Wednesday, February 27, 2013

ಕಳ್ಳ ಪತ್ರಡೆ ತಿಂದದು

                         ಕಳ್ಳ  ಪತ್ರಡೆ ತಿಂದದು
   ಜಾಲಿಲ್ಲಿ ಮಳೆಗಾಲಲ್ಲಿ ಮುಳ್ಳು ಸೌತೆ ಮಾಡುವದು ಕ್ರಮ.ವೈಶಾಖಲ್ಲಿ ಜಾಲ್ಲಿ ಅಡಕ್ಕೆ ಒಣಗುಸೆಕ್ಕಾರೆ, ಮಳೆಗಾಲಲ್ಲಿ ಜಾಲು ಜೋರು ಮಳೆ ಬಿದ್ದು ಕರಗಿ ಹೋಪಲಾಗ ಹೇಳಿ ಬಾಳೆ ಚಾಂಬಾರು, ಸೋಗೆ ಹೀಂಗೆಲ್ಲಾ ಹಾಕೆಕ್ಕಾವುತ್ತು.ಸಾಲಾಗಿ ಅಲ್ಲಲ್ಲಿ ಮಣ್ಣು ಹಾಕಿ ಸಾಲು ಮಾಡಿದರೆಮುಳ್ಳು ಸೌತೆ ಬೆಂಡೆ ,ದಾರ್ಳೆ ಹಿಂಗೆಲ್ಲ ಮಾಡುವದಿದ್ದು. ಆ ವರ್ಷವೂ ಜಾಲ್ಲಿ ಮಾದಿದ ಕೃಷಿ ಚೆನ್ನಾಗಿ ಬಂದಿತ್ತು. ಮುಳ್ಳು ಸೌತೆಯೂ ಗೆಂಟು ಗೆಂಟು ಮೆಡಿ ಬಿಟ್ಟಿತ್ತು. ಎಳತ್ತು ಮೆಡಿಯ ರಜ ಉಪ್ಪು ಕೂಡುಸಿ ತಿಂಬದಿದ್ದು. ರಜ ದೊಡ್ಡದಾದರೆ ಸಳ್ಳಿ ಹಾಲುವದುಮತ್ತೆ ಬೆಳದ ಮೇಲೆಕೊಟ್ಟಿಗೆ, ಪಾಯಸ ಹೀಂಗೆಲ್ಲ ಮಾಡಿ ತಿಂಬದು. ಒಟ್ಟಾರೆ ಮಳೆಗಾಲದ ಕೃಷಿ ಜಾಲ್ಲೇ ಆವುತ್ತು. ಅಂದುದೇ ಮುಳ್ಳುಸೌತೆ ಮೆಡಿ ತಿಂದುಗೊಂಡಿಪ್ಪಗ ಆಚೆ ಮನೆ ಅಣ್ಣ ಬಂದ. ಎಂಗೊ ಯಾವಾಗಲೂ ಅವರ ಮನೆಗೆ ಆನು,ಎಂಗಳ ಮನೆಗೆ ಅವ ಹೀಂಗೆ ಲೋಕಾಭಿರಾಮ ಮಾತಾಡಿಕ್ಕಿ ಹೋಪದು. ಹೀಂಗೆ ವಿಚಾರ ವಿನಿಮಯಂದ ಹೊಸ ಹೊಸ ಶುದ್ದಿಗೊ ಗೊಂತಾವುತ್ತು
  ಅಂದು ಅವನತ್ರೆ ದೊಡ್ಡ ಶುದ್ದಿಯೇ ಇತ್ತು." ನಿನ್ನೆ ಮೇಗಾಣ ಮನೆಲ್ಲಿ ಕಳವಾಯಿದಡೊ.ಬೇರೆ ಎಂತದೂ ಕೊಂಡು ಹೋಪಲೆ ಸಿಕ್ಕದ್ದೆ ಒಂದು ಅಟ್ಟಿನಳಗೆ ಮಾಂತ್ರ ಕೊಂಡು ಹೋಯಿದವಡೊ.ಅದುದೇ ಒಲೆ ಮೇಲೆ ಇದ್ದದರ!ಆ ಮನೆಲ್ಲಿ ಹೆಮ್ಮಕ್ಕೊ ಮಾಂತ್ರ ಅಂದು ಇದ್ದದು. ಬಹುಷಃ ಗೊಂತಾಗಿಯೇ ಬಂದದಿರೆಕ್ಕು. ಅಟ್ಟಿನಳಗೆಲ್ಲಿಯೂ ಪತ್ರಡೆ ಮಾಡಿ ಬೇವಲೆ ಇರುಳೇ ಮಡಿಗಿತ್ತಿದ್ದವಡೊ. ಬೇವಲೆ ಬೇಕಾದಷ್ಟು ಕಿಚ್ಚು ಹಾಕಿತ್ತಿದ್ದವಡೊ. ಕೊಂಡು ಹೋದವಕ್ಕೆ ಅಳಗೆ ಕೊಂಡು ಹೋಯೆಕ್ಕಾರೆ ಅಳಗೆಲ್ಲಿದ್ದ ಪತ್ರಡೆ ಅಡ್ಡಿ ಆತುಹೇಳಿ ಕಾಣುತ್ತು. ಮನೆಯೋವು ಮಾಡಿ ಮಡಗಿದ್ದು ಎಲ್ಲ ಇತ್ತಿಲ್ಲೆಡೊ ಬಹುಷಃ ಎಡಿಗಾದಷ್ಟು ತಿಂದು ಒಳುದ್ದರ ಬಿಟ್ಟಿಕ್ಕಿ ಹೋದ್ದದಾಗಿಕ್ಕು" ಹೇಳಿ ಹೊಸ ಶುದ್ದಿ ಹೇಳಿದ. ಎಂಗಳ ಆ ಮೂಲೆಲ್ಲಿ ಏಳೆಂಟು ಮನಗೊ. ಆ ಮನೆಯ ಹತ್ತರೆ ಬೇರೆ ಮನೆ ಇಲ್ಲೆ. ಹಾಂಗೆ ವಿಷಯ ಸರಿಯಾಗಿ ತಿಳುದೇ ಒಳಹೊಕ್ಕಿದವು. ಅಂದರೆ ಎನ್ನ ಬುದ್ಧಿ ಅಎತ ಮೇಲೆ ಆ ಮೂಲೆಲ್ಲಿ ಮನೆ ಹೊಕ್ಕದು ಅದು ಶುರುವೇ. ಪೋಲಿಸ್ ಕಂಪ್ಲೈಂಟ್ ಕೊಟ್ಟಿದವಡೊ.ಬಂದು ಒಳ ಎಲ್ಲ ನೋಡಿಕ್ಕಿ ಹೋಯಿದವು ಹೇಳುವ ಶುದ್ದಿಯನ್ನೂ ಹೇಳಿದ. ಹತ್ತರಾಣ ಮನೆಲ್ಲಿ ಹಾಂಗೆ ಕಳವದರೆ ಅದೂ ಹೊಸತ್ತು ಆಗಿಪ್ಪಗ ಅವಕ್ಕೆ ಸಾಂತ್ವನ ಹೇಳೆಕ್ಕಾದ್ದು ಧರ್ಮ ಅಲ್ಲದೋ? ಹಾಂಗೆ ಹೋಗಿ ಆತು. ಎರಡು ದಿನ ಕಳುದಪ್ಪಗ ಒಂದು ಕಳ್ಳ ಸಿಕ್ಕಿ ಬಿದ್ದಿದು ಹೇಳಿಯೂ ಗೊಂತಾತು. ನಾಲ್ಕು ಬಡುದು ಕೇಳುವಗ ಬೇರೆಂತದೂ ಸಿಕ್ಕದ್ದದಕ್ಕೆ ಒಂದು ಪಾತ್ರೆ ಮಾಂತ್ರ ಕೊಂಡು ಹೋದ್ದು ಹೇಳಿಯೋ ಎಂಗೊ ನಾಲ್ಕು ಜನ ಬಂದಿತ್ತಿದ್ದೆಯೋ ಹೇಳಿಯೋ ಒಪ್ಪಿತ್ತಡೊ.ಮತ್ತೆ ಎರಡು ದಿನಲ್ಲಿ ಒಳುದೋವುದೆ ಸಿಕ್ಕಿದವು . ಅವರ ಹೇಳಿಕೆ ಹೇಂಗೆ ಹೇಳಿದರೆ "ಪತ್ರಡೆ ಎಲ್ಲ ಹೆರ ಚೆಲ್ಲಿಕ್ಕಿ ಪಾತ್ರೆ ಮಾಂತ್ರ ಕೊಂಡೋಪೊ ಹೇಳುವಗ ಒಂದು ಮನುಷ್ಯ ಬೇಡ ಹೇಂಗಾದರೂ ಅಂತೆ ಇಡುಕ್ಕಿಕ್ಕಿ ಹೋಪದು ಬೇಡ. ನಿಂಗೊಗೆ ಬೇಡದ್ದರೆ ಎನಗೆ ಬೇಕು" ಹೇಳಿ ಹೊಟ್ಟೆ ತುಂಬ ಅವ ಒಬ್ಬನೇ ತಿಂದದಡೊ. ಒಳುದವಕ್ಕೆ ಹೆಸರೋ ರುಚಿಯೋ ಗೊಂತಿಲ್ಲೆ.ಈ ಮನುಷ್ಯ ಬ್ರಾಹ್ಮರ ಮನೆಗೊಕ್ಕೆ ಕೆಲಸಕ್ಕೆ ಹೋಗಿಪ್ಪಗ ಅದರ ಹೆಸರು ರುಚಿ ಎಲ್ಲ ಗೊಂತಿದ್ದ ಕಾರಣ ನೋಡಿ ಕೊದಿ ತಡೆಯದ್ದೆ ತಿಂದದಡೊ. ಆ ಮನುಷ್ಯ ಹಿಡಿವಲೆ ಸಿಕ್ಕಿದ್ದೂ ವಿಶೇಷ! ಪೋಲೀಸುಗಳ ಕಂಡಪ್ಪಗ ಗುಡ್ಡೆ ಗುಡ್ಡೆ ಓಡಿಹೋತಡೊ. ಪೋಲೀಸುಗೊ ಹತ್ತೆರೆ ಎತ್ತಿದವು ಹೇಳಿ ಅಪ್ಪಗ ಮಳೆನೀರಕಣಿಲ್ಲಿ ಉದ್ದಕ್ಕೆ ಮನುಗಿತ್ತಡೊ. ಆದರೂ ಪೋಲಿಸುಗೊಕ್ಕೆ ಗೊಂತಾಗಿ ಹಿಡುದವು.ನಾಲ್ಕಕ್ಕು ಆರು ತಿಂಗಳು ಅನುಭವಿಸೆಕ್ಕಾಗಿ ಬಂತು. ಶಿಕ್ಷೆ ಮುಗುದ ಮೇಲೆ ಊರಿಂಗೆ ಬಂದೋನು" ಜೈಲು ಶಿಕ್ಷೆ ಯಾವ ಮಜ ಇದ್ದು ವಾರ ವಾರ ಮಾಂಸದ ಊಟ, ಕೆಲಸ ಮಾಡಿದರೆ ಶಿಕ್ಷೆ ಮುಗುದಿಕ್ಕಿ ಬಪ್ಪಗ ಕೈಗೆ ಕಾಸೂ ಕೊಡುತ್ತವು" ಹೇಳಿ ಹೆಗ್ಗಳಿಕೆ ಹೇಳಿಗೊಂಡಿತ್ತಿದ್ದನಡೊ. ಆದರೆ ಎದುರಂದ ಹೇಳದ್ದರೂ "ಪತ್ರಡೆ"ಹೇಳುವ ಅನ್ವರ್ಥ ನಾಮ ಸಾವನ್ನಾರ ಎಂತಗೆ ಈಗ ಅವನ ಶುದ್ದಿ ತೆಗದರೆ ಪತ್ರಡೆ ಶುದ್ದಿಯೂ ಬಕ್ಕು.ಆನೆ ಕದ್ದರೂ ಕಳ್ಳ, ಅಡಕೆ ಕದ್ದರೂ ಕಳ್ಳ ಕಳ್ಳನೇ ಅಲ್ಲದೋ?

Reply Reply All Forward Forward
Reply Reply All Forward Forward WelcomeInboxNewFoldersMail Options
 

No comments:

Post a Comment