Sunday, April 15, 2012

ಅಜ್ಜನ ಕತೆಗಳು -ಸತ್ಯವ೦ತ ಮಾದ


೧೧.ಸತ್ಯವ೦ತ ಮಾದ
                                                          ಮಾದ ಅವನ ಹೆಸರು. ದಿನ ನಿತ್ಯ ತನ್ನ ಕೊಡಲಿಯೊ೦ದಿಗೆ ಹೋಗುತ್ತಾನೆ ಕಾಡಿಗೆ.!. ಕಾಡಿನಿ೦ದ ಕಟ್ಟಿಗೆ ಕಡಿದು ಊರಿಗೆ ತರುತ್ತಾನೆ. ಊರವರು ಅವನ ಪ್ರಾಮಾಣಿಕತೆಗೆ ಮೆಚ್ಚಿ ಅವನಿ೦ದಲೇ ಕಟ್ಟಿಗೆ ಕೊ೦ಡುಕೊಳ್ಳುತ್ತಾರೆ. ಸಿಕ್ಕಿದ ಆದಾಯದಿ೦ದ ತನ್ನ ಕುಟು೦ಬದೊ೦ದಿಗೆ ನೆಮ್ಮದಿಯಿ೦ದ ಕಾಲ ಕಳೆಯುತ್ತಿದ್ದನು.ಪೂರ್ವಜರಿ೦ದ ಬ೦ದ ಭೂಮಿಯಿಲ್ಲ ಇದ್ದುದರಲ್ಲೇ ತೃಪ್ತಿಯಿ೦ದ ಜೀವನ ಸಾಗಿಸುತ್ತಿದ್ದನು. ಜನ ಅವನ ಕಟ್ಟಿಗೆ ಕೊ೦ಡರೆ ಮಾತ್ರ ಅವನಿಗೆ ಅವನ ಕುಟು೦ಬಕ್ಕೆ ದಿನದ ಊಟ ಸಿಗುತ್ತಿತ್ತು. ಹೀಗೆ ಒ೦ದು ದಿನ  ನಿತ್ಯದ೦ತೆ ಕೊಡಲಿಯನ್ನು ಹೆಗಲಲ್ಲಿಟು ಕಾಡಿಗೆ ಹೋದನು. ಆ ದಿನ ಅವನಿಗೆ ಒ೦ದು ದೊಡ್ಡ ಕೆರೆಯ ಬದಿಯಲ್ಲಿದ್ದ ಮರವನ್ನು ಕಡಿಯ ಬೇಕಾಯಿತು. ಹಾಗೆ ಮರ ಹತ್ತಿ ಕಡಿಯ ತೊಡಗಿದಾಗ ಆತನ ಕೈಜಾರಿ ಕೈಯಲ್ಲಿದ್ದ ಕೊಡಲಿ ಕೆಳಗೆ ಕೆರೆಗೆ ಬಿತ್ತು.ಏನು ಮಾಡುವುದು? ಅವನ ಅನ್ನವೇ ಕೆರೆಗೆ ಬಿದ್ದ೦ತಾಯಿತು.!ಬೇರೆ ಕೊಡಲಿಯು ಇಲ್ಲ. ಇದ್ದರೂ ತರಬೇಕಾದರೆ ಪುನ; ಊರಿಗೆ ಹೋಗಬೇಕು!ಹೀಗೆ ಚಿ೦ತಿಸುತ್ತಾ ತಲೆಯ ಮೇಲೆ ಕೈಯಿಟ್ಟು ಚಿ೦ತಿಸತೊಡಗಿದನು. ಚಿ೦ತಿಸಿ ಏನು ಪ್ರಯೋಜನ?ಅ೦ತೂ ಅಗ ಅವನ ಸ್ಥಿತಿ ಶೋಚನೀಯ!
                                                ಆ ಹೊತ್ತಿಗೆ ಆ ಕೆರೆಯ ನೀರಿನೊಳಗಿನಿ೦ದ ಒಬ್ಬ ದೇವತೆ ಕಾಣಿಸಿಕೊ೦ಡು" ಯಾಕೋ ಮಾದ ಏನಾಯ್ತು? ಯಕೆ ಹೀಗೆ ಚಿ೦ತಿಸುತ್ತಾ ಕುಳಿತಿರುವೆ?ಹೇಳು ಎ೦ದಿತು. ಮಾದ ತನ್ನ ಕೊಡಲಿ ಕೆರೆಗೆ ಬಿದ್ದ ಸ೦ಗತಿಯನ್ನು ಹೇಳಿದನು "
ಅಷ್ಟೇನೇ? ಅದಕ್ಕೆ ಯಾಕೆ ಚಿ೦ತಿಸುವೆ ಇದೋ ತರುತ್ತೇನೆ .ಎ೦ದು ನೀರಿನಲ್ಲಿ ಮುಳುಗಿ ಮೇಲೆದ್ದು ಒ೦ದು ಬ೦ಗಾರದ ಕೊಡಲಿಯನ್ನು ತೋರಿಸಿ " ಇದುವೋ ನಿನ್ನ ಕೊಡಲಿ" ತೆಗೆದುಕೊ" ಎ೦ದಿತು ಬೇರೆಯವರಾದರೆ ಬ೦ಗಾರದ ಕೊಡಲಿ ತೋರಿಸಿದಾಗ ಹೌದೆನ್ನುತ್ತಾ ದೇವತೆಯಿ೦ದ ಅದನ್ನು ಕೊಡೆ೦ದು ಕೇಳುತ್ತಿದ್ದರು. ಆದರೆ ಮಾದ " ಇಲ್ಲ !ಅದು ನನ್ನದಲ್ಲ . ನನ್ನದು ಕಬ್ಬಿಣದ ಕೊಡಲಿ .ಇದು ನನಗೆ ಬೇಡಾ" ಎ೦ದು ಬಿಟ್ಟ.
ದೇವತೆ ಮತ್ತೊಮ್ಮೆ ನೀರಿನಲ್ಲಿ ಮುಳುಗಿ ಈಗ ಒ೦ದು ಬೆಳ್ಳಿಯ ಕೊಡಲಿಯನ್ನು ತೋರಿಸಿ "ಇದನ್ನು ತೆಗೆದುಕೋ" ಎ೦ದಿತು.ಆದರೆ ಮಾದ "ಅಲ್ಲ ಅದು ನನ್ನದಲ್ಲ ನನಗದು ಬೇಡ .ನನಗೆ ಕಬ್ಬಿಣದ ಕೊಡಲಿ ಬೇಕು "ಎ೦ದಾಗ ಮಾದನ ಸತ್ಯ ಸ೦ಧತೆಗೆ ಮೆಚ್ಚಿ ಆದೇವತೆ ಮತ್ತೊಮ್ಮೆ ನೀರಿನಲ್ಲಿ ಮುಳುಗಿ ಮೂರೂ ಕೊಡಲಿಗಳನ್ನು ಕೊಟ್ಟು " ಮಾದಾ! ನಿನ್ನ ಪ್ರಾಮಾಣಿಕತೆಗೆ ಮೆಚ್ಚಬೇಕು .ಇದೋ ನಿನಗೆ ಮೂರೂ ಕೊಡಲಿಗಳನ್ನು ಕೊಡುತ್ತಿದ್ದೇನೆ. ಇನ್ನು ಮು೦ದೆಹೀಗೆಯೇ ಸತ್ಯ ಸ೦ಧನಾಗಿ ಬಾಳು ನಿನಗೆ ಒಳ್ಳೆಯದಾಗಲಿ" ಎ೦ದು ಬ೦ಗಾರದ ಮತ್ತು ಬೆಳ್ಳಿಯ ಕೊಡಲಿಗಳನ್ನು
ಬಹುಮಾನವಾಗಿಕೊಟ್ಟಿತು.ಮಾದನು ಸತ್ಯಸ೦ಧನಾಗಿ ಬಹುಕಾಲ ಬಾಳಿದನು.
                                                                  
                                                                                               

No comments:

Post a Comment