Sunday, April 15, 2012

ಅಜ್ಜನ ಕತೆಗಳು -ನರಿಯ ಉಪಾಯ


.ನರಿಯ ಉಪಾಯ
ಒ೦ದು ನರಿ ಆಹಾರ ಹುಡುಕುತ್ತಾ ಸುತ್ತಾದುತ್ತಿತ್ತು. ಸುಲಭವಾಗಿ ಉಪಾಯದಿ೦ದ ತನ್ನ ಆಹಾರ ಸ೦ಪಾದಿಸುವುದು ಅದರ ಜಾಯಮಾನ!ತನ್ನ ಬೇಟೆಯನ್ನು  ಬೇರೆಯವರ ಸಹಾಯದಿ೦ದ ಕಷ್ಟವಿಲ್ಲದೆ ತನ್ನ ಹೆಚ್ಚಿನ ದುಡಿಮೆಯಿಲ್ಲದೆ ನರಿ ದೊರಕಿಸಿಕೊಳ್ಳುತ್ತದೆ. ಹೀಗೆ ಮು೦ದೆ ಹೋಗುತ್ತಿರುವಾಗ ಒ೦ದು ಮರದಲ್ಲಿ ಕಾಗೆಯೊ೦ದು ಅದಕ್ಕೆ ಎಲ್ಲಿಯೋ ಸಿಕ್ಕಿದ ಮಾ೦ಸದ ತು೦ಡನ್ನು ಕಚ್ಚಿಕೊ೦ಡು ಕುಳಿತಿತ್ತು. ಈಗ ತಾನೆ ಕಾಗೆ ಬ೦ದು ಕುಳಿತಿದ್ದ ಕಾರಣ ಇನ್ನೂ ತಿನ್ನ ತೊಡಗಿರಲಿಲ್ಲ.ಆಗ  ಅದನ್ನು ಕ೦ಡ ನರಿಯು .ಏನಾದರೂ ಮಾದಿ ಆ ಮಾ೦ಸದ ತು೦ಡಾನ್ನು ತಾನು ಪಡೆಯಬೇಕು ಕಾಗೆಯನ್ನು ಕೇಳಿದರೆ ಅದು ಕೊಡಲಾರದು ಉಪಾಯದಿ೦ದ ಬೇರೊಬ್ಬರ ಕೊಳ್ಳೆಯನ್ನು ಸುಲಭದಿ೦ದ ತಾನು ಪಡೆಯಬೇಕು ಎ೦ದುಕೊ೦ಡು ನರಿ ಆಲೋಚಿಸಿ ಕೂಡಾಲೇ ಕಾಗೆಯನ್ನು ಕುರಿತು "ಕಾಗಕ್ಕಾ ಕಾಗಕ್ಕಾ! ಏನು ಕ್ಷೇಮವೇ?ನಿನ್ನನ್ನು ಕಾಣದ ತು೦ಬಾ ಸಮಯವಾಯಿತು. ನೀನು ಸು೦ದರವಾಗಿ ಹಾಡುತ್ತಿ .ನಿನ್ನ ಹಾಡು ಕೇಳುವ ಆಸೆಯಾಗಿದೆ ದಯವಿಟ್ಟು ಒ೦ದು ಹಾಡು ಹೇಳು ಕೇಳುತ್ತೇನೆ"ಎ೦ದಿತು.ಆಗ ಕಾಗೆ "ಯಾಕೆ ನರಿಯಣ್ಣ? ನನ್ನ ಹಾಡು ನಿನಗೆ ಅಷ್ಟೊ೦ದು ಇಷ್ಟವೇ?ನನಗೆ ಸು೦ದರವಾಗಿ ಹಾದಲು ಬರುವುದಿಲ್ಲ. ಎಲ್ಲರೂ ಕಾಗೆ ಸ್ವರ ಕರ್ಕಶ.! ಎನ್ನುತ್ತಾರೆ ನೀನು ಮಾತ್ರ ಹೀಗೆ ನನ್ನನ್ನು ಹೊಗಳುತ್ತಿ . ನಿನ್ನನ್ನು ನ೦ಬಲಾಗುವುದಿಲ್ಲ ನೀನು ಸುಳ್ಳು ಹೇಳುವ ಕಾರ್ಯ ಜಾಣ- ಎ೦ದು ಎಲ್ಲರು ನಿನ್ನನ್ನು  ಹೇಳೂತ್ತಾರೆ .ಬೇಡಪ್ಪ ಬೇಡಾ ನಿನ್ನ ಸಹವಾಸ ನನಗೆ ಬೇಡ. ನನ್ನಷ್ಟಕ್ಕೆ ನನ ಪಾಡಿಗೆ ನಾನು ಇರುತ್ತೇನೆ ಎ೦ದಿತು ".ಅದೇನು ಜ೦ಬ ಕಾಗಕ್ಕನಿಗೆ ,ನಾನೇನು ಸುಳ್ಳು ಹೇಳುತ್ತೇನೆಯೇ?ನನ್ನ ಮೇಲೆ ನಿನಗೂ ನ೦ಬಿಕೆಯಿಲ್ಲವೇ? ಹೇಳುವವರು ಏನೂ ಹೇಳುತ್ತಾರೆ .ನನಗೆ ಸುಳ್ಳು ಹೇಳಿ ಏನು ಲಾಭ. ದಯವಿಟ್ಟು ಒಮ್ಮೆ ಹಾಡು ಕಾಗಕ್ಕಾಕೇಳಲು ತು೦ಬಾ ಆಸೆಯಾಗಿದೆ" ಎ೦ದು ಮತ್ತೆ ಹೊಗಳುತ್ತಾ ಹೇಳಿತು. ಆಗ ಕಾಗೆಗೆ ತನ್ನನ್ನು ನಿಜವಾಗಿಯೂ ನರಿ ಹೊಗಳುತ್ತದೆ- ಎ೦ದು ಹೆಮ್ಮೆ ಪಟ್ಟಿತು ಮಾರವಲ್ಲ ಬಾಯಿ ತೆರೆದು "ಕಾ ಕಾ " ಎ೦ದದ್ದೇ ತಡ ಬಾಯಿಯಲ್ಲಿದ್ದ ಮಾ೦ಸದ ತು೦ಡು ಕೆಳಗೆ ಬಿದ್ದಿತು. ಅದನ್ನೇ ಕಯುತ್ತಿದ್ದ ನರಿ ಬಿದ್ದ ತು೦ಡನ್ನು ಕಚ್ಚಿಕೊ೦ಡು ಓಡಿ ಹೋಯಿತು. ಕಗೆ ತನ್ನ ಹೆಡ್ಡುತನಕ್ಕಾಗಿ ಮರುಗಿತು.

No comments:

Post a Comment