Friday, March 22, 2013

ಮದಲು ಮಾತಾಡಿದೋನು ಬಾಳೆಲೆ ತರೆಕ್ಕು

  "ಮದಲು ಮಾತಾಡಿದೋನು ಬಾಳೆಲೆ ತರೆಕ್ಕು"
                    ಗಾದೆಯ ಮಾತು "ವೇದಕ್ಕೆ ಸಮಾನ"ಡೊ.ಕೆಲವೊಂದರಿ ಈಮಾತುಗಳ ನಿಜವಾಗಿ ಕಾಣುತ್ತು. ಆನು ಕೆಲಸಲ್ಲಿಪ್ಪಗ ಸರಕಾರಿ ಶಾಲೆ ಆದಕಾರಣ ಬೇರೆ ಭೇರೆ ಶಾಲಗೊಕ್ಕೆ ವರ್ಗ ಆಯಿಕ್ಕೊಂಡಿತ್ತು. ಮಾಂತ್ರ ಅಲ್ಲ. ಕೇರಳದ ಬಡಗು ಕೋಡಿಲ್ಲಿದ್ದ ಕಾರಣ ಮಲಯಾಳಿಗಳ ಸಂಪರ್ಕ ಇತ್ತು. ಕೆಲವು ಶಾಲೆಗಳಲ್ಲಿ ಮಲಯಾಳ ಸಮಾನಾಂತರ ಕ್ಲಾಸುಗೊ ಇದ್ದ ಕಾರಣ ಅಷ್ಟು ದೂರಂದ ಮಲಯಾಳಿಗೊ ಬಂದೊಂಡಿತ್ತಿದ್ದವು. ಕನ್ನಡ ಗೊಂತಿದ್ದೋರು ಎಂಗೊ ಹೇಳ್ಯೊಂಡು ಬಂದೋರುದೆ ಇಲ್ಲಿ ಹಿಂದಿ, ಸಂಸ್ಕ್ರುತ ಹೇಳ್ಯೊಂಡು ಎಂಗಳೊಟ್ಟಿಂಗೆ ಇದ್ದ ಕಾರಣ ಅವರ ಸಹವಾಸ ಇತ್ತು. ಕೆಲವು ಜನ ಒಳ್ಳೆಯೋವುದೆ ಹೊಟ್ಟೆ ಪಾಡಿಂಗೆ ಬಂದೋರು ಒಳ್ಳೆ ಗೆಳೆಯರಾಗಿತ್ತಿದ್ದವು. ಒಳ್ಳೆ ಮಾಸ್ಟ್ರಕ್ಕೊ ಆಯೆಕ್ಕು ಹೇಳಿ ಅವಕ್ಕೆ ಗೊಂತಿಲ್ಲದ್ದ ವಷಯ ಎಂಗಳತ್ರೆ ಕೇಳಿ ಮಕ್ಕೊಗೆ ಮನಃಪೂರ್ತಿಯಾಗಿ ಕಲಿಶಿದೋರೂ ಇದ್ದವು. ಅಂಥೋರಲ್ಲಿ ಒಬ್ಬ ಎನ್ನ ಗೆಳೆಯ ಅವರಲ್ಲಿ ಚಾಲ್ತಿಲ್ಲಿದ್ದ ಒಂದು ಗಾದೆಯನ್ನೂ (ಮಿಂಡಿಯವನ್ ಎಲೆಕ್ಕಂಡ ಕೊತ್ತೋಣೊ) ಅದಕ್ಕೆ ಸಂಬಂಧಿಸಿದ ಕತೆಯನ್ನೂ ಹೇಳಿತ್ತಿದ್ದ
           ಒಂದರಿ ಎಂಟು ಹತ್ತು ಜನ ಗೆಳೆಯರು ಹೊತ್ತೋಪಗ ಹೀಂಗೇ ಅಂತೆ ತಿರಿಕ್ಕೊಂಡು ಹೋದವಡೊ.ಹೋದವು ಹೋದವು.ಷ್ಟು ದೂರ ಹೇಳಿದರೆ ಮಾತಾಡ್ಯೊಂಡು ಹೋದೋವಕ್ಕೆ ಎಷ್ಟು ನಡದ್ದೆಯೋ, ಎಲ್ಲಿಗೆತ್ತಿತ್ತು, ಎಷ್ಟು ಹೊತ್ತಾತು ಹೇಳಿ ಗೊಂತಾಯಿದಿಲ್ಲೆಡೊ. ಮಾತಿಲ್ಲಿ ಮುಳುಗಿದೋವಕ್ಕೆ ಹೊತ್ತು ಕತ್ತಲೆ ಆದ್ದೋ, ಮತ್ತೆ ಇರುಳು ದಾರಿ ಕಾಣದ್ದೆ ಆದ್ದೋ ಒಂದೂ ಗೊಂತಿಲ್ಲೆ. ಒಬ್ಬಂಗೆ ಅದರ ಅರಿವಾಗಿ ವಾಚ್ ನೋಡಿದರೆ ಒಂಬತ್ತು ಗಂಟೆ ಕಳುದ್ದು. ನೋಡಿದರೆ ಮಾರ್ಗ ಬಿಟ್ಟು, ಕಾಡು ಪ್ರದೇಶಲ್ಲಿದ್ದವು. ಅವ ಗೆಳೆಯರತ್ರೆ ದಾರಿ ತಪ್ಪಿ ಬಂದದರ ಹೇಳಿದ ಮೇಲೆ ಒಳುದೋವಕ್ಕೆ ಗೊಂತಾತಷ್ಟೆ. "ಎಂತ ಮಾಡುವದು? ಮುಂದೆ ದಾರಿ ಕಾಣುತ್ತಿಲ್ಲೆ.ಎಲ್ಲಿಗೆ ಹೋಪದು? ಆರತ್ರೆ ದಾರಿ ಕೇಳುವದು ಹೇಳಿದರೆ ಕಾಡ ನಡುಕೆ ಮನಷ್ಯರು ಬಿಟ್ಟು ಮನೆಗಳೂ ಇದ್ದೋ!ಮರ ಬಿಟ್ಟ ಮಂಗಂಗಳ ಹಾ<ಗಾದವಡೊ.ಹಾಂಗೆ ಪರಡಿಗೊಂಡು ರಜ ಮುಂದೆ ಹೋಪಗ ದೂರಕ್ಕೆ ಒಂದು ಬೆಣಚ್ಚು ಕಂಡತ್ತಡೊ.ಬೆಣಚ್ಚು ಇರೆಕ್ಕಾರೆ ಅಲ್ಲಿ ಮನುಷ್ಯರೇ ಇದ್ದವು ಹೇಳಿ ಧೈರ್ಯ ಮಾಡ್ಯೊಂಡವು.ಏನೋ ಒಂದು ಪೊಟ್ಟುಧೈರ್ಯಂದ  ಪರಡಿಗೊಂಡು ಮುಂದೆ ಮುಂದೆ ಹಾದವಡೊ. ಅಂದಾಜು ಸರಿ ಆತಡೊ. ಅಲ್ಲಿ ಒಂದು ದೊಡ್ಡ ಮನೆ ಇತ್ತಡೊ.
ದೊಡ್ಡ ಮನೆ ಮಾಂತ್ರ ಅಲ್ಲ ಮನುಷ್ಯರೂ ಇತ್ತಿದ್ದವಡೊ ಅಲ್ಲಿ. ಬರೇ ಸಣ್ಣ ಮನೆಯೂ ಅಲ್ಲ . ಬರೇ ಬಡವರೂ ಅಲ್ಲ . ಒಳ್ಳೆ ಜನಂಗಳ ಹಾಂಗೆ ಕಂಡತ್ತಿವಕ್ಕೆ. ಸದ್ಯ ದೇವರು ದೊಡ್ಡೋನು ಒಂದೊಳ್ಲೆ ಆಶ್ರಯ ಸಿಕ್ಕುವ ಹಾಂಗೆ ಮಾಡಿದ" ಹೇಳ್ಯೊಂಡು ಮನೆ ಎದುರಂಗೆ ಎತ್ತಿದವು.ಏನೋ ಅವರಲ್ಲಿ ಆರೋ ಒಬ್ಬ ಪುಣ್ಯಾದಿಗ ಇದ್ದಿಕ್ಕು.ಮನೆಂದ ದೀಪ ಕಂಡದು ಮಾಂತ್ರ ಅಲ್ಲ. ಜನಂಗಳನ್ನೂ ಕಂಡತ್ತು. ಮಕ್ಕೊ ಮರಿಗೊ ಇತ್ತಿದ್ದವೋ ಅಲ್ಲ ಉಂಡಿಕ್ಕಿ ಮದಲೇ ಒರಗಿದ್ದವೋ ಗೊಂತಾಯಿದಿಲ್ಲೆ ಇವಕ್ಕೆ. ಬಹುಶಃ ಗಂಡ ಹೆಂಡತ್ತಿ ಆಯಿಕ್ಕು ಇಬ್ರ ಕಂಡತ್ತು ಇವಕ್ಕೆ. ಎಂತದೇ ಆಗಲಿ. ಹೇಂಗಾದರೂ ಆಶ್ರಯ ಕೊಡೆಕ್ಕಾರೆ ಅವರ ದಿನಿಗೇಳಿ ಕೇಳಿಗೊಂಬೊ ಹೇಳಿಗೊಂಡವು.ಮಾತಾಡದ್ದಿದ್ದರೆ  ಬಂದದು ಗೊಂತಪ್ಪದು ಹೇಂಗೆ? ಕಾಲಿಂಗ್ ಬೆಲ್ ಇದ್ದರೆ ಒತ್ತಿಕ್ಕುಲಾವುತ್ತಿತ್ತು. ಕರೆಂಟೇ ಇಲ್ಲದ್ದಲ್ಲಿ ಕಾಲಿಂಗ್ ಬೆಲ್ ಎಲ್ಲಿಂದ! ಅಂತೂ ಇವು ಬಂದದು ಮನೆಯೋರಿಂಗೆ ಗೊಂತಾತು ಹೇಳಿ ಕಾಣುತ್ತು. ಬಾಗಿಲು ತೆಗದವಡೊ." ಆರು,ಎಲ್ಲಿಂದ ಬಂದದು?ಎಂತಗೆ ಹೀಂಗೆ ಕಾಡಿನ ಕರೆಂಗೆ ಬಂದದು ಹೇಳಿ ಎಲ್ಲ ವಿಚಾರುಸಿಗೊಂಡು, ಸದ್ಯ ಒಳ್ಳೆಯೋರು ಆಗಿರೆಕ್ಕು ದಾರಿ ತಪ್ಪಿ ಬಂದದಾಯಿಕ್ಕು ಹೇಳಿ ಬಾಗಿಲು ತೆಗದು ಒಳ ಬಪ್ಪಲೆ ಹೇಳಿದಡೊ ಯಜಮಾನ.ಬಂದೋರ ಹೆರ ಚಾವಡಿಲ್ಲಿ ಹಸೆ ಹಾಕಿ ಕೂಪಲೆ ಹೇಳಿದಡಾ.ಮತ್ತೆ "ರಜ ಆಸರಿಂಗೆ ತತ್ತೆ ಹೇಳಿ ಒಳ ಹೋದಡೊ.
              " ಬಂದೋರು ಹಶುವಾಗ್ಯೊಂಡು ಇದ್ದ ಹಾಂಗೆ ಕಾಣುತ್ತು. ಊಟ ಆಯಿದೊ ಕೇಳುತ್ತೆ ಮದಲು ರಜ ಕುಡಿವಲೆ ಎಂತಾರು ಕೊಟ್ಟಿಕ್ಕಿ ಮತ್ತೆ ಊಟ ಆಗದ್ದರೆ ಊಟಕ್ಕಿದ್ದದರನ್ನೂ ಕೇಳುವೊ ಹೇಳಿ, ಒಳ ಗೆಂಡ ಹೆಂಡತ್ತಿ ಮಾತಾಡಿಕ್ಕಿ ಹೆರ ಬಪ್ಪಗ ಬೆಲ್ಲ ನೀರು ತೆಕ್ಕೊಂಡು ಬಂದಡೊ. ಆಸರಿಂಗೆ ಕುಡುದಪ್ಪಗ " ನಿಂಗೊ ರಜ ವಿಶ್ರಾಂತಿ ಮಾಡಿ. ನಿಂಗೊಗೆ ಊಟ ಆಗಿರ. ತುಂಬ ಜನ ಇದ್ದ ಕಾರಣ ಎಲ್ಲೋರಿಂಗೂ ಇದ್ದದು ಸಾಕಾಗ. ಒಬ್ಬನೋ ಇಬ್ರೋ ಆಗಿದ್ದರೆ ಸುಧರುಸಲಾವುತ್ತಿತ್ತು.ಎಲ್ಲೋರಿಂಗೂ ಸಾಕಾಗ. ಬರೇ ಅರ್ಧ ಗಂಟೆಲ್ಲಿ ಎಲ್ಲ ತಯಾರಾವುತ್ತು" ಹೇಳಿಕ್ಕಿ ಒಳ ಹೋದಡೊ.
   ವಿಶ್ರಾಂತಿ ತೆಕ್ಕೊಂಬಲೆ ಮನುಗಿದೋರಿಂಗೆ ಗಾಬರಿ,ಒಟ್ಟಿಂಗೆ ದಾರಿ ತಪ್ಪಿ ಹೀಂಗೆ ಸಿಕ್ಕಿ ಬಿದ್ದ ನಾಚಿಕೆ ಎಲ್ಲ ಒಟ್ಟಿಂಗೆ ಇತ್ತಡೊ. ಅಂಬಗ ಅವರಲ್ಲಿ ಒಬ್ಬಂಗೆ ಹೀಂಗೆ ಯೋಚನೆ ಹೊಳತ್ತಡೊ."ಈಗ ಮನೆಲ್ಲಿ ಇಬ್ರೇ ಇಪ್ಪದು. ನಾವು ಹತ್ತು ಜನ ಇದ್ದು. ಉಂಬಲೆ ಬಟ್ಳೋ ಇದ್ದರೆ ಷ್ಟೆಲ್ಲ ಇಕ್ಕೊ!ಬಾಳೆಲೆ ಹಾಂಗೆ ತಂದು ಮಡಗುತ್ತವೋ? ಇನ್ನು ಊಟಕ್ಕಪ್ಪಗ ಬಾಳೆಲೆ ಬೇಕನ್ನೆ.ಯಜಮಾನ ಹೋಗಿ ತಪ್ಪಲೆ ಇಲ್ಲೆ.ನಮ್ಮಲ್ಲಿ ಆರಾರು ಒಬ್ಬನತ್ರೆ ಬಾಳೆಲೆ ತಪ್ಪಲೆ ಹೇಳುಗಷ್ಟೆ!ಎನ್ನಂದ ಎಡಯ ನಿಂಗೊ ಆರಾದರೂ ತರೆಕ್ಕು. ಆರು ಹೇಳಿ ಈಗಳೇ ನಿಶ್ಚಯ ಮಾಡಿಗೊಳ್ಳೆಕ್ಕು" ಹೇಳಿ ಎಲ್ಲೋರತ್ರೂ ವಿಷಯ ಹೇಳಿದಡೊ.ಅವರೊಳದಿಕ್ಕೆ ಚರ್ಚೆ. ಆರು ಬಾಳೆಲೆ ತಪ್ಪದು ಹೇಳಿ. ಅದಕ್ಕೆ ಇನ್ನೊಬ್ಬ " ಸುಮ್ಮನೆ ಚರ್ಚೆ ಮಾಡುವದೆಂತಕೆ. ನಾವು ಒಂದು ತೀರ್ಮಾನಕ್ಕೆ ಬಪ್ಪೊ.ನಾವೆಲ್ಲೋರುದೊ ಮೌನವಾಗಿಪ್ಪದು. ಆರು ಮದಲು ಮಾತಾಡಿದವೋ ಅವು ಬಾಳೆಲೆ ತಪ್ಪದು ಹೇಳುವ ತೀರ್ಮಾನಕ್ಕೆ ಬಂದವಡೊ. ಎಲ್ಲೋರುದೆ ಬಾಯಿ ಮುಚ್ಚಿ ಮನಿಕ್ಕೊಂಡವಡೊ.
ಇಷ್ಟೆಲ್ಲ ಅಪ್ಪಗ ಒಳ ಅಡಿಗೆ ಆಯಿದು. ಯಜಮಾನ ಹೆರ ಬಂದ! ಎಲ್ಲೋರನ್ನು "ಊಟಕ್ಕೇಳಿ"ಹೇಳಿದನಡೊ. ಮಾತಾಡದ್ದೆ ಮೌನವಾಗಿದ್ದ ಕಾರಣ ಒರಗಿದ್ದವೋ ಹೇಳುವ ಸಂಶಯ ಅವಂಗೆ.ಆರೊಬ್ಬರೂ ಮಾತಾಡುತ್ತವಿಲ್ಲೆ.ಇವಂಗೆ ಗಾಬರಿ! ಒಬ್ಬನ ಮೈ ಕುಲುಕ್ಕುಸಿ ಹೇಳಿದಡೊ. ಆದರೂ ಮಾತಾಡುತ್ತವಿಲ್ಲೆ! ಅವಂಗೆ "ಎಂತಪ್ಪ ಇವರ  ಉಸಿರೇ ನಿಂದು ಹೋಯಿದೋ ಹೇಳುವಷ್ಟು ಗಾಬರಿ ಆಗಿತ್ತಡೊ. ಪರವೂರೋರು ಮನೆಗೆ ಬಂದು ಹೀಂಗಾತಕಂಡ್ರೆ ಗಾಬರಿ ಅಪ್ಪದು ಸಹಜವೇ ಅಲ್ಲದೋ!
ದಾರಿ ನಡದು ಬಚ್ಚಿದೋವಕ್ಕೆ ನಿಜವಾಗಿಯೂ ಒರಕ್ಕೇ ಬಂದಿತ್ತು ಹೇಳಿ ಕಾಣುತ್ತು.ಮತ್ತೆ ಒಪ್ಪಂದ ಪ್ರಕಾರ ಮದಲು ಮಾತಾಡಿದೋನು ಬಾಳೆಲೆ ತರೆಕ್ಕನ್ನೆ!ಆರೂ ಮತ್ತುದೇ ಬಾಯಿ ಒಡದ್ದವಿಲ್ಲೆಡೊ.ಇವರ ಏಳುಸುವ ಗೌಜಿಲ್ಲಿ ಗಾಬರಿಂದ ಉದಿ ಆದ್ದೇ ಒಬ್ಬರಿಂಗೂ ಗೊಂತಾಯಿದಿಲ್ಲೆ.ಯಜಮಾನ ಹೆದರಿ ಹತ್ತರೆ ಇದ್ದ ಬೇರೆ ಮನೆೋರ ದಿನಿಗೇಳಿದಡೊ. ಅೆಲ್ಲ ಬಂ ಕಣ್ಣು ಮುಚ್ಚಿ ಮುಸುಕ್ಕು ಹಕಿ ಮನುಗಿದೋರು ಹಂದುತ್ತವಿಲ್ಲಡೊ. ಒಬ್ಬಂಗೆ ಫಕ್ಕನೆ ಕಣ್ಣು ಒಡು ಹೋತಡೊ. ಕಣ್ಣೊಡದು ನೋಡುತ್ತ. ಸುತ್ತೂ ತುಂಬ ಜನ ಸೇರಿದ್ದು ಕಂಡತ್ತು. ಎಲ್ಲೋರನ್ನೂ ಏಳುಸಿದಡೊ. ಕಣ್ಣು ಪೊಜಕ್ಕಿಗೊಂಡು ಎದ್ದೋರು " ನೀನು ಮದಲು ಮಾತಾಡಿದ್ದು. ಬಾಳೆಲೆ ನೀನೇ ತರೆಕ್ಕು ಹೇಳಿದಡೊ. ಅದರ ಕೇಳಿದೋವು ಎಲ್ಲ ಎದ್ದವು. ಯಜಮಾನಂಗೆ ಹೋದ ಜೀವ ಬಂದ ಹಾಂಗೆ ಆತಡೊ.ಮತ್ತೆ ಅದೇ ತಣ್ಣನೆಯನ್ನೇ ಉಂಡಿಕ್ಕಿ ಅಲ್ಲಿಂದ ಮನೆಗೆ ಬಂದವಡೊ.ಹಾಂಗೆ ಈ ಗಾದೆ ಮಾತು ಹುಟ್ಟಿಗೊಂಡದಡೊ.ಯಾವುದೇ ಜವಾಬ್ದಾರಿಯ ಒಪ್ಪಿಗೊಂಡು ಮುಂದೆ ನಿಂದು ಹೊಣೆಗಾರಿಕೆ ಒಪ್ಪಿಗೊಂಲೆ ತಯಾರಿಲ್ಲದ್ದರೆ ಈ ಗಾದೆ ಮಾತು ಪ್ರಯೋಗ ಅಪ್ಪಲೆ ಮತ್ತೆ ಶುರುವಾತಡೊ.

No comments:

Post a Comment