Friday, March 22, 2013

ತಂಬುಳಿ

                                        ತಂಬುಳಿ
"ತಣ್ಣಿತು ಹುಳಿ" ಹೇಳಿಯೋ ತಂಪಿನ ಹುಳಿ ಹೇಳಿಯೋ ಅರ್ಥ ಇಕ್ಕು. ಅಂತೂ ಮದಲಾಣೋವು ಹೀಂಗಿಪ್ಪ ಒಂದೊಂದು ಕೂಟಿನ ಊಟಕ್ಕೆ ಉಪಯೋಗುಸಿಗೊಂಡಿತ್ತಿದ್ದವು ಹೇಳುವದು ಖಂಡಿತ. ಅಪರ ಕ್ರಿಯಂಗೊಕ್ಕೂ ಈ ತೋವೆ, ತಂಬುಳಿ ಅಗತ್ಯ.ಆದರೆ ನಿತ್ಯಕ್ಕೆ ದಿನಕ್ಕೊಂದು ನಮುನೆದು, ತಂಬುಳಿ ಮಾಡಿಯೇ ಮಾಡಿಗೊಂಡಿತ್ತಿದ್ದವು ಹೇಳಿದರೆ ಎಂಗಳ ಮನೆಲ್ಲಿ ಅಜ್ಜಂಗೆ,ಮತ್ತೆ ಅಪ್ಪಂಗೆ ಇದು ಬೇಕೇ ಬೇಕಾದ ಕಾರಣ ಮಾಡ್ಯೊಂಡಿತ್ತಿದ್ದವು. ಆನು ಸಣ್ಣಾಗಿಪ್ಪಗ ಉಂಡು ಗೊಂತಿದ್ದು. ತಂಬುಳಿ ಹೊಲಕ್ಕೊಡಿದು ಆಗಿಕ್ಕು,ಅಥವಾ   ಹಸಿ ಶುಠಿ, ಉರಗೆ,ಪುಳಿಯಾರ್ಳೆ,ನೀರುಳ್ಳಿ, ಮೆಂತೆ ಹೀಂಗೆ ಒಟ್ಟಾರೆ ತಂಬುಳಿ ಇಕ್ಕೇ ಇಕ್ಕು.  ಈಗಾಣ ಸಾರಿನ ತುಂಬುವ ಜಾಗೆ ತಂಬುಳಿಗಿಕ್ಕು ಹೇಳಿದರೆ ತಪ್ಪಾಗ. ಸಾರು ಮಾಡುತ್ತರೂ ಬೋಳು ಸಾರು. ತೊಗರಿ ಬೇಳೆಯೋ, ಮತ್ತೆ ಟೊಮೆಟೋ ಹೀಂಗೆಲ್ಲ ಇರ. ಹೇಳಿದರೆ ಏನಾದರೂ ನೆಟ್ಟು ಮಾಡಿದ ತರಕಾರಿ ಮಾಂತ್ರ ಬೇಸಗೆಲ್ಲಿ ಗೆದ್ದೆಲ್ಲಿ ನೆಟ್ಟು ಮಾಡಿಗೊಂಡಿಕ್ಕು. ಗೆದ್ದೆ ಕೊಯಿದಾದ ಮೇಲೆಗೆದ್ದೆಲ್ಲಿ ಬೇರೆ ಬೇರೆ ತರಕಾರಿ ಮಾಡುಗು. ಪಲ್ಯ.ಒಟ್ಟು ಹಾಕಿ ಬೆಂದಿ ಹೇಳಿದರೆ ಅವಿಲು. ಹೆಚ್ಚಾಗಿ ಹೆಜ್ಜೆಯೇ ಮಾಡುವದು. ಬೆಶಿ  ಬೆಶಿಹೆಜ್ಜೆ ಗ ತಣ್ಣಂಗಿಪ್ಪ ತಂಬುಳಿ ಸೇರುಸಿ ಉಂಬಲೂ ಲಾಯೊಕ.  ಆರೋಗ್ಯಕ್ಕೂ  ಒಳ್ಳೆದು ಹೇಳುವದು ಅವಕ್ಕೆ ಗೊಂತಿತ್ತು.
   ಷಡ್ರಸ ಹೇಳುತ್ತವು.ಈ ಆರು ರಸಂಗಳಲ್ಲಿ ಒಗರು ಅಥವಾ ಚೊಗರು ಹೊಟ್ಟಗೆ ಹೋಪಲೆ ಈ ಕೊಡಿ ತಂಬುಳಿ ಮಾಡುವದಡೊ. ಕೊಡಿ ಹೇಳಿದರೆ ಗುಡ್ಡೆಗೆ ಹೋದರೆ     ಬೀಜದ ಕೊಡಿ, ದಡ್ಡಾಲ ಕೊಡಿ,ನೆಕ್ಕರಿಕನ ಕೊಡಿ,ಚೇರೆ ಕೊಡಿ ತಗಿ ಕೊಡಿ ಹೀಂಗೆಲ್ಲ ತರ ತರದ ಕೊಡಿಗಳ ತಂದು (ಆದರೆ ಕೊಡಿ ಎಳತ್ತಾಗಿರೆಕ್ಕು) ತೆಂಗಿನ ಕಾಯಿ ಸೇರುಸಿ ಕಡವದಡೊ.ಇದರೆಲ್ಲ ಹಸಿಯೇ ಉಂಬದು. ಒಟ್ಟಾರೆ ತಂಬುಳಿಲ್ಲಿಪ್ಪ ಹುಳಿ ರುಚಿ ಹುಳಿ ಮಜ್ಜಿಗೆಂದಲೇ ಸಿಕ್ಕುವದು. ಹುಳಿ ಮಜ್ಜಿಗೆ ಇಲ್ಲದ್ದರೆ ಬೇರೆ ಹುಳಿ ಸೇರುಸೆಕ್ಕಕ್ಕು.ಮದಲೆಲ್ಲ ಎಲ್ಲ ಮನೆಗಳಲ್ಲಿಯೂ ಕರವ ದನಗಳೋ ಎಮ್ಮೆಗಳೋ ಇಕ್ಕು.ಹಾಂಗೆ ಹುಳಿ ಮಜ್ಜಿಗೆ ತಪ್ಪುಲಿಲ್ಲೆ.ಬರೇ ಹುಳಿ ಮಜ್ಜಿಗೆ ಉಂಬಲಾವುತ್ತಿಲ್ಲೆ. ಈಗಾಣ ಹಾಂಗೆ ಹುಳಿಯಾಗದ್ದ ರೀತಿಲ್ಲಿ ಫ್ರಿಜ್ ನೊಳ ಮಡಗುಲಿಲ್ಲೆ ಅಂಬಗ!ಈಗ ಎಷ್ಟು ಶುದ್ಧ ಹೇಳಿ ಗೊಂತಿದ್ದನ್ನೆ! ತಣ್ಣನೆ ಮಡಗುವದೂ ಫ್ರಿಜಿಲ್ಲಿ,ಹಾಲು ಮಜ್ಜಿಗೆ ಮಸರು ಡಗುವದೂ ಫ್ರಿಜ್ಜೀಲ್ಲಿ.
    ನಾವು ತಿಂಬ ಆಹಾರಲ್ಲಿ ಬೇಕಾದ ವಿಟಾಮಿನ್ನುಗೊ ಬೇಕು ಹೇಳುತ್ತವು ಈಗಾಣ ಡಾಕ್ಟ್ರಕ್ಕೊ. ಅದಕ್ಕೆ ಸಾಕಷ್ಟು ಬೇಳೆಗಳ ತಿನ್ನೆಕ್ಕು ಹೇಳ್ಯೂ ಹೇಳುತ್ತವು. ತಿಂದು ಹೊಟ್ಟೆಲ್ಲಿ ಗೇಸ್ ಉಂಟದರೆ ಮಾತ್ರೆ ತಿನ್ನಿ ಹೇಳಿಯೂ ಹೇಳುತ್ತವು. ತಿಂದ ಅಹಾರ ಸಮ ತೂಕಲ್ಲಿ ಬೇಕು ಹೇಳಿಯೂ ಹೇಳುತ್ತವು. ಹೇಳಿದರೆ ತೂಕ ಮಾಡಿಗೊಂಡು ತಿನ್ನೆಕ್ಕೋ/ ಮದಲಾಣೋವು ಬೆಗರು ಸುರಿಸಿ ಕೆಲಸ ಮಾಡ್ಯೊಂಡು,ಬೇಳೆ ನಿತ್ಯ ತಿನ್ನದ್ದರೂ ಆರೋಗ್ಯಲ್ಲಿತ್ತಿದ್ದವು. ನಿತ್ಯ ಅವಕ್ಕೆ ಶುಗರಿನ ಮಾತ್ರೆಯೋ, ಬಿ ಪಿ ಮಾತ್ರೆಯೋ ಬೇಕಾಗಿ ಬಯಿಂದಿಲ್ಲೆ. ಕಾರಣ ಅಂದು ತಿಂದುಗೊಂಡಿದ್ದ ಆಹಾರದ ಗುಣಂದಲೇ ಆಗಿರೆಕ್ಕಲ್ಲದೋ?ಚಾ,ಕಾಫಿ ಕುಡಿಯದ್ದೆ ಉದಿಯಪ್ಪಗ ನೆಟ್ಟಿಗೆ ನೀರು ಬಿಡುಲೆ ಹೋದರೆ ಮನೆಗೆ ಬಪ್ಪಗ ಹನ್ನೊಂದು ಗಂಟೆಯಾದರೂ ಅಕ್ಕು. ಒಳ್ಳೆತ ಹಶುವಾಗ್ಯೊಂಡಿಕ್ಕು. ಬಂದು ಮಿಂದಿಕ್ಕಿ ಜಪ ಮಾಡಿ ಹೆಜ್ಜೆ ಉಂಬದು. ಈ ಹೊಲಕ್ಕೊಡಿ ತಂಬುಳಿ, ಮತ್ತೆ ಒಟ್ಟು ಹಾಕಿದ ಒಂದು ಬೆಂದಿ,ಮಜ್ಜಿಗೆ ಉಪ್ಪಿನ ಕಾಯಿ ಹೊಟ್ಟೆ ತುಂಬ ಉಂಡಿಕ್ಕಿ ರಜ ವಿಶ್ರಾಂತಿ. ಮತ್ತೆ ನಾಲ್ಕು ಗಂಟೆ ಅಪ್ಪಗ ತೋಟಕ್ಕೋ ಗೆದ್ದೆಗೋ ಹೋದರೆ ಕತ್ತಲಪ್ಪಗ ಬಪ್ಪದು.ಹತ್ತರೆ ಪೇಟೆಯೂ ಇಲ್ಲೆ, ತಿರುಕ್ಕೊಂಡು ಹೋಪಲೆ! ಇರುಳಾಣ ಊಟಕ್ಕೆ ತಂಬುಳಿ ಇಲ್ಲೆ.
ಇನ್ನು ಬಾಣಂತಿ ತಂಬುಳಿ ಬೇರೆ ಇದ್ದಡೊ,ಆನೆ ಮುಂಗಿನ ಕೆತ್ತೆ,  ಹೀಂಗೆಲ್ಲ ಅವಕ್ಕೆ ಜೀರ್ಣಶಕ್ತಿ ಹೆಚ್ಚು ಆಯೆಕ್ಕಾರೆ ಈ ತಂಬುಳಿಯ ಮಾಡುಗು.ಕಂಚು ಸಟ್ಟು,ಕೊಡಗಾಸನ ಹೂಗಿನ ತಂಬುಳಿ ಇದೆಲ್ಲ ಎಲ್ಲೊರಿಂಗು ಅಕ್ಕಡೊ.ಶುಂಟಿ ತಂಬುಳಿಯೂ ಜೀರ್ಣ ಶಕ್ತಿ ಹೆಚ್ಚಪ್ಪಲೆ ಒಳ್ಳೆದಡೊ. ಈ ತಂಬುಳಿಗಳಿಂದ ಬಾಣಂತಿಗೊಕ್ಕೆ ಅಜೀರ್ಣ, ಶೀತ ಅಪ್ಪಲಾಗ ಹೇಳಿ. ಈ ತಂಬುಳಿಗಳ ಕೊದಿಶೆಕ್ಕಾವುತ್ತು. ಆದರೆ  ಮೆಂತೆ ತಂಬುಳಿ , ನೀರುಳ್ಳಿ ತಂಬುಳಿ ಕೊದಿಶೆಕ್ಕಾವುತ್ತಿಲ್ಲೆ. ಅದು ಬಾಣಂತಿಗೊಕ್ಕೆ ಆಗನ್ನೆ.
   ಗೋಕರ್ಣಲ್ಲಿ ಈಗಳೂ ಸಾರು ಬಳುಸುವಂದ ಮದಲೆ ತಂಬುಳಿ ಬಳುಸುತ್ತವು. ಉತ್ತರ ಕನ್ನಡಲ್ಲಿ ಅನುಪತ್ಯಂಗಳಲ್ಲಿಯೂ ಒಂದೊಂದು ದೊನ್ನೆ ಕೊಡುಗು. ಅದರಲ್ಲಿ ಸಾರು ಕುಡಿವದಲ್ಲ. ಈ ತಂಬುಳಿ ಕುಡಿವದು. ಜೀರ್ಣ ಶಕ್ತಿ ಹೆಚ್ಚಪ್ಪಲೆ ಬೇಕಾಗಿಯೇ ಹೇಳಿ ಕಾಣುತ್ತು ಈ ಸಂಪ್ರದಾಯ ಮಡಿಕ್ಕೊಂಡದು.ಈಗಾಣೋವಕ್ಕೆ ಪೇಟೆಲ್ಲಿ ಅಂತೂ ಹೆಸರು ಕೇಳ್ಯೇ ಗೊಂತಿರ. ಮಾಂತ್ರ ಅಲ್ಲ ಮಾರ್ಕೆಟಿಲ್ಲಿ ಈ ಕೊಡಿಗೊ ಸಿಕ್ಕಲೂ ಸಿಕ್ಕ  
        ಆನೆಮುಂಗಿನ ಕೆತ್ತೆ ತಂದು ಹೆರಾಣ ಭಾಗವ ಕೆರಸಿ  ತಂಬುಳಿಯಾದರೆ ಕಾಯಿ,  ಬೇರೆ ಜೀರೆಕ್ಕಿ,ಬೇಕಾಷ್ಟು ಉಪ್ಪು,ಮೆಣಸು, ಸೇರುಸಿ, ಮಜ್ಜಿಗೆ ಹಾಕಿ ಕಡದರೆ  ಮತ್ತೆ ಒಲೆಗೆ ಮಡಗಿ ಕೊದಿವಲೆ ಶುರು ಅಪ್ಪಗ ಇಳುಗಿದರೆ ತಂಬುಳಿ ರೆಡಿ.ಹೀಂಗೆ ತಗ್ಗಿ ಕೊಡಿಯನ್ನೂ ಮಾಡುಲಕ್ಕು. ಉರಿಶೀತ, ಅಜೀರ್ಣ ಆದರೆ ಒಳ್ಳೆದುಹೇಳುತ್ತವು.ಕೊಡಿಗಳ ತಂಬುಳಿ ಕೊದಿಶೆಕ್ಕಾವುತ್ತು. ಕೊಡಗಾಸನ(ಕುಟಜ) ನೆತ್ತಿ ಗೆಂಡೆಗೂ ಏವುತ್ತಡೊ.
ಪುನರ್ಪುಳಿ ಓಡಿನ ಬೊದುಲ್ಲೆ ಹಾಕಿ  ಸಾಕಷ್ಟು ನೀರು ಹಾಕಿ ಉಪ್ಪು ಮೆಣಸು ಹದಕ್ಕೆ ಹಾಕಿ ಚೂರು ಬೆಲ್ಲವೂ ಸೇರುಸಿ ಕೊದಿಶಿದರೆ ಸಿಕ್ಕುವ ಬೋಳು ಸಾರು  ಊಟಕೂ ರುಚಿ. ಮತ್ತೆ ಅಂತೇ ಕುಡುದರೂ ಜೀರ್ಣಕ್ಕೆ ಭಾರೀ  ಒಳ್ಳೆದಡೊ.ಇನ್ನು ತೋಟಲ್ಲಿ ಸಿಕ್ಕುವ ಕೂಂಬೆಯೂ ಸಾರಿಂಗಾವುತ್ತು. ಹುಳಿ,ಉಪ್ಪು ಮೆಣಸು ಹಾಕಿ ಕೊದಿಸಿದರೆ ಸಾರು ಅತು.ಅದುದೇ ಜೀರ್ಣಕ್ಕೆ ಒಳ್ಳೆದಡೊ.ಕೂಂಬೆಯಸಣ್ಣಕ್ಕೆ ಕೊಚ್ಚಿ ತಾಳು ಮಾಡುಲೂ ಆವುತ್ತು. ತುಪ್ಪಲ್ಲಿ ಹೊರುದು ಬೆಳ್ಳುಳ್ಳಿ ಹಾಕಿ ಚಟ್ಣಿ ಮಾಡಿ ಉಂಡರೆ ಜೀರ್ಣಕ್ಕೂ ಒಳ್ಳೆದಡೊ. ಕೆಲವು ಜನ ಬಾಣಂತಿಗೊಕ್ಕೂ ಕೊಡುಗಡೊ.
ಇನ್ನು  ಕೆಲವರ ಚಟ್ಣಿ ಮಾಡಿಯೂ ಉಂಬಲಾವುತ್ತು. ಆನೆ ಮುಂಗು ಆದರೆ ಕೆತ್ತೆಯ ಹೊರುದು ಕಾಯಿಯೊಟ್ಟಿಂಗೆ ಕಡವಗ ಉಪ್ಪು ಮೆಣಸು ಹುಳಿ ಸೇರುಸಿಗೊಳ್ಳೆಕ್ಕು. ಮಜ್ಜಿಗೆ ಬದಲಿಂಗೆ ಹುಳಿ ಆಯೆಕ್ಕು. ಚಟ್ಣಿ ಆದರೆ ಉಪ್ಪಿನ ಕಾಯಿಯ ಹಾಂಗೆ ನಕ್ಕಿಗೊಂಡು ಉಂಬದು. ಅಂತೂ ನಮ್ಮ ಊಟಲ್ಲಿ ಈ ಪದಾರ್ಥಂಗೊ ಅನಿವಾರ್ಯ ಆಗಿತ್ತು ಅಂದು. ಈಗ ಮಾರ್ಕೆಿಲ್ಲಿ ಸಿಕ್ಕಿದರೆ ಅಥವಾ ಕೊಡಿಗೊ ಊರಿಲ್ಲಿ ಸಿಕ್ಕ್ದರೆ ಪ್ರಯೋಜನ ಅಕ್ಕು. ಹೀಂಗಿಪ್ಪ ಕನರು ರುಚಿಯ ತೆಕ್ಕೊಂಬದರಿಂದ ನಾಲಗೆಲ್ಲಿ ಕಾಂಬ ಅಗ್ರ ಹೇಳುತ್ತವನ್ನೆ!ಆ ಅಗ್ರಹೇಳಿದರೆ ಹಿಂದಾಣ ಮನೆ ವೈದ್ಯರಿಂಗೆ, ಆಯುರ್ವೇದ ಡಾಕ್ಟರಕ್ಕೊಗೆ ಜೀರ್ಣ ಶಕ್ತಿಯ ಬಗ್ಗೆ ವರದಿ ಒಪ್ಪುಸುವ ಒಂದು ಮಾಪನ ಹೇಳುಲಕ್ಕು!
ಈಗಾಣೊವಕ್ಕೆ ,ಅದರಲ್ಲೂ ಪೇಟೆಲ್ಲಿದ್ದೋವಕ್ಕೆ ಇದೆಲ್ಲ ಸಿಕ್ಕವದೇ ಕಷ್ಟ ಆದರೂ ,ಊರಿಂದಲೋ ತರುಸಿ ಉಪಯೋಗುಸಿಕೊಂಡರೆ ಮುಂದಿನ ಪೀಳಿಗಗೂ ಗೊಂತು ಮಾಡಿದ ಹಾಂಗೆಯೂ ಆವುತ್ತು.ಒಟ್ಟಾರೆ ಏನೋ ಒಂದು  ತುಳುಭಾಷೆಲ್ಲಿಪ್ಪ ಗಾದೆ ನೆಂಪಾತು. "ಪೊಸ ಕೈ ಪೊರುಳುಗೆಡ್ಡೆ,ಪರ ಕೈ ಬಂಜಿಗೆಡ್ಡೆ".ರೋಗ ಬಪ್ಪದಕ್ಕೆ ಮದಲೇ ಜಾಗ್ರತೆ ತೆಕ್ಕೊಂಡರೆ ಮತ್ತೆ ರೋಗವೂ ಬಾರ!ಮತ್ತೆ ಮದ್ದು ಬೇಕಾಗ  ಹೇಳಿ ಕಾಣುತ್ತು.
        

No comments:

Post a Comment