Wednesday, February 27, 2013

ಕೋಟಿ ಕಳ್ಳನೋ? ಕಳ್ಳ ಆದ್ದು ಹೇಂಗೆ?

                 ಕೋಟಿ ಕಳ್ಳನೋ  ಕಳ್ಳಆದ್ದು ಹೇಂಗೆ?
     ಎಂಗಳ ಜಾಗೆಲ್ಲೇ ಒಕ್ಕಲು ಕೂದೊಂಡು ಕೆಲಸ ಮಾಡ್ಯೊಂಡು ಇದ್ದ ಮನುಷ್ಯ ಕೋಟಿ ಹೇಳಿದರೆ.ಹೆಂಡತ್ತಿ ರಜ ಕೆಲಸಗಳ್ಳಿ. ಬತ್ತ ಮೆರಿವಲೋ, ಸೊಪ್ಪು ತಪ್ಪಲೋ ಹೇಳಿದರೆ ಬಾರ. ಕೋಟಿ ಮಾಂತ್ರ ಪಾಪ. ಹೆಚ್ಚು ಚುರುಕು ಅಲ್ಲದ್ದರೂ ನಿಧಾನಕ್ಕೆ ಹೇಳಿದ ಕೆಲಸ ಮಾಡುಗು. ಅಂಬಗ ಒಳ್ಳೆ ಕೆಲಸದೋವಕ್ಕೆ ಎರಡು ರುಪಾಯಿ ಸಂಬಳ ಆದರೆ ಜಾಗೆಲ್ಲೇ ಕೂದೊಂಡು ನಿತ್ಯ ಕೆಲಸ ಮಾಡುವ ಜನ ಆದಕಾರಣ ಒಂದೂವರೆ ರುಪಾಯಿ ಸಂಬಳ ಕೊಟ್ಟುಗೊಂಡಿತ್ತು. ಮದಲೆ ಹತ್ತರೆ ಒಂದು ಹೋಟ್ಳಿಲ್ಲಿ ಕೆಲಸ ಮಾಡ್ಯೊಂಡು ಇತ್ತದೋ. ಮದುವೆ ಆಗಿ ಒಂದು ಮಗು ಆದಮೇಲೆ ಎಂಗಳಲ್ಲಿಗೆ ಬಂದದು.ಕೆಲಸ ಮಾಡಿದ್ದು ಸರಿಯಾಗದ್ದರೆ ಏನಾದರೂ ಹೇಳಿದರೆ ಎದುರುತ್ತರ ಕೊಡುವ ಮನುಷಯ ಅಲ್ಲ. ಆನು ಅಂಬಗ ಮಾಯಿಪ್ಪಾಡಿಲ್ಲಿ ಅಧ್ಯಾಪಕರ ತರಬೇತಿಗೆ ಸೇರಿತ್ತಿದ್ದೆ. ವಾಕ್ಕೊಂದರಿ ಕೂಡಾ ಬಪ್ಪಲೆ ಬಿಡವು. ತಿಂಗಳಿಂಗೊಂದರಿಯೋ ಎರಡು ತಿಂಗಳಿಂಗೊಂದರಿಯೋ ಸರಿಯಾ ಕಾಣ ಕೊಟ್ಟು ಮನೆಗೆ ಬರೆಕ್ಕಾಗಿತ್ತು.ಬುನಾದಿ ಶಿಕ್ಷಣ ಹೇಳಿದರೆ ಕೆಲಸ ಮಾಡ್ಯೊಂಡುಕಲಿವದು. ಹತ್ತಿಯ  ಬತ್ತಿ ಮಾಡಿ ಚರಕಲ್ಲಿಯೋ ತಕಲಿಲ್ಲಿಯೋ ತಿಂಳಿಂಗೆ ಇಷ್ಟು ಗಂಡಿ ಹೇಳಿ ಕೊಡೆಕ್ಕಾವುತ್ತು. ಅಡಿಗೆ ಕೂಡಾ ಎಂಗಳೇ ಮಾಡ್ಯೊಂಡು ಊಟ ಉಣ್ಣೆಕ್ಕು. ಹೆಡ್ಮಾಷ್ಟ್ರನೂ ತುಂಬ ಸ್ಟ್ರಿಕ್ಟ್.ಅಪ್ಪಂಗೆ ಅಲ್ಲಿ ಇಲ್ಲಿ ,ನಂಬ್ರ ಹೇಳಿ ಯಾವಾಗಳೂ ಹೋಯೆಕ್ಕಾಗ್ಯೋಂಡಿತ್ತು. ಇರುಳು ಹತ್ತು ಗಂಟೆಗೋ ಮನೆಗೆ ಎತ್ತುಗು.ಮತ್ತೆ ಊಟ. ಅಂತೂ ಯಾವಾಗಳೂ ಬಿಸಿ.
ಅಂದುದಮನೆಗೆ ಬಂದು ಉಂಡೊಂಡಿಪ್ಪಗ ತೋಟಂದ ಆಚೆ ಮನೆಯೋರು ದಿನಿಗೇಳಿದವಡೊ. ಕೈತೊಳದು ಹೋಗಿ ನೋಡಿರೆ, ಆಚೆ ತೋಟ ಕಾವಲಿಂಗೆ ಬಂದೋರು, ಕೋಟಿಯ ತೋಟಲ್ಲಿ ಕಂಡವಡ. ಬಾಳೆ ಸರಪ್ಪು ಹರಿವ ಶಬ್ದ ಕೇಳಿಓಡಿ ಬಂದು ನೋಡುವಗ ಕಂಡದಡೊ. ಇರುಳು ತೋಟ ಕಾವ;ಲಿಂಗಂತೂ ಬಂದದಲ್ಲ. ಕದಿವಲೇ ಇರೆಕ್ಕು ಹೇಳಿ ಹೀಂಗೇ ಬಿಟ್ಟರೆ ಆಗ ಹಿಡುಕ್ಕೊಂಡೋಗಿ ಪೋಲಿಸಿಂಗೆ ಕೊಡೆಕ್ಕು ಹೇ:ಳಿದವಡೊ.ಕಳ್ಳ ಹೇಳುಲೆ ರುಜುವಾತು ಎಂತ ಇದ್ದು ಕೇಳಿದ್ದಕ್ಕೆ,ಆಚೀಚ ತೋಟದೋರೆಲ್ಲ ಒಟ್ಟು ಸೇರಿ ಆಲೋಚನೆ ಮಾಡಿದವಡೊ. ಅಂಬಗ ಅಕ್ಕೆ ಹೊಳದ್ದು, ಮರ ಹತ್ತಿ ನಾಲ್ಕೈದು ಕೊನೆ ಅಡಕ್ಕೆ ಆದರೂ ತೆಗವದು. ಕಳ್ಳನ ಹಿಡುಕ್ಕೊಂಡು ಅಡಕ್ಕೆಯನ್ನೂ ತೆಕ್ೊಂಡು, ಬದಿಯಡ್ಕ ಹೇಳಿರೆ ಹತ್ತು ಮೈಲು ನಡೆಯೆಕ್ಕು. ಕಳ್ಳನ ಹಿಡುಕ್ಕೊಂಡು ಹೋಪಗ ಮಾತಾಡಿದ್ದೇ ಇಲ್ಲೆಡೊ. ಎಷ್ಟೊಂದು ಪಾಪ ಹೇಳಿ ಯೋಚನೆ ಮಾಡುಲಕ್ಕನ್ನೆ.ಇರುಳೇ ಅಪ್ಪನೂ ಮತ್ತೊಂದು ಆಳೂ ಹೋವಡೊ. ಕಳ್ಳನ ಅಲ್ಲ ಒಪ್ಪುಸಿದವಡೊ. ಉದಿಯಾದರೆ ಹೇಂಗೆ ಹೇಳುವದು! ಅಂತೂ ಉದಿಯಪ್ಪಗ ಮನೆಗೆ ಂದವಡೊ.
ಮರದಿನ ಶುದ್ದಿ ಆದ್ದು ಹೇಂಗೆ ಹೇಳಿರೆ ಸಂಬಳ ಕೇಳುಲೆ ಬಂದದರ ತುಂಬಾ ಇರುಳು ವರೆಗೆ ಕಾಯಿಸಿ, ಸಂಬಳ ಕೇಳಿದ್ದಕ್ಕೆ ಕೋಪಲ್ಲಿ ನಾಲ್ಕು ಬಡುದು, ಸ್ಟೇಶನಿಂಗೆ ಕೊಂಡು ಹೋಯಿದವಡೊ ಹೇಳಿ. ಆ ಸಮಯಲ್ಲೆ ರಜ ಕಮ್ಯೂನಿಶ್ಟ್ ಪ್ರಭಾವ ಜಾಸ್ತಿ ಇತ್ತು. ಪಾಪದೋರ ಸುಮ್ಮನೆ ಕಳ್ಳ ಹೇಳಿ ಮಾಡಿ ರಿಮಾಂಡಿಂಗೆ ಕಳುಸಿದ್ದು ತಪ್ಪು.ಹೇಳಿತೂಂಡು ಲೀಡರುಗೊ ಎಲ್ಲ ಮನಗೆ ದಾಳಿ ಶುರು ಮಾಡಿದವಡೊ. ಎನ್ನ ದೊಡ್ಡಪ್ಪನೇ ನಾಲ್ಕು ಗುದ್ದು ಹಾಕದ್ದು. ಅದಕ್ಕೆ ಕಷಮೆ ಕೇಳುವದರೊಟ್ಟಿಂಗೆ ಒಂದು ಗುದ್ದಿಂಗೆ ಐನೂರು ರೂಪಾಯಿಯ ಹಾಂಗೆ ದಂಡ ಕೊಡೆಕ್ಕು ಹೇಳಿ ಕೇಳಿದವಡೊ. ದೊಡ್ಡಪ್ಪ ದಂಡ ಕೊಟ್ಟೂ ಆತು. ಇಬ್ರು ಸಾಕ್ಷಿದಾರರ ಕಕ್ಕೊಂಡು ಬರೆಕ್ಕು ಹೇಳಿದ ಕಾರಣ ಕೇಸ್ ದೋಡ್ಡ ಮಾಡುಲೆ ಸಲಹೆ ಕೊಟ್ಟೋರು ಅರುದೆ ಒಪ್ಪುತ್ತವಿಲ್ಲೆ. ಮ ಹತ್ತಿ ಅಡಕ್ಕೆ ತೆಗದವನ ಅಂಗುಡಿಗೆ ಬೀಗ ಹಾಕಿ ಬಂದರೆ ಕೊಲ್ಲೆವೆಯೋ ಹೇಳಿ ಬೆದರಿಕೆ ಹಾಕಿದವಡೊ.ಅಪ್ಪನೂ ಬದಿಯಡ್ಕಂದ ಬಪ್ಪಗ ದಾರಿಲ್ಲಿ ಕಾದು ಕೂದು ಸುಮ್ಮನೆ ಪಾಪ ಮನುಷ್ಯನ ಮೇಲೆ ಎಂತಗೆ ಹೀಂಗೆ ಕೇಸ್ ಮಾಡಿದ್ದು? ಕೇಸ್ ಹಿಂದೆ ತೆಗದು ಕೋಟಗೆ  ದಂಡ ಕೊಡೆಕ್ಕು ಹೇಳಿ ಜೋರೇ ಜೋರಡೊ.ಅಪ್ಪ ಅಕ್ಕೆ" ಈ ವಠಾರಲ್ಲಿ ಎನ್ನ ಗೊಂತಿಲ್ಲದ್ದೋರು ಆರುದೆ ಇಲ್ಲೆ.ಇಂತಹ ಅನ್ಯಾಯ ಮಾಡುವ ಬುದ್ಧಿ ಎನಗಿಲ್ಲೆ. ಆಚೆಮನೆ ತೋಟದೋರು ಎನ್ ತೋಟಲ್ಲಿ ಕಂಡದು. ಆ ವಿಷಯ ಕೋಟಿಯೂ ಒಪ್ಪುತ್ತನ್ನೆ. ಆನು ದಂವೂ ಕೊಡೆ. ಕೇನ್ನ ಹಂದೆ ತೆಕ್ಕೊಳ್ಳೆ. ನಿಂಗೊ ಮಾಡುವರ ಮಾಡಿ"ಹೇಳುವಗ ಅವರ ಪೈಕಿ ಒಬ್ಬ" ಇವ್ವು ಹಾಂಗಿಪ್ಪೋವಲ್ಲ.ಒಳ್ಳೆ ಜನ ಇವರ ಸುದ್ದಿಗೆ ಹೋಪದ ಸರಿಯಾವುತ್ತಿಲ್ಲೆ "ಹೇಳಿ ಮತ್ತೆ ಎಲ್ಲೋರುದೆ ಜಾಲಿಂದ ಅಕ್ಕೆ ಪೂಜಲೆ ಬಂದೋವು ಹಾಂಗೇ ಹೋದವಡ. ಈ ವಿಷ್ಲ್ಿ ಒಗ್ಣೆ ಹಾಕುಲು ಹೋಟ್ಳು ಮಡಿಕ್ಕೊಂಡಿದ್ವನೂ ಸೇರಿದಡ. ಕೋಟಿ ಕಳ್ಲತನ ಮಾಡುವ ಮನುಷ್ಯ ಅಲ್ಲ. ಅದರ ಸುಮ್ಮನೆ ಎಲ್ಲೋರೂ ಸುಮ್ಮನೆ ಕಳ್ಳ ಮಾಡಿದ್ದು" ಹೇಳುಲೆ ಶುರು ಮಾಡಿದಡೊ.ಅಂತೂ ಇಂತೂ ಅಪ್ಂಗೆ ಕಾರ ಕೊಟ್ಟದು ಪೋಲೀಸುಗೊ ಮಾಂತ್ರ. ಸಾಕ್ಷಿ ಹೇಳುಲೆ ಒಪ್ಪಿದೋರು ಎಂಗೊ ಹೇಳುತ್ತಿಲ್ಲೆಯೋ ಹೇಳಿದ್ಕ್ಕೆ ಕೋರ್ಟಿಂದ ಸಮನ್ಸ್ ಮಾಡುಸಿಪೋಲೀಸುಳೇ ಕಕ್ಕಂು ಹೋದವಡೊ.
        ಅಂತೂ ಆರು ತಿಂಗಳು ಓಡಾಡಿದ್ದಕ್ಕೆ. ಎರಡು ತಿಂಗಳು ದಿನ ವಾರ ವಾರ ಸ್ಟೇಶನಿಂಗೆ ಹೋಗಿ ದಸ್ಕತ್ ಕೊಟ್ಟಿಕ್ಕಿ ಬರೆಕ್ಕು ಹೇಳುವ ತೀರ್ಪು ಆಗಿತ್ತಡೊಇಲ್ಲಿ ಆನು ಕೇಳುವದು ಕೋಟಿ ಕಳ್ಳ ಆದ್ದು ಹೇಂಗೆ ಹೇಳಿ.ಇರುಳು ತೋಟಕ್ಕೆ ಬಪ್ಪಷ್ಟು ಧೈರ್ಯ ಇದ್ದ ಮನುಷ್ಯ ಅಲ್ಲ. ಧೈರ್ಯ ಎಲ್ಲಿಂದ ಆರು ಕೊಟ್ಟವು. ಕೇಸ್ ದೊಡ್ಡ ಮಾಡೆಕ್ಕು ಹೇಳಿದೋರು ಮರಹತ್ತಿ ಅಡಕ್ಕೆ ತೆಗದೋರು ಮತ್ತೆಂತಗೆ ತಪ್ಪುಸಿದ್ದು?ಎಲ್ಲೋರೂ ಸೇರಿ ಜೋರು ಮಾಡುತ್ತಿದ್ದರೆ ಮರ್ಯಾದಿ ಹೋಗಿ ಊರು ಬಿಟ್ಟೇ ಹೋಪಂತಹ ಮನುಷ್ಯ,ಧೈರ್ಯ ಮಾಡಿ ಬರೆಕ್ಕಾದರೆ ಬಹುಷಃಆರೋ ಹಿಂದಂದ ಬಲ ಇತ್ತಿದ್ದವು.ಹೇಳುವದು ಖಂಡಿತ.ಇಡೀ ಸಮಾಜವೇ ಬೆಂಬಲವಾಗಿ ಎಂಗಳ ವಿರುದ್ಧ ಎತ್ತಿ ಕಟ್ಟೆಕ್ಕು ಹೇಳುವ ಯೋಜನೆಯಿತ್ತು ಹೇಳಿ ಕಾಣುತ್ತು. ಎಂತ ಇದ್ದರೂ ದೇವರು ಮರ್ಯಾದೆ ಒಳಿಶಿದ.ಕಾಪಾಡಿದ ಎಲ್ಲೋರು ಕೈಬಿಟ್ಟರೂ ಅವ ಕೈಬಿಟ್ಟಿದಾ ಇಲ್ಲೆ
Reply Reply All Forward Forward
Reply Reply All Forward Forward

No comments:

Post a Comment