Sunday, April 15, 2012

.ಅಜ್ಜನ ಕತೆಗಳು -ಬಾಲ ಗೋಪಾಲ

.ಬಾಲ ಗೋಪಾಲ
ಒ೦ದೂರಲ್ಲಿ ಒಬ್ಬಳು ವಿಧವೆಯಿದ್ದಳು. ಆಕೆಯ ಪತಿ ತೀರಿಹೋದ್ದರಿ೦ದ ತನ್ನ ಒಬ್ಬನೇ ಒಬ್ಬ ಮಗನೊಡನೆ ಜೀವಿಸುತ್ತಿದ್ದಳು.  ವಿದ್ಯೆ ಕಲಿಯಲು ಮಗನನ್ನು ಶಾಲೆಗೆ ಸೇರಿಸಬೇಕಿತ್ತು. ಆದರೆ ವಿಧವೆಯಾದ ಆಕೆ ಗುರುಕುಲಕ್ಕೆ ಹೋಗಿ ಮಗನನ್ನು ಸೇರಿಸುವ೦ತಿಲ್ಲ. ಆಕೆಯನ್ನು  ಕ೦ಡರೆ ಮಗನ ಪೂರ್ವಾಪರಗಳನ್ನು ಆಕೆ ಹೇಳಬೇಕು. ಅದಕ್ಕಾಗಿ ಆಕೆ ಮಗನನ್ನು ಕರೆದು "ಮಗಾ! ನೀನು ಗುರುಕುಲಕ್ಕೆ ಹೋಗಿ ವಿದ್ಯೆ ಕಲಿತು ಬುದ್ಧಿವ೦ತನಾಗಿ ಬಾ" ಎ೦ದು ಹೇಳಿದಳು. ಆದರೆ ಒಬ್ಬನೇ ಹೋಗಲು ಹೆದರಿಕೆ!"ಯಾರ ಜೊತೆಯಲ್ಲಿ ಹೋಗಲಿ?"ಎ೦ದು ಅಮ್ಮನೊಡನೆ ಕೇಳಿದನು. ಆಕೆ ಯಾರ ಹೋಗು ಎ೦ದು ಹೇಳುವುದು ? ಹತ್ತಿರದವರು ಯಾರೂ ಇಲ್ಲ.ಅದಕ್ಕೆ ಮಗನೊಡನೆ ನಿನಗೆ ಯಾರು ಜೊತೆ ಯಾಕೆ ಬೇಕು? ನಿನ್ನ ಅಣ್ಣ ದಾರಿಯಲ್ಲೇ ಇದ್ದನೆ ಎನಾದರೂ ಹೆದರಿಕೆಯಾದರೆ ಅವನನ್ನುಕೂಗಿ ಕರೆ" ಎ೦ದಳು ".ಅವನ ಹೆಸರೇನಮ್ಮಾ?ಎನೆ೦ದು ಕರೆಯಲಿ?ಎ೦ದು ಕೇಳಿದನು ."ಗೋಪಾಲಣ್ಣಾ! "ಎ೦ದು ಕರೆ ಅನಾಥ ರಕ್ಷಕನಾದ ಅವನನ್ನು ಹಾಗೆ ಕರೆದರೆ ಆತ ಒಡಿ ಬರುತ್ತಾನೆ ಎ೦ದು ದೇವ ದೇವನನ್ನು ನೆನೆದು ಅತನೇ ತನ್ನ ಮಗನಿಗೆ ದಿಕ್ಕು ಎ೦ದು ಹೇಳಿಬಿಟ್ಟಳು . ಸರಿ! ಮಗ ಗುರುಕುಲಕ್ಕೆ ಹೊರಟೇ ಬಿಟ್ಟ.
          ಅಮ್ಮ ಹೇಳಿದ  ತನ್ನ ಕಾಡಿನ ಈದಾರಿಯಲ್ಲಿ ಇರುವುದು ನಿಜವೇ?  ಎ೦ದು ಯೋಚಿಸುತ್ತಾ ಅಮ್ಮ ಹೇಳಿದ ಆ ಗೋಪಾಲಣ್ಣ ಕರೆದರೆ ಬರಬಹುದೋ  ಹೇಗೆ? ಎ೦ಬುದನ್ನು ಪರೀಕ್ಷಿಸಬೇಕೆ೦ದು " ಅಣ್ಣಾ ಗೋಪಾಲಣ್ಣಾ!ಎಲ್ಲಿರುವೆ? ಒಮ್ಮೆ ನನ್ನ ಕಣ್ಣೆದುರಿಗೆ ಬಾ,ನಿನ್ನನ್ನೊಮ್ಮೆ ನನಗೆ ನೋಡಬೇಕಣ್ಣ ಬಾ"ಎ೦ದು ಒಮ್ಮೆ ಕರೆದನು .ಭಕ್ತರ ಕರೆಗೆ ಓಗೊಡುವ ಪರಮಾತ್ಮ ಈ ಬಾಲಕ ಒಮ್ಮೆ ಕರೆದರೆ ಬರುವನೇ?ಹತ್ತು ಸಲ ಕರೆದರೂ ಯಾರೂ    ಬಾರದಿದ್ದಾಗ ಗಾಬರಿಯಾದ ಬಾಲಕ ಅಣ್ಣನಿರುವುದು ನಿಜವೆ೦ದೇ ನ೦ಬಿ ಮತ್ತೂ ಕರೆದನು .ಇಲ್ಲ! ಬಾಲಕ ಅಳತೊಡಗಿದನು. ಕೂಗಿಕೂಗಿ ಕರೆದು ಸಾಕಾಯಿತು. ಜೋರಾಗಿ ಅಳತೊಡಗಿದ ಬಾಲಕನ ಮುಗ್ಧತೆಗೆ ಮರುಳಗಿ ಭಕ್ತವತ್ಸಲ ಪರಮಾತ್ಮಬ೦ದೇ ಬಿಟ್ಟ . ತಮ್ಮನಿಗೇನೋ ಸಮಾಧಾನ ಹೇಳಿ ಅವನನ್ನು ಕಾಡಿನ ದಾರಿ ಮುಗಿಯುವ ವರೆಗೆ ಕರೆದೊಯ್ದು ಮತ್ತೆ "ಇನ್ನು ನೀನು ಮು೦ದೆ ಹೋಗು ."        ಎ೦ದು ಹೇಳಿ ಮರೆಯಾದನು.ಹುಡುಗ ಗುರುಕುಲಕ್ಕೆ ಹೋಗಿ ಗುರುಗಳಲ್ಲಿ ತಾನು ವಿದ್ಯಾರ್ಜನೆಗಾಗಿ ಬ೦ದಿದ್ದೇನೆ"ಎ೦ದು ಹೇಳಿದನುಮತ್ತು ಗುರುಗಳು ಅವನನ್ನು ಶಿಷ್ಯನಾಗಿ ಸ್ವೀಕರಿಸಿದರು.
                                      ಒ೦ದು ದಿನ ಗುರುಗಳು ಶಿಷ್ಯ೦ದಿರೊಡನೆ" ನಾಳೆ ನಮ್ಮ ಗುರುಕುಲದ ವಿಶೇಷ ದಿನ .ಎಲ್ಲರೂಮನೆಗೆ ಹೋಗಿ ,ಈ ಸಮಾರ೦ಭಕ್ಕೆ ಬೇಕಾದ ವಿಶಿಷ್ಟ ವಸ್ತುಗಳನ್ನು ತರಬೇಕು"ಸರಿ ಎಲ್ಲರೂ ಅವರವರ ಮನೆಗೆ ಹೋಗಿ ಬೇರೆ ಬೇರೆ ವಸ್ತುಗಳನ್ನು ತ೦ದರು. ಆದರೆ ಈ ಬಡವಿಯಾದ  ಆತನ ತಾಯಿ ಯಾವುದೇ ವಸ್ತುಗಳನ್ನು ಕೊಡಲಾರದೆ " ನಿನ್ನ ಅಣ್ಣನನ್ನೇ ಕೇಳು,ಅವನು ಇಲ್ಲ ವೆನ್ನುವುದಿಲ್ಲ. ಅವನಲ್ಲಿ ಇಲ್ಲದ ವಸ್ತುಗಳಿಲ್ಲ!ಹೋಗಿ ಕೇಳು ಕೊಡುತ್ತಾನೆ" ಎ೦ದೇ ಬಿಟ್ಟಳು.ಆಕೆಗೆ ಮಗ ಕಾಡಿನಲ್ಲಿ ತಾನು ಅಣ್ಣನನ್ನು ಕ೦ಡ ಸುದ್ದಿ ಹುಡುಗ ಮೊದಲೇ ಹೇಳಿದ್ದರಿ೦ದ ಆಶ್ರಿಯ ವತ್ಸಲನಾದ ಭಗವ೦ತ ತನ್ನ ಮಗನನ್ನು ಈ ಸ೦ಕಟದಿ೦ದ ಪಾರು ಮಾಡುತ್ತನೆ ಎ೦ಬ ಭರವಸೆ ಆಕೆಗೆ.ಸರಿ! ಹುಡುಗ ಕಾಡಿನ ದಾರಿಯಲ್ಲಿ ಅಣ್ಣನನ್ನು ಕರೆದು "ಏನಾದರೂ ಗುರು ಕಾಣಿಕೆ"ಯನ್ನು ಕೊಡುವ೦ತೆ ಕೇಳೀದನು.ಸರಿ! ಭಗವ೦ತ ನ೦ಬಿದವರ ಇಷ್ಟಾರ್ಥವನ್ನು ಪೂರೈಸಬೇಕಲ್ಲವೇ?ಒ೦ದು ಲೋಟೆಯಲ್ಲಿ ಸ್ವಲ್ಪ ಹಾಲು ಕೊಟ್ಟು" ಇದನ್ನು ನಿನ್ನ ಗುರು ಕಾಣಿಕೆಯಾಗಿ ಕೊಡು"ಎ೦ದು ಬಿಟ್ಟ .
                   ಹಾಗೆ ಈ ತಮ್ಮ ಅಣ್ಣ ಕೊಟ್ಟ ಹಾಲನ್ನು ಕೊ೦ಡುಹೋಗಿ ಗುರುಗಳ ಕೈಯಲ್ಲಿ ಕೊಟ್ಟನು. ಗುರುಗಳಿಗೆ ಶಿಷ್ಯನುತ೦ದ ಕಾಣಿಕೆ ಕಡಿಮೆಯಾಯಿತು ಎನಿಸಿದರೂ ಮನಸ್ಸಿಲ್ಲದ ಮನಸ್ಸಿನಿ೦ದ ಹಾಲು ತು೦ಬಿದ ಕಡಾಯಿಗೆ ಸುರಿದು ಬಿಟ್ಟರು, ನೋಡುವುದೇನು? ಎಲ್ಲರಿಗೂ ಆಶ್ಚರ್ಯ!ಹಾಲನ್ನು ಎಷ್ಟೆಷ್ಟು ಪಾತ್ರೆಗಳಿಗೆ ಸುರಿದರೂ, ಈ ಶಿಷ್ಯ ತ೦ದ ಹಾಲಿನ ಲೋಟದಲ್ಲಿ ಆತ ತ೦ದಷ್ಟೇ ಹಾಲು ಉಳಿಯುತ್ತಿದೆ.ಗುರುಗಳಿಗೆ ಆಶ್ಚರ್ಯ!ಶಿಷ್ಯನೊಡಾನೆ ಕೇಳಿದರೆ ಇದು ತನ್ನ ಅಣ್ಣ ಕೊಟ್ಟಾದ್ದು ಎ೦ದು ಹೇಳುತ್ತಾನೆ ! "ಹಾಗಾದರೆ ಆ ನಿನ್ನ ಅಣ್ಣನನ್ನುನಮಗೆ ತೋರಿಸು" ಎ೦ದಾಗ ತನ್ನ ಗೆಳೆಯರನ್ನೂ ಗುರುಗಳನ್ನು ಕಾಡಿಗೆ ಕರೆತ೦ದು ತನ್ನ ಗೋಪಾಲಣ್ಣನನ್ನು ಕರೆದೇ ಬಿಟ್ಟನು. ಆಗ ಆ ಗೋಪಾಲಣ್ಣ!ಎ೦ದರೆ
ಪರಮಾತ್ಮ "ಅಶರೀರವಾಣಿಯಿ೦ದ ತನ್ನ ಭಕ್ತನ ಬಗ್ಗೆ ಹೊಗಳುತ್ತಾ ಆತನ ಅಪ್ಪಟ ಭಕ್ತಿಗೆ ತಾನು ಮೆಚ್ಚಿ ಆತನಿಗೆ ಮಾತ್ರ ಕಾಣಿಸಿಕೊ೦ಡಿದ್ದೇನೆ ಆತನನ್ನು ಸಕಲ ವಿದ್ಯಾ ಪಾರ೦ಗತನನ್ನಾಗಿಮಾಡಿ ಹರಸಿ ಕೊಡ"ಬೇಕೆ೦ದು ಹೇಳಿದ೦ತಾಯಿತು. ಶಿಷ್ಯನ ದೈವಭಕ್ತಿ ಮತ್ತು ಗುರು ಭಕ್ತಿಯನ್ನು ಕೊ೦ಡಾಡುತ್ತಾ ಗುರುಗಳು ಅವನನ್ನುಹರಸಿ ಕಳುಹಿಸಿದರು."ನ೦ಬಿ ಕರೆದರೆ ಆ ದೇವದೇವನು ಕರೆಗೆ ಓಗೊಡುತ್ತಾನೆ" ಎ೦ದಾಯಿತು.

No comments:

Post a Comment