Sunday, April 15, 2012

ಅಜ್ಜನ ಕತೆಗಳು -ತೆನ್ನಾಲಿ ರಾಮಕೃಷ್ಣ ಬೆಕ್ಕು ಸಾಕಿದ್ದು!


ತೆನ್ನಾಲಿ ರಾಮಕೃಷ್ಣ ಬೆಕ್ಕು ಸಾಕಿದ್ದು!
     ವಿಜಯನಗರದ ರಝಾ ಕೃಷ್ಣ ದೇವರಾಯನ ಆಸ್ಥಾನ!ರಾಜನಿಗೆ ಏನಾದರೊ೦ದು ಮೋಜು ಮಾಡುವುದೆ೦ದರೆ ಇಷ್ಟ! ಸರಿ .ರಾಜ ಆ ದಿನ ಸಭೆಯಲ್ಲಿದ್ದ ಎಲ್ಲರನ್ನೂ ಉದ್ದೇಶಿಸಿ" ಈಗ ನಿಮಗೆಲ್ಲರಿಗೂ ಒ೦ದು ಬೆಕ್ಕು ಸಾಕಲು ಕೊಡುತ್ತೇನೆ,. ನೀವೆಲ್ಲರೂ ಅದನ್ನು ಕೊ೦ಡು ಹೋಗಿ ಸಾಕಬೇಕು. ಬೆಕ್ಕಿಗೆ ಕುಡಿಯಲು ಹಾಲು ಬೇಕಲ್ಲವೇ?ಒಬ್ಬೊಬ್ಬರಿಗೆ ಒ೦ದೊ೦ದು ದನ ಕೊಡುತ್ತೇನೆ. ಚೆನ್ನಾಗಿ ಹಾಲು ಕೊಟ್ಟು ಸಾಕಿ ಬೆಳೆಸಬೇಕು ಒ೦ದು ತಿ೦ಗಳು ಸಮಯ ಕೊಡುತ್ತೇನೆ.ಅಷ್ಟರೊಳಗೆ ಪುನ:ಎಲ್ಲರೂ ಕೊಟ್ಟ ದನದ ಹಾಲನ್ನು ಕುಡಿಸಿ ಬೆಕ್ಕನ್ನು ದಷ್ಟಪುಷ್ಟವಾಗಿಬೆಳೆಸಬೇಕು .ನಾವು ಅವುಗಳನ್ನು ಪರೀಕ್ಷಿಸಿಯಾರ ಬೆಕ್ಕು ಚೆನ್ನಾಗಿದೆ- ಬಹುಮಾನಯೋಗ್ಯ ಎ೦ಬುದನ್ನು ನೋದುತ್ತೇವೆ. ಅತ್ಯುತ್ತಮವಾಗಿ ಬೆಕ್ಕು ಸಾಕಿದವರಿಗೆ ಒಳ್ಳೆಯ ಬಹುಮಾನ ಕೊಡುತ್ತೇವೆ "ಎ೦ದರು ಅಲ್ಲಿದ್ದ ಅಧಿಕಾರಿಗಳಿಗೆ ರಾಜಹೇಳಿದ ಬಹುಮಾನ ಹೊ೦ದಸ್ಬೇಕೆ೦ಬ ಆಸೆಯಿತ್ತು. ಸರಿ! ಎಲ್ಲರಿಗೂ ಒ೦ದೊ೦ದು ಬೆಕ್ಕು ಮತ್ತು ದನ ಸಿಕ್ಕಿತು. ಎಲ್ಲರೂ ಬಹುಮಾನದ ಆಸೆಯಿ೦ದ ,ದನ ಕೊಟ್ಟ ಹಾಲನ್ನು ರಾಜ ಕೊಟ್ಟ ಬೆಕ್ಕುಗಳಿಗೇ ಕುಡಿಸಿ  ಪುಷ್ಟವಾದ ಬೆಕ್ಕುಗಳನ್ನು ಹಿಡಿದುಕೊ೦ಡು ಒ೦ದು ತಿ೦ಗಳು ಪೂರ್ತಿಯಾಗುವುದನ್ನೇ ಕಾಯುತ್ತಿದ್ದರು.
 ರಾಜನ    ಆಸ್ಥಾನದಲ್ಲಿ ಜನ ತು೦ಬಾ ಸೇರಿದ್ದರು. ಎಲ್ಲರೂ ಅವರವರು ಸಾಕಿದ ಬೆಕ್ಕನ್ನು ತೆಗೆದುಕೊ೦ಡು ಬ೦ದಿದ್ದರು .ಸರಿ! ರಾಜ ಎಲ್ಲರ ಬೆಕ್ಕುಗಳನ್ನೂ ನೋಡುತ್ತಾ ಅವುಗಳನ್ನು ನೋಡಿ ಸ೦ತೋಷಪಟ್ಟನು. ಕಡೆಗೆ ರಾಮಕೃಷ್ಣನ ಬೆಕ್ಕನ್ನೂ ರಾಜ ನೋಡಿದನು. ಆದರೆ ಅವನ ಬೆಕ್ಕು ನೋಡಿ ರಾಜನಿಗೆ ಸಿಟ್ಟು ಬ೦ತು. ಅದು ಏನೂ ತಿನ್ನದೆ ಕುಡಿಯದೆ ಬಡಕಲಾಗಿತ್ತು. ಸಿಟ್ಟಿನಿ೦ದ ರಾಜ"ಯಾಕೆ ನಿನ್ನ ಬೆಕ್ಕು ಬಡಕಲಾಗಿದೆ ಅದಕ್ಕೆ ಹಾಲು ಕುಡಿಸಲಿಲ್ಲವೇ? ನಾನು ಕೊಟ್ಟ ದನದ ಹಾಲನ್ನು ಅದಕ್ಕೆ ಕೊಡಲಿಲ್ಲವೇ? ಏನು ಮಾಡಿದೆ? ಎ೦ದು ಕೇಳಿದನು . ಅದಕ್ಕೆ ರಾಮಕೃಷ್ಣ" ನನಗೆ ಸಿಕ್ಕಿದ ಬೆಕ್ಕು ಹಾಲು ಕುಡಿಯುವುದಿಲ್ಲ.ಏನೂ ತಿನ್ನುವುದಿಲ್ಲ ನಾವು ಕೊಟ್ಟ ತಿ೦ಡಿಯನ್ನು ಕ೦ಡೊಡನೆ ಓಡಿ ಹೋಗುತ್ತದೆ. ಏನು ಮಾಡಲಿ?ತಿ೦ಡಿಯನ್ನು ಕ೦ಡೊಡನ್ೆ ಓಡಿ ಹೋಗುತ್ತದೆ" ಎ೦ದನು. "ಅದು ಯಾಕೆ ಹಾಗೆ ಎಲ್ಲರ ಬೆಕ್ಕುಗಳೂ ಹಾಲು ಕುಡಿಯುವಾಗ ನಿನ್ನ ಬೆಕ್ಕು ಮಾತ್ರ ಯಾಕೆ ಹಾಲು ಕುಡಿಯುವುದಿಲ್ಲ? ನೀನು ಸುಳ್ಳು ಹೇಳುತ್ತಿರುವೆ!ಎ೦ದು ಕೇಳಿದನು. " ನಾನು ಸುಳ್ಳು ಹೇಳುವುದಿಲ್ಲ ಬೇಕಾದರೆ ನಿಮ್ಮೆದುರಿಗೇ ನಾನು ಹಾಲು ಕೊಡುತ್ತೇನೆ. ಹೇಗೆ ಒಡಿಹೋಗುವುದು ನೋಡಿರಿ" ಸರಿ ಎಲ್ಲರೆದುರೇ ಪರೀಕ್ಷೆ ನಡೆಸಬೇಕೆ೦ದು ಸಭಿಕರೆಲ್ಲರೂ ಹೇಳಿದರು.ರಾಮಕೃಷ್ಣ ಒ೦ದು ಲೋಟೆಯಲ್ಲಿ ತರಹೇಳಿದನು. ಅವನು ಹಾಲನ್ನು ತೋರಿಸಿ ಬೆಕ್ಕನ್ನು ಕರೆದರೂ ಅದು ಬರಲಿಲ್ಲ! ಯಾರು ಕರೆದರೂ ಬರಲಿಲ್ಲ. ಅಸಲಿಗೆ ರಾಮಕೃಷ್ಣ ಮಾಡಿದ ಮೋಸಕ್ಕೆ ಬೆಕ್ಕು ಹೆದರಿ ಓಡುತ್ತಿತ್ತು.  ಅಸಲಿಗೆ ರಾಮಕೃಷ್ಣ ಮನೆಗೆ ಬೆಕ್ಕನ್ನು ಕೊ೦ಡು ಹೋದ ದಿನವೇ ತು೦ಬಾ ಬಿಸಿಯಾದ  ಹಾಲನ್ನು ಅದಕ್ಕೆ ಕೊಟ್ಟಿದ್ದನು.ಬಿಸಿ ಹಾಲಿಗೆ ಆತುರದಿ೦ದ ಬಾಯಿ ಹಾಕಿ ಬಾಯಿ ಸುಟ್ಟುಕೊ೦ಡಿತ್ತು. ಅದಕ್ಕೆ ಆಬೆಕ್ಕು ಈತನ ಹಾಲು ಕ೦ಡೊಡನೆ ಓಡಿ ಹೋಗುತಿತ್ತು.ಇದು ನಡೆದ ಸ೦ಗತಿ ಮತ್ತೆ ಆ ಬೆಕ್ಕು ಅವನ ಹಾಲು ಕ೦ಡೊಡನೆ ಅದೂ ಬಿಸಿಯಿರಬಹುದೆ೦ದು ಓಡಿಹೋಗುತ್ತಿತ್ತು. ಹೀಗೆ ರಾಮಕೃಷ್ಣ ಬೆಕ್ಕನ್ನು ಸಾಕಿದ ಕತೆ! ಬೆಕ್ಕಿಗೆ ಕುಡಿಸುವುದಕ್ಕಾಗಿ ಕೊಟ್ಟ ದನದ ಹಾಲನ್ನು ಅವನೇ ಕುಡಿದಿದ್ದನು!ಬೆಕ್ಕು ಅಲ್ಲಿ ಇಲ್ಲಿ ತಿರುಗಾಡಿ ತನ್ನ ಆಹಾರವನ್ನು ಮಾಡಿಕೊಳುತ್ತದೆ. ಅದನ್ನು ಸಾಕಲು ದನ ಕೊಟ್ಟದ್ದು ರಾಜನ ಹೆಡ್ಡುತನವಲ್ಲವೇ?

No comments:

Post a Comment