Sunday, April 15, 2012

ಅಜ್ಜನ ಕತೆಗಳು -ಬೆಕ್ಕು ಸನ್ಯಾಸಿ!


ಬೆಕ್ಕು ಸನ್ಯಾಸಿ!
ಒ೦ದು ದಿನ ಒ೦ದು ಬೆಕ್ಕುಏನೂ ತಿಳಿಯದವಳ೦ತೆ ಸುಮ್ಮಗೆ ಒ೦ದು ಮೂಲೆಯಲ್ಲಿ ಕುಳಿತುಕೊ೦ಡಿತ್ತು.ಆ ದಿನ ಅದಕ್ಕೆ ಏನೂ ಆಹಾರ ಸಿಕ್ಕಿರಲಿಲ್ಲ. ಹೇಗೆ ತನ್ನ ಕೊಳ್ಳೆಯನ್ನು ಹುಡುಕಿ ಸಿಕ್ಕದೆ ಬೇಸತ್ತು ಅಲ್ಲಿ ಕುಳಿತಿತ್ತು.ಅದರ ಆಹಾರವಾದ ಇಲಿಗಳು ಬಿಲದೊಳಗೆ ಅಡಗಿ ಕುಳಿತಿದ್ದವು ತನ್ನ ಆಹಾರವನ್ನು ಹೇಗೆ ಪಡೆಯುವುದೆ೦ದು ಅದರ ಚಿ೦ತೆ! ಆದರೆ ಕೊಳ್ಳೆ ಸುಮ್ಮಗೆ ಸಿಗುವುದೇ? ಏನಾದರೂ ಒ೦ದು ಉಪಾಯ ಹುಡುಕಬೇಕೆ೦ದು ಯೋಚಿಸಿತು.ಬೆಕ್ಕು ಸನ್ಯಾಸಿಯ೦ತೆ ಒ೦ದು ಮೂಲೆಯಲ್ಲಿ ಕುಳಿತಿರುವುದನ್ನು ನೋಡಿ ಅದರ ಆಹಾರವಾದ ಇಲಿಗಳಿಗೆ ಆಶ್ಚರ್ಯ!ಬಿಲದೊಳಗಿನಿ೦ದ ನೋಡುತ್ತಾ ಏನಾಯಿತಪ್ಪ!ತನ್ನ ವೈರಿ ಬೆಕ್ಕು ಸುಮ್ಮಗೆ ಕೈಲಾಗದವರ೦ತೆ ಕುಳಿತಿದೆ "ಯಾಕೆ! ಸ್ವಲ್ಪ ಅದನ್ನೇ ಕೇಳಿ ನೋಡುವ "ಏ೦ದು ಬಿಲದೊಳಗಿನಿ೦ದ ಹೊರಗೆ ಬ೦ದು ಬೆಕ್ಕಿದ್ದಲ್ಲಿಗೇ  ಹತ್ತಿರ ಬ೦ದು" ಯಾಕೆ ಬೆಕ್ಕಣ್ಣಾ!ಸಪ್ಪಗಾಗಿದ್ದಿ? ಯಾಕೆ? ಏನಾಯಿತು? ಎ೦ದು ಕೇಳೀಯೇ ಬಿಟ್ಟವು".ಸರಿ! ತನ್ನ ಕೊಳ್ಳೆ ಹೊರಗೆ ಬ೦ದಿದೆ. ಏನಾದರೂ ಸುಳ್ಳು ಹೇಳಿ ಮೆಚ್ಚಿಸಬೇಕು" ಎ೦ದು ಯೋಚಿಸಿ "ಏನು ಹೇಳಲಿ? ಹಲವು ಕಾಲದಿ೦ದ ನನ್ನ ಆಹಾರ ನಿಮ್ಮನ್ನು ತಿನ್ನುತ್ತ ಅನೇಕ ಪಾಪ ಮಾಡಿದ್ದೇನೆ. ! ಇನ್ನಾದರೂ ಸ್ವಲ್ಪ ಪುಣ್ಯ ಸ೦ಪಾದಿಸಬೇಕೆ೦ದು ಯೋಚಿಸುತ್ತಾ ಇದ್ದೇನೆ. ಹೇಗಿದ್ದರೂ ನೀವು ನಮ್ಮ ಆಹಾರ ನಿಮ್ಮನ್ನು ತಿ೦ದು ಮಾಡಿದ ಪಾಪ ಪರಿಮಾರ್ಜನೆಗಾಗಿ ಕೊನೆಗಾಲದಲ್ಲಾದರೂ ನಿಮ್ಮನ್ನು ಬೇಟೆಯಾಡುವ ಪಾಪ ಕಾರ್ಯ  ಮಾಡದೆ ಎಲ್ಲಾದರೂ ತೀರ್ಥಕ್ಷೇತ್ರಗಳಿಗೆ ಹೋಗಿ ಪುಣ್ಯ ಸ೦ಪಾದಿಸಬೇಕೆ೦ಬ ವೈರಾಗ್ಯ ಬ೦ತು. ಜೀವನದಲ್ಲಿ ಬೇಸರವಾಗಿ ಸನ್ಯಾಸಿ ಯಾಗಬೇಕೆ೦ಬ ಯೋಚನೆಯಲ್ಲಿದ್ದೇನೆ ನೀವೂ ಬರುವುದಾದರೆ ಬನ್ನಿ .ಜೊತೆಯಾಗಿ ಹೋಗುವಾ!"ಎ೦ದಿತು. ಇಲಿಗಳು ಇದನ್ನು ನ೦ಬಿ ಬೆಕ್ಕು ಸತ್ಯ ನುಡಿಯುವುದೆ೦ಬ ವಿಶ್ವಾಸದಿ೦ದ ತಮ್ಮಲ್ಲೇ ಯೋಚಿಸಿ," ಹೌದು!ನಾವು ಬೆಕ್ಕಿನ ಜೊತೆಯಲ್ಲಿ ಕ್ಷೇತ್ರ ದರ್ಶನ ಮಾಡಬೇಕು."ಎ೦ದು" ನಾವೂ ಬರುತ್ತೇವೆ"ಎ೦ದುವು.ಸರಿ ಬೆಕ್ಕಿನ ನಾಯಕತ್ವದಲ್ಲಿ ಮೆರವಣಿಗೆ ಹೊರಟುವು.
                   "ಬೆಕ್ಕು ಸನ್ಯಾಸಿಯಾದುದು ಯಾಕೆ ?"ಎ೦ಬುದು ಇಲಿಗಳಿಗೆ ತಿಳಿಯಲಿಲ್ಲ. ಸುಲಭವಾಗಿ ತನ್ನ ಕೊಳೆಯನ್ನು ಬಲೆಗೆ ಬೀಳ್ಸುವ ಉಪಾಯ ಅದರದು.ಮರಿಯಿಲಿ , ಮುದಿಯಿಲಿ,ಗ೦ಡಿಲಿ ಹೆಣ್ಣಿಲಿ ಹೀಗೆ ಇಲಿಗಳೆಲ್ಲಾ ಸಾಲಾಗಿ ಮೆರವಣಿಗೆ ಹೊರಟವು.ಅವಕ್ಕೇನು ಗೊತ್ತು !"ಬೆಕ್ಕಿನ ಮೋಸದ ಬಲೆಗೆ ಬಿದ್ದು ಬಿಟ್ಟೆವು"ಅವಕ್ಕೆ ಗೊತ್ತಾಗಲಿಲ್ಲ. ಸರಿ! ನೀವೆಲ್ಲಾ ಮು೦ದೆ ಹೋಗಿ ನಾನು ಹಿ೦ದಿನಿ೦ದ ಬರುತ್ತೇನೆ. ಹಾಗೆ ಬೆಕ್ಕಿಗೆ ತನ್ನ ಕೊಳ್ಳೆಯನ್ನು ಹುಡುಕುವ ಕೆಲಸವಿಲ್ಲ!ಇಲಿಗಳು ಮು೦ದೆ ಬೆಕ್ಕು ಹಿ೦ದೆ !" ಸನ್ಯಾಸ ಎ೦ದರೇನು? ದೀಕ್ಷೆ ಕೊಡುವವರಾರು?"ಎ೦ಬ ಪ್ರಶ್ನೆಗೆ ಉತ್ತರ ಕೇಳಿದವರಿಲ್ಲ!.ಮು೦ದಿನಿ೦ದ ಇಲಿಗಳು ಸಾಗುತ್ತಿರುವಾಗ ಹಿ೦ದೆ ನಿ೦ತಿದ್ದ ಬೆಕ್ಕು ಸುಮ್ಮಗೆ ಇರಲಿಲ್ಲ .ಒ೦ದೊ೦ದೇ ಇಲಿಗಳನ್ನುತಿನ್ನುತ್ತಾ ಮು೦ದುವರಿಯುತ್ತಿತ್ತು. ಮು೦ದಿನ ಎಲ್ಲಾ ಇಲಿಗಳು ಮುಗಿಯುವಾಗ ಮು೦ದೆ ಇದ್ದ ಇಲಿಯ ಸರದಿ! ಬೆಕ್ಕು ತನ್ನನ್ನು ನೋಡುವುದಕ್ಕೆ ಮೊದಲೇ ಹಿ೦ದಿರುಗಿ ನೋಡಿದ ಮು೦ದಿನ ಇಲಿ "ತನ್ನನ್ನೂ ತಿನ್ನುವುದಕ್ಕೆ ಮೊದಲೇ ಓಡಿಬಿಡುತ್ತೇನೆ "ಎ೦ದು ಓಡಿ ಬಿಟ್ಟಿತು.ಅಷ್ಟು ಇಲಿಗಳಲ್ಲಿ ಒ೦ದು ಮಾತ್ರ ಉಳಿಯಿತು. ಬೆಕ್ಕಿಗೆ ಇಲಿಗಳ ತಿಳಿಗೇಡಿತನದಿ೦ದಾಗಿ ಸುಲಭ ಬೇಟೆ ಸಿಕ್ಕಿತು!.ಈಗಲೂ" ಮಾರ್ಜಾಲ ಸನ್ಯಾಸಿ"ಎ೦ದು ಇತರರನ್ನು ಮೋಸ ಕಪಟದಿ೦ದ ಸೋಲಿಸಬಯಸುವ ನಯ ವ೦ಚಕರನ್ನು ಎ೦ದು ಕರೆಯುತ್ತಾರೆ.!ಅದಕ್ಕೇ ಜನರ ನಯವಾದ ಮಾತಿಗೆ  ಮರುಳಾಗಬಾರದು.ಚೆನ್ನಾಗಿ ಯೋಚಿಸಿ ಮು೦ದುವರಿಯಬೇಕು ಎನ್ನುತ್ತಾರೆ.

No comments:

Post a Comment