Thursday, February 7, 2013

ಅಮೇರಿಕದ ಅನುಭವ

 
                        ಅಮೇರಿಕದ ಅನುಭವ
ಅಮೇರಿಕಕ್ಕೆ ಇದಕ್ಕೆ ಮದಲು ಒಂದೆರಡು ಸರ್ತಿ ಬಂದಿದ್ದರೂ ಈ ಸರ್ತಿ ಮಾಂತ್ರ ಹೆಚ್ಚು ಸಮಯ ಹೇಳಿರೆ ಒಂದು ವರ್ಷ ಒಂದು ತಿಂಗಳು ನಿಲ್ಲೆಕ್ಕಾಗಿ ಬಂತು. ಊರಿಂಗೆ ಹೋಪಲೆ ಆರೇ ತಿಂಗಳಿಲ್ಲಿ ಅವಕಾಶ ಇತ್ತಿದ್ದರೂ, ಎಂಗಳ ವಿಧಿಯೋ ಅಥವಾ ಭಾಗ್ಯವೋ ಹೇಳ್ಲೆಡಿಯ ಹೆಚ್ಚು ಸಮಯ ನಿಂದೆಯೊ. ಬೇಗ ಹೋಗಿ ಊರಿಲ್ಲಿಯೂ ಹೋಗಿಯೇ ಆಯೆಕ್ಕಾದ್ದು ಎಂತದೂ ಇತ್ತಿಲ್ಲೆ.ಪರಿಸ್ಥಿತಿ ಎಂಗಳ ನಿಂಬ ಹಾಂಗೆ ಮಾಡಿತ್ತು. ಒಂದು ದೃಷ್ಟಿಂದ ನೋಡಿರೆಹೊಸ ಅನುಭವವಾದರೆ, ಇನ್ನೊಂದು ದೃಷ್ಟಿಲ್ಲಿ ಮಕ್ಕಳ  ಅಪೇಕ್ಷೆಯೂ, ಎಂಗೊ ಇಲ್ಲಿ ಅವರೊಟ್ಟಿಂಗೆ ಇರೆಕ್ಕು ಹೇಳುವದಾಗಿತ್ತು. ಹಾಂಗೆ ದೀರ್ಘಕಾಲ ಇಲ್ಲಿದ್ದರೆ ಹೇಂಗೆ ಹೇಳುವ ಒಂದು ಪರೀಕ್ಷೆ ಹೇಳಿಯೂ ಗ್ರೇಶುಲಕ್ಕು. ಇದೂ ಒಂದು ಯೋಗ ಹೇಳುಲೂ ಅಕ್ಕು. ಆದರೆ ಅದರೊಟ್ಟಿಂಗೆ ಒಂದನೆಯದಾಗಿ, ಅವಕ್ಕೂ ಹೆದರಿಕೆ ಇದ್ದದು ಆರೋಗ್ಯ ಕೆಟ್ಟು ಹೋದರೆ-- ಹೇಳಿ ಇತ್ತು. ಆದರೆ ಆರ ಪುಣ್ಯವೋ ಎಂತದೋ,ಇರುಳು ಒರಗುಲೆ ಹೊರತು ಹಾಗಿಗೆ ಹಿಡಿಯೆಕ್ಕಾಗಿ ಬಯಿಂದಿಲ್ಲೆ ಹೇಳುವದು ಹೆಮ್ಮೆಯ ವಿಷಯ! ಆರಿಂಗೂ ಭಾರವಾಗದ್ದೆ ಈ ಜೀವ ಹೊರಟು ಹೋದರೆ ಬೇರೆ ಮಾತು. ಅಸೌಖ್ಯ ಬಂದರೆ ಮಾಂತ್ರ ಮಕ್ಕೊಗೆ ದೊಡ್ಡ ಹೊರೆಯೇ ಆವುತ್ತೀತು. ಇಲ್ಯಾಣ ಆಸ್ಪತ್ರೆ ಖರ್ಚು ಡಾಲರ್ ಕೆಕ್ಕಲ್ಲಿ ಸಾವಿರಗಟ್ಟಲೆಂದ ಲಕ್ಷದ ವರೆಗೆ ಹೋವುತ್ತೀತು. ಹಾಂಗೆಂತದೂ ತೊಂದರೆ ಆಗದ್ದದು ಸಂತೋಷದ ವಿಷಯ. ಊರು ಬಿಟ್ಟಿಕ್ಕಿ ಹೆಚ್ಚು ಸಮಯ ಇಲ್ಲಿದ್ದರೂ ಊರಿನ, ನಂಟ್ರ ನೆಂಪಾವ್ತಿತಷ್ಟೆ ಹೊರತು, ಇಲ್ಲಿದ್ದ ಊರಿಂದ ಬಂದು ಕೆಲಸ ಮಾಡ್ಯೊಂಡಿದ್ದ ಜನಂಗಳ ಒಟ್ಟಿಂಗೆ ಇದ್ದದು ಈಗ ಅವರ ಬಿಟ್ಟು ಹೋಪಲೇ ಮನಸ್ಸಾವುತ್ತಿಲ್ಲೆ. ಆದರೆ ಇಲ್ಲಿಯ ಹವೆ ವಿದೇಶಂದ ಬಂದೋರಿಂಗೆ ಕಷ್ಟ ಅಕ್ಕೋ ಹೇಳಿ ಗ್ರೇಶಿತ್ತಿದ್ದೆಯೊ. ಈ ವರ್ಷ ಮಾಂತ್ರ ಎಂಗಳ ಪುಣ್ಯ ಹೇಳಿಯೆ ಹೇಳೆಕ್ಕಷ್ಟೆ ಇಡೀ ವರ್ಷಲ್ಲಿ ಒಂದು ದಿನ ಅದುದೇ ಬರೇ ಏಳೆಂಟು ಇಂಚಿನಷ್ಟು ಹಿಮ ಬಿದ್ದಿತ್ತು. ಒಂದರಿ ಎರಡು ದಿನ ಕರೆಂಟ್ ಇಲ್ಲದ್ದೆ ಆದ್ದು ಬಿಟ್ಟರೆ ರಜ ಚಳಿ ಮಾಂತ್ರ ಹೆಚ್ಚಿತ್ತು. ಮತ್ತೆ ಮನೆಯೊಳದಿಕ್ಕೇ ಇದ್ದ ಕಾರಣ ಹೆಚ್ಚು ಕಷ್ಟ ಆಯಿದಿಲ್ಲೆ. ಜೆರ್ಕಿನ್ ಸ್ವೆಟ್ಟರ್ ಹಾಯ್ಕೊಂಡರೆ ಕಾರಿಲ್ಲಿ ಕೂದೊಂಡು ಹೆರ ಹೋಪದು. ಅಲ್ಲಿ ಅಂಗ್ಡಿಯೊಳದಿಕ್ಕೆ ಚಳಿಯೇ ಗೊಂತಾಗ್ಯೊಂಡು ಇತ್ತಿಲ್ಲೆ. ಎಲ್ಲೋರ ಮನೆಯೊಳದಿಕ್ಕುದೆ ಎ ಸಿ ಹಾಕ್ಯೊಂಡರೆ  ಬೆಚ್ಚಂಗೆ ಮನುಗಿ ಒರಗುಲೆ ತೊಂದರೆ ಇತ್ತಿಲ್ಲೆ. ಕರೆಂಟ್ ಇಲ್ಲದ್ದ ಎರಡು ದಿನ ಬಿಟ್ಟರೆ ಒರಕ್ಕಿಂಗೆ ತೊಂದರೆ ಆಯಿದಿಲ್ಲೆ. ಮನುಷ್ಯಂಗೆ ಮುಖ್ಯವಾಗಿ ,ತಿಂಬಲೆ, ಒರಗುಲೆ, ತಿಂದರ ಹೆರ ಹಾಕುಲೆ ಎಡಿಗಾದರೆ ಅವನ ಆರೋಗ್ಯ ಸರಿಯಿದ್ದು ಹೇಳಿ ಲೆಕ್ಕ ಅಲ್ಲದೋ? ಮತ್ತೆ ಕೆಲಸದ ದಿನಂಗಳ ಬಿಟ್ಟು ಬೇರೆ ರಜಾ ದಿನಂಗಳಲ್ಲಿ ಮೋಲ್ ಗೊಕ್ಕೋ ತರಕಾರಿ ತಪ್ಪಲೋ ಹೀಂಗೆ ಹೆರ ಕರಕ್ಕೊಂಡು ಹೋಯ್ಕೊಂಡಿತ್ತಿದ್ದವು. ವಾರದ ರಜೆ ದಿನಂಗಳಲ್ಲಿ ಅವರ ಗೆಳೆಯರ ಮನಗೊಕ್ಕೆ, ಅಥವಾ ಕೂಟಂಗೊಕ್ಕೆ, ಮತ್ತೆ ಕೆಲವು ದೇವಸ್ಥಾನಂಗೊಕ್ಕೆ ಹೀಂಗೆ ಕರಕ್ಕೊಂಡು ಹೋಗಿದ್ದರಿಂದ ವಾರಕ್ಕೊಂದರಿ ಅಸಕ್ಕ ಬಿರುಕ್ಕೊಂಡಿತ್ತು.
    ಇಲ್ಲಿಗೆ ಕೆಲಸಕ್ಕಾಗಿ ಬಂದ ಭಾರತೀಯರೋ, ಕನ್ನಡಿಗರೋ, ಮತ್ತೆ ಬ್ರಾಹ್ಮಣರ ಒಂದು ಪಂಗಡವದ ಹವ್ಯಕರೋ ಸೇರಿ ಇಲ್ಲಿ ಒಂದೊಂದು ಕೂಟಂಗಳ ಮಾಡ್ಯೊಂಡಿದ್ದವು. ಸಂಘಂಗಳ ಕಟ್ಯೊಂಡು ಹಬ್ಬ ಹರಿದಿನಂಗಳಲ್ಲಿ ಒಟ್ಟು ಸೇರಿ ಒಟ್ಟುಗೂಡಿ ದೀಪಾವಳಿ, ಚೌತಿ, ಅಥವಾ ಸಂಘಂಗಳ ವಾರ್ಷಿಕೋತ್ಸವ ಹೇಳಿಯೋ, ಪಿಕ್ನಿಕ್ ಹೇಳಿಯೋ ಸೇರಿ ಜೀವನ ಸುಖವಾಗಿ ಅನುಭವಿಸಿಗೊಂಬದರಿಂದ ಅವರ ಮಕ್ಕೊಗೂ ನಮ್ಮ ಧಾರ್ಮಿಕ ಪರಂಪರೆಯ ಬಗ್ಗೆ ಹೇಳ್ಯೋಂಡಿದ್ದವು.ಎಂಗೊ ಇಲ್ಲಿ ಇದ್ದನ್ನಾರ ಅಂಕ್ಲ್ ಅಂಕ್ಲ್ ಹೇಳ್ಯೊಂಡು ಅವು ಎಂಗಳ ಗೌರವಿಸುವಗ ಕೊಶಿ ಆಗ್ಯೊಂಡಿತ್ತು. ಮಕ್ಕಳೂ ಹೀಂಗೆ ಒಟ್ಟು ಸೇರುವಗ ಎಲ್ಲಾ ಮಕ್ಕಳೂ ಸಂತೋಷಲ್ಲಿ ಓಡಿ ಆಡಿ ಕೊಶಿ ಪಡುತ್ತವು. ಇಲ್ಲಿಯಾಣ ಜನಂಗಳೂ, ನಮ್ಮೂರಿಂದ ಜನಂಗಳೂ ಅವರ ಮಕ್ಕಳ ನೋಡಿಗೊಂಬ ಕ್ರಮ ವಿಶಿಷ್ಟವಾದ್ದು. ವಾರಕ್ಕೊಂದರಿ ಅಂಗ್ಡಿಗೊಕ್ಕೆ ಬೇಕಾದ ಮನೆ ಸಾಮಾನು ತಪ್ಪಲೆ ಹೋವುತ್ತವು. ಒಟ್ಟಿಂಗೇ ಮಕ್ಕಳನ್ನೂ ಕರಕ್ಕೊಂಡು ಹೋಯೆಕ್ಕಾವುತ್ತು. ಕೆಲಸಕ್ಕೆ ಹೋಪಗ ಮಕ್ಕಳ ನೋಡಿಗೊಂಬಲೆ,ಡೇ ಕೇರ್ ಮಾಡುವ ಕೆಲವು ಮನೆಗಳೂ ಶಿಶು ವಿಹಾರಂಗಳು ಇರುತ್ತು. ಉದಿಯಪ್ಪಗ ಅಲ್ಲಿ ಬಿಟ್ಟಿಕ್ಕಿ ಹೋದರೆ ಹೊತ್ತೋಪಗ ಕೆಲಸ ಬಿಟ್ಟಿಕ್ಕಿ ಬಪ್ಪಗ ಅವರ ಮನೆಗೆ ಕರಕ್ಕೊಂಡು ಬಪ್ಪದು. ಹಾಂಗೆ ಮಕ್ಕೊಗೆ ಇರುಳು  ಮಾಂತ್ರ ಅಬ್ಬೆ ಅಪ್ಪನ ನೋಡುಲೆ ಸಿಕ್ಕುವದು. ನಮ್ಮೂರಿಂದ ಬಂದೋವೆಲ್ಲ ಇಂಡಿಯನ ಸ್ಟೋರ್ ಗಳಿಂದ ಬೇಕಾದ ಅಕ್ಕಿ,ಜೀನಸು,ತರಕಾರಿ ಕೂಡ ತತ್ತವು. ಬರೇ ತರಕಾರಿ ಹೂ,ಹಣ್ಣಿನ ಅಂಗ್ಡಿಗಳೂ ಇರುತ್ತು. ಊಟ ತಿಂಡಿಗೆ ಬೇಕಾದ ಸಾಮಾನು ತೆಗವಗ ಒಟ್ಟಿಂಗೆ ಬಂದ ಮಕ್ಕೊ ಕೇಳಿದ್ದೆಲ್ಲ ಕೊಡದ್ದರೆ, ಗಲಾಟೆ ಮಾಡುತ್ತವು. ಅವಕ್ಕೆ ಕಂಡದೆಲ್ಲ ಬೇಕಾವುತ್ತು. ವ್ಯಾಪಾರಕ್ಕಾಗಿ ಅಂಗ್ಡಿಯೋರು ಮಕ್ಕಳ ಮಂಕಾಡುಸುವ ಸಾಮಾನು ತಂದು ಮಡುಗುತ್ತವು. ಕೇಂಡಿ,ಚೋಕಲೇಟ್,ಜ್ಯೂಸ್,ಹಣ್ಣುಗಳ ಕಾಂಬಗ ಅವಕ್ಕೆ ಆಶೆ ಆವುತ್ತು. ಬೆಲೆ ಕಮ್ಮಿ ಆವುತ್ತು ಹೆಚ್ಚು ತೆಕ್ಕೊಂಡರೆ ಹೇಳಿ ತೆಕ್ಕೊಂಡರೆ ಮನೆಗೆತ್ತಿದ ಮೇಲೆ ಅವಕ್ಕೆ ಅದು ಬೇಕಾವಿತ್ತಿಲ್ಲೆ. ಆರೂ ತಿನ್ನದ್ದೆ ಇಡುಕ್ಕಿದರೂ ಅಕ್ಕು. ಒಂದರಿ ಅವರ ಹಟವೇ ಗೆಲ್ಲುವದು.ಒಂದರಿ ಎನ್ನ ಪುಳ್ಳಿ ಒಬ್ಬ, ಅಜ್ಜಿ ತರೆಕ್ಕು ಹೇಳಿದ ವಿಂಡ್ ಬೆಲ್ಲ್  ಅಂಗ್ಡಿಲ್ಲಿ ಕಂಡು "ಅದರ ತೆಗೆಯೆಕ್ಕು ಅಜ್ಜಿ ಬೇಕು ಹೇಳಿದ್ದು. ತೆಗವೊ" ಹೇಳಿ ಹಟವೋ ಹಟ. ಬೆಲೆ ಹೆಚ್ಚಾತು ಬೇಡ ಮಗ ಹೇಳಿದರೆ ಒಪ್ಪಿದ ಇಲ್ಲೆ. ಒಂದರಿ ಅವನ ಬೇರೆ ಅಂಗ್ಡಿಂದ ತೆಗವೊ ಹೇಳಿ ಕರಕ್ಕೊಂಡು ಹೋದರೆ ಆಚ ಅಂಗ್ಡಿಲ್ಲಿ ಒಂದು ಡಾಲರ್ ಬೆಲೆ ಹೆಚ್ಚು! ಸರಿ ಮದಲು ನೋಡಿದ್ದಕ್ಕೆ ಒಂದು ಡಾಲರ್ ಕಡಮ್ಮೆ ಇದ್ದು, ಅದರನ್ನೇ ತೆಗವ ಹೇಳಿ ಮತ್ತೆ ಅದೇ ಆಂಗ್ಡಿಗೇ ಹೋತು. ಒಂದರಿ ಮಗಂಗೆ ಸಮಾಧಾನ ಅಪ್ಪಲೆ ತೆಗದೂ ಆತು. ಅಮೇರಿಕದ ಒಂದು ವಿಶಿಷ್ಟ ಕರಮ. ನಮ್ಮ ಭಾರತಲ್ಲಿ ಹಾಂಗಿಲ್ಲೆ. ಒಂದರಿ ತೆಗದರೆ ಮತ್ತೆ ಹಿಂದೆ ತೆಕ್ಕೊಂಬ ವ್ಯವಸ್ಥೆ ಇಲ್ಲೆ. ಆದರೆ ಇಲ್ಲಿ ಮರದಿನವೇ ಮಗನ ಒಪ್ಪುಸಿ ಅಂಗ್ಡಿಗೆ ಕೊಂಡೋಗಿ  " ಇದು ಎನಗೆ ಬೇಡ ಆನು ಹಿಂದೆ ಕೊಡುತ್ತೆ " ಹೇಳಿದ್ದಕ್ಕೆ ಒಪ್ಪಿದವು. ಪೈಸೆ ಹಿಂದೆ ಕೊಟ್ಟವು. ಯಾವ ಸಾಮಾನೂ ಅಷ್ಟೆ ಒಂದು ವಾರವೋ, ಒಂದು ತಿಂಗಳಾದರೂ ವಾಪಾಸು ತೆಕ್ಕೊಳುತ್ತವು.
                    ಪ್ರಿ ಕೆ ಜಿ ಮತ್ತೆ  ಕೆ ಜಿ  ಕ್ಲಾಸ್ ಕಳುದರೆ ಮಕ್ಕಳ ಒಂದನೇ ಕ್ಲಾಸಿಂಗೆ ಸೇರುಸುತ್ತವು.ಕಿಂಡರ್ ಗಾರ್ಟನ್, ಮೊಂಟೆಸೋರಿ ಶಾಲಗೊ ಇರುತ್ತು. ಶಾಲಗೆ ಮಕ್ಕಳ ಕರಕ್ಕೊಂಡು ಹೋಪಲೆ ಕಹ್ಟ ಇಲ್ಲೆ ಶಾಲ ಬಸ್ಸುಗೊ ಮನೆ ಬಾಗಿಲಿಂಗೇ ತಂದು ಬಿಡುತ್ತವು. ಆದರೆ ಶಾಲೆ ಬಸ್ಸಿಂಗೆ ಹತ್ತುಸಲು ಇಳಿಶಿಗೊಂಬಲು ಮನೆಯೋರು ಇರೆಕ್ಕಾವುತ್ತು. ಮತ್ತೆ ಬಸ್ಸಿನೋರ ಜವಾಬ್ದಾರಿ. ಶಾಲಗೂ ರಕ್ಷಕರ ಬಪ್ಪಲೆ ಹೇಳುವಗ ಹೋಯೆಕ್ಕಾವುತ್ತು.    ನಾಲ್ಕು ವರ್ಷ ಪ್ರೈಮರಿ ಶಾಲೆ ಮುಗಿಶಿದರೆ ಮತ್ತೆ ಪ್ರೌಢ ಶಾಲೆ. ಯಾವ ಕೋರ್ಸಿಂಗೆ ಹೋಪದು ಹೇಳುವದು ಈಗಳೇ ಶುರುವಾವುತ್ತು. ಮತ್ತೆ ಡಿಗ್ರೀ ಕ್ಲಾಸ್. ನಾಲ್ಕು ವರ್ಷ. ಅದು ಮುಗುದರೆ ಮತ್ತೆ ವಿವಿಧ ಬ್ರೇಂಚ್ ಗೊಕ್ಕೆ ಹೋಪಲಕ್ಕು. ಮೆಡಿಕಲ್ ಎಂಜಿನೀಯರಿಂಗ್ ಹೀಂಗೆಲ್ಲ.  ಹತ್ತನೇ ಕ್ಲಾಸ್ ಮುಗಿವಲ್ಲಿ ವರೆಗೆ ನಮಗೆ ಹೆಚ್ಚಿನ ಖರ್ಚಿಲ್ಲೆ. ಮತ್ತೆ ನಾಲ್ಕು ವರ್ಷ  ಖರ್ಚು ತುಂಬ ಆವುತ್ತು. ಕಲಿವಲೆ ಎಜುಕೇಶನಲ್ ಸಾಲವೂ ಸಿಕ್ಕುತ್ತು. ಕೆಲಸ ಸಿಕ್ಕಿದ ಮೇಲೆ ಕಂತಿಲ್ಲಿ ಕಟ್ತಿದರಾತು.ಅದಕ್ಕೆ ಹೆಚ್ಚಿನೋವುದೆ ಸಾಲವನ್ನೇ ತೆಕ್ಕೊಳ್ಳುತ್ತವು. ಡಾಕ್ಟ್ರಕ್ಕೊಗೆ ಒಳ್ಳೆ ಆದಾಯ. ಯಾವ ಉದ್ಯೋಗಕ್ಕೆ ಹೋದರೂ ಸಿಕ್ಕಿದ ಸಂಬಳಲ್ಲಿ ತೆರಿಗೆ ತುಂಬ ಕೊಡೆಕ್ಕಾವುತ್ತು. ಇಲ್ಲಿ ಹೆಚ್ಚು ಖರ್ಚಪ್ಪದು ಮೆಡಿಕಲ್ ಬಿಲ್ಲಿಂಗೆ. ನೀರು, ಕರೆಂಟ್, ಗೇಸ್ ಎಲ್ಲ ಪ್ರತಿ ತಿಂಗಳೂ ಬಿಲ್ಲಿನ ಹಣ ಕಟ್ಟಿದರೆ, ಬೇಕಾದಷ್ಟು ಸಿಕ್ಕುತ್ತು. ಆದರೆ ಹೆಚ್ಚು ಖರ್ಚಪ್ಪದು, ಆಸ್ಪತ್ರಗೆ ಹೋದರೆ. ಅದಕ್ಕೆ ಇಲ್ಲಿ ಇನ್ಶೂರೆನ್ಸ್ ಕಡ್ಡಾಯ. ತಿಂಗಳ ಸಂಬಳಂದಲೇ ಕಟ್ ಆವುತ್ತು. ಇನ್ಶೂರೆನ್ಸ್ ಇದ್ದರೆ ಅಸ್ಪತ್ರೆ ಬಿಲ್ ಅವು ಕೊಡುತ್ತವು.ಹೀಂಗೇ ಆಸ್ಪತ್ರೆಗೆ ಹೋದರೆ ಬಿಲ್ ನಮ್ಮಂದ ಕೊಟ್ಟೊಂಬಲೆಡಿಯ. ಡಾಕ್ಟ್ರಕ್ಕಳ ಕನ್ಸಲ್ಟಿಂಗ್ ಫೀಸ್ ತುಂಬ ಇರುತ್ತು. ಆಸ್ಪತ್ರೆಗೆ ಸೇರಿದರೆ ಸಣ್ಣ ಚಿಕಿತ್ಸೆ ಆದರೂಪ್ ರವೇಶ ಧನ ,ದಾದಿಯರ ಖರ್ಚು ಅಲ್ಲ ಅಪ್ಪಗ ಗ್ರೇಶುಲೆಡಿಯದ್ದಷ್ಟು ಬಿಲ್ಲ್ ಮಾಡುತ್ತವು. ಒಂದರಿ ಎನ್ನ ದೊಡ್ಡ ಮಗ ಪುಳ್ಳಿಯ ಅಸ್ಪತ್ರೆಗೆ ಸೇರುಸೆಕ್ಕಾಗಿ ಬಂದಿತ್ತು  ಗಾಬರಿಂದ. ಸೇರುಸಿ ರೂಮಿನ ಒಳಹೋಪಂದ ಮದಲೆ ಅವನ ಹೊಟ್ಟೆ ಬೇನೆ ಗುಣ ಆಗಿತ್ತು. ಆದರೆ ಸೇರುಸಿದ ಮೇಲೆ ಡಾಕ್ಟ್ರ ನೋಡದ್ದೆ ಬಿಡುತ್ತವಿಲ್ಲೆ. ಆ ಪರೀಕ್ಷೆ ಈ ಪರೀಕ್ಷೆ ಹೇಳಿ ಒಟ್ಟು ೧೯೦೦ ಡಾಲರ್ ಬಿಲ್ ಕೊಟ್ಟಿತ್ತಿದ್ದವು. ಮಗನ ಬೊಬ್ಬೆ ತಡೆಯದ್ದೆ ಕರಕ್ಕೊಂಡು ಹೋದ್ದು.ಅಲ್ಲಿಗೆತ್ತುವಗಲೇ ರಜ ಕಡಮ್ಮೆಯಿತ್ತು. ಆದರೆ ಹೋದ ಕೂಡಲೇ ಎಡ್ಮಿಟ್ ಮಾಡಿ ಒಂದೆರಡು ಡಾಕ್ಟ್ರಕ್ಕೊ ನೋಡುವಂದ ಮದಲೇ ಅವಂಗೆ ಹೊಟ್ಟೆ ಬೇನೆ ಕಡಮ್ಮೆ ಆಯಿದು ಹೇಳಿದರೂ ಅಲ್ಲಿಂದ ಬಿಟ್ಟವಿಲ್ಲೆ. ಅವರ ಲೆಕ್ಕ ಪರೀಕ್ಷೆ ಎಲ್ಲ ಅಪ್ಪಗ ಬಿಲ್ಲ್ ಒಟ್ಟಿಂಗೇ ಬಂತು. ಇನ್ಶೂರೆನ್ಸ್ ಇದ್ದ ಕಾರಣ ಕೈಂದ ಕೊಡೆಕ್ಕಾಗಿ ಬಯಿಂದಿಲ್ಲೆ. ಕೊಡೆಕ್ಕಾಗಿ ಬಂದಿದ್ದರೆ ದಂಡ ಕೊಡೆಕ್ಕಾತು. ಆದರೆ ಚಿಕಿತ್ಸಾ ಕ್ರಮ ಮಾಂತ್ರ ಭಾರೀ ಒಳ್ಳೆದಿದ್ದು. ಶುಚಿತ್ವ ಚಿಕಿತ್ಸಾಕ್ರಮ, ಒಳ್ಳೆದಿದ್ದು. ನಿಯಮಂಗಳೂ ಕಠಿಣವಾಗಿದ್ದು. ಅದರೊಳದಿಕ್ಕೆ ಕೇಂಟೀನ್ ಇದ್ದರೂ ನಮಗೆ ಬೇರೆ ಆಹಾರ ತೆಕ್ಕೊಂಡು ಹೋಪಲಕ್ಕು. ನಮ್ಮ ಅನ್ನ ಸಾರು, ಸಾಂಬಾರು ಸಿಕ್ಕ.
            ಬೇಂಕಿಂಗ್ ವ್ಯವಸ್ಥೆಯೂ ಒಳ್ಳೆದಿದ್ದು. ಮನೆ ತೆಕ್ಕೊಂಬದು ಮೋರ್ಟ್ ಗೇಜ್ ಬೇಂಕಿನ ಮೂಲಕಮತ್ತೆ ಕಂತು ಕಟ್ಯೊಂಡರೆ ಆತು. ಸಾಮಾನ್ಯ ಬಾಡಿಗೆಯಷ್ಟೆ ಬಕ್ಕು. ಆದರೆ ಸಂಬಾಳಲ್ಲಿ ಕಂತಿನ ಹಣಕ್ಕೆ ತೆರಿಗೆ ಕೊಡೆಡ. ಕಾರ್ ಸಾಲ, ಕೃಷಿ ಸಾಲ ಎಲ್ಲ ಬೇಂಕ್ ಗಳಲ್ಲಿ ಸಿಕ್ಕುತ್ತು ಕಂತು ಕಟ್ಯೊಂಡರೆ ಆತು. ವಿದ್ಯಾಭ್ಯಾಸಕ್ಕೂ ಸಾಲ ಕೊಡುತ್ತವು. ಕೆಲಸ ಸಿಕ್ಕಿದಮೇಲೆ ಕಂತಿಲ್ಲಿ  ಸಂದಿಸಿದರೆ ಆತು. ಆದರೆ ನಾಲ್ಕು ವರ್ಷದ ಕೋರ್ಸ್ ಮುಗಿವಗ ಸಾಲದ ಹೊರೆ ದೊಡ್ಡದಾಗಿರುತ್ತು. ಸಂಬಳದ ಬಹುಪಾಲು ಸಾಲಕ್ಕೆ ಹೋಕು. ಆದರೆ ವಿದ್ಯಾಭ್ಯಾಸದ ಖರ್ಚು ಮಾಂತ್ರ ನಾಲ್ಕು ವರ್ಷಕ್ಕೆ ನಾಲ್ಕು ಲಕ್ಷ ಅದರ ಬಡ್ಡಿ ಸೇರುವಗ ನಾಲ್ಕೂವರೆ ಲಕ್ಷದ ಹೊರೆ ಬೀಳುತ್ತು.ಮತ್ತೆ ಹೆಚ್ಚಿನ ಕಲಿವಲೆ ಇನ್ನೂ ಹೆಚ್ಚು ಖರ್ಚು.ಅಂತೂ ವಿದ್ಯಾಭ್ಯಾಸ ದುಬಾರಿಯೇ ಸರಿ.ಹೋಸ್ಟೆಲ್ ಫೀಸು ತುಂಬ ಆವುತ್ತು ಹೇಳಿ ಮನೆಂದಲೇ ಹೋಗಿ ಬರೆಕ್ಕಾರೆ ಸ್ವಂತ ವಾಹನ ಬೇರೆ ಬೇಕಾವುತ್ತು. ಎಲ್ಲೋರುದೆ ಸ್ವಂತ ವಾಹನ ಇಪ್ಪೋರೆ. ಹಳತ್ತು ತೆಗೆವಗಳೂ ಸಾಲ ಸಿಕ್ಕುತ್ತು. ಆದರೆ ಬೆಲೆ ಹೆಚ್ಚಕ್ಕು. ಕ್ರೆಡಿಟ್ ಕಾರ್ಡಿನ ಮೂಲಕ ಅಂಗ್ಡಿಗಳಿಂದ ಸಾಮಾನು ತೆಗವಲಕ್ಕು. ತಿಂಗಳ ಅಖೇರಿಗೆ ಮಾಂತ್ರ ಹಣ ಅವಕ್ಕೆ ಬೇಂಕಿಂದ ಕೊಡುತ್ತವು. ಕೆಲಸದ ಸಂಬಳ ಕೂಡಾ ಬೇಂಕಿಂಗೇ ಹೊವುತ್ತು. ಆದರೆ ನಮ್ಮ ಹಣಕ್ಕೆ ಬಡ್ಡಿ ತುಂಬ ಕಡಮ್ಮೆ. ಒಂದು ಪರ್ಸೆಂಟ್ ಸಿಕ್ಕಿದರೆ ಭಾಗ್ಯ.ಎಲ್ಲ ಅಂಗ್ಡಿಗಳಲ್ಲೂ, ಗೇಸ್ ಸ್ಟೇಶನ್ ಗಳಲ್ಲಿಯೂ,ಕ್ರೆಡಿಟ್ ಕಾರ್ಡ್ ಉಪಯೋಗ ಆವುತ್ತು. ನಗದು ಹಣ ಬೇಕಾದರೆ ಬೇಂಕಿನ ಒಳ ಹೋಗಿ ಕಾದು ಕೂರೆಡ. ಎ ಟಿ ಯಮ್ ಗಳಲ್ಲಿ ಹಣ ಸಿಕ್ಕುತ್ತು. ಮನೆ ತೆಗದೋರು ಕಂತು ಕಟ್ಲೆಡಿಯದ್ದರೆ ಬಿಟ್ಟು ಕೊಡೆಕ್ಕಾವುತ್ತು. ಹೀಂಗೆ ಬಿಟ್ಟು ಕೊಟ್ಟರೆ ಅವಕ್ಕೆ ನಷ್ಟ. ೩೦ ವರ್ಷದ ವರೆಗು ಕಂತು ಸಿಕ್ಕುತ್ತು. ಎಡೆಲ್ಲಿ ಪೂರ್ತಿ ಹಣ ಕಟ್ಟಿದರೆ,ಮನೆ ನಮ್ಮದಾವುತ್ತು.
    ವಾಹನ ನಿಯಮಂಗೊ ಭಾರಿ ಕಠಿಣ ಇದ್ದು. ಆದರೆ ಮಾರ್ಗಂಗೊ ಮಾಂತ್ರ ಭಾರೀ ಒಳ್ಳೆದಿದ್ದು. ಅಂಬಗಂಬಗ ಗೇರ್ ಬದಲುಸುಲೆ ಇಲ್ಲೆ. ವೇಗ ಹೆಚ್ಚು ಕಡಮ್ಮೆ ಮಾಡಿಗೊಳ್ಳೆಕ್ಕಾವುತ್ತು. ಹೈವೇ ಗಳಲ್ಲಿ ೬೫-೭೫ ಮೈಲು ಹೋವುತ್ತರೆ, ಸಣ್ಣ ಮಾರ್ಗಂಗಳಲ್ಲಿ ೨೫-೩೫ ಮೈಲು ಮಾಂತ್ರ ಹೋಪಲಕ್ಕಷ್ಟೆ.ಅಲ್ಲಲ್ಲಿ ಸಿಗ್ನಲುಗೊ ಇಪ್ಪ ಕಾರಣ ನಾವು ಗ್ರೇಶಿದಾಂಗೆ ಹೋಪಲಾವುತ್ತಿಲ್ಲೆ. ಮಾರ್ಗ ಮಾಂತ್ರ ಒಳ್ಳೆದಿಪ್ಪ ಕಾರಣ ಇಂಟರ್ನೆಟ್ ನೋಡ್ಯೊಂಡರೆ ಎಲ್ಲಿಂದೆಲ್ಲಿಗೂ ಯೋಚನೆ ಇಲ್ಲದ್ದೆ ಬರೇ ಹೆಮ್ಮಕ್ಕೊ ಕೂಡಾ ಇರುಳುದೆ ಹೋಪದಕ್ಕೆ ಅಡ್ಡಿಯಿಲ್ಲೆ. ಹೈವೇಲ್ಲಿ ಅಂತೂ ನಿಲ್ಲುಸುಲೇ ಇಲ್ಲೆ. ಮೂರು ನಾಲ್ಕು ಲೇನ್ ಗೊ ಇಪ್ಪ ಕಾರಣ ಲಾನ್ ಬದಲುಸುವಗ ಮಾಂತ್ರ ಹಿಂದೆ ಕೆಂಪು ಲೈಟು ತೋರುಸ್ಯೊಂಡರೆ ಆತು. ಆಹನ ಓಡುಸುವಗ ಮೊಬೈಲ್ ಉಪಯೋಗುಸುಲೆ ಆಗ ಹೇಳಿ ಇದ್ದು. ಆದರೆ ಹೆಚ್ಚಿನೋವುದೆ ಅಲ್ಲಲ್ಲಿ ಸಿಗ್ನಲ್ ಗಳಲ್ಲಿ ನಿಲ್ಲಿಸ್ಯೊಂಡಿಪ್ಪ ಗ ಮಾತಾಡುತ್ತವು. ಅಪಘಾತ ಇಲ್ಲೆ ಹೇಳಿ ಇಲ್ಲೆ. ಅಪರೂಪಕ್ಕೊಂದರಿ ನಡೆತ್ತು. ಹೆಚ್ಚಿನೋವು ಜಾಗೆಅತೆಲ್ಲಿ ವಾಹನ ಓಡುಸುತ್ತವು. ನಿಯಮ ತಪ್ಪಿದರೆ ದಂಡ ಮಾಂತ್ರ ಅಲ್ಲ ನಾಲ್ಕೈದು ಸರ್ತಿ ನಿಯಮ ತಪ್ಪಿದರೆ ಲೈಸನ್ಸ್ ರದ್ದು.ಕೋರ್ಟಿಂಗೂ ಹೋಯೆಕ್ಕಕ್ಕು. ಗೇಸ್ ಮುಗಿವಗ ಅಲ್ಲಲ್ಲಿ ಬಂಕ್ ಗೊ. ನಾವೇ ತುಂಬುಸಿಗೊಂಬಲೂ ಆವುತ್ತು. ಕ್ರೆಡಿಟ್ ಕಾರ್ಡಿನ ಗೀರಿದರೆ ಬೇಕಾದಷ್ಟು ತುಂಬುಸಿಗೊಂಬಲಾವುತ್ತು. ಭಾರತದಷ್ಟು ಕ್ರಯವೂ ಇಲ್ಲೆ. ಒಂದು ಗೆಲನ್ ಇಪ್ಪತ್ತು ಮೈಲು ಓಡುತ್ತಡೊ. ವಾರದ ರಜೆಲ್ಲಿ ದೂರದ ಪ್ರವಾಸವೋ, ಗೆಳೆಯರ ಮನಗೋ ಹೀಂಗೆ ಓಡುಸಿಗೊಂಡಿಪ್ಪ ಕಾರಣ ಮಾರ್ಗ ತುಂಬ ವಾಹನಂಗೊ. ಕೆಲಸದ ದಿನಂಗಳಲ್ಲಿ ಒಂದು ಮೈಲು ಉದ್ದಕ್ಕೂ ಸಾರೀಟಕ್ಕೆ ನಿಂದುಗೊಂಡು ಎರುಗು ಹರದ ಹಾಂಗೆ ಕಾಣುತ್ತು ದೂರಂದ ಹತ್ತು ಮೈಲು ದೂರ ಹೊಯೆಕ್ಕಾರೆ ಒಂದು ಗಂಟೆ ಬೇಕಕ್ಕು. ಅದಕ್ಕೆ ಹೆಚ್ಚಿನೋವುದೆ ಬೇಗ ಓಫೀಸಿಂಗೆ ಹೋವುತ್ತವು. ಹೀಂಗೆ ವಾಹನ ಹೋಗುತ್ತಿಪ್ಪಗ ಎಷ್ತು ತಾಳ್ಮೆ ಇದ್ದರೂ ಸಾಕಾಗ. ನಮ್ಮ ಗಮನ ಮುಂದಾಣ ವಾಹನದ ಕಡೆಂಗೇ ಇರೆಕ್ಕಾವುತ್ತು. ಮುಂದಾಣ ವಾಹನ ದಾಂಟಿಕ್ಕಿ ಹೋಪದು ಹೇಳಿ ಇಲ್ಲೆ. ಗಮನ ಹೆಚ್ಚು ಕಡಮ್ಮೆ ಆದರೆ ಅಪಘಾತವೇ ಆವುತ್ತು. ಒಂದರಿ ಎಂಗೊ ನೋಡ್ಯೋಂಡಿದ್ದ ಹಾಂಗೆ ಒಂದು ಅಪಘಾತ ಹೀಂಗೆ ಆಗಿತ್ತು. ಸಿಗ್ನಲಿಲ್ಲಿ  ಮುಂದೆ ನಿಂದೊಂಡಿದ್ದ ವಾಹನ ಗ್ರೀನ್ ಸಿಗ್ನಲ್ ಕಂಡ ಕೂಡಲೇ ಹೊರಟತ್ತು ಹೇಳಿ ಗ್ರೇಶ್ಯೊಂಡು ಹಿಂದಾಣ ವಾಹನ ಹೆರಟತ್ತು. ಆದರೆ ಮುಂದಾಣ ವಾಹನ ಹೆರಡುವಗ ತಡವಾತು. ಹಿಂದಾಣ ವಾಹನ ರಭಸಕ್ಕೆ ಹೋಗಿ ಮುಂದಾಣದ್ದಕ್ಕೆ ಗುದ್ದಿತ್ತು.ಮತ್ತೆ ಕೇಳೆಕ್ಕೊ?ಪೋಲೀಸ್ ಬಂದ ಮೇಲೆಯೂ ಬಿಟ್ಟಿದವಿಲ್ಲೆ.ಕರೆಂಗೆ ನಿಲ್ಲುಸಿದ ವಾಹನ ಇನ್ಶೂರೆನ್ಸಿನ ಜನಂಗೊ ಬಂದ ಮೇಲೆಯೇ ರಿಪೇರಿಗೆ ಹೋತು. ಇವಂಗೆ ಅಪಘಾತ ಮಾಡಿದ್ದಕ್ಕೆ ಟಿಕೆಟ್ ಸಿಕ್ಕಿತ್ತು. ಹೊಸ ಕಾರೂ ಹಾಳಾಗಿತ್ತು. ವಾಹನಂಗೊಕ್ಕೆ ಇನ್ಶೂರೆನ್ಸ್ ಕಡ್ಡಾಯ. ರಿಪೇರಿಯೋ,ಅಪಘಾತವೋ ಬಾರದ್ದರೆ ಕಟ್ಟಿದ್ದು ನಷ್ಟ.
    ವಿದೇಶಂದ ಬಂದೋರೂ, ಇಲ್ಲಿಪ್ಪೋರೂ ಮಕ್ಕೊಗೆ ತುಂಬ ಖಚು ಮಾಡುತ್ತವು.೩ ವರ್ಷಂದ ಮತ್ತೆ ಕರಾಟೆ, ಸ್ವಿಮ್ಮಿಂಗ್,ಜಿಮೇಸ್ಟಿಕ್ ಹೀಂಗೆಲ್ಲ ಕಲಿಶುವದಲ್ಲದ್ದೆ, ಸಂಗೀತ, ಡಾನ್ಸ್,ತಬ್ಲ,ಮೃದಂಗ ಹೇಳಿ ಎಲ್ಲ ಕಲಿಶುಲೆ ವ್ಯವಸ್ಥೆ ಮಾಡುತ್ತವು. ಕೆಲವು ಮಕ್ಕೊ ಕುಶಿಲ್ಲಿ ಭಾಗವಹಿಸುತ್ತವು. ಆದರೆ ಮಕ್ಕೊಗೆ ಅಹಾರ ತಿನ್ನುಸುವದು ಭಾರಿ ಕಷ್ಟದ ಕೆಲಸ. ಎಷ್ಟು ತಾಳ್ಮೆ ಇದ್ದರೂ ಸಾಲ. ಮೂವಿ ನೋಡ್ಯೊಂಡೊ, ಅಥವಾ ಬೇರೆಂತಾರು ಆಟ ಆಡ್ಯೊಂಡೋ ತಿನ್ನುಸೆಕ್ಕಾವುತ್ತು. ಮತ್ತೆ ಇಂಗ್ಲಿಶಿಲ್ಲಿಯೇ ನೊ ಹೇಳ್ಲೆ ಶುರುಮಾಡಿದರೆ ತಿನ್ನುಸುಲೆ ಸಾಧ್ಯವೇ ಅಗ. ಎಲ್ಲ ಉಪಾಯಲ್ಲೇ ಆಯೆಕ್ಕು. ದೇವರ ಪೂಜ್ಎ ಹೇಳಿ ಮನೆಲ್ಲಿ ಮಾಡುತ್ತವಿಲ್ಲೆ. ಬದಲು ಮಕ್ಕಳ ಪೂಜೆಯೇ ಮಾಡುತ್ತವು ಹೇಳಿದರೆ ತಪ್ಪಾಗ.  ಆದರೆ ಕಲಿವದರಲ್ಲಿ ತುಂಬ ಹುಶಾರಿರುತ್ತವು. ಮಕ್ಕಳ ಹೊತ್ತು ಹೊತ್ತಿಂಗೆ ಹೊಟ್ಟೆ ತುಂಬುಸಿ ಒರಗುಸುವದು ಇಲ್ಲಿಪ್ಪ ಜನಂಗಳದ್ದು ದೊಡ್ಡ ಸಾಧನೆಯೇ ಆಗಿ ಕಾಣ್ತು. ಮತ್ತೆಬ್ ಮಕ್ಕಲ ಜನ್ಮ ದಿನಮ್ಗಳ ಮರೆಯದ್ದೆ ಆಚರುಸುತ್ತವು. ಚೆಕ್ ಇ ಚೀಸ್ ಲ್ಲಿಯೋ ಯವದಾದರು ಹಾಲ್ ಗಳಲ್ಲಿಯೋ ಅಥವ ಅವರವರ ಮನೆಗಳಲ್ಲ್ಯೋ ಆಚರುಸುತ್ತವು. ಎರಡನೇ ಜನ್ಮ ದಿನವ ವಿಜೃಂಭಣೆಂದ ಆಚರುಸುತ್ತವು. ಯಾವದಾದರೂ ರೆಸ್ಟೋರೆಂಟ್ ಗಳಲ್ಲಿಯೂ ಆಚರುಸುತ್ತವು. ಬಪ್ಪಲೆ ಹೇಳಿದರೆ ಹೋಪೋರು ಏನಾದರೂ ಗಿಫ್ಟ್ ಕೊಂಡೋವ್ತವು. ಇದೆಲ್ಲ ಅದೇ ದಿನ ಅಲ್ಲದ್ದರೂ ರಜಾ ದಿನಂಗಳಲ್ಲಿ ಬಪ್ಪೋರಿಂಗೆ ಅನುಕೂಲ ಅಪ್ಪ ಹಾಂಗೆ ನೋಡಿಗೊಳ್ಳುತ್ತವು. ಆದರೆ ಮಕ್ಕೊಗೆ ಏನಾದರೂ ಕ್ಲಾಸ್ ಗೊ ಇದ್ದರೆ ತಪ್ಪುಸುತ್ತವಿಲ್ಲೆ.ಮಕ್ಕೊ ಮಾಂತ್ರ ಚುರುಕಾಗಿರುತ್ತವು.ಹೀಗಿದ್ದ ಕೂಟಂಗಳಲ್ಲಿ ಮಕ್ಕೊ ಒಟ್ಟು ಸೇರಿ ಆಡಿಗೊಂಡಿರುತ್ತವು.ಒಟ್ಟಾರೆ ಮಕ್ಕಳ ತುಂಬ ಕೊಶಿಲ್ಲಿ ನೋಡಿಗೊಳ್ಳುತ್ತವು. ಶಾಲೆಲ್ಲಿ ಒಬ್ಬಕ್ಕೊಬ್ಬಂಗೆ ಗೊ<ತಾದರೆ ಕೆಲವು ರೈಡ್ಸ್ ಗೊಕ್ಕೆ ಹೋಗಲೇ ಬೇಕು ಹೇಳಿ ಹಟ ಹಿಡುದರೆ ಮತ್ತೆ ಕೇಳೆಡ. ಅವಕ್ಕೆ ಖರ್ಚಾವುತ್ತು ಹೇಳುವ ಯೋಚನೆ ಇಲ್ಲೆ. ಕರಕ್ಕೊಂಡು ಹೋದರಾತು.ಅಬ್ಬೆ, ಅಪ್ಪಂದ್ರುದೆ ಮಕ್ಕಲ ಹೀಂಗೆ ಕರಕ್ಕೊಂಡು ಹೋಪಲೆ ತುದಿಗಾಲ್ಲಿದ್ದವು. ಫೋನ್ ,ಕಂಪ್ಯೂಟರ್, ಲೇಪ್ ಟೋಪ್ ಎಲ್ಲ ಉಪಯೋಗುಸುಲೆ ಕಲ್ತೊಳ್ಳುತ್ತವು. ಬಿಡು ಸಮಯಲ್ಲಿ ಟಿ ವಿ ಯ ಮುಂದೆಯೇ ಇಪ್ಪದು. ಶುಚಿತ್ವದ ಮಟ್ಟಿಂಗೆ ಭಾರೀ ಜಾಗ್ರತೆ ಇಲ್ಲಿಯಾಣವಕ್ಕೆ. ಅಂಗ್ಡಿಗಳೊಳದಿಲ್ಕ್ಕು ಕಸ ಹಾಕುಲೆ ಒಂದು ಡ್ರುಮ್ ಮಡಿಕ್ಕೊಂಡಿರುತ್ತು. ಅಲ್ಲೇ ಹಾಕೆಕ್ಕು. ವಾಶ್ ರೂಮ್ೆಲ್ಲ ಕಡೆಲ್ಲಿಯೂ ಇರುತ್ತು. ಮಕ್ಕೊಗೆ ವಾಶ್ ರೂಮಿಂಗೆ ಹೋಪದರ ಬಗ್ಗೆ, ಕಸವು ಸಿಕ್ಕಿದಲ್ಲೆಲ್ಲ ಇಡುಕ್ಕುಲಾಗ ಹೇಳುವದರ ಮಗ್ಗೆ ಬಾಲಪಾಠ ವಾಗಿರುತ್ತು. ಶುರು ಶುರುವಿಂಗೆ ಹಲ್ಲು ತಿಕ್ಕುಸುವದು ಕಷ್ಟವಾದರೂ ದೊಡ್ಡ ಆದ ಮೇಲೆ ಅವ್ವಾಗಿಯೇ ತಿಳ್ಕೊಳ್ಳುತ್ತವು. ಇಲ್ಲಿ ಎಲ್ಲ ನಾಗರಿಕರೂ ಸ್ವಚ್ಛತೆಗೆ ಆದ್ಯ ಪ್ರಾಶಸ್ತ್ಯ ಕೊಡುತ್ತವು. ಹೆರಿಯಕ್ಕನ ಚಾಳಿ ಮಕ್ಕೊಗೂ ಬತ್ತು. ಮನೆಲ್ಲೆ ರಜ ಮಾತೃಭಾಷೆ ಕಲಿಸಿದರೆ ಮಾತಾಡುತ್ತವು. ಮತ್ತೆ ಶಾಲಗೆ ಹೋಪಲೆ ಶುರು ಮಾಡಿದ ಮೇಲೆ ಇಂಗ್ಲಿಷ್ ಮಾಂತ್ರ. ಮನೆಲ್ಲಿ ಹೆರಿಯೋರತ್ರೆಲ್ಲ ಇಂಗ್ಲಿಷ್ ಮಾತನಾಡುತ್ತವು. ದೊಡ್ಡಾದೋರು ಮನೆಭಾಷೆ ಕಲಿಶಿದರೆ ಮಾತನಾಡುವೋರೂ ಇದ್ದವು.
           ಇಲ್ಲಿ ಮತ್ತೆ ಭಾರತೀಯರು, ನಮ್ಮ ರಾಷ್ಟ್ರೀಯ,ಹಬ್ಬಂಗಳ ಆಚರುಸುತ್ತವು. ಗಣೇಶ ಚೌತಿ, ದಸರ,ಯುಗಾದಿ ಹೀಂಗೆ ಹಬ್ಬಂಗಳ ಒಟ್ಟಾಗಿ ಆಚರುಸುವಗ ಮಕ್ಕೊಗುದೆ ನಮ್ಮ ಹಬ್ಬಂಗಳ ಪರಿಚಯ ಅವುತ್ತು. ಅಲ್ಲಲ್ಲಿ ಬೇರೆ ಬೇರೆ ದೇವಸ್ಥಾನಂಗೊ ಇರುತ್ತು. ನಮ್ಮ ಶೄಂಗೇರಿ ದೇವಸ್ಥಾನ ಇಲ್ಲಿ ಎರಡು ದಿಕ್ಕೆ,ಟೊರೊಂಟೋಲ್ಲಿ ಒಂದು ಹೀಂಗೆ ಅಲ್ಲಿಂದಲೇ ಕಲ್ತು ಬಂದೋರು ಕ್ರಮ ಪ್ರಕಾರ ಧಾರ್ಮಿಕ ಕಾರ್ಯಕ್ರಮಂಗಳ ಮಾಡುಸುತ್ತವು. ಶಿರಡಿ ಬಾಬಾ,ಅಯ್ಯಪ್ಪ,ಉಡುಪಿ ದೇವಸ್ಥಾನಂಗಳೂ ಇದ್ದು. ಹಾಂಗೆ ಇಲ್ಲಿಪ್ಪ ಭಾರತೀಯರಿಂಗೆ ದೇವರ ನೆಂಪಪ್ಪಗ ವಾರಕ್ಕೊಂದರಿ ಬಹಳ ದೂರಕ್ಕೆ ವರೆಗೆ ಹೋವುತ್ತವು. ಪಿಟ್ಸ್ ಬರ್ಗ್ ಲ್ಲಿ ತಿರುಪತಿ ವೆಂಕಟೇಶನ ದೇವಸ್ಥಾನಕ್ಕೆ ಅಮೇರಿಕಲ್ಲಿಪ್ಪೋವೆಲ್ಲ ಪುರುಸೊತ್ತಪ್ಪಗ ಹೋವುತ್ತವು. ಅಮೇರಿಕಲ್ಲಿಯೂ ಕೆನಡಲ್ಲಿಯೂ ಮಾರ್ಗಂಗೊ ಭಾರೀ ಲಾಯಕ ಇದ್ದು. ಇಂಟೆರ್ನೆಟ್ ಲ್ಲಿ ದಾರಿ ತಿಳುಕ್ಕೊಂಡರೆ ಎಲ್ಲಿಂದ ಎಲ್ಲಿ ವರೆಗೂ ಹೋಪಲಾವುತ್ತು. ವಾರಲ್ಲಿ ಒಂದರಿ ಹೀಂಗೆಲ್ಲ ಹೋಗಿ ಮನಸ್ಸಿಂಗೆ ಬಿಡುವು ಮಾಡಿಗೊಳ್ಳುತ್ತವು. ಒಟ್ಟಿಂಗೆ ಮಕ್ಕಳನ್ನೂ ಕರಕ್ಕೊಂಡು ಹೋದರೆ ಅವಕ್ಕೂ ಒಂದು ಬದಲಾವಣೆ ಸಿಕ್ಕುತ್ತು. ತಿಂಗಳಿಂಗೊಂದರಿ ಮನೆಗಳಲ್ಲಿ ಒಟ್ಟು ಸೇರಿ ಭಜನ ಮಾಡುವದು,ವಿಷ್ಣು ಸಹಸ್ರನಾಮ ಹೇಳುವದು ಹೀಂಗೆಲ್ಲ ಇಪ್ಪ ಕಾರಣ ಮಕ್ಕೊಗುದೆ ಇವೆಲ್ಲ ಗೊಂತಾವುತ್ತು. ನವಂಬರಿಂದ ಮತ್ತೆ ಚಳಿಗಾಲ. ಥೇಂಕ್ಸ್ ಗಿವಿಂಗ್ ಡೇ,ಮತ್ತೆ ಬೇರೆ ಹಬ್ಬಂಗೊಕ್ಕೆ ರಜೆಯೂ ಇರುತ್ತು. ಫಾದರ್ಸ್ ಡೇ, ಮದರ್ಸ್ ಡೇ ಹೀಂಗೆಲ್ಲ ಒಂದೊಂದು ನೆಂಪಿಲ್ಲಿ ರಜೆಯೂ ಇರುತ್ತು. ಯುಗಾದಿಗೆ ವಿಶೇಷವಾಗಿ ವಿನೋದಾವಳಿಗಳನ್ನೂ ಮಡಿಕ್ಕೊಳ್ಳುತ್ತವು. ಈ ವರ್ಷ ಸಿಹಿ ಕಹಿ ಚಂದ್ರು ಬಳಗ ಬಂದಿತ್ತು. ಇನ್ನು ಅಕ್ಕನ ಬಳಗ ಹೇಳಿ ಕನ್ನಡಿಗರ ಸಂಘ ಇದ್ದು ವರ್ಷಕ್ಕೊಂದರಿ ದೂರ ದೂರಂದ ಬಂದು ಸೇರುತ್ತವು. ನಮ್ಮ ಕನ್ನಡ ಸಾಹಿತಿಗಳನ್ನೋ, ಮಂತ್ರಿಗಳನ್ನೋ ಬರುಸುತ್ತವು. ಚೆಕ್ ಇ ಚೀಸ್ ಗಳ ಹಾಂಗಿಪ್ಪ ಆಟಂಗೊಕ್ಕೆ ಕರಕ್ಕೊಂಡು ಹೋದರೆ  ಮಕ್ಕೊಗೆ ಕೊಶಿ ಅವುತ್ತು. ತಿಂಗಳಿಂಗೊಂದರಿಯಾದರೂ ಒಂದು ಟಿಕೆಟಿಂಗೆ ೨೫ ಪೈಸೆ ಹಾಂಗ್ರೆ ಖರ್ಚು ಮಾದದ್ದರೆ ಮಕ್ಕಳ ಹೆರಿಯೋರಿಂಗೆ ಸಮಾಧಾನ ಅಗ. ಚಳಿಗಾಲಲ್ಲಿ ದೊಡ್ಡ ದೊಡ್ಡ ಮೋಲ್ ಗೊ, ವಾಲ್ ಮಾರ್ಟ್ ಗೊಕ್ಕೆ ಹೋಗಿ ಬೆಶ್ಚಂಗೆ ಇಪ್ಪಲೂ ಆವುತ್ತು. ವಾಲ್ ಮಾರ್ಟ್ ಗಳಲ್ಲಿ ಮಕ್ಕೊಗೆ ಆಡುಲೆ ಹೇಳಿಯೇ ಜಾಗೆ ಇರುತ್ತು. ಸಾಮಾನುಗೊಕ್ಕೆ ಒಂದಕ್ಕೆ ನಾಲ್ಕರಷ್ಟು ಬೆಲೆ ತೋರುಸುವಗ ಈ ಖರ್ಚುಗಳ ಅವು ಸರಿ ಮಾಡುತ್ತವು.
        ಚಳಿಗಾಲ ಮಾಂತ್ರ ರಜ ಕಷ್ಟ ಅಕ್ಕು. ಈ ವರ್ಷದ ಹಾಂಗಾದರೆ ತೊಂದರೆ ಇಲ್ಲೆ. ಚಳಿಗಾಲಕ್ಕಪ್ಪಗ ಮರಂಗೊ ಎಲ್ಲ ಎಲೆ ಬಿದ್ದು ಒಣಗೊಗೊಂಡಿಪ್ಪಗ ಮರಂಗೊ ಸತ್ತು ಹೋದ ಹಾಂಗೆ ಇಪ್ಪದು ಬಿಟ್ಟರೆ ಇಲ್ಲಿ ಹಸುರು ಬಾಣ್ಣದ ಸೀರೆ  ಸುತ್ತಿಗೊಂಡು ಭೂಮಾತೆ ಕೊಶಿಲ್ಲಿ ಇದ್ದ ಹಾಂಗೆ ಕಾಣುತ್ತು. ಮರಂಗಳ ಎಲೆ ಉದುರುವಂದ ಮದಲೆ ಎಲೆಗಳ ಬಣ್ನ ಬದಲಾವುತ್ತು. ಆಗ ಕಾಡಿನ ನೋಡುಲೆ ಚೆಂದ ಕಾಣುತ್ತು.ಇಡೀ  ಎಲೆಗೊಕ್ಕೆಲ್ಲ ಬಣ್ಣ ಕೊಟ್ಟ ಹಾಂಗೆ ಬಣ್ನದ ಲೋಕವನ್ನೇ ಸೃಷ್ಟಿ ಮಡುತ್ತು. ಕ್ರೋಟನ್ ಮರಂಗಳ ಹಾಂಗೆ ಕಾಣುತ್ತು. ಆದರೆ ಎಲೆ ಉದುರಿ ಅಪ್ಪಗ ಅಷ್ಟರ ವರೆಗೆ ಕೇಳ್ಯೊಂಡಿಪ್ಪ ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳ್ಲೆ ಸಿಕ್ಕುತ್ತಿಲ್ಲೆ. ಆ ಸಮಯಲ್ಲಿ ಆಕಾಶಲ್ಲಿ ಹಕ್ಕಿಗಳ ಗುಂಪು ವಲಸೆ ಹೋಪದರ ನೋಡುಲಕ್ಕು. ಪ್ರಕೃತಿಯ ವ್ಯತ್ಯಾಸ ಅವಕ್ಕೂ ಗೊಂತಾವುತ್ತು.ಮರಂಗೊ ಮಾಚ್ ಕೊನೆಗಪ್ಪಗ ಚೆಗುರುಲೆ ಶುರು ಆದರೆ ಮತ್ತೆ ಕಾಡಿನ ಹಸುರು ತುಂಬುತ್ತು. ಹಕ್ಕಿಗಳ ಕೂಗಿನ ಮತ್ತೆ ಕೇಳುಲಕ್ಕು. ಸತ್ತೇ ಹೋತೋ ಹೇಳಿ ಒಣಗಿಗೊಡಿದ್ದ ಸಾಲು ಮರಂಗೊ ಮಾರ್ಗದ ಕರೆಲ್ಲಿಪ್ಪದು ಚೆಗುರುವಗ, ಮತ್ತೆ ನೋಡುಲೆ ಭಾರಿ ಚೆಂದ. ಒಂದೇದ್ಲ್ಲಿ ಮನೆ ಎದುರು ಹಸುರು ಹುಲ್ಲಿನ ಲಾನ್, ಮಾರ್ಗದ ಕರೆಲ್ಲಿ ಸಣ್ನ ಸಣ್ನ ಮರಂಗೊ, ಹತ್ತರಾಣ ಕಾಡುಗಲಲ್ಲಿ ತುಂಬ ರ್ತ್ತರಕ್ಕೆ ಬೆಳೆದ ಮರಂಗಳ ಸಮೂಹ ಒಟ್ಟಾರೆ ಪ್ರಕೃತಿ ಸೌಂದರ್ಯ ಇಲ್ಲಿ ಕಾಲು ಮುರುದು ಬಿದ್ದೊಂಡಿದ್ದೋ ಹೇಳಿ ಎನುಸುತ್ತು. ಉದಿಯಪ್ಪಗ ಕೆಲವು ಜನ ವಾಕ್ ಹೋಪದಿದ್ದು. ಎನಗೂ ಉದಿಯಪ್ಪಗ ೩ ಮೈಲಿನಷ್ಟು ನಡದು ಅಭ್ಯಾಸ. ಹೀಂಗೆ ನಡವಗ ದಾರಿಲ್ಲಿ ಸಿಕ್ಕಿದ ಸ್ಥಳೀಯ ಜನಂಗೊ ಕಂಡ ಕೂಡಲೇ ಗುಡ್ ಮೋರ್ನಿನ್ಗ್ ಹೇಳುವ ಸತ್ಸಂಪ್ರದಾಯ ವಿದೇಶಂದ ಬಂದೋರತ್ರೆ ಕಂಡತ್ತಿಲ್ಲೆ. ಮತ್ತೆ ನಾವು ನಿಂದರೆ ನೀನು ಹೇಂಗಿದ್ದೆ ಹೇಳಿ ಎಲ್ಲ ಮಾತಾಡುಸುತ್ತವು.ಒಂದನೆಯದಾಗಿ ವಠಾರ ಸ್ವಚ್ಛತೆಯ ಬಗ್ಗೆ ಹೇಳುತ್ತರೆ ನಾವು ಇವರಿಂದ ಕಲಿವಲಿದ್ದು. ಆದರೆ ಭಾರತಲ್ಲಿ ಎಂದಿಂಗೆ ಪ್ರೈಸರ ಮಾಲಿನ್ಯದ ಬಗ್ಗೆ ಜನಂಗೊಕ್ಕೆ ಅರಿವು ಉಂಟಾವುತ್ತೋ ಹೇಳ್ಲೆಡಿಯ. ಅವವೇ ತೀಳುದು ಂಆಡಿರೆ ಚೆಂದ ಮಾಂತ್ರ ಅಲ್ಲ ಸರಿಯಕ್ಕು. ಇಲ್ಲಿಯಾಣೋವಕ್ಕೆ ಹೇಳೆಡ ಅವ್ವೇ ತೀಳುದು ಮಾಡುವುದರ ನೋಡಿರೆ ನಮ್ಮ ದೇಶಲ್ಲಿ ರಾಮ ರಾಜ್ಯ ಬಿಡಿ ಜನಂಗಳ ಉದಾಸೀನಂದ ಮೂರ್ಖರ ರಾಜ್ಯವೇ ಆಗಿ ಹೋಕೋ ಹೇಳಿ ಸಂಶಯ ಆವುತ್ತು.

   
   

No comments:

Post a Comment