Wednesday, June 6, 2012

ದೈವ ಸಂಕಲ್ಪ

            ದೈವ ಸಂಕಲ್ಪ

ನಾವು ನಮ್ಮ ಅನಿಸಿಕೆಯಂತೆಯೇ ಎಲ್ಲ ನಡೆಯಬೆಕು ಎಂಬ ಕನಸು ಹೊತ್ತಿದ್ದರೂ ನಡೆಯುವುದೆಲ್ಲವೂ ದೈವ ನಿರ್ಣಯದಂತೆ ಎಂಬುದು ಖಂಡಿತ! ಮನುಷ್ಯರು ನೆನೆಸಿದಂತೆಲ್ಲ ಆಗಿಬಿಟ್ಟರೆ ದೇವರ ಸಂಕಲ್ಪ ನಡೆಯಲಾರದು.ಲೋಕವೆ ಅಲ್ಲೋಲ ಕಲ್ಲೋಲವಾಗಬಹುದು. ಪುರಾಣಗಳಲ್ಲಿಯೂ ದುಷ್ಟ ಸಂಹಾರಕ್ಕಗಿ ಅನೇಕ ಅವತಾರ ಎತ್ತಿ ಬಂದು ಒದಗಬಹುದಾಗಿದ್ದ ತೊಂದರೆಗಳನ್ನು ಪರಿಹರಿಸಿದ ಕತೆ ಓದಿದ್ದೇವೆ. ಮಾನವನ ಪ್ರತಿಯೊಂದು ಹೆಜ್ಜೆಯೂ ಆತನ ನಿರ್ಧಾರದಂತೆ ನಡೆಯಬೇಕು ಎಂಬುದು ನನ್ನ ಜೀವನ ಅನುಭವ! ಕಳೆದ ವರ್ಶ ಜೂನ್ ನಲ್ಲಿ  ವಿದೇಶದಲ್ಲಿರುವ ಮಕ್ಕಳ ಅಪೇಕ್ಷೆಯಂತೆ ಅಮೇರಿಕಾಕ್ಕೆ ಬಂದೆವು. ಮಕ್ಕಳು ಮೂವರೂ ಅಮೇರಿಕಾದಲ್ಲಿಯೇ ಇರುವ ಕಾರಣ ಒಂದಾರು ತಿಂಗಳು ಮೊಮ್ಮಕ್ಕಳೊಂದಿಗೆ ಇದ್ದು ಹೋಗುವುದು ನಮ್ಮ ಯೋಜನೆ.ಹಾಗೆ ಡೆಸೆಂಬರ್ ನಲ್ಲಿ ಮರಳಿ ಹೋಗುವ ಟಿಕೆಟ್ ತಗೊಂಡೂ ಇದ್ದೆವು. ಇಲ್ಲಿಗೆ ಬಂದ ಮೇಲೆ ಮೂವರೂ ಇಲ್ಲಿರುವ ಕಾರಣ ಮುಂದೆ ವೀಸಾ ಸಿಗುವುದೂ ಕಷ್ಟವಾಗಬಹುದೆಂದು ಗ್ರೀನ್ ಕಾರ್ಡ್ ಮಾಡಿಸುವುದೆಂಬ ತೀರ್ಮಾನ ಮಕ್ಕಳದು. ಒಬ್ಬರಾದರೂ ಊರಲ್ಲಿರುವುದಕ್ಕೆ ಮನಮಾಡದೆ  ನಮ್ಮನ್ನು ಒಪ್ಪಿಸಿದರು. ಸರಿ ಅರ್ಜಿ ಹಾಕಲು ಏನೆಲ್ಲ ಬೇಕೆಂಬ ಪಟ್ಟಿ ಸಿದ್ಧವಾಯಿತು. ಬೇಕಾದ ಅಫಿದಾವತ್ ಗಳನ್ನು ಹೊಂದಿಸಿ ಕೊಡಾಲು ಊರಲ್ಲಿ ನನ್ನ ಗೆಳೆಯರೊಬ್ಬರನ್ನು ಸಂಪರ್ಕಿಸಿದ್ದೂ ಆಯಿತು. ಅಂತೂ ಸಪ್ಟೆಂಬರ್ನಲ್ಲಿ ಒಬ್ಬರು ವಕೀಲರ ಸಹಾಯದಿಂದ ಅರ್ಜಿ ಕೊಟ್ಟೂ ಆಯಿತು.ಒಂದು ತಿಂಗಳೊಳಗೆ ಇಬ್ಬರದೂ ಫಿಂಗರ್ ಪ್ರಿಂಟ್ ಕೇಳಿದ್ದರೂ ಒಮ್ಮೆ ಕೊಟ್ಟುದು ಸರಿ ಕಾಣಲಿಲ್ಲವೆಂದು ಮತ್ತೊಮ್ಮೆ ತೆಕ್ಕೊಂಡಿದ್ದರು. ಮತ್ತೆ ಆರು ತಿಂಗಳೊಳಗೆ ಇಂಟರ್ವ್ಯೂ ಗೆ ಕರೆ ಬರಬಹುದಾದ್ದರಿಂದ ಡಿಸೆಂಬರ್ ನಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಜೂನ್ ವರೆಗೆ ಟಿಕೆಟ್ ಮುಂದುವರಿಸಿದ್ದೂ ಆಯಿತು. ಫಲವಾಗಿ ಇಲ್ಲಿಯ ಚಳಿಗಾಲದ ಅನುಭವ ನಮಗೆ ಸಿಕ್ಕಿತು. ಆದರೆ ಈ ವರ್ಷ ಹಿಮ ಹೆಚ್ಚು ಬಿದ್ದಿರಲಿಲ್ಲ. ಹಾಗೆ ಹಿಮಪಾತ ನೋಡುವ ಕನಸೂ ಸುಳ್ಳಾಯಿತು. ಮಾರ್ಚ್ ಕೊನೆಗೆ ತಾಯಿ- ಮಗನ ಬಗ್ಗೆ ಡಿ ಯನ್ ಎ ಟೆಸ್ಟ್ ವರದಿ ಬೇಕೆಂದು ಹೇಳಿದರು. ಸರಿ ತಾಯಿ ಮಗ ಇಬ್ಬರೂ ಪ್ರಯೋಗಾಲಯಕ್ಕೆ ಹೋಗ ಬೇಕಾಯಿತು. ಬೇಕಾಗಿದ್ದ ಸೇಂಪಲ್ ತೆಕ್ಕೊಂಡು ಮೂರು ವಾರದಲ್ಲಿ ರಿಸಲ್ಟ್ ಸಿಗಬಹುದು ಎಂದು ಹೇಳಿದ್ದರು.ಸರಿ ಹೇಳಿದಂತೆ ರಿಸಲ್ಟ್ ಅನುಕೂಲವಾಗಿದೆಯೆಂದು ಹೇಳಿದರು. ಆದರೆ ನನ್ನ ಫಿಂಗರ್ ಪ್ರಿಂಟ್ ಮಾತ್ರ ಸರಿಯಾಗಿ ಕಾಣುವುದಿಲ್ಲವಾಗಿ ನನ್ನ ಬಗ್ಗೆ ಸ್ಥಳೀಯ ಮಾಹಿತಿ ತರಿಸಬೇಕೆಂದು ಹೇಳಿದರು.ನನ್ನ ಹೆಂಡತಿಯ ಕಾರ್ಡ್ ಆಗಲೇ ಸಿಕ್ಕಿಯೂ ಆಗಿತ್ತು.
    ಸದ್ಯ ನಾವು ಮಂಗಳೂರಿನಲ್ಲಿ ಇರುವುದರಿಂದ ಸ್ಥಳಿಯ ಪೋಲಿಸ್ ವರದಿ ತರಿಸುವುದೊಳ್ಳೆಯದೆಂದು ವಕೀಲರ ಸಲಹೆ. ಭಾರತದ ಉದ್ಯೋಗಸ್ಥರಿಂದಾದ ಸಹಾಯವನ್ನು ಇಲ್ಲಿ ದೈವ ಸಂಕಲ್ಪವೆಂದು ಹೇಳಲಾಗಿದೆ.  ಇಲ್ಲಿಯ ಭಾರತೀಯ ಕನ್ಸುಲಾರೆ ನವರು ನನಗೆ ಪಾಸ್ ಪೋರ್ಟ್ ಸಿಕ್ಕಿದ್ದ ಓಫೀಸಿನ ವರದಿಯನ್ನು ತರಿಸಬೇಕಿತ್ತು. ಹಾಗೆ ಅದಕ್ಕೆ ಕೊಡಬೇಕಾಗಿದ್ದ ಪ್ರೊಸೆಶನ್ ಚಾರ್ಗೆ ೪೦ ಡಾಲರನ್ನು ಡಿ ಡಿ ಮಾಡಿ ಕೊಡಲಾಗಿತ್ತು. ಉತ್ತರ ಸಿಗುವಾಗ ಒಂದು ತಿಂಗಳಾದರೂ ಹೋಗಬಹುದೆಂದು ಹೇಳಿದ್ದರೂ ಮೂರು ವಾರಗಳಲ್ಲಿ ವರದಿ ನನ್ನ ಕೈಸೇರಿತ್ತು.   ಪೋಲಿಸರಾದರೂ ಸರಿಯಿರಬಹುದೆಂದು ಯೋಚಿಸಿದ್ದೆವು. ನನಗೆ ಪಾಸ್ ಪೋರ್ಟ್ ಸಿಕ್ಕಿದ್ದು ಕೋಜಿಕ್ಕೋಡಿನ ಪಾಸ್ ಪೋರ್ಟ್ ಓಫೀಸಿನಿಂದ ಅಲ್ಲಿಯ ವರದಿ ಅದಾಗಲೇ ಬಂದಾಗಿತ್ತು. ಆದರೆ ಮಂಗಳೂರಿನ ಆರಕ್ಷಕರು ಮಾತ್ರ ಪ್ರಾಮಾಣಿಕತೆಗೆ ಉದಾಹರಣೆಯಂತೆ ವರ್ತಿಸಿದ್ದರು. ನಾನು ಇಲ್ಲಿಂದ ಕಳಿಸಿದ ಅರ್ಜಿ ನೋಡಿ ಈ ವಿಳಾಸ ಸರಿಯಿದೆ ಎಂಬುದಕ್ಕೆ ರುಜುವಾತು ಕುಳಿತಲ್ಲಿಂದಲೇ ಕೇಳಿದ್ದರು.ನಾನು ಆ ಮನೆಗೆ ಬಂದು ಒಂದು ವಾರದಲ್ಲಿ ಅಮೇರಿಕಾಕ್ಕೆ ಬಂದಿದ್ದೆ. ನನ್ನ ವಿಳಾಸಕ್ಕೆ ಬಂದ ಪತ್ರಗಳೆಲ್ಲವೂ ಹಿಂದಿನ ಮನೆಯಿದ್ದ ಪೋಸ್ಟ್ ಓಫೀಸಿಗೇ ಬಂದುದೆಂದು ಹೇಳಿದರೂ ಮತದಾರ ಪಟ್ಟಿ ತರಲು ಹೇಳಿದರಂತೆ! ರೇಶನ್ ಕಾರ್ಡ್ ತರ ಹೇಳಿದರಂತೆ.ಸೀನಿಯರ್ ಸಿಟಿಸನ್ ಕಾರ್ಡ್ ಬೇರೆ ವಿಳಸಕ್ಕೆ ಸಿಕ್ಕಿದ್ದಲ್ಲವೇ ಆಗುವುದಿಲ್ಲ ಎಂದೆಲ್ಲ ಹೇಳಿ ದಿವಸ ಮುಂದುವರಿಯುತ್ತಿತ್ತು. ಏನೋ ೧೦೦೦ರೂಪಾಯಿಯ ಡಿ ಡಿ ಆಗಬೇಕಿದೆಯೆಂದು ಮೊದಲೇ ಹೇಳಿತೆಗೆದೂ ಆಗಿತ್ತು. ಮತ್ತೆ ಹಳೆ ಮನೆಯ ವಿಳಾಸವನ್ನೇ ನಮೂದಿಸಿ ಹೊಸ ಅರ್ಜಿ ತಯಾರು ಮಾಡಿದ ನನ್ನ ಗೆಳೆಯರು ಅದನ್ನು ಕೊಟ್ಟ ಮೇಲೆ ಸ್ವೀಕಾರವಾಗಿ ತನಿಖೆಗೆ ಹೊರಟರು. ಕೈ ಬಿಸಿ ಮಾಡಿದ ಮೇಲೆ .ವಿಷಯಗಳನ್ನು ವಿಶದೀಕರಿಸಿದ ಮೇಲೆ ಇಬ್ಬರು ಸಾಕ್ಷಿಯವರನ್ನು ಸ್ಟೇಶನಿಗೆ ಬಂದು ಸಾಕ್ಷಿ ಹಾಕಲೂ ಹೇಳಿದರಂತೆ.ಅಂತೂ ಸ್ಟೇಶನ್ ನವರ ಕೈ ಬಿಸಿಯಾದ ಮೇಲೆ ವರದಿಯನ್ನು ಕಮಿಶನರ್ ಓಫೀಸಿಗೆ ಕೊಡಲು ಕೈಯಲ್ಲೇ ಕೊಟ್ಟರಂತೆ. ಸರಿ ಗೆಳೆಯರು ಆ ದಿನವೇ ಓಫೀಸಿನಲ್ಲಿ ಕೊಟ್ಟೂ ಆಯಿತು.ಆದರೆ ನಮಗೆ ವರದಿಯನ್ನು ಮರುದಿವಸ ಕೊಡಲಾಗುವುದೆಂದು ಗುಮಾಸ್ತರ ಅಪ್ಪಣೆಯಾಯಿತು.ಮರುದಿನ ಹೋದರೆ ಅವರೇ ಇಲ್ಲ. ಅದೂ ಒಂದು ಗಂಟೆ ಕಾದ ಮೇಲೆ ಅವರು ರಜೆ ಮಾಡಿದ್ದಾರೆ ಎಂಬವಿವರವನ್ನು ಮಹಾನುಭಾವರೊಬ್ಬರ ಕೃಪೆಯಿಂದ ಗೊತ್ತಾಯಿತು. ಗುಮಾಸ್ತರ ಕೈ ಬಿಸಿ ಮಾಡಿದರೆ ನಾಳೆ ಎಂದರೆ ವರದಿ ಸಿಗಬೇಕಾದರೆ ಒಂದು ತಿಂಗಳು ನನ್ನ ಗೆಳೆಯರು ಅಲೆದಾಡಬೇಕಾಯಿತು. ಅಲ್ಲಿ ನಕ್ಸಲರೋ,ಉಗ್ರವಾದಿಗಳೋ ಇವರ ಕಣ್ಣಿಗೆ  ಬಿದ್ದರೆ ಮಾತ್ರ ಜನರ ರಕ್ಷಣೆಯಾಗಬಹುದೆಂದು ನಿರೀಕ್ಷಿಸಬಹುದಷ್ಟೆ!
    ನನ್ನ ಮೇಲೆ ಏನಾದರೂ ಕ್ರಿಮಿನಲ್ ಕೇಸ್ ಇದೆಯೋ ಎಂಬುದಕ್ಕೆ ಆರಕ್ಷಕರ ವರದಿ ಬೇಕಿತ್ತು. ಅಮೇರಿಕಾದ ಪೋಲೀಸರ ವರದುಇಯು ಇದ್ದರೆ ಒಳ್ಳೆಯದೆಂದು ವಕೀಲರ ಅಭಿಪ್ರಾಯವಿದ್ದುದಕ್ಕೆ ಮ್ಮಗನೂ ನನೂ ಸ್ಟೇಶನಿಗೆ ಹೋದೆವು ನನ್ನ ಪಾಸ್ ಪೋರ್ಟ್ ನ ನಕಲಿನೊಂದಿಗೆ ಅರ್ಜಿ ಕೊಟ್ಟು ಬಂದಿದ್ದೆವು . ಅದರಲ್ಲಿ ಮಗನ ಫೋನ್ ನಂಬರನ್ನು ನಮೂದಿಸಲಾಗಿತ್ತು. ಅರ್ಜಿ ಕೈಗೆ ಸಿಕ್ಕಿದೊಡನೆ ಆ ಸ್ಟೇಶನಿನವರು ಅರ್ಜಿಯನ್ನು ನೀವಿ ಇನ್ನೊಂದು ಸ್ಟೇಶನಿನಲ್ಲಿ ಸಲ್ಲಿಸಬೇಕಿತ್ತು. ಪರವಾಗಿಲ್ಲ ನಾವೇ ಅಲ್ಲಿಗೆ ಕಳಿಸುತ್ತೇವೆಂದು ಹೇಳಿದರು.ಮತ್ತೆರಡು ದಿನಗಳಲ್ಲಿ ಮ್ನಿಜವಾದ ಸ್ಟೇಶನಿನವರು ನೀವು ಇದೊಂದು ಫೋರ್ಮನ್ನು ತುಂಬಿಸಿ ಕಳಿಸಬೇಕೆಂದು ಫೋರ್ಮನ್ನೂ ಕಳಿಸಿದ್ದರು. ಅದನ್ನು ತುಂಬಿಸಿ ಅದೇ ಸ್ಟೇಶನಿನ ಬೋಕ್ಸಿನಲ್ಲಿ ಹಾಕಿ ಬಂದಿದ್ದೆವು . ಒಂದೆರಡು ದಿನಗಳಲ್ಲಿನನ್ನ ಮೇಲೆ ಯಾವ ಕ್ರಿಮಿನಲ್ ಆರೋಪಗಳೂ ಇಲ್ಲವೆಂಬ ವರದಿ ನನ್ನ ಕೈಸೇರಿತ್ತು. ದೊಡ್ಡಣ್ಣನ ದೊಡ್ಡತನ ದೊಡ್ಡದೋ ನಮ್ಮೂರಿನ ಆರಕ್ಷಕರ ಔದಾರ್ಯ ದೊಡ್ಡದೋ ಎಂಬುದನ್ನು ಓದುಗರೇ ನಿರ್ಧರಿಸ ಬೇಕು. ಜನರ ರಕ್ಷಣೆಯೊಂದಿಗೆ ಸಹಾಯ ಹಸ್ತವನ್ನೂ ಚಾಚುವ ಆರಕ್ಷಕರು ಯಾರು?ಹೊಣೆಯರಿತು ಜನರಿಗೆ ಬೇಕದ ದಾರಿ ತೋರಿಸಿ ಬೇಕಾದ ಮಾರ್ಗದರ್ಶನ ಮಾಡಬೇಕಾದವರು ಎಂಜಲು ಕಾಸಿಗೆ ಕೈಯೊಡ್ಡಿ  ತಮ್ಮನೀಚತನವನ್ನು ಪ್ರದರ್ಶಿಸುವ ಅಧಿಕಾರಿಗಳು ತತ್ಕಾಲದಲ್ಲಿಯೂ ಅವರ ಸಹಾಯ ಒದಗಿ ಬರಬಹುದೇ? ಎಲ್ಲ ಬರಿಯ ಜನರ ಕಣ್ಣಿಗೆ ಮಣ್ಣೆರಚುವ ಬೂಟಾಟಿಕೆಯೇ?ಅಣ್ಣಾ ಹಜಾರೆಯಾದರೂ ಏನು ಮಾಡಲು ಸಾಧ್ಯ? ಎಂದಿಗೆ ಇದಕ್ಕೆಲ್ಲ ಕೊನೆಯೋ? ಇದೂ ಆತನ ಸಂಕಲ್ಪವೇ ಆಗಿರಬಹುದೇ? ಈಗಲೇ ಜೂನ್ ಬಂದಾಯಿತು. ಇನ್ನು ನನ್ನ ವರದಿ ಓಫೀಸಿಗೆ ಮುಟ್ಟಿ ಗ್ರೀನ್ ಕಾರ್ಡ್ ಬರಬೇಕಾಗಿದೆ.ಆದರೆ ಇಷ್ಟೆಲ್ಲ ಆಗುತ್ತಿದ್ದಂತೆ ಮಕ್ಕಳು ಮತ್ತೂ ಮುನ್ನೂರು ಡಾಲರ್ ದಂಡ ಕೊಟ್ಟು ಟಿಕೆಟನ್ನು ಜುಲ್ಯ್ ೨೯ ರ ವರೆ ಗೆ ಮುಂದುವರಿಸಿದ್ದರು. ಅದಕ್ಕೆ ಆ ದಿನದೊಳಗೆ ಬಂದು ಬಿಟ್ಟರೆ ಹದಿಮೂರು ತಿಂಗಳು ಇಲ್ಲಿ ನಿಂತದ್ದಕ್ಕೆ ಸಾರ್ಥಕವಾಗಬಹುದು.ಆದರೆ ಜೊತೆಗೆ ನಮ್ಮ ಇನ್ನೊಬ್ಬ ಮೊಮ್ಮಗುವನ್ನೂ ನೋಡಿಹೋಗಬಹುದೆಂಬ ಸಮಾಧಾನ ಜೊತೆಗೆ ಸಂತೋಷ!ಇದೂ ದೈವ ಸಂಕಲ್ಪವೋ ಅಲ್ಲ  ಜುಲಾಯಿಯಲ್ಲಿ ನಮಗೆ ಕಾಣಸಿಗಲಿರುವ ಮೊಮ್ಮಗನ ಅಪೇಕ್ಷೆಯೋ ತಿಳಿಯದಾಗಿದೆ.

                       

No comments:

Post a Comment