Tuesday, November 24, 2015

uppu

                                                            ಉಪ್ಪು
ಉಪ್ಪು  ಅಂದರೆ ಲವಣ  ಜೀವನಾಧಾರವಗಿದೆ. ಉಪ್ಪಿಲ್ಲದೆ ಊಟ್ಯವಿಲ್ಲ ಎಂದರೆ  ಬದುಕಲು ಆಹಾರ ಬೇಕು, ಆಹಾರ ತಿನ್ನಲು ರುಚಿಸಬೇಕಾದರೆ ಉಪ್ಪು ಬೇಕೇ ಬೇಕು .ಉಪ್ಪಿಲ್ಲವಾದರೆ ಊಟ ಸಪ್ಪೆ. ಸಪ್ಪೆ ಊಟ ಮಾಡುವವರೂ ಇದ್ದಾರೆ. ಆದರೆ ನಾಲಿಗೆಗೆ ರುಚಿ ಹತ್ತೆ ಬೇಕಾದರೆ ಉಪ್ಪು ಬೇಕು. ಉಪ್ಪಿನ ಪಥ್ಯವಿದ್ದವರು  ಕೂಡಾ ತುಂಬ ಕಡಿಮೆಯಾದರೂ ಉಪ್ಪು ಉಪಯೋಗಿಸುತ್ತಾರೆ. ನಾವು ತಿನ್ನುವ ಆಹಾರ,ನೀರು ಹಾಣ್ಣು ತರಕಾರಿಗಳಲ್ಲಿಯೂ ಲವಣಾಂಶ ಇದ್ದರೂ ಅವು ಜೀವನಕ್ಕೆ ಬೇಕೇ ಬೇಕಾದರೂ ನಾಲಿಗೆ ಬಯಸುವುದು ಈ ಉಪ್ಪನ್ನು.!ಉಪ್ಪು ಕೂಡಿಸದೆ ಮಾಡುವ ಊಟವೂ ಇಷ್ಟವಾಗುವುದಿಲ್ಲ. ಮತ್ತೆ ಕೆಲವರಿಗೆ ಪಾಯಸ ಬೆಲ್ಲ ಹಾಕಿ ಮಾಡಿದುದಾರೆ ಸ್ವಲ್ಪ ಉಪ್ಪು ಸೇರಿಸಿಕೊಂಡರೆ ಆ ರುಚಿಯೇ ಬೇರೆ.ಶ್ಃಅಡ್ರಸಗಳಲ್ಲಿ ಸೇರಿಕೊಂಡ ಈ ಉಪ್ಪು ರುಚಿಯಲ್ಲಿ ಪ್ರಾಡಾನ್ಯ ಪಡೆದಿದೆ.
ನಾವು ತಿನ್ನುವ ಉಪ್ಪು ಸಮುದ್ರದಿಂದ ದೊರಕುವುದು. ಸಮುದ್ರದ ನೀರನ್ನು ಇಂಗಿಸಿ ಉಪ್ಪು ತಯಾರಿಸುತ್ತಾರೆ. ಹಿನ್ನೀರು ಪ್ರದೇಶಗಳಲ್ಲಿ ಎಕ್ರೆಗಟ್ಟಲೆ ಜಾಗದಲ್ಲಿ ಉಪ್ಪು ನೀರನ್ನು ಭರತದ ಸಮಯಕ್ಕೆ ತುಂಬಿಸಿಕೊಂಡರೆ ಒಂದೆರಡು ದಿನಗಳಲ್ಲಿ ಸೂರ್ಯನ ಬಿಸಿಲಿಗೆ ನೀರು ಆವಿಯಾಗಿ ತಳದಲ್ಲಿ ಉಪ್ಪು ಮಾತ್ರ ಉಳಿಯುತ್ತದೆ. ಈ ಉಪ್ಪನ್ನು ಗೋಣಿ ಚೀಲಳಲ್ಲಿ ತುಂಬಿಸಿ ಮಾರಾಟ ಮಾಡುತ್ತಾರೆ. ಆಂಗ್ಲರ ಆಡಳಿತ ಕಾಲದಲ್ಲಿ ಉಪ್ಪು ತಯಾರಿಸಲು ಬಿಡುತ್ತಿರಲಿಲ್ಲವಂತೆ. ಇಂಗ್ಲೇಂಡಿನಿಂದ ಬರುವ ಹಡಗಿನಲ್ಲಿ( ಬರುವಾಗ ಈ ಸರಕು ತಂದರೆ ಹಿಂದಿರುಗುವಾಗ ಇಲ್ಲಿಯ ಬೆಲೆಬಾಳುವ  ಇಲ್ಲಿನ ಬೆಲೆಬಾಳುವ ಹತ್ತಿ ವಗೈರೆ ಕೊಂಡೊಇದು ಲಾಭ ಮಾಡುತ್ತಿದ್ದರು.ಇದನ್ನು ವಿರೋಧಿಸಿ ಉಪ್ಪಿನ ಸತ್ಯಾಗ್ರಹ ಗಂಧೀಜಿಯವರು  ಕೈಕೊಂಡದ್ದು ಚರಿತ್ರೆ.ಹೀಗೆ ತಯಾರಿಸಿದ ಉಪ್ಪಿನಲ್ಲಿ ಅಯೋಡಿನ್ ಕಡಿಮೆಯೆಂದು ಈಗ ಅಯೋಡೈಸ್ದ್ ಉಪ್ಪು ಮಾರುಕಟ್ಟೆಯಲ್ಲಿ ದೊರಕುವುದು ಸಾಮಾನ್ಯ ಉಪ್ಪಿಗೆ ಇಲ್ಲೂ ಗಿರಾಕಿ ಕಡಿಮೆಯಾಗಿದೆ! ಅರಕಾರವೇ ವ್ಯಾಪಾರಿಗಳ ಮುಸ್ಟಿಯಲ್ಲಿರುವಾಗ ಸಾಮಾನ್ಯರ ಮಾತಿಗೆ ಬೆಲೆ ಬರುವುದೇ? ನೈಜ ಉಪ್ಪಿನಲ್ಲಿರುವ ಖನಿಜಾಂಶಗಳು ಮಾರುಕಟ್ಟೆಯಲ್ಲಿ ದೊರಕುವ ಅಯೋಡೈಸ್ಡ್ ಉಪ್ಪಿನಲ್ಲಿ ಕಡಿಮೆಯಾಗಿರುವುದು.
     ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರೊಂದಿಗೆ ಹಲವಾರು ಜನ ಜೈಲು ಸೇರಿದ್ದರು.ಅಂದಿನ ದಿನಗಳಲ್ಲಿ ಜನರು ವಿದೇಶೀಯರ ವಿರುದ್ಧ ಒಂದಾಗಿದ್ದರು. ಈಗ ದೇಶೀಯರ ವಿರುದ್ಧ ಹೋರಾಡಬೇಕಾಗಿದೆ. ಸಮುದ್ರದ ನೀರಿನಲ್ಲಿಯೂ ಉಪ್ಪು ಹೇಗೆ ಬರುತ್ತದೆಯೆಂಬುದಕ್ಕೆ ಸಮುದ್ರಕ್ಕೆ ಬೇರೆ ನದಿಗಳಿಂದ ನೀರು ಹರಿದು ಬರುತ್ತದೆ. ಭೂಮಿಯಲ್ಲಿರುವ ಖನಿಜ ಲವಣಗಳು ಕರಗಿ ನೀರಾಗಿ ನದಿ ನೀರಿನೊಂದಿಗೆ ಸಾಗರ ಸೇರಿದರೆ ಅಲ್ಲೇ ಉಳಿಯುತ್ತದೆ. ವರ್ಷ ಒಟ್ಟಗಿ ಬರುವ ಖನಿಜ ಲವಣಗಳಿಂದ ಸಮುದ್ರದ ನೀರಿನಲ್ಲಿರುವ ಉಪ್ಪಿನ ಪ್ರಮಾಣ ಹೆಚ್ಚಾಗುತ್ತದೆ. ಒಂದು ನಿರ್ದಿಷ್ಟ ವರ್ಷದಿಂದ ಮತ್ತಿನ ವರ್ಷಕ್ಕೆ ಉಪ್ಪಿನ ಪ್ರಮಾಣ ಹೆಚ್ಚಾದುದನ್ನು ಲೆಕ್ಕ ಹಾಕಿದರೆ ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಾಗುತ್ತದೆಯೆಂದು ಗೊತ್ತಾಗುವುದಷ್ಟೆ!ಹಾಗಿ ಒಂದು ವರ್ಷದಲ್ಲಿ ಸರಾಸರಿ ಹೆಚ್ಚಾಗುವ ಉಪ್ಪಿನ ಪ್ರಮಾಣ ಲೆಕ್ಕ ಹಾಕಿದರೆ ಭೂಮಿಯ್ ಉತ್ಪತ್ತಿ, ಉಪ್ಪಿನ ಆಳ ಎತ್ತರಗಳನ್ನು ಲೆಕ್ಕ ಹಾಕಬಹುದೇನೋ!ಾಂತೂ ಸಮುದ್ರಕ್ಕೆ ಉಪ್ಪಿನ ಆಗಮನ ಬೇರೆಲ್ಲಿಂದಲೂ ಅಲ್ಲ ಭೂಮಿಯಿಂದಲೇ ಎಂಬುದು ಖಚಿತ.
ಉಪ್ಪಿನ ಸುದ್ದಿ ತೆಗೆಯುವಾಗ ಕೆಲವರು ನೈಜ ಸುದ್ದಿಗೆ ಉಪ್ಪು ಕಾರಸೇರಿಸಿ ಉತ್ಪ್ರೇಕ್ಷೆಯಿಂದ ಹೇಳುವುದಿದೆ. ಸುದ್ದಿ ವಿಶ್ಲೇಷಣೆ ಮಾಡುವವರು ನಿಜವಾದುದಲ್ಲವಾದರೂ ನಿಜವೆಂಬಂತೆ ಜನರನ್ನು ಮೋಸಗೊಳಿಸಲು ಉಪ್ಪು ಕಾರ ಸೇರಿಸಿ ದೊಡ್ಡದು ಮಾಡಿ ಹೇಳುತ್ತಾರೆ. ಮನುಷ್ಯ ಉಪ್ಪು ಹುಳಿ ಹಾಗೂ ಇತರ ರಸವಿಶೇಷಗಳನ್ನು ಇಷ್ಟಪಡುತ್ತಾನೆ. ಆದರೆ ಅತಿಯಾದರೆ ಅಮೃಅವೂ ವಿಷವಂತೆ. ಹಿತವಾಗಿ ಮಿತವಾಗಿ ತಿಂದರೆ ಮಾತ್ರ ರುಚಿಗೂ ಹಿತ.ಹೊಟ್ಟೆಗೂ ಹಿತ ಹೆಚ್ಚಾಗಿ ಬಿಟ್ಟಸ್ರೆ ರಕ್ತದ ಒತ್ತಡ,ಹಾಗೂ ಹೆಚ್ಚು ಸಕ್ಕರೆ ತಿಂದರೆ ಸಕ್ಕರೆ ಕಾಯಿಲೆ ಬರುವುದಲ್ಲವೇ? ಹಾಗೆಯೇ ನಮ್ಮ ನಡೆ ನುಡಿಗಳೂ ನಮ್ಮ ಹಿತಕ್ಕೂ ದೇಶದ ಹಿತಕ್ಕೂ ಬೇಕಲ್ಲವೇ?ನಿಜವಾಗಿ ಸತ್ಯ ಮಾರ್ಗದಲ್ಲಿ ನಡೆಯುವುದು ಆರೋಗ್ಯಕ್ಕೂ ಒಳ್ಳೆಯದು. ನಮ್ಮ ದೇಹವು ಬಹುಕಾಲ ಬಾಳಬಹುದು.
ಉಪ್ಪಿನಲ್ಲಿಯೂ ಬೇರೆ ಬೇರೆ ವಿಭಾಗಗಳಿವೆ. ಖನಿಜ ಉಪ್ಪು ಭೂಮಿಯಿಂದ ಅಗೆದು ತೆಗೆಯುವುದು. ಬಹಳ ಕಾಲದ ಹಿಂದೆ ಸಮುದ್ರವಾಗಿದ್ದ ಪ್ರದೇಶವಾಗಿದ್ದ ಭೂಭಾಗದಲ್ಲಿ ಅಗೆದು ತೆಗೆಯುವುದು. ಈ ಉಪ್ಪನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಬಿಡಾಲ ಲವಣ,ಸೈಂದುಪ್ಪು ಹ್ಹೀಗೆ ಹೆಸರುಗಳಿಂದ ಆಯುರ್ವೇದ ಪಂಡಿತರಿಗೆ ಚಿರಪರಿಚಿತ. ಸಾಮಾನ್ಯ ಉಪ್ಪು ಎಂದು ಕರೆಯುವುದು ಸಮುದ್ರದ ನೀರಿನಿಂದ ತೆಗೆದದ್ದು. ಹಿಂದೆ ಕಲ್ಲುಪ್ಪು ಕರಿಯುಪ್ಪು ಎಂದು ಕರೆಯುತ್ತಿದ್ದರು. ಈ ಉಪ್ಪನ್ನು ಗೋಣಿ ಚೀಲದಲ್ಲಿ ತುಂಬಿಸಿ ಮನೆ ಮನೆಗಳಿಗೆ ಕೊಂಡೊಯ್ಯುತಿದ್ದರು. ಮಕ್ಕಳನ್ನು ಬೆನ್ನ ಮೇಲೆ ಹಾಕಿ "ಉಪು ಬೇಣೊ ಬಟ್ಟೆಚ್ಚ "ಎಂದು ಆಡುತ್ತಿದ್ದರು ಈಗ ಇಂತಹ ಉಪ್ಪು ಕಾಣಸಿಗುವುದಿಲ್ಲ ಅಯೋಡೈಸ್ಡ್ ಉಪ್ಪು ಬೆಳ್ಳಗಿತ್ತದೆ.ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಮಾರುತ್ತಾರೆ. ಹಿಂದೆ ಹಿರಿಯರು ಚೀಲಗಳಲ್ಲಿ ತಂದ ಉಪ್ಪನ್ನು ದೋಣಿಯಾಕಾರದ ಮರಿಗೆಗಳಲ್ಲಿಯೋ ಗುಡಾಣಗಳಲ್ಲಿಯೋ ತುಂಬಿಸಿಡುತ್ತಿದ್ದರು. ಉಪಯೋಗಿಸುವಾಗ ತೊಳೆದ್ಯುವುದು ರೂಢಿ. ಈ ಉಪ್ಪನ್ನು ಕದಡಿ ಬೆಂಕಿಯಲ್ಲಿಟ್ಟು ಕುದಿಸಿ ಇಂಗಿಸಿದರ್ತೆ ಬಿಳಿಯುಪ್ಪು ಸಿಗುತ್ತಿತ್ತು. ಅದನ್ನ್ ಉಪ್ಪಿನಕಾಯಿಗೆ ಉಪಯೋಗಿಸುತ್ತಿದ್ದರು. ತೆಂಗಿನ ಮರಗಳಿಗೆ ಒಳನಾಡುಗಳಲ್ಲಿ ಬುಡಕ್ಕೆ ಹಾಕಿದರೆ ಹುಲುಸಾಗಿ ಬೆಳೆಯುತ್ತದೆ ಚೆನ್ನಾಗಿ ಕಾಯಿಗಳನ್ನು ಕೊಡುತ್ತದೆ. ಒಟ್ಟಾರೆ ಉಪ್ಪು ನಮಗೆ ಅವಿನಾಭಾವ ಸಂಬಂಧವುಳ್ಳದ್ದು.

No comments:

Post a Comment