Thursday, March 14, 2013

ಆಚಾರ ವಿಚಾರಂಗೊ ಹೀಂಗಿತ್ತಡೊ!

To
             ಚಾರ ವಿಚಾರಂಗೊ   ಮದಲು ಹೀಂಗಿತ್ತಡೊ
   
   ಅಂಬಗ ಆನು ಕೆಲಸಕ್ಕೆ ಸೇರಿದ ಹೊಸತ್ತಿಲ್ಲಿ ಹೊಸ ಹೊಸ ಅನುಭವಂಗೊ  ಬಂದಿತ್ತು.  ಆನು ಹೋದ ಊರಿಲ್ಲಿ ಹೆರಂದ ಬಂದೋರಿಂಗೆ  ಉಳಕ್ಕೊಂಬಲೆ  ಸೌಕರ್ಯ ಇತ್ತಿಲ್ಲೆ. ದೂರಂದ ಬಂದೋವು ಎಂಗೊ  ಮೂರು ಜನ ಇತ್ತಿದ್ದೆಯೊ. ಬೇರೆ ವ್ಯವಸ್ತೆ ಆಗದ್ದೆ ಶಾಲೆಲ್ಲೇ ಒಂದು ಮಕ್ಕೊಬುತ್ತಿ ತಂದು ಊಟ ಮಾಡುವ ಕೋಣೆ ಇತ್ತು. ಅದನ್ನೇ ಎಂಗಳ ವಾಸಕ್ಕೆ  ಏರ್ಪಾಡು ಮಾಡ್ಯೊಂಡೆಯೊ.ಕೆಲಸಕ್ಕೆ ಸೇರಿದ ಹೊಸತ್ರಲ್ಲಿ ಸರಿಯಾಗಿ ಕಲಿಶುತ್ತ ಮಾಸ್ಟ್ರ ಹೇಳುವ ಹೆಸರು ತರೆಕ್ಕು ಹೇಳುವ ಉತ್ಸಾಹ ಎಂಗೊಗೆ ಮೂರು ಜನಕ್ಕೂ ಇತ್ತು. ಒಟ್ಟು ಆ ಶಾಲೆಲ್ಿ ಏಳು ಕ್ಲಾಸುಗೊ ಇದ್ದದರ ಏಳು ಜನ ಎಂಗೊ ಒಂದೊಂದು ಕ್ಲಾಸ್  ಹಂಚಿಗೊಂಡೆಯೊ.ಏಳು  ಜನರಲ್ಲಿ ಎಂಗೊ ಮೂರು ಜನ ಹೊಸಬ್ಬರು. ಅದೊಂದು ಹಂದುಳಿದ ಮಕ್ಕಳೇ  ಹೆಚ್ಚಾಗಿದ್ದ ಶಾಲೆ. ಮಕ್ಕೊ  ಕಲಿವಲೆ ಬರೇ ಮೋಸ.ಮನೆಕೆಲಸ  ಕೊಟ್ಟರೂ ಮಾಡವು. ಮಾಂತ್ರ ಅಲ್ಲ ರಜೆ ಮಾಡಿ ಕೆಲಸಕ್ಕೂ ಹೋಕು,ದಿನಾ ಬಾರದ್ದರೆ ಮತ್ತೆ ಬಪ್ಪಗ ಅವರ ತಲೆಲ್ಲಿದ್ದೂ ಮರೆತು ಹೋಯೆಕ್ಕನ್ನೆ. ಒಂದು ಮರಾಟಿ ಹುಡುಗಂಗೆ ಹೇಳಿ ಹೇಳಿ ಸಾಕಾಗಿ, ಕೋಪಂದ ಹುಡುಗನ ಕೈಗೆ ಬೆತ್ತಲ್ಲಿ ಎರಡು ಪೆಟ್ಟು ಕೊಟ್ಟು ನೋಡಿದೆ. ಪೆಟ್ಟು ತಿಂದ ಹುಡುಗ  ಅಪ್ಪನ ಹತ್ರೆ ದೂರು ಹೇಳಿತ್ತಡೊ.ಹೊತ್ಟೋಪಗ ಕೆಲಸ ಬಿಟ್ಟಿಕ್ಕಿ,ಸೀದಾ ಎಂದ್ರಾಣ ಹಾಂಗೆ ಗಡಂಗಿಂಗೆ ಹೋಗಿ, ಹೊಟ್ಟೆ ತುಂಬ ಕುಡುಕ್ಕೊಂಡು ಶಾಲೆ ಹತ್ತರಂಗೆ ಬರುತ್ತಾ ಇತ್ತಡೊ. ದಾರಿಲ್ಲಿ ಏನೇನೋ ಎನ್ನ ಬಯ್ಯುತ್ತಾ , " ಏರು ಅವು? ಆ ಮಾಸ್ಟ್ರು ಎನ್ನ ಬಾಲೆಗು ನೋತುಂಡುಗೆ. ಕೇಣೋಡು ಎಂಕು. ಎನ್ನ ಬಾಲೆಗು ದಾಯೆ ನೋತುನೆ ಎಂದು,ಆಯೆ ಎನ್ನ ನೋಪಿಯಾರ ಆತೆನೋ? ಏನು ಬುಡುವೇನೋ? ಬುಡಾಯೆ. ಕೇಣೋಡೂ".ಹೀಂಗೆಲ್ಲ ಬಾಯಿಗೆ ಬಂದ ಹಾಂಗೆ ಹೇಳ್ಯೊಂಡು ಬತ್ತಾ ಇಪ್ಪಗ ಎಂಗಳ ಶಾಲೆಯ ಇನ್ನೊಂದು ಮಾಸ್ಟ್ರನ ಕಾಂಬಲೆ ಸಿಕ್ಕಿತ್ತಡೊ.ಅವ " ಏರು ನೋತುನೆಗೆ? ದಾಯೆಗು ನೋತುನೆಂದು  ಮಾಂತ ಕೇಂಡಾನ? ಪೊಕ್ಕಡೆ ನೋಪಾಯೇರು. ಈ ಪೋತು ಆರೆಟ ಇಂಚ ಮಾಂತ ಕೇಂಡ ಆರೆಗುಲಾ ಕೋಪ ಬತ್ತುಂಡ ಈ ಪೆಟ್ಟು ತಿನೋಡಾವು. ಅವುಳು ಆಕ್ಳು ಮೂಜಿ ಜನ ಉಳ್ಳೇರು. ಮನಿಪ್ಪಾಂದೆ ಇಲ್ಲಾಡೆಗು ಪೋಲ."ಹೇಳಿ ಹೆದರುಸಿ ಅಪ್ಪಗ" "ಅಂದು ಕಲ್ಪಾಂದುನೈಕು ನೋತುನೆ ಎಡ್ಡೆ ಆಂಡು ಹೇಳ್ಯೊಂಡು" ಹೋತಡೊ ಆ ಮನುಷ್ಯ.
     ಅದೇ ಮಾಸ್ಟ್ರ ಒಬ್ಬ ಮಲಯಾಳಿ ಕ್ರೇಫ್ಟ್ ಮಾಸ್ಟ್ರ. ಅವ ಒಬ್ಬ ಅಲ್ಲಿಯಾಣ ಜಮೀನ್ದಾರ ನ ಮನೆಲ್ಲಿ ಸೇರೊಂಡಿತ್ತಿದ್ದ.ಆ ಬ್ರಾಹ್ಮಣ ತೆಂಕಲಾಗಿ ಶಾಂತಿ ಮಾಡ್ಯೊಂಡಿತ್ತಿದ್ದಡೊ.ಊರಿಲ್ಲಿ ಮದುವೆ ಆಗಿ,ಒಬ್ಬ ಮಾಣಿಯೂ ಇತ್ತಿದ್ದಡೊ.ಆದರೆ ಆ ಹೆಂಡತ್ತಿ ಬೇಗ ತೀರಿ ಹೋದ ಕಾರಣ ತೆಂಕ್ಲಾಗಿಂದಲೇ ಒಂದು ನಾಯರ್ ಹೆಣ್ಣಿನ ಬಪ್ಪಗ ಕರಕ್ಕೊಂಡು ಬಯಿಂದಡೊ.ಬಪ್ಪಗಳೇ ಆ ಹೆಣ್ಣು  ಅವಂಗೇ ಹುಟ್ಟಿದ ಒಂದು ಮಗುವಿನ ಕರಕ್ಕೋಂಡು ಬಯಿಂದಡೊ. ಆ ಕೂಸಿಂಗೆ ಮಲಯಾಳ ಕಲಿಶೆಕ್ಕಾದರೆ ಎಂತ ಮಾಡುವದು ಹೇಳಿ ಯೋಚನೆ ಮಾಡಿದೋನು, ಈ ಮಾಸ್ಟ್ರನತ್ರೆ "ನಿನಗೆ ಎಂಗಳ ಮನೆಲ್ಲೇ ಉಂಡುಗೊಂಡಿಪ್ಪಲಕ್ಕು ಹೇಳಿತ್ತಿದ್ದಡೊ. ಇವಂಗೂಉಳಕ್ಕೊಂಬಲೆ ವ್ಯವಸ್ತೆ ಆತು. ಕೂಸಿಂಗೆ ಮಲಯಾಳ ಕಲಿಶುಲೆ ಜನವೂ ಸಿಕ್ಕಿತ್ತು.
        ಎನ್ನೊಟ್ಟಿಂಗೆ ಇದ್ದೋರಿಂಗೆ ವರ್ಗವೂ ಆಗಿ ಆನೊಬ್ಬನೇ ಆದೆ. ಒಂದು ದಿನ ಆ ಮಾಸ್ಟ್ರ ಅವ ಇಪ್ಪ ಬ್ರಾಹ್ಮಣನ ಮನಗೆ ಎನ್ನ ಬಪ್ಪಲೆ ಹೇಳಿದ. ಒತ್ತಾಯ ಮಾಡಿದ್ದಕ್ಕೆ ಹೋದೆ. ಮನಗೆತ್ತುವಗ ಕತ್ತಲೆ ಆಯಿದು. ಬ್ರಾಹ್ಮಣ ತುಂಬ ಪ್ರಾಯದೋನು. ಎಭತ್ತು ವರ್ ಅಕ್ಕು. ಮಗ ಇದ್ದೋನು ದೂರ ಎಲ್ಲಿಯೋ ಕೆಲಸಕ್ಕೆ ಹೋಯಿದ. ಮನೆಲ್ಲಿ ಆ ಅಬ್ಬೆ ಮಗಳು, ಮತ್ತೆ ಮುದುಕ್ಕ, ಮಾಸ್ಟ್ರ ಮಾಂತ್ರ ಇಪ್ಪದು. ಮತ್ತೆ ಅದೇ ಮಾಸ್ಟ್ರ ಆ ಹುಡುಗಿಯನ್ನೇ ಮದುವೆ ಆಗಿ ಮನೆ ಅಳಿಯ ಆಯಿದಡೊ.ಮುದುಕ್ಕ ಆನು ಹೋಪಗ ಇತ್ತಿದ್ದ ಇಲ್ಲೆ.ಪೇಟೆಗೆ ಹೋಗಿತ್ತಿದ್ದಡೊ.ಎನಗೆ ಬೈರೋಸ ಕೊಟ್ಟು ಮೀವಲೆ ಹೇಳಿದವು. ಬೆಶಿನೀರ ಕೊಟ್ಟಗೆ ತೋರುಸಿದವು. ಮತ್ತೆ ಆ ಮಾಸ್ಟ್ರ ಎನಗೆ ಕೆಲವು ಸಲಹೆಗಳ ಕೊಟ್ಟ. ಇವಂಗೆ ಮಡಿ ಮೈಲಿಗೆ ಹೆಚ್ಚಿದ್ದು. ಮಿಂದಕ್ಕಿ ಬಪ್ಪಗ ಚೆಂಡಿ ವಸ್ತ್ರಲ್ಲೇ ಬರೆಕ್ಕು. ಮತ್ತೆ ಊಟ ಆದಮೇಲೆಯೇ ನಿನ್ನ ವದ್ಸ್ತ್ರವ ಮುಟ್ಟುಲಕ್ಸ್ಟೆ. ಇಲ್ಲದ್ದರೆ ಎನ್ನ ಹಾಂಗೆ      ನೀನು ಉಂಡ ಎಂಜೆಲು ಬಾಳೆ ತೆಗೆಯೆಕ್ಕು ಹೇಳಿ ಬಕ್ಕು. ಹೀಂಗೆಲ್ಲ ಹೇಳಿದ. ಅಡಿಗೆ ಮಾಡುಲೆ ಒಬ್ಬ ಬ್ರಾಹ್ಮಣ ಇತ್ತಿದ್ದ. ಅವನೇ ಬಳುಸುವದು. ಈ ಶುದ್ದಿಯ ಅಲ್ಲಿಗೆ ಹೋದ ಮೇಲೆಯೇ ಆನು ಕೇಳಿದ್ದಾತು. ಮದಲೇ ಆಗಿದ್ದರೆ ಹೋಪಲೇ ಇತ್ತಿಲ್ಲೆ. ನಾಯರ ಹೆಣ್ಣಿನ  ಮನೆಯೊಳದಿಕ್ಕೇ ಮಡಿಕ್ಕೊಂಡು ಇಪ್ಪೋನಿಂಗೆ ಇಷ್ಟೂ ಶುದ್ಧ ಮುದ್ರಿಕೆ ಇದ್ದೋ ಹೇಳಿ ಆಶ್ಚರ್ಯ ಆತು.ಮುನ್ನಾಣ ದಿನ ಪಳ್ಳಿಲ್ಲಿ ಭಾಣ ಮಾಡುವಗ " ಪರಸ್ತ್ರೀ ಸಂಗ ಮಾಡುಲಾಗ" ಹೇಳಿದ ಮುಕ್ರಿ,ಮರದಿನ ಯಾವಾಗಲೂ ಹೋಪ ಹಾಂಗೆ ಒಂದು ಬ್ಯಾರ್ತಿಯ ಕಾಂಬಲೆ ಹೋಗಿಪ್ಪಗ " ನಿನ್ನೆ ಹಾಂಗೆ ಹೇಳಿಕ್ಕಿ ಇಂದು ನೀನು ಎನ್ನ ಹತ್ತರಂಗೆ ಬಂದದು ಸರಿಯೋ?" ಹೇಳಿ ನೆಗೆ ಮಾಡ್ಯೊಂಡು ಕೇಳಿದ್ದಕ್ಕೆ " ಅದು ಎನಗೂ ನಿನಗೂ ಹೇಳಿದ್ದಲ್ಲ, ಲೋಕದೋರಿಂಗೆ ಹೇಳಿದರೆ ಬೇರೆಯೋರಿಂಗೆ" ಹೇಳಿತ್ತಡೊ. ಹಾಂಗಾತು ಬ್ರಾಹ್ಮಣನ   ಶುದ್ಧಂಗೊ. ಆನು ಮಿಂದಿಕ್ಕಿ ಬಂದೆ. ಅಂಬಗ ಮನೆ ಯಜಮಾನ ಬಂದಾಯಿದು. ಅವೂ ಮೀವಲೆ ಹೋದ.
ಆನು ಮಿಂದು ಜಪ ಮುಗಿಶಿಕ್ಕಿ ಕೂದೊಂಡಿಪ್ಪಗ ಅಲ್ಲಿ ಅಂದ್ರಾಣ ಪೇಪರ್ ಕಂಡತ್ತು. ತೆಗದು ಓದುವೊ ಹೇಳಿ ಕಂಡತ್ತು. ಮುಟ್ಟುಲೆ ಹೋಗ ಅಲ್ಲೇ ಇದ್ದ ಮಾಸ್ಟ್ರ" ಐನೆ ತೊಡಂಡ", ಹೇಳಿ ಮಲಯಾಳಲ್ಲಿ ಹೇಳುವಗ  ಏಕೆ ಕೇಳಿದೆ. ಅದಕ್ಕೆ "ಆ ಪೇಪರ್ ಈಗ ಯಜಮಾನ ತಂದದು,ಬಸ್ಸಿನ ಮೈಲಿಗೆ ಎಲ್ಲ ಇದ್ದು, ಕಂಡರೆ ಯಜಮಾನ ಬೈಗು,ಆದರೆ ಚೆಂಡಿ ವಸ್ತ್ರವೇ ಆದ ಕಾರಣ ತೊಂದರೆ ಇಲ್ಲೆ. ಆಸರೆ ಅವ ಬಪ್ಪಗ ಕಾಂಬಲಾಗ" ಹೇಳಿ ಹೇಳಿದ.ಅಂತೂ ಬಂದು ಸೋತತ್ತು. ಈ ಊಟ ಬೇಕಾತಿಲ್ಲೆ. ಹೇಂಗೂ ಮನುಗುಲೆ ಶಾಲಗೇ ಹೋಪದು ಹೇಳಿ ಊಟಕ್ಕೆ ಕಾದೆ. ಕೇರೆ ತಿಂಬ ರಾಜ್ಯಕ್ಕೆ ಹೋದರೆ "ನಡು ತುಂಡು ಆಯೆಕ್ಕೆನಗೆ"ಹೇಳೆಕ್ಕಡೊ.ಹಾಂಗೆ ಅಂದ್ರಾಣ ಮಟ್ಟಿಂಗೆ ಶುದ್ ಬ್ರಾಹ್ಮಣ ಆಯೆಕ್ಕಾಗಿ ಬಂತು.
ಆ ಮಾಸ್ಟ್ರನತ್ರೆ ಕೇಳಿಯೇ ಬಿಟ್ಟೆ." ಹಾಂಗಾದರೆ ಅವ ತಂದ ನೋಟುಗಳೂ ಕಾಗದಂಗಳೇ ಅಲ್ಲದೋ ಎಸ್ಟು ಕೈಗೆ ಹೋಯಿದೋ ಏನೋ? ಆರೆಲ್ಲ ಮುಟ್ಟಿದ ನೋಟುಗೊ ಅಶುದ್ಧ ಆವುತ್ತಿಲ್ಲೆಯೋ?" ಕೇಳಿದೆ. ಅದಕ್ಕೆ ಉತ್ತರ ಹೀಂಗಿತ್ತು."ಹೆರಂದ ಬಂದ ನೋಟುಗಳ ಹಾಂಗೇ ಒಳ ಮ ಕಪಾಟಿಲ್ಲಿ ಮಡಗುಲೆ ಇಲ್ಲೆ. ನೀರಿಲ್ಲಿ ಚೆಂಡಿ ಮಾಡಿ ,ೆಶಿಲ್ಲಿ ಒಣಗುಸಿ ಮತ್ತೆಯೇ ಒಳ ಮಡಗುವದು"  ಹೇಳಿದ.ಮನೆಗೆ ಹೆರಂದ ತಂದ ವಸ್ತುಗಳನ್ನೂ ಹಾಂಗೆ ಚೆಂಡಿ ಮಾಡಿಯೇ ಒಣಗುಸುವದಡೊ.ಉಪ್ಪು ಕೂಡಾ ಚೆಂಡಿ ಮಾಡಿಯೇ ಒಣಗುಸುವದಡೊ.ಅಂತೂ ಹೊಸ ಅನುಭವ ಎನಗಾತು. ಒಬ್ಬ ಅನ್ಯ ಜಾತಿಯ ಹೆಣ್ಣಿನ ಒಡನಾಟಲ್ಲಿಪ್ಪೋನು ಈ ಶುದಧ ಮುದ್ರಿಕೆ ಮಡಿಕ್ಕೊಂಬದು ವಿಶೇಷವೋ> ಅತಿರೇಕವೋ? ಹೀಂಗೆಲ್ಲ ಯೋಚುಸಿಗೊಂಡು ಹೇಂಗೋ ಬಂದದಕ್ಕೆ ಊಟ ಮುಗಿಶಿಕ್ಕಿ ಶಾಲೆಗೆ ಬಂದೆ.
ಈ ಶುದ್ದಿಯ ಆನು ಮನಗೆ ಬಂದಿಪ್ಪಗ ಅಜ್ಜಿಯ ಹತ್ತರೆ ಹೇಳಿದ್ದಕ್ಕೆ ಅಜ್ಜಿ ಹೇಳಿದ್ದೇ ಬೇರೆ. ಹಿಂದೆ ಈ ಕ್ರಮ ಎಲ್ಲಾ ಕಡೆಲ್ಲಿಯೂ ಇತ್ತು. ದವಸ ಧಾನ್ಯ ಜೀನಸು ವಸ್ತುಗಳ ಬೆಲ್ಲವನ್ನೂ ಹೀಂಗೆ ಚೆಂಡಿಮಾಡುವ ಸಂಪ್ರದಾಯ ಮದಲು ಇತ್ತು. ಉಪ್ಪಿನ ಮರಿಗೆ, ಅಥವ ದೋಣಿ ಇತ್ತು ಎಲ್ಲ ಹೇಳಿದವು.ಮೈಲಿಗೆ ವಾಸ್ತ್ರ ಹಾಕುಲೆ ಒಂದು ಮೈಲಿಗೆ ಕೋಲು ಹೇಳಿ ಇಕ್ಕು.ಶಾಲಗೆ ಹೋಪೋು ಕಟ್ಟಿಗೊಂಬ ಕೌಪೀನವು ಮಡಿವಸ್ರದ್ದು ಅಯೆಕ್ಕು.ದೇವರ ಕೋಣ್ವ್ೆ ಮಿಂದಿಕ್ಕಿಯೇ ಒಳ ಹೋಯೆಕ್ಕು ಹೇಳಿ ಕೂಡಾ ಇತ್ತು ಹೇಳಿದವು. ಅಂಬಗ ಕೆಲವು ಕಾದಂಬರಿಗಳಲ್ಲಿ ಓದಿದ್ದು ನೆಂಪಾತು.
ಈಗ ಕಾಲ ಬದಲಿದ್ದು.ಮೂಢನಂಬಿಕೆ ಅಲ್ಲದ್ದರೂ, ಹೆರಂದ ತಂದ ವಸ್ತುಗಳ ಈಗಳು ತೊಳದು ಶುಚಿ ಮಾಡುವದು ಆರೋಗ್ಯಕ್ಕೂ ಒಳ್ಳೆದು,  ಮನಗೆ ಬಂದ ಕೂಡ್ಳೇ ಮಕ್ಕೊ, ದೊಡ್ಡಾದೋರುದೆ ಸಿಕ್ಕ ಸಿಕ್ಕಲ್ಲಿ ಇಡುಕ್ಕುವದು, ಶುಚಿತ್ವದ ಬಗ್ಗೆ ಕಾಳಜಿ ಇಲ್ಲದ್ದಿಪ್ಪದು ಒಳ್ಳೆದಲ್ಲ  ಹೇಳಿ ಕಾಣುತ್ತು. 
   

No comments:

Post a Comment