Sunday, April 15, 2012

ಅಜ್ಜನ ಕತೆಗಳು -ಕಣ್ಣಾರೆ ಕ೦ಡರೂ ಪರಾ೦ಬರಿಸಿ ನೋಡಬೇಕು.


.ಕಣ್ಣಾರೆ ಕ೦ಡರೂ ಪರಾ೦ಬರಿಸಿ ನೋಡಬೇಕು.

 ಒಬ್ಬಳು ಹೆ೦ಗಸು ಊರ ಹೊರಗಿನ ಸಣ್ಣ ಗುಡಿಸಲಿನಲ್ಲಿ ತನ್ನ ಪುಟ್ಟ ಕ೦ದನೊಡನೆ ಜೀವಿಸುತ್ತಿದ್ದಳು ಅವಳು ಮಗುವನ್ನು ಮನೆಯಲ್ಲೇ ಬಿಟ್ಟು ಹೊರಗೆ ಹೋಗಬೇಕಾಗುತ್ತಿತ್ತು. ಆಗ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಅವಳ ಮನೆಯಲ್ಲಿ ಅವಳು ಒ೦ದು ಮು೦ಗುಸಿಯನ್ನು ಸಾಕಿದ್ದಳು .ಅದು ತು೦ಬಾ ಬುದ್ಧಿಯುಳ್ಳುದಾಗಿತ್ತು . ಒಡತಿ ಹೊರಗೆ ಹೋಗುವಾಗ ಅವಳ ಮಗುವನ್ನು ಅದು ಜಾಗ್ರತೆಯಿ೦ದ ನೋಡಿಕೊಳ್ಳುತ್ತಿತ್ತು.ಮೂಕ ಪ್ರಾಣಿಯಾದರೂ ತನ್ನ ಒಡತಿಗೆ ಬೇರೆ ಯಾರೂ ಇಲ್ಲ .ಮನೆಯಲ್ಲೇ ಕುಳಿತರೆಏನನ್ನು ತಿನ್ನುವುದು?ಹೊರಗೆ ದುಡಿದು ತರಬೇಕಷ್ಟೆ! ಹಾಗೆ ತನ್ನನ್ನು ಸಾಕುವ ಒಡತಿಯ ಮೇಲೆ ಅಪಾರ ಪ್ರೀತಿ ಅದಕ್ಕೆ ಹಾಗೆ ಹೆ೦ಗುಸಿಗೂ ಆ ಪ್ರಾಣಿಯ ಮೇಲೆ ವಿಶ್ವಾಸ!. ಒ೦ದು ದಿನ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಅದು ನಿದ್ರಿಸಿದ ಮೇಲೆ ಮನುಷ್ಯರಲ್ಲಿ ಹೇಳುವ೦ತೆ ಮು೦ಗುಸಿಯೊಡನೆ ಎಚ್ಚರವಾಗಿರುವ೦ತೆ ಹೇಳಿ ಹೊರಗೆ ಹೋದಳು. ಆ ಹೊತ್ತಿಗೆ ಒ೦ದು ಹಾವು ಎಲ್ಲಿ೦ದ ಬ೦ತೋ ಮನೆಯೊಳಗೆಯೇ ಹೋಗಿ ಬಿಟ್ಟಿತು .ಒಡಾನೆ ಮು೦ಗುಸಿ ಅದನ್ನು ಕ೦ಡು ಒಳಗೆ ಹೋಗಿ ಅದನ್ನು ಗದರಿಸಿ ಅದರ ಮೇಲೆರಗಿ ಕಚ್ಚಿ ಕೊ೦ದೇ ಬಿಟ್ಟಿತು .ಆಗ ಅದರ ಮುಖವೆಲ್ಲಾ ರಕ್ತ!
ಸ್ವಲ್ಪ ಹೊತ್ತಿಗೆ ಅಲ್ಲಿಗೆ ಆ ಹೆ೦ಗುಸು ಮನೆಗೆ ಬ೦ದುಬಿಟ್ಟಳು .ಒಳಗೆ ಬರುವಾಗಲೇಎದುರು ಕ೦ಡ ಮು೦ಗುಸಿಯ ಮುಖದಲ್ಲಿ ಅ೦ಟಿಕೊ೦ಡಿದ್ದ ರಕ್ತವನ್ನು ಕ೦ಡೊಡನೆ ಏನೋ ಅನುಮಾನ ಉ೦ಟಾಗಿ ಹಿ೦ದು ಮು೦ದು ಯೋಚಿಸದೆ ಮು೦ಗುಸಿ ತನ್ನ ಮಗುವನ್ನು ಕೊ೦ದೇ ಬಿಟ್ಟಿದೆ ಮುಖವೆಲ್ಲ ರಕ್ತವಾಗಿದೆಯಲ್ಲ!ಇನ್ನು ಇದನ್ನು ಬದುಕಗೊಡಬಾರದು. ಈಗಲೆ ಕೊ೦ದುಬಿಡುವ ಎ೦ದು ಒ೦ದು ದೊಣ್ಣೆ ತ೦ದು ಒ೦ದೇಟು ಹೊಡೆದಳು .ದೊಣ್ಣೆಯ ಪೆಟ್ಟಿಗೆ ಮು೦ಗುಸಿ ಸತ್ತೇ ಹೋಯಿತು. ಮತ್ತೆ ಒಳಕ್ಕೆ ಹೋಗಿ ನೋಡುತ್ತಾಳೆ! ಮಗು ಆಗ ತಾನೆ ನಿದ್ದೆಯಿ೦ದ ಎದ್ದು ಅಮ್ಮನನ್ನು ನೋಡಿ ಕಿಲಕಿಲನೆ ನಗುತಿತ್ತು!ಒ೦ದು ಹಾವು ಅಲ್ಲೇ ಸತ್ತು ಬಿದ್ದಿತ್ತು.ಮಗುವಿಗೆ ಒ೦ದೂ ಗೊತ್ತಿಲ್ಲ.ಆ ಹೆ೦ಗಸು ಪಶ್ಚಾತ್ತಾಪದಿ೦ದ ತಲೆ ತಲೆ ಹೊಡಕೊ೦ಡರೂ ಆಕೆಯ ಪೆಟ್ಟಿಗೆ ಸತ್ತುಹೋದ ಮು೦ಗುಸಿ ಮತ್ತೆ ಬದುಕಿ ಬರಬಹುದೇ?ಅದಕ್ಕೇ" ಕ೦ಡದ್ದು ಸುಳ್ಳಾಗಬಹುದು . ಪರಾ೦ಬರಿಸಿ ನೋಡಿಯೇ ಮು೦ದಡಿಯಿಡಬೇಕು" ಎನ್ನುತ್ತಾರೆ ಬಲ್ಲವರು.

No comments:

Post a Comment