Wednesday, February 27, 2013

ಹೊಟ್ಟೆ ಕಿಚ್ಚು

  ಹೊಟ್ಟೆ ಕಿಚ್ಚು
ಮೇಗಣ ಬಾಳಿಕೆ,ಕೆಳಾಣ ಬಾಳಿಕೆ ಹತ್ತರೆ ಇಪ್ಪ ಮನಗೊ. ದೊಡ್ಡಕ್ಕೆ ದನಿಗೇಳಿದರೆ ಕೇಳುಗು.ಮದಲಿದ್ದೋರು ಎಂಗಳ ದಾಯಾದಿಗೊಡೊ. ಎಂಗೊ ಸಣ್ಣಾಗಿಪ್ಪಗಳೆ ಇದ್ದದು ಾವುದೇ ಎಂಗಳ ಕುಟುಂಬದೋೆ. ಮದಲಿದ್ದರಿಂಗು ಎಂಗೊಗೂ ಯಾವಾಗಳೂ ಜಗಳ ಇತ್ತಡೊ. ದುಬಾರಿ ಖರ್ಚು ಮಾಡಿ ಎಲ್ಲ ಳಕ್ಕೊಂಡು ಆಸ್ತಿಯ ರುವಳಕ್ಕೆ,ಆರುವಾರ ಮಾಡಿ ಕೊಟ್ತದು ಬಿಡುಸುಲೆ ಎಡಿಯದ್ದೆ ಜಾಗೆ ಮರುವಳಕ್ಖೇ ಆತಡೊ. ಅಂಬಗ ಇದ್ದೋರು ಮರುವಳದೋರ  ಒಕ್ಕಲುಗೊ.ಅವರ ಮಕ್ಕಳುದೇ ಎಂಗಳುದೇ ಒಟ್ಟಿಂಗೆ ಶಾಲಗೆ ಹೋಪದು.ಹತ್ತರೆ ಇದ್ದ ಶಾಲೆಲ್ಲಿ, ಐದನೇ ಕ್ಲಾಸ್ ವರೆಗೆ ಮಾಂತ್ರ ಆದ ಕಾರಣ ಮತ್ತೆ ಪೆರ್ಲಕ್ಕೋ ಮಂಜೇಶ್ವರಕ್ಕೋ ಹೋಯೆಕ್ಕಾಗಿ ಬಂತು.ತುಂಬ ಅನ್ಯೋನ್ಯವಾಗಿ ಇತ್ತಿದ್ದೆಯೋ.ರಜೆಲ್ಲಿ ಅವರ ಮನೆ ಜಾಲು ದೊಡ್ಡ ಇದ್ದ ಕಾರಣ ಆಡುಲೆ ಹೋಪದು ಅಲ್ಲಿಗೇ.ಹೋದರೆ ಸಾಂತತ್ತೆ ಹಪ್ಪಳ ಒಣಗುಸಿಗೊಂಡಿದ್ದರೆ ಸುಟ್ಟಾಕಿ ಎಂಗೊಗೂ ಕೊಡುಗು. ಜಾಲಿಲ್ಲಿ ಸಾಂತಾಣಿ ಒಣಗುಲೆ ಹಾಕಿದ್ದರೆ ಎಂಗೊ ಆಡಿಗೊಂಡಿಪ್ಪಗ ಒಂದೊಂದು ಹೆರ್ಕಿ ತಿಂಬದು.
   ಮನೆಲ್ಲಿ ದೊಡ್ಡೋರುದೇ ಹಾಂಗೆ ಕೆಳ ಬೈಲಿಂಗೆ ಹೋಪಗ ಅವಜಾಲಿಲ್ಲೇ ಹೋಯೆಕ್ಕು. ದಾರಿಲ್ಲಿ ಹೋಪಗ ಅವರ ಮಾತಾಡುಸಿಗೊಂಡೇ ಹೋಪದು. ಮಾಲಿಂಗಜ್ಜ ಇದ್ದರೆ ಒಳ ಜೆಗುಲಿಲ್ಲಿ ಕೂದು ರಜ ಶುದ್ದಿ ಮಾತಾಡಿಕ್ಕಿಯೇ ಕೆಳ ಹೋಪದು.ಮನೆಲ್ಲಿ ಗೆಂಡು ಮಕ್ಕೊ ಏನಾದರೂ ಇರುಳಿಂಗಪ್ಪಗ ಇಲ್ಲದ್ದರೆ ಮನೆಂದ ಅಜ್ಜಿ ಹೋಕು ಅಲ್ಲಿಗೆ ಸಂಗಾತಕ್ಕೆ.ಆ ಶುದ್ದಿ ಈ ಶುದ್ದಿ ಮಾತಾಡ್ಯೊಂಡು ಉದಿಯಪ್ಪಗ ಅಜ್ಜಿ ಮನಗೆ ಬಕ್ಕು. ಬೇಡುತ್ತೋವೋ ಅಪರಿಚಿತ ಜನಂಗಳೋ ಬಂದರ್ತೆ ಸಾಂತತ್ತೆಗೆ ಧೈರ್ಯಕ್ಕೆ ಅಜ್ಜಿ ಬೇಕು ಅವರತ್ರೆ ಮಾತಾಡುಲೆ.ಎಂತಾದರೂ ತೀಡಿ ಮಾಡಿದರೂ ಎಂಗಳ ಮನಗೆ ಅವುದೇ ತಂದು ಕೊಡುಗು. ಎಂಗಳೂ ಕೊಟ್ಟುಗೊಂಡಿತ್ತಿದ್ದೆಯೊ. ಎಂಗೊಗೆ ತಂಗೆ ಆವುತ್ತು.ಒಂದು ಕೂಸು ಅವರದ್ದು,ಶಾಲಗೆ ಹೋಪಗ ಸಂಗಾತಕ್ಕೆ ಎಂಗಳ ಒಟ್ಟಿಂಗೇ ಕಳುಸುವದು.
ಹೀಂಗೆ ಕೆಲವು ವರ್ಷ ಒಟ್ಟಿಂಗೆ ಕಳಿವಗ, ಎಂತ ಕಾರಣ ಗೊಂತಿಲ್ಲೆ. ಒಂದು ದಿನ ಕೆಳ ಬೈಲಿಂಗೆ ಹೋಪಗ ಅವರ ಬೆಶಿನೀರ ಕೊಟ್ಟಗೆಲ್ಲಿ ಅಂದಿರುಳು ಮೈಲುತುತ್ತು ನೀರಿಂಗೆ ಹಾಕಿದ್ದು ಉದಿಯಪ್ಪಗ ನೋಡುವಗ ಅಳಗೆ ಖಾಲಿ ಅಡೊ. ಅಂಬಗ ಎಲ್ಳೋರುದೇ ಮಣ್ಣಳಗೆಲ್ಲೇ ಮೈಲುತುತ್ತು ನೀರಿಂಗೆ ಹಾಕುವದು.ಅಳಗೆ ಮಾಂತ್ರ ತುಂಬ ಸಮಯ ಆದ ಮೇಲೆ ಅಡರುತ್ತನ್ನೆ! (ಚೆಂಬಿನ ಪಾತ್ರೆಲ್ಲೋ ಅಥವಾ ಬೇರೆ ಕೀಜಿ ಪಾತ್ರೆಲ್ಲಾದರೂ ಹಾಕಿದರೆ ಮೈಲುತುತ್ತು ಪಾತ್ರೆಯನ್ನೆ ಕರಗುಸುತ್ತಡೊ). ಹಾಂಗೆಂತಾರು ಆಯಿಕ್ಕು ಹೇಳಿದರೆ ನಂಬವು.ಅಂತೂ ಅಲ್ಲಿಂದ ಕೆಳ ಬೈಲಿಂಗೆ ಹೋಪಗ ಆಳುಗೊ ಹೇಳಿದವು"ಮೈಲುತುತ್ತು ನೀರು ಕಳವಾತುಂಡಿಗೆ,ಏರೋ ಮುಟ್ಟತಾಕ್ಳು ಆತುಪ್ಪೋಡು.ಕಂಡುತು ಕೊಂಡೋಂಡ ಬಜ್ಜೆಯಿಗು ರೋಗ ಬರಾಂದತ್ತೊ!ಅಂಚ ಮುಟ್ಟತಾಖ್ಳೇ ಕಂಡಿನೆ.ಏರು ಎಂದು ಅಂಜನ ಸೂತು ಆಣ್ಜೆ ಪಣ್ತುಂಡಿಗೆ" ಹೇಳಿ ಶುದ್ದಿಯೋ ಶುದ್ದಿ. ಆ ಮನೆಯೋರೇ ಎಂಗಳ ಮನೆಯೋರ ಮೇಲೆ ಎಂಗಳೇ ಕದ್ದದು ಹೇಳಿ ಕೂಡಾ ಹೇಳಿತ್ತಿದ್ದವಡೊ. ಆ ಬಂಟನೋ ಒಬ್ಬಂಗೆ ಮಾಟ ಮಡಗಿಕ್ಕಿ ಅವ ಹೋದರೆ ಇಂಥೋನೇ ನಿನಗೆ ಮಾಟ ಮಡಗಿದ್ದವು ಹೇಳಿ ಅಂಜನ ನೋಡಿ ಹೇಳುಗಡೊ. ಈ ವರ್ಷ ಅಡಕ್ಕೆ ಬೆಳೆ ಒಳ್ಳೆದಿತ್ತು. ಗೇಣಿ ಕೊಟ್ಟು ಒಳಿತ್ತಿತ್ತು. ಅದರ ಇಲ್ಲದ್ದೆ ಮಾಡಿದವು ಹೇಳಿ ಎಲ್ಲ ಗುಲ್ಳೇ ಗುಲ್ಲು. ಆದರೆ ಂಬುವ  ಮಾತಲ್ಲ ಹೇಳಿ ಆಳುಗೊ ಕೂಡಾ ಅವರ ತಮಾಶೆ ಮಾಡ್ಯೊಂಡಿತ್ತಿದ್ದವಡೊ.
ಎಲ್ಲ ಬಪ್ಪದು ಷಡ್ವೈರಿಗಳಲ್ಲೊಂದಾದ ಮತ್ಸರಂದ. ದೊಡ್ಡಪ್ಪ -ಅಪ್ಪ ಎಂಗ  ಳೊಳಗೆ ಪಾಲಾಗಿ ಬೇರೆ ಬೇರೆ ಇದ್ದರೂ ಹಗೆ ಹೆಚ್ಚಿಗೊಂಡೆ ಹೋಗಿಹೆರಿಯೋರು ಮಾಡಿದ ಜಾಗೆಲ್ಲಿ ಮುಕ್ಕಾಲಂಶ ಹೋದರೂ ಹೊಟ್ಟೆ ಕಿಚ್ಚು ಕಡಮ್ಮೆ ಅಗದ್ದೆ" ಅವಂಗೆ ಪಾಲಿಲ್ಲಿ ಹೆಚ್ಚು ಸಿಕ್ಕಿದ್ದು, ಅವನ ಉಂಬಲೆ ಬಿಡೆ ಹೇಳ್ಯೊಂಡು ಏನಾದರೂ ಸಿವಿಲ್ ವ್ಯಾಜ್ಯ ತಂದುಗೊಂಡೋ, ಗೇಣಿ ಒಕ್ಕಲು ಹೇಳಿದೋರ ಕಡೆ ಸೇರಿ ಅವಕ್ಕೆ ಸಹಾಯ ಮಾಡ್ಯೊಂಡೋ ಇದ್ದೋರು ದೊಡ್ಡಪ್ನ ಪಾರ್ಟಿಯೂ ಹಟಲ್ಲಿ ಮತ್ತೆ ಜಾಗೆ ಮಾರಿಕ್ಕಿ ಹೋದವು ಕೆಳಾಣ ಜಾಗೆಯ ಒಡೆಕ್ಕಾರಂಗೆ ಅರಧ ಜಾಗೆ ನಂಬ್ರ ಮಾಡಿ ಸಿಕ್ಕಿದರೂ ಮತ್ತೆ ಗೇಣಿ ಒಕ್ಕಲಿಂಗೆ ಕೊಟ್ಟು    ಒಕ್ಕಲು ಹಿತ ಮಸೂದೆ ಬಂದು ಅದುದೇ ಹೋತು.ಎಂಗೊ ಕಲ್ತು ಒಂದು ನೆಲಗೆ ಬಂದದು ಹಿತ ಅಗದ್ದೆಹುಳುಕ್ಕು ಮಾಡಿ ಕಳಕ್ಕೋಂಡವು. ಕಾಲಕ್ರಮಲ್ಲಿ ಮಕ್ಕೊ ವಿದೇಶಲ್ಲಿ ಇಪ್ಪಗ ಎಂಗೊ ಮಾಂತ್ರ ಊರಿಲ್ಲಿ ನಂಬಲಾಗದ್ದೆ ಜಾಗೆ ಮಾರಿಕ್ಕಿ ಮಂಗಳೂರಿಂಗೆ ಬಂದೆಯೊ.
ಪುರಾಣ ಕಾಲಲ್ಲೇ ಹೊಟ್ಟೆಕಿಚ್ಚಿನ ತಡವಲೆಡಿಯದ್ದೆ ಬಸುರನ್ನೆ ಪೊಜಕ್ಕಿಗೊಂಡದು ಗಾಂಧಾರಿ.ಮತ್ತೆ ವೇದವ್ಯಾಸನೋ ಆರೋ ಬಂದು ಮಾಂಸಮುದ್ದೆ ಜೋಡುಸಿ ನೂರಒಂದು ಮಕ್ಕೊ ಆದವು ಹೊಟ್ಟೆಕಿಚ್ಚಿಂದ ಅವರ ರಾಜ್ಯವನ್ನೇ ಅಪಹರಿದ್ದಕ್ಕೆ ಯುದ್ಧವೇ ಆತು.ಈಗಳೂ ದೇಶ ವಿದೇಶಂಗಳಲ್ಲಿ ಹೊಟ್ಟೆ ಕಿಚ್ಚಿನ ಸುಡುವಿಕೆಂದಒಬ್ಬಕ್ಕೊಬ್ಬ ತಾಂಟಿಗೊಂಡಿದ್ದವು. ಜಾತಸ್ಯ ಮರಣಂ ಧ್ರುವಂ ಹೇಳುವದು ಗೊಂತಿದ್ದರೂ ಇಂತಹ ಹಳೆ ಗೊಂತಿದ್ದೋರುದೇ ಹೊಟ್ಟೆ ಕಿಚ್ಚಿನ ತಣಿಶಿಗೊಂಬಲೆಡಿಯದ್ದೆ ಅಸಬಡಿತ್ತವು. ಎಲ್ಲ ದೇವರ ಮಾಯೆ ಹೇಳೆಕ್ಕಷ್ಟೆ! ಅವನ ಆಸೆಯೂ ಹೀಂಗೇ ಇದ್ದೋ ಏನೋ! ಎಲ್ಲ ಅವಂಗೇ ಬಿಡೆಕ್ಕಷ್ಟೆ.

No comments:

Post a Comment