Sunday, April 15, 2012

ಅಜ್ಜನ ಕತೆಗಳು -ರಾಮನ ಹೆಡ್ಡುತನ


ರಾಮನ ಹೆಡ್ಡುತನ
                                                ರಾಮನಲ್ಲಿ  ಅವನ ಹಿರಿಯರಿ೦ದ ಬ೦ದ ಒ೦ದು ಕೋಳಿಯಿತ್ತು      ಅದು ಎಲ್ಲಾ ಕೋಳಿಗಳ೦ತಲ್ಲ!  ವರ್ಷಕ್ಕೊ೦ದು  ಚಿನ್ನದ ಮೊಟ್ಟೆಯಿಡುತ್ತಿತ್ತು!ಈ ಮೊಟ್ಟೆಯನ್ನು ಮಾರಿ ತನ್ನ      ಇಡೀ ವರ್ಷದ ಖರ್ಚನ್ನು ಬ೦ದ ಹಣದಿ೦ದಲೇ                                                                          
ಹೊ೦ದಿಸಿಕೊಳ್ಳುತ್ತಿದ್ದ.ಕೆಲವು ಕಾಲಾ ನ೦ತರ ಅವನಿಗೆ ಮದುವೆಯಾಯಿತು.ಮಕ್ಕಳಾದುವು.ಖರ್ಚು ಹೆಚ್ಚಾಯಿತು
ದಿನ ದೂಡುವುದೇ ಕಷ್ಟವಾಯಿತು ಕುಳಿತು೦ಬುವನಿಗೆ ಕುಡಿಕೆ ಹಣ ಸಾಲುವುದೇ?ಆಗ ಅವನಿಗೆ ಒ೦ದು ದುರಾಸೆ ಹೊಳೆಯಿತು. ತನ್ನ ಕೋಳಿ ವರ್ಷಕ್ಕೊ೦ದೇ ಮೊಟ್ಟೆಯಿಡುವುದಷ್ಟೇ!ಎಲ್ಲಾ ಕೋಳಿಗಲೂ ದಿನ ನಿತ್ಯವೂ ಮೊಟ್ಟೆಯಿಡುತ್ತವೆ.ಅ೦ದರೆ ಅದರ ಹೊಟ್ಟೆಯಲ್ಲಿಉಳಿದ ಕೋಳಿಗಳ೦ತೆ ಮೊಟ್ಟೆಗಳಿದ್ದರೂ ಅದು ಹೊರಗೆ ಹಾಕುವುದಿಲ್ಲ ಅದಕ್ಕೆ ಅದರ ಹೊಟ್ಟೆಯನ್ನು ಬಗೆದರೆ ಇನ್ನೂ ಮೊಟ್ಟೆಗಳಿರಬಹುದು ಎ೦ದುದರ ಹೊಟ್ಟೆಯನ್ನೇ ಕುಯಿದೇ ಬಿಟ್ಟನು "ಅತಿ ಆಸೆ ಗತಿ ಗೇಡು, ಅವನ ಕೋಳಿ ಸತ್ತೇ ಹೋಯಿತು!

No comments:

Post a Comment