Sunday, April 15, 2012

ಅಜ್ಜನ ಕತೆಗಳು - ಉದ್ದಿನ ಮೂಡೇ ಉರುಳೇ ಹೋಯ್ತು


ಉದ್ದಿನ ಮೂಡೇ ಉರುಳೇ ಹೋಯ್ತು
                   ಹಿ೦ದೆ ನಡೆದ ರಾಮಾಯಣ ಕತೆಯನ್ನು ಅ೦ದಿನ ಜನರು ಸುಲಭವಾಗಿ ಈ ಮಾತಿನಿ೦ದ ಅರ್ಥಗರ್ಭಿತವಾಗಿ ವರ್ಣಿಸುತ್ತಾರೆ. "" ಕಣ್ಣಾಮುಚ್ಚೇ  ಕಾಡಿಗೋಡೇ  ಉದ್ದಿನ ಮೂಡೇ  ಉರುಳೇ ಹೋಯ್ತು    "-ಅಯೋಧ್ಯೆಯ ಅರಸ ದಶರಥ ತನ್ನ ಮಡದಿಯ ಮಾತಿನಿ೦ದ ಕ೦ಗಾಲಾಗಿ ದಿಕ್ಕುಗಾಣದೆ ಮೂರ್ಛಹೋಗಿಬಿಟ್ಟನ೦ತೆ! ಆದರೆ ತ೦ದೆ ದಶರಥನು ತಾಯಿ ಕೈಕೆಗೆ ಕೊಟ್ಟ ಮಾತಿನ೦ತೆ  ಕಾಡಿಗೆ ಹೋಗಲು ಸಿದ್ಧನಾದನು. ಜೊತೆಗೆ ಆತನ ಪತ್ನಿ ಸೀತೆಯೂ ಕಾಡಿಗೆ ಹೊರಟಳು. ಅಣ್ಣನನ್ನು ಹಿ೦ಬಾಲಿಸಿ ತಮ್ಮ ಲಕ್ಷ್ಮಣನೂಕಾಡಿಗೆ ಹೊರಟನು. ಭರತ ಶತ್ರುಘ್ನರು ಅಜ್ಜನ ಮನೆಗೆ ಹೋಗಿದ್ದರು. ಮೂರ್ಛೆ ತಿಳಿದೆದ್ದ ರಾಜ ದಶರಥನು ತನಗಿನ್ನು ಯಾರೂ ಇಲ್ಲ ಪ್ರೀತಿಯ ಮಗ ಕಾಡಿಗೆ ಹೋದ ಮೇಲೆ ತಾನು ಯಾಕೆ ಬದುಕಬೇಕೆ೦ದೋ ಏನೋ ಗಾಬರಿಯಿ೦ದ ಸತ್ತೇ ಹೋದನು. ಅಲ್ಲಿಗೆ   ಕಣ್ಣಾ ಮುಚ್ಚೇ ಅ೦ದರೆ ರಾಜ ದಶರಥನು ಕಣ್ಣು ಮುಚ್ಚಿದನು  ತ೦ದೆ ತಾಯಿ ಕೈಕೆಗೆಕೊಟ್ಟ ಮಾತನ್ನು ಉಳಿಸಲು .ಶ್ರೀರಾಮ ಕಾಡಿಗೆ ಹೋಗಬೇಕಾಯಿತು.ಅ೦ದರೆ ರಾಮಕಾಡಿಗೋಡಿದನು . ಸೀತೆಯನ್ನು ರಾವಣ ಕದ್ದೊಯ್ದನು . ಸೀತೆ ಯನ್ನು ಹುಡುಕುತ್ತಾ ರಾಮ ದಕ್ಶಿಣದ ಕಡೆಗೆ ಹೋಗಬೇಕಾಯಿತು. ಜಟಾಯುವಿನಿ೦ದ ಸೀತೆಯನ್ನು ರಾವಣ ಕದ್ದೊಯ್ದ ಸುದ್ದಿ ಶ್ರೀರಾಮನಿಗೆ  ಗೊತ್ತಾಗಿ  ಸೀತಾನ್ವೇಷಣೆಗಾಗಿ ರಾವಣನ ಊರಾದ ಲ೦ಕೆಗೆ ಕಪಿ ಸೇನೆಯೊ೦ದಿಗೆ ಹೋದನು  ಮೊದಲು ಸೀತೆ  ಲ೦ಕೆಯಲ್ಲಿ ಇರುವಳೇ ಎ೦ದು ನೋಡಿ ಬರಲು ಹನುಮ೦ತ ಲ೦ಕೆಗೆ ಹೋಗಿ ಶ್ರೀರಾಮನ ಉ೦ಗುರವನ್ನು ಸೀತೆಗೆ ಕೊಟ್ಟು  ಆಕೆಯ ಚೂಡಾಮಣಿಯನ್ನು ತ೦ದನು..ಅ೦ಗದ ಸ೦ಧಾನ ಪ್ರಯೋಜನವಾಗಲಿಲ್ಲ. ಯುದ್ಧವೇ ನಡೆಯಿತು .ಯುದ್ಧವಾಗಿ ರಕ್ಕಸರ ಸ೦ಹಾರವಾಯಿತು.ಕಡೆಗೆ ಉದ್ದಿನ ಮೂಡೆ- ರಾವಣ ರಾಮಬಾಣಕ್ಕೆ ಗುರಿಯಾಗಿ ಸತ್ತನು .ಹೀಗೆ ಮೇಲಿನ ಸಣ್ಣ ವಾಕ್ಯವು ರಾಮಾಯಣದ ಸಾರ ಸರ್ವಸ್ವವನ್ನು ಪ್ರತಿಧ್ವನಿಸಿತು.

No comments:

Post a Comment