ಹಿಂದಾಣೋರ ಸಾಮಾಜಿಕ ಜೀವನ ಹೇಂಗಿತ್ತು!
         ಗುಂಪೆ ಗುಡ್ಡೆಯ ತೆಂಕ ಹೊಡೆಲ್ಲಿಪ್ಪ ಎಂಗಳ ಮೂಲೆಲ್ಲಿ ಎಂಗಳ ಕುಟುಂಬದೋರೇ ಇತ್ತಿದ್ದವಡಾ.ಬರೇ ನಾಲ್ಕು ಮನೆ ಅಂಬಗ ಇದ್ದದ್ದು. ಒಂದು ಮನೆಲ್ಲಿ ದೊಡ್ಡಾಗಿದ್ದ ಕೂಸಿಂಗೆ ಮದುವೆ ಆಗದ್ದೆ ಚಿಂತೆ ಮಾಡ್ಯೊಂಡಿಪ್ಪಗ ಆ ಊರಿಂಗೆ ಕೂಸಿನ ಹುಡುಕ್ಯೊಂಡು ಉತ್ತರದ ಕಡೆಂದ ಬಂದ ಹುಡುಗಂಗೆ ಕೂಸಿನ  ಮದುವೆ ಮಾಡಿಕೊಟ್ಟು  ಒಂದು ಮನೆಯನ್ನೂ ಕಟ್ಟುಸಿ ಕೊಟ್ಟು  ಕೂರುಸಿದವು. ಹಾಂಗೆ ಬೇರೊಂದು ಮನೆ ಹೆಚ್ಚಾತು.ಬಂದೋರು ಇದ್ದೋರೊಟ್ಟಿಂಗೆ ಚೆಂದಕ್ಕೆ ಇತ್ತಿದ್ದವು. ತಿಥಿ ಕೈನ್ನೀರಿಂಗೆ ಒಂದು ಮನೆ ಆತು.ಎಂಗಳ ಹೆರಿ ಮನೆಯೋವು ಹತ್ತರಾಣ ಇನ್ನೊಂದು ಗ್ರಾಮಕ್ಕೆ ಗುರಿಕ್ಕಾರಕ್ಕೊ. ಅವು ಎಂಗಳಲ್ಲಿ ಗುರಿಕ್ಕಾರಕ್ಕೊ. ಈ ಎರಡು ಗುರಿಕಾರಕ್ಕಳ ಮನೆ ಎರಡು ಗ್ರಾಮಲ್ಲಿ ಇಪ್ಪದು. ಎರಡು ಗ್ರಾಮಕ್ಕೂ ಸೇರಿದ್ದು ಒಂದು ದೇವೀ ದೇವಸ್ತಾನ.ಎಂಗಳ ಗ್ರಾಮಲ್ಲಿ ಇಪ್ಪದು ಒಂದು ಭೂತದ ಭಂಡಾರ!ದೇವರಭಂಡಾರ ಇನ್ನೊಂದು ಗ್ರಾಮಲ್ಲಿ. ಈ ಎರಡೂ ಗ್ರಾಮದೋವು ಸೇರಿ ಊರ ಜಾತ್ರೆ ನಡವದು.
    ಭೂತಸ್ತಾನ ಮತ್ತೆ ದೇವಸ್ತಾನ ಒಂದು ಹೊಳೆ ಕರೆಲ್ಲಿ ಇಪ್ಪದು. ಆದರೆ ಭೂತಸ್ತಾನ  ಎಂಗಳ ಗ್ರಾಮಲ್ಲಿ ಆದ ಕಾರಣ ಭೂತಕ್ಕೆ ಪ್ರಾರ್ತನೆ ಮಾಡುವದೆಲ್ಲ ಎಂಗಳ ಗುರಿಕ್ಕಾರ.ಎರಡೂ ಗ್ರಾಮಲ್ಲಿ ಇಪ್ಪೋರನ್ನೂ ಜಾತ್ರೆ ದಿನ ಆವೇಶ ಬಂದು ಭೂತ ದಿನಿಗೇಳುಲೆ ಇದ್ದು. ಎಂಗಳ ಗ್ರಾಮದ ಲೆಕ್ಕಲ್ಲಿ  ಐದಾರು ಮನೆ ಬ್ರಾಹ್ಮಣರ, ಮತ್ತೆ, ಆಚೆ ಗ್ರಾಮದ ಗುರಿಕ್ಕಾರನ ಹೀಂಗೆ ಮನೆ ಹೆಸರು ಹೇಳಿ "ಪತ್ತೊಕ್ಕೆಲು" ಹೇಳಿ ದಿನಿಗೇಳುವದು ಈಗಳೂ ಇದ್ದು.ಅದುಭೂತದ ಮರ್ಯಾದಿ. ಬರಲಿ ಬಾರದ್ದಿರಲಿ ಎಂಗೊ ಅಲ್ಲಿ ಊರಿಲ್ಲಿ ಇಲ್ಲದ್ದರೂ ದಿನಿಗೇಳುಗು. ಎಂಗಳೂ ವಂತಿಗೆ ಕೊಟ್ಟೊಂಡಿತ್ತಿದ್ದೆಯೊ.ಭೂತ ಸ್ತಾನಲ್ಲಿ,ಭೂತಕ್ಕೊಂದು ಭೂತದ ಚಾವಡಿ ಈಗಳೂ ಇದ್ದು. ನವರಾತ್ರಿಲ್ಲಿ ತಂಬಲವೂ ಇದ್ದು. ಒಂದೊಂದು ದಿನದ ಬೊಂಡ ಬಾಳೆಹಣ್ಣು ಸಿಂಗಾರ,ಎಣ್ಣೆ ದೀಪಕ್ಕೆ ಎಲ್ಲ ಅಲ್ಲಿಗೆ ಕೊಂಡೋಯೆಕ್ಕು. ಗುರಿಕ್ಕಾರ ಪ್ರಾರ್ತನೆ ಮಾಡೆಕ್ಕು.ಹಿರಿ ಮನೆಯೋರಿಂಗೆ ಹೋಪಲೆಡಿಯೆದ್ರೆ ಎಂಗಳ ಮನೆಗೆ ಬಂದು ಇಂದ್ರಾಣದ್ದು ನಿಂಗೊ ಹೋಯೆಕ್ಕು ಹೇಳಿದರೆ ಎಂಗೊ ಹೋಯೆಕ್ಕು.
ಎಂಗಳ ಮೂಲೆಂದ ಒಂದು ಮೈಲು ದೂರಕ್ಕೆ ಕೆಳ ಇಳುಕ್ಕೊಂಡು ಹೋಯೆಕ್ಕು ಚಾವಡಿಗೆ. ಹೊತ್ತೋಪಗ ತಂಬಲದ ಸಾಮಾನು ತೆಗೆಶ್ಯೊಂಡು ಕೆಳ ಬೈಲಿಂಗೆ ಹೋದರೆ ಹೊಳೆ ಕರೆಲ್ಲಿ ಭೂತದ ಚಾವಡಿ. ದೇವಸ್ತಾನದ ಅಡಿಗಳು ಅಲ್ಲಿಯ ಸ್ತಾನಿಕ ಒಟ್ಟಿಂಗೆ ಬಕ್ಕು. ಬಪ್ಪಗ ತಡವಾದರೆ ತಂಬಲ ಕಟ್ಟಿ ಬಿರಿವಗ ತುಂಬಾ ಕತ್ತಲೆ ಆವುತ್ತು. ಅದರಲ್ಲಿಯೂ ಆ ವಠಾರಲ್ಲಿಪ್ಪ ಕೆಲವು ಬಳೆ ಹಾಕಿದ ಯಜಮಾನಕ್ಕೊ ಬಂದು ಸೇರೆಕ್ಕು. ಅವು ಬಂದ ಮೇಲೆ ತಂಬಲ ಎಲ್ಲ ಮುಗುದು ಬಟವಾಡೆ. ಎಲ್ಲ ಆಗಿ ಹೆರಡುವಗ ಎಂಟೊಂಬತ್ತು ಗಂಟೆ ಆದರೂ ಆತು. ಕೆಲವೊಂದರಿ ಬ್ರಾಹ್ಮರಿಂಗೆ ಕಲಿಶೆಕ್ಕು ಹೇಳಿಯೇ ತಡವು ಮಾಡುವದೂ ಇತ್ತು. ಒಂದರಿ ಹಾಂಗೆ ತಡವು ಮಾಡಿದ್ದಕ್ಕೆ ಎಂಗಳಲ್ಲಿಂದ ಹೋದ ಗುರಿಕ್ಕಾರ ಹಾಂಗೆ ತಡವು ಮಾಡುವದಕ್ಕೆ ರಜ ಪರೆಂಚಿದಾಡ. ಬಂತು ಕೋಪ ಅಲ್ಲಿದ್ದವಕ್ಕೆ. ಎಂಗಳ ಮೂಲೆಂದ ಇಬ್ರೇ ಇದ್ದದು. ಅವು ತುಂಬ ಜನ ಇತ್ತಿದ್ದವಡೊ. ಮಾತು ಜೋರಾಗಿ " ಎಲ್ಲೆ ಬಲ್ಲೆ.ಸೂವೋಣುಕೊ, ಕಲ್ಪಾವೆ ಭಟ್ರ್ವೆ" ಹೇಳಿಯೂ ಆಗಿತ್ತು. ಮರದಿನವೂ ಹೋಯೆಕ್ಕು. ಹೋಗದ್ದರೆ ಗುರಿಕ್ಕಾರ ಕರ್ತವ್ಯ ಲೋಪ ಮಾಡಿದ ಹಾಂಗೆ ಆವುತ್ತನ್ನೆ.
    ಹಾಂಗೆ ಮರದಿನ ಗುರಿಕ್ಕಾರನ ಮನೆಲ್ಲಿ ನಾಲ್ಕೈದು ಮನೆಯೋರು ಸೇರಿ ಆಲೋಚನೆ ಮಾಡಿದವು
. ಅವರ ಎದುರೆ ನಾವು ಸೋತು ಹೋಪಲಾಗ ಹೇಳುವದು ಎಲ್ಲೋರ ಅಭಿಪ್ರಾಯ. ಹೇಂಗಾದರೂ ಗುರಿಕ್ಕಾರನೊಟ್ಟಿಂಗೆ ನಾಲ್ಕೈದು ಜನ ಹೋಪದು. ಹೋಪಗ ತುಂಬ ಕತ್ತಲ ಆಯೆಕ್ಕು. ಅವು ಬಂದು ನಮ್ಮ ಕಾದು ಕೂರೆಕ್ಕು. ನಾವು ಹೋಪಗ ತಡವಾದರೆ ,ತಂಬಲಕ್ಕೆ ಬೇಕಾದ ಸಾಮಾನು ಎತ್ತದ್ದರೆ ತಂಬಲ ಕಟ್ಟುವದು ಹೇಂಗೆ? ಪ್ರಾರ್ತನೆ ಮಾಡುವದು ಆರು? ಹೇಳಿ ಎಲ್ಲ ಸಮಸ್ಯೆ ಆವುತ್ತು. ನಾವು ಅಲ್ಲಿಗೆ ಎತ್ತದ್ದೆ ಬಾಯಿ ಬಾಯಿ ಬಿಡೆಕ್ಕು.ಬ್ರಾಹ್ಮರು ಎಂತ ಹೇಳಿ ತೋರಸೆಕ್ಕು ಹೇಳಿ ಈ ಉಪಾಯ ಮಾಡಿದವು.
   ಹತ್ತು,ಹದಿನೈದು ಮಡಲ ಸೂಟೆಗಳ ತೆಕ್ಕೊಂಡವಡೊ. ಸಾಮಾನು ತೆಗೆಶ್ಯೊಂಡು ಹೆರಟವಡೊ. ಗುಡ್ಡೆ ತಲೆಂದ ಕೆಳ ಇಳುದು ಹೋಯೆಕ್ಕನ್ನೆ. ಗುಡ್ಡೆ ಕೊಡಿಲ್ಲಿ ಕೆಳ ಚಾವಡಿಲ್ಲಿದ್ದೋರಿಂಗೆ ಕಾಂಬ ಹಾಂಗೆ ಕೆಲವು ಮರಂಗೊಕ್ಕೆ ಸೂಟೆಗಳ ಕಟ್ಟಿದವಡೊ.ಹೇಂಗಾದರೂ ಕತ್ತಲೆ ಆಯಿದನ್ನೆ! ಎಲ್ಲ ಸೂಟೆಗಳನ್ನೂ ಕಿಚ್ಚು ಕೊಟ್ಟು ಹೊತ್ತುಸಿದವಡೊ.ಮತ್ತೆ ಇವರ ಕೈಲ್ಲ್ಯೂ ಕೆಲವು ಸೂಟಗೊ. ಎಲ್ಲ ಒಟ್ಟಿಂಗೆ ಹೊತ್ತುಸಿ ಕೈಲ್ಲದ್ದದರ ಬೀಸಿಗೊಂಡು ಹೋಪಗ, " ಬೆರಣ್ಣೇರು ಪಾಕ ಜನ ಬರುಪ್ಪೇರೊ,ದಾನೆ?ದಿಂಜ ಸೂಟೆ ತೋಜುಂಡತ್ತೋ"ಹೇಳ್ಯೊಂಡು ಪೆಟ್ಟಿಂಗೆ ಹೇಳಿ ಕಟ್ಟಿಗೊಂಡು ಬಂದ ಜನ ನವಗೆ ಬೇಡಪ್ಪ ಇವರ ಶುದ್ದಿ ಹೇಳಿ ಓಡಿದವಡ. ಇವು ಚಾವಡಿಗೆ ಹೋಪಗ ಅಡಿಗಳು ಕಾಯುತ್ತಿತ್ತಿದ್ದವು. ಮತ್ತೆ .ತಂಬಲ ಕಟ್ಟಿ ಅಲ್ಲಿಂದ ಹೆರಡುವಗ ಅಲ್ಲಿ ಒಳುದ್ದು ಅಡಿಗಳು ಮಾಂತ್ರಮತ್ತೆ ಎಂಗಳಲ್ಲಿಂದ ಹೋದೋರು! ಹೇಂಗೆ ಉಪಾಯ!
               ಹತ್ತರಾಣ ಇನ್ನೊಂದು ಗ್ರಾಮಲ್ಲಿ ಒಬ್ಬ ಪಟೇಲ ಶೆನವ. ತೀರ್ವೆ ವಸೂಲಿಂಗೆ ಹೇಳಿ ಮನೆ ಮನೆ ಬಪ್ಪದಲ್ಲ. ಅವಕ್ಕೆ ತೀರ್ವೆಂದ ಹೆಚ್ಚು ಆದಾಯ ಬೇರೆ ರೀತಿಲ್ಲಿ ಮಾಡಿಗೊಂಬದಡೊ. ಊರಿಲ್ಲಿ ಯಾವ ಟೆಂಟಿನ ಮೇಳವೇ ಬರಲಿ. ಆಟ ಪಟೇಲನ ಲೆಕ್ಕಲ್ಲಿ. ಮೇಳದೋವಕ್ಕೆ ಹಣ ಕೊಡುಲೆ ಊರಿಲ್ಲಿ ಕೆಲವು ಶ್ರೀಮಂತರ ಮನೆಗೊಕ್ಕೆ ಉಗ್ರಾಣಿ ಹೋಕು. "ಪಟೇಲರು ಹೇಳಿದ್ದಾರೆ ಮೇಳದವರಿಗೆ ಕೊಡಲು   ಇಷ್ಟು ಹಣ ಕೊಡಬೇಕಂತೆ" ಹೇಳಿ ಎಲ್ಲೋರಿಂದಲೂ ಹತ್ತು ಆಟದ ಪೈಸೆ ವಸೂಲಕ್ಕಡೊ. ಮತ್ತೆ ಅವರ ಊಟದ ಖರ್ಚಿಂಗೆ ಬೇಕಾದ್ದು ಊರಿಂದಲೇ ಆಯೆಕ್ಕು. ಆದರೆ ಆಟ ಮಾಂತ್ರ ಪಟೇಲನ ಲೆಕ್ಕದ್ದು. ಆಟದ ದಿನವೂ ಅಷ್ಟೆ. ನಾಲ್ಕು ಪುಳ್ಳರುಗೊಕ್ಕೆ ಚಾ ಕುಡಿಶಿಕ್ಕಿ, ಆಟದ ಹೊತ್ತಿಂಗಪ್ಪಗ ಗಲಾಟೆ ಆಗದ್ದ ಹಾಂಗೆ ನೋಡುವ ಚಮತ್ಕಾರ ಹೀಂಗೆ. ಚಾ ಕುಡುದ ಮಕ್ಕಳೇ ರಜ  ಗಲಾಟೆ ಮಾಡುವದು, ಅಲ್ಲಿಗೆ ಪಟೇಲ ಬಪ್ಪದು. ಎರಡೆರಡುಕೈಲಿ ಬಾರುಸುವದು. ಅವು ಕೂಗಿಗೊಂಡು ಆಚಿಕೆ ಹೋಪದು. ಇದರ ನೋಡಿದ ಒಳುದ ಮಕ್ಕೊ ಹೆದರಿ ಪೆಟ್ಟು ಬೀಳುವದು ಬೇಡ ಹೇಳಿ ಸುಮ್ಮನೆ ಕೂಪದು. ಸಭೆ ನ್ಶ್ಶಬ್ದ ಆವುತ್ತು. ಶೇನವನಲ್ಲಿಯ ಏನಾದರೂ ಕಾರ್ಯಕ್ರಮ ಆವುತ್ತೆರೆ ಊರಿಂದಲೇ ಎಲ್ಲಾ ಸಾಮಾನು ವರ್ಷವೂ ಗೇಣಿ ರೂಪಲ್ಲಿ ಹೋಯೆಕ್ಕು..ಹೀಂಗೆ ಇದ್ದ ಸಾಮಾಜಿಕ ವ್ಯವಸ್ತೆ ಈಗ ಎಲ್ಲೋರೂ ಪೇಟೆ ಸೇರಿದ ಕಾರಣ ಬರೇ ನೆಂಪು ಮಾಂತ್ರ!