Friday, May 3, 2013

vyavaharada korate

                      ವ್ಯವಹಾರ ಜ್ಞಾನದ ಕೊರತೆಯೋ ಅಲ್ಲ ಅವ್ಯವಸ್ತೆಯೋ?                                                                                                                                                                                              ಅಂದು ಮನೆಗೆ ಬಂದೆತ್ತುವಗ ಪೋಸ್ಟ್ ಆಫಿಸಿನ ಒಂದು ಚೀಟಿ ಕಂಡತ್ತು. ಎನ್ನ ಹೆಸರಿಲ್ಲಿ ಒಂದು ರಿಜಿಸ್ತ್ರಿ ಇದ್ದು, ಓಫೀಸಿಂಗೆ ಹೋಗಿ ಅದರ ತೆಕ್ಕೊಳ್ಳೆಕ್ಕು ಹೇಳಿ ಇತ್ತು. ಈಗ ಅವು ಮನೆಗೆ ತಂದು ಕೊಡುಲೆ ಇಲ್ಲೆನ್ನೆ!.ಸರಿ ಮರದಿನ ಉದಿಯಪ್ಪಗ ಪೋಸ್ಟ್ ಓಫಿಸಿಂಗೆ ಎನ್ನ ಸವಾರಿ ಹೋತು.ಪೋಸ್ಟ್ ಮಾಸ್ಟ್ರನತ್ರೆ ಕೇಳಿದೆ. ಅವ ಒಂದು ದೊಡ್ಡ ಕವರು ತೋರುಸಿ, ಎಕ್ನೋಲೆಜ್ ಮೆಂಟಿಂಗೆ ದಸ್ಕತು ತೆಕ್ಕೊಂಡು ಕವರಿನ ಕೊಟ್ಟ. ಕವರು ತೆರದು ನೋಡುವಗ ಸ್ಟೇಟ್ ಬೇಂಕಿಂದ ಕಳಿಸಿಕೊಟ್ಟ ಚೆಕ್ ಪುಸ್ತಕ! ಮದಲೊಂದರಿ ಬೇಂಕಿಂಗೆ ಹೋಗಿಪ್ಪಗ ಚೆಕ್ ಪುಸ್ತಕ ಬೇಕೋ ಕೇಳಿತ್ತಿದ್ದವು.ಬೇರೆ ಸಿಂಡಿಕೇಟ್ ಬೇಂಕಿಲ್ಲಿ ಎನ್ನ ಎಕೌಂಟ್ ಇದ್ದು. ಅಲ್ಲಿ ಚೆಕ್ ಪುಸ್ತಕಕ್ಕೆ ಬೇರೆ ಪೈಸೆ ತೆಕ್ಕೊಂಬಲಿಲ್ಲೆನ್ನೆ!.ಸರಿ ಒಂದು ಪುಸ್ತಕ ಕೊಡಿ ಹೇಳಿದೆ. ಪುಸ್ತಕ ಬೇಕು ಹೇಳಿದರೆ ಎಂಗೊ ಚೆನ್ನೈಂದ ತರುಸೆಕ್ಕಸ್ಟೆ.ಎಂಗೊ ಅಲ್ಲಿಗೆ ಬರಕ್ಕೊಂಡರೆ ಅವು ನಿಂಗಳ ಮನಗೇ ಕಳಿಸಿ ಕೊಡುತ್ತವು,ಹೇಳಿದವು.ಅಂದು ಎನಗೆ ಸಿಕ್ಕಿದ ಪುಸ್ತಕ ಚೆನ್ನೈಂದಲೇ ಬಂದದು! ಇಷ್ಟು ಜಾಗ್ರತೆ ಇದ್ದೋ ಹೇಳಿ ಆಶ್ಚರ್ಯ ಆತು. ಆಗಲಿ ಮನೆಗೇ ಕಳುಸಿದವನ್ನೇ.ಒಳ್ಳೆದಾತು ಹೇಳಿ ಗ್ರೇಶಿದೆ.
ಆನು ಹೆಚ್ಚಾಗಿ ಏ ಟಿ ಯಂ ದಲೇ ಹಣ ತೆಕ್ಕೊಂಬದು. ಸ್ಟೇಟ್ ಬೇಂಕಿಂಗೆ ಹೋಪದು. ಅಲ್ಲಿ ಕ್ಯೂ ನಿಂದು ಕಾದು ಕೂಪದಕ್ಕೆ ಅವೇ ಮಾಡಿದ ಅನುಕೂಲತೆ ಅಲ್ಲದೋ ಈ ಸವಲತ್ತು! ಒಂದು ವರ್ಷ ಕಳುದ್ದು. ಆನು ಎಡೆಲ್ಲಿ ಬೇಂಕಿಂಗೆ ಹೋಯಿದೇ ಇಲ್ಲೆ.ಒಂದರಿ ಪಾಸ್ ಪುಸ್ತಕ ತೆಕ್ಕೊಂಡು ಪುಸ್ತಕಲ್ಲಿ ಲೆಕ್ಕ ಎಂಟರ್ ಮಾಡಿಸಿಗೊಳ್ಳೆಕ್ಕು ಹೇಳಿ ಬೇಂಕಿಂಗೆ ಹೋದೆ. ಎಕೌಂಟಿಲ್ಲಿ ಹಣ ಎಶ್ಟಿದ್ದು ಹೇಳಿ ಗೊಂತಪ್ಪದು ಮತ್ತೆಯೇ ಅಲ್ಲದೋ ಗೊಂತಪ್ಪದು! ಪುಸ್ತಕ ಕೊಟ್ಟಪ್ಪಗ ಅಲ್ಲಿದ್ದ ಗುಮಾಸ್ತ ನಿಂಗಳ ಲೆಕ್ಕಲ್ಲಿ ಹಣ ಏನೂ ಒಳಿಯದ್ದ ಕಾರಣ, ಲೆಕ್ಕವ ಕ್ಲೋಸ್ ಮಾಡಿಗೊ<ಡಿದ್ದು. ಮಿನಿಮಮ್ ಇಲ್ಲದ್ದಕ್ಕೆ ಲೆಕ್ಕ ಕ್ಲೋಸ್ ಆಯಿದು ಹೇಳಿದವು. ಏಕಪ್ಪ ಹಾಂಗಾತು ಹೇಳಿ ಎನಗೆ ಆಶ್ಚರ್ಯ. ಎನ್ನ ಬಾಯಿ ಲೆಕ್ಕಲ್ಲಿ ಅವರ ಮಿನಿಮಮ್ ಹಣ ಒಂದು ಸಾವಿರಕ್ಕಿಂತ ಹೆಚ್ಚು ಇರೆಕ್ಕಾತು. ಏಕೆ ಹೀಂಗಾತಪ್ಪ ಹೇಳಿ ಆಶ್ಚರ್ಯ ಆತು. ಕೇಳಿದೆ. ಅವು ಲೆಕ್ಕ ತೋರುಸಿದವು.
         ಏ ಟ್ ಯಂ ಕಾರ್ಡಿನ ಲೆಕ್ಕಲ್ಲಿ ಹಣ ಕಳೆತ್ತವು ಹೇಳಿ ಗೊಂತಾದ್ದು ಅಂಬಗ ಎನಗೆ! ಮಾಂತ್ರ ಅಲ್ಲ ಚೆಕ್ ಪುಸ್ತಕಕ್ಕೂ ಹಣ ಕಳೆತ್ತವು ಹೇಳುವದು ಆ ಮೇಲೆ ಗೊಂತಾತು .ಹೀಂಗೆಲ್ಲ ಮಾಡಿ ಮಿನಿಮಮ್ ಇಲ್ಲೆ ಹೇಳಿ ಮಾಡ್ತ್ತಿದ್ದವು. ಮತ್ತೆ ತಿಂಗಳಿಂಗೊಂದರಿ ಮಿನಿಮಮ್ ಇಲ್ಲದ್ದ ಲೆಕ್ಕಲ್ಲಿ ಲೆಕ್ಕಲ್ಲಿದ್ದ ಹಣಂದಲೇ ಕಳದವು. ಅಂತೂ ಹೀಂಗೆಲ್ಲ ಕೂಡುಸಿ ಕಳದು ಲೆಕ್ಕಲ್ಲಿದ್ದ ಹಣವೆಲ್ಲ ಮುಗುದು ಆನು ಹೋದ್ದಕ್ಕೆ ಮತ್ತೆ ಹಣ ಕೊಡೆಕ್ಕಾಗಿ ಬಯಿಂದಿಲ್ಲೆ.ಬೇಜಾರು ಮಾಡ್ಯೊಂಡು ಮನಗೆ ಬಂದೆ. ಇದ್ದದ್ದೂ ಹೋಯಿತು ಮದ್ದಿನ ಗುಣಂದ. ಸುರಕ್ಷಿತವಾಗಿಪ್ಪಲೆ ಬೇಂಕಿಲ್ಲಿ ಮಡಗುವದು. ಆದರೆ ಇಲ್ಲಿ ಇಲ್ಲಿ ಬೇಂಕಿಲ್ಲಿ ಮಡಗಿದ ಹಣ ಬೇಂಕಿನ ಲೆಕ್ಕಲ್ಲೇ ಹೋತು.
     ಇಲ್ಲಿ ಎನ್ನ ತಪ್ಪೋ ಅಲ್ಲ ಬೇಂಕಿನ ಉದ್ಯೋಗಸ್ತ ತಪ್ಪೋ ಎನಗೆ ಗೊಂತಿಲ್ಲೆ. ಪ್ರತಿ ತಿಂಗಳ ಲೆಕ್ಕ ಮಾಡುವಗ ಅನ್ಯಾಯವಾಗಿ ಒಬ್ಬನ ಹಣ ನಷ್ಟ ಮಾಡುವದೆಂತಗೆ! ಗಿರಾಕಿಗೊಕ್ಕೆ ತಿಳಿಶಿಕ್ಕಾದ್ದು ಅವರ ಧರ್ಮ ಹೇಳಿ ಗ್ರೇಶುತ್ತೆ. ಅಂತೇ ಕೂಡುಸಿ ಕಳದು ಹಾಕುವಗ  ಅವು ಮನಸ್ಸು ಮಾಡಿದರೆ ಪಾರ್ಟಿಗೆ ವಿಷಯ ತಿಳಿಶುಲೆ ಇಪ್ಪತ್ತೈದು ಪೈಸೆಯ ಕಾರ್ಡ್ ಸಾಕು. ಗಿರಾಕಿಗೆ ತಿಳಿಶುತ್ತಿತರೆ ಹಣ ಲೆಕ್ಕಲ್ಲಿ ಒಳಿತ್ತೀತು. ಎನಗೆ ಎಚ್ಚರಿಗೆ ಅಪ್ಪಗ ಉದಿ ಆಯಿದು! ಅಥವಾ ಚೆಕ್ ಪುಸ್ತಕಕ್ಕೆ ಹಣ ವಜಾ ಆವುತ್ತು ಹೇಳುವ ವಿಷಯ ಎನ್ನ ಹತ್ತರೆ ಪುಸ್ತಕ ಬೇಕೋ ಕೇಳಿದ ಗುಮಾಸ್ತಂಗೆ ಹೇಳುಲಾವುತ್ತಿತ್ತು. ಅಥವಾ ಆನು ಕೇಳೆಕ್ಕಾತೋ ಎಂತದೋ?
        ನಮ್ಮ ಸುರಕ್ಷಿತಕ್ಕೆ ಬೇಂಕಿಲ್ಲಿ ಮಡಗಿದರೂ ಹಣ ನಮಗೆ ತಿಳಿಶದ್ದೆ ತೆಗವಲಾವುತ್ತು ಹೇಳಿ ಆದರೆ, ಅಥವಾ ಈ ಸಣ್ಣ ಮೊತ್ತಕ್ಕೆ ಕೋರ್ಟಿಂಂಗೆ ಹೋದರೂ ನಮ್ಮ ಕಡೆಲ್ಲಿ ನ್ಯಾಯ ಸಿಕ್ಕುಗೋ? ನಾವು ತೆಗದ ಲೋನಿನ ಬಗ್ಗೆ ನೋಟಿಸ್ ಕೊಡುವಂತೆ ಇದರನ್ನೂ ತಿಳಿಶೆಕ್ಕಾದ ಜವಾಬ್ದಾರಿ ಅವರದ್ದಾದರೂ ಅದಕ್ಕೆ ನಾವು ತುಂಬ ಕಷ್ಟ ಪಡೇಕ್ಕಕ್ಕು ಹೇಳಿ ಕಾಣುತ್ತು.
          ಕೆನರ ಬೇಂಕಿಲ್ಲಿ ಮದಲಿಂದಲೇ ಎನ್ನ ಎಕೌಂಟ್ ಇದ್ದು. ಏನೋ ಸ್ವಲ್ಪ ಹಣ "ಪುಚ್ಚೆ ಹೇಲು ಹುಗುದು ಹಾಕಿದಂಗೆ"ಹೇಳುಲಕ್ಕು ಹೆಚ್ಚು ಹಣ ಇಲ್ಲೆ. ಇಪ್ಪಗ ಹಾಕಿದರೆ ಬೇಕಪ್ಪಗ ತೆಕ್ಕೊಂಬಲಕ್ಕನ್ನೆ!ಮತ್ತೊಂದರಿ ಅಲ್ಲಿಯೂ ಹೀಂಗೆ ಆಗಿತ್ತು. ಚೆಕ್ ಪುಸ್ತಕಕ್ಕೆ ಹಣ ಕಳದ್ದು ಅಲ್ಲ. ಬೇರೆ ಕಾರಣಕ್ಕೆ ಮಿನಿಮಮ್ ಇಲ್ಲೆ ಹೇಳಿಯೋ ಎಂತದೋ ಕಾರಣಕ್ಕೆ ಎರಡೆರಡು ಸರ್ತಿ ಹಣ ವಜಾ ಆಗಿತ್ತು. ಮೇನೇಜರನ ಹತ್ತರೇ ಕೇಳೆಕ್ಕಾಗಿ ಬಂತು. ಕ್ಲಾರ್ಕ್ ಗೊ ಗಣ್ಯ ಮಾಡುತ್ತವಿಲ್ಲೆ. ಮೇನೇಜರ್ ಗುರ್ತದೋನು. ಅವನತ್ರೆ ಕೇಳಿದ್ದಕ್ಕೆ ಲೆಕ್ಕ ಎಲ್ಲ ಸರಿಯಾಗಿ ನೋಡಿ ಎನ್ನ ಮಾತು ಸರಿ ಹೇಳಿ ಅವಂಗೆ ತೋರಿತ್ತು. ನಿಂಗೆ ಬೇಜಾರು ಮಾಡೆಡಿ. ಅದರ ಸರಿ ಮಾಡುವೊ. ಒಂದೆರಡಿ ದಿನ ಕಳುದುಬನ್ನಿಹೇಳಿದ. ಮತ್ತೆ ಹೋದೆ. ಗುಮಾಸ್ತನ  ದಿನಿಗೇಳಿ ಲೆಕ್ಕ ಸರಿ ಮಾಡಿ ಕೊಡುಲೆ ಹೇಳಿದ ಮೇನೇಜರ್.
           ಇಲ್ಲಿ ಈ ಎರಡು ಸಂದರ್ಭಲ್ಲಿ    ಎನಗಾದ ಅನುಭವಲ್ಲಿ,ಗುರ್ತ ಇದ್ದ ಕಾರಣ ಒಂದು ಬೇಂಕಿಲ್ಲಿ ಲೆಕ್ಕ ಸರಿಯೂ ಆತು.ಗುರ್ತ ಇಲ್ಲದ್ದ ಕಾರಣ  ಮತ್ತೊಂದು ಬೇಂಕಿಲ್ಲಿ  ಲೆಕ್ಕಲ್ಲಿದ್ದ ಹಣವೇ ಹೋತು.ಯಾವದು ಸರಿ ಯಾವದು ತಪ್ಪು! ಗುರ್ತ ಇಲ್ಲದ್ದದು ತಪ್ಪೋ? ಅಥವಾ ಸಾರ್ವಜನಿಕ ವ್ಯವಸ್ತೆಲ್ಲಿ ಗುರ್ತವೇ ಬೇಕಾವುತ್ತೋ ಎನಗೆ ಗೊಂತಾವುತ್ತಿಲ್ಲೆ!ಇಲ್ಲಿ ಸಣ್ಣ ಮೊತ್ತವ ಹೇಳಿದ್ದಾದರೂ ದೊಡ್ಡ ಮೊತ್ತವಾದರೂ ಮಕ್ಕಳ ಪೇಪರ್ ತಿದ್ದುವಗ ಒಬ್ಬನ ಮಾರ್ಕಿನ ಇನ್ನೊಬ್ಬಂಗೆ ಹಾಕಿದ ಹಾಂಗೆ ಆದರೆ ಗಿರಾಕಿಗಳ ಒದ್ದಾಟ ಅನುಭವುಸೋವಕ್ಕೇ ಗೊಂತು.
ಉದ್ಯೋಗ ಸಿಕ್ಕುವ ವರೆಗೆ  ಮನುಷ್ಯನ ಅವಸ್ತೆ ಒಂದಾದರೆ ಸಿಕ್ಕಿದ ಮೇಲೆ ಅವನ ಗತ್ತೇ ಬೇರೆ!
                            ಎಲ್ಲೋರಿಂಗೂ ಹೀಂಗೆ ಅನುಭವ ಆಗದ್ದರೂ ಬೆರಳೆಣಿಕೆಯೋರಿಂಗೆ ಶನಿ  ಸುತ್ತಿದೋರಿಂಗೆ ಮಾಂತ್ರ ಆಗಿಕ್ಕು.ಕ್ಯೂ ನಿಂದೊಂಡಿಪ್ಪಗ ಒಬ್ಬನ ಬೇಗ ಕಳುಸೆಕ್ಕು ಹೇಳಿ ಆದರೆ ಕೇಶಿಲ್ಲಿ ಕೂದೋನು ಅವನ ದಿನಿಗೇಳಿ ಹಣ ಲೆಕ್ಕ ಮಾಡಿ ಕೊಡುವದಿದ್ದು. ಆರಾರು ಆಕ್ಷೇಪ ಹೇಳಿರೆ" ಅವ ಆಗಳೇ ಬಂದು ಕ್ಯೂ ನಿಂದೊಂಡು ಇದ್ದೋನು ಈಗ ಬಂದದು.ಹೋಪಗ ಹೇಳಿಕ್ಕಿ ಹೋದ್ದದು ಹೇಳಿ ಉತ್ತರ ಕೊಡುತ್ತವು.ಇಲ್ಲಿಯೂ ಸಾಮಾಜಿಕ ನ್ಯಾಯ ಇದ್ದೋ?ಒಟ್ಟಾರೆ ಯಾವುದೇ ಆಫೀಸಿಂಗೆ ಹೋಪಗಳೂ ಅಲ್ಲಿಯಾಣೋರ ಬೇಕಾದ ಹಾಂಗೆ ಮಾತಾಡಿ ಕಿಸೆ ಹಾಯ್ಕೊಂಡರೆ ಆಯೆಕ್ಕಾದ ಕೆಲಸ ಸಲೀಸಾಗಿ ಅಕ್ಕು.ಬಾಯಿ ಇದ್ದೋನು ಹೇಳಿರೆ ಸಂಬ<ಧ ಪಟ್ಟೋರತ್ರೆ ಬೇಕಾದ ಹಾಂಗೆ ಮಾತಾಡುಲೆ ಗೊಂತಿದ್ದರೆ ಅವನ ಕೆಲಸ ಆಗಿಯೇ ಹೋವುತ್ತು. ಆನು ನೇರ ಮಾರ್ಗಲ್ಲೇ ಹೋವ್ತೋನು ಹೇಳ್ಯೊಂಡಿದ್ದರೆ ಒಂದೇ ಸರ್ತಿಲ್ಲಿ ಅಪ್ಪ ಕೆಲಸ ಮತ್ತೆ ಮತ್ತೆ ಹೋಯೆಕ್ಕಾಗಿ ಬತ್ತು.ಮನ್ನೆ ಹೀಂಗಾತು.
ತಾಲೂಕು ಒಫಿಸಿಲ್ಲಿ ಎನಗೆ ಒಂದು ಕೆಲಸ ಆಯೆಕ್ಕಾತು. ಮನೆ ತೆಗದ ಜಾಗೆಯ ಆ ಟಿ ಸಿ ಒಂದುವರೆ ವರ್ಷ ಕಳುದರೂ ಸಿಕ್ಕಿತ್ತಿದ್ದಿಲ್ಲೆ. ಹೋಗಿ ಕೇಳಿದ್ದಕ್ಕೆ, ಎಂಗೊಗೆ ಅದರ ಕೋಪಿ ಇನ್ನೂ ಬಯಿಂದಿಲ್ಲೆ ಹೇಳಿದವು.ರಿಜಿಸ್ತ್ರಿ ಓಫಿಸಿಲ್ಲಿ ಕೇಳಿದ್ದಕ್ಕೆ ಎಂಗೊ ಅಂದಂದೇ ಕಳುಸುತ್ತೆಯೊ.ಸಿಕ್ಕಿದ್ದಿಲ್ಲೆ ಹೇಳಿದರೆ ಬೇರೊಂದು ಕೋಪಿ ತಂದು ಕೊಡಿ ಕಳುಸುತ್ತೆಯೊ ಹೇಳಿದವು. ಅಂಬಗಳೇ ಡಾಕ್ಯುಮೆಂಟಿನ ಕೋಪಿ ಕೊಟ್ಟು ದಸ್ಕತ್ತು ಹಾಕುಸಿ ತಂದು ಕೊಟ್ಟೆ. ಎರಡು ವಾರ ಕಳುದು ಹೋಪಲೆ ಹೇಳಿದವು. ಹೋದೆ. ಅದರ ವಿಲೇಜಿಂಗೆ ಕಳುಸುತ್ತೆಯೊ ಅಲ್ಲಿಂದ ರಿಪೋರ್ಟ್ ಬಂದ ಮೇಲೆ ಕೊಡುತ್ತೆಯೋ ಹೇಳಿದವು. ಒಂದು ತಿಂಗಳು ಕಳುದರೂ ಶುದ್ದಿ ಇಲ್ಲೆ. ಒಂದು ತಿಂಗಳು ಕಳುದ ಮೇಲೆ ಮನೆ  ಮುಂದೆ ಒಂದು ಚೀಟಿ ಕಂಡತ್ತು. ವಿಲೇಜಿಂಗೆ ಬಂದು ಅನುಭವ ಕೊಡೆಕ್ಕು ಹೇಳಿ ಇತ್ತು. ಅನುಭವ ಹೇಳಿದರೆ ಅವರ ಕಾಣಿಕೆ ಆಗಿಕ್ಕು! ಆನು ಹೋಯಿದಿಲ್ಲೆ. ಆರ್ ಟಿ ಸಿ ಸಿಕ್ಕಿದ್ದಿಲ್ಲೆ. ಎನಗೆ ನಗರ ಸಭೆಯ ಖಾತೆ ಸಿಕ್ಕಿತ್ತು.ಹಾಂಗೆ ಸುಮ್ಮನಿದ್ದೆ.ಇನ್ನು ಮತ್ತೊಂದರಿ ಹೋಗಿ ಕೇಳಿದರೆ ಎಂತ ಹೇಳುತ್ತವು ನೋಡೆಕ್ಕಷ್ಟೆ!
ಮತ್ತೊಂದರಿ ಆನು ಬೇಂಕಿಲ್ಲಿ ಒಂದು ಚೆಕ್  ಎನ್ನ ಎಕೌಂಟಿಂಗೆ ಹಾಕುಲೆ ಕೊಟ್ಟಿತ್ತಿದ್ದೆ. ಅದು ಶನಿವಾರ ಆಗಿತ್ತು.ಹತ್ತು ಗಂಟೆಗೇನೋ ಕೊಟ್ಟದು. ಹೊತ್ತೋಪಗ ಎನಗೆ ಫೋನ್ ಬಂತು. ನಿಂಗೊ ಕೊಟ್ಟ ಚೆಕಿಲ್ಲಿ ಹಣ ಲೆಕ್ಕಲ್ಲಿಲ್ಲೆನ್ನೆ! ಎಂತ ಮಾಡೆಕ್ಕು ಹೇಳಿ ಕೇಳಿದವು. ಅದಕ್ಕೆ ಆನು " ಚೆಕ್ಕಿನ ಕಳುಸೆಡಿ. ಎನಗೆ ಚೆಕ್ ಕೊಟ್ಟೋನತ್ರೆ ಕೇಳಿ ಸೋಮವಾರ ಹೇಳುತ್ತೆ ಅಲ್ಲಿ ವರೆಗೆ ಪೆಂಡಿಂಗ್ ಮಡಗಿ ಹೇಳಿದೆ. ಮತ್ತೆ ಆ ಪಾರ್ಟಿಗೆ ಫೋನ್ ಮಾಡುವಗ ಅವನೂ ಆನು ಎನ್ನ ಬೇಂಕಿಲ್ಲಿ ಕೇಳುತ್ತೆ ಹೇಳಿ ಸೋಮವಾರ ಹೋದಡೊ. ಏನೋ ಒಂದು ಕ್ಲೆರಿಫ಼ಿಕೇಶನ್ ಇತ್ತು. ಅದರ ಸರಿ ಮಾಡಿ ಕೊಟ್ಟವು. ಎರಡು ದಿನಲ್ಲಿ ಎನ್ನ ಹಣ ಎನ್ನ ಲೆಕ್ಕಕ್ಕೆ ಬಂತು.ಬೇಂಕಿನೋವು ಫೋನ್ ಮಾಡಿದ ಕಾರಣ ಸಮಸ್ಯೆ ಸರಿ ಆಗಿತ್ತು. ಇಲ್ಲಿ ಮಾನವೀಯತೆಯೂ ಕೆಲಸ ಮಾಡಿದ್ದು ಹೇಳುವದು ಎನ್ನ ಅಭಿಪ್ರಾಯ..
                          ಬೇಂಕಿಂಗ್ ವ್ಯವಸ್ತೆಯೇ ತನಗೆ ತಿಂಬಲೆ ಕೊಡುವದು ಹೇಳುವ ನೆಂಪು ಉದ್ಯೋಗಸ್ತರಿಂಗೆ ಇರುತ್ತಿದ್ದರೆ ಸಾರ್ವಜನಿಕರಿಂಗೆ ತೊಂದರೆ ಅಕ್ಕೋ!

karmanye vadhikaraste

                                                               ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಭಗವದ್ಗೀತೆಲ್ಲಿ ಶ್ರೀಕೃಷ್ಣ ಅರ್ಜುನಂಗೆ ಹೇಳಿದ್ದು ಹೀಂಗಲ್ಲದೋ! ಯುದ್ಧ ಮಾಡುಲೆ ಮನಸ್ಸಾಗದ್ದೆ ಬಿಲ್ಲು ಬಾಣಂಗಳ ಕೆಳ ಮಡಗಿಪ್ಪಗ ಅವಂಗೆ ದೇವರು ಅಪ್ಪಣೆ ಕೊಟ್ಟದು ಹೀಗೆನ್ನೆಅಲ್ಲಿ ಅರ್ಜುನಂಗ ಹೇಳಿದ್ದಾದರೂ ಎಲ್ಲೋರಿಂಗೂ ಅನ್ವಯಿಸುವ ಬುದ್ಧಿ ಮಾತುದೇ ಆವುತ್ತನ್ನೆ!
   .ಈ ಭೂಮಿಲ್ಲಿ ಹುಟ್ಟಿ ಬಂದ ಆರುದೇ ಅವರವರ ಕರ್ತವ್ಯವ ಮಾಡಿಯೇ ತೀರೆಕ್ಕು. ಅಂತೇ ತಿಂದು ತಿರುಗುವೋವು ಇಲ್ಲೆ ಹೇಳಿ ಅಲ್ಲ. ಕರ್ತವ್ಯದ ಬಗ್ಗೆ ತಿಳುದೋರು ಇದಕ್ಕೆ ತಪ್ಪುಲೆ ಗೊಂತಿಲ್ಲೆ. ನಮ್ಮ ಮುಖ್ಯ ಅಗತ್ಯಂಗೊ ಯಾವುದು? ಅಶನ ವಸನ ವಸತಿ ಈ ಮೂರು ಇಲ್ಲದ್ದೆ ಮರ್ಯಾದೆಲ್ಲಿ ಬದುಕ್ಕುಲೆಡಿಯ.ಕರ್ಮ ಮಾರ್ಗವ ಅನುಸರುಸುವ ಕರ್ಮ ಜೀವಿಗೊ ನಾವಪ್ಪಗ ಅನ್ಯಥಾ ಯೋಚನೆ ಮಾಡುಲಿದ್ದೋ?
ನಾವು ಬದುಕ್ಕೆಕ್ಕಾರೆ, ನಮ್ಮ ದೇಹ ಹೇಳುವ ಯಂತ್ರ ಕಾರ್ಯವೆಸಗೆಕ್ಕಾರೆ ಯಂತ್ರಕ್ಕೆ ಪೆಟ್ರೋಲ್ ಹೇಂಗೋ ಹಾಂಗೆಹೊಟ್ಟಗೂ ಇಂಧನ ಹಾಕೆಕ್ಕನ್ನೆ. ಇಂಧನವಾಗಿ ನಾವು ಉಪಯೋಗುಸುವ ಆಹಾರದ ವಿಷಯಲ್ಲಿ ಸ್ವಾವಲಂಬನೆ ಮದಲು ಇದ್ದತ್ತು. ಈಗ ಎಲ್ಲ ಅಂಗ್ಡಿಲ್ಲಿ ಸಿಕ್ಕುತ್ತು. ಉದ್ಯೋಗ ಇದ್ದರೆ ದುಡ್ಡು ಕೊಟ್ಟು ತೆಕ್ಕೊಂಬಲಕ್ಕು. ಆದರೆ ಎಲ್ಲದಕ್ಕೂ ಇನ್ನೊಬ್ಬನ ಅವಲಂಬುಸೆಕ್ಕಾಗಿ ಬತ್ತು. ಉಂಡ ಉಪ್ಪಿನ ಕೆಲಸ ಹೇಳಿ  ರಜ ಭೂಮಿ ಇದ್ದೋರು ಬ್ರ್ವರು ಸುರಿಸಿ ಕೆಲಸ ಮಾಡಿದರೆ ದೇಹ ಶ್ರಮಂದ ವ್ಯಾಯಾಮವೂ ಸಿಕ್ಕಿದ ಹಾಂಗೆ ಆವುತ್ತು. ಒಟ್ಟಿಂಗೆ ಬೇಕಾದ್ದರ ಬೆಳದ್ದೆ ಹೇಳುವ ತೃಪ್ತಿಯೂ ಬತ್ತು.ಮತ್ತೆ ಉಡುವ ವಸ್ತ್ರ, ಇಪ್ಪಲೊಂದು ಮನೆ ಇಷ್ಟು ಇದ್ದರೆ ಜೀವನಕ್ಕೆ ಸಾಕಲ್ಲದೋ! ಮುಂಬದು ಒಂದು ಕಡೆಲ್ಲಿ ,ಮನುಗುವದು ಇನ್ನೊಂದು ಕಡೆಲ್ಲಿ ಅಪ್ಪಲಾಗ! ಸ್ವಾವಲಂಬನೆ ಮುಖ್ಯ.
 ಇಲ್ಲಿ ನಮ್ಮ ಕಾಲ ಮೇಲೆ ನಿಂಬ ವಿಷಯಲ್ಲಿ ಸಣ್ಣಾಗಿಪ್ಪಗ ತೊಡಗಿ ಏನಾದರೊಂದು ಸ್ವಂತ ಸಂಪಾದನೆ ಮಾಡಿಗೊಂಬ ವರೆಗೆ ಅಮ್ಮ ಅಪ್ಪನ ಹೆರಿಯೋರ ಆಶ್ರಯಿಸಿಗೊಂಡರೆ ಮತ್ತೆ ನಮ್ಮ ಕಾಲಿಲ್ಲಿ ನಿಂಬ ಆದಹಾಂಗೆ ಆದಮೇಲೆ ಎಲ್ಲವನ್ನೂ ನಾವೇ ಹೊಂದುಸಿಗೊಳ್ಳೆಕ್ಕಾವುತ್ತು. ಇಲ್ಲಿ ವರೆಗೆ ಪೋಷಣೆ ಮಾಡಿದೋರು ಮುದುಕರಾದರೆ ಅವಕ್ಕೆ ಗೈವಲೆಡಿತ್ತಿಲ್ಲೆ. ಆರೋಗ್ಯವೂ ಹಾಳಾದರೆ ನಮ್ಮನ್ನೇ ಅವಲಂಬಿಸಿರೆಕ್ಕಾವುತ್ತು. ಅವರ ನೋಡಿಗೊಂಬದು ನಮ್ಮ ಧರ್ಮ!.ನಮ್ಮಂದ ಹೆಚ್ಚು ಅವಕ್ಕೆ ಸೌಕರ್ಯ ಮಾಡಿಕೊಟ್ಟರೆ, ಅವಕ್ಕೂ ಸಮಾಧಾನ, ನವಗೂ ಕೃತಜ್ಞತೆ ಇದ್ದ ಹಾಂಗೆ ಆವುತ್ತು.ಅದು ನಮ್ಮ ಧರ್ಮವೂ ಅಪ್ಪು.
ಜವಾಬ್ದಾರಿ ಬಂದದರ ಸಮರ್ಥವಾಗಿ ನಿಭಾಯಿಸಿಗೊಂಡು ಹೋಪಲೂ ಚಾಕಚಕ್ಯತೆಯೂ ಬೇಕು. ನಾವು ಹೆರಿಯೋರ ನೋಡಿಗೊಂಬ ಹೊಣೆಗಾರಿಕೆಯ ನೋಡಿಗೋಬದರ ನಮ್ಮ ಮಕ್ಕಳು ನೋಡಿ ಕಲಿತ್ತವು. ಇದು ತಲೆ ತಲಾಂತರಂದ ನಡಕ್ಕೊಂಡ ರೀತಿ. ನಮ್ಮ ಕರ್ತವ್ಯ ಧರ್ಮ!.ದೇಹಲ್ಲಿ ಕೈ ಕಾಲುಗಳಿಂದ ಹೆಚ್ಚು ತಲೆಯು ಬೇಕನ್ನೆ. ಎಲ್ಲೋರನ್ನೂ ಸೆಲ್ಲವನ್ನೂ ಸಮಧರುಸಿಗೊಂಡು ಹೋಪದು ಹೇಳಿದರೆ ತುಂಬ ಕಷ್ಟದ ಕೆಲಸ! ನಮ್ಮ ಹಾಂಗೆ ಕುಟುಂಬ ಜವಾಬ್ದಾರಿ ಸಹಧರ್ಮಿಣಿಗೂ ಬೇಕಾವುತ್ತು. ಹೀಂಗೆಲ್ಲ ಒಟ್ಟೊಟ್ಟಿಂಗೆ ಜೊತೆ ಜೊತೆಯಾಗಿ ಹೋಪಗ ಒಬ್ಬಕ್ಕೊಬ್ಬ ಸಮಜಾಯಿಸಿಗೊಂಡು ಹೋದರೆ ಕುಟುಂಬ ಜೀವನ, ನಮ್ಮ ಜೀವನ ಯಾತ್ರೆ ಸುಖವಾಗಿಕ್ಕು. ದೇಹದ ಬ್ಯಾವುದೇ ಅಂಗಕ್ಕೆ ತೊಂದರೆ ಆದರೂ ದೇಹದ ಇತರ ಭಾಗಂಗೊಕ್ಕೂ ಅದರ ನೋವು ಚಿಂತೆ ಇರುತ್ತನ್ನೆ.ಕುಟುಂಬಲ್ಲಿ ಆರೊಬ್ಬಂಗೆ ಸೌಖ್ಯ ಇಲ್ಲದ್ದೆ ಆದರೂ ಎಲ್ಲೋರಿಂಗೂ ಬೇಜಾರಾವುತ್ತಿಲ್ಲೆಯೋ? ಆಯೆಕ್ಕು. ಅದನ್ನೇ ಬೇನೆ ಬೇಸರಿಕೆಲ್ಲಿ ಸಮಾನ ಭಾವನೆ ಬಂದರೆ ಸಮಾಧಾನ ಸಂತೈಕೆ ಇದ್ದರೆ ಕುಟುಂಬ ಹಾಲುಂಡ ಸುಖ ಜೀವನ ತಕ್ಕು.
         ಭೂಮಿಲ್ಲಿ ಹುಟ್ಟಿ ಬಂದ ನಾವು ಮತ್ತೆ ಮತ್ತೆ ಹುಟ್ಟಿ ಸಾಯುತ್ತು ಹೇಳುವದರ ಜ್ಞಾನಿಗೊ ಹೇಳಿದ್ದವು. ಪ್ರಕೃತ ಇಪ್ಪ ನಾವು ಹೊಂದಿಗೊಂಡು ಬದುಕ್ಕಿದರೆ ಜೀವ ಕಷ್ಟ ಹೇಳಿ ತೋರ!ಒಬ್ಬ ಕೂದು ತಿಂಬದು ಒಳುದೋರು ದುಡಿವದು ಹೇಳಿ ಅಪ್ಪಲಾಗ. ಒಬ್ಬೊಬ್ಬ ಒಂದೊಂದು ಕೆಲಸ ಮಾಡಿದರೆ ಕೆಲಸ ಹೇಳುವದು ಹೂವೆತ್ತಿದ ಹಾಂಗಾವುತ್ತಿಲ್ಲೆಯೋ? ನೆಟ್ಟು ಬೆಳೆಶಿದೋವಕ್ಕೆ ಹೂಗು ಕೊಇವಲೆ ಮನಸ್ಸು ಬಾರ! ಬಾಕಿದ್ದೋರಿಂಗೆ ಆಚಿಂತ ಇದ್ದೋ? ಈ ಭೂಮಿಲ್ಲಿ ಹುಟ್ಟಿ ಬಂದ ಮೇಲೆ ಇಲ್ಲಿ ನಾವು ಮಾಡೆಕ್ಕಾದ ಕರ್ಮಂಗೊಕ್ಕೆ ಮಾಂತ್ರ ಹಕ್ಕುದಾರರು. ಆರಿಂಗೋ ಬೇಕಾಗಿ ಅಲ್ಲ ನವಗೆ ಬೇಕಾಗಿ ನಾವು ಮಾಡಿದ್ದರ ನಾವು ತಿಂತು. ಮಾಡಿದ್ದುಣ್ಣೋ ಮಹಾರಾಯ ಹೇಳಿದ ಹಾಂಗೆ! ಜೀರೆಕ್ಕಿ ಬಿತ್ತಿ ಓಮ ಬೆಳವಲೆಡಿಗೊ? ಹಿಂದಾಣೋರು ಹೇಳಿದ್ದೂ ಹಾಂಗೆ ದುಡುದು ತಿನ್ನು ಹೇಳಿ. ಕೂದು ತಿಂಬೋರಿಂಗೆ ತಂದದು ಮುಗಿವನ್ನಾರ ನಿಶ್ಚಿಂತೆ! ಮತ್ತೆ ಹುಡುಕ್ಕುಲೆ ಹೋಯೆಕ್ಕು. ಅದರಿಂದಲೇ ಕೆಲಸಲ್ಲಿ ಉದಾಶಿನಂದ ಆರೋ ಬೆಳದ್ದರ, ಕೂಡಿ ಮಡಗಿದ್ದರ ಕದ್ದು ಕೊಂಡು ಹೋಪದು. ಪಾಪದ ಫಲವೂ ಒಟ್ಟಿಂಗೆ ಅವಕ್ಕೆ ಗೊಂತಿಲ್ಲದ್ದ ಹಾಂಗೆ ಅವಕ್ಕೆ ಸಿಕ್ಕುತ್ತು.
      ಪ್ರತಿಯೊಂದು ಜೀವ ರಾಶಿಗೂ ಒಂದೊಂದು ಪಾಸ್ ಬುಕ್ ಇರುತ್ತಡೊ. ಅದರಲ್ಲಿ ನಾವು ನಮ್ಮ ಜೀವನಲ್ಲಿ ಮಾಡಿದ ಒಳ್ಳೆ ಕೆಲಸಂಗೊ ಪುಣ್ಯ ಫಲವನ್ನೂ ಕೆಟ್ತ ಕೆಲಸಂಗೊ ಪಾಪದ ಫಲವನ್ನೂ ನಮ್ಮ ಲೆಕ್ಕಕ್ಕೆ ಸೇರುಸಲಿದ್ದಡೊ. ಪುಣ್ಯ ಕಾರ್ಯಂಗಳಿಂದ ಬಪ್ಪ ಲಾಭವೋ ಕೆಟ್ಟ ಕಾರ್ಯಂಗಳಿಂದ ಬಪ್ಪ ಪಾಪದ ಲೆಕ್ಕಲ್ಲಿ ಹೆಚ್ಚು ಕಡಮ್ಮೆ ಆಗಡೊ. ಎರಡು ಫಲಂಗಳನ್ನೂ ಅನುಭವಿಸುವ ಹಕ್ಕು ಮಾಂತ್ರ ಪ್ರತಿಯೊಬ್ಬಂಗೂ ಇದ್ದಡೊ.ಅಂತೂ ಜನ್ಮಾಂತರದ ಪುಣ್ಯ ಕೆಲಸಂಗೊ ನವಗೇ ಮತ್ತಾಣ ಜನ್ಮಲ್ಲಿ ಐಹಿಕ ಸುಖ ಭೋಗ ನೆಮ್ಮದಿ, ದುಃಖಂಗಳ ಕೊಡುವದು ಹೇಳಿದರೆ ಎಲ್ಲ ಚಾಚೂ ತಪ್ಪದ್ದೆ ಅವಂಗವಂಗೆ ಅನುಭವಿಸುವ ಯೋಗ ಬಂದೇ ತೀರುತ್ತಡೋ. ಪ್ರತ್ಯಕ್ಷ ಪರೋಕ್ಷ ಫಲಂಗೊ ನವಗೆ ಗೊಂತಿಲ್ಲದ್ದೆ ಅನುಭವಕ್ಕೆ ಬಪ್ಪದು . ಅದನ್ನೇ ಪರೋಕ್ಷವಾಗಿ ಎಲ್ಲ ಕರ್ಮ ಫಲಂಗಳ ಕೊಟ್ಟೇ ತೀರುತ್ತ. ಬಾಕಿಮಾಡುತ್ತ ಇಲ್ಲೆ ಹೇಳುವದು ತಾತ್ಪರ್ಯ!
ಕರ್ಮ ಮ್ಡುವದು ನಮ್ಮ ಧರ್ಮ. ಫಲಾಫಲ ಅದು ದೇವರಿಂಗೆ ಬಿಟ್ಟದು! ದೇವರು ಒಂದು ಅವ್ಯಕ್ತ ಶಕ್ತಿ. ಎಲ್ಲವನ್ನೂ ಸೃಷ್ಟಿ ಮಾಡಿಕ್ಕಿ ನಮ್ಮನ್ನೂ ಸೃಷ್ಟಿ ಮಾಡಿದೋನು ಅವ. ಮಕ್ಕೊಗೆ ಆಟದ ಸಾಮಾನು ತಂದು ಕೊಟ್ಟು ಅವರಷ್ಟಕ್ಕೆ ಬಿಟ್ಟರೆ ಎಂತ ಮಾಡುತ್ತವು ಗೊಂತಿದ್ದನ್ನೆ. ಕೆಲವು ಮಕ್ಕೊ ಬೇರೆ ಮಕ್ಕಳ ಸೇರುಸ್ಯೊಂಡು ಆಡುಗು. ಇನ್ನು ಹತ್ತರೆ ಬಂದೋರ ಬೈದು ಅಟ್ಟುವ ಮಕ್ಕಳೂ ಇದ್ದವು. ಅಂತೆ ಎನ್ನತ್ರೆ ಹೇಳಿ ಆಡ್ಲರಡಿಯದ್ದೆಯೋ. ಉದಾಶೀನಂದಲೋ ಜಾಗ್ರತೆ ಮಾಡ್ಳೋ ಸುಮ್ಮನೆ ಚೆಂದ ನೋಡ್ಯೋಂಡೋ ಇಪ್ಪ ಮಕ್ಕಳೂ ಇಕ್ಕು. ನಾವು ಆಡಿದ್ದು ಸರಿ ಆಯಿದು. ಅವ ತಪ್ಪು ಆಡಿದ್ದ. ಅವಂಗೆಂತದೂ ಗೊಂತಿಲ್ಲೆ ಹೇಳಿಯೋ ಬೇರೆಯೋರ ನೋಡಿ ತಮಾಶೆ ಮಾಡುವೋವೂ ಇಕ್ಕು. ಒಬ್ಬಕ್ಕೊಬ್ಬನ ತಾಂಟುಸಿ ಹಾಕಿ ಜಗಳ ಮಾಡುವದರ ನೋಡಿ ಸಂತೋಷ ಪಡುವೋರೂ ಇಕ್ಕು. ಆದರೆ ಮೆಚ್ಚುವದು ಆರ್ತ ಹೇಳುವದು ಪ್ರಶ್ನೆ. ಮನೆಯೊಳದಿಕ್ಕೇ ಇಪ್ಪ ( ಈಗ ಕೂಡು ಕುಟುಂಬ ಇಲ್ಲೆನ್ನೆ)ಬೇರೆ ಮನೆಂದ ಮಕ್ಕಳೋಟ್ಟಿಂಗೆ ಹೇಂಗಿರುತ್ತವು ಹೇಳುವದರ ನೋಡಿ ನಮ್ಮ ಮಕ್ಕಳ ಚಾಕಚಕ್ಯತೆಯ ಮೆಚ್ಚಿಗೊಂಡರೆ ಸಾಲ! ನಿಜವಾದ ಮಾನವ ಧರ್ಮವ ಪಾಲುಸುವ ಮಕ್ಕಳ ಸಣ್ಣಾಗಿಪ್ಪಗಳೇ ನೋಡಿದರೆ ಗೊಂತಕ್ಕಡೊ. ಬೆಳೆಯ ಗುಣ ಮೊಳಕೆಲ್ಲಿ" ಗೊಂತಾವುತ್ತನ್ನೆ. ಅವರವರ ಹಣೆ ಬರಹವ ತಿದ್ದುಲೆಡಿಯದ್ದರೂ ಏನಾದರೂ ಸಣ್ಣ ಮಟ್ಟಿನ ರಿಪೇರಿ ಮಾಡಿದರೆ  ಮುಂದಾಣ ಸಮಾಜ ಒಳ್ಳೆದಕ್ಕೋ ಏನೋ!

mosagarike

                                                                             ಮೋಸಗಾರಿಕೆ ಹೀಂಗೂ ಇರುತ್ತಡೊ  
ಮನನೆ ಮಗ ಓಫೀಸಿಂದ ಬಪಪಗಳೇ ತುಂಬ ಟೆನ್ಶನಿಲ್ಲಿ ಇತ್ತಿದ್ದ!. ಕೆಲಸ ಮುಗಿಶಿ ಐದೂವರೆ ಗಂಟೆಗೆಲ್ಲ ಓಫೀಸಿಂದ ಸೀದಾ ಮನಗೆ ಬಪ್ಪದು ಅವನ ಕ್ರಮ. ಅಂದುದೆ ಅದೇ ಹೊತ್ತಿಂಗೇ ಬಂದೋನು ಫೋನ್ ಹಿಡುಕ್ಕೊಂಡು ಸೊಫಲ್ಲಿ ಕೂದುಗೊಂಡ. ಆರತರೆಯೂ ಮಾತಾಡಿದ್ದ ಇಲ್ಲೆ.ಅಲ್ಲಿಂದ ಹೆಲೋ ಕೇಳಿದ ಮೇಲೆ ಇವನೂ ಹೆಲೋ ಹೇಳಿಕ್ಕಿ ಅವನ ಹೆಸರು ಹೇಳ್ವಗ ಓನ್ ಲೈನಿಂಗೆ ಬಂದ ಅವರತರೆ ಸಮಸ್ಯೆಯ ಹೇಳಿಗೊಂಡ. ಇಂದು ಎನಗೆ ಎರಡು ಮೈಲ್  ನಿಂಗಳ ಬೇಂಕಿಂದ ಬಂದಿತ್ತು. ಮದಲಾಣದ್ದರಲಲಿ ಎನನ ಎಕೌಂಟಿಂದ ೩೦೦ ಧಾಲರ್ ಆನು ತೆಗದದೆ ಹೇಳಿ ಇತತು. ಎರಡನೆದರಲ್ಲಿ ಲೆಕ್ಕಲ್ಲಿದ್ದ ಹಣ  ಎಲ್ಲ ತೆಗದ ಕಾರಣ ನಿನ್ನ ಎಕೌಂಟಿನ ಕ್ಲೋಸ್ ಮಾಧಿದ್ದೆಯೋ ಹೇಳಿಯೂ ಇತ್ತು. ಆನು ಹಣ ತೆಗದ್ದೂ ಇಲಲೆ, ಹಣ ತೆಗೆಯದ್ದೆ ,ಹಣ ತೆಗದ್ದೆ ಹೇಳಿಯೂ, ಎಕೌಂಟ್ ಕಲೋಸ್ ಮಾಡಿದ್ದೆ ಹೇಳಿಯೂ  ಎಂತಕೆ ಲೆಕ್ಕ ಕ್ಲೋಸ್ ಮಾಡಿದ್ದಿ ಹೇಳಿ ಕೇಳಿದ್ದಕ್ಕೆ ಬೇಂಕಿನ ಒಂದು ಲೇಡಿ ಕ್ಲಾರ‍್ಕ್ ಹೇಳುವದು  ಲೆಕ್ಕ ನೋಡುವಗ ಹಾಂಗೆ ಕಾಣುತತು.ಹಣ ತೆಗದ ಕಾರಣವೇ ಆಗಿಕಕು ಹೇಳಿ ಸಮಜಾಯಿಶಿ ಹೇಳಿತ್ತಡೊ.
     ಅದು ಓನ್ ಲೈನಿನ ಲೆಕ್ಕಾಚಾರಡೊ. ಬೇಂಕಿಲ್ಲಿ ಎಕೌಂಟ್ ಓಪನ್ ಮಾಡುಲೆ ಬೇಂಕಿಂಗೆ ನಾವು ಹೋಪದು ಬೇಡ. ಏಜೆಂಟ್ ನಮ್ಮ ಮನಗೇ ನಾವಿದ್ದಲ್ಲಿಗೆ ಬಂದು ಫೋರಂ ತುಂಬುಸಿ ದಸ್ಕತ ಹಾಕಿ, ಹಣ ಕೊಟ್ಟರೆ ಆತು.ನಮ್ಮ ಈ ಮೈಲ್ ಐ ಡಿ ಕೊಟ್ಟರೆ ಸಾಕು. ನಾವು ಅಂಗ್ಡಿಂದ ಸಾಮಾನು ಬೇಕಾದರೆ ಕೆಲವು ವಸ್ತುಗಳ ಪೋಸ್ಟ್ ಮೂಲಕ ತರುಸುತ್ತರೆ ಕಮ್ಮಿಲ್ಲಿ ಕೊಡುತ್ತವಡೊ.ಅದರ ಹಾಂಗೆ ಕಂಪೆನಿಂದ ನೇರ ತರುಸುವೋರಿಂಗೆ ಕ್ರಯ ಕಡಮ್ಮೆಯೂ ಇರುತ್ತಡೊ. ತರುಸುವೋರಿಂಗೆ ನಮ್ಮ ಎಕೌಂಟ್ ನಂಬ್ರಂದ ನೇರ ತೆಕಕೊಂಬಲಕ್ಕಡೊ.ಹಾಂಗೆ ತರುಸುವಗ ನಮ್ಮ ಪಾಸ್ ವರ‍್ಡ್ ಬೇರಾಂಗು ಗೊಂತಿಲ್ಲದ್ದಿಪ್ಪಗ  ಬೇರಾರೂ ಹಣ ತೆಗವಲೆಡಿಯ ಹೇಳ್ತ ಧೈರ‍್ಯ!.ಹಾಮಗೆ ಪೋಸ್ಟಿಲ್ಲಿ ತರುಸುವಗ ಮನೆಗೇ ವಸ್ತು ಸಿಕ್ಕುತ್ತನ್ನೆ. ಸುಲಭವೂ ಆವುತ್ತು. ಹೇಳಿ ಒಂದು ಲೆಕ್ಕದ ಖಾತೆ ತೆಗದಿತ್ತಿದ್ದಡೋ.ಅದೇ ಎಕೌಂಟಿಂದ ಈಗ ಹಣ ಕಳವಾದ್ದು.
ಆ ಗುಟ್ಟಿನ ಶಬ್ದ ಬೇಂಕಿನೋವಕ್ಕಾದರೆ ಕದಿವಲಕ್ಕಡೊ.ಅಂಬಗ ಹೀಂಗಿಪ್ಪ ಕಳವಾಯೆಕ್ಕಾದರೆ ಅವಕ್ಕೆ ಗೊಂತಿದ್ದೇ ಆಯೆಕ್ಕು ಹೇಳುವದು ಖಂಡಿತ!ಅದು ಗೊಂತಾಗಿಯೇ ಮಗ ಫೋನ್ ಮಾಡಿದ್ದು. ಅಲ್ಲಿಂದ ಸರಿಯಾದ ಉತ್ತರ ಬಂತಿಲ್ಲೆ ಮತ್ತೂ ಒತ್ತಾಯ ಮಾಡಿದ್ದಕ್ಕೆ ಆ ಲೇಡಿ ಬೇಂಕಿನ ಮೇನೇಜರಂಗೆ ಫೋನ್ ಕೊಟ್ಟಿರೆಕ್ಕು. ಸ್ವರ ಬೇರೆ ಗೆಂಡಿನದ್ದಾತಡೊ. ಮೇನೇಜರ ಸುಭಗ ಆವುತ್ತೇ ಹೇಳಿ ಮಗಂಗೆ" ಆನು ಅದರ ಚೆಕ್ ಮಾಡಿ ಹೇಳ್ತೆ" ಹೇಳಿ ಉತ್ತರ ಕೊಟ್ಟತ್ತು.
        ಫೋನಿಲ್ಲಿ ಅವರ ಬೇಂಕಿನ ಎಡ್ವರಟೈಸ್ಮೆಂಟ ಹೇಳುವದು ಕೇಳುತ್ತಾ ಇತ್ತು. ಕಾಲು ಗಂಟೆ ಆತು,ಅರ‍್ಧ ಗಂಟೆ ಆತು. ಮೇನೇಜರ ಮಾತಾಡಿದ್ದೇ ಇಲ್ಲೆ. ಮುಕ್ಕಾಲು ಗಂಟೆ ಒಂದು ಗಂಟೆ ಕಳುದು ಬೇಂಕಿನ ಬಾಗಿಲು ಹಾಕಲೂ ಆತು. ಅತ್ಲಾಗಿಂದ ಉತ್ತರ ಇಲ್ಲೆ.  ಮತ್ತು ಕಾಲು ಗಂಟೆ ಕಳಿವಗ ಫೋನ್ ತೆಕ್ಕೊಂಡು ಮಾತಾಡಿತ್ತಡ. " ನೀನು ಹೇಳುವದು ಸರಿ. ಏನೋ ತೊಂದರೆ ಆಯಿದು ಹೇಳಿ ಕಾಣುತ್ತು. ನಿನ್ನ ಹಣವ ಎಂಗೊ ಕೊಡುತ್ತೆಯೊ.ಕ್ಙಮಿಸೆಕ್ಕು. ಒಂದೆರಡು ದಿನಲ್ಲಿ ಹಣ ನಿನ್ನ ಲೆಕ್ಕಕ್ಕೆ ಜಮಾ ಆವುತ್ತು" ಹೇಳಿತ್ತಡೊ.
ಇದೊಂದು ಗೋಲ್ಮಾಲಿನ ಹಾಂಗಿಪ್ಪದಲ್ಲದೋ?ನಾವು  ಸುಮ್ಮನೇ ಕೂದರೆ ಹಣ ಹೋದ್ದು ನವಗೆ ಸಿಕ್ಕುಗೋ?ಅವುದೇ ನಾವು ಸುಮ್ಮನೆ ಕೂರುಗು ವಿಚಾರಿಸ್ಯೊಂಡು ಹೋಗ ಹೇಳಿ ಗ್ರೇಶಿಕ್ಕು. ಸಣ್ಣ  ಮೊತ್ತ ಆದರೂ ದೊಡ್ಡ ಮೊತ್ತ ಆದರೂ ಅವು ಹೀಂಗೆ ಮಾಡಿದರೆ ಜನರ ಹಣಂದಲೇ ಬೇಂಕ ತುಂಬ ಲಾಭ ಮಾಡುಗು. ಎಷ್ಟು ಜನರ ಹಣವ ನುಂಗಿ ನೀರು ಕುಡಿಶುತ್ತವೋ ಎಂತದೋ! ಭಾರತಲ್ಲಿ ಮಾಂತ್ರ ಅಲ್ಲ ವಿದೇಶಲ್ಲಿಯೂ ಮೋಸಗಾರಿಕೆ ನಡೆತ್ತು ಹೇಳುವದು ಗೊಂತಾತನ್ನೆ!
 ನಾವು ನಮ್ಮ ಸಣ್ಣ ಆದಾಯಂದ ಹೀಂಗೆ ಹಣ ಕಳಕ್ಕೊಂಡರೆ ವಿದೇಶಲ್ಲಿ ಮರ‍್ಯಾದೆ ಜೀವನ ಸಾಗುಸುವದು ತುಂಬ ಕಷ್ಟ.ಮದಲಾಣೋರ ಗಾದೆ ಇದ್ದು." ಕತ್ತಿ ದಾರೆಲ್ಲಿ ನಡವದು" ಅಸಿ ಧಾರಾವ್ರತ ಹೇಳಿ ಇದ್ದಡೊ.ರಾಜಕುಮಾರಿಯ ಮದುವೆ ಆದ ಮೇಲೆ ರಾಜ ಕುಮಾರಿ ಹೇಳಿದ ಹಾಂಗೆ ನೇಲುಸಿದ ಕತ್ತಿ ಅಡಿಲ್ಲಿ ಗಂಧ ತಳದ್ದಡೊ ಕಾಳಿ ದಾಸ ಆಯೆಕ್ಕಾರೆ!. ನಾವುದೆ ಹೊರ ಪ್ರಪಂಚಲ್ಲಿ, ಅಥವಾ ಒಳ ನಾಡಿಲ್ಲಿಯೂ ಹೀಂಗೆ ಜಾಗ್ರತೆ ಮಾಡಿಗೊಂಡರೆ ವ್ಯವಹಾರಲ್ಲಿ ಗೆಲ್ಲುಲಕ್ಕಷ್ಟೆ.
  ಬಾರತಲ್ಲಿಯೂ ಹಣ ಮಾಡುವ ಸುಲಭ ದಾರಿಯ ಹುಡುಕ್ಕಿಗೊಂಡ ಜನಂಗೊ ದುಡಿಯದ್ದೆ ಹಣ ಗಳುಸುಲೆ ಹೀಂಗೆಲ್ಲ ಮಾಡುವದು ಸಾಮಾನ್ಯ ಹೇಳುವದೂ ಗೊಂತಿದ್ದನ್ನೆ.                       

nerekare outana

                                     ನೆರೆ ಕರೆ ಮನೆಗೆ ಹೋಗಿ ಔತಣ ಉಂಡದು                         

ಎಂಗೊ ಮನೆಂದ ಹೆರಡುವಗ ಪಿರಿ ಮಳೆ ಸುವಾತು. ಬರೇ ಒಂದು ಕಿ ಮೀ ಅಲ್ಲದೋ ಎಂಗೊ ನಡಕ್ಕೊಂಡೇ ಬಪ್ಪಲೆ ಒಪ್ಪಿಗೊ<ಡಿದೆಯೊ.ಮಗನೂ ಪುಳ್ಳಿಯುದೆ ಯಕ್ಷಮಿತ್ರದ ವರ್ಕ್ ಶೋಪಿಂಗೆ ಹೋಗಿತ್ತಿದ್ದವು. ಎಲ್ಲೋರು ಒಟ್ಟಿಂಗೆ ಹೋಪಲೆ ಹಾಂಗೆ ತೊಂದರೆ ಆತು. ಅವು ಮನೆಗೆ ಬಂದು ಎಲ್ಲ ಒಟ್ಟಿಂಗೆ ಹೋಪಲೆ ಕಾದು ಕೂದರೆ ತಡವಕ್ಕು ಹೇಳಿ ನಡಕ್ಕೊಂಡು ಹೋಪಲೆ ಒಪ್ಪಿಗೊಂಡದು
 ಆ ದಾರಿಯಾಗಿ ಎಂಗೊ ಯಾವಗಳೂ ವಾಕಿಂಗ್ ಹೋಪ ಜಾಗೆ. ಆದರೆ ಆ ಮನೆಗೆ ಎಂಗೊ ಇಬ್ರು ಹೋಗದ್ದರಿಂದ ಇಂದು ಹೋಪದು ಸುರು. ಒಟ್ಟಿಂಗೆ ಸೊಸೆ ಇದ್ದ ಕಾರಣ ಮನೆ ಹುಡುಕ್ಕೆಡ.೬ ಗಂಟೆಗೆ ಮನೆಂದ ಹೆರಡುಲೆ ಲೆಕ್ಕ ಹಾಕಿದ್ದು. ಆದರೆ ಮಳೆ ಇದ್ದ ಕಾರಣ ಹೇಂಗಪ್ಪ ನಡದು ಹೋಪದು ಹೇಳಿ ಯೋಚನೆ ಆತು.ಸೊಸೆ ಆ ಮನೆಗೆ ಫೋನ್ ಮಾಡಿ " ಮಳೆ ಬತ್ತನ್ನೆ ಹೇಂಗಪ್ಪ ಬಪ್ಪದು ಹೇಳಿತ್ತು.ಮದಲೆ ಅವೆ ಫೋನ್ ಮಾಡಿ ಬರೆಕ್ಕೋ ಕೇಳಿದ್ದಕ್ಕೆ ಸುಮ್ಮನೆ ಅವಕ್ಕೆ ತೋದರೆ ಬೇಡ ಹೇಳಿ " ಬೇಡ ಎಂಗೊ ನಡಕ್ಕೊಂಡೆ ಬತ್ತೆಯೋ" ಹೇಳಿತ್ತಡೊ. ಈಗ ನಿವೃತ್ತಿ ಇಲ್ಲೆ. ನಾಮೋಸು ಬಿಟ್ಟು " ಎಂಗೊ ಬರೆಕ್ಕಾರೆ ಕಾರು ತೆಕ್ಕೊಂಡು ಬನ್ನಿ" ಹೇಳೆಕ್ಕಾಗಿ ಬಂತು. ಆದರೆ ಎರಡು ಮನೆಯೋರುದೆ ತುಂಬ ಅನ್ಯೋನ್ಯ ಇದ್ದ ಕಾರಣವೇ ಎಂಗಳ ಅವರ ಮನೆಗೆ ಊಟಕ್ಕೆ ಬಪ್ಪಲೆ ಹೇಳಿತ್ತಿದ್ದವು. ಈ ಪರಿಸರಲ್ಲಿಯೇ ಐದಾರು ಕನ್ನಡಿಗರ ಮನೆಗೊ ಇದ್ದು.
       ಊರು ಬಿಟ್ಟು ಪರದೇಶಕ್ಕೆ ಬಂದ ಕನ್ನಡಿಗರು ಬೇರೆ ಬೇರೆ ಹಬ್ಬಂಗಳ ಒಟ್ಟಿಂಗೆ ಸೇರಿ ಆಚರುಸವದು ಪದ್ಧತಿಯೇ ಆಯಿದು ಹೇಳುಲಕ್ಕು. ಹಬ್ಬ ಹರಿದಿನಂಗಳ ಪರಿಚಯ ಮಕ್ಕೊಗೂ ಸಿಕ್ಕೆಕ್ಕು ಹೇಳುವದು ಇವರ ಆಸೆ. ಯುಗಾದಿ ದಿನವೇ ಅಲ್ಲದ್ದರೂ ಒಂದು ವಾರದ ಕೊನೆಗೆ ಎಲ್ಲೋರು ಒಂದು ಕಡೆ ಸೇರಿ ವಿವಿಧ ಕಾರ್ಯಕ್ರಮಂಗಳ ಹಮ್ಮಿಗೊಳ್ಳುತ್ತವು.ಮಕ್ಕೊಗೂ ಕನ್ನಡದ ಹಾಡು ಹಾಡುಲೆ ಇಷ್ಟ ಹೇಳಿ ಕಾಣುತ್ತು. ಕೋಲೇಜು ಮೆಟ್ಳು ಹತ್ತಿದ ಮಕ್ಕೊ ಬಪ್ಪದು ಕಡಮ್ಮೆ, ಆದರೆ ಮಕ್ಕೊ ಇದ್ದಲ್ಲಿಂಗೆ ಸಂದರ್ಷನಕ್ಕೆ ಬಪ್ಪೋವಕ್ಕೆ ಹೆಚ್ಚಿನ ಕನ್ನಡಿಗರ ಕಾಂಬಲೆಡಿತ್ತು. ಇಲ್ಲಿಯಾಣೋವು"ಅನ್ಕ್ಲ್ ಆಂಟಿ"ಹೇಳಿ ತುಂಬ ಪ್ರೀತಿಂದ ಮಾತಾಡುಸುತ್ತವು. ಮನ್ನೆಯಾಣ ಕಾರ್ಯಕ್ರಮಕ್ಕೆ ಮುನ್ನೂರರಿಂದ ಮುನ್ನೂರ ಐವತ್ತರ ವರೆಗೆ ಜನ ಸೇರಿತ್ತಿದ್ದವು.
ಹಾಂಗೆ ಎಂಗಳ ಹಾಂಗೆ ಬಂದೋರ ಅವರ ಮನೆಯೋರ ಹಾಂಗೆ ಮನೆಗೆ ಊಟಕ್ಕೆ ಬಪ್ಪಲೆ ಹೇಳುವದು ಕ್ರಮ. ಬಂದೋರ ಆದರುಸಿ ಸತ್ಕರಿಸುವ ಭಾರತೀಯ ಸಂಪ್ರಸಾಯವ ಒಳಿಶಿಗೊಂಡಿದವು.ಅವಕ್ಕು ಒಂದರಿ ಊರ ಶುದ್ದಿ ಮಾತಾಡಿದ ಹಾಂಗೂ ಆವುತ್ತನ್ನೆ!.
                       ಮಳೆ ಬಿಡದ್ದ ಕಾರಣ ಆ ಮನೆಯೋನು ಎಂಗಳ ಮನೆಗೆ ಕಾರು ತೆಕ್ಕೊಂಡು ಬಂದ. ಆನು ಇಲ್ಲಿಗೆ ಬಂದ ಮರದಿನವೇ ಅವನ ನೋಡಿತ್ತಿದ್ದೆ. ಮಗ ಮನೆ ತೆಕ್ಕೊಂಡು ಒಂದು ತಿಂಗಳಿಲ್ಲಿ ಅವ ಇಲ್ಲಿಗೆ ಬಂದಿದ್ದಡೊ. ಕೆನಡಕ್ಕೆ ಬಂದು ಹತ್ತಿಪ್ಪತ್ತು ವರ್ಷ ಕಳಾತಡೊ. ಬೇರೆಲ್ಲಿಯೋ ಬಾಡಿಗೆ ಮನೆಗಳಲ್ಲಿ ಇದ್ದೋರು ಈಗ ಸ್ವಂತ ಕೊಂಡುಕೊಂಡದಡೊ.
ಕೆನಡಲ್ಲಾಗಲಿ ಅಮೇರಿಕಲ್ಲಾಗಲಿ ಮನೆಗೊ ಹೆಚ್ಚಾಗಿ ಮರಂದಲೇ ಕಟ್ಟಲ್ಪಟ್ಟದು.ಹೆರಾಣ ಆಕಾರಲ್ಲಿಯೋ, ಗಾತ್ರಲ್ಲಿಯೋ ಹೆಚ್ಚು ಕಡಮ್ಮೆ ಇಕ್ಕು. ಹೆಚ್ಚಾಗಿ ಮನೆ ಹಿಂದಿಗಡೆ ಬೇಕ್ ಯಾರ್ಡ್ ಹೇಳಿ ಇರುತ್ತು. ಒಂದೋ ಎರಡೋ ಮರಂಗೊ ಸಣ್ಣದು ಇಪ್ಪದಿದ್ದು. ಮತ್ತೆಲ್ಲ ಜಾಗೆಲ್ಲಿ ಲಾನ್ ಹುಲ್ಲು. ಎದ್ದ ಕೂಡ್ಳೇ ಹಸುರು ಬಣ್ಣವೇ ಕಾಣೆಕ್ಕು. ಶುಚಿತ್ವವೂ ಅಷ್ಟೆ. ವಾರಕ್ಕೊಂದರಿ ಮನೆಲ್ಲಿಪ್ಪ ಕಸವು,ಬೇಡದ್ದ ವಸ್ತುಗೊ, ಪೇಪರುಗಳ ಒಂದು ಪ್ಲಾಸ್ಟಿಕ್ ಬಾಸ್ಕೆಟಿಲ್ಲಿ ಹೆರ ಮಡಗಿದರೆ ಕೋರ್ಪೊರೇಶನಿನೋವು ಬಂದು ಕೊಂಡು ಹೋವುತ್ತವು. ದಾರಿಲ್ಲಿಯೂ ಕಸವು ಇಡುಕ್ಕುಲಾಗ. ಕಂಡರೆ ಫೈನ್!ಅಸಕ್ಕೆ ಆರುದೆ ಕಾನೂನು ತಪ್ಪುಯ್ಯವಿಲ್ಲೆ. ಇಲ್ಯಾಣೋವುದೆ ಶುಚಿತ್ವ ಕಾಪಾಡುವದು ಕರ್ತವ್ಯ ಹೇಳುವದರ ಪಾಲುಸುತ್ತವು. ನಮ್ಮ ಪೇಟೆಗಳಲ್ಲಿದ್ದ ಹಾಂಗೆ ಕೊಳಕ್ಕು ಕಾಂಬಲೆ ಸಿಕ್ಕ. ಅದಕ್ಕೆ ಆರೋಗ್ಯ ಕಾಪಾಡಿಗೊಂಬಲೂ ಅನುಕೂಲ. ಜಿರಳೆವ್, ಸೊಳ್ಲೆ ನೆಳವು ವಾಸ ಸ್ಥಳಂಗಳಲ್ಲಿ ಇಲ್ಲೆ.
ಜನಂಗೊಕ್ಕೆ ಉದ್ದಕ್ಕೆ ನಡಕ್ಕೊಂಡು ಹೋಪಲೆ ಹೈ ವೇ ಕರೆಲ್ಲಿ ಅಗಲದ ಕಾಲು ಹಾದಿ.ದಾರಿ ಸ್ವಚ್ಚವಾಗಿರುತ್ತು. ,ಮನೆಯೊಳದಿಕ್ಕೂ ಕ್ಲೀನ್ ಮಡಿಕ್ಕೊಂಬದು ಅವರವರ ಜವಾಬ್ದಾರಿ.ಚಳಿಗಾಲಲ್ಲಿಯೂ ಹೀಟರ್ ಹಾಕಿ ಮನೆಯೊಲ ಬೆಶಿ ಇರುತ್ತು. ಸೆಕೆಗಾಲಲ್ಲಿ ಏರ್ ಕಂಡಿಶನ್ ವ್ಯವಸ್ಥೆ! ಒಂದೊಂದು ಮನೆಗಳಲ್ಲಿ ಎರಡು ಮೂರು ಬಾತ್ ರೂಮುಗೊ. ಟೇಪ್ ತಿರುಗುಸಿದರೆ ಬೆಶಿನೀರು ಬೇಕಾದರೆ ರಜ ಹೆಚ್ಚು ತಿರುಗಿಸಿದರಾತು.ನಳ್ಳಿಲ್ಲಿ ನೀರಿಲ್ಲೆ ಹೇಳಿ ಅಪ್ಪಲೆ ಇಲ್ಲೆ.ಮನೆಯೊಳದಿಕ್ಕಾಣ ಶಬ್ದ ಹೆರಂಗೆ ಗೊಂತಾಗ!ಎಲ್ಲಿಯೋ ಒಂದೆರಡು ಮಸೀದಿ ಇದ್ದರೂ ಭಾರತಲ್ಲಿದ್ದ ಹಾಂಗೆ ಅವರ ಪ್ರಾರ್ಥನೆ ಹೆರಂಗೆ ಕೇಳ. ಬಹುಶ ಭಾರತಲ್ಲಿಪ್ಪ ಪೈಗಂಬರಂಗೆ ಕೆಮಿ ದೂರವೋ ಏನೋ!
                            ಅಂತೂ ಹತ್ತರಾಣ ಮನೆಯೊಂದಕ್ಕೆ ಅತಿಥಿಗಳಾಗಿ ಎಂಗೊ ಹೋದೆಯೊ.ಅವು ಬಳ್ಳಾರಿ ಮೂಲದೋರಡೊ.ಮನೆಯ ಯಜಮಾನಂಗೆ ಕನ್ನಡ ಗೊಂತಿದ್ದು. ಹೆಂಡತ್ತಿ ತೆಲುಗೆತ್ತಿ. ಎರಡು ಮಕ್ಕೊ. ಒಂದು ಕೂಸು ಹೆರಿದು. ಮಾಣಿ ಎರಡನೆಯವ.ಹತ್ತು ವರ್ಷ ಆತಡೊ.ಕೂಸು ಪಿ ಯು ಸಿ ಕಲ್ತಾತಡೊ.ಇನ್ನು ಡಿಗ್ರಿ ಓದುವದಡೊ. ವಿಶೇಷ ಎಂತ ಕೇಳಿದರೆ ಮಕ್ಕೊಗಿಬ್ರಿಂಗೂ ಕನ್ನಡ ಗೊಂತಿಲ್ಲೆ. ಇಂಗ್ಲಿಶಿಲ್ಲಿಯೇ ಮಾತಾಡುವದು. ಹೆಮ್ಮಕ್ಕೊ ತೆಲುಗು ಅಥವಾ ಇಂಗ್ಲಿಶ್.ಆದರೆ ಎಂಗಳ ತುಂಬಹಾರ್ದಿಕವಾಗಿ ಬರ ಮಾಡುಗೊಂಡವು.
ಹೆರ ಹೋಯೆಕ್ಕಾರೆ ಜೇಕೆಟ್ ಬೇಕು.ಒಳ ಹೋದ ಮತ್ತೆ ಕಳಚಿ ಮಡಗೆಕ್ಕು. ನಾವು ಕಳಚಿ ಅಪ್ಪಗ ಅದರ ನಮ್ಮ ಕೈಂದ ತೆಕ್ಕೊಂಡು ಹೇಂಗರಿಲ್ಲ್ ತೂಗಿದವು .ಒಳ ಕರಕ್ಕೊಂಡು ಹೋಗಿ ಲಿವಿಂಗ್ ರೂಮಿಲ್ಲಿ ಕೂರುಸಿದವು,ಕೂದಾಗಿ ರಜ ಹೊತ್ತಪ್ಪಗ ಮಗನೂ ಪುಳ್ಳಿಯೂ ಬಂದವು.ಮತ್ತೇ ಬಂತದ೧ ವಡೆಯೂ ಚಟ್ಣಿಯೂ,ಒಟ್ಟಿಂಗೆ ಕಾಫಿಯೂ. ಒಟ್ಟಿಂಗ್ ಚಕ್ಕುಲಿ ತುಂಡುಗೊ.ಒಟ್ಟಾರೆ ಅದರ ಸ್ನೇಕ್ ಹೇಳುತ್ತವು. ಜ್ಯೂಸ್ ಬೇಕೊ ಕೇಳಿದವು ಬೇಡ ಹೇಳಿದೆಯೊ. ತೆಕ್ಕೊಂಡರೆ ಅಂಬಗಳೇ ಹೊಟ್ಟೆ ತುಂಬುತೀತು. ಕಸ್ತಲಪ್ಪಗ ಹೆಚ್ಚು ತಿಂಬಲಾವುತ್ತಿಲ್ಲೆನ್ನೆ!
ಅವಂಗೆ ಒಬ್ಬ ತಮ್ಮ, ಒಬ್ಬ ಅಣ್ಣಡೊ ಇಬ್ರೂ ಊರಿಲ್ಲಿ ಕೃಷಿ ಮಾಡ್ಯೊಂಡಿಪ್ಪದಡೊ. ಹೀಂಗೆಲ್ಲ ಶುದ್ದಿ ಮಾತಾಡಿಗೊಂಡಿಪ್ಪಗ ಗಾಂಟೆ ಎಂಟಾತು.
            ಮತ್ತೂ ಕಸ್ತಲೆ ಆಯಿದಿಲ್ಲೆ. ಸರಿಯಾಗಿ ಕತ್ತಲೆ ಅಪ್ಪಗ ಎಂಟೂ ಮುಕ್ಕಾಲು ಗಂಟೆ.ಮತ್ತೆ ಇನ್ನು ಉಂಬೊ ಹೇಳಿದವು.ಮೇಜಿ ಮೇಲೆ ಎಲ್ಲ ತಂದು ಮಡಗಿದವು. ಅನ್ನ, ಚಿತ್ರಾನ್ನ, ಸಣ್ಣ ಇಡಿ ಬದನೆ ಬೇಶಿ ಗಸಿಹಾಕಿ ಮಾಡಿದ ಬೆಂದಿ, ಬೆಂಡೆ ಕಾಯಿ ಪಲ್ಯ,ಸಾರು, ಚಟ್ಣಿ,ಮೊಸರು ಉಪ್ಪಿನ ಕಾತಿ ಎಲ್ಲ ಇತ್ತು. ನಿಂದೊಂಡು ಕಷ್ಟ ಆವುತ್ತರೆ ಕುರ್ಚಿಲ್ಲಿ ಕೂದು ಉಂಬಲಕ್ಕ್ಕು ಹೇಳಿದವು.ಒಟ್ಟಿಂಗೆ ಚಪಾತಿಯೂ ಇತ್ತು. ಒಂದು ಚಪಾತಿ ತಿಂದು ಪಲ್ಯ ಬೆಂದಿಗಳ ತೆಕ್ಕೊಂಡು ಉಂಬಲೆ ಸುರು ಮಾಡಿದೆಯೊ.ದಾಕ್ಷಿಣ್ಯ ಮಾಡೆಡಿ ಹೇಳಿಗೊಂಡವು. ಹಾಂಗೆ ಕಾಲು ಗಂಟೆ ಹೊತ್ತಿಲ್ಲಿ ಊಟವು ಮುಗುತ್ತು.
ಮತ್ತೆ ಬಂತದ ಗಸ ಗಸೆ ಪಾಯಸ. ಇದ್ದು ಹೇಳಿ ಮದಲೇ ಗೊಂತಾಗಿದ್ದರೆ ಹೊಟ್ಟೆಲ್ಲಿ ಜಾಗ ಮಡಿಕ್ಕೊಂಬಲಾವುತ್ತಿತ್ತು. ಅಂತೂ ಬಿಡ್ಳೆ ಮನಸ್ಸಾಗದ್ದೆ ಅದನ್ನೂ ಹೊಟ್ಟಗೆ ತುಂಬುಸುಇ ಆತು.ಹೋಪಗ ಕಾಲಿ ಕಾಲಿ ಕೈಲಿ ಹೋಪದೆಂತಕ್ಕೆ ಹೇಳಿ ಸೊಸೆ ಕಾಜು ಬರ್ಫಿ ತೆಕ್ಕೊಡು ಹೋಗಿತ್ತಿದ್ದು. ಅದರ ತೆಕ್ಕೊಂಡು ಬಂದವು. ಅದರ ಎಂಗೊ ನಾಳೆ ಬಂದು ತಿಂಬೆಯೊ. ಇಂದು ಹೊಟ್ಟೆಲ್ಲಿ ಜಾಗೆ ಇಲ್ಲೆ. ವಾಕಿಂಗೆ ಬಂದಿಪ್ಪಗ ಬತ್ತೆಯೋ ಹೇಳಿದೆ. ಆದರೆವ್ ಎಂಗೊ ವಾಕ್ ಹೋಪ ಹೊತ್ತಿಲ್ಲಿ ಅವು ಮನೆಲ್ಲಿರಿತ್ತವಿಲ್ಲೆ ಹೇಳುವದು ಗೊಂತಿದ್ದ ಕಾರಣ ಅವು ನೆಗೆ ಮಾಡಿದವು!ಹತ್ತು ಗಂಟೆಗೆ ಅಲ್ಲಿಂದ ಹೆರಟು ಮನೆಗೆ ಬಂದು ಮನುಗುವಗ ಹತ್ತೂವರೆ. ಮರದಿನ ಮಕ್ಕೊಗೆಲ್ಲ ಹೋಪಲಿದ್ದು. ಎಂಗೊಗೆ ೫ ಗಂಟೆಗೆ ಎದ್ದು ಯೋಗ ಮಾಡುಲಿದ್ದಲ್ಲದೋ. ಮನುಗಿದ ಕೂಡಲೇ ಒರಕ್ಕು ಬಂತು.
    

rogi bayasiddu halu

                                     ರೋಗಿ ಬಯಸಿದ್ದೂ ಹಾಲು  ವೈದ್ಯ ಕೊಡುಲೆ ಹೇಳಿದ್ದೂ ಹಾಲು!
ಅಂದು ಏಳುವಗಳೇ ಬಲದ ಮಗ್ಗುಲಿಲ್ಲಿ ಎದ್ದದು ಹೇಳಿ ಕಾಣುತ್ತು ಅವ! ಏಳುವಗ ತಡವಾದರೂ ಎಂದ್ರಾಣಷ್ಟು ತಡವಾಗಿತ್ತಿಲ್ಲೆ. ಯಾವಾಗಳೂ ಸೂರ್ಯನ ಬೆಣ್ಚಿ ಕುಂಡೆಗೆ ಬಿದ್ದಮೇಲೆಯೇ ಅದುದೇ ಅಮ್ಮನೋ ತಂಗೆಯೋ ಏಳುಸಿದರೆ ಮಾಂತ್ರ ಎದ್ದು ಮತ್ತೆ ಗಡಿಬಿಡಿಲ್ಲಿ ಬ್ರುಶ್ ಮಾಡಿ ಶಾಲಗೆ ತಡವಾವುತ್ತು ಹೇಳ್ಯೊಂಡು ಓಡಿ ಬಂದು ಕಾಫಿ ಕುಡಿವಲೇ ಕೂರುಗು. ಹೊಟ್ಟೆ ತುಂಬುಸ್ಯೊಂಡು ಓಡ್ಯೊಂಡೇ ಶಾಲಗೆ ಹೋಕು. ಬಪ್ಪಗ ಬೇಗ ಮನೆಗೆ ಬಂದದೇ ಇಲ್ಲೆ. ಬಪ್ಪಗಳೂ ದಾರಿಲ್ಲಿ ಗೆಳೆಯರೊಟ್ಟಿಂಗೆ ಮಾತಾಡ್ಯೊಂಡು ಮನಗೆತ್ತುವಗ ಕಸ್ತಲೆ ಅಕ್ಕು. ಹೋಂ ವರ್ಕ್ ಶಾಲೆಲ್ಲೇ ಮುಗಿಶಿಕ್ಕಿ ಮತ್ತೆ ರಜ ಹೊತ್ತಾದರೂ ಆಡಿಕ್ಕಿಯೇ ಬಕ್ಕು. ಒಟ್ಟಾರೆ ಆರೋಗ್ಯ ದೇವರ ದಯಂದ ಸರಿಯಾಗಿತ್ತು. ಮತ್ತೆಂತ ಚಿಂತೆಯೂ ಇಲ್ಲೆ. ಉಂಬಲೆ ತಿಂಬಲೆ ಅಪ್ಪ ತಂದು ಹಾಕಿದರೆ ತಂದದರ ಬೇಶಿ ಅಮ್ಮ ಬಳುಸಿದರೆ ಅದಕ್ಕೂ ಕೊರತ್ತೆ ಇಲ್ಲೆ. ಕಲಿವಲೂ ಹುಶಾರಿತ್ತಿದ್ದ. ಕ್ಲಾಸಿಲ್ಲಿ ಅವನೇ ಫಸ್ಟ್!ಮತ್ತೆ ಪಾಠೇತರ ಚಟುವಟಿಕೆಲ್ಲಿಯೂ ಭಾಷಣ ಚಿತ್ರ ಅಭಿನಯ ಎಲ್ಲದರಲ್ಲೂ ಮಾಸ್ಟ್ರಕ್ಕೊಗೆಅವ ಹೇಳಿದರೆ ಆತು.ಒಳ್ಳೆ ಗುಣ ನಡತೆಯೂ ಇದ್ದ ಕಾರಣ ಎಲ್ಲೋರಿಂಗೂ ಅವನತ್ರೆ ತುಂಬ ಪ್ರೀತಿ.
      ಮನೆಂದ ಶಾಲೆಗೆ ಬರೇ ಎರಡು ಮೈಲು ದೂರ. ಮಕ್ಕೊಗೆ ರಿಯಾಯಿತಿ ದರ ಆದ ಕಾರಣ ಬಸ್ಸಿಲ್ಲೇ ಹೋಪದು.ಅಂದು ರಜ ತಡವೇ ಆದರೂ ಬಸ್ ತಡವಾದ ಕಾರಣ ಓಡಿ ಹೋಗಿ ಹತ್ತುಲೆಡಿಗಾತು.ಅವನ ಹಾಂಗೆ ಎಲ್ಲ ಮಕ್ಕಳೂ ಶಾಲೆಗೆ ಆ ಬಸ್ಸಿಲ್ಲೇ ಹೋಪದು. ಅದಕ್ಕೆ ಮಕ್ಕಳ ಬಸ್ಸು ಹೇಳುಲಕ್ಕು. ಕಾರಣ ಬಸ್ಸು ತುಂಬ ಮಕ್ಕಳೇ ಇಪ್ಪದು. ಅಂದು ಅವನ ಕ್ಲಾಸಿಲ್ಲಿ ಪರೀಕ್ಷೆ  ಪೇಪರ್ ಕೊಟ್ಟವು. ಎಲ್ಲದರಲ್ಲಿಯೂ ಅವನೇ ಫಸ್ಟ್. ಮಾಷ್ಟ್ರ ಅವನ ಹೊಗಳಿದ್ದೇ ಹೊಗಳಿದ್ದು.
            ಅವನ ತಂಗೆಯೂ ಅದೇ ಶಾಲೆಲ್ಲಿ ಕಲಿವದು .ಒಟ್ಟಿಂಗೇ ಶಾಲೆಗೆ ಹೋಪದು.ತಂಗೆಯೂ ಕಲಿವಲೆ ಹುಶಾರಿತ್ತು. ಎಲ್ಲೋರೂ ಇಬ್ರನ್ನೂ ಹೊಗಳುಗು. ಅಂತೂ ಅವರದ್ದು ಸುಖೀ ಸಂಸಾರ!.ಮನೆಲ್ಲಿ ಅಮ್ಮ ಅಪ್ಪ,ಒಂದು ಅಜ್ಜಿ, ಮತ್ತೆ ಅಣ್ಣ,ತಂಗೆ ಇವಿಬ್ರು ಒಟ್ಟಿಂಗೆ ಐದು ಜನ ಮಾಂತ್ರ ಅವರ ಮನೆಲ್ಲಿದ್ದದು. ಬೇಕಾದಷ್ಟು ಅಡಕ್ಕೆ ತೋಟ, ರಜ ಗೆದ್ದೆ ಮನೆ ಖರ್ಚಿಗೆ ಬೇಕಾದಷ್ಟು ಅವರ ಗೆದ್ದೆಲ್ಲೇ ಸಿಕ್ಕಿಗೊಂಡಿತ್ತು. ಹೆಚ್ಚು ಶ್ರೀಮಂತರಲ್ಲದ್ರೂ ಉಂಬಲೆ ತಿಂಬಲೆ ಕೊರತ್ತೆ ಇಲ್ಲೆ.
          ಹತ್ತರಾಣ ಶಾಲೆಲ್ಲಿ ಕಲಿತ್ತಷ್ಟು ಕಲ್ತಾತು. ಇನ್ನು ಕೋಲೇಜು ಹಂತದ ವಿದ್ಯಾಭ್ಯಾಸ. ಈಗಾಣ ಕಾಲಲ್ಲಿ ವಿದ್ಯೆ ಇಲ್ಲದ್ದರೆ ವ್ಯವಹಾರ ಜ್ಞಾನವೂ ಇಲ್ಲದ್ದಕ್ಕನ್ನೆ ಹೇಳಿ ಕೋಲೆಜಿಂಗೂ ಸೇರುಸಿ ಆತು. ಅಲ್ಲಿಯೂ ಇವ ಕಲಿವದರಲ್ಲಿ ಹುಶಾರಿಗಿಯೇ ಇತ್ತಿದ್ದ. ಪಿ. ಯು.ಸಿ ಆದಮೇಲೆ ಇವಂಗೆ ಇನ್ನೂ ಕಲಿಯೆಕ್ಕು ಹೇಳಿ ಆತು. ಮೆಡಿಕಲಿಲ್ಲಿ ಸೀಟು ಸಿಕ್ಕಿತ್ತು. ಅಪ್ಪನೂ ಮಗ ಕಲ್ತು ಡಾಕ್ಟರ್ ಆದರೆ ಊರಿಲ್ಲೇ ಇದ್ದು ಒಂದು ಕ್ಲಿನಿಕ್ ಮಡಿಕ್ಕೊಂಡರೆ ಒಟ್ಟಿಂಗೆ ಕೃಷಿಯೂ ಇದ್ದನ್ನೆ,ಮರ್ಯಾದೆಲ್ಲಿ ಜೀವನ ಸಾಗುಸುಲಕ್ಕು ಹೇಳಿ ಯೋಚನೆ ಮಾಡಿದ ಅಪ್ಪ!. ಸರಿ ಮೆಡಿಕಲ್ ವಿದ್ಯೆಯೂ ಇವಂಗೆ ಕರತಲಾಮಲಕದ ಹಾಂಗೆ ಆಗಿತ್ತು.ಕೋಲೇಜಿಲ್ಲಿ ಇವನೇ ಮುಂದೆ. ಅಲ್ಲಿ ಮೆಡಿಕಲ್ ಕಲಿವಲೆ ಬಂದ ಒಂದು ಹುಡುಗಿಯ ಪರಿಚಯ ಆತು. ಅದುದೇ ಕಲಿವಲೆ ಹುಶಾರಿತ್ತು.ಪ್ರಿಚಯ ಸ್ನೇಹವಾತು.ಅಲ್ಲಿ ಸಂಜೆ ಹೊತ್ತು ಪಾರ್ಕ್ ಅಲ್ಲಿ ಇಲ್ಲಿ ತಿರುಗುಲೆ ಶುರುವಾಗಿತ್ತು.ಕೋಲೆಜಿಲ್ಲಿಯೂ ಇವನ ಕಂಡರೆ ಅದಕ್ಕೂ ಮೋರೆ ಗೆಲುವಕ್ಕು! ಅದರ ಕಾಣದ್ದೆ ಇವಂಗೂ  ಬೇಜಾರು ಅಕ್ಕು. ಒಬ್ಬಕ್ಕೊಬ್ಬನ ಕಾಣದ್ದರೆ ಏನೋ ಒಂದು ಬೇಜಾರು. ಯಾವದರಲ್ಲಿಯೂ ಆಸಕ್ತಿ ಇಲ್ಲದ್ದಿಪ್ಪಲೆ ಶುರುವಾತು.
        ಇಬ್ರ ಮನೆಯೂ ದೂರ ದೂರವಾಗಿದ್ದರೂ ಮನಸ್ಸು ಹತ್ತರೆಯೇ ಆಗಿಹೋತು. ಮುಂದೆ ಮದುವೆ ಆಗಿ ಎಲ್ಯಾದರೂ ಪೇಟೆಲ್ಲಿ ಕ್ಲಿನಿಕ್ ಮಡಿಕ್ಕೊಂಡು ಜೋಲಿಯಾಗಿ ಇರೆಕ್ಕು ಹೇಳುವ ಮನಸ್ಸು ಕೂಸಿಂಗೆ! ಆದರೆ ಇವನ ಮನೆಲ್ಲಿ ಅಪ್ಪ ಅಮ್ಮ ಮಾತಾಡುವದರ ಕೇಳಿಗೊಂಡಿದ್ದವಂಗೆ ಅವರ ಮನಸ್ಸಿಂಗೆ ಬೇನೆ ಮಾಡಿ ಪೇಟೆಗೆ ಹೋಪಲೂ ಮನಸ್ಸು ಬತ್ತಿಲ್ಲೆ. ಕೂಸಿನ ಬಿಟ್ಟಿಕ್ಕಿ ಇಪ್ಪಲೂ  ಮನಸ್ಸು ಒಪ್ಪುತ್ತಿಲ್ಲೆ. ಇಬ್ಬಂದಿ ಮನಸ್ಸು ಆಗಿ ಹೋತು ಅವಂದು. ತನ್ನ ಯೋಜನೆಯ ಮಟ್ಟಿಂಗೆ ಅವ ಏನೂ ಹೇಳದ್ದ ಕಾರಣ,ಕೂಸಿಂಗೆ ಚಿಂತೆ ಅಪ್ಪಲೆ ಶುರುವಾತು.ಬಾಯಿ ಬಿಟ್ಟು ಹೇಳಿದರೆ ಮಾಂತ್ರ ಅಲ್ಲದೋ ಯಾವದೂ ಗೊಂತಪ್ಪದು! ಇವ ಮಾತಾಡದ್ದೇ ಇಪ್ಪಗಳೇ ಕೂಸಿಂಗೆ ಇವಂಗೆ ಮನಸ್ಸಿಲ್ಲೆ ಹೇಳುವ ಯೋಚನೆಯೂ ಬಂತು. ಕೇಳಿದರೆ ಹೇಳುತ್ತಾ ಇಲ್ಲೆ. ಹೇಳದ್ದರೆ ಗೊಂತಪ್ಪದು ಹೇಂಗೆ?ಇಬ್ರೂ ಮನೆಲ್ಲಿ ಶುದ್ದಿ ಹೇಳಿದ್ದವಿಲ್ಲೆ.
       ಸಮಯ ಆರನ್ನೂ ಕಾದು ಕೂರ್ತಿಲ್ಲೆನ್ನೆ!ವರ್ಷ  ಮುಂದೆ ಹೋವುತ್ತಾ ಇಬ್ರದ್ದೂ ಕಲಿಯುವಿಕೆ ಮುಗಿಯುತ್ತಾ ಬಂತು.ಮರದಿನ ಎಲ್ಲೋರೂ ಊರಿಂಗೆ ಹೋಯೆಕ್ಕು. ತುಂಬ ವರ್ಷ ಒಟ್ಟಿಂಗೇ ಇದ್ದಿಕ್ಕಿ ಒಬ್ಬಕ್ಕೊಬ್ಬನ ಬೀಳ್ಕೊಡುಲೆ ಕಷ್ಟವೇ ಆತು. ಇವಕ್ಕೂ ಹಾಂಗೆ ಬಿಟ್ಟು ಹೋಪ ಮನಸ್ಸಿನ ಬೇನೆ ಹೇಳಿದರೆ ಗೊಂತಾಗ! ಅನುಭವಿಸಿದೋವಕ್ಕೇ ಗೊಂತನ್ನೆ!
                                        ಹೆರಡುಲಪ್ಪಗ ಇಬ್ರುದೇ ಮುಂದಾಣ ಯೋಚನೆ ಮಾಡಿಗೊಂಡವು. ಹಳ್ಳಿಲ್ಲೇ ಕ್ಲಿನಿಕ್ ಮಡುಗೆಕ್ಕು ಹೇಳುವದು ಮಾಣಿಯ ಅಪ್ಪನ ಅಭಿಪ್ರಾಯ. ಅಪ್ಪನ ಮಾತಿನ ಮೀರಿ ಹೋಪ ಧೈರ್ಯವೂ ಅವಂಗಿಲ್ಲೆ. ಕೂಸಿನ ಬಿಡುಲೂ ಮನಸ್ಸೊಪ್ಪುತ್ತಿಲ್ಲೆ. ಕೂಸಿಂಗೂ ಹಳ್ಳಿ ಬೇಡ ಹೇಳುವ ಅಭಿಪ್ರಾಯ!ಕೂಸಿನ ಮನೆಯೋರ ಅಭಿಪ್ರಾಯವೂ ಪೇಟೆಲ್ಲೇ ಕೆಲಸ ಮಾಡ್ಯೊಂಡು ಇಪ್ಪದಕ್ಕೆ ವಿರೋಧ ಇಲ್ಲೆ. ಇಬ್ರೂ ಅವರವರ ಯೋಚನೆಯ ಮನೆಯೋರತ್ರೆ ಹೇಳಿದ್ದವಿಲ್ಲೆ. ಮಾಣಿ ನಿರ್ಧಾರ ಬದಲುಸದ್ರೆ ಅವರೊಳಾಣ ಪ್ರೀತಿ ಸತ್ತು ಹೋದ ಹಾಂಗೆ!. ಎಂತ ಮಾಡುವದು? ಯಾವದೊಂದು ನಿರ್ಧಾರಕ್ಕೆ ಬಪ್ಪಲೂ ಅವಕ್ಕೆ ಎಡಿಗಾತಿಲ್ಲೆ.ಯಾವದೇ ಹರಿನಿರ್ಣಯ ಆಗದ್ದೆ ಊರಿಂಗೆ ಹೋಗಿಯೂ ಆತು.
                                    ಇಬ್ರುದೇ ಬ್ರಾಹ್ಮರೇ ಆಗಿದ್ದದಾದರೂ ಪ್ರೀತಿ ಮಾಡುವಗ ಗೋತ್ರ ಸೂತ್ರಂಗಳ ಕೇಳಿಗೊಂಡು ಪ್ರೀತಿ ಮಾಡಿದ್ದಲ್ಲ. ಇಬ್ರದ್ದೂ ಒಂದೇ ಗೋತ್ರ ಆಗಿತ್ತಡೊ. ಮತ್ತೆ ಮನೆಯೋರು ಒಪ್ಪುಲೆ ಸಾಧ್ಯವೇ ಇಲ್ಲೆ. ಮದಲಿಂದಲೇ ಎರಡು ಮನೆಯೋವಕ್ಕೂ ಹೋಪದು ಬಪ್ಪದು ಇತ್ತಿಲ್ಲೆ ಹೇಳುವದು ಇವಕ್ಕಿಬ್ರಿಂಗೂ ಗೊಂತಿತ್ತಿಲ್ಲೆ. ಈ ಕಾರಣಂದಲೂ ಮನೆಯೋರು ಇವರ ಇಷ್ಟದ ಬಗ್ಗೆ ಗೊಂತಾದ ಮೇಲೂ ಒಪ್ಪುವದು ಕಷ್ಟವೆ ಆತು.
                                        ಆ ಸಮಯಲ್ಲೇ ಗುರುಗಳ ಸವಾರಿ ಆ ಊರಿಂಗೆ ಬಪ್ಪದಿತ್ತು. ಬಂದರೆ ಮಾಣಿಯ ಮನೆಲ್ಲೇ ಕೇಂಪ್! ಗುರುಗಳ ಆಗಮನ ಆವುತ್ತು, ಐದು ದಿನದ ರಾಮ ಕತೆ ಹೇಳುಲೆ ಇದ್ದಡೊ" ಹೇಳಿ ಪ್ರಚಾರ ಆಗಿತ್ತು. ಮಾಣಿಯ ಮನೆಯ ಮುಂದೆ ದೊಡ್ಡ ಚೆಪ್ಪರ ಹಾಕಿತ್ತಿದ್ದವು. ಗುರುಗಳ ವಾಸ ಮಾಣಿಯ ಮನೆಲ್ಲೇ ಆಗಿತ್ತು. ಗುರುಗೊ ಬಂದವು. ಕೂಸಿನ ಮನೆಯೋರುದೆ ಕತೆ ಕೇಳುಲೆ ಬಂದಿತ್ತಿದ್ದವು.
ಗುರುಗೊ ಒಂದು ದಿನ ಮಾಣಿಯ ವಿದ್ಯೆಯ ಬಗ್ಗೆ ಕೇಳಿ ಅಪ್ಪಗ ಮೆಡಿಕಲ್ ಓದಿದ ಶುದ್ದಿ ಕೇಳಿ ಅವಕ್ಕೆ ಕೊಷಿ ಆಗಿತ್ತು. "ನಿಂಗಳ ಹಾಂಗಿಪ್ಪ ಡಾಕ್ಟ್ರಕ್ಕೊ ಊರಿಲ್ಲೇ ಪ್ರೇಕ್ಟೀಸ್ ಮಾಡಿದರೆ ಊರಿಲ್ಲಿದ್ದೋವಕ್ಕೆ, ಚಿಕಿತ್ಸೆಗಾಗಿ ಪೇಟೆಗೆ ಹೋಯೆಕ್ಕಾಗಿ ಬಾರ. ಹಳ್ಳಿಯ ಬಡಬಗ್ಗರ ಸೇವಯೂ ನಾವು ಸಮಾಜಕ್ಕೆ ನಾವು ಮಾಡುವ ಸೇವೆ. ಸಂಪಾದನೆಯೇ ಮುಖ್ಯ ಅಲ್ಲ. ಒಟ್ಟಾರೆವ್ ನಾವು ಊರಿಂಗೆ, ಊರಿನ ಜಂಗೊಕ್ಕೆ ಮಾಡುವ ನಿಷ್ಕಾಮ ಸೇವ ಇಹಕ್ಕೂ,ಪರಕ್ಕೂ ಪ್ರಯೋಜನ ಅಪ್ಪಂಥಾದ್ದು " ಹೇಳುವಗ ಮಾಣಿಗೆ ಹೆರಿಯೋರ ಮಾತಿನಂತೆ ನಡೆಯೆಕ್ಕಾದ್ದೂ ಎನ್ನ ಧರ್ಮ ಹೇಳುವದು ಗೊಂತಾತು.
 ಮರದಿನ ಕತೆ ಹೇಳುತ್ತಿಪ್ಪಗಳೂ ಇದೇ ಮಾತಿನ ಎಲ್ಲೋರಿಂಗೂ ನಾವು ಮಾಡೆಕ್ಕಾದ ಕರ್ಮ,ದ್ಶರ್ಮದ ಬಗ್ಗೆ ಹೇಳಿದವು.ಇದರೆಲ್ಲ ಕೇಳಿ ಅಪ್ಪಗ ಮಾಣಿ ಮನಸ್ಸಿಂಗೆ ಹೊಸ ಯೋಚನೆ ಬಂತು. ಹಳ್ಳಿಲ್ಲಿ ನಿಂಬಲೆ ಕೂಸು ಒಪ್ಪಿದರೆ ಗುರುಗಳತ್ರೆ ಈ ಮಟ್ಟಿಂಗೆ ಎಂತ ಮಾಡುಲಕ್ಕು ಕೇಳೆಕ್ಕು ಹೇಳಿ ಗ್ರೇಶ್ಯೊಂಡಿತ್ತಿದ್ದ. ಅಂದು ಗುರುಗೊ ಇವನತ್ರೆ ಯೋಗ ಕ್ಷೇಮ ಮಾತಾಡ್ಯೊಂಡಿಪ್ಪಗ ಧೈರ್ಯ ಮಾಡಿ ಅವನ ಸಮಸ್ಯೆಯ ಹೇಳಿದಡೊ. "ಎಂಗೊಗೆ ಇಬ್ರಿಂಗೂ ಇಷ್ಟ. ಆದರೆ ಹೋಪದು ಬಪ್ಪದು ಇಲ್ಲದ್ದ ಕಾರಣ, ಮತ್ತೆ ಗೋತ್ರದ ಕಾರಣಂದ ಎಂಗಳ ಯೋಚನೆ ಕೈಗೂಡುತ್ತಿಲ್ಲೆ.ಊರಿಲ್ಲೇ ಒಂದು ನರ್ಸಿಂಗ್ ಹೋಮ್ ಮಾಡೆಕ್ಕು ಹೇಳುವದು ಎನ್ನ ಆಸೆ.ಇದಕ್ಕೆ ಪರಿಹಾರ ಹೇಳೆಕ್ಕು ಹೇಳಿ ಕೇಳಿಗೊಂಡಡೊ.
ಅದಕ್ಕೆ ಗುರುಗೊ "ಕೆಲವು ಗೋತ್ರಂಗಳಲ್ಲಿ ಸೂತ್ರಂಗೊ ಇರುತ್ತು.ಬೇರೆ ಬೇರೆ ಸೂತ್ರಂಗೊ ಆದರೆ ಅಡ್ಡಿ ಇಲ್ಲೆ. ಮತ್ತೆ ಹೋಕೂರಕ್ಕೆ ಹೇಳುವದರ ವಿಷಯಲ್ಲಿ ಆನು ಎರಡು ಮನೆಯೋರನ್ನೂ ಒಪ್ಪುಸುತ್ತೆ "ಇವಂಗೆ ಸಮಾಧಾನ ಹೇಳಿದವು. ಗುರುಗಳ ಅಭಿಪ್ರಾಯ ಕೇಳಿದ ಕೂಸಿಂಗೂ ಶುದ್ದಿ ಹೇಳುವಗ ಊರಿಲ್ಲೆ ನಿಂಬಲೆ ಕೂಸು ಒಪ್ಪಿದ ಕಾರಣ ಸಮಸ್ಯೆ  ಸುಲಭವಾಗಿ ಪರಿಹಾರ ಆತು.   ಮಾಣಿಯ ಮನಸ್ಸು ರಜ ಹಗುರ ಆತು. ರಾಮ ಕತೆಯ ಹೆಳೆಲ್ಲಿ ಬಂದ ಕೂಸಿಂಗು ಒಪ್ಪಿಗೆ ಆತು ಹಳ್ಳಿಲ್ಲಿ ಇಪ್ಪಲೆ.ಗುರುಗೊ ಇಬ್ರ ಮನೆಯೋರನ್ನೂ ಮತ್ತೊಂದು ದಿನ ಬಪ್ಪಲೆ ಹೇಳಿ ಮಕ್ಕಳ ಉತ್ಸಾಹ ಹಾಳು ಮಾಡೆಡಿ.ಇಬ್ರೂ ರಾಜಿ ಆಯಿಗೊಳ್ಳಿ. ಆನು ಫಲ ಮಂತ್ರಾಕ್ಷತೆ ಕೊಡುತ್ತೆ. ಮುಂದೆ ಒಳ್ಳೆದಾವುತ್ತು ಹೇಳಿದ ಮೇಲೆ ಇಬ್ರಿಂಗೂ ನೆಮ್ಮದಿ. ರೋಗಿಗೊ ಬಯಸಿದ್ದು ಹಾಲು, (ಗುರು) ವೈದ್ಯರು ಕೊಡುಲೆ ಹೇಳಿದ್ದು ಹಾಲು. ಇಬ್ರ ಹಗಲು ಕನಸುಗೊ ನಿಜವಾತು!   ಮನಸ್ಸಿದ್ದರೆ ಮಾರ್ಗ ಹೇಳುತ್ತವು. ಎರಡು ಮನೆಯೋರೂ ಮನಸ್ಸು ಮಾಡಿ ಮಕ್ಕಳ ಆಸೆಯ ನೆರವೇರುಸಿದ್ದರಿಂದ ಊರಿಂಗೂ ಒಳ್ಳೆದಾತು!