Saturday, April 6, 2013

ಮರ್ಕಟಸ್ಯ ಸುರಾಪಾನಂ, ಮಧ್ಯೇ ವೃಶ್ಚಿಕ ದಂಶನಂ"

                                  "ಮರ್ಕಟಸ್ಯ ಸುರಾಪಾನಂ, ಮಧ್ಯೇ ವೃಶ್ಚಿಕ ದಂಶನಂ"
ಮದಲೇ ಮರ್ಕಟ, ಮಂಗನ ಬುದ್ಧಿ ಅದು ಬಿಡನ್ನೆ! ಸಾಮಾನ್ಯವಾಗಿ  ಮಕ್ಕಳ ಬಗ್ಗೆ ಹೇಳುವಗ "ಮಂಗ ಬುದ್ಧಿ" ಹೇಳಿ ಕೊಂಡಾಟಕ್ಕೂ ಆಗಿಕ್ಕು. ಅಥವಾ ನಿಜಕ್ಕೂ ಹಾಂಗಿಪ್ಪ ಮಕ್ಕಳು ಇದ್ದವು. ಏನಾದರೂ ಪಿಕಲಾಟೆ ಮಾಡದ್ರೆ ಅವಕ್ಕೆ ಹೊತ್ತು ಹೋಗ. ಮಂಗನ ಬುದ್ಧಿ ಹೇಳುವದು ಮುಖ್ಯವಾಗಿ ಎಂತಗೆ ಕೇಳಿದರೆ, ಮರಂದ ಮರಕ್ಕೆ  ಗೆಲ್ಲಿಂದ ಗೆಲ್ಲಿಗೆ ಲಾಗ ಹಾಯ್ಕೊಂಡೇ ಇಪ್ಪದು. ಒಂದೇ ಕಡೆ ನಿಲ್ಲವನ್ನೆ! !ಆಹಾರ ಹುಡುಕ್ಯೊಂಡೂ ಆಗಿಕ್ಕು.ಅಲ್ಲದ್ದರೇ ತೋಟಕ್ಕೆ ಮಂಗಂಗಳ ಗುಂಪು ಲಗ್ಗೆ ಹಾಕಿದರೆ ತೆಂಗಿನ ಮರಂಗಳಲ್ಲಿದ್ದ ಬೊಂಡ ಎಲ್ಲ ಖಾಲಿ ಅಕ್ಕು.ಕಾಡಿನ ಕರೆಲ್ಲಿಪ್ಪ ತೋಟಂಗಳ ಕಾವದು ತುಂಬ ಕಷ್ಟ ಅಪ್ಪನ್ನೆ!ಕೆಲವು ಜನ ನಾಯಿಗಳ ಸಾಂಕುತ್ತವು. ಆದರೆ ನಾಯಿಗೊ ಕೆಳಂದ ಬೊಬ್ಬೆ ಹಾಕಿದರೆ ಮಂಗಗೊಕ್ಕೆ ಗಣ್ಯವೇ ಆವುತ್ತಿಲ್ಲೆ
ಬಾಳಿಕೆಲ್ಲಿ  ಆನು ಸಣ್ಣಾಗಿಪ್ಪಗ ಮಂಗಂಗಳ ಹಾವಳಿ ಜೋರಿತ್ತು. ಒಂದರಿ ಎಂಗಳ ಮೂಲೆಗೆ ದಾಳಿ ಮಾಡಿದರೆ ವಾರಗಟ್ಟಳೆ ನಿಂಗು. ನಿಂಬದೆಲ್ಲಿ! ತೋಟದ ನಡುಕ್ಕೆ  ಬಯಲಿಲ್ಲಿ ಮೇಲಂದ ಕೆಳವರೆಗೆ ನೋಡಿದರೆ ಎರಡು ನಾಗ ಬನ! ದೊಡ್ಡ ದೊಡ್ಡ ಮಂಗೊ ವನಲ್ಲಿತ್ತು ತುಂಬ ಎತ್ತರಕ್ಕೆ ಬೆಳದ್ದರ,ವನದ ಮರ ಆದ ಕಾರಣ ಕಡಿವಲೆ ಆಗಲ್ಲದೋ! ಆ ಮರಂಗಳಲ್ಲಿ ಅವರ ವಾಸ!. ಬೊಂಡ, ಬಾಳೆಕಾಯಿ ಎಂತದೂ ಅಕ್ಕು!ದಾಳಿ ಮುಗುಶಿ ಹೋಪಗ ಎಲ್ಲ ಖಾಲಿ.
ಮಂಗಂಗಳ ಕೊಲ್ಲಲೂ ಕಾನೂನು ಅಡ್ಡಿ ಇದ್ದನ್ನೆ! ವನ್ಯ ಮೃಗಂಗಳ ಕೊಲ್ಲಲಾಗ ಹೇಳುವದು ಪ್ರಾಣಿ ದಯಾಪರರ  ಪ್ರಯತ್ನ ಒಳ್ಳೆದೇ! ಆದರೆ ಬೆಳೆ ನಾಶ ಮಾಡುವದಕ್ಕೆ ಪರಿಹಾರ ಎಂತರ!ಏಳೆಂಟು ಮನೆಗಳ ಪೈಕಿ ಒಂದು ಮನೆಲ್ಲಿ ಕೇಪಿನ ಬೆಡಿ ಇತ್ತು. ಅಪರೂಪಕ್ಕೊಂದರಿ ಅದರ ಶಬ್ದ ಮಾಡುವದು. ಹೆದರಿ ಓಡಿ ಹೋವುತ್ತವು.
ಹಾಂಗೆ ಯಾವಾಗಳೂ ಬೆಡಿ ಕೊಡುತ್ತವೋ?ಒಂದರಿ ಆನೂ ತಂದಿತ್ತಿದ್ದೆ.ಏನೋ ಧೈರ್ಯ ಮಾಡಿ ಹೊಟ್ಟುಸಿದ್ದು ಒಂದು ಮಂಗನ ಬೀಳುಸಿತ್ತು. ಆ ಸರ್ತಿ ಎಂಗಳ ತೋಟಲ್ಲಿ ವಾಸ ಇದ್ದದು ಎರಡೇ ಮಂಗಂಗೊ .ಒಂದು ವಾರ ಕಳುದ ಮತತೆಯೂ ಉಪದ್ರ ತಡೆಯದ್ದೆ ಬೆಡಿ ಬಿಟ್ಟದು. ಅಂಬಗಳೆ ಮರಂಗೊ ಎಲ್ಲ ಖಾಲಿ ಆಯಿದು. ಮರದಿನ ನೋಡೆಕ್ಕು ಮತ್ತೊಂದು ಮಂಗನ ಚೀರಾಟವೂ ಹೆಚ್ಚಿತ್ತು. ಮತ್ತೆ ಉಪದ್ರವೂ ಜೋರಾತು.ಅದಕ್ಕೆ ಮದಲೆ ಎಂಗೊ ಕೋಲಿನ ಹಿಡುದೋ, ಕೊತ್ತಳಿಂಕೆಯ ಬೆಡಿಯ ಹಾಂಗೆ ಮಾಡಿಯೋ ನೋಡಿದ್ದೆಯೊ.ಈ ಸರ್ತಿ ಪ್ರಯೋಜನ ಆಯಿದಿಲ್ಲೆ.ಅಂತೂ ವನದ ಮರಂಗೊ ಅವಕ್ಕೆ ವಾಸ ಸ್ಥಾನ!ಕಡಿವಲೆ ನಿವೃತ್ತಿ ಇಲ್ಲೆ. ಬೇರೆ ಬೇರೆ ಜೋಯಿಸಕ್ಕಳ ಕೈಲಿ ಕೇಳಿ ಆಯಿದು. ಕಡಿವಲೆಡಿಯ ಹೇಳಿಯೇ ಕಂಡಿದು.
       ಮತ್ತೆ ಕೆಲವು ವರ್ಷ ಕಳುದ ಮೇಲೆ ಒಬ್ಬ ಎನಗೆ ಧೈರ್ಯ ಹೇಳಿದ. ಅವನೇ ನಿಂದು ಪ್ರಾರ್ಥನೆ ಮಾಡಿ" ನಿನಗೆ ಒಂದು ಕಟ್ಟೆ ಮಾಡಿ ಕೊಡುತ್ತೆಯೋ" ಹೇಳಿ ನಾಗನ ಕಲ್ಲುಗಳ ಅಂಬಗಳೇ ಜಲಾಧಿವಾಸ ಮಾಡಿ ಆಗಿತ್ತು. ಮತ್ತೆ ಎಂಗಳೇ ಹೇಳಿದರೆ ಮಕ್ಕಳೂ ಆನುದೇ ಕಡುದ ಕಲ್ಲುಗಳ ತಂದು ಮಣ್ಣಿಂದಲೇ ಕಟ್ಟೆ ಕಟ್ಟಿ ಜೀರ್ಣೋದ್ಧಾರ ಮಾಡಿ ಮತ್ತೆ ಕಲ್ಲುಗಳ ಸ್ಥಾಪನೆ ಮಾಡಿ ಆಯಿದು. ಮತ್ತೆ ಮಂಗಂಗಳ ಉಪದ್ರ ಇತ್ತಿಲ್ಲೆ.
              ಅಂತೂ ಅತ್ಲಾಗಿ ಇತ್ಲಾಗಿ ಗೆಲ್ಲಿಂದ ಗೆಲ್ಲಿಂಗೆ ಹಾರ್ಯೊಂಡಿಪ್ಪ ಮಂಗನ ಚಟದ ಹಾಂಗೆ ನಮ್ಮ ಮನಸ್ಸೂ ಚಂಚಲವಾಗಿದ್ದರೆ ಅಂಬಗಂಬಗ ಯೋಚನೆ ಬದಲಾಯ್ಸಿಗೊಂಡಿಕ್ಕು.  ಮಂಗಂಗೆ ಕುಡಿವಲೆ ರಜ ಸುರೆ ಹೇಳಿದರೆ ಮದ್ಯ ಕುಡಿಶಿ ಅಪ್ಪಗ ಒಟ್ಟಿಂಗೆ ಅದೇ ಮಂಗಂಗೆ ಅಕಸ್ಮಾತ್ ಒಂದು ಚೇಳು ಕಚ್ಚಿತ್ತು ಹೇಳಿ ಗ್ರೇಶುವೊ. ಎಂತಕ್ಕು?. ಅದರ ಹಾರಾಟ  ಜೋರಕ್ಕು. ಅಮಲೇರಿದ ಸಮಯಲ್ಲಿ ಕೊಂಬಚ್ಚೇಳು ಕಚ್ಚಿದರೆ ಅಂಬಗ ಅದರ ಅವಸ್ಥೆ ಕೇಳೆಡ. ಆ ಊರು, ಈ ಊರು  ಪಾವೂರು ಪಣಂಬೂರು ಎಲ್ಲ ಕಾಂಬಲೆ ಶುರುವಾಗಿ ಹಾರಾಟ ಚೀರಾಟ ಜೋರಕ್ಕನ್ನೆ! ಅದರನ್ನೇ ಇಲ್ಲಿ ಮೇಲೆ ಹೇಳಿದ ವಾಕ್ಯಲ್ಲಿ ಹೇಳಿದ್ದು.ಮದಲೇ ಮಂಗ ಬುದ್ಧಿ! ಶ್ರೀರಾಮ ಅಯೋಧ್ಯೆಗೆ ಬಂದ ಮೇಲೆ ಕಪಿ ಸಇನ್ಯಕಕೆಲ್ಲ ಭೋಜನ ಕೂಟ ವ್ಯವಸ್ಥೆ ಮಾಡಿದ್ದು, ಬಳುಸುಲೆ ಸುರು ಮಾಡುವಗ ಬಳುಸಿದ್ದ  ಮೆಡಿ ಉಪ್ಪಿನ ಕಾಯಿಲ್ಲಿದ್ದ ಕೋಗಿಲೆಯ ಒಂದು ಮಂಗ ಹಾರುಸಿದ್ದು, ಬೇರೆ ಮಂಗಂಗೊ ನೋಡಿ ಅವುದೇ ಮುಂದುವರುಸಿದ್ದು, ಮಂಗಂಗಳೇ ಇನ್ನೂ ಎತ್ತರಕ್ಕೆ ಹಾರುಲೆ  ಹೆರಟದು ಎಲಲ ಗೊಂತಿದ್ದನ್ನೆ! ಸುಗ್ರೀವ ಬಂದು ನಿಂದ ಮೇಲೆ ಗಲಾಟೆ ನಿಂದದು ಎಲ್ಲ ಹಳೆ ಪುರಾಣಂಗೊ! ಠೊಪ್ಪಿ ವ್ಯಾಪಾರಿಯ ಕತೆಯೂ ಗೊಂತಿದ್ದನ್ನೆ! ಈಗಳೂ  ಮಂಗನ ಕಂಢರೆ ಮಕ್ಕಳೂ ಸುಮ್ಮನೆ ಕೂರುತ್ತವಿಲಲೆ ಏನಾದರೊಂದು ಕುಸೃಟಿ ಮಾಡುಗು! ಮಂಗಂಗಳೂ ಕೆಣಕ್ಕಿದರೆ ಬಿಡವನ್ನೆ.ಮಂಗಂಗಳ ಉಪವಾಸ,ಬೆಣ್ಣೆ ಪಾಲು ಮಾಡಿದ್ದು ಗೊಂತಿಲ್ಲದ್ದೋರು ಆರೂ ಇಲ್ಲೆ!
       ಅಲ್ಪಂಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲ್ಲಿ  ಕೊಡೆ ಹಿಡುಕ್ಕೊಂಗಡೊ.ಇಲ್ಲಿ ಐಶ್ವರ್ಯ ಮದಂದ ಅವ ಕೊಡೆ ಹಿಡುದು ನಡಗು ಹೇಳುವದು ತಾತ್ಪರ್ಯ! ಮದಲಾಣ  ರಾಜರು, ಶ್ರೀಮಂತರು,ಒಟ್ಟಾರೆ ಅವರ ಶ್ರೀಮಂತಿಕೆಯ ತೋರುಸುಲೆ ಹೀಂಗೆ ಮಾಡ್ಯೊಂಡಿತ್ತಿದ್ದವಡೊ.ಈಗ ಶ್ರೀಮಂತರೇ ಹಳೆವ್ ಕೊಡೆ ಹಿಡುಕ್ಕೊಂಡು ಹೋಪದು! ಒಳ್ಳೆ ಕೊಡೆ ಹಿಡಿವಲೆ ಆಶೆ ಇದ್ದರೂ ಪೈಸೆ ಕೊಡುಲೆ ಆಶೆ ಆವುತ್ತು ಹೇಳಿ ಕಾಣುತ್ತು. ಅಂತೂ ಶ್ರೀಮಂತಿಕೆಯ ಒಂದು ಮಾನದಂಡ ಕೊಡೆಯೂ ಆವುತ್ತು. ಹಗಲಾದರೆ ಹೆರ ಹೋಪಗ ಬೆಶುಲಿಂಗೆ ಕೊಡೆ ಬೇಕಪ್ಪ! ಮಳೆಗೆ ಹಿಡಿವಲೆ ಬೇಕನ್ನೆ.ಆದರೆ ಹಗಲಾದರೂ ಇರುಳಾದರೂ ಅವು ಮನೆ ಹೆರಡೆಕ್ಕಾದರೆ ಹಿಂದಂದ ಮುಂದಂದ ಜನಂಗೊ. ಹಗಲು ದೀವಟಿಗೆ ಎಲ್ಲ ಇದ್ದರೆ ಎಲ್ಲೋರು ಅವು ಹೋಪದರ ಬಪ್ಪದರ ನೋಡುತ್ತವನ್ನೆ! ಹಾಂಗೆ ಅವರ ಗೌರವವೂ ಹೆಚ್ಚುತ್ತು.ಇದೆಲ್ಲ ಶ್ರೀಮಂತಿಕೆಯ ಪ್ರದರ್ಶನ!. ಒಟ್ಟಿಂಗೆ ಬಪ್ಪೋವುದೇ ಬಿಟ್ಟಿ ಊಟ ತಿಂದೊಂಡಿಪ್ಪೋವು. ಆ ವೈಭವ ಇಂದು ಜನಂಗೊಕ್ಕೆ ಮರದು ಹೋಯಿದು.
     ಮೇಲೆ ಹೇಳಿದ ಗಾದೆ ಇಲ್ಲಿ ಅನ್ವಯ ಅಪ್ಪದು ಇಂದು ಅಧಿಕಾರಲ್ಲಿಪ್ಪೋವಕ್ಕೆ!ಮದಲೇ  ಅಧಿಕಾರದ ಮದ! ಅದರೊಟ್ಟಿಂಗೆ ಜನರ ಮುಂದೆ ಬಾಯಿಗೆ ಬಂದ ಹಾಂಗೆ ಬಡಾಯಿ ಕೊಚ್ಚಿಗೊಂಡು, "ಆನು ಹಾಂಗೆ ಮಾಡಿದೆ, ಹೀಂಗೆ ಮಾಡಿದ್ದೆ" ಹೇಳಿ ಲೊಟ್ಟೆ ಹೇಳುವದು. ಒಟ್ಟಿಂಗೆ ಅಧಿಕಾರದ ಹೆಸರಿಲ್ಲಿ ಸಂಪಾದನೆ ಮಾಡಿದ ಹೇರಳ ದ್ರವ್ಯವ ನಾಯಿಗೊಕ್ಕೆ ಕಾಯಿಹೋಳು ಹಾಕಿದ ಹಾಂಗೆ ಒಂದಂಶವ ಹಂಚಿ ಅಧಿಕಾರ ಸಿಕ್ಕಿದ ಮೇಲೆ ಹತ್ತರಷ್ಟು ಸಂಪಾದ ಮಾಡಿಗೊಂಬದು. ಏನಾದರೂ ಬಾಯಿ ಒಡದೋರ ಬಾಯಿ ಮುಚ್ಚುಸುಲೆ ಕೊಲೆ ಮಾಡಿಸಿದರೂ ಕೇಸಿನ ಮುಚ್ಚಿ ಹಾಕುವದು! ಇಂದ್ರಾಣ ಹೊಲಸು ರಾಜಕೀಯ. ಸುಮ್ಮನೆ ಕೂದರೆ ಮತ್ತೂ ಹೆಚ್ಚುವದು. ಕೇಳುವೋರಿಲ್ಲದ್ದೆ ಅಪ್ಪದು.
            ಮನ್ನೆಯಾಣ ಪೇಪರಿಲ್ಲಿ ನೋಡಿದೆ. ರಾಷ್ಟ್ರೀಯ ಹೆದ್ದಾರಿಲ್ಲಿ ಅಪಘಾತಂದಾಗಿ ಮರಣ! ಆಕಸ್ಮಿಕ ಆದರೆ ಕ್ಷಮೆ ಇರಳಿ. ಆದರೆ "ಡೋಂಟ್ ಕೇರ್ ಹೇಳುವ ಹಾಂಗೆ ಸ್ಪರ್ಧಾತ್ಮಕವಾಗಿ ,ಮುಂದಾಣ ವಾಹನ ಹಿಂದೆ ಹಾಕುಲೆ,ಅಥವಾ ಇನ್ನಾವುದೋ ಕಳ್ಲ ಸಾಗಣೆಯ ಲೆಕ್ಕಲ್ಲಿ ವಾಹನ ಓಡುಸುವಗ ಗೊಂತಿಲ್ಲದ್ದೆ ಆದ ತಪ್ಪಾದರೆ ಅಲ್ಲಿ ವಾಹನ ನಿಲ್ಲುಸೆಕ್ಕು. ಅದಲ್ಲ ಪರಾರಿ ಅಪ್ಪದು!ಬಿದ್ದು ಸತ್ತೋರು ತನ್ನಂತೆಯೇ ಮನುಷ್ಯರು ಹೇಳುತ್ತ ಭಾವನೆ ಇದ್ದರೆ,ಸಂಬಂಧ ಪಟ್ಟ ತನಿಖಾಧಿಕಾರಿಗೊ ಬಪ್ಪನ್ನಾರ ಅಲ್ಲಿ ನಿಲ್ಲೆಕ್ಕು. ಆದರೆ ಹಾಂಗಿಲ್ಲೆ.
                ಏನು ಎತ್ತ ಹೇಳಿ ಗೊಂತಾದ ಅಪಘಾತವನ್ನೂ ಮುಚ್ಚಿ ಹಾಕುಲೆ, ಕೇಸಿಂದ ತಪ್ಪುಸಿಗೊಂಬಲೆ  ಅವಕಾಶ ಮಾಡಿ ಕೊಡುತ್ತವು ಕಾನೂನು ಪಂಡಿತಕ್ಕೊ!ಎಲ್ಲೋರಿಂಗೂ ಬೇಕಾದ್ದು ಪೈಸೆ! ಹಣ ಕಂಡರೆ ಸತ್ತ ಹೆಣವಾದರೂ ಬಾಯಿ ಬಿಡುಗಡೊ!ಪುಡಾರಿಗೊ ಹೇಳಿದ್ದರ ಕೇಳದ್ದ ಅಧಿಕಾರಿಗೊ ಮರದಿನ ಗೊಂತಿಲ್ಲದ್ದ ಊರಿಂಗೆ ವರ್ಗ ಆಗಿ ಬಿಡಾರ ಕಟ್ಟೆಕ್ಕಾವುತ್ತು ಹೇಳಿ ಹೆದರಿ ಕಾನೂನು ಪಾಲಕರೋ,ನ್ಯಾಯಕ್ಕೆ ತೀರ್ಪು ಕೊಡುವೋರೋ ಹೆರಟರೆ ಕಾನೂನಿಂಗೆ ಬೆಲೆ ಎಲ್ಲಿದ್ದು?
     ಮಂತ್ರಿಗಳೇ ಅನ್ಯಾಯ ಅತ್ಯಾಚಾರ ಮಾಡಿದ್ದರ ಕೇಳುವೋರಾರು! ನ್ಯಾಯಕ್ಕೆ ಬೆಲೆ ಎಲ್ಲಿದ್ದು? ಬೇಲಿಯೇ ಹೊಲವ ಮೆಯ್ದರೆ ಬೇಲಿ ಹಾಕುವದೆಂತಕೆ? ಅಧಿಕಾರದ ಮದ ಇಷ್ಟೆಲ್ಲ ಮಾಡುವದರನ್ನೇ ಇಲ್ಲಿ ಮದಲೇ ಬೇಕಾದ ಹಾಂಗೆ ಪಾರ್ಟಿ ಬದಲುಸಿಗೊಂಡು,ಕಾರ್ಯವಾಸಿ ಕತ್ತೆ ಕಾಲು ಹಿಡಿವ ವಿಭಾಗ ಎಂದು ವರೆಗೆ ಇದ್ದೋ ನಮ್ಮ ಪ್ರಜಾ ಪ್ರಭುತ್ವ ನವಗಂಟಿದ ಕಳಂಕ ಹೇಳಿಯೇ ಹೇಳೆಕ್ಕಷ್ಟೆ.ಈಗ ಕೇಂದ್ರಲ್ಲಿಪ್ಪೋರು ಹಲವು ಹಗರಣಂಗಳಲ್ಲಿ ಸಿಕ್ಕಿ ಬಿದ್ದಿದವು! ಮುಚ್ಚಿ ಹಾಕುಲೆ ತನಿಖೆ ಹೇಳಿಗೊಂಡು ಹೆರಟವು. ಕಮ್ಚಿ ಬಿದ್ದರೂ ಮೂಗು ಮೇಲೆ ಅವರದ್ದು!
ಒಬ್ಬ ಇಬ್ಬ ಯೋಚನೆ ಮಾಡುವ ವಿಷಯ ಅಲ್ಲ. ಅಣ್ಣಾ ಹಜಾರೆಯಾಂಗಿಪ್ಪೋರೇ ಮುಂದೆ ಹೋದೋರು ಕರೆಂಗೆ ನಿಂಬಲೂ ಜನ ಬೆಂಬಲ ಇಲ್ಲದ್ದೆ ಅಲ್ಲದೋ? ಇಲ್ಲದ್ದ ಉಸಾಬರಿ ಎನಗೆಂತಗೆ ಹೇಳಿ ದೂರ ನಿಂಬ ಕಾರಣವೇ ಪುಚ್ಚೆಯ ಕೊರಳಿಂಗೆ ಆರೂ ಗಂಟೆ ಕಟ್ಟುಲೆಡಿಗಾಯಿದಿಲ್ಲೆ. ಒಗ್ಗಟ್ಟಿದ್ದರೆ ಸಾಧುಸಲೆಡಿಯದ್ದದು ಯಾವದೂ ಇಲ್ಲೆ. ಅಂದುದೇ ಗಾಂಧಿ ಅಜ್ಜ ಮುಂದೆ  ನಿಂದು ಸ್ವಾತಂತ್ರ್ಯ ದೊರಕಿಸಿ ಕೊಟ್ಟ ಹಾಂಗೆ ಹೋಯೆಕ್ಕಾರೆ ದೃಢ ನಿರ್ಧಾರದ ಮುಂದಾಳುಗೊ ಮುಂದೆ ನಿಂದರೆ ಎಲ್ಲ ಸರಿ ಹೋಕು ಹೇಳಿ ಕಾಣುತ್ತು. ಯಾವುದಕ್ಕೂ ಕಾಲ ಕೂಡಿ ಬರೆವ್ಕ್ಕು ಹೇಳುವದು ಖಂಡಿತ! ಅದಕ್ಕೂ ದೈವಸಹಾಯ ಬೇಕು. ಈ ವಿಷಯಲ್ಲಿ ಆ ದೇವರನ್ನೇ ಎಲ್ಲೋರಿಂಗು ಸದ್ಬುದ್ಧಿ ಕೊಡು ಹೇಳಿ ಕೇಳಿಗೊಳ್ಳೆಕಷ್ಟೆ!

No comments:

Post a Comment