Tuesday, November 24, 2015

havyaka sammelana

                ಅಮೇರಿಕಾಲ್ಲಿ ಹವ್ಯಕ ಸಮ್ಮೇಳನ

ಅಮೇರಿಕಾಲ್ಲಿ ಎನ್ನ ಮಕ್ಕೊ ಇಪ್ಪ ಕಾರಣ  ಬರೆಕ್ಕಾವುತ್ತು. ಈ ಸರ್ತಿ ಜೂನಿಲ್ಲಿ ಬಂದಿಪ್ಪಗ ಇಲ್ಲಿ ಹವ್ಯಕ ಸಮ್ಮೇಳನ ಹೇಳಿ ಗೊಂತಾತು. ಅಮೇರಿಕಾದ ವಾಶಿಂಗ್ ತನ್ ಡಿ ಸಿ ಲ್ಲಿಪ್ಪ ಚಿನ್ಮಯಸ್ ಮಿಶನ್ನಿನೋರ ಕಟ್ಟಡಲ್ಲಿ ಕಾರ್ಯಕ್ರಮ ಹೇಳಿಯೂ ಗೊಂತಾತು. ಎನ್ನ ಮಗ ಸೊಸೆ ಪುಳ್ಯಕ್ಕೊ ಕಾರ್ಯಕ್ರಮಲ್ಲಿ ಭಾಗವಹಿಸುಲೆ ಇತ್ತಿದ್ದವು.ಅಮೇರಿಕಾಲ್ಲಿಪ್ಪ ಹವ್ಯಕರು ಸೇರಿಗೊಂಡು ಎಲ್ಲ ಒಟ್ಟು ಸೇರುವ ಕಾರ್ಯಕ್ರಮ ಇದ್ದು. ದೂರ ದೂರಂದ ಮುನ್ನಾಣ ದಿನವೇ ಅಲ್ಲಿ ಬಂದು ಸೇರುತ್ತವು. ಅಮೇರಿಕಾ ಮಾತ್ರ ಅಲ್ಲ ಕೆನಡಂದಲೂ ಬತ್ತವು. ಒಟ್ಟಾರೆ ಉತ್ತರ ಅಮೇರಿಕಾ ಖಂಡಲ್ಲಿಪ್ಪ ಹವ್ಯಕರು ಆ ದಿನ ಇಲ್ಲಿ ಸೇರುತ್ತವು.ಹಾಂಗೆ ಈ ಸರ್ತಿ ಇಲ್ಲಿಗೆ ಬಂದಿಪ್ಪಗ ಸಮ್ಮೇಳನಕ್ಕೆ ಬಂದ ಹವ್ಯಕರ ಒಟ್ಟಾಗಿ ನೋಡುವ ಸಂದರ್ಭ ಒದಗಿತ್ತು. ಇಲ್ಲಿ ಕೆಲಸ ಮಾಡುವೋರಲ್ಲದ್ದೆ ಮಕ್ಕೊ, ಮತ್ತೆ ಊರಿಂದ ಬಂದ ಹವ್ಯಕರೂ ಸೇರಿ ಸಭಾಭನದೊಳ ಒಟ್ಟಾರೆ ಹವ್ಯಕರೇ ಸೇರಿದ ಅನುಪತ್ಯ! ಸಣ್ಣ ಮಕ್ಕೊ ಇಲ್ಲಿಯಾಣ ಇಒಂಗ್ಲಿಷೇ ಮಾತಾಡಿದರೆ, ಒಳುದೋರೆಲ್ಲ ಹೆಚ್ಚಾಗಿ ನಮ್ಮ ಭಾಷೆಯನ್ನೇ ಆಡುವ ಕಾರಣ ಒಟ್ಟಾರೆ ಊರಿನ ವಾತಾವರಣ!ಮಕ್ಕೊ ಹೆಮ್ಮಕ್ಕೊ, ಪ್ರಾಯದ ಮುದುಕ್ಕರೂ ಸೇರಿತ್ತಿದ್ದವು. ಇಲ್ಲಿಪ್ಪೋರೆಲ್ಲ ಅಂಕ್ಲ್ ಅಂಕ್ಲ್ ಹೇಳಿಗೊಂಡು ತುಂಬ ಮಾತಾದಿದವು. ಅವಕ್ಕೆ ಊರಿಂಗೆ ಹೋದರೆ ಮಾಂತ್ರ ನಮ್ಮೋರ ಕಾಂಬಲೆಡಿಗಷ್ಟೆ! ಹಾಂಗೆ ನಮ್ಮತ್ರೆ ಮಾತಾಡುಲೆ ಕೊಶಿ. ಮಕ್ಕೊಗೆ ಗುರ್ತ ಇದ್ದರೂ ಇಲ್ಲದ್ದರೂ ಎಲ್ಲಾ ನಮ್ಮೋರೇ ಹೇಳುವ ಭಾವನೆಯೊಟ್ಟಿಂಗೆ ಸೆಕೆಗಾಲದ ರಜೆಲ್ಲಿ ಮನೆಲ್ಲೇ ಕೂದು ಬೇಜಾರಪ್ಪಗ ಸಮಪ್ರಾಯದೋಟ್ಟಿಂಗೆ ಓಡಿ ಆಡುವ ಸಂಭ್ರಮ! ಉತ್ತರ ಕನ್ನಡದ ಹವ್ಯಕರೇ ಇಲ್ಲಿ ಜಾಸ್ತಿ ಆದ ಕಾರಣ ಕನ್ನಡಲ್ಲೇ ಮಾತಾಡೆಕ್ಕಾವುತ್ತಷ್ಟೇ! ಕೆನಡಾದ ಟೊರೋಂಟೋಲ್ಲಿಪ್ಪ ಎರ್ಡನೆ ಮಗನೋ  ಅವಂದ ತಮ್ಮ ಇಪ್ಪಲ್ಲಿಂಗೆ ಬಂದಿತ್ತಿದ್ದ. ಎಲ್ಲ ಒಟ್ಟಿಂಗೆ ಸಮ್ಮೇಳನಕ್ಕೆ ಹೆರಯೆಯೊ.
         ಅಮೇರಿಕಾಲ್ಲಿ ಎಲ್ಲಿಗೆ ಹೋವುತ್ತರೂ ಕಾರಿಲ್ಲಿಯೇ ಹೋಪದು.ಇಲ್ಲಿಯಾಣ ಮಾರ್ಗಂಗಳೂ ಒಳ್ಳೆದಿರುತ್ತು. ಜಿ ಪಿ ಯಸ್ ಹಾಕಿದರೆ ಎಲ್ಲಿಂದ ಎಲ್ಲಿ ವರೆಗೂ ಹ್ಫಲಕ್ಕು. ಅಂತೂ ಅಣ್ಣ ತಮ್ಮ ಇಬ್ರುದೆ ಒಟ್ಟಿಂಗೆ ಹೆರಟು ಹನ್ನೊಂದು ಗಂಟಗೆಲ್ಲ ಹೋಗಿ ಎತ್ತಿದೆಯೊ. ಒಂದು ಪಾರ್ಕಿಲ್ಲಿ ಬಂದೋರೆಲ್ಲ ಸೇರಿತ್ತಿದ್ದವು.ಆಸರಿಂಗೆ ನೀರು, ಬಚ್ಚಂಗಾಯಿ ಜ್ಯೂಸ್ ಎಲ್ಲ ಇತ್ತು. ಹೆಚ್ಚಿನೋವು ಸೇರಿದ ಮೇಲೆ ಒಬ್ಬಕ್ಕೊಬ್ಬನ ಪರಿಚಯ ಮಾಡಿಗೋಂಡತ್ತು.ಮತ್ತೆ ತಿಂಡಿ ಹಂಚೋಣ ಅವಕ್ಕವಕ್ಕೆ ಬೇಕಾದ್ದರ ತೆಕ್ಕೊಂಡು ಉಪಾಹಾರ ಮುಗಿಶಿ ಮತ್ತೆ ಮೊಸರನ್ನ ಹೀಂಗೆಲ್ಲ ಹೊಟ್ಟೆ ತಂಪು ಆದ ಮೇಲೆ ಎಲ್ಲೋರು ನಾಲ್ಕು ಗಾಂತಗೆ ಸಭಾಭವನಲ್ಲಿ ಸೇರುವದು ಪ್ರತಿನಿಧಿ ಬೇಜ್ ತೆಕ್ಕೊಂಡ ಮೇಲೆ ಉಪಾಹಾರ ಮುಗಿಶಿ ಅಪ್ಪಗ ಗಣಪತಿ ವಿಗ್ರಹವ ಪಲ್ಲಕಿಲ್ಲಿ ಕೂರುಸಿಗೊಂಡು ಮೆರವಣಿಗೆ ಒಳಂಗೆ ಪ್ರವೇಶ ಮತ್ತೆ ಪೂಜೆ ಪ್ರಾರ್ಥನೆ ಮುಗುದಮೇಲೆ ಕಾರ್ಯಕ್ರಮ ಶುರು.ಸ್ವಾಗತ ಮುಗುದ ಮೇಲೆ  ವಾರ್ಷಿಕ ವರದಿ ವಾಚನ! ಇಷ್ಟರ ವರೆಗೆ ಇನ್ನೂರು ಮುನ್ನೂರು ಆವುತ್ತಿದ್ದಲ್ಲಿ ಈ ಸರ್ತಿ ಐನೂರರಿಂದ ಮೇಲೆ ಜನಂಗೊ ಸೇರಿದ್ದು ಚರಿತ್ರೆಲ್ಲೇ ಹೊಸತ್ತಡೊ.ಇಲ್ಲಿಯಾಣ ಮಹಿಳೆ ಕನ್ನಡದ ಬಗ್ಗೆ ಸಂಶೋಧನೆ ನಡೆಸುಲೆ ಶಿಸಿಗೆ ಬಾಂದು ಇದ್ದತ್ತಡೊ! ಆಮಹಿಳೆ ಸೊವೆನೀರ್ ಉದ್ಘಾಟನೆ ಮಾಡಿದ ಮೇಲೆ,ಮನೋರಂಜನೆ ಶುರು.ಮಕ್ಕಳ ಡೇನ್ಸ್, ಕಿರುನಾಟಕ ಮಕ್ಕಳದ್ದೇ ಬಹಳ ಲಾಯಿಕ ಆಗಿತ್ತು. ಕೊಳಲು ವಾದನ,ಟೋರ್ಚ್ ಲೈಟಿನ ಬೆಳಕಿನ ಮೂಲಕ ನೆರಳು ನಾಟಕದ ಹಾಂಗೆ ಚಿತ್ರ ಬರದೂ ಒಬ್ಬ ತೋರುಸಿದ! ಇಬ್ರೂ ಬೆಂಗಳೂರಿನೊವೆ.ಮತ್ತೆ ಟೊರೊಂಟೋಂದ ಬಂದ ಹವ್ಯಕ ಬಂಡುಗೊ ಯಕ್ಷಗಾನ ರಂಗ ಕಟ್ಟಿದೋವು ಶಿವಕುಮಾರ ಚರಿತ್ರೆ ಹೇಳುವ ಯಕ್ಷಗಾನ! ಎನ್ನ ಮಗ ಪುಳ್ಳಿಯೂ ಮುಖ್ಯ ಪಾರ್ಟ್ ಮಾಡಿತ್ತಿದ್ದವು.ಇಷ್ಟಾದ ಮೇಲೆ ಅಂದ್ರಾಣ ಕಾರ್ಯಕ್ರಮ ಮುಗುತ್ತು.ಆನು ಒಬ್ಬ ಮಾತ್ರ ರೂಮಿಂಗೆ ಬಂದು ವಿಶ್ರಾಂತಿ ತೆಕ್ಕೊಂಡೆ. ಒಳುದೋವೆಲ್ಲ ಮತ್ತೆ ಬಂದವು ಅಂದ್ರಾಣ ಕಾರ್ಯಕ್ರಮ ಹೀಂಗೆ ಮುಗುತ್ತು. ಎಲ್ಲೆಲ್ಲಿಂದಲೋ ಬ<ದೋರ ಪರಿಚಯ ಆದ್ದು ಕೊಶಿ ಆತು .ಒಳ್ಳೆ ಒರಕ್ಕು.
  ಮರದಿನ ಉದಿಯಪ್ಪಗ ಒಳುದೋವು ಏಳುವಗ ಎಂಗಳ ಮೀಯಾಣ ಕೂಡ ಮುಗುದ್ದು. ಎಂಗೊ ಕೆಳ ಹೋಗಿ ಬ್ರಾಕ್ ಫಾಸ್ಟಿಂಗೆ ಹೋದೆಯೊ.ಸೀರಿಯಲ್,ಇಡ್ಲಿ ಚಟ್ಣಿ, ಬ್ರೆಡ್ ಹಾಲು ಚಾ ಎಲ್ಲ ಸಿಕ್ಕಿತು ಒಟ್ಟಿಂಗೆ ಹಣ್ಣುಗೊ ಬಾಳೆ ಹಣ್ಣು ಏಪ್ಲ್,ಬಚ್ಚಂಗಾಯಿ ಎಲ್ಲ ಇತ್ತು. ಮತ್ತೆ ಸಮ್ಮೇಳನಕ್ಕೆತ್ತಿಯಪ್ಪಗ ಇಡ್ಲಿ ಚಪಾತಿ ಕ್ಶೀರ್ ಇದ್ದಲ್ಲಿ ಕ್ಶೀರ ಮಾಂತ್ರ ಹೊಟ್ಟಗೆ ಸೇರಿತ್ತು ಅಲ್ಲಿ ಶಿವಪೂಜೆ ಎಲ್ಲೋರು ಒಟ್ಟಿಂಗೆ ರುದ್ರ ಹೇಳಿ ಅಭಿಷೇಕ ಮುಗುದು ಪೂಜೆ ಆಗಿ  ಮತ್ತೆ ಸಂಗೀತ ಕೊಳಲು ವಾದನ ಎಲ್ಲ ಮುಗುದು ಮಧ್ಯಾಹ್ನದ ಊಟ. ಮತ್ತೆ ರಜ ವಿಶ್ರಾಂತಿ ಕಳುದು ಗೄಪ್ ಡೇನ್ಸ್, ಹೀಂಗೆಲ್ಲ ಕಳುದು, ಮತ್ತೆ ಜೂನಿಯರ್ ಶಂಕರ್ ಮೇಜಿಕ್ ಶೋ. ಅದಾದ ಮೇಲೆ ಸಮೂಹ ಗಾನ, ಕುಣಿತ ಎಲ್ಲ ಕಳಿವಗ ರಾತ್ರೆ ೧೦ ಗಂಟೆ ಕಳುತ್ತು.ಎಡೆಲ್ಲಿ ಪುರುಸೊತ್ತು ಅಪ್ಪಗ ಊಟ ಮುಗಿಶಿಗೊಂಡತ್ತು..ಮತ್ತೆ ಎಲ್ಲೋರು ಸೇರಿಗೊಂಡು ಅಮೇರಿಕಾದ ಸ್ವಾತಂತ್ರ್ಯ ದಿನದ ಲೆಕ್ಕಲ್ಲೂ ಆತು ಕೊಶಿಲ್ಲಿ ಕೊಣುದ್ದೂ ಆತು, ಪಟಾಕಿ ಹೊಟ್ಟುಸಿಯೂ ಆತು ರೂಮಿಂಗೆ ಬಂದು ಮನುಗುವಗ ೧೧ ಗಂಟೆ ಉದ್ದಿಯಪ್ಪಗ ಮಿಂದು ಬ್ರೇಕ್ ಫಾಸ್ಟಿಂಗೆ ಬಂದಿಪ್ಪಗ ಜೂನಿಯ ಶಂಕರನೂ ಇತ್ತಿದ್ದ. ಅವನ ಭಾವಂದ್ರು ಎನ್ನ ಶಿಷ್ಯಕ್ಕೊ ಹೇಳಿ ಪರಿಚಯ ಅಪ್ಪಗ ಒಟ್ಟಿಂಗೆ ಫೊಟೊ ತೆಗದೂ ಆತು. ಅಲ್ಲಿಂದ ಹೆರಟು ಊರಿಂ ಹೇಳಿದರೆ ಮಗನ ಮನಗೆತ್ತುವಗ  ದಾರಿಲ್ಲಿ ಬಾಲ್ಟಿಮೋರಿನ ಬಂದರಿನ ಹತ್ತರೆ ಮಧ್ಯಾಹ್ನದ ಊಟವೂ ಊಟ ಮಾಡಿತ್ತು. ಹೊತ್ತೋಪಗ ೬ ಗಂತಗೆ ಮಗನ ಮನಗೆತ್ತಿತ್ತು/.
.

No comments:

Post a Comment