ಗುಂಪೆ ಗುಡ್ಡೆಲ್ಲಿದ್ದ ಸನ್ಯಾಸಿ!         ಗುಂಪೆ ಗುಡ್ಡೆ  ಆ ಪ್ರದೇಶಲ್ಲೆಲ್ಲ ಭಾರಿ ಎತ್ತರಲ್ಲಿಪ್ಪ ಜಾಗೆ. ಬರೇ ಒಂದು ಗುಡ್ಡೆ ಅಲ್ಲ ಮೂರು ಗುಡ್ಡೆಗಳ ಸಾಲು ಹೇಳುಲಕ್ಕು. ಒಟ್ಟಿಂಗೆ ಪೊಸಡಿ ಗುಂಪೆ ಹೇಳಿ ಹೇಳುತ್ತವು. ಮೂಡು ದಿಕ್ಕಿಲ್ಲಿಪ್ಪ ದೊಡ್ಡ ಗುಡ್ಡೆಂದ ಅತ್ಲಾಗಿ ಪಡು ಹೊಡೆಂಗೆ ಹೋದರೆ ಒಂದು,ಮುಂದೆ ಹೋದರೆ ಇನ್ನೊಂದು ಒಟ್ಟು ಒಂದು ಹೊಡೆಂದ ಇನ್ನೊಂದು ಕೋಡಿಗೆ ಒಂದು ಮೈಲೇ ಅಕ್ಕು. ಎತ್ತರದ ಗುಡ್ಡೆ ಎಂಗಳ ಮನೆ ಹತ್ತರೆ ಅವಾ ಅದರ ಬುಡಲ್ಲೇ ಎಂಗಳ ಮನೆ ಹೇಳುಲಕ್ಕು. ಗುಡ್ಡೆ ಕೊಡಿಂಗೆ ಹತ್ತಿ ನಿಂದರೆ ಮೂಡ ಹೊಡೆಂದ ನೋಡಿದರೆ ಕನ್ಯಾನ, ಅಡ್ಯನಡ್ಕ, ಪೆರ್ಲ ಹೀಂಗೆ ಕಾಂಗು.ತೆಂಕ ಹೊಡೆಲ್ಲಿ ಆಗ್ನೇಯ ದಿಕ್ಕಿಲ್ಲಿ ಆವ್ತು  ಬದಿಯಡ್ಕ,ಮತ್ತೆ ತೆಂಕಕ್ಕಾವುತ್ತು ಸೀತಂಗೋಳಿ, ನೈರುತ್ಯಕ್ಕೆ ನೊಡಿದರೆ ಕುಂಬ್ಳೆ.ಪಡುವಕ್ಕೆ ನೋಡಿದರೆ ಕರಾವಳಿ ಪ್ರದೇಶಂಗೊ,ಬಡಗಕ್ಕೆ ಸಜಂಕಿಲ ,ಮತ್ತೆ ಮುಂದೆ ಬಾಯಾರು ಹೀಂಗೆ ಹತ್ತೂರುಗಳ ಕಾಂಬಲೆಡಿತ್ತು.
ಎಂಗೊ ಸಣ್ಣಾದಿಪ್ಪಗ, ಹೊತ್ತೋಪಗ ಗುಡ್ಡೆಗೆ ಬಿಟ್ಟ ದನಗೊ ಬಾರದ್ದರೆ ಹುಡುಕ್ಯೊಂಡು ಕೊಡಿಂಗೆ ವರೆಗೆ ಹತ್ತುವೆಯೊ. ಅಲ್ಲೆಲ್ಲ ಹುಡುಕ್ಕಿದರೆ ಸಿಕ್ಯೊಂಡಿತ್ತವು. ಒಟ್ಟಿಂಗೆ ಗುಡ್ಡೆ ತುಂಬ ನೆಲ್ಲಿ ಮರಂಗೊ. ಎಂಗೊಗೆ ಮರ ಹತ್ತಿ ನೆಲ್ಲಿಕಾಯಿ ಕೊಯ್ವದು ಅಭ್ಯಾಸ.ಮತ್ತೆ ಮಳೆಗಾಲಲ್ಲಿ ಕುಂಟಾಲ ಹಣ್ಣು ಕೊಯ್ದು ತಿಂದು ಬಾಯಿ ನೇರಳೆ ಮಾಡ್ಯೊಂಬದು ಇನ್ನೊಂದು ಅಭ್ಯಾಸ!.ವಾರದ ರಜೆಲ್ಯಂತೂ ಗುಡ್ಡೆ ಕೊಡಿಲ್ಲಿ ಅಂತೆ ಅತ್ತಿಂದಿತ್ತೆ ಓಡ್ಯೊಂಡೋ,ಬೇರೆ ಎಂತಾರು ಆಟ ಆಡ್ಯೊಂಡೋ ಇಪ್ಪೆಯೊ.ಹಾಂಗೆ ಗುಡ್ಡೆ ಹತ್ತಿಪ್ಪಗ ಎಂಗೊಗೊಂದು ಕುಶಾಲು ಆಟ ಇತ್ತುಗುಡ್ಡೆ ಕೊಡಿಂದ ಕಲ್ಲುಗಳ ಕೆಳ ಉರುಳುಸುವದು. ದೊಡ್ಡೋರಿಂಗೆ ಗೊಂತಾದರೆ ಬೈಗು. ಆದರೆ ಕಲ್ಲು ಉರುಳಿದ್ದು ಆರು ಹೇಳಿ ಅವು ನೋಡುತ್ತವೋ? ಉರುಳುವದರ ನೋಡಿ ಸಂತೋಷ ಪಡುವದು ಎಂಗಳ ಅಭ್ಯಾಸ! ಈಗಳೂ ಗುಡ್ಡೆ ಅಲ್ಲೇ ಇದ್ದರೂ ದನಗಳ ಹುಡುಕ್ಕಲಂತೂ ಹೋಗೆಡ.ಮತ್ತೆ ನೆಲ್ಲಿ ಮರವೇ ಇಲ್ಲದ್ದರೆ ಅದರ ಆಕರ್ಷಣೆಯೂ ಇಲ್ಲೆ.ಮತ್ತೆ ಮಕ್ಕೊಗೂ ಹಿರಿಯರಿಂಗೂ ಹೊತ್ತು ತೆಗವಲೆ ಟಿ.ವಿ ಇಪ್ಪಗ ಹೆರ ಹೋಪಲೆ ಪುರುಸೊತ್ತು ಸಿಕ್ಕುಗೋ ಅಥವಾ ಮನಸ್ಸಕ್ಕೋ?ಆದರೆ ಮತ್ತೆ ಮತ್ತೆ ಎಂಗಳ ಪೈಕಿ ಒಂದು ಮನೆಯೋರು ( ಅವರ ಸ್ವಂತ ಜಾಗೆಲ್ಲಿ ಅಲ್ಲಲ್ಲಿ ಸೊರಂಗ ತೋಡುಗು. ಅಲ್ಲಲ್ಲಿ ಮಣ್ಣಿನ ರಾಶಿಗೊ ಇಕ್ಕು. ನಡಕ್ಕೊಂಡು ಹೋಪಲೆ ರಗಳೆ ಅಕ್ಕು.  ಸೊರಂಗ ತೋಡಿಯೂ ಏನೋ ಒಂದೆರಡು ಸೊರಂಗಲ್ಲಿ ನೀರಿನ ಒರತೆ ಸಿಕ್ಕಿದ್ದಡೊ.
ಗುಡ್ಡೆಯ ಒಂದು ಹೊಡೇಲ್ಲಿ ಜೋಡು ಬಾವಿಯೂ ಇತ್ತು. ಹತ್ತರೆ ಹತ್ತರೆ ಎರಡು ಬಾವಿಗೊ! ಒಂದು ಬಾವಿಗೆ ಕಲ್ಲು ಹಾಕಿದರೆ ಇನ್ನೊಂದು ಬಾವಿಂದ ಕಲ್ಲು ಬಿದ್ದ ಶಬ್ದ ಕೇಳುಗು. ಇದು ಎಂಗಳ ಇನ್ನೊಂದು ಆಕರ್ಷಣೆ! ಹೀಂಗೆ ಕಲ್ಲು ಹಾಕಿ ಹಾಕಿ ಬಾವಿಯ ಆಳವೇ ಕಡಮ್ಮೆ ಆಯಿದು. ಅಂದ್ರಾಣ ಅಜ್ಯಕ್ಕೊ ಹೇಳುಗು ಅದು ಮದಲು ಪಾಂಡವರು ಇಲ್ಲಿ ಈ ಗುಡ್ಡೆಲ್ಲಿ ವಾಸವಾಗಿತ್ತಿದ್ದವಡೊ. ಅಂಬಗ ಅವು ತೆಗದ ಬಇ ಹೇಳುಗು. ಎನ್ನ ತಮ್ಮನೂ ಅವನ ಗೆಳೆಯನೂ ಒಂದರಿ ಆ ಬಾವಿಲ್ಲಿ ಎಂತ ಇದ್ದು ವಿಶೇಷ ನೋಡುಲೆ ಬಾವಿಗೆ ಇಳುದ್ದವಡೊ. ಏನೋ ಮರದ ಬೇರು ಹಿಡುಕ್ಕೊಂಡು ಇಳುದ ಸಾಹಸವ ಮನೆಲ್ಲಿ ಶುದ್ದಿ ಹೇಳಿ ಎಲ್ಲೋರ ಕೈಂದಲೂ ಬೈಸಿಗೊಂಡೂ ಆಗಿತ್ತು.ದಲೇ ಎಂಗೊ ಯೋಚಿಸಿದ ಪ್ರಕಾರ  ಎರಡು ಬಾವಿಗಳನ್ನ ಜೋಡುಸುವ ಸುರಂಗ ಇದ್ದಡೊ. ಮತ್ತೆ ಎಂಗೊಗೂ ಕಂಡತ್ತು. ಅದಕ್ಕೆ ಶಬ್ದ ಆಚ ಬಾವಿಲ್ಲಿ ಕೇಳುವದು!ಮತ್ತೆ ಆಚಿಕೆ ಕೆಳ ತೀರ್ಥ ಗುಂಪೆ ಹೇಳಿ ಇದ್ದು. ರಜ ಕೆಳಾಚಿ ಇಪ್ಪದ ತೀರ್ಥ ಗುಂಪೆ ಸುರಂಗ! ತೀರ್ಥ ಅಮಾಸೆ ದಿನ ತೀರ್ಥ ಮೀವಲೆ ಹೋಪದು ಅದರೊಳಂಗೆ ಸುರಂಗಲ್ಲೆ ಮುಂದೆ ಹೋಪಗ ಒಂದು ನೀರಿನ ಹೊಂಡ! ಅದಲ್ಲಿ ಮಿಂದು ಅಲ್ಲೆ ಸೇಡಿ ಮಣ್ಣು(ವಿಭೂತಿ) ಪ್ರಸಾದ ಹೇಳಿ ತಪ್ಪದು ಹೀಂಗೆಲ್ಲ ನಡಕ್ಕೊಂಡಿದ್ದು.
              ಈ ಕತೆ ಹೇಳುವ ಸಮಯಲ್ಲೇ ಗುಡ್ಡೆ ಹತ್ತುವದು ಕಮ್ಮಿ ಆಯಿದು.ಒಂದು ದಿನ ಗುಡ್ಡೆ ಕೊಡಿಂಗೆ ಹೋದೋವು ಬಾವಿ ಹತ್ತರಂಗೆ ಹೋದವಡೊ. ಬಗ್ಗಿ ನೋಡಿದರೆ ಅದರೊಳದಿಕ್ಕೆ ಒಬ್ಬ ಮನುಷ್ಯ ತಿಂಗಳುಗಟ್ಲೆ ಗಡ್ಡ ತೆಗೆಯದ್ದ ಕಾರಣ ಸನ್ಯಾಸಿ ಹಾಂಗೆ ಕಂಡತ್ತಡೊ. ಇವರ ಕಾಂಬಗ ತನ್ನ ಮೋರೆ ಕಾಂಬಲಾಗ  ಹೇಳಿಯೋ ಎಂತದೋ ತಲೆ ತಗ್ಗುಸ್ಯೊಂಡಿತ್ತಡೊ!ಅವು ಕೆಳ ಬಂದವು. ಶುದ್ದಿ ಊರೆಲ್ಲ ಹರಡಿತ್ತು. ಮರದಿನ ಕೆಲವು ಜನ ಆ ಸನ್ಯಾಸಿಯ ನೋಡುಲೆ ಹೋದವು. ಮತ್ತೆ ಸನ್ಯಾಸಿಯ ನೋಡ್ಳೆ ಹೋಪಗ ಅಂತೇ ಹೋಪದು ಸರಿ ಆವ್ತಿಲ್ಲೆ ಹೇಳಿ ಕೆಲವು ಜನ ಹಣ್ನು ಹಂಪಲು ಕೊಂಡೋದವು. ಸನ್ಯಾಸಿ ಅದರ ಕಣ್ಣೆತ್ತಿಯೂ ನೋಡಿದ್ದಿಲ್ಲೆ.ಜನಂಗೊ ಗ್ರೇಶಿದವು - ಬಹುಶಃ ತಿಂಬದರಲ್ಲಿ ಆಸಕ್ತಿ ಇಲ್ಲೆ ಅವಂಗೆ ಹೇL ಜನರ ಭಕ್ತಿ ಹೇಚ್ಚಾತು. ಮರದಿನ ಹಲು ಹಣ್ಣು ತೆಕ್ಕೊಂಡು ಹೋದವು. ಜನ ಸನ್ಯಾಸಿಯ ನೋಡ್ಳೆ ಹೋಪದು ಹೆಚ್ಚಾತು. ಹೆಚ್ಚಾಗಿ ಹೊತ್ತೋಪಗಳ ಹೋಪದಾದ ಕೇರಣ ಅಂದು ಸನ್ಯಾಸಿ ಆ ಹೊತ್ತಿಂಗೆ ಬಾವಿಲ್ಲಿಲ್ಲೆ. ಎಲ್ಲಿಗೆ ಹೋದಪ್ಪ! ಎಂತ ಊರು ಬಿಟ್ಟಿಕ್ಕಿ ಹೋದನೋ? ಸಂಚಾರಿ ಸನ್ಯಾಸಯೋ? ಹೀಂಗೆಲ್ಲ ಮಾತಾಡ್ಯೊಂಡಿದ್ದರೂ ಜನಂಗೊ ಹೋದ ಮೇಲೆ ಸನ್ಯಾಸಿ ಅಲ್ಲಿಗೆ ಬಂದು ,ಜನಂಗೊ ಮತ್ತೆ ಬಪ್ಪಗ ಅವ ಅಲ್ಲಿ ಇಲ್ಲದ್ದೆ ಅಪ್ಪಲೆ ಶುರು ಆತು.ಆದರೆ ತಂದು ಕೊಟ್ಟ ಹಣ್ಣು ಹಂಪಲು ಮರ ದಿನ ಕಾಣ್ತಿಲ್ಲೆ.
       ಜನಂಗಳಲ್ಲಿ ಒಬ್ಬಂಗೆ ಸಂಶಯ ಬಂತು.ಏನೋ ಒಬ್ಬ  ಕಳ್ಳ ಸನ್ಯಾಸಿಯೇ ಆಗಿರೆಕ್ಕು ಹೇಳಿ ಆಲೋಚನೆ ಮಾಡಿದಡೊ.ಪೋಲೀಸುಗೊಕ್ಕೆ ತಿಳಿಶಿದರೆ ಗೊಂತಕ್ಕು ಹೇಳಿ ಯೋಚನೆ ಮಾಡಿದ. ಆದರೆ ಆ ಪ್ರದೇಶ ಯಾವ ಸ್ಟೇಶನಿಂಗೆ ಸೇರಿದ್ದು ಹೇಳುವದು  ಅವಂಗೆ ಗೊಂತಲ್ಲೆ. ಎಂಗಳ ಹೊಡೆಂಗೆ ಬದಿಯಡ್ಕ ಹೇಳಿದರೆ ಹತ್ತು ಮೈಲು ದೂರ! ಕುಂಬ್ಳೆ ಹತ್ತು ಮಈಲು ದೂರ ಮತ್ತೆ ಮಂಜೇಶ್ವರ ಹದಿನೈದು ಮೈಲು ದೂರ.  ಮರ್ಗಲ್ಲೇ ಬಪ್ಪಗ ಇನ್ನೂ ಹೆಚ್ಚು.ಅಂತೂ  ಮೂರು ಸ್ಟೇಶನ್ ಗಳೂ ದೂರವೇ ಆವುತ್ತು. ಎಂಗೊಗೆ ಅಗತ್ಯ  ಬಂದರೆ ಇಷ್ಟು ದೂರಕ್ಕೆ ಬರೆಕ್ಕಾರೆ ಅವರ ಕಾರು ಮಾಡಿ ಕರಕ್ಕೊಂಡು ಬರೆಕ್ಕು! ಹಾಂಗೆ ಬಹುಶಃ  ಈ  ಮನುಷ್ಯ  ಯಾವ ತೊಂದರೆಯೂ ಆಗ ಹೇಳುವ ಸುರಕ್ಷಿತ ಜಾಗೆಯ ಹುಡುಕ್ಯೊಂಡದು!
ಅಂತೂ ಹೇಂಗೋ ಪೋಲಿಸುಗೊ ಬಂದವು. ಸನ್ಯಾಸಿಯ ಹುಡುಕ್ಯಂಡು! ಆದರೆ ಆ ಸನ್ಯಾಸ್ದಿಗೆ ಹೇಂಗೆ ಗೊಂತಾತೋ? ಪೋಲೀಸುಗೊ ಬಪ್ಪಗ ಸನ್ಯಾಸಿಯ ಪತ್ತೆಯೇ ಇಲ್ಲ ಹದಿನೈದು ದಿನ ಊರಿನ ಜನರ ಕಣ್ಣಿಂಗೆ ಸನ್ಯಾಸಿಯಾಗಿದ್ದವ ಒಬ್ಬ ಕೊಲೆಗಾರಡೊ! ಅಲ್ಲಿದ್ದರೆ ಪೋಲೀಸುಗೊಕ್ಕೆ ಗೊಂತಾಗ ಹೇಳಿ ಬಂದು ಇದ್ದದಡೊ. ಜನರ ಭಕ್ತಿಯ ದುರುಯೋಗ ಮಾಡ್ಯೊಂಡು ಷಟು ದಿನ ಇದ್ದೋನು ಪೋಲೀಸುಗೊ ಬಪ್ಪಗ ಅವಂಗೆ ಹೇಂಗೆ ಮೂಗಿಲ್ಲಿ ನೆಳವು ಕೂದತ್ತೋ ಅಸಾಮಿಯ ಪತ್ತೆಯೇ ಇಲ್ಲೆ.
             ಶುಕ್ರವರ ಪೂಜಗೆ ಕಿಸ್ಕಾರ ಹೂಗು ತಪ್ಪದು ಎನ್ನ ಕ್ರಮ. ಶಾಲೆ ಬಟ್ಟಿಕ್ಕಿ ಬಪ್ಪಗ ದಾರಿಲ್ಲಿ ಸಿಕ್ಕಿದ ಹೂಗು ತಪ್ಪೆ. ಹಾಂಗೆ ತಪ್ಪಗ ಕೈಂದ ಜರಿ ದಾರಿಲ್ಲಿ ಒಂದು ಕಲ್ಲಿನ ಮೇಗೆ ರಜ ೂಗು ಬಿದ್ದಿತ್ತು. ಮರದಿನ ಆ ದಾರಿಲ್ಲಿ ಹೋಪಗ ಅದೇ ಕಲ್ಲಿನ ಮೇಲೆ ರಜ ಹೆಚ್ಚು,ಮರದಿನ ಇನ್ನ ಹೆಚ್ಚು, ಮತ್ತೊಂದು ದಿನ ಎನ್ನೊಟ್ಟಿಂಗೆ ಇದ್ದನೊಬ್ಬ ಅಲ್ಲಿಗೆತ್ತುವಗ ಹತ್ತರೆ ಹಗು ಸಿಕ್ಕದ್ದೆ ರಜ ದೂರ ಹುಡುಕ್ಯೊಂಡು ಹೋಗಿ ಹೂಗು ತಂದು ಹಾಕುವದು ಕಂಡತ್ತು. ಎಂತಗೆ ಕೇಳಿದ್ದಕ್ಕೆ ಇದೊಂದು ಕಾರ್ಣಿಕದ ಕಲ್ಲು. ಇಲ್ಲಿ ಹೂಗು ಹಾಕಿ ನಮ್ಮ ಅಪೇಕ್ೆ ಹೇಳಿ ಕೈ ಮುಗುದು ಹೋದರೆ ಗ್ರೇಶಿದ ಕೆಲಸ ಆವುತ್ತು ಹೇಳಿಯೋ ಎಲ್ಲ ಹೇಳಿದ. ಆನು ನಿಜ ಸಂಗತ ಹೇಳಿದರೂ ಒಪ್ಪಿದ್ದಾ ಇಲ್ಲೆ. ಜನರ ಮ್ಯವೋ ಎಂತದೋ ಹೇಂಗೆ ಹೇಳಿ ನಿಂಗಳೇ ಯೋಚುಸಿ!