Monday, December 7, 2015

anna malai pravasa

                                  ಅಣ್ಣಾಮಲೈಗೆ ನಮ್ಮ ಪ್ರವಾಸ
 ಈ ಸಲ ನಮ್ಮ ಪ್ರವಾಸ ಅಣ್ಣಾಮಲೈಗೆ . ಶ್ರೀಂಅನ್ ಕೇಶವ ಭಟ್ಟರ ಮುಂದಾಳ್ತನದಲ್ಲಿ ತಮ್ಮಿಳ್ನಾಡಿನ ಅಣ್ಣಾಮಲೈಗೆ ಹೋಗುವುದೆಂದು ಯೋಚಿಸಿದಂತೆ ಮಂಗಳೂರಿನಿಂದ ಗಾಡಿ ಹತ್ತಿ ಕಾಟಪ್ಪಾಡಿ ಎಂಬ ಸ್ಟೇಶನ್ ವರೆಗೆ ಗಾಡಿಯಲ್ಲಿ ಹೋಗಬೇಕು. ಸಂಜೆ ನಾಲ್ಕೂವರೆಗೆ ಗಾಡಿ ಹತ್ತಿದವರು ಮರುದಿನ ಬೆಳಿಗ್ಗಿನ ಜಾವ ಐದೂವರೆಗೆ ಗಾಡಿ ತಲಪಿದೊಡನೆ ಕೆಳಗಿಳಿದು ಹೊರಗ್ರ್ ಬಂದಾಗ ನಾವು ಮೊದಲೇ ನಿಗದಿಪಡಿಸಿದಂತೆ ಮಿನಿ ಬಸ್ಸೊಂದು ನಮ್ಮನ್ನು ಕಾಯುತಿತ್ತು. ಗಾಡಿ ಹತ್ತಿದವರು ಒಂದು ಹೋಟೆಲಿಗೆ ಹೋಗಿ ಚಾ ಕುಡಿದು ನಮ್ಮ ಪ್ರಯಾಣ ಮುಂದುವರಿಸಿದೆವು . ಮೊದಲಿಗೆ ಜಲಕಂಠೇಶ್ವರ ದೇವಸ್ಥಾನಕ್ಕೆ ನಮ್ಮ ಭೇಟಿ! ಸುತ್ತಲೂ ನೀರಿನಿಂದಾವೃತವಾದ ಪುರಾತನ ದೇವಾಲಯ!ಕೆತ್ತನೆಕೆಲಸಗಳಿಂದ ರಚಿತವಾದ ಸುಂದರ ಗೋಪುರ ನಮ್ಮನ್ನು ಕೈಮಾಡಿ ಕರೆಯುತಿತ್ತು. ಒಳಗೆ ಹೊಕ್ಕೊಡನೆ ಮಹಾಗಣಪತಿಯ ಗುಡಿ.ಮುಂದೆ ಹೋದಾಗ ಗಣಪತಿ ಸುಬ್ರಹ್ಮಣ್ಯ, ಕಾಮೇಶ್ವರಿ ದುರ್ಗೆ, ನವಗ್ರಹಗಳದೇವಾಲಯಗಳಿವೆ . ಬಹಳ ಪುರಾತನ ದೇವಾಲಯ. ಒಳಗೆ ಜಲಕಂಠೇಶ್ವರನ ದೊಡ್ಡ ಶಿವಲಿಂಗವಿದೆ.ಎದುರಿಗೆ ಬಸವ ಪುರಾತನ ಶಿಲ್ಪಕಲಾವೈಭವದಿಂದ ಕಂಬಗಳು ಮಹಾದ್ವಾರದ ಹಿರಿದಾದ ಚಂದವಾದ ಬಾಗಿಲುಗಳು ಮನೋಹರವಾಗಿವೆ.ಇಲ್ಲಿಂದ ನಲುವತ್ತು ಕಿ ಮೀ ದೂರದಲ್ಲಿ ಟಿಪ್ಪು ಸುಲ್ತಾನ ಕಟ್ಟಿಸಿದ ಒಂದು ಕಿ ಮೀ ಉದ್ದ ಕೋಟೆಯಿದೆ ಬೆಟ್ಟದ ಮೇಲೆ ಕಟ್ಟಿದ ಈ ಕೋಟೆಯ ಅದರೊಳಗೆ ಷಣ್ಮುಖ ದೇವಾಲಯವಿದೆ,ದೇವಾಲಯವೇರಲು ಕಲ್ಲಿನದೇ ಮೆಟ್ಟಲುಗಳು ಒಳಗೆ ಹೊಕ್ಕೊಡನೆ ಗೋಪುರ ಕೊಡಿಮರ. ಮೆಟ್ಟಲೇರಿ ಹೋದರೆ ಷಣ್ಮುಖ ದೇವರ ಗುಡಿ. ಮೇಲೆ ನಿಂತರೆ ಕೆಳಗಿನ ದೃಶ್ಯ ನಯನ ಮನೋಹರ!
                ಈ ದೇವಸ್ಥಾನದ ಸ್ವಲ್ಪವೇ ದೂರದಲ್ಲಿ ಒಂದು ಕೋಟೆಯಿದೆ. ಒಳಗೆ ಹೋದರೆ ಬಹಳ ವಿಶಾಲವಾದ ಜಾಗ. ಒಳಗೆ ಹೋಗುತ್ತಲೇ ಮಲಗಿದ ಸ್ಥಿತಿಯಲ್ಲಿರುವ ಕುಬೇರ ದೇವ ಗಣಪತಿ .ಮುಂದೆ ಹೋದಾಗ ಢನ್ವಂತರಿ ಹೋಮದ ಕುಂಡ ಕೆಳಗೆ ಸ್ವಲ್ಪ ಆಳದಲ್ಲಿ ಹೋಮ ಕುಂಡವಿದೆ. ಬಂದವರು ಧನ್ವಂತರಿಯ ಸೇವೆಯ ರೂಪದಲ್ಲಿ ನವಧಾನ್ಯದೊಂದಿಗೆ ವನಸ್ಪತಿಗಳನ್ನು ಹೋಮಿಸಬಹುದು. ಆರೋಗ್ಯದ ಕ್ಷೇಮಕ್ಕೆ ಜನ ಧನ್ವಂತರಿ ದೇವರು ಹೋಮ ,ಪೂಜೆ ಮಾಡುತ್ತಾರೆ, ಅವನ ತೃಪ್ತಿಯಿಂದ ನಮ್ಮ ಆರೋಗ್ಯ ಸುಧಾರಿಸುವುದೆಣ್ವ್ಬ ಜನರಲ್ಲಿದೆ.ರೋಗನಿವಾರನಂತೆ ಈ ಧನ್ವಂತರಿ!ಮುಂದೆ ಹೋದರೆ ತುಂಬ ಶಿವಲಿಂಗಗಳು ಕಾಣಸಿಗುತ್ತವೆ. ಇಲ್ಲಿ ಧನ್ವಂತರಿಯ ಮುಖವಾದರೆ ಆ ವಿಗ್ರಹದ ಹಿಂದೆ ಗಣಪತಿಯ ವಿಗ್ರಹವಿದೆ ಮುಂದೆ ಕಾಮಾಕ್ಷಿ ಮತ್ತು ಮಹಿಷಮರ್ದಿನಿಯರ ವಿಗ್ರಹವಿದೆ.  ೪೬೮ ಸಾಲಂಕೃತ ಲಿಂಗಗಳು ಇಲ್ಲಿವೆ. ಹತ್ತಿರವೇ ಅನ್ನಪೂರ್ಣೇಶ್ವರಿಯ ದೇವಸ್ಥಾನ. ನೂರು ರುಪಾಯಿ ಕೊಟ್ಟು       ಚೀಟಿ ಮಾಡಿಸಿದರೆ ಒಂದು ಕಿಲೋ ದಷ್ಟು ಹೆಸರುಬೇಳೆ ಅಕ್ಕಿಯನ್ನು ಕೊಡುತ್ತಾರೆ. ನಾವು ಅಲ್ಲೇ ಇರುವ ಹುಂಡಿಗೆ ಅದನ್ನು ಹಾಕಬೇಕು. ಮುಂದೆ ಹೋದರೆ ವೃತ್ತಾಕಾರದ ಕಟ್ಟೆಯಿದೆ, ಅಲ್ಲಿ ೨೭ ನಕ್ಷತ್ರಗಳಿಗೆ ಬೇರೆ ಬೇರೆ ಮದ್ದಿನ ಗಿಡಗಳನ್ನು ನೆಟ್ಟುದು ಕಾಣುತ್ತದೆ. ಅವರವರ ನ್ಜನ್ಮ ನಕ್ಷತ್ರಗಳಿಗನುಸರಿಸಿ ಈ ಗಿಡಗಳನ್ನು ನೋಡ ಬಹುದು. ಆ ಮೇಲೆ ಸ್ವಲ್ಪ ದೂರದಲ್ಲಿ ಅಯ್ಯಪ್ಪನ ಗುಡಿಯಿದೆ. ಸಣ್ಣ ಬೆಟ್ಟದ ಮೇಲೆ ಮೆಟ್ಟಲುಗಳನ್ನೇರುತ್ತ ಹನುಮಂತಸ್ನ ವಿಗ್ರಹ ನೋಡಿದೆವು. ಹೀಗೆ ಹತ್ತು ಹಲವು ವಿಗ್ರಹಗಳು ಅಲ್ಲಲ್ಲಿವೆ. ಅಲ್ಲಿಯ ಛತ್ರಕ್ಕೆ ನಮ್ಮ ಅನ್ನದಾನ ಕಾಣೀಕೆ ಕೊಟ್ಟು ಪ್ರಸಾದ ಭೋಜನ ( ಚಿತ್ರಾನ್ನ, ಅನ್ನ ಸಾಂಬಾರು, ತೋವೆ ಎಲ್ಲ ಇತ್ತು ಊಟಕ್ಕೆ.ಹಿಂತಿರುಗಿ ನಾವು ಉಳಕೊಳ್ಳಲಿದ್ದ ವಸತಿಗೆ ಬಂದು ವಿಶ್ರಮಿಸಿದೆವು. ೫.೩೦ ಕ್ಕೆ ಮತ್ತೆ ಹೊರಟು ಅರ್ಧ ಕಿ ಮೀ ದೂರದಲ್ಲಿದ್ದ ವೆಲ್ಲೂರ್ ಎಂದು ಕರೆಯುವ ಜಾಗದಲ್ಲಿ ಒಂದು ಕರಿ ಶಿಲೆಯಲ್ಲಿ ಕಡೆದಯಲ್ಲಿ ಪದ್ಮಾಸನ ಹಾಕಿ ಕುಳಿತಿದ್ದ ಕರಿ ಕಲ್ಲಿನ ಮಹಾಲಕ್ಷ್ಮಿ ಮೂರ್ತಿ ಸುತ್ತಲೂ ಮರದ ಕಂಬಗಳಿಗೆ ಚಿನ್ನದ ತಗಡನ್ನು ಹೊದೆಸಿದ್ದು ಗೋಲ್ಡನ್ ಟೆಂಪ್ಲ್ ಎಂದು ಕರೆಯಲ್ಪಡುವ ದೇವಸ್ಥಾನಕ್ಕೆ ಹೋದೆವು. ದೊಡ್ಡ ದೇವಸ್ಥಾನ ಒಬ್ಬರು ಮಹಾಲಕ್ಷ್ಮಿ ಎಂದು ಕರೆಯುವ ಸ್ವಾಮಿಯೊಬ್ಬರಿಂದ ಕಟ್ಟಿಸಲ್ಪಟ್ಟ  ದೊಡ್ಡ ದೇವಾಲಯ ಜನ ತುಂಬ ಇದ್ದುದರಿಂದ ದರ್ಶನಕ್ಕೆ ಕಷ್ಟವಾಗಿ, ಕೊನೆಗೆ ಒಂದೆರಡು ಗಂಟೆಯ ನಂತರ ದರ್ಶನವಾಯಿತು. ಹತ್ತಿರದಿಂದ ನೋಡ ಬೇಕಾದರೆ ನೂರು ರೂ ಕೊಟ್ಟು ಚೀಟಿ ಮಾಡಿಸಬೇಕಂತೆ. ಎಲ್ಲೆಲ್ಲಿಯೂ ದೇವರರುಗಳಿಗೆ( ಅಸಲಿಗೆ ಅಲ್ಲಿಯ ಆಢಳಿತೆಗೆ ಹಣ ಮಾಡುವ ದಂಧೆ!  ಬೆಳಿಗ್ಗೆ ಬೇಗನೆ ಬಂದರೆ ಸ್ವಲ್ಪ ಹತ್ತಿರದಿಂದ ದೇವರನ್ನು ನೋಡಬಹುದು ಅಲ್ಲಿದ್ದವರು ಹೇಳಿದರು ಹಾಗೆ ಬೆಳಿಗ್ಗೆ ನಾಲ್ಕು ಗಂಟೆಗೇ ದೇವರ ದರ್ಶನಕ್ಕೆ ಬಂದು ನೂರು ರುಪಾಯಿ ಕೊಟ್ಟು ಒಳಗೆ ಹೋದರೂ ಬೇಗ ದರ್ಶನವಾಗಲಿಲ್ಲ. ಅಭಿಷೇಕಕ್ಕಾಗುವಾಗ ಒಳಗೆ ಬಿಟ್ಟರೂ ಹೆಚ್ಚು ಹೊತ್ತು ನೋಡಲು ಬಿಡಲಿಲ್ಲ. ಅಂತೂ ನೂರು ರುಪಾಯಿ ಕೊಟ್ಟು ಚೀಟಿ ಮಾಡಿಸಿ ಹತ್ತಿರದಿಂದ ದೇವರನ್ನು ನೋಡಿದ್ದೇವ ಎಂಬ ಸಂತೋಷದಿಂದ ಹೊರಗೆ ಬಂದೆವು , ನಮ್ಮ ವಸತಿಯಿದ್ದುದ್ದೂ ಅವರದೇ ವಸತಿ ನಿಲಯದಲ್ಲಿ! ಅಂತಹ ಕೆಲವಾರು ವಸತಿಗಳಿಂದ ಯಾತ್ರಿಗಳಾಗಿ ಬಂದವರ  ಬಾಡಿಗೆ ಹಣವೇ ಕೋಟಿಗಟ್ಟಲೆ ಆಗಬಹುದು. ಅವರೇ ಕೆಲವು ಕಾಲೇಜುಗಳನ್ನು ನಡೆಸುತಿದ್ದು ಅವುಗಳಿಂದಲೂ ಆದಾಯ ಆ ಸ್ವಾಮಿಗಿದೆ. ಎಲ್ಲ ದೇವರ ಮಹಿಮೆಯೋ ಕಾಲದ ಮಹಿಮೆಯೋ!ಆದರೆ ಇಷ್ಟು ದೊಡ್ಡ ಬಂಗಾರದ ದೇವಾಲಯ ಪ್ರಪಂಚದಲ್ಲೇ ಇಲ್ಲವೆಂದು ಹೇಳುತ್ತಾರೆ. ಅಂತೂ ಅಂತಹ ಹೆಸರುವಾಸಿ ದೇವಾಲಯ ನೋಡಿದ ಹೆಮ್ಮೆಯಿಂದ ಬೀಗುತ್ತ  ಪೊಂಗಲ್ ಪ್ರಸಾದ ತೆಕ್ಕೊಂಡು ಹೊರಗೆ ಬಂದು ರೂಮಿಗೆ ಬಂದೆವು.
ಅಲ್ಲಿಂದಬೆಳಗ್ಗೆ ಏಳೂವರೆ ಗಂಟೆಗೆ ಹೊರಟು ಬಸ್ಸಿನಲ್ಲಿ ಇನ್ನೊಂದು ನಮ್ಮ ಸ್ಥಳ ಅಣ್ಣಾ ಮಲೈ ಕಡೆಗೆ ಹೊರಟೆವು.ಒಂದು ಬಸ್ ಸ್ಟೇಂಡಿನಲ್ಲಿ ನಮ್ಮನ್ನು ಇಳಿಸಿದ ಬಸ್ಸಿನವನು ನಮ್ಮನು ಅಲ್ಲೇ ಬಿಟ್ಟು ಹೋದನು ಮತ್ತೆ ಸ್ವಲ್ಪ ಬಸ್ಸಿಗೆ ಕಾಯಬೇಕಾಗಿ ಬಂತು. ಕೆಲವು ಸರಕರಿ ಬಸ್ಸುಗಳು ಮಾತ್ರ ಅಲ್ಲಿಗೆ ಹೋಗುವುದಂತೆ. ಅಲ್ಲಿ ಶಿವನ ದೇಗುಲದಲ್ಲಿ ನಿಶ್ಶುಲ್ಕ ಭೋಜನವಿತ್ತು. ಸ್ವಲ್ಪ ಹೊತ್ತು ಕಾಯಬೇಕಾಗಿ ಬಂದರೂ ಊಟ ಚೆನ್ನಾಗಿತ್ತು. ಮತ್ತೆ ಸ್ವಲ್ಪ ವಿಶಾಂತಿ ತೆಕ್ಕೊಂಡು ಮಲೆಗೆ ಪರಿಕ್ರಮಣ ( ಬರಿಗಾಲಲ್ಲಿ ಆರೇಳು ಮೈಲುಗಳಷ್ಟು ನಡೆಯುವುದು. ಹೊರಡುವಾಗ ನಡೆದೇ ತೀರುತ್ತೇವೆಂದು ಹೊರಟು ಮುಂದೆ ಸಾಘಿದರೆ ನಡೆದಷ್ಟುಊ ಮುಗಿಯುವಿಲ್ಲ ಹೆಂಗುಸರೂ ಇದ್ದಿದ್ದರಿಂದ ಕೆಲವರಿಗೆ ಮುಂದೆ ನಡೆಯಲಾಗದಿದರಿಂದ ಕೆಲವು ರಿಕ್ಶಾ ಬಾಡಿಗೆಗೆ ಹಿಡಕೊಡು ದೇವಸ್ತ್ಃಅನದ ಕಡೆಗೆ ಹೊರಟೆವು ರಾತ್ರೆ ತುಂಬ ಆದುದರಿಂದ ವಸತಿಯ ಊಟ ಸಿಗಲಾರದೆಂದು ಹೋಟೆಲಲ್ಲಿ ಊಟ ಮಾಡಿಕೊಂಡಿದ್ದೆವು. ಊಟ ಮಾಡಿ ಮುಂದೆ ಹೊರಟರೆ ದೇವಾಲಲಯದ ಮಹಾದ್ವಾರ! ದೇವಾಲಯದೊಳಗೆ ಬರಲು ನಾಲ್ಕು ಕಡೆಗಳಿಂದಲೂ ದಾರಿಯಿದ್ದರೂ ಮೂಡು ಬಾಗಿಲು ದೊಡ್ಡದ್ದಾಗಿತ್ತು. ಒಳಗೆ ಹೊಕ್ಕೊಡನೆ ಒಂದು ಸಣ್ಣ ದೇವಾಲಯ ಅದು ಮೂಲ ದೇವಾಲಯವಂತೆ ಎಲ್ಲವೂ ಬಹಳ ಪುರ್ರಾತನ ಶೈಲಿಯ ರಚನೆ! ಪಶ್ಚಿಮ ಘಟ್ಟದ ಒಂದು ಬೆಟ್ಟ ಎಂದು ಹೇಳ ಬಹುದು ಈ ಅಣ್ಣ ಮಲೆ! ಇಡೀ ಬೆಟ್ಟವೇ ಶಿವ ಸಾನ್ನಿದ್ಧ್ಯವುಳ್ಳುದಂತೆ. ಒಟ್ಟಿನಲ್ಲಿ ಬಹಳ ದೊಡ್ಡ ದೇವಾಲಯ ದೇವರ ದರ್ಶನಕ್ಕೆ ತುಂಬಾ ಹೊತ್ತಾಗಬಹುದೆಂದು ಮರುದಿನ ಬೆಳಿಗ್ಗೆ ದರ್ಶನಕ್ಕೆ ಬರುವುದೆಂದು ಅಷ್ಟಕ್ಕೇ ಅಲ್ಲಿಂದ ಹಿಂದಿರುಗಿ ನಮ್ಮ ವಸತಿಗೆ ಬಂದೆವು. ರೂಮ್ ಚೆನ್ನಾಗಿತ್ತು. ರೂಮುಗಳೆಲ್ಲ ಆಶ್ರಮಕ್ಕೆ ಸೇರಿದ್ದು ಧರ್ಮಾರ್ಥ ವಾಗಿದ್ದರೂ ಏನೋ ನಮ್ಮ ಲೆಕ್ಕದ ಅನ್ನದಾನದ ಕಾಣಿಕೆಯನ್ನು ಬೇರೆ ಬೇರೆಯಾಗಿ ಕೊಟ್ಟೆವು. ಮತ್ತೆ ಬೆಳಗಿನ ಜಾವ ಬೇಗನೆ ಎದ್ದು ದೇವರ ದರ್ಶನಕ್ಕೆ ಹೊರಡಬೇಕು. ಆಶ್ರಮದಲ್ಲಿಯೇ ನಮಗೆ ಅವಲಕ್ಕಿ ಉಸುಲಿ ಮತ್ತು ಚಾ ಸಿಕ್ಕಿತು. ಅದನ್ನು ಕುಡಿದು ಹತ್ತಿರವೇ ಇದ್ದ ರಮಣ ಮಹರ್ಷಿಗಳ ಆಶ್ರಮಕ್ಕೆ ಹೋದೆವು.ಮೊದಲಿಗೆ ಒಂದು ಶಿವಾಲಯವಿದೆ. ಆ ಪ್ರದೇಶವೆಲ್ಲ ಬಹಳ ಶಾಂತ ಗಂಭೀರ.  ಹತ್ತಿರದಲ್ಲಿಯೇ ರಮಣ ಮಹರ್ಷಿಗಳ  ಧ್ಯಾನ ಮಂದಿರ. ರಮಣ ಮಹರ್ಷಿಗಳ  ವಿಗ್ರಹದ ಮುಂದೆ ಕುಳಿತು ಧ್ಯಾನ ಮಾಡುತ್ತಾರೆ ಎಲ್ಲವೂ ಮೌನವಾಗಿ ನಡೆಯುತ್ತದೆ. ಸ್ವಲ್ಪ ಹೊತ್ತು ಧ್ಯಾನಕ್ಕೆ ಕುಳಿತೆವು. ಹತ್ತಿರದಲ್ಲೇ ರಮಣ ಮಹರ್ಷಿಗಳ ಸಮಾಧಿ. ಅವರ ಪೂರ್ವಜರ ಸಮಾಧಿಯೂ ಅಲ್ಲಿದೆ. ಸಮೀಪವೇ ಒಂದು ದೊಡ್ಡ ಗೋಶಾಲೆ. ಈ ಪ್ರದೇಶ ನಮ್ಮನ್ನು ಹಿಂದಕ್ಕೆ ಎಂದರೆ ಪೂರ್ವಕಾಲದ  ಸ್ಮರಣೆಯನ್ನು ಮಾಡುತ್ತಿದ್ದವು.  ಎಕ್ರೆಗಟ್ಟಲೆ ಜಾಗವನ್ನು ಹೊಂದಿರುವ ಪ್ರದೇಶ  ಪ್ರಶಾಂತವಾಗಿತ್ತುರಮಣ ಮಹರ್ಷಿಗಳಿಗೆ ನಮೋ ನಮಃ ಮತ್ತೆ ಬರಿಗಾಲಲ್ಲಿಯೇ ಮೇಲೆ ಪರ್ವತ ಏರತೊಡಗಿದೆವು. ಮೆಟ್ಟಲುಗಳಿದ್ದುವು. ಸುಮಾರು ಮೂರು ನಡೆದು ಮೇಲೇರಿದೆವು. ಮೇಲೆ ನಿಂತು ನೋಡಿದರೆ ಇಡೀ ಅಣ್ಣಮಲೈ ನಗರವೇ ಕಾಣ ಬರುವುದು. ತುದಿಯಲ್ಲಿ ಒಂದು ಸ್ಕಂದ ಗುಹೆಯಿದೆ. ಇಲ್ಲಿ ಮೊದಲು ಮಹರ್ಷಿಗಳು ತಪಸ್ಸು ಮಾಡುತ್ತಿದ್ದರಂತೆಅಲ್ಲಿ ಅವರ ಭಾವಚಿತ್ರ, ಮತ್ತು ಕಲ್ಲಿನ ವಿಗ್ರಹವಿವೆ.ಇಲ್ಲಿ ನಿತ್ಯ ದೀಪ ಹಚ್ಚಿಡುತ್ತಾರೆ. ಗುಹೆಯ ಒಳಗೆ ಕುಳಿತು ಧ್ಯಾನ ಮಾಡುತ್ತಾರೆ. ಈ ಕಾಡಿನಲ್ಲಿ ಮಂಗಗಳು ಬಹಳ. ಹತ್ತಿರದಲ್ಲಿಯೇ ಮಹರ್ಷಿಗಳ ಅಮ್ಮನ ವಿಗ್ರಹವೂ ಇದೆ. ಮನೆಯಲ್ಲಿ ಹೇಳದೆ ಓಡಿಬಂದ ಮಗನನ್ನು ಹುಡುಕಿ ಬಂದು ಅವನೊಂದಿಗೆ ಅಲ್ಲಿಯೇ ಇದ್ದರಂತೆ ಅಮ್ಮ!ದಾರಿಯ ಇಕ್ಕೆಲಗಳಲ್ಲೂ ಕಾಡು. ಕೆಳಗಿಳಿದುಸ್ವಲ್ಪ ದುಸ್ತರವಾದ ದಾರಿಯಲ್ಲಿ ಬರುವಾಗ ಕಷ್ಟವಾದರೂ ಮಹರ್ಷಿಗಳನ್ನು ಸ್ಮರಿಸುತ್ತಾ ಕೆಳಗಿಳಿದೆವು. ಕೆಳಗಿಳಿಯುವಾಗಲೂ ಮೇಲೇರುವಾಗಲು ಅಲ್ಲಲ್ಲಿ ಸಣ್ನ ಸಣ್ನ ಶಿಲ್ಪ ಕಲಾಕೃತಿಗಳನ್ನು ಕಾನಬಹುದು. ಕೈಚಳಕದಿಂದ ಕೂಡಿದ ಅನೇಕ ಮೂರ್ತಿಗಳನ್ನು ಕಾಣ ಬಹುದು. ಕೆಳಗಿಳಿದು ಮೇಲೆ ನೋಡಲ್ಲು ಕಣ್ಣೆತ್ತುವಿದಿಲ್ಲ! ಕೆಳಗಿಳಿದು ಅರುಣಾಚಲ ದೇವಸ್ಥಾನಕ್ಕೆ ಬಂದೆವು. ಸುತ್ತಲೂ ಮೂವತ್ತು ಅಡಿ ಎತ್ತರದ ಗೋಪುರವಿದೆ ನಾಲ್ಕು ದ್ವಾರಗಳಲ್ಲಿ ಒಂದು ಮಹಾದ್ವಾರ! ಅಲ್ಲಲ್ಲಿ ದನ ಬಸವ ವಿಗ್ರಹಗಳನ್ನಿಟ್ಟಿದ್ದಾರೆ. ರಾಜಗೋಪುರವು ಬಹಳ ಎತ್ತರವಿದ್ದು  ಒಳಗೆ ಹೊಕ್ಕಾಗ ಒಂದು ದೊಡ್ಡ ಬಸವನ ವಿಗ್ರಹವು ನಮ್ಮನ್ನು ಒಳಗೆ ಸ್ವಾಗತಿಸುತ್ತದೆ. ಎಡಬದಿಯಲ್ಲಿ ದೊಡ್ಡದಾದಪುಷ್ಕರಿಣಿ ಕೆರೆ. ಬಲಬದಿಯಲ್ಲಿ ಸ್ಕಂದ. ಎಡ ಬದಿಯಲ್ಲಿ ಗಣಪತಿ ದೇವಸ್ಥಾನ. ಪ್ರಾಂಗಣದ ನಡುವೆ ದೊಡ್ದ ಧ್ವಜ ಸ್ಥಂಭ ಕರಿಶಿಲೆಯ ದೊಡ್ಡ ಕಂಬಗಳು ಕೆತ್ತನೆ ಕೆಲಸ್ದದಿಂದ ಮನ ಮೋಹಕವಾಗಿವೆ.ಮಧ್ಯಾಹ್ನ ೨.೩೦ಕ್ಕೆ ದೇವರ ದರ್ಶನವಾಯಿತು. ದಿನ ನಿತ್ಯ ಜನ ಸಾಗರವೆ ದೇವರ ದರ್ಶನಕ್ಕೆ ಬರುವುದರಿಂದ ಶಿವನನ್ನು ಹೆಚ್ಚು ಹೊತ್ತು ನೋಡಿಕೊಂಡಿರುವುದಕ್ಕೆ ಬಿಡುವುದಿಲ್ಲ. ನಾಲ್ಕು ಗಂಟೆಗೆ ಓಂ ಶಕ್ತಿ ತಂದದವರು ಕೆಂಪುಡುಗೆಯಲ್ಲಿ  ಬಂದಿದ್ದರು. ನೂರಾರು, ಸಾವಿರಾರು ಜನ ಅತ್ತಿಂದಿತ್ತ ಓಡಾಡುತಿರುತ್ತಾರೆ ಒಳಗೆ ಅಂಗಣದಲ್ಲಿ. ಮುಂದೆ ಹೋಗುವಾಗ ಸ್ವರ್ಣಖಚಿತ ಅರುಣಾಚಲೇಶ್ವರನ ವಿಗ್ರಹ! ಹಿಂದೆ ಇಲ್ಲಿಯೂ ರಮಣ ಮಹರ್ಷಿಗಳು ತಪಸ್ಸಿಗೆ ಕುಳಿತ ಜಾಗವಿದೆ. ತಪಸ್ಸಿಗೆ ಕುಳಿತವರಿಗೆ ಮೈಯೆಲ್ಲ ಹುಣ್ಣಗಿ ಹತ್ತಿರ ಬಂದವರಿಗೇ ವಾಸನೆ ಬರಿತ್ತಿದ್ದರೂ ಧ್ಯಾನದಲ್ಲಿದ ಅವರಿಗೆ ಗೊತ್ತಾಗಿಯೇ ಇಲ್ಲವಂತೆ!ಈ ಜಾಗ ಅಂಗಣ ನಾಲ್ಕು ಅಡಿ ಆಳದಲ್ಲಿದೆ. ಮಹಾನಂದಿಯ ಪಕ್ಕದಲ್ಲಿಯೇಇದೆ.ಇಲ್ಲಿಯೇ ಪಾತಾಳ ಗಂಗೆ ಎಂಬ ತೀರ್ಥ ಸ್ಥಳ ಕೆಳಗೆ ಮೆಟ್ಟಲಿಳಿದಿ ಝೋದಾಗ ಸಿಗುತ್ತದೆ ಅಲ್ಲಿ ಬಂದವರು ಸ್ನಾನ ಮಾಡಿ ಪಾವನರಾಗುತ್ತಾರೆ ಅಂತೂ ಈ ದೇವಸ್ಥಾನ ಪ್ರದೇಶ ರಮಣ ಮಹರ್ಷಿಗಳ ತಪೋಭೂಮಿಯಾಗಿದ್ದು ಅದರಿಂದಲೇ ತುಂಬಾ ಜನ ಇಲ್ಲಿಗೆ ಯಾತ್ರಾರ್ಥಿಗಳಗಿ ಬರುತ್ತಾರೆ  ಅಲ್ಲಿಂದ ಹೊರಗೆ ಬಂದು ನಮ್ಮ ವಸತಿಗೆ ಬಂದೆವು. ಮತ್ತೆ ನಮ್ಮೆಲ್ಲ ಸಾಮಗ್ರಿಗಳನ್ನು ಕಟ್ಟಿಕೊಂಡು ಎರಾತ್ರೆ ರೈಲು ಬಂಡಿಯಲ್ಲು ಬ್ತಿನ್ನಲು ಬೇಕಾಗುವುದೆಂದು ಸ್ವಲ್ಪ ತಿಂದು ಬೇರೆ ಕಟ್ಟಿಸಿಕೊಂಡು ಅಲ್ಲಿಯದೇ ಬಸ್ಸಿನಲ್ಲಿ ವೆಲ್ಲೂರಿಗೆ ಬಂದೆವು. ಅಲ್ಲಿಂದ ನಮ್ಮ ಕಾಟಪಾಡಿಗೆ ಬಂದು  ಅಲ್ಲಿ ಹೋಟೆಲಲ್ಲಿ ಊಟ ಮಾಡಿರೈಲು ಹತ್ತಿ ಕುಳಿತೆವು ಮರುದಿನ ಬೆಳಿಗ್ಗೆ ಹತ್ತು ಗಂತೆಗೆ ಮಂಗಳೂರು ತಲಪಿದೆವು. ಅಲ್ಲಿ ಇಲ್ಲಿ ತಿರುಗಿ ಆಯಾಸವಾದುದರಿಂದ ರೈಲಲ್ಲಿ ಸ್ವಲ್ಪ ನಿದ್ರೆ ಬಂದಿದ್ದರೂ ಯಾತ್ರೆ ಸವಿನೆನಪು ನಮ್ಮನ್ನು ಕುಶಿ ಕೊಟ್ಟಿತ್ತು

shabarimaleyatre

                                  ಶಬರಿ ಮಲೆ ಯಾತ್ರೆ
     
 ಕೇರಳದ ಕೊಟ್ಟಾಯಂ ನಿಂದ ೩೦ ಮೈಲುಗಳ ದೂರದಲ್ಲಿ ಒಂದು ಎತ್ತರವಾದ ಮಲೆಯನ್ನು ಶಬರಿಮಲೆಯೆಂದು ಕರೆಯುವುದು ವಾದಿಕೆ ಹಿಂದೆ ಶ್ರೀರಾಮನಿಗಾಗಿ ಕಾಯುತ್ತಾ ಅವನು ಬಂದಾಗ ಅನಿಗೆ ನೈವೇದ್ಯವಾಗಿ ತಾನು ರುಚಿ ಇಷ್ಟವಾದ ಹಣ್ಣನ್ನೇ  ಕೂಟ್ಟ ಮಹಾಭಕ್ತೆ ಶಬರಿಯಿಂದಾಗಿ ಈ ಮಲೆ( ಬೆಟ್ಟ) ಶಬರೀ ಮಾಲೆಯೆಂಬ ಹೆಸರಿನಿಂದ ಪ್ರಸಿದ್ಧವಾಯಿತು. ಮುಂದೆ ಅವತಾರಿಯಗಿ ಬಂದ ಅಯ್ಯಪ್ಪ ಸ್ವಾಮಿಯು ನೆಲಸಿದ ಬೆಯ್ಯವೆಂದು ಅಯ್ಯಪ್ಪನ ಭಕ್ತರು ಇಲ್ಲಿಗೆ ಬರಲಾರಂಭಿಸಿದರು. ಮೊದಲೇನೋ ಬಹಳ ದೂರದಿಂದ ಗುಡ್ಡ ಬೆಟ್ಟೆಗಳನ್ನು ಹತ್ತಿ ಇಳಿದು ಕಾಲ್ನಡಿಗೆಯಿಂದಲೇ ಬಂದವರು ಕಾಡು ಮೃಗಗಳ ಬಾಯಿಗೆ ಬಿದ್ದುದೂ ಇದೆಯಂತೆ! ಅಷ್ಟು ದುರಗಮವಾದ ಈ ಬೆಟ್ತಕ್ಕೆ ಮತ್ತೆ ಸಾರಿಗೆ ಸೌಕರ್ಯ ಹೆಚ್ಚಾದಂತೆ ಬರುವ ಭಕ್ತರ  ಸಂಖ್ಯೆ ಹೆಚ್ಚಾಗಿ ಆದಾಯ ಹೆಚ್ಚು ಬರತೊಡಗಿದಾಗ ಭಕ್ತರ ಕಾಣಿಕೆ ಹಣವನ್ನು ನೋಡಿ ಸರಕಾರವಾ ಎಂಡೋಮೆಂಟ್  ಗೆ ಸೇರಿಸಿ ಇತ್ತೀಚೆಗೆ ಸೌಕರ್ಯ ಹೆಚ್ಚಾದುದರಿಂದ ದೇವಸ್ವಂ ಬೋರ್ಡಿಗೆ ತುಳಸೀ ಮಾಲೆ ವರ್ಷದಲ್ಲಿ ಕೋಟಿಗಟ್ಟಲೆ ಆದಾಯಬರತೊಡಗಿದೆ ಭಕ್ತರ ಅಪೇಕ್ಷೆಯಂತೆ ಅನ್ನದಾನವೂ ಶುರುವಾಗಿದೆ. ೪೧ ದಿನಗಲಲ್ಲಿ ಮದ್ಯ ಮಾಂಸಸೇವಿಸಬಾರದೆಂಬ ನಿಯಮ ಇಟ್ಟುಕೊಂಡು ಕೊರಳಿಗೆ ತುಳಸೀ ಮಾಲೆ ಗುರುಸ್ವಾಮಿಯಿಂದ ಹಾಕಿಸಿಕೊಂಡು ಬ್ರಹ್ಮಚರ್ಯ ಪಾಲಿಸುತ್ತಾ ಸ್ವಂತ ಅಡಿಗೆ ಊಟ ಮಾಡಿಕೊಂಡು ಗುಂಪಾಗಿಯೋ ಇರಬೇಕು. ಗುರುಸ್ವಾಮಿಯೊಂದಿಗೆ ಇರುಮುಡಿ  ಎಂದರೆ ಮೂರು ತೆಂಗಿನಕಾಯಿ, ಸ್ವಲ್ಪ ಅಕ್ಕಿ, ಒಂದು ಕಾಯಿಯಲ್ಲಿ ತುಂಬಿಸಲು ಸಾಕಷ್ಟು ತುಪ್ಪ ಇವುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ತಿಕೊಂಡು ತಲೆಯಲ್ಲಿ ಇಟ್ಟುಕೊಂಡು ಪ್ರ್ವತ ಏರಬೇಕು. ಈಗ ನಿಯಮ ಸ್ವಲ್ಪ ಸಡಿಲಿದೆಯಾದರೂ ಅದೇ ನಿಯಮವನ್ನು ಪಾಲಿಸುವವರೂ ಇದ್ದಾರೆ. ಬರೇ ಒಂದು ವಾರ ಮಾತ್ರ ಮಾಲೆ ಹಾಕಿಸಿಕೊಳ್ಳುವವರು ಇದ್ದಾರೆ. ಒಟ್ಟಾರೆ ಆ ಅವಧಿಯಲ್ಲಿ ಬ್ರಹ್ಮಚರ್ಯ ಪಾಲಿಸಬೇಕೆಂಬ ನಿಯಮದಂತೆ ಮಲೆಯ ಬುಡಕ್ಕೆ ಹೋಗಿ ಅಲ್ಲಿ ಕೆಳಗೆ ಪಂಬಾ ನದಿಯಲ್ಲಿ ಸ್ನಾನ ಮಾಡಿ ಅಲ್ಲೇ ಇರುವ ಗಣಪತಿ ದೇವಸ್ಥಾನದಲ್ಲಿ ಈಡುಗಾಯಿ ಒಡೆದು ಮಾಲೆ ಹಾಕಿಸಿಕೊಂಡು ಇರುಮುಡಿ ತಲೆಯಲ್ಲಿ  ಹೊತ್ತುಕೊಂಡು ಹೋಗುವವರು ಇದ್ದಾರೆ. ಮಾಲೆ ಹಾಕುವವರಿಗೆ ಬೇಕಾದ ಕಾಯಿ ತುಪ್ಪ ಎಲ್ಲ ಏ ಸಿಗುತ್ತದೆ. ವ್ರತ ಪಾಲಿಸುವವರಿಗೆ ಈಗ ತುಂಬ ಅನುಕೂಲ ವಿದ್ದುದ್ದರಿಂದ ಜನ ಬಹು ಸಖ್ಯೆಯಲ್ಲಿ ಬರುತ್ತಾರೆ. ಪ್ರತಿ ಸಂಕ್ರಮಣ ಬಾಗಿಲು ತೆರೆದರೆ  ನಾಲ್ಕೈದು ದಿನ ಬರುವವರಿಗೆ ವ್ಯವಸ್ಥೆ ಈಗ ಮಾಡಿದ್ದಾರೆ. ಅಂತೂ ಬಹಳ ಹಿಂದೆ ಇದ್ದ ನಿಯಮಗಳನ್ನು ಸಡಿಲಿಸಿ ಸುಲಭಗೊಳಿಸಿದ್ದು  ಮತ್ತು ಬರೇ ಆರೇಳು ಮೈಲು ಮಾತ್ರ ಮಲೆಯೇರಲು ಇರುವುದರಿಂದ ಜನ ಬರುತ್ತಾರೆ. ಮೊದಲು ೧೫ ಮೈಲು ಕಾಡಿನಲ್ಲಿ ಹಿಂಸ್ರ  ಮೃಗಗಳಿಗೆ ಆಹುತಿಯಾದುದೂ ಇದೆಯಂತೆ.
   ನಾನು ಎರಡು ಸಲ ಶಬರಿಮಲೆಗೆ ಹೋಗಿದ್ದೆನು ಒಮ್ಮೆ ಒಬ್ಬ ಗುರುಸ್ವಾಮಿಯೊಂದಿಗೆ ಹೋದರೆ ಇನ್ನೊಮ್ಮೆ ಮತ್ತೊಬ್ಬ ಗುರುಸ್ವಾಮಿಯೊಂದಿಗೆ . ಇನ್ನೊಮ್ಮೆ ನನ್ನ ಪತ್ನಿಗು ಶಬರಿ ಮಲೆ ಯಾತ್ರೆ ಮಾಡ ಬೇಕೆಂಬ ಆಸೆಯಾಯಿತು. ಮತ್ತೆ ನನಗು ಇನ್ನೊಮ್ಮೆ ಅಯ್ಯಪ್ಪನನ್ನು ಭೇಟಿ ಮಾಡಬೇಕೆಂಬ ಆಸೆಯಾಯಿತು  ನನ್ನ ಹೆಂಡತಿಯ ಗೆಳತಿಯರು ಕೆಲವರು ಹೋಗುವರೆಂದು ಗೊತ್ತಾಗಿದ್ದರಿಂದ ಅಲ್ಲಿಗೆ ಹೆಂಗುಸರೂ ಹೋಗಬಹುದು ಎಂಬ ವಿಷಯ ಗೊತ್ತಾಗಿದ್ದರಿಂದ ಪತ್ನಿಗೂ ಹೋಗಬೇಕೆಂಬ ಆಸೆ ಚಿಗುರಿತು ಹಾಗೆ ನನಗೂ ಆಕೆಯನ್ನು ಕರೆದುಕೊಂಡು ಹೋಗಲು ಅನುಕೂಲವು ಆಯಿತು. ಎಲ್ಲರು ಗಂಡುಸರೇ ಆದರೆ ಒಬ್ಬ ಹೆಂಗಸನ್ನು ಕರಕೊಂಡು ಹೋಗಲು ಕಷ್ಟವಲ್ಲವೇ?  ಪ್ರಾಯದ ಹೆಂಗುಸರು ಎಂದರೆ ಮುಟ್ತು ನಿಂತವರು ಐವತ್ತು ಕಳೆದವರಿಗೆ ಪ್ರವೇಶವಿದೆಯೆಂದು ಗೊತ್ತಾಗಿ ಒಂದು ದಿನ ನಾವೆಲ್ಲರೂ ಒಟ್ಟಾಗಿ ಸಂಜೆಯ ಮಲಬಾರ್ ಎಕ್ಸ್ ಪ್ರೆಸ್ಸಿಗೆ ಮೊದಲೇ ಸೀಟ್ ಬುಕ್ ಮಾಡಿಸಿಕೊಂಡಿದ್ದೆವು ಸಂಜೆ ಗಾಡಿ ಹತ್ತಿದವರು ಕೊಟ್ಟಾಯಂ ಸ್ಟೇಶನ್ನಿಗೆ ಗಾಡಿ ತಲಪಿದೊಡನೆ ನಾವು ಮೊದಲೇ ಬುಕ್ ಮಾಡಿದ್ದ ಗಾಡಿಯಲ್ಲಿ ಕೊಟ್ಟಾಯಮ್ಮಿನಿಂದ ಶಬರಿಮಲೆಗೆ ಹೊರಟೆವು. ಪೂರ್ವಾಹ್ನ ಶಬರಿ ಮಲೆಯ ಬುಡದಲ್ಲಿರುವ ನದೀಯಲ್ಲಿ ಸ್ನಾನ ಮಾಡಿ ಅಲ್ಲೇ ಮೇಲಿರುವ ಗಣಪತಿ ದೇವಸ್ಥಾನದಲ್ಲಿ ಮಾಲೆ ಹಾಖಿ ಇರುಮುಡಿ ಕಟ್ತಿಕೊಂಡು ಅಯ್ಯಪ್ಪನನ್ನು ಕೂಗಿಕೊಳ್ಳುತ್ತಾ ಮಲೆಯನ್ನೇರತೊಡಗಿದೆವು . ಗೆಳತಿಯರಿದ್ದುದರಿಂದ ನಮ್ಮವಳಿಗೂ ಮೊಡು ಧೈರ್ಯ ಬಂದಿದ್ದರೂ ಬಹಳ ಕಷ್ಟದಿಂದ ಗುಡ್ಡವೇರತೊಡಗಿದಳು. ನಮ್ಮ ಪೈಕಿ ವಯಸ್ಸಾದ ಹೆಂಗಸು ನಮ್ಮವಳು. ಅಂತೂ ಏಳೆಂಟು ಮೈಲು ದಾರಿಯನ್ನು ಏರಲು ಮೂರು ಗಂಟೆ ಬೇಕಾಯಿತು. ಸ್ವಲ್ಪ ತಡವಾದ್ದರಿಂದ ಮೇಲೇರಿದೊಡನೆ ಅಯ್ಯಪ್ಪನ ಮಂದಿರಕ್ಕೆ ಮೇಲೇರುವಾಗ ಸಿಕ್ಕುವ ಹದಿನೆಂಟು ಮೆಟ್ಟಲುಗಳನ್ನು  ಆ ಹೊತ್ತಿನಲ್ಲಿ ಹೆಚ್ಚು ಜನವಿಲ್ಲದುದರಿಂದ ನಿಧಾನವಾಗಿ ಮೇಲೇರಲು ಸಾಧ್ಯವಾಯಿತು. ಮೇಲೆ ಹತ್ತಬೇಕಾದರೆ ಅಲ್ಲೇ ಗೋಡೆಯೊಂದಕ್ಕೆ ಬರುವಾಗ ತಂದಿದ್ದ ಒಂದು ತೆಂಗಿನಕಾಯಿಯನ್ನು ಹೊಡೆದುಬಿಟ್ಟೆವು. ಆದು ಅಲ್ಲೇ ಬಿಡ್ಡಬೇಕಾದುದು. ಮತ್ತೆ ತಾನೆ ಮೆಟ್ಟಲೇರುವುದು! ಎಲ್ಲ ಬಂಗಾರದ ಮುಚ್ಚಿಗೆಯ ಮೆಟ್ಟಲುಗಳು ಸಂಜೆ ಈ ಮೆಟ್ಟಲುಗಳಿಗೆ ನಿತ್ಯವೂ ಪಡಿಒಪೂಜೆ ನಡೆಯಲಿದೆಯಂತೆ  ಅಯ್ಯಪ್ಪನ ದರ್ಶನವಾಗಲಿಲ್ಲ. ಅದರೆ ಉಳಕೊಳ್ಳಲು ಎರಡು ರೂಮ್ ಬುಕ್ ಮಾಡಿದ್ದರಿಂದ ಗಂಡುಸರು ಹೆಂಗಸರೆಂಬ ಭೇದವಿಲ್ಲದೆ ವಿಶ್ರಾಂತಿ ಪಡೆಯಲು ಹೋದೆವು. ಪ್ರಸಾದ ಊಟ ಸಿಕ್ಕದಿದ್ದರಿಂದ ಹೋಟೆಲಿನಲ್ಲಿ ಊಟ ಮಾಡಬೇಕಾಯಿತು. ಸಂಜೆ ಬೇಗನೆ ದೇವರ ದರ್ಶನಕ್ಕೆ ಹೋದೆವು ದರ್ಶನಕ್ಕೆ ತುಂಬಾ ಜನ ಬರುವುದರಿಂದ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಮಕರ ವಿಳಕ್ಕಿನ ಕಾಲದಲ್ಲಿಯೋ ಇತರ ಹಬ್ಬಗಳ ಕಲದಲ್ಲಿಯೋ ರಶ್ ಹೆಚ್ಚಿರುವುದರಿಂದ ದರ್ಶನ ಕಷ್ಟ ವೆಂದು ಸಂಕ್ರಮಣದ ನಂತರ ಹೋದುದಾದರೂ ಜನ ಸಂದಣಿ ಧಾರಾಳವಾಗಿತ್ತು. ಎಲ್ಲರೂ ನಮ್ಮಂತೆ ರಶ್ ತಪ್ಪಿಸಿಕೊಳ್ಳಲು ಆದಿವೇ ಬಂದಂತಿತ್ತು. ಅಂತೂ ಬಹಳ ಹೊತ್ತು ಸಾಲಿನಲ್ಲಿ ನಿಂತ ಮೇಲೆ ದರ್ಶನಕ್ಕೆ ಸಾಧ್ಯವಾದರೂ ಅಲ್ಲಿಯೂ ಜನಸಂದಣಿ ಹೆಚ್ಚಾಗಿದ್ದುದರಿಂದ ಹೆಚ್ಚು ಹೊತ್ತು ದೇವರನ್ನು ನೋಡಲು ಸಾಧ್ಯವಾಗಲಿಲ್ಲ. ಅಷ್ಟೆತ್ತರದ ಗುಡ್ಡದ ತುದಿಯಲ್ಲಿಯೂ ನೀರು  ಸಾಲದ್ದಕ್ಕೆ ದೇವಸ್ವಂ ಬೋರ್ಡಿನವರು ಕೆಳಗಿನಿಂದ ಪೈಪಿನ ಮೂಲಕ ನೀರು ತರಿಸಿ ಬಂದವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆಯಿದ್ದರೂ ಎಲ್ಲರಿಗೂ ಊಟ ಸಿಗುವುದು ಕಷ್ಟವಾಗುತ್ತದೆ. ಇನ್ನು ಹೆಚ್ಚು ರಶ್ ಇದ್ದ ಸಮಯದಲ್ಲಿ ಊಟ ಸಿಗುವುದಿಲ್ಲ. ಬೇಕಾದ ಪೋಲಿಸ್ ರಕ್ಷಣೆಯಿರುವುದರಿದ ಮಾತ್ರವಲ್ಲ ಅಲ್ಲಿ ಮದ್ಯಪಾನ ಮಾಡುವುದು ನಿಷೇಧವಾದುದರಿಂದ ಕೆಟ್ಟ ಜನರ ತೊಂದರೆಯಿಲ್ಲ.  ಯಾವ ಹೆದರಿಕೆಯೂ ಇಲ್ಲ. ಒಳಗೆ ತಲಪಿದೊಡನೆ ಬಂಗಾರದ ಕವಚ ಹೊಂದಿರುವ ಮಾಡು ಕಲಶ ಎಲ್ಲವೂ ಬಂಗಾರದ್ದೇ ಆಗಿರುವುದರಿಂದ ಸಾಕಷ್ಟು ಜಾಗ್ರತೆಯಿರಬೇಕಲ್ಲ!.ಅಲ್ಲಿಂದ ಈಚೆ ಬಂದರೆ ಮಾಳಿಗಮ್ಮ  ದೇವರ ಗುಡಿ  ಹಿಂದೆ ಅಯ್ಯಪ್ಪನನ್ನು ಮದುವೆಯಾಗಬೇಕೆಂದು ಬಯಸಿ ಬಂದು ಅವನಲ್ಲಿ ಕೇಳಿದಾಗ ಅಯ್ಯಪ್ಪನು " ಈ ಕ್ಷೇತ್ರಕ್ಕೆ ಚಿಕ್ಕ ಕನ್ಯೆಯರು ಬರುವುದು ನಿಂತ ಮೇಲೆ ನಿನ್ನ ಬಯಕೆಯನ್ನು ಪೂರೈಸುವೆಯೆಂದಿದ್ದನಂತೆ! ಆದರೆ ಜನ ಬರುವುದು ನಿಲ್ಲಲೂ ಇಒಲ್ಲ ಆಕೆಗೆ ಮದುವೆಯಾಗಲೂ ಇಲ್ಲ. ಈ ಗುಡಿಯ ಹತ್ತಿರ ಹೋದವರು ಒಂದು ತೆಂಗಿನಕಾಯಿ ( ಕಾಯಿ ಅಲ್ಲೇ ಕೊಡುತ್ತಾರೆ ) ಕಾಯಿಯನ್ನು ಉರುಳಿಸಿಕೊಂಡು ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುತ್ತಾರೆ. ಒಮ್ಮೆ ಜನ ಉರುಳಿಸಿ ಬಿಟ್ಟ ಕಾಯಿಗಳನ್ನು ಅಲ್ಲಿಂದ ದೇವಸ್ಥಾನ ಚಾಕರಿಯವರು ಗೋಣಿಗಳಲ್ಲಿ ಸಂಗ್ರಹಿಸಿ ಆಚೆ ಇಟ್ಟ್ಅರೆ  ಅಲ್ಲಿ ಕುಳಿತುಕೊಂಡವರು ಅದೇ ಕಾಯಿಗಳನ್ನು ಮತ್ತೆ ಬಂದವರಿಗೆ ಉರುಳಿಸಲು ಕೊಡುತ್ತಾರೆ ಹೀಗೆ ದೇವಸ್ಥಾನಕ್ಕೆ ಬಂದವರು ದೇವಿಯ ಕೋರಿಕೆಯನ್ನು ಈಡೆರಿಸುವಂತೆ ಕೇಳಿಕೊಂಡರೂ ಮಾತನಾಡದ ದೇವರು ಬಸ್ಂದವರಿ ಮುಗ್ಧಮನಸ್ಸನ್ನು ಹಣ ಒಟ್ತು ಮಾಡುವ ಕಾಯಕದಂತೆ ನಡೆಸುತ್ತಿರುತ್ತಾರೆ. ಜನರ ಮುಗ್ಧ ಮೂಢ ವಿಶ್ವಾಸವನ್ನು ಹೀಗೆ ಕ್ಶೇತ್ರವಾಸಿಗಳು ದುರ್ಬಳಕೆ ಂಆಡಿಕೊಳ್ಳುತ್ತಿದ್ದರೂ ನಂಬಿಕೆ ಮುಂದುವರಿಯುತ್ತಲೇ ಇದೆ!  ತಾಯಿಯ ಬಯಕ್ಕೆ ಈಡೇರಿಸುವಂತೆ ಬೇಡಿಕೊಂಡಾರೂ ಯಾರ ಬಯಕೆಯೂ ಈಡೇರದೆ ಆಕೆ ಬ್ರಹ್ಮಚಾರಿಣಿಯಾಗೇ ಇನ್ನೂ ಇದ್ದಾಳೆ. ಮಾಳಿಗಮ್ಮನ ದರ್ಷನ ಮುಗಿಸಿ ನಾವು ತಂದ ಇರುಮುಡಿಯನ್ನು ಅಯ್ಯಪ್ಪನ ಮಂದಿರದ ಒಂದು ಬದಿಯಲ್ಲಿ ಕುಳಿತುಕೊಂದು ಕಾಯಿಯೊಳಗೆ ತುಂಬಿಸಿದ ತುಪ್ಪವನ್ನು ಒಳಗೆ ಕೊಟ್ಟು, ತುಪ್ಪ ತುಂಬಿಸಿದ ಕಾಯಿಯನ್ನು ಕೆಳಗೆ ಒಂದು ಅಗ್ನಿ ಕುಂಡಕ್ಕೆ ಹಾಕಿದೆವು. ತುಂಬಾ ಆಳದಲ್ಲಿರುವ ಈ ಕುಂಡಕ್ಕೆ ಬಂದವರೆಲ್ಲ ಹಾಕಿದ ತೆಂಗಿನ ಕಾಯಿಯ ಬೆಂಕಿ ಆರದೆ ಯಾವಾಗಲೂ ಹೋಮ ಕುಂಡ ಧಗ ಧಗಿಸಿ ಉರಿಯುತ್ತಿರುತ್ತದೆ. ಅದಾಗಿ ನಾವು ಸಂಜೆಯ ಪಡಿಪೂಜೆ ನೋಡಲು ಹೋದೆವು. ಜನ ಈಗ ತುಂಬ ಸೇರಿದ್ದರು ನಾವು ಬರುವಾಗ ಇದ್ದ ಜನ ಕಡಿಮೆ ಈಗ ನೋಡಿದರೆ ಸಾವಿರಾರು ಸೇರಿದ್ದರು. ಜನರ ಎಡೆಯಲ್ಲಿ ನಾವು ಪಡಿಪೂಜೆ ನೋಡಿದೆವು ಅ ಹದಿನೆಂಟು ಮಟ್ತಲುಗಳಿಗೂ ಪೂಜೆಯಂತೆ! ಕೆಳಗಿನ ಮೆಟ್ಟಲಿನಲ್ಲಿ ಪೂಜಾರಿಗಳು ಆರತಿ ಪುಜೆಯ ಸಾಮಗ್ರಿಗಳೊಂದಿಗೆ ಬಂದರು ಪೂಜೆ ನೈವೇದ್ಯ ಆಗುತ್ತಿದ್ದಂತೆ ವಾದ್ಯ ಘೋಷಗಳು ಜೋರಾಗಿ ಧ್ವನಿಸುವುದರೊಂದಿಗೆ ಒಂದೊಂದೇ ಮೆಟ್ಟಲುಗಳಿಗೆ ಕ್ರಮದಂತೆ ಪೂಜೆ ಆರತಿ ಬೆಳಗಿದರು ಸುಮಾರು ಒಂದು ಗಂಟೆ ಜನ ಮನದಣಿಯೆ ಪೂಜೆ ನೋಡಿತ್ತಿರುವಂತೆ ಪೂಜೆ ಮುಗಿಯಿತು. ನಾವು ರಾತ್ರೆಯೂ ಹೋಟೆಲಿನಲ್ಲಿಯೇ ಊಟ ಮಾಡಿದೆವು. ರೂಮಿಗೆ ಹೋದರೆ ಮಲಗಲು ಚಾಪೆ ಮಾರ ಸಿಕ್ಕಿತು. ನಾವು ತಂದ ಬಟ್ಟೆ ಹಾಸಿಕೊಂಡು ಮಲಗಿದಷ್ಟಕ್ಕೆ ತುಂಬ ದಣಿದಿದ್ದುದರಿಂದ ನಿದ್ರೆ ಬೇಗ ಬಂತು  ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಹೋಟೆಲಿನಲ್ಲೇ ಉಪಾಹಾರವಾಯಿತು. ಮತ್ತೆ ದೇವರ ದರ್ಶನಕ್ಕೆ ಹೋದೆವು. ಆಗಲು ಹೆಚ್ಚು ಜನವಿದ್ದರೂ ದೇವರ ದರ್ಶನ ಮತ್ತೊಮ್ಮೆ ಆಯಿತು. ಪ್ರಸಾದವಾಗಿ ಸ್ವಲ್ಪ ತುಪ್ಪ ಸಿಕ್ಕಿತ್ತು. ಮತ್ತೆ ಅಲ್ಲಿ ತಂತ್ರಿಗಳನ್ನು ನೋಡಹೋದಾಗ ಅಲ್ಲಿಯೂ ಏನಾದರೂ ಕಾಣಿಕೆ ಹಾಖಿದರೆ ದಾರ ಪ್ರಸಾದ ಕೊಡುತ್ತಿದ್ದರು ಮತ್ತೆ ಸಾಲಿನಲ್ಲಿ ನಿಂತು ಅಪ್ಪ , ನೈಯಭಿಷೇಕದ ಪ್ರಸಾದ, ನೂರು ರೂಪಾಯಿಗೆ ಒಂದು ಸಿಹಿ ಪ್ರಸಾದ ಹೀಗೆ ಅಲ್ಲಿಯ ಪ್ರಸಾದ ತೆಕ್ಕೊಂಡು ಅಲ್ಲಿಂದ ಕೆಳಗಿದೆವು. ಕೆಳಗೆ ನಮ್ಮ ವಾಹನ ಬಂದಿತ್ತು. ವಾಹನವನ್ನೇರಿ ಕೊಟ್ಟಾಯಮ್ಮಿಗೆ ಬಂದೆವು. ಉಳಿದವರು ಗಾಡಿಯಲ್ಲಿ ಕನ್ಯಾಕುಮಾರಿಗೆ ಹೋಗುಬ ಯೋಜನೆಯಲ್ಲಿದ್ದರು. ನಾವು ತ್ರಿಶೂರಿಗೆ ಬಣ್ದೆವು. ಅಲ್ಲಿಂದ  ಪೊಂದು ವಾಹನ ಹಿಡಿದು ಛೋಟಾನಿಕ್ಕೆರೆ ಭಗವತಿಯ ದರ್ಶನಕ್ಕೆಂದು ಬಂದೆವು ಪುರಾತನ ದೇವಸ್ತ್ಃಅನ ದೇವಿಯನ್ನು ನೋಡಿ ಧನ್ಯರಾದ್ವು ಸ್ಟೇಶನಿಗೆ ಬಂದು ಗಾಡಿಯೇರಿ ಮಂಗಳೂರಿಗೆ ಬೆಳಿಗ್ಗೆ ತಲಪಿದಲ್ಲಿಗೆ ನಮ್ಮ ಶಬರಿಮಲೆ ಯಾತ್ರೆ ಮುಗಿಯಿತು.
ನಾವು ಬರುವಾಗ್