Friday, March 22, 2013

ತಂಬುಳಿ

                                        ತಂಬುಳಿ
"ತಣ್ಣಿತು ಹುಳಿ" ಹೇಳಿಯೋ ತಂಪಿನ ಹುಳಿ ಹೇಳಿಯೋ ಅರ್ಥ ಇಕ್ಕು. ಅಂತೂ ಮದಲಾಣೋವು ಹೀಂಗಿಪ್ಪ ಒಂದೊಂದು ಕೂಟಿನ ಊಟಕ್ಕೆ ಉಪಯೋಗುಸಿಗೊಂಡಿತ್ತಿದ್ದವು ಹೇಳುವದು ಖಂಡಿತ. ಅಪರ ಕ್ರಿಯಂಗೊಕ್ಕೂ ಈ ತೋವೆ, ತಂಬುಳಿ ಅಗತ್ಯ.ಆದರೆ ನಿತ್ಯಕ್ಕೆ ದಿನಕ್ಕೊಂದು ನಮುನೆದು, ತಂಬುಳಿ ಮಾಡಿಯೇ ಮಾಡಿಗೊಂಡಿತ್ತಿದ್ದವು ಹೇಳಿದರೆ ಎಂಗಳ ಮನೆಲ್ಲಿ ಅಜ್ಜಂಗೆ,ಮತ್ತೆ ಅಪ್ಪಂಗೆ ಇದು ಬೇಕೇ ಬೇಕಾದ ಕಾರಣ ಮಾಡ್ಯೊಂಡಿತ್ತಿದ್ದವು. ಆನು ಸಣ್ಣಾಗಿಪ್ಪಗ ಉಂಡು ಗೊಂತಿದ್ದು. ತಂಬುಳಿ ಹೊಲಕ್ಕೊಡಿದು ಆಗಿಕ್ಕು,ಅಥವಾ   ಹಸಿ ಶುಠಿ, ಉರಗೆ,ಪುಳಿಯಾರ್ಳೆ,ನೀರುಳ್ಳಿ, ಮೆಂತೆ ಹೀಂಗೆ ಒಟ್ಟಾರೆ ತಂಬುಳಿ ಇಕ್ಕೇ ಇಕ್ಕು.  ಈಗಾಣ ಸಾರಿನ ತುಂಬುವ ಜಾಗೆ ತಂಬುಳಿಗಿಕ್ಕು ಹೇಳಿದರೆ ತಪ್ಪಾಗ. ಸಾರು ಮಾಡುತ್ತರೂ ಬೋಳು ಸಾರು. ತೊಗರಿ ಬೇಳೆಯೋ, ಮತ್ತೆ ಟೊಮೆಟೋ ಹೀಂಗೆಲ್ಲ ಇರ. ಹೇಳಿದರೆ ಏನಾದರೂ ನೆಟ್ಟು ಮಾಡಿದ ತರಕಾರಿ ಮಾಂತ್ರ ಬೇಸಗೆಲ್ಲಿ ಗೆದ್ದೆಲ್ಲಿ ನೆಟ್ಟು ಮಾಡಿಗೊಂಡಿಕ್ಕು. ಗೆದ್ದೆ ಕೊಯಿದಾದ ಮೇಲೆಗೆದ್ದೆಲ್ಲಿ ಬೇರೆ ಬೇರೆ ತರಕಾರಿ ಮಾಡುಗು. ಪಲ್ಯ.ಒಟ್ಟು ಹಾಕಿ ಬೆಂದಿ ಹೇಳಿದರೆ ಅವಿಲು. ಹೆಚ್ಚಾಗಿ ಹೆಜ್ಜೆಯೇ ಮಾಡುವದು. ಬೆಶಿ  ಬೆಶಿಹೆಜ್ಜೆ ಗ ತಣ್ಣಂಗಿಪ್ಪ ತಂಬುಳಿ ಸೇರುಸಿ ಉಂಬಲೂ ಲಾಯೊಕ.  ಆರೋಗ್ಯಕ್ಕೂ  ಒಳ್ಳೆದು ಹೇಳುವದು ಅವಕ್ಕೆ ಗೊಂತಿತ್ತು.
   ಷಡ್ರಸ ಹೇಳುತ್ತವು.ಈ ಆರು ರಸಂಗಳಲ್ಲಿ ಒಗರು ಅಥವಾ ಚೊಗರು ಹೊಟ್ಟಗೆ ಹೋಪಲೆ ಈ ಕೊಡಿ ತಂಬುಳಿ ಮಾಡುವದಡೊ. ಕೊಡಿ ಹೇಳಿದರೆ ಗುಡ್ಡೆಗೆ ಹೋದರೆ     ಬೀಜದ ಕೊಡಿ, ದಡ್ಡಾಲ ಕೊಡಿ,ನೆಕ್ಕರಿಕನ ಕೊಡಿ,ಚೇರೆ ಕೊಡಿ ತಗಿ ಕೊಡಿ ಹೀಂಗೆಲ್ಲ ತರ ತರದ ಕೊಡಿಗಳ ತಂದು (ಆದರೆ ಕೊಡಿ ಎಳತ್ತಾಗಿರೆಕ್ಕು) ತೆಂಗಿನ ಕಾಯಿ ಸೇರುಸಿ ಕಡವದಡೊ.ಇದರೆಲ್ಲ ಹಸಿಯೇ ಉಂಬದು. ಒಟ್ಟಾರೆ ತಂಬುಳಿಲ್ಲಿಪ್ಪ ಹುಳಿ ರುಚಿ ಹುಳಿ ಮಜ್ಜಿಗೆಂದಲೇ ಸಿಕ್ಕುವದು. ಹುಳಿ ಮಜ್ಜಿಗೆ ಇಲ್ಲದ್ದರೆ ಬೇರೆ ಹುಳಿ ಸೇರುಸೆಕ್ಕಕ್ಕು.ಮದಲೆಲ್ಲ ಎಲ್ಲ ಮನೆಗಳಲ್ಲಿಯೂ ಕರವ ದನಗಳೋ ಎಮ್ಮೆಗಳೋ ಇಕ್ಕು.ಹಾಂಗೆ ಹುಳಿ ಮಜ್ಜಿಗೆ ತಪ್ಪುಲಿಲ್ಲೆ.ಬರೇ ಹುಳಿ ಮಜ್ಜಿಗೆ ಉಂಬಲಾವುತ್ತಿಲ್ಲೆ. ಈಗಾಣ ಹಾಂಗೆ ಹುಳಿಯಾಗದ್ದ ರೀತಿಲ್ಲಿ ಫ್ರಿಜ್ ನೊಳ ಮಡಗುಲಿಲ್ಲೆ ಅಂಬಗ!ಈಗ ಎಷ್ಟು ಶುದ್ಧ ಹೇಳಿ ಗೊಂತಿದ್ದನ್ನೆ! ತಣ್ಣನೆ ಮಡಗುವದೂ ಫ್ರಿಜಿಲ್ಲಿ,ಹಾಲು ಮಜ್ಜಿಗೆ ಮಸರು ಡಗುವದೂ ಫ್ರಿಜ್ಜೀಲ್ಲಿ.
    ನಾವು ತಿಂಬ ಆಹಾರಲ್ಲಿ ಬೇಕಾದ ವಿಟಾಮಿನ್ನುಗೊ ಬೇಕು ಹೇಳುತ್ತವು ಈಗಾಣ ಡಾಕ್ಟ್ರಕ್ಕೊ. ಅದಕ್ಕೆ ಸಾಕಷ್ಟು ಬೇಳೆಗಳ ತಿನ್ನೆಕ್ಕು ಹೇಳ್ಯೂ ಹೇಳುತ್ತವು. ತಿಂದು ಹೊಟ್ಟೆಲ್ಲಿ ಗೇಸ್ ಉಂಟದರೆ ಮಾತ್ರೆ ತಿನ್ನಿ ಹೇಳಿಯೂ ಹೇಳುತ್ತವು. ತಿಂದ ಅಹಾರ ಸಮ ತೂಕಲ್ಲಿ ಬೇಕು ಹೇಳಿಯೂ ಹೇಳುತ್ತವು. ಹೇಳಿದರೆ ತೂಕ ಮಾಡಿಗೊಂಡು ತಿನ್ನೆಕ್ಕೋ/ ಮದಲಾಣೋವು ಬೆಗರು ಸುರಿಸಿ ಕೆಲಸ ಮಾಡ್ಯೊಂಡು,ಬೇಳೆ ನಿತ್ಯ ತಿನ್ನದ್ದರೂ ಆರೋಗ್ಯಲ್ಲಿತ್ತಿದ್ದವು. ನಿತ್ಯ ಅವಕ್ಕೆ ಶುಗರಿನ ಮಾತ್ರೆಯೋ, ಬಿ ಪಿ ಮಾತ್ರೆಯೋ ಬೇಕಾಗಿ ಬಯಿಂದಿಲ್ಲೆ. ಕಾರಣ ಅಂದು ತಿಂದುಗೊಂಡಿದ್ದ ಆಹಾರದ ಗುಣಂದಲೇ ಆಗಿರೆಕ್ಕಲ್ಲದೋ?ಚಾ,ಕಾಫಿ ಕುಡಿಯದ್ದೆ ಉದಿಯಪ್ಪಗ ನೆಟ್ಟಿಗೆ ನೀರು ಬಿಡುಲೆ ಹೋದರೆ ಮನೆಗೆ ಬಪ್ಪಗ ಹನ್ನೊಂದು ಗಂಟೆಯಾದರೂ ಅಕ್ಕು. ಒಳ್ಳೆತ ಹಶುವಾಗ್ಯೊಂಡಿಕ್ಕು. ಬಂದು ಮಿಂದಿಕ್ಕಿ ಜಪ ಮಾಡಿ ಹೆಜ್ಜೆ ಉಂಬದು. ಈ ಹೊಲಕ್ಕೊಡಿ ತಂಬುಳಿ, ಮತ್ತೆ ಒಟ್ಟು ಹಾಕಿದ ಒಂದು ಬೆಂದಿ,ಮಜ್ಜಿಗೆ ಉಪ್ಪಿನ ಕಾಯಿ ಹೊಟ್ಟೆ ತುಂಬ ಉಂಡಿಕ್ಕಿ ರಜ ವಿಶ್ರಾಂತಿ. ಮತ್ತೆ ನಾಲ್ಕು ಗಂಟೆ ಅಪ್ಪಗ ತೋಟಕ್ಕೋ ಗೆದ್ದೆಗೋ ಹೋದರೆ ಕತ್ತಲಪ್ಪಗ ಬಪ್ಪದು.ಹತ್ತರೆ ಪೇಟೆಯೂ ಇಲ್ಲೆ, ತಿರುಕ್ಕೊಂಡು ಹೋಪಲೆ! ಇರುಳಾಣ ಊಟಕ್ಕೆ ತಂಬುಳಿ ಇಲ್ಲೆ.
ಇನ್ನು ಬಾಣಂತಿ ತಂಬುಳಿ ಬೇರೆ ಇದ್ದಡೊ,ಆನೆ ಮುಂಗಿನ ಕೆತ್ತೆ,  ಹೀಂಗೆಲ್ಲ ಅವಕ್ಕೆ ಜೀರ್ಣಶಕ್ತಿ ಹೆಚ್ಚು ಆಯೆಕ್ಕಾರೆ ಈ ತಂಬುಳಿಯ ಮಾಡುಗು.ಕಂಚು ಸಟ್ಟು,ಕೊಡಗಾಸನ ಹೂಗಿನ ತಂಬುಳಿ ಇದೆಲ್ಲ ಎಲ್ಲೊರಿಂಗು ಅಕ್ಕಡೊ.ಶುಂಟಿ ತಂಬುಳಿಯೂ ಜೀರ್ಣ ಶಕ್ತಿ ಹೆಚ್ಚಪ್ಪಲೆ ಒಳ್ಳೆದಡೊ. ಈ ತಂಬುಳಿಗಳಿಂದ ಬಾಣಂತಿಗೊಕ್ಕೆ ಅಜೀರ್ಣ, ಶೀತ ಅಪ್ಪಲಾಗ ಹೇಳಿ. ಈ ತಂಬುಳಿಗಳ ಕೊದಿಶೆಕ್ಕಾವುತ್ತು. ಆದರೆ  ಮೆಂತೆ ತಂಬುಳಿ , ನೀರುಳ್ಳಿ ತಂಬುಳಿ ಕೊದಿಶೆಕ್ಕಾವುತ್ತಿಲ್ಲೆ. ಅದು ಬಾಣಂತಿಗೊಕ್ಕೆ ಆಗನ್ನೆ.
   ಗೋಕರ್ಣಲ್ಲಿ ಈಗಳೂ ಸಾರು ಬಳುಸುವಂದ ಮದಲೆ ತಂಬುಳಿ ಬಳುಸುತ್ತವು. ಉತ್ತರ ಕನ್ನಡಲ್ಲಿ ಅನುಪತ್ಯಂಗಳಲ್ಲಿಯೂ ಒಂದೊಂದು ದೊನ್ನೆ ಕೊಡುಗು. ಅದರಲ್ಲಿ ಸಾರು ಕುಡಿವದಲ್ಲ. ಈ ತಂಬುಳಿ ಕುಡಿವದು. ಜೀರ್ಣ ಶಕ್ತಿ ಹೆಚ್ಚಪ್ಪಲೆ ಬೇಕಾಗಿಯೇ ಹೇಳಿ ಕಾಣುತ್ತು ಈ ಸಂಪ್ರದಾಯ ಮಡಿಕ್ಕೊಂಡದು.ಈಗಾಣೋವಕ್ಕೆ ಪೇಟೆಲ್ಲಿ ಅಂತೂ ಹೆಸರು ಕೇಳ್ಯೇ ಗೊಂತಿರ. ಮಾಂತ್ರ ಅಲ್ಲ ಮಾರ್ಕೆಟಿಲ್ಲಿ ಈ ಕೊಡಿಗೊ ಸಿಕ್ಕಲೂ ಸಿಕ್ಕ  
        ಆನೆಮುಂಗಿನ ಕೆತ್ತೆ ತಂದು ಹೆರಾಣ ಭಾಗವ ಕೆರಸಿ  ತಂಬುಳಿಯಾದರೆ ಕಾಯಿ,  ಬೇರೆ ಜೀರೆಕ್ಕಿ,ಬೇಕಾಷ್ಟು ಉಪ್ಪು,ಮೆಣಸು, ಸೇರುಸಿ, ಮಜ್ಜಿಗೆ ಹಾಕಿ ಕಡದರೆ  ಮತ್ತೆ ಒಲೆಗೆ ಮಡಗಿ ಕೊದಿವಲೆ ಶುರು ಅಪ್ಪಗ ಇಳುಗಿದರೆ ತಂಬುಳಿ ರೆಡಿ.ಹೀಂಗೆ ತಗ್ಗಿ ಕೊಡಿಯನ್ನೂ ಮಾಡುಲಕ್ಕು. ಉರಿಶೀತ, ಅಜೀರ್ಣ ಆದರೆ ಒಳ್ಳೆದುಹೇಳುತ್ತವು.ಕೊಡಿಗಳ ತಂಬುಳಿ ಕೊದಿಶೆಕ್ಕಾವುತ್ತು. ಕೊಡಗಾಸನ(ಕುಟಜ) ನೆತ್ತಿ ಗೆಂಡೆಗೂ ಏವುತ್ತಡೊ.
ಪುನರ್ಪುಳಿ ಓಡಿನ ಬೊದುಲ್ಲೆ ಹಾಕಿ  ಸಾಕಷ್ಟು ನೀರು ಹಾಕಿ ಉಪ್ಪು ಮೆಣಸು ಹದಕ್ಕೆ ಹಾಕಿ ಚೂರು ಬೆಲ್ಲವೂ ಸೇರುಸಿ ಕೊದಿಶಿದರೆ ಸಿಕ್ಕುವ ಬೋಳು ಸಾರು  ಊಟಕೂ ರುಚಿ. ಮತ್ತೆ ಅಂತೇ ಕುಡುದರೂ ಜೀರ್ಣಕ್ಕೆ ಭಾರೀ  ಒಳ್ಳೆದಡೊ.ಇನ್ನು ತೋಟಲ್ಲಿ ಸಿಕ್ಕುವ ಕೂಂಬೆಯೂ ಸಾರಿಂಗಾವುತ್ತು. ಹುಳಿ,ಉಪ್ಪು ಮೆಣಸು ಹಾಕಿ ಕೊದಿಸಿದರೆ ಸಾರು ಅತು.ಅದುದೇ ಜೀರ್ಣಕ್ಕೆ ಒಳ್ಳೆದಡೊ.ಕೂಂಬೆಯಸಣ್ಣಕ್ಕೆ ಕೊಚ್ಚಿ ತಾಳು ಮಾಡುಲೂ ಆವುತ್ತು. ತುಪ್ಪಲ್ಲಿ ಹೊರುದು ಬೆಳ್ಳುಳ್ಳಿ ಹಾಕಿ ಚಟ್ಣಿ ಮಾಡಿ ಉಂಡರೆ ಜೀರ್ಣಕ್ಕೂ ಒಳ್ಳೆದಡೊ. ಕೆಲವು ಜನ ಬಾಣಂತಿಗೊಕ್ಕೂ ಕೊಡುಗಡೊ.
ಇನ್ನು  ಕೆಲವರ ಚಟ್ಣಿ ಮಾಡಿಯೂ ಉಂಬಲಾವುತ್ತು. ಆನೆ ಮುಂಗು ಆದರೆ ಕೆತ್ತೆಯ ಹೊರುದು ಕಾಯಿಯೊಟ್ಟಿಂಗೆ ಕಡವಗ ಉಪ್ಪು ಮೆಣಸು ಹುಳಿ ಸೇರುಸಿಗೊಳ್ಳೆಕ್ಕು. ಮಜ್ಜಿಗೆ ಬದಲಿಂಗೆ ಹುಳಿ ಆಯೆಕ್ಕು. ಚಟ್ಣಿ ಆದರೆ ಉಪ್ಪಿನ ಕಾಯಿಯ ಹಾಂಗೆ ನಕ್ಕಿಗೊಂಡು ಉಂಬದು. ಅಂತೂ ನಮ್ಮ ಊಟಲ್ಲಿ ಈ ಪದಾರ್ಥಂಗೊ ಅನಿವಾರ್ಯ ಆಗಿತ್ತು ಅಂದು. ಈಗ ಮಾರ್ಕೆಿಲ್ಲಿ ಸಿಕ್ಕಿದರೆ ಅಥವಾ ಕೊಡಿಗೊ ಊರಿಲ್ಲಿ ಸಿಕ್ಕ್ದರೆ ಪ್ರಯೋಜನ ಅಕ್ಕು. ಹೀಂಗಿಪ್ಪ ಕನರು ರುಚಿಯ ತೆಕ್ಕೊಂಬದರಿಂದ ನಾಲಗೆಲ್ಲಿ ಕಾಂಬ ಅಗ್ರ ಹೇಳುತ್ತವನ್ನೆ!ಆ ಅಗ್ರಹೇಳಿದರೆ ಹಿಂದಾಣ ಮನೆ ವೈದ್ಯರಿಂಗೆ, ಆಯುರ್ವೇದ ಡಾಕ್ಟರಕ್ಕೊಗೆ ಜೀರ್ಣ ಶಕ್ತಿಯ ಬಗ್ಗೆ ವರದಿ ಒಪ್ಪುಸುವ ಒಂದು ಮಾಪನ ಹೇಳುಲಕ್ಕು!
ಈಗಾಣೊವಕ್ಕೆ ,ಅದರಲ್ಲೂ ಪೇಟೆಲ್ಲಿದ್ದೋವಕ್ಕೆ ಇದೆಲ್ಲ ಸಿಕ್ಕವದೇ ಕಷ್ಟ ಆದರೂ ,ಊರಿಂದಲೋ ತರುಸಿ ಉಪಯೋಗುಸಿಕೊಂಡರೆ ಮುಂದಿನ ಪೀಳಿಗಗೂ ಗೊಂತು ಮಾಡಿದ ಹಾಂಗೆಯೂ ಆವುತ್ತು.ಒಟ್ಟಾರೆ ಏನೋ ಒಂದು  ತುಳುಭಾಷೆಲ್ಲಿಪ್ಪ ಗಾದೆ ನೆಂಪಾತು. "ಪೊಸ ಕೈ ಪೊರುಳುಗೆಡ್ಡೆ,ಪರ ಕೈ ಬಂಜಿಗೆಡ್ಡೆ".ರೋಗ ಬಪ್ಪದಕ್ಕೆ ಮದಲೇ ಜಾಗ್ರತೆ ತೆಕ್ಕೊಂಡರೆ ಮತ್ತೆ ರೋಗವೂ ಬಾರ!ಮತ್ತೆ ಮದ್ದು ಬೇಕಾಗ  ಹೇಳಿ ಕಾಣುತ್ತು.
        
ಗುಂಪೆ ಗುಡ್ಡೆಲ್ಲಿದ್ದ ಸನ್ಯಾಸಿ

            ಗುಂಪೆ ಗುಡ್ಡೆಲ್ಲಿದ್ದ ಸನ್ಯಾಸಿ!         ಗುಂಪೆ ಗುಡ್ಡೆ  ಆ ಪ್ರದೇಶಲ್ಲೆಲ್ಲ ಭಾರಿ ಎತ್ತರಲ್ಲಿಪ್ಪ ಜಾಗೆ. ಬರೇ ಒಂದು ಗುಡ್ಡೆ ಅಲ್ಲ ಮೂರು ಗುಡ್ಡೆಗಳ ಸಾಲು ಹೇಳುಲಕ್ಕು. ಒಟ್ಟಿಂಗೆ ಪೊಸಡಿ ಗುಂಪೆ ಹೇಳಿ ಹೇಳುತ್ತವು. ಮೂಡು ದಿಕ್ಕಿಲ್ಲಿಪ್ಪ ದೊಡ್ಡ ಗುಡ್ಡೆಂದ ಅತ್ಲಾಗಿ ಪಡು ಹೊಡೆಂಗೆ ಹೋದರೆ ಒಂದು,ಮುಂದೆ ಹೋದರೆ ಇನ್ನೊಂದು ಒಟ್ಟು ಒಂದು ಹೊಡೆಂದ ಇನ್ನೊಂದು ಕೋಡಿಗೆ ಒಂದು ಮೈಲೇ ಅಕ್ಕು. ಎತ್ತರದ ಗುಡ್ಡೆ ಎಂಗಳ ಮನೆ ಹತ್ತರೆ ಅವಾ ಅದರ ಬುಡಲ್ಲೇ ಎಂಗಳ ಮನೆ ಹೇಳುಲಕ್ಕು. ಗುಡ್ಡೆ ಕೊಡಿಂಗೆ ಹತ್ತಿ ನಿಂದರೆ ಮೂಡ ಹೊಡೆಂದ ನೋಡಿದರೆ ಕನ್ಯಾನ, ಅಡ್ಯನಡ್ಕ, ಪೆರ್ಲ ಹೀಂಗೆ ಕಾಂಗು.ತೆಂಕ ಹೊಡೆಲ್ಲಿ ಆಗ್ನೇಯ ದಿಕ್ಕಿಲ್ಲಿ ಆವ್ತು  ಬದಿಯಡ್ಕ,ಮತ್ತೆ ತೆಂಕಕ್ಕಾವುತ್ತು ಸೀತಂಗೋಳಿ, ನೈರುತ್ಯಕ್ಕೆ ನೊಡಿದರೆ ಕುಂಬ್ಳೆ.ಪಡುವಕ್ಕೆ ನೋಡಿದರೆ ಕರಾವಳಿ ಪ್ರದೇಶಂಗೊ,ಬಡಗಕ್ಕೆ ಸಜಂಕಿಲ ,ಮತ್ತೆ ಮುಂದೆ ಬಾಯಾರು ಹೀಂಗೆ ಹತ್ತೂರುಗಳ ಕಾಂಬಲೆಡಿತ್ತು.
ಎಂಗೊ ಸಣ್ಣಾದಿಪ್ಪಗ, ಹೊತ್ತೋಪಗ ಗುಡ್ಡೆಗೆ ಬಿಟ್ಟ ದನಗೊ ಬಾರದ್ದರೆ ಹುಡುಕ್ಯೊಂಡು ಕೊಡಿಂಗೆ ವರೆಗೆ ಹತ್ತುವೆಯೊ. ಅಲ್ಲೆಲ್ಲ ಹುಡುಕ್ಕಿದರೆ ಸಿಕ್ಯೊಂಡಿತ್ತವು. ಒಟ್ಟಿಂಗೆ ಗುಡ್ಡೆ ತುಂಬ ನೆಲ್ಲಿ ಮರಂಗೊ. ಎಂಗೊಗೆ ಮರ ಹತ್ತಿ ನೆಲ್ಲಿಕಾಯಿ ಕೊಯ್ವದು ಅಭ್ಯಾಸ.ಮತ್ತೆ ಮಳೆಗಾಲಲ್ಲಿ ಕುಂಟಾಲ ಹಣ್ಣು ಕೊಯ್ದು ತಿಂದು ಬಾಯಿ ನೇರಳೆ ಮಾಡ್ಯೊಂಬದು ಇನ್ನೊಂದು ಅಭ್ಯಾಸ!.ವಾರದ ರಜೆಲ್ಯಂತೂ ಗುಡ್ಡೆ ಕೊಡಿಲ್ಲಿ ಅಂತೆ ಅತ್ತಿಂದಿತ್ತೆ ಓಡ್ಯೊಂಡೋ,ಬೇರೆ ಎಂತಾರು ಆಟ ಆಡ್ಯೊಂಡೋ ಇಪ್ಪೆಯೊ.ಹಾಂಗೆ ಗುಡ್ಡೆ ಹತ್ತಿಪ್ಪಗ ಎಂಗೊಗೊಂದು ಕುಶಾಲು ಆಟ ಇತ್ತುಗುಡ್ಡೆ ಕೊಡಿಂದ ಕಲ್ಲುಗಳ ಕೆಳ ಉರುಳುಸುವದು. ದೊಡ್ಡೋರಿಂಗೆ ಗೊಂತಾದರೆ ಬೈಗು. ಆದರೆ ಕಲ್ಲು ಉರುಳಿದ್ದು ಆರು ಹೇಳಿ ಅವು ನೋಡುತ್ತವೋ? ಉರುಳುವದರ ನೋಡಿ ಸಂತೋಷ ಪಡುವದು ಎಂಗಳ ಅಭ್ಯಾಸ! ಈಗಳೂ ಗುಡ್ಡೆ ಅಲ್ಲೇ ಇದ್ದರೂ ದನಗಳ ಹುಡುಕ್ಕಲಂತೂ ಹೋಗೆಡ.ಮತ್ತೆ ನೆಲ್ಲಿ ಮರವೇ ಇಲ್ಲದ್ದರೆ ಅದರ ಆಕರ್ಷಣೆಯೂ ಇಲ್ಲೆ.ಮತ್ತೆ ಮಕ್ಕೊಗೂ ಹಿರಿಯರಿಂಗೂ ಹೊತ್ತು ತೆಗವಲೆ ಟಿ.ವಿ ಇಪ್ಪಗ ಹೆರ ಹೋಪಲೆ ಪುರುಸೊತ್ತು ಸಿಕ್ಕುಗೋ ಅಥವಾ ಮನಸ್ಸಕ್ಕೋ?ಆದರೆ ಮತ್ತೆ ಮತ್ತೆ ಎಂಗಳ ಪೈಕಿ ಒಂದು ಮನೆಯೋರು ( ಅವರ ಸ್ವಂತ ಜಾಗೆಲ್ಲಿ ಅಲ್ಲಲ್ಲಿ ಸೊರಂಗ ತೋಡುಗು. ಅಲ್ಲಲ್ಲಿ ಮಣ್ಣಿನ ರಾಶಿಗೊ ಇಕ್ಕು. ನಡಕ್ಕೊಂಡು ಹೋಪಲೆ ರಗಳೆ ಅಕ್ಕು.  ಸೊರಂಗ ತೋಡಿಯೂ ಏನೋ ಒಂದೆರಡು ಸೊರಂಗಲ್ಲಿ ನೀರಿನ ಒರತೆ ಸಿಕ್ಕಿದ್ದಡೊ.
ಗುಡ್ಡೆಯ ಒಂದು ಹೊಡೇಲ್ಲಿ ಜೋಡು ಬಾವಿಯೂ ಇತ್ತು. ಹತ್ತರೆ ಹತ್ತರೆ ಎರಡು ಬಾವಿಗೊ! ಒಂದು ಬಾವಿಗೆ ಕಲ್ಲು ಹಾಕಿದರೆ ಇನ್ನೊಂದು ಬಾವಿಂದ ಕಲ್ಲು ಬಿದ್ದ ಶಬ್ದ ಕೇಳುಗು. ಇದು ಎಂಗಳ ಇನ್ನೊಂದು ಆಕರ್ಷಣೆ! ಹೀಂಗೆ ಕಲ್ಲು ಹಾಕಿ ಹಾಕಿ ಬಾವಿಯ ಆಳವೇ ಕಡಮ್ಮೆ ಆಯಿದು. ಅಂದ್ರಾಣ ಅಜ್ಯಕ್ಕೊ ಹೇಳುಗು ಅದು ಮದಲು ಪಾಂಡವರು ಇಲ್ಲಿ ಈ ಗುಡ್ಡೆಲ್ಲಿ ವಾಸವಾಗಿತ್ತಿದ್ದವಡೊ. ಅಂಬಗ ಅವು ತೆಗದ ಬಇ ಹೇಳುಗು. ಎನ್ನ ತಮ್ಮನೂ ಅವನ ಗೆಳೆಯನೂ ಒಂದರಿ ಆ ಬಾವಿಲ್ಲಿ ಎಂತ ಇದ್ದು ವಿಶೇಷ ನೋಡುಲೆ ಬಾವಿಗೆ ಇಳುದ್ದವಡೊ. ಏನೋ ಮರದ ಬೇರು ಹಿಡುಕ್ಕೊಂಡು ಇಳುದ ಸಾಹಸವ ಮನೆಲ್ಲಿ ಶುದ್ದಿ ಹೇಳಿ ಎಲ್ಲೋರ ಕೈಂದಲೂ ಬೈಸಿಗೊಂಡೂ ಆಗಿತ್ತು.ದಲೇ ಎಂಗೊ ಯೋಚಿಸಿದ ಪ್ರಕಾರ  ಎರಡು ಬಾವಿಗಳನ್ನ ಜೋಡುಸುವ ಸುರಂಗ ಇದ್ದಡೊ. ಮತ್ತೆ ಎಂಗೊಗೂ ಕಂಡತ್ತು. ಅದಕ್ಕೆ ಶಬ್ದ ಆಚ ಬಾವಿಲ್ಲಿ ಕೇಳುವದು!ಮತ್ತೆ ಆಚಿಕೆ ಕೆಳ ತೀರ್ಥ ಗುಂಪೆ ಹೇಳಿ ಇದ್ದು. ರಜ ಕೆಳಾಚಿ ಇಪ್ಪದ ತೀರ್ಥ ಗುಂಪೆ ಸುರಂಗ! ತೀರ್ಥ ಅಮಾಸೆ ದಿನ ತೀರ್ಥ ಮೀವಲೆ ಹೋಪದು ಅದರೊಳಂಗೆ ಸುರಂಗಲ್ಲೆ ಮುಂದೆ ಹೋಪಗ ಒಂದು ನೀರಿನ ಹೊಂಡ! ಅದಲ್ಲಿ ಮಿಂದು ಅಲ್ಲೆ ಸೇಡಿ ಮಣ್ಣು(ವಿಭೂತಿ) ಪ್ರಸಾದ ಹೇಳಿ ತಪ್ಪದು ಹೀಂಗೆಲ್ಲ ನಡಕ್ಕೊಂಡಿದ್ದು.
              ಈ ಕತೆ ಹೇಳುವ ಸಮಯಲ್ಲೇ ಗುಡ್ಡೆ ಹತ್ತುವದು ಕಮ್ಮಿ ಆಯಿದು.ಒಂದು ದಿನ ಗುಡ್ಡೆ ಕೊಡಿಂಗೆ ಹೋದೋವು ಬಾವಿ ಹತ್ತರಂಗೆ ಹೋದವಡೊ. ಬಗ್ಗಿ ನೋಡಿದರೆ ಅದರೊಳದಿಕ್ಕೆ ಒಬ್ಬ ಮನುಷ್ಯ ತಿಂಗಳುಗಟ್ಲೆ ಗಡ್ಡ ತೆಗೆಯದ್ದ ಕಾರಣ ಸನ್ಯಾಸಿ ಹಾಂಗೆ ಕಂಡತ್ತಡೊ. ಇವರ ಕಾಂಬಗ ತನ್ನ ಮೋರೆ ಕಾಂಬಲಾಗ  ಹೇಳಿಯೋ ಎಂತದೋ ತಲೆ ತಗ್ಗುಸ್ಯೊಂಡಿತ್ತಡೊ!ಅವು ಕೆಳ ಬಂದವು. ಶುದ್ದಿ ಊರೆಲ್ಲ ಹರಡಿತ್ತು. ಮರದಿನ ಕೆಲವು ಜನ ಆ ಸನ್ಯಾಸಿಯ ನೋಡುಲೆ ಹೋದವು. ಮತ್ತೆ ಸನ್ಯಾಸಿಯ ನೋಡ್ಳೆ ಹೋಪಗ ಅಂತೇ ಹೋಪದು ಸರಿ ಆವ್ತಿಲ್ಲೆ ಹೇಳಿ ಕೆಲವು ಜನ ಹಣ್ನು ಹಂಪಲು ಕೊಂಡೋದವು. ಸನ್ಯಾಸಿ ಅದರ ಕಣ್ಣೆತ್ತಿಯೂ ನೋಡಿದ್ದಿಲ್ಲೆ.ಜನಂಗೊ ಗ್ರೇಶಿದವು - ಬಹುಶಃ ತಿಂಬದರಲ್ಲಿ ಆಸಕ್ತಿ ಇಲ್ಲೆ ಅವಂಗೆ ಹೇL ಜನರ ಭಕ್ತಿ ಹೇಚ್ಚಾತು. ಮರದಿನ ಹಲು ಹಣ್ಣು ತೆಕ್ಕೊಂಡು ಹೋದವು. ಜನ ಸನ್ಯಾಸಿಯ ನೋಡ್ಳೆ ಹೋಪದು ಹೆಚ್ಚಾತು. ಹೆಚ್ಚಾಗಿ ಹೊತ್ತೋಪಗಳ ಹೋಪದಾದ ಕೇರಣ ಅಂದು ಸನ್ಯಾಸಿ ಆ ಹೊತ್ತಿಂಗೆ ಬಾವಿಲ್ಲಿಲ್ಲೆ. ಎಲ್ಲಿಗೆ ಹೋದಪ್ಪ! ಎಂತ ಊರು ಬಿಟ್ಟಿಕ್ಕಿ ಹೋದನೋ? ಸಂಚಾರಿ ಸನ್ಯಾಸಯೋ? ಹೀಂಗೆಲ್ಲ ಮಾತಾಡ್ಯೊಂಡಿದ್ದರೂ ಜನಂಗೊ ಹೋದ ಮೇಲೆ ಸನ್ಯಾಸಿ ಅಲ್ಲಿಗೆ ಬಂದು ,ಜನಂಗೊ ಮತ್ತೆ ಬಪ್ಪಗ ಅವ ಅಲ್ಲಿ ಇಲ್ಲದ್ದೆ ಅಪ್ಪಲೆ ಶುರು ಆತು.ಆದರೆ ತಂದು ಕೊಟ್ಟ ಹಣ್ಣು ಹಂಪಲು ಮರ ದಿನ ಕಾಣ್ತಿಲ್ಲೆ.
       ಜನಂಗಳಲ್ಲಿ ಒಬ್ಬಂಗೆ ಸಂಶಯ ಬಂತು.ಏನೋ ಒಬ್ಬ  ಕಳ್ಳ ಸನ್ಯಾಸಿಯೇ ಆಗಿರೆಕ್ಕು ಹೇಳಿ ಆಲೋಚನೆ ಮಾಡಿದಡೊ.ಪೋಲೀಸುಗೊಕ್ಕೆ ತಿಳಿಶಿದರೆ ಗೊಂತಕ್ಕು ಹೇಳಿ ಯೋಚನೆ ಮಾಡಿದ. ಆದರೆ ಆ ಪ್ರದೇಶ ಯಾವ ಸ್ಟೇಶನಿಂಗೆ ಸೇರಿದ್ದು ಹೇಳುವದು  ಅವಂಗೆ ಗೊಂತಲ್ಲೆ. ಎಂಗಳ ಹೊಡೆಂಗೆ ಬದಿಯಡ್ಕ ಹೇಳಿದರೆ ಹತ್ತು ಮೈಲು ದೂರ! ಕುಂಬ್ಳೆ ಹತ್ತು ಮಈಲು ದೂರ ಮತ್ತೆ ಮಂಜೇಶ್ವರ ಹದಿನೈದು ಮೈಲು ದೂರ.  ಮರ್ಗಲ್ಲೇ ಬಪ್ಪಗ ಇನ್ನೂ ಹೆಚ್ಚು.ಅಂತೂ  ಮೂರು ಸ್ಟೇಶನ್ ಗಳೂ ದೂರವೇ ಆವುತ್ತು. ಎಂಗೊಗೆ ಅಗತ್ಯ  ಬಂದರೆ ಇಷ್ಟು ದೂರಕ್ಕೆ ಬರೆಕ್ಕಾರೆ ಅವರ ಕಾರು ಮಾಡಿ ಕರಕ್ಕೊಂಡು ಬರೆಕ್ಕು! ಹಾಂಗೆ ಬಹುಶಃ  ಈ  ಮನುಷ್ಯ  ಯಾವ ತೊಂದರೆಯೂ ಆಗ ಹೇಳುವ ಸುರಕ್ಷಿತ ಜಾಗೆಯ ಹುಡುಕ್ಯೊಂಡದು!
ಅಂತೂ ಹೇಂಗೋ ಪೋಲಿಸುಗೊ ಬಂದವು. ಸನ್ಯಾಸಿಯ ಹುಡುಕ್ಯಂಡು! ಆದರೆ ಆ ಸನ್ಯಾಸ್ದಿಗೆ ಹೇಂಗೆ ಗೊಂತಾತೋ? ಪೋಲೀಸುಗೊ ಬಪ್ಪಗ ಸನ್ಯಾಸಿಯ ಪತ್ತೆಯೇ ಇಲ್ಲ ಹದಿನೈದು ದಿನ ಊರಿನ ಜನರ ಕಣ್ಣಿಂಗೆ ಸನ್ಯಾಸಿಯಾಗಿದ್ದವ ಒಬ್ಬ ಕೊಲೆಗಾರಡೊ! ಅಲ್ಲಿದ್ದರೆ ಪೋಲೀಸುಗೊಕ್ಕೆ ಗೊಂತಾಗ ಹೇಳಿ ಬಂದು ಇದ್ದದಡೊ. ಜನರ ಭಕ್ತಿಯ ದುರುಯೋಗ ಮಾಡ್ಯೊಂಡು ಷಟು ದಿನ ಇದ್ದೋನು ಪೋಲೀಸುಗೊ ಬಪ್ಪಗ ಅವಂಗೆ ಹೇಂಗೆ ಮೂಗಿಲ್ಲಿ ನೆಳವು ಕೂದತ್ತೋ ಅಸಾಮಿಯ ಪತ್ತೆಯೇ ಇಲ್ಲೆ.
             ಶುಕ್ರವರ ಪೂಜಗೆ ಕಿಸ್ಕಾರ ಹೂಗು ತಪ್ಪದು ಎನ್ನ ಕ್ರಮ. ಶಾಲೆ ಬಟ್ಟಿಕ್ಕಿ ಬಪ್ಪಗ ದಾರಿಲ್ಲಿ ಸಿಕ್ಕಿದ ಹೂಗು ತಪ್ಪೆ. ಹಾಂಗೆ ತಪ್ಪಗ ಕೈಂದ ಜರಿ ದಾರಿಲ್ಲಿ ಒಂದು ಕಲ್ಲಿನ ಮೇಗೆ ರಜ ೂಗು ಬಿದ್ದಿತ್ತು. ಮರದಿನ ಆ ದಾರಿಲ್ಲಿ ಹೋಪಗ ಅದೇ ಕಲ್ಲಿನ ಮೇಲೆ ರಜ ಹೆಚ್ಚು,ಮರದಿನ ಇನ್ನ ಹೆಚ್ಚು, ಮತ್ತೊಂದು ದಿನ ಎನ್ನೊಟ್ಟಿಂಗೆ ಇದ್ದನೊಬ್ಬ ಅಲ್ಲಿಗೆತ್ತುವಗ ಹತ್ತರೆ ಹಗು ಸಿಕ್ಕದ್ದೆ ರಜ ದೂರ ಹುಡುಕ್ಯೊಂಡು ಹೋಗಿ ಹೂಗು ತಂದು ಹಾಕುವದು ಕಂಡತ್ತು. ಎಂತಗೆ ಕೇಳಿದ್ದಕ್ಕೆ ಇದೊಂದು ಕಾರ್ಣಿಕದ ಕಲ್ಲು. ಇಲ್ಲಿ ಹೂಗು ಹಾಕಿ ನಮ್ಮ ಅಪೇಕ್ೆ ಹೇಳಿ ಕೈ ಮುಗುದು ಹೋದರೆ ಗ್ರೇಶಿದ ಕೆಲಸ ಆವುತ್ತು ಹೇಳಿಯೋ ಎಲ್ಲ ಹೇಳಿದ. ಆನು ನಿಜ ಸಂಗತ ಹೇಳಿದರೂ ಒಪ್ಪಿದ್ದಾ ಇಲ್ಲೆ. ಜನರ ಮ್ಯವೋ ಎಂತದೋ ಹೇಂಗೆ ಹೇಳಿ ನಿಂಗಳೇ ಯೋಚುಸಿ!

ಸಾಮಾನ್ಯ ಜ್ಞಾನ ಅಂದು- ಇಂದು

     ಸಾಮಾನ್ಯ ಜ್ಞಾನ  ಅಂದು- ಇಂದು                               
                                                                                                                                                 ಅಂದು ಉದಿಯಪ್ಪಗಳೇ ಅಪ್ಪ ಮಿಂದು ಜಪ ಮಾಡಿಕ್ಕಿ, ನಿತ್ಯ ಪೂಜೆ ಬೇಗ ಮುಗಿಶಿತ್ತಿದ್ದವು. ಮನೆಂದ ರಜ ದೂರವೇ ಹೇಳುಲಕ್ಕು. ಒಂದೆರಡು ಮೈಲು ದೂರಲ್ಲಿದ್ದ ಒಬ್ಬ ರೈತ " ಉದಿಯಪ್ಪಗ ಬೇಗ ನಿಂಗಳ ಮನೆಗೆ ಬತ್ತೆ. ರಜ ಪಂಚಗವ್ಯ ಕೂಡಿ ಕೊಡೆಕ್ಕು" ಹೇಳಿತ್ತಿದ್ದ. ಆಸು ಪಾಸಿನ ಜನಂಗೊ ಒಂದೊಂದರಿ ಹೀಂಗೆ, ಬಂದು -ಮನೆ ಶುದ್ಧ ಮಾಡುಲೆ ಪಂಚಗವ್ಯ ಕೊಂಡೋಪದಿತ್ತು. ದಕ್ಷಿಣೆ  ತೆಕ್ಕೊಂಬಲಿಲ್ಲೆ, ಅಂತೆ ಒಂದು ಉಪಕಾರ ಅಷ್ಟೆ!   ಮತ್ತೆ  ಅವಕ್ಕೆ ಅಮೆ,ಸೂತಕ ಇದ್ದರೆ ನಾವು ಕೊಟ್ಟ ಪಂಚಗವ್ಯ ತಳುದರೆ ಮುಗುತ್ತು.ನಮ್ಮಲ್ಲಯೂ ಮಲಿಂಗೇ ಮೆಲ್ಲೇ ಹೆತ್ತರೆ ಶುದ್ದಿನ ಮಡ್ಯೋಳ್ತಿ ಬಂಮೈಲಿಗೆ ವಸ್ತ್ರಂಗಳ ಒಗದು ಶುದ ಮಾಡುವ ಕ್ರಮ ಇತ್ತಡೊ ಕೆಲವು ಮನೆಗಳಲ್ಲಿ.ಮತ್ತೆ ಭಟ್ರು ಬಂದು ಮನೆಯ ಪಂಚಗವ್ಯ ಕೂಡಿ ಶುದ್ಧ ಮಾಡಿದ ಮೇಲೆ ಜಾತ ಕರ್ಮ! ಆಳುಗೊಕ್ಕೆ ಪಂಚಾಂಗ ನೋಡಲೆ ಆಳುಗೊಕ್ಕೆ  ಗೊಂತಿಲ್ಲೆ. ಎತ್ತು ಕಟ್ಟುಲೆ,ಗೆದ್ದೆ ಬಿತ್ತುಲೆ ಮಗುವಿನ ತೊಟ್ಟಿಲ್ಲಿ ಹಾಕುಲೆ ಹೀಂಗೆಲ್ಲ ಒಳ್ಳೆ ದಿನ ಹೇಳೆಕ್ಕು. ಕೇಳ್ಯೊಂಡು ಬಪ್ಪದು ಎಂಗಳ ಮನೆಗೇ!ಬೇರೆ ಆರು ಹೇಳಿದರೂ ಅವಕ್ಕೆ ಸಮಾಧಾನ ಅಗ. ಪಂಚ ಗವ್ಯ ಕೊಟ್ಟ ಮೇಲೆಯೇ ಏನಾದರೂ ಹೊಟ್ಟಗೆ ಹಾಯ್ಕೊಂಡು ಅಪ್ಪ ಗೆದ್ದೆ ಕರೆಂಗೆ ಹೋಪದು. ಎಂಗಳ ಮಟ್ಟಿಂಗೂ ಹಾಂಗೆ ಸಣ್ಣ ಗಣ ಹೋಮ,ಶಿವ ಪೂಜೆ ದುರ್ಗಾ ನಮಸ್ಕಾರಪೂಜೆ ಎಲ್ಲ  ಅಪ್ಪನೇ ಸಧರುಸುವದು. ಮತ್ತೆ ಭಟ್ರ ಕಾಣೆಕ್ಕಾದರೆ ದೂರವೂ ಹೋಯೆಕ್ಕು. ಯಾವಗಲೂ ಅಲ್ಲಿ ಇಲ್ಲಿ ಹೋಪಲಿಪ್ಪ ಕಾರಣ ಭಟ್ರು ನಮಗೆ ಬೇಕಪ್ಪಗ ಸಿಕ್ಕುತ್ತವೂ ಇಲ್ಲೆ.
             ಪಂಚಾಂಗ-ತಿಥಿ,ವಾರ, ನಕ್ಷತ್ರ ,ಯೋಗ,ಕರಣ ಹೀಂಗೆ ಮುಖ್ಯವಾದರೂ ಒಟ್ಟಿಂಗೆ ರಾಹು ಕಾಲ ಗುಳಿಕ ಕಾಲ ಹೀಂಗೆಲ್ಲ ನೋಡಿ ಅವಕ್ೆ ಸಮಾಧಾನ ಅಪ್ಪ ಹಾಂಗೆ ಹೇಳೆಕ್ಕಾವುತ್ತು. ಎಂಗೊ ಶಾಲಗೆ ಸೇರುವದಕ್ಕೆ ಮದಲೆ ಮನೆಲ್ಲಿ ಸಂವತ್ಸರ,ಸೌರ ಮಾನ ಚಾಂದ್ರ ಮಾನೆ ಹೀಂಗೆ ತಿಂಗಳುಗಳ ಹೆಸರುಗಳ ಎಲ್ಲ ಅಮ್ಮನೇ ಹೇಳಿಕೊಟ್ಟಿತ್ತಿದ್ದವು. ಅಮ್ಮ ಪ್ರೈಮರಿ ಶಾಲಗೆ ಹೋಗಿದ್ದರಿಂದ ಲೆಕ್ಕ ಹೇಳುಲೂ ಮಗ್ಗಿ ಹೇಳುಸಲೂ ಗೊಂತಿತ್ತು.ಹೇಳುಸುಗು. ಶಾಲಗೆ ಹೋಪಲೆ  ಶುರುಮಾಡುವಗಳೇ ಇದೆಲ್ಲ ಗೊಂತಿತ್ತು. ಅಪ್ಪ ರಜ ಸಮಯ ಸಂಸ್ಕ್ರುತ ಓದಿದ್ದರಿಂದ ಪುರುಸೊತ್ತು ಇದ್ದರೆ  ಹೇಳಿ ಕೊಡುಗು.ಅಂದು ಶಾಲಗೆ ಹೋಪಗ ಮಗ್ಗಿ ಪುಸ್ತಕ ಬೇಕೇ ಬೇಕು. ಕೆಳಂದ ಮೇಲೆ, ಮೇಲಂದ ಕೆಳ ಲೆಕ್ಕ ಹೇಳುವದು, ಮಗ್ಗಿ ಹೇಳುವದು, ಮಗ್ಗಿ ಕೇಳಿದಲ್ಲಿ ಹೇಳುವದು ಎಲ್ಲ ಇತ್ತು. ಅಂತೂ ಶಾಲೆಲ್ಲಿ ಒಳುದ ಮಕ್ಕಳಿಂದ ಆನು ಮುಂದೆ ಇತ್ತಿದ್ದೆ.ಮಗ್ಗಿ ಕೇಳಿದಲ್ಲಿ ಹೇಳುಲೆ ಗೊಂತಿತ್ತು. ಹುಶಾರಿಪ್ಪ ಮಕ್ಕಳತ್ರೆ ಒಳುದೋರಿಂಗೆ ಮಗ್ಗಿ ಹೇಳುಸುಲೆ, ಲೆಕ್ಕ ತಪ್ಪೋ ಸರಿಯೋ ನೋಡುಲೆ ಎಂಗಳತ್ರೆ ಹೇಳಿಕ್ಕಿ, ಇನ್ನೊಂದು ಕ್ಲಾಸಿಂಗೆ ಮಾಸ್ಟ್ರ ಹೋಕು. ಮತ್ತೆ ಎನ್ನ ತಮ್ಮ ನೂ ಹುಷಾರಿತ್ತಿದ್ದ.

                    ಎನ್ನ ಅಜ್ಜಿ ಶಾಲಗೆ ಹೋಗಿಯೇ ಗೊಂತಿಲ್ಲೆ.ಆದರೆ ಸಂವತ್ಸರಂಗಳ ಹೆಸರು ಬಾಯಿ ಪಾಠ ಇತ್ತು. ಶಿವನ ಅಕ್ಷರ ಮಾಲಾ ಸ್ತೋತ್ರ, ಕೆಲವು ಹಾಡುಗೊ ಯಾವಾಗಲೂ ಹೇಳ್ಯೊಂಡಿಕ್ಕು. ಎನ್ನ ಅತ್ತೆಕ್ಕೊಗೆ ಓದುಲೆ ಬರವಲೆ ಗೊಂತಿಲ್ಲದ್ದರೂ ಹಬ್ಬ ಹರಿ ದಿನಂಗಳ ಬಗ್ಗೆ, ತಿಂಗಳು  ತಿಥಿ ವಾರ ನಕ್ತ್ರ ಒಟ್ಟಿಂಗೆ ಕೆಲವು ಹಾಡುಗೊ ಬಾಯಿ ಪಾ ಇಕ್ಕು.ಅಬ್ಬೆಕ್ಕೊಗೆ ಗೊಂತಿದ್ದರೆ ಮಕ್ಕೊಗೂ ಹಾಂಗೇ ಮುಂದುವರಿತ್ತು.ಮತ್ತೆ ಶಾಲೆಲ್ಲಿಯೂ, ಮಾಸ್ಟ್ರಕ್ಕೊ ಇದರೆಲ್ಲ ಕೇಳುಗು.ಮಕ್ಕೊ ಕಲಿವದು ಕಡ್ಡಾಯ ಆಗಿತ್ತು.
ಮತ್ತೆ ಆನು ಕಲಿಶುಲೆ ಹೆರಡುಲಪ್ಪಗ ಸಂವತ್ಸರ ,ತಿಂಗಳು ಎಲ್ಲ ಅಷ್ಟು ಕಡ್ಡಾಯ ಇತ್ತಿಲ್ಲೆ ಮನೆಲ್ಲಿ ಕಲ್ತರೆ ಮಾಂತ್ರ ಮಕ್ಕೊಗೆ ಗೊಂತಿಕ್ಕು. ಕಾಲ ಮುಂದುವರದ ಹಾಂಗೆ ಜೊಇಸಕ್ಕೊ ಹೇಳುವದು ಮುಹೂರ್ತವ ಅಂತೂ ಶಾಲೆಲ್ಲಿ ಉದ್ಯೋಗ, ಮತ್ತೆ , ವ್ಯವಹಾರಕ್ಕೆ ಬೇಕಾಗಿ ಇಂಗ್ಲಿಷ್ ತಿಂಗಳುಗೊ, ತಾರೀಕು ವಾರ ೊಂತಿದ್ದರೂ ಸಾಕು    ಹೇಳುವಲ್ಲಿಗೆ ಬಂತು. ಮತ್ತೆ  ತಾರೀಕು ಹೇಂಗಾದೂ ಕಾಲೆಂಡರ್ ನೋಡಿದರೆ ಎಲ್ಲ ಗೊಂತಾವುತ್ತು ಹೇಳುವಲ್ಲಿಗೆ ಬಂತು. ಬೇಂಕ್, ಅಥವಾ ಇತರ ಉದ್ಯೋಗಸ್ತರಿಂಗೂ ಈ ತಥಿ ವಾರ, ಹಿಂದೂ ತಿಂಗಳುಗೊ ಮರದೇ ಹೋತು.ಬೇಕಾಗಿ ಬಂದರೆ ಅಂಬಗಂಬಗ ತಾರೀಕು,ಮತ್ತೆ  ವಾರವ ನೋಡಿಗೊಂಬಲೆ ಕೈಗೆ ಕಟ್ಟಿದ ವಾಚಿನ ನೋಡಿದರೆ ಸಾಕಾವುತ್ತು. ಲೆಕ್ಕ ಮಾಡುಲೆ ರಡಿ ರೆಕೋನರ್ ಇದ್ದನ್ನೆ. ಲೆಕ್ಕ ಮಾಡಿ ತಲೆ ಬೆಶಿ ಮಾಡಿಗೊಂಬದು ಎಂತಕೆ! ಯಾಕೆ ಹೇಳಿದರೆ ಅದರ ಅಗತ್ಯ ಜನಂಗೊಕ್ಕೆ ಬಯಿಂದಿಲ್ಲೆ..
 ಪುರಾಣ ಪುಣ್ಯ ಕತೆ ಇಂಟರ್ನೆಟ್ ನೋಡಿದರೆ, ಆರು ಆರಿಂಗೆ ಎಂತ ಆಯೆಕ್ಕು, ಆರಿಂಗೆ ಎಂತ ಹೇಳಿದ್ದ? ಎಲ್ಲವೂ ಸಿಕ್ಕುತ್ತಾದ ಕಾರಣ ಸುಮ್ಮನೆ ತಲೆಲ್ಲಿ ತುಂಬುಸಿಗೊಳ್ಳೆಕ್ಕಾದ ಅಗತ್ಯ ಇಲ್ಲೆನ್ನೆ!.
               ಈಗೀಗ ಶಾಲೆಗಳೂ ಇಂಗ್ಲಿಷ ಮೀಡಿಯಮ್. ಅಪ್ಪನ ,ಅಮ್ಮನ ಡಾಡಿ, ಮಮ್ಮಿ ಹೇಳುವ ಸಂಸ್ಕಾರ ಮುಂದುವರಿತ್ತು. ಜನ್ಮ ದಿನಕ್ಕೆ ಕೇಂಡ್ಳ್ ಹೊತ್ತುಸಿದ್ದರ ಊದಿ ನನುಸುವ ಕ್ರಮ ನಡವಲೆ ಶುರು ಆದ ಮೇಲೆ ಹಳೆ ಸಂಸ್ಕಾರ ಮರದು ಹೋಪಲೆ ಶುರುವಾಯಿದು. ಏಕೆ ಕೇಳಿದರೆ ಕೆಲಸ ಹುಡುಕ್ಯೊಂಡು ವಿದೇಶಕ್ಕೆ ಹೋದರೆ ಅಲ್ಲಿ ಇದೆಲ್ಲ ಇಲ್ಲೆನ್ನೆ!  ವಿದೇಶಿ ಸಂರ್ಕಕ್ಕೆ ಅಗತ್ಯ ಇಪ್ಪ ವಿಯಂಗಳ ಮಾಂತ್ರ. ಎಲ್ಲ ವಿದೇಶಿ ಸಂಸ್ಕತಿಯೇ ಚಾಲ್ತಿಗೆ ಬಯಿಂದು.ಕಲಿಶುವ ಮಾಸ್ಟ್ರಕ್ಕೊಗೋ,ಮನೆಲ್ಲಿ ನಮ್ಮ ಸಂಸ್ಕಾರವ ಹೊಸತ್ತಾಗಿ ತರಬೇತಿ ಕೊಟ್ಟು ತಿಳಿಶೆಕ್ಕಾದ ಸಂದರ್ಭ ಬಯಿಂದು. ಹೆತ್ತೋರಿಂಗೋ  ಇದೆಲ್ಲ ಗೊಂತಿರುತ್ತಿಲ್ಲೆ.  ನಾವು ಹಿಂದುಗೊ ಹೇಳೆಕ್ಕಾರೂ,ಬ್ರಾಹ್ಮಣರು ಹೇಳೆಕ್ಕಾದರೂ ಅರ್ಹತೆಯ ಕಳಕ್ಕೊಳ್ಳುತ್ತಾ ಇದ್ದೋ ಹೇಳುವ ಸಂಶಯ ಉಂಟಾಯಿದು. ಶಾಲೆಲ್ಲಿ ಕಲಿಶುವದು ಕೂಡಾ ಜಾತ್ಯತೀತ ಹೇಳಿಗೊಂಡು ಷಟ್ರ ಗೀತೆಯನ್ಣೇ ವಿರುಸುೋರು ವೋಟಿಂಗೆ ಬೇಕಾಗಿ ಒಂದು ಜನಾಂಗವ  ತುಷ್ಟೀಕರುಸುಲೆ ಸರಕಾರವೇ ಪ್ರಯತ್ನ ಮಾಡೆಕ್ಕಾವುತ್ತು. ಇಲ್ಲದ್ದರೆ ಇನ್ನೊಂದರಿ ವೋಟಿಲ್ಲಿ ಗೆಲ್ಲುಲೆಡಿಯ.
         ಆದರೆ ಇತರ ಜನಾಂಗದೋವು ಮುಖ್ಯವಾಗಿ ಬ್ಯಾರಿಗೊ ಮದರಸಾಲ್ಲಿ ಅವರ ಸಂಸ್ಕಾರವ ಪ್ರತ್ಯೇಕವಾಗಿ ಹೇಳಿ ಕೊಡುವ ಕಾರಣ ಅವಕ್ಕೆ ಗೊಂತಿರುತ್ತು, ಕ್ರಿಶ್ಚನ್ ಗಳೂ,ಮುಸ್ಲೀಮರೂ ವಾರಕ್ಕೊಂದರಿ ಅವು ಪ್ರಾರ್ಥನಾ ಮಂದಿರಂಗಳಲ್ಲಿ ಸೇರುತ್ತವು. ವಿಮರ್ಶೆ ಮಾಡಿ ಬಿಟ್ಟು ಬೀಳ್ಚೆಗಳ ಸರಿ ಮಾಡಿಗೊಳ್ಳುತ್ತವು. ನಾವು ಪುರುಸೊತ್ತಪ್ಪಗ, ದೇವರ ನೆಂಪಪ್ಪಗ ದೇವಸ್ಥಾನಕ್ಕೆ ಹೋಪದಿದ್ದು. ನಮ್ಮ ಸಂಸ್ಕಾರಂಗನ್ನೂ ಒಳುದೋರ ಹಾಂಗೆ ದೇವಸ್ಥಾನಲ್ಲಿ ಹೇಳಿ ಮಾಡುಸಿಗೊಂಬಲೆ ಶುರುವಾಯಿದು.
ಹೀಂಗೇ ಮುಂದುವರುದರೆ ನಮ್ಮ ಜನಾಂಗದ ಸಂಸ್ಕಾರಂಗೊ ಇತಿಹಾಸದ ಪುಟ ಸೇರಿದರೂ ಆಶ್ಚರ್ಯ ಇಲ್ಲೆ.
ಈಗಲೇ ನಾವು ಎಚ್ಚತ್ತುಗೊಂಡು ರಜ ವಿದ್ಯಾವಂತರಾದೋರು ಪ್ರಯತ್ನ ಪಟ್ಟರೆ ಕೆಲವನ್ನಾದರೂ ಸರಿ ಮಾಡಲಕ್ಕು ಹೇಳಿ ಕಾಣುತ್ತು, ಒಬ್ಬನ ಇಬ್ರ ಪ್ರಯತ್ನ ಸಾಕಾಗ. ಸಾಮೂಹಿಕ ಕ್ರಾಂತಿಯೇ ನಡದರೆ ಸ್ವಲ್ಪ ಮಟ್ಟಿಂಗಾದರೂ ಸರಿಯಾದರ ನಮ್ಮ ಹೆರಿಯೋರಿಂಗೆ    ಸಮಾದಾನ ಅಕ್ಕು ಹೇಳಿ ಕಾಣುತ್ತು. ಸಮಾಜ ಹಿತಕ್ಕಾಗಿ  ಎಂತ ತ್ಯಾಗ ಮಾಡುಲೂ  ಸಿದ್ಧರಾಯೆಕ್ಕಾದ್ದು ನಮ್ಮ ಕರ್ತವ್ಯ ಅಲ್ಲದೋ? ಕೈಗೆ ಕೈ ಜೋಡುಸಿ ಅಪ್ಪ ಮಾನವ ಸರಪ್ಪುಳಿ, ಧರ್ಮವ ಕಾವಲೆ ಗುರು ಹೆರಿಯೋರ, ದೇವರ ಆಶೀರ್ವಾದ ಒಟ್ಟು ಸೇರಲಿ ಹೇಳಿ ಹಾರೈಕೆ.ಎಲ್ ಮದಲಾ ಃಆಂಗೆ ಆಯೆಕ್ಕು ಹೇಳುವದಲ್ಲ. ಹೊಸ ಸಧಾರಣೆಂದ "ಇದ್ದದೂ ಹೋತು ಮದ್ದಿನ ಗುಣಂದ" ಹೇಳಿ  ಅಪ್ಪಲಾಗ ಹೇಳುವದು ಎನ್ನ ಅಭಿಪ್ರಾಯ!

ಹಿಂದಾಣೋರ ಸಾಮಾಜಿಕಕ ಜೀವನ ಹೇಂಗಿತ್ತು

                              ಹಿಂದಾಣೋರ ಸಾಮಾಜಿಕ ಜೀವನ ಹೇಂಗಿತ್ತು!
         ಗುಂಪೆ ಗುಡ್ಡೆಯ ತೆಂಕ ಹೊಡೆಲ್ಲಿಪ್ಪ ಎಂಗಳ ಮೂಲೆಲ್ಲಿ ಎಂಗಳ ಕುಟುಂಬದೋರೇ ಇತ್ತಿದ್ದವಡಾ.ಬರೇ ನಾಲ್ಕು ಮನೆ ಅಂಬಗ ಇದ್ದದ್ದು. ಒಂದು ಮನೆಲ್ಲಿ ದೊಡ್ಡಾಗಿದ್ದ ಕೂಸಿಂಗೆ ಮದುವೆ ಆಗದ್ದೆ ಚಿಂತೆ ಮಾಡ್ಯೊಂಡಿಪ್ಪಗ ಆ ಊರಿಂಗೆ ಕೂಸಿನ ಹುಡುಕ್ಯೊಂಡು ಉತ್ತರದ ಕಡೆಂದ ಬಂದ ಹುಡುಗಂಗೆ ಕೂಸಿನ  ಮದುವೆ ಮಾಡಿಕೊಟ್ಟು  ಒಂದು ಮನೆಯನ್ನೂ ಕಟ್ಟುಸಿ ಕೊಟ್ಟು  ಕೂರುಸಿದವು. ಹಾಂಗೆ ಬೇರೊಂದು ಮನೆ ಹೆಚ್ಚಾತು.ಬಂದೋರು ಇದ್ದೋರೊಟ್ಟಿಂಗೆ ಚೆಂದಕ್ಕೆ ಇತ್ತಿದ್ದವು. ತಿಥಿ ಕೈನ್ನೀರಿಂಗೆ ಒಂದು ಮನೆ ಆತು.ಎಂಗಳ ಹೆರಿ ಮನೆಯೋವು ಹತ್ತರಾಣ ಇನ್ನೊಂದು ಗ್ರಾಮಕ್ಕೆ ಗುರಿಕ್ಕಾರಕ್ಕೊ. ಅವು ಎಂಗಳಲ್ಲಿ ಗುರಿಕ್ಕಾರಕ್ಕೊ. ಈ ಎರಡು ಗುರಿಕಾರಕ್ಕಳ ಮನೆ ಎರಡು ಗ್ರಾಮಲ್ಲಿ ಇಪ್ಪದು. ಎರಡು ಗ್ರಾಮಕ್ಕೂ ಸೇರಿದ್ದು ಒಂದು ದೇವೀ ದೇವಸ್ತಾನ.ಎಂಗಳ ಗ್ರಾಮಲ್ಲಿ ಇಪ್ಪದು ಒಂದು ಭೂತದ ಭಂಡಾರ!ದೇವರಭಂಡಾರ ಇನ್ನೊಂದು ಗ್ರಾಮಲ್ಲಿ. ಈ ಎರಡೂ ಗ್ರಾಮದೋವು ಸೇರಿ ಊರ ಜಾತ್ರೆ ನಡವದು.
    ಭೂತಸ್ತಾನ ಮತ್ತೆ ದೇವಸ್ತಾನ ಒಂದು ಹೊಳೆ ಕರೆಲ್ಲಿ ಇಪ್ಪದು. ಆದರೆ ಭೂತಸ್ತಾನ  ಎಂಗಳ ಗ್ರಾಮಲ್ಲಿ ಆದ ಕಾರಣ ಭೂತಕ್ಕೆ ಪ್ರಾರ್ತನೆ ಮಾಡುವದೆಲ್ಲ ಎಂಗಳ ಗುರಿಕ್ಕಾರ.ಎರಡೂ ಗ್ರಾಮಲ್ಲಿ ಇಪ್ಪೋರನ್ನೂ ಜಾತ್ರೆ ದಿನ ಆವೇಶ ಬಂದು ಭೂತ ದಿನಿಗೇಳುಲೆ ಇದ್ದು. ಎಂಗಳ ಗ್ರಾಮದ ಲೆಕ್ಕಲ್ಲಿ  ಐದಾರು ಮನೆ ಬ್ರಾಹ್ಮಣರ, ಮತ್ತೆ, ಆಚೆ ಗ್ರಾಮದ ಗುರಿಕ್ಕಾರನ ಹೀಂಗೆ ಮನೆ ಹೆಸರು ಹೇಳಿ "ಪತ್ತೊಕ್ಕೆಲು" ಹೇಳಿ ದಿನಿಗೇಳುವದು ಈಗಳೂ ಇದ್ದು.ಅದುಭೂತದ ಮರ್ಯಾದಿ. ಬರಲಿ ಬಾರದ್ದಿರಲಿ ಎಂಗೊ ಅಲ್ಲಿ ಊರಿಲ್ಲಿ ಇಲ್ಲದ್ದರೂ ದಿನಿಗೇಳುಗು. ಎಂಗಳೂ ವಂತಿಗೆ ಕೊಟ್ಟೊಂಡಿತ್ತಿದ್ದೆಯೊ.ಭೂತ ಸ್ತಾನಲ್ಲಿ,ಭೂತಕ್ಕೊಂದು ಭೂತದ ಚಾವಡಿ ಈಗಳೂ ಇದ್ದು. ನವರಾತ್ರಿಲ್ಲಿ ತಂಬಲವೂ ಇದ್ದು. ಒಂದೊಂದು ದಿನದ ಬೊಂಡ ಬಾಳೆಹಣ್ಣು ಸಿಂಗಾರ,ಎಣ್ಣೆ ದೀಪಕ್ಕೆ ಎಲ್ಲ ಅಲ್ಲಿಗೆ ಕೊಂಡೋಯೆಕ್ಕು. ಗುರಿಕ್ಕಾರ ಪ್ರಾರ್ತನೆ ಮಾಡೆಕ್ಕು.ಹಿರಿ ಮನೆಯೋರಿಂಗೆ ಹೋಪಲೆಡಿಯೆದ್ರೆ ಎಂಗಳ ಮನೆಗೆ ಬಂದು ಇಂದ್ರಾಣದ್ದು ನಿಂಗೊ ಹೋಯೆಕ್ಕು ಹೇಳಿದರೆ ಎಂಗೊ ಹೋಯೆಕ್ಕು.
ಎಂಗಳ ಮೂಲೆಂದ ಒಂದು ಮೈಲು ದೂರಕ್ಕೆ ಕೆಳ ಇಳುಕ್ಕೊಂಡು ಹೋಯೆಕ್ಕು ಚಾವಡಿಗೆ. ಹೊತ್ತೋಪಗ ತಂಬಲದ ಸಾಮಾನು ತೆಗೆಶ್ಯೊಂಡು ಕೆಳ ಬೈಲಿಂಗೆ ಹೋದರೆ ಹೊಳೆ ಕರೆಲ್ಲಿ ಭೂತದ ಚಾವಡಿ. ದೇವಸ್ತಾನದ ಅಡಿಗಳು ಅಲ್ಲಿಯ ಸ್ತಾನಿಕ ಒಟ್ಟಿಂಗೆ ಬಕ್ಕು. ಬಪ್ಪಗ ತಡವಾದರೆ ತಂಬಲ ಕಟ್ಟಿ ಬಿರಿವಗ ತುಂಬಾ ಕತ್ತಲೆ ಆವುತ್ತು. ಅದರಲ್ಲಿಯೂ ಆ ವಠಾರಲ್ಲಿಪ್ಪ ಕೆಲವು ಬಳೆ ಹಾಕಿದ ಯಜಮಾನಕ್ಕೊ ಬಂದು ಸೇರೆಕ್ಕು. ಅವು ಬಂದ ಮೇಲೆ ತಂಬಲ ಎಲ್ಲ ಮುಗುದು ಬಟವಾಡೆ. ಎಲ್ಲ ಆಗಿ ಹೆರಡುವಗ ಎಂಟೊಂಬತ್ತು ಗಂಟೆ ಆದರೂ ಆತು. ಕೆಲವೊಂದರಿ ಬ್ರಾಹ್ಮರಿಂಗೆ ಕಲಿಶೆಕ್ಕು ಹೇಳಿಯೇ ತಡವು ಮಾಡುವದೂ ಇತ್ತು. ಒಂದರಿ ಹಾಂಗೆ ತಡವು ಮಾಡಿದ್ದಕ್ಕೆ ಎಂಗಳಲ್ಲಿಂದ ಹೋದ ಗುರಿಕ್ಕಾರ ಹಾಂಗೆ ತಡವು ಮಾಡುವದಕ್ಕೆ ರಜ ಪರೆಂಚಿದಾಡ. ಬಂತು ಕೋಪ ಅಲ್ಲಿದ್ದವಕ್ಕೆ. ಎಂಗಳ ಮೂಲೆಂದ ಇಬ್ರೇ ಇದ್ದದು. ಅವು ತುಂಬ ಜನ ಇತ್ತಿದ್ದವಡೊ. ಮಾತು ಜೋರಾಗಿ " ಎಲ್ಲೆ ಬಲ್ಲೆ.ಸೂವೋಣುಕೊ, ಕಲ್ಪಾವೆ ಭಟ್ರ್ವೆ" ಹೇಳಿಯೂ ಆಗಿತ್ತು. ಮರದಿನವೂ ಹೋಯೆಕ್ಕು. ಹೋಗದ್ದರೆ ಗುರಿಕ್ಕಾರ ಕರ್ತವ್ಯ ಲೋಪ ಮಾಡಿದ ಹಾಂಗೆ ಆವುತ್ತನ್ನೆ.
    ಹಾಂಗೆ ಮರದಿನ ಗುರಿಕ್ಕಾರನ ಮನೆಲ್ಲಿ ನಾಲ್ಕೈದು ಮನೆಯೋರು ಸೇರಿ ಆಲೋಚನೆ ಮಾಡಿದವು
. ಅವರ ಎದುರೆ ನಾವು ಸೋತು ಹೋಪಲಾಗ ಹೇಳುವದು ಎಲ್ಲೋರ ಅಭಿಪ್ರಾಯ. ಹೇಂಗಾದರೂ ಗುರಿಕ್ಕಾರನೊಟ್ಟಿಂಗೆ ನಾಲ್ಕೈದು ಜನ ಹೋಪದು. ಹೋಪಗ ತುಂಬ ಕತ್ತಲ ಆಯೆಕ್ಕು. ಅವು ಬಂದು ನಮ್ಮ ಕಾದು ಕೂರೆಕ್ಕು. ನಾವು ಹೋಪಗ ತಡವಾದರೆ ,ತಂಬಲಕ್ಕೆ ಬೇಕಾದ ಸಾಮಾನು ಎತ್ತದ್ದರೆ ತಂಬಲ ಕಟ್ಟುವದು ಹೇಂಗೆ? ಪ್ರಾರ್ತನೆ ಮಾಡುವದು ಆರು? ಹೇಳಿ ಎಲ್ಲ ಸಮಸ್ಯೆ ಆವುತ್ತು. ನಾವು ಅಲ್ಲಿಗೆ ಎತ್ತದ್ದೆ ಬಾಯಿ ಬಾಯಿ ಬಿಡೆಕ್ಕು.ಬ್ರಾಹ್ಮರು ಎಂತ ಹೇಳಿ ತೋರಸೆಕ್ಕು ಹೇಳಿ ಈ ಉಪಾಯ ಮಾಡಿದವು.
   ಹತ್ತು,ಹದಿನೈದು ಮಡಲ ಸೂಟೆಗಳ ತೆಕ್ಕೊಂಡವಡೊ. ಸಾಮಾನು ತೆಗೆಶ್ಯೊಂಡು ಹೆರಟವಡೊ. ಗುಡ್ಡೆ ತಲೆಂದ ಕೆಳ ಇಳುದು ಹೋಯೆಕ್ಕನ್ನೆ. ಗುಡ್ಡೆ ಕೊಡಿಲ್ಲಿ ಕೆಳ ಚಾವಡಿಲ್ಲಿದ್ದೋರಿಂಗೆ ಕಾಂಬ ಹಾಂಗೆ ಕೆಲವು ಮರಂಗೊಕ್ಕೆ ಸೂಟೆಗಳ ಕಟ್ಟಿದವಡೊ.ಹೇಂಗಾದರೂ ಕತ್ತಲೆ ಆಯಿದನ್ನೆ! ಎಲ್ಲ ಸೂಟೆಗಳನ್ನೂ ಕಿಚ್ಚು ಕೊಟ್ಟು ಹೊತ್ತುಸಿದವಡೊ.ಮತ್ತೆ ಇವರ ಕೈಲ್ಲ್ಯೂ ಕೆಲವು ಸೂಟಗೊ. ಎಲ್ಲ ಒಟ್ಟಿಂಗೆ ಹೊತ್ತುಸಿ ಕೈಲ್ಲದ್ದದರ ಬೀಸಿಗೊಂಡು ಹೋಪಗ, " ಬೆರಣ್ಣೇರು ಪಾಕ ಜನ ಬರುಪ್ಪೇರೊ,ದಾನೆ?ದಿಂಜ ಸೂಟೆ ತೋಜುಂಡತ್ತೋ"ಹೇಳ್ಯೊಂಡು ಪೆಟ್ಟಿಂಗೆ ಹೇಳಿ ಕಟ್ಟಿಗೊಂಡು ಬಂದ ಜನ ನವಗೆ ಬೇಡಪ್ಪ ಇವರ ಶುದ್ದಿ ಹೇಳಿ ಓಡಿದವಡ. ಇವು ಚಾವಡಿಗೆ ಹೋಪಗ ಅಡಿಗಳು ಕಾಯುತ್ತಿತ್ತಿದ್ದವು. ಮತ್ತೆ .ತಂಬಲ ಕಟ್ಟಿ ಅಲ್ಲಿಂದ ಹೆರಡುವಗ ಅಲ್ಲಿ ಒಳುದ್ದು ಅಡಿಗಳು ಮಾಂತ್ರಮತ್ತೆ ಎಂಗಳಲ್ಲಿಂದ ಹೋದೋರು! ಹೇಂಗೆ ಉಪಾಯ!
               ಹತ್ತರಾಣ ಇನ್ನೊಂದು ಗ್ರಾಮಲ್ಲಿ ಒಬ್ಬ ಪಟೇಲ ಶೆನವ. ತೀರ್ವೆ ವಸೂಲಿಂಗೆ ಹೇಳಿ ಮನೆ ಮನೆ ಬಪ್ಪದಲ್ಲ. ಅವಕ್ಕೆ ತೀರ್ವೆಂದ ಹೆಚ್ಚು ಆದಾಯ ಬೇರೆ ರೀತಿಲ್ಲಿ ಮಾಡಿಗೊಂಬದಡೊ. ಊರಿಲ್ಲಿ ಯಾವ ಟೆಂಟಿನ ಮೇಳವೇ ಬರಲಿ. ಆಟ ಪಟೇಲನ ಲೆಕ್ಕಲ್ಲಿ. ಮೇಳದೋವಕ್ಕೆ ಹಣ ಕೊಡುಲೆ ಊರಿಲ್ಲಿ ಕೆಲವು ಶ್ರೀಮಂತರ ಮನೆಗೊಕ್ಕೆ ಉಗ್ರಾಣಿ ಹೋಕು. "ಪಟೇಲರು ಹೇಳಿದ್ದಾರೆ ಮೇಳದವರಿಗೆ ಕೊಡಲು   ಇಷ್ಟು ಹಣ ಕೊಡಬೇಕಂತೆ" ಹೇಳಿ ಎಲ್ಲೋರಿಂದಲೂ ಹತ್ತು ಆಟದ ಪೈಸೆ ವಸೂಲಕ್ಕಡೊ. ಮತ್ತೆ ಅವರ ಊಟದ ಖರ್ಚಿಂಗೆ ಬೇಕಾದ್ದು ಊರಿಂದಲೇ ಆಯೆಕ್ಕು. ಆದರೆ ಆಟ ಮಾಂತ್ರ ಪಟೇಲನ ಲೆಕ್ಕದ್ದು. ಆಟದ ದಿನವೂ ಅಷ್ಟೆ. ನಾಲ್ಕು ಪುಳ್ಳರುಗೊಕ್ಕೆ ಚಾ ಕುಡಿಶಿಕ್ಕಿ, ಆಟದ ಹೊತ್ತಿಂಗಪ್ಪಗ ಗಲಾಟೆ ಆಗದ್ದ ಹಾಂಗೆ ನೋಡುವ ಚಮತ್ಕಾರ ಹೀಂಗೆ. ಚಾ ಕುಡುದ ಮಕ್ಕಳೇ ರಜ  ಗಲಾಟೆ ಮಾಡುವದು, ಅಲ್ಲಿಗೆ ಪಟೇಲ ಬಪ್ಪದು. ಎರಡೆರಡುಕೈಲಿ ಬಾರುಸುವದು. ಅವು ಕೂಗಿಗೊಂಡು ಆಚಿಕೆ ಹೋಪದು. ಇದರ ನೋಡಿದ ಒಳುದ ಮಕ್ಕೊ ಹೆದರಿ ಪೆಟ್ಟು ಬೀಳುವದು ಬೇಡ ಹೇಳಿ ಸುಮ್ಮನೆ ಕೂಪದು. ಸಭೆ ನ್ಶ್ಶಬ್ದ ಆವುತ್ತು. ಶೇನವನಲ್ಲಿಯ ಏನಾದರೂ ಕಾರ್ಯಕ್ರಮ ಆವುತ್ತೆರೆ ಊರಿಂದಲೇ ಎಲ್ಲಾ ಸಾಮಾನು ವರ್ಷವೂ ಗೇಣಿ ರೂಪಲ್ಲಿ ಹೋಯೆಕ್ಕು..ಹೀಂಗೆ ಇದ್ದ ಸಾಮಾಜಿಕ ವ್ಯವಸ್ತೆ ಈಗ ಎಲ್ಲೋರೂ ಪೇಟೆ ಸೇರಿದ ಕಾರಣ ಬರೇ ನೆಂಪು ಮಾಂತ್ರ!

ಮದಲು ಮಾತಾಡಿದೋನು ಬಾಳೆಲೆ ತರೆಕ್ಕು

  "ಮದಲು ಮಾತಾಡಿದೋನು ಬಾಳೆಲೆ ತರೆಕ್ಕು"
                    ಗಾದೆಯ ಮಾತು "ವೇದಕ್ಕೆ ಸಮಾನ"ಡೊ.ಕೆಲವೊಂದರಿ ಈಮಾತುಗಳ ನಿಜವಾಗಿ ಕಾಣುತ್ತು. ಆನು ಕೆಲಸಲ್ಲಿಪ್ಪಗ ಸರಕಾರಿ ಶಾಲೆ ಆದಕಾರಣ ಬೇರೆ ಭೇರೆ ಶಾಲಗೊಕ್ಕೆ ವರ್ಗ ಆಯಿಕ್ಕೊಂಡಿತ್ತು. ಮಾಂತ್ರ ಅಲ್ಲ. ಕೇರಳದ ಬಡಗು ಕೋಡಿಲ್ಲಿದ್ದ ಕಾರಣ ಮಲಯಾಳಿಗಳ ಸಂಪರ್ಕ ಇತ್ತು. ಕೆಲವು ಶಾಲೆಗಳಲ್ಲಿ ಮಲಯಾಳ ಸಮಾನಾಂತರ ಕ್ಲಾಸುಗೊ ಇದ್ದ ಕಾರಣ ಅಷ್ಟು ದೂರಂದ ಮಲಯಾಳಿಗೊ ಬಂದೊಂಡಿತ್ತಿದ್ದವು. ಕನ್ನಡ ಗೊಂತಿದ್ದೋರು ಎಂಗೊ ಹೇಳ್ಯೊಂಡು ಬಂದೋರುದೆ ಇಲ್ಲಿ ಹಿಂದಿ, ಸಂಸ್ಕ್ರುತ ಹೇಳ್ಯೊಂಡು ಎಂಗಳೊಟ್ಟಿಂಗೆ ಇದ್ದ ಕಾರಣ ಅವರ ಸಹವಾಸ ಇತ್ತು. ಕೆಲವು ಜನ ಒಳ್ಳೆಯೋವುದೆ ಹೊಟ್ಟೆ ಪಾಡಿಂಗೆ ಬಂದೋರು ಒಳ್ಳೆ ಗೆಳೆಯರಾಗಿತ್ತಿದ್ದವು. ಒಳ್ಳೆ ಮಾಸ್ಟ್ರಕ್ಕೊ ಆಯೆಕ್ಕು ಹೇಳಿ ಅವಕ್ಕೆ ಗೊಂತಿಲ್ಲದ್ದ ವಷಯ ಎಂಗಳತ್ರೆ ಕೇಳಿ ಮಕ್ಕೊಗೆ ಮನಃಪೂರ್ತಿಯಾಗಿ ಕಲಿಶಿದೋರೂ ಇದ್ದವು. ಅಂಥೋರಲ್ಲಿ ಒಬ್ಬ ಎನ್ನ ಗೆಳೆಯ ಅವರಲ್ಲಿ ಚಾಲ್ತಿಲ್ಲಿದ್ದ ಒಂದು ಗಾದೆಯನ್ನೂ (ಮಿಂಡಿಯವನ್ ಎಲೆಕ್ಕಂಡ ಕೊತ್ತೋಣೊ) ಅದಕ್ಕೆ ಸಂಬಂಧಿಸಿದ ಕತೆಯನ್ನೂ ಹೇಳಿತ್ತಿದ್ದ
           ಒಂದರಿ ಎಂಟು ಹತ್ತು ಜನ ಗೆಳೆಯರು ಹೊತ್ತೋಪಗ ಹೀಂಗೇ ಅಂತೆ ತಿರಿಕ್ಕೊಂಡು ಹೋದವಡೊ.ಹೋದವು ಹೋದವು.ಷ್ಟು ದೂರ ಹೇಳಿದರೆ ಮಾತಾಡ್ಯೊಂಡು ಹೋದೋವಕ್ಕೆ ಎಷ್ಟು ನಡದ್ದೆಯೋ, ಎಲ್ಲಿಗೆತ್ತಿತ್ತು, ಎಷ್ಟು ಹೊತ್ತಾತು ಹೇಳಿ ಗೊಂತಾಯಿದಿಲ್ಲೆಡೊ. ಮಾತಿಲ್ಲಿ ಮುಳುಗಿದೋವಕ್ಕೆ ಹೊತ್ತು ಕತ್ತಲೆ ಆದ್ದೋ, ಮತ್ತೆ ಇರುಳು ದಾರಿ ಕಾಣದ್ದೆ ಆದ್ದೋ ಒಂದೂ ಗೊಂತಿಲ್ಲೆ. ಒಬ್ಬಂಗೆ ಅದರ ಅರಿವಾಗಿ ವಾಚ್ ನೋಡಿದರೆ ಒಂಬತ್ತು ಗಂಟೆ ಕಳುದ್ದು. ನೋಡಿದರೆ ಮಾರ್ಗ ಬಿಟ್ಟು, ಕಾಡು ಪ್ರದೇಶಲ್ಲಿದ್ದವು. ಅವ ಗೆಳೆಯರತ್ರೆ ದಾರಿ ತಪ್ಪಿ ಬಂದದರ ಹೇಳಿದ ಮೇಲೆ ಒಳುದೋವಕ್ಕೆ ಗೊಂತಾತಷ್ಟೆ. "ಎಂತ ಮಾಡುವದು? ಮುಂದೆ ದಾರಿ ಕಾಣುತ್ತಿಲ್ಲೆ.ಎಲ್ಲಿಗೆ ಹೋಪದು? ಆರತ್ರೆ ದಾರಿ ಕೇಳುವದು ಹೇಳಿದರೆ ಕಾಡ ನಡುಕೆ ಮನಷ್ಯರು ಬಿಟ್ಟು ಮನೆಗಳೂ ಇದ್ದೋ!ಮರ ಬಿಟ್ಟ ಮಂಗಂಗಳ ಹಾ<ಗಾದವಡೊ.ಹಾಂಗೆ ಪರಡಿಗೊಂಡು ರಜ ಮುಂದೆ ಹೋಪಗ ದೂರಕ್ಕೆ ಒಂದು ಬೆಣಚ್ಚು ಕಂಡತ್ತಡೊ.ಬೆಣಚ್ಚು ಇರೆಕ್ಕಾರೆ ಅಲ್ಲಿ ಮನುಷ್ಯರೇ ಇದ್ದವು ಹೇಳಿ ಧೈರ್ಯ ಮಾಡ್ಯೊಂಡವು.ಏನೋ ಒಂದು ಪೊಟ್ಟುಧೈರ್ಯಂದ  ಪರಡಿಗೊಂಡು ಮುಂದೆ ಮುಂದೆ ಹಾದವಡೊ. ಅಂದಾಜು ಸರಿ ಆತಡೊ. ಅಲ್ಲಿ ಒಂದು ದೊಡ್ಡ ಮನೆ ಇತ್ತಡೊ.
ದೊಡ್ಡ ಮನೆ ಮಾಂತ್ರ ಅಲ್ಲ ಮನುಷ್ಯರೂ ಇತ್ತಿದ್ದವಡೊ ಅಲ್ಲಿ. ಬರೇ ಸಣ್ಣ ಮನೆಯೂ ಅಲ್ಲ . ಬರೇ ಬಡವರೂ ಅಲ್ಲ . ಒಳ್ಳೆ ಜನಂಗಳ ಹಾಂಗೆ ಕಂಡತ್ತಿವಕ್ಕೆ. ಸದ್ಯ ದೇವರು ದೊಡ್ಡೋನು ಒಂದೊಳ್ಲೆ ಆಶ್ರಯ ಸಿಕ್ಕುವ ಹಾಂಗೆ ಮಾಡಿದ" ಹೇಳ್ಯೊಂಡು ಮನೆ ಎದುರಂಗೆ ಎತ್ತಿದವು.ಏನೋ ಅವರಲ್ಲಿ ಆರೋ ಒಬ್ಬ ಪುಣ್ಯಾದಿಗ ಇದ್ದಿಕ್ಕು.ಮನೆಂದ ದೀಪ ಕಂಡದು ಮಾಂತ್ರ ಅಲ್ಲ. ಜನಂಗಳನ್ನೂ ಕಂಡತ್ತು. ಮಕ್ಕೊ ಮರಿಗೊ ಇತ್ತಿದ್ದವೋ ಅಲ್ಲ ಉಂಡಿಕ್ಕಿ ಮದಲೇ ಒರಗಿದ್ದವೋ ಗೊಂತಾಯಿದಿಲ್ಲೆ ಇವಕ್ಕೆ. ಬಹುಶಃ ಗಂಡ ಹೆಂಡತ್ತಿ ಆಯಿಕ್ಕು ಇಬ್ರ ಕಂಡತ್ತು ಇವಕ್ಕೆ. ಎಂತದೇ ಆಗಲಿ. ಹೇಂಗಾದರೂ ಆಶ್ರಯ ಕೊಡೆಕ್ಕಾರೆ ಅವರ ದಿನಿಗೇಳಿ ಕೇಳಿಗೊಂಬೊ ಹೇಳಿಗೊಂಡವು.ಮಾತಾಡದ್ದಿದ್ದರೆ  ಬಂದದು ಗೊಂತಪ್ಪದು ಹೇಂಗೆ? ಕಾಲಿಂಗ್ ಬೆಲ್ ಇದ್ದರೆ ಒತ್ತಿಕ್ಕುಲಾವುತ್ತಿತ್ತು. ಕರೆಂಟೇ ಇಲ್ಲದ್ದಲ್ಲಿ ಕಾಲಿಂಗ್ ಬೆಲ್ ಎಲ್ಲಿಂದ! ಅಂತೂ ಇವು ಬಂದದು ಮನೆಯೋರಿಂಗೆ ಗೊಂತಾತು ಹೇಳಿ ಕಾಣುತ್ತು. ಬಾಗಿಲು ತೆಗದವಡೊ." ಆರು,ಎಲ್ಲಿಂದ ಬಂದದು?ಎಂತಗೆ ಹೀಂಗೆ ಕಾಡಿನ ಕರೆಂಗೆ ಬಂದದು ಹೇಳಿ ಎಲ್ಲ ವಿಚಾರುಸಿಗೊಂಡು, ಸದ್ಯ ಒಳ್ಳೆಯೋರು ಆಗಿರೆಕ್ಕು ದಾರಿ ತಪ್ಪಿ ಬಂದದಾಯಿಕ್ಕು ಹೇಳಿ ಬಾಗಿಲು ತೆಗದು ಒಳ ಬಪ್ಪಲೆ ಹೇಳಿದಡೊ ಯಜಮಾನ.ಬಂದೋರ ಹೆರ ಚಾವಡಿಲ್ಲಿ ಹಸೆ ಹಾಕಿ ಕೂಪಲೆ ಹೇಳಿದಡಾ.ಮತ್ತೆ "ರಜ ಆಸರಿಂಗೆ ತತ್ತೆ ಹೇಳಿ ಒಳ ಹೋದಡೊ.
              " ಬಂದೋರು ಹಶುವಾಗ್ಯೊಂಡು ಇದ್ದ ಹಾಂಗೆ ಕಾಣುತ್ತು. ಊಟ ಆಯಿದೊ ಕೇಳುತ್ತೆ ಮದಲು ರಜ ಕುಡಿವಲೆ ಎಂತಾರು ಕೊಟ್ಟಿಕ್ಕಿ ಮತ್ತೆ ಊಟ ಆಗದ್ದರೆ ಊಟಕ್ಕಿದ್ದದರನ್ನೂ ಕೇಳುವೊ ಹೇಳಿ, ಒಳ ಗೆಂಡ ಹೆಂಡತ್ತಿ ಮಾತಾಡಿಕ್ಕಿ ಹೆರ ಬಪ್ಪಗ ಬೆಲ್ಲ ನೀರು ತೆಕ್ಕೊಂಡು ಬಂದಡೊ. ಆಸರಿಂಗೆ ಕುಡುದಪ್ಪಗ " ನಿಂಗೊ ರಜ ವಿಶ್ರಾಂತಿ ಮಾಡಿ. ನಿಂಗೊಗೆ ಊಟ ಆಗಿರ. ತುಂಬ ಜನ ಇದ್ದ ಕಾರಣ ಎಲ್ಲೋರಿಂಗೂ ಇದ್ದದು ಸಾಕಾಗ. ಒಬ್ಬನೋ ಇಬ್ರೋ ಆಗಿದ್ದರೆ ಸುಧರುಸಲಾವುತ್ತಿತ್ತು.ಎಲ್ಲೋರಿಂಗೂ ಸಾಕಾಗ. ಬರೇ ಅರ್ಧ ಗಂಟೆಲ್ಲಿ ಎಲ್ಲ ತಯಾರಾವುತ್ತು" ಹೇಳಿಕ್ಕಿ ಒಳ ಹೋದಡೊ.
   ವಿಶ್ರಾಂತಿ ತೆಕ್ಕೊಂಬಲೆ ಮನುಗಿದೋರಿಂಗೆ ಗಾಬರಿ,ಒಟ್ಟಿಂಗೆ ದಾರಿ ತಪ್ಪಿ ಹೀಂಗೆ ಸಿಕ್ಕಿ ಬಿದ್ದ ನಾಚಿಕೆ ಎಲ್ಲ ಒಟ್ಟಿಂಗೆ ಇತ್ತಡೊ. ಅಂಬಗ ಅವರಲ್ಲಿ ಒಬ್ಬಂಗೆ ಹೀಂಗೆ ಯೋಚನೆ ಹೊಳತ್ತಡೊ."ಈಗ ಮನೆಲ್ಲಿ ಇಬ್ರೇ ಇಪ್ಪದು. ನಾವು ಹತ್ತು ಜನ ಇದ್ದು. ಉಂಬಲೆ ಬಟ್ಳೋ ಇದ್ದರೆ ಷ್ಟೆಲ್ಲ ಇಕ್ಕೊ!ಬಾಳೆಲೆ ಹಾಂಗೆ ತಂದು ಮಡಗುತ್ತವೋ? ಇನ್ನು ಊಟಕ್ಕಪ್ಪಗ ಬಾಳೆಲೆ ಬೇಕನ್ನೆ.ಯಜಮಾನ ಹೋಗಿ ತಪ್ಪಲೆ ಇಲ್ಲೆ.ನಮ್ಮಲ್ಲಿ ಆರಾರು ಒಬ್ಬನತ್ರೆ ಬಾಳೆಲೆ ತಪ್ಪಲೆ ಹೇಳುಗಷ್ಟೆ!ಎನ್ನಂದ ಎಡಯ ನಿಂಗೊ ಆರಾದರೂ ತರೆಕ್ಕು. ಆರು ಹೇಳಿ ಈಗಳೇ ನಿಶ್ಚಯ ಮಾಡಿಗೊಳ್ಳೆಕ್ಕು" ಹೇಳಿ ಎಲ್ಲೋರತ್ರೂ ವಿಷಯ ಹೇಳಿದಡೊ.ಅವರೊಳದಿಕ್ಕೆ ಚರ್ಚೆ. ಆರು ಬಾಳೆಲೆ ತಪ್ಪದು ಹೇಳಿ. ಅದಕ್ಕೆ ಇನ್ನೊಬ್ಬ " ಸುಮ್ಮನೆ ಚರ್ಚೆ ಮಾಡುವದೆಂತಕೆ. ನಾವು ಒಂದು ತೀರ್ಮಾನಕ್ಕೆ ಬಪ್ಪೊ.ನಾವೆಲ್ಲೋರುದೊ ಮೌನವಾಗಿಪ್ಪದು. ಆರು ಮದಲು ಮಾತಾಡಿದವೋ ಅವು ಬಾಳೆಲೆ ತಪ್ಪದು ಹೇಳುವ ತೀರ್ಮಾನಕ್ಕೆ ಬಂದವಡೊ. ಎಲ್ಲೋರುದೆ ಬಾಯಿ ಮುಚ್ಚಿ ಮನಿಕ್ಕೊಂಡವಡೊ.
ಇಷ್ಟೆಲ್ಲ ಅಪ್ಪಗ ಒಳ ಅಡಿಗೆ ಆಯಿದು. ಯಜಮಾನ ಹೆರ ಬಂದ! ಎಲ್ಲೋರನ್ನು "ಊಟಕ್ಕೇಳಿ"ಹೇಳಿದನಡೊ. ಮಾತಾಡದ್ದೆ ಮೌನವಾಗಿದ್ದ ಕಾರಣ ಒರಗಿದ್ದವೋ ಹೇಳುವ ಸಂಶಯ ಅವಂಗೆ.ಆರೊಬ್ಬರೂ ಮಾತಾಡುತ್ತವಿಲ್ಲೆ.ಇವಂಗೆ ಗಾಬರಿ! ಒಬ್ಬನ ಮೈ ಕುಲುಕ್ಕುಸಿ ಹೇಳಿದಡೊ. ಆದರೂ ಮಾತಾಡುತ್ತವಿಲ್ಲೆ! ಅವಂಗೆ "ಎಂತಪ್ಪ ಇವರ  ಉಸಿರೇ ನಿಂದು ಹೋಯಿದೋ ಹೇಳುವಷ್ಟು ಗಾಬರಿ ಆಗಿತ್ತಡೊ. ಪರವೂರೋರು ಮನೆಗೆ ಬಂದು ಹೀಂಗಾತಕಂಡ್ರೆ ಗಾಬರಿ ಅಪ್ಪದು ಸಹಜವೇ ಅಲ್ಲದೋ!
ದಾರಿ ನಡದು ಬಚ್ಚಿದೋವಕ್ಕೆ ನಿಜವಾಗಿಯೂ ಒರಕ್ಕೇ ಬಂದಿತ್ತು ಹೇಳಿ ಕಾಣುತ್ತು.ಮತ್ತೆ ಒಪ್ಪಂದ ಪ್ರಕಾರ ಮದಲು ಮಾತಾಡಿದೋನು ಬಾಳೆಲೆ ತರೆಕ್ಕನ್ನೆ!ಆರೂ ಮತ್ತುದೇ ಬಾಯಿ ಒಡದ್ದವಿಲ್ಲೆಡೊ.ಇವರ ಏಳುಸುವ ಗೌಜಿಲ್ಲಿ ಗಾಬರಿಂದ ಉದಿ ಆದ್ದೇ ಒಬ್ಬರಿಂಗೂ ಗೊಂತಾಯಿದಿಲ್ಲೆ.ಯಜಮಾನ ಹೆದರಿ ಹತ್ತರೆ ಇದ್ದ ಬೇರೆ ಮನೆೋರ ದಿನಿಗೇಳಿದಡೊ. ಅೆಲ್ಲ ಬಂ ಕಣ್ಣು ಮುಚ್ಚಿ ಮುಸುಕ್ಕು ಹಕಿ ಮನುಗಿದೋರು ಹಂದುತ್ತವಿಲ್ಲಡೊ. ಒಬ್ಬಂಗೆ ಫಕ್ಕನೆ ಕಣ್ಣು ಒಡು ಹೋತಡೊ. ಕಣ್ಣೊಡದು ನೋಡುತ್ತ. ಸುತ್ತೂ ತುಂಬ ಜನ ಸೇರಿದ್ದು ಕಂಡತ್ತು. ಎಲ್ಲೋರನ್ನೂ ಏಳುಸಿದಡೊ. ಕಣ್ಣು ಪೊಜಕ್ಕಿಗೊಂಡು ಎದ್ದೋರು " ನೀನು ಮದಲು ಮಾತಾಡಿದ್ದು. ಬಾಳೆಲೆ ನೀನೇ ತರೆಕ್ಕು ಹೇಳಿದಡೊ. ಅದರ ಕೇಳಿದೋವು ಎಲ್ಲ ಎದ್ದವು. ಯಜಮಾನಂಗೆ ಹೋದ ಜೀವ ಬಂದ ಹಾಂಗೆ ಆತಡೊ.ಮತ್ತೆ ಅದೇ ತಣ್ಣನೆಯನ್ನೇ ಉಂಡಿಕ್ಕಿ ಅಲ್ಲಿಂದ ಮನೆಗೆ ಬಂದವಡೊ.ಹಾಂಗೆ ಈ ಗಾದೆ ಮಾತು ಹುಟ್ಟಿಗೊಂಡದಡೊ.ಯಾವುದೇ ಜವಾಬ್ದಾರಿಯ ಒಪ್ಪಿಗೊಂಡು ಮುಂದೆ ನಿಂದು ಹೊಣೆಗಾರಿಕೆ ಒಪ್ಪಿಗೊಂಲೆ ತಯಾರಿಲ್ಲದ್ದರೆ ಈ ಗಾದೆ ಮಾತು ಪ್ರಯೋಗ ಅಪ್ಪಲೆ ಮತ್ತೆ ಶುರುವಾತಡೊ.

ತೊಂಡೆ ಬಿತ್ತು ತಪ್ಪಲೆ ಹೋದ್ದು

                 ತೊಂಡೆ ಕಾಯಿ ಬಿತ್ತು ತಪ್ಪಲೆ ಮನೆಗೆ ಹೋದ್ದು.
         
                           ಅಧ್ಯಾಪಕರ ತರಬೇತಿಗೆ ಸೇರುಲಪ್ಪಗ ಹತ್ತೆರೆ ಆವುತ್ತು ಹೇಳಿ ಮಾಯಿಪ್ಪಾಡಿ ಶಾಲೆಗೆ ಸೇರಿದೆ. ಅಂಬಗ ಅದು ಬುನಾದಿ ಶಿಕ್ಷಣ ತರಬೇತಿ ಶಾಲೆ ಆಗಿತ್ತು.  ಹತ್ತರೆ ಇದ್ದ ಸಿರಿಬಾಗಿಲು, ಮಧೂರು, ಸೂರಂಬೈಲು ತ್ತ ಪಟ್ಳ ಶಾಲಗೊಕ್ಕೂ ಎಂಗೊ ಕಲಿಶುಲೆ ಅಭ್ಯಾಸ ಮಾಡಲೆ ಹೋಯೆಕ್ಕು. ಮಾಯಿಪ್ಪಾಡಿ ಶಾಲೆಲ್ಲಿಯೂ ಒಂದು ಮಾದರಿ ಶಾಲೆ ಇದ್ದು. ಬೇಸಿಕ್ ಟ್ರೈನಿಂಗ್ ಹೇಳುತ್ತವು. ನಮ್ಮ ಉಡುಗೆ ತೊಡುಗೆ ಖದ್ದರ್ ಆಯೆಕ್ಕು ಹೇಳುವದು ಕಡ್ಡಾಯ ಆಗಿತ್ತು. ಈ ಮೇಲೆ ಹೇಳಿದ ಶಾಲೆಗಳೂ ಮತ್ತೆ ಹತ್ತರಾಣ ಬೇರೆ ಕೆಲವು ಶಾಲೆಗಳ ಬೇಸಿಕ್ ಪ್ರೈಮರಿ ಶಾಲಗೊ ಆಗಿತ್ತು. ಈ ಶಲಗೊಕ್ಕೆಲ್ಲ ನೂಲುವಿಕೆ ಕಡ್ಡಾಯ. ನೂಲು ತೆಗವಲೆ ತಕಲಿ, ಚರಕ ಸರಕಾರಂದಲೇ ಕೊಟ್ಟಿತ್ತಿದ್ದವು. ೂಲು ಮಾಡುಲೆ ಹತ್ತಿ ಕೂಡಾ ಎಂಗಳಲ್ಲಿಂದಲೇ ಎಲ್ಲ ಶಾಲಗೊಕ್ಕೂ ಅವು ಬಂದು ತೆಕ್ಕೊಂಡು ಹೋಯೆಕ್ಕು. ಕೊಟ್ಟ ಹತ್ತಿಂದ ನೂಲು ತೆಗದು ತಿಂಗಳ ಕೊನೆಗೆ ಈ ಶಾಲಗೊ ಹುಂಡಿ ರೂಪಲ್ಲಿ ತಂದು ಎತ್ತಸೆಕ್ಕು ಹೇಳುದು ಕಡ್ಡಾಯ.ಹಾಂಗೆ ತಂದು ಕೊಟ್ಟುಗೊಂಡಿತ್ತಿದ್ದವು ಕೂಡ.

 ಶಾಲೆಲ್ಲಿ ಎಂಗೊ ಕಲಿಶೆಕ್ಕಾದ್ದು ಚಟುವಟಿಕೆ ಮೂಲಕ ! ಜೀವನಲ್ಲಿ ನವಗೆ ಬದುಕ್ಕುಲೆ ಅಗತ್ಯವಾದ ಚಟುವಟಿಕೆಗಳ( ಅಡಿಗೆ,ಬೇಸಾಯ,  ಕೈಗಾರಿಕೆ, ಆಚಾರಿ ಕೆಲಸ ಕೂಡ) ಆಧರುಸಿ ಕ್ಲಾಸಿಲ್ಲೇ ಮಕ್ಕೊಗೆ ವಿವರುಸಿಕ್ಕಿ ,ಪ್ರತ್ಯಕ್ಷ ಅವರತ್ರೇ ಮಾಡುಸೆಕ್ಕು. ಭಾಷಾ ಪಾಠ,ಗಣಿತ,ವಿಜ್ಞಾನ,  ಅಧ್ಯಯನ  ಹೀಂಗೆ ಎಲ್ಲವನ್ನೂ ಚಟುವಟಿಕಗೆ ಸಮನ್ವಯಿಸಿ ಕಲಿಶೆಕ್ಕು ಹೇಳುವದು ತತ್ವ. ಗಾಂಧಿ ಅಜ್ಜಂದಾಗಿ ಇಡೀ ದೇಶಲ್ಲಿ ಈ ಕ್ರಮ ಇತ್ತು.ಆ ಕಾಲಲ್ಲಿದ್ದ ಎಂಟನೇ ಕ್ಲಾಸು ಮುಗುದು ಶಾಲೆ ಬಿಟ್ಟೋನಿಂಗೆ ಸ್ವಂತ ಕಾಲ್ಲಿ ನಿಂಬ ಹಾಂಗೆ ಹೇಳಿದರೆ ಸ್ವಾವಲಂಬನಂದ ಇಪ್ಪ ಹಾಂಗೆ ಆಯೆಕ್ಕು ಹೇಳುವ  ತತ್ವ. ಈಗಾಣದ್ದೋ  ಕ್ರುಷಿ ಆರಿಂಗೂ ಇಷ್ಟ ಇಲ್ಲೆ ಮಾಂತ್ರ ಅಲ್ಲ, ಅದರ ನಂಬಿಗೊಂಡರೆ ಹೊಟ್ಟೆಯೂ ತುಂಬ. ಅಂಬಗ ಈ ಕಾಫಿಗೆ ಪ್ರಾಮುಖ್ಯತೆ ಇತ್ತಿಲ್ಲೆ. ಮಕ್ಕೊ ಎಲ್ಲ ಷಾಯ ಕುಡಿವದು.ಅದಕ್ಕೆ ಕಾಯ ತಯಾರಿ ಒಂದು ಚಟುವಟಿಕೆ! ಕ್ಲಾಶಿಂಗೆ ಹೋದ ಕೂಡ್ಳೇ ಮಕ್ಕಳತ್ರೇ ಷಯ ಹೇಂಗೆ ತಯಾರು ಮಾಡುವದು ಹೇಳಿ ಎಲ್ಲ ಹೇಳುಸಿಕ್ಕಿ, ಬೇಕಾದ ಸಾಮಾನಿನ ಪಟ್ಟಿ ಮಾಡಿತ್ತು. ಮಕ್ಕಳೇ ಹೋಗಿ ಸಾಮಾನು ತಪ್ಪದು. ಮಕ್ಕಳೇ ಕಷಾಯ ತಯಾರು ಮಾಡಿ ಎಲ್ಲೋರೂ ಕುಡಿವದು. ಮಧ್ಯಾಹ್ನದ ವರೆಗಾಣ ಚಟುವಟಿಕೆ!
      ಮತ್ತೆ    ಮಧ್ಯಾಹ್ನ ಮೇಲೆ ಮಕ್ಕಳತ್ರೇ ಅದರ ಬಗ್ಗೆ ಪ್ರಶ್ನೆ ಉತ್ತರ ಮತ್ತೊಂದು ಪ್ರಬಂಧ,  ಎಷ್ಟು  ಖರ್ಚಾತು ಹೇಳಿ ಲೆಕ್ಕ. ಸಂಬಾರು ಜೀನಸಿಲ್ಲಿ ಏನೆಲ್ಲ ಶಕ್ತಿಗೊ ಇದ್ದು, ಎಲ್ಲೆಲ್ಲಿ ಬೆಳೆತ್ತ? ಹೇಂಗೆ ಬೆಳೆಶುವದು ಹೀಂಗೆಲ್ಲ ಕಲಿಶುವ ಕ್ರಮಕ್ಕೆ "ಬೇಸಿಕ್ ಶಿಕ್ಷಣ" ಹೇಳಿದರೆ ಬದುಕ್ಕುಲೆ  ಮುಖ್ಯವಾಗಿ ಬೇಕಾದ ವಿದ್ಯಾಭ್ಯಾಸ ಹೇಳಿ ಇತ್ತು.ಅಂಬಗ  ಅಲ್ಲಿಯಾಣ ಶಾಲೆ ಹೆಡ್ಮಾಸ್ಟ್ರನೂ ತುಂಬ ಸ್ಟ್ರಿಕ್ಟ್! ಎಂಗೊ ಖಾದಿ ವಸ್ತ್ರಂಗಳನ್ನೇ ಧರುಸೆಕ್ಕು,ತಿಂಗಳಿಂಗೊಂದರಿಯೂ ಊರಿಂಗೆ ಹೋಪಲಾಗ. ಅಡಿಗೆ, ಊಟ ಎಲ್ಲ ಅಲ್ಲಿಯೇ. ಅಲ್ಲಿಯೇ ಎಂಗೊನಿಂಬಲೆ ಬೇರೆ ಕಟ್ಟಡಂಗಳೂ ಇತ್ತು. ಊಟಕ್ಕೊಂದು ಭೋಜನ ಶಾಲೆ.ಊಟ ತಿಂಡಿ ಎಲ್ಲ ಅಲ್ಲೇ. ಅದಕ್ಕ   ತಾಗಿಗೊಂಡು ಅಡಿಗೆ ಶಾಲೆ . ಎಂಗಳೇ ಒಂದೊಂದು ವಾರ ಒಂದೊಂದು ಪಂಗಡಂಗೊ ಅಡಿಗೆ ಮಾಡುವದು. ಬಳುಸುಲೂ ಒಂದೊಂದು ಪಂಗಡ.ಪಾತ್ರೆ ತೊಳವಲೆ ಒಂದ ಪಂಗಡ ಹೀಂಗೆಲ್ಲ ಇತ್ತು.
            ಉದಿಯಪ್ಪಗ ಐದು ಗಂಟೆಗೆ ಎದ್ದು  ಪ್ರಾರ್ಥನೆ ಆಗಿ ಬಂದರೆ ಮತ್ತೆ ಹೆಜ್ಜೆ ಊಟ. ಹತ್ತು ಗಂಟೆಗೆ ಕ್ಲಾಸ್ ಶುರು. ಮಧ್ಯಾಹ್ನ ಊಟ ಮುಗಿಶಿ ಹೋದರೆ ಮದಲು ಸೂತ್ರ ಯಜ್ಞ! ಹೇಳಿದರೆ ನೂಲು ಮಾಡುವದು ಮತ್ತೆ  ಪಾಠಂಗೊ.ಮತ್ತೆ ಕಸ್ತಲೆ  ಏಳು ಗಂಟೆಗೆ ಮತ್ತೆ  ಪ್ರಾರ್ತನೆ ಆದ ಮೇಲೆ ಹೆಡ್ಮಾಸ್ಟ್ರನದ್ದು ಏನಾದರೂ ಸೂಚನೆಗೊ ಇದ್ದರೆ ಹೇಳುವದು ಎಲ್ಲ ಇತ್ತ. ಬೇಸಾಯಕ್ಕೆ ಗೆದ್ದೆಯೂ ಇತ್ತು. ಎಂಗಳಲ್ಲಿ ಹೂಟೆ ಗೊಂತಿದ್ದೋರ ಹೂಡುವದು,ನೇಜಿ ನೆಡುವದು, ಬೇಳೆದ ಮೇಲೆ  ಗೆದ್ದೆ ಕೊಯ್ವದು ಬಡುದು ಬತ್ ಕೇರುವದು   ಕೊಇ ಎಲ್ಲ ಎಂಗಳೇ.ಕೊಇದಾಗಿ  ತರಕಾರಿ ಬೆಳೆಶುವದೂ ಎಂಗಳೇ .ಕುಂಬ್ಳ ಕಾಯಿ ಸಾಕಾಗದ್ದರೆ ಕಾಸರಗೋಡು ಪೇಟೆಂದ ಗಾಡಿಲ್ಲಿ ತಪ್ಪದು ಎಂಗಳೇ ಆಯೆಕ್ಕು. ಈ ಬಗ್ಗೆ ಏನಾದರೂ ಮಾಹಿತಿ ಹೇಳೆಕ್ಕಾದ್ದು ಕೇಳೆಕ್ಕಾದ್ದು ಅಂಬಗಳೇಈ ಸಭೆಲ್ಲಿ ಆಯೆಕ್ಕು.
   ಅಂಬಗಂಬಗ ಊರಿಂಗೆ ಹೋಯಕ್ಕಾದೋರು  ಅಸೌಖ್ಯದ ಕಾರವಾದರೆ ಆರೋಗ್ಯ ಮಂತ್ರಿಯೆ ಒಪ್ಪಿಗೆ ತೆಕ್ಕೊಳ್ಳೆಕ್ಕು. ಕ್ಲಾಸ್ ಮಾಸ್ಟ್ರ ಒಪ್ಪೆಕ್ಕು. ಇವರದ್ದೆಲ್ಲಶಿಫಾರಸು ತೆಕ್ಕೊಂಡ ಮೇಲೆ ಹೆಡ್ಮಾಸ್ಟ್ರನ ಒಪ್ಪಿಗೆ ಸಿಕ್ಕಿದರೆ ಮತ್ತೆ ಊರಿಂಗೆ ಹೋಪಲಕ್ಕು.ಅತ್ಯಗತ್ಯ ಹೇಳಿದರೆ ಮನೆಲ್ಲಿ ಮದುವೆ, ಬೇರೆ ಅನುಪತ್ಯಂಗೊ ಇದ್ದು ಹೇಳಿದರೂ ಆ ದಿನಕ್ಕೆ ಮಾಂತ್ರ ರಜೆ.ಒಬ್ಬ ಅವನ ಅಪ್ಪನ ತಿಥಿ ಮಾಡ್ಳೆ ಆನೇ ಹೋಯೆಕ್ಕಸ್ಟೆ ಹೇಳಿದ್ದಕ್ಕೆ ಅದರ ಒಂದು ವಾರ ಮುಂದೆ ಹಾಕಿದರೆ ಎಂತ ಕೇಳುಗು!ಲೊಟ್ಟೆ ಕಾರಣ ಕೊಟ್ಟರೆ ಎಂಗಳ ಪೈಕಿ ಕೆಲವು ಜನ ಗುಟ್ಟಾಗಿ ಹೆಡ್ಮಾಸ್ಟ್ರನ ಕಾಂಬಲೆ ಹೋಗಿ ಚಾಡಿ ಹೇಳುವದೂ ಇದ್ದು. ಅದರೆಲ್ಲ ಕೇಳಿ ಸಂಬಂಧ ಪಟ್ಟೋ ದಿನಿಗೇಳಿ ಬೈವದೂ ಇದ್ದು.   ಸತ್ಯ ,ಶಾಂತಿ, ಅಹಿಂಸೆ ಹೇಳುವದು  ಗಾಂಧಿ  ತತ್ವ! ಇದರ ಚಾಚೂ ತಪ್ಪದ್ದಿಪ್ಪ ಮನುಷ್ಯ  ಎಂ ಹೆಡ್ಮಾಸ್ಟ್ರ!. ಹಾಂಗ ಲೊಟ್ಟೆ ಹೇಳಿಯ ಹೋಯೆಕ್ಕಾಗಿತ್ತು. ಆದರೆ ಇದರೆಲ್ಲ  ತಪ್ಪುಸಿಗೊಂಡು  ಊರಿಂಗೆ ಹೋಪಲೆ ಒಂದು ಕಾರಣ ಹುಡುಕ್ಕಿ ಸಿಕ್ಕಿದ್ದು ಹೀಂಗೆ ಒಬ್ಬಂಗೆ!

ಅಂದು ಕಸ್ತಲೆ ಭಜನೆ ಎಲ್ಲ ಮುಗುದು ಈ ವರ್ದ ತರಕಾರಿ ಎಂತರ ಎಲ್ಲ  ಬೆಳೆಶುವದು ವಿಷಯ ಚರ್ಚೆಗೆ ಬಂತು.ಕುಂಬಳ ಕಾಯಿ ಹೆಚ್ಚು ಬಿತ್ತು ಹಾಕಲಕ್ಕು ಹೇಳಿ ಒಬ್ಬ. ಮತ್ತೊಬ್ಬ ಖರ್ಚಿಂಗಿಪ್ಪ ಮಣಸು ನಾವೇ ಬೆಳೆಶುವೊ ಹೇಳಿ ಮತ್ತೊಬ್ಬ. ಬದನೆ , ಅಲತ್ತೊಂಡೆ ಹೀಂಗೆ ಚಎಚೆ ಬೆಳತ್ತು. ಒಟ್ಟಿಂಗೆ ತೊಂಡೆ ಕಾಯಿ ಕೂಡಾ ಹೆಚ್ಚು ನ್ಬುಡ ಸಂಪಾದುಸಿ ನೆಡುವದೋ ಹೇಳಿ   ಇನ್ನೊಬ್ಬ . ಸರಿ ಮತ್ತೊಬ್ಬ ಹೇಳಿ ವಿಷಯವೇ ಬೇರೆ. ಬಳ್ಳಿ ತಂದು ತಂಡು ಮಾಡಿ ನೆಡುವದರ ಬದಲು ತೊಂಡೆ ಬಿತ್ತು ಸಂಪಾದುಸಿದರೆ ತುಂಬ ಬೆಳೆಶುಲಕ್ಕು. ಬಳ್ಳಿಯ ಹೊತ್ತೊಂಡು ಬಪ್ಪದರ ಬದಲು ಬಿತ್ತು ತಪ್ಪದೂ ಸಭ ಅಲ್ಲದೋ ಹೇಳಿ ಕೇಳಿದ. " ಓಹೋ ! ತೊಂಡ ಬಿತ್ತೂ ಸಿಕ್ಕುತ್ತೋ? ಎನಗೆ ಗೊಂತೇ ಇಲ್ಲೆ. ಎನ್ನ ಲೆಕ್ಲ್ಲಿ ಬಳ್ಳಿಯನ್ನೇ ನೆಟ್ಟು ಅದು ಚಿಗುರಿ ಬರೆಕ್ಕು. ಆನು ಇಂದು ಶುರು ಕೇಳಿದೆ. ತೊಂಡೆ ಬಿತ್ತು ಸಿಕ್ಕುತ್ತು ಹೇಳಿ ಎನಗೆ ೊಂತಿಲ್ಲೆಪ್ಪ" ಹೇಳಿ ಇನ್ನೊಬ್ಬ ೇಳದ. " ಸೆರೆ ನೋಡಿ ಊಳಿ ಹಾಕೆಕ್ಕು ಹೇಳುವದು" ಮರದ ಕೆಲಸ ಮಾಡುತ್ತ ಆಚಾರಿಗಳ  ಪಾಠಡೊ!ಆ ಇನ್ನೊಬ್ಂಗೆ ಒಂದು ಕಾರಣ ಸಿಕ್ಕಿತ್ತು ಊರಿಂಗೆ ಹೋಪಲ.ಎದ್ದು ನಿಂದು ಹೇಳಿದಡ. "ಏಕೆ ಸಿಕ್ಕುತ್ತಿಲ್ಲೆ? ೇಕಾದರೆ ಎಂಗಳ ಊರಿಲ್ಲಿ ತೊಂಡೆ ಬೆಳೆಶುವೋರು ತುಂಬಾ ಜನ ಇದ್ದವು. ಆನು ಬೇಕಾದರೆ ಊರಿಂಗೆ ಹೋಗಿ ತೊಂಡೆ ಬಿತ್ತು ತತ್ತೆ "ಹೇಳಿದಡ.
ಹೆಡ್ಮಾಸ್ಟ್ರ ಚರ್ಚೆಯ ಕೇಳಿಗೊಂಡೆ ಇದ್ದೋರು"ಸರಿ ಅಂಬಗ ನೀನು ಊರಿಂಗೆ ಹೋಗಿ ಬಿತ್ತು ತೆಕ್ಕೊಂಡು ಬಾ" ಹೇಳಿ ಊರಿಂೆ ಹೋಗಿ    ಬಪ್ಪಲೆ ಅಂಬಗಳೇ ಒಪ್ಪಿಗೆ ಆತು.
ಮರದಿನ ಉದಿಯಪ್ಪಗ ಎದ್ದು ಊರಿಂಗೆ ಹೆರಟೊನು ಒಂದು ವಾರದ ವರೆಗೆ ಪತ್ತೆ ಇಲ್ಲೆ! " ಏಕೆ ಬಯಿಂದ ಇಲ್ಲೆ? ಹೇಳಿ ಹೆಡ್ಮಾಸ್ಟ್ರಂಗೆ ಇವಂದೇ ಯೋಚನೆ. ಇಂದು ಬಕ್ಕು ನಾಳಂಗೆ ತ್ತನಾಯಿಕ್ಕು ಹೇಳಿ ಒಂದು ವಾರಕಳುದ ೇಲೆ ಬಂದನಡ ಅವ ಬೇಜಾರು ಮಾಡ್ಯೊಂಡು!." ಆನು ಊರೆಲ್ಲ ಸುತ್ತಿದೆ ಆರತ್ರೂ ಬಿತ್ತು ಸಿಕ್ಕಿತ್ತಿಲ್ಲೆ. ಕೆಲವು ಜನ ಹೇಳಿದವು "ಬಳ್ಳಿಯನ್ನೇ ನೆಟ್ಟು  ಮಾಡೆಕ್ಕಾವುತ್ತು ಹೇಳಿ ಎಲ್ಲೋರೂ ಹೇಳಿದವು" ಹೇಳಿ ಹೊಸ ಲೊಟ್ಟೆ ಹೇಳಿ ಮನಸ್ಸಿಲ್ಲೇ ನೆಗೆ ಮಾಡ್ಯೊಂಡಡೊ. ಗೆಳೆಯರತ್ರೆ ಶುದ್ದಿಹೇಳಿ ಕೊಶಿ ಪಟ್ಟಡೊ.
          ಇದಕ್ಕೊಂದೊಪ್ಪ!- ಹೆಚ್ಚು ಬುದ್ಧಿವಂತರಾದರೂ ಕೆಲವೊಂದರಿ ಅರಡಿಯದ್ದೆ ಸೋತು ಹೋವುತ್ತವು.

Thursday, March 14, 2013

ಜಠರಾಗ್ನಿ ಹೊತ್ತೆಕ್ಕಾದರೆ

                        ಋಣಾನುಬಂಧ
ಶು ಪತ್ನಿ ಸುತ ಆಲಯಾದಿಗೊ  ಋಣಾನುಬಂಧಡೊ.ಅಂದು  ಅನ್ಯ ಮನಸ್ಕನಾಗಿ ಮನೆಂದ ಹೆರಟೋನಿಂಗೆ ಎಲ್ಲಿಗೆ ಹೋಪದು ಎಂತ ಮಾಡಿಕ್ಕುವದು ಹೇಳಿ ಅರಡಿಯ. ಮುನ್ನಾಣ ದಿನ ಮಳೆ ಬಂದು ತಂಪಾಗಿಇದರೂ ಅವನ ಮನಸ್ಸಿಂಗೆ ಮಾಂತ್ರ ತಂಪಾಯಿದಿಲ್ಲೆ. ಇರುಳಿಡೀ ಒರಕ್ಕು ಬಾರದ್ದ, ಹಾಸಿಗೆಲ್ಲೇ ಮಗ್ಗುಲು ಬದಲಿಸ್ಯೊಂಡು ಹೊಡಚ್ಚಿದ್ದೇ ಹೊಡಚ್ಚಿದ್ದು.ಉದಿಯಪ್ಪಗ ಎದ್ದು ಪಾರ್ಕನ ಕಡೆಂಗೆ ಹೋಗಿ ಯೋಚಿಸಿಗೊಂಡು ಕೂದಡೊ
ನಾಲ್ಕು ದಿನ ಮದಲೇ ಊರಿಂಗೆ ಹೋದೋನಿಂಗೆ ಅಣ್ಣಂದ್ರು ಹೇಳಿತ್ತಿದ್ದವು. "ನಿನಗೆ ಒಂದು ಕೂಸಿನ ನೋಡಿದ್ದೆಯೋ. ನೀನ ರಜೆಲ್ಲಿ ಊರಿಂಗೆ ಬಂದ ಕೂದಲೇ ಅವನ ಕರಕ್ಕೊಂಡು ಕೂಸಿನ ನೋಡುಲೆ ಬತ್ತೆಯೋ.ಜಾತಕ ತೋರುಸಿ ಆಯಿದು. ಸರಿಯಾಗಿ ಕೂಡಿ ಬತ್ತು. ಮತ್ತೆಯೇ ಎಂಗೊ ಕೂಸಿನ ನೋಡುಲೆ ತಮ್ಮನನ್ನೂ ಕರಕ್ಕೊಂಡು ಬತ್ತೆಯೋ ಹೇಳಿ ಒಪ್ಯೊಂಡದು.ಫೊಟೊಲ್ಲಿ ನೋಡುವಗ ಚೆಂದ  ಇದ್ದು "ಹೇಳಿದವು.ಎನಗೆ ವಿಷಯ ತಿಳುಸಿ ಊರಿಂಗೆ ಬಪ್ಪಲೆ ಕಾಗದ ಬರದಿತ್ತಿದ್ದವು.ಊರಿಂಗೆ ಹೋದೆ.ಕಲಸಕ್ಕೆ ಸೇರಿ ಆರೇಳು ರ್ಷ ಆತು. ಅಣ್ಣಂದ್ರಿಂಗೆ ಮದುವೆ ಆಗೀ ಆರೇಳು ವರ್ಷ ಕಳುದ್ದು. ಇನ್ನು ಎಷಟು ವರ್ಷ ಮುಂದೆ ಕೊಂಡೋಪದು. ಕೂಸು ಸಾಮಾನ್ಯ ಇದ್ದರೆ ಒಂದು ಮದುವೆ ಹೇಳಿ ಮಾಡಿದರೆ ಎಂಗಳ ಜವಾಬ್ದಾರಿ ಮುಗುತ್ತು ಹೇಳಿ ಎಲ್ಲ ಅಣ್ಣಂದ್ರು ಹೇಳಿತ್ತಿದ್ದವು.
ಕೂಸಿನ ನೋಡುಲೆ ಹೋಗಿಯೂ ಆತು. ಒಂದೆರಡು ಕೂಸುಗಳ ಮದಲೆ ನೋಡಿ    ಇಷ್ಟ ಆಗದ್ದೆ ಬಿಟ್ಟದು. ಆದರೆ ಈ ಕೂಸು ಹಾಂಗಲ್ಲ! ಚಂದ ಇತ್ತು ಕಾಂಬಗ. ತಾನು ಹೆಚ್ಚು ಅಜಪ್ಪುಲಿಲ್ಲೆ ಹೇಳಿ ಮದಲೇ ತೀರ್ಮಾನ ಮಾಡಿದ್ದು, ಮತ್ತೆ  ಕೂಸಿನ ನೋಡುವ ನೆಪಲ್ಲಿ ಕೂಸಿನ ಮನಗೊಕ್ಕೆ ಹೋಗಿ ಸ್ವೀಟ್ ಖಾರ ತಿಂಡಿ ತೊಇಂಡಿಕ್ಕಿ ಬಪ್ಪದೂ ಇಷ್ಟ ಆಗದ್ದಿಪ್ಪದು. ಪಾಪ ಹಣ್ಣು ಹೆತ್ತೋರಿಂಗೂ ಆಸೆ ,ಆಕಾಂಕಷೆ ಇರುತ್ತನ್ನೆ!ಅಂತೂ ಒಂದು ಕೂಸಿನ ಕೊರಳಿಂಗೆ ಗೆಂಟು ಹಾಕದ್ದ್ರೆ ಮತ್ತೆ ಜನಂಗೊ ಬೇರೆ ಏನಾರೂ ಹೇಳ್ಯೊಂಡು ತಿರುಗುವದು ಎಲ್ಲ ಬೇಕೋ? ಹೇಳಿ ಎಲ್ಲ ಗ್ರೇಶ್ಯೊಂಡು ಕೂಸಿನ ಬಗ್ಗೆ ಒಪ್ಪಿಗೆ ಹೇಳಿಯೂ ಆತು. ಕೂಸುದೇ ಒಪ್ಪಿದ್ದು ನ್ಹೇಳಿ ಕಾಣುತ್ತು. ಅಂಬಗಳೇ ಯಾವಾಗ ಬದ್ಧ ಮಾಡುವದು ಹೇಳುವ ವಿಷಯಲ್ಲಿ ಮಾತುಕತೆಯೂ ಆತು. ತನಗೆ ಹೆಚ್ಚು ರಜೆ ಇಲ್ಲದ್ದ ಕಾರಣ ಅಲ್ಲ ಮತ್ತೊಂದರಿ ಊರಿಂಗೆ ಬರೆಕ್ಕಾವುತ್ತ ಕಾರಣ ಅಂದಿಂಗೆ ನಾಲ್ಕೇ ದಿನಲ್ಲಿ  ನಿಶ್ಚಿತಾರ್ಥವೂ ಆಗಿ ಕಳುದ್ದು, ಎಲ್ಲ ಅವಂಗೆ ನೆಂಪಿದ್ದು. ಎಲ್ಲ ಗಡಿಬಿಡಿಲ್ಲೇ ಆಗಿತ್ತು. ಸರಿ ಬದಧವೂ ಕಳುತ್ತು.  ಮದುವೆ ಮತ್ತೆ ಹದಿನೈದು ದಿನಲ್ಲೇ ನಡವದು ಹೇಳಿ ಒಳ್ಳೆ ಮುಹೂರ್ತವೂ ಸಿಕ್ಕಿತ್ತು. ಎರಡು ಕಡೆಯೋರು ಕೂಡಿ ಅಪ್ಪ ಜಂಬಾರ ಅಪ್ಪಗ ಹತ್ತರಾಣ ನಂಟ್ರಿಷ್ಟ್ರು ಎಲ್ಲ ಬದ್ದಕ್ಕೂ  ಬಂದಿತ್ತಿದ್ದವು. ಹಾಂಗೆ ನೆಂಟ್ರಷ್ಟ್ರುಗೊಕ್ಕೆ ಅಂದೇ ಹೇಳಿಕೆಯೂ ಆಗಿತ್ತು
          ಮತ್ತೆ ಬೆಂಗಳೂರಿಂಗೆಂದು ಕೆಲಸಕ್ಕೆ ಹೋಪಲೆ ಶುರು ಮಾಡಿಯೂ ಆಯಿದು. ತನ್ನ ಮದುವ ಹೇಳಿ ಅಪ್ಪಗ ಮನಸ್ಸಿಲ್ಲಿ ಹಲವು ಬಗೆಯ ಕನಸುಗಳ ಕಲ್ಪಿಸಿಗೊಂಡಿದ್ದದು. ಗೆಳೆಯರೊಟ್ಟಿಂಗೆ ವಿಷಯ ಹೇಳಿ ಮದುವಗೆ ಎಲ್ಲೋರೂ ಬರೆಕ್ಕು ಹೇಳಿ ಹೇಳಿಕೆ ಹೇಳಿಯೂ ಆಗಿತ್ತು. ಊರಿಲ್ಲಿ ಅಣ್ಣಂದ್ರು ಆ ವ್ಯವಸ್ತೆ ಮಾಡುತ್ತನ್ನೆ!
ಒಂದು ಹೊಡೆಲ್ಲಿ  ಏನೋ ಬದಲಾವಣೆಯ ಗಲಿಬಿಲಿ, ಒಟ್ಟಿಂಗೆ ಬಿಡಾರ ಮಾಡೆಕ್ಕನ್ನೆ ಅದಕ್ಕೆ ಬೇಕಾದ  ವ್ಯವಸ್ಥೆ ಆಯೆಕ್ಕು ಹೀಂಗೆಲ್ಲ ಆಲೋಚನೆ ಮುಂದುವರುಕ್ಕೊಂಡೂ ಇದ್ದು.ಅಂತೂ ತಲೆ ತುಂಬ ಯೋಚನೆ.ಮದುವೆ ಆಗಿ ಪೇಟಗೆ ಕರಕ್ಕೊಂಡು ಬಂದರೆ ಬಿಡಾರಲ್ಲಿ ಒಬ್ಬಳನ್ನೇ ಬಿಟ್ಟಿಕ್ಕಿ ಹೋಯೆಕ್ಕನ್ನೆ.ಅದಕ್ಕೆಂತ ಮಾಡುವದು? ರಜ ಸಮಯ ಅಮ್ಮನ ಕರಕ್ಕೊಂಡು ಬಂದರೆ ಅಮ್ಮನ ಪೇಟೆಲ್ಲಿ ತನ್ನ ಜೊತೆ ಕೂರುಸಿಗೊಂಡ ಹಾಂಗೂ ಆತು ಹೇಳಿ ಎಲ್ಲ ಆಲೋಚನೆ ಮಾಡಿಗೊಂಡಿತ್ತಿದ್ದ.
ಅಲ್ಲಿ ಕೂಸಿನ ಮನೆ ಹತ್ತರನ ಒಬ್ಬ ಮಾಣಿಗೆ ಆಕೂಸಿನ ಮೇಲೆ ಆಸೆ ಇತ್ತು. ಆದರೆ ಕೇಳಿದರೆ ಕೊಡವು.ಎಂತ ಮಾಡುವದು? ಹೇಂಗಾದರೂ ಈ ಮದುವೆ ತಪ್ಪುಸೆಕ್ಕು ಹೇಳಿ ಯೋಚನೆ ಮಾಡಿದ. ಹೇಂಗೋ ಮದುವೆ ಅಪ್ಪಲಿಪ್ಪ ಮಾಣಿಯ ವಿಳಾಸ ತೆಕ್ಕೊಂಡ. ಇಲ್ಲದ್ದ ಅಪವಾದ ಃಆಕಿ, ಆ ಕೂಸು ಸರಿ ಇಲ್ಲೆ, ಅದಕ್ಕ ಬೇರೆ ಹುಡುಗರ ಸಹವಾಸಇ ತ್ತು . ಆನು ಅದೇ ಊರಿನೋನ. ಎನಗೆ ಗೊಂತಿದ್ದು. ಈ ವಿಷಯದ ಸತ್ಯ  ಇನ್ನೊಂದರಿ ಎಂಗಳ ಊರಿಂಗೆ ಬಂದು ಬೇರೆ ಮನೆಯೋರತ್ರೆ ವಿಚಾರುಸಿದರೆ ಸತ್ಯ ಗೊಂತಕ್ಕು ಹೇಳಿಯೋ ಸುಮ್ಮನೆ ಒಂದು ಕಾಗದ ಗೀಚಿದ.ಲೋಕಲ್ಲಿ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡ್ಲಕ್ಕು ಹೇಳಿ ಒಂದುಗಾದ ಇದ್ದು. ಆದರೆ ಇಲ್ಲಿ ಇಲ್ಲದ್ದ ಶುದ್ದಿಯ ಅವನ ಕೆಮಿಗೆ ಹೊುಸಿಯೂ ಆತು.ಒಬ್ಬನ ಮನಸ್ಸು ಕೆಡುಸುಲೆ ಸಾಕಾತು ಈ ವಷದಾ ಭಾಣ!
       ಪೋಸ್ಟ್ ಮೇನ್ ಕಾಗದ ತಂದು ಕೊಟ್ಟದರ ನೋಡಿದ ಮೇಲೆ ಇವನ ಮನಸ್ಸೇ ಸರಿಯಿಲ್ಲೆ. ದುರ್ಬಲ ಮನಸ್ಸಿನೋವಕ್ಕೆ ಹೀಂಗಿಪ್ಪ ಸಣ್ನ ಲೊಟ್ಟೆ ವಿಷಯ ಕೆಮಿಗೆ ಹೊಕ್ಕತ್ತು ಹೇಳಿ ಆದರೆ ನಾಿ ಕೆಮಿಗೆ ಸಾಸಮೆ ಕಾಳು ಹಾಕಿದ ಹಾಂಗೆ ಾದರ ಗ್ೇಸ ಅಂದಿರುಳು ಒರಕ್ಕೂ ಇಲ್ಲೆ. ಆತು ಸಮಾಧಾನ ಆಯಕ್ಕಾದರೆ ವಿಮರ್ಶೆ ಮಾಡುವ ಯೋಚನೆಯೂ ಬಂತಿಲ್ಲೆ. ತಲೆ ಬೆಶಿಲ್ಲೇ ಅಣ್ಣಂದ್ಿಂಗೆ ಫೋನ್ ಮಾಡಿ " ಮದುವೆ ಸದ್ಯಕ್ಕೆ ಬೇಡ . ಅಥವಾ ಈ ಕೂಸೇ ಬೇಡ ನಾವು ಬೇರೆ ನೋಡುವೊ, ಎನಗೆ ಸಿಕ್ಕಿದ ಸುದ್ದಿಯಂತೆ ಕೂಸಿನ ನತ ಸರಿ ಇಲ್ಲೆೊ" ಹೇಳಿ ಹೇಲಡೊ. ಅದಕ್ಕೆ ಅಣ್ಣಂದ್ರು ಕೋಪಂದ "ನೀನೇ ಒಂದರಿ ಅವರ ಮನಗೆ ಹೋಗಿ ವಿಯ ಹೇಳಿ ಮದುವೆ ವಿಲ್ಲಿ ಮುಂದುವರಿವದು ಬೇಡ ಹೇಳಿಕ್ಕಿಬಾ" ಹೇಳಿದವಡೊ. ಅವನೇ ಊರಿಂಗೆ ಬಂದುಎನಗೆ ಈ ಮದುವೆ ಬೇಡ ಸದ್ಯಕ್ಕೆ ಅನು ಮದುವೆ ಮುಂದೆ ಹಾಕಿದ್ದೆ. ನೀಂಗಳ ಕೂಸಿಂಗೆ ಬೇಕಾದರೆ ಬೇರ ಮಾಣಿಯ ನೋಡಿಗೊಳ್ಲಿ ಹೇಳಿ ಹೇಳಿಕ್ಕಿ ಬಂದಡೊ.
ಹಾಂಗೆ ನಾವ ಗ್ರೇಶುವದು ಒಂದಾದರೆ ವಿಧಿಯ ಯೋಚನೆ ಬೇರೆಯೇ ಇರುತ್ತು ಹೇಳುವದು ಖಂಡಿತ.ಮತ್ತೆ ಆ ಕೂಸಿಂಗೆ ಬೇರೆ ಮದುವೆ ಆಗಿ ಸುಖವಗಿತ್ತಡೊ. ಮಾಣಿಯೂ ಬೇರೆ ಮದುವೆ ಆಗಿ ಸೌಖ್ಯಲ್ಲಿದ್ದಡೊ. ಎಲ್ಲ  ವಿಧಿ ಲೀಲೆ!

ಆಚಾರ ವಿಚಾರಂಗೊ ಹೀಂಗಿತ್ತಡೊ!

To
             ಚಾರ ವಿಚಾರಂಗೊ   ಮದಲು ಹೀಂಗಿತ್ತಡೊ
   
   ಅಂಬಗ ಆನು ಕೆಲಸಕ್ಕೆ ಸೇರಿದ ಹೊಸತ್ತಿಲ್ಲಿ ಹೊಸ ಹೊಸ ಅನುಭವಂಗೊ  ಬಂದಿತ್ತು.  ಆನು ಹೋದ ಊರಿಲ್ಲಿ ಹೆರಂದ ಬಂದೋರಿಂಗೆ  ಉಳಕ್ಕೊಂಬಲೆ  ಸೌಕರ್ಯ ಇತ್ತಿಲ್ಲೆ. ದೂರಂದ ಬಂದೋವು ಎಂಗೊ  ಮೂರು ಜನ ಇತ್ತಿದ್ದೆಯೊ. ಬೇರೆ ವ್ಯವಸ್ತೆ ಆಗದ್ದೆ ಶಾಲೆಲ್ಲೇ ಒಂದು ಮಕ್ಕೊಬುತ್ತಿ ತಂದು ಊಟ ಮಾಡುವ ಕೋಣೆ ಇತ್ತು. ಅದನ್ನೇ ಎಂಗಳ ವಾಸಕ್ಕೆ  ಏರ್ಪಾಡು ಮಾಡ್ಯೊಂಡೆಯೊ.ಕೆಲಸಕ್ಕೆ ಸೇರಿದ ಹೊಸತ್ರಲ್ಲಿ ಸರಿಯಾಗಿ ಕಲಿಶುತ್ತ ಮಾಸ್ಟ್ರ ಹೇಳುವ ಹೆಸರು ತರೆಕ್ಕು ಹೇಳುವ ಉತ್ಸಾಹ ಎಂಗೊಗೆ ಮೂರು ಜನಕ್ಕೂ ಇತ್ತು. ಒಟ್ಟು ಆ ಶಾಲೆಲ್ಿ ಏಳು ಕ್ಲಾಸುಗೊ ಇದ್ದದರ ಏಳು ಜನ ಎಂಗೊ ಒಂದೊಂದು ಕ್ಲಾಸ್  ಹಂಚಿಗೊಂಡೆಯೊ.ಏಳು  ಜನರಲ್ಲಿ ಎಂಗೊ ಮೂರು ಜನ ಹೊಸಬ್ಬರು. ಅದೊಂದು ಹಂದುಳಿದ ಮಕ್ಕಳೇ  ಹೆಚ್ಚಾಗಿದ್ದ ಶಾಲೆ. ಮಕ್ಕೊ  ಕಲಿವಲೆ ಬರೇ ಮೋಸ.ಮನೆಕೆಲಸ  ಕೊಟ್ಟರೂ ಮಾಡವು. ಮಾಂತ್ರ ಅಲ್ಲ ರಜೆ ಮಾಡಿ ಕೆಲಸಕ್ಕೂ ಹೋಕು,ದಿನಾ ಬಾರದ್ದರೆ ಮತ್ತೆ ಬಪ್ಪಗ ಅವರ ತಲೆಲ್ಲಿದ್ದೂ ಮರೆತು ಹೋಯೆಕ್ಕನ್ನೆ. ಒಂದು ಮರಾಟಿ ಹುಡುಗಂಗೆ ಹೇಳಿ ಹೇಳಿ ಸಾಕಾಗಿ, ಕೋಪಂದ ಹುಡುಗನ ಕೈಗೆ ಬೆತ್ತಲ್ಲಿ ಎರಡು ಪೆಟ್ಟು ಕೊಟ್ಟು ನೋಡಿದೆ. ಪೆಟ್ಟು ತಿಂದ ಹುಡುಗ  ಅಪ್ಪನ ಹತ್ರೆ ದೂರು ಹೇಳಿತ್ತಡೊ.ಹೊತ್ಟೋಪಗ ಕೆಲಸ ಬಿಟ್ಟಿಕ್ಕಿ,ಸೀದಾ ಎಂದ್ರಾಣ ಹಾಂಗೆ ಗಡಂಗಿಂಗೆ ಹೋಗಿ, ಹೊಟ್ಟೆ ತುಂಬ ಕುಡುಕ್ಕೊಂಡು ಶಾಲೆ ಹತ್ತರಂಗೆ ಬರುತ್ತಾ ಇತ್ತಡೊ. ದಾರಿಲ್ಲಿ ಏನೇನೋ ಎನ್ನ ಬಯ್ಯುತ್ತಾ , " ಏರು ಅವು? ಆ ಮಾಸ್ಟ್ರು ಎನ್ನ ಬಾಲೆಗು ನೋತುಂಡುಗೆ. ಕೇಣೋಡು ಎಂಕು. ಎನ್ನ ಬಾಲೆಗು ದಾಯೆ ನೋತುನೆ ಎಂದು,ಆಯೆ ಎನ್ನ ನೋಪಿಯಾರ ಆತೆನೋ? ಏನು ಬುಡುವೇನೋ? ಬುಡಾಯೆ. ಕೇಣೋಡೂ".ಹೀಂಗೆಲ್ಲ ಬಾಯಿಗೆ ಬಂದ ಹಾಂಗೆ ಹೇಳ್ಯೊಂಡು ಬತ್ತಾ ಇಪ್ಪಗ ಎಂಗಳ ಶಾಲೆಯ ಇನ್ನೊಂದು ಮಾಸ್ಟ್ರನ ಕಾಂಬಲೆ ಸಿಕ್ಕಿತ್ತಡೊ.ಅವ " ಏರು ನೋತುನೆಗೆ? ದಾಯೆಗು ನೋತುನೆಂದು  ಮಾಂತ ಕೇಂಡಾನ? ಪೊಕ್ಕಡೆ ನೋಪಾಯೇರು. ಈ ಪೋತು ಆರೆಟ ಇಂಚ ಮಾಂತ ಕೇಂಡ ಆರೆಗುಲಾ ಕೋಪ ಬತ್ತುಂಡ ಈ ಪೆಟ್ಟು ತಿನೋಡಾವು. ಅವುಳು ಆಕ್ಳು ಮೂಜಿ ಜನ ಉಳ್ಳೇರು. ಮನಿಪ್ಪಾಂದೆ ಇಲ್ಲಾಡೆಗು ಪೋಲ."ಹೇಳಿ ಹೆದರುಸಿ ಅಪ್ಪಗ" "ಅಂದು ಕಲ್ಪಾಂದುನೈಕು ನೋತುನೆ ಎಡ್ಡೆ ಆಂಡು ಹೇಳ್ಯೊಂಡು" ಹೋತಡೊ ಆ ಮನುಷ್ಯ.
     ಅದೇ ಮಾಸ್ಟ್ರ ಒಬ್ಬ ಮಲಯಾಳಿ ಕ್ರೇಫ್ಟ್ ಮಾಸ್ಟ್ರ. ಅವ ಒಬ್ಬ ಅಲ್ಲಿಯಾಣ ಜಮೀನ್ದಾರ ನ ಮನೆಲ್ಲಿ ಸೇರೊಂಡಿತ್ತಿದ್ದ.ಆ ಬ್ರಾಹ್ಮಣ ತೆಂಕಲಾಗಿ ಶಾಂತಿ ಮಾಡ್ಯೊಂಡಿತ್ತಿದ್ದಡೊ.ಊರಿಲ್ಲಿ ಮದುವೆ ಆಗಿ,ಒಬ್ಬ ಮಾಣಿಯೂ ಇತ್ತಿದ್ದಡೊ.ಆದರೆ ಆ ಹೆಂಡತ್ತಿ ಬೇಗ ತೀರಿ ಹೋದ ಕಾರಣ ತೆಂಕ್ಲಾಗಿಂದಲೇ ಒಂದು ನಾಯರ್ ಹೆಣ್ಣಿನ ಬಪ್ಪಗ ಕರಕ್ಕೊಂಡು ಬಯಿಂದಡೊ.ಬಪ್ಪಗಳೇ ಆ ಹೆಣ್ಣು  ಅವಂಗೇ ಹುಟ್ಟಿದ ಒಂದು ಮಗುವಿನ ಕರಕ್ಕೋಂಡು ಬಯಿಂದಡೊ. ಆ ಕೂಸಿಂಗೆ ಮಲಯಾಳ ಕಲಿಶೆಕ್ಕಾದರೆ ಎಂತ ಮಾಡುವದು ಹೇಳಿ ಯೋಚನೆ ಮಾಡಿದೋನು, ಈ ಮಾಸ್ಟ್ರನತ್ರೆ "ನಿನಗೆ ಎಂಗಳ ಮನೆಲ್ಲೇ ಉಂಡುಗೊಂಡಿಪ್ಪಲಕ್ಕು ಹೇಳಿತ್ತಿದ್ದಡೊ. ಇವಂಗೂಉಳಕ್ಕೊಂಬಲೆ ವ್ಯವಸ್ತೆ ಆತು. ಕೂಸಿಂಗೆ ಮಲಯಾಳ ಕಲಿಶುಲೆ ಜನವೂ ಸಿಕ್ಕಿತ್ತು.
        ಎನ್ನೊಟ್ಟಿಂಗೆ ಇದ್ದೋರಿಂಗೆ ವರ್ಗವೂ ಆಗಿ ಆನೊಬ್ಬನೇ ಆದೆ. ಒಂದು ದಿನ ಆ ಮಾಸ್ಟ್ರ ಅವ ಇಪ್ಪ ಬ್ರಾಹ್ಮಣನ ಮನಗೆ ಎನ್ನ ಬಪ್ಪಲೆ ಹೇಳಿದ. ಒತ್ತಾಯ ಮಾಡಿದ್ದಕ್ಕೆ ಹೋದೆ. ಮನಗೆತ್ತುವಗ ಕತ್ತಲೆ ಆಯಿದು. ಬ್ರಾಹ್ಮಣ ತುಂಬ ಪ್ರಾಯದೋನು. ಎಭತ್ತು ವರ್ ಅಕ್ಕು. ಮಗ ಇದ್ದೋನು ದೂರ ಎಲ್ಲಿಯೋ ಕೆಲಸಕ್ಕೆ ಹೋಯಿದ. ಮನೆಲ್ಲಿ ಆ ಅಬ್ಬೆ ಮಗಳು, ಮತ್ತೆ ಮುದುಕ್ಕ, ಮಾಸ್ಟ್ರ ಮಾಂತ್ರ ಇಪ್ಪದು. ಮತ್ತೆ ಅದೇ ಮಾಸ್ಟ್ರ ಆ ಹುಡುಗಿಯನ್ನೇ ಮದುವೆ ಆಗಿ ಮನೆ ಅಳಿಯ ಆಯಿದಡೊ.ಮುದುಕ್ಕ ಆನು ಹೋಪಗ ಇತ್ತಿದ್ದ ಇಲ್ಲೆ.ಪೇಟೆಗೆ ಹೋಗಿತ್ತಿದ್ದಡೊ.ಎನಗೆ ಬೈರೋಸ ಕೊಟ್ಟು ಮೀವಲೆ ಹೇಳಿದವು. ಬೆಶಿನೀರ ಕೊಟ್ಟಗೆ ತೋರುಸಿದವು. ಮತ್ತೆ ಆ ಮಾಸ್ಟ್ರ ಎನಗೆ ಕೆಲವು ಸಲಹೆಗಳ ಕೊಟ್ಟ. ಇವಂಗೆ ಮಡಿ ಮೈಲಿಗೆ ಹೆಚ್ಚಿದ್ದು. ಮಿಂದಕ್ಕಿ ಬಪ್ಪಗ ಚೆಂಡಿ ವಸ್ತ್ರಲ್ಲೇ ಬರೆಕ್ಕು. ಮತ್ತೆ ಊಟ ಆದಮೇಲೆಯೇ ನಿನ್ನ ವದ್ಸ್ತ್ರವ ಮುಟ್ಟುಲಕ್ಸ್ಟೆ. ಇಲ್ಲದ್ದರೆ ಎನ್ನ ಹಾಂಗೆ      ನೀನು ಉಂಡ ಎಂಜೆಲು ಬಾಳೆ ತೆಗೆಯೆಕ್ಕು ಹೇಳಿ ಬಕ್ಕು. ಹೀಂಗೆಲ್ಲ ಹೇಳಿದ. ಅಡಿಗೆ ಮಾಡುಲೆ ಒಬ್ಬ ಬ್ರಾಹ್ಮಣ ಇತ್ತಿದ್ದ. ಅವನೇ ಬಳುಸುವದು. ಈ ಶುದ್ದಿಯ ಅಲ್ಲಿಗೆ ಹೋದ ಮೇಲೆಯೇ ಆನು ಕೇಳಿದ್ದಾತು. ಮದಲೇ ಆಗಿದ್ದರೆ ಹೋಪಲೇ ಇತ್ತಿಲ್ಲೆ. ನಾಯರ ಹೆಣ್ಣಿನ  ಮನೆಯೊಳದಿಕ್ಕೇ ಮಡಿಕ್ಕೊಂಡು ಇಪ್ಪೋನಿಂಗೆ ಇಷ್ಟೂ ಶುದ್ಧ ಮುದ್ರಿಕೆ ಇದ್ದೋ ಹೇಳಿ ಆಶ್ಚರ್ಯ ಆತು.ಮುನ್ನಾಣ ದಿನ ಪಳ್ಳಿಲ್ಲಿ ಭಾಣ ಮಾಡುವಗ " ಪರಸ್ತ್ರೀ ಸಂಗ ಮಾಡುಲಾಗ" ಹೇಳಿದ ಮುಕ್ರಿ,ಮರದಿನ ಯಾವಾಗಲೂ ಹೋಪ ಹಾಂಗೆ ಒಂದು ಬ್ಯಾರ್ತಿಯ ಕಾಂಬಲೆ ಹೋಗಿಪ್ಪಗ " ನಿನ್ನೆ ಹಾಂಗೆ ಹೇಳಿಕ್ಕಿ ಇಂದು ನೀನು ಎನ್ನ ಹತ್ತರಂಗೆ ಬಂದದು ಸರಿಯೋ?" ಹೇಳಿ ನೆಗೆ ಮಾಡ್ಯೊಂಡು ಕೇಳಿದ್ದಕ್ಕೆ " ಅದು ಎನಗೂ ನಿನಗೂ ಹೇಳಿದ್ದಲ್ಲ, ಲೋಕದೋರಿಂಗೆ ಹೇಳಿದರೆ ಬೇರೆಯೋರಿಂಗೆ" ಹೇಳಿತ್ತಡೊ. ಹಾಂಗಾತು ಬ್ರಾಹ್ಮಣನ   ಶುದ್ಧಂಗೊ. ಆನು ಮಿಂದಿಕ್ಕಿ ಬಂದೆ. ಅಂಬಗ ಮನೆ ಯಜಮಾನ ಬಂದಾಯಿದು. ಅವೂ ಮೀವಲೆ ಹೋದ.
ಆನು ಮಿಂದು ಜಪ ಮುಗಿಶಿಕ್ಕಿ ಕೂದೊಂಡಿಪ್ಪಗ ಅಲ್ಲಿ ಅಂದ್ರಾಣ ಪೇಪರ್ ಕಂಡತ್ತು. ತೆಗದು ಓದುವೊ ಹೇಳಿ ಕಂಡತ್ತು. ಮುಟ್ಟುಲೆ ಹೋಗ ಅಲ್ಲೇ ಇದ್ದ ಮಾಸ್ಟ್ರ" ಐನೆ ತೊಡಂಡ", ಹೇಳಿ ಮಲಯಾಳಲ್ಲಿ ಹೇಳುವಗ  ಏಕೆ ಕೇಳಿದೆ. ಅದಕ್ಕೆ "ಆ ಪೇಪರ್ ಈಗ ಯಜಮಾನ ತಂದದು,ಬಸ್ಸಿನ ಮೈಲಿಗೆ ಎಲ್ಲ ಇದ್ದು, ಕಂಡರೆ ಯಜಮಾನ ಬೈಗು,ಆದರೆ ಚೆಂಡಿ ವಸ್ತ್ರವೇ ಆದ ಕಾರಣ ತೊಂದರೆ ಇಲ್ಲೆ. ಆಸರೆ ಅವ ಬಪ್ಪಗ ಕಾಂಬಲಾಗ" ಹೇಳಿ ಹೇಳಿದ.ಅಂತೂ ಬಂದು ಸೋತತ್ತು. ಈ ಊಟ ಬೇಕಾತಿಲ್ಲೆ. ಹೇಂಗೂ ಮನುಗುಲೆ ಶಾಲಗೇ ಹೋಪದು ಹೇಳಿ ಊಟಕ್ಕೆ ಕಾದೆ. ಕೇರೆ ತಿಂಬ ರಾಜ್ಯಕ್ಕೆ ಹೋದರೆ "ನಡು ತುಂಡು ಆಯೆಕ್ಕೆನಗೆ"ಹೇಳೆಕ್ಕಡೊ.ಹಾಂಗೆ ಅಂದ್ರಾಣ ಮಟ್ಟಿಂಗೆ ಶುದ್ ಬ್ರಾಹ್ಮಣ ಆಯೆಕ್ಕಾಗಿ ಬಂತು.
ಆ ಮಾಸ್ಟ್ರನತ್ರೆ ಕೇಳಿಯೇ ಬಿಟ್ಟೆ." ಹಾಂಗಾದರೆ ಅವ ತಂದ ನೋಟುಗಳೂ ಕಾಗದಂಗಳೇ ಅಲ್ಲದೋ ಎಸ್ಟು ಕೈಗೆ ಹೋಯಿದೋ ಏನೋ? ಆರೆಲ್ಲ ಮುಟ್ಟಿದ ನೋಟುಗೊ ಅಶುದ್ಧ ಆವುತ್ತಿಲ್ಲೆಯೋ?" ಕೇಳಿದೆ. ಅದಕ್ಕೆ ಉತ್ತರ ಹೀಂಗಿತ್ತು."ಹೆರಂದ ಬಂದ ನೋಟುಗಳ ಹಾಂಗೇ ಒಳ ಮ ಕಪಾಟಿಲ್ಲಿ ಮಡಗುಲೆ ಇಲ್ಲೆ. ನೀರಿಲ್ಲಿ ಚೆಂಡಿ ಮಾಡಿ ,ೆಶಿಲ್ಲಿ ಒಣಗುಸಿ ಮತ್ತೆಯೇ ಒಳ ಮಡಗುವದು"  ಹೇಳಿದ.ಮನೆಗೆ ಹೆರಂದ ತಂದ ವಸ್ತುಗಳನ್ನೂ ಹಾಂಗೆ ಚೆಂಡಿ ಮಾಡಿಯೇ ಒಣಗುಸುವದಡೊ.ಉಪ್ಪು ಕೂಡಾ ಚೆಂಡಿ ಮಾಡಿಯೇ ಒಣಗುಸುವದಡೊ.ಅಂತೂ ಹೊಸ ಅನುಭವ ಎನಗಾತು. ಒಬ್ಬ ಅನ್ಯ ಜಾತಿಯ ಹೆಣ್ಣಿನ ಒಡನಾಟಲ್ಲಿಪ್ಪೋನು ಈ ಶುದಧ ಮುದ್ರಿಕೆ ಮಡಿಕ್ಕೊಂಬದು ವಿಶೇಷವೋ> ಅತಿರೇಕವೋ? ಹೀಂಗೆಲ್ಲ ಯೋಚುಸಿಗೊಂಡು ಹೇಂಗೋ ಬಂದದಕ್ಕೆ ಊಟ ಮುಗಿಶಿಕ್ಕಿ ಶಾಲೆಗೆ ಬಂದೆ.
ಈ ಶುದ್ದಿಯ ಆನು ಮನಗೆ ಬಂದಿಪ್ಪಗ ಅಜ್ಜಿಯ ಹತ್ತರೆ ಹೇಳಿದ್ದಕ್ಕೆ ಅಜ್ಜಿ ಹೇಳಿದ್ದೇ ಬೇರೆ. ಹಿಂದೆ ಈ ಕ್ರಮ ಎಲ್ಲಾ ಕಡೆಲ್ಲಿಯೂ ಇತ್ತು. ದವಸ ಧಾನ್ಯ ಜೀನಸು ವಸ್ತುಗಳ ಬೆಲ್ಲವನ್ನೂ ಹೀಂಗೆ ಚೆಂಡಿಮಾಡುವ ಸಂಪ್ರದಾಯ ಮದಲು ಇತ್ತು. ಉಪ್ಪಿನ ಮರಿಗೆ, ಅಥವ ದೋಣಿ ಇತ್ತು ಎಲ್ಲ ಹೇಳಿದವು.ಮೈಲಿಗೆ ವಾಸ್ತ್ರ ಹಾಕುಲೆ ಒಂದು ಮೈಲಿಗೆ ಕೋಲು ಹೇಳಿ ಇಕ್ಕು.ಶಾಲಗೆ ಹೋಪೋು ಕಟ್ಟಿಗೊಂಬ ಕೌಪೀನವು ಮಡಿವಸ್ರದ್ದು ಅಯೆಕ್ಕು.ದೇವರ ಕೋಣ್ವ್ೆ ಮಿಂದಿಕ್ಕಿಯೇ ಒಳ ಹೋಯೆಕ್ಕು ಹೇಳಿ ಕೂಡಾ ಇತ್ತು ಹೇಳಿದವು. ಅಂಬಗ ಕೆಲವು ಕಾದಂಬರಿಗಳಲ್ಲಿ ಓದಿದ್ದು ನೆಂಪಾತು.
ಈಗ ಕಾಲ ಬದಲಿದ್ದು.ಮೂಢನಂಬಿಕೆ ಅಲ್ಲದ್ದರೂ, ಹೆರಂದ ತಂದ ವಸ್ತುಗಳ ಈಗಳು ತೊಳದು ಶುಚಿ ಮಾಡುವದು ಆರೋಗ್ಯಕ್ಕೂ ಒಳ್ಳೆದು,  ಮನಗೆ ಬಂದ ಕೂಡ್ಳೇ ಮಕ್ಕೊ, ದೊಡ್ಡಾದೋರುದೆ ಸಿಕ್ಕ ಸಿಕ್ಕಲ್ಲಿ ಇಡುಕ್ಕುವದು, ಶುಚಿತ್ವದ ಬಗ್ಗೆ ಕಾಳಜಿ ಇಲ್ಲದ್ದಿಪ್ಪದು ಒಳ್ಳೆದಲ್ಲ  ಹೇಳಿ ಕಾಣುತ್ತು. 
   
ಗುಂಪೆ ಗುಡ್ಡೆಲ್ಲಿದ್ದ ಸನ್ಯಾಸಿ

To
                                                ಗುಂಪೆ ಗುಡ್ಡೆಲ್ಲಿದ್ದ ಸನ್ಯಾಸಿ!         ಗುಂಪೆ ಗುಡ್ಡೆ  ಆ ಪ್ರದೇಶಲ್ಲೆಲ್ಲ ಭಾರಿ ಎತ್ತರಲ್ಲಿಪ್ಪ ಜಾಗೆ. ಬರೇ ಒಂದು ಗುಡ್ಡೆ ಅಲ್ಲ ಮೂರು ಗುಡ್ಡೆಗಳ ಸಾಲು ಹೇಳುಲಕ್ಕು. ಒಟ್ಟಿಂಗೆ ಪೊಸಡಿ ಗುಂಪೆ ಹೇಳಿ ಹೇಳುತ್ತವು. ಮೂಡು ದಿಕ್ಕಿಲ್ಲಿಪ್ಪ ದೊಡ್ಡ ಗುಡ್ಡೆಂದ ಅತ್ಲಾಗಿ ಪಡು ಹೊಡೆಂಗೆ ಹೋದರೆ ಒಂದು,ಮುಂದೆ ಹೋದರೆ ಇನ್ನೊಂದು ಒಟ್ಟು ಒಂದು ಹೊಡೆಂದ ಇನ್ನೊಂದು ಕೋಡಿಗೆ ಒಂದು ಮೈಲೇ ಅಕ್ಕು. ಎತ್ತರದ ಗುಡ್ಡೆ ಎಂಗಳ ಮನೆ ಹತ್ತರೆ ಅವಾ ಅದರ ಬುಡಲ್ಲೇ ಎಂಗಳ ಮನೆ ಹೇಳುಲಕ್ಕು. ಗುಡ್ಡೆ ಕೊಡಿಂಗೆ ಹತ್ತಿ ನಿಂದರೆ ಮೂಡ ಹೊಡೆಂದ ನೋಡಿದರೆ ಕನ್ಯಾನ, ಅಡ್ಯನಡ್ಕ, ಪೆರ್ಲ ಹೀಂಗೆ ಕಾಂಗು.ತೆಂಕ ಹೊಡೆಲ್ಲಿ ಆಗ್ನೇಯ ದಿಕ್ಕಿಲ್ಲಿ ಆವ್ತು  ಬದಿಯಡ್ಕ,ಮತ್ತೆ ತೆಂಕಕ್ಕಾವುತ್ತು ಸೀತಂಗೋಳಿ, ನೈರುತ್ಯಕ್ಕೆ ನೊಡಿದರೆ ಕುಂಬ್ಳೆ.ಪಡುವಕ್ಕೆ ನೋಡಿದರೆ ಕರಾವಳಿ ಪ್ರದೇಶಂಗೊ,ಬಡಗಕ್ಕೆ ಸಜಂಕಿಲ ,ಮತ್ತೆ ಮುಂದೆ ಬಾಯಾರು ಹೀಂಗೆ ಹತ್ತೂರುಗಳ ಕಾಂಬಲೆಡಿತ್ತು.
ಎಂಗೊ ಸಣ್ಣಾದಿಪ್ಪಗ, ಹೊತ್ತೋಪಗ ಗುಡ್ಡೆಗೆ ಬಿಟ್ಟ ದನಗೊ ಬಾರದ್ದರೆ ಹುಡುಕ್ಯೊಂಡು ಕೊಡಿಂಗೆ ವರೆಗೆ ಹತ್ತುವೆಯೊ. ಅಲ್ಲೆಲ್ಲ ಹುಡುಕ್ಕಿದರೆ ಸಿಕ್ಯೊಂಡಿತ್ತವು. ಒಟ್ಟಿಂಗೆ ಗುಡ್ಡೆ ತುಂಬ ನೆಲ್ಲಿ ಮರಂಗೊ. ಎಂಗೊಗೆ ಮರ ಹತ್ತಿ ನೆಲ್ಲಿಕಾಯಿ ಕೊಯ್ವದು ಅಭ್ಯಾಸ.ಮತ್ತೆ ಮಳೆಗಾಲಲ್ಲಿ ಕುಂಟಾಲ ಹಣ್ಣು ಕೊಯ್ದು ತಿಂದು ಬಾಯಿ ನೇರಳೆ ಮಾಡ್ಯೊಂಬದು ಇನ್ನೊಂದು ಅಭ್ಯಾಸ!.ವಾರದ ರಜೆಲ್ಯಂತೂ ಗುಡ್ಡೆ ಕೊಡಿಲ್ಲಿ ಅಂತೆ ಅತ್ತಿಂದಿತ್ತೆ ಓಡ್ಯೊಂಡೋ,ಬೇರೆ ಎಂತಾರು ಆಟ ಆಡ್ಯೊಂಡೋ ಇಪ್ಪೆಯೊ.ಹಾಂಗೆ ಗುಡ್ಡೆ ಹತ್ತಿಪ್ಪಗ ಎಂಗೊಗೊಂದು ಕುಶಾಲು ಆಟ ಇತ್ತುಗುಡ್ಡೆ ಕೊಡಿಂದ ಕಲ್ಲುಗಳ ಕೆಳ ಉರುಳುಸುವದು. ದೊಡ್ಡೋರಿಂಗೆ ಗೊಂತಾದರೆ ಬೈಗು. ಆದರೆ ಕಲ್ಲು ಉರುಳಿದ್ದು ಆರು ಹೇಳಿ ಅವು ನೋಡುತ್ತವೋ? ಉರುಳುವದರ ನೋಡಿ ಸಂತೋಷ ಪಡುವದು ಎಂಗಳ ಅಭ್ಯಾಸ! ಈಗಳೂ ಗುಡ್ಡೆ ಅಲ್ಲೇ ಇದ್ದರೂ ದನಗಳ ಹುಡುಕ್ಕಲಂತೂ ಹೋಗೆಡ.ಮತ್ತೆ ನೆಲ್ಲಿ ಮರವೇ ಇಲ್ಲದ್ದರೆ ಅದರ ಆಕರ್ಷಣೆಯೂ ಇಲ್ಲೆ.ಮತ್ತೆ ಮಕ್ಕೊಗೂ ಹಿರಿಯರಿಂಗೂ ಹೊತ್ತು ತೆಗವಲೆ ಟಿ.ವಿ ಇಪ್ಪಗ ಹೆರ ಹೋಪಲೆ ಪುರುಸೊತ್ತು ಸಿಕ್ಕುಗೋ ಅಥವಾ ಮನಸ್ಸಕ್ಕೋ?ಆದರೆ ಮತ್ತೆ ಮತ್ತೆ ಎಂಗಳ ಪೈಕಿ ಒಂದು ಮನೆಯೋರು ( ಅವರ ಸ್ವಂತ ಜಾಗೆಲ್ಲಿ ಅಲ್ಲಲ್ಲಿ ಸೊರಂಗ ತೋಡುಗು. ಅಲ್ಲಲ್ಲಿ ಮಣ್ಣಿನ ರಾಶಿಗೊ ಇಕ್ಕು. ನಡಕ್ಕೊಂಡು ಹೋಪಲೆ ರಗಳೆ ಅಕ್ಕು.  ಸೊರಂಗ ತೋಡಿಯೂ ಏನೋ ಒಂದೆರಡು ಸೊರಂಗಲ್ಲಿ ನೀರಿನ ಒರತೆ ಸಿಕ್ಕಿದ್ದಡೊ.
ಗುಡ್ಡೆಯ ಒಂದು ಹೊಡೇಲ್ಲಿ ಜೋಡು ಬಾವಿಯೂ ಇತ್ತು. ಹತ್ತರೆ ಹತ್ತರೆ ಎರಡು ಬಾವಿಗೊ! ಒಂದು ಬಾವಿಗೆ ಕಲ್ಲು ಹಾಕಿದರೆ ಇನ್ನೊಂದು ಬಾವಿಂದ ಕಲ್ಲು ಬಿದ್ದ ಶಬ್ದ ಕೇಳುಗು. ಇದು ಎಂಗಳ ಇನ್ನೊಂದು ಆಕರ್ಷಣೆ! ಹೀಂಗೆ ಕಲ್ಲು ಹಾಕಿ ಹಾಕಿ ಬಾವಿಯ ಆಳವೇ ಕಡಮ್ಮೆ ಆಯಿದು. ಅಂದ್ರಾಣ ಅಜ್ಯಕ್ಕೊ ಹೇಳುಗು ಅದು ಮದಲು ಪಾಂಡವರು ಇಲ್ಲಿ ಈ ಗುಡ್ಡೆಲ್ಲಿ ವಾಸವಾಗಿತ್ತಿದ್ದವಡೊ. ಅಂಬಗ ಅವು ತೆಗದ ಬಇ ಹೇಳುಗು. ಎನ್ನ ತಮ್ಮನೂ ಅವನ ಗೆಳೆಯನೂ ಒಂದರಿ ಆ ಬಾವಿಲ್ಲಿ ಎಂತ ಇದ್ದು ವಿಶೇಷ ನೋಡುಲೆ ಬಾವಿಗೆ ಇಳುದ್ದವಡೊ. ಏನೋ ಮರದ ಬೇರು ಹಿಡುಕ್ಕೊಂಡು ಇಳುದ ಸಾಹಸವ ಮನೆಲ್ಲಿ ಶುದ್ದಿ ಹೇಳಿ ಎಲ್ಲೋರ ಕೈಂದಲೂ ಬೈಸಿಗೊಂಡೂ ಆಗಿತ್ತು.ದಲೇ ಎಂಗೊ ಯೋಚಿಸಿದ ಪ್ರಕಾರ  ಎರಡು ಬಾವಿಗಳನ್ನ ಜೋಡುಸುವ ಸುರಂಗ ಇದ್ದಡೊ. ಮತ್ತೆ ಎಂಗೊಗೂ ಕಂಡತ್ತು. ಅದಕ್ಕೆ ಶಬ್ದ ಆಚ ಬಾವಿಲ್ಲಿ ಕೇಳುವದು!ಮತ್ತೆ ಆಚಿಕೆ ಕೆಳ ತೀರ್ಥ ಗುಂಪೆ ಹೇಳಿ ಇದ್ದು. ರಜ ಕೆಳಾಚಿ ಇಪ್ಪದ ತೀರ್ಥ ಗುಂಪೆ ಸುರಂಗ! ತೀರ್ಥ ಅಮಾಸೆ ದಿನ ತೀರ್ಥ ಮೀವಲೆ ಹೋಪದು ಅದರೊಳಂಗೆ ಸುರಂಗಲ್ಲೆ ಮುಂದೆ ಹೋಪಗ ಒಂದು ನೀರಿನ ಹೊಂಡ! ಅದಲ್ಲಿ ಮಿಂದು ಅಲ್ಲೆ ಸೇಡಿ ಮಣ್ಣು(ವಿಭೂತಿ) ಪ್ರಸಾದ ಹೇಳಿ ತಪ್ಪದು ಹೀಂಗೆಲ್ಲ ನಡಕ್ಕೊಂಡಿದ್ದು.
              ಈ ಕತೆ ಹೇಳುವ ಸಮಯಲ್ಲೇ ಗುಡ್ಡೆ ಹತ್ತುವದು ಕಮ್ಮಿ ಆಯಿದು.ಒಂದು ದಿನ ಗುಡ್ಡೆ ಕೊಡಿಂಗೆ ಹೋದೋವು ಬಾವಿ ಹತ್ತರಂಗೆ ಹೋದವಡೊ. ಬಗ್ಗಿ ನೋಡಿದರೆ ಅದರೊಳದಿಕ್ಕೆ ಒಬ್ಬ ಮನುಷ್ಯ ತಿಂಗಳುಗಟ್ಲೆ ಗಡ್ಡ ತೆಗೆಯದ್ದ ಕಾರಣ ಸನ್ಯಾಸಿ ಹಾಂಗೆ ಕಂಡತ್ತಡೊ. ಇವರ ಕಾಂಬಗ ತನ್ನ ಮೋರೆ ಕಾಂಬಲಾಗ  ಹೇಳಿಯೋ ಎಂತದೋ ತಲೆ ತಗ್ಗುಸ್ಯೊಂಡಿತ್ತಡೊ!ಅವು ಕೆಳ ಬಂದವು. ಶುದ್ದಿ ಊರೆಲ್ಲ ಹರಡಿತ್ತು. ಮರದಿನ ಕೆಲವು ಜನ ಆ ಸನ್ಯಾಸಿಯ ನೋಡುಲೆ ಹೋದವು. ಮತ್ತೆ ಸನ್ಯಾಸಿಯ ನೋಡ್ಳೆ ಹೋಪಗ ಅಂತೇ ಹೋಪದು ಸರಿ ಆವ್ತಿಲ್ಲೆ ಹೇಳಿ ಕೆಲವು ಜನ ಹಣ್ನು ಹಂಪಲು ಕೊಂಡೋದವು. ಸನ್ಯಾಸಿ ಅದರ ಕಣ್ಣೆತ್ತಿಯೂ ನೋಡಿದ್ದಿಲ್ಲೆ.ಜನಂಗೊ ಗ್ರೇಶಿದವು - ಬಹುಶಃ ತಿಂಬದರಲ್ಲಿ ಆಸಕ್ತಿ ಇಲ್ಲೆ ಅವಂಗೆ ಹೇL ಜನರ ಭಕ್ತಿ ಹೇಚ್ಚಾತು. ಮರದಿನ ಹಲು ಹಣ್ಣು ತೆಕ್ಕೊಂಡು ಹೋದವು. ಜನ ಸನ್ಯಾಸಿಯ ನೋಡ್ಳೆ ಹೋಪದು ಹೆಚ್ಚಾತು. ಹೆಚ್ಚಾಗಿ ಹೊತ್ತೋಪಗಳ ಹೋಪದಾದ ಕೇರಣ ಅಂದು ಸನ್ಯಾಸಿ ಆ ಹೊತ್ತಿಂಗೆ ಬಾವಿಲ್ಲಿಲ್ಲೆ. ಎಲ್ಲಿಗೆ ಹೋದಪ್ಪ! ಎಂತ ಊರು ಬಿಟ್ಟಿಕ್ಕಿ ಹೋದನೋ? ಸಂಚಾರಿ ಸನ್ಯಾಸಯೋ? ಹೀಂಗೆಲ್ಲ ಮಾತಾಡ್ಯೊಂಡಿದ್ದರೂ ಜನಂಗೊ ಹೋದ ಮೇಲೆ ಸನ್ಯಾಸಿ ಅಲ್ಲಿಗೆ ಬಂದು ,ಜನಂಗೊ ಮತ್ತೆ ಬಪ್ಪಗ ಅವ ಅಲ್ಲಿ ಇಲ್ಲದ್ದೆ ಅಪ್ಪಲೆ ಶುರು ಆತು.ಆದರೆ ತಂದು ಕೊಟ್ಟ ಹಣ್ಣು ಹಂಪಲು ಮರ ದಿನ ಕಾಣ್ತಿಲ್ಲೆ.
       ಜನಂಗಳಲ್ಲಿ ಒಬ್ಬಂಗೆ ಸಂಶಯ ಬಂತು.ಏನೋ ಒಬ್ಬ  ಕಳ್ಳ ಸನ್ಯಾಸಿಯೇ ಆಗಿರೆಕ್ಕು ಹೇಳಿ ಆಲೋಚನೆ ಮಾಡಿದಡೊ.ಪೋಲೀಸುಗೊಕ್ಕೆ ತಿಳಿಶಿದರೆ ಗೊಂತಕ್ಕು ಹೇಳಿ ಯೋಚನೆ ಮಾಡಿದ. ಆದರೆ ಆ ಪ್ರದೇಶ ಯಾವ ಸ್ಟೇಶನಿಂಗೆ ಸೇರಿದ್ದು ಹೇಳುವದು  ಅವಂಗೆ ಗೊಂತಲ್ಲೆ. ಎಂಗಳ ಹೊಡೆಂಗೆ ಬದಿಯಡ್ಕ ಹೇಳಿದರೆ ಹತ್ತು ಮೈಲು ದೂರ! ಕುಂಬ್ಳೆ ಹತ್ತು ಮಈಲು ದೂರ ಮತ್ತೆ ಮಂಜೇಶ್ವರ ಹದಿನೈದು ಮೈಲು ದೂರ.  ಮರ್ಗಲ್ಲೇ ಬಪ್ಪಗ ಇನ್ನೂ ಹೆಚ್ಚು.ಅಂತೂ  ಮೂರು ಸ್ಟೇಶನ್ ಗಳೂ ದೂರವೇ ಆವುತ್ತು. ಎಂಗೊಗೆ ಅಗತ್ಯ  ಬಂದರೆ ಇಷ್ಟು ದೂರಕ್ಕೆ ಬರೆಕ್ಕಾರೆ ಅವರ ಕಾರು ಮಾಡಿ ಕರಕ್ಕೊಂಡು ಬರೆಕ್ಕು! ಹಾಂಗೆ ಬಹುಶಃ  ಈ  ಮನುಷ್ಯ  ಯಾವ ತೊಂದರೆಯೂ ಆಗ ಹೇಳುವ ಸುರಕ್ಷಿತ ಜಾಗೆಯ ಹುಡುಕ್ಯೊಂಡದು!
ಅಂತೂ ಹೇಂಗೋ ಪೋಲಿಸುಗೊ ಬಂದವು. ಸನ್ಯಾಸಿಯ ಹುಡುಕ್ಯಂಡು! ಆದರೆ ಆ ಸನ್ಯಾಸ್ದಿಗೆ ಹೇಂಗೆ ಗೊಂತಾತೋ? ಪೋಲೀಸುಗೊ ಬಪ್ಪಗ ಸನ್ಯಾಸಿಯ ಪತ್ತೆಯೇ ಇಲ್ಲ ಹದಿನೈದು ದಿನ ಊರಿನ ಜನರ ಕಣ್ಣಿಂಗೆ ಸನ್ಯಾಸಿಯಾಗಿದ್ದವ ಒಬ್ಬ ಕೊಲೆಗಾರಡೊ! ಅಲ್ಲಿದ್ದರೆ ಪೋಲೀಸುಗೊಕ್ಕೆ ಗೊಂತಾಗ ಹೇಳಿ ಬಂದು ಇದ್ದದಡೊ. ಜನರ ಭಕ್ತಿಯ ದುರುಯೋಗ ಮಾಡ್ಯೊಂಡು ಷಟು ದಿನ ಇದ್ದೋನು ಪೋಲೀಸುಗೊ ಬಪ್ಪಗ ಅವಂಗೆ ಹೇಂಗೆ ಮೂಗಿಲ್ಲಿ ನೆಳವು ಕೂದತ್ತೋ ಅಸಾಮಿಯ ಪತ್ತೆಯೇ ಇಲ್ಲೆ.
             ಶುಕ್ರವರ ಪೂಜಗೆ ಕಿಸ್ಕಾರ ಹೂಗು ತಪ್ಪದು ಎನ್ನ ಕ್ರಮ. ಶಾಲೆ ಬಟ್ಟಿಕ್ಕಿ ಬಪ್ಪಗ ದಾರಿಲ್ಲಿ ಸಿಕ್ಕಿದ ಹೂಗು ತಪ್ಪೆ. ಹಾಂಗೆ ತಪ್ಪಗ ಕೈಂದ ಜರಿ ದಾರಿಲ್ಲಿ ಒಂದು ಕಲ್ಲಿನ ಮೇಗೆ ರಜ ೂಗು ಬಿದ್ದಿತ್ತು. ಮರದಿನ ಆ ದಾರಿಲ್ಲಿ ಹೋಪಗ ಅದೇ ಕಲ್ಲಿನ ಮೇಲೆ ರಜ ಹೆಚ್ಚು,ಮರದಿನ ಇನ್ನ ಹೆಚ್ಚು, ಮತ್ತೊಂದು ದಿನ ಎನ್ನೊಟ್ಟಿಂಗೆ ಇದ್ದನೊಬ್ಬ ಅಲ್ಲಿಗೆತ್ತುವಗ ಹತ್ತರೆ ಹಗು ಸಿಕ್ಕದ್ದೆ ರಜ ದೂರ ಹುಡುಕ್ಯೊಂಡು ಹೋಗಿ ಹೂಗು ತಂದು ಹಾಕುವದು ಕಂಡತ್ತು. ಎಂತಗೆ ಕೇಳಿದ್ದಕ್ಕೆ ಇದೊಂದು ಕಾರ್ಣಿಕದ ಕಲ್ಲು. ಇಲ್ಲಿ ಹೂಗು ಹಾಕಿ ನಮ್ಮ ಅಪೇಕ್ೆ ಹೇಳಿ ಕೈ ಮುಗುದು ಹೋದರೆ ಗ್ರೇಶಿದ ಕೆಲಸ ಆವುತ್ತು ಹೇಳಿಯೋ ಎಲ್ಲ ಹೇಳಿದ. ಆನು ನಿಜ ಸಂಗತ ಹೇಳಿದರೂ ಒಪ್ಪಿದ್ದಾ ಇಲ್ಲೆ. ಜನರ ಮ್ಯವೋ ಎಂತದೋ ಹೇಂಗೆ ಹೇಳಿ ನಿಂಗಳೇ ಯೋಚುಸಿ!

ತಂಬುಳಿ

   ತಂಬುಳಿ
"ತಣ್ಣಿತು ಹುಳಿ" ಹೇಳಿಯೋ ತಂಪಿನ ಹುಳಿ ಹೇಳಿಯೋ ಅರ್ಥ ಇಕ್ಕು. ಅಂತೂ ಮದಲಾಣೋವು ಹೀಂಗಿಪ್ಪ ಒಂದೊಂದು ಕೂಟಿನ ಊಟಕ್ಕೆ ಉಪಯೋಗುಸಿಗೊಂಡಿತ್ತಿದ್ದವು ಹೇಳುವದು ಖಂಡಿತ. ಅಪರ ಕ್ರಿಯಂಗೊಕ್ಕೂ ಈ ತೋವೆ, ತಂಬುಳಿ ಅಗತ್ಯ.ಆದರೆ ನಿತ್ಯಕ್ಕೆ ದಿನಕ್ಕೊಂದು ನಮುನೆದು, ತಂಬುಳಿ ಮಾಡಿಯೇ ಮಾಡಿಗೊಂಡಿತ್ತಿದ್ದವು ಹೇಳಿದರೆ ಎಂಗಳ ಮನೆಲ್ಲಿ ಅಜ್ಜಂಗೆ,ಮತ್ತೆ ಅಪ್ಪಂಗೆ ಇದು ಬೇಕೇ ಬೇಕಾದ ಕಾರಣ ಮಾಡ್ಯೊಂಡಿತ್ತಿದ್ದವು. ಆನು ಸಣ್ಣಾಗಿಪ್ಪಗ ಉಂಡು ಗೊಂತಿದ್ದು. ತಂಬುಳಿ ಹೊಲಕ್ಕೊಡಿದು ಆಗಿಕ್ಕು,ಅಥವಾ   ಹಸಿ ಶುಠಿ, ಉರಗೆ,ಪುಳಿಯಾರ್ಳೆ,ನೀರುಳ್ಳಿ, ಮೆಂತೆ ಹೀಂಗೆ ಒಟ್ಟಾರೆ ತಂಬುಳಿ ಇಕ್ಕೇ ಇಕ್ಕು.  ಈಗಾಣ ಸಾರಿನ ತುಂಬುವ ಜಾಗೆ ತಂಬುಳಿಗಿಕ್ಕು ಹೇಳಿದರೆ ತಪ್ಪಾಗ. ಸಾರು ಮಾಡುತ್ತರೂ ಬೋಳು ಸಾರು. ತೊಗರಿ ಬೇಳೆಯೋ, ಮತ್ತೆ ಟೊಮೆಟೋ ಹೀಂಗೆಲ್ಲ ಇರ. ಹೇಳಿದರೆ ಏನಾದರೂ ನೆಟ್ಟು ಮಾಡಿದ ತರಕಾರಿ ಮಾಂತ್ರ ಬೇಸಗೆಲ್ಲಿ ಗೆದ್ದೆಲ್ಲಿ ನೆಟ್ಟು ಮಾಡಿಗೊಂಡಿಕ್ಕು. ಗೆದ್ದೆ ಕೊಯಿದಾದ ಮೇಲೆಗೆದ್ದೆಲ್ಲಿ ಬೇರೆ ಬೇರೆ ತರಕಾರಿ ಮಾಡುಗು. ಪಲ್ಯ.ಒಟ್ಟು ಹಾಕಿ ಬೆಂದಿ ಹೇಳಿದರೆ ಅವಿಲು. ಹೆಚ್ಚಾಗಿ ಹೆಜ್ಜೆಯೇ ಮಾಡುವದು. ಬೆಶಿ  ಬೆಶಿಹೆಜ್ಜೆ ಗ ತಣ್ಣಂಗಿಪ್ಪ ತಂಬುಳಿ ಸೇರುಸಿ ಉಂಬಲೂ ಲಾಯೊಕ.  ಆರೋಗ್ಯಕ್ಕೂ  ಒಳ್ಳೆದು ಹೇಳುವದು ಅವಕ್ಕೆ ಗೊಂತಿತ್ತು.
   ಷಡ್ರಸ ಹೇಳುತ್ತವು.ಈ ಆರು ರಸಂಗಳಲ್ಲಿ ಒಗರು ಅಥವಾ ಚೊಗರು ಹೊಟ್ಟಗೆ ಹೋಪಲೆ ಈ ಕೊಡಿ ತಂಬುಳಿ ಮಾಡುವದಡೊ. ಕೊಡಿ ಹೇಳಿದರೆ ಗುಡ್ಡೆಗೆ ಹೋದರೆ     ಬೀಜದ ಕೊಡಿ, ದಡ್ಡಾಲ ಕೊಡಿ,ನೆಕ್ಕರಿಕನ ಕೊಡಿ,ಚೇರೆ ಕೊಡಿ ತಗಿ ಕೊಡಿ ಹೀಂಗೆಲ್ಲ ತರ ತರದ ಕೊಡಿಗಳ ತಂದು (ಆದರೆ ಕೊಡಿ ಎಳತ್ತಾಗಿರೆಕ್ಕು) ತೆಂಗಿನ ಕಾಯಿ ಸೇರುಸಿ ಕಡವದಡೊ.ಇದರೆಲ್ಲ ಹಸಿಯೇ ಉಂಬದು. ಒಟ್ಟಾರೆ ತಂಬುಳಿಲ್ಲಿಪ್ಪ ಹುಳಿ ರುಚಿ ಹುಳಿ ಮಜ್ಜಿಗೆಂದಲೇ ಸಿಕ್ಕುವದು. ಹುಳಿ ಮಜ್ಜಿಗೆ ಇಲ್ಲದ್ದರೆ ಬೇರೆ ಹುಳಿ ಸೇರುಸೆಕ್ಕಕ್ಕು.ಮದಲೆಲ್ಲ ಎಲ್ಲ ಮನೆಗಳಲ್ಲಿಯೂ ಕರವ ದನಗಳೋ ಎಮ್ಮೆಗಳೋ ಇಕ್ಕು.ಹಾಂಗೆ ಹುಳಿ ಮಜ್ಜಿಗೆ ತಪ್ಪುಲಿಲ್ಲೆ.ಬರೇ ಹುಳಿ ಮಜ್ಜಿಗೆ ಉಂಬಲಾವುತ್ತಿಲ್ಲೆ. ಈಗಾಣ ಹಾಂಗೆ ಹುಳಿಯಾಗದ್ದ ರೀತಿಲ್ಲಿ ಫ್ರಿಜ್ ನೊಳ ಮಡಗುಲಿಲ್ಲೆ ಅಂಬಗ!ಈಗ ಎಷ್ಟು ಶುದ್ಧ ಹೇಳಿ ಗೊಂತಿದ್ದನ್ನೆ! ತಣ್ಣನೆ ಮಡಗುವದೂ ಫ್ರಿಜಿಲ್ಲಿ,ಹಾಲು ಮಜ್ಜಿಗೆ ಮಸರು ಡಗುವದೂ ಫ್ರಿಜ್ಜೀಲ್ಲಿ.
    ನಾವು ತಿಂಬ ಆಹಾರಲ್ಲಿ ಬೇಕಾದ ವಿಟಾಮಿನ್ನುಗೊ ಬೇಕು ಹೇಳುತ್ತವು ಈಗಾಣ ಡಾಕ್ಟ್ರಕ್ಕೊ. ಅದಕ್ಕೆ ಸಾಕಷ್ಟು ಬೇಳೆಗಳ ತಿನ್ನೆಕ್ಕು ಹೇಳ್ಯೂ ಹೇಳುತ್ತವು. ತಿಂದು ಹೊಟ್ಟೆಲ್ಲಿ ಗೇಸ್ ಉಂಟದರೆ ಮಾತ್ರೆ ತಿನ್ನಿ ಹೇಳಿಯೂ ಹೇಳುತ್ತವು. ತಿಂದ ಅಹಾರ ಸಮ ತೂಕಲ್ಲಿ ಬೇಕು ಹೇಳಿಯೂ ಹೇಳುತ್ತವು. ಹೇಳಿದರೆ ತೂಕ ಮಾಡಿಗೊಂಡು ತಿನ್ನೆಕ್ಕೋ/ ಮದಲಾಣೋವು ಬೆಗರು ಸುರಿಸಿ ಕೆಲಸ ಮಾಡ್ಯೊಂಡು,ಬೇಳೆ ನಿತ್ಯ ತಿನ್ನದ್ದರೂ ಆರೋಗ್ಯಲ್ಲಿತ್ತಿದ್ದವು. ನಿತ್ಯ ಅವಕ್ಕೆ ಶುಗರಿನ ಮಾತ್ರೆಯೋ, ಬಿ ಪಿ ಮಾತ್ರೆಯೋ ಬೇಕಾಗಿ ಬಯಿಂದಿಲ್ಲೆ. ಕಾರಣ ಅಂದು ತಿಂದುಗೊಂಡಿದ್ದ ಆಹಾರದ ಗುಣಂದಲೇ ಆಗಿರೆಕ್ಕಲ್ಲದೋ?ಚಾ,ಕಾಫಿ ಕುಡಿಯದ್ದೆ ಉದಿಯಪ್ಪಗ ನೆಟ್ಟಿಗೆ ನೀರು ಬಿಡುಲೆ ಹೋದರೆ ಮನೆಗೆ ಬಪ್ಪಗ ಹನ್ನೊಂದು ಗಂಟೆಯಾದರೂ ಅಕ್ಕು. ಒಳ್ಳೆತ ಹಶುವಾಗ್ಯೊಂಡಿಕ್ಕು. ಬಂದು ಮಿಂದಿಕ್ಕಿ ಜಪ ಮಾಡಿ ಹೆಜ್ಜೆ ಉಂಬದು. ಈ ಹೊಲಕ್ಕೊಡಿ ತಂಬುಳಿ, ಮತ್ತೆ ಒಟ್ಟು ಹಾಕಿದ ಒಂದು ಬೆಂದಿ,ಮಜ್ಜಿಗೆ ಉಪ್ಪಿನ ಕಾಯಿ ಹೊಟ್ಟೆ ತುಂಬ ಉಂಡಿಕ್ಕಿ ರಜ ವಿಶ್ರಾಂತಿ. ಮತ್ತೆ ನಾಲ್ಕು ಗಂಟೆ ಅಪ್ಪಗ ತೋಟಕ್ಕೋ ಗೆದ್ದೆಗೋ ಹೋದರೆ ಕತ್ತಲಪ್ಪಗ ಬಪ್ಪದು.ಹತ್ತರೆ ಪೇಟೆಯೂ ಇಲ್ಲೆ, ತಿರುಕ್ಕೊಂಡು ಹೋಪಲೆ! ಇರುಳಾಣ ಊಟಕ್ಕೆ ತಂಬುಳಿ ಇಲ್ಲೆ.
ಇನ್ನು ಬಾಣಂತಿ ತಂಬುಳಿ ಬೇರೆ ಇದ್ದಡೊ,ಆನೆ ಮುಂಗಿನ ಕೆತ್ತೆ,  ಹೀಂಗೆಲ್ಲ ಅವಕ್ಕೆ ಜೀರ್ಣಶಕ್ತಿ ಹೆಚ್ಚು ಆಯೆಕ್ಕಾರೆ ಈ ತಂಬುಳಿಯ ಮಾಡುಗು.ಕಂಚು ಸಟ್ಟು,ಕೊಡಗಾಸನ ಹೂಗಿನ ತಂಬುಳಿ ಇದೆಲ್ಲ ಎಲ್ಲೊರಿಂಗು ಅಕ್ಕಡೊ.ಶುಂಟಿ ತಂಬುಳಿಯೂ ಜೀರ್ಣ ಶಕ್ತಿ ಹೆಚ್ಚಪ್ಪಲೆ ಒಳ್ಳೆದಡೊ. ಈ ತಂಬುಳಿಗಳಿಂದ ಬಾಣಂತಿಗೊಕ್ಕೆ ಅಜೀರ್ಣ, ಶೀತ ಅಪ್ಪಲಾಗ ಹೇಳಿ. ಈ ತಂಬುಳಿಗಳ ಕೊದಿಶೆಕ್ಕಾವುತ್ತು. ಆದರೆ  ಮೆಂತೆ ತಂಬುಳಿ , ನೀರುಳ್ಳಿ ತಂಬುಳಿ ಕೊದಿಶೆಕ್ಕಾವುತ್ತಿಲ್ಲೆ. ಅದು ಬಾಣಂತಿಗೊಕ್ಕೆ ಆಗನ್ನೆ.
   ಗೋಕರ್ಣಲ್ಲಿ ಈಗಳೂ ಸಾರು ಬಳುಸುವಂದ ಮದಲೆ ತಂಬುಳಿ ಬಳುಸುತ್ತವು. ಉತ್ತರ ಕನ್ನಡಲ್ಲಿ ಅನುಪತ್ಯಂಗಳಲ್ಲಿಯೂ ಒಂದೊಂದು ದೊನ್ನೆ ಕೊಡುಗು. ಅದರಲ್ಲಿ ಸಾರು ಕುಡಿವದಲ್ಲ. ಈ ತಂಬುಳಿ ಕುಡಿವದು. ಜೀರ್ಣ ಶಕ್ತಿ ಹೆಚ್ಚಪ್ಪಲೆ ಬೇಕಾಗಿಯೇ ಹೇಳಿ ಕಾಣುತ್ತು ಈ ಸಂಪ್ರದಾಯ ಮಡಿಕ್ಕೊಂಡದು.ಈಗಾಣೋವಕ್ಕೆ ಪೇಟೆಲ್ಲಿ ಅಂತೂ ಹೆಸರು ಕೇಳ್ಯೇ ಗೊಂತಿರ. ಮಾಂತ್ರ ಅಲ್ಲ ಮಾರ್ಕೆಟಿಲ್ಲಿ ಈ ಕೊಡಿಗೊ ಸಿಕ್ಕಲೂ ಸಿಕ್ಕ  
        ಆನೆಮುಂಗಿನ ಕೆತ್ತೆ ತಂದು ಹೆರಾಣ ಭಾಗವ ಕೆರಸಿ  ತಂಬುಳಿಯಾದರೆ ಕಾಯಿ,  ಬೇರೆ ಜೀರೆಕ್ಕಿ,ಬೇಕಾಷ್ಟು ಉಪ್ಪು,ಮೆಣಸು, ಸೇರುಸಿ, ಮಜ್ಜಿಗೆ ಹಾಕಿ ಕಡದರೆ  ಮತ್ತೆ ಒಲೆಗೆ ಮಡಗಿ ಕೊದಿವಲೆ ಶುರು ಅಪ್ಪಗ ಇಳುಗಿದರೆ ತಂಬುಳಿ ರೆಡಿ.ಹೀಂಗೆ ತಗ್ಗಿ ಕೊಡಿಯನ್ನೂ ಮಾಡುಲಕ್ಕು. ಉರಿಶೀತ, ಅಜೀರ್ಣ ಆದರೆ ಒಳ್ಳೆದುಹೇಳುತ್ತವು.ಕೊಡಿಗಳ ತಂಬುಳಿ ಕೊದಿಶೆಕ್ಕಾವುತ್ತು. ಕೊಡಗಾಸನ(ಕುಟಜ) ನೆತ್ತಿ ಗೆಂಡೆಗೂ ಏವುತ್ತಡೊ.
ಪುನರ್ಪುಳಿ ಓಡಿನ ಬೊದುಲ್ಲೆ ಹಾಕಿ  ಸಾಕಷ್ಟು ನೀರು ಹಾಕಿ ಉಪ್ಪು ಮೆಣಸು ಹದಕ್ಕೆ ಹಾಕಿ ಚೂರು ಬೆಲ್ಲವೂ ಸೇರುಸಿ ಕೊದಿಶಿದರೆ ಸಿಕ್ಕುವ ಬೋಳು ಸಾರು  ಊಟಕೂ ರುಚಿ. ಮತ್ತೆ ಅಂತೇ ಕುಡುದರೂ ಜೀರ್ಣಕ್ಕೆ ಭಾರೀ  ಒಳ್ಳೆದಡೊ.ಇನ್ನು ತೋಟಲ್ಲಿ ಸಿಕ್ಕುವ ಕೂಂಬೆಯೂ ಸಾರಿಂಗಾವುತ್ತು. ಹುಳಿ,ಉಪ್ಪು ಮೆಣಸು ಹಾಕಿ ಕೊದಿಸಿದರೆ ಸಾರು ಅತು.ಅದುದೇ ಜೀರ್ಣಕ್ಕೆ ಒಳ್ಳೆದಡೊ.ಕೂಂಬೆಯಸಣ್ಣಕ್ಕೆ ಕೊಚ್ಚಿ ತಾಳು ಮಾಡುಲೂ ಆವುತ್ತು. ತುಪ್ಪಲ್ಲಿ ಹೊರುದು ಬೆಳ್ಳುಳ್ಳಿ ಹಾಕಿ ಚಟ್ಣಿ ಮಾಡಿ ಉಂಡರೆ ಜೀರ್ಣಕ್ಕೂ ಒಳ್ಳೆದಡೊ. ಕೆಲವು ಜನ ಬಾಣಂತಿಗೊಕ್ಕೂ ಕೊಡುಗಡೊ.
ಇನ್ನು  ಕೆಲವರ ಚಟ್ಣಿ ಮಾಡಿಯೂ ಉಂಬಲಾವುತ್ತು. ಆನೆ ಮುಂಗು ಆದರೆ ಕೆತ್ತೆಯ ಹೊರುದು ಕಾಯಿಯೊಟ್ಟಿಂಗೆ ಕಡವಗ ಉಪ್ಪು ಮೆಣಸು ಹುಳಿ ಸೇರುಸಿಗೊಳ್ಳೆಕ್ಕು. ಮಜ್ಜಿಗೆ ಬದಲಿಂಗೆ ಹುಳಿ ಆಯೆಕ್ಕು. ಚಟ್ಣಿ ಆದರೆ ಉಪ್ಪಿನ ಕಾಯಿಯ ಹಾಂಗೆ ನಕ್ಕಿಗೊಂಡು ಉಂಬದು. ಅಂತೂ ನಮ್ಮ ಊಟಲ್ಲಿ ಈ ಪದಾರ್ಥಂಗೊ ಅನಿವಾರ್ಯ ಆಗಿತ್ತು ಅಂದು. ಈಗ ಮಾರ್ಕೆಿಲ್ಲಿ ಸಿಕ್ಕಿದರೆ ಅಥವಾ ಕೊಡಿಗೊ ಊರಿಲ್ಲಿ ಸಿಕ್ಕ್ದರೆ ಪ್ರಯೋಜನ ಅಕ್ಕು. ಹೀಂಗಿಪ್ಪ ಕನರು ರುಚಿಯ ತೆಕ್ಕೊಂಬದರಿಂದ ನಾಲಗೆಲ್ಲಿ ಕಾಂಬ ಅಗ್ರ ಹೇಳುತ್ತವನ್ನೆ!ಆ ಅಗ್ರಹೇಳಿದರೆ ಹಿಂದಾಣ ಮನೆ ವೈದ್ಯರಿಂಗೆ, ಆಯುರ್ವೇದ ಡಾಕ್ಟರಕ್ಕೊಗೆ ಜೀರ್ಣ ಶಕ್ತಿಯ ಬಗ್ಗೆ ವರದಿ ಒಪ್ಪುಸುವ ಒಂದು ಮಾಪನ ಹೇಳುಲಕ್ಕು!
ಈಗಾಣೊವಕ್ಕೆ ,ಅದರಲ್ಲೂ ಪೇಟೆಲ್ಲಿದ್ದೋವಕ್ಕೆ ಇದೆಲ್ಲ ಸಿಕ್ಕವದೇ ಕಷ್ಟ ಆದರೂ ,ಊರಿಂದಲೋ ತರುಸಿ ಉಪಯೋಗುಸಿಕೊಂಡರೆ ಮುಂದಿನ ಪೀಳಿಗಗೂ ಗೊಂತು ಮಾಡಿದ ಹಾಂಗೆಯೂ ಆವುತ್ತು.ಒಟ್ಟಾರೆ ಏನೋ ಒಂದು  ತುಳುಭಾಷೆಲ್ಲಿಪ್ಪ ಗಾದೆ ನೆಂಪಾತು. "ಪೊಸ ಕೈ ಪೊರುಳುಗೆಡ್ಡೆ,ಪರ ಕೈ ಬಂಜಿಗೆಡ್ಡೆ".ರೋಗ ಬಪ್ಪದಕ್ಕೆ ಮದಲೇ ಜಾಗ್ರತೆ ತೆಕ್ಕೊಂಡರೆ ಮತ್ತೆ ರೋಗವೂ ಬಾರ!ಮತ್ತೆ ಮದ್ದು ಬೇಕಾಗ  ಹೇಳಿ ಕಾಣುತ್ತು.
        
Sunday, March 3, 2013

ಸೌಭರಿ ಋಷಿಯ ಕತೆ

                                            ಸೌಭರಿಯ ಕತೆ
 ಭಾಗವತ ಕತೆ ಪರೀಕ್ಷಿತ್ ರಾಜಂಗೆ ಶುಕ ಮುನಿ ಹೇಳುತ್ತಿದ್ದಂತೆ ಒಬ್ಬ ಸೌಭರಿ ಹೇಳುವ   ಋಷಿಯ ಕತೆ ಹೇಳುತ್ತ.  ಸೌಭರಿ ಹೇಳುವ ಒಬ್ಬ ಋಷಿ ಕಾಡಿಲ್ಲಿ ತಪಸ್ಸು ಮಾಡುವಗ ಅವನ ತಪಸ್ಸಿಂಗೆ ತೊಂದರೆ ಆವುತ್ತು ಹೇಳಿ ಅವಂಗೆ ಹೊಸ ಆಲೋಚನೆ ಬಂತಡೊ. ಕಾಡಿಲ್ಲಿ ಕಾಡು ಪ್ರಾಣಿಗಳಂದಲೋ, ಅಥವಾ ಬೇರೆ ಇತರಜೀವಿಗಳಿಂದಲೋ ತಪಸ್ಸಿಂಗೆ ಅಡ್ಡಿ ಆಗದ್ದ ಹಾಂಗೆ, ಯಮುನಾ ನದಿ ಹತ್ತರಂಗೆ ಹೋದಡೊ. ನೀರಿನ ನೋಡಿದ್ೇ ತಡವು, ಹೊಸ ಆಲೋಚನೆ ಕಾರ್ಯರೂಪಕ್ಕೆ ಬಂತು. ತಪೋಶಕ್ತಿಂದ ನೀರಿನ ಒಳದಿಕ್ಕೆ ಆರಿಂಗ ಕಾಣದ್ ಹಾಂಗೆ ಬಹಳ ತಪಸ್ಸು ಮಾಡ್ಯೊಂಡಿಪ್ಪಗ ಅಕಸ್ಮಾತ್ ಒಂದು ದಿನಹೀಂಗೆ ಕಣ್ಣು ಒಡದು ನೋಡುವಗ, ಒಂದು ಮೀನು ತನ್ನ ಮರಿಗಳನ್ನೂ ಹೆಣ್ಣು ಮನನ್ನೂ ಕೂಡಿಗೊಂಡು ನೀರಿಲ್ಲಿ ಓಡಾಡುವದರ ಕಂಡಡೊ. ಗೆಂಡು ಹೆಣ್ಣು ಮೀನುಗೊ ಪರಸ್ಪರ ಮಿಲನ ಸುಖ ಅನುಭವುಸುವದು ಅವಣ್ಗೆ ಕಂಡತ್ತು. ಅದರ ನೋಡಿ ಅಪ್ಪಗ ಅವನ ಚಿತ್ತ ಚಂಚಲ ಅಪ್ಪಲೆ ಶುರುವಾತು. ಸಾಮಾನ್ಯ ಜಲಚರಂಗಳೂ ಸ್ತ್ರೀ ಸುಖವ ಅನುಭವುಸುವಗ ಮನಷ್ನಾಗಿ ಹುಟ್ತಿ ,ಬೇಕಾದ ಸುಖ ಅನುಭವುಸುಲೆ ಸಧ್ಯ ಇಲ್ಲೆಯೊ? ಪ್ರಾಣಿಗೊಕ್ಕೂ ಸುಖ ಅನುಭವಿಸೆಕ್ಕು ಹೇಳಿ ಕಾಂಬಗ ಮಾನವನಾಗಿ ಹುಟ್ಟಿ ವಿಷಯ ಸುಖ ಅನುಭವುಸದ್ದೆ ಇಪ್ಪದು ಹೆಡ್ಡುನ ಆವುತ್ತನ್ನೆ.ಅಂಬಗ ಈ ಸುಖ ಅನುಭವುಸೆಕ್ಕಾರೆ ತಾನು ಚೆಂದದ ಕೂಸಿನೆ ನೋಡಿ ಮದುವೆ ಅಯೆಕ್ಕು. ಷ್ಟು ಕಾಲ ತಪಸ್ಸು ಮಾಡಿ ಬೇಕಾದ ತಪೋಶಕ್ತಿ ಎನ್ನತ್ರೆ ಇಪ್ಪಗ ಬರೇ ಸಾಮಾನ್ಯ ಹುಡುಗಿಯ ಮದುವೆ ಅಪ್ಪದು ಬೇಡ. ಚೆಂದದ ರಾಜ ಕುಮಾರಿಯನ್ನೇ ಮದುವೆ ಅಯೆಕ್ಕು ಹೇಳಿ ಎಲ್ಲ ಯೋಚನೆ ಬಂತು. ಆಲೋಚನೆ ಮನಸ್ಸಿಂಗೆ ಹೊಕ್ಕರೆ ಮತ್ತೆ ಕೇಳೆಕ್ಕೊ! ಇನ್ನು ಸುಮ್ಮನೆ ಕೂಪದಕ್ಕೆ ಅರ್ಥ ಇಲ್ಲೆ ಹೇಳಿ ಹೆರಟಡೊ.ಕಾಮನೆ ಹುಟ್ಟಿದರೆ ಚಿಂತೆ ಹೇಳುವ ಹುಳು ಮನಸ್ಸಿನ ಕೊರಕ್ಕೊಂಡಿಕ್ಕಡೊ. ಚಿಂತೆ ತಡವಲೆಡಿಗಾತಿಲ್ಲೆ.ತಪಸ್ಸಿನ ಯೋಚನೆ ಒಂದರಿಯಂಗೆ ನಿಂದತ್ತು. ಬಂದ ಯೋಚನೆ ಕಾರ್ಯ ರೂಪಕ್ಕೆ ತರೆಕ್ಕು ಹೇಳಿ ಹೆರಟನಡೊ
ದಾರಿಲ್ಲಿ ಹೋಪಗ ಅಲ್ಲಿ ಇಲ್ಲಿ ಹುಡುಕ್ಕುವದೆಣ್ತಗೆ,ನಮ್ಮ ರಾಜ ಮಾಧಾತ ಇದ್ದಲ್ಲಿಂಗೆ ಹೋಗಿ ರಾಜ ಕುಮಾರಿ ಒಂದರ ಎನಗೆ ಕೊಡು ಹೇಳಿ ಕೇಳಿದರೆ ಕೊಡದ್ದಿಕ್ಕೊ.ಹೀಂಗೆ ಯೋಚನೆ ಮಾಡಿ ಅರಮನೆಗೇ ಹೋದಡೊ. ಮಾಂಧಾತ ರಾಜಂಗೆ ಐವತ್ತು ಮಗಳಕ್ಕಡೊ. ಎಲ್ಲ ಚೆಂದದೋವೆ.ಬಂಷಿಯ ಕಂಡು ರಾಜ ಅವನ ಉಪಚರಿಸಿಕ್ಕಿ, ಎನ್ನಂದ ಎಂತ ಆಯೆಕ್ಕು? ಹೇಳಿ ಕೇಳಿದಡೊ. ಸಾಮಾನ್ಯವಾಗಿ ಋಷಿಗಳ ತಪಸ್ಸಿಂಗೆ ಬಪ್ಪ ತೊಂದರೆಗಳ ಹೊಗಲಾಡಿಸೆಕ್ಕಾದ್ದು ರಾಜಧರ್ಮ. ಅವಕ್ಕೆ ಏನಾದರೂ ತೊಂದರೆ ಬಂದದರ ಆಯಾ ಊರಿನ ರಾಜವಿಚಾರುಸ ಪರಿಹರುಸೆಕ್ಕು. ಹಾಂಗೆ ಮಾಮೂಲಿಯ ಹಾಂಗೆ ಕೇಳಿದ್ದಕ್ಕೆ, ಎನಗೆ ಮದುವೆ ಆಯೆಕ್ಕು ಹೇಳಿ ಆಯಿದು.ನಿನ್ನ ಕೂಸುಗಳ ಪೈಕಿ ಎನಗೊಂದು ಕೂಸಿನ ಕೊಡು"ಹೇಳಿದಡೊ. ರಾಜಂಗೆ ಸುಮ್ಮನೆ ಕೇಳಿದೆ ಹೇಳಿ ಕಂಡತ್ತು. ಬಹಳ ಕಾಲ ತಪಸ್ಸು ಮಾಡಿ ಮುದುಕ್ಕನ ಹಾಂಗೆಗಡ್ದ ಮೀಸೆ ಬಿಟ್ಟುಗೊಂಡಿದ್ದ ಇವಂಗಗಳಕ್ಕಳ ಕೊಡುಲೆ ಅವಂಗೆ ಮನಸ್ಸು ಬಕ್ಕೊ! ಕೊಡದ್ದರೆ ಅವನ ಶಾಪಕ್ಕೆ ಎಂತ ಮಾಡುದು? ಒಟ್ಟಾರ ಕಾರ್ಯ ಕೆಟ್ಟತ್ತು. ಎಂತ ಮಾಡುವದು ಹೇಳಿಆಲೋಚನೆ ಮಾಡಿದಡೊ ಆ ರಾಜ. ಂಬಗ ಅವಂಗೂ ಒಂದ ಆಲೋಚನೆ ಹೊಳತ್ತು. ಕೂಡ್ಳೇ ಹೇಳಿದಡೋ " ಎನಗೆ ಐವತು ಖುಸುಗೊ ಇದ್ದವು,ಆರ ಆನು ಕೊಡಲಿ! ಮತ್ತೆ ಅವರ ಪೈಕಿ ಆರು ನಿನ್ನ ಷ್ಟ ಪಡುತ್ತವೋ ಅವರ ಮದುವೆ ಅಪ್ಪದಕ್ಕೆ ಅಡ್ಡಿಯಿಲ್ಲೆ. ಮತ್ತೆ " ನೀನು ಮದುವೆಯಾಗು ಹೇಳಿ ಆನು ಹೇಂಗೆ ಹೇಳುವದು? " ಹೇಳಿ ಒಬ್ಬನೂ ಒಪ್ಪದ್ದರೆ ತಪ್ಪು ಎನ್ನದಾವುತ್ತಿಲ್ಲೆನ್ನೆ ಹೇಳಿ ಹೇಳಿ ಉಪಾಯಂದ ತಪ್ಪುಸುಲೆ ನೋಡಿದಡೊ.
ಆದರೆ ಇವ ಬಿಡುತ್ತನೋ!ಎಷ್ಟಾದರೂ ತಪಸ್ವಿ ಅಲ್ಲದೋ?ತಪೋಶಕ್ತಿಂದ ತನ್ನ ರೂಪ ಕಾಂಬೋವಕ್ಕೆ ಚೆಂದ ಕಾಣದ್ದರೆ ತೊಂದರೆ ಆವುತ್ತನ್ನೆ. ಹೇಳಿ ಯೋಚನೆ ಬಂತು .ಕೂಡ್ಳೇ ಒಬ್ಬ ಚೆಂದದ ಮಾಣಿಯಾಗಿ ಅಂತಃಪುರಕ್ಕೆ ಹೋದಡೊ. ರಾಜಕುಮಾರಿಗಳ ಬಪ್ಪಲೆ ಹೇಳಿದವು. ಶುರುವಿಂಗೆ ಬಂದದು ಮತ್ತೆ ಬಂದದು ಮಾಂತ್ರ ಂದ ಐವತ್ತು ಕುಮಾರಿಯರೂ ಇವನ ರೂಪಕ್ಕೆ ಮರುಳಾಗಿ" ಎನಗೆ ಬೇಕು ಈ ರಾಜಕುಮಾರ ಹೇಳ್ಯೊಂಡು ಅವರೊಳದಿಕ್ಕೆ ಜಗಳವೇ ಶುರುವಾತು.ರಾಜಂಗೂ ಹೇಳಿ ಸೋತೆ ಹೇಳಿ ಕಂಡತ್ತು. ಅವ ಒಪ್ಪಿದ ಹಾಂಗೆ ಸ್ವಯಂವರ   ಪದ್ಧತಿಯ  ಕಾರಣ ಹೇಳಿ ತಪ್ಪುಸಿಗೊಂಬಲಕ್ಕು ಹೇಳಿ ಗ್ರೇಶಿತ್ತಿದ್ದ.ಈಗ ಐವತ್ತು ಕುಮಾರಿಗಳೂ ಎನಗೆ, ತನಗೆ ಹೇಳಿದ ಕಾರಣ ಎಲ್ಲ ಮಗಳಕ್ಕಳನ್ನೂ ಕೊಡೆಕ್ಕಾಗಿ ಬಂತು. ರಾಜಂಗೆ ಬೇರೆ ಯೋನೆ ಇಲ್ಲದ್ದೆ  ಮಗಳಕ್ಕಳ ಶಾಸ್ತ್ರೋಕ್ತ ಮದುವೆ ಮಾಡಿ ಕೊಟ್ಟ.ಮದುವೆ ಆದಮೇಲೆ ಗೆಂಡ ಇದ್ದಲ್ಲಿಂಗೆ ಒಟ್ಟಿಂಗೆ ಹೋಯೆಕ್ಕನ್ನೆ. ಕಾಡಿಲ್ಲಿ ಸಾಮಾನ್ಯ ಪರ್ಣ ಕುಟೀರಲ್ಲಿ ಇಪ್ಪಲಾವುತ್ತಿಲ್ಲೆ.ಅದಕ್ಕೆ ಋಷಿ ತನ್ನ ತಪಃ ಶಕ್ತಿಂದ ಐವತ್ತು ಹೆಂಡತ್ತಿಯೊಕ್ಕೊಗುದೆ ಒಂದೊಂದು ಅರಮನೆ,ಬೇಕಾದ ಕೆಲದೋರ ಎಲ್ಲ  ಬರುಸಿದ. ಐವತ್ತು ಕೂಸುಗಳತ್ರೂ ಸಮಾನ ಪ್ರೀತಿಂದ ಚೆಂದಕ್ಕೆ ಸುಖ ಸಂಸಾರ ಮಾಡ್ಯೊಂಡು ಐವತ್ತು ಸಾವಿರ ಮಕ್ಕಳನ್ನೂ ಪಡದಡೊ. ಸಂಸಾರ ಸುಖಕ್ಕೆ ಕಟ್ಟುಬಿದ್ದು,ಎಡಿಗಾದಷ್ಟು ಅನುಭವುಸಿದರೂ ಸಾಕಾಗದ್ದೆ ಸುಖ ಸಾಗರಲ್ಲಿ ಮುಳ್ಗೇಳುತ್ತಿದ್ದಂತೆ  ಕೆಲವು ಕಾಲ ಕಳುತ್ತಡೊ.
ಒಂದು ದಿನ ಹಾಂಗೆ ಒಬ್ಬನೇ ಕೂದುಗೊಂಡಿಪ್ಪಗ ಅವಂಗೆ ಯೋಚನೆ ಬಂತಡೊ. ಈ ಸುಖ ಎಲ್ಲ ನಿಜವಾಗಿಯೂ ಶಾಶ್ವತವೋ? ಇದ್ದರೆ ಎಲ್ಲಿ ವರೆಗೆ? ಇದಕ್ಕೆ ಎಂದಾದರೂ ಒಂದು ಅವಸಾನ ಇದ್ದನ್ನೆ. ಶಾಶ್ವತವಾಗಿ ಇದರಂದೆಲ್ಲ ದೂರ ಆಯೆಕ್ಕು ಹೇಳಿ ತಪಸ್ಸಿಂಗೆ ಹೆರಟೋನು ತಾನು. ಎಂತಗೆ ಹೀಂಗೆಲ್ಲ ಎನ್ನ ಯೋಚನೆ ಬದಲಿತ್ತು. ಎಲ್ಲ ಮಾಯೆ. ಮಾಯಾಪಾಶಕ್ಕೆ ಕಟ್ಟುಬಿದ್ದು ದಾರಿ ತಪ್ಪಿದೆ. ಎನ್ನ ಉದ್ದೇಶ ಅರ್ಧಲ್ಲೆ ದಾರಿ ತಪ್ಪಿದ ಕಾರಣ ಇನ್ನಾದರೂ ಜ್ಞಾನೋದಯ ಆತನ್ನೆ. ಇನ್ನು ಹೀಂಗಿಪ್ಪಲಾಗ.ಮೀನುಗಳ ಸಂಸಾರಸುಖ ಕಂಡು ಮಾರುಹೋಗಿ ಎನ್ನ ಜೀವನ ವ್ಯರಥವಾಗಿ ಹೋತು. ಇನ್ನಾದರೂ, ಈಗಲಾದರೂ ಎಚ್ಚರಿಕೆ ಆತನ್ನೆ ಹೇಳ್ಯೊಂಡು ಅಲ್ಲಿಂದೆದ್ದು ಮತ್ತೆ ತಪಸ್ಸಿಂಗೆ ಹೋದಾಡೊ.ಹೆಂಡತ್ತಿಯಕ್ಕಳೂ ಹಾಂಗೆ ಎಂಗಳೂ ತಪಸ್ಸು ಮಾಡೆಕ್ಕು ಹೇಳಿ ಊರು ಬಿಟ್ಟವಡೊ.ವಿಿ ತಪ್ಪುಸುಲೆ ಆರಿಂಗೂ ಎಡಿಯ ಹೇಳುವಕ್ಕೆ ಾಜಂಗೆ ಶುಕ ಮುನಿ ಈ ಒಂದು ಉದಾಹರಣೆ ಕೊಟ್ಟನಡ.ಚಿತ್ತ ಚಂಚಲವಾಗಿ ದಾರಿ ತಪ್ಪಿದ ಎಷಟೋ ಉದಾಹರಣಗೊ ಪುರಾಣ ಕತೆಲ್ಲಿ ಹೇಳುತ್ತವು.ಆದರೆ ಎಲ್ಲವೂ ದೇವರ ಮಾಯೆ ಹೇಳುವದು ಖಂಡಿತ

ಹವ್ಯಕರು ಅಂದು ಇಂದು

                ಹವ್ಯಕರು ಅಂದು, ಇಂದು
 ಮದಲಿಂಗೆ ನಾವು ಎಲ್ಲಿಂದಲೋ ಹೈಗ ದೇಶಂದ ಬಂದದಡೋ. ಅಲ್ಲಲ್ಲಿ ಒಂದೊಂದು ಊರಿಲ್ಲಿ ಜಾಗೆ ಹುಡುಕ್ಕಿಗೊಂಡು ಮನೆ ಕಟ್ಟಿ ವಾಸ ಮಾಡ್ಯೊಂಡಿತ್ತಿದ್ದವಡೊ.ಇಲ್ಲಿ ಬಂದ ಮೇಲೆ ಪರಸ್ಪರ ಸಂಪರ್ಕ ಮಡಿಕ್ಕೊಂಡು ,ಸಂಬಂಧ ಬೆಳೆಶ್ಯೊಂಡು ಜೀವನ ಮಾಡ್ಯೊಂಡಿಪ್ಪಗ ಈ ಅಡಕ್ಕೆ  ಕೃಷಿ ಮಾಡುಲೆ ಶುರುಹಚ್ಚಿ ಅದರಲ್ಲಿ ಸಾಧನೆ ಮಾಡಿ ಅದಕ್ಕೆ ಮಾರುಕಟ್ಟೆ ಕಂಡುಗೊಂಡು ಹೆಚ್ಚೆಚ್ಚು ಲಾಭ ಪಡದೋವು ಅದರಲ್ಲೇ ಶ್ರೀಮಂತರಾದವಡೊ.ಇನ್ನು ಕೆಲವು ಜನ ತೆಂಕಲಾಗಿ ಶಾಂತಿ ಮಾಡ್ಳೆ,ಹೆಚ್ಚಾಗಿ ಕುಂಬ್ಳೆ ಸೀಮೆಯೋವು ಹೋದವಡೊ.ಅಲ್ಲಿ ದೇವಸ್ಥಾನಂಗಳಲ್ಲಿ ಪೂಜೆ ಮಾಡ್ಯೊಂಡು ಇತ್ತಿದ್ದೋವು, ಆಗಾಗ ಊರಿಂಗೆ ಬಕ್ಕು. ಇಲ್ಲಿಯೂ ಮದುವೆಯಾಗಿ,ಮಕ್ಕೊ ಮರಿಗೊ ಆಗಿ ಜೊತೆಕುಟುಂಬವಿ ಇತ್ತಿದ್ದವಡೊ.ಮನೆಲ್ಲಿ ಎಲ್ಲೋರೂ ಬೇಡನ್ನೆ. ಇಲ್ಲಿದ್ದ ತೋಟ ನೋಡುಲೆ ಒಬ್ಬ ನಿಂದೊಂಡು ಒಳುದೋವು ತೆಂಕಲಾಗಿ ಶಾಂತಿ ಮಾಡುಲೆ ಹೋಪದು. ಹೀಂಗೆ ನಡಕ್ಕೊಂಡಿತ್ತಡೊ.ಕೆಲವು ಜನ ಅಲ್ಲಿಯೇ ಮದುವೆಯಾಗಿ ಸಂಸಾರ ಮುಂದುವರಿಸಿದೋವು, ಈಗಳು ತಿರುವನಂತಪುರ ಪಾಲ್ಘಾಟ್ ಎಲ್ಲ ಇದ್ದವು.ಬ್ರಾಹ್ಮಣರ ಬೇರೆ ವರ್ಗವು ಹಾಂಗೆ ತೆಂಕಲಾಗಿ ಹೋದೋವು ಇತ್ತಿದ್ದವಡೊ.ಹುಟ್ಟೂರಿಲ್ಲಿ ಕೂಸು ಸಿಕ್ಕದ್ದೆ, ತೆಂಕಲಾಗಿದ್ದ ಕೂಸುಗಳ ಮದುವೆ ಅಗಿ ಕೆಲವು ಜನ ಅಲ್ಲೇ ಪೂಜೆ ಮಾಡ್ಯೊಂಡು ಈಗಳೂ ಇದ್ದವು. ಹೋಟೇಲು ಮಡಿಕ್ಕೊಂಡಿಪ್ಪೋವು,ಮತ್ತೆ ಬೇರೆ ಉದ್ಯೋಗ ಮಾಡ್ಯೊಂಡು ಅಲ್ಲಿ ಇದ್ದವು.ಇಲ್ಲಿದ್ದೋವು ಮಾಸ್ಟ್ರ ಕೆಲಸ, ಹಾಂಗೆ ಗುಮಾಸ್ತರಾಿ, ಮತ್ತೆ ವಕೀಲಕ್ಕೊ ಆಗಿ ಡಾಕ್ಟ್ರಕ್ಕೊ, ಹೀಂಗೆಲ್ಲ ಉದ್ಯೋಗ ಶುರು ಮಾಡಿದವು. ಶಿರಸಿ ಅತ್ಲಾಗಿಂದ ಕೂಸು ಹುಡುಕ್ಯೊಂಡು ಬಕ್ಕಡೊ. ಬಡವರು ಮಾಂತ್ರ ಅವಕ್ಕೆ ಕೂಸಿನ ಕೊಟ್ಟು ಮದುವೆ ಮಾಡಿಯೊಂಡು ಇತ್ತಿದ್ದವಡೊ. ಹುಡಿಕ್ಯೊಂಡು ಬಂದೋರು ಅವರ ಖರ್ಚಿಲ್ಲೇ ಮದುವೆ ಅಗಿ, ಒಂದು ವಾರ, ಎರಡು ವಾರ ಕಳುದು ಹೋಪದೂ ಇತ್ತೊ. ಹಾಂಗೆ ಹೋದರೆ ಮತ್ತೆ ವರ್ಕ್ಕೊಂದರೆಯೂ ಕೂಸುಗೊ ಅಪ್ಪನ ಮನೆಗೆ ಬಕ್ಕು. ಅಂತೂ ಮರ್ಯಾದಿಲ್ಲಿ ಬಿಟ್ಟು ಕೊಡವು ನಮ್ಮೂರೊವು. ಹಾಂಗೆ ಬಂದೋವುದೇ ಇಲ್ಲಿ ನೆಲೆ ನಿಂದೂ ಇದ್ದು. ಅಂಬಗ ಸಾರಿಗೆ ಸೌಕರ್ಯ ಕಡಮ್ಮೆ. ಗಾಡಿಲ್ಲಿಯೋ, ನಡಕ್ಕೊಂಡೋ ಹೋಯಕ್ಕಾಗ್ಯೊಂಡಿತ್ತು.ಬಂದೋರು ಒಂದು ವಾರದ ವರಗೆ ನಿಂಗಡೊ. ಮತ್ತೆ ಬಪ್ಪದು ಒಂದು ವರ್ಷ ಕಳುದು.
ಸಂಸ್ಕಾರಂಗೊ ಉಪನಯನ ಕಳುದು ನಾಲ್ಕಕ್ಕೆ ದಂಟೂರ್ತ.ಮತ್ತೆ ಒಂದು ವರ್ಷ ಕಳುದು.ಉಪಾಕರ್ಮ ಹೀಂಗೆ ಕ್ರಮ ಪ್ರಕಾರ ಆಯೆಕ್ಕು.ಮದುವೆ ಕಳುದು, ನಾಲ್ಕರಲ್ಲಿ ಚತುರ್ಥಿ, ಕೆರೆಮೀವದು ಆರರಲ್ಲಿಯೋ ಎಂಟರಲ್ಲಿಯೋ ಸಟ್ಟುಮುಡಿ ಹೀಂಗೆಲ್ಲ ಇಕ್ಕು. ಮದುವೆಗೆ ಎರಡು ದಿನ ಮದಲೇ ಬಂದ ನಂಟ್ರುಗೊ ಎಲ್ಲ ಕಳಿಶಿಕ್ಕಿ ಹೋಪದು.ಕನ್ಯಾ ವಿವಾಹ ಜಾರಿಲ್ಲಿತ್ತಡೊ. ಮೈನೆರದ ಮೇಲೆಯು ಮದುವೆ ಆಗದ್ದ ಕೂಸುಗಳ ಕಣ್ಣಿಂಗೆ ವಸ್ತ್ರ ಕಟ್ಟಿ ಕಾಡಿಂಗೆ ಬಿಟ್ಟದೂ ಇದ್ದಡೊ. ಹೀಂಗೆ ಕಾಲ ಕಳುದ ಹಾಂಗೆದಕಷಿಣ ಕನ್ನಡ ಉತ್ತರ ಕನ್ನಡ ,ಕೊಡಗು, ಮಡಿಕೇರಿ ಹಂಗೆಲ್ಲ ಬೇರೆ ಬೇರೆ ಪ್ರದೇಶಲ್ಲಿ ಹೋಗಿ ವಾಸ ಮಾಡಿಗೋಂಡಿಪ್ಪಗ ಆಯಾ ಪ್ರದೇಶದ ದೇಶ ಭಷೆಯೂ ನಮ್ಮ  ಭಾಷೆಲ್ಲಿ ಸೇರಿಗೊಂಡತ್ತಡೊ. ಹಾಂಗೆ ಕೆಲವೊಂದು ರೀತಿಲ್ಲಿ ಭಾಷಾ ವೈವಿಧ್ಯ ಬಂತು.ಕುಂಬ್ಳೆ ಸೀಮೆ ಜನಂಗೊಕ್ಕೆ ಮಲಯಾಳ ಸಂಸರ್ಗಂದ ಆ ಭಾಷಗೆ ಒತ್ತುಕೊಟ್ಟ ಹಾಂಗೆ ಕಾಣುತ್ತು.ಹೋವ್ಸು, ಬತ್ಸು,ಹೇದ್ದು ಕೇಟದು,ನೀರಡ ಹೀಂಗೆಲ್ಲ ಶಬ್ದಂಗಳ ಉಪಯೋಗ ಶುರುವಾತು. ಪುತ್ತೂರು ಸುಳ್ಯಲ್ಲೆಲ್ಲ ಇಪ್ಪೋವಕ್ಕೆ ಕುಂಬ್ಳೆ ಸೀಮೆಯ ಸಂಸರ್ಗಂದ, ಹಾಂಗೆ ಬೇರೆ ಊರಿಲ್ಲಿಪ್ಪೋರ ಸಂಸರ್ಗಂದ ಕಾಲ ಹೋದ ಹಾಂಗೆ ಬೆಳೆತ್ತಾ ಹೋಗಿ ಕೆಲವೊಂದು ಸುಧಾರಣೆಯಾಗಿ ಹೋತು. ಹೆರಿಯೋರ ಬಹುವಚನಲ್ಲಿ ನಿಂಗೊ ಹೇಳುವದು ಹೀಂಗೆ ಕೆಲವೆಲ್ಲ ಬದಲಾವಣೆ ಆತು.ಪರಸ್ಪರ ಸಂಬಂಧಂದ ಶುರುವಿಂಗೆ ತಮಾಶೆ ಮಾಡಿದರೂ ಮತ್ತೆ ಹೊಂದಾಣಿಕೆ ಮಾಡಿಗೊಂಡವು
 ಈ ಎಡೆಲ್ಲಿ ವಿದ್ಯಾಭ್ಯಾಸಲ್ಲಿಯೂ ನಮ್ಮೋರು ಮುಂದೆ ಬಂದು,ಕಲಿಕೆಲ್ಲಿ ನಾವು ಮುಂದೆ ಬಂತು. ಎಂಜಿನೀಯರಿಂಗ್ ಹಾಂಗೆ ವಿಜ್ಞಾನಲ್ಲಿಯೂ ಕನ್ನಡ ಸಾಹಿತ್ಯಲ್ಲಿಯೂ ತುಂಬಾಮೇಲುಗೈ ಸಾಧಿಸಿ,     ಅಡಕ್ಕೆಯೊಟ್ಟಿಂಗೆ ವಿದ್ಯೆಲ್ಲಿಯೂ ಮುಂದೆ ಬಂದವು. ರಾಜಕೀಯವಾಗಿಯೂ ಮುಂದೆ ಬಂದವು.ಕಂಪ್ಯೂಟರ್ ವಿಭಾಗಲ್ಲಿಯೂ ಮುಂದುವರುದು ದೇಶ ವಿದೇಶಂಗಳಲ್ಲಿ ಉದ್ಯೋಗ ಪಡಕ್ಕೊಂಡವು.ಅಲ್ಲಿಯೇ ನೆಲಸುಲೆ ಶುರು ಮಾಡಿದವು.ಅವಕ್ಕೆ ಸಣ್ಣಾಗಿಪ್ಪಗ ಕಲ್ತ ಗಾಯತ್ರಿ ಜಪ ಮಾಡುಲೆ ಪುರುಸೊತ್ತಿಲ್ಲೆ.ಮನೆಲ್ಲಿ ನಮ್ಮ ಭಾಷೆ ಮಾತಾಡುಲೂ ನಾಚಿಕೆ ಆಗಿ ಊರಿಂಗೆ ಹೋಗಿಪ್ಪಗ ಮಕ್ಕೊ ಮೌನಿಗಾಗಿರೆಕ್ಕಾತು.ಉಪನಯನಲ್ಲಿ ಗಾಯತ್ರಿ ಉಪದೇಶ ಮಾಡಿದ ಭಟ್ರೇ ಅವರ ಲೆಕ್ಕಲ್ಲಿ ಗಾಯತ್ರಿ ಮಾಡೆಕ್ಕು.ಅಪ್ಪಂಗೇ ಗಾಯತ್ರಿ ಮಾಡುಲೆ ಮನಸ್ಸಿಲ್ಲದ್ದಿಪ್ಪಗ ಮಕ್ಕೊ ಮಾಡುತ್ತವೋ?
        ಈ ಎಡೆಲ್ಲಿ ಮಿತ ಸಂತಾನದ ಕಾರಣಂದಲೋ ಏನೋ ಮದುವೆಗೆ  ಕೂಸುಗೊ ಸಿಕ್ಕುವದು ಅಪರೂಪ ಆತು. ಇದ್ದ ಕೂಸುಗೊ ಕೆಲಸಲ್ಲಿಪ್ಪೋನೇ ಆಯೆಕ್ಕು ಹೇಳುಲೆ ಶುರುವಾತು. ಊರಿಲ್ಲೇ ಕಲ್ತ ಸಂಪ್ರದಾಯಂಗೊ ದೂರ ಆತು.ಪೌರೋಹಿತ್ಯ ವಿಭಾಗಲ್ಲಿದ್ದೋರುದೇ ಕೆಲಸಕ್ಕೆ ಹೋದ್ದರಿಂದ ಮಂತ್ರ ಕಲಿವೋರು ಇಲ್ಲೆ. ಸಂಸ್ಕಾರಂಗಳಲ್ಲಿಬದಲಾವಣೆ ಶುರುವಾತು. ಅಮೇರಿಕಲ್ಲಿಪ್ಪೊವಂಗೆ ಒಂದೇ ದಿನಲ್ಲಿ ಮದುವೆ ಆಯೆಕ್ಕು ಹೇಳುಲೆ ಶುರು ಮಾಡಿ ಇಲ್ಲ್ದ್ದೋವುದೆ ಅದೇ ಕ್ರಮ ಶುರುಮಾಡಿದವು.ಮುನ್ನಾಣ ದಿನ ಬಂದು ಕಾರ್ಯಕ್ರಮ ನಡೆಶುವ ಮರ್ಯಾದೆ ಕಡಮ್ಮೆ ಅಗಿ ಎಲ್ಲದಕ್ಕೂ ಸಂಬಳ ಕೊಟ್ತು ಜನ ಮಾಡೆಕ್ಕಾಗಿ ಬಂತು. ಹಾಲಿಲ್ಲಿ ಕಾರ್ಯಕ್ರಮ ,ಬಫೆ.ಎಲ್ಲ ಸುರುವಗಿ, ಕೊಳೆ ಮೈಲಿಗೆ ಎಲ್ಲ ಹೋತು. ಕೈತೊಳಕ್ಕೊಂಡರೆ ಆತು.ಊಟಕ್ಕಪ್ಪಗ ಬಂದೆತ್ತಿದರೆ ಕೈತೊಳದು ಓಡೆಕ್ಕಾದ ಪರಿಸಥಿತಿ ಬಂತು. ಕೂಸುಗೊ ಸಿಕ್ಕದ್ದೆ ಬ್ರಹ್ಮಚಾರಿಗಳಾಗಿಯೇ ಇಪ್ಪೋವು ಆಶ್ರಮಂದಲೋ   ಅಲ್ಲದ್ದರೆ ಬೇರೆ ಸಮಾಜಂದಲೂ ಮದುವೆಯಾಗೆಕ್ಕಾಗಿ ಬಂತು. ಕರ್ಮಾಂಗಕ್ಕೆ ಭಟ್ಟಕ್ಕೊ ಸಿಕ್ಕದ್ದರೆ ಮಾಂತ್ರ ಅಲ್ಲ ಚುಟುಕಾಗಿ ಒಂದೇ ದಿನಲ್ಲಿ ಉತ್ತರ ಕ್ರಿಯಾದಿಗಳ ಮಾಡುಲೆ ಶುರುವಾತು. ಇಂದ್ರಾಣ ಕಾಲಲ್ಲಿ ಯಾವುದಕ್ಕೂ ಪುರುಸೊತ್ತು ಇಲ್ಲೆ. ಬ್ಯೂಟಿ ಪಾರ್ಲರ್ ಎಲ್ಲೋರಿಂಗೂ ಬೇಕಾಗಿ ಬಂತು.ಏನೋ ಗುರುಗಳ ಪ್ರಯತ್ನಂದ ಕೆಲವು ಕ್ರಾಂತಿಗೊ ಉಂಟಾಗಿ ಕೆಲವೊಂದು ಕಾರ್ಯಂಗೊ ಸಾಂಗವಾಗಿ ನಡವದಿದ್ದರೂ ಅಪ್ಪನ ,ಅಮ್ಮನ ಡಾಡಿ ಮುಮ್ಮಿ ಹೇಳುಲೆ ಶುರುವಾದ ಬದಲಾವಣೆನಮ್ಮಲ್ಲಿ ತುಂಬುಲೆ ಭಜನೆ,ಪೂಜೆ ಇತ್ಯಾದಿಗೊ ಸಾಮೂಹಿಕವಗಿ ನಡಕ್ಕೊಂಡಿದ್ದಕಾರಣವೋ ಅಲ್ಲ ಗುರುಗಳ ಅನುಗ್ರಹಂದಲೋ ಬ್ರಾಹ್ಮಣ್ಯ, ಗಾಯತ್ರಿ,ರುದ್ರ ಇತ್ಯಾದಿಗೊ ಕೆಲವು ಒಳುಕ್ಕೊಂಡಿಪ್ಪದು ಪೂರ್ವಜರ ಸಂಪ್ರದಾಯಂಗೊ ಒಳುಕ್ಕೊಂಡಿಪ್ಪದು ಹೇಳಿ ಕಾಣುತ್ತು.