Friday, May 3, 2013

nerekare outana

                                     ನೆರೆ ಕರೆ ಮನೆಗೆ ಹೋಗಿ ಔತಣ ಉಂಡದು                         

ಎಂಗೊ ಮನೆಂದ ಹೆರಡುವಗ ಪಿರಿ ಮಳೆ ಸುವಾತು. ಬರೇ ಒಂದು ಕಿ ಮೀ ಅಲ್ಲದೋ ಎಂಗೊ ನಡಕ್ಕೊಂಡೇ ಬಪ್ಪಲೆ ಒಪ್ಪಿಗೊ<ಡಿದೆಯೊ.ಮಗನೂ ಪುಳ್ಳಿಯುದೆ ಯಕ್ಷಮಿತ್ರದ ವರ್ಕ್ ಶೋಪಿಂಗೆ ಹೋಗಿತ್ತಿದ್ದವು. ಎಲ್ಲೋರು ಒಟ್ಟಿಂಗೆ ಹೋಪಲೆ ಹಾಂಗೆ ತೊಂದರೆ ಆತು. ಅವು ಮನೆಗೆ ಬಂದು ಎಲ್ಲ ಒಟ್ಟಿಂಗೆ ಹೋಪಲೆ ಕಾದು ಕೂದರೆ ತಡವಕ್ಕು ಹೇಳಿ ನಡಕ್ಕೊಂಡು ಹೋಪಲೆ ಒಪ್ಪಿಗೊಂಡದು
 ಆ ದಾರಿಯಾಗಿ ಎಂಗೊ ಯಾವಗಳೂ ವಾಕಿಂಗ್ ಹೋಪ ಜಾಗೆ. ಆದರೆ ಆ ಮನೆಗೆ ಎಂಗೊ ಇಬ್ರು ಹೋಗದ್ದರಿಂದ ಇಂದು ಹೋಪದು ಸುರು. ಒಟ್ಟಿಂಗೆ ಸೊಸೆ ಇದ್ದ ಕಾರಣ ಮನೆ ಹುಡುಕ್ಕೆಡ.೬ ಗಂಟೆಗೆ ಮನೆಂದ ಹೆರಡುಲೆ ಲೆಕ್ಕ ಹಾಕಿದ್ದು. ಆದರೆ ಮಳೆ ಇದ್ದ ಕಾರಣ ಹೇಂಗಪ್ಪ ನಡದು ಹೋಪದು ಹೇಳಿ ಯೋಚನೆ ಆತು.ಸೊಸೆ ಆ ಮನೆಗೆ ಫೋನ್ ಮಾಡಿ " ಮಳೆ ಬತ್ತನ್ನೆ ಹೇಂಗಪ್ಪ ಬಪ್ಪದು ಹೇಳಿತ್ತು.ಮದಲೆ ಅವೆ ಫೋನ್ ಮಾಡಿ ಬರೆಕ್ಕೋ ಕೇಳಿದ್ದಕ್ಕೆ ಸುಮ್ಮನೆ ಅವಕ್ಕೆ ತೋದರೆ ಬೇಡ ಹೇಳಿ " ಬೇಡ ಎಂಗೊ ನಡಕ್ಕೊಂಡೆ ಬತ್ತೆಯೋ" ಹೇಳಿತ್ತಡೊ. ಈಗ ನಿವೃತ್ತಿ ಇಲ್ಲೆ. ನಾಮೋಸು ಬಿಟ್ಟು " ಎಂಗೊ ಬರೆಕ್ಕಾರೆ ಕಾರು ತೆಕ್ಕೊಂಡು ಬನ್ನಿ" ಹೇಳೆಕ್ಕಾಗಿ ಬಂತು. ಆದರೆ ಎರಡು ಮನೆಯೋರುದೆ ತುಂಬ ಅನ್ಯೋನ್ಯ ಇದ್ದ ಕಾರಣವೇ ಎಂಗಳ ಅವರ ಮನೆಗೆ ಊಟಕ್ಕೆ ಬಪ್ಪಲೆ ಹೇಳಿತ್ತಿದ್ದವು. ಈ ಪರಿಸರಲ್ಲಿಯೇ ಐದಾರು ಕನ್ನಡಿಗರ ಮನೆಗೊ ಇದ್ದು.
       ಊರು ಬಿಟ್ಟು ಪರದೇಶಕ್ಕೆ ಬಂದ ಕನ್ನಡಿಗರು ಬೇರೆ ಬೇರೆ ಹಬ್ಬಂಗಳ ಒಟ್ಟಿಂಗೆ ಸೇರಿ ಆಚರುಸವದು ಪದ್ಧತಿಯೇ ಆಯಿದು ಹೇಳುಲಕ್ಕು. ಹಬ್ಬ ಹರಿದಿನಂಗಳ ಪರಿಚಯ ಮಕ್ಕೊಗೂ ಸಿಕ್ಕೆಕ್ಕು ಹೇಳುವದು ಇವರ ಆಸೆ. ಯುಗಾದಿ ದಿನವೇ ಅಲ್ಲದ್ದರೂ ಒಂದು ವಾರದ ಕೊನೆಗೆ ಎಲ್ಲೋರು ಒಂದು ಕಡೆ ಸೇರಿ ವಿವಿಧ ಕಾರ್ಯಕ್ರಮಂಗಳ ಹಮ್ಮಿಗೊಳ್ಳುತ್ತವು.ಮಕ್ಕೊಗೂ ಕನ್ನಡದ ಹಾಡು ಹಾಡುಲೆ ಇಷ್ಟ ಹೇಳಿ ಕಾಣುತ್ತು. ಕೋಲೇಜು ಮೆಟ್ಳು ಹತ್ತಿದ ಮಕ್ಕೊ ಬಪ್ಪದು ಕಡಮ್ಮೆ, ಆದರೆ ಮಕ್ಕೊ ಇದ್ದಲ್ಲಿಂಗೆ ಸಂದರ್ಷನಕ್ಕೆ ಬಪ್ಪೋವಕ್ಕೆ ಹೆಚ್ಚಿನ ಕನ್ನಡಿಗರ ಕಾಂಬಲೆಡಿತ್ತು. ಇಲ್ಲಿಯಾಣೋವು"ಅನ್ಕ್ಲ್ ಆಂಟಿ"ಹೇಳಿ ತುಂಬ ಪ್ರೀತಿಂದ ಮಾತಾಡುಸುತ್ತವು. ಮನ್ನೆಯಾಣ ಕಾರ್ಯಕ್ರಮಕ್ಕೆ ಮುನ್ನೂರರಿಂದ ಮುನ್ನೂರ ಐವತ್ತರ ವರೆಗೆ ಜನ ಸೇರಿತ್ತಿದ್ದವು.
ಹಾಂಗೆ ಎಂಗಳ ಹಾಂಗೆ ಬಂದೋರ ಅವರ ಮನೆಯೋರ ಹಾಂಗೆ ಮನೆಗೆ ಊಟಕ್ಕೆ ಬಪ್ಪಲೆ ಹೇಳುವದು ಕ್ರಮ. ಬಂದೋರ ಆದರುಸಿ ಸತ್ಕರಿಸುವ ಭಾರತೀಯ ಸಂಪ್ರಸಾಯವ ಒಳಿಶಿಗೊಂಡಿದವು.ಅವಕ್ಕು ಒಂದರಿ ಊರ ಶುದ್ದಿ ಮಾತಾಡಿದ ಹಾಂಗೂ ಆವುತ್ತನ್ನೆ!.
                       ಮಳೆ ಬಿಡದ್ದ ಕಾರಣ ಆ ಮನೆಯೋನು ಎಂಗಳ ಮನೆಗೆ ಕಾರು ತೆಕ್ಕೊಂಡು ಬಂದ. ಆನು ಇಲ್ಲಿಗೆ ಬಂದ ಮರದಿನವೇ ಅವನ ನೋಡಿತ್ತಿದ್ದೆ. ಮಗ ಮನೆ ತೆಕ್ಕೊಂಡು ಒಂದು ತಿಂಗಳಿಲ್ಲಿ ಅವ ಇಲ್ಲಿಗೆ ಬಂದಿದ್ದಡೊ. ಕೆನಡಕ್ಕೆ ಬಂದು ಹತ್ತಿಪ್ಪತ್ತು ವರ್ಷ ಕಳಾತಡೊ. ಬೇರೆಲ್ಲಿಯೋ ಬಾಡಿಗೆ ಮನೆಗಳಲ್ಲಿ ಇದ್ದೋರು ಈಗ ಸ್ವಂತ ಕೊಂಡುಕೊಂಡದಡೊ.
ಕೆನಡಲ್ಲಾಗಲಿ ಅಮೇರಿಕಲ್ಲಾಗಲಿ ಮನೆಗೊ ಹೆಚ್ಚಾಗಿ ಮರಂದಲೇ ಕಟ್ಟಲ್ಪಟ್ಟದು.ಹೆರಾಣ ಆಕಾರಲ್ಲಿಯೋ, ಗಾತ್ರಲ್ಲಿಯೋ ಹೆಚ್ಚು ಕಡಮ್ಮೆ ಇಕ್ಕು. ಹೆಚ್ಚಾಗಿ ಮನೆ ಹಿಂದಿಗಡೆ ಬೇಕ್ ಯಾರ್ಡ್ ಹೇಳಿ ಇರುತ್ತು. ಒಂದೋ ಎರಡೋ ಮರಂಗೊ ಸಣ್ಣದು ಇಪ್ಪದಿದ್ದು. ಮತ್ತೆಲ್ಲ ಜಾಗೆಲ್ಲಿ ಲಾನ್ ಹುಲ್ಲು. ಎದ್ದ ಕೂಡ್ಳೇ ಹಸುರು ಬಣ್ಣವೇ ಕಾಣೆಕ್ಕು. ಶುಚಿತ್ವವೂ ಅಷ್ಟೆ. ವಾರಕ್ಕೊಂದರಿ ಮನೆಲ್ಲಿಪ್ಪ ಕಸವು,ಬೇಡದ್ದ ವಸ್ತುಗೊ, ಪೇಪರುಗಳ ಒಂದು ಪ್ಲಾಸ್ಟಿಕ್ ಬಾಸ್ಕೆಟಿಲ್ಲಿ ಹೆರ ಮಡಗಿದರೆ ಕೋರ್ಪೊರೇಶನಿನೋವು ಬಂದು ಕೊಂಡು ಹೋವುತ್ತವು. ದಾರಿಲ್ಲಿಯೂ ಕಸವು ಇಡುಕ್ಕುಲಾಗ. ಕಂಡರೆ ಫೈನ್!ಅಸಕ್ಕೆ ಆರುದೆ ಕಾನೂನು ತಪ್ಪುಯ್ಯವಿಲ್ಲೆ. ಇಲ್ಯಾಣೋವುದೆ ಶುಚಿತ್ವ ಕಾಪಾಡುವದು ಕರ್ತವ್ಯ ಹೇಳುವದರ ಪಾಲುಸುತ್ತವು. ನಮ್ಮ ಪೇಟೆಗಳಲ್ಲಿದ್ದ ಹಾಂಗೆ ಕೊಳಕ್ಕು ಕಾಂಬಲೆ ಸಿಕ್ಕ. ಅದಕ್ಕೆ ಆರೋಗ್ಯ ಕಾಪಾಡಿಗೊಂಬಲೂ ಅನುಕೂಲ. ಜಿರಳೆವ್, ಸೊಳ್ಲೆ ನೆಳವು ವಾಸ ಸ್ಥಳಂಗಳಲ್ಲಿ ಇಲ್ಲೆ.
ಜನಂಗೊಕ್ಕೆ ಉದ್ದಕ್ಕೆ ನಡಕ್ಕೊಂಡು ಹೋಪಲೆ ಹೈ ವೇ ಕರೆಲ್ಲಿ ಅಗಲದ ಕಾಲು ಹಾದಿ.ದಾರಿ ಸ್ವಚ್ಚವಾಗಿರುತ್ತು. ,ಮನೆಯೊಳದಿಕ್ಕೂ ಕ್ಲೀನ್ ಮಡಿಕ್ಕೊಂಬದು ಅವರವರ ಜವಾಬ್ದಾರಿ.ಚಳಿಗಾಲಲ್ಲಿಯೂ ಹೀಟರ್ ಹಾಕಿ ಮನೆಯೊಲ ಬೆಶಿ ಇರುತ್ತು. ಸೆಕೆಗಾಲಲ್ಲಿ ಏರ್ ಕಂಡಿಶನ್ ವ್ಯವಸ್ಥೆ! ಒಂದೊಂದು ಮನೆಗಳಲ್ಲಿ ಎರಡು ಮೂರು ಬಾತ್ ರೂಮುಗೊ. ಟೇಪ್ ತಿರುಗುಸಿದರೆ ಬೆಶಿನೀರು ಬೇಕಾದರೆ ರಜ ಹೆಚ್ಚು ತಿರುಗಿಸಿದರಾತು.ನಳ್ಳಿಲ್ಲಿ ನೀರಿಲ್ಲೆ ಹೇಳಿ ಅಪ್ಪಲೆ ಇಲ್ಲೆ.ಮನೆಯೊಳದಿಕ್ಕಾಣ ಶಬ್ದ ಹೆರಂಗೆ ಗೊಂತಾಗ!ಎಲ್ಲಿಯೋ ಒಂದೆರಡು ಮಸೀದಿ ಇದ್ದರೂ ಭಾರತಲ್ಲಿದ್ದ ಹಾಂಗೆ ಅವರ ಪ್ರಾರ್ಥನೆ ಹೆರಂಗೆ ಕೇಳ. ಬಹುಶ ಭಾರತಲ್ಲಿಪ್ಪ ಪೈಗಂಬರಂಗೆ ಕೆಮಿ ದೂರವೋ ಏನೋ!
                            ಅಂತೂ ಹತ್ತರಾಣ ಮನೆಯೊಂದಕ್ಕೆ ಅತಿಥಿಗಳಾಗಿ ಎಂಗೊ ಹೋದೆಯೊ.ಅವು ಬಳ್ಳಾರಿ ಮೂಲದೋರಡೊ.ಮನೆಯ ಯಜಮಾನಂಗೆ ಕನ್ನಡ ಗೊಂತಿದ್ದು. ಹೆಂಡತ್ತಿ ತೆಲುಗೆತ್ತಿ. ಎರಡು ಮಕ್ಕೊ. ಒಂದು ಕೂಸು ಹೆರಿದು. ಮಾಣಿ ಎರಡನೆಯವ.ಹತ್ತು ವರ್ಷ ಆತಡೊ.ಕೂಸು ಪಿ ಯು ಸಿ ಕಲ್ತಾತಡೊ.ಇನ್ನು ಡಿಗ್ರಿ ಓದುವದಡೊ. ವಿಶೇಷ ಎಂತ ಕೇಳಿದರೆ ಮಕ್ಕೊಗಿಬ್ರಿಂಗೂ ಕನ್ನಡ ಗೊಂತಿಲ್ಲೆ. ಇಂಗ್ಲಿಶಿಲ್ಲಿಯೇ ಮಾತಾಡುವದು. ಹೆಮ್ಮಕ್ಕೊ ತೆಲುಗು ಅಥವಾ ಇಂಗ್ಲಿಶ್.ಆದರೆ ಎಂಗಳ ತುಂಬಹಾರ್ದಿಕವಾಗಿ ಬರ ಮಾಡುಗೊಂಡವು.
ಹೆರ ಹೋಯೆಕ್ಕಾರೆ ಜೇಕೆಟ್ ಬೇಕು.ಒಳ ಹೋದ ಮತ್ತೆ ಕಳಚಿ ಮಡಗೆಕ್ಕು. ನಾವು ಕಳಚಿ ಅಪ್ಪಗ ಅದರ ನಮ್ಮ ಕೈಂದ ತೆಕ್ಕೊಂಡು ಹೇಂಗರಿಲ್ಲ್ ತೂಗಿದವು .ಒಳ ಕರಕ್ಕೊಂಡು ಹೋಗಿ ಲಿವಿಂಗ್ ರೂಮಿಲ್ಲಿ ಕೂರುಸಿದವು,ಕೂದಾಗಿ ರಜ ಹೊತ್ತಪ್ಪಗ ಮಗನೂ ಪುಳ್ಳಿಯೂ ಬಂದವು.ಮತ್ತೇ ಬಂತದ೧ ವಡೆಯೂ ಚಟ್ಣಿಯೂ,ಒಟ್ಟಿಂಗೆ ಕಾಫಿಯೂ. ಒಟ್ಟಿಂಗ್ ಚಕ್ಕುಲಿ ತುಂಡುಗೊ.ಒಟ್ಟಾರೆ ಅದರ ಸ್ನೇಕ್ ಹೇಳುತ್ತವು. ಜ್ಯೂಸ್ ಬೇಕೊ ಕೇಳಿದವು ಬೇಡ ಹೇಳಿದೆಯೊ. ತೆಕ್ಕೊಂಡರೆ ಅಂಬಗಳೇ ಹೊಟ್ಟೆ ತುಂಬುತೀತು. ಕಸ್ತಲಪ್ಪಗ ಹೆಚ್ಚು ತಿಂಬಲಾವುತ್ತಿಲ್ಲೆನ್ನೆ!
ಅವಂಗೆ ಒಬ್ಬ ತಮ್ಮ, ಒಬ್ಬ ಅಣ್ಣಡೊ ಇಬ್ರೂ ಊರಿಲ್ಲಿ ಕೃಷಿ ಮಾಡ್ಯೊಂಡಿಪ್ಪದಡೊ. ಹೀಂಗೆಲ್ಲ ಶುದ್ದಿ ಮಾತಾಡಿಗೊಂಡಿಪ್ಪಗ ಗಾಂಟೆ ಎಂಟಾತು.
            ಮತ್ತೂ ಕಸ್ತಲೆ ಆಯಿದಿಲ್ಲೆ. ಸರಿಯಾಗಿ ಕತ್ತಲೆ ಅಪ್ಪಗ ಎಂಟೂ ಮುಕ್ಕಾಲು ಗಂಟೆ.ಮತ್ತೆ ಇನ್ನು ಉಂಬೊ ಹೇಳಿದವು.ಮೇಜಿ ಮೇಲೆ ಎಲ್ಲ ತಂದು ಮಡಗಿದವು. ಅನ್ನ, ಚಿತ್ರಾನ್ನ, ಸಣ್ಣ ಇಡಿ ಬದನೆ ಬೇಶಿ ಗಸಿಹಾಕಿ ಮಾಡಿದ ಬೆಂದಿ, ಬೆಂಡೆ ಕಾಯಿ ಪಲ್ಯ,ಸಾರು, ಚಟ್ಣಿ,ಮೊಸರು ಉಪ್ಪಿನ ಕಾತಿ ಎಲ್ಲ ಇತ್ತು. ನಿಂದೊಂಡು ಕಷ್ಟ ಆವುತ್ತರೆ ಕುರ್ಚಿಲ್ಲಿ ಕೂದು ಉಂಬಲಕ್ಕ್ಕು ಹೇಳಿದವು.ಒಟ್ಟಿಂಗೆ ಚಪಾತಿಯೂ ಇತ್ತು. ಒಂದು ಚಪಾತಿ ತಿಂದು ಪಲ್ಯ ಬೆಂದಿಗಳ ತೆಕ್ಕೊಂಡು ಉಂಬಲೆ ಸುರು ಮಾಡಿದೆಯೊ.ದಾಕ್ಷಿಣ್ಯ ಮಾಡೆಡಿ ಹೇಳಿಗೊಂಡವು. ಹಾಂಗೆ ಕಾಲು ಗಂಟೆ ಹೊತ್ತಿಲ್ಲಿ ಊಟವು ಮುಗುತ್ತು.
ಮತ್ತೆ ಬಂತದ ಗಸ ಗಸೆ ಪಾಯಸ. ಇದ್ದು ಹೇಳಿ ಮದಲೇ ಗೊಂತಾಗಿದ್ದರೆ ಹೊಟ್ಟೆಲ್ಲಿ ಜಾಗ ಮಡಿಕ್ಕೊಂಬಲಾವುತ್ತಿತ್ತು. ಅಂತೂ ಬಿಡ್ಳೆ ಮನಸ್ಸಾಗದ್ದೆ ಅದನ್ನೂ ಹೊಟ್ಟಗೆ ತುಂಬುಸುಇ ಆತು.ಹೋಪಗ ಕಾಲಿ ಕಾಲಿ ಕೈಲಿ ಹೋಪದೆಂತಕ್ಕೆ ಹೇಳಿ ಸೊಸೆ ಕಾಜು ಬರ್ಫಿ ತೆಕ್ಕೊಡು ಹೋಗಿತ್ತಿದ್ದು. ಅದರ ತೆಕ್ಕೊಂಡು ಬಂದವು. ಅದರ ಎಂಗೊ ನಾಳೆ ಬಂದು ತಿಂಬೆಯೊ. ಇಂದು ಹೊಟ್ಟೆಲ್ಲಿ ಜಾಗೆ ಇಲ್ಲೆ. ವಾಕಿಂಗೆ ಬಂದಿಪ್ಪಗ ಬತ್ತೆಯೋ ಹೇಳಿದೆ. ಆದರೆವ್ ಎಂಗೊ ವಾಕ್ ಹೋಪ ಹೊತ್ತಿಲ್ಲಿ ಅವು ಮನೆಲ್ಲಿರಿತ್ತವಿಲ್ಲೆ ಹೇಳುವದು ಗೊಂತಿದ್ದ ಕಾರಣ ಅವು ನೆಗೆ ಮಾಡಿದವು!ಹತ್ತು ಗಂಟೆಗೆ ಅಲ್ಲಿಂದ ಹೆರಟು ಮನೆಗೆ ಬಂದು ಮನುಗುವಗ ಹತ್ತೂವರೆ. ಮರದಿನ ಮಕ್ಕೊಗೆಲ್ಲ ಹೋಪಲಿದ್ದು. ಎಂಗೊಗೆ ೫ ಗಂಟೆಗೆ ಎದ್ದು ಯೋಗ ಮಾಡುಲಿದ್ದಲ್ಲದೋ. ಮನುಗಿದ ಕೂಡಲೇ ಒರಕ್ಕು ಬಂತು.
    

No comments:

Post a Comment