Friday, May 3, 2013

karmanye vadhikaraste

                                                               ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಭಗವದ್ಗೀತೆಲ್ಲಿ ಶ್ರೀಕೃಷ್ಣ ಅರ್ಜುನಂಗೆ ಹೇಳಿದ್ದು ಹೀಂಗಲ್ಲದೋ! ಯುದ್ಧ ಮಾಡುಲೆ ಮನಸ್ಸಾಗದ್ದೆ ಬಿಲ್ಲು ಬಾಣಂಗಳ ಕೆಳ ಮಡಗಿಪ್ಪಗ ಅವಂಗೆ ದೇವರು ಅಪ್ಪಣೆ ಕೊಟ್ಟದು ಹೀಗೆನ್ನೆಅಲ್ಲಿ ಅರ್ಜುನಂಗ ಹೇಳಿದ್ದಾದರೂ ಎಲ್ಲೋರಿಂಗೂ ಅನ್ವಯಿಸುವ ಬುದ್ಧಿ ಮಾತುದೇ ಆವುತ್ತನ್ನೆ!
   .ಈ ಭೂಮಿಲ್ಲಿ ಹುಟ್ಟಿ ಬಂದ ಆರುದೇ ಅವರವರ ಕರ್ತವ್ಯವ ಮಾಡಿಯೇ ತೀರೆಕ್ಕು. ಅಂತೇ ತಿಂದು ತಿರುಗುವೋವು ಇಲ್ಲೆ ಹೇಳಿ ಅಲ್ಲ. ಕರ್ತವ್ಯದ ಬಗ್ಗೆ ತಿಳುದೋರು ಇದಕ್ಕೆ ತಪ್ಪುಲೆ ಗೊಂತಿಲ್ಲೆ. ನಮ್ಮ ಮುಖ್ಯ ಅಗತ್ಯಂಗೊ ಯಾವುದು? ಅಶನ ವಸನ ವಸತಿ ಈ ಮೂರು ಇಲ್ಲದ್ದೆ ಮರ್ಯಾದೆಲ್ಲಿ ಬದುಕ್ಕುಲೆಡಿಯ.ಕರ್ಮ ಮಾರ್ಗವ ಅನುಸರುಸುವ ಕರ್ಮ ಜೀವಿಗೊ ನಾವಪ್ಪಗ ಅನ್ಯಥಾ ಯೋಚನೆ ಮಾಡುಲಿದ್ದೋ?
ನಾವು ಬದುಕ್ಕೆಕ್ಕಾರೆ, ನಮ್ಮ ದೇಹ ಹೇಳುವ ಯಂತ್ರ ಕಾರ್ಯವೆಸಗೆಕ್ಕಾರೆ ಯಂತ್ರಕ್ಕೆ ಪೆಟ್ರೋಲ್ ಹೇಂಗೋ ಹಾಂಗೆಹೊಟ್ಟಗೂ ಇಂಧನ ಹಾಕೆಕ್ಕನ್ನೆ. ಇಂಧನವಾಗಿ ನಾವು ಉಪಯೋಗುಸುವ ಆಹಾರದ ವಿಷಯಲ್ಲಿ ಸ್ವಾವಲಂಬನೆ ಮದಲು ಇದ್ದತ್ತು. ಈಗ ಎಲ್ಲ ಅಂಗ್ಡಿಲ್ಲಿ ಸಿಕ್ಕುತ್ತು. ಉದ್ಯೋಗ ಇದ್ದರೆ ದುಡ್ಡು ಕೊಟ್ಟು ತೆಕ್ಕೊಂಬಲಕ್ಕು. ಆದರೆ ಎಲ್ಲದಕ್ಕೂ ಇನ್ನೊಬ್ಬನ ಅವಲಂಬುಸೆಕ್ಕಾಗಿ ಬತ್ತು. ಉಂಡ ಉಪ್ಪಿನ ಕೆಲಸ ಹೇಳಿ  ರಜ ಭೂಮಿ ಇದ್ದೋರು ಬ್ರ್ವರು ಸುರಿಸಿ ಕೆಲಸ ಮಾಡಿದರೆ ದೇಹ ಶ್ರಮಂದ ವ್ಯಾಯಾಮವೂ ಸಿಕ್ಕಿದ ಹಾಂಗೆ ಆವುತ್ತು. ಒಟ್ಟಿಂಗೆ ಬೇಕಾದ್ದರ ಬೆಳದ್ದೆ ಹೇಳುವ ತೃಪ್ತಿಯೂ ಬತ್ತು.ಮತ್ತೆ ಉಡುವ ವಸ್ತ್ರ, ಇಪ್ಪಲೊಂದು ಮನೆ ಇಷ್ಟು ಇದ್ದರೆ ಜೀವನಕ್ಕೆ ಸಾಕಲ್ಲದೋ! ಮುಂಬದು ಒಂದು ಕಡೆಲ್ಲಿ ,ಮನುಗುವದು ಇನ್ನೊಂದು ಕಡೆಲ್ಲಿ ಅಪ್ಪಲಾಗ! ಸ್ವಾವಲಂಬನೆ ಮುಖ್ಯ.
 ಇಲ್ಲಿ ನಮ್ಮ ಕಾಲ ಮೇಲೆ ನಿಂಬ ವಿಷಯಲ್ಲಿ ಸಣ್ಣಾಗಿಪ್ಪಗ ತೊಡಗಿ ಏನಾದರೊಂದು ಸ್ವಂತ ಸಂಪಾದನೆ ಮಾಡಿಗೊಂಬ ವರೆಗೆ ಅಮ್ಮ ಅಪ್ಪನ ಹೆರಿಯೋರ ಆಶ್ರಯಿಸಿಗೊಂಡರೆ ಮತ್ತೆ ನಮ್ಮ ಕಾಲಿಲ್ಲಿ ನಿಂಬ ಆದಹಾಂಗೆ ಆದಮೇಲೆ ಎಲ್ಲವನ್ನೂ ನಾವೇ ಹೊಂದುಸಿಗೊಳ್ಳೆಕ್ಕಾವುತ್ತು. ಇಲ್ಲಿ ವರೆಗೆ ಪೋಷಣೆ ಮಾಡಿದೋರು ಮುದುಕರಾದರೆ ಅವಕ್ಕೆ ಗೈವಲೆಡಿತ್ತಿಲ್ಲೆ. ಆರೋಗ್ಯವೂ ಹಾಳಾದರೆ ನಮ್ಮನ್ನೇ ಅವಲಂಬಿಸಿರೆಕ್ಕಾವುತ್ತು. ಅವರ ನೋಡಿಗೊಂಬದು ನಮ್ಮ ಧರ್ಮ!.ನಮ್ಮಂದ ಹೆಚ್ಚು ಅವಕ್ಕೆ ಸೌಕರ್ಯ ಮಾಡಿಕೊಟ್ಟರೆ, ಅವಕ್ಕೂ ಸಮಾಧಾನ, ನವಗೂ ಕೃತಜ್ಞತೆ ಇದ್ದ ಹಾಂಗೆ ಆವುತ್ತು.ಅದು ನಮ್ಮ ಧರ್ಮವೂ ಅಪ್ಪು.
ಜವಾಬ್ದಾರಿ ಬಂದದರ ಸಮರ್ಥವಾಗಿ ನಿಭಾಯಿಸಿಗೊಂಡು ಹೋಪಲೂ ಚಾಕಚಕ್ಯತೆಯೂ ಬೇಕು. ನಾವು ಹೆರಿಯೋರ ನೋಡಿಗೊಂಬ ಹೊಣೆಗಾರಿಕೆಯ ನೋಡಿಗೋಬದರ ನಮ್ಮ ಮಕ್ಕಳು ನೋಡಿ ಕಲಿತ್ತವು. ಇದು ತಲೆ ತಲಾಂತರಂದ ನಡಕ್ಕೊಂಡ ರೀತಿ. ನಮ್ಮ ಕರ್ತವ್ಯ ಧರ್ಮ!.ದೇಹಲ್ಲಿ ಕೈ ಕಾಲುಗಳಿಂದ ಹೆಚ್ಚು ತಲೆಯು ಬೇಕನ್ನೆ. ಎಲ್ಲೋರನ್ನೂ ಸೆಲ್ಲವನ್ನೂ ಸಮಧರುಸಿಗೊಂಡು ಹೋಪದು ಹೇಳಿದರೆ ತುಂಬ ಕಷ್ಟದ ಕೆಲಸ! ನಮ್ಮ ಹಾಂಗೆ ಕುಟುಂಬ ಜವಾಬ್ದಾರಿ ಸಹಧರ್ಮಿಣಿಗೂ ಬೇಕಾವುತ್ತು. ಹೀಂಗೆಲ್ಲ ಒಟ್ಟೊಟ್ಟಿಂಗೆ ಜೊತೆ ಜೊತೆಯಾಗಿ ಹೋಪಗ ಒಬ್ಬಕ್ಕೊಬ್ಬ ಸಮಜಾಯಿಸಿಗೊಂಡು ಹೋದರೆ ಕುಟುಂಬ ಜೀವನ, ನಮ್ಮ ಜೀವನ ಯಾತ್ರೆ ಸುಖವಾಗಿಕ್ಕು. ದೇಹದ ಬ್ಯಾವುದೇ ಅಂಗಕ್ಕೆ ತೊಂದರೆ ಆದರೂ ದೇಹದ ಇತರ ಭಾಗಂಗೊಕ್ಕೂ ಅದರ ನೋವು ಚಿಂತೆ ಇರುತ್ತನ್ನೆ.ಕುಟುಂಬಲ್ಲಿ ಆರೊಬ್ಬಂಗೆ ಸೌಖ್ಯ ಇಲ್ಲದ್ದೆ ಆದರೂ ಎಲ್ಲೋರಿಂಗೂ ಬೇಜಾರಾವುತ್ತಿಲ್ಲೆಯೋ? ಆಯೆಕ್ಕು. ಅದನ್ನೇ ಬೇನೆ ಬೇಸರಿಕೆಲ್ಲಿ ಸಮಾನ ಭಾವನೆ ಬಂದರೆ ಸಮಾಧಾನ ಸಂತೈಕೆ ಇದ್ದರೆ ಕುಟುಂಬ ಹಾಲುಂಡ ಸುಖ ಜೀವನ ತಕ್ಕು.
         ಭೂಮಿಲ್ಲಿ ಹುಟ್ಟಿ ಬಂದ ನಾವು ಮತ್ತೆ ಮತ್ತೆ ಹುಟ್ಟಿ ಸಾಯುತ್ತು ಹೇಳುವದರ ಜ್ಞಾನಿಗೊ ಹೇಳಿದ್ದವು. ಪ್ರಕೃತ ಇಪ್ಪ ನಾವು ಹೊಂದಿಗೊಂಡು ಬದುಕ್ಕಿದರೆ ಜೀವ ಕಷ್ಟ ಹೇಳಿ ತೋರ!ಒಬ್ಬ ಕೂದು ತಿಂಬದು ಒಳುದೋರು ದುಡಿವದು ಹೇಳಿ ಅಪ್ಪಲಾಗ. ಒಬ್ಬೊಬ್ಬ ಒಂದೊಂದು ಕೆಲಸ ಮಾಡಿದರೆ ಕೆಲಸ ಹೇಳುವದು ಹೂವೆತ್ತಿದ ಹಾಂಗಾವುತ್ತಿಲ್ಲೆಯೋ? ನೆಟ್ಟು ಬೆಳೆಶಿದೋವಕ್ಕೆ ಹೂಗು ಕೊಇವಲೆ ಮನಸ್ಸು ಬಾರ! ಬಾಕಿದ್ದೋರಿಂಗೆ ಆಚಿಂತ ಇದ್ದೋ? ಈ ಭೂಮಿಲ್ಲಿ ಹುಟ್ಟಿ ಬಂದ ಮೇಲೆ ಇಲ್ಲಿ ನಾವು ಮಾಡೆಕ್ಕಾದ ಕರ್ಮಂಗೊಕ್ಕೆ ಮಾಂತ್ರ ಹಕ್ಕುದಾರರು. ಆರಿಂಗೋ ಬೇಕಾಗಿ ಅಲ್ಲ ನವಗೆ ಬೇಕಾಗಿ ನಾವು ಮಾಡಿದ್ದರ ನಾವು ತಿಂತು. ಮಾಡಿದ್ದುಣ್ಣೋ ಮಹಾರಾಯ ಹೇಳಿದ ಹಾಂಗೆ! ಜೀರೆಕ್ಕಿ ಬಿತ್ತಿ ಓಮ ಬೆಳವಲೆಡಿಗೊ? ಹಿಂದಾಣೋರು ಹೇಳಿದ್ದೂ ಹಾಂಗೆ ದುಡುದು ತಿನ್ನು ಹೇಳಿ. ಕೂದು ತಿಂಬೋರಿಂಗೆ ತಂದದು ಮುಗಿವನ್ನಾರ ನಿಶ್ಚಿಂತೆ! ಮತ್ತೆ ಹುಡುಕ್ಕುಲೆ ಹೋಯೆಕ್ಕು. ಅದರಿಂದಲೇ ಕೆಲಸಲ್ಲಿ ಉದಾಶಿನಂದ ಆರೋ ಬೆಳದ್ದರ, ಕೂಡಿ ಮಡಗಿದ್ದರ ಕದ್ದು ಕೊಂಡು ಹೋಪದು. ಪಾಪದ ಫಲವೂ ಒಟ್ಟಿಂಗೆ ಅವಕ್ಕೆ ಗೊಂತಿಲ್ಲದ್ದ ಹಾಂಗೆ ಅವಕ್ಕೆ ಸಿಕ್ಕುತ್ತು.
      ಪ್ರತಿಯೊಂದು ಜೀವ ರಾಶಿಗೂ ಒಂದೊಂದು ಪಾಸ್ ಬುಕ್ ಇರುತ್ತಡೊ. ಅದರಲ್ಲಿ ನಾವು ನಮ್ಮ ಜೀವನಲ್ಲಿ ಮಾಡಿದ ಒಳ್ಳೆ ಕೆಲಸಂಗೊ ಪುಣ್ಯ ಫಲವನ್ನೂ ಕೆಟ್ತ ಕೆಲಸಂಗೊ ಪಾಪದ ಫಲವನ್ನೂ ನಮ್ಮ ಲೆಕ್ಕಕ್ಕೆ ಸೇರುಸಲಿದ್ದಡೊ. ಪುಣ್ಯ ಕಾರ್ಯಂಗಳಿಂದ ಬಪ್ಪ ಲಾಭವೋ ಕೆಟ್ಟ ಕಾರ್ಯಂಗಳಿಂದ ಬಪ್ಪ ಪಾಪದ ಲೆಕ್ಕಲ್ಲಿ ಹೆಚ್ಚು ಕಡಮ್ಮೆ ಆಗಡೊ. ಎರಡು ಫಲಂಗಳನ್ನೂ ಅನುಭವಿಸುವ ಹಕ್ಕು ಮಾಂತ್ರ ಪ್ರತಿಯೊಬ್ಬಂಗೂ ಇದ್ದಡೊ.ಅಂತೂ ಜನ್ಮಾಂತರದ ಪುಣ್ಯ ಕೆಲಸಂಗೊ ನವಗೇ ಮತ್ತಾಣ ಜನ್ಮಲ್ಲಿ ಐಹಿಕ ಸುಖ ಭೋಗ ನೆಮ್ಮದಿ, ದುಃಖಂಗಳ ಕೊಡುವದು ಹೇಳಿದರೆ ಎಲ್ಲ ಚಾಚೂ ತಪ್ಪದ್ದೆ ಅವಂಗವಂಗೆ ಅನುಭವಿಸುವ ಯೋಗ ಬಂದೇ ತೀರುತ್ತಡೋ. ಪ್ರತ್ಯಕ್ಷ ಪರೋಕ್ಷ ಫಲಂಗೊ ನವಗೆ ಗೊಂತಿಲ್ಲದ್ದೆ ಅನುಭವಕ್ಕೆ ಬಪ್ಪದು . ಅದನ್ನೇ ಪರೋಕ್ಷವಾಗಿ ಎಲ್ಲ ಕರ್ಮ ಫಲಂಗಳ ಕೊಟ್ಟೇ ತೀರುತ್ತ. ಬಾಕಿಮಾಡುತ್ತ ಇಲ್ಲೆ ಹೇಳುವದು ತಾತ್ಪರ್ಯ!
ಕರ್ಮ ಮ್ಡುವದು ನಮ್ಮ ಧರ್ಮ. ಫಲಾಫಲ ಅದು ದೇವರಿಂಗೆ ಬಿಟ್ಟದು! ದೇವರು ಒಂದು ಅವ್ಯಕ್ತ ಶಕ್ತಿ. ಎಲ್ಲವನ್ನೂ ಸೃಷ್ಟಿ ಮಾಡಿಕ್ಕಿ ನಮ್ಮನ್ನೂ ಸೃಷ್ಟಿ ಮಾಡಿದೋನು ಅವ. ಮಕ್ಕೊಗೆ ಆಟದ ಸಾಮಾನು ತಂದು ಕೊಟ್ಟು ಅವರಷ್ಟಕ್ಕೆ ಬಿಟ್ಟರೆ ಎಂತ ಮಾಡುತ್ತವು ಗೊಂತಿದ್ದನ್ನೆ. ಕೆಲವು ಮಕ್ಕೊ ಬೇರೆ ಮಕ್ಕಳ ಸೇರುಸ್ಯೊಂಡು ಆಡುಗು. ಇನ್ನು ಹತ್ತರೆ ಬಂದೋರ ಬೈದು ಅಟ್ಟುವ ಮಕ್ಕಳೂ ಇದ್ದವು. ಅಂತೆ ಎನ್ನತ್ರೆ ಹೇಳಿ ಆಡ್ಲರಡಿಯದ್ದೆಯೋ. ಉದಾಶೀನಂದಲೋ ಜಾಗ್ರತೆ ಮಾಡ್ಳೋ ಸುಮ್ಮನೆ ಚೆಂದ ನೋಡ್ಯೋಂಡೋ ಇಪ್ಪ ಮಕ್ಕಳೂ ಇಕ್ಕು. ನಾವು ಆಡಿದ್ದು ಸರಿ ಆಯಿದು. ಅವ ತಪ್ಪು ಆಡಿದ್ದ. ಅವಂಗೆಂತದೂ ಗೊಂತಿಲ್ಲೆ ಹೇಳಿಯೋ ಬೇರೆಯೋರ ನೋಡಿ ತಮಾಶೆ ಮಾಡುವೋವೂ ಇಕ್ಕು. ಒಬ್ಬಕ್ಕೊಬ್ಬನ ತಾಂಟುಸಿ ಹಾಕಿ ಜಗಳ ಮಾಡುವದರ ನೋಡಿ ಸಂತೋಷ ಪಡುವೋರೂ ಇಕ್ಕು. ಆದರೆ ಮೆಚ್ಚುವದು ಆರ್ತ ಹೇಳುವದು ಪ್ರಶ್ನೆ. ಮನೆಯೊಳದಿಕ್ಕೇ ಇಪ್ಪ ( ಈಗ ಕೂಡು ಕುಟುಂಬ ಇಲ್ಲೆನ್ನೆ)ಬೇರೆ ಮನೆಂದ ಮಕ್ಕಳೋಟ್ಟಿಂಗೆ ಹೇಂಗಿರುತ್ತವು ಹೇಳುವದರ ನೋಡಿ ನಮ್ಮ ಮಕ್ಕಳ ಚಾಕಚಕ್ಯತೆಯ ಮೆಚ್ಚಿಗೊಂಡರೆ ಸಾಲ! ನಿಜವಾದ ಮಾನವ ಧರ್ಮವ ಪಾಲುಸುವ ಮಕ್ಕಳ ಸಣ್ಣಾಗಿಪ್ಪಗಳೇ ನೋಡಿದರೆ ಗೊಂತಕ್ಕಡೊ. ಬೆಳೆಯ ಗುಣ ಮೊಳಕೆಲ್ಲಿ" ಗೊಂತಾವುತ್ತನ್ನೆ. ಅವರವರ ಹಣೆ ಬರಹವ ತಿದ್ದುಲೆಡಿಯದ್ದರೂ ಏನಾದರೂ ಸಣ್ಣ ಮಟ್ಟಿನ ರಿಪೇರಿ ಮಾಡಿದರೆ  ಮುಂದಾಣ ಸಮಾಜ ಒಳ್ಳೆದಕ್ಕೋ ಏನೋ!

No comments:

Post a Comment