Wednesday, February 13, 2013

ಮಾವಿನ ಕಾಯಿ ಉಪ್ಪಿನ ಕಾಯಿ



ಮಾವಿನ ಕಾಯಿ

ಡಿಸೆಂಬರ್ ಬರೆಕ್ಕಾರೇ ಹೆಮ್ಮಕ್ಕೊ ಕೇಳುತ್ತವು
ನಿಂಗಳ ಮರ ಹೂಗು ಹೋಯಿದೋ ಹೇಂಗೆ?
ಜನವರಿ ಬಂದರೆ ಕೇಳೆಡ ಅವರ ಗಡಿಬಿಡಿ
ಕಂಡೋರತ್ರೆಲ್ಲ ಕೇಳುಗು ಮೆಡಿ ಸಿಕ್ಕುಗೋ ಹೇಳಿ
ಒಂದು ಸೇರು ಮೆಡಿಯಾದರೂ ಸಿಕ್ಕಿರೆ ಅವಕ್ಕೆ ಖುಶಿ
ಪೇಟೆಗೆ ಹೋವುತ್ತರೆ ನೆಂಪು ಮಾಡುಗು ಸಂತೆಲ್ಲಿ ಕೇಳುಲೆ
ನಮ್ಮದೆ ಮರಲ್ಲಿದ್ದರೆ ಕೇಳೆಡ ಅವರ ಸಂಭ್ರಮ
ಆದರೆ ಕೊಯ್ಯೆಕ್ಕಾರೆ ಬೇಕು ಮರ ಹತ್ತುವ ಆಳುಗೊ
ಕಾಂಬಲೆ ಸಿಕ್ಕಿದ ಆಳುಗಳತ್ರೆಲ್ಲ ಕೇಳುಗು
ಮೆಡಿ ದೊಡ್ಡದಪ್ಪಂದ ಮದಲೆ ಬುಕ್ ಮಾಡುತ್ತವು
ಆಳುಗಳತ್ತರೆ    ಕೊಯ್ವಲೆಡಿಗೋ ಹೇಳಿ
ಕೊಯ್ದಾದ ಮೇಲೆ ಮೆಣಸು ಸಾಸಮೆ ತರೆಕು ಹೇಳಿ
ಗಿರ್ಗಾಣ ಕೊಡುತ್ತವು ಅಂಗ್ಡಿಗೆ ಹೋಪಗ
ಮೆಣಸು ಒಣಗುಸಿ ಹೊಡಿ ಮಾಡುಸೆಕ್ಕು
ಸಾಸಮೆ ಅರಿಶಿ ಒಣಗುಸಿ ಹೊಡಿ ಮಾಡೆಕ್ಕು
ಅವರ ಗೌಜಿಯೋ ಗೌಜಿ ಮನೆಯೋರತ್ರೆ
ಮಕ್ಕಳತ್ರೆ ಮಾತಾಡುಲೇ ಪುರುಸೊತ್ತಿಲ್ಲೆ,
ಆಚೆಮನೆ ಅಕ್ಕನತ್ತರೆ ಶುದ್ದಿ ಮಾತಾಡುವದು
ಅಕ್ಕಂಗೆ ಮೆಣಸು ತಂದದೋ ಹೊಡಿಯೇ ತಂದದೋ?
ಅಕ್ಕಂದ ಮದಲೆ ಉಪ್ಪಿನಕಾಯಿ ಹಾಕೆಕ್ಕು ಹೇಳಿ
ಸೊಕ್ಕು ಬೇರೆ ಈಚೆ ಮನೆ ಅಕ್ಕಂಗೆ
ಸಮಯಕ್ಕೆ ಆಳುಗೊ ಬಾರದ್ರೆ ಮತ್ತೆ ಗಡಿಬಿಡಿ
ಹೋಗಿ ದಿನಗೇಳದ್ದಕ್ಕೆ ಮತ್ತೆ ಸಿಡಿಮಿಡಿ
ನಮಗೆ ಮಾಂತ್ರ ಕೊಯ್ದಾಗದ್ದೆ ಮಾವಿನ ಮಿಡಿ
ನಿತ್ಯ ಸಿಕ್ಕುಗು ಬೈಗಳ ಮುಡಿ ಮುಡಿ
ನಾವೇ ಮರ ಹತ್ತಿ ಕೊಯ್ದರೆ ಸಿಕ್ಕುಗು ನಮಗೆ
ಅವರ ಹೊಗಳಿಕೆಯ ಮಾತು ಅಡಿಗಡಿ
ಕಾಯಿ ಬೆಳದರೆ ಮತ್ತೆ ಕೆತ್ತಿ ಉಪ್ಪಿನ ಕಾಯಿ
ಹಸಿ ಕೆತ್ತೆ  ಬೇರೆ ಬೇಯಿಸಿದ ಕೆತ್ತೆ ಬೇರೆ,
ಇಡಿಕಾಯಿಯೂ ಇದ್ದು, ತಿಂಬಲೆ ಕೊಶಿ ಅವುತ್ತು,
ಕೆತ್ತೆ ತಿಂದು ನೀರು ಕುಡುದರೆ  ಹೊಟ್ಟೆ ತುಂಬುಗು,
ಕೆಪ್ಪಟೆ ಕೆತ್ತೆ ಎರಡು ತುಂಡು ಮಾಡೆಕ್ಕು,
ಕರೆ ಕೆತ್ತೆ ಹಾಂಗೇ ಇದ್ದರೆ ಸಾಕು
ಗೊರಟು ಮಾಂತ್ರ ಆರಿಂಗು ಬೇಡ
ಕೋಗಿಲೆ ತಿಂಬಲೆ ತುಂಬ ಕೊಶಿ
ಮಿಡಿ ತಿಂದರು ಅಕ್ಕು, ಮಜ್ಜಿಗೆ ಕೂಡುಸಿ ಉಂಡರೆ
ಬೇರೆ ಬೆಂದಿ ಗಿಂದಿ ಒಂದುದೆ ಬೇಡ,ಅದಕ್ಕೆ ಹೆಮ್ಮಕ್ಕೊ
ಊಟಕ್ಕಿಲ್ಲದ್ದ ಉಪ್ಪಿಕಾಯಿ ಹೇಳುತ್ತವು
ಹೊತ್ತಿಂಗೆ ಬಂದರೆ ಊಟ ಯಾವಾಗಳೊ ಬಂದರೆ
ಎಂತಗೆ ಊಟ ಕೊಡೆಕ್ಕು?ಅಪ್ಪೆ ಮಿಡಿ ಈಗ
ಸಿಕ್ಕುವದೆ ಕಷ್ಟ ಆದರೆ ಅದರ ರುಚಿ ಅದಕ್ಕೇ ಸರಿ
ಹಣ್ಣಿನ ರಸಾಯನ ಗ್ರೇಶುವಗ ಜೊಲ್ಲು ಸುರಿ
ಕಾಟು ಹಣ್ಣಿನ ಸಾಸಮೆ ಇದ್ದರೆ ಉಂಬಗ ಸುರಿ
ಹಣ್ಣಿ ಕಾಲ ಮುಗುದರೆ ತಿಂಬಲಕ್ಕು ಮಾಂಬ್ಳ
ಅಂತು ಮಾವಿನ ಮರಂದ ಸಂತೋಷದ ಚೊರಿ


No comments:

Post a Comment