Friday, May 3, 2013

vyavaharada korate

                      ವ್ಯವಹಾರ ಜ್ಞಾನದ ಕೊರತೆಯೋ ಅಲ್ಲ ಅವ್ಯವಸ್ತೆಯೋ?                                                                                                                                                                                              ಅಂದು ಮನೆಗೆ ಬಂದೆತ್ತುವಗ ಪೋಸ್ಟ್ ಆಫಿಸಿನ ಒಂದು ಚೀಟಿ ಕಂಡತ್ತು. ಎನ್ನ ಹೆಸರಿಲ್ಲಿ ಒಂದು ರಿಜಿಸ್ತ್ರಿ ಇದ್ದು, ಓಫೀಸಿಂಗೆ ಹೋಗಿ ಅದರ ತೆಕ್ಕೊಳ್ಳೆಕ್ಕು ಹೇಳಿ ಇತ್ತು. ಈಗ ಅವು ಮನೆಗೆ ತಂದು ಕೊಡುಲೆ ಇಲ್ಲೆನ್ನೆ!.ಸರಿ ಮರದಿನ ಉದಿಯಪ್ಪಗ ಪೋಸ್ಟ್ ಓಫಿಸಿಂಗೆ ಎನ್ನ ಸವಾರಿ ಹೋತು.ಪೋಸ್ಟ್ ಮಾಸ್ಟ್ರನತ್ರೆ ಕೇಳಿದೆ. ಅವ ಒಂದು ದೊಡ್ಡ ಕವರು ತೋರುಸಿ, ಎಕ್ನೋಲೆಜ್ ಮೆಂಟಿಂಗೆ ದಸ್ಕತು ತೆಕ್ಕೊಂಡು ಕವರಿನ ಕೊಟ್ಟ. ಕವರು ತೆರದು ನೋಡುವಗ ಸ್ಟೇಟ್ ಬೇಂಕಿಂದ ಕಳಿಸಿಕೊಟ್ಟ ಚೆಕ್ ಪುಸ್ತಕ! ಮದಲೊಂದರಿ ಬೇಂಕಿಂಗೆ ಹೋಗಿಪ್ಪಗ ಚೆಕ್ ಪುಸ್ತಕ ಬೇಕೋ ಕೇಳಿತ್ತಿದ್ದವು.ಬೇರೆ ಸಿಂಡಿಕೇಟ್ ಬೇಂಕಿಲ್ಲಿ ಎನ್ನ ಎಕೌಂಟ್ ಇದ್ದು. ಅಲ್ಲಿ ಚೆಕ್ ಪುಸ್ತಕಕ್ಕೆ ಬೇರೆ ಪೈಸೆ ತೆಕ್ಕೊಂಬಲಿಲ್ಲೆನ್ನೆ!.ಸರಿ ಒಂದು ಪುಸ್ತಕ ಕೊಡಿ ಹೇಳಿದೆ. ಪುಸ್ತಕ ಬೇಕು ಹೇಳಿದರೆ ಎಂಗೊ ಚೆನ್ನೈಂದ ತರುಸೆಕ್ಕಸ್ಟೆ.ಎಂಗೊ ಅಲ್ಲಿಗೆ ಬರಕ್ಕೊಂಡರೆ ಅವು ನಿಂಗಳ ಮನಗೇ ಕಳಿಸಿ ಕೊಡುತ್ತವು,ಹೇಳಿದವು.ಅಂದು ಎನಗೆ ಸಿಕ್ಕಿದ ಪುಸ್ತಕ ಚೆನ್ನೈಂದಲೇ ಬಂದದು! ಇಷ್ಟು ಜಾಗ್ರತೆ ಇದ್ದೋ ಹೇಳಿ ಆಶ್ಚರ್ಯ ಆತು. ಆಗಲಿ ಮನೆಗೇ ಕಳುಸಿದವನ್ನೇ.ಒಳ್ಳೆದಾತು ಹೇಳಿ ಗ್ರೇಶಿದೆ.
ಆನು ಹೆಚ್ಚಾಗಿ ಏ ಟಿ ಯಂ ದಲೇ ಹಣ ತೆಕ್ಕೊಂಬದು. ಸ್ಟೇಟ್ ಬೇಂಕಿಂಗೆ ಹೋಪದು. ಅಲ್ಲಿ ಕ್ಯೂ ನಿಂದು ಕಾದು ಕೂಪದಕ್ಕೆ ಅವೇ ಮಾಡಿದ ಅನುಕೂಲತೆ ಅಲ್ಲದೋ ಈ ಸವಲತ್ತು! ಒಂದು ವರ್ಷ ಕಳುದ್ದು. ಆನು ಎಡೆಲ್ಲಿ ಬೇಂಕಿಂಗೆ ಹೋಯಿದೇ ಇಲ್ಲೆ.ಒಂದರಿ ಪಾಸ್ ಪುಸ್ತಕ ತೆಕ್ಕೊಂಡು ಪುಸ್ತಕಲ್ಲಿ ಲೆಕ್ಕ ಎಂಟರ್ ಮಾಡಿಸಿಗೊಳ್ಳೆಕ್ಕು ಹೇಳಿ ಬೇಂಕಿಂಗೆ ಹೋದೆ. ಎಕೌಂಟಿಲ್ಲಿ ಹಣ ಎಶ್ಟಿದ್ದು ಹೇಳಿ ಗೊಂತಪ್ಪದು ಮತ್ತೆಯೇ ಅಲ್ಲದೋ ಗೊಂತಪ್ಪದು! ಪುಸ್ತಕ ಕೊಟ್ಟಪ್ಪಗ ಅಲ್ಲಿದ್ದ ಗುಮಾಸ್ತ ನಿಂಗಳ ಲೆಕ್ಕಲ್ಲಿ ಹಣ ಏನೂ ಒಳಿಯದ್ದ ಕಾರಣ, ಲೆಕ್ಕವ ಕ್ಲೋಸ್ ಮಾಡಿಗೊ<ಡಿದ್ದು. ಮಿನಿಮಮ್ ಇಲ್ಲದ್ದಕ್ಕೆ ಲೆಕ್ಕ ಕ್ಲೋಸ್ ಆಯಿದು ಹೇಳಿದವು. ಏಕಪ್ಪ ಹಾಂಗಾತು ಹೇಳಿ ಎನಗೆ ಆಶ್ಚರ್ಯ. ಎನ್ನ ಬಾಯಿ ಲೆಕ್ಕಲ್ಲಿ ಅವರ ಮಿನಿಮಮ್ ಹಣ ಒಂದು ಸಾವಿರಕ್ಕಿಂತ ಹೆಚ್ಚು ಇರೆಕ್ಕಾತು. ಏಕೆ ಹೀಂಗಾತಪ್ಪ ಹೇಳಿ ಆಶ್ಚರ್ಯ ಆತು. ಕೇಳಿದೆ. ಅವು ಲೆಕ್ಕ ತೋರುಸಿದವು.
         ಏ ಟ್ ಯಂ ಕಾರ್ಡಿನ ಲೆಕ್ಕಲ್ಲಿ ಹಣ ಕಳೆತ್ತವು ಹೇಳಿ ಗೊಂತಾದ್ದು ಅಂಬಗ ಎನಗೆ! ಮಾಂತ್ರ ಅಲ್ಲ ಚೆಕ್ ಪುಸ್ತಕಕ್ಕೂ ಹಣ ಕಳೆತ್ತವು ಹೇಳುವದು ಆ ಮೇಲೆ ಗೊಂತಾತು .ಹೀಂಗೆಲ್ಲ ಮಾಡಿ ಮಿನಿಮಮ್ ಇಲ್ಲೆ ಹೇಳಿ ಮಾಡ್ತ್ತಿದ್ದವು. ಮತ್ತೆ ತಿಂಗಳಿಂಗೊಂದರಿ ಮಿನಿಮಮ್ ಇಲ್ಲದ್ದ ಲೆಕ್ಕಲ್ಲಿ ಲೆಕ್ಕಲ್ಲಿದ್ದ ಹಣಂದಲೇ ಕಳದವು. ಅಂತೂ ಹೀಂಗೆಲ್ಲ ಕೂಡುಸಿ ಕಳದು ಲೆಕ್ಕಲ್ಲಿದ್ದ ಹಣವೆಲ್ಲ ಮುಗುದು ಆನು ಹೋದ್ದಕ್ಕೆ ಮತ್ತೆ ಹಣ ಕೊಡೆಕ್ಕಾಗಿ ಬಯಿಂದಿಲ್ಲೆ.ಬೇಜಾರು ಮಾಡ್ಯೊಂಡು ಮನಗೆ ಬಂದೆ. ಇದ್ದದ್ದೂ ಹೋಯಿತು ಮದ್ದಿನ ಗುಣಂದ. ಸುರಕ್ಷಿತವಾಗಿಪ್ಪಲೆ ಬೇಂಕಿಲ್ಲಿ ಮಡಗುವದು. ಆದರೆ ಇಲ್ಲಿ ಇಲ್ಲಿ ಬೇಂಕಿಲ್ಲಿ ಮಡಗಿದ ಹಣ ಬೇಂಕಿನ ಲೆಕ್ಕಲ್ಲೇ ಹೋತು.
     ಇಲ್ಲಿ ಎನ್ನ ತಪ್ಪೋ ಅಲ್ಲ ಬೇಂಕಿನ ಉದ್ಯೋಗಸ್ತ ತಪ್ಪೋ ಎನಗೆ ಗೊಂತಿಲ್ಲೆ. ಪ್ರತಿ ತಿಂಗಳ ಲೆಕ್ಕ ಮಾಡುವಗ ಅನ್ಯಾಯವಾಗಿ ಒಬ್ಬನ ಹಣ ನಷ್ಟ ಮಾಡುವದೆಂತಗೆ! ಗಿರಾಕಿಗೊಕ್ಕೆ ತಿಳಿಶಿಕ್ಕಾದ್ದು ಅವರ ಧರ್ಮ ಹೇಳಿ ಗ್ರೇಶುತ್ತೆ. ಅಂತೇ ಕೂಡುಸಿ ಕಳದು ಹಾಕುವಗ  ಅವು ಮನಸ್ಸು ಮಾಡಿದರೆ ಪಾರ್ಟಿಗೆ ವಿಷಯ ತಿಳಿಶುಲೆ ಇಪ್ಪತ್ತೈದು ಪೈಸೆಯ ಕಾರ್ಡ್ ಸಾಕು. ಗಿರಾಕಿಗೆ ತಿಳಿಶುತ್ತಿತರೆ ಹಣ ಲೆಕ್ಕಲ್ಲಿ ಒಳಿತ್ತೀತು. ಎನಗೆ ಎಚ್ಚರಿಗೆ ಅಪ್ಪಗ ಉದಿ ಆಯಿದು! ಅಥವಾ ಚೆಕ್ ಪುಸ್ತಕಕ್ಕೆ ಹಣ ವಜಾ ಆವುತ್ತು ಹೇಳುವ ವಿಷಯ ಎನ್ನ ಹತ್ತರೆ ಪುಸ್ತಕ ಬೇಕೋ ಕೇಳಿದ ಗುಮಾಸ್ತಂಗೆ ಹೇಳುಲಾವುತ್ತಿತ್ತು. ಅಥವಾ ಆನು ಕೇಳೆಕ್ಕಾತೋ ಎಂತದೋ?
        ನಮ್ಮ ಸುರಕ್ಷಿತಕ್ಕೆ ಬೇಂಕಿಲ್ಲಿ ಮಡಗಿದರೂ ಹಣ ನಮಗೆ ತಿಳಿಶದ್ದೆ ತೆಗವಲಾವುತ್ತು ಹೇಳಿ ಆದರೆ, ಅಥವಾ ಈ ಸಣ್ಣ ಮೊತ್ತಕ್ಕೆ ಕೋರ್ಟಿಂಂಗೆ ಹೋದರೂ ನಮ್ಮ ಕಡೆಲ್ಲಿ ನ್ಯಾಯ ಸಿಕ್ಕುಗೋ? ನಾವು ತೆಗದ ಲೋನಿನ ಬಗ್ಗೆ ನೋಟಿಸ್ ಕೊಡುವಂತೆ ಇದರನ್ನೂ ತಿಳಿಶೆಕ್ಕಾದ ಜವಾಬ್ದಾರಿ ಅವರದ್ದಾದರೂ ಅದಕ್ಕೆ ನಾವು ತುಂಬ ಕಷ್ಟ ಪಡೇಕ್ಕಕ್ಕು ಹೇಳಿ ಕಾಣುತ್ತು.
          ಕೆನರ ಬೇಂಕಿಲ್ಲಿ ಮದಲಿಂದಲೇ ಎನ್ನ ಎಕೌಂಟ್ ಇದ್ದು. ಏನೋ ಸ್ವಲ್ಪ ಹಣ "ಪುಚ್ಚೆ ಹೇಲು ಹುಗುದು ಹಾಕಿದಂಗೆ"ಹೇಳುಲಕ್ಕು ಹೆಚ್ಚು ಹಣ ಇಲ್ಲೆ. ಇಪ್ಪಗ ಹಾಕಿದರೆ ಬೇಕಪ್ಪಗ ತೆಕ್ಕೊಂಬಲಕ್ಕನ್ನೆ!ಮತ್ತೊಂದರಿ ಅಲ್ಲಿಯೂ ಹೀಂಗೆ ಆಗಿತ್ತು. ಚೆಕ್ ಪುಸ್ತಕಕ್ಕೆ ಹಣ ಕಳದ್ದು ಅಲ್ಲ. ಬೇರೆ ಕಾರಣಕ್ಕೆ ಮಿನಿಮಮ್ ಇಲ್ಲೆ ಹೇಳಿಯೋ ಎಂತದೋ ಕಾರಣಕ್ಕೆ ಎರಡೆರಡು ಸರ್ತಿ ಹಣ ವಜಾ ಆಗಿತ್ತು. ಮೇನೇಜರನ ಹತ್ತರೇ ಕೇಳೆಕ್ಕಾಗಿ ಬಂತು. ಕ್ಲಾರ್ಕ್ ಗೊ ಗಣ್ಯ ಮಾಡುತ್ತವಿಲ್ಲೆ. ಮೇನೇಜರ್ ಗುರ್ತದೋನು. ಅವನತ್ರೆ ಕೇಳಿದ್ದಕ್ಕೆ ಲೆಕ್ಕ ಎಲ್ಲ ಸರಿಯಾಗಿ ನೋಡಿ ಎನ್ನ ಮಾತು ಸರಿ ಹೇಳಿ ಅವಂಗೆ ತೋರಿತ್ತು. ನಿಂಗೆ ಬೇಜಾರು ಮಾಡೆಡಿ. ಅದರ ಸರಿ ಮಾಡುವೊ. ಒಂದೆರಡಿ ದಿನ ಕಳುದುಬನ್ನಿಹೇಳಿದ. ಮತ್ತೆ ಹೋದೆ. ಗುಮಾಸ್ತನ  ದಿನಿಗೇಳಿ ಲೆಕ್ಕ ಸರಿ ಮಾಡಿ ಕೊಡುಲೆ ಹೇಳಿದ ಮೇನೇಜರ್.
           ಇಲ್ಲಿ ಈ ಎರಡು ಸಂದರ್ಭಲ್ಲಿ    ಎನಗಾದ ಅನುಭವಲ್ಲಿ,ಗುರ್ತ ಇದ್ದ ಕಾರಣ ಒಂದು ಬೇಂಕಿಲ್ಲಿ ಲೆಕ್ಕ ಸರಿಯೂ ಆತು.ಗುರ್ತ ಇಲ್ಲದ್ದ ಕಾರಣ  ಮತ್ತೊಂದು ಬೇಂಕಿಲ್ಲಿ  ಲೆಕ್ಕಲ್ಲಿದ್ದ ಹಣವೇ ಹೋತು.ಯಾವದು ಸರಿ ಯಾವದು ತಪ್ಪು! ಗುರ್ತ ಇಲ್ಲದ್ದದು ತಪ್ಪೋ? ಅಥವಾ ಸಾರ್ವಜನಿಕ ವ್ಯವಸ್ತೆಲ್ಲಿ ಗುರ್ತವೇ ಬೇಕಾವುತ್ತೋ ಎನಗೆ ಗೊಂತಾವುತ್ತಿಲ್ಲೆ!ಇಲ್ಲಿ ಸಣ್ಣ ಮೊತ್ತವ ಹೇಳಿದ್ದಾದರೂ ದೊಡ್ಡ ಮೊತ್ತವಾದರೂ ಮಕ್ಕಳ ಪೇಪರ್ ತಿದ್ದುವಗ ಒಬ್ಬನ ಮಾರ್ಕಿನ ಇನ್ನೊಬ್ಬಂಗೆ ಹಾಕಿದ ಹಾಂಗೆ ಆದರೆ ಗಿರಾಕಿಗಳ ಒದ್ದಾಟ ಅನುಭವುಸೋವಕ್ಕೇ ಗೊಂತು.
ಉದ್ಯೋಗ ಸಿಕ್ಕುವ ವರೆಗೆ  ಮನುಷ್ಯನ ಅವಸ್ತೆ ಒಂದಾದರೆ ಸಿಕ್ಕಿದ ಮೇಲೆ ಅವನ ಗತ್ತೇ ಬೇರೆ!
                            ಎಲ್ಲೋರಿಂಗೂ ಹೀಂಗೆ ಅನುಭವ ಆಗದ್ದರೂ ಬೆರಳೆಣಿಕೆಯೋರಿಂಗೆ ಶನಿ  ಸುತ್ತಿದೋರಿಂಗೆ ಮಾಂತ್ರ ಆಗಿಕ್ಕು.ಕ್ಯೂ ನಿಂದೊಂಡಿಪ್ಪಗ ಒಬ್ಬನ ಬೇಗ ಕಳುಸೆಕ್ಕು ಹೇಳಿ ಆದರೆ ಕೇಶಿಲ್ಲಿ ಕೂದೋನು ಅವನ ದಿನಿಗೇಳಿ ಹಣ ಲೆಕ್ಕ ಮಾಡಿ ಕೊಡುವದಿದ್ದು. ಆರಾರು ಆಕ್ಷೇಪ ಹೇಳಿರೆ" ಅವ ಆಗಳೇ ಬಂದು ಕ್ಯೂ ನಿಂದೊಂಡು ಇದ್ದೋನು ಈಗ ಬಂದದು.ಹೋಪಗ ಹೇಳಿಕ್ಕಿ ಹೋದ್ದದು ಹೇಳಿ ಉತ್ತರ ಕೊಡುತ್ತವು.ಇಲ್ಲಿಯೂ ಸಾಮಾಜಿಕ ನ್ಯಾಯ ಇದ್ದೋ?ಒಟ್ಟಾರೆ ಯಾವುದೇ ಆಫೀಸಿಂಗೆ ಹೋಪಗಳೂ ಅಲ್ಲಿಯಾಣೋರ ಬೇಕಾದ ಹಾಂಗೆ ಮಾತಾಡಿ ಕಿಸೆ ಹಾಯ್ಕೊಂಡರೆ ಆಯೆಕ್ಕಾದ ಕೆಲಸ ಸಲೀಸಾಗಿ ಅಕ್ಕು.ಬಾಯಿ ಇದ್ದೋನು ಹೇಳಿರೆ ಸಂಬ<ಧ ಪಟ್ಟೋರತ್ರೆ ಬೇಕಾದ ಹಾಂಗೆ ಮಾತಾಡುಲೆ ಗೊಂತಿದ್ದರೆ ಅವನ ಕೆಲಸ ಆಗಿಯೇ ಹೋವುತ್ತು. ಆನು ನೇರ ಮಾರ್ಗಲ್ಲೇ ಹೋವ್ತೋನು ಹೇಳ್ಯೊಂಡಿದ್ದರೆ ಒಂದೇ ಸರ್ತಿಲ್ಲಿ ಅಪ್ಪ ಕೆಲಸ ಮತ್ತೆ ಮತ್ತೆ ಹೋಯೆಕ್ಕಾಗಿ ಬತ್ತು.ಮನ್ನೆ ಹೀಂಗಾತು.
ತಾಲೂಕು ಒಫಿಸಿಲ್ಲಿ ಎನಗೆ ಒಂದು ಕೆಲಸ ಆಯೆಕ್ಕಾತು. ಮನೆ ತೆಗದ ಜಾಗೆಯ ಆ ಟಿ ಸಿ ಒಂದುವರೆ ವರ್ಷ ಕಳುದರೂ ಸಿಕ್ಕಿತ್ತಿದ್ದಿಲ್ಲೆ. ಹೋಗಿ ಕೇಳಿದ್ದಕ್ಕೆ, ಎಂಗೊಗೆ ಅದರ ಕೋಪಿ ಇನ್ನೂ ಬಯಿಂದಿಲ್ಲೆ ಹೇಳಿದವು.ರಿಜಿಸ್ತ್ರಿ ಓಫಿಸಿಲ್ಲಿ ಕೇಳಿದ್ದಕ್ಕೆ ಎಂಗೊ ಅಂದಂದೇ ಕಳುಸುತ್ತೆಯೊ.ಸಿಕ್ಕಿದ್ದಿಲ್ಲೆ ಹೇಳಿದರೆ ಬೇರೊಂದು ಕೋಪಿ ತಂದು ಕೊಡಿ ಕಳುಸುತ್ತೆಯೊ ಹೇಳಿದವು. ಅಂಬಗಳೇ ಡಾಕ್ಯುಮೆಂಟಿನ ಕೋಪಿ ಕೊಟ್ಟು ದಸ್ಕತ್ತು ಹಾಕುಸಿ ತಂದು ಕೊಟ್ಟೆ. ಎರಡು ವಾರ ಕಳುದು ಹೋಪಲೆ ಹೇಳಿದವು. ಹೋದೆ. ಅದರ ವಿಲೇಜಿಂಗೆ ಕಳುಸುತ್ತೆಯೊ ಅಲ್ಲಿಂದ ರಿಪೋರ್ಟ್ ಬಂದ ಮೇಲೆ ಕೊಡುತ್ತೆಯೋ ಹೇಳಿದವು. ಒಂದು ತಿಂಗಳು ಕಳುದರೂ ಶುದ್ದಿ ಇಲ್ಲೆ. ಒಂದು ತಿಂಗಳು ಕಳುದ ಮೇಲೆ ಮನೆ  ಮುಂದೆ ಒಂದು ಚೀಟಿ ಕಂಡತ್ತು. ವಿಲೇಜಿಂಗೆ ಬಂದು ಅನುಭವ ಕೊಡೆಕ್ಕು ಹೇಳಿ ಇತ್ತು. ಅನುಭವ ಹೇಳಿದರೆ ಅವರ ಕಾಣಿಕೆ ಆಗಿಕ್ಕು! ಆನು ಹೋಯಿದಿಲ್ಲೆ. ಆರ್ ಟಿ ಸಿ ಸಿಕ್ಕಿದ್ದಿಲ್ಲೆ. ಎನಗೆ ನಗರ ಸಭೆಯ ಖಾತೆ ಸಿಕ್ಕಿತ್ತು.ಹಾಂಗೆ ಸುಮ್ಮನಿದ್ದೆ.ಇನ್ನು ಮತ್ತೊಂದರಿ ಹೋಗಿ ಕೇಳಿದರೆ ಎಂತ ಹೇಳುತ್ತವು ನೋಡೆಕ್ಕಷ್ಟೆ!
ಮತ್ತೊಂದರಿ ಆನು ಬೇಂಕಿಲ್ಲಿ ಒಂದು ಚೆಕ್  ಎನ್ನ ಎಕೌಂಟಿಂಗೆ ಹಾಕುಲೆ ಕೊಟ್ಟಿತ್ತಿದ್ದೆ. ಅದು ಶನಿವಾರ ಆಗಿತ್ತು.ಹತ್ತು ಗಂಟೆಗೇನೋ ಕೊಟ್ಟದು. ಹೊತ್ತೋಪಗ ಎನಗೆ ಫೋನ್ ಬಂತು. ನಿಂಗೊ ಕೊಟ್ಟ ಚೆಕಿಲ್ಲಿ ಹಣ ಲೆಕ್ಕಲ್ಲಿಲ್ಲೆನ್ನೆ! ಎಂತ ಮಾಡೆಕ್ಕು ಹೇಳಿ ಕೇಳಿದವು. ಅದಕ್ಕೆ ಆನು " ಚೆಕ್ಕಿನ ಕಳುಸೆಡಿ. ಎನಗೆ ಚೆಕ್ ಕೊಟ್ಟೋನತ್ರೆ ಕೇಳಿ ಸೋಮವಾರ ಹೇಳುತ್ತೆ ಅಲ್ಲಿ ವರೆಗೆ ಪೆಂಡಿಂಗ್ ಮಡಗಿ ಹೇಳಿದೆ. ಮತ್ತೆ ಆ ಪಾರ್ಟಿಗೆ ಫೋನ್ ಮಾಡುವಗ ಅವನೂ ಆನು ಎನ್ನ ಬೇಂಕಿಲ್ಲಿ ಕೇಳುತ್ತೆ ಹೇಳಿ ಸೋಮವಾರ ಹೋದಡೊ. ಏನೋ ಒಂದು ಕ್ಲೆರಿಫ಼ಿಕೇಶನ್ ಇತ್ತು. ಅದರ ಸರಿ ಮಾಡಿ ಕೊಟ್ಟವು. ಎರಡು ದಿನಲ್ಲಿ ಎನ್ನ ಹಣ ಎನ್ನ ಲೆಕ್ಕಕ್ಕೆ ಬಂತು.ಬೇಂಕಿನೋವು ಫೋನ್ ಮಾಡಿದ ಕಾರಣ ಸಮಸ್ಯೆ ಸರಿ ಆಗಿತ್ತು. ಇಲ್ಲಿ ಮಾನವೀಯತೆಯೂ ಕೆಲಸ ಮಾಡಿದ್ದು ಹೇಳುವದು ಎನ್ನ ಅಭಿಪ್ರಾಯ..
                          ಬೇಂಕಿಂಗ್ ವ್ಯವಸ್ತೆಯೇ ತನಗೆ ತಿಂಬಲೆ ಕೊಡುವದು ಹೇಳುವ ನೆಂಪು ಉದ್ಯೋಗಸ್ತರಿಂಗೆ ಇರುತ್ತಿದ್ದರೆ ಸಾರ್ವಜನಿಕರಿಂಗೆ ತೊಂದರೆ ಅಕ್ಕೋ!

No comments:

Post a Comment