Sunday, March 3, 2013

ಹವ್ಯಕರು ಅಂದು ಇಂದು

                ಹವ್ಯಕರು ಅಂದು, ಇಂದು
 ಮದಲಿಂಗೆ ನಾವು ಎಲ್ಲಿಂದಲೋ ಹೈಗ ದೇಶಂದ ಬಂದದಡೋ. ಅಲ್ಲಲ್ಲಿ ಒಂದೊಂದು ಊರಿಲ್ಲಿ ಜಾಗೆ ಹುಡುಕ್ಕಿಗೊಂಡು ಮನೆ ಕಟ್ಟಿ ವಾಸ ಮಾಡ್ಯೊಂಡಿತ್ತಿದ್ದವಡೊ.ಇಲ್ಲಿ ಬಂದ ಮೇಲೆ ಪರಸ್ಪರ ಸಂಪರ್ಕ ಮಡಿಕ್ಕೊಂಡು ,ಸಂಬಂಧ ಬೆಳೆಶ್ಯೊಂಡು ಜೀವನ ಮಾಡ್ಯೊಂಡಿಪ್ಪಗ ಈ ಅಡಕ್ಕೆ  ಕೃಷಿ ಮಾಡುಲೆ ಶುರುಹಚ್ಚಿ ಅದರಲ್ಲಿ ಸಾಧನೆ ಮಾಡಿ ಅದಕ್ಕೆ ಮಾರುಕಟ್ಟೆ ಕಂಡುಗೊಂಡು ಹೆಚ್ಚೆಚ್ಚು ಲಾಭ ಪಡದೋವು ಅದರಲ್ಲೇ ಶ್ರೀಮಂತರಾದವಡೊ.ಇನ್ನು ಕೆಲವು ಜನ ತೆಂಕಲಾಗಿ ಶಾಂತಿ ಮಾಡ್ಳೆ,ಹೆಚ್ಚಾಗಿ ಕುಂಬ್ಳೆ ಸೀಮೆಯೋವು ಹೋದವಡೊ.ಅಲ್ಲಿ ದೇವಸ್ಥಾನಂಗಳಲ್ಲಿ ಪೂಜೆ ಮಾಡ್ಯೊಂಡು ಇತ್ತಿದ್ದೋವು, ಆಗಾಗ ಊರಿಂಗೆ ಬಕ್ಕು. ಇಲ್ಲಿಯೂ ಮದುವೆಯಾಗಿ,ಮಕ್ಕೊ ಮರಿಗೊ ಆಗಿ ಜೊತೆಕುಟುಂಬವಿ ಇತ್ತಿದ್ದವಡೊ.ಮನೆಲ್ಲಿ ಎಲ್ಲೋರೂ ಬೇಡನ್ನೆ. ಇಲ್ಲಿದ್ದ ತೋಟ ನೋಡುಲೆ ಒಬ್ಬ ನಿಂದೊಂಡು ಒಳುದೋವು ತೆಂಕಲಾಗಿ ಶಾಂತಿ ಮಾಡುಲೆ ಹೋಪದು. ಹೀಂಗೆ ನಡಕ್ಕೊಂಡಿತ್ತಡೊ.ಕೆಲವು ಜನ ಅಲ್ಲಿಯೇ ಮದುವೆಯಾಗಿ ಸಂಸಾರ ಮುಂದುವರಿಸಿದೋವು, ಈಗಳು ತಿರುವನಂತಪುರ ಪಾಲ್ಘಾಟ್ ಎಲ್ಲ ಇದ್ದವು.ಬ್ರಾಹ್ಮಣರ ಬೇರೆ ವರ್ಗವು ಹಾಂಗೆ ತೆಂಕಲಾಗಿ ಹೋದೋವು ಇತ್ತಿದ್ದವಡೊ.ಹುಟ್ಟೂರಿಲ್ಲಿ ಕೂಸು ಸಿಕ್ಕದ್ದೆ, ತೆಂಕಲಾಗಿದ್ದ ಕೂಸುಗಳ ಮದುವೆ ಅಗಿ ಕೆಲವು ಜನ ಅಲ್ಲೇ ಪೂಜೆ ಮಾಡ್ಯೊಂಡು ಈಗಳೂ ಇದ್ದವು. ಹೋಟೇಲು ಮಡಿಕ್ಕೊಂಡಿಪ್ಪೋವು,ಮತ್ತೆ ಬೇರೆ ಉದ್ಯೋಗ ಮಾಡ್ಯೊಂಡು ಅಲ್ಲಿ ಇದ್ದವು.ಇಲ್ಲಿದ್ದೋವು ಮಾಸ್ಟ್ರ ಕೆಲಸ, ಹಾಂಗೆ ಗುಮಾಸ್ತರಾಿ, ಮತ್ತೆ ವಕೀಲಕ್ಕೊ ಆಗಿ ಡಾಕ್ಟ್ರಕ್ಕೊ, ಹೀಂಗೆಲ್ಲ ಉದ್ಯೋಗ ಶುರು ಮಾಡಿದವು. ಶಿರಸಿ ಅತ್ಲಾಗಿಂದ ಕೂಸು ಹುಡುಕ್ಯೊಂಡು ಬಕ್ಕಡೊ. ಬಡವರು ಮಾಂತ್ರ ಅವಕ್ಕೆ ಕೂಸಿನ ಕೊಟ್ಟು ಮದುವೆ ಮಾಡಿಯೊಂಡು ಇತ್ತಿದ್ದವಡೊ. ಹುಡಿಕ್ಯೊಂಡು ಬಂದೋರು ಅವರ ಖರ್ಚಿಲ್ಲೇ ಮದುವೆ ಅಗಿ, ಒಂದು ವಾರ, ಎರಡು ವಾರ ಕಳುದು ಹೋಪದೂ ಇತ್ತೊ. ಹಾಂಗೆ ಹೋದರೆ ಮತ್ತೆ ವರ್ಕ್ಕೊಂದರೆಯೂ ಕೂಸುಗೊ ಅಪ್ಪನ ಮನೆಗೆ ಬಕ್ಕು. ಅಂತೂ ಮರ್ಯಾದಿಲ್ಲಿ ಬಿಟ್ಟು ಕೊಡವು ನಮ್ಮೂರೊವು. ಹಾಂಗೆ ಬಂದೋವುದೇ ಇಲ್ಲಿ ನೆಲೆ ನಿಂದೂ ಇದ್ದು. ಅಂಬಗ ಸಾರಿಗೆ ಸೌಕರ್ಯ ಕಡಮ್ಮೆ. ಗಾಡಿಲ್ಲಿಯೋ, ನಡಕ್ಕೊಂಡೋ ಹೋಯಕ್ಕಾಗ್ಯೊಂಡಿತ್ತು.ಬಂದೋರು ಒಂದು ವಾರದ ವರಗೆ ನಿಂಗಡೊ. ಮತ್ತೆ ಬಪ್ಪದು ಒಂದು ವರ್ಷ ಕಳುದು.
ಸಂಸ್ಕಾರಂಗೊ ಉಪನಯನ ಕಳುದು ನಾಲ್ಕಕ್ಕೆ ದಂಟೂರ್ತ.ಮತ್ತೆ ಒಂದು ವರ್ಷ ಕಳುದು.ಉಪಾಕರ್ಮ ಹೀಂಗೆ ಕ್ರಮ ಪ್ರಕಾರ ಆಯೆಕ್ಕು.ಮದುವೆ ಕಳುದು, ನಾಲ್ಕರಲ್ಲಿ ಚತುರ್ಥಿ, ಕೆರೆಮೀವದು ಆರರಲ್ಲಿಯೋ ಎಂಟರಲ್ಲಿಯೋ ಸಟ್ಟುಮುಡಿ ಹೀಂಗೆಲ್ಲ ಇಕ್ಕು. ಮದುವೆಗೆ ಎರಡು ದಿನ ಮದಲೇ ಬಂದ ನಂಟ್ರುಗೊ ಎಲ್ಲ ಕಳಿಶಿಕ್ಕಿ ಹೋಪದು.ಕನ್ಯಾ ವಿವಾಹ ಜಾರಿಲ್ಲಿತ್ತಡೊ. ಮೈನೆರದ ಮೇಲೆಯು ಮದುವೆ ಆಗದ್ದ ಕೂಸುಗಳ ಕಣ್ಣಿಂಗೆ ವಸ್ತ್ರ ಕಟ್ಟಿ ಕಾಡಿಂಗೆ ಬಿಟ್ಟದೂ ಇದ್ದಡೊ. ಹೀಂಗೆ ಕಾಲ ಕಳುದ ಹಾಂಗೆದಕಷಿಣ ಕನ್ನಡ ಉತ್ತರ ಕನ್ನಡ ,ಕೊಡಗು, ಮಡಿಕೇರಿ ಹಂಗೆಲ್ಲ ಬೇರೆ ಬೇರೆ ಪ್ರದೇಶಲ್ಲಿ ಹೋಗಿ ವಾಸ ಮಾಡಿಗೋಂಡಿಪ್ಪಗ ಆಯಾ ಪ್ರದೇಶದ ದೇಶ ಭಷೆಯೂ ನಮ್ಮ  ಭಾಷೆಲ್ಲಿ ಸೇರಿಗೊಂಡತ್ತಡೊ. ಹಾಂಗೆ ಕೆಲವೊಂದು ರೀತಿಲ್ಲಿ ಭಾಷಾ ವೈವಿಧ್ಯ ಬಂತು.ಕುಂಬ್ಳೆ ಸೀಮೆ ಜನಂಗೊಕ್ಕೆ ಮಲಯಾಳ ಸಂಸರ್ಗಂದ ಆ ಭಾಷಗೆ ಒತ್ತುಕೊಟ್ಟ ಹಾಂಗೆ ಕಾಣುತ್ತು.ಹೋವ್ಸು, ಬತ್ಸು,ಹೇದ್ದು ಕೇಟದು,ನೀರಡ ಹೀಂಗೆಲ್ಲ ಶಬ್ದಂಗಳ ಉಪಯೋಗ ಶುರುವಾತು. ಪುತ್ತೂರು ಸುಳ್ಯಲ್ಲೆಲ್ಲ ಇಪ್ಪೋವಕ್ಕೆ ಕುಂಬ್ಳೆ ಸೀಮೆಯ ಸಂಸರ್ಗಂದ, ಹಾಂಗೆ ಬೇರೆ ಊರಿಲ್ಲಿಪ್ಪೋರ ಸಂಸರ್ಗಂದ ಕಾಲ ಹೋದ ಹಾಂಗೆ ಬೆಳೆತ್ತಾ ಹೋಗಿ ಕೆಲವೊಂದು ಸುಧಾರಣೆಯಾಗಿ ಹೋತು. ಹೆರಿಯೋರ ಬಹುವಚನಲ್ಲಿ ನಿಂಗೊ ಹೇಳುವದು ಹೀಂಗೆ ಕೆಲವೆಲ್ಲ ಬದಲಾವಣೆ ಆತು.ಪರಸ್ಪರ ಸಂಬಂಧಂದ ಶುರುವಿಂಗೆ ತಮಾಶೆ ಮಾಡಿದರೂ ಮತ್ತೆ ಹೊಂದಾಣಿಕೆ ಮಾಡಿಗೊಂಡವು
 ಈ ಎಡೆಲ್ಲಿ ವಿದ್ಯಾಭ್ಯಾಸಲ್ಲಿಯೂ ನಮ್ಮೋರು ಮುಂದೆ ಬಂದು,ಕಲಿಕೆಲ್ಲಿ ನಾವು ಮುಂದೆ ಬಂತು. ಎಂಜಿನೀಯರಿಂಗ್ ಹಾಂಗೆ ವಿಜ್ಞಾನಲ್ಲಿಯೂ ಕನ್ನಡ ಸಾಹಿತ್ಯಲ್ಲಿಯೂ ತುಂಬಾಮೇಲುಗೈ ಸಾಧಿಸಿ,     ಅಡಕ್ಕೆಯೊಟ್ಟಿಂಗೆ ವಿದ್ಯೆಲ್ಲಿಯೂ ಮುಂದೆ ಬಂದವು. ರಾಜಕೀಯವಾಗಿಯೂ ಮುಂದೆ ಬಂದವು.ಕಂಪ್ಯೂಟರ್ ವಿಭಾಗಲ್ಲಿಯೂ ಮುಂದುವರುದು ದೇಶ ವಿದೇಶಂಗಳಲ್ಲಿ ಉದ್ಯೋಗ ಪಡಕ್ಕೊಂಡವು.ಅಲ್ಲಿಯೇ ನೆಲಸುಲೆ ಶುರು ಮಾಡಿದವು.ಅವಕ್ಕೆ ಸಣ್ಣಾಗಿಪ್ಪಗ ಕಲ್ತ ಗಾಯತ್ರಿ ಜಪ ಮಾಡುಲೆ ಪುರುಸೊತ್ತಿಲ್ಲೆ.ಮನೆಲ್ಲಿ ನಮ್ಮ ಭಾಷೆ ಮಾತಾಡುಲೂ ನಾಚಿಕೆ ಆಗಿ ಊರಿಂಗೆ ಹೋಗಿಪ್ಪಗ ಮಕ್ಕೊ ಮೌನಿಗಾಗಿರೆಕ್ಕಾತು.ಉಪನಯನಲ್ಲಿ ಗಾಯತ್ರಿ ಉಪದೇಶ ಮಾಡಿದ ಭಟ್ರೇ ಅವರ ಲೆಕ್ಕಲ್ಲಿ ಗಾಯತ್ರಿ ಮಾಡೆಕ್ಕು.ಅಪ್ಪಂಗೇ ಗಾಯತ್ರಿ ಮಾಡುಲೆ ಮನಸ್ಸಿಲ್ಲದ್ದಿಪ್ಪಗ ಮಕ್ಕೊ ಮಾಡುತ್ತವೋ?
        ಈ ಎಡೆಲ್ಲಿ ಮಿತ ಸಂತಾನದ ಕಾರಣಂದಲೋ ಏನೋ ಮದುವೆಗೆ  ಕೂಸುಗೊ ಸಿಕ್ಕುವದು ಅಪರೂಪ ಆತು. ಇದ್ದ ಕೂಸುಗೊ ಕೆಲಸಲ್ಲಿಪ್ಪೋನೇ ಆಯೆಕ್ಕು ಹೇಳುಲೆ ಶುರುವಾತು. ಊರಿಲ್ಲೇ ಕಲ್ತ ಸಂಪ್ರದಾಯಂಗೊ ದೂರ ಆತು.ಪೌರೋಹಿತ್ಯ ವಿಭಾಗಲ್ಲಿದ್ದೋರುದೇ ಕೆಲಸಕ್ಕೆ ಹೋದ್ದರಿಂದ ಮಂತ್ರ ಕಲಿವೋರು ಇಲ್ಲೆ. ಸಂಸ್ಕಾರಂಗಳಲ್ಲಿಬದಲಾವಣೆ ಶುರುವಾತು. ಅಮೇರಿಕಲ್ಲಿಪ್ಪೊವಂಗೆ ಒಂದೇ ದಿನಲ್ಲಿ ಮದುವೆ ಆಯೆಕ್ಕು ಹೇಳುಲೆ ಶುರು ಮಾಡಿ ಇಲ್ಲ್ದ್ದೋವುದೆ ಅದೇ ಕ್ರಮ ಶುರುಮಾಡಿದವು.ಮುನ್ನಾಣ ದಿನ ಬಂದು ಕಾರ್ಯಕ್ರಮ ನಡೆಶುವ ಮರ್ಯಾದೆ ಕಡಮ್ಮೆ ಅಗಿ ಎಲ್ಲದಕ್ಕೂ ಸಂಬಳ ಕೊಟ್ತು ಜನ ಮಾಡೆಕ್ಕಾಗಿ ಬಂತು. ಹಾಲಿಲ್ಲಿ ಕಾರ್ಯಕ್ರಮ ,ಬಫೆ.ಎಲ್ಲ ಸುರುವಗಿ, ಕೊಳೆ ಮೈಲಿಗೆ ಎಲ್ಲ ಹೋತು. ಕೈತೊಳಕ್ಕೊಂಡರೆ ಆತು.ಊಟಕ್ಕಪ್ಪಗ ಬಂದೆತ್ತಿದರೆ ಕೈತೊಳದು ಓಡೆಕ್ಕಾದ ಪರಿಸಥಿತಿ ಬಂತು. ಕೂಸುಗೊ ಸಿಕ್ಕದ್ದೆ ಬ್ರಹ್ಮಚಾರಿಗಳಾಗಿಯೇ ಇಪ್ಪೋವು ಆಶ್ರಮಂದಲೋ   ಅಲ್ಲದ್ದರೆ ಬೇರೆ ಸಮಾಜಂದಲೂ ಮದುವೆಯಾಗೆಕ್ಕಾಗಿ ಬಂತು. ಕರ್ಮಾಂಗಕ್ಕೆ ಭಟ್ಟಕ್ಕೊ ಸಿಕ್ಕದ್ದರೆ ಮಾಂತ್ರ ಅಲ್ಲ ಚುಟುಕಾಗಿ ಒಂದೇ ದಿನಲ್ಲಿ ಉತ್ತರ ಕ್ರಿಯಾದಿಗಳ ಮಾಡುಲೆ ಶುರುವಾತು. ಇಂದ್ರಾಣ ಕಾಲಲ್ಲಿ ಯಾವುದಕ್ಕೂ ಪುರುಸೊತ್ತು ಇಲ್ಲೆ. ಬ್ಯೂಟಿ ಪಾರ್ಲರ್ ಎಲ್ಲೋರಿಂಗೂ ಬೇಕಾಗಿ ಬಂತು.ಏನೋ ಗುರುಗಳ ಪ್ರಯತ್ನಂದ ಕೆಲವು ಕ್ರಾಂತಿಗೊ ಉಂಟಾಗಿ ಕೆಲವೊಂದು ಕಾರ್ಯಂಗೊ ಸಾಂಗವಾಗಿ ನಡವದಿದ್ದರೂ ಅಪ್ಪನ ,ಅಮ್ಮನ ಡಾಡಿ ಮುಮ್ಮಿ ಹೇಳುಲೆ ಶುರುವಾದ ಬದಲಾವಣೆನಮ್ಮಲ್ಲಿ ತುಂಬುಲೆ ಭಜನೆ,ಪೂಜೆ ಇತ್ಯಾದಿಗೊ ಸಾಮೂಹಿಕವಗಿ ನಡಕ್ಕೊಂಡಿದ್ದಕಾರಣವೋ ಅಲ್ಲ ಗುರುಗಳ ಅನುಗ್ರಹಂದಲೋ ಬ್ರಾಹ್ಮಣ್ಯ, ಗಾಯತ್ರಿ,ರುದ್ರ ಇತ್ಯಾದಿಗೊ ಕೆಲವು ಒಳುಕ್ಕೊಂಡಿಪ್ಪದು ಪೂರ್ವಜರ ಸಂಪ್ರದಾಯಂಗೊ ಒಳುಕ್ಕೊಂಡಿಪ್ಪದು ಹೇಳಿ ಕಾಣುತ್ತು.

No comments:

Post a Comment