Saturday, April 6, 2013

ಬಯಕೆ ನೂರಾದರೆ

                                                               ಬಯಕೆ ನೂರಾದರೆ
ನಾವು ಆಶಾಜೀವಿಗೊ ಆಗಿರೆಕ್ಕು,ನಿಜ.ಜೀವನಲ್ಲಿ ನವಗೆ ನಿರಾಶೆ ಹುಟ್ಟುಲಾಗ.ಏನನ್ನಾದರೂ ಸಾಧುಸೆಕ್ಕು,ಹತ್ತು ಜನರೊಟ್ಟಿಂಗೆ ನಾವುದೇ ಸೇರೆಕ್ಕು:ಹಿತವಾಗಿ ಮಿತವಾಗಿ ಸುಖವ ಅನುಭವುಸೆಕ್ಕು ಹೇಳುವ ಆಶೆ ತಪ್ಪಲ್ಲ. ಯಾವುದೂ ಬೇಡ ಹೇಳುವ ಮನೋಭಾವ ಬಂದರೆ ವೈರಾಗ್ಯ ಹೇಳುತ್ತವು. ನಾವು ಎಂತಗೆ ಹುಟ್ಟಿದ್ದು, ನಮ್ಮಂದ ಈ ಲೋಕಕ್ಕೆ ಎಂತ ಆಯೆಕ್ಕಪ್ಪ ಹೇಳುವ ಜಿಜ್ಞಾಸೆ ನಮ್ಮ ಇದರ ಎಲ್ಲ ಯೋಚನೆ ಮಾಡುಸುತ್ತು. ಈ ಪ್ರಪಂಚಂದ ,ಪ್ರಕೃತಿಂದ ತುಂಬ ತುಂಬ ಉಪಕಾರ ಹೊಂದುತ್ತು! ಅಮ್ಮ ಅಪ್ಪ  ಇವರ ಸಹಾಯಂದ ಪ್ರಪಂಚ ನೋಡುಲೆಡಿಗಾತು. ಮೊದಲ ಉಪಕಾರ ಅವರಿಂದಾದರೆ, ಮತ್ತೆ ಮನೆಯ ಇತರ ಜನಂಗೊ. ಎಲ್ಲೋರ ಸಹಾಯಂದ ಹೇರಾಣ ಜನಂಗಳ ಸಂಪರ್ಕ ಸಿಕ್ಕುತ್ತು. ಅವರೆಲ್ಲ ಒಡನಾಟಂದ ಲೋಕ ಜ್ಞಾನ ಸಿಕ್ಕುತ್ತು. ಆ ವರೆಗೆ ಎಲ್ಲೋರಿಂದಲೂ ಉಪಕಾರ ಹೊಂದಿದ ಮೇಲೆ ನಾವು ಎಲ್ಲೋರ ಹಾಂಗೆ ಸಾಮಾನ್ಯ ಮನುಷ್ಯರಾವುತ್ತು. ಸಮಾಜ ನವಗೆ ಕೊಟ್ಟ ಸಹಾಯವ ಬೇರೆಯೋರಿಂಗೆ ನಾವುದೇ ಹಂಚಿಗೊಂಡರೆ ನಾವುದೆ ಸಮಾಜಕ್ಕೆ ಉಪಕಾರ ಮಾಡಿದ ಹಾಂಗಾವುತ್ತು. ಹಲವು ವ್ಯಕ್ತಿಗಳಿಂದಲೇ ಒಂದು ಸಮಾಜ ಬೆಳವದಲ್ಲದೋ!
       ಸಾಮಾನ್ಯವಾಗಿ ಹೆಚ್ಚಿನೋರುದೇ ಬೇರೆಯೋರ ಸಹಾಯಂದ ನಡವಲೆ ಕಲ್ತ ಮೇಲೆ ನವಗೇ ನಡವಲೆಡಿತ್ತು. ಎಡಿಯೆಕ್ಕುಸ್ವಾವಲಂಬಿಗೊ ಆವುತ್ತು.ಹೆರಿಯೋರಿಂದ ಬಂದ  ಕೃಷಿ ತೋಟ ಹೀಂಗೆಲ್ಲ ಇದ್ದರೆ ಹೆರಿಯೋರ ಮಾರ್ಗದರ್ಶನಲ್ಲಿ ಅದರ ಮುಂದುವರುಸುವದು ಸಾಧಾರಣ ಎಲ್ಲೋರೂ ನಡಕ್ಕೊಂಬ ಪದ್ಧತಿ.ಬದುಕ್ಕಿಲಿಪ್ಪ ದಾರಿಮಾಂತ್ರ ಅಲ್ಲ ಬದುಕ್ಕು ಸುಗಮ ಅಪ್ಪಲ್ಲೆ, ಐಷಾರಾಮಿ ಜೀವನ ನಡೆಶುಲೆ ನಮ್ಮ ಮನಸ್ಸು ಮಾಡುತ್ತು. ಹೆರ ಪ್ರಪಂಚಲ್ಲಿ ಬದುಕ್ಕುಲೆ ಅನೇಕ ದಾರಿಗೊ ಇದ್ದು. ಉದ್ಯೋಗ ಸಿಕ್ಕೆಕ್ಕಾರೆವ್ ಪೇಟಗೆ ಹೋಯೆಕ್ಕು. ಹಳ್ಳಿಲ್ಲಿದ್ದೋರು ಒಂದರಿ ಪೇಟಗೆ ಹೋದರೆ ಮತ್ತೆ ಹಳ್ಳಿಗೆ ಬಪ್ಪಲೆ ಇಷ್ಟ ಪಡುತ್ತವಿಲ್ಲೆ. ಬೆವರು ಸುರಿಸಿ ದುಡಿಯೆಡ ಪೈಸೆ ಕೊಟ್ಟರೆ ಎಲ್ಲ ಸಿಕ್ಕುತ್ತು. ಒಂದು ಆಶೆ ಪೂರೈಸಿ ಅಪ್ಪಗ ಹುಚ್ಚು ಕುದುರೆಯ ಹಾಂಗೆ ಮನಸ್ಸು ಇನ್ನೊಂದು, ಮತ್ತೊಂದು ಹೀಂಗೆ ತುಂಬಾ ಬಯಸಿದ್ದರ ಎಲ್ಲ ಪಡೆವಲೆ ಸದಾ ಹಂಬಲುಸುತ್ತು.ಆಸೆ ಕುದುರೆ ಬೆನ್ನೇರಿ ಹೋಪಲೆ ಶುರುಮಾಡಿದರೆ ಅದಕ್ಕೆ ಲಂಗು ಲಗಾಮು ಇಲ್ಲೆ!ಪುರಾಣ ಇತಿಹಾಸಂಗೊ ನವಗೆ ಪಾಠ ಹೇಳಿದ್ದು.
        ಜೀವನ ಸಾಗುಸುಲೆ ತಕ್ಕಷ್ಟು ಸಿಕ್ಕಿದ ಮೇಲೆ ನಾ:ಳಂಗಾಣ ನೆಂಪು ಬತ್ತು. ಹಾಂಗೆ ಕೂಡೂ ಹಾಕುಲೆ ಹೆರಡುತ್ತು. ಸರಿ ದಾರಿಲ್ಲಿ  ಆಸೆ ನೆರವೇರದ್ದರೆ ಅಡ್ಡ ದಾರಿಯ ಹುಡುಕ್ಕುತ್ತು. ಇದೇ ಯೋಚನೆಲ್ಲಿ ನಮ್ಮ ಸುತ್ತು ಮುತ್ತಲಿನ ಸಮಾಜವ ಮರೆತ್ತು.ಊಟಕ್ಕೂ ಗತಿಯಿಲ್ಲದ್ದೋರಿಂಗೆ ಸಹಾಯ ಮಾಡುಲೆ,ಏನಾದರೂ ಸಾಮಾಜಿಕ ಆವಶ್ಯಕತೆಗೊಕ್ಕೆ ಸಹಾಯ ಮಾಡುಲೆ,ಸ್ವಯಂಸೇವಕರಾಗಿ ದುಡಿವಲೆ ಆಸ್ಪದ ಇದ್ದರೂ ಮರದು ನಮ್ಮ ಹಂಬಲ ಮುಂದುವರುಸುವಗ ಸಮಾಜಕ್ಕೆ ನಾವೇನೂ ಕೊಡುತ್ತಿಲ್ಲೆ,ಋಣ ಬಾಕಿ ಆವುತ್ತು.  ಹಿಂದಾಣೊರು ಹೇಳಿತ್ತಿದ್ದವು. ಇದ್ದಪ್ಪಗ ತನ್ನಲ್ಲಿದ್ದು ಎಲ್ಲೋರ ಎದುರಂದಲೇ ಮನಸೇಚ್ಛೆ ತಿಂಬಲಾಗ ಹೇಳಿ ಮಾಂತ್ರ ಅಲ್ಲ ಕೊಡುಲೆ ಮನಸ್ಸಿಲ್ಲದ್ದರೆ ಅವು ಕಾಣದ್ದ ಹಾಂಗೆ ತಿನ್ನು ಹೇಳಿ. ಅದರಿಂದಲೇ ಕಳ್ಳ ಹಣ ತುಂಬಿದ್ದಾಗಿರೆಕ್ಕು!ತನ್ನಲ್ಲಿಪ್ಪದರ ಇನ್ನೊಬ್ಬರಿಂಗೆ ಕೊಟ್ಟು ತಿಂಬದರಿಂದ ನವಗಪ್ಪ ತೃಪ್ತಿಯ ಯೋಚನೆ ಮಾಡಿದರೆ ಆರಿಂಗೂ ಕೊಟ್ಟು ತಿಂಬಲೆ ಮನಸ್ಸಕ್ಕು. ಗಾಂಧಿ ತವ ಹೇಳುತ್ತವು. ಅಪರಿಗ್ರಹ! ಅಂದಂದಿಂಗೆ ಬೇಕಾದ್ದರ ಅಂದಂದೇ ತಂದು ಹಿತವಾಗಿ ಮಿತವಾಗಿ ತಿಂದರೆ ಬಪ್ಪದು ತೃಪ್ತಿ ಸಂತೋಷ! ಮಿತಿಮೀರಿ ಮೂಗಿನವರೆಗೆ ತಿಂದರೆ ಅಜೀರ್ಣವೂ ಅಕ್ಕು. ಒಂದು ರೀತಿಯ ಆತ್ಮ ವಂಚನೆಯೂ ಆದ ಹಾಂಗೆ!ದೈವ ನಿರ್ಮಿತ ಪ್ರಕೃತಿಲ್ಲಿ ಸಿಕ್ಕುವ, ನಾವು ಬೆಳೆವ ಆಹಾರ ಪದಾರ್ಥಂಗೊ ಪ್ರಕೃತಿ ನವಗೆ ಕೊಡುವ ಸಾಲ!
ಮಾತೃ ಋಣ,ಪಿತೃ ಋಣ, ದೈವ ಋಣ ಹೀಂಗೆ ನಮ್ಮ ಬದುಕ್ಕಿಲ್ಲಿ ನಾವು ಋಣಕ್ಕೆ ಪಾತ್ರರಾವುತ್ತು. ಭೂಮಿಲ್ಲಿ ಸಿಕ್ಕುವ ಉತ್ಪತ್ತಿಯ್ತೂ ದೇವರು ನವಗೆ ಕೊಡುವ ಸಾಲ. ಅದಕ್ಕೆ ನಮ್ಮಷ್ಟೆ ಹಕ್ಕುದಾರರು ಎಲ್ಲೋರು!ನಾವು ತಿಂಬಗ ಉಪವಾಸ ಇಪ್ಪ ಇನ್ನೊಂದು ವಿಭಾಗವ ಮರದರೆ ದೇವರ ಮರದ ಹಾಂಗೆ ಆವುತ್ತಿಲ್ಲೆಯೋ! ಒಂದೇ ಮನೆಲ್ಲಿಪ್ಪೋರು ಒಬ್ಬಕ್ಕೊಬ್ಬ ಹಂಚಿ ತಿಂದುಗೊಂಬದರ ಬದಲು ಮಾಡಿ ಮಡಗಿದ್ದರ ಮದಲು ಆನು ತಿಂದುಗೊಳ್ತೆ ಹೇಳಿ ಎಲ್ಲೋರೂ ಬಂದು ಮುಗಿಶಿಕ್ಕಿ ಹೋಪಗ ಮತ್ತೆ ಬಂದೋರಿಂಗೆ ಉಪವಾಸ!.ನಮ್ಮ ಹಾಂಗೆ ಎಲ್ಲೋರೂ ಇದಕ್ಕೆ ಭಾಗಿಗೊ ಹೇಳಿ ಉಂಡು ತಿಂದು ಒಂದು ಮನೆಲ್ಲಿ ನಾವು ಮಾಡಡದೋ? ಹಾಂಗೆ ಎಲ್ಲೋರೂ ಗ್ರೇಶಿದರೆ ಲೋಕಲ್ಲಿ ಬಡತನ ಹೇಳುವದು ಒಳಿಯ!
   ಎನ್ನ ಮನೆ, ಎನ್ನ ಮಕ್ಕೊ, ಎನ್ನ ಕುಟುಂಬ ಹೀಂಗೆ ಹೆಜ್ಜೆಯಾಗಿ ಸ್ವಾರ್ಥವ ಸಾಧುಸುವದರಿಂದ ದಿಕ್ಕಿಲ್ಲದ್ದೋರು ಉಪವಾಸ ಇರೆಕ್ಕಾವುತ್ತು. ಎನ್ನ ಹಾಂಗೆ ಎಲ್ಲೋರೂ ಹೇಳುವ ಯೋಚನೆ ಎಲ್ಲೋರು ಮಾಡ್ಯೊಂಡರೆ ಇಲ್ಲದ್ದೋರ ವಿಭಾಗವೇ ಇಲ್ಲದ್ದೆ ಆಗದೋ?ಎನ್ನದು ಎಂಗಳದ್ದು ಹೇಳುವದು ಮನೆಯೊಳ ಮಾಂತ್ರ ಅಲ್ಲ ದೇಶ ಮಾಂತ್ರ ದೇಶ ವ್ಯಾಪ್ಯಿಯಾಗಿ ಬೆಳದರೆ ಲೋಕಲ್ಲಿ ಸುಖಶಾಂತಿ ನೆಲಸುಗು ಹೇಳಿ ಕಾಣುತ್ತು. ಷಡ್ವೈರಿಗಳಲ್ಲಿ ಒಂದೇ ಹಂತಲ್ಲಿ ಎಲ್ಲವನ್ನೂ ಒಂದೇಸರ್ತಿ ಬಿಡುಲೆ ಎಡಿಯದ್ದರೂ ಹಂತ ಹಂತವಾಗಿನಮ್ಮ ಹಿಡಿತಲ್ಲಿ ಮಡಿಕ್ಕೊಂಡರೆ ಎಲ್ಲ ಸರಿಯಕ್ಕು ಹೇಳಿ ಕಾಣುತ್ತು. ಮೊದಲು ನಾವು,ಮತ್ತೆ ಮನೆಯೋರು,ಊರೋರು ಇಡೀ ಸಮಾಜ ಹೀಂಗೆ ದೇಶ ವಿಶ್ವ ವ್ಯಾಪ್ತಿಯಾಗಿ ಷಡ್ವೈರಿಗಳ ಗೆದ್ದುಗೊಂಡರೆ ವಿಶ್ವ ಭ್ರಾತೃತ್ವ ಬೆಳೆಶ್ಯೊಂಡರೆ, ಜೀವನ ಸಾರ್ಥಕ ಅಕ್ಕು, ನಮ್ಮ ಮತ್ತೆ ಮತ್ತೆ ಜನ್ಮ, ಮರಿಜನ್ಮ ಹೀಂಗೆ ಒದ್ದಾಡುವ ಕಷ್ಟವೂ ಕಡಮ್ಮೆ ಅಕ್ಕು!
       ಒಂದಕ್ಕೊಂದು ಪೂರಕವಾಗಿ ಆಸೆ,( ಕಾಮ) ಬಯಸಿದ್ದು ಸಿಕ್ಕದ್ದರೆ ಕ್ರೋಧ, ದುಃಖ,ಸಿಕ್ಕಿದರೆ ಅದರ ಮೇಲೆ ಮೋಹ,ಬೇರೊಬ್ಬ ಅದಕ್ಕಿಂತ ವಿಶೇಷವಾದ್ದರ ಪಡದರೆ ಮತ್ಸರ,ಎನ್ನತ್ರೆ ಇದ್ದು ಹೇಳುವ ಮದ,ಆರಿಂಗು ಕೊಡೆ,ಹೇಳಿ ಲೋಭ,ಹೀಂಗೆ ಒಂದಕ್ಕೊಂದು ಸಂಕೋಲೆಯ ಹಾಂಗೆ ನಮ್ಮ ನೆಮ್ಮದಿಯ ದೂರ ಮಾಡುತ್ತು.ಇದ್ದದರ ರಕ್ಷಣೆಗಾಗಿ ಕಾವಲು! ಒರಕ್ಕಿಲ್ಲೆ!ಒಂದೊಂದು ರೋಗ ರುಜಿನ ಬಂದೊದಗುತ್ತು, ಹಾಂಗೆ ಆಸೆ ಕೈಗೂಡುಸುಲೆ ಬೇಕಾಗಿ ಅದರ ಹಿಂದೆ ಹೋಗಿ,ಆರೋಗ್ಯವೂ ನೆಮ್ಮದಿಯೂ ಇಲ್ಲದ್ದಾವುತ್ತು. ನಾಳೆಯಾಣ ಚಿಂತೆ ಬೇಕು. ಬೇಡ ಹೇಳಿ ಅಲ್ಲ.ಅದಕ್ಕಾಗಿ ಇಡೀ ವರ್ಷಕ್ಕೆ ಬೇಕಾದ್ದರ ತಂದು ಮಡಗುಲೆ ಹೆರಟರೆ, ಹಾಂಗೆ ದಾಸ್ತಾನು ಮಾಡಿದ್ದು ಎಲಿ ಹೆಗ್ಳಂಗಳ ಪಾಲಾಗಿಯೋ, ಅಥವಾ ಹಾಳಗಿಯೋ ಹೋದರೆ ಕದ್ದು ಹೋದರೆ, ಆರಿಂಗೂ ಇಲ್ಲದ್ದೆ ಅಕ್ಕನ್ನೆ! ಏನೋ ಆಸೆಂದ ತುಂಬಾ ಬೆಲೆ ಬಾಳುವ ಚಿನ್ನವ ಮನೆಲ್ಲಿ ಮಡಗುಲೆ ಹೆದರಿ ಬೇಂಕಿಲ್ಲಿ ಮಡಗುವದು.ಅಕಸ್ಮಾತ್ ಮನೆಗೆ ತಂದದು ಗೊಂತಾಗಿ ಸುಲಭ ಸಂಪಾದನೆಗೆ ಹೆರಡುವ ಕಳ್ಳರ ಪಾಲಪ್ಪದು,ಎಲ್ಲ ನಿತ್ಯ ನಡಕ್ಕೊಂಡಿದ್ದರೂ ಕೂಡಿ ಹಾಕುವ ಹುಚ್ಚು ಬಿಟ್ಟು ಹೋವುತ್ತಿಲ್ಲೆ.ಅವಕ್ಕೂ ನಮ್ಮತ್ರೆ ಹೆಚ್ಚಿಪ್ಪದು ಕಾಂಬಗ ಆಸ್ವ್ ಆವುತ್ತನ್ನೆ!ಅಂಬಗ ಎಲ್ಲವೂ ಆಸೆಯ ಬೆನ್ನುಹತ್ತಿದರೆ ಒದಗುವ ಹಾನಿಗೊ ದುರಂತಂಗೊ.ಕೂಡಿ ಹಾಕಿದ್ದು ಇಲ್ಲದ್ದಪ್ಪಗ ಬೇಜಾರು ಅಪ್ಪದು ಸಹಜ. ಅದರ ಮತ್ತೆ ಪಡವಲೆ ತಲೆ ಖರ್ಚು. ಮಿತವಾಗಿದ್ದರೆ ಆರೂ ಕಣ್ಣು ಹಾಕಲಿದ್ದೋ? ನಾವು ಮಾಂತ್ರ ವಿಶ್ವ ಮಾನವ ಜನಾಂಗವೇ ಬುದ್ಧಿ ಜೀವಿಗೊ ಎನಿಸಿದೋರೇ ಆಸೆಯ ಬೆನ್ನು ಹತ್ತಿಯೇ ಸೋತದು! ಸೋಲುವದು.ಆದರೂ ಬುದ್ಧಿ ಬಯಿಂದಿಲ್ಲೆ.
  ಜೀವನಲ್ಲಿ ನಿರಾಶೆಯಿರೆಕ್ಕು ಹೇಳಿ ಹೇಳುತ್ತಿಲ್ಲೆ. ಹೆಚ್ಚೆಚ್ಚು ಪಡವ ದುರಾಸೆ ಇಪ್ಪಲಾಗ ಹೇಳಿ ಅಭಿಪ್ರಾಯ. ಒಬ್ಬ ಪಡದ ಹೇಳಿ ಅಪ್ಪಗ ಅವಂದ ಹೆಚ್ಚು ಆನು ಹೊಂದೆಕ್ಕು ಹೇಳುವ ಆಸೆ ಹೊಟ್ಟೆ ಕಿಚ್ಚಿಂಗೆ ದಾರಿ ಮಾಡುತ್ತಿಲ್ಲೆಯೋ?ಇನ್ನೂ, ಮತ್ತೂ ಹೆಚ್ಚು ಪಡೆಯೆಕ್ಕು ಹೇಳಿ ಎಲ್ಲೋರೂ ಗ್ರೇಶಿದರೆ ಒಬ್ಬಕ್ಕೊಬ್ಬಂಗೆ ಸ್ಪರ್ಧೆ ಉಂಟಾವುತ್ತಿಲ್ಲೆಯೋ? ಎಲ್ಲೋರೂ ಸ್ವಾರ್ಥವನ್ನೇ ಗ್ರೇಶಿದರೆ ಲೋಕಹಿತವ ಬಯಸುವೋರು ಆರು?ನಮ್ಮಲ್ಲಿ ವಿಶಾಲ ಭಾವನೆ ಹುಟ್ಟುವದು ಯಾವಾಗ?ಹೃದಯ ವೈಶಾಲ್ಯ ಬಪ್ಪದು ಹೇಂಗೆ? ಹೀಂಗೇ ಮುಂದುವರುದರೆ ಮುಂದಾಣ ಜನಾಂಗವು ಇದನ್ನೇ ಜೀವನದ ಧ್ಯೇಯವಾಗಿ ತೆಕ್ಕೊಂಗನ್ನೆ!ಹನಿಕೂಡಿದರೆ ಹಳ್ಳ ಹೇಳುತ್ತವು. ಎಲ್ಲೋರೂ ಹೃದಯ ವಿಶಾಲತೆಂದ ತನ್ನ ಹಿತದೊಟ್ಟಿಂಗೆ ಲೀಕ ಹಿತವನ್ನೂ ಯೋಚನೆ ಮಾಡಿದರೆ ಆ ಮಟ್ಟಿಂಗೆ ಪ್ರಯತ್ನ ಮಾಡಿದರೆ ಕಾರ್ಯ ಸಾಧನೆ ಅಕ್ಕು ಹೇಳಿ ಕಾಣುತ್ತು.
             ವಿಶಾಲ ಸಮುದ್ರಲ್ಲೇ "ಎನ್ನದು, ತನ್ನದು" ಹೇಳಿ ಹಕ್ಕು ಸ್ಥಾಪನೆಗೆ ಹೊರಟು ಪ್ರಪಂಚವೇ ಅಲ್ಲೋಲ ಕಳ್ಳೊಲ! ಎಲ್ಲ ಗತಾನುಗತಿಕ!ದೈವೇಚ್ಛೆಯೇ ಹಾಂಗೋ ಎಂತದೋ!ಬೇಡನಾಗಿದ್ದೋನ ರಾಮಾಯಣ ಬರವ ಹಾಂಗೆ ಮಾಡಿದ್ದೂ ಅವನೆ. ದಾರಿಲ್ಲಿ ಹೋಪಲೆ ಮಾಡಿದ್ದು ದಾರಿ ತೋರುಸಿದ್ದು ಎಲ್ಲ ಅವನೇ!ಜ್ಞಾನುಗೊ ಒಂದು ಹಾದಿಲ್ಲಿ ಹೋದರೆ,ಬುದ್ಧಿಜೀವಿಗೊ ಹೇಳುವೋರು ಎಂಗೊ ನಡವಾ ದಾರಿಯೇ ಸರಿಯಾದ್ದು ಹೇಳಿ ಮುಂದರಿದು ಸಿಕ್ಕಿ ಬಿದ್ದರೆ, "ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು "ಹೇಳಿ ಅಕ್ಕು.ಬಂದ ದಾರಿ ಸರಿಯಾಯಿದಿಲ್ಲೆ ಹೇಳಿ ತಿದ್ದಿಗೊಂಡರೆ ಮತ್ತೆ ಪಶ್ಚಾತ್ತಾಪ ಪಡೆಕ್ಕಾಗ!ನೂರೊಂದು ಬಯಕೆಯ ಬೆನ್ನು ಹಿಡುದು ಕಡೆಂಗೆ ನಮ್ಮ ಬಯಕೆ ನುಚ್ಚು ನೂರಪ್ಪದಕ್ಕೆ ಮದಲು ಎಚ್ಚತ್ತುಗೊಂಡರೆ "ಲೋಕಾಸಮಸ್ತಾ ಸುಖಿನೋ ಭವಂತಿ" ಹೇಳಿ ಆಗದೋ!

No comments:

Post a Comment