Sunday, February 24, 2013

ಕಳೆದು ಹೋದ ಕಾಲದ ನೆನಪು

     ಕಳದು ಹೋದ ಕಾಲದ ನೆನೆಪು                                                                                                                                                                        ಎನ್ನ ಅಮ್ಮಂಗೆ ಐದು ಜನ ಅಣ್ಣಂದ್ರು. ಒಂದು ರೀತಿಲ್ಲಿ ಪಂಚ ಪಾಂಡವರ ಹಾಂಗೆ ಅವು. ಎನ್ನ ಅಮ್ಮ ಒಂದೇ ತಂಗಿ ಅವಕ್ಕೆ. ಹಾಂಗೆ ತಂಗೆಯತ್ರೆ ತುಂಬ ಪ್ರೀತಿ ಎಲ್ಲೋರಿಂಗು.ಅಜ್ಜಿ, ಅಜ್ಜನ ನೋಡಿದ ನೆಂಪು ಎನಗೆ ಬತ್ತಿಲ್ಲೆ. ಅಜ್ಜ ಮೊದಲೇ ಸತ್ತದು ಕಾಣ್ತು. ಅಜ್ಜಿ ಮತ್ತೆ ಎಂತಪ್ಪ ಸಿಹಿ ಮೂತ್ರ ರೋಗ ಜೋರಾಗಿ ಸತ್ತದಡೊ. ಅ ಕಾಲಲ್ಲಿ ಆ ವಠಾರಲ್ಲಿ ಡಾಕ್ಟ್ರಕ್ಕಳೇ ಇಲ್ಲ. ಏನಾದರೂ ಬೇಕಾದರೆ ದೂರದ ಪುತ್ತೂರಿಂದ ಕರಕ್ಕೊಂಡು ಬರೆಕ್ಕಡ.ಅಂತೂ ಶುಶ್ರೂಷೆ ಸರಿ ಆಗದ್ದೆ ಅಜ್ಜಿ ತೀರಿ ಹೋದ್ದದು ಹೇಳಿ ಒಬ್ಬ ಮಾವ ಹೇಳಿದ ನೆಂಪು.ಆನು,ಎನ್ನ ತಮ್ಮ ಅಜ್ನ ಮನೆಲ್ೇ ಹುಟ್ಟಿ ದೊಡ್ಡ ಆದ್ದಡೊ.ಹಾಂಗೆ ಎನ್ನ ಹುಟ್ಟೂರು ಅದೇ ಅಜ್ಜ ಮನೆ-ಪೈವಳಿಕೆ ಗ್ರಾಮ. ಎಂಗೊ ಸಣ್ಣಾಗಿಪ್ಪಗಳೇ ಒಬ್ಬ ಮಾವ ಪಾಲಾಗಿ ಬೇರೆ ಕೂದಿತ್ತಿದ್ದ. ಮದುವೆ ಆದ ಮೇಲೆ ಅಜ್ಜನತ್ರೆ ಪಾಲು ಕೇಳಿದ್ದಕ್ಕೆ ಅಂಬಗ ಬರೇ ಎರಡು ಮುಡಿ ಗೆದ್ದೆಯ ಕೋಪಲ್ಲಿ ಅಜ್ಜ ಕೊಟ್ಟದಡೊ. ಅವ ಮತ್ತೆ ಅವನ ಅತ್ತೆ ಮನೆಯೋರ ಸಹಾಯಂದ ಗೆದ್ದೆಯ ತೋಟ ಮಾಡಿ ಬೇರೆ ಜಾಗೆ ಕ್ರಯಕ್ಕೆ ತೆಗದು ಹೀಂಗೆಲ್ಲ ಮಾಡಿ ಊರಿಲ್ಲಿ ಒಬ್ಬ ಗಟ್ಟಿ ಕುಳ ಹೇಳಿ ಹೇಳುಸಿಗೊಂಡಿದ.ಆದರೆ ಅಮ್ಮ,ಅಪ್ಪ ಇದ್ದಲ್ಲಿಂಗೆ ಬಾರಡೊ.
ಅಜ್ಜ,ಅಜ್ಜಿ ತೀರಿಹೋದ ಮೇಲೆ ಒಳುದೋರೂ ದೊಡ್ಡಣ್ಣನತ್ರೆ ಸರಿಯಾಗದ್ದೆ ಪಾಲು ಕೇಳಿದವಡ. ಎಲ್ಲೋರ ಪೈಕಿ ಸಣ್ಣ ಮಾವಂಗೆ ಮದುವೆ ಆದ್ದೇ ಮತ್ತೆ. ಪಾಲಿನ ವ್ಯಾಜ್ಯ ಡವಗ ಇಬ್ರು ಮೆಬ ಿಟ್ಟಿತ್ತಿದ್ದವು. ಅಂಬಗ ಮದಲೇ ೆ ಬಿಟ್ಟು ಹೋದ ಮಾವ ಎರಡೇ ಮಾವನತ್ರೆ ಇವಕ್ಕೆ ಒಳ್ಳೆದು. ಅವನೇ ಸಣ್ನೊಂಗೆ ಮದುವೆ ಮಾಡುಸಿದ್ದಡೋ. ದೊಡ್ಡ ಮಾವ ಹಟವಾದಿ. ತಮ್ಮಂದ್ರಿಂಗೆ ಬಗ್ಗದ್ದೆ ಕೋರ್ಟಿಂದಲೇ ಪಾಲಾಯೆಕ್ಕಾಗಿ ಬಂತಡೊ.ಶುರುವಿಂಗೆ ದೊಡ್ಡ ಮಾವನೂ ಮೂರನೇ ಮಾವನೂ ಹತ್ತರೆ ಇತ್ತಿದ್ದವು. ದೊಡ್ಡಣ್ಣನ ಹತ್ತರೆ ಮಾಡ್ಯೊಂಡದು ಮೂರನೆ ಮಾವ. ಆದರೆ ಎರಡನೆ ಮಾವನೂ ಮೂರನೆ ಮಾವನೂ ಒಂದರಿ ಆ ಕಾಲಲ್ಲಿ ಒಟ್ಟಿಂಗೆ ಕಾಶಿಗೆ ಹೋಗಿತ್ತಿದ್ದವಡೊ. ಅಂಬಗ ಅವಕ್ಕೆ ಒಂದೇ ಬುದ್ಧಿ ಇತ್ತಡೊ.ಮತ್ತೆ ಅಜ್ಜನ ಕಾಲಲ್ಲೇ  ಹೋಕೂರಕ್ಕೆ ಬಿಟ್ಟಿದವಾಡೊ.ಸಣ್ಣ ಮಾವಂದ್ರು ಇಬ್ರು ಕೆಳ ಬೈಲ್ಲಿ ಒಕ್ಕಲು ಮನೆಲ್ಲಿ ಇತ್ತಿದ್ದವು.ಮೇಲೆ ತರವಾಡು ಮನೆಲ್ಲಿ ದೊಡ್ಡ ಮಾವ, ಹತ್ತರೆ ಮತ್ತೊಂದು ಮನೆಲ್ಲಿ ಮೂರನೆ ಮಾವ ಹೀಂಗೆ ಇತ್ತಿದ್ದವು. ಅಜ್ಜಿ,ಅಜ್ಜನ ತಿಥಿ ಎಲ್ಲ ಅಪ್ಪದು ದೊಡ್ಡ ಮಾವನಲ್ಲಿ. ಆ ಸಮಯಕ್ಕಪ್ಪಗ ಎಂಗಳಲ್ಲೂ ಪಾಲಾಗಿ ಒಂದೇ ಮನೆಲ್ಲಿ ಬೇರೆ ಬೇರೆ ಇತ್ತಿದ್ದೆಯೊ. ದೊಡ್ಡ ಮಾವ ಯಾವಾಗಳೂ ನಂಬ್ರ ಹೇಳ್ಯೊಂಡು ಕಾಸರಗೋಡಿಲ್ಲೇ ಇತ್ತಿದ್ದ. ಅಂಬಗ ಮನೆಗೆ ಬಂದು ಹೋಯೆಕ್ಕಾರೂ ಉದಿಯಪ್ಪಗ ಒಂದು ಟ್ರೈನ್ ಮಾಂತ್ರ ಇದ್ದದುಬಸ್ಸಿಲ್ಲಿ ಉಪ್ಪಳ ವರೆಗೆ ಹೋಗಿ, ಮತ್ತೆ ರೈಲಿಲ್ಲಿ ಕಾಸರಗೋಡಿಂಗೆ. ಬಂದು ಹೋಪಲೆ ಕಷ್ಟ ಆವುತ್ತು ಹೇಳಿ ಅಲ್ಲಿ ಬಂಗ್ಲೆ ಹೋಟ್ಲಿಲ್ಲಿ ಊಟ ಇರುಳು ಮನುಗುಲೆ ಜಾಗೆ. ರಜ ಹೆದರಿಕೆ ಜಾಸ್ತಿ ಅವಂಗೆ. ಎಲ್ಯಾದರೂ ನಂಬ್ರ ವಾಯಿದೆಗೆ ಎತ್ತದ್ದರೆ ಎಂಕ್ಕೋ ಹೇಳಿ ಹೆದರಿಕೆ!
ಮತ್ತೆ ಆ ಕಾಲಲ್ಲಿ ಒಂದೇ ಬಸ್ಸು ಇದ್ದದು ಉಪ್ಪಳಕ್ಕೆ ಹೋಪಲೆ. ಮತ್ತೆ ಪುತ್ತೂರಿಂಗೆ ಹೋಪಲುದೆ. ಅಡಕ್ಕೆ ಗಾಡಿಲ್ಲಿ ಕೊಂಡು ಹೋಪದು. ಅಸಿನಾರೆ ಬ್ಯಾರಿಯ ಅಂಗುಡಿಗೆ ಎತ್ತುಸಿದರೆ ಅಲ್ಲಿಂದ ಎತ್ತಿನ ಗಾಡಿಲ್ಲಿ ಮಂಗಳೂರಿಂಗೆ ಮಂಗಳೂರಿಂಗೆ ಕೊಂಡು ಹೋಗಿ ಬೇಕಾದ ಸಾಮಾನಿನ ಪಟ್ಟಿ ಕೊಟ್ಟರೆ ಬ್ಯಾರಿಯೇ ಬೆಲ್ಲ ಮತ್ತೆ ಬೇರೆ ಜೀನಸು ಸಾಮಾನು ತಂದು ಕೊಡುಗು. ಅಷ್ಟು ನಂಬಿಕೆ ಬ್ಯಾರಿಯ ಹತ್ತರೆ ಎಲ್ಲೋರಿಂಗುದೇ.ಬ್ಯಾರಿ ಆರಿಂಗೂ ಮೋಸ ಮಾಡಿದ ಕತೆ ಆನು ಕೇಳಿದ್ದಿಲ್ಲೆ.ಆಸು ಪಾಸಿನ ಬ್ರಾಹ್ಮರೆಲ್ಲ ಬ್ಯಾರಿಯತ್ರೆ ಹೇಳಿ ಬೇಕಾದ್ದರ ತರುಸಿಗೊಂಡಿತ್ತಿದ್ದವು. ಅಡಕ್ಕೆ ತುಂಬ ಇದ್ದರೆ ಕೆಲವು ಜನ ಗಾಡಿಲ್ಲೇ ಹೋಪದೂ ಇದ್ದು. ಹೋದರೆ ಆ ವರುಷಕ್ಕಿಪ್ಪ ಉಳ್ಳಾಲ ಬೆಲ್ಲ ತಂದು ಬೆಶಿಲಿಂಗೆ ಒಣಗುಸಿ ಚೆಂಬಿನಳಗೆಲ್ಲಿ ತುಂಬುಸಿ ಮಡಗಿದರೆ ಜನಂಗೊಕ್ಕೆ ಸಮಧಾನ. ಆಸರಪ್ಪಗ ಉಳ್ಳಾಲ ಅಚ್ಚು ಒಂದು ತಿಂದು ಒಂದು ಚೆಂಬು ನೀರು ಕುಡುದರೆ ಮ್ಯಾಹ್ನದ ಊಟದ ವರೆಗೆ ತೊಂದರೆ ಇಲ್ಲೆ. ಹಸರು ಪಾಯಸಕ್ಕೆ ಉಳ್ಳಾಲ ಬೆಲ್ಲ ಹಾಕಿದರೇ ರುಚಿ. ಕೆಲವು ಜನ ಬ್ಯಾರಿ ಅಂಗುಡಿಂದಲೇ ತಪ್ಪೋರೂ ಇದ್ದವು.ಏನಾದರೂ ಅನುಪತ್ಯ ಇದ್ದರೆ ಬ್ಯಾರಿ ಹತ್ತರೆಸಾಮಾನಿನ ಪಟ್ಟಿ ಕೊಟ್ಟರೆ ಆತು. ತಾಂದು ಅಂಗುಡಿಲ್ಲಿ ಮಡಗ್ಗು ಮನೆಗೆ ಹೊತ್ತು ತಂದರಾತು. ಮನೆ ಮಾಡು ಮುಳಿದೇ ಹೆಚ್ಚಾಗಿ. ಅಲ್ಲದ್ದರೆ ತೋಟಲ್ಲಿ ಸೋಗೆ ಸಿಕ್ಕುತ್ತಲ್ಲದೋ? ಅಪರೂಪಕ್ಕೆ ಮಂಗಳೂರು ಹಂಚಿನ ಮಾಡುದೇ ಇದ್ದು. ಎರಡನೇ ಮಾವ ಮಾಡಿಂಗೆ ಹಂಚು ತರುಸಿ ಹಾಕುಸಿದ್ದ.
    ಎಂಗಳ ಮನೆ ಹತ್ತರಂದ ರೈಲಿಂಗೆ ಹೋಪಲೆ ಉಪ್ಪಳ ವರೆಗೆ ನಡದೇ ಹೋಯೆಕ್ಕು. ಉದೆಕಾಲಕ್ಕೆ ಬೆಳ್ಳಿ ಮೂಡುವಗ ಮನೆಂದ ಹೆರಟರೆ ಸ್ಟೇಶನಿಂಗೆತ್ತುವಗ ಸರಿ ಆವುತ್ತು. ಕಾಸರಗೋಡಿಂಗೆ ನಡದೇ ಹೋಯ್ಕೊಂಡಿತ್ತಿದ್ದವು. ಯಾವ ಹೊಳಗೂ ಸಂಕ ಇಲ್ಲೆ. ಕೆಲವು ಜನ ರೈಲು ಸಮಯ ತಪ್ಪುಸಿ ರೈಲ್ವೇ ಸಂಕಲ್ಲೇ ದಾಂಟಿಗೊಂಡಿತ್ತಿದ್ದವು. ಅಲ್ಲದ್ದರೆ ಓಡವ ಕಾಯೆಕ್ಕು. ಮಂಗಳೂರಿಂಗೆ ವರೆಗೆ ಗಾಡಿ ಹೋಗಡೊ. ಉಳ್ಳಾಲ ಹೊಳೆ ದಾಂಟೆಕ್ಕನ್ನೆ ಅಲ್ಲಿಂದ ಲಾಂಚಿಲ್ಲಿ ಹೋಯೆಕ್ಕಾಗಿತ್ತಡೊ.ಸೀದಾ ಹೋಯೆಕ್ಕಾರೆ ರೈಲಿಲ್ಲಿ ಹೋಯೆಕ್ಕಡೊ.
ಎಂಗಳ ಮನೆ ಹತ್ತರೆ ಐದನೇ ಕ್ಲಾಸು ವರೆಗೆ ಶಾಲೆ ಇತ್ತು. ಮತ್ತೆ ಶಾಲಗೆ ಹೋಯೆಕ್ಕಾರೆ ಪೈವಳಿಕಗೆ ಹೋಪಲಕ್ಕು. ಅಪ್ಪ ಎನ್ನ ಶುರುವಿಂಗೆ ಪೆರ್ಲ ಶಾಲೆ ಒಳ್ಳೆದು ಹೇಳಿ ಸೇರುಸಿದವು. ಆದರೆ ದಿನಕ್ಕೆ ಮೂರು ಮೈಲು ನಡದು ಹೋಯೆಕ್ಕು. ಕ್ಟವ ಮನೆಲ್ಲಿ ಹೇಳಿಗೊಂಡದಕ್ಕೆ ನಾಲ್ಕನೆ ಮಾವ ಪೈವಳಿಕೆಗೆ ಬರಲಿ. ಎನ್ನ ಮನೆಂದ ಹೋಪಲಕ್ಕು ಹೇಳಿದ್ದಕ್ಕೆ ಪೆರ್ಲಂದ ಬಿಡುಸಿ ಪೈವಳಿಕೆಲ್ಲಿ ಸೇರಿದೆ.ಅಂಬಗ ಎಂಟನೆ ಕ್ಲಾಸು ವರೆಗೆ ಮಾಂತ್ರ ಅಲ್ಲಿದ್ದದು.ಮತ್ತೆ ವಿಟ್ಳವೋ ಮಂಜೇಶ್ವರಕ್ಕಕ್ಕೋ ಹೋಗಿ ವಿದ್ಯಾಭ್ಯಾಸ ಮುಗಿಶಿಕ್ಕಿ ಮತ್ತೆ ಮಾಯಿಪ್ಪಾಡಿಲ್ಲ್ ಮಷ್ಟಕ್ಕಳ ಟ್ರೈನಿಂಗ್ ಮುಗಿಶಿದ್ದು. ಎನ್ನ ತ್ತಿ ಜೀವನದ ೨೮ ವರ್ಂಗಳೂ ಪೈವಳಿಕೆಯೇ ಆಗಿ ಹೋತು. ಹಾಂಗೆ ಹುಟ್ಟಿದೂರಿಲ್ಲೇ ಕೆಲಸ ಮಾಡುವ ಯೋಗ!
ಆದರೆ ಕಲ್ತ ಶಾಲೆಲ್ಲೇ ಕೆಲಸ ಮಾಡುವ ಹಾಂಗೆ ಆದ್ದು ಎನ್ನ ಪುಣ್ಯ!.
ಹಾಂಗೆ ಪೈವಳಿಕೆಲ್ಲಿ ಕಲಿವಲೆ ಬಪ್ಪಲಾದ್ದು ಎನ್ನ ನಾಲ್ಕನೆ ಮಾವನಪೆಂದ.ಮಾವಂದ್ಸ್ರು ಐದು ಜನ ಇದ್ದರೂ ಮನೆಂದ ಶಾಲಗೆ ಹೋಪಲಕ್ಕು ಹೇಳಿ ಅನುಕೂಲ ಮಾಡಿ ಕೊಟ್ಟದು ಆ ಮಾವ! ಅವನೂ ಅವನ ವಿದ್ಯಾಭ್ಯಾಸ ಅರಧಲ್ಲಿ ನಿಲ್ಲುಸೆಕ್ಕಾಗಿ ಬಂದದು ಅವನ ದುರ್ಭಾಗ್ಯ! ನೀರ್ಚಾಲು ಮಹಾಜನ ಕಾಲೇಜಿಲ್ಲಿ ವಿದ್ವಾನ್ ಕಲ್ತುಗೊಂಡಿಪ್ಪಗಳೇ ಅಜ್ಜಿ, ಅಜ್ಜ ಇಬ್ರೂ ತೀರಿ ಹೋದ್ದು. ವಿದ್ವಾನ್ ಕಯ್ಯಾರು ರೈಗೊ ಮಾವನ  ಜೆತೆಲ್ಲಿ ಕಲ್ತುಗೊಂಡಿತ್ತಿದ್ದವಡೊ.ಮುಂದೆ ಕಾಯರ್ಕಟ್ಟೆಲ್ಲಿ ಹೈಸ್ಕೂಲು ಅಪ್ಪಲುದೇಕುಂಡೇರಿಯೋರೊಟ್ಟಿಂಗೆ ಸೇರಿ ಸಾರ್ವಜನಿಕಲ್ಲಿಯೂ ಕೈಜೋಡುಸಿತ್ತಿದ್ದ.ಸಂಸ್ತಲ್ಲಿ ಯುಂಬ ಜ್ಞಾನ ಇದ್ದು. ಹಾಂಗೆ ಎಲ್ಲ ಫೀಲ್ಡಿಲ್ಲಿಯೂ ತಾನು ಗೊತಿದ್ದೋನು ಹೇಳುವದರತೋರುಸಿಗೊಂಡಿತ್ತಿದ್ದ. ಮಾವಂದ್ರ ಪೈಕಿ ತಂಗೆ ಹತ್ರೂ, ತಂಗೆ ಮಕ್ಕಳತ್ರೂ ಹೆಚ್ಚು ಕಾಳಜಿ ಆ ಮಾವಂಗಿತ್ತು. ಈಗ ಎಲ್ಲ ಮಾವಂದ್ರೂ ಇಲ್ಲೆ.ಎರಡು ಮಾವಂದ್ರ ಮಕ್ಕೊ ಅಲ್ಲೇ ಇದ್ದವು. ಬಾಕಿದ್ದೋರು ಬೇರೆ ಬೇರೆ  ಬೆಂಗಳೂರಿಲ್ಲಿಯೋ ಇದ್ದವು. ಮಾವಂದ್ರು ಅಲ್ಲಿ ಇದ್ಷ್ಟು ಸಮಯ ಅಜ್ಜನ ಮನೆ ನೆಂಪು, ಪರಿಸರದ ನೆಂಪು ಮರದ್ದಿಲ್ಲೆ.ಕೆಲಸ ಮಾಡುವಗಳೂ ಅಲ್ಲಿದ್ದೋರೆಲ್ಲ ಎನಗೆ ಸಹಕಾರ ಕೊಟ್ಟಿದವು.ಎನಗೆ ಕಲಿಶಿಫ಼್ದ ಮಾಷ್ಟ್ರಕ್ಕಳೇ ಎನ್ನ ಸಹೋದ್ಯೋಗಿಗಳೂ ಆಗಿತ್ತಿದ್ದವು. ಎಂಗಳುದೇ ಬಾಳಿಕೆಲ್ಲಿ ಇಲ್ಲೆ. ಅಂದ್ರಾಣ ಪ್ರಯಾಣದ ಒದ್ದಾಟ, ಕಲಿವಲೆ ಪಟ್ಟ ಕ್ಟ, ಮದ್ದಿಂಗೆ ಪಟ್ಟ ಒದ್ದಾಟ ಎಲ್ಲ ಈಗ ದೂರವಾಯಿದು. ಮನೆಂದ ಹೆರಟ ಕೂಡ್ಳೇ ಬಸ್, ಅವಾ ಸ್ವಂತ ವಾಹನ ಇದ್ದೋರು ಜಾಲಿಂದಲೇ ಕಾರು ಹತ್ತಿ ಬೇಕಾದಲ್ಲಿಗೆ ಹೋಪಲಾವ್ತು. ಕಾಲ ಬದಲಾದ ಹಾಂಗೆ  ಎಲ್ಲವೂ ಬದಲಾಗಿ, ಅಂದ್ರಾಣದ್ದು ಒಂದು ಕೆಟ್ಟ ಕನಸೋ ಹೇಳಿ ತೋರುತ್ತು.

No comments:

Post a Comment