Sunday, February 24, 2013

ನೆನಪಿನ ಬುತ್ತಿ

         ನೆನಪಿನ ಬುತ್ತಿ
ಮನ್ನೆ ಒಂದು ದಿನ ಎನ್ನ ಗೆಳೆಯನೊಬ್ಬನೊಟ್ಟಿಂಗೆ ಮಾತಾಡಿಗೊಂಡಿಪ್ಪಗ ಅವನ ಗೆಳೆಯ ಒಬ್ಬ ಬಂದ. ಅವನ ಮಗಳ ಹೇಳಿಕೆ ಕಾಗದ ಕೊಡೆಕ್ಕಾಗಿತ್ತು ಅವಂಗೆ.ದೊಡ್ಡ ಮಗಳಿಂಗೆ ಮದುವೆ ಆಗಿತ್ತು. ಈಗ ಎರಡನೆ ಮಗಳ ಮದುವೆ. ಬೆಂಗಳೂರಿಲ್ಲಿ ಸೋಫ್ಟ್ ವೇರ್ ಇಂಜಿನೀಯರ್ ಅಡೊ ಮದಿಮ್ಮಾಯ. ಹೀಂಗೆ ಅವು ಇಬ್ರು ಶುದ್ದಿ ಮಾತಾಡಿಗೊಂಡಿಪ್ಪಗ ಅವನ ಕಾಂಬಲೆ ಬಂದದಲ್ಲದೋ! ಹೇಳಿ ಬಂದೋನ ಮೋರೆ ಆನು ನೋಡಿದ್ದು ಮತ್ತೆ. ಅವನುದೇ ಎನ್ನ ನೋಡಿದ್ದಾ ಇಲ್ಲೆ. ಆನು ಅವನ ಮೋರೆ ನೋಡುತ್ತೆ. ಎಲ್ಲಿಯೋ ನೋಡಿದ ನೆಂಪು! ಕೇಳಿಯೇ ಬಿಟ್ಟೆ. ಎನ್ನ ಗುರ್ತ ಇದ್ದೋ ಹೇಳಿ ಆನು ಕೇಳಿದ ಮೇಲೆ ಅವ ಎನ್ನ ಗಮನಿಸಿ ನೋಡಿದೋನು " ನೀವು ಬಾಳಿಕೆ ಸುಬ್ಬಣ್ನ ಭಟ್ತರಲ್ಲವೋ" ಕೇಳಿದ ಅಲ್ಲಿ ಬೇರೆ ಎರಡು ಜನ ಇತ್ತಿದ್ದವು. ಅವಕ್ಕೂ ಆಶ್ಚರ್ಯ! ಅವ ಎನ್ನ ಹೇಂಗೆ ಗುರ್ತ ಹಿಡುದ ಹೇಳಿ. " ಹೌದಲ್ಲ! ನಿಮಗೆ ಇವರನ್ನು ಮೊದಲೇ ಗೊತೋ? " ಹೇಳಿ ಅಲ್ಲಿದ್ದ ಮತ್ತೊಬ್ಬ ಕೇಳಿದ. ಕೇಳಿದೋನು,ಬಂದೋನ ದೊಡ್ಡ ಅಳಿಯನೇ ಆಗಿತ್ತಿದ್ದ. ಅವನನ್ನೂ ಎನಗೆ ಗೊಂತಿದ್ದು.
೩೬ ವರ್ಷ ಹಿಂದೆ ಆನು ಕೆಲಸ ಮಾಡ್ಯೊಂಡಿದ್ದ ಪೈವಳಿಕೆ ಶಾಲೆ ಪ್ರದೇಶಲ್ಲೇ ಪಂಚಾಯತ್ ಸ್ಬಂದಿ ಆಗಿದ್ದೋನು ಅವ. ಎರಡು ವರಷ ಮಾ॓ಂತ್ರ ಅವ ಅಲ್ಲಿದ್ದದು. ಮತ್ತೆ ಬೇರೆ ಅವನ ಊರಿಂಗೇ ವರ್ಗ ಆಗಿ ಹೋಗಿತ್ತಿದ್ದ. ಈಗ ಕೆಲಸಂದ ವಿರಾಮವೂ ಸಿಕ್ಕಿ ಹತ್ತು ವರ್ಷ ಕಳಾತು. ಎಲ್ಲೋರೂ ಅವಂಗೆ ಗುರ್ತದೋರೆ. ಒಂದರಿ ಪರಿಚಯ ಆದರೆ ಸಾಕು. ಮತ್ತೆ ಕಾಂಬಲೆ ಸಿಕ್ಕಿದರೆ ದಿನಿಗೇಳಿ ಮಾತಾಡುಸದ್ದೆ ಬಿಡ. ಎನಗೂ ಹಾಂಗಿದ್ದೋರತ್ರೆ ಮಾತಾಡುಲೆ ಇಷ್ಟ. ಅವರವರ ಸುಖ ಕಷ್ಟಂಗಳ ವಿಚಾರುಸಿ, ನಾವು ಬೇಜಾರಿಲ್ಲಿದ್ದರೆ ಅದಕ್ಕೆ ಪರಿಹಾರದ ಬಗ್ಗೆ ನವಗೆ ಆಲೋಚನೆ ಹೇಳುವದು, ಸಂತೋಷಲ್ಲಿದ್ದರೆ ತಾನೂ ಭಾಗಿಯಪ್ಪದು- ಹೀಂಗೆಲ್ಲ ಎಲ್ಲೋರತ್ರೂ ಒಳ್ಳೆದು ಅವಂಗೆ. ಎಲ್ಲೋರಿಂಗೂ ಅವನತ್ರೆ ಇಷ್ಟ. ಅಂದ್ರಾಣ ಗೆಳೆತನವ ಅವ ಮರದ್ದಾ ಇಲ್ಲೆ. ಬಾಕಿದ್ದೋರು ಕೆಲವು ಜನ ಅವಂಗೆ ಮತ್ತೆ ಕಾಂಬಲೆ ಸಿಕ್ಕಿ ಮಾತಾಡಿದ್ದೂ ಇದ್ದಡ. ಆನು ಮಾಂತ್ರ ಅಂದೇ ಕಂಡದು. ಆದರೆ ಇಲ್ಲಿ ಯೋಚನೆ ಮಾಡೆಕ್ಕಾದ್ದು ಅವನ ನೆನಪು ಶಕ್ತಿ. ಎಡೆಲ್ಲಿ ಕಾಣದ್ದ ಕಾರಣ ದೊಡ್ಡ ಮಗಳ ಮದುವಗೆ ಎನಗೆ ಹೇಳಿದ್ದ ಇಲ್ಲೆ ಬೇರೆ ಒಂದೆರಡು ಜನ ಹೋಗಿತ್ತಿದ್ದವಡೊ.ಅಂದು ಕಂಡದೇ  ಕಂಡದು. ಮತ್ತೆ ಅವ ಬಿಡನೇ ಬಿಡ. ಅಲ್ಲೇ ಹತ್ತರೆ ಅಳಿಯನ ಮನೆಗೆ ಮತ್ತೆ ಹೋಗಿ ಕರೆಯೋಲೆಯನ್ನೂ ಕೊಟ್ಟು, ಮದುವಗೆ ಬಾರದ್ದೆ ಕಳಿಯ ಹೇಳಿ ಒತ್ತಾಯ ಮಾಡಿದ. ಆನು ಅಮೇರಿಕಕ್ಕೆ ಬಪ್ಪದಕ್ಕೆ ಮೂರು ದಿನ ಮದಲೇ ಮದುವೆಯಾಗಿತ್ತು. ಹೋಗಿತ್ತಿದ್ೆ. ಅವಂಗೆ ಕೊಶಿಯೋ ಕೊಶಿ. ಅವನ ಮನೆಯೋರತ್ರೆ ಎನ್ನ ಕರಕ್ಕೊಂಡು ಹೋಗಿ ಪರಿಚಯ ಹೇಳಿ ೩೬ ವರ್ಷ ಕಳುದತ್ತು. ಎಂಗಳದ್ದು ಹಳೆ ಗೆಳೆತನ.ಹೇಳಿ ಅವನ ಹೆಂಡತ್ತಿಗೆ ಮಕ್ಕೊಗೆ ಪರಿಚಯ ಹೇಳಿದ. ಮತ್ತೆ ಅವರತ್ರೆ ಎನ್ನ ಹೊಗಳಿದ್ದೇ ಹೊಗಳಿದ್ದು. ಇವನೇ ಹೇಳಿದ ಕಾರಣ ಎನಗೆ ನೆಂಪಾದ್ದು ಹೇಳಿ ಎಂಗಳ ಗೆಳೆತನದ ಬಗ್ಗೆ ಹೇಳಿದ. ಮದುವಗೆ ಹೋದ್ದು ಕೊಶಿ ಆಗಿತ್ತು ಅವಂಗೆ.
    ಅವಂಗೂ ಎನಗೂ ಅವಿನಾಭಾವ ಸಂಬಂಧ ಉಂಟಪ್ಪಲೆ ಇನ್ನೊಂದು ಕಾರಣವೂ ಇದ್ದು. ಅವನ ಅಕ್ಕನ ಮಗ ಎಳೆ ಶಿಶುವಾಗಿಪ್ಪಗಳೇ ಅಬ್ಬೆ ತೀರಿ ಹೋದ ಕಾರಣ ಆ ಮಗುವಿಂಗೆ ಅಬ್ಬೆ ಹೇಳುಲೆ ಇವನ ಅಮ್ಮನೇ ಆಗಿತ್ತಡ. ಅಜ್ಜಿಯನ್ನೇ ಅಬ್ಬೆ ಹೇಳ್ಯೊಂಡು ಬೆಳದ್ದಡೊ ಆ ಮಾಣಿ. ಬೆಳೆದು ಎಂಟೊಂಬತ್ತು  ವರ್ಷ ಆದರೂ ಅಪ್ಪ ಇದ್ದಲ್ಲಿಂಗೆ ಬಯಿಂದಾ ಇಲ್ಲೆಡೊ. ಅವಂದ ದೊಡ್ಡೋರು ಮೂರು ಮಕ್ಕೊ ಇದ್ದರೂ ಈ ಮಾಣಿ ಅಖೈರಿಯವ ಆಗಿ ಅವನತ್ರೆ ಅಪ್ಪಂಗೆ ಪ್ರೀತಿ ಆದರೂ ಅವನ ನೋಡೆಕ್ಕಾರೆ ಅಲ್ಲಿಗೇ ಹೋಪದಡ. ಅವನ ಅಣ್ಣಂದ್ರನ್ನೇಮಾತಾಡುಸುವದು ಅಜ್ಜನ ಮನಗೆ ಹೋದರೆ ಮಾಂತ್ರ. ಅವರದ್ದು ದೊಡ್ಡ ಕುಟುಂಬ. ಹತ್ತ್ತಿಪ್ಪತ್ತು ಜನ ಇದ್ದವು ಆ ಮನೆಲ್ಲಿ. ಮಾಣಿ ಬಯಿಂದನೇ ಇಲ್ಲೆಡೊ. ಅಜ್ಜನ ಮನೆಯೇ ತನ್ನ ಮನೆ ಹೇಳಿ ಗ್ರೇಶಿತ್ತಿದ್ದಡೊ. ಶಾಲೆಗೆ ಹೋಪಲೂ ಬೇರೆ ಮಕ್ಕೊ ಇಲ್ಲದ್ದ ಕಾರಣ ಶಾಲಗೂ ಹೋಗಡ.
   ಆನು ಮಾಣಿಯ ಅಪ್ಪ ಈ ಶುದ್ದಿ ಎನ್ನ ಹತ್ತರೆ ಹೇಳಿದ. ಆನಂಬಗ ಅವರ ಮನೆಗೆ ಯಾವಾಗಲೂ ಹೋಯ್ಕೊಂಡಿತ್ತಿದ್ದೆ. ಅವರ ಮನೆಲ್ಲೇ ಇತ್ತಿದ್ದೆ ಹೇಳುಲಕ್ಕು. ಅಷ್ಟು ಸ್ನೇಹ ಅವನ ಅಪ್ಪಂಗೂ ಎನಗೂ ಇತ್ತು. ಈ ಶುದ್ದಿಯ ಎಲ್ಲ ಹೇಳಿ ಎಂತ ಮಾಡುವದು? ಹೇಂಗೆ ಮಾಡುಲಕ್ಕು. ಪ್ರಾಯ ಹತ್ತು ವರ್ಷ ಇನ್ನು ಶಾಲಗೆ ಸೇರುಸಲೆ ಅಕ್ಕೋ? ಹೇಂಗೆ ಹೇಳಿ ಕೇಳಿದ. ನಿಂಗೊ ಅವನ ಹೇಂಗಾದರೂ ಇಲ್ಲಿಗೆ ಕರಕ್ಕೊಂಡು ಬನ್ನಿ ಎನ್ನಂದಪ್ಪ ಪ್ರಯತ್ನ ಮಾಡುವೆ ಹೇಳಿದೆ. ಹೇಂಗೋ ಮನಸ್ಸು ಮಾಡಿದ ಮಾಣಿ ಮನಗೆ ಬಪ್ಪಲೆ. ಬಂದೋನ ಆನು ಹೇಂಗೋ ಒಪ್ಪುಸಿ ನಾಲ್ಕನೇ ಕ್ಲಾಸಿನ ವಾರ್ಷಿಕ ಪರೀಕ್ಷೆಗಪ್ಪಗ ಒಳುದ ಮಕ್ಕಳೊಟ್ಟಿಂಗೆ ಪರೀಕ್ಷೆ ಬರವ ಹಾಂಗೆ ಮಾಡಿದೆ. ಪರೀಕ್ಷೆಲ್ಲಿ ಪಾಸು ಹೇಳಿ ಮಾಡಿ ಐದನೇ ಕ್ಲಾಸಿಂಗೆ ಸೇರುಸಿದೆ.
ಮತ್ತೆ ಶುರುವಾತು ಅವನ ವಿದ್ಯಾಭ್ಯಾಸ! ಎಲ್ಲ ಕ್ಲಾಸುಗಳಲ್ಲಿಯೂ ಪಾಸು ಆಯ್ಕೊಂಡು ಹೋದಡೋ.ಆನು  ಅಲ್ಲಿಂದ ವರ್ಗ ಆಗಿ ಊರಿಂಗೆ ಹೇಳಿದರೆ ಪೈವಳಿಕೆಗೆ ಬಯಿಂದೆ. ಮತ್ತೆ ಆನು ಅವ ನೋಡಿದ್ದು ಕೆಲವು ವರ್ಷ ಕಳುದ ಮೇಲೆ ಹೇಳಿದರೆ ಅವನ ಮದುವೆ ಕಳುದು ಗೃಹ ಪ್ರವೇಶಕ್ಕೆ. ಇಪ್ಪತ್ತು ವರ್ಷವೇ ಕಳುದ್ದು. ಎನಗೊಂದು ಆಮಂತ್ರಣ ಬಂತು. ನೋಡುವಗ ಆ ಮಾಣಿಗೆ ಮದುವೆ ಬೆಂಗಳೂರಿಲ್ಲೇ ಕಳುದು ಗೃಹ ಪ್ರವೇಶ ಹೇಳಿ ಇತ್ತು. ಹಳೆ ನೆಂಪಿನ ಪುನರಾವರ್ತನೆ ಮಾಡುವದು ಹೇಳಿ ಹೋದೆ. ಆದರೆ  ಅಲ್ಲಿ ಹೋದರೆ ಕತೆಯೇ ಬೇರೆ. ಅವನ ಅಪ್ಪ ಇಪ್ಪಲ್ಲಿ ಅಲ್ಲ ಹ ಪ್ರವೇಶ. ತರವಾಡು ಮನೆಲ್ಲಾದಿಕ್ಕು ಹೇಳಿ ಅಲ್ಲಿಗೆ ಹೋದರೆ ಅಲ್ಲಿ ಅವನ ಅಪ್ಪ ಇಲ್ಲೆ. ಮಾಣಿ  ಡಿಗ್ರಿ ಮಾಡಿಕ್ಕಿ ಅವನ ಗೆಳೆಯನೊಟ್ಟಿಂಗೆ ಬ್ರೆಡ್ ಕಂಪೆನಿಲ್ಲಿ ಕೆಲಸಡೊ. ಅಪ್ಪ ಇದ್ದಲ್ಲಿಂಗೆ ಬಪ್ಪಲಿಲ್ಲೆಡೊ. ಅದಕ್ಕೆ ದೊಡ್ಡಪ್ಪನ ಮಗ ಅಣ್ಣ ಗೃಹ ಪ್ರವೇಶ ಮಾಡುಸಿಗೊಂಡದು. ಕತೆ ಎಲ್ಲ ಅಲ್ಲಿಗೆ ಹೋದ ಮೇಲೆ ಗೊಂತಾತು. ಎನ್ನ ಮೇಲೆ ಪ್ರೀತಿಲ್ಲಿ ಅಲ್ಲ ಕಾಗದ ಕಳುಸಿದ್ದು. ಅಪ್ಪ ಒಪ್ಪದ್ದರೂ ಆನು ಮದುವೆ ಆಗಿಗೊಂಡಿದೆ ಹೇಳುವದರ ತೋರುಸುಲೆ ಕರೆ ಕಳುಸಿದ್ದು ಅವ ಅಲ್ಲ. ಅಪ್ಪಚ್ಚಿಯ ಮೇಲೆ ಕೋಪಲ್ಲಿ ಅವನ ಮಗನ ಬುಟ್ಟಿಗೆ ಹಾಯ್ಕೊಂಡು ತಾನು ಒಳ್ಳೆಯೋನು ಹೇಳುಸಿಗೊಂಬಲೆ, ಅಪ್ಪಚ್ಚಿಯ ಜನ ಕೆಟ್ಟೋನು ಹೇಳುಸುಲೆ ಹೇಳುವದು ಮತ್ತೆ ಗೊಂತಾತು.
 ಕಾಲ ಬದಲಿದಂತೆ ಮನುಷ್ಯರೂ ಬದಲುತ್ತವು ನಿಜ. ಆದರೆ ಉಪಕಾರ ಸ್ಮರಣೆ ಇಲ್ಲದ್ದಾತನ್ನೆ. ಅಪ್ಪನತ್ರೇ ವಿರೋಧ ಕಟ್ಟಿಗೋಂಡನ್ನೇ ಹೇಳಿ ಬೇಜಾರಾತು. ಅಸಲಿಂಗೆ ಮದಿಮ್ಮಾಯಂಗೆ ಎನ್ನ ಗುರ್ತವೇ ಸಿಕ್ಕಿದ್ದಿಲ್ಲೆ. ಆದರೆ ಅವನ ಸೋದರ ಮಾವ.ಅವನೋ ಅವನ ಮನೆಯೋರೋ ಮದುವಗೋ ಗೃಹ ಪ್ರವೇಶಕ್ಕೋ ಹೋಯಿದವಿಲ್ಲೆಡೊ. ಸೋದರ ಮಾವನೇ ೩೬ ವರ್ಶ ಕಳುದು ಎನ್ನ ಗುರ್ತ ಹಿಡುದು ಮಗಳ ಮದುವಗೆ ಬಪ್ಪಲೆ ಹೇಳಿದ್ದು. ಅಪ್ಪನ ಗುಣವೋ ಒಡ ಹುಟ್ಟಿದೋರ ಗುಣವೋ ಅಜ್ಜನ ಮನೆಯೋರ ಗುಣವೋ ಮಾಣಿಗೆ ಒಳುದ್ದಿಲ್ಲೆ. ಸಹವಾಸ ದೋಷವೋ ಕಾಲದೋಷವೊ ಇಕ್ಕು.ಅಂತೂ ಹಳೆ ನೆಂಪು ನಮ್ಮ ಎಲ್ಲೆಲ್ಲಿಗೋ ಕೊಂಡೋವುತ್ತಿಉ.
ಮನುಷ್ಯಾನ ಜೀವನ ಹೇಳಿರೆ ಇಷ್ಟೆಯೋ ಹೇಳಿ ಕಾಣುತ್ತು. ಮಾಣಿಯ ಸೋದರ ಮಾವಂಗೆ ಅವನ ಅಳಿಯನ ಒಂದು ನೆಲಗೆ ತಪ್ಪಲೆ ಆನು ಸಹಾಯ ಮಾಡಿತ್ತಿದ್ದೆ ಹೇಳುವದು ಗೊಂತಿದ್ದು. ಎನ್ನ ಕಾಂಬಗ ಅದರ ಅವ ಹೇಳಿತ್ತಿದ್ದ. ಎನ್ನ ಕರ್ತವ್ಯ ಆನು ಮಾಡಿದ್ದೆ. ಅವನ ಅಪ್ಪಂಗೂ ಎದುರು ನಿಂದೋನು ಎನ್ನ ಮರದ್ದು ದೊಡ್ಡದಲ್ಲ. ಎಲ್ಲ ಕಾಲದ ಮಹಾತ್ಮೆ!

No comments:

Post a Comment