Monday, January 11, 2016

varsharambha

                                                         ವರ್ಷಾರಂಭ                        

ನನಗೆ ಬರೆಯುವುದೊಂದು ಹವ್ಯಾಸ.ಮೊದಲಿಂದಲೂ ಬರೆಯುತ್ತಿರಲಿಲ್ಲ. ಅಮೇರಿಕಾಕ್ಕೆ ಬಂದಿರುವಾಗ ವ್ಬೇರೇನೂ ಕೆಲಸವಿಲ್ಲದೆ ಸಮಯ ಕಳೆಯುವುದಕ್ಕೆಂದು ಒಬ್ಬ ಮಗ ಃಅಗೆಯೇ ಕುಳಿತಿರುವುದಕ್ಕೆ ಬೇಸರವಾಗುದಾದರೆ ಏನಾದರೂ ಬರೆದುಕೊಂಡಿದ್ದರೆ ಸಮಯವೂ ಕಳೆಯಬಹುದು ಮಾತ್ರವಲ್ಲ ನಿಮ್ಮ ಅನುಭವಗಳು ಉಳಿದರೆ ನೆನಪಾದಾಗ ಮತ್ತೊಮ್ಮೆ ಓದಬಹುದು.ನಿಮ್ಮ ಅಮೇರಿಕಾ ಪ್ರವಾಸದ ಅನುಭವವನ್ನೇ ಬರೆಯಬಹುದು ಎಂದೆಲ್ಲ ಹೇಳಿದ.ನಿಜಕ್ಕೂ ನನಗೆ ಬರೆಯುವಾಗ ಕೈನಡುವುವುದುದೆ ಅದಕ್ಕೆ ಕೈಬರಹ ಈ ನಡುಕದಿಂದ ಓರೆ ಕೋರೆಯಾಗುತ್ತದೆ ಎಂದು ಮೊದಲಿಂದಲೂ ಬರೆಯುವ ಅಭ್ಯಾಸವೇ ಬಿಟ್ಟು ಹೋಗಿತ್ತು. ಕಂಪ್ಯೂಟರ್ ನಲ್ಲಿ ಟೈಪ್ ಮಾಡುವುದೆಂದು ಅವನೇ ಹೇಳಿಕೊಟ್ಟದ್ದರಿಂದ ಟೈಪ್ ಮಾಡಲುತೊಡಗಿದೆ. ಮತ್ತೆ ಬರೆಯುವ್ಗುದು ರೂಢಿಯಾಯಿತು. ಉಪವಾಸ ಮಲಗುವುದಾದರೆ ಅರ್ಧ  ರೊಟ್ಟಿಯೂ ನಡೆಯುತ್ತದೆ. ಪೂರ್ಣಪ್ರಮಾಣದ ಲೇಖಕನಲ್ಲದಿದ್ದರೂ ಬರೆಯುವ ಅಭ್ಯಾಸ ಮಾಡಿಕೊಂಡೆ. ಮತ್ತೊಬ್ಬಳು ಸೊಸೆ ಹಾಗೆ ಬರೆದುದನ್ನು ಒಂದು ಬ್ಲೋಗ್ ರೂಪದಲ್ಲಿ ಸಂಗ್ರಹಿಸಲಾಯಿತು. ಮತ್ತೆ ಮಂಗಳೂರಿನ ಮನೆಯಲ್ಲಿಯೂ ಕಂಪ್ಯೂಟರ್ ಇದ್ದುದರಿಂದ ಬರವಣಿಗೆ ಮುಂದುವರಿಯಿತು. ನಾನು ಬರೆದು ಮುಗಿಸಿದ ಅಜ್ಜನ ಕತೆಗಳ ಸಂಗ್ರಹ ನೋಡಿದ ಸಣ್ಣ ತಂಗಿ ಅದನ್ನು ನೋಡಿ " ಯಾಕಣ್ಣ ಇದನ್ನು ಪುಸ್ತ ರೂಪದಲ್ಲಿ ಮುದ್ರಿಸಬಾರದು?" ಎಂದು ಕೇಳಿದ್ದೂ ಅಲ್ಲದೆ ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದು ಕೊಂಡು ಹೋದುದೂ ಆಯಿತು. ಎರಡು ವಾರಗಳಲ್ಲಿ ೨೫ ಕೋಪಿಗಳನ್ನು ಕಳುಹಿಸಿದ್ದೂ ಆಯಿತು. ಅವನ್ನು ನೋಡಿದ ನನಗೂ ಮಂಗಳೂರಿನ  ಒಂದು ಕಡೆ ೧೦೦ ಜೆರೋಕ್ಸ್ ಪ್ರತಿಗಳನ್ನೂ ತೆಗೆಸಿದೆ. ಕೆಲವು ಸಮಯ ಕಳೆದ ಮೇಲೆ ಅದೇ ತಂಗಿ ಪ್ರತಿಯೊಂದನ್ನು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳಿಸಿದಾಗ ಅದನ್ನು ನೋಡಿದವರು ಆ ವರ್ಷದ ಪ್ರಶಸ್ತಿಯನ್ನು ನನಗೇ ಕೊಡಿದರು. ಎಲ್ಲಕ್ಕು ಮೂಲ ಕಾರಣ ಸಣ್ನ ತಂಗಿ.ಅವಳು ತುಂಬ ಪುಸ್ತಕಗಳನ್ನು ಬರೆದು ಹಲವಾರು ಪ್ರಶ್ಸ್ತಿಗಳನ್ನು ಬಾಚಿದವಳು ಒಂದು ಅಣ್ಣನಿಗೂ ಸಿಗಲಿ ಎಂದೋ ಹೇಳಲಾಗುವುದಿಲ್ಲ.ಅಂತೂ ನನಗೊಂದು ಪ್ರಶಸ್ತಿಯೂ ಬಂತು. ಹಾಗೆ ನೋಡಿದರೆ ನನಗೊಂದು ಪ್ರಶಸ್ತಿ ಸಿಕ್ಕಿದ್ದಾದರೂ ಅಯಾಚಿತವಾಗಿ ಮಾತ್ರವಲ್ಲ. ಅಯೋಚಿತವಾಗಿ. ಅಂತೂ ಕಾಲಹರಣಕ್ಕೆಂದು ಬರೆಯುವುದಕ್ಕೆ ಉಪಕ್ರಮಿಸಿದ್ದಕ್ಕೆ ಒಂದು ಪ್ರಶಸ್ತಿಯೂ ಬಂದುದು ತುಂಬ ಕುಶಿ ತಂದಿತು.
 ಬರೆಯುವುದನ್ನು ಅಲ್ಲಿಗೇ ನಿಲ್ಲಿಸಲಿಲ್ಲ. ಬ್ಲೊಗ್ ಬರೆದಂತೆ ಕೆಲವು ಪ್ರವಾಸದ ಅನುಭವಗಳನ್ನೂ ಬರೆಯುತಿದ್ದೆ. ಅಂತೂ ಮೊಮ್ಮಕ್ಕಲನ್ನು ನೋಡಲು, ಅವರೊಂದಿಗೆ ಸಮಯ ಕಳೆಯಲು ಬಂದರೆ ಹೀಗೆ ಎಡೆ ಸಿಕ್ಕಿದಾಗ ಬರೆಯುತಿದ್ದೆ. ಈಗ ಸಮಯ ಸಿಗುವುದೂ ಕಡಿಮೆ ಮಾರೆವಲ್ಲ. ಮಾತ್ರವಲ್ಲ ಅವರು ಶಾಲೆಗೆ ಹೋಗಲು ಶುರು ಮಾಡಿದೊಡನೆ ಅವರ ಬಳಗವೂ ದೊಡ್ಡದಾಗಿದೆ. ನಮ್ಮದೋ ನಮ್ಮ ದೇಶೀಯ ಶೈಲಿಯ ಆಟಗಳು ಅವರಿಗೆ ರುಚಿಸುವುದಿಲ್ಲ ಮಾತ್ರವಲ್ಲ ಅವರ ಗೆಳೆಯರೊಂದಿಗೆ ಇಲ್ಲಿಯ ಭಾಷೆಯಲ್ಲೇ ಮಾತಾಡಿ  ಒಗ್ಗಿ ಹೋದುದರಿಂದ ಮನೆಯಲ್ಲಿ ನಾವು ಎಷ್ಟೇ ಹೇಳಿದರೂ

ಮನೆ ಭಾಷೆ ಮರೆತು ಬಿಡುತ್ತಾರೆ. ಮನೆಯೊಳಗೆ ಅಥವಾ ಕೆಲವು ಗೆಳೆಯರು ಮಾತ್ರ ಮಾತೃಭಾಶೆ ಆದಿದರೆ ಹೆಚ್ಚಿನವರು ಇಂಗ್ಲಿಷ್ ಭಾಷೆಯನ್ನೇ ಆಡುವುದರಿಂದ ಮಕ್ಕಳಿಗೆ ಅದೇ ಭಾಷೆಯಲ್ಲೇ ಮಾತಾಡುತ್ತಾರೆ.ನಾವು ಮನೆಭಾಷೆಯಲ್ಲಿ ಮಾತಾಡಿದರೂ ಅವರ ಉತ್ತರ ಇಂಗ್ಲಿಷ್ ಭಾಷೆಯಲ್ಲೇ ಇರುತ್ತದೆ. ಕೆಲವು ಮಕ್ಕಳು ಮಾತ್ರ ಏನೊ ಕಾಟಾಚಾರಕ್ಕಾಗಿಯೋ ಏನೋ  ಮನೆಭಾಷೆ ಆಡುತ್ತಾರೆ. ಇಲ್ಲಿ ಭಾಷೆಯನ್ನು ಉಳಿಸಿಕೊಳ್ಳಲು ಹೆಚ್ಚಿನವರು ಪ್ರಯತ್ನ ಪಡುತ್ತಿರುತ್ತಾರೆ. ಕೆಲವೂ ಊರುಗಳಲ್ಲಿ ಕನ್ನಡ ತರಗತಿಗಳನ್ನು ರಜೆಯ ದಿವಸ ತೊಡಗಿ ಹಿರಿಯರ ಒತ್ತಾಯಕ್ಕೆ ಕಟ್ಟುಬಿದ್ದು ಮಕ್ಕಳು ಬರೆಯಲು ಓದಲು ಶುರು ಮಾಡಿದ್ದಾರಾದರೂ ಎಲ್ಲವೂ ಹಿರಿಯರ ಒತ್ತಾಯಕ್ಕಾಗಿ ಎಂಬುದು ಅವರ ಅಂಬೋಣ! ಆದರೆ ಒತ್ತಾಯಕ್ಕೆ ಕಟ್ಟುಬಿದ್ದು ಹೀಗೆ ಸ್ವಲ್ಪವಾದರೂ ಕಲಿತುಕೊಂಡರೆ ಬುದ್ಧಿವಂತ ಮಕ್ಕಳು ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವವರಂತೆ ಕನ್ನಡದ ಹಾಡುಗಳನ್ನೋ ದಾಸರ ಪದಗಳನ್ನೋ ಕಲಿತುಕೊಳ್ಳುತ್ತಾರೆ.
ಕೆನಡಾಕ್ಕೆ ಬಂದವನಿಗೆ ಮೊದಲ ವಾರದಲ್ಲಿಯೇ ಹೊಸ ಹೊಸ ಅನುಭವಗಳದುವು. ಸೋಮವಾರ ಬಂದುದಷ್ಟೆ. ಅದೇ ದಿನ ಚಳಿಯೂ ಜೋರಿತ್ತು. ರಾತ್ರೆ ಬೆಳಗಾಗುವಾಗ ಹೊರಗೆ ನೋಡಿದರೆ ಈಲ್ಲೆಲ್ಲಿಯೂ ಮಂಜು ತುಂಬಿಕೊಂಡು ಇಡೀ ಪ್ರದೇಶವೇ ಹಿಮದಿಂದ ಮುಚ್ಚಿಕೊಂಡಿತ್ತು. ರಾತ್ರೆ ಹೊರಗೆ ನೋಡಿದಾಗಲೇ ಬೆಳದಿಂಗಳೊಂದಿಗೆ ಇಡೀ ಪ್ರದೇಶವೇ ಮಂಝು ಮುಸುಕಿಕೊಂಡು ಹಾಳು ಚೆಲ್ಲಿದಂತೆಯೋ, ಮೊಸರಿನ ಗಟ್ಟಿ ತುಂಬಿಕೊಂಡಾಂತೆಯೋ ತೋರುತಿತ್ತು. ಮೊದಲೇ ಚಳಿ ಬೇರೆ ಮಂಜು ಮುಸುಕಿದ್ದರಿಂದ ಹೊರಗೆ ಬಿಳಿ ಬಣ್ಣದ ರಂಗೋಲಿ ಪುಡಿಯನ್ನು ಹರಡಿದಂತಿದ್ದ ವಾತಾವರಣ ಬೆಳಗ್ಗೆ ನಮಗೆ ಕಾದಿತ್ತು. ಮಗನ ಹಾಗೆ ಹೊರಗೆ ಹೋಗಬೇಕಿದ್ದರೆ ಕಾರು ಹೊರಡಲೂ ಮಂಜನ್ನು ಸರಿಸಿ( ಹೇಳಿದಷ್ಟು ಸುಲಭವೇನಲ್ಲ) ಮತ್ತೆ ಹೋಗಬೇಕಾಗುವುದರಿಂದ ನೆರೆಹೊರೆಯವರೆಲ್ಲರೂ ಹಾರೆ ಗುದ್ದಲಿ ಹಿಡಕೊಂಡು ಮಂಜು ಸರಿಸುವ ಕಾಯಕಕ್ಕೆ ಹೊರಟಿದ್ದರು. ನಮಗಂತೂ ಹೊರಗೆ ಹೋಗುವ ಅಗತ್ಯವಿಲ್ಲವಲ್ಲ!
ಆದರೆ ಇಲ್ಲಿ ಕೆಲವೊಮ್ಮೆ ಹೊರಗೆ ಹೋಗಬೇಕಾಗುತ್ತದೆ. ಇಲ್ಲಿಯ ಭಾರತಿಯರು ವಾರದ ಕೊನೆಯನ್ನು ಕಳೆಯುವುಕ್ಕಾಗಿಯೂ ಆಯಿತೆಂದು ಕೆಲವೊಂದು ಕೂಟಗಳನ್ನು ಏರ್ಪಡಿಸುತ್ತಾರೆ ಕನ್ನಡ ಕೂಟ ಹವ್ಯಕ ಕೂಟ, ಹಾಗೆ ಕೆಲವೊಂದು ಹಬ್ಬಗಳನ್ನು ಮಕ್ಕಳ ಜನ್ಮದಿನಗಳನ್ನು ಈ ವಾರದ ಕೊನೆಗೇ ಇಟ್ಟುಕೊಳ್ಳುತ್ತಾರೆ. ಬಂದ ಮೂರನೆಯ ದಿನ ಹೊಸ ವರ್ಷವನ್ನು ಸ್ವಾಗತಿಸುವ ಕೂಟವಿತ್ತು ಹತ್ತಿರದ ಒಬ್ಭರ ಮನೆಯಲ್ಲಿ. ಇಪ್ಪತ್ತು ಮೂವತ್ತು ಮೈಲುಗಳ ದೂರವಾದರೂ ಜನ ಬರುತ್ತಾರೆ. ಹೀಗೆ ನನ್ನ ಮಗನ ಗೆಳೆಯರೊಬ್ಬರ ಮನೆಯಲ್ಲಿ ಆರೇಳು ಕುಟುಂಬದವರು ಒಟ್ತು ಇಪ್ಪತ್ತೈದು ಜನ ಮಕ್ಕಳು ದೊಡ್ಡವರು ಸೇರಿರಬಹುದು. ಸಂಜೆ ಆರೇಳು ಗಂಟೆಗೆ  ಬಂದವರು ಆ ಸುದ್ದಿ ಈ ಸುದ್ದಿ ಮಾತಡಿ ಹೊತ್ತು ಕಳೆಯುತ್ತ ಎಂಟು ಗಂಟೆಯಾಗಬೇಕಾದರೆ ಕೆಲವು ಸ್ನೇಕ್ಸ್ ಬರುವವರು ಮನೆಯಲ್ಲಿ ಮಾದಿ ತಂದದ್ದು,ಕುಡಿಯಲು ಜ್ಯೂಸ್ ಹೀಗೆ ಒಂದು ಸಮಾರಾಧನೆ ಮುಗಿದು ,ಮತ್ತೆ ಮಾತು ಕತೆ ಮುಂದುವರಿಯಿತು. ಹನ್ನೊಂದು ಗಂಟೆಗೆ ಊಟದ ವ್ಯವಸ್ಥೆ! ಕೆಲವೊಂದು ಸ್ವೀಟ್ಸ್ ಗಳು  ಪಲ್ಯ ಸಾಂಬಾರು ಹೀಗೆ ತಂದದ್ದು ಎಲ್ಲ ತಿಂದಾಗುವಾಗ ಹೊಟ್ಟೆ ತುಂಬಿದ್ದೂ ಗೊತ್ತಾಗಿರಲಿಲ್ಲ.ಹಾಗೆ ಊಟ ಮುಗಿದ ಮೇಲೆ ರಾತ್ರೆ ಹನ್ನೆರಡು ಗಂಟೆಯಾಗುವುದನ್ನೇ ಕಾಯುತ್ತಿದ್ದಂತೆ  ಹೊಸ ವರ್ಷಾರಂಭವನ್ನು ಸ್ವಾಗತಿಸುವ ಸಮಯ ಬಂತು ಹಪ್ಪ್ಯ್ ನ್ಯೂ ಯೀಯರ್ಸ್ ದೇ ಎನ್ನುತ್ತಾ ಎಲ್ಲರೂ ಹಾಡಿ ಕುಣಿದರು. ಟಿ ವೀಯಲ್ಲೂ ಸ್ವಾಗತಿಸುವ ಸಮಾರಂಭ ತುಂಬಾ ಹಾರ್ದಿಕವಾಗಿತ್ತು. ಬಹುಷ ಈ ಸಮಾರಂಭ ನೋಡಿದ್ದು ಇದೇ ಮೊದಲು.ನೋದ ನೋಡುತ್ತಿದ್ದಂತೆ ಹೊಸ ವರ್ಷವೂ ಬಂತು.ಎಲ್ಲರೂ ಹೊಸ ವರ್ಷಕ್ಕೆ ಶುಭ ಹಾರೈಸುತ್ತ ಮತ್ತೆ ಆ ಲೆಕ್ಕದಲ್ಲಿ ಜ್ಯೂಸ್ ಹಂಚಿದರು ಸಾಲದ್ದಕ್ಕೆ ಮತ್ತೆ ಕಾಫಿ ಯೂ ಸಿಕ್ಕಿತು. ಒಂದೂವರೆ ಗಂಟೆಗೆ ಹೊರಟವರು ಮನೆಗೆ ತಲಪಿದಾಗ ಎರಡು ಗಂಟೆ ಮತ್ತೆ ಮಲಗಿದವರಿಗೆ ಎಚ್ಚರವಾಗುವಾಗ ಆರೂವರೆ ಗಂಟೆ ಬೆಳಗಾಗಿದೆ. ಯೋಗ ಆ ದಿನಕ್ಕೆ ತ್ಯಾಗವಾಗಿತ್ತು. ಬೆಳಗಿನ ಕಾಫಿ ಕುಡಿದು ರುದ್ರ ಹೇಳಿ ಮುಗಿಸಿದಾಗ ಬ್ರೇಕ್ ಫಾಸ್ಟ್ ರೆಡಿ! ಈ ದಿವಸ ಮತ್ತೆ ಸ್ವಲ್ಪ ವಿಶ್ರಾಂತಿ ತೆಕ್ಕೊಂಡು ಸಂಜೆ ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುವ ಪ್ಲೇನ್ ತಯಾರಾಯಿತು. ನಿನ್ನೆ ಸೇರಿದವರೆಲ್ಲ ಸಂಜೆ ಐದು ಗಂಟೆಗೆ ಅಲ್ಲಿ ಸೇರುವುದೆಂದು ತೀರ್ಮಾನವಾದಂತೆ ಆರು ಗಂಟೆಗೆಲ್ಲ  ನಾವು ದೇವಸ್ಥಾನದಲ್ಲಿದ್ದೆವು. ಆದರೆ ಚಳಿ ಮಾತ್ರ ವಿಪರೀತವಾಗಿತ್ತು. ಮಗ ಮೊದಲೇ ಹೇಳಿದ್ದ ಚಳಿ ಹೆಚ್ಚಿದೆಯೆಂದು. ಅಂತೂ ಒಳಗ್ವೆ ಸೇರಿದ್ಸಮೇಲೆ ತೊ<ದರೆಯಿಲ್ಲ. ವಾರದ ಕೊನೆ ಮಾತ್ರವಲ್ಲ, ವರ್ಷದ ಮೊದಲ ದಿನವೆಂದು ಇಡೀ ವರ್ಷ ಎಲ್ಲರಿಗೂ ಒಳ್ಳೆಯದಾಗಲೆಂಬ ಹಾರೈಕೆಯೊಂದಿಗೆ ತುಂಬಾ ಮಂದಿ ಸೇರಿದ್ದರು. ಮುಖ್ಯ ದೇವರಾದ ವೈಷ್ಣೋದೇವಿಯಲ್ಲದೆ ರಾಮ,ಸೀತೆ ಲಕ್ಷ್ಮಣ,ಹನುಮಂತ ಬೇರೆ ಹೀಗೆ ತುಂಬಾ ದೇವರುಗಳಿದ್ದುದರಿಂದ ಕೆಲವರಿಗೆ ಕೆಲವು ದೇವರು ಮಾತ್ರ ಇಷ್ಟವಾಗುವುದರಿಂದ ಎಲ್ಲರಿಗೂ ಬೇಕಾಗುಗ್ವಂತೆ ವಿವಿಧ ದೇವರುಗಳ ಮೂರ್ತಿಗಳಿದ್ದವು. ಎಲ್ಲ ದೇವರುಗಳಿಗೂ ನಮಸ್ಕರಿಸಿ ಆಗುವಾಗ ಒಬ್ಬ ಪುಸ್ತಕ ಮಾರುವವನು ಹಿಂದೂ ಧರ್ಮದ ಬಗ್ಗೆ ಮತ್ತು ಭಗವದ್ಗೀತೆಯ ಬಗ್ಗೆ ಹೇಳುತ್ತ ಈ ದಿನ ಮಾತ್ರ ಇಪ್ಪತ್ತು ಡಾಲರ್ ಬೆಲೆಯ ಗೀತೆ ಪುಸ್ತಕ ಹತ್ತು ಡಾಲರಿಗೆ ಕೊಡುತ್ತೇನೆಂದು ಬಂದವರ್ತೆಲ್ಲರನ್ನ್ಜು ಒತ್ತಾಯಿಸುತ್ತಿದ್ದ. ನನ್ನ ಮಗ ಒಂದು ಪುಸ್ತಕ ಕೊಂಡುಕೊಂಡ. ಇಸ್ಕೋನಿನವರು ಮಾರಲು ಕೊಟ್ಟುದಂತೆ! ಇಷ್ತೇಲ್ಲ ಆಗುವಾಗ ಗಂತೆ ಏಳಾಯಿತು ಒಳಗೆ ಬಂದವರೆಲ್ಲರೂ ಭೋಜನಶಾಲೆಗೆ ಹೋಗಿ ಊತ ಮಾಡುತ್ತಿದ್ದರು.ನಾವೂ ಹೋದೆವು .ಊಟ ಚೆನ್ನಾಗಿತ್ತು.ಊಟ ಮುಗಿಸಿ ಹೊರಗೆ ಬರುವಾಗ ಮತ್ತೊಂದು ಯೋಚನೆ ಬಂತು. ನಮ್ಮ ಗುಂಪಿನವರೊಬ್ಬರು "ಹೇಗೂ ಬಂದವರು ನಮ್ಮ ಮನೆಗೆ ಬಂದು ಛಾ ಕುಡಿದು ಹೋಗಬಹುದೆಂದರು. ಸರಿ ಒಪ್ಪಿಕೊಂಡು ಅವರ ಮನೆಗೆ ಹೋದಾಗ ಅವರು ಒಂದು ತಿಂಗಳ ಹಿಂದೆ ಒಕ್ಕಲಾದ ಮನೆಗೆ ನಾವು ಹೊಸಬರು. ಹೋದ ಮೇಲೆ ಮನೆ ನೋಡಿದ್ದೂ ಆಯಿತು. ಅಲ್ಲಿ ಹೆಣ್ಣು೮ ಮಗಳೊಬ್ಬಳು ತಯಾರಿಸಿದ  ಪಾರ್ಕ್ ನೋಡಿಯೂ ಆಯಿತು. ಮತ್ತೆ ಚಾದೊಂದಿಗೆ ಚರು ಮುರಿ ಮತ್ತೆ ಹಣ್ಣು ತಿಂದು ಹೊರಟದ್ದು ಮಾತ್ರ ಅವರ ಬೇಸ್ ಮೆಂಟಿನಲ್ಲಿದ್ದ ಸಿನೆಮ ಪ್ರೊಜೆಕ್ಟರ್ ನಲ್ಲಿ ಸಿನೇಮ ನೋಡಿದ್ದೂ ಆಯಿತು ಜೊತೆಗೆ ಕುಣಿದದ್ದೂ ಆಯಿತು. ಮತ್ತೆ ಅಲ್ಲಿಂದ ಹೊರಟಾಗ ಮತ್ತೊಬ್ಬರು ನಮ್ಮನ್ನೆಲ್ಲ ಅವರ ಮನೆಗೆ ಕರೆದರು ಸರಿ ಒಬ್ಬರ ಮನೆಯಲ್ಲಿ ಛಾ ಮತ್ತೊಬ್ಬರ ಮನೆಯಲ್ಲಿ ಕಷಾಯ ಎಂದು ಕುಡಿದದ್ದೇ ಕುಡಿದದ್ದು. ಅಲ್ಲಿಂದ ಹೊರಟಾಗ ಒಂಬತ್ತು ಗಂಟೆ ಕಳೆದಿತ್ತು. ಮನೆಗೆ ತಲಪಿದಾಗ ಹನ್ನೊದೂವರೆ. ಮತ್ತೆ ನಿದ್ದೆಗೆ ಜಾರಿದವರು ಹೊಸ ವರ್ಷದ ಮತ್ತೊಂದು ದಿನವನ್ನು ಎಂದರೆ ಮರುದಿನದ ಹವ್ಯಕ ಕೂಟ ಹತ್ತಿರದಲ್ಲಿಯೇ ಇರುವ ದೇವಸ್ಥ್ಆನದಲ್ಲಿ ನಡೆಯಲಿರುವುದರಿಂದ ಅಲ್ಲಿಗೂ ಹೋಗುವುದಿತ್ತು.
ಮರುದಿನ ಶನಿವಾರ. ಕೆಲವು ವರ್ಷಗಳಿಂದ ಶನಿವಾರ ವ್ರತ ಆಚರಿಸುತ್ತಿದ್ದುದರಿಂದ ಈ ದಿನವು ಬೆಳಿಗ್ಗೆ ಸ್ನಾನ ಮುಗಿಸಿ ಸಜ್ಜಿಗೆ ಉಪ್ಪಿಟ್ಟು ತಿಂದಾಯಿತು. ರಾತ್ರೆಯ ಊಟವಿರುವುದರಿಂದ ಮಧ್ಯಾಹ್ನವು ಚಪಾತಿ ತಿಂದು ಆದ ಮೇಲೆ  ಸ್ವಲ್ಪ ವಿಶ್ರಾಂತಿ ತೆಕ್ಕೊಂಡು  ಮೂರು ಗಂಟೆಗೆಲ್ಲ ಸಮ್ಮೇಳನಕ್ಕೆ ಹೊರಟೆವು. ಟೊರೊಂಟೋದಲ್ಲಿ ಒಟ್ಟು ನಲುವತ್ತೈದು ಹವ್ಯಕ ಕುಟುಂಬಗಳಿವೆಯಂತೆ. ಅವುಗಳಲ್ಲಿ ನನ್ನ ಮಗನದೂ ಒಂದು.ನಾಲ್ಕು ಗಂಟೆಗೆ ಕೆಲವರು ಮಾತ್ರ ಬಂದಿದ್ದರು. ಮತ್ತೂ ಕೆಲವರು ಬರುತ್ತಾ ಇದ್ದರು. ಅಂತೂ ಕೆಲವು ಮನೆಗಳಿಂದ ತಂದ ಗೋಳಿಬಜೆ( ನನ್ನ ಸೊಸೆಯೂ ತಂದಿದ್ದಳು) ಮತ್ತೆ ಬೇರೆ ವಡೆಗಳು ಕುಡಿಯುವುದಕ್ಕೆ ಜ್ಯೂಸ್ ಹೀಗೆಲ್ಲ ಮೊದಲಿಗೆ ತೆಕ್ಕೊಂಡೆವು. ಆ ಮೇಲೆ ಸಭಾ ಕಾರ್ಯಕ್ರಮ. ಮೊದಲಿಗೆ ನನ್ನಂತೆ ಬಂದಿದ್ದ ಹಿರಿಯರಿಂದ  ದೀಪ ಬೆಳಗುವ ಕಾರ್ಯಕ್ರಮ ಮುಗಿದ ಮೇಲೆ ಮಕ್ಕಳಿಂದ ಪ್ರಾರ್ಥನ, ಗಣಪತಿ ಪೂಜೆ ಮುಗಿದ ಮೇಲೆ ಸ್ವಘತ ಭಾಷಣವಾಯಿತು. ಮತ್ತೆ ಸಭೆಗೆ ಬಂದಿದ್ದವರು ತಮ್ಮ ಪರಿಚಯ ಹೇಳುವುದು ಆದ ಮೇಲೆ ಮಕ್ಕಳಿಂದ ಟೇಲೆಂಟ್ ಶೋ ಆಯಿತು. ಚಿಕ್ಕ ಮಕ್ಕಳು ಶ್ಲೋಕಗಳನ್ನು ಪದ್ಯಗಳನ್ನು ಹಾಡಿದರು. ಕೊನೆಗೆ ದೊಡ್ಡವರಿಬ್ಬರ ಲಘು ಕಿರು ನಾಟಕವಾಯಿತು. ಮತ್ತೆ ಊಟ ಚೆನ್ನಾಗಿತ್ತು. ಎಲ್ಲ ಮುಗಿದ ಮೇಲೆ ದೊಡ್ಡವರು ಚಿಕ್ಕವರು ಎಲ್ಲ ಒಟ್ಟಿಗೆ ಸ್ಟೇಜಿಯಲ್ಲಿ ಮತ್ತೆ ಕೆಳಗೆ ಡೇನ್ಸ್ ಕಾರ್ಯಕ್ರಮ ಸಿನೆಮಾ ಹಾಡಿನೊಂದಿಗೆ ಹಾಡಿಗೆ ತಕ್ಕಂತೆ ಕುಣಿತ ನಡೆಯಿತು. ೧೦ ಘಂಟೆಗೆ ಎಲ್ಲ ಮುಗಿಸಿ ನಾವೆಲ್ಲ ಮನೆಗೆ ಹಿಂತಿರುಗಿ ಬಂದೆವು. ಹೀಗೆ ವರ್ಷಾರಂಭದ ಮೂರು ದಿನಗಳು ಮೂರು ಕಾರ್ಯಕ್ರಮ ಕೊನೆಗೆ ಮೂರನೆಯ ದಿನ ಸಮೀಪದ ಹಿಂದೂ ದೇವಾಲಯದ ವಿಶೇಷ ವರ್ಷಾರಂಭದ ಆಚರಣೆಯಂತೆ. ತಾರಿಕು ಮೂರು ಆದರೂ ಎಲ್ಲರೂ ಸೇರಬಹುದಾದ ದಿನವಾದ್ದರಿಂದ ತುಂಬ ಜನ ಸೇರಿದ್ದರು ಅಲ್ಲಿಯೂ ಎಲ್ಲ ದೇವರುಗಳೂ ಇದ್ದರು ಮುಖ್ಯವಾಗಿ ಹನುಮಂತ, ಅಮ ಮೊದಲಾದ ದೇವರುಗಳ ಭಜನೆ ಮುಗಿದ ಮೇಲೆ ಮಂಗಳಾರತಿ. ಇಲ್ಲಿಯ ಮಂಗಳಾರತಿ ಒಂದು ವಿಶೇಷರೀತಿಯದು! ಪೂಜಾರಿ ದೇವರ ಹತ್ತಿರ ನಿಂಟು ಆರತಿ ಎತ್ತಿದರೆ ಭಕ್ತರೆಲ್ಲ ಕೆಳಗೆವ್ ಸರದಿಯಂತೆ ಮುಂದೆ ಬಂದು ದೇವರಿಗೆ ಆರತಿಯೆತ್ತಬಹುದ್ಸು. ಎಲ್ಲ ಮುಗಿದ ಮೇಲೆ ಪ್ರಸಾದ ಹಂಚೋಣ. ತೀರ್ಥ ಮತ್ತೆ ಮತ್ತೆ ಬೇರೇನಾದರೂ ಸಿಹಿಯದು. ಇವೆಲ್ಲ ಆದ ಮೇಲೆ ಸೀದಾ ಭೋಜನ ಶಾಲೆಗೆ. ಅಲ್ಲಿ ಊಟದ ತಟ್ಟೆ ಸ್ಪೂನ್ ತಿಶ್ಯು ಕಾಗದ ಎಲ್ಲ ಇಟ್ಟಿರುತ್ತಾರೆ. ಅವನ್ನು ತೆಕ್ಕೊಂಡು ಮುಂದೆ ಹೋಗುವಾಗ ಅನ್ನ ಸಾಂಬಾರು,ಪಲ್ಯ ಒಂದು ಚಪಾತಿ ಸ್ವಲ್ಪ ಪಾಯಸ ಎಲ್ಲ ಕೊಡುತ್ತಾರೆ ಎಲ್ಲ ತೆಕ್ಕೊಂಡು ಕೆಳಗೆವ್ ಕುಳಿತು ಊಟ. ಊಟ ಮುಗಿಸಿ ತಟ್ಟೆ  ಕೊಟ್ಟು ಹೊರಗೆ ಹೋಗುವುದು. ಹೊರಸ್ಗ್ಫ಼ೆ ಬಾಅಂದು ನಾವೆಲ್ಲ ಎಲ್ಲರಂತೆ ಮನೆಗೆ ಹೊರಟೆವು. ಹಾಗೆ ಮೂರು ದಿನಗಳಲ್ಲಿ ಮೂರು ದೇವಸ್ಥಾನಗಳನ್ನು ನೋಡಿದ್ದೂ ಆಯಿತು. ಪ್ರಸಾದ ಭೋಜನ ಮುಗ್ಫ಼ಿಸಿದ್ದೂ ಆಯಿತು. ಅಂತೂ ವರ್ಷದ ಆರಂಭ ಉಜ್ವಲವಾಗಿತ್ತು.