Saturday, April 6, 2013

ಕಣ್ಣು

ಕಣ್ಣು
ದೇಹದ ಪಂಚೇಂದ್ರಿಯಂಗಳಲ್ಲಿ ಕಣ್ಣು ಮುಖ್ಯವಾದ್ದು ಹೇಳುವದು ಎಲ್ಲೋರಿಂಗೂ ಗೊಂತಿಪ್ಪ ಸಂಗತಿ. ಕೆಲವು ಜನ ಹುಟ್ಟಿಂದಲೇ ಕುರುಡರಾದರೆ, ಕೆಲವು ಜನ ಕಾರಣಾಂತರಂಗಳಿಂದ ಕುರುಡರಪ್ಪದೂ ಇದ್ದು. ದೃಷ್ಟಿ ದೋಷಂದ ಕನ್ನಡಕ ಉಪಯೋಗುಸೆಕ್ಕಾಗಿಯೂ ಬತ್ತು.ಅಂತೂ ಪ್ರಕೃತಿವಿಶೇಷಂಗಳ ನೋಡೆಕ್ಕಾರೆ ಕಣ್ಣು ಬೇಕು. ಜನ್ಮತಃ ದೃಷ್ಟಿ ಕಳಕ್ಕೊಂಡೋನು, ಬದುಕ್ಕಿನುದ್ದಕ್ಕೂ ಕುರುಡನಾಗಿಯೇ ಇರೆಕ್ಕಾವುತ್ತು. ಹಿಂದಾಣೋರು, ಜಾತಕ ನಂಬಿಗೊಂಡಿದ್ದೋವು ಗ್ರಹ ದೋಷ ಹೇಳಿಯೋ, ಪೂರ್ವಜನ್ಮದ ದೋಷ ಹೇಳಿಯೋ ನಂಬಿಗೊಂಡು ಅಂತೆ ಬಂದದರ ಅನುಭವಿಸ್ಯೊಂಡು ಕಷ್ಟ ಪಟ್ಟಿತ್ತಿದ್ದವಡೊ. ಈಗ ದೋಷ ಹೋಗಲಾಡುಸುಲೆ ಬೇರೆ ಕಣ್ಣುಗಳ ಕೂರುಸಿಯೋ ಅಥವಾ ಅದೂ ಎಡಿಯದ್ದರೆ ಕುರುಡರಿಂಗೂ ಲೋಕ ಜ್ಞಾನ ಅರಡಿವಲೆ ಕುರುಡರ ಶಾಲೆಲ್ಲಿ ಕಲಿವ ಏರ್ಪಾಡು ಮಾಡ್ಯೊಂಡೋ ಒದ್ದಾಡಿಗೊಂಡಿತ್ತಿದ್ದವು. ಈಗ ಕಣ್ಣು ದಾನ ಮಾಡುವ ಕ್ರಮ ಸುರು ಮಾಡಿದ್ದವು. ಕೆಲವು ಜನ ಸಾವಂದ ಮದಲೇ "ಎನ್ನ ಕಣ್ಣಿನ ದೃಷ್ಟಿ ಕಳಕ್ಕೊಂಡೋರಿನ್ಗೆ ದಾನ ಮಾಡಿದ್ದೆ"ಹೇಳಿ ಇಚ್ಛಾಪತ್ರ ಬರವದೂ ಇದ್ದು. ಸತ್ತ ಕೂಡಲೇ ಅವರ ಕಣ್ಣಿನ ತೆಗದು ಕಣ್ಣಿಲ್ಲದ್ದೋವಕ್ಕೆ ಒದಗುಸಿ  ಕಸಿ ಮಾದಿದರೆ ಅವರ ಬದುಕಿನ ಒಳುದ ಸಮಯಲ್ಲಿ  ಲೋಕವ ನೋಡಿ ತಿಳಿವ ಸಾಮರ್ಥ್ಯ ಪಡಕ್ಕೊಳ್ಳುತ್ತವಡೊ.ಅಂತೂ ಎಲ್ಲಕ್ಕೂ ವಿಧಿಯನ್ನೇ ದೂರುಗೊಂಡು ಆರೂ ಕೂರುತ್ತವಿಲ್ಲೆ. ಎಡಿಗಾದಷ್ಟು ಜೀವನದ ಸವಿಯ ಅನುಭವುಸುಲೆ ಇಪ್ಪ ದಾರಿ ಹುಡುಕ್ಕುತಾ ಇದ್ದವು. ಅದರಲ್ಲಿ ಜಯ ಗಳುಸಿದ್ದವು ಕೂಡಾ.
    ಲೋಕದ ಕಣ್ಣು ಹೇಳಿ ನಾವು ದಿನಾ ಕಾಂಬ ಸೂರ್ಯನ ಹೇಳುತ್ತವು. ಕಣ್ಣಿದ್ದೋರಿಂಗೂ ಕಾಣೆಕ್ಕಾರೆ ಬೆಣ್ಚಿ ಬೇಕನ್ನೆ! ಬೆಣಚ್ಚಿ ಇಲ್ಲದ್ದೆ ಎಂತರನ್ನೂ ನೋಡುಲೆಡಿಯ! ಕರೆಂಟ್  ಕೂಡ ಪ್ರಕೃತಿಂದಲೇ ನಮ್ಮ ಹಿಂದಾಣೋರು ಹುಡುಕ್ಕಿದ ವಿಜ್ಞಾನ! ಇದ್ದೆಲ್ಲ ಕತ್ತಲೆಲ್ಲಿ ಇಪ್ಪದರ ಬೆಣಚ್ಚಿಗೆ ತಂದು ತೋರುಸುವದು ಹೇಳಿದರೆ ಕಾಂಬ ಹಾಂಗೆ ಮಾಡುವದು!. ಮದಾಲು ಅಬ್ಬೆ, ಮತ್ತೆ ಗುರು ಲೋಕ ಜ್ಞಾನ,ವಿದ್ಯೆ ಎಲ್ಲ ಹೇಳಿಕೊಟ್ಟು, ಪ್ರಕೃತಿಯ ಬಗ್ಗೆ ಅರಡಿವ ಹಾಂಗೆ ಮಾಡುತ್ತವು. ಮತ್ತೆ "ಪಾದಂ ಸಬ್ರಹ್ಮಚಾರಿಣಃ ಹೇಳಿಯೋ ಮತ್ತೆ ಗ್ರಂಥ ಪಠಣಂದಲೋ, ಸ್ವಂತ ತಿಳುಕ್ಕೊಂಡೋ ಪ್ರಪಂಚ ಜ್ಞಾನ ಅರಿವಾವ್ತು.ಎಲ್ಲ ಒಂದೇ ಸರ್ತಿ ಅರದು ನೀರು ಕುಡಿವಲೆಡಿಗೊ! ಹಾಂಗೆ ಸಹಜವಾಗಿ ಕಣ್ಣಿದ್ದರೂ ವಿಷಯ ತಿಳುಕ್ಕೊಳ್ಳೆಕ್ಕಾದರೆ ಬೇರೆಯೋರ ಸಹಾಯ ಬೇಕಾಗಿ ಬತ್ತು. ಎಲ್ಲ  ಜ್ಞಾನಂಗಳನ್ನೂ ಪಡಕ್ಕೊಂಡು ಸರ್ವಜ್ಞ ಹೇಳಿ ಆಗೆಡದ್ದರೂ, ನಮ್ಮ ಬದುಕ್ಕಿನ ಖರ್ಚಿಗೆ ತಕ್ಕ ಕಲ್ತೊಂಡರೆ ಎಲ್ಲೋರೊಟ್ಟಿಂಗೆ "ಗೋವಿಂದ" ಹೇಳ್ಲಕ್ಕಲ್ಲದೋ?
            ಕೆಮಿಲ್ಲಿ ಕೇಳಿದ್ದರನ್ನೂ ಕಣ್ಣು ನೋಡೆಕ್ಕು. ನೋಡಿದ ಮೇಲೆಯೇ ಸತ್ಯ ಗೊಂತಪ್ಪದು! ಹೇಳೆಕ್ಕಾರೂ ನೋಡ್ಯೊಂಡೆ ಹೇಳುವದಲ್ಲದೋ? ಮಾತ್ತೂ ಖಂಡಿತ ಮಾಡ್ಯೊಂಬಲೆ ಮುಟ್ಟಿ ನೋಡೆಕ್ಕಾವುತ್ತು.ನೋಡ್ಡೆಕ್ಕಾರೂ ಮೂಗಿನ ಸಹಾಯವೂ ಬೇಕು.ಕಣ್ಣು ಕಾಣದ್ದದರ ಮೂಗು ಹೇಳುಗು! ಪರಿಮಳ ಮೂಗಿಂಗೆ ಬಡುದರೆ ಅದರ ಹುಡುಕ್ಯೊಂಡು ನಾವು ಹೋವುತ್ತು.ಒಳುದ ನಾಲ್ಕು ಇಂದ್ರಿಯಂಗಳ ಸಹಾಯಂದಲೇ ಆವುತ್ತು ನಮಗೆ ಪೂರ್ಣ ಜ್ಞಾನ ಸಿಕ್ಕುವದು.ಅಂಗಂಗೊ ಬೇರೆ ಬೇರೆ ಆದರೂ ಒಂದಕ್ಕೊಂದು ಅನುಕೂಲವಾಗಿದ್ದರೆ ಪೂರ್ಣ ತಿಳುವಳಿಕೆ ಸಿಕ್ಕುಗು! ಕೆಮಿ ಕೇಳ್ಯೊಂಡಿಪ್ಪ ಸಂಗೀತದ ಕಡೆಂಗೆ ನೋಡಿದರೆ ಹಾಡುವ ಮನುಷ್ಯನ ನೋಡುಲಕ್ಕು.ಕೇಳುತ್ತಾ ಇದ್ದರೂ ನೋಡದ್ದರೆ ಆರು ಹಾಡಿದ್ದು ಹೇಳಿ ಗೊಂತಕ್ಕೊ!ಕೇಳುಲೂ ನೋಡುಲೂ ವ್ಯವಧಾನವೂ ಬೇಕು.ಗಮನ ಎಲ್ಯೋ ಇದ್ದರೆ ಕೇಳುಲೂ ಎಡಿಯ. ಕೇಳಿದ್ದು, ನೋಡಿದ್ದು ಎಂತರ ಹೇಳಿಯೂ ಅರಡಿಯ. ಹಾಂಗಾದರೆ ಎಲ್ಲಕ್ಕೂ ಮುಖ್ಯ ಗಮನ ಹೇಳಿ ಆವುತ್ತು. ಡಾನ್ಸ್ ನೋಡ್ಯೊಂಡಿದ್ದರೂ ಗಮನ ಇಲ್ಲದ್ದರೆ ಆರು ಡಾನ್ಸ್ ಮಾಡುವದು, ಶಾಸ್ತ್ರೀಯ ನೃತ್ಯವೋ ಅಲ್ಲದೋ ಹೇಳುಲೂ ಎಡಿಯ. ಅಂಬಗ ಪಂಚೇಂದ್ರಿಯ<ಗಳ ಸಹಾಯಂದ ನಮ್ಮ ಮನಸ್ಸು ಪೂರ್ಣ ಚಿತ್ರವ ನೋಡಿಗೊಂಡರೆ ಅದು ಮನಸ್ಸಿಲ್ಲಿ ನೆಲೆ ನಿಲ್ಲುತ್ತು.ಹಾಂಗೆ ಮನಸ್ಸಿಲ್ಲಿ ಒಳಿಯೆಕ್ಕಾದರೆ ನಮ್ಮ ಗಮನವೂ ಬೇಕನ್ನೆ!
  ಕಣ್ಣಿಂದ ನೋಡುವದರಲ್ಲಿಯೂ ಅನೇಕ ವಿಧಾನಂಗಳ ಹೇಳಿದ್ದವು. ಉದಾಹರಣಗೆ ಪಕ್ಷಿನೋಟ-ಆಕಾಶಲ್ಲಿ ಹಾರಿ ಆಯಾಸ ಅಪ್ಪಗ ಒಂದು ಮರದ ಗೆಲ್ಲಿಲ್ಲಿಯೋ ಅಥವಾ ಇನ್ನೆಲ್ಲಿಯೋ ವಿಶ್ರಾಂತಿಗಾಗಿ ಕೂರುತ್ತು ಹಕ್ಕಿ.ಬಚ್ಚೆಲ್ಲು ಹೋಗಿ ಅಲ್ಲಿಂದ ಹೆರಡುಲಪ್ಪಗ ಒಂದರಿ ಕೊರಳಿನ ಸುತ್ತಲೂ ತಿರುಗಿಸಿ ಎಲ್ಲಾಕಡೆಂಗುದೇ ನೋಡುತ್ತು ಆ ಹಕ್ಕಿ! ಇನ್ನೆಲ್ಲಿಗೆ ಯಾವ ದಾರಿಲ್ಲಿ ಹೋಪಲಕ್ಕು ಹೇಳಿಯೋ ಏನೋ ಕೊರಳಿ ತಿರುಗಿಸಿ ನೋಡುವದರ ತಿಳುದೋವು ಪಕ್ಷಿ ನೋಟ ಹೇಳುತ್ತವು. ನಾವುದೇ ಜೀವನದ ಒಂದು ಘಟ್ಟಲ್ಲಿ, ಒದಗಿದ ಸೋಲು-ಸಾಲಂಗಳ ಗ್ರೇಶ್ಯೊಂಡು ಇನ್ನು ಮುಂದೆ ಹೇಂಗೆ ಹೋಪಲಕ್ಕು ಹೇಳಿ ಯೋಚನೆ ಮಾಡುವದರ ಹೀಂಗೆ ಹೇಳುಲಕ್ಕದೋ.ಬದುಕ್ಕಿನ ಏಳು ಬೀಳುಗಳ ಗಮನುಸಿ ಎಡವಿದಲ್ಲಿ ದಾರಿ ತಪ್ಪಿದಲ್ಲಿ,ಹೇಂಗೆ ಸರಿ ಮಾಡಿಗೊಂಬಲಕ್ಕು ಹೇಳುವದರ ಯೋಚುಸಿಗೊಂಡರೆ ಸರಿ ದಾರಿ ಸಿಕ್ಕುಗು ಹೇಳಿ ಯೋಚನೆ ಮಾಡುತ್ತವು.
     ಇನ್ನು, ಕಣ್ಣಾಡುಸುವದು, ಕಣ್ಣೋಡುಸುವದು, ಕಣ್ಣು ಹಾಕುವದು ಕಣ್ಣು ಕೀಳುವದು,ಕಣ್ಣು ನೆಡುವದು- ಹೀಂಗೆಲ್ಲ ನುಡಿಗಟ್ಟುಗಳ ಹಿಂದಾಣೋರು ಹೇಳಿದ್ದವು.ಆನು ಆಚಿಕೆ ಕೂದು ಅಡಕ್ಕೆ ಸೊಲುಕ್ಕೊಂಡಿಪ್ಪಗ ಹಪ್ಪಳ ಒಣಗುಸುಲೆ ಹಾಕಿಗೊಂಡಿದ್ದ  ಹೆಂಡತಿ ಹೇಳುಗು "ಇದಾ ರಜ ಇಲ್ಲಿಗೂ ಕಣ್ಣು ಹಾಕಿಗೊಳ್ಳಿ"ಹೇಳಿ. ಕಾಕೆ ಬಾರದ್ದ ಹಾಂಗೆ ನೋಡ್ಯೊಳ್ಳೀ ಹೇಳುವದು ಸೂಚ್ಯಾರ್ಥ." ಅಲ್ಲಿ ಮಗ ಪಾಠ ಓದುತ್ತಾ ಇದ್ದ. ರಜ ಕೆಮಿ ಕೊಟ್ಟೊಳ್ಳೀ" ಹೇಳಿದರೆ ಕೇಳಿಗೊಂಡರೆ ಅವ ತಪ್ಪಿದಲ್ಲಿ ತಿದ್ದಿಗೊಳ್ಳಿ ಹೇಳುವದೇ ಅಲ್ಲದೋ ಸೂಚ್ಯಾರ್ಥ.ದೊಡ್ಡ ಸಭೆಲ್ಲಿ ತುಂಬ ಜನ ಇಪ್ಪಗ ಆರೆಲ್ಲ ಬಯಿಂದವು ಹೇಳಿ ಗೊಂತಾಯೆಕ್ಕಾದರೆ ಪಕ್ಷಿನೋಟವೂ ಬೇಕು. ಸುತ್ತಲೂ ಕಣ್ಣುತಿರುಗುಸಿ ನೋಡೆಕ್ಕು.ಒಳ್ಳೆ ಹೂಗು,ಹಣ್ಣು ಕಂಡರೆ, ಮರಲ್ಲಿ ಮಾವಿನ ಮೆಡಿಯೋ ಹೂಗೋ ಕಂಡರೆ  ಕಣ್ಣು ತಿರುಗುಸಿ ನೋಡಿದರೆ ಕಾಣುತ್ತು. ಕಂಡರೆ ಮತ್ತೆ ಆ ಮರದ ಒಡೆಕ್ಕಾರನತ್ರೆ ಹೇಳುಲಕ್ಕು" ನಿನ್ನ ಮರಕ್ಕೆ ಆನು ಕಣ್ಣು ಹಾಕಿದ್ದೆ.ಮೆಡಿ ಕೊಯ್ವಗ ಎನ್ನ ಮರೆಯೆಡ ಹೇಳುಲಕ್ಕು.ಮಗಂಗೋ, ತಮ್ಮಂಗೋ ಕೂಸಿನ ಹುಡುಕ್ಯೊಂಡಿಪ್ಪೋರು ದೊಡ್ಡ ಅನಪತ್ಯಕ್ಕೆ ಹೋದರೆ ಬಂದೋರ ಪೈಕಿಲ್ಲಿ ಕೆಲವರ ನೋಡಿ ಕಣ್ಣು ಹಾಕುವದು ಹೇಳಿರೆ ನೋಡಿ ಅವರತ್ರೆ ಮಾತು ಮುಂದುವರುಸುವ ಯೋಚನೆ ಮಾಡುವದು.ಅಂಗ್ಡಿಗೆ ಹೋದರೆ ಮದಲೆಲ್ಲ ಅಂದು ಬೇಕಾದ ಸಾಮಾನು ಅಲ್ಲದ್ದೆ ಬೇರೆ ಸಾಮಾನುಗೊಕ್ಕೂ ಕಣ್ಣು ಹಾಕುವದು ಮಾಂತ್ರ ಅಲ್ಲ ಪೈಸೆ ಇದ್ದರೆ ತೆಕ್ಕೊಂಬದು, ಅಥವಾ " ಆನು ನಾಳೆ ಬತ್ತೆ ,ಈ ಸಾಮಾನು ಎನಗೆ ಬೇಕು, ಬೇರಾರಿಂಗೂ ಕೊಟ್ಟಿಕ್ಕೆಡ " ಹೇಳಿಕ್ಕಿ ಬಪ್ಪದು.
 ಕೆಲವು ಜನ ಹೇಳುವದಿದ್ದು,"ಕಣ್ಣಾರೆ ಕಂಡರೂ ಪರಾಂಬರುಸಿ ನೋಡೆಕ್ಕು" ಹೇಳಿ. ಆರೋ ಎಂತದೋ ಹೇಳಿದವು ಹೇಳಿ ಕೇಳಿದ ಕೂಡ್ಳೇ ವಿಮರ್ಶೆ ಇಲ್ಲದ್ದೆ ಜಗಳ ಮಾಡುವದು,ದುಡುಕ್ಕಿ   ಯೋಚನೆ ಇಲ್ಲದ್ದೆ ಒಂದರಿ ಕೊಯ್ಕೊಂಡ ಮೂಗು ಮತ್ತೆ ಚೆಗುರುಗೊ?  ಅಂದು ಶ್ರೀರಾಮ ಲಕ್ಷ್ಮಣಂಗೆ ಮೂಗು ಕೊಯ್ವಲೆ ಹೇಳಿದ್ದು ಶೂರ್ಪನಖಿಯ ಮಾನಭಂಗ ಮಾಡಿದರಾದರು ಸುಮ್ಮನೆ ಹೋಕೋ ಹೇಳುವ ಆಶೆಂದ ಹೇಳಿ ಕಾಣುತ್ತು. ಮತ್ತೆ ಹೆಣ್ಣೊಂದರ ಕೊಲ್ಲುವದೂ ತಪ್ಪಲ್ಲದೋ! ಅಪಮಾನ ಮಾಡಿ ಕಳುಸಿದರೆ ಸಾಕು ಹೇಳಿ ಆಗಿಕ್ಕು.ಆದರೆ ಮೂಗಿದ್ದವಂಗೆ ಇದ್ದರೆ ಮಾಂತ್ರ ಅಡೊ "ನಾಚಿಕೆ, ಮಾನ ಮರ್ಯಾದೆ" ಹೇಳಿ ಇಪ್ಪದು,.ಮೂಗು ಕೊಯ್ದೂ ಪ್ರಯೋಜನ ಆದ್ದು ಹೇಂಗೆ? ಆ ಮೂಗಿನ ರಾವಣಂಗೆ ತೋರುಸಿದ ಕಾರಣ ರಾಮಾಯಣ ಮುಂದುವರುತ್ತಲ್ಲದೋ!
        ಕಣ್ಣಿನ ಶುದ್ದಿ ಹೇಳುಲೆ ಹೆರಟದು ದಾರಿ ತಪ್ಪಿತ್ತೋ! ಕಣ್ಣು ನೋಡ್ಳಿಪ್ಪದು. ನೋಟಂಗಳಲ್ಲಿಯೂ ಹಲವಾರು ನಮೂನೆ ಇಲ್ಲೆಯೋ? ಓರೆ ನೋಟ, ತೀಕ್ಷ್ಣ ನೋಟ, ಬೆರಗು  ಕಣ್ಣಿಂದ ನೋಡುವದು, ಬಿಟ್ಟ ಕಣ್ಣಿಂದ ನೋಡುವದು, ನೋಟಲ್ಲಿಯೇ ಮೈಮರವದು ಹೀಂಗೆ ಇನ್ನೂ ಅನೇಕ ಕ್ರಮಂಗಳ ಎಲ್ಲೋರೂ ನೋಡಿ ಅನುಭವಿದ್ದಿಕ್ಕು. ಸಣ್ಣ ಮಕ್ಕಳ ಕಣ್ಣೋಟ ಶಿವನ ಕೈಯಲಗು ಹೊಳೆದಂಗೆ ಹೇಳಿ ಜಾನಪದಕಾರ ಹೇಳಿದ್ದಲ್ಲದೋ?ನೆಟ್ಟ ನೋಟಲ್ಲಿ ನೋಡುಲೆ ಶುರುಮಾಡಿದರೆ ಮೈಮರವದಿದ್ದು. ನೋಡುವ ದೃಷ್ಟಿ ಹೇಳುತ್ತವಲ್ಲದೋ? ದೃಶ್ಯಂಗಳ  ಒಂದರಿ ನೋಡಿದರೆ ಎಡೆಮರವಾಗಿದ್ದದು ಮತ್ತೊಂದರಿ ನೋಡುವಗ ನೆಂಪಾವುತ್ತು. ಇನ್ನು ಕಾಮದ ಕಣ್ಣು, ಕಾಮಲೆ ಕಣ್ಣು ಹೇಳಿ ಕಣ್ಣಿದ್ದೋವು ಕಣ್ಣಿನ ದುರುಪಯೋಗ ಮಾಡಿ ತೊಂದರೆ ಕೊಡುವ ವಿಚಾರವೇ ಮುಂದುವರುದು ಅತ್ಯಾಚಾರ, ಅನಾಚಾರಕ್ಕೆ ಕವಲು ಹೋಪದು!
         ಕಣ್ಣಿದ್ದೋವಂಗೆ  ನೋಡುವದಲ್ಲಿಯೂ ಆಸೆಗಣ್ಣಿಂದ ನೋಡುವದು ಇದ್ದಲ್ಲದೋ! ಕಂಡದು ಕುಡೆಗೆ ಹೋಗ ಹೇಳುತ್ತವು. ಕಂಡದು ಬೇಕು ಹೇಳುವ ಆಸೆ ಹುಟ್ಟುಸುತ್ತು. ಸಿಕ್ಕದ್ದರೆ ಸಿಕ್ಕುಲಿಪ್ಪ ಉಪಾಯ ಹುಡುಕ್ಕುತ್ತು. ಮನಸ್ಸು. ಹೀಂಗೆ ಮುಂದುವರುದೇ ಅಲ್ಲದೋ ಕಳ್ಳತನ, ದರೋಡೆ ಎಲ್ಲ ನಡವದು! ಕಣ್ಣಿಲ್ಲದ್ದೋರಿಂಗೆ ಕಾಣುತ್ತಿಲ್ಲೆ ಹೇಳುವ ಚಿಂತೆ ಆದರೆ ಇದ್ದೋರಿಂಗೆ ಕಂಡದರ ಪಡೆಯೆಕ್ಕು ಹೇಳುವ ಆಸೆ ಹುಟ್ಟುಸುಗಡೊ!, ಅದಕ್ಕೆ ಬಸವಣ್ಣ ಹೇಳಿದ್ದಡೊ ಎನ್ನ ಕುರುಡನ ಮಾಡು ಹೇಳಿ. ಆಡೆಕ್ಕು ಹೇಳಿಯೇ ಇಲ್ಲೆ. ಕೆಲವು ಜನಕ್ಕೆ ಬೇರೆಯೋರ ಕಷ್ಟ ಗೊಂತಾವುತ್ತಿಲ್ಲೆ. ಇಲ್ಲಿ ಕಣ್ಣಿದ್ದೂ ಕುರುಡರಾವುತ್ತವು. ಗುರ್ತ ಇದ್ದೋವುದೇ ಇವನ ಕಣ್ಣಿಂದ ತಪ್ಪುಸಿಗೊಂಬಲೆ, ನೋಡಿಯೂ ನೋಡದ್ದೋರ ಹಾಂಗೆ ಕಣ್ಣು ತಿರುಗಿಸಿಗೊಂಡು, ಇನ್ನೊಂದು ದಾರಿಲ್ಲಿ ಹೋಪದು ಗೊಂತಿದ್ದನ್ನೆ. ಇನ್ನು ಕೆಲವು ಜನ ಎಂತರನ್ನೋ ಜಾನಿಸ್ಯೊಂಡು ಹೋಪಗ ಕಂಡರೂ ಗೊ<ತಾವುತ್ತೂ ಇಲ್ಲೆ. ಅಂಬಗ ನಿಜವಾಗಿ ಕಂಡರೆ ಮಾತಾಡುಸುವೋರೂ  ಈ ಅಪರಾಧಕ್ಕೊಳ ಆವುತ್ತವು. ರಜ ಒರಗೆಕ್ಕು ಹೇಳುವದರನ್ನೂ ರಜ ಕಣ್ಣು ಮುಚ್ಚೆಕ್ಕು ಹೇಳುತ್ತವು. ಒರಕ್ಕು ಬಯಿಂದಿಲ್ಲೆ ಹೇಳುವದರ ಪರ್ಯಾಯವಾಗಿ " ಶಿವಾ ಹೇಳಿ ಕಣ್ಣು ಮುಚ್ಚಿದ್ದಿಲ್ಲೆ ಹೇಳುವದಿದ್ದನ್ನೆ! ನೋಡಿದ ವಸ್ತು ಬೇಕು ತನಗೆ ಹೇಳುವದರ ಗುರ್ತ ತಪ್ಪಿ ಹೋಗದ್ದ ಹಾಂಗೆ ಸುಣ್ಣದ ಬೊಟ್ಟು ಹಾಕಿ ಮಡಗಿದ್ದೆ ಹೇಳುತ್ತವು.
                         ಇನ್ನು ದೇವರೆಗಳ ಮುದ್ದಣ ಕವಿ ಹೇಳಿದ್ದು ಬಿಡುಗಣ್ಣರು ಹೇಳಿದ್ದು ನೆಂಪಾತು. ಅನಿಮಿಷರು ಹೇಳಿದ್ದದರ ಕಣ್ಣು ಮುಚ್ಚದ್ದೋರು ಹೇಳುವ ಅರ್ಥ ಬಪ್ಪ ಹಾಂಗೆ ಬಿಡುಗಣ್ನರು ಹೇಳಿತ್ತಿದ್ದ.ಕೆಲವು ಜೀವಿಗೊಕ್ಕೆ, ಮನುಷ್ಯರಲ್ಲಿಯೂ ಇರುಳು ಮಾಂತ್ರ ಕಣ್ಣು ಕಾಂಬೋವು ಇದ್ದವಲ್ಲದೋ?ಬಾವಲಿಗೊ ಇರುಳು ಮಾಂತ್ರ ಹಾರಾಡುಗಷ್ಟೆ!."ಹೆಗ್ಳನ ಬೆಣಚ್ಚಿಲ್ಲಿ ಬಿಟ್ಟ ಹಾಂಗೆ" ಒಂದು ಗಾದೆಯೇ ಇದ್ದನ್ನೆ. ಅವಕ್ಕುದೆ ಇರುಳು ಮಾಂತ್ರ ಕಾಂಬದಡೊ. ಹಳದಿ ರೋಗ ಹೇಳಿ ಇದ್ದಡೊ .ಅವಕ್ಕೆ ಕಾಂಬದೆಲ್ಲ ಅರಿಶಿನ ಕಾಂಗಡೊ.ಕಾಣುತ್ತ ಕಣ್ಣು ಸರಿ ಇದ್ದರೆ ಎಲ್ಲೋರಿಂಗೂ ಕಾಂಬ ಹಾಂಗೆ ಸರಿಯಾಗಿ ಕಾಣೆಕ್ಕನ್ನೆ.
                     ಇನ್ನು ಗೃಧ್ರ ದೃಷ್ಟಿ ಹೇಳಿದ್ದಡೊ. ಹದ್ದಿನಕಣ್ಣು ಹೇಳಿದರೆ ತುಂಬ ಎತ್ತರಕ್ಕೆ ಹಾರಿಗೊಂಡಿಪ್ಪ ಹದ್ದಿಂಗೆ ಕೆಳ ತಿರಿಕ್ಕೊಂಡಿಪ ಅದರ ಆಹಾರ ಅಲ್ಲಿಂದಲೇ ಕಾಂಬಲೆ ಸಿಕ್ಕಿ ಸೀದಾ ಕೆಳ ಇಳುದು ಬಾಯಿ ಹಾಕುವದಡೊ.ಹಾಂಗೆ ನಮ್ಮಲ್ಲಿಯೂ ಕೆಲವು ಜನರ ಸೂಕ್ಷ್ಮ ದೃಷ್ಟಿ  ಅವರ ಕಾರ್ಯ ಸಾಧನೆಗೆ ಉಪಯೋಗ ಆವುತ್ತಡೊ.ಪೋಲೀಸುಗೊಕ್ಕೆ ಈ ಕಣ್ಣು ಉಪಯೋಗ ಅಕ್ಕು.ಆದರೆ ಭ್ರಷ್ಟಾಚಾರಲ್ಲಿ ಮುಳುಗಿದೋವಕ್ಕೆ ಲಂಚ ಹೆಚ್ಚು ವಸೂಲು ಮಾಡುಲೆ ಉಪಯೋಗ ಆವುತ್ತು. ಖರ್ಚು ಮಾಡುವದರಲ್ಲಿಯೂ ಕೆಲವು ಜನಕ್ಕೆ ಸೂಕ್ಷ್ಮ ದೃಷ್ಟಿ ಇರುತ್ತು. ಕೈಕೆಳ ಕೆಲಸ ಮಾಡುವೋರ ಕಳ್ಳತನ(ಕೆಲಸಲ್ಲಿ) ಗೊಂತಾಯೆಕ್ಕಾರೆ ದೃಷ್ಟಿ ಸೂಕ್ಷ್ಮ ಇದ್ದರೆ ಒಳ್ಳೆದಲ್ಲದೋ? ದೂರ ದೃಷ್ಟಿ ಇದ್ದರೆ ಮಾಂತ್ರ ಮುಂದಾಣ ಚಿಂತೆ ಮಾಡುಲೆಡಿಗು!
ಇನ್ನು ದೃಷ್ಟಿ ತಾಗುವದು ಹೇಳುವದಿದ್ದು. ಅವನ ನಾಲಗೆಲ್ಲಿ ಮಜ ಇದ್ದು ಹೇಳಿ ಕಾಣುತ್ತು. ಹೇಳಿದ್ದು ಹೇಳಿದ ಹಾಂಗೆ ಆವುತ್ತು,ಹೇಳುತ್ತವು. ಮದಲು ಅಂಥೋರ ಬರುಸಿ ಬಂಡೆಕಲ್ಲುಗಳ ಒಡೆಶಿದ್ದವು ಹೇಳಿ ಹೆರಿಯೋರು ಹೇಳಿದ್ದು ಕೇಳಿದ್ದೆ. ಒಬ್ಬ ಎಂತಾರು ಕಂಡರೆ ಎಂತಾರು ಹೇಳದ್ರೆ ಅವಂಗೆ ತೃಪ್ತಿ ಇಲ್ಲೆ. ಅವ ಹತ್ತರಾಣ ಮನೆಗೆ ಹೋದ್ದು ಆ ಮನೆಲ್ಲಿ ಎಮ್ಮೆ ಕರಕ್ಕೊಂಡಿಪ್ಪ ಹೊತ್ತಾಗಿತ್ತಡೊ. ಇವ  ಫಕ್ಕನೆ  "ಎಮ್ಮೆಯ ಎಲ್ಲಿಂದ ತಂದೆ ಮಾರಾಯ? ಒಳ್ಳೆ ಹಾಲಿಪ್ಪ ಜಾತಿ ಹೇಳಿ ಕಾಣುತ್ತು" ಹೇಳಿದಡೊ. ಆ ಮನೆಯೋನಿಂಗೆ ಇವಂಗೆ ಹೀಂಗೆ ಏನಾದರೂ ಹೇಳುವ ಅಭ್ಯಾಸ ಇದ್ದು. ಹೇಳಿದರೆ ಹಾಂಗೆ ಆವುತ್ತು ಹೇಳಿ ಗೊಂತಿದ್ದ ಕಾರಣ ಇವ ಕೈ ಹಿಡುದು ಎಮ್ಮೆ ಹತ್ತರಂಗೆ ಕರಕೊಂಡು ಹೋಗಿ ಎಮ್ಮೆಯ ಮುಟ್ಟುಸಿದಡೊ. ಬೇರೊಂದು ಕಡೆಲ್ಲಿ ಹಾಂಗೆ ಹೇಳಿ ಮರದಿನ ಕರವಲೇ ಕೊಟ್ಟಿದಿಲ್ಲೆ ಹೇಳುವ ಶುದ್ದಿ ಕೇಳಿ ಹಾಂಗೆ ಮಾಡಿದ್ದಡೊ.ಅಂತೂ ಕಂಡದರ ಬಗ್ಗೆ ಏನಾದರೂ ಹೇಳುವ ಅಭ್ಯಾಸ ಇದ್ದರೆ ಕೆಲವೊಂದರಿ ಸೋತು ಹೋವುತ್ತು. ಮೆಳ್ಳೆ ಗಣ್ಣು ಕೋಸು ಕಣ್ಣು, ಕೇರೆ ಕಣ್ಣು, ಪುಚ್ಚೆಕಣ್ಣು ಹೀಂಗೆ ಕಣ್ಣಿನ ವೈವಿಧ್ಯವ ನಾವು ಗುರುತಿಸಿದ್ದು!
                          ಕೆಲವು ಜನ ಕಣ್ಣಿದ್ದೂ ಕುರುಡರ ಹಾಂಗೆ ನೋಡಿದರೂ ನೋಡದ್ದೋರ ಹಾಂಗಿಪ್ಪೋರೂ ಇದ್ದವಲ್ಲದೋ?ಶ್ರೀಮಂತರಿಂಗೆ ಬಡವರ  ಪಾಪದೋರ ಕಂಡರೆ ಸಸಾರ!ಹೊಟ್ಟೆ ಕಿಚ್ಚಿನೋರಿಂಗುದೆ ಬೇರೆಯೋರ ಅಭಿವೃದ್ಧಿ ಕಾಂಬಗ  ಹೊಟ್ಟೆ ಉರಿತ್ತಡೊ! ಮತ್ತೆ ಕೆಲವು ಜನ ಬದುಕ್ಕಿಪ್ಪಗಳೇ ಒಳ್ಳೊಳ್ಳೆ ರಮಣೀಯ ಜಾಗಗೊಕ್ಕೆ, ತೀರ್ಥಕ್ಷೇತ್ರಂಗೊಕ್ಕೆ ಹೋಪಲೆ ಇಷ್ಟ ಪಡುತ್ತವು. ಜೀವನಲ್ಲಿ ಅದೊಂದು ಬಾಕಿ ಅಪ್ಪದು ಬೇಡ ಹೇಳಿ, ಬೇರೆಯೋರ ಒತ್ತಾಯಕ್ಕೆ ಹೋಪೋರೂ ಇದ್ದವಲ್ಲದೋ!
          ಒಳಗಣ್ಣು ಹೇಳುವದಿದ್ದಲ್ಲದೋ! ಅದು ಮನಸ್ಸಿನ ಹೇಳುವದಲ್ಲದೋ? ಹುಟ್ಟಿಂದಲೇ ಕುರುಡರಾದೋರಿಂಗೆ ಒಳುದ ಇಂದ್ರಿಯಂಗೊ ತುಂಬಾ ಸೂಕ್ಷ್ಮ ಇರುತ್ತಡೊ. ಕೈಲ್ಲಿ ಮುಟ್ಟಿಯೇ ಅಕ್ಷರ ಓದುವೋರು ಇದ್ದವಲ್ಲದೋ!(ಬ್ರೈಲ್ ಲಿಪಿ) ಮತ್ತೆ ಕುರುಡನೂ ಕುಂಟನೂ ಬಹಳ ಹಿಂದೆ ಕಾಶೀ ಯಾತ್ರೆ ಮಾಡಿದ್ದವಡೊ. ಕುರುಡನ ಹೆಗಲ್ಲಿ ಕೂದ ಕುಂಟ ದಾರಿ ಹೇಳಿ ನಡಕ್ಕೊಂಡೇ ಹೋಯಿದವಡ. ಅಂತೂ  ದೇವರು ಕೊಟ್ಟ ಜನ್ಮಲ್ಲಿ ಜೀವನ ಯಾತ್ರೆಯ ಫಲಪ್ರದವಾಗಿ ಆರಿಂಗೂ ತೊಂದರೆಯಿಲ್ಲದ್ದೆ ಮುಗಿಶುವೋನೇ ಜಾಣ! ದೇವರ ಕಡೆಗಣ್ಣಿನ ನೋಟ - ಕರುಣಾದೃಷ್ಟಿ ನಮ್ಮ ಮೇಲಿದ್ದರೆ ಅವ ಕೊಟ್ಟ ಕಣ್ಣುಗಳ ಸಾರ್ಥಕತೆ ಆದ ಹಾಂಗೇ ಅಲ್ಲದೋ!

No comments:

Post a Comment