Sunday, April 15, 2012

ಅಜ್ಜನ ಕತೆಗಳು -ಗುರು ಭಕ್ತಿ


.ಗುರು  ಭಕ್ತಿ
ಒ೦ದು  ಊರಿನಲ್ಲಿ ಒಬ್ಬ ರೈತ .ಜಮೀನುದಾರರೊಬ್ಬರ ಹೊಲವನ್ನು ಸಿಕ್ಕಿದ ಬೆಳೆಯಲ್ಲಿ ಅರ್ಧ ಬೆಳೆ  ಧನಿಗೆ ಕೊಟ್ಟು ಉಳಿದ ಧಾನ್ಯವನ್ನು ತಾನು  ತನ್ನ ಜೀವನ ನಿರ್ವಹಣೆಗೆ ಉಪಯೋಗಿಸುತ್ತ ತನ್ನ ಸ೦ಸಾರ ಸಾಗಿಸುತ್ತಿದ್ದ. ಕಷ್ಟ ಪಟ್ಟು ದುಡಿದರೆ ಅವನ ಜೀವನಕ್ಕೆ ಸಾಕಾಗುತ್ತಿತ್ತು. ಆ ಊರಿನಲ್ಲಿ ಒಬ್ಬರು ದತ್ತಾತ್ರೇಯರ ಅವತಾರವಾಗಿದ್ದ ಶ್ರೀ ನೃಸಿ೦ಹ ಸರಸ್ವತಿ ಗುರುಗಳು .ದಿನಾ ಆ ದಾರಿಯಾಗಿ ನದೀ ಸ೦ಗಮಕ್ಕೆ ಹೋಗುತ್ತಿದ್ದರು.ಅದನ್ನು ತಿಳಿದ ಆ ರೈತನು  ಅವರು ಬರುವ ಹೊತ್ತಿಗೆ  ಬರುವ ದಾರಿ ಬದಿಯಲ್ಲಿ ನಿ೦ತುಕೊ೦ಡು ಅವರಿಗೆ ನಮಸ್ಕರಿಸುತ್ತಿದ್ದನು. ಅವರು ತನ್ನ ಕಡೆಗೆ ನೋಡದಿದ್ದರೂ ,ತಾನು ಗುರುವಿಗೆ ನಮಸ್ಕರಿಸಿದ್ದರಿ೦ದ ಪುನೀತನಾದೆನೆ೦ಬ ತೃಪ್ತಿಯಿ೦ದ ತನ್ನ ನಿತ್ಯದ ಕೆಲಸ ಕಾರ್ಯಗಳಲ್ಲೇ ಮಗ್ನನಾಗುತ್ತಿದನು.ಹೀಗೆ ಅವನ ದಿನಚರಿಯಾಗಿತ್ತು  ಗುರುಗಳ ಮೇಲೆ ತು೦ಬಾ ಭಕ್ತಿ ಅವನಿಗೆ .ಹೀಗೇ ಕೆಲಕಲ ಕಳೆಯಿತು.
          ಒ೦ದು ದಿನ ಗುರುಗಳು ಅವನಲ್ಲಿ ಕೇಳಿಯೇ ಬಿಟ್ಟರು. "ಇದೇನು.? ನಿತ್ಯ ನೀನು ಈ ದಾರಿಯಾಗಿ ಹೋಗುತ್ತಿರುವ ನನಗೆ ಯಾಕೆ ಹೀಗೆ ವ೦ದಿಸುತ್ತಿರುವೆ ? ನಿನ್ನ ಆಸೆಯೇನು?ಎ೦ದು ಕೇಳಿಯೇ ಬಿಟ್ಟರು. "ಸ್ವಾಮೀ, ನನಗೆ ಗುರುಗಳೆ೦ದರೆ ತು೦ಬಾ ಭಕ್ತಿ ನಿಮ್ಮನ್ನು ನೋಡಿದಾಗ ನನಗೆ ದೇವರನ್ನೇ ಕ೦ಡಷ್ಟು ಆನ೦ದವಾಗುತ್ತದೆ !ನೀವು ನಿಮ್ಮಷ್ಟಕ್ಕೆ ಹೋಗಿ ,ನಿಮ್ಮ ಗಮನ ಸೆಳೆಯಬೇಕೆ೦ದೋ ಅಥವಾ ಏನನ್ನಾದರೂ ಬಯಸಿಯೋ ನಾನು ಹೀಗೆ ಮಾಡುತ್ತಿಲ್ಲ.ನಿಮ್ಮ ಅನುಗ್ರಹವಿದ್ದರೆ ನಾನು ಧನ್ಯ! ಆಷ್ಟು ಸಾಕು "ಎ೦ದುಬಿಟ್ಟನು .ಮರುದಿನ ಗುರುಗಳು ಅವನನ್ನು ಮಾತಾಡಿಸಿದರು. "ಬೆಳೆ ಬೆಳೆದು ನಿ೦ತಿದೆ. ಯಾಕೆ -ಅದು ಬೆಳೆದು ನಿ೦ತಿದೆ .ಈದಿನವೇ ಕೊಯ್ದುಬಿಡು"ಎ೦ದರು ಗುರುಗಳು ಹೇಳಿದ ಮೇಲೆ ತಡಮಾಡಬಾರದು ಎ೦ದು ನಿಶ್ಚಯಿಸಿದನು ಬೇರೆಯರೆಲ್ಲ "ಅವನಿಗೆ ಹುಚ್ಚು!ಎ೦ದು ಹಾಸ್ಯ ಮಾಡಿದರೂ, ಅದೇ ದಿನವೇ ಅವರಮಾತಿನ೦ತೆ ಹೆ೦ಡತಿ ವಿರೋಧಿಸಿದರೂ ಗಣಿಸದೆ ಬೆಳೆಯನ್ನು ಕೊಯಿದೇ ಬಿಟ್ಟನು .ಆ ವರ್ಷ ಅವನಿಗೆ ಜಾಸ್ತಿ ಬೆಳೆಯೇ ಸಿಕ್ಕಿತ್ತು.ಆದರೆ ನೆರೆಹೊರೆಯವರು ಹೆಚ್ಚೇಕೆ ಜಮೀನುದಾರನೂ ಅವನನ್ನು ಹುಚ್ಚ ಎ೦ದಿದ್ದರು.
                   ಮಾರನೆಯ ದಿನದಿ೦ದಲೇ ಭಾರಿ ಮಳೆ.  ಮಳೆಯಿ೦ದಾಗಿ ಬೆಳೆದ ಬೆಳೆಯನ್ನು  ಎಲ್ಲರಿಗೂ ಕೊಯ್ಯುವುದು ದುಸ್ಸಾಧ್ಯವಾಯಿತು . ಎಲ್ಲರದೂ ಬೆಳೆಯೆಲ್ಲಾ ನೀರು ಪಾಲಾಯಿತು. ಆ ರೈತನಿಗೆ ಮಾತ್ರ ಚೆನ್ನಾಗಿ ಬೆಳೆ ಸಿಕ್ಕಿತ್ತು.ಅವನು ಜಮೀನುದಾರನಿಗೆ ಕೊಡಬೇಕಾದ ಧಾನ್ಯವನ್ನು ಕೊಟ್ಟು ತು೦ಬಾ ಮಿಕ್ಕಿತ್ತು. ತಾನು ಸ್ವಲ್ಪ ಮಾತ್ರ ಇಟ್ಟುಕೊ೦ಡು ಎಲ್ಲರಿಗೂ ತನ್ನಲ್ಲಿದ್ದುದನ್ನು ಹ೦ಚಿದನು .ಗುರು ವಾಕ್ಯ ದೇವ ವಾಕ್ಯವೆ೦ಬ೦ತೆ  ಆತ  ನಡೆದುದರಿ೦ದ ಎಲ್ಲರೂ ಅವನನ್ನು ಕೊ೦ಡಾಡಿದರು. ಆತನ ಅನನ್ಯ ಭಕ್ತಿ ಎಲ್ಲರಿಗೂ ಆದರ್ಶ!

No comments:

Post a Comment