Sunday, June 10, 2012

ಪುಟಾಣಿಗಳ ಹಬ್ಬ


                        ಪುಟಾಣಿಗಳ ಹಬ್ಬ
              

                            ಪಾಶ್ಚಿಮಾತ್ಯ ದೇಶಗಳಲ್ಲಿ ಚಿಕ್ಕ ಮಕ್ಕಳ ಬಗ್ಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಾರೆ. ಮನೆಗಳಲ್ಲಂತೂ ಶಾಲೆಗೆ ಹೋಗತೊಡಗಿದ ಮೇಲೆಯೂ ಮಕ್ಕಳಿಗೆ ಅಪ್ಪನೋ ಅಮ್ಮನೋ ಊಟ ಮಾಡಿಸುವುದು ಸಾಮಾನ್ಯವಾಗಿದೆ. ನಮ್ಮಲ್ಲಿ ಕೈತುತ್ತು ಎನ್ನುವ ರೀತಿಯಲ್ಲಿ ಬಟ್ಟಲಿನಲ್ಲಿ ಅನ್ನ ಸಾಂಬಾರು ತರಕರಿ ಎಲ್ಲ ಬೆರಸಿ ಚಮಚದಲ್ಲಿ ಅದೂ ಅವರನ್ನು ಓಲೈಸುತ್ತಾ ತಿನ್ನಿಸಬೇಕು. ಏನಾದರೂ ಮೂವಿಗಳನ್ನು ನೋಡಿಕೊಂಡೋ ಅಥವಾ ಬೇರೇನಾದರೂ ಆಟವಾಡಿಕೊಂಡೋ ತಿನ್ನಿಸಿದರೆ ಅವರಿಗೆ ಗೊತ್ತಿಲ್ಲದೇ ಹೊಟ್ಟೆ ತುಂಬುತ್ತದೆ. ಅಂತೂ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಾರೆ.ಮತ್ತೇ ಮನೆಯಲ್ಲಿ ಒಂದು ಟೋಯ್ ರೂಮ್ ಇರುತ್ತದೆ. ಅದರೊಳಗೆ ತುಂಬಾ ಆಟದ ಸಾಮಾನುಗಳು. ಪ್ರತಿ ಸಲ ಅಂಗಡಿಗೆ ಹೋದಾಗಲೂ ಏನಾದರೂ ಟೋಯ್ ಗಳನ್ನು ಖರೀದಿಸುವುದೋ, ಗಿಫ್ಟ್ ರೂಪದಲ್ಲಿ ಸಿಕ್ಕಿದ್ದೋ ವಿವಿಧ ತರದ ಪಜ್ಲುಗಳು ದೊರಕಿದ್ದನ್ನು ಮಕ್ಕಳು ಚುರುಕಾಗಿ ಜೋಡಿಸುತ್ತಾರೆ. ಆಡಿದ ಮೇಲೆ ಅಲ್ಲಲ್ಲಿ ಬಿಸಾಕಿ ಹೋಗುವುದು ಸಾಮಾನ್ಯ. ದೊಡ್ಡವರು ಅವುಗಳನ್ನು ಎತ್ತಿಡಬೇಕು. ಆದರೆ ಮಕ್ಕಳು ತುಂಬಾ ಚುರುಕಾಗಿರುತ್ತಾರೆ. ಬೇಕಾದ್ದನ್ನೆಲ್ಲ ಕೊಡಿಸುವುದು ಹೆತ್ತವರ ಕರ್ತವ್ಯವೆಂದು ತಿಳಿದುಕೊಂಡಿದ್ದಾರೆ. ಆಗಾಗ ಮನೆಗೆ ಬೇರೆ ಮನೆಯವರು ಸಂದರ್ಶಿಸುವಾಗ ಆ ಮನೆಯಲ್ಲಿ ಮಕ್ಕಳಿದ್ದರೆ ಹೊಸ ಆಟದ ಸಾಮಾನು ತಂದು ಕೊಡುವುದು ಪದ್ಧತಿಯಾಗಿದೆ.ಮೂರು ವರ್ಷದ ಮಕ್ಕಳೂ ಸೈಕಲ್ ಸವಾರಿ ಮಾಡಿವುದು, ಸ್ಕೂಟರ್ ಬಿಡುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ.  ಬೇರೆ ಬೇರೆ ಪ್ರೇಕ್ಷಣೀಯ ಜಾಗಗಳಿಗೆ ಕರಕೊಂಡು ಹೋಗುತ್ತಿರುತ್ತಾರೆ. ಮತ್ತೆ ದೊಡ್ಡ ದೊಡ್ಡ ಮೋಲ್ ಗಳಲ್ಲಿ ಮಕ್ಕಳ ಆಟಕ್ಕೇನೇ ಆಟದ ಜಾಗವಿರುತ್ತದೆ. ಮಕ್ಕಳನ್ನು ಆದಲು ಬಿಟ್ಟು ಒಬ್ಬ ಅಲ್ಲಿ ನಿಲ್ಲುವುದು ಮತ್ತೊಬ್ಬ ಬೇಕಾದ ಸಾಮಾನು ಕೊಂಡುಕೊಂಳ್ಳುವುದು ನಡೆಯುತ್ತದೆ. ಚಳಿಗಾಲದಲ್ಲಂತೂ ಗಂಟೆಕಟ್ಟಲೆ ಮೋಲ್ ನೊಳಗೆ ಇದ್ದುಬಿಡುವುದೂ ಇದೆ.ಚಿಕ್ಕ ಮಕ್ಕಳಿಗೆ ಈಜು ಕಲಿಸುವುದು,ಅಥವಾ ಸಂಗೀತ,ಗಿಟಾರ್ ಡಾನ್ಸ್ ಕರಾಟೆ ಕಲಿಸುವುದು ನಡೆಯುತ್ತದೆ.ಒಟ್ಟಾರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನವೂ ನಡೆಯುತ್ತದೆ.
               ಗಿರಾಕಿಗಳನ್ನು ಆಕರ್ಶಿಸಲು ಮಕ್ಕಳಿಗೆ ಕೆಲವು ಕಡೆ ಮಕ್ಕಳ ಹಲವು ಬಗೆಯ ಆಟಗಳನ್ನೊಳಗೊಂಡ ಚೆಕ್ ಇ ಚೀಸ್ ಎಂಬ ಹಣ ಮಾಡುವ ದಂಧೆಯೂ ಇದೆ. ಮಕ್ಕಳು ಇದಕ್ಕೆ ಮುಗಿಬಿದ್ದು ಹೋಗುತ್ತಾರೆ. ಒಂದು ಆಟಕ್ಕೆ ಕಾಲು ಡಾಲರ್ ಒಳಗೆ ಹೋದ ಮಕ್ಕಳು ಹಿರಿಯರ ಬೊಕ್ಕಸಕ್ಕೆ ಏಳೆಂಟು ಡಾಲರಾದರೂ ಲೂಟಿ ಮಾಡುತ್ತಾರೆ. ಇನ್ನು ವಿವಿಧ ಆಟಗಳನ್ನೊಳಗೊಂಡ ರೈಡುಗಳೂ ಇವೆ. ಸೆಸಮೆ ಸ್ಟ್ರೀಟ್ ನಲ್ಲಿ ಅವಿರತವಾಗಿ ಇಂತಹ ಆಟಗಳನ್ನು ಆಡಲು ಮಕ್ಕಳು ಇಷ್ಟಪಡುತ್ತಾರೆ. ಕೆಲವು ರೈಡುಗಳಿಗೆ ದೊಡ್ಡವರು ಜೊತೆಯಲ್ಲಿಯೇ ಇರಬೇಕೆಂದಿದೆಯಾದರೂ ಮಕ್ಕಳಿಗೆ ತುಂಬಾ ಖೂಶಿ ತರುತ್ತದೆ. ಆ ಪ್ರದೇಶದಲ್ಲಿ ಯಾವಾಗಲೂ ಜನಸಂದಣಿಯಿರುತ್ತದೆ. ಕೆಲವು ಕಡೆ ನಮ್ಮಲ್ಲಿಯಂತೆ ತಾತ್ಕಾಲಿಕವಗಿ ಇಂತಹ ರೈಡುಗಳನ್ನು ಹಮ್ಮಿಕೊಳ್ಳುತ್ತಾರೆ. ಅಂತೂ ಸುದ್ದಿ ಮಕ್ಕಳಿಗೆ ಸಿಕ್ಕಿಬಿಟ್ಟರೆ ಕೇಳುವುದೇ ಬೇಡ. ಡಾಡಿ ನನ್ನನ್ನು ರೈಡುಗಳಿಗೆ ಕರಕೊಂಡುಹೋಗಿ ಎಂದು ಅಂಗಲಾಚುತ್ತಾರೆ. ಹೋದರೆ ಒಂದು ಆಟಕ್ಕೆ ಒಂದು ಡಾಲರ್ ಜೈಂಟ್ ವೀಲ್ ಮೊದಲಾದ ಆಟಗಳು ,ವಿಮನದಲ್ಲಿ ಕುಳಿತಂತೆ ಕುಳ್ಳಿರಿಸಿ ಎಂಟು ಹತ್ತು ಸುತ್ತು ತಿರುಗಿಸಿ ಇಳಿಸಿದರಾಯಿತು. ಮಖ್ಖಳೂ ಎರಡು ಮೂರು ರೈಡುಗಳಿಗೆ ಮೂರು ನಾಲ್ಕು ಡಾಲರ್ ಗಳಂತೆ ಹತ್ತಿಪ್ಪತ್ತು ಡಾಲರ್ ನಷ್ಟವೇ ಆಗುತ್ತದೆ. ಆದರೆ ಮಕ್ಕಳ ಉತ್ಸಾಹ, ಅದರಿಂದ ಅವರಿಗೊದಗುವ ಸಂತೃಪ್ತಿ ಹಿರಿಯರಿಗೆ ಹೆಮ್ಮೆಯೆನಿಸುತ್ತದೆ.
                                    ಮೊನ್ನೆ ನಾವಿರುವ ನಗರದಲ್ಲಿ ಮಕ್ಕಳಿಗಾಗಿ ಒಂದು ವಿಶಿಷ್ಟ ಪ್ರದರ್ಶನ ಏರ್ಪಡಿಸಿದ್ದರು.ಅದುವೇ ಪುಟಾಣಿಗಳ ಹಬ್ಬ!ಸುದ್ದಿ ತಿಳಿದೊಡನೆ ಈ ಪ್ರದೇಶದಲ್ಲಿರುವ ಜನರೆಲ್ಲರೂ ಉತ್ಸಾಹದಿಂದ ಅವರವರ ಮಕ್ಕಳನ್ನು ಕರಕೊಂಡು ಹೊರಟರು. ಅದರಲ್ಲೂ ಧರ್ಮಾರ್ಥವಾದ ಕಾರಣ ಖರ್ಚಿಲ್ಲವಲ್ಲ೧ನಾವಿರುವಲ್ಲಿಂದ ಹತ್ತು ಮೈಲು ದೂರದಲ್ಲಿ ಪ್ರದರ್ಶನ ನಡೆಯುವುದೆಂದು ಗೊತ್ತಾಗಿ ನಾವೂ ಮೊಮ್ಮಗನನ್ನು ಕರಕೊಂಡು ಹೊರಟೆವು. ನಗರ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ವಿಶಲವಾದ ಬಯಲಲ್ಲಿರುವ ದೊಡ್ಡ ಕಟ್ಟಡದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ವಾಹನಗಳನ್ನು ನಿಲ್ಲಿಸುವುದಕ್ಕೂ ಪಾರ್ಕಿಂಗ್ ಜಾಗಗಳಿಲ್ಲ. ಎಲ್ಲೆಂದರಲ್ಲಿ ಸಾಲಾಗಿ ಶಿಸ್ತಿನಿಂದ ಸಾವಿರಾರು ವಾಹನಗಾಳು ನಿಂತಿದ್ದವು.ಹಾಗೆ ನಮಗೆ ಕಾರ್ ಪಾರ್ಕ್ ಮಾಡಿ ನಡೆಯಬೇಕಾಯಿತು. ಸಾವಿರಾರು ಜನ ಓಡಾಡುತ್ತಿದ್ದರು. ಒಳಗೆ ಪ್ರವೇಶ ಮಾಡಿದರೆ ಅಲ್ಲಿಯೂ ನೋಡುವುದಕ್ಕೆ ಜನ ಸಾಲುಗಟ್ಟಿ ನಿಂತಿದ್ದರು.ಒಂದು ಕಡೆ ವಿವಿಧ ಬಣ್ಣದ ಪೈಂಟಿಂಗ್ ನಡೇಯುತ್ತಿತ್ತು. ಮಕ್ಕಳೇ ಉತ್ಸಾಹದಿಂದ ಕೊಟ್ಟ ಪ್ಲೇಟಿಗೆ ಬಣ್ಣ ಕೊಡುತ್ತಿದ್ದರು.ಮೊಮ್ಮಗನಿಗಂತೂ ಕೂಶಿಯಾಗಿತ್ತು. ಮತ್ತೊಂದು ಕಡೆ ಅಲ್ಲೇ ಇಟ್ತಿದ್ದ ಕಾಗದಕ್ಕೆ ಬಣ್ಣ ಕೊಡುವುದು.ಬಣ್ನ ಕೊಟ್ಟ ಕಾಕ್ಕಳಿಗೇಮತ್ತೊಂದು ಕಡೆ ಹೆಲಿಕೋಪ್ಟರ್ ಅಂತೆ ಅತ್ತಿಂದಿತ್ತ ಸುತ್ತಾಡುತ್ತಿತ್ತು. ಕೋಷ್ಟ್ ಗಾರ್ಡಿನವರದಂತೆ ಆ ಪ್ರದರ್ಶನ ಒಮ್ದು ಮಕ್ಕಳಿಗೆ ಜಾರು ಬಂಡಿಯಿತ್ತು. ಬಹಳ ಎತ್ತರದಿಂದ ಜಾರುವ ವ್ಯವಸ್ಥೆಯಿತ್ತು. ಮೊಮ್ಮಗ ಮೂರು ನಾಲ್ಕು ಸಲ ಜಾರಿದ. ಕಗದಲ್ಲಿರುವ ಚಿತ್ರವನ್ನು ಅಲ್ಲೇ ಇಟ್ಟ ಕತ್ತರಿಯಿಂದ ಕತ್ತರಿಸಿ ಒಂದು ದಪ್ಪದ ರಟ್ಟಿನ ತುಂಡಿಗೆ ಅಂಟಿಸಿ ಎರಡು ಬದಿಯಲ್ಲಿಯೂ ಕಟ್ಟಿದ ನೂಲಿಅನ್ನು ತಿರುಗಿಸುವುದು ಹೀಗೆಲ್ಲ ತುಂಬಾ ಆಟಗಳಿದ್ದುವು ಈ ಎಲ್ಲ ಆಟಗಳಾಗುತ್ತಿದ್ದಂತೆಯೇ ಕೇಂಡಿ,ಜೋಳದ ಅರಳು ಮೊದಲಾದುವುಗಳು ಮಕ್ಕಳಿಗೆ ತಿನ್ನಲು ಸಿಗುತ್ತಿತ್ತು.ಕುಡಿಯುವುದಕ್ಕೆ ಹಣ್ಣಿನ ರಸ ಕೊಡುತ್ತಿದ್ದರು. ಒಂದೊಂದು ಕಂಪೆನಿಯವರು ಪ್ರಚಾರಕ್ಕಾಗಿ ಅವರ ಪ್ರೊಡಕ್ಟ್ ಗಳನ್ನು ತಂದಿದ್ದರು. ಎಲ್ಲ ಮಕ್ಕಳಿಗೆ ಸಂಬಂಧಪಟ್ಟುದು. ಮಕ್ಕಳಿಗೆ ಮಾತ್ರ ಬೆಳಿಗ್ಗೆ ಆರಂಭವಾದ ಶೋ ಮಧ್ಯಾಹ್ನ ಒಂದೂವರೆ ಘಂಟೆಯ ವರೆಗೆ ಖುಶಿ ಕೊಟ್ಟುದಂತೂ ನಿಜ. ಪ್ರದರ್ಶನದ ಅವಧಿ ಮುಗಿದೊಡನೆ ಕಟ್ಟಡಗಳು ಮಾತ್ರವೇ ಅಲ್ಲಿದ್ದುದು.

No comments:

Post a Comment