Tuesday, November 24, 2015

ktagalu

                 ವಿದೇಶಗಳಲ್ಲಿ ಕೂಟಗಳು
             ಉದ್ಯೋಗಾಕಾಂಕ್ಷಿಗಳಾಗಿ ಸ್ವದೇಶ ಬಿಟ್ಟು ಹೋಗಿರುವ ಭಾರತೀಯರು ಸ್ವಂತ ಮನೆ ಂಡಿಕೊಂಡು ಸಂಸಾರ ಸಾಗಿಸುತ್ತಿರುತ್ತಾರೆ, ವಾರದ ಐದೂ ದಿನಗಳಲ್ಲಿ ಕೆಲಸವಿರುವುದರಿಂದ ಅವರೆಲ್ಲ ತುಂಬ ಬಿಸಿಯಾಗಿದ್ದರೆ ವಾರದ ರಜೆಗಳಲ್ಲಿ ಅವರಿಗೆ ಮನೆವಾರ್ತೆಗೆ ಸಂಬಂಧಿಸಿದ ಕೆಲಸಗಳು! ಮಕ್ಕಳಿಗೆ ಹೆಚ್ಚಿನ ಮನೆಪಾಠಗಳು. ಬೇರೆ ಕಡೆಗಳಿಗೆ ಕರಕೊಂಡು ಹೋಗುವುದು, ಮತ್ತೆ ದಿನಾ ದೇವರನ್ನು ಮನಸ್ಸಿನಲ್ಲೇ ನೆನಸುವುದಾದರೆ ಈ ಎರಡು ದಿನಗಳಲ್ಲಿ ದೇವರ ಆರಾಧನೆಗೆಂದೇ ನಿರ್ಮಿಸಿದ ದೇವಸ್ಥಾನಗಳಿಗೆ ಹೋಗುವುದು,ಮಕ್ಕಳ ಜನ್ಮ ದಿನಗಳನ್ನು ಆಚರಿಸುವುದು, ಮತ್ತೆ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗುವುದು. ಅಂದರೆ  ಹೀಗೆ ಹೊರಗೆ ಹೋದರೆ ಮಕ್ಕಳಿಗೂ ದೇಶದ ಪರಿಚಯದೊಂದಿಗೆ ಶಿಷ್ಟಾಚಾರದ ಪರಿಚಯ- ಹೀಗೆಲ್ಲ. ಒಟ್ಟಾಗಿ ಎಲ್ಲಾ ದಿನಗಳಲ್ಲಿಯೂ ಜನರು ಯಾವಾಗಲೂ ಅವರವರ ಕೆಲಸದಲ್ಲಿಯೇ ತಲ್ಲೀನರಾಗಿರುತ್ತಾರೆ.ಮಕ್ಕಳಂತೂ ಬಾಯಿಗೆ ತುರುಕಿದರೆ ಮಾತ್ರ ಹೊಟ್ಟೆ ತುಂಬಿದರೂ ಗೊತ್ತಾಗದವರು!.ಎಲ್ಲ ತಂದೆ ತಾಯಿಯೇ ತಿನ್ನಿಸಿದರೆ ಮಾತ್ರ ಅವರ ಹೊಟ್ಟೆ ತುಂಬಿಸಿದ ಸಮಾಧಾನ ಹೆತ್ತವರಿಗೆ,.ಆಟಗಳಲ್ಲಿ ಮಗ್ನರಾದರೆ ಮಕ್ಕಳಿಗೆ ಬೇರೆ ಯಾವುದೂ ಬೇಡ. ಹೊಟ್ಟೆ ಹಸಿಯುತ್ತದೋ ಇಲ್ಲವೋ ಎಂಬುದನ್ನು ಅಪ್ಪ ಅಮ್ಮಂದಿರೇ ನೋಡಿಕೊಳ್ಳಬೇಕು. ಇಷ್ಟವಾದುದನ್ನು ಅಂದರೆ ಸೀರಿಯಲ್ಸ್ ಕೆಲವರು ತಿನ್ನುತಾರೆ. ಜಂಕ್ ಫುಡ್ ಮಾತ್ರ ಅವರೇ ಕೇಳಿ ತಿನ್ನುತ್ತಾರೆ. ಅಂತೂ ಶಾಲೆಗೆ ಮಕ್ಕಳನ್ನು ಕಳಿಸುವುದೆಂದರೆ ಬೆಳಿಗ್ಗೆ ತಾವು ಹೊರಡುದರೊಂದಿಗೆ ಅವರನ್ನೂ ತಿಂಡಿ ತಿನ್ನಿಸಿ. ಉಡುಗೆ ತೊಡಿಸಿ ಕರಕೊಂಡು ಹೋಗುವುದು. ದೊಡ್ಡ ಮಕ್ಕಳಾದರೆ ಬಸ್ಸಿನವರೆಗೆ ಕರಕೊಂಡು ಹೋಗಿ ಬಿಡುವುದು ಅಥವಾ ಶಾಲೆಗೇ ಕೊಂಡು ಹೋಗಿ ಬಿಡುವುದು ಹೀಗೆಲ್ಲ ಬೆಳಗ್ಗೆ ಏಳುವುದರೊಂದಿಗೆ ಬಿಸಿ ಶುರುವಾಗುತ್ತದೆ.
ಹೀಗೆ ಮಕ್ಕಳನ್ನು ಹೊರಡಿಸಿ ಕೆಲಸಕ್ಕೆಂದು ಹೊರಟರೆ ಸ್ವಂತ ವಾಹನಗಳಾದರೂ ಹೈವೇಗಳಲ್ಲಿ ವಾಹನಗಳ ಜಾಥಾ ಇರುತ್ತದೆ. ಎಲ್ಲಾ ಕೆಲಸದವರೂ ಹೊರಡುವ ಸಮಯ ಒಂದೇ ಆಗಿರುವುದರಿಂದ ದಾರಿಯುದ್ದಕ್ಕೂ ವಾಹನಗಳು! ಕಾಲು ಗಂಟೆಯಲ್ಲಿ ತಲಪಬಹುದಾದ ದೂರ ತಲುಪಲು ಕನಿಷ್ಠ ಮುಕ್ಕಾಲು ಗಂಟೆ ಬೇಕು!ಅಂತೂ ಆಫೀಸ್ ಬೇಗ ತಲುಪದಿದ್ದರೆ ತಮ್ಮ ವಾಹನಗಳನ್ನು ಪಾರ್ಕ್ ಮಾಡಲುಬಹಳ ದೂರ ನಿಲ್ಲಿಸಬೇಕಾಗಬಹುದು.ಹಾಗೆ ದೂರವಿಟ್ಟರೆ ಹಿಂದಿರುಗುವಾಗಲೂ ಆ ದೂರವನ್ನು ನಡೆದೇ ಬರಬೇಕು. ಎಂಟು ಗಂಟೆಯಷ್ಟು ಕೆಲಸವಾದರೂ ಕೊಟ್ಟ ಕೆಲಸ ಪ್ಪ್ರೊಜೆಕ್ಟುಗಳನ್ನು ಸಮಯಕ್ಕೆ ಒಪ್ಪಿಸಬೇಕು. ಹೆಚ್ಚು ಕಡಿಮೆಯಾಗಕೂಡದು.ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದೆಂದರೆ ಈ ಜನರಿಗೆ ಬಹಳ ಕಷ್ಟವೆನಿಸುವುದಾರೂ ಇವುಗಳನ್ನು ಮರೆಯಲೋ ಎಂಬಂತೆ ಹಾಗೂ ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿಗಳ ಅನುಭವಕ್ಕಾಗಿಯೂ, ಪರಸ್ಪರರ ಭೇಟಿಗಾಗಿಯೂ ಈ ಕೂಟಗಳನ್ನು ಏರ್ಪಡಿಸುತ್ತಾರೆ ಎಂದು ಹೇಳಬಹುದು.ಭಾರತೀಯ ಹಬ್ಬಗಳನ್ನೂ ಹೀಗೆ ಆಚರಿಸುತ್ತಾರೆ.
                     ಹುಟ್ಟು ಹಬ್ಬ , ಇತರ ಹಬ್ಬಗಳೊಂದಿಗೆ ಏನಾದರೂ ಕಾರಣ ಇಟ್ಟುಕೊಂಡು ನಡೆಸುವ ಇಂತಹ ಕೂಟಗಳು ಒಂದು ಕಡೆ ಸೇರಿ ಪರಸ್ಪರ ವಿಚಾರವಿನಿಮಯ ಮಾಡಿಕೊಳ್ಳುವ ಚಾವಡಿಯೂ ಆಗಬಹುದು. ಹೆಚ್ಚಾಗಿ ಯುವಕ ಯುವತಿಯರು ಒಟ್ಟುಗೂಡಿ ಹೀಗೆ ವಾರದ ಕೊನೆಗಳಲ್ಲಿ ಕೂಟಗಳನ್ನೇರ್ಪಡಿಸುವಾಗ ಮಕ್ಕಳಿಗೂ ಒಬ್ಬರಿಗೊಬ್ಬರು ಒಟ್ಟು ಸೇರಿ ಆಟವಾಡಿ ಸಂತೋಷಪಡಲು ಇಂತಹ ಕೂಟಗಳು ಅನುಕೂಲವಾಗುತ್ತದೆ. ವಾರದ ಕೆಲಸ ಮಾಡಿ ಬೇಸರ ಕಳೆಯಲು ಈ ಬಿಡು ದಿನಗಳು ಸಹಾಯಕ. ಊರು ದೇಶಗಳನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಬಂದವರಿಗೆ ಸ್ವಲ್ಪ ಬೇಸರ ಕಳೆಯಲು ಈ ಕೂಟಗಳು ಅನುಕೂಲವಾಗುತ್ತದೆ.
ಹುಟ್ಟು ಹಬ್ಬಗಳು ಹೆಚ್ಚಾಗಿ ಚಕ್ ಇ ಚೀಸ್ ನಲ್ಲಿ ,ಕೆಲವು ಇಂತಹ ಸಮಾರಂಭ ಏರ್ಪಡಿಸಲೆಂದೇ ಇರುವ ಹಾಲ್ ಗಳಲ್ಲಿ, ಅಥವಾ ಕೆಲವ ತಮ್ಮ ಮನೆಗಳಲ್ಲಿಯೇ ಏರ್ಪಡಿಸುತ್ತಾರೆ. ಇದಕ್ಕಾಗಿ ಸಾವಿರಾರು ಡಾಲರ್ ಖರ್ಚು ಮಾಡುವವರು ಇದ್ದಾರೆ. ಸುಲಭದಲ್ಲಿ ಇನ್ನು ಕೆಲವು ಪಾರ್ಕಗಳಲ್ಲಿ ಏರ್ಪಡಿಸಿದರೆ ಮಕ್ಕಳಿಗೇ ಆಡಲು ಅನುಕೂಲ!ಬಂದ ಮಕ್ಕಳಿಗೆ ಒಂದಿಷ್ಟು ಜ್ಯೂಸ್ ಮತ್ತೆ ಸ್ನೇಕ್ಸ್ ಗಳನ್ನು ಕೊಟ್ಟರೆ ಅವರ ಮನಸ್ಸು ಆಟಕ್ಕೆರ್ ಹೋಯಿತೆಂದರೆ ಮತ್ತೆ ಕೂಟಗಳಲ್ಲಿಯ ಊಟ ಅವರಿಗೆ ಬೇಕಾಗುವುದಿಲ್ಲ. ಮತ್ತೆ ಪಿಸ್ಸ ಇದ್ದರೆ ಅದನ್ನು ತಿಂದು ಜ್ಯೂಸ್ ಕುಡಿಯುತ್ತಾರೆ. ದೊಡ್ಡವರು ಸ್ನೇಕ್ಸ್ ತಿಂದ ಮೇಲೆ ಕೇಕ್ ಕಟ್ ಮಾಡುವುದು.ಎಲ್ಲರೂಬಂದ ಮೇಲೆ ಊಟ ನಡೆಯುತ್ತದೆ. ಹೆಚ್ಚಾಗಿ ಸಂಜೆಯೇ ನಡೆಯುವ ಕಾರಣ ಎಲ್ಲ ಮನೆಗೆ ತಲಪುವಾಗ ರಾತ್ರೆ ಹನ್ನೊಂದು ಅಥವಾ ಕೆಲವೊಮ್ಮೆ ಹನ್ನೆರಡು ಗಂಟೆಯಾದರೂ ಮಲಗಿ ನಿದ್ದೆ ಹೋದವರಿಗೆ ಮರುದಿನ ಕೆಲಸವಿಲ್ಲವಾದುದರಿಂದ ಬೆಳಿಗ್ಗೆ ಏಳುವಾಗ ಕಡಿಮೆಯೆಂದರೂ ಏಳು ಗಂಟೆಯಾಗುತ್ತದೆ.ಮಕ್ಕಳಿಗೂ ಅಷ್ಟೆ ಆಡಿ ಸುಸ್ತಾಗಿರುವುದರಿಂದ ಎಂಟು ಗಂಟೆಯ ವರೆಗೂ ಏಳುವುದಿಲ್ಲ.
ಇನ್ನು ದೀಪಳಿ ದಸರಾ, ಚೌತಿ ಹೀಗೆ  ಹಬ್ಬಗಳನ್ನು ಆಚರಿಸುವುದರಿಂದ ಮಕ್ಕಳಿಗೂ ಸ್ವಲ್ಪ ನಮ್ಮ ಪುರಾತನ ಸಂಸ್ಕೃತಿಗಳ ನೆನಪಾಗುತ್ತದೆ. ಊರಿನಲ್ಲಿರುವಾಗ ಪಟಾಕಿ ಸಿಡಿಮದ್ದುಗಳನ್ನು ಅಂಗಡಿಯಿಂದ ತಂದರೆ ದೀಪಾವಲಿ ಆಚರಣೆ ಮಕ್ಕಳಿಗೆ ಖುಶಿಯಾಉತ್ತದೆ.ಹೀಗೆ ಒಬ್ಬೊಬ್ಬರ ಸ್ವಂತ ಖರ್ಚಲ್ಲದೆ "ಪೋಡ್ಲೋಕ್" ಎಂತ ಒಬ್ಬೊಬ್ಬರು ಪರಸ್ಪರ ಮೊದಲೇ ಮಾತಾಡಿಕೊಂಡಂತೆ(ಅವರವರ ಮನೆಯಲ್ಲಿ ತಯಾರಿಸಿಕೊಂಡ ಮೊಸರನ್ನ, ಪುಳಿಯೋಗರೆ, ಪಾಯಸ, ಸ್ವೀಟ್, ಸಾಂಬಾರು, ಮೇಲೋಗರ ಹೀಗೆ ಒಂದೊಂದು ಪದಾರ್ಥಗಳನ್ನು ತಾವು ತರುತ್ತೇವೆ ಎಂದು ಒಪ್ಪಿಕೊಂಡಂತೆ ಬರುವಾಗ ತರುತ್ತಾರೆ. ಒಟ್ಟಾರೆ ಹನಿ ಕೂಡಿ ಹಳ್ಳವೆಂಬಂತೆ ಭರ್ಜರಿ ಊಟವಾದ ಮೇಲೆ ಮಿಕ್ಕುಳಿದುದನ್ನೂ ಪರಸ್ಪರ ಹಂಚಿಕೊಂಡು ವಿನಿಮಯ ಮಾಡಿಕೊಳ್ಳುತ್ತಾರೆ. ಇಲ್ಲಿ ಹೆಂಗುಸರು ಒಳಗೆ ಅಸೇರಿಕೊಂಡು ಅವರವರು ತಯಾರಿಸಿ ತಂದ ಪದಾರ್ಥಗಳ ಬಗ್ಗೆ ಪರಸ್ಪರ ಏನು ಹೇಗೆ ಎಂದೆಲ್ಲ ವಿಚಾರ ವಿಮರ್ಷೆ ಮಾಡುತ್ತಿದ್ದರೆ ಹೊರಗೆ ಗಂಡುಸರು ಬೇರೆ ರಾಜಕೀಯ ಅಥವಾ ಊರ ಸುದ್ದಿಗಳನ್ನು, ಕೆಲಸದ ಬಗ್ಗೆ ಮಾತಾಡಿಕೊಂಡಿರುತ್ತಾರೆ ಹೀಗೆ ಕೂಡಿ ಬಾಳಿದರೆ ಸ್ವರ್ಗ ಸುಖವೆಂಬಂತೆ ಸರಹದ್ದಿನಲ್ಲಿರುವವರು ಒಟ್ಟುಗೂಡುವ  ಕೂಟಗಳೇ ಇಲ್ಲಿ ನಡೆಯುವ ಕೂಟಗಳು. ಒಟ್ಟಾಗಿ ಊಟ ಮಾಡುವ ಕೂಟಕ್ಕೆ ಹೀಗೊಂದು ವ್ಯವಸ್ಥೆ! ಜನ್ಮದಿನಗಲ್ಲಾದರೆ ಕರೆದವನೆ ಎಲ್ಲ ಏರ್ಪಾಡು ಮಾಡುತ್ತಾನೆ. ಪೂಜೆ ವಗೈರೆಗಳಲ್ಲಿಯೂ ಕರೆದವನೇ ಏರ್ಪಾಡು ಮಾಡುತ್ತಾನೆ. ಮನೆಯಲ್ಲೇ ತಯಾರು ಮಾಡಲಾಗದುದನ್ನು ಹೋಟೆಲುಗಳಿಂದ ತರಿಸುತ್ತಾರೆ. ಚಪಾತಿ ಕೂಡ ತಯಾರಿಸಿಟ್ಟದ್ದನ್ನು ತಂದು ಆಗಲೇ ಬೇಯಿಸಲು ಬಂದವರು ಸಹಕರಿಸುತ್ತಾರೆ. ಒಟ್ಟಿನಲ್ಲಿ ಭರ್ಜರಿ ಊಟ ನಡೆಯುತ್ತದೆ. ಸ್ವದೇಶದಿಂದ ಮಕ್ಕಳನ್ನು ನೋಡ ಬರುವ ಹಿರಿಯರೂ ಪಾಲ್ಗೊಳ್ಳುತ್ತಾರೆ. ಹೀಗೆ ನಮ್ಮಂತಹ ಹಿರಿಯರನ್ನು ಕರೆಯಲೂ ಮರೆಯುವುದಿಲ್ಲ. ಕೆಲವರು ವಿಶೇಶ ಅಡಿಗೆಗಳನ್ನು ಹೋಟೆಲಿನಿಂದ ತರಿಸಿಕೊಳ್ಳುತ್ತಾರೆ. ಮಿಕ್ಕುಳಿದುದನ್ನೂ ಬಂದವರಿಗೆ ಹಂಚುತ್ತಾರೆ. ಒಟ್ಟಾರೆ ಈ ಕೂಟಗಳಲ್ಲಿ ವಾರದ ಏಕತಾನತೆಯನ್ನು ಹೀಗೆ ಮರೆಯುತ್ತಾರೆ. ಸೋಮವಾರ ಬಂದೊಡನೆ ಗಾಣದ ಎತ್ತಿನಂತೆ ದುಡಿಯುವವರಿಗೆ ಒಂದು ಸ್ವಲ್ಪ ಆರಾಮವಾಗಿರುವ ಕಾಲ. ಊಟ ಮುಗಿಸಿ ಹೊರಡುವಾಗ ಗಂಟೆ ರಾತ್ರೆ ಹನ್ನೆರಡಾದರು ಆಗ್ಬಹುದು. ಶನಿವಾರವೇ ಇದಕ್ಕೆ ಸೂಕ್ತವೆಂದು ಮರುದಿನ ಬೆಳಿಗ್ಗೆ ಹಾಯಾಗಿ ಎಂಟು ಗಂಟೆಯ ವರೆಗೂ ಎಲ್ಲವನ್ನೂ ಮರೆತು ನಿದ್ರಾಲೋಕದಲ್ಲಿ ವಿಹರಿಸುವುದೂ ಇವರ ಹವ್ಯಾಸ ವಲ್ಲ ಕೆಲಸ ಕಾರ್ಯಗಳ ನಂತರ ಪಡೆಯುವ ವಿರಾಮ್!
ಈ ಕೂಟಗಳಲ್ಲಿಯೂ ಹಲವು ವಿಧ . ಹಬ್ಬದ ಕೂಟಗಳನ್ನೂ ಪ್ರಾದೇಶಿಕ ಲೆಕ್ಕದಲ್ಲಿ  ಯೂ ಇಡೀ ಉತ್ತರ ಅಮೇರಿಕ ಖಂಡಕ್ಕೂ ವಿಸ್ತಾರಗೊಳ್ಳುತ್ತದೆ  ಬೇರೆ ಬೇರೆಭಾಷೆಗಳನ್ನಾಡುವ ಜನರು ಆಯಾ ಭಾಷೆಯ ಹೆಸರಿನಲ್ಲಿ ಕೂಟ ಏರ್ಪಡಿಸುವುದೂ ಇದೆ. ವಿಭಾಗವಾಗಿ,  ಕೆಲವು ಮತ ವಿಭಾಗದವರು ಒಂದಾಗಿ ನಡೆಸುವುದೂ ಇದೆ. ಉದಾ: ವರ ಮಹಾಲಕ್ಷ್ಮಿ ವ್ರತ, ತುಳಸಿ ಹಬ್ಬ ಹೀಗೆಲ್ಲ. ಇನ್ನು ಅರಸಿನ ಕುಂಕುಮ ಎಂದು ಹೆಂಗುಸರನ್ನು ಕರೆಯುವುದು ಅವರಿಗೆ ಬಾಗಿನ ಕೊಡುವುದು ಕೂಡಾ  ಇರುತ್ತದೆ. ಮಕ್ಕಳೂ ಜೊತೆಗೆ  ಅಮ್ಮಂದಿರ ಜೊತೆಗೆ ಬಂದರಾಗುತ್ತದೆ. ಆದರೆ ಗಂಡುಸರಿಗೆ ಕರೆಯಿರುವುದಿಲ್ಲ. ಕೂಡಾ ಆಚರಿಸುತ್ತಾರೆ. ದಕ್ಷಿಣದ ಕಡೆಯಲ್ಲಿ ಹಿಂದುಗಳೆಲ್ಲ ಒಂದು ದೇವಸ್ಥಾನಗಳಲ್ಲಿ ಕೂಡುವುದಾದರೆ ಬೇರೆ ಬೇರೆ ಸಬ್ ಡಿವಿಜನ್ ಗಳಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳ ,ಕನ್ನಡ ಭಾಷೆಗಳಣ್ಣಾಡುವವರು ಒಟ್ಟು ಸೇರುತ್ತಾರೆ .ಭಾರತೇಯರು ಹಿಂದಿ ರಾಷ್ಟ್ರ ಭಾಷೆಯಾದುದರಿಂದ ಭಾರತೇಯಸ್ರೆಲ್ಲ ಒಟ್ಟು ಸೇರುವುದೂ. ಇದೆ.ಭಾಷಾಭಿಮಾನಿಗಳು  ಜಾತ್ಯಭಿಮಾನಿಗಳು ಸೇರುವುದೂ ಇದೆ. ಎಲ್ಲ ದೈನಂದಿನ ಬದುಕಿನ ಜಂಜಾಟದಿಂದ ಮುಕ್ತಿ ಪಡೆಯುವುದಕ್ಕೆ ತಿದುಕೊಂಡ ಕೂಟಗಳು. ಸರಹದ್ದಿನ ಎಲ್ಲ ಕೂಟಗಳಲ್ಲಿ ಭಾಗವಹಿಸುವವರೂ ಇದ್ದಾರೆ. ಇನ್ನು ವಿವಿಧ ಆಟಗಳ ಪ್ರೇಮಿಗಳು,ಬೈಕ್ ರೈಡ್ ಮಾಡುವಸ್ನೇಹಿತರ ಕೂಟಗಳೂ ನಡೆಯುವುದಿದೆ.
ವಾಶಿಂಗ್ ಅನ್ ನಲ್ಲಿ ಒಂದು ಹವ್ಯಕ ಕೂಟಕ್ಕೆ ಹೋದತ್ರ್ ಅಮೇರಿಕದ ವಿವಿಧೆಡೆಗಳಿಂದ ಬಂದ ಬಂಧುಗಳು ಒಟ್ಟು ಸೇರಿ ಒಗ್ಗಟ್ಟನ್ನು ಅಲ್ಲ ಇಲ್ಲಿ ಮ್ನಮ್ಮತನವನ್ನು ತೋರಿಸುವುದಕ್ಕೋ ಎಂಬಂತೆ ಒಟ್ಟು ಸೇರುತ್ತಾರೆ.ಬಂಧುಗಳನ್ನೆಲ್ಲ ಒಂದು ಸೇರಿಸುವ ಒಟ್ಟಾಗಿ ಆಡಿ ನಲಿಯುವ, ಆ ನಲಿವಿನಲ್ಲಿ ಆನಂದಗೊಳ್ಳುವ ಇಲ್ಲಿಯ ನಿವಾಸಿಗಳನ್ನು ನೋಡುವಾಗ ಬದುಕನ್ನು ಹೀಗೆ ಒಟ್ಟಾಗಿ ಸಾಗಿಸುವ, ಒಟ್ಟಾಗಿ ಬೆರೆಯುವ  ಕೂಟಗಳನ್ನು ನೋಡುವಾಗ ಇಲ್ಲಿ ವಾಸಿಸುವವರ ಮೇಲೆ ಹೆಮ್ಮೆಯೆನಿಸುತ್ತದೆ.ಒಟ್ಟಿನಲ್ಲಿ ಐಕ್ಯತೆಯನ್ನು ಒಗ್ಗಟ್ಟನ್ನು ತೋರಿಸುವ ಇವರ ಮನೋಭಾವ ನೋಶ್ಡುವುದೂ ನಮಗೂ ಹೆಮ್ಮೆಯಲ್ಲವೇ!ಅಂತೂ ವಿದೇಶದಲ್ಲಿ ಊರಿನಿಂದ ದೂರದಲ್ಲಿದ್ದರೂ ಸಣ್ಣ ಪ್ರಾಯದ ಹೆಂಳೆಯರು ಈ ಸಮಾರಂಭಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ.

No comments:

Post a Comment