Friday, May 3, 2013

rogi bayasiddu halu

                                     ರೋಗಿ ಬಯಸಿದ್ದೂ ಹಾಲು  ವೈದ್ಯ ಕೊಡುಲೆ ಹೇಳಿದ್ದೂ ಹಾಲು!
ಅಂದು ಏಳುವಗಳೇ ಬಲದ ಮಗ್ಗುಲಿಲ್ಲಿ ಎದ್ದದು ಹೇಳಿ ಕಾಣುತ್ತು ಅವ! ಏಳುವಗ ತಡವಾದರೂ ಎಂದ್ರಾಣಷ್ಟು ತಡವಾಗಿತ್ತಿಲ್ಲೆ. ಯಾವಾಗಳೂ ಸೂರ್ಯನ ಬೆಣ್ಚಿ ಕುಂಡೆಗೆ ಬಿದ್ದಮೇಲೆಯೇ ಅದುದೇ ಅಮ್ಮನೋ ತಂಗೆಯೋ ಏಳುಸಿದರೆ ಮಾಂತ್ರ ಎದ್ದು ಮತ್ತೆ ಗಡಿಬಿಡಿಲ್ಲಿ ಬ್ರುಶ್ ಮಾಡಿ ಶಾಲಗೆ ತಡವಾವುತ್ತು ಹೇಳ್ಯೊಂಡು ಓಡಿ ಬಂದು ಕಾಫಿ ಕುಡಿವಲೇ ಕೂರುಗು. ಹೊಟ್ಟೆ ತುಂಬುಸ್ಯೊಂಡು ಓಡ್ಯೊಂಡೇ ಶಾಲಗೆ ಹೋಕು. ಬಪ್ಪಗ ಬೇಗ ಮನೆಗೆ ಬಂದದೇ ಇಲ್ಲೆ. ಬಪ್ಪಗಳೂ ದಾರಿಲ್ಲಿ ಗೆಳೆಯರೊಟ್ಟಿಂಗೆ ಮಾತಾಡ್ಯೊಂಡು ಮನಗೆತ್ತುವಗ ಕಸ್ತಲೆ ಅಕ್ಕು. ಹೋಂ ವರ್ಕ್ ಶಾಲೆಲ್ಲೇ ಮುಗಿಶಿಕ್ಕಿ ಮತ್ತೆ ರಜ ಹೊತ್ತಾದರೂ ಆಡಿಕ್ಕಿಯೇ ಬಕ್ಕು. ಒಟ್ಟಾರೆ ಆರೋಗ್ಯ ದೇವರ ದಯಂದ ಸರಿಯಾಗಿತ್ತು. ಮತ್ತೆಂತ ಚಿಂತೆಯೂ ಇಲ್ಲೆ. ಉಂಬಲೆ ತಿಂಬಲೆ ಅಪ್ಪ ತಂದು ಹಾಕಿದರೆ ತಂದದರ ಬೇಶಿ ಅಮ್ಮ ಬಳುಸಿದರೆ ಅದಕ್ಕೂ ಕೊರತ್ತೆ ಇಲ್ಲೆ. ಕಲಿವಲೂ ಹುಶಾರಿತ್ತಿದ್ದ. ಕ್ಲಾಸಿಲ್ಲಿ ಅವನೇ ಫಸ್ಟ್!ಮತ್ತೆ ಪಾಠೇತರ ಚಟುವಟಿಕೆಲ್ಲಿಯೂ ಭಾಷಣ ಚಿತ್ರ ಅಭಿನಯ ಎಲ್ಲದರಲ್ಲೂ ಮಾಸ್ಟ್ರಕ್ಕೊಗೆಅವ ಹೇಳಿದರೆ ಆತು.ಒಳ್ಳೆ ಗುಣ ನಡತೆಯೂ ಇದ್ದ ಕಾರಣ ಎಲ್ಲೋರಿಂಗೂ ಅವನತ್ರೆ ತುಂಬ ಪ್ರೀತಿ.
      ಮನೆಂದ ಶಾಲೆಗೆ ಬರೇ ಎರಡು ಮೈಲು ದೂರ. ಮಕ್ಕೊಗೆ ರಿಯಾಯಿತಿ ದರ ಆದ ಕಾರಣ ಬಸ್ಸಿಲ್ಲೇ ಹೋಪದು.ಅಂದು ರಜ ತಡವೇ ಆದರೂ ಬಸ್ ತಡವಾದ ಕಾರಣ ಓಡಿ ಹೋಗಿ ಹತ್ತುಲೆಡಿಗಾತು.ಅವನ ಹಾಂಗೆ ಎಲ್ಲ ಮಕ್ಕಳೂ ಶಾಲೆಗೆ ಆ ಬಸ್ಸಿಲ್ಲೇ ಹೋಪದು. ಅದಕ್ಕೆ ಮಕ್ಕಳ ಬಸ್ಸು ಹೇಳುಲಕ್ಕು. ಕಾರಣ ಬಸ್ಸು ತುಂಬ ಮಕ್ಕಳೇ ಇಪ್ಪದು. ಅಂದು ಅವನ ಕ್ಲಾಸಿಲ್ಲಿ ಪರೀಕ್ಷೆ  ಪೇಪರ್ ಕೊಟ್ಟವು. ಎಲ್ಲದರಲ್ಲಿಯೂ ಅವನೇ ಫಸ್ಟ್. ಮಾಷ್ಟ್ರ ಅವನ ಹೊಗಳಿದ್ದೇ ಹೊಗಳಿದ್ದು.
            ಅವನ ತಂಗೆಯೂ ಅದೇ ಶಾಲೆಲ್ಲಿ ಕಲಿವದು .ಒಟ್ಟಿಂಗೇ ಶಾಲೆಗೆ ಹೋಪದು.ತಂಗೆಯೂ ಕಲಿವಲೆ ಹುಶಾರಿತ್ತು. ಎಲ್ಲೋರೂ ಇಬ್ರನ್ನೂ ಹೊಗಳುಗು. ಅಂತೂ ಅವರದ್ದು ಸುಖೀ ಸಂಸಾರ!.ಮನೆಲ್ಲಿ ಅಮ್ಮ ಅಪ್ಪ,ಒಂದು ಅಜ್ಜಿ, ಮತ್ತೆ ಅಣ್ಣ,ತಂಗೆ ಇವಿಬ್ರು ಒಟ್ಟಿಂಗೆ ಐದು ಜನ ಮಾಂತ್ರ ಅವರ ಮನೆಲ್ಲಿದ್ದದು. ಬೇಕಾದಷ್ಟು ಅಡಕ್ಕೆ ತೋಟ, ರಜ ಗೆದ್ದೆ ಮನೆ ಖರ್ಚಿಗೆ ಬೇಕಾದಷ್ಟು ಅವರ ಗೆದ್ದೆಲ್ಲೇ ಸಿಕ್ಕಿಗೊಂಡಿತ್ತು. ಹೆಚ್ಚು ಶ್ರೀಮಂತರಲ್ಲದ್ರೂ ಉಂಬಲೆ ತಿಂಬಲೆ ಕೊರತ್ತೆ ಇಲ್ಲೆ.
          ಹತ್ತರಾಣ ಶಾಲೆಲ್ಲಿ ಕಲಿತ್ತಷ್ಟು ಕಲ್ತಾತು. ಇನ್ನು ಕೋಲೇಜು ಹಂತದ ವಿದ್ಯಾಭ್ಯಾಸ. ಈಗಾಣ ಕಾಲಲ್ಲಿ ವಿದ್ಯೆ ಇಲ್ಲದ್ದರೆ ವ್ಯವಹಾರ ಜ್ಞಾನವೂ ಇಲ್ಲದ್ದಕ್ಕನ್ನೆ ಹೇಳಿ ಕೋಲೆಜಿಂಗೂ ಸೇರುಸಿ ಆತು. ಅಲ್ಲಿಯೂ ಇವ ಕಲಿವದರಲ್ಲಿ ಹುಶಾರಿಗಿಯೇ ಇತ್ತಿದ್ದ. ಪಿ. ಯು.ಸಿ ಆದಮೇಲೆ ಇವಂಗೆ ಇನ್ನೂ ಕಲಿಯೆಕ್ಕು ಹೇಳಿ ಆತು. ಮೆಡಿಕಲಿಲ್ಲಿ ಸೀಟು ಸಿಕ್ಕಿತ್ತು. ಅಪ್ಪನೂ ಮಗ ಕಲ್ತು ಡಾಕ್ಟರ್ ಆದರೆ ಊರಿಲ್ಲೇ ಇದ್ದು ಒಂದು ಕ್ಲಿನಿಕ್ ಮಡಿಕ್ಕೊಂಡರೆ ಒಟ್ಟಿಂಗೆ ಕೃಷಿಯೂ ಇದ್ದನ್ನೆ,ಮರ್ಯಾದೆಲ್ಲಿ ಜೀವನ ಸಾಗುಸುಲಕ್ಕು ಹೇಳಿ ಯೋಚನೆ ಮಾಡಿದ ಅಪ್ಪ!. ಸರಿ ಮೆಡಿಕಲ್ ವಿದ್ಯೆಯೂ ಇವಂಗೆ ಕರತಲಾಮಲಕದ ಹಾಂಗೆ ಆಗಿತ್ತು.ಕೋಲೇಜಿಲ್ಲಿ ಇವನೇ ಮುಂದೆ. ಅಲ್ಲಿ ಮೆಡಿಕಲ್ ಕಲಿವಲೆ ಬಂದ ಒಂದು ಹುಡುಗಿಯ ಪರಿಚಯ ಆತು. ಅದುದೇ ಕಲಿವಲೆ ಹುಶಾರಿತ್ತು.ಪ್ರಿಚಯ ಸ್ನೇಹವಾತು.ಅಲ್ಲಿ ಸಂಜೆ ಹೊತ್ತು ಪಾರ್ಕ್ ಅಲ್ಲಿ ಇಲ್ಲಿ ತಿರುಗುಲೆ ಶುರುವಾಗಿತ್ತು.ಕೋಲೆಜಿಲ್ಲಿಯೂ ಇವನ ಕಂಡರೆ ಅದಕ್ಕೂ ಮೋರೆ ಗೆಲುವಕ್ಕು! ಅದರ ಕಾಣದ್ದೆ ಇವಂಗೂ  ಬೇಜಾರು ಅಕ್ಕು. ಒಬ್ಬಕ್ಕೊಬ್ಬನ ಕಾಣದ್ದರೆ ಏನೋ ಒಂದು ಬೇಜಾರು. ಯಾವದರಲ್ಲಿಯೂ ಆಸಕ್ತಿ ಇಲ್ಲದ್ದಿಪ್ಪಲೆ ಶುರುವಾತು.
        ಇಬ್ರ ಮನೆಯೂ ದೂರ ದೂರವಾಗಿದ್ದರೂ ಮನಸ್ಸು ಹತ್ತರೆಯೇ ಆಗಿಹೋತು. ಮುಂದೆ ಮದುವೆ ಆಗಿ ಎಲ್ಯಾದರೂ ಪೇಟೆಲ್ಲಿ ಕ್ಲಿನಿಕ್ ಮಡಿಕ್ಕೊಂಡು ಜೋಲಿಯಾಗಿ ಇರೆಕ್ಕು ಹೇಳುವ ಮನಸ್ಸು ಕೂಸಿಂಗೆ! ಆದರೆ ಇವನ ಮನೆಲ್ಲಿ ಅಪ್ಪ ಅಮ್ಮ ಮಾತಾಡುವದರ ಕೇಳಿಗೊಂಡಿದ್ದವಂಗೆ ಅವರ ಮನಸ್ಸಿಂಗೆ ಬೇನೆ ಮಾಡಿ ಪೇಟೆಗೆ ಹೋಪಲೂ ಮನಸ್ಸು ಬತ್ತಿಲ್ಲೆ. ಕೂಸಿನ ಬಿಟ್ಟಿಕ್ಕಿ ಇಪ್ಪಲೂ  ಮನಸ್ಸು ಒಪ್ಪುತ್ತಿಲ್ಲೆ. ಇಬ್ಬಂದಿ ಮನಸ್ಸು ಆಗಿ ಹೋತು ಅವಂದು. ತನ್ನ ಯೋಜನೆಯ ಮಟ್ಟಿಂಗೆ ಅವ ಏನೂ ಹೇಳದ್ದ ಕಾರಣ,ಕೂಸಿಂಗೆ ಚಿಂತೆ ಅಪ್ಪಲೆ ಶುರುವಾತು.ಬಾಯಿ ಬಿಟ್ಟು ಹೇಳಿದರೆ ಮಾಂತ್ರ ಅಲ್ಲದೋ ಯಾವದೂ ಗೊಂತಪ್ಪದು! ಇವ ಮಾತಾಡದ್ದೇ ಇಪ್ಪಗಳೇ ಕೂಸಿಂಗೆ ಇವಂಗೆ ಮನಸ್ಸಿಲ್ಲೆ ಹೇಳುವ ಯೋಚನೆಯೂ ಬಂತು. ಕೇಳಿದರೆ ಹೇಳುತ್ತಾ ಇಲ್ಲೆ. ಹೇಳದ್ದರೆ ಗೊಂತಪ್ಪದು ಹೇಂಗೆ?ಇಬ್ರೂ ಮನೆಲ್ಲಿ ಶುದ್ದಿ ಹೇಳಿದ್ದವಿಲ್ಲೆ.
       ಸಮಯ ಆರನ್ನೂ ಕಾದು ಕೂರ್ತಿಲ್ಲೆನ್ನೆ!ವರ್ಷ  ಮುಂದೆ ಹೋವುತ್ತಾ ಇಬ್ರದ್ದೂ ಕಲಿಯುವಿಕೆ ಮುಗಿಯುತ್ತಾ ಬಂತು.ಮರದಿನ ಎಲ್ಲೋರೂ ಊರಿಂಗೆ ಹೋಯೆಕ್ಕು. ತುಂಬ ವರ್ಷ ಒಟ್ಟಿಂಗೇ ಇದ್ದಿಕ್ಕಿ ಒಬ್ಬಕ್ಕೊಬ್ಬನ ಬೀಳ್ಕೊಡುಲೆ ಕಷ್ಟವೇ ಆತು. ಇವಕ್ಕೂ ಹಾಂಗೆ ಬಿಟ್ಟು ಹೋಪ ಮನಸ್ಸಿನ ಬೇನೆ ಹೇಳಿದರೆ ಗೊಂತಾಗ! ಅನುಭವಿಸಿದೋವಕ್ಕೇ ಗೊಂತನ್ನೆ!
                                        ಹೆರಡುಲಪ್ಪಗ ಇಬ್ರುದೇ ಮುಂದಾಣ ಯೋಚನೆ ಮಾಡಿಗೊಂಡವು. ಹಳ್ಳಿಲ್ಲೇ ಕ್ಲಿನಿಕ್ ಮಡುಗೆಕ್ಕು ಹೇಳುವದು ಮಾಣಿಯ ಅಪ್ಪನ ಅಭಿಪ್ರಾಯ. ಅಪ್ಪನ ಮಾತಿನ ಮೀರಿ ಹೋಪ ಧೈರ್ಯವೂ ಅವಂಗಿಲ್ಲೆ. ಕೂಸಿನ ಬಿಡುಲೂ ಮನಸ್ಸೊಪ್ಪುತ್ತಿಲ್ಲೆ. ಕೂಸಿಂಗೂ ಹಳ್ಳಿ ಬೇಡ ಹೇಳುವ ಅಭಿಪ್ರಾಯ!ಕೂಸಿನ ಮನೆಯೋರ ಅಭಿಪ್ರಾಯವೂ ಪೇಟೆಲ್ಲೇ ಕೆಲಸ ಮಾಡ್ಯೊಂಡು ಇಪ್ಪದಕ್ಕೆ ವಿರೋಧ ಇಲ್ಲೆ. ಇಬ್ರೂ ಅವರವರ ಯೋಚನೆಯ ಮನೆಯೋರತ್ರೆ ಹೇಳಿದ್ದವಿಲ್ಲೆ. ಮಾಣಿ ನಿರ್ಧಾರ ಬದಲುಸದ್ರೆ ಅವರೊಳಾಣ ಪ್ರೀತಿ ಸತ್ತು ಹೋದ ಹಾಂಗೆ!. ಎಂತ ಮಾಡುವದು? ಯಾವದೊಂದು ನಿರ್ಧಾರಕ್ಕೆ ಬಪ್ಪಲೂ ಅವಕ್ಕೆ ಎಡಿಗಾತಿಲ್ಲೆ.ಯಾವದೇ ಹರಿನಿರ್ಣಯ ಆಗದ್ದೆ ಊರಿಂಗೆ ಹೋಗಿಯೂ ಆತು.
                                    ಇಬ್ರುದೇ ಬ್ರಾಹ್ಮರೇ ಆಗಿದ್ದದಾದರೂ ಪ್ರೀತಿ ಮಾಡುವಗ ಗೋತ್ರ ಸೂತ್ರಂಗಳ ಕೇಳಿಗೊಂಡು ಪ್ರೀತಿ ಮಾಡಿದ್ದಲ್ಲ. ಇಬ್ರದ್ದೂ ಒಂದೇ ಗೋತ್ರ ಆಗಿತ್ತಡೊ. ಮತ್ತೆ ಮನೆಯೋರು ಒಪ್ಪುಲೆ ಸಾಧ್ಯವೇ ಇಲ್ಲೆ. ಮದಲಿಂದಲೇ ಎರಡು ಮನೆಯೋವಕ್ಕೂ ಹೋಪದು ಬಪ್ಪದು ಇತ್ತಿಲ್ಲೆ ಹೇಳುವದು ಇವಕ್ಕಿಬ್ರಿಂಗೂ ಗೊಂತಿತ್ತಿಲ್ಲೆ. ಈ ಕಾರಣಂದಲೂ ಮನೆಯೋರು ಇವರ ಇಷ್ಟದ ಬಗ್ಗೆ ಗೊಂತಾದ ಮೇಲೂ ಒಪ್ಪುವದು ಕಷ್ಟವೆ ಆತು.
                                        ಆ ಸಮಯಲ್ಲೇ ಗುರುಗಳ ಸವಾರಿ ಆ ಊರಿಂಗೆ ಬಪ್ಪದಿತ್ತು. ಬಂದರೆ ಮಾಣಿಯ ಮನೆಲ್ಲೇ ಕೇಂಪ್! ಗುರುಗಳ ಆಗಮನ ಆವುತ್ತು, ಐದು ದಿನದ ರಾಮ ಕತೆ ಹೇಳುಲೆ ಇದ್ದಡೊ" ಹೇಳಿ ಪ್ರಚಾರ ಆಗಿತ್ತು. ಮಾಣಿಯ ಮನೆಯ ಮುಂದೆ ದೊಡ್ಡ ಚೆಪ್ಪರ ಹಾಕಿತ್ತಿದ್ದವು. ಗುರುಗಳ ವಾಸ ಮಾಣಿಯ ಮನೆಲ್ಲೇ ಆಗಿತ್ತು. ಗುರುಗೊ ಬಂದವು. ಕೂಸಿನ ಮನೆಯೋರುದೆ ಕತೆ ಕೇಳುಲೆ ಬಂದಿತ್ತಿದ್ದವು.
ಗುರುಗೊ ಒಂದು ದಿನ ಮಾಣಿಯ ವಿದ್ಯೆಯ ಬಗ್ಗೆ ಕೇಳಿ ಅಪ್ಪಗ ಮೆಡಿಕಲ್ ಓದಿದ ಶುದ್ದಿ ಕೇಳಿ ಅವಕ್ಕೆ ಕೊಷಿ ಆಗಿತ್ತು. "ನಿಂಗಳ ಹಾಂಗಿಪ್ಪ ಡಾಕ್ಟ್ರಕ್ಕೊ ಊರಿಲ್ಲೇ ಪ್ರೇಕ್ಟೀಸ್ ಮಾಡಿದರೆ ಊರಿಲ್ಲಿದ್ದೋವಕ್ಕೆ, ಚಿಕಿತ್ಸೆಗಾಗಿ ಪೇಟೆಗೆ ಹೋಯೆಕ್ಕಾಗಿ ಬಾರ. ಹಳ್ಳಿಯ ಬಡಬಗ್ಗರ ಸೇವಯೂ ನಾವು ಸಮಾಜಕ್ಕೆ ನಾವು ಮಾಡುವ ಸೇವೆ. ಸಂಪಾದನೆಯೇ ಮುಖ್ಯ ಅಲ್ಲ. ಒಟ್ಟಾರೆವ್ ನಾವು ಊರಿಂಗೆ, ಊರಿನ ಜಂಗೊಕ್ಕೆ ಮಾಡುವ ನಿಷ್ಕಾಮ ಸೇವ ಇಹಕ್ಕೂ,ಪರಕ್ಕೂ ಪ್ರಯೋಜನ ಅಪ್ಪಂಥಾದ್ದು " ಹೇಳುವಗ ಮಾಣಿಗೆ ಹೆರಿಯೋರ ಮಾತಿನಂತೆ ನಡೆಯೆಕ್ಕಾದ್ದೂ ಎನ್ನ ಧರ್ಮ ಹೇಳುವದು ಗೊಂತಾತು.
 ಮರದಿನ ಕತೆ ಹೇಳುತ್ತಿಪ್ಪಗಳೂ ಇದೇ ಮಾತಿನ ಎಲ್ಲೋರಿಂಗೂ ನಾವು ಮಾಡೆಕ್ಕಾದ ಕರ್ಮ,ದ್ಶರ್ಮದ ಬಗ್ಗೆ ಹೇಳಿದವು.ಇದರೆಲ್ಲ ಕೇಳಿ ಅಪ್ಪಗ ಮಾಣಿ ಮನಸ್ಸಿಂಗೆ ಹೊಸ ಯೋಚನೆ ಬಂತು. ಹಳ್ಳಿಲ್ಲಿ ನಿಂಬಲೆ ಕೂಸು ಒಪ್ಪಿದರೆ ಗುರುಗಳತ್ರೆ ಈ ಮಟ್ಟಿಂಗೆ ಎಂತ ಮಾಡುಲಕ್ಕು ಕೇಳೆಕ್ಕು ಹೇಳಿ ಗ್ರೇಶ್ಯೊಂಡಿತ್ತಿದ್ದ. ಅಂದು ಗುರುಗೊ ಇವನತ್ರೆ ಯೋಗ ಕ್ಷೇಮ ಮಾತಾಡ್ಯೊಂಡಿಪ್ಪಗ ಧೈರ್ಯ ಮಾಡಿ ಅವನ ಸಮಸ್ಯೆಯ ಹೇಳಿದಡೊ. "ಎಂಗೊಗೆ ಇಬ್ರಿಂಗೂ ಇಷ್ಟ. ಆದರೆ ಹೋಪದು ಬಪ್ಪದು ಇಲ್ಲದ್ದ ಕಾರಣ, ಮತ್ತೆ ಗೋತ್ರದ ಕಾರಣಂದ ಎಂಗಳ ಯೋಚನೆ ಕೈಗೂಡುತ್ತಿಲ್ಲೆ.ಊರಿಲ್ಲೇ ಒಂದು ನರ್ಸಿಂಗ್ ಹೋಮ್ ಮಾಡೆಕ್ಕು ಹೇಳುವದು ಎನ್ನ ಆಸೆ.ಇದಕ್ಕೆ ಪರಿಹಾರ ಹೇಳೆಕ್ಕು ಹೇಳಿ ಕೇಳಿಗೊಂಡಡೊ.
ಅದಕ್ಕೆ ಗುರುಗೊ "ಕೆಲವು ಗೋತ್ರಂಗಳಲ್ಲಿ ಸೂತ್ರಂಗೊ ಇರುತ್ತು.ಬೇರೆ ಬೇರೆ ಸೂತ್ರಂಗೊ ಆದರೆ ಅಡ್ಡಿ ಇಲ್ಲೆ. ಮತ್ತೆ ಹೋಕೂರಕ್ಕೆ ಹೇಳುವದರ ವಿಷಯಲ್ಲಿ ಆನು ಎರಡು ಮನೆಯೋರನ್ನೂ ಒಪ್ಪುಸುತ್ತೆ "ಇವಂಗೆ ಸಮಾಧಾನ ಹೇಳಿದವು. ಗುರುಗಳ ಅಭಿಪ್ರಾಯ ಕೇಳಿದ ಕೂಸಿಂಗೂ ಶುದ್ದಿ ಹೇಳುವಗ ಊರಿಲ್ಲೆ ನಿಂಬಲೆ ಕೂಸು ಒಪ್ಪಿದ ಕಾರಣ ಸಮಸ್ಯೆ  ಸುಲಭವಾಗಿ ಪರಿಹಾರ ಆತು.   ಮಾಣಿಯ ಮನಸ್ಸು ರಜ ಹಗುರ ಆತು. ರಾಮ ಕತೆಯ ಹೆಳೆಲ್ಲಿ ಬಂದ ಕೂಸಿಂಗು ಒಪ್ಪಿಗೆ ಆತು ಹಳ್ಳಿಲ್ಲಿ ಇಪ್ಪಲೆ.ಗುರುಗೊ ಇಬ್ರ ಮನೆಯೋರನ್ನೂ ಮತ್ತೊಂದು ದಿನ ಬಪ್ಪಲೆ ಹೇಳಿ ಮಕ್ಕಳ ಉತ್ಸಾಹ ಹಾಳು ಮಾಡೆಡಿ.ಇಬ್ರೂ ರಾಜಿ ಆಯಿಗೊಳ್ಳಿ. ಆನು ಫಲ ಮಂತ್ರಾಕ್ಷತೆ ಕೊಡುತ್ತೆ. ಮುಂದೆ ಒಳ್ಳೆದಾವುತ್ತು ಹೇಳಿದ ಮೇಲೆ ಇಬ್ರಿಂಗೂ ನೆಮ್ಮದಿ. ರೋಗಿಗೊ ಬಯಸಿದ್ದು ಹಾಲು, (ಗುರು) ವೈದ್ಯರು ಕೊಡುಲೆ ಹೇಳಿದ್ದು ಹಾಲು. ಇಬ್ರ ಹಗಲು ಕನಸುಗೊ ನಿಜವಾತು!   ಮನಸ್ಸಿದ್ದರೆ ಮಾರ್ಗ ಹೇಳುತ್ತವು. ಎರಡು ಮನೆಯೋರೂ ಮನಸ್ಸು ಮಾಡಿ ಮಕ್ಕಳ ಆಸೆಯ ನೆರವೇರುಸಿದ್ದರಿಂದ ಊರಿಂಗೂ ಒಳ್ಳೆದಾತು!

No comments:

Post a Comment