಥವಾ ಕಿಚ್ಚು ದೊಡ್ಡ ಮಾಡೆಕ್ಕಾರೆ ಆರಾರುದೆ  ಅದಕ್ಕೆ ತಿಂಬಲೆ ಆಹಾರ ಕೊಡುತ್ತಾ ಇರೆಕ್ಕು.ಕೆಲವು ಜನಕ್ಕೆ ಕಿಚ್ಚಿಂಗೆ ತುಪ್ಪ ಎರವದು ಅಭ್ಯಾಸ. ಪಾಕಿಸ್ಥಾನ-ಭಾರತದ ಜಗಳ ಮುಂದುವರಿತ್ತಾ ಇಪ್ಪಲೆದೆ ಅವಕ್ಕೆ ಅದರ ಮುಗಿಶೆಕ್ಕು ಹೇಳಿ ಇಲ್ಲದ್ದ ಕಾರಣ ಮಾಂತ್ರ ಅಲ್ಲ ನಾವು ಹೀಂಗೆ ಜಗಳಾಡಿಗೊಂಡಿದ್ದರೆ ಬೇರೆಯವಕ್ಕೆ ನೋಡ್ಯೊಂಡಿದ್ದರಾತು. ಬೇರೆ ದೇಶಂಗೊ ಸಹಾಯ ಮಾಡುತ್ತೆಯೋ ಹೇಳಿ ಆಯುಧ ಸಾಮಗ್ರಿ ಕೊಟ್ಟುಗೊಂಡು ಇನ್ನೂ ತುಪ್ಪ ಎರೆತ್ತಾ ಇದ್ದವಲ್ಲದೋ? ಮುಗಿವ ಯೋಗ ಬಯಿಂದಿಲ್ಲೆ. ಮಹಾಭಾರತ ಯುದ್ಧ ಕೌರವರ ಅವಸಾನ ಆದ ಮೇಲೆ ಮುಗುದಿತ್ತಲ್ಲದೋ? ಹಾಂಗೆ ಒಂದು ಕಾಲ ಬಕ್ಕು ಎಲ್ಲ ತಣ್ಣಂಗಕ್ಕು.
        ಒಂದು  ಕಶಿ ಮಾವಿನ ಮರ ಎಂಗಾಲ ಊರಿನ ಒಂದು ಜಾಗೆಲ್ಲಿ ಇತ್ತು. ಮಾಂತ್ರ ಅಲ್ಲ, ಒಂದು ಕುಂಟುಕಾನ ಮಾವಿನ ಮರವೂ ಇತ್ತು ಆ ಜಾಗೆಲ್ಲಿ. ಒಂದು ಮನೆ, ಏಳೆಂಟು ತೆಂಗಿನ ಮರಂಗೊ. ಜಾಗೆಯ ಒಡಮಸ್ತ ಸಾಲ ಆಗಿ ಜಾಗೆಯ ಮಾರೆಕ್ಕಾಗಿ ಬಂತು. ಮಾರುವದು ಆ ಊರಿನ ಒಬ್ಬ ರಾಮಣ್ಣ ಹೇಳುವ ಊರಿನ ಪ್ರಮುಖಂಗೆ ಗೊಂತಾತು.ಮದಲೆಲ್ಲ ಒಂದೊಂದು ಊರಿಲ್ಲಿ ಹೀಂಗಿಪ್ಪ ಆಢ್ಯರು, ಊರನ್ನೇ ಕಲಂಕುಸಿ ತನ್ನ ಬೇಳೆ ಬೇಶಿಗೊಂಡಿದ್ದೋವು! ಅವ ಒಬ್ಬ ಪಾಪದೋನ ,ಬೇರೆ ಆರ ಸುದ್ದಿಗೂ ಹೋಗದ್ದೋನ ಹಿಡುದು ಹಾಕಿ ಅವನತ್ರೆ "ಜಾಗೆಯ ನೀನು ತೆಕ್ಕೊ. ಕಮ್ಮಿಗೆ ಬತ್ತು. ಹೇಂಗಿದ್ದರೂ ಬರೇ ಒಂಡು ಸಾವಿರ ರೂಪಾಯಿಗೆ ೨೫ ಸೆಂಟ್ಸ್ ಜಾಗೆಯೂ ಮನೆ ಎಲ್ಲ ಬತ್ತು. ಮನೆಲ್ಲಿ ಎರಡು ಜನ ಕೂಲಿಯೋವು ಬಾಡಿಗೆಗೆ ಇದ್ದವು. ಬಡ್ದಿ ಪೈಸೆ ಬಾಡಿಗೆಲ್ಲಿ ಬಕ್ಕು ತೆಕ್ಕೋ" ಹೇಳಿದ.ಅವಂಗೆ ಪಾಪ ದಾರಿಲ್ಲಿ ಹೋಗಿಗೊಂಡಿದ್ದ ಮಾರಿಯ ಮನೆ ಬಾಗಿಂಗೇ ಬರುಸಿದ ಹಾಂಗೆ ಆಗಿ ಹೋತು. ಜಾಗೆಲ್ಲಿ ಒಂದು ಕಶಿ ಮಾವಿನ ಮರಲ್ಲಿ ಒಳ್ಳೆ ಜಾತಿ ಕಶಿ ಮಾವಿನ ಕಾಯಿಗೊ ಸಿಕ್ಕುತ್ತು. ಜಾಗೆ ದೂರಲ್ಲಿಪ್ಪ ಕಾರಣ ಆನು ಇಲ್ಲಿಗೆ ಯಾವಾಗಲೂ ಬಪ್ಪ ಕಾರಣ ಜಾಗ್ರತೆ ನೋಡ್ಯೊಳ್ಳುತ್ತೆ. ಕೊಯ್ವಗ ಎನಗೂ ಮಾವಿನ ಕಾಯಿ ಕೊಡೆಕ್ಕು ಹೇಳಿ ಒಂದು ಮಾತಿನ ಮುಳ್ಳು ಮಡಗಿತ್ತಿದ್ದ.  ಸರಿ! ಅವನ ಮಾತಿಂಗೆ ಮರುಳಾಗಿ ದಾರಿಲ್ಲಿ ಹೋಪ ಮಾರಿಯ ಮನೆಗೇ ತಂದು ಹಾಕಿಗೊಂಡ ಇವ.
    ಆ ವರ್ಷ ಮಾವಿನ ಕಾಯಿ ಮುಗುದಿತ್ತು. ಮತ್ತಾಣ ವರ್ಷ ಮರ ತುಂಬ ಮಾವಿನ ಕಾಯಿಗೊ! ಜಾಗೆ ತೆಕ್ಕೊಂಡವಂಗೆ ಬೇರೆ ಕೆಲಸದ ಎಡಕ್ಕಿಲ್ಲಿ ಮಾವಿನ ಕಾಯಿ ಕೊಯ್ವಲೆ ನೆಂಪಾಗಿತ್ತಿದ್ದಿಲ್ಲೆ. ಜನಂಗೊ ಎಲ್ಲ ತನ್ನ ಕಚ್ಚೆಯೊಳ ಇರೆಕ್ಕು ಹೇಳುವ ಯೋಚನೆ ಇದ್ದ ಪ್ರಮುಖಂಗೆ. ಎಲ್ಲಿ, ಯಾವಗ, ಹೇಂಗೆ, ಆರಿಂಗೆ ಬೆಶಿ ಮುಟ್ಟುಸೆಕ್ಕು, ತನ್ನ ಪತ್ತಿಂಗೆ ಬರುಸ್ಯೊಳ್ಳೆಕ್ಕು ಹೇಳುವದೇ ಯೋಚನೆಯಾಗಿತ್ತು. ಹೋದಲ್ಲೆಲ್ಲ ಜಾಗೆ ಅವಂಗೆ. ಎಲ್ಯಾದರೂ ದಾರಿ ನಡಕ್ಕೊಂಡು ಹೋಪಗ ಒಳ್ಳೆ ಆಯಕಟ್ಟಿನ ಫಲವತ್ತಾದ ಭೂಮಿ ಕಂಡರೂ, ಆ ಪರಿಸರಲ್ಲಿಪ್ಪ ಪಾಪದೋನು ಒಬ್ಬನ ದಿನಿಗೇಳಿ, ನಿನಗೊಂದು ಜಾಗೆ ನೋಡಿದ್ದೆ. ಅದರ ದರಕಾಸ್ತು ಮಾಡುಸಿ ಕೊಡುತ್ತೆ. ಸೇನವಂಗೆ, ಮಣೆಗಾರಂಗೆಲ್ಲ ಆನೇ ಕೊಡುತ್ತೆ. ಜಾಗೆಯ ನೀನೇ ನೋಡಿಗೋ' ಹೇಳಿಕ್ಕಿ, ಇವ ಪಾಪ! ಬೆಗರು ಸುರಿಸಿ ಕಷ್ಟಪಟ್ಟು ಕೆಲಸ ಮಾಡಿ, ತೋಟವೊ ಗೆದ್ದೆಯೋ ಮಾಡ್ಯೊಂಡಿದ್ದರೆ, ಇವ ಬತ್ತ ಅಲ್ಲಿಗೆ. "ಜಾಗೆ ಈಗ ಭಾರಿ ಒಳ್ಳೆದಾಯಿದು. ಚೆಂದ ಆಯಿದು. ನಿನಗೆ ಈ ಜಾಗೆ ಮಾಡಿಕೊಡೆಕ್ಕಾರೆ  ಎನಗೆ ತುಂಬ ಕಷ್ಟ ಆಯಿದು. ತುಂಬ ಖರ್ಚಾಯಿದು. ಅದರ ನೀನು ಕೊಡುತ್ತೆಯೋ ಅಲ್ಲ; ವರ್ಷವೂ ಅಷ್ಟೋ ಇಷ್ಟೋ ಕೊಟ್ಟುಗೊಂಡಿರುತ್ತೆಯೋ ಹೇಂಗೆ? ಒಂದು ಗೇಣಿ ಚೀಟು ಮಾಡಿಕ್ಕುವೋ. ಈಗ ನಿನ್ನ ಸ್ವಾಧೀನವೇ ಇರಲಿ.  ರೆಕೋರ್ಡ್ ನಿನ್ನ ಹೆಸರಿಂಗೆ ಮಾಡೆಕ್ಕಾರೆ ಎಷ್ಟು ಕೊಡುತ್ತೆ?" ಹೇಳಿ ಎಲ್ಲ ಇವನ ಪೀಡುಸುಲೆ ಸುರು ಮಾಡುವದು ಅವನ ಜಾಯಮಾನ! ವಿಷಯ ಗೊಂತಿದ್ದರೂ ಹೆಚ್ಚಿನೋವು ಅವನ ಬಾಯಿಗೆ ಬೀಳುವೋರೇ. ಈ ಮಾವಿನ ಮರದ ಕತೆಯೂ ಹಾಂಗೇ ಆಗಿತ್ತು. ಒಂದು ದಿನ ಹೊತ್ತೋಪಗ ಆ ಜಾಗಗೆ ಬಂದೋನು, ಕೆಲಸದೋರ ದಿನಿಗೇಳಿ( ಬರೇ ಚಾಯ ಕೊಟ್ಟರೆ ಸಾಕು; ಚಾಯ ಕುಡಿವ ಆಸೆಗೆ ಕೆಲವು ಜನ ಓಡಿ ಬಂದೊಂಡಿತ್ತಿದ್ದವು. ಬೆಳೆದ ಕಾಯಿಗಳೆಲ್ಲ ಕೊಯ್ಸಿ, ಒಂದಷ್ಟು ಕಾಯಿಗಳ "ಇದರ ಅವ ಬಂದರೆ ಕೊಟ್ಟಿಕ್ಕು'" ಹೇಳಿ ಕೊಟ್ಟಿಕ್ಕಿ, ಊರೆಲ್ಲ ಹಂಚಿ ಅರೆವಾಶಿ ಕಾಯಿಗಳನ್ನೂ ಕೊಂಡು ಹೋದಡ. ಎರಡು ದಿನ ಕಳುದು ಹೋಪಗ ಹೋಟ್ಲಿನೋನು "ಇದ, ಇಲ್ಲಿ ರಜ ಮಾವಿನ ಕಾಯಿ ಇದ್ದು ನಿನಗೇಳಿ ರಾಮಣ್ಣ ಮಡುಗಿದ್ದು ಕೊಂಡೋಗು, ಕೊಂಡೋಗದ್ದರೆ ಹಾಳಕ್ಕು" ಹೇಳಿದಡ. ಸರಿ ಇವ ಪಾಪ ಕೊಂಡೋದ. ಒಂದು ವರ್ಷ ಹಾಂಗೆ ಹೋತು. ಎಲ್ಲೋರುದೆ 'ಇದು ಊರ ರಾಮಣ್ಣನ ಮರ ಹೇಳುಲೆ ಸುರುಮಾಡಿದವು. "ಜಾಗೆ ಮತ್ತೊಬ್ಬಂದಾದರೂ ಕ್ರಯಚೀಟು ಅಪ್ಪಗಳೇ ಮಾತು ಹಾಂಗೆ ಇದ್ದಡೋ. ಹೇಳುಲೆ ಸುರುಮಾಡಿದವು. ಒಂದೆರಡು ವರ್ಷ ಹೀಂಗೇ ಕಳುತ್ತು. ಊರೋರೆಲ್ಲ ಹೇಳುವದು ಪ್ರಚಾರ ಆಗಿದ್ದರೂ ಇವಂಗೆ ಗೊಂತಾದು ಒಂದು ವರ್ಷ ಕಳುದ ಮೇಲೆ.
            ಮತ್ತೆ ಒಂದರಿ ಇವನೇ ಮದಲು ಹೋಗಿ ಕಾಯಿ ಕೊಯ್ದಕ್ಕೆ, ಅವಂಗೆ ಕೋಪ ಬಂದು, ಮತ್ತಾಣ ಸರ್ತಿ ಇವ ಹೋಪಗ ಮರ ಖಾಲಿ. ಆ ಸಮಯಲ್ಲಿ ಜಾಗೆಲ್ಲಿದ್ದ ಬಾಡಿಗೆಯೋರುದೆ ಪ್ರಮುಖನ ಕಡೆಯಾಗಿತ್ತಿದ್ದವು. ಮತ್ತೆ ಬಾಡಿಗೆ ಸರಿ ಕೊಡದ್ದ ಕಾರಣಂದ ಜಾಗೆಂದಲೇ ಏಳೆಕ್ಕು ಹೇಳಿ ಬಾಡಿಗೆಯೋರತ್ರೆ ಹೇಳಿದ್ದಕ್ಕೆ ಒಪ್ಪದ್ದೆ, ಮಾತಿಂಗೆ ಬಗ್ಗದ್ದೆ, ಜಾಗೆಲ್ಲಿದ್ದೋರ ಮೇಲೆ ಕೇಸ್ ಮಾಡಿಯೂ ಆತು. ಕೇಸಿಲ್ಲಿ ಒಕ್ಕಲಾಗಿಪ್ಪೋರು ಜಾಗೆ ಬಿಡೆಕ್ಕು ಹೇಳಿ ಅಪ್ಪಗ,ಸುಲಭಲ್ಲಿ ಬಿಟ್ಟು ಹೋಗದ್ದೆ ಪೋಲಿಸ್ ಕೇಸ್ ಆದಮೇಲೆ ಮನೆ ಬಿಟ್ಟಿಕ್ಕಿ ಹೋದವು. ಆಮೇಲೆ ಇವರೊಳದಿಕ್ಕೆ "ಇತ್ತಲು ಹತ್ತಿತು ಕರ್ಣಾರ್ಜುನರೊಳಗೆ" ಹೇಳಿ ನೇರ ಸಮರವೇ ಸುರುವಾತು. ಅವನ ಕಡೆಲ್ಲಿ ಊರೋರೆಲ್ಲ ಇತ್ತಿದ್ದವು. ಕಾರಣ ವರ್ಷಕ್ಕೊಂದರಿ ಮಾವಿನ ಕಾಯಿ ಸಿಕ್ಕುತ್ತಿತ್ತಲ್ಲದೋ? ಆರದ್ದೋ ಬದುಕ್ಕಿಂಗೆ ಅವ ಯಜಮಾನ ಆಗಿಹೋದ ಊರೋರ ಮಟ್ಟಿಂಗೆ. ಇವಂಗೆ ನಿವೃತ್ತಿ ಇಲ್ಲೆ.  ಜಾಗೆಲ್ಲಿದ್ದ ಮನೆಯ ಮುರುದು ತಂದಿತ್ತಿದ್ದ ಹಾಂಗೆ ಈಗ ಮನೆ ಖಾಲಿ. ಒಬ್ಬ ಪಾಪದೋನು "ಆನು ಜಾಗೆಲ್ಲಿ  ಅಂಗಡಿ ಕಟ್ಟಿ ವ್ಯಪಾರ ಮಾಡುತ್ತೆ. ಜಾಗ್ಗೆ ,ಮಾಂತ್ರ ಬಾಡಿಗೆ ಚೀಟು ಮಾಡಿಕೊಡುತ್ತೆ ಹೇಳಿದಡ.  ಹಾಂಗಿಪ್ಪಗ ಜಾಗೆಲ್ಲಿ ಹಾಂಗೆ ಒಂದು ಒಕ್ಕಲಿನ ಹಾಂಗೆ ಇದ್ದರೆ ಮರದ ಕಾವಲಿಂಗೂ ಅಕ್ಕು ಹೇಳಿ ಇವ ಒಪ್ಪಿದಡಾ. ಆ ವರ್ಷ ಮಾವಿನ ಕಾಯಿ ಬೆಳೆದು ಅವ ಕೊಯ್ವಲೆ ಬಪ್ಪಗ ಅಂಗ್ಡಿಲ್ಲಿದ್ದೋನು ಬಿಟ್ಟ ಇಲ್ಲೆ. ರಾಮಣ್ಣ ಕೊಯ್ವಲೆ ಬತ್ತ ಹೇಳುವದು ಜಾಗೆಲ್ಲಿಪ್ಪವಂಗೆ ಗೊಂತಾಗಿ ಬಂದು ಹೇಳಿದಡ. ಇವ ಹೋಪಗ ರಾಮಣ್ಣ ಕಾಯಿ ಕೊಯ್ಕೊಂಡು ಇತ್ತಿದ್ದಡ. ಇವ ಸೀದಾ ಹೋಗಿ ಅವನ ದೂಡಿ ಬಿಟ್ಟಪ್ಪಗ ಅಲ್ಲಿಂದ ಹೋಯೆಕ್ಕಾಗಿ ಬಂತು. ಮತ್ತೆ ಸುದ್ದಿ ಇಲ್ಲೆ.
     ಒಂದೆರಡು ವರ್ಷವೂ ಹೀಂಗೇ ಹೋತು. ಮಾವಿನ ಕಾಯಿ ವರ್ಷವೂ ಒಡಮಸ್ಥನೇ ಕೊಯ್ದು ಕೊಂಡೋಗ್ಯೊಂಡು ಇತ್ತಿದ್ದಡ. ಆ ಸಮಯಲ್ಲೇ ಏನೋ ಒಂದು ಕಾರಣಕ್ಕೆ ಈ ಅಂಗ್ಡಿಯೋನಿಂಗೂ ಬೇರೊಬ್ಬಂಗೂ ಜಗಳ ವಿಕೋಪಕ್ಕೆ ಹೋಗಿ ಕೇಸ್ ಆತು. ಅಂಗ್ಡಿಯೋನ ಮೇಲೆ ಕೋಪ ಇದ್ದ ಪ್ರಮುಖ ಅಂಗ್ಡಿಲ್ಲಿದ್ದೋನ ವಿರುದ್ಧ ಸಾಕ್ಷಿ ಕೂಡಾ ಹೇಳಿ ಜೈಲಿಂಗೆ ಹೋಪ ಹಾಂಗೆ ಮಾಡಿದನದ. ಮತ್ತೆ ಮದಲಾಣ ಹಾಂಗೆ ಮಾವಿನ ಕಾಯಿ ಕೊಯ್ವಲೆ ಅನುಕೂಲವೇ ಆಗಿಹೋತು. ಒಂದೆರಡು ವರ್ಷ ಕಳಿವಗ ಅವ ಜೈಲಿಂದ ಬಂದ. ಅಂಗ್ಡಿಯ ಬೇರೆ ಜನಕ್ಕೆ ಮಾರಿದ. ತೆಕ್ಕೊಂಡೋನನ್ನೂ ಮಂಕಾಡುಸಿ ತನ್ನ ಕಡೆಂಗೆ ಪ್ರಮುಖ ಮಾಡಿಗೊಂಡ.ಮತ್ತೆ ಮಾವಿನ ಕಾಯಿ ಕೊಯ್ವದು ಕೊಂಡೋಪದು ಅವನೇ ಆಗಿತ್ತು. ಅಂಗ್ಡಿಲ್ಲಿದ್ದೋನುದೆ ವ್ಯಾಪಾರ ಇಲ್ಲದ್ದ ಕಾರಣ ಆನು ಇದರ ಮಾರುತ್ತೆ. ಆನು ಕೊಟ್ಟ ಪೈಸೆ ಎನಗೆ ಸಿಕ್ಕೆಕ್ಕು ಹೇಳಿದ್ದಕ್ಕೆ ಏನೋ ಒಪ್ಪಂದಕ್ಕೆ ಬಂದು ಪೈಸೆ ಕೊಟ್ಟು ಬೀಗದ ಕೈ ತೆಕ್ಕೊಂಬದು ಹೇಳಿ ರಾಝಿ ಆಗಿತ್ತಡೋ. ಸೆರೆ ನೋಡಿ ಉಳಿ ಮಡಗುಲೆ ಹೆರಟ ಪ್ರಮುಖ ಆ ಅಂಡಿಯೋನ ದಿನಿಗೇಳಿ ನಿನಗೆ ಆನು ಹೆಚ್ಚು ಪೈಸೆ ಕೊಡುತ್ತೆ ಹೇಳಿ ಒಪ್ಪಿಸಿದಡೋ. ಮತ್ತೆ ರೆಕೋರ್ಡು ಅವನ ದಸ್ಕತ್ ತೆಕ್ಕೊಂಡ ಅಡೊ.ಈ ಜಾಗೆಯ ಎನಗೆ ಗೇಣಿಗೆ ಕೊಟ್ಟಿದವು ಹೇಳಿ ಕೋರ್ಟಿಂಗೆ ಅರ್ಜಿ ಮಾಡುಸಿಕ್ಕಿ ಅವನ ಹಕ್ಕಿನ ತಾನು ತೆಕ್ಕೊಂಡಡ. ಅಂಬಗ ಕಾಲ ಬದಲಾಗಿ ಉಳುವವನೇ ಹೊಲದೊಡೆಯ ಹೇಳಿ ಕೆಲವು ಜನ ಅಂತೆ ಮಣೆಗಾರಂಗೆ ಪೈಸೆ ಕೊಟ್ಟು, ರಿಪೋರ್ಟ್ ಮಾಡುಸ್ಯೊಂಡು ಆರಾರ ಜಾಗೆಯ ತನ್ನದು ಹೇಳಿ ಮಾಡಿಗೊಂಡದು ತುಂಬ ಉದಾಹರಣೆ ಇದ್ದು. ಕೋರ್ಟಿಲ್ಲಿಯೂ ತಹಶಿಲ್ದಾರಂಗೆ ಪೈಸೆ ಕೊಟ್ಟರೆ ಬೇಕಾದ ಹಾಂಗೆ ತೀರ್ಪು ಕೊಟ್ಟುಗೊಂಡಿಕ್ಕು.ಹೀಂಗೆಲ್ಲ ಜಾಗೆ ಸುಲಭಲ್ಲಿ ಪ್ರಮುಖಂಗೆ ಜಾಗೆಯೇ ಹೋತು.  ಇವನೂ ಹಾಂಗೆ ಪಾಪದ ವಕೀಲನ ಹಿಡುದ ಕಾರಣ ಇವನ ಮಾತು, ಸತ್ಯ ಮುಚ್ಚಿಹೋತು. ಇದರೆಡೆಲ್ಲಿ ಪ್ರಮುಖನೂ ಸತ್ತು ಹೋದ. ಜಾಗೆ ತೆಕ್ಕೊಂಡೋನೂ ಸತ್ತು ಹೋದ. ಜಾಗೆ ತೆಕ್ಕೊಂಡೋನ ಮಕ್ಕೊಗೆ ಹೀಂಗೊಂಡು ಜಾಗೆಯ ಜಗಳ ಇತ್ತು ಹೇಳುವದು ಮತ್ತೆ ಆರ್‍ಓ ಹೇಳಿ ಗೊಂತಪ್ಪಗ ಜಾಗೆ ಕೈ ಬದಲಿಗೊಂಡು ಹೋಗಿತ್ತು. ಆದರೆ ಮಾವಿನ ಮರ ಮಾಂತ್ರ ಮೂಕಸಾಕ್ಷಿಯಾಗಿ ಈಗಳೂ ಇದ್ದು.

ಹೊಟ್ಟೆ

                                            ಹೊಟ್ಟೆ 
                ಗಣಪತಿಯನ್ನು ನಗೆಗಾರರೂ, ಪ್ರಾರ್ಥಿಸಿಯೇ ಮುಂದುವರಿಯುತ್ತಾರೆ. ಹೊಟ್ಟೆ ಕುಲುಕಿಸಿ ನಕ್ಕರೆ ಹೊಟ್ಟೆ ಹುಣ್ಣಾಗುವ ಅನುಭವ! ಮುಖದಲ್ಲಿ ಪ್ರಕಟಗೊಳ್ಳುವುದಾದರೂ ಹೊಟ್ಟೆಯ ಮೇಲೆ ಪ್ರಭಾವ! ದೊಡ್ಡ ಹೊಟ್ಟೆಯವರ ನಗು ನೋಡಿ ನಾವೂ ನಕ್ಕುಬಿಡುತ್ತೇವೆ.  ಚೌತಿಯಂದು ತಿಂದು ನಡೆಯಲಾರದೆ ಗಣಪತಿ ಒದ್ದಾಡುತ್ತಿದ್ದುದನ್ನು ಚಂದ್ರ ನೋಡಿ ನಕ್ಕದ್ದು ಪುರಾಣ ಕತೆಯಷ್ಟೆ. ಸ್ತ್ರೀ ವರ್ಣನೆಯಲ್ಲಿ, ಕವಿಗಳು ಮುಖ ಸರೋಜದ ಅಂದವನ್ನು ನೋಡಲಾಗದೆ ಹೊಟ್ಟೆ (ಬಡಬಡಾದಂತಿರ್ಕು) ತೆಳ್ಳಗಾಗಿತ್ತು ಎನ್ನುತ್ತಿದ್ದರು. ಸ್ತ್ರೀಯರ ಹೊಟ್ಟೆಯಲ್ಲಿ ತ್ರಿವಳಿಗಳಿದ್ದುವಂತೆ (ಮೂರು ಮಡಿಕೆಗಳು).ಬಾಣಂತನ ಮುಗಿಸಿದ ಹೆಂಗುಸರ ಹೊಟ್ಟೆ ಬೆನ್ನಿಗೆ ಅಂಟಿಕೊಳ್ಳುತ್ತಿತ್ತಂತೆ! ಪುರುಷರೂ ಸ್ವಲ್ಪ ಹೊಟ್ಟೆಯಿದ್ದರೇ ಸಭೆಯಲ್ಲಿ ಎದ್ದು ಕಾಣುತ್ತಾರೆ. ಆಗರ್ಭ ಶ್ರೀಮಂತಿಕೆ ಹೊಟ್ಟೆಯಿಂದಲೇ ಗೋಚರ! ತೆಳು ಹೊಟ್ಟೆಯವರು ತಿಂದರೂ,ಉಪವಾಸವಿದ್ದರೂ ತಿಳಿಯುವುದಿಲ್ಲ.
            ಆಹಾರ ಹೊಟ್ಟೆಗಿಳಿದಮೇಲೆ ಹೊಟ್ಟೆಯದೇ ಕಾರುಭಾರು!. ಈ ಯಂತ್ರ ಕೈಕೊಟ್ಟರೆ  ಆರೋಗ್ಯ ಕೆಡುತ್ತದೆ. ಹಿತ ಮಿತವಾಗಿ ತಿಂದುಂಡುಮಾಡಿದರೆ, ಪೋಷಕಾಂಶಗಳು ರಕ್ತಗತವಾಗಿ, ಎಲ್ಲಾ ಭಾಗಗಳಿಗೆ ರವಾನೆ. . ಹೊಟ್ಟೆಯೊಳಗಿನ  ಕಾರ್ಯಭಾಗವು ಹೆಚ್ಚು ಕಡಿಮೆಯಾದರೆ ಎಲ್ಲವೂ ಅಸ್ಥವ್ಯಸ್ಥ. ಅಜೀರ್ಣವಾದರೆ ಔಷಧಿ ಹೊಟ್ಟೆಗೆ. ನಿಯಂತ್ರಣ ಕೊಠಡಿ ಹೊಟ್ಟೆ.  ರುಚಿಯಾದುದನ್ನು ತಿನ್ನುವಾಗಲೂ ಪಚನ ಸಾಮರ್ಥ್ಯವನ್ನು ಹೊಂದಿಕೊಂಡು ಮಿತಿತಪ್ಪಿದರೆ ಅಜೀರ್ಣ. ಹಲ್ಲುಗಳಿಂದ ಪಚನಕ್ರಿಯೆ ಆರಂಭವಾಗಿ, ಪಚನಾಂಗಗಳ ಕೆಲಸ ಸರಿಯಾದರೆ ದೇಹ, ಮನಸ್ಸು ಹಗುರಾಗಿ,ಕೆಲಸಗಳಲ್ಲಿ ಉತ್ಸಾಹ! ಜೀರ್ಣಾಂಗಗಳ ಕೆಲಸ ಸಲೀಸಾಗಬೇಕಾದರೆ, ಮಧ್ಯಾಹ್ನ ಊಟದ ನಂತರ ಸ್ವಲ್ಪ ವಿರಾಮ ಬೇಕು. ಹಗಲು ನಿದ್ರೆ ಒಳ್ಳೆಯದಲ್ಲ. ರಾತ್ರಿ ಊಟದ ನಂತರ ಸ್ವಲ್ಪ ನಡೆಯಬೇಕು. ಮುಂದೆ ಕರುಳಿನ ಕೆಲಸ. ಆಗಾಗ ತಿನ್ನುವುದರಿಂದ ಜೀರ್ಣ ಕ್ರಿಯೆ ಏರುಪೇರಾಗುತ್ತದೆ. ಉಪವಾಸದಿಂದ ಹೊಟ್ಟೆ ಸರಿಯಾಗಿ ಚುರುಕಾಗುತ್ತವೆ. ಹಿಂದಿನವರು ಚಾಂದ್ರಾಯಣ ವ್ರತದಿಂದ ( ಹದಿನೈದು ದಿನಗಳಲ್ಲಿ  ಆಹಾರವನ್ನು ಕಡಿಮೆಗೊಳಿಸುತ್ತಾ ಕೊನೆಯ ದಿನ ನಿರಾಹಾರಿಯಾಗಿದ್ದು ಮರುದಿನದಿಂದ ಪ್ರಮಾಣ ಹೆಚ್ಚಿಸುತ್ತ ಹದಿನೈದನೇ ದಿನ ಪೂರ್ಣಾಹಾರ ತೆಕ್ಕೊಳ್ಳುವುದು) ಜೀರ್ಣಾಂಗಗಳು ಚುರುಕಾಗಿ ಹೊಟ್ಟೆ ಸರಿಯಾಗಿರುತ್ತದೆ. ರೋಗಕ್ಕೆ ಮದ್ದು ಮಾಡುವುದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದೇ ಜಾಣತನವಲ್ಲವೇ?
            ಅನ್ನವೇ ಜೀವನ. ಅನ್ನವೇ ಪ್ರಾಣ. ನಾಯಿ, ಹಂದಿಗಳಂತೆ ತುಂಬಿಸಿಕೊಂಡರೆ ಸಾಲದು. ಹೊಟ್ಟೆ ತುಂಬಿಸಿಕೊಳ್ಳಲು ದೇವರು ದುಡಿಮೆಯ ನ್ಯಾಯ ಮಾರ್ಗಗಳನ್ನೇ ತೋರಿಸಿಕೊಟ್ಟಿರುವಾಗ, ಹಾದಿತಪ್ಪಿ ಜೀವನದಲ್ಲಿ ಸ್ಪರ್ಧೆಯೇಕೆ?. ನಮ್ಮಂತೆಯೇ ಇತರರೂ ಬದುಕಬೇಕು. ಹಿಂದಿನವರ ಬದುಕು ನಮಗೆ ದಾರಿದೀಪ. ದ್ವಂದ್ವಗಳಿಗೆ ಸಿಲುಕಿ ಸುಲಭದಲ್ಲಿ ಹಣವಂತನಾಗಿ, ಮುಂದಿನವರಿಗೂ ಕೂಡಿಡಬೇಕೆಂಬ  ದುಸ್ಸಾಹಸ ಮಾಡಿ ಸಿಕ್ಕಿಬೀಳುವುದು; ಮತ್ತೆ ತಪ್ಪಿಸಿಕೊಳ್ಳಲು ಹೆಣಗುವುದು. ಇಂತಹ ಯೋಚನೆಗಳನ್ನೇ ಇಟ್ಟುಕೊಳ್ಳಬಾರದು. ನಾಗರಿಕತೆ ಮುಂದುವರಿದರೂ ಎಲ್ಲವೂ ಸ್ವಾರ್ಥಪರ. "ಲೋಕಾಸ್ಸಮಸ್ತಾ ಸುಖಿನೋಭವಂತು" ಎಂಬ ಧ್ಯೇಯವಾಕ್ಯ ಮರೆತು ಹೋದಂತಿದೆ. ದುಡಿಮೆ ಹೊಟ್ಟೆಗಾಗಿಯಾದರೂ "ಓದುವುದು ಶಾಸ್ತ್ರ ಇಕ್ಕುವುದು ಗಾಳ" ಎಂಬಂತಾಗಬಾರದು. ತನ್ನ ಅಪರಾಧಗಳಿಗೆ ಹೊಟ್ಟೆಯನ್ನು ದೂರುವುದೇಕೆ? ಬ್ರಹ್ಮಾಂಡವನ್ನೆ ಹೊಟ್ಟೆಯಲ್ಲಿಟ್ಟುಕೊಂಡ ಪರಮಾತ್ಮ  ಸೃಷ್ಟಿಸಿದ ಜೀವಿಗಳು ದುಡಿದು ತಿನ್ನುವುದಕ್ಕೂ ಅಂಗಾಂಗಳನ್ನು ಕೊಟ್ಟಿದ್ದಾನೆ. ದುಡಿತದಿಂದ ವ್ಯಾಯಾಮವೂ ಆಯಿತು; ಅನ್ನವೂ ಆಯಿತು.ದೈವದತ್ತವಾದ ಹೊಟ್ಟೆಗೆ ವ್ಯಾಯಾಮವನ್ನೂ ಕೊಟ್ಟರೆ ಹೆಚ್ಚು ಉಪಯೋಗವಾಗಬಲ್ಲುದು,ಎಂಬುದು ಅನುಭವದ ಮಾತು. ನಮ್ಮ ಉಸಿರಾಟ ನಿರಂತರ ಪ್ರಕ್ರಿಯೆಗೆ ಹೊಟ್ಟೆಯ ಉಪಯೋಗವಿದೆ. ನಿದ್ರೆಯಲ್ಲಿಯೂ ಹೊಟ್ಟೆ  ಉಬ್ಬುವಿಕೆ ಕುಗ್ಗುವಿಕೆಯಿಂದ ಉಸಿರಾಟ ಸುಗಮವಾಗಿರುತ್ತದೆ. ಅದಕ್ಕೆ ತಿನ್ನುವಾಗ ಉಸಿರಾಡಲು ಎಡೆಯಿರುವಷ್ಟಾದರೂ ಜಾಗ ಬಿಡಬೇಕು ಎನ್ನುತ್ತಾರೆ. ಮೂಗಿನವರೆಗೆ ತಿನ್ನುವುದು ಸರಿಯಲ್ಲ ಎಂದಿರುವುದು. ಭಸ್ತ್ರಿಕಾದಿಂದ,ಉಸಿರಾಟ ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ಪ್ರಾಣಾಯಾಮದಲ್ಲಿಯೂ ಉಸಿರನ್ನು ತಡೆಹಿಡಿಯಲು ಹೊಟ್ಟೆಯ ಸಹಾಯವಿದೆ. ಹಿಂದಿನವರ ಮಾತಿದೆ "ಮಾತು ಬಲ್ಲವನಿಗೆ ಜಗಳವಿಲ್ಲ: ಊಟಬಲ್ಲವನಿಗೆ ರೋಗವಿಲ್ಲ". ಹೊಟ್ಟೆಯ ಜೀರ್ಣಸಾಮರ್ಥ್ಯವನ್ನು ಅವರವರೇ ತಿಳಿದುಕೊಳ್ಳಬೇಕು. ಸಿಕ್ಕ ಸಿಕ್ಕಿದ್ದನ್ನು ಆಗಾಗ ತಿಂದು ಹೊಟ್ಟೆ ಹಾಳುಮಾಡಿಕೊಳ್ಳುತ್ತಾರೆ. ಮಕ್ಕಳಿಗೂ ಆಗಾಗ ತಿನ್ನಲು ಕೊಡುವುದು ಸರಿಯಲ್ಲ. ಹಿತಮಿತವಾಗಿ ತಿಂದುಂಡು,  ಹೊಟ್ಟೆಯ ಆರೋಗ್ಯ ಕಾಪಾಡಿಕೊಂಡರೆ, ಆರೋಗ್ಯ ಮತ್ತು ನೆಮ್ಮದಿಯಿಂದ ಜೀವನ ಸುಗಮ!

ಸಿಡಿ ಮದ್ದಿನ ಚಮತ್ಕಾರ


                                    ಸಿಡಿ ಮದ್ದಿನ ಚಮತ್ಕಾರ
                            ವಿಶೇಷ ಹಬ್ಬಗಳಲ್ಲಿ ಪಟಾಕಿ ಸಿಡಿಸಿ, ಅನಂದದಿಂದ ಮೈಮರೆತಾಗ ಒಮ್ಮೆಗೆ  ಮನಸ್ಸಿಗೆ ಖುಶಿಯಾಗಿ, ಚಿಂತೆಗಳನ್ನು ಮರೆಯುವಂತೆ ಮಾಡುತ್ತದೆ. ದೀಪಾವಳಿಯಂದು ಮನೆ ಮನೆಗಳಲ್ಲಿ ಮಾತ್ರ. ಬೆಲೆ ದುಬಾರಿಯಾಗಿರುವುದರಿಂದ,ಎಲ್ಲರೊಂದಾಗಿ ಸಿಡಿಸಿದರೆ ಖರ್ಚು ಹಂಚಿಹೋಗುತ್ತದೆ. ನಮ್ಮ ದೇಶದಲ್ಲಿ ಜಾತ್ರೆಗಳಂದು ದೇವರನ್ನು ಬೆಡಿಕಟ್ಟೆಯಲ್ಲಿಟ್ಟು, ಸಾಮೂಹಿಕವಾಗಿ ಸದ್ದನ್ನು ಕೇಳಿ ಖುಶಿ ಪಡುವುದರೊಂದಿಗೆ, ಭಯಂಕರ ಶಬ್ದಗಳು ಕಿವಿತಮ್ಮಟೆಯನ್ನು ಬಡಿದಾಗ ಆನಂದದೊಂದಿಗೆ ಮನಸ್ಸಿನ ಚಿಂತೆಗಳೂ ದೂರವಾಗಿ ನಾವು ಬೇರೆಯೇ ಲೋಕದಲ್ಲಿದ್ದಂತಾಗಿ,ಭಯಭೀತಿಗಳು ದೂರವಾಗುತ್ತವೆ. ಮಕ್ಕಳಿಗಂತೂ ಊರಜಾತ್ರೆಯಲ್ಲಿ ಹೆಚ್ಚಿನ ಖುಶಿ ಕೊಡುತ್ತದೆ. ಆದರೆ ಅಮೇರಿಕದಂತಹ ವಿದೇಶಗಳಲ್ಲಿ, ಸಾರ್ವಜನಿಕರನ್ನು ಖುಶಿಪಡಿಸಲು ವಿಶಿಷ್ಟ ದಿನಗಳಲ್ಲಿ ಮಾತ್ರ ಹೀಗೆ ಸಿಡಿಮದ್ದು ಸುಡುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಉಳಿದ ದಿನಗಳಲ್ಲಿ ಕೇಳುವುದಕ್ಕೇ ಸಿಕ್ಕುವುದಿಲ್ಲ. ಜುಲಾಯಿ ೪ರಂದು ಚೆಸ್ಟರ್ ಸ್ಪ್ರಿಂಗ್ ನ ಡೌನ್ ಟೌನ್ ಪಾರ್ಕಿನಲ್ಲಿ ಅಮೇರಿಕಾದ ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕದಲ್ಲಿ ಇಂತಹ ಸಿಡಿಮದ್ದಿನ ಕಾರ್ಯಕ್ರಮವಿತ್ತು. ವಿಶಿಷ್ಟ ರೀತಿಯಲ್ಲಿ ನಡೆದ ಕಾರ್ಯವಿಧಾನವನ್ನು, ಪ್ರತ್ಯಕ್ಷ ಸಾಕ್ಷಿಯಾಗಿ ನೋಡಿದ್ದೆ.
        ಮೊಮ್ಮಗ ಸಿಡಿಮದ್ದಿನ ವೈಭವ ನೋಡುವುದಕ್ಕಿಂತಲೂ  ನಡೆಯುತ್ತಿದ್ದ ಸವಾರಿಗಳನ್ನು ಮಾಡುವ ಅತುರದಲ್ಲಿದ್ದನು. ಬಹಳ ಬಿಸಿಲಿದ್ದುದರಿಂದ ಅವನ ಅವಸರಕ್ಕೆ ಮನೆಯಿಂದ ಹೊರಟರೂ, ಏನೋ ಖರೀದಿಗಳ ನೆಪ ಮಾಡಿಕೊಂಡು ಕೆಲವು ಮೋಲ್ ಗಳನ್ನು ಸುತ್ತಿ ಸಂಜೆ ೬ ಗಂಟೆಗೇ ತಲಪಿದ್ದೆವು. ವಾಹನ ಪಾರ್ಕ್ ಮಾಡಲು ಬಹಳ ದೂರಕ್ಕೆ ಜಾಗ ಸಿಕ್ಕಿದ್ದರಿಂದ ಸ್ವಲ್ಪ ದೂರ ನಡೆದೇ ಹೋದೆವು. ಜನಸಾಗರವೇ ಅಲ್ಲಿ ಸೇರಿದ್ದರೂ ಮಕ್ಕಳ ಸಂಖ್ಯೆಯೇನೂ ಕಮ್ಮಿಯಿರಲಿಲ್ಲ. ತಲಪಿದ್ದೇ ತಡ ಮೊಮ್ಮಗನ ಅವಸರವೇ ಅವಸರ! ಹತ್ತೆಂಟು  ದುಬಾರಿ ಸವಾರಿಗಳನ್ನು ಮಾಡಿ ಖುಶಿ ಪಟ್ಟ. ಮಕ್ಕಳಿಗೆ ಡಾಲರಿನ ಲೆಕ್ಕವಿದೆಯೇ? ಉಳಿದ ಮಕ್ಕಳು ಖುಶಿಪಡುವುದನ್ನು ನೋಡಿ ಅವರಿಗೂ ಆಸೆ ಹೆಚ್ಚುತ್ತದೆ. ಪರಿಚಯದ ಮಕ್ಕಳಿದ್ದರೆ ಕೇಳುವುದೇ ಬೇಡ. ಯಾರ್ಯಾರು ಎಷ್ಟೆಷ್ಟು ಸವಾರಿಮಾಡಿಕೊಂಡಿದ್ದೇವೆ ಎಂಬುದರ ಲೆಕ್ಕಾಚಾರ ಬೇರೆ. ಏಳೆಂಟು ವೇಗನ್ ಗಳ ಟ್ರೈನಿನಲ್ಲಿ ಮೊಮ್ಮಗನೊಬ್ಬನೇ ಸವಾರ! ಎತ್ತರದ ಜಾರು ಬಂಡಿಯಿಂದ ಜಾರಿದರೆ ಮೂರು ಡಾಲರ್! ಎರಡು ಬದಿಗಳಲ್ಲಿಯೂ ಹಲವು ಚೆಂಡುಗಳು. ಬಣ್ಣದ ಗುಂಡಿಗೆ ಬಿದ್ದರೆ ಐದು ಚೆಂಡು ಬಿಸಾಕಲು ೨ ಡಾಲರ್.ಬಣ್ಣದ ಗುಂಡಿಗೆ ಬಿದ್ದರೆ ಒಂದು ಬೊಂಬೆ ಬಹುಮಾನ. ದುಡ್ಡು ಕಳಕೊಂಡವರಷ್ಟೆ ಹೊರತು ಬಹುಮಾನ ನೂರರಲ್ಲಿ ಒಬ್ಬರಿಗೆ ಮಾತ್ರ ಸಿಗುತ್ತಿತ್ತು. ಹೀಗೆಲ್ಲ ಮಕ್ಕಳನ್ನು ಮರುಳುಗೊಳಿಸಿ ಹಣವನ್ನು ಸುಲಿಗೆ ಮಾಡುವ ಚತುರೋಪಾಯ ಅವರಲ್ಲಿತ್ತು. ಕರೆದೊತ್ದ ಮೇಲೆ ಮಕ್ಕಲು ಬಿಡುವರೇ? ಎಡೆಯಲ್ಲಿ ತಿನ್ನುವ ಚಪಲ ಬೇರೆ. ಬಿಸಿಲು  ಕಡಿಮೆಯಾಗದುದರಿಂದ ಬೆವರು ಮೈಯಿಂದ ಒಸರುತ್ತಿದ್ದರೂ, ಇನ್ನೊಮ್ಮೆ ಇಂತಹ ಸಂದರ್ಭ ಯಾವಾಗ ಬರುವುದೋ ಏನೋ! ಹೀಗೆಲ್ಲ ಮಕ್ಕಳನ್ನು ಖುಶಿಪಡಿಸಲು ಹೆತ್ತವರೂ ತುದಿಗಾಲಲ್ಲಿದ್ದಾರೆ. ನನ್ನ ಮಗನಿಗೆಮಾತ್ರ ಮೊಮ್ಮಗನನ್ನು ರಾತ್ರೆ ೯ ಗಂಟೆ ವರೆಗೆ ನಿಲ್ಲಿಸಲು ಮನಸ್ಸಾಗದೆ ಸಾಧ್ಯವದರೆ ಮತ್ತೆ ಬರುವುದೆಂದು ಯೋಚಿಸಿ ಮನೆಗೆ ಬಂದೆವು. ಫಯರ್ ವರ್ಕ್ಸ್ ನ ಲೆಕ್ಕದಲ್ಲಿ ಮುನ್ನೆಚ್ಚರಿಕೆಗಾಗಿ ಫಯರ್ ಎಂಜಿನ್ ಗಳೂ ಮಧ್ಯಾಹ್ನವೇ ಬಂದು ನಿಂತಿದ್ದುವು. ದಾರಿಯಲ್ಲಿ ನೋಡಿದರೆ ಅಸಂಖ್ಯಾತ ವಾಹನಗಳ ಸಾಲು ಕಾಣಸಿಕ್ಕಿತು. ರಾತ್ರೆಯ ಊಟ ಮುಗಿಸಿ ಒಂಬತ್ತು ಗಂಟೆಗೆ ಸರಿಯಾಗಿ, ಮತ್ತೆ ಅಲ್ಲಿಗೆ ಬಂದೆವು. ಆದರೆ ಸಿಡಿಮದ್ದು ಸುಡುವ ಜಾಗಕ್ಕೆ ಹೋಗಲು ಒಂದು ಮೈಲಿನಷ್ಟು ದೂರದಿಂದಲೇ ವಾಹನ ನಿಲ್ಲಿಸಬೇಕಾಗಿ ಬಂದುದರಿಂದ ಸಾಧ್ಯವಾಗಲಿಲ್ಲ.ಆದರೂ ಬಾನಂಗಳದಲ್ಲಿ ಸಿಡಿಮದ್ದಿನ ಚಮತ್ಕಾರವನ್ನು ನೋಡುವುದಕ್ಕೆ ಸಾಧ್ಯವಾಯಿತು. ಹತ್ತಿರ ಹೋಗುವುದು ಸರಿಯಲ್ಲ. ಒಂದರ್ಧ ಗಂಟೆ ಬಣ್ಣ ಬಣ್ಣದ ಚಿತ್ತಾರಗಳು ಪ್ರೇಕ್ಷಕರನ್ನು ನೋಡಿ ದಂಗುಪಡುವಂತಿದ್ದುವು.ನೇರವಾಗಿ ಆಕಾಶಕ್ಕೆ ನೆಗೆದ ಬಾಣವೊಂದು ಎತ್ತರ ತಲಪಿದಾಗ ಸಿಡಿಯುವುದರೊಂದಿಗೆ ಮಿನುಗಿದ ನಕ್ಷತ್ರಗಳಂತೆ ವೃತ್ತಾಕಾರವಾಗಿ ಬೀಳುವುದು, ಒಂದಷ್ಟು ಮೇಲೆಹೋಗಿ ಕೆಳಗೆ ನಿಧಾನವಾಗಿ ಬೀಳುವಾಗ ಗೊಚಲು ಗೊಂಚಲಾಗಿ ಶಾಖೆ ಉಪಶಾಖೆಗಳಾಗಿತೋರುವ ಬಣ್ಣ ಬಣ್ಣದ ಮರ ಮರದ ಗೆಲ್ಲುಗಳಂತೆಯೋ ಕಾಣಿಸುತ್ತಿತ್ತು. ಬಹಳ ಎತ್ತರದ ವರೆಗೆ ಹೋಗಿ ಅಲ್ಲಿ ಸಿಡಿದ ಪಟಾಕಿಗಳನ್ನುನೋಡಿ,ಸದ್ದು ಕೇಳಿ ಮೊಮ್ಮಗನಂತೂ ಕುಣಿದಾಡ ತೊಡಗಿದನು. ನವು ನಿಂತ ಜಗದಲ್ಲಿ ಬೇರೆ ಯಾರೂ ಇರಲಿಲ್ಲ. ಸ್ಥಳದಲ್ಲೇ ಇದ್ದ ಮಕ್ಕಳ ಕಿರಿಚಾಟಗಳು ಕೇಳಿದವರಿಗೇ ಗೊತ್ತು! ನಮ್ಮೂರಲ್ಲಾದರೆ ಬೆಡಿ ಜಾತ್ರೆಯಲ್ಲಿ ನೆಲ ಕದಿನ ವೆಲ್ಲ ಇರುತ್ತದೆ. ಕಡೆಗೊಮ್ಮೆ ಬಹಳ ದೂರದ ವರೆಗೆ ಕಟ್ಟಿದ ಮಾಲೆ ಪಟಾಕಿಗಳು, ಸರದಿಯಂತೆ ಸ್ಫೋಟಿಸಿದಾಗ ಕಿವಿತಮ್ಮಟೆಯೇ ಒಡೆದು ಹೋದಂತಾಗುತ್ತದೆ. ಅಂತೂ ವರ್ಷಕ್ಕೊಮ್ಮೆ ಮಾತ್ರ ಇಂತಹ ಸಮಾರಂಭಗಳು ನಗರ ಸಭೆಗಳ ಮೇಲ್ನೋಟದಲ್ಲಿ ನಡೆದರೆ, ಮತ್ತೆ ಈ ಸದ್ದು ಕೇಳಲು ಇನ್ನೊಂದು ವರ್ಷ ಕಾಯಬೇಕು.
                                   
                                                   

ಜೀವನ ಯಾತ್ರೆ


                            ಜೀವನ ಯಾತ್ರೆ.

        ರಾಮಣ್ಣ ಭಟ್ಟರು ಆ ಊರಲ್ಲಿ ದೊಡ್ಡ ಕುಳ. ಹೆಚ್ಚಿನ ಶ್ರೀಮಂತರಲ್ಲದಿದ್ದರೂ ಉಟ್ಟುಣುವುದಕ್ಕೆ ತೊಂದರೆಯಿರಲಿಲ್ಲ. ಮೂವರು ಹೆಣ್ಣು ಮಕ್ಕಳಾದ ಮೇಲೆ ಅಪರೂಪಕ್ಕೆ ಭಟ್ಟರ ಅಪೇಕ್ಷೆಯಂತೆ ಗಂಡು ಮಗುವಾಗಿತ್ತು. ಗಂಡು ಮಗುವಾದ ಮೇಲೆ ಭಟ್ಟ್ರಿಗೆ ಸ್ವರ್ಗಕ್ಕೆ ಮೂರೇ ಗೇಣು ಬಾಕಿಯೆಂಬತ್ತಾಗಿತ್ತು. ಮಗುವನ್ನು ಕೆಳಗಿಟ್ಟರೆ ಇರುವೆ ಕಚ್ಚಬಹುದು; ಮೇಲಿಟ್ಟರೆ ಕಾಗೆ ಕೊಂಡೊಯ್ಯಬಹುದೆಂದು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಮಗನನ್ನು ಮೊದ್ದು ಮಾಡುವ ಗೌಜಿಯಲ್ಲಿ ಮನೆಯೊಳಗೇ ಇರುತ್ತಿದ್ದರು. ಆಸ್ತಿಯನ್ನು ನೋಡಿಕೊಳ್ಳಲು ಆಳು ಕಾಳುಗಳಿದ್ದುದರಿಂದ ಅವರಿಗೆ ಕೆಲಸ ಹೇಳಿಬಿಟ್ಟರೆ ಆಗಬೇಕಾದ ಕೆಲಸವನ್ನು ಇವರ ಮೇಲ್ತನಿಖೆಯಿಲ್ಲದೆ ಅವರೇ ಮಾಡಿಕೊಡುತ್ತಿದ್ದರು. ಮೂವರು ಅಕ್ಕಂದಿರು, ಅಪ್ಪ,ಅಮ್ಮ ಹೀಗೆ ಎಲ್ಲರೂ ಮಗುವನ್ನು ಕೆಳಗಿಡದೆ ಎತ್ತಿಕೊಂಡು ಓಲೈಸುತ್ತಿದ್ದರು. ಮಗನೇ ನಡೆದಾಡತೊಡಗಿದ ಮೇಲೆ ಮಾತ್ರ ಎತ್ತಿಕೊಳ್ಳಬೇಕಾಗಿರಲಿಲ್ಲ. ಎಲ್ಲರ ಅಕ್ಕರೆಯಿಂದ ಬೆಳೆದ ಮಗ ಅಂಬೆಗಾಲಿಕ್ಕಿನಡೆಯತೊಡಗಿದವ ಆಚೀಚೆ ಓಡಾಡತೊಡಗಿದ. ಮಗ ನಡೆದಾಡಿದರೆ ಸವೆದು ಹೋದಾನು ಎಂಬಷ್ಟು ಮುದ್ದಿನಿಂದ ಹೊರಹೋಗುವಾಗ ಎತ್ತಿಕೊಂಡೇ ಹೋಗುತ್ತಿದ್ದರು ಭಟ್ಟರು. ಭಟ್ಟರ ಕುಟುಂಬ ಮತ್ತೆ ಬೆಳೆದು ಎರಡು ಹೆಣ್ಣು ಮಕ್ಕಳನ್ನೂ ಲೆಕ್ಕಕ್ಕೆ ಸೇರಿಸಿಕೊಂಡಿತ್ತು.ಗಂಡು ಮಗನ ಅಕ್ಕಂದಿರಿಗೆಲ್ಲ ಯೋಗ್ಯ ಹುಡುಗರು ಸಿಕ್ಕಿ ವಿವಾಹವೂ ಆಗಿ ಗಂಡನ ಮನೆ ಸೇರಿದ್ದರು.  ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮಗ ಸೈಕಲಿನಿಂದ ಬಿದ್ದು ಕಾಲು ಮುರಿದುಕೊಂಡಿದ್ದ.ಒಂದು ತಿಂಗಳು ಕಾಲ ಭಟ್ಟರು ಮಗನನ್ನು ಮನೆಯೊಳಗೇ ಆಚೀಚೆ ಎತ್ತಿಕೊಂಡೇ ಹೋಗಬೇಕಾಗಿತ್ತು. ಯಸ್ ಯಸ್ ಯಲ್ ಸಿ ಮುಗಿದಮೇಲೆ ಮುಂದೆ ಕೋಲೇಜಿಗೆ ಹೋಗುವುದಕ್ಕಿಂತ ತಾನು  ಖಾಸಗಿಯಾಗಿ  ಚೆನ್ನೈಯಲ್ಲಿ ಎಂಜಿನೀಯರ್ ವಿದ್ಯಾಭ್ಯಾಸ ಮಾಡುವೆನೆಂದು ಹೊರಟೇ ಬಿಟ್ಟನು. ಮಗನ ಹಟದ ಮುಂದೆ ತನ್ನ ಮಾತು ನಡೆಯಲಾರದೆಂದು ಅವನ ಅಪೇಕ್ಷೆಯಂತೆ ಚೆನ್ನೈಗೆ ಹೋಗಲು ಖರ್ಚಿಗೆ ಕೊಟ್ಟು ಕಳಿಸದೇ ನಿರ್ವಾಹವಿರಲಿಲ್ಲ.
    ಚೆನ್ನೈಗೆ ಹೋದವ ಒಂದು ವರ್ಷ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ ಮತ್ತು ಒಳ್ಳೆಯ ಮಾರ್ಕೂ ಸಿಕ್ಕಿತ್ತು. ಭಟ್ರಿಗೆ ನೆಮ್ಮದಿಯಾಗಿತ್ತು. ಎರಡನೆಯ ವರ್ಷಕ್ಕೆ ಕಾಲಿಕ್ಕಿದ ಮೇಲೆ ಅವನ ಜೀವನ ರೀತಿಯೇ ಬದಲಾಯಿತು. ಕೇಳಿದಷ್ಟು ಹಣ ಕೈಗೆ ಬರುತ್ತಿದ್ದುದರಿಂದ ಅವನಿಗೆ ತಲೆಬಿಸಿಯಿಲ್ಲ. ಮೋಜಿನ ಜೀವನಕ್ಕೆ ಮರುಳಾಗಿ ಸಿಗರೇಟ್ ಸೇದುವುದು ಮೊದಲಾದ ಚಟಗಳು ಸುರುವಾದುವು. ತರಗತಿಗೆ ಹೋಗುವುದು ಯಾವಾಗಲಾದರೊಮ್ಮೆ ಹೋದರೂ ಆಯಿತು; ಅಥವಾ ಹೋಗದಿದ್ದರೂ ಆಯಿತು. ಎಲ್ಲ ಪತ್ರ ವ್ಯವಹಾರದ ಮೂಲಕ ಹಣ ಬೇಕಾದಷ್ಟು ತರಿಸಿಕೊಂಡು ಮಜ ಮಾಡತೊಡಗಿದ. ಕ್ಲಾಸಿಗೆ ಹೋಗದೆ ಅಲ್ಲಿಲ್ಲಿ ತಿರುಗಾಡುತ್ತಿರುವಾಗ ಒಂದು ಹುಡುಗಿಯ ಪರಿಚಯವಾಯಿತು. ಭೇಟಿ ಸ್ನೇಹಕ್ಕೆ ನಾಂದಿಯಾಯಿತು. ಸ್ನೆಹಪಾಶ ಮುಂದುವರಿದು ಪ್ರೇಮಕ್ಕೆ ಅಂಕುರವಾಯಿತು. ಇದಾವ ಸುದ್ದಿಯೂ ಭಟ್ರಿಗೆ ಗೊತ್ತಾಗುವುದು ಹೇಗೆ? ಅವರು ಪರ ಬಂದೊಡನೆ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಹಣ ಕಳಿಸುತ್ತಲೇ ಇದ್ದರು. ಕೇಳಿದಷ್ಟಲ್ಲ.ದೂರದೂರಲ್ಲಿ ಖರ್ಚಿಗಿಲ್ಲದೆ ಮಗ ಸೋತುಹೋಗಬಾರದೆಂದು ಸ್ವಲ್ಪ ಹೆಚ್ಚಾಗಿಯೇ ಕಳಿಸುತ್ತಿದ್ದರು. ಹಣ ಬಂದುದೆಲ್ಲವೂ ಪ್ರೇಮಿಯೊಡನೆ ಸುತ್ತಾಡುವುದಕ್ಕೆ, ಅವಳಿಗೆ ಬೇಕಾದುದನ್ನು ತೆಗೆದುಕೊಡುವುದಕ್ಕೆ ಖರ್ಚಾಗುತ್ತಿತ್ತು.ಮಗನು ತಪ್ಪು ಹಾದಿಯಲ್ಲಿ ಮುಂದುವರಿಯುತ್ತಿರುವುದನ್ನು ಭಟ್ಟರಿಗೆ ಹೇಳುವವರು ಯಾರು? ಮಗನು ಇನ್ನೆರಡು ವರ್ಷಗಳಲ್ಲಿ ಏ ಯಂ ಐ ಈ ಮುಗಿಸಿ ಇಂಜಿನೀಯರ್ ಅಗಿ ಬರುವನೆಂದು ಹಗಲುಗನಸು ಕಂಡಿಕೊಂಡು ಭಟ್ಟರಿದ್ದರು.
        ಹೇಗೋ ಏನೋ ಯಾರ ಮೂಲಕವೋ ಭಟ್ಟರಿಗೆ ಮಗ ಕಾಲೇಜಿಗೆ ಹೋಗದೆ ತಿರುಗಾಡುತ್ತಿರುವ ಸುದ್ದಿ ತಲಪಿದರೂ ಅವರು ನಂಬಿರಲಿಲ್ಲ. ಮತ್ತೊಮ್ಮೆ ಊರಿಗೆ ಬಂದ ಮಗ ತಾನು ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ. ಹೇಗಿದ್ದರೂ ಕಲಿತು ಉದ್ಯೋಗ ಸಿಕ್ಕಿದರೂ ತಾನೇ ಮನೆಯಲ್ಲಿರಬೇಕಾಗುವುದಲ್ಲ. ಮದುವೆ ಮಾಡಿಕೊಂಡು ಹಾಯಾಗಿರುತ್ತೇನೆ. ಮಡ್ರಾಸ್ ನಲ್ಲಿ ಒಂದು ಹುಡುಗಿಯನ್ನು ನೋಡಿದ್ದೇನೆ.  ಇಷ್ಟವಾಗಿದೆ. ಮದುವೆಯಾಗುವೆನೆಂದು ಮಾತು ಕೊಟ್ಟಿದ್ದೇನೆ. ಒಮ್ಮೆ ನೀವೂ ನನ್ನೊಡನೆ ಬನ್ನಿ. ತಿರುಪತಿಯಲ್ಲೇ ಮದುವೆಯಾಗಬೇಕೆಂದು ಹುಡುಗಿ ಇಷ್ಟ ಪಟ್ಟಿದ್ದಾಳೆ. ಅದಕ್ಕೆ ಒಮ್ಮೆ ಭಾವಂದಿರನ್ನೂ ಕೂಡಿಕೊಂಡು ಹೋಗುವ ಎಂದುಬಿಟ್ಟ. ಭಟ್ಟರಿಗೆ ಒಮ್ಮೆಲೇ ಶೋಕ್ ಬಡಿದಂತಾಯಿತು. ತಾನು ನೆನೆಸಿದ್ದೇನು! ಆಗಿರುವುದೇನು? ಎಲ್ಲವೂ ಅಯೋ ಮಯವಾಗಿತ್ತು,. ವಿರೋಧಿಸಿದರೂ ಕೇಳುವವನಲ್ಲ. ಅಪ್ಪನ ಮಾತು ಅಮ್ಮನ ಮಾತೂ ಅವನಿಗೆ ಬೇಡ.ಎಳವೆಯಿಂದಳೆ ತನ್ನ ಹಟವನ್ನು ಸಾಧಿಸಿಕೊಂಡು ಬಂದವ.ಅಥವಾ ಈ ವರೆಗೆ ಮಗ ಕಾಲಿನಲ್ಲಿ ತೋರಿಸೊಇದ್ದನ್ನು ಕೈಯಲ್ಲಿ ಎತ್ತಿ ಕೊಟ್ಟವರು ಭಟ್ಟರು. "ಇನ್ನೂ ಸಣ್ಣ ಪ್ರಾಯ ನಿನಗೆ. ಇಲ್ಲೇ ಊರಿನಲ್ಲೆ ಚಂದದ,ನಿನಗೆ ಇಷ್ಟವಾದ ಹುಡುಗಿಯನ್ನು ಹುಡುಕಿ ಮದುವೆ ಮಾಡಿಸುತ್ತೇನೆ" ಎಂದರೂ ಮಗ ಒಪ್ಪಿದರೆ ತಾನೆ! ಮಗನ ಹಟವೇ ಗೆದ್ದಿತು. ತಿರುಪತಿಯಲ್ಲೆ  ಮದುವೆಯೂ ನಡೆಯಿತು. ಮಗ ಸೊಸೆಯರನ್ನು ಮನೆತುಂಬಿಸಿಕೊಂಡೂ ಅಯಿತು. ಸೊಸೆಗೂ ಅವಳ ಮನೆದೇವರೇ ತಿರುಪತಿ ವೆಂಕಟೇಶನೆಂದು ಒಂದು ಬದಿಯಲ್ಲಿ ಮಾವನ ಪೂಜೆ ನಡೆಯುತ್ತಿರುವಗಲೆ ವೆಂಕಟೇಶನ ಪೂಜೆ ನಡೆಯುತ್ತಿತ್ತು. ಹೆಚ್ಚು ಆರೋಗ್ಯವಿಲ್ಲದ ಅತ್ತೆ ಸೊಸೆ ಬಂದಮೇಲೆ ತುಸು ಆರಾಮ ಸಿಗಬಹುದು ಎಂದು ಯೋಚಿಸಿದ್ದರು. ಅದರೆ ಅವಳಿಗೋ ಅವಲ ಪೂಜೆ ಪುನಸ್ಕಾರಗಳ ಮಧ್ಯೆ ಊಟ ತಿಂಡಿ ತಯಾರಿಸಲು ಸಮಯವಿಲ್ಲ. ಉಳಿದವರಿಗೆ ಬೇಕಿದ್ದರೆ ಅತ್ತೆಯೇ ಮಾಡಿಕೊಡಬೇಕಾಗಿತ್ತು. ಏನೋ ಬಾಯಿತಪ್ಪಿನಿಂದ ಮಾತಾಡಿದ್ದಕ್ಕೆ ಸೊಸೆಯಿಂದಎದುರುತ್ತರವು ಬಂದಿತ್ತು. ಅತ್ತೆ ಬಾಯಿ ಮುಚ್ಚಿ ಸುಮ್ಮಗಾದರೂ ಸೊಸೆ ಬಿಡಬೇಕೇ? ಗಂಡನನ್ನು ಮನೆ ಬಿಟ್ಟು ಪೇಟೆಯಲ್ಲಿ ವಾಸಮಾಡುವುದೇ ಪರಿಹಾರವೆಂದು ಪೀಡಿಸತೊಡಗಿದಳು. ಹೆಂಡತಿಯ ತಾಳಕ್ಕೆ ಕುಣಿಯಹೊರಟ ಮಗ ಹಳ್ಳಿವಾಸ ಬಿಟ್ಟು ಪೇಟೆಯಲ್ಲೇ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡತೊಡಗೊದ. ಒಬ್ಬನೇ ಮಗನೆಂದು ಮುದ್ದು ಮಾಡಿಬೆಳೆಸಿದ ಅಪ್ಪ ಮಗನಿಗೆ ಕೇಳಿದಂತೆ ಖರ್ಚಿಗೆ ಕೊಡುವಂತಾಯಿತು. ಭಟ್ರು ಉಳಿದಿಬ್ಬರು ಹೆಣ್ಣು ಮಕ್ಕಳನ್ನೂ ನಿಭಾಯಿಸಿಕೊಂಡು ಹಳ್ಳಿಯಲ್ಲೇ ಉಳಿದರು.
        ಈ ಮಧ್ಯೆ ಎನೊ ಸಣ್ನ ಕೆಲಸವನ್ನೂ ಮಾಡಿಕೊಂಡು, ಮನೆಯಿಂದಲೂ ಕರ್ಚಿಗೆ ಅಪ್ಪನಿಂದ ಪಡಕೊಂಡು ಜೀವನ ಸಾಗುತ್ತಿರುವಾಗ ಮೊಮ್ಮಕ್ಕಳೂ ಆದರು. ಅಜ್ಜ ಅಜ್ಜಿಗೆ ಮಾತ್ರ ಊರಿಗೆ ಬಂದಾಗ ಮೊಮ್ಮಕ್ಕಳನ್ನು ಕಾಣಬಹುದಿತ್ತು. ಆಗಾಗ ಹೀಗೆ ಖರ್ಚಿಗೆ ಕೊಂಡುಹೋಗುವುದರ ಬದಲು,ತನ್ನ ಪಾಲಿನ ಆಸ್ತಿಯನ್ನೆ ಕೇಳಿದ ಮಗ. ಅದರೆ ಭಟ್ರು ,ತಮ್ಮ ಜೊತೆಯಲ್ಲೇ ಇರಲು ತೊಂದರೆಯಾಗುವುದಿದ್ದರೆ ತಾನು ಇನ್ನೊಂದು ಅಸ್ತಿಯಲ್ಲಿದ್ದ ಚಿಕ್ಕ ಮನೆಯನ್ನು ದುರಸ್ತಿಗೊಳಿಸಿಕೊಂಡು ವಾಸಮಾಡುವೆನೆಂದೂ ಮಗ ದೊಡ್ಡದಾಗಿರುವ ಮನೆಯಲ್ಲೇ ವಾಸಮಾಡಿಕೊಂಡು,  ಮನೆ ಹತ್ತಿರದ ಆಸ್ತಿಯನ್ನೂ ನೋಡಿಕೊಂಡು ಬರುವುದೆಂದೂ ಒಪ್ಪಂದವಾಯಿತು.ಜೊತೆಗೆ ಆ ಮನೆ ಆಸ್ತಿ ಮಗನ ಪಾಲಿನ ರೂಪ್ಪದ್ದೇ ಎಂದು ರಿಜಿಸ್ತ್ರಿ ಮಾಡಿದರು. ಅಗ ತಾನೆ ಹುಟ್ಟಿದ್ದ ಮಗನೂ ಸೇರಿ ಐದು ಜನರ ಕುಟುಂಬ ಮಗನದಾಗಿತ್ತು. ಆದರೆ ಹಳ್ಳಿಯಲ್ಲಿ ಇರುವುದಕ್ಕೆ ಒಪ್ಪದ ಸೊಸೆ "ನೀವು ಬೇಕಾದರೆ ಇಲ್ಲಿರಿ; ನಾನು ಮಕ್ಕಳೊಂದಿಗೆ ಪೇಟೆಯಲ್ಲೆ ಇರುವೆ"ನೆಂದು ಹಟಮಾಡಿದ್ದರಿಂದ ತಾನು ಕೂಡಾ ಬರುವೆನೆಂದು  ಆಸ್ತಿಯನ್ನು ಮಾರಿಬಿಡುವ ಎಂದು ಹೊರಟನು. ಮಗ ಆಸ್ತಿಯನ್ನು ಮಾರುವುದು ಭಟ್ರಿಗೆ ಸುತರಾಂ ಇಷ್ಟವಾಗಲಿಲ್ಲ.ನಿಜಕ್ಕಾದರೂ ಮಗನು ಆಸ್ತಿಯನ್ನು ಮಾರಿಬಿಟ್ಟಾನು ಎಂಬ ಸಂದೇಹದಿಂದ ಆಸ್ತಿಯನ್ನು ಮನೆದೇವರ ಹೆಸರಿಗೆ ಮಾಡಿಟ್ಟಿದ್ದರಿಂದ ಅದನ್ನೇ ಆಧಾರವಾಗಿ ಪತ್ರಿಕೆಯಲ್ಲಿ ಮಗನಿಗೆ ಆಸ್ತಿ ಮಾರುವ ಹಕ್ಕಿಲ್ಲ' ಎಂದು ಹೇಳಿಕೆ ಕೊಟ್ಟರು. ಆಸ್ತಿ ಕೊಳ್ಳಲು ಗಿರಾಕಿ ಬರಲಿಲ್ಲ. ಕಡೆಗೆ ಮಗನಿಗೆ ಒಂದಷ್ಟು ಹಣ ಕೊಟ್ಟು,ತಾನೇ ಮನೆಯಲ್ಲಿ ವಾಸಮಾಡಹೊರಟರು. ಅದಾಗಲೇ ಮಗ ಮನೆಯೊಳಗಿನ ಮತ್ತು ತೋಟದಲ್ಲಿದ್ದ ಬೆಲೆ ಬಾಳುವ ಮರಗಳನ್ನೂ ಮಾರಿಯಾಗಿತ್ತು. ಕೂತುಣ್ಣುವವರಿಗೆ ಕುಡುಕೆ ಹಣ ಸಾಲುತ್ತೇ?ಹೀಗೆ ಒಂದೆರಡು ವರ್ಷಗಳಲ್ಲಿ ಭಟ್ರು ಹಾಸಿಗೆ ಹಿಡಿದರು. ವಯಸ್ಸೂ ಆಗಿತ್ತಲ್ಲವೇ? ಮನೋ ವೇದನೆಯು ಇತ್ತು. ಅವರೂ ತನ್ನ ಮದುವೆಯಾದೊಡನೆ ತನ್ನ ಅಪ್ಪನಲ್ಲಿ ತಾನು ಬೇರೆಯಿರುವೆನೆಂದು ಪಾಲು ಕೇಳಿದ್ದಕ್ಕೆ ಕೋಪದಿಂದ ಅವರ ಅಪ್ಪ ಹೇಗಾದರೂ ಇವರನ್ನು ಸಾಗಹಾಕಲು ಒಂದಿಷ್ಟು ಭೂಮಿಯನ್ನು ಕೊಟ್ಟು ಹೊರಮಾಡಿದ್ದರು. ಅದರೆ ಭಟ್ರು ಅಪ್ಪ ಕೊಟ್ಟ ಸಣ್ಣ ಭೂಮಿಯನ್ನೇ ಪ್ರಸಾದವೆಂದು ಸ್ವೀಕರಿಸಿ ಕಷ್ಟಪಟ್ಟು ದುಡಿದು ಅಭಿವೃದ್ಧಿಮಾಡಿದ್ದರು.ಊರಲ್ಲಿ  ಸ್ವಪ್ರಯತ್ನ ದಿಂದಲೇ ಶ್ರೀಮಂತರೆನಿಸಿದ್ದರು. ಆದರೆ ದೈವ ಸಂಕಲ್ಪ ಹೀಗಾಯಿತು. ಏನೋ ತನ್ನ ನಂತರಕ್ಕೆ ಮಗ ಇದ್ದ ಆಸ್ತಿಯನ್ನು ವೃದ್ಧಿಮಾಡಿಕೊಂಡು ತಲೆಯೆತ್ತಿಕೊಂಡುಹಳ್ಳಿಯಲ್ಲೇ ಇರಬೇಕೆಂಬ ತನ್ನ ಕನಸು ನೆನಸಾಗಲಿಲ್ಲ. ಕೊನೆಗೂ ಭಟ್ಟರು ಚಿಂತೆಯಲ್ಲಿಯೇ ಕೊನೆಯುಸಿರೆಳೆದರು. ಭಟ್ರ ಉತ್ತರಕ್ರಿಯಾದಿಗಳನ್ನು ಮುಗಿಸಿ ಮಗ ಪೇಟೆಗೇ ಹೋದನು. ಮನೆಯಲ್ಲಿ, ಮುದುಕಿ ತಾಯಿ ಇಬ್ಬರು ತಂಗಿಯಂದಿರು ಮಾತ್ರ. ಯಾರೋ ಒಬ್ಬ ಗಿರಾಕಿ ಸಿಕ್ಕಿ ಆಸ್ತಿಯನ್ನೂ ಮಾರಾಟ ಮಾಡಿಯೂ ಆಯಿತು. ಈಗಂತೂ ಅವನಿಗೆ ಎದುರು ಮಾತಾಡುವವರಿಲ್ಲ.  ಆದರೆ ತಾಯಿಯ ಕಡೆಯವರು ಅಮ್ಮನ ಒದ್ದಾಟಿ ನೋಡಿ ಅವರ ಮನೆಗೇ ಕರಕೊಂಡು ಹೋದರು. ತಂಗಿಯಂದಿರು ವಿದ್ಯಾರ್ಥಿ ಭವನದಲ್ಲಿ ಕಲಿಕೆ ಮುಂದುವರಿಸಿದರು.ಅವರ ಭಾಗ್ಯದಿಂದ ಒಳ್ಳೆಯ ಸಂಬಂಧವೊದಗಿ ಬಂದು ಮದುವೆಯೂ ನಡೆಯಿತು. ತಾಯಿ ಮಾತ್ರ ಕೊರಗಿನಲ್ಲಿಯೇ ಕೊನೆಯುಸಿರೆಳೆದರು.
        ಪೇಟೆಯಲ್ಲಿ ಸ್ವಂತ ಮನೆ ಮಾಡಿಕೊಂಡ ,ಮಗನೋ ಈಗಾಗಲೇ ದುರಭ್ಯಾಸಗಳ ದಾಸನಾಗಿದ್ದ. ಮನೆಗೆ ಬಂದರೆ ಹೆಂಡತಿಯೂ ಒಳಸೇರಿಸುತ್ತಿರಲಿಲ್ಲ. ಹೊರಗೇ ಮಲಗಬೇಕಾಯಿತು. ಇದ್ದ ಹಣವೆಲ್ಲ ಆಕೆಯ ಹೆಸರಿನಲ್ಲಿತ್ತು. ಚಿಲ್ಲರೆ ಕಾಸಿಗು ಹೆಂಡತಿಯನ್ನು ಬೇಡುವ ಪರಿಪಾಟ ಮುಂದುವರಿಯಿತು. ಭೂ ವ್ಯವಹಾರದಿಂದಲೋ, ಮನೆ ಕಟ್ಟಿಕೊಡುವ ಮೂಲಕವೋ ಅಲ್ಪ ಸ್ವಲ್ಪ ಸಂಪಾದಿಸುತ್ತಿದ್ದುದು ಕುಡಿಯುವ ಚಟ ಬಲವಾಗಿ ಸಿಕ್ಕಿದ ಆದಾಯವೆಲ್ಲ ಶರಾಬು ಅಂಗಡಿಗೇ ಹೋಗುತ್ತಿತ್ತು.

Wednesday, July 4, 2012

ಜೀವ ಜೀವನ ಪಾಠ


                                ಒಂದು ಜೀವನ ಪಾಠ
           
                        ಜೀವನ ನಮಗೆ ಅನೇಕ ಹೊಸ ಅನುಭವಗಳೊಂದಿಗೆ ಕೆಲವು ಪಾಠಗಳನ್ನು ಕಲಿಸುತ್ತದೆ. ಕಲಿಕೆಯೆಂಬುದು, ನಿರಂತರವಾಗಿರುತ್ತದೆ. ಬಾಳನುದ್ದಕ್ಕೂ ಕಲಿತುಕೊಳ್ಳುವ ಪಾಠಗಳು, ಮುಂದಕ್ಕೆ ನಮಗೆ ಎಚ್ಚರವಿರುವ ಸಂದೇಶವನ್ನು ಕೊಡುತ್ತದೆ. ಒಮ್ಮೆ ಆದ ಅನುಭವ  ನಾವು ಎಚ್ಚರದಲ್ಲಿದ್ದರೆ,ಮತ್ತೊಮ್ಮೆ ಸೋಲಲು ಬಿಡುವುದಿಲ್ಲ. ನಡೆಯುವಾಗ ಎಡಹುವುದು ಸಾಮಾನ್ಯ. ಎಡವಿದ ಕಾಲಿಗೇ ಮತ್ತು ಮತ್ತೂ ಎಡವುತ್ತಲೇ ಇರುವುದೂ ಇದೆ. ಆದರೆ ಎಚ್ಚರವಾಗಿದ್ದರೆ ಮತ್ತೆ ಎಡವಿದಾಗ ಹೆಚ್ಚು ನೋವಿನ ಅನುಭವಕ್ಕೆ ಗುರಿಯಾಗುವುದಿಲ್ಲ.ನಡೆಯದೆ ಸುಮ್ಮಗೇ ಇದ್ದರೆ ಎಡವಲಾರದು. ನಿಂತ ನೀರಾಗದೆ ಹರಿಯುತ್ತಿರುವ ಪ್ರವಾಹ ಕೆಲವೊಮ್ಮೆ ಅಡೆ ತಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅಲ್ಲೆ ನಿಲ್ಲದೆ ಬೇರೊಂದು ದಾರಿಯನ್ನು ಹುಡುಕಿಕೊಂಡು ಪ್ರವಾಹ ಮುಂದುವರಿಯಬೇಕಾಗುತ್ತದೆ. ಒಮ್ಮೆಯಾದ ಸೋಲಿನಿಂದ ಕಂಗೆಟ್ಟರೆ, ಮತ್ತೆ ಮುಂದೆ ಹೋಗುವುದು ದುಸ್ಸಾಧ್ಯ. ಅಂಜದೆ ಅಳುಕದೆ ಸೋಲನ್ನು  ಪಂಥವಾಗಿ ತೆಕ್ಕೊಂಡರೆ ಧೈರ್ಯ ತಾನಾಗಿ ಬರಲೇಬೇಕು. ಒಮ್ಮೆ ನನ್ನ ಗೆಳೆಯರೊಬ್ಬರು  ಆಗ ತಾನೆ ಅಧ್ಯಾಪಕ ವೃತ್ತಿಗೆ ಕಾಲಿರಿಸಿದವರು, ಆರಂಭದಲ್ಲೇ ತಾನು ಕೆಲಸ ಮಾಡುತ್ತಿದ್ದ ಶಾಲೆಯ ಇತರ ಅಧ್ಯಾಪಕರಿಂದ ಹೇಗೆ ವೃತ್ತಿ ಮತ್ಸರದ  ಪಾಠ ಕಲಿತರೆಂಬುದನ್ನು ಹೇಳ ಹೊರಟಿದ್ದೇನೆ. ಅಲ್ಲೊಂದು ಅಧ್ಯಾಪಕ ಹುದ್ದೆ ಖಾಲಿಯಿದೆಯೆಂದು ಗೊತ್ತಾಗಿ ಸ್ವಲ್ಪ ದೂರವಾದರೂ ಹೋಗಿ ಸೇರಿದರು. ಹೊಸತಾಗಿ ಬಂದವರಿಗೆ ಆರಂಭದಲ್ಲಿ ಉಳಿದವರಿಂದ ಸ್ವಾಗತವೇನೋ ಸಿಕ್ಕಿತು. ನನ್ನ ಗೆಳೆಯರೋ ಅದೇ ತಾನೆ ವೃತ್ತಿಗೆ ಹೊಸಬರು. ಮತ್ತು ಉಳಿದವರಿಂದ ಸೈ ಎನಿಸಿಕೊಳ್ಳಬೇಕೆಂಬ ಹುಮ್ಮಸ್ಸು ಬೇರೆ. ಅವರಿಗೆ ಒಂದು ಕ್ಲಾಸಿನ ಪೂರ್ಣ ಜವಾಬ್ದಾರಿಯೂ ಜೊತೆಗೆ ಇನ್ನೊಂದು ಕ್ಲಾಸಿನ ಒಂದು ಪಾಠವೂ ಕೊಡಲ್ಪಟ್ಟಿತು. ಆರಂಭದ ಶೂರತನಕ್ಕೆ ಹೊರಟೇಬಿಟ್ಟರು. ಮಕ್ಕಳಿಗೋ ಇವರೆಂದರೆ ಬಹಳ ಗೌರವ. ಹೇಳಿದ ಪಾಠಗಳನ್ನು ಕಲಿತು ಒಪ್ಪಿಸುತಿದ್ದವರೇ ಹೆಚ್ಚು. ಸಾಕಷ್ಟು ತಯಾರಿ ಮಾಡಿಕೊಂಡೇ ತರಗತಿಗೆ ಹೋಗುತ್ತಿದ್ದ ಕಾರಣ ಮಕ್ಕಳಿಗೆ ಖುಶಿ.
        ಹೀಗೆ ತನ್ನ ಪಾಲಿನ ಕೆಲಸವನ್ನು ಸರಿಯಾಗಿ ನೆರವೇರಿಸಿಕೊಂಡು ಉಳಿದವರಿಂದಲೂ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದ್ದರು. ಇವರನ್ನು ಕೆಲವರು ಮೆಚ್ಚಿಕೊಂಡರೂ ಇನ್ನು ಕೆಲವರಿಗೆ ನಮ್ಮನ್ನು ಮೀರಿಸುವ ಪ್ರತಿಭೆಯವರಿದ್ದರೆ ನಮ್ಮನ್ನು ಕೇಳುವವರೇ ಇಲ್ಲದಂತಾಗಬಹುದು; ಮಾತ್ರವಲ್ಲ 'ಅವರಿಗೆ ಬೇಕಾದವರೊಬ್ಬರನ್ನು ಆ ಶಾಲೆಗೆ ತರಬೇಕು' ಎಂದು ಕನಸು ಕಾಣುತ್ತಿದ್ದ ಅವರಿಗೆ ನನ್ನ ಗೆಳೆಯರು ಬೇಡವಾಗಿದ್ದರು. ಇವರನ್ನು ಹೊರಗೆ ಹಾಕಲು ಏನು ದಾರಿ ಎಂದು ಯೋಚಿಸುತ್ತಿದ್ದವರಿಗೆ ಒಂದು ದಾರಿ  ತಾನಾಗಿಯೇ ಗೋಚರಿಸಿಯೇ ಬಿಟ್ಟಿತು.ತಾನು ಕಲಿಸಿದ ಮಕ್ಕಳು ಬುದ್ಧಿವಂತರೆನಿಸಿಕೊಳ್ಳಬೇಕೆಂಬ ಹಂಬಲ  ನನ್ನ ಗೆಳೆಯರಿಗೆ ಇತ್ತು. ಕಲಿಯುವುದರಲ್ಲಿ ಹಿಂದೆ ಇದ್ದ ಒಬ್ಬ ವಿದ್ಯಾರ್ಥಿಯನ್ನು ನನ್ನ ಗೆಳೆಯರು ಸ್ವಲ್ಪ ಜೋರಾಗಿ ಗದರಿಸಿ ಕಿವಿ ಹಿಂಡಿದ್ದರು. ಆ ಹುಡುಗನಿಗೆ ಮಂಗನ ಬಾವು ರೋಗ ಅಂಟಿಕೊಂಡಿದ್ದುದು ಗೆಳೆಯರಿಗೆ ಗೊತ್ತಿರಲಿಲ್ಲ. ಇವರ ಗ್ರಹಚಾರಕ್ಕೆ ಮಗುವಿನ ಕಿವಿ ಹಿಂಡಿದ್ದನ್ನೇ ನೆಪವಾಗಿಟ್ಟುಕೊಂಡು, ಮೇನೇಜರರಿಗೆ ದೂರು ಹೋಯಿತು. ಮತ್ತೆ ನೋಡಿದರೆ ಅವನು ಮೇನೇಜರರ ಮನೆಯವನೇ ಆಗಿದ್ದನು. ಸರಿ ಮರುದಿನ ಬಾವು ತಾನಾಗಿಯೇ ಹೆಚ್ಚಾಗಿದ್ದನ್ನು ಕಿವಿ ಹಿಂಡಿದುದಕ್ಕೆ ಕಿವಿ ಬಾತು ಹೋಯಿತು ಎಂಬಂತೆ ಕತೆ ಕಟ್ಟಿ, ವೈದ್ಯರೊಬ್ಬರ ಸರ್ಟಿಫಿಕೇಟ್ ಮಾಡಿಸಿಕೊಂಡು ಮೇಲಧಿಕಾರಿಗಳಿಗೆ ದೂರು ಹೋಗಿತ್ತು. ನನ್ನ ಗೆಳೆಯರಿಗೋ ಇದಾವುದೂ ಗೊತ್ತಾಗಲಿಲ್ಲ. ಉಳಿದ ಮಕ್ಕಳು ಆ ಹುಡುಗ ಜ್ವರವಿದ್ದುದರಿಂದ ಶಾಲೆಗೆ ಬರಲಿಲ್ಲ ಎಂದು ಹೇಳಿದ್ದರು. ಸರಿ, ಗುಣವಾದ ಮೇಲೆ ಬರ ಬಹುದು ಎಂದು ಅಧ್ಯಾಪಕರು ಸುಮ್ಮನಾಗಿದ್ದರು.  ಒಂದು ದಿನ ಮುನ್ಸೂಚನೆಯಿಲ್ಲದೆ ಮೇಲಧಿಕಾರಗಳು ಶಾಲೆಗೆ ಬಂದು ಬಿಟ್ಟರು. ಆ ದಿನ ಹುಡುಗನೂ ಬಂದಿದ್ದ.
ಮೇಲಧಿಕಾರಿಗಳು ನನ್ನ ಗೆಳೆಯರಿದ್ದ ತರಗತಿಗೇ ಬಂದುಬಿಟ್ಟರು. ಆ ಹುಡುಗ ಒಂದಷ್ಟು ದಿನ ಶಾಲೆಗೇ ಬರದಸ್ವನು ಅಂದು ತಾನೇ ಬಂದಿದ್ದನಷ್ಟೆ. ಅವನನ್ನು ಕರೆದು ಕೇಳಿಯೇ ಬಿಟ್ಟರು ಅಧಿಕಾರಿಗಳು. "ಯಾರು ನಿನ್ನ ಕಿವಿ ಹಿಂಡಿದ ಅಧ್ಯಾಪಕರು?"    ಮೇಲಧಿಕಾರಿಗಳೂ ಅವರ ಪರವಾಗಿಯೇ ಇದ್ದರಾದರೂ ಹುಡುಗ ಮಾತ್ರ ಸತ್ಯವನ್ನೇ ಹೇಳಿಬಿಟ್ಟ ಇವರೇ ನನ್ನ ಕಿವಿ ಹಿಂಡಿದ್ದರು" ಎಂದು. ಯಾವ ಕಿವಿ ಹಿಂಡಿದ್ದು? ಎಂದು ಕೇಳಿದ್ದಕ್ಕೆ ಈ ಕಿವಿ ಎಂದು ಬಲಕಿವಿಯನ್ನು ತೋರಿಸಿದ ಹುಡುಗ. ಕಿವಿ ಏನಾಗಿದೆ? ಯಾವ ಕಿವಿ ಬಾತದ್ದು ಎಂದೂ ಕೇಳಿದರು. ಆದರೆ ಅವ ತೋರಿಸಿದ ಕಿವಿ ಬಾತಿರಲಿಲ್ಲ. ಬಾತುಕೊಂಡಿದ್ದದ್ದು ಮತ್ತೊಂದು ಕಿವಿ. ಮತ್ತೆ ಈ ಕಿವಿ ಹಿಂಡಿದ್ದಕ್ಕೆ ಅ ಕಿವಿ ಬಾತದ್ದು ಹೇಗೆ ಎಂದೂ ಕೇಳಿದರು.ಅದು ಮಂಗನಬವು ಆಗಿ ಬಾತದ್ದು ಎಂದು ಸತ್ಯವನ್ನೇ ಹೇಳಿದ. ಮತ್ತೆ ಅಧ್ಯಾಪಕರು ಕಿವಿ ಹಿಡಿದು ಕಿವಿ ಬಾತು ಹೋಗಿದೆಯೆಂದು ದೂರು ಕೊಟ್ಟಿದ್ದೀಯಲ್ಲ ಯಾಕೆ ಎಂದು ಕೇಳಿದಾಗ ಈ ಮಾಷ್ಟ್ರು ನಮ್ಮನ್ನು ತುಂಬಾ ಜೋರು ಮಾಡುತ್ತಾರೆ. ಅದಕ್ಕೆ ಅವರು ಕಿವಿ ಹಿಂಡಿ ಬಾತದ್ದು ಎಂದು ಹೇಳಬೇಕೆಂದು ಮನೆಯವರು ಹೇಳಲು ಹೇಳಿಕೊಟ್ಟರು ಎಂದ. ಅ ಮಗುವಿನ ಅಜ್ಜ ನಂತೆ, ಶಾಲೆಗೆ ಬಂದವರು ಅಧ್ಯಾಪಕರ ತಪ್ಪೇನೂ ಇಲ್ಲವೆಂದು ಹೇಳಿಬಿಟ್ಟರು. ಅವರ ಸಾಕ್ಷ್ಯ ನನ್ನ ಗೆಳೆಯರಿಗೆ ವರದಾನವಾಯಿತು. ಎಲ್ಲರೆದುರಿಗೆ ಕೇಸ್ ಸುಮ್ಮಗಾಯಿತು. ಆದರೆ ಸುದ್ದಿ ಊರಿಂದ ಊರು ತಲಪಿ ಅಧ್ಯಾಪಕರೊಬ್ಬರು ಹುಡುಗನ ಕಿವಿ ಹಿಂಡಿ ಬಾತು ಹೋಗಿದೆಯೆಂದು ಪ್ರಚಾರವಾಗಿತ್ತು. ಕಂಡ ಕಂಡವರೆಲ್ಲ ನೀನು ಅಷ್ಟು ಜೋರಿದ್ದಿಯೋ? ಯಾಕೆ ಕಿವಿ ಹರಿದುಹೋಗುವಂತೆ ಹಿಂಡಿದ್ದು ಎಂದು ಕಂಡವರೆಲ್ಲ ಕೇಳಿದ್ದಕ್ಕೆ ಮುಜುಗರವಾಗಿ, ನನ್ನ ಗೆಳೆಯರಿಗೆ ಇದೆಲ್ಲ ತನ್ನಸಶಾಲೆಯ ಇತರ ಅಧ್ಯಾಪಕರದೇ ಕಿತಾಪತಿಯೆಂದು ಗೊತ್ತಾಗಿ  ಈ ಶಾಲೆಯೇ ಬೇಡವೆಂದು ಶಾಲೆಯನ್ನೇ ಬಿಟ್ಟು ಬಿಟ್ಟರು. ಸರಕಾರಿ ಶಾಲೆಗಳೇ ಬೇಕೆಂದು ಶಾಲೆ ದೂರವಾದರೂ ನಿವೃತ್ತರಾಗುವ ವರೆಗೆ ಸೇವೆಗೈದು ಕೃತಕೃತ್ಯರಾದರು.  ಆದರೆ ಉಳಿದವರು ಮಾತ್ರ ಈ ಸುದ್ದಿಯನ್ನು ಟಾಂ ಟಾಂ ಮಾಡಿ ಬಣ್ಣ ಕಟ್ಟಿ ಊರೆಲ್ಲ ಪ್ರಚಾರ ಮಾಡಿದ್ದರು. ಗೆಳೆಯರು ಅದೇ ಶಾಲೆಯಲ್ಲಿ ವೃತ್ತಿ ಜೀವನ ಮುಂದುವರಿಸಬೇಕೆಂದಿದ್ದವರು, ಮನಸ್ಸಿಗೆ ಬೇಸರ ಹುಟ್ಟಿ ಶಾಲೆಯ ಮೇಲೇ ವೈರಾಗ್ಯ ಬಂದು ಶಾಲೆಯನ್ನೇ ಬಿಟ್ಟು ಬೇರೆ ಶಾಲೆಗಳಲ್ಲಿ ಉದ್ಯೋಗ ಮುಂದುವರಿಸಿ ಉತ್ತಮ ಅಧ್ಯಾಪಕರೆಂದೆನಿಸಿಕೊಂಡರು. ಈಗ ನಿವೃತ್ತಿ ಹೊಂದಿ ವಿರಾಮ ಜೀವಿತವನ್ನು ಮುಂದುವರಿಸಿದ್ದಾರೆ ಎಂಬುದು ಬೇರೆ ಸಂಗತಿ. ಆದರೆ ವೃತ್ತಿ ಜೀವನದಲ್ಲಿ ಎಂತಹ ಮತ್ಸರಿಗಳು ಒಬ್ಬನ ಭವಿಷ್ಯವನ್ನು ಹಾಳುಮಾಡುವವರಿದ್ದಾರೆ ಎಂಬಅನುಭವ ಜೀವನದಲ್ಲಿ ಕಲಿಯಬೇಕಾದ ಪಾಠವಲ್ಲವೇ?

Wednesday, June 27, 2012

ಕೈಬೆರಳುಗೊ

                                ಕೈಬೆರಳುಗೊ
            ಮನುಷ್ಯಂಗೆ ಹೆಚ್ಚು ಉಪಯೋಗ ಅಪ್ಪ ಕೈ ಬೆರಳುಗಳ ಬಗ್ಗೆ ಎನಗೆ ಗೊಂತಿಪ್ಪ ಇನ್ನೂ ಕೆಲವು ವಿಶಯಂಗಳ ಹೇಳಿದರೆ ಬೇಜಾರಾಗ ಹೇಳಿ ಗ್ರೇಶಿಗೊಳ್ಲುತ್ತೆ.    ನಮ್ಮ ಪೂರ್ವಜರು ಅಪ್ಪ ಮಂಗಂಗೊಕ್ಕೆಕೈಲ್ಲಿ ಬೆರಳುಗೊ ಇದ್ದರೂ ನಮ್ಮ ಹಾಂಗೆ ಉಪಯೋಗ ಇರುತ್ತಿಲ್ಲೆ.ಕೆಲವು ಕೈಲ್ಲಿಯೋ, ಕಾಲಿಲ್ಲಿಯೋಆರಾರು ಬೆರಳುಗಳೂ ಇಪ್ಪದಿದ್ದು. ಆರು ಬೆರಳುಗೊ ಒಳ್ಳೆ ಲಕ್ಷಣಡೊಚಂದ್ರಹಾಸಂಗೆ ಕಾಲ್ಲಿ ಆರು ಬೆರಳು ಇದ್ದತ್ತಡೊ.ಸಾಲದ್ದಕ್ಕೆ ಮೂಲಾ ನಕ್ಷತ್ರದ ಕೆಟ್ತ ಅಂಶಲ್ಲಿ ಅವ ಹುಟ್ಟಿದ್ದಾದರೂ ರಾಜನೇ ಆಯಿದಡಾ. ಬೆರಳಿನ ಕಾರಣವೋ ಗೊಂತಿಲ್ಲೆ.ಆದರೆ ಆರನೇ ಬೆರಳು ಉಪಯೋಗಕ್ಕೆ ಸಿಕ್ಕುತ್ತಿಲ್ಲೆ.ಲೆಕ್ಕಕ್ಕೆ ಮಾಂತ್ರ ಆರು ಬೆರಳು.ನಮ್ಮಲ್ಲಿ ಕೆಲವು ಜನರ ಬಗ್ಗೆ ನಾವು ಹೇಳಿಗೊಂಬದು ಇದ್ದು ಅಲ್ಲದೋ "ಅವ ಲೆಕ್ಕಕ್ಕೆ ಮಾಂತ್ರ ಹೇಳಿ. ಆಟಲ್ಲಿ ಹೇಳುವ ಕ್ರಮ ಇದ್ದು ಲೆಕ್ಕ ಭರ್ತಿಗಾದರೂ ಬಂದು ಸೇರು ಹೇಳಿ. ಒಳುದ ಬೆರಳುಗೊಕ್ಕೂ ಆರನೆಯ ಬೆರಳಿಂಗೂ ಸಂಪರ್ಕವೇ ಇಲ್ಲೆ. ಹೆಬ್ಬಟೆ ಬೆರಳಿನ ಬುಡಂದ ಹೆರಟರೆಸಣ್ಣಕ್ಕೆ ಬೆರಳಿನ ಹಾಂಗೆ ಇಕ್ಕು. ಏಳು ಬೆರಳಿನೋವೂ ಇದ್ದವಡೊ. ಬೆರಳಿನ ಲೆಕ್ಕಂದ ಹೆಚ್ಚು ಬೆರಳುಗಳ ಉಪಯೋಗದ ಬಗ್ಗೆ ತಿಳಿಯೆಕ್ಕಲ್ಲದೋ?   
            ಪ್ರತಿಯೊಂದು ಬೆರಳಿಂಗೂ  ಒಂದೊಂದು ಸಂಜ್ಞೆಗೊ ಇರುತ್ತು.ಕೈ ಭಾಷೆ ಹೇಳುತ್ತವನ್ನೆ! ನಾವು ಕೆಲವು ಜನ ಒಟ್ಟಿಂಗೆ ಇಪ್ಪಗ ನಮಗೆ ಬೇಕಾದೋರಿಂಗೆ ಮಾತ್ರ ಅರ್ಥ ಅಪ್ಪ ಹಾಂಗೆ ಕೈ ಭಾಷೆ, ಕಣ್ಣು ಭಾಷೆ ಮಾಡುವದಿದ್ದಲ್ಲದೋ?. ಆದರೆ ಈ ಭಾಷೆಗೂ ಒಂದು ಅರ್ಥ ಇರುತ್ತು. ಹಾಂಗೆ ಕಿಂಕಿಣಿ ಬೆರಳಿನ ಮಾಂತ್ರ ಸರ್ತ ಮಾಡಿ ಒಳುದ್ದರ ಮಡುಸಿಗೊಂಡಿದ್ದರೆ, ನೆಂಪಾತನ್ನೆ! ಮಾಷ್ಟ್ರಕ್ಕಳ ಮಂಕಾಡುಸಿ ಹೆರ ಹೋಯೆಕ್ಕಾರೆ ಮಕ್ಕೊಗಿಪ್ಪ ಒಂದು ಉಪಾಯವೇ....ಸಾರ್‍ ಒಂದಕ್ಕೆ! ಹೇಂಗಿಪ್ಪ ಸ್ಟ್ರಿಕ್ಟ್ ಮಾಷ್ಟ್ರನೂ ಸರಿ ಹೋಗು ಹೇಳೆಡದೋ? ಕಳುಸದ್ದರೆ ಮತ್ತೆ ಮಾಷ್ಟ್ರನ ಕೊರಳಿಂಗೇ ಸುತ್ತುಗು ಕ್ಲೀನ್ ಮಾಡ್ತ ಕೆಲಸ. ಒಟ್ಟಿಂಗೆ ಪವಿತ್ರ ಬೆರಳಿನ ಸೇರುಸಿ ಹಿಡುದರೆ, ಕೇಳೆಡ ಅವಂಗೆ ಹೊಟ್ಟೆ ಸರಿ ಮಾಡೆಕ್ಕು ಹೇಳಿಯೇ ಅರ್ಥ ಅಲ್ಲದೋ? ಕೈಮುಷ್ಟಿ ಹಿಡುದು ಹೆಬ್ಬೆರಳಿನ ಮಾಂತ್ರ ನೆಗ್ಗಿ ಹಿಡಿದರೆ...ಒಂದರ್ಥ.ಹೆಬ್ಬೆರಳಿನ  ಅಲ್ಲಿಗೇ ಆಡುಸಿಗೊಂಡು ಇಡೀ ಮುಷ್ಟಿಯ ಆಡುಸಿಗೊಡರೆ ತನ್ನನ್ನೂ ಎಂತ ಮಾಡುಲೆಡಿಯ ಹೇಳಿಯೂ ಆವುತ್ತು. ಮತ್ತೆ ಕೈಮುಷ್ಟಿ ಹಿಡುಕ್ಕೊಂಡು, ಎದಿರೆ ಇದ್ದೋರತ್ರೆ  ಎಂತ, ಏನು? ನೀನು ಆರು ಹಿಂಗೆಲ್ಲ ಅರ್ಥ ಮಾಡ್ಯೊಂಬಲಕ್ಕು.ಕೈ ಮೊಗಚ್ಚಿ ಹಿಡುಕ್ಕೊಂಡು ಎಲ್ಲ ಬೆರಳುಗಳ ಸಹಾಯಂದ ಅಥವಾ ಎದುರಿಪ್ಪೋನ ತಾತ್ಸಾರ ಭಾವನೆಂದ ಕೋಲು ಬೆರಳು  ಮಾತ್ರ  ಉಪಯೋಗುಸಿ ಇಲ್ಲಿಂದ ಎದ್ದು ಹೋಗು ಹೇಳುತ್ತವನ್ನೆ. ಎರಡು ಕೈದೂ ಕೋಲು ಬೆರಲುಗಳ ಜೋಡುಸ್ಯೋಂಡು ಹೇಳಿರೆ, ಅವು ಇಬ್ರೂ ರಾಝಿಲ್ಲಿದ್ದವು ಹೇಳಿಯೋ,ಒಟ್ಟಾಯೆಕ್ಕು ಹೇಳಿಯೋ,ಅವರ ಇಬ್ರನ್ನೂ ಒಟ್ಟು ಮಾಡಿ ಹೇಳಿಯೋ ಅರ್ಥ ಬತ್ತು. ನೀನು ಏಳು, ನೀನು ಕೂರು ಹೇಳುವುದಕ್ಕೆ ಕೋಲು ಬೆರಳನ್ನೇ ಉಪಯೋಗುಸುತ್ತವು. ಇಲ್ಲಿಂದ ಎದ್ದು ಹೋಗು ಹೇಳುವದೂ ಆ ಕೆಲಸ ಮಾಡೆಡ ಹೇಳುವದಕ್ಕೂ ಕೋಲು ಬೆರಳೇ ಬೇಕು. ಕೋಲು ಬೆರಳಿನ ಕುತ್ತ ಮಾಡ್ಯೊಂಡು ಕೈ ತಿರುಗಿಸ್ಯೊಂಡು ಮತ್ತೆ ಮುಷ್ಟಿ ಹಿಡುದು ಆಡುಸಿದರೆ ಈ ಊರಿಂಗೆಲ್ಲ ಆರು ಯಜಮಾನ, ಈ ಜಾಗ್ಗೆಲ್ಲ ಆರು ಯಜಮಾನ ಹೇಳಿ ಎಲ್ಲ ಅರ್ಥ ಬತ್ತನ್ನೆ? ಮತ್ತೆ ಕಿಂಕಿಣಿ ಬೆರಳು ಬೀಗಿದರೆ ಎಷ್ಟು ಬೀಗ್ಗು ಹೇಳುವ ಮಾತು ಎದುರಾಣೋನ ಹಿಯಾಳುಸಿ ಹೇಳುವ ಮಾತು. ಕೋಲು ಬೆರಳುಗಳ ಕೊಳಿಕ್ಕೆ ಹಾಕಿದ ಹಾಂಗೆ ಮಾಡಿದರೆ ಅವು ಇಬ್ರೂ ಕೋಪ, ವಿರೋಧಿಗೋ ಹೇಳಿ ಅರ್ಥ: ಅವರ ಒಂದು ಮಾಡೆಕ್ಕು ಹೇಳುಲೆ ಪುನಃಕೋಲು ಬೆರಳುಗಳ ಜೋಡುಸಿ ಹೇಳುವದೆಲ್ಲ ಚಲಾವಣೆಲ್ಲಿಪ್ಪ ಕೋಡ್ ಸಂಜ್ಞೆಗೊ. ನಡು ಬೆರಳಿಂಗೆ ಬಂದರೆ ಉದ್ದವೂ ತೋರವುದೆ ಇದ್ದಲ್ಲದೋ? ಅವು ಇಬ್ರೂ ಒಂದೇ ಹೇಳೆಕ್ಕಾರೂ, ಇಬ್ರು ಇದ್ದವು ಹೇಳುವಗಳೂ ಕೋಲುಬೆರಳು ನಡುಬೆರಳು ಸೇರುಸುತ್ತವು. ಎನಗೆ ಎರಡು ಬೇಕು ಹೇಳುವಗಳೂ ಇದೆರಡು ಬೆರಳು ಜೋಡುಸಿ ಹೇಳುತ್ತು.ಅದರ ಕತ್ತರುಸಿ ಹಾಕು ಹೇಳುವದು ಆ ಎರಡು ಬೆರಳುಗಳನ್ನೇ ಹತ್ತರೆ ದೂರ ಮಾಡ್ಯೊಂಡು.ಇನ್ನು ಕೋಲು ಬೆರಳಿಂಗೆ ಮತ್ತೆ ನಡು ಬೆರಳಿಂಗೆ ತನ್ನ ಶ್ರೀಮಂತಿಕೆ ತೋರುಸಿಗೊಂಬಲೆ ಉಂಗಿಲು ಹಾಕಿಗೊಂಡು ಅದು ಎಲ್ಲೋರಿಂಗೂ ಕಾಂಬ ಹಾಂಗೆ ತೋರುಸ್ಯೊಂಡಿರುತ್ತವು. ಉಂಗುರಬೆರಳು ಹೇಳುವದು ಪವಿತ್ರ ಬೆರಳು ಆದರೂ ನಾಲ್ಕು ಬೆರಂಗೂ ಉಂಗುರ ಹಾಕಿಗೊಂಡೋರು ಇದ್ದವನ್ನೆ. ಎಂತಾರು ಕಾರ್ಯಕ್ರಮಕ್ಕೆ ಆರು ಮುಖ್ಯಸ್ಥ ಕೇಳುವಗ ಕೇಳುತ್ತವನ್ನೆ ಇದಕ್ಕೆ ಆರ ಕೈಗೆ ಉಂಗಿಲು ಹಾಕಿದ್ದು ಹೇಳಿ.
                        ಪಂಚ ಪಾಂಡವರಲ್ಲಿ,ಧರ್ಮರಾಯ ಧರ್ಮ ಧರ್ಮ ಹೇಳ್ಯೊಂಡು ಮುಂದೆ ಹೋಪೋನು. ಅವನ ಬೆಂಬಲಕ್ಕೆ ಒಳುದ ನಾಲ್ಕು ಜನ ಅಲ್ಲದೋ? ಕೈಲಿ ಆರಿಂಗಾದರೂ ಬಡಿವಗ ಈ ನಾಲ್ಕು ಬೆರಳು ಮಾಂತ್ರ ನೆಗವದಡೋ. ಹೆಬ್ಬೆರಳು ಒಟ್ಟಿಂಗೆ ಇದ್ದು ಹೇಳಿ ಅಲ್ಲದ್ದೆ ಅದಕ್ಕೆ ಕೆಲಸ ಇಲ್ಲೆ. ಅದರೆ  ಹೇಳುವದು ಮಾಂತ್ರ ಐದು ಬೆರಳೂ ನೆಗದ್ದು ಹೇಳಿ.ಹಾಂಗೆ  ಯುದ್ಧವ ಎಲ್ಲೋರು ಸೇರಿ ಗೆದ್ದವು ಹೇಳ್ತವನ್ನೆ! ಈ ಐದು ಬೆರಳುಗಳನ್ನೂ ಜೋಡುಸ್ಯೊಂಡು ನೋಡುತ್ತವು ಕೆಲವು ಜನ. ಎಂತಕೆ? ಜೋಡುಸುವಗ ಎಡೆ ಕಾಂಬಲಾಗಡೊ.ಎಡೆಲ್ಲಿ ಜಾಗ ಇದ್ದರೆ ಅವನ ಕಈ ಯಾವಾಗಲೂ ಖಾಲಿಯಾಗಿಕ್ಕು. ಅವನ ಕೈಲ್ಲಿ ಪೈಸೆ ನಿಲ್ಲ ಹೇಳಿ ಹೇಳುತ್ತವು. ಇದು ಸಾಮುದ್ರಿಕದೋರ ಮಾತು. ಭೀಮ ಜರಾಸಂಧನೊಟ್ಟಿಂಗೆ ಯುದ್ಧ ಮಾಡುವಗ ಆರೂ ಸೋಲುತ್ತವಿಲ್ಲೆ,ಆರೂ ಗೆದ್ದದೂ ಇಲ್ಲೆ.ಭೀಮ ಜರಾಸಂಧನ ಶರೀರವ ಸಿಗುದು ಇಡುಕ್ಕಿದರೂ ಅದು ಮತ್ತೆ ಜೋಡ್ಯೊಂಡಿತ್ತಡೊ. ಭೀಮಂಗೆ ಬಚ್ಚಿತ್ತು. ಎಂತ ಮಾಡುವದು ಹೇಳಿ ತೋರದ್ದೆ ಅಲ್ಲಿ ಇಲ್ಲಿ ನೋಡ್ಯೊಂಡಿಪ್ಪದಿ ಕೃಷ್ಣಂಗೆ ಗೊಂತಾತು. ಅವ ಎಲೆ ತಿಂದೊಂಡಿತ್ತಿದ್ದಡೋ. ಆ ಎಲೆಯ ಹರುದು ಕಡೆ ಕೊಡಿ ತಿರುಗುಸಿ ಇಡುಕ್ಕಿದಡೊ.ಭೀಮಂಗೆ ಗೊಂತಾತು ಕೃಷ್ಣನ ಸೂಚನೆ. ಕೂಡ್ಳೇಜರಾಸಂಧನ ಶರೀರವ ಸಿಗುದು ತಲೆ ಕಾಲು ತಿರುಗಿಸಿ ಇಡುಕ್ಕಿದಡೋ. ಮತ್ತೆ ಅವನ ದೇಹ ಜೋಡದ್ದೆ ಜರಾಸಂಧ ಸತ್ತೇ ಹೋದಡೊ.
    ಇನ್ನು ಮೃದಂಗ,ಮದ್ದಳೆ ಬಡಿವಗ ಕೈಬೆರಳುಗಳ ಉಪಯೋಗವೇ ಬೇಕಾದ್ದಲ್ಲದೋ?ಪೆಟ್ಟಿನ ಉರುಳಿಕೆ ಬೆರಳುಗಳ ಚಮತ್ಕಾರ! ಬೇರೆ ಬೇರೆ ತಾಳಂಗೊಕ್ಕೆ ಬೇರೆ ಬೇರೆ ಬೆರಳುಗಳ ಉಪಯೋಗ ಅವುತ್ತು.ಚೆಂಡೆ ಬಾರುಸುವಗಳೂ ಕೋಲು ಹಿಡಿಯೆಕ್ಕಾರೆ ಬೆರಳುಗಳ ಸಹಾಯ ಬೇಕು. ಕೈಯ ಮೇಲಾಣ ಭಾಗವ ಹನುಸದ್ದೆ ಚೆಂಡೆ ಬಡಿತ್ತವನ್ನೆ. ತಾಳವಾದ್ಯಂಗಳ ಹಾಂಗೆ ಫಿಡ್ಳು,ಕೊಳಲು,ಹಾರ್ಮೋನಿಯಂ, ಗಂಜ್ರ, ನಾಗಸ್ವರ ಯಾವದೇ ಅಗಲಿ ಬೆರಳುಗಳ ಸಾಮರ್ಥ್ಯವೇ ಮುಖ್ಯ ಅಲ್ಲದೋ? ಕೊಳಲಿಂಗೆ ಎರಡು ಕೈದೂ ಆರು ಬೆರಳಿನ ಸಹಾಯ ಬೇಕು. ಕೈಯ ಮತ್ತೆ ಕಾಲಿನ ಬೆರಳುಗಳ ಕೊಡಿಲ್ಲಿ ಶಂಖ, ಚಕ್ರದ ಗುರುತುಗೊ ಇರುತ್ತು ಹೇಳುತ್ತವು. ಹತ್ತು  ಬೆರಳುಗಲಲ್ಲಿಯೂ ಶಂಖವೇ ಇದ್ದದಾದರೆ ಅವ ಸನ್ಯಾಸಿ ಹೇಳುತ್ತವು  ಸಾಮುದ್ರಿಕ ಬಲ್ಲೋರು.ಎರಡು ಚಕ್ರ ಆದರೆ ಅವ ಧನವಲ್ಲಭ ಅಡೊ.ನಾಲ್ಕು ಚಕ್ರ ಇದ್ದರೆ ಮಹಾ ಪಂಡಿತ ಹೇಳಿ ಹೇಳುತ್ತವು ನಿಜವೊ ಲೊಟ್ಟೆಯೊ ಗೊಂತಿಲ್ಲೆ. ಟೈಪ್ ಮಾಡೆಕ್ಕಾರೆ, ಕಂಪ್ಯೂಟರಿಲ್ಲಿ ಕೆಲಸ ಮಾಡೆಕ್ಕಾರೆ ಬೆತ್ರಳುಗಳ ಸಹಾಯ ಎಷ್ಟಿದ್ದು ಹೇಳುವದರ ಆನು ಹೇಳಿದರೆ ಸರಿ ಆವುತ್ತಿಲ್ಲೆ. ಅದಲ್ಲಿ ಪಳಗಿದೋರು ಹೇಳೆಕ್ಕು.ಮತ್ತೆ ರೆಕೋರ್ಡ್ ರಿಜಿಸ್ತ್ರಿ ಆಯೆಕ್ಕಾರೆ ಚುಂಡೊಪ್ಪು ಬೇಕನ್ನೆ!. ಅಮೇರಿಕಲ್ಲಿ ಎಲ್ಲ ಗ್ರೀನ್ ಕಾರ್ಡಿನ ಕೇಳುವಗ ಫಿಂಗರ್ ಪ್ರಿಂಟ್ ನೋಡುತ್ತವು. ನಮ್ಮಲ್ಲಿಯೂ ಬೇಕು. ಮತ್ತೆ ಹೆಬ್ಬೆರಳಿನ ನಿಜವಾದ ಪ್ರಯೋಜನ ತಿಳುದಿದ್ದ ದ್ರೋಣ ಏಕಲವ್ಯ ಬೆರಳು ಕೇಳಿದ್ದು ಗೊಂತಿದ್ದನ್ನೆ. ಅಂತೂ ಬೆರಳಿನ ಸಾಮರ್ಥ್ಯ ಕುಮಾರವ್ಯಾಸ ತಿಳುದೇ ಭಾರತ ಓದುವೋರಿಂಗೆ ಗೊಂತಪ್ಪ ಹಾಂಗೆ ಒಂದು ಸನ್ನಿವೇಶ ಹೇಳಿದ್ದ. ಬಕಾಸುರಂಗೆ ತಿಂಬಲೆ ಹೇಳಿ ಗಾಡಿಲ್ಲಿ ಅನ್ನ ಕೋಂಡೋದ್ದು ಭೀಮ ಅಲ್ಲದೋ? ತುಂಬಾ ದಿನಂದ ಅರೆಹೊಟ್ಟೆ ಉಂಡುಗೊಂಡಿದ್ದೋನಿಂಗೆ ಕೊದಿ ತಡೆಯ.ಗುಡ್ಡೆಗೆ ಎತ್ತುವಂದ ಮದಲೇ ಗಾಡಿಲ್ಲಿದ್ದ ಬಲಿ ಎಲ್ಲ ಖಾಲಿ ಆಗಿತ್ತು. ಬಕಾಸುರಂಗೆ ಹಶು ತಡೆತ್ತಿಲ್ಲೆ. ಕೋಪ ತಡೆಯದ್ದೆ ಭೀಮ ಇದ್ದಲ್ಲಿಂಗೆ ಬಂದು ಒಂದು ಗುದ್ದಿತ್ತಡೊ.ಅಂಬಗ ಭೀಮ ಹೇಳಿದಡೊ.ನಿಲ್ಲು ಮಾರಾಯ. ಇನ್ನೂ ಪಾತ್ರೆಯ ತಳಲ್ಲಿ ರಜ ಹಿಡುಕ್ಕೊಂಡಿದ್ದು.ಅದರ ತಿಂದಿಕ್ಕಿ ನಿನ್ನ ಮಾತಾಡುಸುತ್ತೆ. ಅಷ್ಟರ ವರೆಗೆ ಸುಮ್ಮನೆ ಕೂರು ಹೇಳಿದಡ ಬೆರಳಿಲ್ಲಿ ಏಡಿಸುತ್ತ!  ಬೊಗಸೆ ತುಂಬುಸೆಕ್ಕಾರೆ ಬೆರಳುಗಳ ಜೋಡುಸೆಕ್ಕು. ಎರಡೂ ಕೈಗಳಲ್ಲಿ ಹಿಡುಕ್ಕೊಳ್ಳೆಕ್ಕಾರೆ ಬೆರಳುಗಳ ದೂರ ದೂರ ಮಾಡ್ಯೊಳ್ಳೆಕ್ಕು.ಎಲ್ಲಕ್ಕೂ ಬೇಕಪ್ಪದು ಕೈ ಬೆರಳುಗೊ. ದೂರಲ್ಲಿಪ್ಪೋನ ದಿನಿಗೇಳೆಕ್ಕಾರೂ, ಅಲ್ಲೇ ನಿಲ್ಲು ಹೇಳುಲೂ ಕೈಭಾಷೆ ಮಾಡಿತ್ತವನ್ನೇ? ಬೆರಳುಗಳೇ ಇಲ್ಲದ್ದೋರೂೆಲ್ಲೋರಿಂಗು ಇಪ್ಪ ಹಾಂಗೆ ಇಲ್ಲದೆ ನಾಲ್ಕೋ ಮೂರೋ ಬೆರಳು ಇಪ್ಪೋರೂ ಇದ್ದವು. ಕಾಲಿನ ಬೆರಳುಗಳೂ ಕೈಬೆರಳೇ ಇಲ್ಲದ್ದೋರಿಂಗೆ ಉಪಯೋಗ ಆವುತ್ತಲ್ಲದೋ? ಮತ್ತೆ ಕಾಲಿನ ಹೆಬ್ಬೆರಳಿಲ್ಲಿ ಪ್ರೇಮ ಸಂಕೇತ ನೆಲಲ್ಲಿ ಬರವದು ಇದ್ದನ್ನೇ! ಬೆರಳಿನ ಭಾಷೆ ಬೇರೆಯೇ ಇದ್ದಲ್ಲದೋ?
       

Monday, June 25, 2012

ಭಾಷೆ ಬದುಕಿನ ಜೀವಾಳ



ಭಾಷೆ ಬದುಕಿನ ಜೀವಾಳ

ಮನಸ್ಸಿನ ಭಾವನೆಯ ತಿಳಿಸಲು ಬೇಕೊಂದು ಭಾಷೆ! ಅದು ಮೂಕಭಾಷೆಯೂ ಆಗಬಹುದು. ಅಥವಾ ಆಡು ಭಾಷೆಯೂ ಆಗಬಹುದು. ಆಡಿದರೆ ಕೇಳಬೇಕು. ಕಿವಿಯೇ ಕೇಳಿಸದವನಿಗೆ ಭಾಷೆ ಯಾವುದು? ಅಥವಾ ಮಾತೂ ಆಡಲಾರದವ ತನ್ನ ಭಾವನೆಯನ್ನು ಹೇಗೆ ತಿಳಿಸಬೇಕು? ಈಗ ಇಂತಹ ಕಿವುಡ ಮೂಕರಿಗೊಂದು ಭಾಷೆ ಬೇಕಲ್ಲವೇ? ಅದುವೇ ಮೂಕಭಾಷೆ. ಕುರುಡರಾದರೋ ಕಿವಿಯಿಂದ ಕೇಳಬಹುದು ಬಾಯಿಂದ ಆಡಬಹುದು. ಭಾಷೆಯನ್ನೂ ಅವರು ಕೇಳಿ ಕಲಿಯಬಹುದು. ಆದರೆ ಕುರುಡರೋ ಅವರಿಗೆ ಕೇಳಿ ಕಲಿತ ಪದಗಳನ್ನು ಓದಲೋ ಬರೆಯಲೋ ಆಗುವುದಿಲ್ಲ. ಅಭಿನಯಪೂರ್ವಕ ತಿಳಿಸಲೂ ಸಾಧ್ಯವಿಲ್ಲ. ಆಗ ಅವರಿಗೆ ಸ್ಪರ್ಶ ಜ್ಞಾನ ಸೂಕ್ಷ್ಮವಾಗಿರುವುದರಿಂದ ಕೈಯಿಂದ ಮುಟ್ಟಿಯೇ ಅಕ್ಷರಗಳನ್ನು ಕಲಿಯಬೇಕು. ಅದು ಕುರುಡರ ಭಾಷೆಯಾಯಿತು. ಈಗ ಮುಂದುವರಿದ ತಂತ್ರಜ್ಞಾನವೂ ಕುರುಡರಿಗೆ ಲಭ್ಯವಿದೆ. ಕಲಿಯಲು ಮನಸ್ಸು ಬೇಕು ಅವರಿಗೆ. ಮನಸ್ಸಿದ್ದರೆ ಮಾರ್ಗ ಎಂದು ಹೇಳುವುದು ಇದನ್ನೇ. ಸಂಘಜೀವಿಯಾದ ಮನುಷ್ಯನಿಗೆ ಸಾಮಾಜಿಕ ಸಂಪರ್ಕ ಬೇಕಾದರೆ ಭಾಷೆಯ ಅಗತ್ಯವಿದೆ. ಹಿಂದಿನ ಕಾಲದಲ್ಲಾದರೆ ಗಾಂಧಾರಿಯಂಥವರು ಗಂಡ ಕುರುಡನಾಗಿದ್ದಕ್ಕೆ ತನ್ನ ಕಣ್ಣಿಗೇ ಬಟ್ಟೆ ಕಟ್ಟಿಕೊಂಡ ಉದಾಹರಣೆಗಳಿವೆಯಾದರೂ ಆ ಕಾಲದಲ್ಲಿ ಇಂದಿನಂತೆ ಸಾಮಾಜಿಕ ಸಂಪರ್ಕ ಕಡಿಮೆ.  ಗಾಂಧಾರಿಗೆ ಅರಮನೆಯೊಳಗೆ ಆಳು ಕಾಳುಗಳು ಅವಳ ಆವಶ್ಯಕತೆ ಪೂರೈಸುತ್ತಿದ್ದ ಕಾರಣ ಕುರುಡಳಂತೆ ಇರಲು ಅನುಕೂಲವಾಗಿತ್ತು. ಈಗಿನ ಮಿತ ಕುಟುಂಬದಲ್ಲಿ ಸಾಮಾಜಿಕ ಸಂಪರ್ಕ ಸಿಗಬೇಕಾದರೆ ಅವರು ಹೊರಜಗತ್ತಿಗೆ ಬರಲೇ ಬೇಕು. ಮನೆಯೊಳಗೇ ಇದ್ದರೆ ತನ್ನ ಆವಶ್ಯಕತೆಗಳನ್ನು ತಿಳಿದು ಸಹಾಯ ಮಾಡುವವರಿದ್ದರೆ,ತೊಂದರೆಯಿಲ್ಲ. ಆದರೆ ಬಡವರಿಗೆ ಮನೆಯೊಳಗೇ ಇರಲು ಸಾಧ್ಯವಾಗಲಾರದು. ಹಿಂದೆ ಒಂದು ಗಾದೆಯಿತ್ತು. ‘ಊರಿಗೆ ಬಂದವಳು ನೀರಿಗೆ ಬಾರದಿರುವಳೇ?’ ಆಗ ಊರುಕೇರಿಗಳಲ್ಲಿ ಸಾರ್ವಜನಿಕ ಬಾವಿಗಳೋ ಕೆರೆಗಳೋ ಜನರಿಗೆ ಸ್ನಾನ ಮಾಡಲು,ಕುಡಿಯುವ ನೀರು ತರಲು ಉಪಯೋಗವಾಗುತ್ತಿದ್ದವು. ಅತಿಥಿಗಳಾಗಿ ಬಂದವರೂ ನೀರಿಗೆ, ಸ್ನಾನ ಬಟ್ಟೆ ಒಗೆಯಲು ಊರ ಕೆರೆಗೆ ಬರಲೇಬೇಕು. ಮನೆಗೆ ಒಂದೊಂದು ಕೆರೆ ಬಾವಿಗಳಿಲ್ಲ. ಅದಕ್ಕೆ ಊರಿಗೆ ಹೊಸತಾಗಿ ಯಾರಾದರೂ ಹೊಸಬಳು ಬಂದಿದ್ದರೆ ಅವರು ಯಾರು ಎಲ್ಲಿಂದ ಬಂದವರು? ಎಂಬೆಲ್ಲ ವಿವರಗಳನ್ನು ತಿಳಿದೇ ತಿಳಿಯುತ್ತಾರೆ. ತಿಳಿದ ಮತ್ತೆ ಗೆಳೆತನ, ಒಗೆತನ ಬೆಳೆಸಲು ನೋಡುತ್ತಾರೆ. ಬೇರೆ ಭಾಷೆ ಮಾತಾಡುವವರಾದರೆ ಆ ಭಾಷೆ ಕಲಿತು ಅವರ ಸ್ನೇಹ ಬೆಳೆಸಲು ಅಥವಾ ಸಂಬಂಧ ಬೆಳೆಸಲು ನೋಡುತ್ತಾರೆ. ಅದನ್ನೇ ಊರಿಗೆ ಬಂದವರು ಯಾರು? ಎಲ್ಲಿಂದ ಬಂದರು ಎಂಬ ವಿವರ ಮರುದಿನ ಹುಡುಗರ ಪಾಳಯದಲ್ಲಿ ಪ್ರಚಾರವಾಗುತ್ತದೆ.
ನಮ್ಮ ಪರಿಸರದ ಭಾಷೆಯನ್ನು ನಾವು ಕಲಿಯದಿದ್ದರೆ,ಅಕ್ಕ ಪಕ್ಕದವರು ಹೊಂದಿ ಬಾಳುವುದು ಹೇಗೆ?ಪ್ರಾದೇಶಿಕ ಭಾಷೆಯ ಅಗತ್ಯ ಬರುತ್ತದೆ.. ಹೊಸಬರ ಪರಿಚಯ ಮಾಡಿಕೊಳ್ಳಲು ಅವರೊಡನೆ ಸಂಪರ್ಕ ಬೆಳೆಸಲು ಅವರ ಭಾಷೆಯನ್ನೇ ಕಲಿತು ಬಿಟ್ಟರೆ ಸುಲಭವಾಗುವುದಲ್ಲವೇ?ನಾವು ಮನೆಯವರೊಡನೆ ಮಾತಾಡುವಾಗ ಉಪಯೋಗಿಸುವುದು ಮಾತೃಭಾಷೆಯಾಗಿರುತ್ತದೆ. ಅಂದರೆ ತಾಯಿಯಿಂದ ಕಲಿತ ಭಾಷೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಭಾಷೆ ಆಡುತ್ತಾರೆ. ಅದು ಪ್ರಾದೇಶಿಕ ಭಾಷೆಯೆನ್ನಿಸುವುದು. ಮನೆಗೆ ಬರುವ ಅನ್ಯರೊಡನೆ ಸಂಪರ್ಕಕ್ಕೆ ಇನ್ನೊಂದು ಭಾಷೆ ಬೇಕಾಗಬಹುದು. ಮನೆಯಲ್ಲಿ ಯಾರಾದರೂ ಕಿವುಡರೋ, ಮೂಕರೋ ಇದ್ದರೆ ಅವರೊಡನೆ ಅವರಿಗರ್ಥವಾಗುವಂತೆ ಅವರದೇ ಭಾಷೆಯಲ್ಲಿ ಮಾತಾಡಬೇಕಾಗುವುದು.ಆಗ ತಾನೆ ಮಾತಾಡತೊಡಗುವ ಮಕ್ಕಳೊಡನೆ ಆಡುವ ಭಾಷೆ ಅಂದರೆ ಅವರ ತೊದಲ್ನುಡಿ ಅವರಿಗೆ ತಿಳಿಯುವಂತೆ ಮಾತಾಡಬೇಕು. ಮಾತಾಡುವ ಶೈಲಿಯೋ, ರೀತಿಯೋ ವ್ಯತ್ಯಾಸವಿರಬೇಕು. ಕಿರಿಯರೊಡನೆ ಸಲುಗೆಯಿಂದ ಮಾತಾಡಿದರೆ ಹಿರಿಯರೊಡನೆ ಗೌರವದಿಂದ ಮಾತಾಡುವುದು,ಗೆಳೆಯರೊಡನೆ ಸಲುಗೆಯಿಂದ ಮಾತಾಡುವುದು ಹೀಗೆಲ್ಲಾ ಭಾಷೆಯಲ್ಲಿಯೂ ಪ್ರಭೇದಗಳಿವೆ.ಸಭೆಯಲ್ಲಿ ಮಾತಾಡುವಾಗ, ಕುಳಿತ ಕೇಳುಗರಿಗೆ ಇನ್ನಷ್ಟು ಕೇಳುವ ಎಂದು ತೋರುವಂತಿರಬೇಕು. ಹಾಸ್ಯಭರಿತ ಮಾತುಗಳು ಕೆಲವರಿಗೆ ಇಷ್ಟವಾದರೆ ಕೆಲವರಿಗೆ ರಸಭರಿತ  ಮಾತುಗಳು ಇಷ್ಟವಾಗುತ್ತವೆ. ನಾವು ಮಾತಾಡುತ್ತಿರುವಂತೆ ಮುಖ ತಿರುಗಿಸಿ  ಒಮ್ಮೆ ಇವ ಇಲ್ಲಿಂದ ಹೋಗಲಿ ಎನ್ನುವ ಮುಖಭಾವ ನಮ್ಮಿದಿರಿಗಿದ್ದವನಲ್ಲಿ ಕಂಡರೆ ಮಾತು ಅವನಿಗೆ ಇಷ್ಟವಿಲ್ಲ ಎಂದಂತಲ್ಲವೇ? ಭಾಷಣದ ಮಧ್ಯೆ ಕೈಚಪ್ಪಾಳೆ ಹೊಡೆಯುವುದೂ ಇದೆ ಕೆಲವರಿಗೆ. ನಿನ್ನ ಭಾಷಣ ಸಾಕುಬಾಯಿ ಮುಚ್ಚಿ ಕುಳಿತುಕೋ ಎಂಬ ಭಾವದಲ್ಲಾದರೆ ಮಾತು ನಿಲ್ಲಿಸಿ ಕುಳಿತುಕೊಳ್ಳುವುದೇ ಲೇಸು. ಯಕ್ಷಗಾನ ಅರ್ಥಗಾರಿಕೆಯಲ್ಲಿಯೂ ಪಾತ್ರ ಗೌರವವನ್ನುಳಿಸಿಕೊಂಡು ಕೇಳುಗರ ಮನ ರಂಜಿಸುವಂತಿದ್ದರೆ ಖುಶಿಯಾಗಿ ಕೈಚಪ್ಪಾಳೆ ಯಿಂದ ಸ್ವಾಗತಿಸುತ್ತಾರೆ. ನವರಸಭರಿತ ಹಾವಭಾವಗಳಿಂದ ಅಭಿನಯಪೂರ್ವಕ ಮಾತುಗಾರಿಕೆಯಿಂದ ಶ್ರೋತೃಗಳು ಮೆಚ್ಚಿ ಕೊಂಡಾಡುತ್ತಾರೆ.

Tuesday, June 19, 2012

ಮಾತು ಬಲ್ಲವರು

ಮಾತು ಬಲ್ಲವರು
  ಬಾಳಿಕೆ ಸುಬ್ಬಣ್ಣ ಭಟ್, ನಿವೃತ್ತ ಪ್ರಧ್ಯಾಪಕ, ಮ೦ಗಳೂರು.

    "ಮಾತಿನಿಂ ಹಗೆ ಕೆಳೆಯು" ಎಂದು ಸರ್ವಜ್ಞ ಕವಿ ಹೇಳುತ್ತಾ  "ಲೋಕದೊಳು ಮಾತೆ ಮಾಣಿಕ್ಯ" ಎಂದು ಬಣ್ಣಿಸಿದ್ದು ಗೊತ್ತಿದೆಯಷ್ಟೆ! "ಮಾತು ಬಲ್ಲವಗೆ ಜಗಳವಿಲ್ಲ" ಎಂದೂ ಹೇಳಿದ್ದಾರೆ ಬಲ್ಲವರು. ಮಾತಿನ ಮಹಾತ್ಮೆಯನ್ನು ಅಥವಾ ಚಮತ್ಕಾರವನ್ನು ಕವಿ ಪುಂಗವರನೇಕರ ಬರಹಗಳಿಂದ ತಿಳಿಯಬಹುದು.  ಕೇಳುವವರಿಗೆ ಹಿತ ಮಿತವಾಗಿ,  ಜಗಳ ಬಾರದಂತೆ ತೂಕದ ಮಾತುಗಳನ್ನು ಆಡಬೇಕು. "ಮೌನ ಬಂಗಾರ -ಮಾತು  ಬೆಳ್ಳಿ" ಎಂಬುದೂ ಒಂದು ಗಾದೆ ಮಾತೇ ಅಲ್ಲವೇ? ಗಾದೆಯ ಮಾತು ವೇದಕ್ಕೆ ಸಮಾನವಂತೆ!  ಮಾತಿನ ಮಹತ್ವ ಬಲ್ಲವನು "ತಾನು ತುಂಬಾ ತಿಳಿದವನು" ಎಂಬುದನ್ನು ತೋರಿಸಿ ಕೊಡುವುದಕ್ಕಾಗಿ ಹೆಚ್ಚು ಹೆಚ್ಚು ಮಾತನಾಡಿಕೊಂಡು ಹೋಗುವುದಿಲ್ಲ. ಬೇಕಾದಲ್ಲಿ ಮಾತ್ರ, ತನ್ನ ತಿಳುವಳಿಕೆಯನ್ನು ತನ್ನನ್ನು ಕೇಳಿದರೆ ಮಾತ್ರ ಹೇಳುತ್ತಾನೆ. ತುಂಬಿದ ಸಭೆಯಲ್ಲಿ, ಕೆಲವರು ತಾನು ಬುದ್ಧಿವಂತನೆಂದು ತೋರಿಸಿ ಕೊಡಲು ಮಾತಿನ ಹೊಳೆಯನ್ನು ಹರಿಸಿ ಬಿಡುತ್ತಾರೆ. ಮಾತು ಎಲ್ಲಿಂದ ಆರಂಭವಾಯಿತು, ಎಲ್ಲಿ ನಿಲ್ಲಿಸಬೇಕು, ತನ್ನ ಮಾತನ್ನು ಯಾರಾದರೂ ಕೇಳುತ್ತಾರೋ ಇಲ್ಲವೋ ಎಂಬುದರ ಪರಿವೆ ಅವರಿಗಿರುವುದಿಲ್ಲ. ಒಮ್ಮೆ ಬಾಯಿಯಿಂದ ಆಡಿದ ಮಾತನ್ನು ಮತ್ತೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಬಿದ್ದ ಮುತ್ತನ್ನಾದರೂ ಹುಡುಕಿ ತೆಗೆಯಬಹುದು ಅದಕ್ಕೇ "ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು" ಎನ್ನುತ್ತಾರೆ.   ಆದರೆ ಆಡಿದ ಮಾತನ್ನು ಹಿಂದಕ್ಕೆ ಪಡೆಯುವುದು ಸಮಂಜಸವೇ? ಅದಕ್ಕೆ ಮಾತು ಆಡುವಾಗ ತೂಕದ ಮಾತುಗಳನ್ನೇ ಯೋಚಿಸಿ ಮಾತಾಡಬೇಕು. ಕೆಲವೊಮ್ಮೆ "ಮಾತು ಆಡಿ ಕೆಟ್ಟ"  ಎಂದಾಗಬಾರದಲ್ಲವೇ?. ನಮ್ಮ ವ್ಯಕ್ತಿತ್ವವನ್ನು ಒರೆಗೆ ಹಚ್ಚಲು ಮಾತು ಅಳತೆಗೋಲಾಗುವುದು. ಮೌನವಾಗಿದ್ದರೆ, ನಮ್ಮನ್ನು ಕೆಲವರು ಮಾತಿಗೆ ಕರೆಯುವುದಿದೆ. ಆಗ ನಮ್ಮ ಮಾತನ್ನು ಹರಿಯಬಿಟ್ಟರೆ ನಾವು ಪರಸ್ಪರ ಗೆಳೆಯರಾಗಬಹುದು. ನಮ್ಮ ಮಾತಿಗೆ ಬೆಲೆಯಿದ್ದಲ್ಲಿ ಮಾತ್ರ ನಾವು ಮಾತಾಡಬೇಕು.
    ಭಾಷಣಕಾರರು ಕೆಲವರು  ಸಭಿಕರ  ಅಭಿರುಚಿಗನುಸರಿಸಿ ಹಿತಮಿತವಾಗಿ ಅಲ್ಲಲ್ಲಿಗೆ ಬೇಕಾದಷ್ಟೇ ಹೇಳಿ ಮುಗಿಸಿಬಿಡುತ್ತಾರೆ. ಇನ್ನು ಕೆಲವರು ತಮ್ಮ ವಾಕ್ಪ್ರೌಢಿಮೆಯನ್ನು ತೋರಿಸಿಕೊಡಲು ತುಂಬ ತುಂಬಾ ಮಾತಾಡುತ್ತಾ ಸಭಿಕರಿಗೆ ಬೇಸರ ತರಿಸುವಷ್ಟು ಮಾತಾಡುತ್ತಾರೆ. ಮತ್ತೆ ಕೆಲವರು ಸಭಿಕರ ತಾಳ್ಮೆಯನ್ನು ಪರೀಕ್ಷಿಸುವಂತೆ ಏನೇನೋ ಹೇಳುತ್ತಾ, ಮಾತುಗಳನ್ನು ಮುಂದುವರಿಸುತ್ತಾರೆ. ಆ ಸಭೆಯಲ್ಲಿ ಹೇಳಬೇಕಾದ ವಿಷಯ ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತದೆ ಕೆಲವರ ಮಾತಿನ ಪ್ರವಾಹ. ಹೇಳಬೇಕೆನಿಸಿದುದನ್ನು ಕಾಗದದಲ್ಲಿ ಯಾರಿಂದಲೋ ಬರೆಯಿಸಿ ತಂದವರು, ಅದನ್ನು ಓದಿ ಹೇಳುವುದಕ್ಕೂ ಆಗದೆ ಚಡಪಡಿಸುವುದೂ ಇದೆ. ಸಭೆಯಲ್ಲಿ ಕುಳಿತವರು ಕೇಳಿ ಸಾಕಾಗಿ ಬೇಸರದಿಂದ  ಎದ್ದು ಹೋಗತೊಡಗಿದರೂ ಕೆಲವರು ಭಾಷಣ ನಿಲ್ಲಿಸುವುದಿಲ್ಲ. ಹಾಸ್ಯ ರಸದ ಹೊನಲನ್ನೇ ಹರಿಯ ಬಿಟ್ಟಿದ್ದೇವೆಂದು ಹೆಮ್ಮೆ ಬೇರೆ! ಕೆಲವರು ಅವರಿಗೇ ನಗೆ ತಡೆಯಲಾರದೆ  ಒದ್ದಾಡುವುದೂ ಇದೆ. ಸಭಿಕರ ಅಭಿರುಚಿಯನ್ನು ಗಮನಿಸಿ ಹಿತ ಮಿತವಾಗಿ ಮುಖ್ಯ ವಿಷಯಕ್ಕೆ ಚ್ಯುತಿ ಬಾರದಂತೆ ಮಾತಾಡಿದರೆ ಕೇಳುವವರಿಗೆ ಖುಶಿ. ಅವರಿಗೆ ಮಧ್ಯೆ ಎದ್ದು ಹೋಗಲೂ ಮನಸ್ಸು ಬರಲಾರದು.  ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಮಾತಾಡಿದ್ದರೆ ಒಳ್ಳೆಯದಿತ್ತು ಎನ್ನಿಸುವಂತಿದ್ದರೆ ಅಂತಹ ಮಾತಿಗೆ  ಮುತ್ತಿನ ಬೆಲೆ! ಸಭೆಯಲ್ಲಿ ಎಷ್ಟು ಭಾಷಣಕಾರರು ಮಾತಾಡಲಿದ್ದಾರೆ? ಅವರಿಗೆ ಮಾತಾಡಲು ನಿಗದಿ ಪಡಿಸಿದ ಸಮಯವೆಷ್ಟು?  ಎಂಬುದನ್ನು ತಿಳಿದು ಇದ್ದ ಸಮಯಾವಕಾಶವನ್ನು ಹಂಚಿಕೊಂಡು ಸಭಾ ಮರ್ಯಾದೆಯನ್ನು ಉಳಿಸಿಕೊಂಡರೆ  ಅದು ಸಭ್ಯತೆ!
    ಭಾಷಣಕಾರರು ಮಾತಾಡುತ್ತಿರುವಂತೆ, ಸಭೆಯಲ್ಲಿ ಕುಳಿತು ತಮ್ಮ ಬಾಯಿ ಚಪಲಕ್ಕೆ ಹತ್ತಿರದಲ್ಲಿದ್ದವರೊಡನೆ ಮಾತಾಡಿದರೆ ಸಭ್ಯತೆ, ಶಿಷ್ಟಾಚಾರ ತಪ್ಪಿದಂತಾಗುವುದು. ಮಾತ್ರವಲ್ಲ ಶಿಸ್ತುಭಂಗ ಮಾಡಿದಂತೂ ಆಗುವುದು. ಕೆಲವರಿಗೆ ಯಾರಲ್ಲಿ ಹೇಗೆ ಮಾತಾಡಬೇಕು, ಎಷ್ಟು ಮಾತಾಡಬಹುದು ಎಂಬ ಯೋಚನೆಯೂ ಇರುವುದಿಲ್ಲ. ಮೇಲಧಿಕಾರಿಗಳೊಂದಿಗೆ, ಹಿರಿಯರೊಂದಿಗೆ, ಗೌರವಾನ್ವಿತರೊಂದಿಗೆ ಹೀಗೆ  ಮಾತಿನ ತರ-ತಮಗಳಿರುವುದಿಲ್ಲವೇ? ಕಿರಿಯರೊಂದಿಗೆ, ಆಪ್ತರೊಂದಿಗೆ, ಗೆಳೆಯ ಗೆಳತಿಯರೊಂದಿಗೆ - ಹೀಗೆ ಮಾತಿನ ರೀತಿಯಲ್ಲಿ ವ್ಯತ್ಯಾಸಗಳಿರುವಿರುವುದಿಲ್ಲವೇ? ಚಿಕ್ಕ ಮಕ್ಕಳೊಂದಿಗೆ ಮಾತಾಡುವಾಗ ಅವರಿಗೆ ಅರ್ಥವಾಗುವಂತೆ ನಾವೂ ಮಕ್ಕಳಾಗಿ ಮಾತಾಡಬೇಕು.  ಇತರರಿಂದ ನಾವು ಏನನ್ನು ಬಯಸುತ್ತೇವೆಯೋ ಅದನ್ನು ಮೊದಲು ನಾವು ಅವರಿಗೆ ಕೊಟ್ಟರೆ, ಅವರಿಂದ  ಹಿಂದಕ್ಕೆ ಪಡೆಯಬಹುದಂತೆ!  ಅವರನ್ನು ನಾವು ಗೌರವಿಸಿದರೆ ಅವರೂ ನಮ್ಮನ್ನು ಗೌರವಿಸುತ್ತಾರೆ. ಅದನ್ನೇ ಕೊಟ್ಟು ಪಡೆಯುವುದು ಎನ್ನುತ್ತಾರೆ. ಸಮಾಜವನ್ನು ನಾವು ಗೌರವಿಸಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ. 
    ಒಮ್ಮೆ ನಾನು ದಾರಿಯಲ್ಲಿ ನಡೆದು ಬರುತ್ತಿದ್ದಾಗ ಒಂದು ಹೋಟೆಲಿನೊಳಗೆ ಒಬ್ಬ ತನ್ನ ಮಾತಿನ ಝರಿಯನ್ನು ಹರಿಯಬಿಡುತ್ತಿದ್ದುದನ್ನು ಕೇಳಿದ್ದೇನೆ. ಅವನೊಂದು ಹಲಸಿನ ಮರದಲ್ಲಿದ್ದ ಕಾಯಿಗಳನ್ನು ವರ್ಣಿಸುತ್ತಾ " ಮರದಲ್ಲಿದ್ದ ಎಲೆಗಳನ್ನಾದರೂ ಎಣಿಸಬಹುದು. ಆದರೆ ಮರದಲ್ಲಿರುವ ಕಾಯಿಗಳನ್ನು ಎಣಿಸಲು ಸಾಧ್ಯವಿಲ್ಲ" ಎನ್ನುತ್ತಿದ್ದ. ಅತಿಶಯೋಕ್ತಿ ಅಲಂಕಾರಕ್ಕೆ ಒಂದು ಉದಾಹರಣೆ ಸಿಕ್ಕಿತು. ಅವನೇನು ಕವಿಯೂ ಅಲ್ಲ ವಿದ್ಯಾವಂತನೂ ಅಲ್ಲ. ಆದರೆ ಮಾತುಗಾರಿಕೆಯ ರೀತಿ ಅಮೋಘವಾದುದು. ಆದರೆ ಮತ್ತೊಮ್ಮೆ ಅಂತಹ ಮಾತುಗಳನ್ನು ಅವನಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಕೆಲವರಿಗೆ ನೆರೆ ಹೊರೆಯವರನ್ನು ಬಂಧುಗಳನ್ನು ದೂರುವುದಕ್ಕೆ, ತಮಾಷೆ ಮಾಡುವುದಕ್ಕೆ ಇಂತಹ ಅಡ್ಡೆಗಳು, ಮಾತಿನ ಕಟ್ಟೆಗಳಿರುತ್ತವೆ. ಬೆಳಿಗ್ಗೆ, ಸಂಜೆ ತಿರುಗಾಡಿಕೊಂಡು, ಹೀಗೆ ಹೋಗುತ್ತಾ ಸಿಕ್ಕವರೊಡನೆ ತಮ್ಮ ಮಾತಿನ ಚಪಲ ತೀರಿಸಿಕೊಳ್ಳುತ್ತಾರೆ .ಮಂತ್ರಿಗಳು, ರಾಜಕೀಯ ಧುರೀಣರು  ಯಾರೋ ಬರೆದು ಕೊಟ್ಟ ಮಾತುಗಳನ್ನು ಸರಿಯಾಗಿ ಉಚ್ಚರಿಸುವುದಕ್ಕೆ ಆಗದಿದ್ದರೂ ಕಷ್ಟದಿಂದ ಓದಿ ಮುಗಿಸಿ ಧನ್ಯರಾಗುವವರೂ ಇದ್ದಾರೆ. ಕೆಲವರು ಮಧ್ಯೆ ಹಾಸ್ಯದ ಚಟಾಕಿ ಹಾರಿಸಿ ಜನರ ಗಮನ ತಮ್ಮೆಡೆಗೆ ತರುವುದೂ ಇದೆ. ಎಲ್ಲವೂ ಮಾತಿನ ಚಮತ್ಕಾರ!
    ನಮ್ಮಲ್ಲಿಗೆ ಯಾರಾದರೂ ಆಗಂತುಕರು, ಗೆಳೆಯರು, ಬಂಧುಗಳು ಬಂದರೆ ಅವರನ್ನು ಮರ್ಯಾದೆಯಿಂದ ಮಾತಾಡಿಸಬೇಕು. ಅಲ್ಲದಿದ್ದರೆ ಬಂದವರಿಗೆ ಅವಮಾನ ಮಾಡಿದಂತಲ್ಲವೇ? ನಾವೂ ಅವರ ಮನೆಗೆ ಹೋದಾಗ ಹಾಗೆ ಅವಮಾನಿಸಿದರೆ  ನಮಗೂ ಬೇಸರವಾಗದೇ? ಅತಿಥಿ, ಆಗಂತುಕರಾದರೂ, ಅವರನ್ನು ಗೌರವದಿಂದ ಕಂಡರೆ ನಮಗೆ ಯಾವ ಕೊರತೆಯೂ ಇಲ್ಲ. ನಮ್ಮ ಮನೆಗೆ ಬಂದವರನ್ನು ಅವರ ಕ್ಷೇಮ ವಿಚಾರಣೆ, ಬನ್ನಿರಿ, ಕುಳ್ಳಿರಿ,  ಬಾಯಾರಿಕೆ ಬೇಕೇ? ಎಂದರೆ ನಮ್ಮ ಗೌರವ ಹೆಚ್ಚಾದೀತೇ ಹೊರತು ಕಡಿಮೆಯಾಗಲಾರದು. ಮಹನೀಯರೊಬ್ಬರು, ದಾರಿಯಲ್ಲಿ ಯಾರನ್ನು ಕಂಡರೂ "ಬನ್ನಿ ಮನೆಗೆ ಹೋಗುವ, ಬಾಯಾರಿಕೆಯಾದರೂ ಕುಡಿದು ಬರಬಹುದಲ್ಲ" ಎಂದು ಒತ್ತಾಯಿಸಿ ಕರಕೊಂಡು ಹೋದರು. ಮನೆಯ ಒಳಗೆ ತಲಪಿದೊಡನೆ ಒಂದು ಚಾಪೆ ಹಾಕಿ ಕುಳ್ಳಿರಲು ಹೇಳಿ ಮನೆಯೊಳಗೆ ಹೋದವರು, ಎಷ್ಟು ಹೊತ್ತಾದರೂ ಮತ್ತೆ ಕಾಣಿಸದೆ ಮರೆಯಾಗಿದ್ದರು. ಆ ವ್ಯಕ್ತಿ ಮತ್ತೊಮ್ಮೆ ಕಂಡಾಗಲೂ ಹಾಗೆ ಕರೆದಿದ್ದರೂ ನಾನು ಮತ್ತೆ ಹೋಗಲಿಲ್ಲ. ನಮ್ಮ ಗೆಳೆಯರು, ಬಂಧುಗಳು ದಾರಿಯಲ್ಲಿ ಕಂಡಾಗಲೂ ಒಬ್ಬರಿಗೊಬ್ಬರು ಮಾತಾಡಿಸದಿದ್ದರೆ ಬೇಸರವಾಗುತ್ತದೆ. ಕೆಲವರು ಎಲ್ಲಿಯೋ ನೋಡಿಕೊಂಡು ಮಾತಾಡಿಸುವುದು, ಮನಸ್ಸಿಲ್ಲದ ಮನಸ್ಸಿನಿಂದ ಎಂದು ಬೇರೆ ಹೇಳಬೇಕಾಗಿಲ್ಲ. 
    "ಮಾತು ನಮ್ಮ ವ್ಯಕ್ತಿತ್ವವನ್ನು ಅಳೆಯುವ ಅಳತೆಗೋಲು" ಎಂದರೆ ಅತಿಶಯೋಕ್ತಿಯಲ್ಲ. ಗೆಳೆತನವೂ ಸಮಾನ ಅಭಿರುಚಿಯುಳ್ಳವರೊಳಗೇ ಮುಂದುವರಿಯುತ್ತದೆ ಎಂಬುದು ಖಂಡಿತ! ಉದ್ಯೋಗಕ್ಕಾಗಿ ಅಪೇಕ್ಷೆ ಪಟ್ಟಾಗ ಇಂಟರ್ವ್ಯೂ ಸಮಯದಲ್ಲಿ ವ್ಯಕ್ತಿತ್ವಕ್ಕೆ ಪ್ರಾಶಸ್ತ್ಯವಿರುವುದು. ಗಂಡನ್ನು ಆರಿಸುವಾಗಲೂ, ಹುಡುಗಿಯನ್ನು ಆಯ್ಕೆ ಮಾಡುವಾಗಲೂ ನಮ್ಮ ಮಾತಿನಲ್ಲಿ ಕಂಡು ಬರುವ ನಯ- ವಿನಯಕ್ಕೇ ಬೆಲೆ ಬರುತ್ತದೆ. ಒಂದು ಮನೆಯಲ್ಲಿ ಹಿರಿಯರ ಚಾಳಿಯನ್ನು ಕಿರಿಯರು ಅನುಸರಿಸುವರಂತೆ! ಅದಕ್ಕೆ ಅವನು ಯಾರ ಮಗ? ಅವಳು ಯಾರ ಮಗಳು? ಎಂದು ಮನೆತನದ ಬುಡಕ್ಕೇ ಬರುತ್ತಾರೆ. "ಮಾತು ಕುಲಗೆಡಿಸಿತು" ಎಂದು ಹೇಳುತ್ತಾರೆ.  ಹಿರಿಯರ ಬುಡಕ್ಕೇ ಬರುತ್ತದೆ ನಮ್ಮ ನಡತೆ! ಅಂತೂ ಎಲ್ಲವೂ ಮಾತಿನ ಮರ್ಮ ಹೊಂದಿಕೊಂಡು ನಮ್ಮ ಜಾತಕ ಇದೆಯೆಂದಾಯಿತು. ಅದಕ್ಕೇ ಮಾತು ಆಡುವುದಕ್ಕೆ ಮೊದಲು ಚೆನ್ನಾಗಿ ಚಿಂತಿಸಿ ಹಿತ ಮಿತವಾಗಿ ಆಡಿದರೆ ಮತ್ತೆ ಮಾತಿನ ಮುತ್ತನ್ನು ಹೆಕ್ಕಿ ತೆಗೆಯುವ ಕಷ್ಟವಿಲ್ಲ. ಮಾತಿಗೆ ಮರುಳಾಗಿ ಸೋತು ಹೋಗುವುದು ಸಾಮಾನ್ಯ. ಮುಂಚಿತವಾಗಿ ಚಿಂತಿಸಿದರೆ ಮತ್ತೆ ದುಃಖಿಸುವುದು ಬೇಡವಲ್ಲವೇ? ಒಬ್ಬನಿಗೆ  ಒಮ್ಮೆ   ಮಾತು ಒಮ್ಮೆ ಕೊಟ್ಟ ಮೇಲೆ  ಮಾತಿನಂತೆ ನಡೆಯಬೇಕು. ತಪ್ಪಿದರೆ  ನಮ್ಮ  ಮಾತಿಗೆ ಬೆಲೆಯಿಲ್ಲವಾಗುತ್ತದೆ. ಹಿಂದೆ ಭೀಷ್ಮ  ತಂದೆಗೆ ಕೊಟ್ಟ ಮಾತಿನಂತೆ ಆಜನ್ಮ ಬ್ರಹ್ಮಚಾರಿಯಾದ! ಶ್ರೀ ರಾಮ ತಂದೆಯು ಕೊಟ್ಟ ಮಾತಿನಂತೆ ವನವಾಸಕ್ಕೆ ಹೋದ. ಇದು ಪುರಾಣ ಕತೆಯಾದರೂ ಭಾರತೀಯರಿಗೆ ಆದರ್ಶವಲ್ಲವೇ? ಹಿರಿಯರ ಆದರ್ಶವೂ ನಮಗೆ ದಾರಿದೀಪವಲ್ಲವೇ? ಈಗಿನ ವಚನಭ್ರಷ್ಟ ರಾಜಕಾರಣಿಗಳಿಗೆ ಇಂದಿಗೂ ತಮ್ಮ ಮಾತುಗಾರಿಕೆಯ ವರಸೆಯಿಂದ ಜನರನ್ನು ಮತ್ತೆ ಮತ್ತೆ ವಂಚಿಸುವುದೇ ಅವರ ಜೀವನದ ಗುರಿಯಾಗಿಸಿಕೊಂಡಿದ್ದಾರೆಂದು ತೋರುತ್ತದೆ. ದಾನಶೂರ ಕರ್ಣ ಕೊಟ್ಟ ಮಾತಿನಿಂದಲೇ  ಕೊನೆಯುಸಿರೆಳೆದನಲ್ಲವೇ!
     ಇನ್ನು ಕೆಲವರಿಗೆ ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದಕ್ಕೆ ಮಾತು ಸಹಾಯಕವಾಗುತ್ತದೆ. ಮಾತಿನ ಧಾಟಿಯಿಂದ ಎಂಥವರನ್ನೂ ಬುಟ್ಟಿಗೆ ಹಾಕಿಕೊಳ್ಳುವ ಚಾಣಾಕ್ಷತೆ ಎಲ್ಲರಿಗೂ ಲಭಿಸುವುದಿಲ್ಲ. "ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ". ಆದರೆ ಅಂತಹ ಬಲ್ಲವರು ತನ್ನ ಬಲುಹ ಬರಿದೆ ತೋರಗೊಡುವುದಿಲ್ಲ. ಬಲ್ಲಿದರೆಂಬುದು ಅವರ ಮಾತುಗಳಿಂದಷ್ಟೆ ಗೊತ್ತಾಗುವುದು. ಬರಿಯ ಬೊಗಳೆ ಬಲುಹ ತೋರುವುದಿಲ್ಲ. ಅವರಿಗೆ ತಾನು ಬಲ್ಲೆನೆಂಬುದನ್ನು ಪ್ರದರ್ಶಿಸಬೇಕೆಂಬ ಆಸೆಯೂ ಇಲ್ಲ.  ಮಾತಿನಿಂದಲೇ ಕೆಲವರು  ಎಷ್ಟು ಬಲ್ಲವರೆಂಬುದನ್ನು ತೋರಿಸಿ ಕೊಡುವುದಿಲ್ಲವೇ? ಯಕ್ಷಗಾನದ ಅರ್ಥಗಾರಿಕೆಯಲ್ಲಿ ತಮ್ಮ ವಾಕ್ಸಾಮರ್ಥ್ಯವನ್ನು  ಪ್ರೌಢಿಮೆಯನ್ನು ತೋರಗೊಡಲು ಮಾತಿನ ಸರಪಳಿಯನ್ನೇ ಬಿಟ್ಟು ಬಿಡುತ್ತಾರೆ. ಪಾತ್ರ ಗೌರವ ಅವರಿಗೆ ಬೇಕಾಗುವುದಿಲ್ಲ. ಇನ್ನು ಕೆಲವರು ಚಿಕ್ಕ ಮಾತಿನಿಂದಲೇ ಪಾತ್ರಕ್ಕೆ ಕೊರತೆಯಾಗದಂತೆ ಎದುರಾಳಿಗಳನ್ನು ಮಾತಿನ ಚಾಟಿಯಿಂದ ಬಾಯಿ ಮುಚ್ಚಿಸುತ್ತಾರೆ. ಎಲ್ಲವೂ ಅಲ್ಲಲ್ಲಿಗೆ ತಕ್ಕಂತೆ ಇದ್ದರೆ ಚೆನ್ನ! ಇನ್ನೊಬ್ಬರಿಗೆ ನೋವಾಗದಂತೆ, ಬೆಣ್ಣೆಯಲ್ಲಿ ಕೂದಲೆಳೆದಂತೆ ನಯವಾಗಿ ಮಾತಾಡುವ ಮಾತಿನ ಕೈಚಳಕ ತೋರಿಸುವ ಮಾತುಗಳು ಜನರಂಜನೆಗೆ ಪಾತ್ರವಾದೀತಲ್ಲವೇ? ಇನ್ನು ಕೆಲವರ ಮಾತು ಸಮಯಾಬಾಧಿತವಾಗಿ ಮುಂದಿನ ಪೀಳಿಗೆಗೆ ದಾರಿ ದೀಪಗಳಾಗಿವೆಯೆಂಬುದು ನಿತ್ಯಸತ್ಯ!

   
  

Monday, June 18, 2012

ಹೊಟ್ಟೆ ಪುರಾಣ!

                   

                        ಹೊಟ್ಟೆ
            ಹೊಟ್ಟೆಯ ಸುದ್ದಿ ತೆಗೆವಗಳೇ ಮದಲು ನೆಂಪಪ್ಪದು ಹೊಟ್ಟೆಯ ದೇವರು ಗಣಪ್ಪನ! ಅವಂಗೆ ಮದಲು ಕೈಮುಗುದು ಸುರು ಮಾಡುತ್ತೆ ಹೊಟ್ಟೆ ಸುದ್ದಿಯ. ದೇವರಕ್ಕಳ ಪೈಕಿ ಹೊಟ್ಟೆ ಕಾಂಬದು ಅವಂಗೊಬ್ಬಂಗೇ. ಅವನ ಹೊಟ್ಟೆಯ ಕತೆ ಗೊಂತಿದ್ದನ್ನೇ! ಚೌತಿ ದಿನ ಎಲ್ಲೋಡಿಕ್ಕೂ ಕೊಟ್ಟದರ ತಿಂದು ಹೊಟ್ಟೆ ದೊಡ್ಡ ಆದ್ದು;  ನಡಕ್ಕೋಂಡು ಗೆದ್ದೆ ಹುಣಿಲ್ಲಿ ಹೋಪಗ ಬಿದ್ದದು; ಬಿದ್ದು ಹೊಟ್ಟೆ ಒಡದ್ದು; ಚಂದ್ರ ನೋಡಿ ನೆಗೆ ಮಾಡಿದ್ದು, ಚಂದ್ರಂಗೆ ಶಾಪ ಕೊಟ್ಟದು; ಹೊಟ್ಟೆ ಒಡದ್ದಕ್ಕೆ ಹಾವಿನ ಸೊಂಟಕ್ಕೆ ಸುತ್ಯೊಂಡದು ಹಿಂದೆ ನಡೆದ ಕತೆಯಡೊ. ನಿಜವೋ ಹೇಂಗೆ ಗೊಂತಿಲ್ಲೆ. ಅಂತೂ ಅವನ ಹೊಟ್ಟೆ ದೊಡ್ಡ ಇಪ್ಪ ಕಾರಣವೋ ಎಂತದೋ, ಲಂಬೋದರ ಹೇಳುತ್ತವು. ಆನು ಬರವ ಈ ಸುದ್ದಿಗೆ ಯಾವ ವಿಘ್ನವೂ ಆಗದ್ದ ಹಾಂಗೆ ಅವನೇ ನೋಡಿಗೊಳ್ಳೆಕ್ಕು ಹೇಳಿ  ಬೇಡುಗೊಳ್ಳುತ್ತೆ. .ಎನ್ನ ಹೊಟ್ತೆ ದೊಡ್ಡ ಇದ್ದ ಕಾರಣ ಅಲ್ಲ. ಈಗ ಹೊಟ್ಟೆಯ ಸುದ್ದಿ ತೆಗದ್ದು. ದಾಸರ ಪದಲ್ಲಿ ಹೇಳುತ್ತಲ್ಲದೋ? "ಎಲ್ಲಾರು ಮಾಡುವುದು ಹೊಟ್ಟೆಗಾಗಿ,ತುತ್ತು ಹಿಟ್ಟಿಗಾಗಿ'" ಲೋಕದ ಎಲ್ಲ ಜನಂಗಳುದೆ ಮಾಡುವ ಎಲ್ಲ ಕೆಲಸಂಗಳು ಈ ಹೊಟ್ಟೆಯ ತುಂಬುಸುಲೇ ಅಲ್ಲದೋ? ಗಣಪತಿಯ ದಿನಿಗೇಳಿ ಎಲ್ಲೋರು ಕೊಟ್ಟ ಹಾಂಗೆ  ನಮಗೆಲ್ಲ ಈ ಹೊಟ್ಟೆ ತುಂಬುಸಲೆ ಸಿಕ್ಕಿದರೆ ಆರೂ ಕೆಲಸವೂ ಮಾಡದ್ದೆ ಸುಮ್ಮನೆ ಆರಾಮವಾಗಿ ಕೂರುತ್ತಿತ್ತವು. ಮದಲೊಂದರಿ ಹೊಟ್ಟೆಯ ಪಕ್ಷ ಹೇಳಿ ಒಂದು ಪಕ್ಷ ಇತ್ತಡೊ. ಎಲ್ಲೋರಿಂಗು ಹೊಟ್ಟೆಯ ಬಗ್ಗೆ ಗೊಂತಿದ್ದರುದೆ ಆರುದೆ ಆ ಪಕ್ಷಕ್ಕೆ ಸೇರದ್ದೆ ಓಟಿ ಕೊಡದ್ದೆ ಈಗ ಅ ಪಕ್ಷದ ಹೆಸರೇ ಇಲ್ಲೆ. ಎಲ್ಲ ಜೀವಿಗೊಕ್ಕು ಬದುಕ್ಕೆಕ್ಕಾರೆ ಈ ಹೊಟ್ಟೆ ತುಂಬುಸಿಗೊಳ್ಳೆಕ್ಕು. ಅದರ ತುಂಬುಸುಲೆ ಜನಂಗೊ ಯಾವ ಕೆಲಸ ಮಾಡುಲೂ ಹೇಸುತ್ತವಿಲ್ಲೆ. ಹೇಳುವದು ಎಂತ ಮಾಡಲಿ ಸುಮ್ಮನಿಪ್ಪಲೆ ಹೊಟ್ಟೆ ಬಿಡೆಕ್ಕನ್ನೆ ಹೇಳಿಗೊಳ್ಳುತ್ತವು. ದೂರಿಂಗೆ ಮಾಂತ್ರ ಹೊಟ್ಟೆ. ಈ ಹೊಟ್ಟೆ ತುಂಬುಸಿದರೇ ನಮ್ಮ ರಥ ನಡವದು. ಅನ್ಯಾಯ ಅಧರ್ಮ ಮಾಡುವೋರು ಹೇಳುವದು ಮಾಂತ್ರ ಹೊಟ್ಟೆಯನ್ನೇ ದೂರ್ಯೊಂಡು. ಹೊಟ್ಟೆ ಎಲ್ಲೋರಿಂಗು ಇದ್ದರುದೆ, ಬೇಕಾದರುದೆ ಈ ಹೊಟ್ಟೆ ತುಂಬುಸುಲೆ ಜನಂಗೊ ಬೇಡದ್ದ ಕೆಲಸವನ್ನೂ ಮಾಡ್ಯೊಳ್ಳುತ್ತವು. ಇನ್ನೊಬ್ಬಂಗೆ ತೊಂದರೆ ಕೊಡದ್ದೆ ಎಂತ ಬೇಕಾರು ಮಾಡಲಿ. ಈಗ ನಡವದು ಸಮಾಜಕ್ಕೇ ದ್ರೋಹ. ನಮ್ಮ ಹೊತ್ತಿಪ್ಪ ಭೂಮಾತೆಗೂ ಅನ್ಯಾಯ! ಅಬ್ಬೆಯ ಹೊಟ್ಟೆಯನ್ನೇ ಬಗದು ಅದಿರು ಬೇರೆ ದೇಶಕ್ಕೆ ಕಳುಸಿ ಸಂಪತ್ತು ಹೆಚ್ಚಿಸ್ಯೊಂಬದು, ಮಾತೃ ದ್ರೋಹ ಹೇಳುವದು ಅವಕ್ಕೆ ಗೊಂತಿಲ್ಲೆ! ಈಗಂಗೆ ಸರಿ ಇನ್ನು ಎಷ್ಟು ವರ್ಷ ಹೀಂಗೆ ಗರ್ಪಿ ತೆಗೆವಲಕ್ಕು? ಮತ್ತಾಣೋರಿಂಗೆ  ಅವು ಗರ್ಪಿ ತೆಗವಲೆ ಎಲ್ಲಿಗೆ ಹೋಯೆಕ್ಕು? ಈ ಯೋಚನೆ ಜನಂಗೊಕ್ಕೆ ಇಲ್ಲೆ. ಇಂದು ಕಳುದ್ದು ಎನ್ನ ದಿನ. ನಾಳಂಗೆ ಹೇಂಗೋ ಎಂತದೋ ಯೋಚನೆ ಇಲ್ಲೆ.
                            ಕೆಲವು ಜನ ಹುಟ್ಟುವಗಳೇ ಆಗರ್ಭ ಶ್ರೀಮಂತರಾಗಿದ್ದರೆ ಹೊಟ್ಟೆ ತುಂಬುಸುಲೆ ಯೋಚನೆ ಇಲ್ಲೆ. ಕೂದು ತಿಂದರೂ ಮುಗಿಯದ್ದಷ್ಟು ಇರ್ತು! ಆದರೆ ಬಡವರಾಗಿ ಹುಟ್ಟಿದೋರು ತಿಂಬಲೆ,ಹೊಟ್ಟೆ ತುಂಬುಸುಲೆ ಕಷ್ಟ. ಇದ್ದೋವು ದಿನಾ ದೋಸೆ ಅದು ಇದು ಹೇಳಿ ಬಗೆ ಬಗೆ ತಿಂಡಿಗಳ ಅಬ್ಬೆ ಮಾಡಿಕೊಟ್ಟರೆ ತಿಂದೊಂಡು ಹಾರಿಗೊಂಡು ಇಪ್ಪಲಕ್ಕು. ಈ ಮಕ್ಕಳ ಹೊಟ್ತೆ ತುಂಬುಸುಲೆ ನಾಳಂಗೆ ಎಲ್ಲಿಗೆ ಹೋಪದು? ಆರ ಕೈಕಾಲು ಹಿಡಿವದು ಹೇಳಿ ಯೋಚನೆ ಮಾಡೆಕ್ಕಾದ ಪರಿಸ್ಥಿತಿ ಬಡವರಿಂಗೆ. ಹಳ್ಲಿಗಳಲ್ಲಿ ಅಲ್ಲಿ ಅಲ್ಲಿ ಜಂಬ್ರಂಗೊಕ್ಕೇಲ್ಲ ಹೋದರೆ ಹೊಟ್ಟೆಲ್ಲಿ ಹಿಡ್ಡಿತ್ತಷ್ಟು ತಿಂಬದು.ಮರದಿನ ಎಲ್ಲಿಯೂ ಸಿಕ್ಕದ್ದರೆ ಉಪವಾಸ! ಹೀಂಗಾದರೆಅವು ಎಂತ ಮಾಡೆಕ್ಕು? ಇದರಿಂದಲೇ ಹೇಳಿ ಕಾಣುತ್ತು "ಬೊಳ್ಳದ ಮನಂತಾನಿ ಬೊಟ್ಟೊ" ಹೇಳುವ ಗಾದೆ ಹುಟ್ಟಿದ್ದು.ದೇವರು ಸೃಷ್ಟಿ ಮಾಡುವಗಲೇ ಈ ವ್ಯತ್ಯಾಸ ಮಾಡಿದ್ದು ಹೇಳುತ್ತವು. ಆದರೆ ನಮ್ಮ ಹತ್ತರೆ ಹೆಚ್ಚು ಇಪ್ಪಗ ಇಲ್ಲದ್ದೋರಿಂಗೆ ರಜ ರಜ ಕೊಟ್ಟರೆ ಅವಕ್ಕೂ ಚಿಂತೆ ಇಲ್ಲೆ. ಅವುದೇ ಕಲ್ತು ಮುಂದೆ ಬಕ್ಕು.ಮತ್ತೆಂತಾದರು ಉದ್ಯೋಗ ಮಾಡ್ಯೊಂಡು ಇಪ್ಪಲಕ್ಕು. ಆದರೆ ಹಂಚಿ ತಿಂಬ ಬುದ್ಧಿ ಮನುಷ್ಯಂಗೆ ಬತ್ತಿಲ್ಲೆ ಏಕೆ?ಆನು ವಿದೇಶಲ್ಲಿಪ್ಪಗ ಅಲ್ಲಿ ಕೆಲಸ ಮಾಡ್ಯೊಂದು ಇಪ್ಪ ಮಕ್ಕೊ ಅವರ ಮಕ್ಕಳತ್ರೆ ಹೇಳುವದು ಕೇಳಿದ್ದೆ. "ಪರಸ್ಪರ ಹಂಚಿಗೊಳ್ಳಿ" ಹೇಳಿ ಮಕ್ಕಳ ಒಪ್ಪುಸುವದು ಹಾಂಗೆ ಒಬ್ಬನತ್ರೆ ಇಪ್ಪ ಆಟದ ಸಾಮಾನು ಇನ್ನೊಬ್ಬಂಗೆ ಕೊಡುವದು, ಅವನತ್ರೆ ಇಪ್ಪದರ ಮತ್ತೊಬ್ಬಂಗೆ ಕೊಡುವದು ಹೀಂಗೆಲ್ಲ ಹೊಂದಿಸಿಗೊಳ್ಳುತ್ತವು. ಅವಕ್ಕೆ ಸಣ್ಣಾದಿಪ್ಪಗ ಶಾಲೆಲ್ಲಿಯೂ ಇದರನ್ನೇ ಹೇಳಿಕೊಡುತ್ತವಡೊ. ತಿಂಡಿಯನ್ನೂ ಹಾಂಗೆ ಹಂಚಿಗೊಳ್ಳುತ್ತವು. ಹೀಂಗೆ ಮಾಡ್ಯೊಂಡರೆ ಜಗಳ ಬತ್ತಿಲ್ಲೆ. ಒಂದೇ ಸೈಕಲ್ ಇಪ್ಪದು ಒಂದು ಮನೆಲ್ಲಿ ಹೇಳಿ ಆದರೆ ಒಬ್ಬ ಹತ್ತು ಮಿನಿಟ್ ಮೆಟ್ಟಿ ಆದಮೇಲೆ ಇನ್ನೊಬ್ಬ ಹೇಳಿ ಮನೆಲ್ಲೇ ಇಪ್ಪ ಮಕ್ಕಳೆ ಒಪ್ಪಂದಲ್ಲಿ ಸರಿ ಮಾಡಿಗೊಂಡರೆ ಚರ್ಚೆ ಬಪ್ಪಲಿಲ್ಲೆ. ಮನೆಲ್ಲಿಪ್ಪ ಎಲ್ಲೋರಿಂಗು ಬೇರೆ ಬೇರೆ ತೆಗೆಯಕ್ಕಾದ ಅಗತ್ಯವು ಇಲ್ಲೆ. ಮನೆಲ್ಲೇ ಹೀಂಗೆ ಅಭ್ಯಾಸ ಮಾಡ್ಯೊಂಡರೆ ಆ ಊರಿಲ್ಲಿ, ದೇಶಲ್ಲಿಯೇ ಎಲ್ಲೋರು ಹೊಂದಿ ಬಾಳುಲಕ್ಕು. ದೇವರು ಭೇದ ಮಾಡಿದ ಹೇಳುವದಕ್ಕೆ ಬದಲು ದೇವರು ಕೊಟ್ಟದರ ಹೀಂಗೆ ಹಂಚ್ಯೊಂಡರೆ ಸರಿ ಅಕ್ಕಲ್ಲದೋ? ಅದಲ್ಲ ಇದು ಎನಗೆ ಇಪ್ಪದು. ಎನ್ನ ಅಧಿಕಾರ,ಇಲ್ಲಿ ಆನು ಹೇಳಿದ ಹಾಂಗೆ ಎಲ್ಲೋರು ಕೇಳೆಕ್ಕು. ಈ ಮಾತುಗೊ ಬಂದರೆ ತನ್ನಷ್ಟಕ್ಕೇ ಜಗಳ, ಮತ್ಸರ,ಕೋಪ ಹೀಂಗೆಲ್ಲ ಷಡ್ವೈರಿಗಳ ಒಡನಾಟ ಬತ್ತು. ಇಡೀ ಲೋಕಲ್ಲೇ ಘರ್ಷಣೆ ಉಂಟಾವುತ್ತು.
    ಮೇಲಾಟ,,ಸ್ಪರ್ಧೆ ಎಲ್ಲ ಬಪ್ಪದು ಆನು- ಹೇಳುವ ಅಹಂಕಾರಂದ ಹೇಳಿ ಎನ್ನ ಅಭಿಪ್ರಾಯ. ಹೊಟ್ಟೆ ಇದ್ದು ಹೇಳಿ ಹೆಚ್ಚು ತುಂಬುಸುಲೆ ಹೋದರೆ ಅದಕ್ಕೆ ಇನ್ನು ಸಾಕು ಹೇಳಿ ತೋರುಗೋ? ಮದಲೊಂದು ಮನುಷ್ಯ ಹಡಗು ತುಂಬುಸುಲೆ ಹೋತಡೊ.ಇನ್ನೊಂದು ಮನುಷ್ಯ ಹೊಟ್ಟೆ ತುಂಬುಸುಲೆ ಹೋತಡೊ.ಹಡಗು ತುಂಬುಸುಲೆ ಹೋದ್ದು ಹನಿಯ ದಿನ ಅಪ್ಪಗ ಬಂತಡೊ ಆದರೆ ಹೊಟ್ಟೆ ತುಂಬುಸುಲೆ ಹೋದ್ದು, ಅದಕ್ಕೆ ತುಂಬುಸಿದ ಹಾಂಗ ಖಾಲಿ ಆವುತ್ತಾ ಇದ್ದದರಿಂದ ತುಂಬುಸಿಯೇ ಆಗದ್ದೆ ಇನ್ನೂತುಂಬುಸಿಗೊಂಡೇಇದ್ದಡೋ. ಒಂದು ಮಾತು ಕೇಳಿದ್ದೆ.ತಿಂದಂಗೆ ಕೊದಿ ಹೆಚ್ಚು. ಉಂಡವಂಗೆ ಹಶು ಹೆಚ್ಚು ಹೇಳಿ. ಉಣ್ಣದ್ದೇ ಇದ್ದರುದೆ ಒಂದೆರಡು ದಿನ ಹಶು ಕಟ್ಟಿಗೊಂಡು ಇಪ್ಪಲೆಡಿಗಲ್ಲದೊ. ಹಾಂಗೆ ದಿನಗಟ್ಟಲೆ ಬರೇ ನೀರು ಕುಡುಕ್ಕೊಂಡೂ ಇಪ್ಪಲೆಡಿಗು.
ಹೊಟ್ಟೆ ಸರಿ ಇದ್ದರೆ ಮಾಂತ್ರ ಅದರ ತುಂಬುಸುವ ಯೋಚನೆ ಅದುವೇ ಸರಿಯಿಲ್ಲದ್ದರೆ ಕಷ್ಟ ಅಲ್ಲದೋ? ಊ(ಟ) ಮ(ಮಲಗುವುದು) ಹೇ(ಶೋಧನೆ) ಈ ಮೂರೂ ಸರಿಯಿದ್ದರೆ ಅವ ಆರೋಗ್ಯವಂತ ಹೇಳಿ ಲೆಕ್ಕಡೊ. ನಾಲಗ್ಗೇ ರುಚಿಯಿಲ್ಲದ್ದೆಯೋ ಅಥವಾ ಹೊಟ್ಟೆಲ್ಲಿ ಗೇಸ್ ತುಂಬಿಯೋ ಉಂಬದೇ ಬೇಡ ಹೇಳಿ ತೋರಿದರೆ ಆರೋಗ್ಯ ಸರಿಯಿದ್ದು ಹೇಳಿ ಆತೋ? ಮತ್ತೆ ಮನುಗಿದರೆ ಒರಕ್ಕೇ ಬತ್ತಿಲ್ಲೆ ಹೇಳುವದು, ಏನಾದರೂ ಚಿಂತೆ ತುಂಬ್ಯೊಂಡಿಪ್ಪಗ ಒರಕ್ಕು ಬತ್ತೋ? ಹಾಂಗಾದರೂ ಆರೋಗ್ಯ ಕೈಕೊಟ್ಟ ಹಾಂಗೆ. ಮತ್ತೆ ತಿಂದದು ಜೀರ್ಣ ಆಗಿ ತ್ಯಾಜ್ಯ ಹೆರ ಹೋಗದ್ದರೆ, ಮಲ ಬದ್ಧತೆ, ಮೂಲವ್ಯಾಧಿ, ಹೀಂಗೆ ಮಲ ರೋಗಂಗಳುದೇ ಬಂದರೆ ಕಷ್ಟ! ತಿಂದದು ಜೀರ್ಣ ಆವುತ್ತು, ಒರಕ್ಕು ಸರಿಯಾಗಿ ಇದ್ದು, ಶೋಧನೆ ಸರಿಯಿದ್ದು ಹೇಳಿ ಆದರೆ ಅವನ ಆರೋಗ್ಯ ಸರಿಯಿದ್ದು ಹೇಳಿ ಅಲ್ಲದೋ?ಧಾರಾಳ ಶ್ರೀಮಂತ ಆಗಿದ್ದರು ಆರೋಗ್ಯ ಸರಿಯಿಲ್ಲದ್ದರೆ ಹೇಂಗೆ?  ಶರೀರ ಹೇಳುವದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಂಗೆಲ್ಲ ರೋಗಂಗಳ ಗೂಡಾದರೆ ಮನುಷ್ಯನ ಮನಸ್ಸೇ ಚಿಂತೆಯ ಮನೆಯಾವುತ್ತು. ಹಾಂಗಾದರೆ ಇದೆಲ್ಲ ಹೊಟ್ಟೆಯ ದೋಷಂಗಳಿಂದಲೇ ಬಪ್ಪದಲ್ಲದೋ? ಹೊಟ್ಟೆ ಸರಿ ಇದ್ದರೆ ಅವ ಸರಿ ಇದ್ದ ಹೇಳಿ ಲೆಕ್ಕ. ಇಂದು ಹುಟ್ಟಿದ ಹಿಳ್ಳೆಯೇ ಆಗಲಿ ಹಶು ಅಪ್ಪಗ ಅದಕ್ಕೆ ತಡಕ್ಕೊಂಬಲೆಡಿತ್ತೊ? ರಟ್ಟಿ ರಟ್ಟಿ ಕೂಗುತ್ತು. ಹೊತ್ತು ಹೊತ್ತಿಂಗೆ ಹಾಲು ಕೊಟ್ಟರೆ ಒರಗ್ಯೊಂಡೋ ಮತ್ತೆ ದಿನ ಹೋದ ಹಾಂಗೆ ಆಡ್ಯೊಂಡೋ ಇರುತ್ತು. ಇಡೀ ಶರೀರದ ಆರೋಗ್ಯ ನಿಯಂತ್ರಣ ಇಪ್ಪದು ಹೊಟ್ಟೆಲ್ಲಿ. ರುಚಿ ಆತು ಹೇಳಿ ಲೆಕ್ಕಂದ ಹೆಚ್ಚು ತಿಂದರೆ ಜೀರ್ಣ ಆವುತ್ತೋ? ಹೊತ್ತು ತಪ್ಪುಸಿ ಉಂಡು ತಿಂದು ಮಾಡಿದರೂ ಹಶು ಕೆಡುತ್ತು. ಅಂಬಗ ಹೊಟ್ಟೆಯ ಸರಿ ನೋಡ್ಯೊಂಡರೆ ಎಲ್ಲ ಸರಿ ಆವುತ್ತು. ಅದಕ್ಕೇ ಹಿಂದಾಣೋರು ಒಂದು ಗಾದೆ ಮಾಡಿದ್ದವಲ್ಲದೋ?"ಊಟ ಬಲ್ಲವಂಗೆ ರೋಗವಿಲ್ಲ, ಮತ್ತೆ ಮಾತು ಬಲವಂಗೆ ಜಗಳವಿಲ್ಲ" ಹಾಂಗೆ ನಮ್ಮ ಆರೋಗ್ಯ ನಮ್ಮ ಕೈಲ್ಲಿಯೇ ಇದ್ದು.
                    ಎಲ್ಲೋರು ಶರೀರ ಶಾಸ್ತ್ರ ಓದಿದೋವೇ ಇಪ್ಪದು ಈಗ. ತಿಂದ ಆಹಾರ ಹೊಟ್ಟೆಗೆ ಎತ್ತಿದ ಮೇಲೆ ಎಂತಾವುತ್ತು?ಎಷ್ಟು ಹೊತ್ತು ಅಲ್ಲಿ ಇರುತ್ತು.ಮತ್ತೆ ಮುಂದೆ ಎಲ್ಲಿಗೆ ಹೊವುತ್ತು? ಹೇಳುವದೆಲ್ಲ ಕಲಿವಗಳೇ ಗೊಂತಾವುತ್ತು.ಯಾವುದೇ ಒಂದು ಯಂತ್ರದ ಶಬ್ದ ವ್ಯತ್ಯಾಸಂದಲೇ ಅದು ಇಲ್ಲಿಯೇ ಹಾಳಯಿದು. ಅದಕ್ಕೆ ಈ ಒಂದು ಭಾಗ ತಂದು ಹಾಕಿದರೆ ಸರಿ ಆವುತ್ತು ಹೇಳಿದ ಹಾಂಗೆ.ಹೊಟ್ಟೆಲ್ಲಿಯೂ ಅಪ್ಪ ತಾತ್ಕಾಲಿಕ ವ್ಯತ್ಯಾಸ ತಿಳುಕ್ಕೊಂಡರೆ ಅದಕ್ಕೆ ಅಲ್ಲಲ್ಲಿಗಿಪ್ಪ ಮದ್ದುಗಳ ತೆಕ್ಕೊಂಡರೆ ರೋಗ ಮುಂದುವರಿತ್ತಿಲ್ಲೆ. ಮುಳ್ಳು ತಾಗಿದ ಕೂಡಲೇ ಅದರ ತೆಗದು ಕಾಸಿ ಮಡಿಗಿದರೆ ಅದರಷ್ಟಕ್ಕೆ ಬೇನೇ ಸಾಯುತ್ತು.ಗುಣ ಆವುತ್ತು. ಮುಳ್ಳು ಮಡಗಿ ಮದ್ದು ಕಿಟ್ಟಿದರೆ ಬೇನೆ ಹೋಕೋ? ಈಗ ಐಗಾಡಿಗ ತಿಂದುಗೊಂಡೆ ಇಪ್ಪೋರು ಇದ್ದವು. ಅದಕ್ಕೆ ಹೇಳುತ್ತವು ಗಾಣ ಹಾಕುವದು ಹೇಳಿ. ಃಆಂಗೆ ಗಾಣ ಹಾಕಿಗೊಂಡೆ ಇದ್ದರೆ ನಮ್ಮ ಹೊಟ್ಟೆಯೊಳದಿಕ್ಕಿಪ್ಪ ಯಂತ್ರಕ್ಕೆ ವಿರಾಮವೇ ಇಲ್ಲದ್ದೆ ಆವುತ್ತು. ಅಂಬಗ ಅದುದೇ ಸ್ಟ್ರೈಕ್ ಮಾಡುತ್ತು.ಕೂಡ್ಲೇ ನಮಗೆ ಗೊಂತಾಗದ್ದರೂ ಕೆಲವು ದಿನಲ್ಲಿ ಜ್ವರವೋ,ಅಜೀರ್ಣವೋ ಶುರುವಾಗಿ ಅದೊಂದು ರೋಗವೇ ಆವುತ್ತು.ಹಾಂಗೆ ಅಪ್ಪಲಾಗ ಹೇಳಿಯೇ ಹಿಂದಾಣೋರು ಉಪವಾಸ ಶುರು ಮಾಡಿದವು ನಿಜಕ್ಕಾದರೂ ಇಡೀ ದಿನ ಏಕಾದಶಿಯ ಹಾಂಗೆ ಉಪವಾಸ ಮಾಡಿದರೆ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕಿ ಮತ್ತೆ ಅವರ ಕೆಲಸಲ್ಲಿ ಚುರುಕಾವುತ್ತವು. "ಲಂಘನಂ ಪರಮೌಷಧಂ" ಹೇಳಿರೆ ಹಾರುವದು ಅಲ್ಲ. ಉಪವಾಸ ಕೂಪದು ಹೇಳಿ. ಇಂಗ್ಲಿಷಿಲ್ಲಿ ಹೇಳುತ್ತರೆ ರಿಫ್ರೆಶ್ ಅಪ್ಪದು ಉಪವಾಸ ಇದ್ದರೆ.ಚಾಂದ್ರಾಯಣ ವ್ರತ ಹೇಳಿ ಇದ್ದಡೊ. ಹದಿನೈದು ದಿನ ದಿನಾಗಳುದೇ ತಿಂಬ ಆಹಾರ ರಜ ರಜವೇ ಕಡಮ್ಮೆ ಮಾಡ್ಯೊಂಡು ಹೇಳಿರೆ ಪಾಡ್ಯಕ್ಕೆ ಸುರು ಮಾಡಿದರೆ,ಅಮಾವಾಸ್ಯೆಗೆ ಪೂರ್ತಿ ನಿರಾಹಾರ. ಮತ್ತೆ ರಜ ರಜವೇ ತಿಂಬದರ ಹೆಚ್ಚಿಸಿಗೊಂಡುಹುಣ್ಣಮೆಗಪ್ಪಗ ಹೊಟ್ಟೆ ತುಂಬ ಉಂಬದು.ಅಂಬಗ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕುತ್ತು.ಕೆಲಸ ಸರಿ ಮಾಡುತ್ತವು. ಆರೋಗ್ಯ ಸರಿ ಇರುತ್ತು. ಈಗ ನಾವು ಉಪವಾಸ ಮಾಡುವದಾದರೆ, ಅಕ್ಕಿಯ ಆಹಾರ ತಿಂಬಲಾಗ, ಗೋಧಿದು ಹೊಟ್ತೆ ತುಂಬ ತಿಂಬಲಕ್ಕು ಹೇಳಿ ಮಾಡುತ್ತು. ಪ್ರಯೋಜನ ಇದ್ದೋ? ಉಪವಾಸ ಹೇಳಿರೆ ನಿಜವಾಗಿಯೂ ದೇವರ ಹತ್ತರೆ ಮನೆಲ್ಲೇ ಇಪ್ಪದು. ಎಲ್ಲೆಲ್ಲಿಯಾರೂ ತಿರಿಕ್ಕೊಂಡು ಸಿಕ್ಕಿದ್ದರ ಎಲ್ಲ ತಿಂದರೆ ಉಪವಾಸ ಆವುತ್ತೋ? ನಾವು ಉಂಬದು ಹೇಳಿರೆ ಅದು ಒಂದು ಯಜ್ಞ! ದೇಹಲ್ಲಿಪ್ಪ ಪಂಚ ಪ್ರಾಣಂಗೊಕ್ಕೆ ಪ್ರಾಣಾಹುತಿ ಕೊಡೆಕ್ಕು. ಮತ್ತೆ ಊಟ ಸುರು! ಪ್ರಾಣಯ ಸ್ವಾಹಾ, ಅಪಾನಾಯ ಸ್ವಾಹಾ,ವ್ಯಾನಾಯಸ್ವಾಹಾ,ಉದಾನಯಸ್ವಾಹಾ,ಸಮಾನಾಯಸ್ವಾಹಾ ಹೇಳಿ ಆಹುತಿ ಕೊಟ್ಟ ಮೇಲೆ ಊಟ ಸುರು.ಊಟದ ನಡುಕೆ ಹಾಳು ಹರಟೆ ಮಾತಾಡುವದು, ಅಲ್ಲಿ ಇಲ್ಲಿ ನಡಕ್ಕೊಂಡು ತಿಂಬದು ಎಲ್ಲ ನಾಗರಿಕರಾಗಿಪ್ಪ ನಾವು ಮಾಡಲಾಗ. ಹಾಂಗೆ ಮಾಡಿದರೆ ಪ್ರಾಣಿಗೊಕ್ಕೂ ನಮಗೂ ವ್ಯತ್ಯಾಸ ಇದ್ದೋ?
    ಜನಂಗೊ ಈ ಹೊಟ್ಟೆಗೆ ದೂರು ಹಾಕಿ ಮಾಡುವ ಅನರ್ಥ ಸಾಮಾನ್ಯವೋ? ರಾಶಿ ರಾಶಿ ಕೂಡಿ ಹಾಕುವದು,ಮಕ್ಕೊ ಮರಿಮಕ್ಕೊ ಕೂದು ತಿನ್ನೆಕ್ಕು ಹೇಳಿ ಅಡ್ಡ ದಾರಿಲ್ಲಿ ಸಂಪಾದನೆ ಮಾಡಿ ಮತ್ತೆ ಭ್ರಷ್ಟಾಚಾರ ತುಂಬಿತ್ತಪ್ಪ ಹೇಳಿ ಹೇಳುವದು..ಅಂತೂ ಅನ್ಯಾಯ ಅಧರ್ಮಕ್ಕೆ ಆರೋ ಹೊಣೆ.ತಾನು ಸರಿಯಿದ್ದೇ ಹೇಳುವದು ಎಲ್ಲ ಈ ಹೊಟ್ಟಗೆ ಬೇಕಾಗಿಯೇ ಅಲ್ಲದೋ? ಉಸಿರು ನಿಂದ ಮೇಲೆ ಹೊಟ್ಟೆ ಆರಿಂಗೆ ಬೇಕು? ಗಾಂಧೀಜಿ ಹೇಳಿದ ಹಾಂಗೆ ಅಪರಿಗ್ರಹ ಪಾಲಿಸಿದರೆ ಕೂಡಿ ಹಾಕುವ ಅಭ್ಯಾಸ ರಜ ಕಡಮ್ಮೆ ಮಾಡಿದರೆ ಲೋಕ ಒಳ್ಳೆದಕ್ಕೋ ಏನೋ?ಹೊಟ್ಟೆಯ ಬಗ್ಗೆ ಹೇಳುವಗ ಕೆಲವು ಜನ ಸಿಕಿ ಸಿಕ್ಕಿದ ಕಾಟ್ಮ್ಕೋಟಿಯ ಅಡಿಗಾಡಿಗ ತಿಂದೋಡು ಹೊಟ್ಟೆ ಬೆಳೆಸಿಗೊಳ್ಳುತ್ತವು. ಅದು ಬಿಡೆಕ್ಕು. ಹೊಟ್ಟೆಗೂ ವ್ಯಾಯಾಮ ಬೇಕು. ಇಡೀ ನಮ್ಮ ರಥ ನಡವದೇ ಹೊಟ್ಟೆಂದಾಗಿ . ಹೊಟ್ಟೆಯ ಮಟ್ಟಿಂಗೆ ಜಾಗ್ರತೆ ಎಷ್ಟು ತೆಕ್ಕೊಂಡರು ಸಾಲ. ಹೊಟ್ಟೆ ನಮಗೆ ಹೊರೆಯಲ್ಲ. ಹೊರೆಯಾಗದ್ದ ಹಾಂಗೆ ಹತೋಟಿಲ್ಲಿ ಮಡಿಕ್ಕೊಳ್ಳೆಕ್ಕು. ಕೆಲವು ಜನರ ಹೊಟ್ಟೆ ಆನು ವಿದೇಶಲ್ಲಿ ನೋಡಿದ್ದು.ಅವು ಹೊಟ್ಟೆ ನೆಗ್ಗಿಗೊಂಡು ನಡವಲೇ ಇಲ್ಲೆ. ಎಲ್ಲೋರೂ ವಾಹನಲ್ಲೇ ಹೋಪದಾದರೂ ಎಲ್ಯಾರು ನಡೆಕ್ಕಾರೆ ಬಪ್ಪ ಒದ್ದಾಟ ದೇವರಿಂಗೇ ಪ್ರೀತಿ! ಈ ಹೊಟ್ಟೆ ಬಗ್ಗೆ ಬರದ ಲೇಖನವೂ  ಆ ಹೊಟ್ಟೆ ಗಣಪ್ಪಜ್ಜಂಗೇ ಅರ್ಪಿತ!

                                


                   
        ಹೊಟ್ಟೆ (ಮುಂದುವರುದ್ದು)!
                           
           
   
                            ಹೊಟ್ಟೆ ಮುಂದುವರುದ್ದು ಹೇಳಿರೆ ತಪ್ಪು ಅರ್ಥ ಗ್ರೇಶೆಡಿ.ಹೊಟ್ಟೆಯ ಕುರಿತಾದ ಲೇಖನ ಮುಂದುವರುದ್ದು ಹೇಳಿ. ಹೊಟ್ಟೆ ದೊಡ್ಡ ಅಕ್ಕಷ್ಟೆ ಹೊರತು ಮುಂದುವರಿವಲೆ ಸಾಧ್ಯ ಇದ್ದೋ ನಿಂಗಳೇ ಹೇಳಿ.ಹೊಟ್ಟೆಯ ವಿಷಯಲ್ಲಿ ಬರದಷ್ಟೂ ಮುಗಿಯ. ಕೇಳಿದ್ದೀರೋ? ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಹೇಳುತ್ತವು. ಎಂತಗೆ?ಭೀಮನ ಹೊಟ್ಟೆ ದೊಡ್ಡ ಇದ್ದು. ಅವನ ಹೊಟ್ಟೆ ತುಂಬುಸುಲೆ ಏಕಚಕ್ರಪುರಲ್ಲಿಪ್ಪಗ ತುಂಬ ಕಷ್ಟ ಆಗಿತ್ತಡೊ.ದಿನಾ ಬೇಡಿತಂದ ಆಹಾರವ ಎರಡು ಪಾಲು ಮಾಡಿ ಒಂದು ಪಾಲು ಭೀಮಂಗೇ ಕೊಟ್ಟು ಒಳುದ್ದರ ಒಳುದೋರು ತಿಂದುಗೊಂಡಿತ್ತವಡೊ. ಊರಿನ ಲೆಕ್ಕದ ಬಲಿಯ ಗಾಡಿಲ್ಲಿ ತುಂಬುಸಿಗೊಂಡು ಬಕಾಸುರಂಗೆ ಕೊಡುಲೆ ತೆಕ್ಕೊಂಡು ಹೋಪಗ ಕೊದಿ ತಡೆಯದ್ದ ತಿಂಬಲೆ ಸುರುಮಾಡಿದೋನು, ತಿಂದಡೋ,ತಿಂದಡೋ ಎಷ್ಟು?ಗಾಡಿಲ್ಲಿದ್ದದು ಎಲ್ಲ ಮುಗುತ್ತಡೊ.ಎಷ್ಟೊ ಲೆಕ್ಕ ಹೇಳುತ್ತವು ಕುಟ್ತುಗಲ್ಲಿದ್ದದರ ಎಲ್ಲ ತಿಂದುಗೊಂಡಿಪ್ಪಗ ದೂರಂದ ನೋಡಿದ ರಾಕ್ಷಸ ಹಶು ತಡೆಯದ್ದೆ ಬೊಬ್ಬೆ ಹಾಕಿತ್ತಡೊ.ಬೇಗ ಬಾ ಹೇಳಿತ್ತಡೊ.ಅಂಬಗ ಭೀಮ ನಿಲ್ಲು ಮಾರಾಯ ಇನ್ನು ರಜ ಪಾತ್ರೆಲ್ಲಿ ಹಿಡುಕ್ಕೊಂಡಿದ್ದು ಅದರ ಮುಗುಸೀತೆ. ಮತ್ತೆ ನಿನ್ನತ್ರೆ ಮಾತಾಡುತ್ತೆ ಹೇಳಿದಡೊ.ಅಂಬಗ ಗ್ರೇಶುಲಕ್ಕು ಎಷ್ಟು ದೊಡ್ಡ ಭಿಮನ ಹೊಟ್ಟೆ ಹೇಳಿ. ಅವಂಗೆ ಬೇಡಿ ತಂದದು ಕಾಸಿನ ಮಜ್ಜಿಗೆಯೇ ಅಲ್ಲದೋ? ಮದಲೊಂದು ಹಡಗು ತುಂಬುಸುಲೆ ಹೋದ್ದು ತುಂಬುಸಿಕ್ಕಿ ಬಯಿಂದಡೊ. ಹೊಟ್ಟೆ ತುಂಬುಸುಲೆ ಹೋದ್ದು ಬಯಿಂದಿಲ್ಲೆಡೊ.ಏಕೆ ಕೇಳಿ. ತುಂಬುಸಿದ ಹಾಂಗೆ ಖಾಲಿ ಆವುತ್ತು. ಮತ್ತೆ ತಿಉಂಬುಸೆಕ್ಕು. ಎಲ್ಲಿ ವರೆಗೆ? ಜೀವ ಇಪ್ಪಲ್ಲಿ ವರೆಗೆ. ಆಮ್ಬಗ ತಿಳುದೋರು  ಜ್ಞಾನಿಗೊ  ಹೇಳುತ್ತವು ಬದುಕ್ಕುಲೆ ತಕ್ಕ ತಿನ್ನೆಕ್ಕು ಹೇಳಿ.ಮೃಷ್ಟಾನ್ನ ತಿಂದರುದೇ ಬರೇ ತೆಳಿ ಕುಡುದರುದೇ ಹೊಟ್ಟೆ ತುಂಬುತ್ತು. ಹೊಟ್ಟೆ ಅದರ ಕೇಳುತ್ತಿಲ್ಲೆ. ಎಂತಕೆ ಎನಗೆ ಒಳ್ಳೆ ಊಟ ಕೊಟ್ಟಿದಿಲ್ಲೆ ಹೇಳಿ ಕೇಳುತ್ತೋ? ಒಟ್ಟಾರೆ ಪಸುಂಬೆ ತುಂಬಿದರೆ ಸಾಕು ಅಲ್ಲದೋ?ಅಂಬಗ ನಿಂಗೊ ಕೇಳುವಿ. ಪ್ರಾಣಿಗೊ ಹೊಟ್ತೆ ತುಂಬುಸಿಗೊಳ್ಳುತ್ತ  ಹಾಂಗೆ ನಾವು ತುಂಬುಸುವುದೋ!ಅಲ್ಲಲ್ಲ. ಅಂಬಗ ಬೇಶಿದ್ದರ ತುಂಬುಸಲೂ ಅಕ್ಕು. ನಿನ್ನೆಯಾಣದ್ದೋ,ಮನ್ನೆಯಾಣದ್ದೋ ಹಳಸಿದ್ದರನ್ನೋ ಕೊಳದ ಹಣ್ನನ್ನೋ ತಿಂದರುದೆ ಹೊಟ್ತೆ ತುಂಬುತ್ತು. ಆದರೆ ಈಗ ಫ್ರಿಜಿಲ್ಲಿ ಮಡಗಿದ್ದು ನಾಳೆಯೂ ತಿಂತಿಲ್ಲೆಯೋ ಕೇಳುವಿ. ಪದ್ಮಾಸನ ಹಾಕಿ ಕೂದು ಉಂಬದು ಕ್ರಮ ಪ್ರಕಾರ ಉಂಬದು ಮರ್ಯಾದಿ. ಆದರೆ ನಿತ್ಯಕ್ಕೂ ನಿಂದೊಂಡೋ,ಅತ್ಲಾಗಿ ಇತ್ಲಾಗಿ ನಡಕ್ಕೊಂಡೊ ಅದು ಉಂಬದಲ್ಲ. ಎಂತಾದರೂ ತಿಂಬದು ಹೇಳಿ ಎನ್ನ ಅಭಿಪ್ರಾಯ.ಹೊಟ್ತೆ ತುಂಬುಸುವದೇ.ತಾಳ್ಮೆಂದ ಕೂದುಗೊಂಡು ಭೋಜನ ಕಾಲೇ ಆ ದೇವರ ಮನಸ್ಸಿಲ್ಲೇ ಗ್ರೇಶ್ಯೊಂಡು ಮಾಡುವ ಊಟ ಅದು ಕ್ರಮದ ಊಟ ಹೇಳಿ ಎನ್ನ ಅನಿಸಿಕೆ. ಏನಾದರೂ ಬೇರೆ ಯೋಚನೆಲ್ಲಿ ನೀರು ಕುಡಿವಗ ತೆರಂಬು ಹೋವುತ್ತಿಲ್ಲೆಯೋ? ನಿಂಗಳೇ ಹೇಳಿ.ನಮ್ಮ ಕ್ರಮ ನೋಡಿ ನಮ್ಮ ಮಕ್ಕೊ ಕಲಿತ್ತವು. ಇನ್ನೂ ರಜ ದೂರ ಹೊವುತ್ತವು. ಆಲದ ಮರ ಅಜ್ಜ ನೆಟ್ಟದು ಹೇಳಿ ಸುತ್ತ ಬಪ್ಪದು ಬೇಡ. ಆಲದ ಮರಲ್ಲಿ ತ್ರಿಮೂರ್ತಿಗಳೇ ವಾಸವಾಗಿದ್ದವು ಹೇಳಿ ಗ್ರೇಶ್ಯೊಂಡು ಭಕ್ತಿಂದ ಸುತ್ತ ಬಂದರೆ ರಜ ಹೊತ್ತಾದರು ನಮ್ಮ ಬೇರೆ ಯೋಚನೆಗೆ ಕಡಿವಾಣ ಹಾಕಿದ ಹಾಂಗೇ ಅಲ್ಲದೋ?ಒಬ್ಬ ಊಟ ಆತೋ ಹೇಳಿ ಕೇಳಿದ್ದಕ್ಕೆ ಮುಂಡಾಸು ಮೂವತ್ತು ಮೊಳ ಹೇಳಿದರೆ ಅಕ್ಕೋ? ಊಟ ಮಾಡುವಗ ಬೇರೆ ಯೋಚನೆ ಬಂದರೆ ಉತ್ತರ ಯದ್ವಾ ತದ್ವಾ ಆವುತ್ತು. ಊಟವನ್ನೂ ಸಮಯ ತಪ್ಪಿ ಮಾಡುವದು ಹೇಳಿದರೆ ಒಟ್ಟಾರೆ ಹೊಟ್ಟೆ ತುಂಬುಸಿಗೊಂಬದೇ ಅಲ್ಲದೋ? ಈಗ ಮೇಜಿ ಮೇಲೆ ಕುರ್ಚಿಲ್ಲಿ ಕೂದು ಉಂಬಗಳೂ ಅಷ್ಟೆ ಹೊಟ್ಟೆ ಉದ್ದಿಗೊಂಡು ಏಳೆಡ. ನೆಲಕ್ಕೆ ಕೂದು ಅಪ್ಪಗ ಏಳುಲೂ ಕಷ್ಟ ಹೇಳಿ ಬಕ್ಕು. ಆದರೆ ಆರೋಗ್ಯವಂತ ಆದರೆ ಅವಂಗೆ ಯೋಗಾಸನ  ಗೊಂತಿದ್ದವಂಗೆ ಕಷ್ಟ ಆಗ ಹೇಳಿ ತೋರುತ್ತು. ಪ್ರಾಯ ಆದ ಮೇಲೂ ಚುರುಕಾಗಿ ಇಪ್ಪೋವು ಎಷ್ಟೋ ಜನ ಇದ್ದವು. ಎಲ್ಲ ಅಭ್ಯಾಸ ಬಲ!
            ಸ್ವಾಭಾವಿಕವಗಿ ರಜ ಹೊಟ್ತೆ ದೊಡ್ದ ಇದ್ದರೂ ಅವಕ್ಕೆ ತಿಂಬಲೆ ಹೆಚ್ಚು ಬೇಕಾವುತ್ತಿಲ್ಲೆ. ಮಾಂತ್ರ ಅಲ್ಲ ಅವು ವೇಷ ಹಾಕಿ ಕೊಣಿವಗ ಮಜ ಇತ್ತು. ತಿಂಬ ಶುದ್ದು ಹೇಳುವಗ ಒಂದು ಹಳೆ ಶುದ್ದಿ ನೆಂಪಾತು.ಎಂಗಳ ಊರಿಲ್ಲಿ ಕಪ್ಪಲು ಹೇಳಿ ಒಂದು ಮನುಷ್ಯ ಇತ್ತು. ಎಲ್ಲಿ ಊಟ ಇದ್ದರೂ ದಿನಿಗೇಳಿದರೆ ಬಕ್ಕು. ತಿಂಬ ವಿಷಯಲ್ಲಿ ಅದಕ್ಕೆ ನಾಚಿಕೆ ಇಲ್ಲೆ. ಆ ಮನುಷ್ಯ ಬಂದರೆ ಪುಳ್ಳರುಗೊಕ್ಕೆಲ್ಲ ತಮಾಶೆ.ಊಟಕ್ಕೆ ಕೂದರೆ ಅಶನ,ಸಾಂಬಾರು ಬೇಕಾದಷ್ಟು ತಿಂದಿಕ್ಕಿ,ಮತ್ತೆ ಪಾಯಸ,ಒಂದು ಕವಂಗ ತಂದರೆ ಸಾಲ!ಹಸರು ಪಾಯಸ ಆಯೆಕ್ಕು. ಸರಿಯಾಗಿ ಸೀವು ಇರೆಕ್ಕು. ಎರಡು ಕವಂಗ ತುಂಬ ಆದರೂ ಮುಗಿಗು.ಆದರೆ ಅಲ್ಲಿಂದ ಎದ್ದು ಒಂದು ಕಡೆಲ್ಲಿ ಬಿದ್ದರೆ ಅದಕ್ಕೆ ಲೋಕ ಇಲ್ಲದ್ದ ಒರಕ್ಕು. ಏನಾದರೂ ಹೇಳಿದರೂ ಬೇಜಾರು ಇಲ್ಲೆ.ಈಗಳೋ ಒಂದು ಕವಂಗ ಇನ್ನೂರು ಜನ ಸೇರಿದ ಒಂದು ಹಂತಿಗೆ ಸಾಕು. ತಿಂಬೋತೂ ಇಲ್ಲೆ. ಎಲ್ಲ ಕೇಲಿದರೆ ಎನಗೆ ರಜ ಶುಗರ್ ಇದ್ದು ಹೇಳುತ್ತವು.ಆದರೆ ಹಿಂದಾಣೋರು ಹೆಚ್ಚು ಉಂಬೋರು ಇದ್ದರೂ ಕೆಲಸವು ಮಾಡುಗು.ಈಗಾಣೊವಕ್ಕೆ ಎದ್ದು ಸುತ್ತ ಬಪ್ಪದೇ ಕಷ್ಟ೧ ಒಂದು ಮೈಲು ನಡೆಯಕ್ಕಾರೂ ವಾಹನ ಬೇಕು.ಅದರೆ ನಾವು ಮಕ್ಕೊಗೆ ಪ್ರೀತಿಂದ ಐಸ್ಕೇಂಡಿಯೋ ಬೇರೆ ಕಾಟಂಕೋಟಿಯೋ ತಿಂದುಗೊಳ್ಳಲಿ ಪೈಸೆ ಕೊಟ್ಟರೆ ಅವು ತಿಂದರೂ ಹೊಟ್ಟೆ ಹಾಳಾವುತ್ತಲ್ಲದೋ?ವಸ್ತುಗೊ ಹಾಳಗದ್ದ ಹಾಂಗೆ ಉಪಯೋಗಿಸಿದ ಐಸುದೆ ಅವಕ್ಕೆ ಕಮ್ಮಿಗೆ ಸಿಕ್ಕಿದರೆ ಅದಕ್ಕೆ ಬಣ್ಣ ಹಾಕಿ ಮಾರುತ್ತವಡೊ. ತಿಂದರೆ ಹೊಟ್ಟೆ ಹಾಳವುತ್ತಿಲ್ಲೆಯೋ/ ನಾವುದೆ ಹೋಟೆಲಿಲ್ಲಿ ನಿವೃತ್ತಿ ಇಲ್ಲದ್ದಕ್ಕೆ ಉಣ್ಣೆಕ್ಕಷ್ಟೆ ಹೊರತು ನಿತ್ಯ ಉಂಡರೆ ಹೊಟ್ತೆ ಹಾಳಾವುತ್ತು. ಸೋಡದ ಹೊಡಿಯೋ ಎಲ್ಲ ಉಪಯೋಗುಸುತ್ತವಡೊ.ಬೇರೆ ಕುರು ಕುರು ತಿಂಡಿ ತಿಂಬಲೆ ಕೊಡುವದೂ ಹಾಂಗೆ .ಆನೊಂದು ಮಾಗಜಿನ್ ಓದಿತ್ತಿದ್ದೆ. ದನಗಳ ಚರ್ಬಿಯೂ ಕಮ್ಮಿಗೆ ಸಿಕ್ಕುತ್ತಡೊ.ಅದರಲ್ಲಿಯೂ ಹೊರಿತ್ತವಡೊ.ಒಟ್ಟಾರೆ ಆರೋಗ್ಯ ಹಾಳು. ಮತ್ತೆ ಡಾಕ್ಟ್ರಕ್ಕೊಗೆ ಗಿರಾಕಿ ಬೇಕನ್ನೆ. ಅವು ಕಲ್ತದಕ್ಕೆ ಸಾರ್ಥಕ ಆಯೆಕ್ಕನ್ನೆ. ಅಂತೂ ನಮ್ಮ ಸಂಪಾದನೆಲ್ಲಿ ಎಲ್ಲೋರಿಂಗೂ ಹೀಂಗೆ ಪಾಲು ಕೊಟ್ಟರೂ ಗೇಸ್ ಟ್ರಬ್ಲ್ ಹಾಂಗೇ ಮುಂದುವರಿತ್ತು. ಆನು ಡಾಕ್ಟ್ರಕ್ಕಳ ವಿರೋಧಿ ಅಲ್ಲ! ಹೊಟ್ಟೆಯ ಸಾಂಕುಲೆ ಹೋಗಿ ಮತ್ತೆ ಚಿಂತೆಗೆ ಬೀಳೆಕ್ಕನ್ನೇ ಹೇಳಿ. ಎಂಗೊ ಸಣ್ಣಾದಿಪ್ಪಗ ಹೊಟ್ಟೆ ಹುಳುವಿಂಗೆ ಮದ್ದು ತೆಕ್ಕೊಂಬದಿತ್ತು. ಸಿಕ್ಕಿದ್ದೆಲ್ಲ ತಿಂದು ಜೀರ್ಣ ಆಗದ್ದರೆ ಹುಳು ತುಂಬುತ್ತು. ಮತ್ತೆ ಮದ್ದು ತೆಕ್ಕೊಳ್ಳೆಕ್ಕು. ಒಳ್ಳೆ ಆಹಾರವನ್ನೇ ತೆಕ್ಕೊಂಡರೆ  ಮಕ್ಕೊಗೆ ನಾವು  ಬೇರೆ ತಂದು ಕೊಡುವ ಬೂಸ್ಟ್ ಕೋಂಪ್ಲೇನ್ ಹೀಂಗೆ ತಂದು ಕೊಡೆಕ್ಕಾಗ ಹೇಳಿ ಕಾಣುತ್ತು.
                ಮತ್ತೆ ಕೆಲವು ಜನ ತಿಂಬದರ ಬಗ್ಗೆ ಹೇಳುತ್ತವು "ಅವ ಮೂಗಿನವರೆಗೆ ತಿಂದರೆ ಜೀರ್ಣ ಅಪ್ಪದು ಹೇಂಗೆ? ಕೇಳುತ್ತವು.ಮೂಗಿನ ವರೆಗೆ ತಿಂಬದು ಹೇಂಗೆ ಎನಗೆ ಗೊಂತಿಲ್ಲೆ. ಆದರೆ ಎನ್ನ ಲೆಕ್ಕಲ್ಲಿ ಹೀಂಗೆ ಕಾಣುತ್ತು. ಮೂಗಿನ ಮೂಲಕ ನಾವು ಉಸಿರಾಡುವದು. ಉಸಿರಾಟ ಸರಿಯಿರೆಕ್ಕಲ್ಲದೋ? ಉಸಿರು ತೆಕ್ಕೊಂಬದು,ಬಿಡುವದು ಉಛ್ವಾಸ,ನಿಶ್ವಾಸ ನಡವದು ಮೂಗಿನ ಮೂಲಕ ಆದರೂ ಬಾಯಿಂದ ಮುಂದೆ ಹೋಪದು ಶ್ವಾಸ ಕೋಶಕ್ಕೆ ತಿರುಗುವ ದಾರಿ ವರೆಗೆ ಒಂದೇ ದಾರಿಲ್ಲೇ ಅಲ್ಲದೋ?ಹೊಟ್ಟೆ ತುಂಬಿ ಉಸಿರು ಬಿಡುಲೇ ಕಷ್ಟ ಆದರೆ ಹೇಂಗಕ್ಕು? ಹೊಟ್ಟೆಗೆ ಆಹಾರ ಎತ್ತಿದ ಮೇಲೆಯೂತಿಮ್ದದು ಜೀರ್ಣ ಆಯೆಕ್ಕಾದರೆ ಹೊಟ್ಟೆಯೊಳದಿಕ್ಕೆ ಅದರ ಹೊಟ್ತೆಲ್ಲಿದ್ದ ಆಮ್ಲಂಗಳೊಂದಿಗೆ ಮಿಶ್ರ ಆಯೆಕ್ಕಲ್ಲದೋ? ಅಲ್ಲಿ ತಿರುಗುಲೆ ಜಾಗೆ ಇಲ್ಲದ್ದರೆ ಜೀರ್ಣ ಅಪ್ಪದು ಹೇಂಗೆ? ಅದಕ್ಕೆ ಹಾಂಗೆ ಡಮ್ಮುಕಟ್ಟುವ ಹಾಂಗೆ ತಿಂಬಲಾಗ ಹೇಳಿ ಹಿಂದಾಣೋರು ಹೇಳುಗಷ್ಟೆ.ಎನ್ನ ಲೆಕ್ಕಲ್ಲಿ ಈ ಉಸಿರಾಟ ಪ್ರಕ್ರಿಯೆ ಸರಿಯಾಗಿ ನಡೆಯೆಕ್ಕಾರೆ ಹೊಟ್ಟೆಯ ಸಹಾಯ ಬೇಕು.ಉಸಿರು ಹೆರ ಬಿಡುವಗ ಹೊಟ್ಟೆ ಒತ್ತಿಗೊಳ್ಳೆಕ್ಕಾವುತ್ತು. ಹೊಟ್ಟೆ ತುಂಬಿಗೊಂಡು ಇದ್ದರೆ ಉಸಿರಾಟಕ್ಕೆ ಕಷ್ಟ ಅಕ್ಕು. ಅದಕ್ಕೆ ಹಿಂದಾಣೋರು ಹೇಳಿಗೊಂಡಿದ್ದದು ಇನ್ನೂ ಒಂದು ದೋಸೆ ತಿಂಬಲೆಡಿಗು ಹೇಳಿ ತೋರುವಗಲೇ ತಿಂಬದರ ನಿಲ್ಲುಸೆಕ್ಕು.ಹಾಂಗೆ ಹದ ಹಾಳಿತ ತಿಳುದು ಉಂಡಿ ತಿಂದು ರಜ ವ್ಯಾಯಮವೂ ಮಾಡಿಗೊಂಡಿದ್ದರೆ ಹೊಟ್ಟೆ ನಮ್ಮ ಹತೋಟಿಲ್ಲಿಕ್ಕು ಹೇಳಿ ಎನ್ನ ಅಭಿಪ್ರಾಯ.
            ಮತ್ತೆ ಕೆಲವು ಜನ ಹೇಳುವದಿದ್ದು."ಎಲ್ಲ ಹೊಟ್ಟೆಲ್ಲಿ ಹಾಕಿಗೊಂಡು ಕ್ಷಮಿಸೆಕ್ಕು" ಹೇಳಿ.ಎಂತರ ಇಲ್ಲಿ ಹೊಟ್ಟೆಲ್ಲಿ ಹಾಕೆಕ್ಕಾದ್ದು? ಏನಾದರೂ ಎನ್ನಂದ ತಪ್ಪಾಗಿದ್ದರೆ  ಅದರ ಕ್ಷಮಿಸಿ ತಪ್ಪಿನ ಮನ್ನಿಸೆಕ್ಕು ಹೇಳಿ.ಅಂಬಗ ಈ ಕ್ಷಮೆ ಹೇಳುವದು ಹೊಟ್ಟೆಯೊಳ ಇದ್ದೋ? ಇಲ್ಲಿ ಹೊಟ್ಟೆ ಹೇಳುವದು ಹೃದಯ ಮನಸ್ಸು ಅಲ್ಲದೋ? ಹೊಟ್ಟೆಲ್ಲಿ ಕರುಳು ಇದ್ದು. ಕರುಳ ಪಾಶ ಹೇಳುತ್ತವು. ಅಬ್ಬೆಗೆ ಮಕ್ಕಳತ್ರೆ ಇಪ್ಪ ಪಾಶವನ್ನೇ ಕರುಳ ಪಾಶ ಹೇಳಿ ಇಲ್ಲ್ ಹೇಳುವದು.ಅವಂಗೆ ಆನು ಒಳ್ಲೆದಪ್ಪದು ಇಷ್ಟ ಇಲ್ಲೆ ಹೇಳುತ್ತವು. ಅದರ ಹೊಟ್ಟೆ ಕಿಚ್ಚು ಹೇಳುತ್ತವು.ಇದುದೇ ಹೊಟ್ಟೆಲ್ಲಿಪ್ಪದಲ್ಲ. ಅವನ ಹೊಟ್ಟೆ ತುಂಬ ಕೇಡೇ ತುಂಬಿದ್ದು. ಹಾಂಗೆ ಅವ ಡೊಳ್ಳೊಟ್ಟೆ ಎದ್ದು ಕಾಣುತ್ತು ಹೇಳುತ್ತವು. ಎಲ್ಲ ಮನಸ್ಸು ಕಂಡ ಹಾಂಗೆ ಹೇಳುವದಷ್ಟೆ ಹೊರತು ಹೊಟ್ಟಗೂ ಇದು ಯಾವುದಕ್ಕೂ ಸಂಬಂಧ ಇದ್ದೋ? ಒಬ್ಬ ಬೈವಗ ಸುಮ್ಮನೆ ಕೇಳಿಗೊಂಡಿದ್ದು ಎಂತಾದರೂ ಬಾಯಿ ಒಡದರೆ ಅದಾ ಅವನ ಹೊಟ್ಟೆಲ್ಲಿಪ್ಪದೆಲ್ಲ ಹೆರ ಬತ್ತದಾ ಹೇಳುತ್ತವು.ಎಲ್ಲದಕ್ಕೂ ಎಂತ ಹೇಳಿದರು ಹೊಟ್ಟೆ ಮಾತಾಡುತ್ತಿಲ್ಲೆ. ಮೌನವಾಗಿರುತ್ತು. ಹೊಟ್ಟೆ ಕೆಟ್ಟರೆ ಮಾಂತ್ರ ಕೇಳುವದೇ ಬೇಡ! ಕೆಡದ್ದ ಹಾಂಗೆ ನೋಡ್ಯೊಳ್ಲೆಕ್ಕಾದ್ದು ನಮ್ಮ ಕರ್ತವ್ಯ! ಮತ್ತೆ ಒಬ್ಬನ ನಾವು ಬ್ರಹ್ಮಾಂಡೋದರ ಹೇಳುತ್ತಲ್ಲದೋ? ಇಡೀ ಲೋಕಂಗಳೇ ಅವನ ಹೊಟ್ಟೆಯೊಳದಿಕ್ಕೆ ಇದ್ದಡೋ? ಅದರೂ ಅವನ ಹೊಟ್ಟೆ ದೊಡ್ಡ ಇಲ್ಲೆ.ಆದರೂ ಅವನ ಭಕ್ತಿಂದ ನಂಬಿದರೆ ನಾವು ಮಾಡಿದ ತಪ್ಪುಗಳ ಎಲ್ಲ ಹೊಟ್ಟೆಲ್ಲಿ ಹಾಕಿಗೊಂಡು ನಮ್ಮ ಕ್ಷಮಿಸುತ್ತಡೋ? ಅವನನ್ನೇ ಕೇಳಿಗೊಂಬೋ  ಎಂಗೊಗೆಲ್ಲ ಒಳ್ಳೆದೇಮಾಡಪ್ಪ ನಿನ್ನನ್ನೇ ನಂಬಿದ್ದೆಯೋ ಹೇಳಿ ಕೇಳಿಗೊಂಡು ಹದಕ್ಕೆ ತಿಂದುಗೊಂಡು ಆರೋಗ್ಯವಾಗಿ ಇಪ್ಪೊ. ಅಂತೂ ಈ ಹೊಟ್ಟೆಗೆ ತುಂಬುಸುಲೆ ಆಹಾರ ಮಾಂತ್ರ ಅಲ್ಲ ಬೇರೆ ವಿಷಯಂಗಳೂ ಇದ್ದು ಹೇಳಿ ಆತು.ಭಲೇ ಹೊಟ್ಟೆ.ನಿನಗೆ ನೀನೇ ಸಮ! ಇಷ್ಟಕ್ಕೇ ಮುಗುದ್ದಿಲ್ಲೆ. ಹೊಟ್ಟೆ ಬಾಯಿ ಕಟ್ಟಿಗೊಂಡು ಮಕ್ಕಳ ಸಾಂಕುವೋರೂ ಇದ್ದವನ್ನೇ.ಮಕ್ಕೊಗೆ ಕೇಳಿದ್ದರ ತಿಂಬಲೆ ಕೊಟ್ಟಿಕ್ಕಿ ಉಪಾಸ ಇಪ್ಪ ಅಬ್ಬೆಕ್ಕಳೂ ಇದ್ದವನ್ನೆ.ಅವರ ತ್ಯಾಗ ದೊಡ್ಡದು. ಅವು ತಿಂಬದು ಎಲ್ಲೋರಿಂಗೂ ಆದಮೇಲೆ. ಅ ಹೊತ್ತಿಂಗೆ ಮದಲೆ ತಿಂದಾದ ಮಕ್ಕೊ ಅಲ್ಲಿಗೆ ಓಂಗ್ಯೊಂಡು ಹೋದರೆ ಅವರ ಪಾಲಿಂದ ಮಕ್ಕೊಗೂ ಕೊಡುತ್ತವನ್ನೆ.ಅವಕ್ಕೆ ಬೇಡ ಹೇಳಿ ಅಲ್ಲ. ಅವಕ್ಕೂ ತಿಂಬಲೆ ಆಶೆ ಇದ್ದು. ಆದರೆ ಮಕ್ಕೊಗೆ ತಿಂಬಲೆ ಕೊಡುವ ಆಶೆಯೂ ಇದ್ದು. ಅದರಲ್ಲಿ ಮಕ್ಕೊಗೆ ಕೊಡುವ ದೊಡ್ಡ ಮನಸ್ಸೇ ಹೆಚ್ಚು! ಹಾಂಗಾಗಿ ಅಬ್ಬೆಕ್ಕಳ ತ್ಯಾಗ ದ್ಒಡ್ಡದಲ್ಲದೋ?ಇನ್ನು ಕೆಲವು ಜನ ಇದ್ದವಡೊ. ಮಕ್ಕಳ ಕದ್ದೊಂಡು ಹೋಗಿ ಕೈಕಾಲು ಎಲ್ಲ ಊನ ಮಾಡಿ ಮಾರ್ಗದ ಕರೆಲ್ಲಿ ಬೇಡುಲೆ ಮನುಶಿಕ್ಕಿ ಹೋಪದು. ಅದು ಹೊಟ್ಟೆ ಪಾಡಿಂಗಲ್ಲ. ಅದು ಹಂಕಾರಂದ ಜನಂಗಳ ಮೋಸ ಮಾಡಿ ಪೈಸೆ ಮಾಡುಲಿಪ್ಪ ಬುದ್ಧಿವಂತಿಕೆ. ಆದರೆ ಅ ಮಕ್ಕಳ ನೋಡುವಗ ಪಾಪನೆ ಕಾಣುತ್ತು. ಪೈಸೆಗೆ ಬೇಕಾಗಿ ಮನುಷ್ಯ ಎಂತದೂ ಮಾಡುತ್ತ.ವಲ್ಲದೋ? ಅಂಥವಕ್ಕೆ ನಾಳೆಯಾಣ ಯೋಚನೆ ಇಲ್ಲೆ. ಎಲ್ಲ ಅವನ ಲೀಲೆಗೊ. ಅವಂಗೇ ಗೊಂತು ಎಲ್ಲ. ನಾವು ಚಿಂತೆ ಮಾಡಿ ಪ್ರಯೋಜನ ಇದ್ದೋ? ಮಾಡಿದ್ದುಣ್ಣೋ ಮಹರಾಯ ಹೇಳಿ. ಅವು ಅವು ಮಾಡಿದ್ದರ ಅವವು ತಿಂತವು. ಅಷ್ಟಕ್ಕೇ ಬಿಡುವೊ. ಲೋಕದ ಡೊಂಕಿನ ತಿದ್ದಲೆಡಿಗೋ? ಎಲ್ಲಿ ಓರೆ ಕೋರೆಗೊ ಇದ್ದೊ ಅದರೆಲ್ಲ ಲೋಕ ಸೃಷ್ಟಿ ಮಾಡಿದೋನೇ ಸರಿಮಾಡಲಿ