Sunday, July 29, 2012
ಅಯ್ಯಯ್ಯೋ ಉಳಪ್ಪ
ಮೂಗು ಸಂಬಳ
ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಶಂ| ಅನೇಕದಂತಂ ಭಕ್ತಾನಾಂ ಏಕ ದಂತಮುಪಾಸ್ಮಹೇ||
ಯಾವ ಕೆಲಸಕ್ಕೂ ಮದಲು ನಮ್ಮ ಗಣಪತಿಯ ಪ್ರಾರ್ಥಿಸಿಗೊಂಬದು ಸಂಪ್ರದಾಯ! ನಮ್ಮ ಕೆಲಸಕ್ಕೆ ಯಾವ ವಿಘ್ನವೂ ಬಪ್ಪಲಾಗ ಅಲ್ಲದೋ? ಈ ಶ್ಲೋಕಲ್ಲಿ ಎಂತ ಹೇಳುತ್ತು? ಅಗಜೆ ಹೇಳಿರೆ ಪಾರ್ವತಿ ಅಲ್ಲದೋ? ಪಾರ್ವತಿ ದೇವಿಯ ಪದ್ಮದಂತಹ ಮೋರೆಗೆ ಸೂರ್ಯನ ಹಾಂಗಿಪ್ಪೋನು ಮಗ ಗಣಪತಿ. ಪಾರ್ವತಿಯ ಮಾನಸ ಪುತ್ರ ಅಲ್ಲದೋ! ಗೊಂತಿಲ್ಲದ್ದೆ ತಲೆ ಕಡುದು, ಮತ್ತೆ ಬದುಕ್ಕುಸುಲೆ ಆನೆ ತಲೆಯ ತಂದು ಮಡಗಿದ್ದಡೊ ಶಿವ. ತಲೆ ಕಡುದಾಗಿ ಹೋಯಿದು. ಮತ್ತೆ ಹೇಂಗಾದರೂ ಪಾರ್ವತಿ ಹತ್ರೆ ರಾಜಿ ಮಾಡಿಗೊಳ್ಳೆಕ್ಕನ್ನೆ. ಎಲ್ಲಿಂದಲೋ ಶಿವನ ಗಣಂಗೊ ತಂದುಕೊಟ್ಟ ಆನೆ ತಲೆಯ ಜೋಡುಸಿಯೂ ಆತು. ಮತ್ತೆ ಒಂದು ಲೆಕ್ಕಲ್ಲಿ ದೇವರ ಗುರ್ತ ಎಂತ ಕೇಳಿರೆ ಅವಂಗೆ ಆನೆ ತಲೆ ಹೇಳುವಗ ಗುರ್ತ ಹಿಡಿವಲೂ ಒಳ್ಳೆದೇ ಆತು. ಹಾಂಗೆ ಅಹರ್ನಿಶಿಯೂ ಅವ ಗಜಾನನ ಆದ. ಅನೇಕ ದಂತಂಗೊ,ಹಲ್ಲುಗೊ ಅವನ ಭಕ್ತರಿಂಗೆ ಇದ್ದರೂ ಅವಂಗೆ ಒಂದೇ ಹಲ್ಲು (ದಾಡೆ) ಇಪ್ಪದಡೋ. ಅಂಬಗ ನಿಂಗೊ ಕೇಳದ್ದೆ ಇರೆಯಿ. ಆನೆಗೆ ಎರಡು ದಾಡೆ ಇಪ್ಪದಲ್ಲದೋ? ಗಣಪತಿಗೆ ಒಂದೇ ಹಲ್ಲು ಆದ್ದು ಹೇಂಗೆ? ಸರಿ ಒಂದು ದಾಡೆಯ ಚಂದ್ರನ ಮೇಲೆ ಕೋಪ ತಡೆವಲಡಿಯದ್ದೆ ಮುರುದು ಚಂದ್ರನ ಮೇಲಂಗೆ ಇಡುಕ್ಕಿದ್ದಡೊ. ಅಂತು ಗಣಪತಿ ಇದ್ದ ಎರಡು ಹಲ್ಲುಗಳಲ್ಲಿ ಒಂದರ ಕಳಕ್ಕೊಂಡ. ಆದರು ಒಂದೂವರೆ ಹಲ್ಲು ಆಯೆಕ್ಕಾತು. ಅರ್ಧ ಹಲ್ಲು ಎಂತಾತೊ! ಆದರು ಗಣಪತಿ ಏಕದಂತಡೊ. ಆನೆಯ ಮೋರೆ ಆದರೂ ದಾಡೆ ಒಂದೇ ಒಳುದ್ದದು. ಹಾಂಗೆ ಅನೇಕ ಹಲ್ಲುಗೊ(೩೨) ಇಪ್ಪ ಭಕ್ತರೆಲ್ಲ ಸೇರಿ ಏಕದಂದಂತನಾಗಿಪ್ಪ ನಿನ್ನ ಉಪಾಸನೆ ಮಾಡುತ್ತೆಯೊ ಹೇಳಿ ಅರ್ಥ ಆವುತ್ತು. ಇನ್ನೊಂದು ಅರ್ಥವೂ ಇದ್ದಡೊ. ಅ - ಗಜಾನನ ಪದ್ಮಾರ್ಕಂ- ಆನೆಯದಲ್ಲದ್ದ ಮೋರೆ ಯೆಂಬ ಪದ್ಮಕ್ಕೆ ಗಜಾನನನಾದ ನೀನು ಸೂರ್ಯನ ಹಾಂಗಿಪ್ಪೋನು; ಅನೇಕದಂ ಒಂದಲ್ಲ ಎರಡಲ್ಲ ಅನೇಕದಂ ತುಂಬ ತುಂಬ ಕೊಡುವೋನು ತಂ ಭಕ್ತಾನಾಂ ನಿನ್ನ ಭಕ್ತರಿಂಗೆ ಏಕದಂತನಾಗಿಪ್ಪ ನಿನ್ನ ಉಪಾಸನೆ ಮಾಡುತ್ತೆಯೊ. ಎಂಗೊಗೆಲ್ಲ ಅನೇಕದಂ ತುಂಬಾ ಕೊಡುವೋನು ಹೇಳಿ ಹೇಳಿದ್ದವು. ಇಲ್ಲಿ ಅನೇಕ ಹೇಳುವಲ್ಲಿ ಒಂದು ಸಂಶಯ ಬತ್ತು. ಒಂದಲ್ಲದ್ದದೆಲ್ಲ ಅನೇಕ ಅಪ್ಪಲ್ಲದೋ? ಅಂಬಗ ಒಂದರಿಂದ ಹೆಚ್ಚು ಕೊಡುವೋನು ಹೇಳಿರೆ ಎರಡೂ ಆಯಿಕ್ಕು. ತುಂಬಾ ಹೇಳುವ ಅರ್ಥವೇ ಬತ್ತೋ ಹೇಳಿ ಎನಗೆ ಗೊಂತಿಲ್ಲೆ! ಇಲ್ಲಿ ಎರಡು ವಿಧದ ಅರ್ಥ ಬಪ್ಪ ಕಾರಣ ಶ್ಲೇಷೆ ಆವುತ್ತಡೊ. ಹಿಂದಾಣ ಕವಿಗೊ ಲಕ್ಷ್ಮೀಶನ ಹಾಂಗಿಪ್ಪೋವು ದ್ವಯಾರ್ಥ ಇಪ್ಪ ಪದ್ಯಂಗಳ ಬರದ್ದವಲ್ಲದೋ! ಹರಿಯಂತೆ ಬಲಯುತಂ, ಹೇಳುವಲ್ಲಿ ಶ್ರೀಕೄಷ್ಣನ ಹಾಂಗೆ ಬಲರಾಮ ಸಮೇತನಾಗಿ ಹೇಳಿಯೂ, ಸಿಂಹದ ಹಾಂಗೆ ಪರಾಕ್ರಮಿಯಾಗಿಯೂ ಹೇಳುವ ಎರಡು ಅರ್ಥವನ್ನೂ ತೆಕ್ಕೊಂಬಲಕ್ಕಲ್ಲದೋ?
ಮನೆಲ್ಲಿಪ್ಪಗ ಎನ್ನ ಮಕ್ಕಳ ಅಬ್ಬಗೂ ಎನಗೂ ಒಂದಲ್ಲದ್ದರೆ ಒಂದು ವಿಷಯಲ್ಲಿ ಚರ್ಚೆ ಆಗುತ್ತಾ ಇರುತ್ತು. ಕೆಲಸ ಎಲ್ಲ ಆಗಿ ಅವಕ್ಕೆ ವಿರಾಮ ಸಿಕ್ಕುವದು ಕಸ್ತಲೆ ಆದ ಮೇಲೆಯೇ ಅಲ್ಲದೋ? ಹಗಲು ನಾವೆಲ್ಲಿಯಾದರು ಹೆರ ಹೋದರೆ ಮನೆಲ್ಲೇ ಇಪ್ಪೋವಕ್ಕೆ ಕೆಲಸಲ್ಲೇ ಹೊತ್ತು ಹೋವುತ್ತು.ಕೆಲಸ ಮಾಡಿ ಬಚ್ಚಿಪ್ಪಗ ವಿಶ್ರಾಂತಿ ಸಿಕ್ಕುವದೂ ಇರುಳೇ ಅಲ್ಲದೋ? ಕೋಪವ ಎಲ್ಲ ನಮ್ಮ ಮೇಲೆ ತೋರುಸುವದು ಕ್ರಮ. ನಾವು ಮಾಂತ್ರ ಅಲ್ಲ ಕೂಲಿ ಕೆಲಸಕ್ಕೆ ಹೋಪೋವುದೇ ಹಗಲಿಡೀ ಗೆಂಡನ ಕಾಣದ್ದೆ ಕಸ್ತಲೆ ಅಪ್ಪಗ ಬಂದ ಕೂಡ್ಳೇ ಏನಾದರೊಂದು ಹೇಳಿ ಮಾತಾಡುಸುವದು ಕ್ರಮ! ಎಂಗಳ ಮನೆಗೆ ಕೆಲಸಕ್ಕೆ ಬಂದೊಂಡಿದ್ದ, ಆಳಿಂಗೆ ಬಚ್ಚಿಗೊಂಡು ಮನೆಗೆ ಎತ್ತುವಗ ಹೆಂಡತ್ತಿ ಉಪಚಾರ ಜೋರಿತ್ತು. ಆ ಹೊತ್ತಿಂಗೆ ಗೆದ್ದೆ ಕರೆಲ್ಲಿ ನಾವು ಹೋವುತ್ತಿದ್ದರೆ ಕೇಳುಗು ಗಲಾಟೆ. ಗೆಂಡುಗೊ ಬಚ್ಚೆಲು ಹೋಪಲೆ ರಜ ಕಳಿಯೋ, ಶರಾಬೋ ಕುಡುಕ್ಕೊಳ್ಳುತ್ತವು. ಸಿಕ್ಕಿದ ಸಂಬಳ ಅಲ್ಲೇ ಮುಗಿತ್ತು. ಮನೆಗೆ ಹೋಪಗ ಕೈ ಖಾಲಿ. "ಏಕೆ ಅಕ್ಕಿ ತಯಿಂದಿಲ್ಲೆ? ಅಕ್ಕಿ ತಾರದ್ದೆ ಇರುಳು ಉಂಬದೆಂತರ ? ಅಂಗ್ಡಿಂದ ಅಕ್ಕಿ ತರೆಕ್ಕು ಹೇಳಿದ್ದಲ್ಲದಾ? ಏಕೆ ತಯಿಂದಿಲ್ಲೆ? ನಿಂಗೊ ಆದರೆ ಹೊಟ್ಟೆ ತುಂಬ ಕುಡುದಿಕ್ಕಿ ಬತ್ತಿ. ಎಂಗೊ ಎಲ್ಲಿಗೆ ಹೋಯೆಕ್ಕು? ಹೀಂಗೆ ಪ್ರಶ್ನೆಗಳ ಸರಮಾಲೆಯನ್ನೇ ಕೇಳಿಗೊಂಗು. ಉತ್ತರ ಕೊಡುಲೂ ಗೆಂಡುಗೊಕ್ಕೆ ಅಮಲು ಇಳುದ್ದಿಲ್ಲೆ. ಅಂಬಗ ಕೋಪ ತಡೆಯದ್ದೆ ಹೆಂಡತ್ತಿ ಹಿಡಿಸೂಡಿ ತೆಗದು ಗೆಂಡಂಗೆ ಬಡಿಗಡೊ. ಪೆಟ್ಟು ತಿಂದಪ್ಪಗ ರಜಾ ಅಮಲು ಇಳಿಗು. ಫಕ್ಕನೆ ಹೆರ ದಾರಿ ಹೋಪೋರು ಎಂಗಳ ಜಗಳ ಕೇಳುಲೆ ಆಗ ಹೇಳಿಯೋ ಅಥವಾ ಹೆಂಡತ್ತಿ ಬಡುದ್ದಲ್ಲ. ತಾನೇ ಹೆಂಡತ್ತಿಗೆ ಬಡುದ್ದು ಹೇಳಿ ಆಯೆಕ್ಕು ಹೇಳ್ಯೋ ಕೇಳುವದಡೊ. "ಸಾಕೊ ನಿನಗೆ, ಅಲ್ಲ ಇನ್ನೂ ಬೇಕೋ?ನೀನು ಹಾಂಗೆ ಮಾಡಿದ್ದೆಂತಗೆ? ಮತ್ತೆ ಎಷ್ಟು ನಿನ್ನ ಹಾರಾಟ? ಸುಮ್ಮನೆ ಕೂಪಲವುತ್ತಿಲ್ಲೆಯೋ? ಹೇಳಿ ಎಲ್ಲ ಗೆಂಡನೇ ಬಯಿವದಡೊ. ಹೆರ ದಾರಿಲ್ಲಿ ಹೋಪೋರು ಗೆಂಡ ಹೆಂಡತ್ತಿಗೆ ಬಡಿವದು.ಹೇಳಿ ಗ್ರೇಶೆಕ್ಕು. ಹೆಂಡತ್ತಿ ಬಡುದ್ದು ಹೇಳಿ ಆದರೆ ಅವನ ಮರ್ಯಾದೆ ಪೂರ್ತಿ ಹೋವುತ್ತಿಲ್ಲೆಯೋ. ಎಂಗಳ ಮನೆಲ್ಲಿ ಎಂಗಳೊಳದಿಕ್ಕೆ ಹಾಂಗಲ್ಲ ಬೇರೊಂದು ಕಾರಣಕ್ಕೆ. ಅಂತೂ ಒಂದು ರೀತಿಲ್ಲಿ ತಾನು ಹೇಳಿದಾಂಗೆ ಗೆಂಡ ಕೇಳುತ್ತ ಹೇಳಿ ಆಯೆಕ್ಕು. ಎಲ್ಲೋರ ಮನೆಯ ದೋಸೆಗಳೂ ತೂತೇ ಅಲ್ಲದೋ? ಒಂದು ದಿನ ಹೀಂಗೆ ಮಾತಾಡುವಗ ಇದೆಂತ ಹೀಂಗೆ ಮೂಗು ಸಂಬಳದೋನ ಹಾಂಗೆ ಮಾಡುತ್ತೆ ಹೇಳಿ ಕೇಳಿದೆ. ಅದೆಂತರ ಮೂಗು ಸಂಬಳ ಹೇಳಿರೆ? ಹೇಳಿ ಕೇಳಿತ್ತು. ಅದೋ ಹೇಳುತ್ತೆ ಕೇಳು ಹೇಳಿ ಕತೆ ಹೇಳುಲೆ ಶುರು ಮಾಡಿದೆ. ಹೇಂಗಾದರೂ ಕೋಪ ತಣಿಶೆಕ್ಕನ್ನೆ. ಕತೆ ಕೇಳಿಗೊಂಡಿಪ್ಪಗ ಒರಕ್ಕು ಬತ್ತು. ಎಂತಾದರೂ ಕೋಪ ಇದ್ದರೆ ಮರದು ಹೋವುತ್ತು.
ಮದಲು ಒಬ್ಬ ಒಬ್ಬ ಹಳ್ಳಿಯೋನು ಕಲ್ತು ವಕೀಲ ಆದ. ವಕೀಲ ಪೇಟೆಗೆ ಹೋಗಿ ಕೂರೆಕ್ಕನ್ನೆ. ಮದುವೆಯೂ ಆಗಿತ್ತು. ಹೆಂಡತ್ತಿಗೆ ಮನೆಯ ಉದ್ದಿ, ಉಡುಗಿ ಮಾಡುವ ಕೆಲಸಕ್ಕೆ ಒಂದು ಆಳು ಬೇಕು ಹೇಳಿ ಆತು. ಮಾತು ಕೇಳದ್ದರೆ ಹೆಂಡತ್ತಿ ಬಿಡುತ್ತೋ? ಮರದಿನಂದ ಬಂದ ಕಕ್ಷಿಗಾರರ ಹತ್ತತ್ರೆ ಒಂದು ಸಂಬಳಕ್ಕೆ ಜನ ಕಳುಸೆಕ್ಕು ಹೇಳಿದ. ಬಂದೋವೆಲ್ಲ ಸರಿಯಿಲ್ಲೆ ಹೇಳಿ ಹಿಂದೆ ಕಳುಸಿಯೂ ಆತು. ಸಂಬಳ ಕೊಡದ್ದರೆ ಅವು ನಿಲ್ಲುತ್ತವೋ? ಹೀಮ್ಗಿಪ್ಪಗ ಹೊಸತಾಗಿ ಒಬ್ಬ ಬಂದಡೊ. ವಕೀಲನ ಸಂಗ ಗೊಂತಿದ್ದ ಅವ ರಜ ಬುದ್ಧಿವಂತಡೊ. ನಿನ್ನ ಹೆಸರೆಂತ ಕೇಳಿದ್ದಕ್ಕೆ ಉಳಪ್ಪ ಹೇಳಿದನಡ. ಮತ್ತೆ ಇವನೂ ಓಡಿ ಹೋಪದು ಬೇಡ ಹೇಳಿ ವಕೀಲ ಒಂದು ಶರತ್ತು ಮಾಡುಗಿ ಅವನತ್ರೆ ಒಪ್ಪಂದವ ಬರದು ದಸ್ಕತ್ತು ತೆಕ್ಕೊಂಡೂ ಆತು. ಶರತ್ತು ಎಂತ ಕೇಳಿರೆ ಕೆಲಸದೋನಾಗಿಯೇ ಆನು ಇಲ್ಲಿಂದ ಹೋವುತ್ತೆ ಹೇಳಿ ಬೊಡುದು ಹೋದರೆ ಅವಂಗೆ ಸಂಬಳ ಕೊಡುಲೆ ಇಲ್ಲೆ. ಆದರೆ ವಕೀಲನೇ" ನೀನು ಒಂದಾರಿ ಹೋಗು ಹೇಲಿ ಕೆಲಸದ್ನ ಹೋಪಲೆ ಹೇಳಿದರೆ ಹತ್ತು ಸಾವಿರ ರುಪಾಯಿಯೂ ಒಂದು ಮೂಗೂ ಕೊಡೆಕ್ಕು ಹೇಳಿ ಶರತ ಇತ್ತಡೊ.ವಕೀಲಂಗೆ ಬುದ್ಧಿ ಕಲಿಶೆಕ್ಕು ಹೇಳಿಯೇ ಅವ ಬಂದದು.ಎರಡು ದಿನ ಕಳುದಪ್ಪಗ ವಕೀಲನ ಹೆಂಡತ್ತಿ ಮುಟ್ಟಾಗಿ ಅಡಿಗೆ ಮಾಡುಲೆ, ಮುಖ್ಯವಗಿ ಅಂದು ಒಲೆಲ್ಲಿಪ್ಪ ಅಶನವ ತೆಗವಲೆ ವಕೀಲ ಕೋರ್ಟಿಂಗೆ ಹೋಯಿದ. ಎಂತ ಮಾದುವದು? ಕೆಲಸದೋನತ್ರೆ ಹೋಗಿ ಅವರ ಬಪ್ಪಲೆ ಹೇಳು ಹೇಳಿತ್ತಡೊ ಹೆಂಡತ್ತಿ. ಇವ ಓಡಿ ಹೋಗಿ ಇದಾ ನಿಂಗಳ ಹೆಂಡತ್ತಿಗೆ ಮುಟ್ಟುಲಾಗಡೊ. ಅಶನ ಒಲೆಲ್ಲಿಪ್ಪದರ ತೆಗೆವಲೆ ಹೋಯೆಕ್ಕಡೊ ಹೇಳಿ ದೊಡ್ಡಕ್ಕೆ ಹೇಳಿದನಡ. ವಕೀಲನ ಮರ್ಯಾದೆ ಎಂತಾಗೆಡ ಎಲ್ಲೋರ ಎದು ಹಾಂಗೆ ಹೇಳಿದ್ದಕ್ಕೆ ಕೋಪುಸಿ ನೀನು ವಕೀಲನ ಆಳು. ಹೀಂಗೆ ಒಬ್ಬ ಸಾಮಾನ್ಯನ ಹಾಂಗೆ ಬಪ್ಪದೋ? ರಜ ಮೈ ಮೋರೆ ಎಲ್ಲ ತೊಳಕ್ಕೊಂಡು ಒಳ್ಳೆ ಅಂಗಿ ಹಾಕಿಗೊಂಡು, ಎನ್ನ ಹತ್ತರೆ ಬಂದು, ಗುಟ್ಟಿಲ್ಲಿ ಹೇಳೆಡದೋ. ಎನ್ನ ಮರ್ಯಾದೆ ಹೋತನ್ನೆ ಹೇಳಿದ್ದಕ್ಕೆ ಇಂದ್ರಾಣದ್ದು ಕಳುತ್ತನ್ನೆ.ಆತು ಇನ್ನು ಹಾಂಗೇ ಮಾಡುತ್ತೆ ಹೇಳಿದನಡ. ಮತ್ತೊಂದು ತಿಂಗಳು ಕಳುತ್ತು. ಮತ್ತೊಂದು ದಿನ ಬೆಶಿನೀರು ಕಾಸುವ ಕೊಟ್ಟಗ್ಗೆ ಕಿಚ್ಚು ಹಿಡುತ್ತಡ. ಹೋಗಿ ವಕೀಲರ ಹತ್ತರೆ ಹೇಳಿ ಬಾ ಹೇಳಿದ್ದಕ್ಕೆ ಸರಿ ರಜ ಎಣ್ಣೆ ಕೊಡಿ, ಸಾಬೂನು ಕೊಡಿ ಒಳ್ಳೆ ಅಂಗಿ ಇದ್ದರೆ ಕೊಡಿ ಹೇಳಿ ತಂದು ಕೊಡುಲೆ ಹೇಳಿದನಡ. ಮಿಂದು ಒಳ್ಳೆ ಅಂಗಿ ಹಾಯ್ಕೊಂಡು ಕೋರ್ಟಿಂಗೆ ಹೋಗಿ ವಕೀಲ ತನ್ನ ನೋಡುವ ವರೆಗೆ ಸುಮ್ಮನೆ ನಿಂದು, ನಿಧಾನಕ್ಕೆ ವಕೀಲ ತಿರುಗಿ ನೋಡುವಗ ಮೆಲ್ಲಂಗೆ, ಹತ್ತರೆ ಹೋಗಿ ಗುಟ್ಟಿಲ್ಲಿ, "ಬೆಶಿ ನೀರ ಕೊಟ್ಟಗ್ಗೆ ಕಿಚ್ಚುಹಿಡುದ್ದು. ನಿಂಗೊ ಮನೆಗೆ ಹೋಯೆಕ್ಕಡ, ಹೇಳಿದನಡ". ವಕೀಲಂಗೆ ಹೇಂಗೆ ಆಗೆಡ ಕೋಪ ಬತ್ತಿದ್ದರೂ ತಡಕ್ಕೊಂಡು ಮನೆಗೆ ಓಡಿಹೋಗಿ ನೋಡುವಗ ಕೊಟ್ಟಗೆ ಎಲ್ಲ ಹೊತ್ತಿ ಮುಗುದ್ದಡೊಇಷ್ಟೆಲ್ಲ ಆದಮೇಲೆ ಇವನ ಮಡಿಕ್ಕೊಂಬದು ಆಪತ್ತು ಹೇಳಿ ಕಂಡತ್ತು ವಕೀಲಂಗೆ. ಗೆಂಡ- ಹೆಂಡತ್ತಿ ಆಲೋಚನೆ ಮಾಡಿ ಅವ ಹೋಯೆಕ್ಕಾರೆ ರುಪಾಯಿ ಆದರೂ ತೊಂದರೆ ಇಲ್ಲೆ ಕೊಡುಲಕ್ಕು. ದರೆ ಮೂಗಿಂಗೆಂತ ಮಾಡುವದು? ವಕೀಲ ಆಗಿಪ್ಪ ಕಾರಣ ಶರತಕ್ಕೆ ತಪ್ಪುಲೆ ಗೊಂತಿಲ್ಲೆನ್ನೆ. ಎಂತ ಮಾಡುವದು ಹೇಳಿ ಯೋಚನೆ ಮಾಡಿ,ಕಡೆಂಗೆ "ಅಯ್ಯಯ್ಯೊ ಉಳಪ್ಪ" ಹೇಳುವ ಒಂದು ಮದ್ದಿನ ಕಾಡಿಂಗೆ ಹೋಗಿ ಅಗತ್ಯ ತರೆಕ್ಕು ಹೇಳಿ ಹೇಳಿದರೆ, ಹಾಂಗಿಪ್ಪ ಮದ್ದು ಇಲ್ಲದ್ದ ಕಾರಣ ಅವಂಗೆ ತಪ್ಪಲೆಡಿಯ. ಸೋಲುತ್ತ ಅವಂಗೆ ತಂದುಕೊಡುಲೆಡಿಯದ್ದರೆ ಸೋತ ಹಾಂಗೆ ಅಲ್ಲದೋ? ಮತ್ತೆ ಏನೂ ಸಂಬಳ ಕೊಡದ್ದೆ ಅವನ ಅಟ್ಟುಲೆಡಿಗು ಹೇಳಿ ಗ್ರೇಶಿದನಡ.
ಮಗಂಗೆ " ಅಯ್ಯಯ್ಯೊ ಉಳಪ್ಪ" ಹೇಳುವ ಮದ್ದು ತಂದು ಕೊಡೆಕ್ಕು ಹೇಳಿ ಡಾಕ್ಟ್ರ ಹೇಳಿದ್ದ ಬೇಗ ಹೋಗಿ ತಂದು ಕೊಡು ಹೇಳಿದನಡ ಮದ್ದು ಅಗತ್ಯ ಇದ್ದು ಬೇಗ ತಂದುಕೊಡು ಹೇಳಿ ಕಳಿಸಿದನಡ. ಹಾಂಗಿಪ್ಪ ಮದ್ದು ಇಲ್ಲೆ ಹೇಳುವದು ಕೆಲಸದೋವಂಗೂ ಗೊಂತಿದ್ದಾದರೂ ವಕೀಲನ ಸೋಲುಸೆಕ್ಕನ್ನೆ. ಬುದ್ಧಿ ಕಲಿಶೆಕ್ಕು ಹೇಳಿ ಒಪ್ಪಿಗೊಂಡು ಕಾಡಿಂಗೆ ಹೋದನಡ. ಕಾಡಿಲ್ಲಿ ಅವಂಗೊಂದು ಕೂಡೆಲು ಪಟ್ಟು ಕಂಡತ್ತಡೊ. ಅದರ ಹಿಡಿಯೆಕ್ಕಾರೆ ಇರುಳೇ ಆಯೆಕ್ಕಷ್ಟೆ. ಇರುಳು ಅವಕ್ಕೆ ಕಣ್ಣು ಕಾಣುತ್ತಿಲ್ಲೆಡೊ. ಹಾಂಗೆ ಅಂದು ಇರುಳೇ ಅದರ ಹಿಡುದು ಒಂದು ಗೋಣಿಲ್ಲಿ ಕಟ್ಟಿ ತಂದನಡ. ವಕೀಲನ ಮನೆಗೆ ಬಂದು ಅವರತ್ರೆ "ಇದಾ ಇದರ ಒಂದು ಕೋಣೆಲ್ಲೇ ಬಾಯಿ ಬಿಡುಸೆಕ್ಕಷ್ಟೆ. ನಿಂಗೊ ಎಲ್ಲೋರೂ ಕೋಣೆಯೊಳದಿಕ್ಕೆ ಹೋಗಿ ಒಳಂದ ಬಾಗಿಲು ಹಾಯ್ಕೊಂಡು ಗೋಣಿ ಬಿಡುಸೆಕ್ಕು ಹೇಳಿದನಡ. ಸರಿ ವಕೀಲ,ಅವನ ಹೆಂಡತ್ತಿ ಮಕ್ಕೊ ಎಲ್ಲ ಒಳ ಕೂದು ಗೋಣಿ ಬಯಿ ಬಿಡುಸಿದವು. ಅಂಬಗ ಕೇಳೆಕ್ಕೂ! ಒಳದಿಕ್ಕಿದ್ದ ಹುಳುಗೊ ಇವಕ್ಕೆ ಕುಟ್ಟುಲೆ ಶುರು ಮಾಡಿದವು. ಬಾಗಿಲು ಹೆರಂದ ಇವ ಹಾಕಿತ್ತಿದ್ದ. ಎಲ್ಲೋರಿಂಗೂ ಹುಳುಗೊ ಕಚ್ಚಿ,ಮೋರೆ ಮೈಯೆಲ್ಲ ಬೀಗಿತ್ತಡೊ.ಬೇನೆ ತಡೆಯದ್ದೆ "ಅಯ್ಯಯ್ಯೋ ಉಳಪ್ಪ" ಹೇಳಿಬೊಬ್ಬೆ ಹಾಕಿದವು. ಒಂದಾರಿ ಬಾಗಿಲು ತೆಗೆ ಹೇಳಿ ಕೆಲಸದೋನ ಬೇಡಿಗೊಂಡವು. ಮಾಂತ್ರ ಅಲ್ಲ ನಿನ್ನ ಕೆಲಸ ಸಾಕು ಇಲ್ಲಿಂದ ಬಿಟ್ತಿಕ್ಕಿ ಹೋಗು ಹೇಳಿಯೂ ಹೇಳಿದವಡ. ಆದರೆ ಶರತ ಇದ್ದನ್ನೆ, ಮೂಗುದೇ ಪೈಸೆಯೂ ಕೊಡಿ ಹೇಳಿದನಡ. ಕೆಲಸದೋನು. ಹೆಂಡತ್ತಿ ಮಕ್ಕಳತ್ರೆ ಆಲೋಚನೆ ಮಾಡಿವಕೀಲ ಮೂಗು ಕೊಟ್ಟರೆ ಮೂಗಿಲ್ಲದ್ದೆ ಕೋರ್ಟಿಂಗೆ ಹೋಪದು ಹೇಂಗೆ? ಅದಕ್ಕೆ ಹೆಂಡತ್ತಿ ಮೂಗು ಕೊಡುವದು ಹೇಳಿ ತುಂಡು ಮಾಡಿ ಕೊಡುವಗ ಶರತಲ್ಲಿ ಹೆಮ್ಮಕ್ಕಳ ಮೂಗು ಹೇಳುತ್ತಿಲ್ಲೆ ಎನಗೆ ಗೆಂಡು ಮಕ್ಕಳದ್ದೇ ಆಯೆಕ್ಕು ಹೇಳಿದನಡ.ಒಂದು ಮೂಗು ಧರ್ಮಕ್ಕೆ ಹೋತನ್ನೆ. ಇನ್ನು ಎಂತ ಮಾಡುವದಪ್ಪ ಹೇಳಿ ಮಗನ ಮೂಗು ತುಂಡು ಮಾದಿ ಕೊಡುವಗ ಮಕ್ಕಳದ್ದಾಗ ಹೇಲಿದನಡ., ಮತ್ತೆ ಹೇಂಗಾದರೂ ಈ ಪ್ರಾಣುಇ ಹೋಯೆಕ್ಕನ್ನೆ ಹೇಳಿ ಅವನ ಮೂಗಿನನ್ನೇ ತುಂಡು ಮಾಡಿ ಕೊಟ್ಟನಡ. ಅಂತೂ ಮೂರು ಜನರ ಮೂಗೂ ಹೋತು. ಇದಕ್ಕೆ ಮದಲು ವಕೀಲ ಬೇರೆ ಜನಂಗೊಕ್ಕೆ ಸಂಬಳ ಕೊಡದ್ದೆ ಕೆಲಸ ಮಾಡುಸಿತ್ತಿದ್ದ ಹೇಳಿ ಗೊಂತಿದ್ದೇ ಈ ಉಪಯ ಮಾಡಿದ್ದು ವಕೀಲಂಗೆ ಬುದ್ಧಿ ಕಲಿಶುಲೆ ಬೇಕಾಗಿ. ಹಾಂಗೆ ಮೂಗು ಸಂಬಳ ಹೇಳಿರೆ ಆ ಕೆಲಸದೋನ ಹಾಂಗೆ ಮಾಡಿದರೆ ಅಂತ್ರೋರ ಕೈಂದ ಬುದ್ಧಿ ಕಲಿಯೆಕ್ಕಷ್ಟೆ ಹೇಳುವದು ಮಾತಿನ ಅರ್ಥ ಹೇಳಿ ಎನ್ನ ಹೆಂಡತ್ತಿಗೆ ವಿವರುಸಿದೆ. ಕೊಟ್ಟಗ್ಗೆ ಕಿಚ್ಚು ಹಿಡುದ ಶುದ್ದಿ ಹೇಳುಲೆ ಹೇಳಿದ್ದಕ್ಕೆ ಎಣ್ಣೆ ಕಿಟ್ಟಿಮಿಂದು ಕೋರ್ಟಿಂಗೆ ಹೋದ್ದುದೇ ಬುದ್ಧಿ ಕಲಿಶುಲೇ ಅಲ್ಲದೋ? ವಕೀಲಂಗೆ ಅವನ ಬುದ್ಧಿವಂತಿಕೆಯೇ ತಿರುಗುಬಾಣವಾತಿಲ್ಲೆಯೋ? ಅದಕ್ಕೆ ಮಲಯಾಳಲ್ಲಿ ಒಂದು ಗಾದೆ ಇದ್ದಡೊ. "ಏರೆ ಬೆಳೆಂಞಂಗ್ಲಿ ಬಿತ್ತಿನಿ ಕೇಡು" ಹೆಚ್ಚು ಬೆಳದರೂ ಅದು ಬಿತ್ತಿಂಗಾಗ ಹೇಳುತ್ತವಲ್ಲದೋ? ಕೋರ್ಟಿಲ್ಲಿ ತೋರುಸೆಕ್ಕಾದ ಬುದ್ಧಿವಂತಿಕೆಯ ಸಾಮಾನ್ಯ ಕೆಲಸದೋರ ಮೇಲೆ ತೋರುಸಿದ್ದಕ್ಕೆ ವಕೀಲ ಬುದ್ಧಿ ಕಲ್ತ. ಗುಡ್ಡೆಗೆ ಗುಡ್ಡೆ ಅಡ್ಡಡೊ!ಆದರೆ ನಮ್ಮ ಹಿಮಾಲಯಕ್ಕೆ ಸರಿಯಾದ ಗುಡ್ಡೆ ಬೇರೆಲ್ಲಿಯೂ ಇಲ್ಲೆಡೊ.
ಹಸುರು ಕಾರ್ಡ್
ಹಸುರು ಕಾರ್ಡ್
ಒಂದು ದೇಶಲ್ಲಿ ಹೊಸತಾಗಿ ವಾಸ ಮಾಡುಲೆ ಒಪ್ಪೆಕ್ಕಾರೆ ಆ ಸರಕಾರದ ಒಪ್ಪಿಗೆ ಬೇಕಾವುತ್ತು. ಸರಕಾರದ ಒಪ್ಪಿಗೆ ಸಿಕ್ಕೆಕ್ಕಾದರೂ ಒಂದೊಂದು ದೇಶದ ಕ್ರಮ ಬೇರೆ ಬೇರೆ ಇರುತ್ತು. ಅರ್ಜಿ ಹಾಕುವಗಳೇ ಅವಕ್ಕೆ ಕೆಲವು ದಾಖಲೆಗಳ ಕೊಡೆಕ್ಕಾವುತ್ತು. ಅವಕ್ಕೆ ಬೇಕಾಗಿಪ್ಪ ದಾಖಲಗೊ ಅವಕ್ಕೆ ಬೇಕಾದ ಹಾಂಗೆ ಇದ್ದರೆ ಅಲ್ಲಿಯಾಣ ಮುಖ್ಯ ಕಚೇರಿಂದ ಒಪ್ಪಿಗೆ ಮತ್ತೆ ಒಟ್ಟಿಂಗೆ ಒಂದು ಹಸುರು ಬಣ್ಣದ ಕಾರ್ಡೂ ಕೊಡುತ್ತವು. ಮತ್ತೆ ಆ ದೇಶಕ್ಕೆ ಬಪ್ಪಲೆ ಅವು ಕೊಟ್ಟ ಕಾರ್ಡಿನ ತೋರುಸಿದರೆ ವಿಮಾನ ನಿಲ್ದಾಣಲ್ಲಿ ಒಳ ಬಿಡುತ್ತವು. ದೇಶದ ಒಳದಿಕ್ಕೇ ಇದ್ದರೆ ಪರವಾಗಿಲ್ಲೆ. ಐದು ವರ್ಷ ಕಳುದು ಆ ದೇಶದ ನಾಗರಿಕನಾಗಿ ಮಾಡುತ್ತವು. ಒಂದು ದೇಶಕ್ಕೆ ಹೊಸತಾಗಿ ಬರೆಕ್ಕಾರೆ ವಿಸಾ ಹೇಳಿರೆ ಅವರ ಒಪ್ಪಿಗೆ ಬೇಕು. ಅದಕ್ಕೂ ನಾವು ಅರ್ಜಿ ಹಾಕಿದರೆ ಒಂದೋ ತಾತ್ಕಾಲಿಕ, ಹೇಳಿದರೆ ಅದಕ್ಕೆ ಅವಧಿ ಒಂದರಿ ಒಳಬಂದರೆ, ಆರು ತಿಂಗಳು ಆ ದೇಶಲ್ಲಿ ಇಪ್ಪಲಕ್ಕು. ಮತ್ತೆ ಮುಂದುವರುಸುತ್ತರೆ ಪುನಃ ಅರ್ಜಿ ಹಾಕಿ ಕೇಳಿಗೊಂಡರೆ ಸರಿಯಾದ ಕಾರಣ ಇದ್ದರೆ ಒಪ್ಪುತ್ತವು. ಹೆಚ್ಚಾದರೆ ಒಂದು ವರ್ಷಂದ ಒಳ ದೇಶ ಬಿಟ್ಟು ಹೋಯೆಕ್ಕು. ಒಂದರಿ ಕೊಡುವಗ ಹತ್ತು ವರ್ಷದ ವರೆಗೂ ಕೊಡುವದಿದ್ದು. ನಮ್ಮ ಅಪೇಕ್ಷೆ ಹೇಂಗಿದ್ದೋ ಅದಕ್ಕನುಸರುಸಿ ಹೆಚ್ಚು ಕಮ್ಮಿ ಮಾಡುತ್ತವು. ಅಲ್ಲಿ ಕೆಲಸ ಮಾಡೆಕ್ಕಾದರೆ ಬೇರೆ ಕೆಲಸ ಮಾಡುಲೂ ಒಪ್ಪಿಗೆಯಾಗಿ ವರ್ಕ್ ಪರ್ಮಿಟ್ ಪಡಕ್ಕೊಳ್ಳೆಕ್ಕು. ವರ್ಕ್ ಪರ್ಮಿಟ್ ಇಲ್ಲದ್ದೋರಿಂಗೆ ಕೆಲಸ ಮಾಡುಲೆಡಿಯ.ಆರೂ ಕೆಲಸ ಕೊಡವು. ನಮ್ಮ ದೇಶಕ್ಕೆ ಬೇರೆ ದೇಶಂದ ಬಪ್ಪೋರೂ ಹೀಂಗೇ ಮಾಡೆಕ್ಕು.ಎನ್ಗಳ ಮಕ್ಕೊ ಅಮೇರಿಕಲ್ಲಿ ಕೆಲಸಲ್ಲಿದ್ದವು. ಮೂರು ಜನರಲ್ಲಿ ಇಬ್ರು ೨೦೦೦ ಸಾವಿರನೇ ಇಸವಿಂದ ಮದಲೇ ಇದ್ದವು. ಒಬ್ಬ ೨೦೦೭ರಲ್ಲಿ ಕೆನಡಕ್ಕೆ ಹೋಗಿ ಅಲ್ಲಿ ಕೆಲಸ ಮಾದುತ್ತ. ೨೦೦೩ರಲ್ಲಿ ಎಂಗಳನ್ನೂ ಬಪ್ಪಲೇ ಹೇಳಿದ್ದಕ್ಕೆ ಪಾಸ್ ಪೋರ್ಟ್ ಮಾಡಿಸಿಕ್ಕಿ ವಿಸಕ್ಕೆ ಅರ್ಜಿ ಕೊಟ್ಟದಕ್ಕೆ ೨೦೧೩ರ ವರೆಗೆ ವಿಸ ಕೊಟ್ಟವು. ಹಾಂಗೆ ಎರಡು ತಿಂಗಳಿಂಗೆ ಬಂದಿತ್ತಿದ್ದೆಯೋ. ಈಗ ಮೂರು ಜನವೂ ಇಲ್ಲಿಪ್ಪ ಕಾರಣ ವಿಸಾ ಮುಂದುವರುಸುಲೆ ಒಪ್ಪವು ಹೇಳಿ ಮಕ್ಕೊ ಇನ್ನು ಇಲ್ಲಿಯಾಣ ಗ್ರೀನ್ ಕಾರ್ಡಿಂಗೇ ಅರ್ಜಿ ಹಾಕುವದು ಹೇಳಿ ಯೋಚನೆ ಮಾಡಿದವು. ಎನ್ನ ಎಪ್ಪತ್ತನೆಯ ಶಾಂತಿಗೆ ಮೂರು ಜನರನ್ನೂ ಬಪ್ಪಲೆ ಹೇಳಿದ ಕಾರನ ಬಂದಿತ್ತಿದ್ದವು. ಊರಿಂಗೆ ಬಂದೋರಿಂಗೆ ಈ ಅಭಿಪ್ರಾಯ ಬಂದಿತ್ತು. ಹೇಂಗೂ ಮಕ್ಕೊ ಪುಳ್ಯಕ್ಕೊ ಎಲ್ಲ ಇಲ್ಲೇ ಇಪ್ಪ ಕಾರಣ ಎಂಗೊ ಮಾಂತ್ರ ಊರಿಲ್ಲಿ ಇಪ್ಪಲೆ ಸರಿ ಆವುತ್ತಿಲ್ಲೆ. ಊರಿಲ್ಲಿದ್ದರೆ ನಂಟ್ರು ಇಷ್ಟರ ಸಂಪರ್ಕ ಮಾಂತ್ರ ಇಕ್ಕಷ್ಟೆ! ಪುಳ್ಯಕ್ಕೊಗೆ ಇವ ನಿನ್ನ ಅಜ್ಜ ಹೇಳಿ ಗುರ್ತ ಮಾಡೆಕ್ಕಾಗಿ ಬಂದರೆ ಕಷ್ಟ ಅಲ್ಲದೋ? ಮಕ್ಕಳೂ ಹೇಳಿದವು; ಈ ಸರ್ತಿ ಬಂದಿಪ್ಪಗ ಗ್ರೀನ್ ಕಾರ್ಡಿಂಗೆ ಅರ್ಜಿ ಹಾಕೆಕ್ಕು ಹೇಳಿ. ಮತ್ತೆ ಮಕ್ಕೊಗೆ ಅಮೇರಿಕಾಲ್ಲೆ ಇಪ್ಪಲೇ ಮನಸ್ಸಾದರೆ ಎಂಗೊ ಅಲ್ಲಿ ಊರಿಲ್ಲಿ ಇದ್ದು ಎಂತ ಪ್ರಯೋಜನ? ಮಕ್ಕೊ ಪುಳ್ಯಕ್ಕೊ ಇಪ್ಪಲ್ಲೇ ಇಪ್ಪಲಕ್ಕು ಹೇಳುವ ನಿರ್ಧಾರಕ್ಕೆ ಬಂದೂ ಆತು. ಕಳುದ ಜೂನಿಲ್ಲಿ ಅಮೇರಿಕಕ್ಕೆ ಎಂಗೊ ಬಪ್ಪಲೆ ವಿಮಾನದ ಟಿಕೆಟ್ ಮಾಡಿ ಕಳುಸಿಯೂ ಕೊಟ್ಟವು. ಬಪ್ಪಗ ಎಂಗಳ ಬರ್ತ್ ಸರ್ಟಿಫಿಕೇಟ್ ತರೆಕ್ಕು ಹೇಳಿತ್ತಿದ್ದವು. ಮತ್ತೆ ಎನ್ನ ಬರ್ತ್ ಸರ್ಟಿಫಿಕೇಟ್ ಪಂಚಾಯತಿಲ್ಲಿ ಸಿಕ್ಕದ್ದದಕ್ಕೆ, ಬೇರೆ ಆರದ್ದಾದರೂ ಅಫಿದಾವಿತ್ ಬೇಕು ಹೇಳಿತ್ತಿದ್ದವು. ಹಾಂಗೆ ಅಫಿದಾವಿತ್ ಕೊಡೆಕ್ಕಾರೆ ಎನ್ನಂದ ಹೆಚ್ಚು ಪ್ರಾಯದೋವು ಆಯೆಕ್ಕನ್ನೆ. ಹಾಂಗೆ ಅದಕ್ಕೆ ಎನ್ನಂದ ಹಿರಿಪ್ರಾಯದೋರ ಹುಡುಕ್ಕಿ ಅವರ ಅಫಿದಾವಿತ್ ಕೂಡಾ ತಂದಿತ್ತಿದ್ದೆಯೊ. ಆದರೆ ಎನ್ನ ಯಜಮಾಂತಿಯ ಬರ್ತ್ ಸರ್ಟಿಫಿಕೇಟ್ ಪಂಚಾಯತಿಲ್ಲಿ ಸಿಕ್ಕಿದ್ದಕ್ಕೂ ಶಾಲೆಯ ಸರ್ಟಿಫಿಕೇಟಿಲ್ಲಿ ಇದ್ದದಕ್ಕೂ ವ್ಯತ್ಯಾಸ ಕಂಡತ್ತು. ಪಂಚಾಯತಿಂದರ ನೋಡಿರೆ ಶಾಲೆದು ತಪ್ಪಾವುತ್ತು. ಮಾಂತ್ರ ಅಲ್ಲ, ಮದಲು ಪಾಸ್ ಪೋರ್ಟ್ ಮಾಡುವಗ ಕೊಟ್ಟದು ಶಾಲೆ ಸರ್ಟಫಿಕೇಟ್ ನೋಡಿಯೇ ಆಗಿತ್ತು. ಪಾಸ್ ಪೋರ್ಟ್ ನಕಲು ಕೊಡುವಗ ಪಂಚಾಯತ್ ಸರ್ಟಿಫಿಕೇಟ್ ಸರಿ ಆವುತ್ತಿಲ್ಲೆ.ಎಂತ ಮಾಡುವದು ಹೇಳಿ, ದೊಡ್ಡ ತಲೆಬೆಶಿ ಅತು ಮಕ್ಕೊಗೆ. ಒಂದರಿ ಮದಲು ಕೊಟ್ಟದು ತಪ್ಪಿಹೋಯಿದು ಹೇಳಿ ಮಾಡ್ಯೊಂಡು ಪಂಚಾಯತಿಂದರನ್ನೆ ಕೊಡುವದು ಹೇಳುವ ತೀರ್ಮಾನಕ್ಕೂ ಬಂದವು. ಆದರೆ ಪಾಸ್ ಪೋರ್ಟಿಂದರ ವ್ಯತ್ಯಾಸ ಮಾಡುಲೆಡಿಯ . ಈ ಸರ್ತಿ ಒಂದೂ ಸರಿ ಆವುತ್ತಿಲ್ಲೆ, ಎಂತ ಮಾಡುವದಪ್ಪ ಹೇಳಿ ಯೋಚನೆ ಮಾಡ್ಯೊಂಡು ಒಂದರಿ ಸುಮ್ಮನೆ ಕೂದವು.
ಆನು ಸುಮ್ಮನೆ ಕೂಯಿದಿಲ್ಲೆ. ತುಂಬ ಯೋಚನೆ ಮಾಡಿ ಎನ್ನ ಅಳಿಯ ಕುಂಬ್ಳೆಲ್ಲಿಪ್ಪೋನಿಂಗೆ ಫೋನ್ ಮಾಡಿ ದಿನಿಗೇಳಿ ಕುಂಬ್ಳ ಪಂಚಾಯತಿಂಗೆ ಗೌರಮ್ಮನ ಬರ್ತ್ ಸರ್ಟಿಫಿಕೇಟ್ ಬೇಕು ಹೇಳಿ ಒಂದು ಅರ್ಜಿ ಕೊಡುಲೆ ಹೇಳಿದೆ. ಮೋಸ ಮಾಡುವದು ಹೇಳಿ ಗೊಂತಿದ್ದರೂ ಮಾಡದ್ದೆ ನಿವೃತ್ತಿ ಇಲ್ಲೆ! ನಿಜಕ್ಕೂ ಮತ್ತೊಂದು ಪಂಚಾಯತಿಲ್ಲಿ ಹೆಸರು ಕೊಟ್ಟ ಕಾರಣ ಅಲ್ಲಿಂದ ಹಾಂಗಿಪ್ಪ ಹೆಸರಿನೋರ ಇಲ್ಲಿಯಾಣ ರಿಜಿಸ್ತ್ರಿಲ್ಲಿ ಕಾಣುತ್ತಿಲ್ಲೆ, ಹೇಳಿ ನೋನ್ ಅವೈಲೇಬ್ಲ್ ಸರ್ಟಿಫಿಕೇಟ್ ಕೊಟ್ಟವು. ಅದುವೇ ಎನಗೆ ಬೇಕಾದ್ದು. ಗೌರಮ್ಮ ಹುಟ್ಟುವಗ ಇದ್ದ ಮನೆ ಒಂದು ಪಂಚಾಯತಿಲ್ಲಿ ಇತ್ತು. ಅಲ್ಲಿಯೇ ಹೆಸರು ಕೊಟ್ಟದಕ್ಕೆ ಆ ರಿಜಿಸ್ತ್ರಿಲ್ಲಿ ಹೆಸರು, ಜನನ ತಾರೀಕು ಇದ್ದು ಹೇಳಿ ಕೊಟ್ಟಿತ್ತಿದ್ದವು. ಈಗ ಕೇಳಿದ್ದು ಮತ್ತೊಂದು ಪಂಚಾಯತಿಲ್ಲಿ. ನಿಜಕ್ಕದರೆ ಆನೂ ಹುಟ್ಟಿದ್ದು ಪೈವಳಿಕೆ ಪಂಚಾಯತ್ ಪ್ರದೇಶಲ್ಲಿ ಹೇಳಿ ಎನ್ನ ಅಪ್ಪ ಹೇಳಿದ ನೆಂಪು. ಇನ್ನು ಅಲ್ಲೆಲ್ಲೆ ಹೋಗಿ ಕಷ್ಟ ಬಪ್ಪದಕ್ಕೆ ಪುತ್ತಿಗೆಲ್ಲೇ ಕೇಳಿ ಇಲ್ಲೆ ಹೇಳುಸುಗೊಂಡಿದೆ. ಅವರ ಹತ್ತರೆ ಹೆಸರು ಸಿಕ್ಕನ್ನೆ. ಹಾಂಗೆ ಇಲ್ಲಿ ಈ ಹೆಸರು ಇಲ್ಲೆ ಹೇಳಿ ಕೊಟ್ಟವು. ಮಂಗಳೂರಿಲ್ಲಿಪ್ಪ ಎನ್ನ ಗೆಳೆಯನ ಹತ್ತರೆ ಗೌರಮ್ಮನ ಡೇಟ್ ಓಫ್ ಬರ್ತ್ ಶಾಲೆ ಲೆಕ್ಕಲ್ಲಿಪ್ಪದೇ ಸರಿ ಹೇಳಿ ಅಫಿದಾವಿತ್ ಮಾಡುಸಿ ಕಳುಸುಲೆ ಹೇಳಿದೆ. ಸರ್ಟಿಫಿಕೇಟಿನ ದೃಢಪಡುಸಿ ಕೊಡೆಕ್ಕು ಹೇಳಿ ಒಬ್ಬ ಗೊಂತಿಪ್ಪ ನೋಟರಿ ಹತ್ತರೆ ಫೋನ್ ಮಾಡಿ ಹೇಳಿದೆ.ಅವು ಹಾಂಗೆ ಮಾಡಿಕೊಟ್ಟವು. ಅಂತೂ ಗೌರಮ್ಮನ ಜನನ ತಾರೀಕು ಶಾಲೆ ರೆಕೋರ್ಡಿಲ್ಲಿಪ್ಪದು ಸರಿ ಹೇಳುವದಕ್ಕೆ ದಾಖಲೆ ಸಿಕ್ಕಿದ ಹಾಂಗೆ ಆತು. ಮತ್ತೆ ಮದುವೆ ಸರ್ಟಿಫಿಕೇಟ್ ಕೇಳಿದವು. ಅಮೇರಿಕಲ್ಲಿ ಕೂದುಗೊಂಡೆ ಅಲ್ಲಿಯಾಣ ಸಬ್ ರಿಜಿಸ್ತ್ರನ ಹತ್ತರೆ ಹೇಳಿ ಮದುವೆ ರಿಜಿಸ್ತ್ರಿ ಆಯಿದಿಲ್ಲೆ ಹೇಳಿಯೂ ದಾಖಲೆ ಸಿಕ್ಕಿತ್ತು. ಮತ್ತೆ ಅದಕ್ಕೂ ಇಬ್ರ ಅಫಿದಾವಿತ್. ಗೌರಮ್ಮ ಮತ್ತು ಸುಬ್ಬಣ್ಣ ಭಟ್ಟರ ಮದುವೆ ಆದ್ದು ನಿಜ ಎಂಗಳೂ ಮದುವೆಗೆ ಹೋಯಿದೆಯೋ ಹೇಳಿ ಇಬ್ರ ಅಫಿದಾವಿತ್ ಮತ್ತು ನೋಟರಿಯ ದೃಢ ಪತ್ರ ಎಲ್ಲ ಆತು.ಇಷ್ಟೆಲ್ಲ ಸರ್ಟಿಫಿಕೇಟ್ ಗಳ ಅಮೇರಿಕಲ್ಲಿ ಕೂದುಗೊಂಡೇ ಮಾಡುಸಿ ಹಸುರು ಕಾರ್ಡಿಂಗೆ ಅರ್ಜಿ ಮಾಡುಲೆ ಒಬ್ಬ ವಕೀಲ ಇದ್ದರೆ ಒಳ್ಳೆದು ಹೇಳಿ ಯೋಚನೆ ಬಂತು. ಇಬ್ರ ಅರ್ಜಿ ತಯಾರು ಮಾಡಿಕೊಡೆಕ್ಕಾದರೆ ೨೦೦೦ ಡಾಲರ್ ಫೀಸ್ ಕೊಡೆಕ್ಕು ಹೇಳಿ ಒಬ್ಬ ಕನ್ನಡಿಗನೇ ಆದ ವಕೀಲ ಹೇಳಿದ. ಮತ್ತೆ ಮೆಡಿಕಲ್ ಚೆಕ್ ಉಪ್ ಮಾಡಿ ವರದಿ ಬೇಕು ಹೇಳಿದ. ದಾಕು ಹಾಕಿದ್ದಕ್ಕೆ ಸರ್ಟಿಫಿಕೇಟ್ ಕೇಳಿದ. ಹಾಂಗೆ ಎನ್ನ ಸಣ್ಣ ಮಗನ ಮೇಲ್ವಿಳಾಸಲ್ಲಿ ಅರ್ಜಿ ಕೊಟ್ಟ ಕಾರಣ ಎಲ್ಲೋಡಿಕ್ಕಂಗೂ ಕರಕ್ಕೊಂಡು ಹೋಗಿ ಬೇಕಾದ ದಾಖಲೆಗಳ ಜಮೆ ಮಾಡಿ ಕೊಡುವ ಕೆಲಸ ವಕೀಲ ಊರಿನೋನೇ ಅಲ್ಲದೋ ಹೇಳಿ ಒಪ್ಪಿ ಅವನತ್ರೆ ಅರ್ಜಿ, ಮತ್ತೆ ದಾಖಲೆ ಎಲ್ಲ ಕೊಟ್ಟಾತು.ಅರ್ಜಿ ಕಳುಸಿ, ಎರಡು ವಾರಲ್ಲಿ ನಿಂಗಳ ಫಿಂಗರ್ ಪ್ರಿಂಟ್ ಬೇಕು. ಅದರ ಓಫೀಸಿಂಗೆ ಬಂದು ಕೊಟ್ಟಿಕ್ಕಿ ಹೋಗಿ ಹೇಳಿ ಕಾಗದ ಬಂತು. ಓಫೀಸಿಂಗೆ ಹೋಗಿ ಬೆರಳಚ್ಚಿನ ಕೊಟ್ಟೂ ಆತು. ಆದರೆ ಮತ್ತೆರಡು ವಾರಲ್ಲಿ ಸುಬ್ಬಣ್ಣ ಭಟ್ಟನ ಬೆರಳಚ್ಚು ಸರಿ ಬಯಿಂದಿಲ್ಲೆ. ಇನ್ನೊಂದರಿ ಬಂದು ಕೊಡೆಕ್ಕು ಹೇಳಿದವು. ಇನ್ನು ನಾಲ್ಕೈದು ತಿಂಗಳಿಲ್ಲ ಸಂದರ್ಶನಕ್ಕೆ ಕರೆ ಬಕ್ಕು ಹೇಳಿ ವಕೀಲ ಹೇಳಿತ್ತಿದ್ದ. ಎಂಗೊ ಶುರುವಿಂಗೆ ಆರು ತಿಂಗಳಿಲ್ಲಿ ವಾಪಾಸು ಊರಿಂಗೆ ಹೋಪ ಯೋಚನೆಲ್ಲಿ ದಶಂಬರ ಹದಿನೈದಕ್ಕೆ ಹೋಯೆಕ್ಕಾಗಿತ್ತು
ಸಂದರ್ಶನಕ್ಕೆ ಮತ್ತೆ ಬರೆಕ್ಕಾದರೆ ತೊಂದರೆ ಅಕ್ಕು ಹೇಳಿ ಮಕ್ಕೊ ಟಿಕೇಟಿನ ದಿನ ಮುಂದೆ ಹಾಕಿ ಜೂನಿಂಗಪ್ಪಗ ಖಂಡಿತ ಗ್ರೀನ್ ಕಾರ್ಡ್ ಸಿಕ್ಕುಗು,ಕಾರ್ಡ್ ತೆಕ್ಕೊಂಡೆ ಹೋಪಲಕ್ಕು ಹೇಳಿ ದೊಡ್ಡ ಮಗನ ಮನಗೆ ದೇಟ್ರೋಯಿಟಿಂಗೆ ಹೋದೆಯೊ. ಅಲ್ಲಿ ಅಂಬಗ ಸೊಸೆ ಬಸರಿಯಾಗಿದ್ದೋಳು ಒಂದು ಕೂಸಿಂಗೆ ಜನ್ಮ ಕೊಟ್ಟದು, ಎಂಗೊಗೆ ಇನ್ನೊಂದು ಪುಳ್ಳಿಯ ನೋಡುಲಾತು. ಈಗ ನಾಲ್ಕು ಪುಳ್ಯಕ್ಕೊ. ಅಲ್ಲಿಂದ ಟೊರೊಂಟೋಲ್ಲಿಪ್ಪ ಎರಡನೆಯ ಮಗನ ಮನೆಗೆ ಹೋದೆಯೊ. ಒಂದು ತಿಂಗಳಪ್ಪಗ ಸಣ್ಣ ಮಗನ ಫೋನ್. ಕೂಡ್ಳೇ ಅಲ್ಲಿಗೆ ಎಂಗೊ ಬರೆಕ್ಕಾವುತ್ತು. ಅಬ್ಬೆ-ಮಗನ ಡಿ ಯನ್ ಎ ವರದಿ ಬೇಕಡೊ ಅವಕ್ಕೆ ಹೇಳಿ ವಕೀಲ ಹೇಳಿದ್ದ ಕೂಡ್ಳೇ ಬಂದರೆ ಮತ್ತೆ ಎರಡು ತಿಂಗಳಿಲ್ಲಿ ಕಾರ್ಡ್ ಸಿಕ್ಕುಗಡೊ ಹೇಳಿದ ಮಗ.ಹಾಂಗೆ ಅಲ್ಲಿಂದ ಬಸ್ಸಿಲ್ಲಿ ಫಿಲಡೆಲ್ಫಿಯಕ್ಕೆ ಬಂದೆಯೊ. ಮರದಿನವೇ ಡ್ ಯನ್ ಎ ಟೆಸ್ಟ್ ಮಾಡುವಲ್ಲಿಗೆ ಹೋದೆಯೋ. ಹೋಪಲೆ ಕಾರಿಂಗೆ ಮೂರು ಗಂಟೆ ದಾರಿ. ಅದೇ ಊರಿಲ್ಲಿ ಮಗನ ಗೆಳೆಯ ಒಬ್ಬ ಇದ್ದ. ರಾತ್ರಿ ಅಲ್ಲಿ ನಿಂದು ಉದೀಯಪ್ಪಗ ಓಫೀಸಿಂಗೆ ಹೋಗಿ ಪರೀಕ್ಷೆ ಮಾಡಿದವು. ಅಲ್ಲಿಂದ ಮತ್ತೆ ಬೇರೊಂದು ಮನಗೆ ಬಂದೆಯೊ. ಮರದಿನ ಅಲ್ಲೇ ಹತ್ತರೆ ಹವ್ಯಕ ಕೂಟ ಇತ್ತು ಅದರನ್ನೂ ಮುಗಿಶಿಕ್ಕಿ ಸಣ್ಣ ಮಗನ ಮನೆಗೆ ಬಂದಾತು. ಒಂದು ತಿಂಗಳೊಳದಿಕ್ಕೆ ವರದಿ ಸಿಕ್ಕುಗು ಹೇಳಿತ್ತಿದ್ದವು. ಮತ್ತೆ ಅರ್ಜಿಗೆ ಪೂರಕವಾಗಿ ಎಂಗಳದ್ದೋ,ಮಂದೋ ಮದುವೆ ಕಾಗದ ಇದ್ದರೆ ಒಳ್ಲೆದು ಹೇಳಿ ಅದರ ಒಬ್ಬ ನೋಟರಿ ಹತ್ತರೆ ದೃಢಪಡುಸುಲೆ ಹೇಳಿ ಮನೆಂದ ಒಂದು ಮೈಲು ದೂರದ ಓಫೀಸಿಂಗೆ ಹೋದೆಯೊ, ಆನೂ ಮಗನುದೇ.ಹೋಗಿ ದಸ್ಕತು ಹಾಕುಸಿ ಹೆರ ಬಂದಪ್ಪಗ ಅಲ್ಲಿ ಬಿಸಿ ಗಾಳಿಯ ಬುಗ್ಗೆ( ಹೋಟ್ ಎಯರ್ ಬಲೂನ್) ಹಾರುವುದರಲ್ಲಿತ್ತು. ಮಗಂಗೆ ಅದರ ಫಟ ತೆಗೆಯೆಕ್ಕು ಹೇಳಿ ಆತು.ಈ ಕಾಗತಗಳ ಎಲ್ಲ ಕೈಲ್ಲಿದ್ದದರ ಕಾರಿ ಟೋಪಿಲ್ಲಿ ಮಡಗಿ ಫಟ ತೆಗೆದ .ಇನ್ನು ಹೋಪೊ ಹೇಳಿ ಹೆರಟೆಯೊ.ರಜ ಮುಂದೆ ಬಪ್ಪಗ ಫಕ್ಕನೆ ಮಗಂಗೆ ಕಾಗತಂಗಳ ನೆಂಪಾಗಿ ನೋಡಿದರೆ ಒಂದೂ ಇತ್ತಿಲ್ಲೆ. ಎಲ್ಲಿ ಹೋತಪ್ಪ ಹೇಳಿ ನೆಂಪು ಮಾಡುವಗ ಫಟ ತೆಗವಗ ಕಾರಿನ ಮೇಲೆ ಮಡಗಿದ್ದು ನೆಂಪಾತು. ಸಿಕ್ಕಿದರೆ ಎನ್ನಜ್ಜಿ ಪುಣ್ಯ ಹೇಳ್ಯೊಂಡು ತಿರುಗಿ ಹೋದೆಯೊ. ರಜ ರಜ ಮಳೆಯೂ ಬಂದೊಂಡಿತ್ತು. ದಾರಿಲ್ಲೇ ಎಲ್ಲೋ ಬಿದ್ದಿರೆಕ್ಕು ಹೇಳಿ ನೋಡ್ಯೊಂದು ಹೋಪಗ ಎಂಗಳ ಪುಣ್ಯಂದ ಎಂಗೊ ಬಂದ ದಾರಿಯ ಹೊಡೆಲ್ಲಿ ಕಾಗತಂಗೊ ಎಲ್ಲ ದೂರ ದೂರ ಬಿದ್ದೊಂಡಿಪ್ಪದು ಕಂಡತ್ತು.ಎನ್ನ ಪಾಸ್ ಪೋರ್ಟ್ ಕೂಡಾ ಇತ್ತು ಒಟ್ಟಿಂಗೆ ಪುಣ್ಯಕ್ಕೆ ಎಲ್ಲ ಸಿಕ್ಕಿತ್ತು. ತೆಕ್ಕೊಂಡು ಸೀದಾ ಮನಗೆ ಬಂದೆಯೊ. ಅಂತೂ ಬೇಕದ ದಾಖಲೆಯ ಎಲ್ಲ ವಕೀಲನತ್ರೆ ಕೊಟ್ಟು ಅತು.
ಮತ್ತೆ ಒಂದು ತಿಂಗಳಿಲ್ಲಿ ಎನ್ನ ಬೆರಳಚ್ಚು ಸರಿ ಕಾಣದ್ದ ಕಾರಣ ಕ್ರಿಮಿನಲ್ ವೆರಿಫಿಕೇಶನ್ ವರದಿ ತರುಸಿ ಕೊಡೆಕ್ಕು ಹೇಳಿ ಅತು. ಒಟ್ಟಿಂಗೆ ಮಕ್ಕಳ ಅಬ್ಬಗೆ ಎಲ್ಲ ಸರಿಯಾಯಿದು ಹೇಳಿ ಎರಡು ದಿನಲ್ಲಿ ಹಸುರು ಕಾರ್ಡು ಬಂದೂ ಆತು. ಅಂತೂ ವಕೀಲಂಗೆ ಮತ್ತೆಯೂ ಪೈಸೆ ಕೊಡೆಕ್ಕಾತು. ಮಾತಾಡಿದರೆ ಪೈಸೆ ಕೇಳುತ್ತವಡೊ ಇಲ್ಲಿ. ಮತ್ತೆ ನ್ಯೂಯೊರ್ಕಿನ ಎಂಬೇಸಿಗೆ ಅರ್ಜಿ ಕೊಟ್ಟಾತು ವರದಿ ತರುಸುಲೆ ಎಲ್ಲ ವಕೀಲ ಹೇಳಿದ ಹಾಂಗೆ ತರುಸಿ ಕೊಟ್ಟರೆ. ಇದಲ್ಲ ಆ ಪ್ರದೇಶದ ಕೋರ್ಟಿಂದ ವರದಿ ಬೇಕು ಹೇಳಿದವು. ಇಲ್ಲಿಯೂ ವಕೀಲ ಪೈಸೆ ಲೆಕ್ಕ ಹಾಕಿದ್ದಷ್ಟೆ ಅಲ್ಲದ್ದೆ ಅವ ಹೇಳಿದ್ದು ಸರಿ ಆತಿಲ್ಲೆ. ಮಕ್ಕಳದ್ದು ಎಂಗಳದ್ದು ಟೆನ್ಶನ್ ಕೇಳೆಡ,ಹೇಳೆಡ. ಎಂತಕೆ ಬೇಕಾತು ಈ ಮರುಳುತನ. ಹಸುರು ಕಾರ್ಡೂ ಬೇಕಾತಿಲ್ಲೆ ಸುಮ್ಮನೆ ಹತ್ತು ಹದಿನೈದು ಸಾವಿರ ಡಾಲರ್ ಮಕ್ಕೊಗೆ ದಂಡ ಮಾಡಿದ ಹಾಂಗೆ ಆತು ಸಣ್ಣ ಮಗ ಪಾಪ! ಇದಕ್ಕಾಗಿ ತುಂಬ ಒದ್ದಾಡಿದ್ದ. ಅವಂಗೆ ಮಾತಾಡುವಗ ಕೋಪ ಬಂದೊಂಡಿತ್ತು. ದೇವರು ಮಡಗಿದ ಹಾಂಗೆ ಆವುತ್ತು ಹೇಳಿ ಕೋರ್ಟಿಂಗೆ ಹೋಗಿ ಕೇಳಿದ್ದಕ್ಕೆ ಕೇಳಿದ ಕೂಡಲೇ ಕೊಟ್ಟವು. ನಮ್ಮ ದೇಶಲ್ಲಿ ಆಗಿದ್ದರೆ ಇಂದು ಅರ್ಜಿ ಕೊಟ್ಟಿಕ್ಕಿ ಹೋಗಿ ಒಂದು ವರ ಬಿಟ್ಟು ಬನ್ನಿ ಹುಡುಕ್ಕಿ ಮಡಗುತ್ತೆಯೊ ಹೇಳಿಯೋ ಮತ್ತುದೆ ಬೇಗ ಕೊಡೆಕ್ಕಾರೆ ಪೈಸೆ ಕೊಡೆಕ್ಕಾತು ಆಮಟ್ಟಿಂಗೆ ಇಲ್ಯಾಣೋವು ಪ್ರಾಮಾಣಿಕರು. ಬೇರೊಬ್ಬನ ಒದ್ದಾಟ ಅವಕ್ಕೆ ಗೊಂತಿದ್ದು. ಈ ವಿಶಯದಲ್ಲಿ ನಮ್ಮ ದೇಶದೋರೇ ಹುಶಾರು. ಅಲ್ಲಿಂದಲೂ ಪೋಲಿಸ್ ವೆರಿಫಿಕೇಶನ್ ತರುಸೆಕ್ಕು ಹೇಳಿ ವಕೀಲ ಹೇಳಿತ್ತಿದ್ದ. ಹಾಂಗೆ ಅಮೇರಿಕಂದಲೇ ಒಂದು ಅರ್ಜಿ ತಯಾರು ಮಾಡಿ ಎನ್ನ ಗೆಳೆಯಂಗೆ ಸ್ಕೇನ್ ಮಾಡಿ ಕಳುಸಿ ಆತು. ಅವ ಅದರ ಕೊಡುವಗ ಈ ಮನುಷ್ಯ ಅದೇ ಮನೆಲ್ಲಿಪ್ಪದು ಹೇಳುವದಕ್ಕೆ ವಿಳಾಸ ಸರಿ ಹೇಳುವದರ ಗೊಂತು ಮಾಡುಲೆ ರುಜುವಾತು ಬೇಕು ಹೇಳಿ ಡಿ ಸಿ ಓಫೀಸಿಲ್ಲಿ ಹೇಳಿದವಡ. ಆನು ಅಮೇರಿಕಲ್ಲಿಪ್ಪದು. ಮಾಂತ್ರ ಅಲ್ಲ ಆನು ದೇಶ ಬಿಡುವಗ ಇದ್ದ ಮನೆ ವಿಳಾಸ ಸರಿ ಹೇಳುಲೆ ದಾಖಲೆಗೊ ಇಲ್ಲೆ. ಅದಕ್ಕೆ ಅವನೇ ಬೇರೊಂದು ಅರ್ಜಿ ತಯಾರು ಮಾಡಿ ಹಳೆಮನೆಯ ವಿಳಾಸಕೊಟ್ಟು ನೋಡಿದನಡ. ಸರಿ ಸ್ಥಳೀಯ ಸ್ಟೇಶನಿಂಗೆ ತನಿಖೆಗೆ ಹೋತುಅರ್ಜಿ. ಅವರ ಭೇಟಿ ಮಾಡಿ ನಿಂಗೊಗೆ ಇಷ್ಟು ಪೈಸೆ ಕೊಡುತ್ತೆ. ಒಂದರಿ ವರದಿ ಮಾಡಿ ಕಳಿಸಿ ಹೇಳಿದನಡ. ಮರದಿನವೇ ಅವರ ಕರಕ್ಕೊಂಡು ಬಂದು ಹೊಸ ಮನೆ, ಹಳೆಮನೆ ತೋರುಸಿ ಅಪ್ಪಗ ಈಗಾಣ ವಾಸಸ್ಥಳ ಇದುವೇ ಹೇಳಿ ಈ ವಠಾರಲ್ಲಿಪ್ಪ ಎರಡು ಮನೆಯೋರ ಕರಕ್ಕೊಂಡು ಬಾ. ಅವರ ಸ್ಟೇಟ್ಮೆಂಟ್ ತೆಕ್ಕೊಡು ವರದಿಯ ಮೇಲೆ ಕಳುಸುತ್ತೆಯೋ ಹೇಳಿ ಮದಲೇ ಕೇಳಿದ್ದ ಪೈಸೆಯ ತೆಕ್ಕೊಂಡು ವರದಿ ಡಿ ಸಿ ಆಫೀಸಿಂಗೆ ಹೋತು. ಅಲ್ಲಿಂದ ಇವ ಹತ್ತು ವರ್ಷಂದ ಇಲ್ಲಿಯೇ ಇದ್ದ ಇವನ ಮೇಲೆ ಯಾವುದೇ ಕ್ರಿಮಿನಲ್ ರೆಕೋರ್ಡ್ ಇಲ್ಲೆ ಹೇಳಿ ವರದಿಯದೃಢಪಡುಸಿ ಇಲ್ಲಿಗೆ ಕಳುಸಿದವು. ಇಲ್ಲಿ ಆನು ಹೇಳುಲೆ ಇಪ್ಪದು ಮಂಗಳೂರಿಂಗೆ ಆನು ಬಂದು ಏಳು ವರ್ಷ ವೇ ಆಯಿದಷ್ಟೆ ಆದರೂ ಪೈಸೆ ಮೂರು ವರ್ಷದ ದೃಢಪತ್ರಿಕೆ ಕೊಟ್ಟಿದು. ಇದು ನಮ್ಮ ದೇಶದ ಪ್ರಾಮಾಣಿಕತೆ. ಅಮೇರಿಕದ ಸ್ಟೇಶನಿಂಗೆ ಹೋಗಿ ಕೇಳಿದ್ದಕ್ಕೆ ಅರ್ಜಿ ತೆಗೆದು ಮಡುಗಿದೋರು, ಮತ್ತೆ ಆನು ಇಪ್ಪ ಜಾಗೆ ಅವರ ವ್ಯಾಪ್ತಿಯದಲ್ಲ ಹೇಳಿ ಗೊಂತಾಗಿ ಅರ್ಜಿಯ ಸೀದಾ ಮತ್ತೊಂದು ಸ್ಟೇಶನಿಂಗೆ ಕಳುಸಿದ್ದಲ್ಲದೆ, ವಿವರವ ಫೋನ್ ಮಾಡಿ ಮಗಸ್ಂಗೆ ಹೇಳಿತ್ತಿದ್ದವಡ. ಮತ್ತೊಂದು ಸ್ಟೇಶನಿನೋವು ಒಂದು ಬೇರೆ ಅರ್ಜಿ ಫೋರಂ ಕಳುಸಿ ದಸ್ಕತ್ ಮಾಡುಲೆ ಹೇಳಿಅದರ ಸ್ಟೇಶನಿನ ಬೋಕ್ಸಿಲ್ಲಿ ಹಾಕುಲೆ ಹೇಳಿತ್ತಿದ್ದವು. ಎರಡು ದಿನಲ್ಲಿ ಇವನ ಮೇಲೆ ಯಾವ ಕ್ರಿಮಿನಲ ದಾಖಲಗೊ ಇಲ್ಲೆ ಹೇಳಿ ದೃಢಪತ್ರವ ಕಳಿಸಿತ್ತಿದ್ದವು. ಯಾವ ಪೋಲಿಸ್ ಒಳ್ಳೆದು ಹೇಳುವದು ಗೊಂತಾತನ್ನೆ! ವಕ್ಕೀಲಂಗೆ ಮತ್ತೆ ನಾನ್ನೂರು ಡಾಲರ್ ಕೊಟ್ಟು ವರದಿ ಕಳುಸಲೆ ಹೇಳಿತ್ತು. ಮತ್ತೊಂದು ವರ ಅದರ ಮಡಿಕ್ಕೊಂಡು ಹೇಂಗೋ ವಕೀಲ ಕಳುಸಿದ. ಆದರೆ ಓಫೀಸಿನೋವು ಸಿಕ್ಕಿ ಒಂದು ವಾರಲ್ಲಿ ಸಿಕ್ಕಿದ್ದು ಹೇಳಿ ಇಂಟರ್ನೆಟಿಲ್ಲಿ ಹೇಳಿತ್ತಿದ್ದವು. ಮತ್ತೆರಡು ವಾರಲ್ಲಿ ಹಸುರು ಕಾರ್ಡ್ ಎನಗೂ ಸಿಕ್ಕಿತ್ತು.
ಹೀಂಗೆ ಹಸುರು ಕಾರ್ಡಿಂಗೆ ಬೇಕಾಗಿ ಮತ್ತೂ ಒಂದು ತಿಂಗಳಷ್ಟು ಎಂಗಳ ವಿಮಾನದ ಟಿಕೆಟ್ ಮುಂದೆ ಹಾಕುಲೆ ಒಪ್ಪಿದ ಕಾರಣ ಎಂಗೊಗೆ ಅದೊಂದು ಲಾಭವೇ ಆತು. ಅಲ್ಲದ್ದರೆ ಬೇರೆಯೇ ಟಿಕೆಟ್ ತೆಕ್ಕೊಳ್ಳೆಕ್ಕಾತು.ದೈವ ಸಂಕಲ್ಪವೇ ಹೀಂಗಿತ್ತೋ? ಅಥವ ಇದರೆಡೆಲ್ಲಿ ಬಸರಿ ಅಗಿದ್ದ ಸಣ್ನ ಸೊಸೆಯೂ ಒಬ್ಬ ಮಾಣಿಗೆ ಜನ್ಮ ಕೊಟ್ಟಿತ್ತು.ಹೆತ್ತು ಹತ್ತು ದಿನಲ್ಲಿ ಹಸುರು ಕಾರ್ಡ್ ಬಂದಿತ್ತು. ಹೀಂಗೆ ಕಾರ್ಡ್ ಸಿಕ್ಕುಲೆ ತಡ ಆದಕಾರಣ ಆದ ನಷ್ಟ ಕಷ್ಟದ ಎಡೆಲ್ಲಿ ಸಂತೋಷ ವಿಚಾರಎ ಇನ್ನೊಬ್ಬ ಪುಳ್ಳಿಯ ನೋಡುಲೆಡಿಗಾದ್ದು. ಅಥವಾ ಅವನ ನೋಡುವ ಭಾಗ್ಯವೇ ಹೀಂಗೆ ಕಾರ್ಡ್ ಸಿಕ್ಕುಲೆ ತಡವಾದ್ದೋ ಹೇಳುಲೆಡಿಯ! ಎಲ್ಲ ದೈವ ಸಂಕಲ್ಪ ಇದ್ದ ಹಾಂಗೇ ಅಪ್ಪದು. ೨೯ನೇ ತಾರಿಕು ಆದಿತ್ಯವಾರ ಊರಿಂಗೆ ಹೋಪಗ ಸಂತೋಷಲ್ಲಿ ಹೋಪ ಹಾಂಗೆ ಆತು. ಎರಡು ಪುಳ್ಯಕ್ಕ ನೋಡುವುದರೊಟ್ಟಿಂಗೆ ಇಲ್ಲಿ ಬಂದು ಈಗಿಪ್ಪ ಐದು ಜನ ಪುಳಕ್ಕಳೊಟ್ಟಿಂಗೆ ದಿನ ಕಳಿವಲೆಡೆಯಾದ್ದು ಎಂಗಳ ಪುಣ್ಯವೋ ಪುಳ್ಯಕ್ಕಳ ಪುಣ್ಯವೋ ದೇವರಿಂಗೇ ಗೊಂತು. ಅಂತೂ ಅಮೇರಿಕಲ್ಲಿ ಮಕ್ಕಳೊಟ್ಟಿಂಗಇಪ್ಪಲೆ ಹಸುರು ಕಾರ್ಡ್ ಸಿಕ್ಕಿ ತುಂಬ ಸಂತೋಷ ಆತು.
Monday, July 23, 2012
ಟ್ರೆತ್ಲೋನ್ ಮತ್ತು ಎಲೆಯಪ್ಪ
ಟ್ರೆಥ್ಲೊನ್ ಮತ್ತು ಎಲೆಯಪ್ಪ
.ಟ್ರೆಥ್ಲೋನ್
ಅಮೇರಿಕದಲ್ಲಿ ಪ್ರಚಲಿತವಾಗಿರುವ ಮೂರು ಬಗೆಯ ಈ ಓಟಗಳನ್ನು ಟ್ರೆಥ್ಲೋನ್ ಎನ್ನುತ್ತಾರೆ. ಈಜುವುದು,ಸೈಕ್ಲಿಂಗ್ ಮತ್ತು ಓಟ ಸೇರಿರುತ್ತದೆ. ಸಾಮಾನ್ಯವಾಗಿ ರಜಾದಿನಗಳಲ್ಲಿ ಇಂತಹ ಸಾಹಸಮಯ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಮಾರಥೋನ್ ಓಟ (೪೦ ಕಿ ಮೀ ಓಡುವುದು)ಅದರ ಅರ್ಧ ಯಾ ಕಾಲು ಭಾಗದ ಓಟಗಳನ್ನೂ ನಡೆಸುತ್ತಿರುತ್ತಾರೆ. ಇಲ್ಲಿಯ ಉತ್ಸಾಹಿಗಳು (ಮುದುಕರೂ ಕೂಡ) ಈ ಓಟಗಳಲ್ಲಿ ಭಾಗವಹಿಸುತ್ತಾರೆ. ಭಾಗವಹಿಸಿದ ಮೇಲೆ ಗೆಲ್ಲುವುದು ಮಾತ್ರ ಉದ್ದೇಶವಲ್ಲ; ಗುರಿಮುಟ್ಟುವುದು ಮುಖ್ಯ. ಪೂರೈಸಿದವರಿಗೆ ಪದಕಗಳನ್ನು ಕೊಡುವುದು ರೂಢಿ. ನನ್ನ ಸಣ್ಣ ಮಗ ಮಾರಥೋನ್ ಓಟವನ್ನೂ ಪೂರೈಸಿದ್ದಾನೆ. ಮೊನ್ನೆ ಒಮ್ಮೆ ಸರೋವರವೊಂದರಲ್ಲಿ ಈಜುವ ಸಾಹಸವನ್ನೂ ಮಾಡಿದ್ದ. ಈಜುವುದನ್ನು ಅಭ್ಯಾಸ ಮಾಡಿದ್ದೇ ಇತ್ತೀಚೆಗೆ. ಭಾಗವಹಿಸುವ ಹುಮ್ಮಸ್ಸು ಅವನದು. ಮೊನ್ನೆ ಇಲ್ಲಿ ನೂರು ಅಡಿಗಳಷ್ಟು ಆಳವಾದ ನದಿಯಲ್ಲಿ ಮುಕ್ಕಾಲು ಮೈಲಿನಷ್ಟು ಪ್ರವಾಹದ ಎದುರಾಗಿ ಮತ್ತು ನದಿಯ ಅಡ್ಡಕ್ಕೆ ಹೋಗಿ ಕೆಳಗೆ ಈಜ ಬೇಕಿತ್ತು. ಈಜಿದ ಮೇಲೆ ೧೭ ಮೈಲು ಸೈಕ್ಲಿಂಗ್ ಮಾಡಬೇಕಿತ್ತು. ಮತ್ತೆ ಮೂರೂವರೆ ಮೈಲು ಓಡಿ, ಗುರಿಮುಟ್ಟಬೇಕಾದ್ದು ಅಗತ್ಯವಾಗಿತ್ತು. ಮೊದಲ ಸ್ಥಾನ ಪಡೆದವರಿಗೆ ಬಹುಮಾನವೂ ಇತ್ತು. ನನ್ನ ಮಗನು ಭಾಗವಹಿಸುವೆನೆಂದು ಹೆಸರು ಕೊಟ್ಟಿದ್ದ. ನಮಗೇನೋ ಅವನು ಸ್ಪರ್ಧೆಯಲ್ಲಿ ಭಾಗವಹಿಸುವುದು ಸುತರಾಂ ಇಷ್ಟವಿರಲಿಲ್ಲ. ಸಾಲದ್ದಕ್ಕೆ ರಾತ್ರಿ ಮಳೆ ಬಂದು ನದಿ ತುಂಬಿ ಹರಿಯುತ್ತಿತ್ತು. ಮಾತ್ರವಲ್ಲ ಸ್ವಲ್ಪ ಕೊಳೆ ಕಶ್ಮಲಗಳು ಮಳೆ ನೀರಿನೊಂದಿಗೆ ಸೇರಿಕೊಂಡಿತ್ತು. ಮನೆಯಿಂದ ೧೮ ಮೈಲು ದೂರವಿತ್ತು ಜಾಗ.ಇಲ್ಲಿಯವರಾದರೋ ಚೆನ್ನಾಗಿ ಅಭ್ಯಾಸ ಮಾಡಿದವರಿರುತ್ತಾರೆ. ಮಗನ ಉತ್ಸಾಹಕ್ಕೆ ತಣ್ಣೀರೆರಚಲು ಮನಸ್ಸಿಲ್ಲದೆ ಕಡೆಗೂ ನಾವೂ ಒಪ್ಪಿದೆವು. ಬೆಳಿಗ್ಗೆ ಆರೂವರೆ ಗಂಟೆಗೆ ಮನೆಯಿಂದ ಹೊರಟೆವು. ಅಲ್ಲಿ ಗೆ ತಲಪುವಾಗ ವಾಹನಗಳ ಒತ್ತಡವಿದ್ದುದರಿಂದ ಏಳೂಕಾಲು ಗಂಟೆಯಾಗಿತ್ತು. ಬೆಳಿಗ್ಗೆ ಐದು ಗಂಟೆಗೇ ಬಂದಿದ್ದರಂತೆ ಜನ! ನಮ್ಮ ವಾಹನ ನಿಲ್ಲಿಸಲು ಒಂದು ಮೈಲು ದೂರದಲ್ಲಿ ಜಾಗ ಸಿಕ್ಕಿತು. ಮೊದಲೇ ಬಂದಿದ್ದ ವಾಹನಗಳು ತುಂಬಿದ್ದುದರಿಂದ ಎರಡು ಮೈಲು ದೂರದಲ್ಲಿ ವಾಹನ ನಿಲ್ಲಿಸಬೇಕಾಯಿತು. ಮಗನೇನೋ ಅಲ್ಲಿಂದ ಇಳಿದು ಸೈಕಲ್ಲಿನಲ್ಲಿ ಮುಂದೆ ಹೋದ. ಹೆಸರು ನಮೂದಿಸಿದ ಮೇಲೆ ಕೊಡುವ ಬೇಜನ್ನು ತೆಗೆದುಕೊಂಡು ಧರಿಸಿಕೊಳ್ಳಬೇಕಿತ್ತು ಅವನಿಗೆ. ನಾವು ಅಲ್ಲಿಂದ ಮುಂದೆ ಒಂದು ಮೈಲಿನಷು ಬಸ್ಸಿನಲ್ಲಿಯೂ ಮತ್ತೆ ಒಂದು ಜೀಪಿನಲ್ಲಿಯೂ ಹೋದೆವು. ಸೊಸೆ ತುಂಬು ಗರ್ಭಿಣಿಯಾಗಿದ್ದುದರಿಂದ ನಡೆಯುವುದು ಕಷ್ಟವೆಂದು ಅವರನ್ನು ಬೇಡಿಕೊಂಡದ್ದಕ್ಕೆ ವಾಹನ ಸಿಕ್ಕಿದ್ದು ಅನುಕೂಲವಾಯಿತು. ನಾವು ತಲಪಿದಾಗ ಮಗನು ಈಜುವುದಕ್ಕೆ ಹೋಗಿದ್ದಿರಬೇಕು. ಈಜಿ ಅಭ್ಯಾಸವಿಲ್ಲದಿದ್ದರೂ ಅವನ ಅದಮ್ಯ ಉತ್ಸಾಹ ಭಾಗವಹಿಸುವಂತೆ ಮಾಡಿತ್ತು. ಭಾಗವಹಿಸುವವರು ೧೫೦ ಡಾಲರ್ ಪ್ರವೇಶ ಧನ ಕೊಡ ಬೇಕಿತ್ತಾದರೂ ಮಗನಿಗೆ ಅವನು ಕೆಲಸ ಮಾಡುವ ಕಂಪೆನಿಯವರೇ ಹಣದ ವ್ಯವಸ್ಥೆ ಮಾಡಿದ್ದರು.
೧೬ ವರ್ಷದವರಿಂದ ತೊಡಗಿ ೭೫ ವರ್ಷ ಪ್ರಾಯದ ಮುದುಕರೂ ಸ್ಪರ್ಧೆಯಲ್ಲಿ ಪಾಲುಗೊಂಡಿದ್ದರಂತೆ. ಎರಡು ಸಾವಿರಕ್ಕಿಂತಲೂ ಹೆಚ್ಚು ನೋಂದಾಯಿಸಿಕೊಂಡಿದ್ದರು. ಗಂಡುಸರೂ ಹೆಂಗುಸರೂ ಸ್ಪರ್ಧಾಳುಗಳು ಆಗಿದ್ದರು. ಒಬ್ಬ ಎರಡು ಕಾಲುಗಳಿಲ್ಲದವನೂ ಇನ್ನೊಬ್ಬ ಒಂದು ಕೈ ಇಲ್ಲದವನೂ ಭಾಗವಹಿಸಿದ್ದು ವಿಶೇಷವಾಗಿತ್ತು.ಅವರ ಉತ್ಸಾಹ ನಮ್ಮನ್ನು ಮೂಕಸಾಕ್ಷಿಗಳನ್ನಾಗಿಸಿತ್ತು. ಅದರೆ ಇಷ್ಟು ಜನರಲ್ಲಿ ಭಾರತೀಯ ಸ್ಪರ್ಧಾಳು ನನ್ನ ಮಗ ಮಾತ್ರವಾಗಿದ್ದುದು ಮತ್ತೊಂದು ವಿಶೇಷ! ಮಗ ಈಜಿ ನದಿಯಿಂದ ಮೇಲೆ ಬಂದ ಮೇಲೆಯೇ ನಾವು ಕಂಡುದು. ಈಜುವ ಜಾಗವು ಸುತ್ತಲೂ ಮರಗಳಿಂದ ಸುತ್ತುವರಿದಿದ್ದ ಕಾರಣ ನಮಗೆ ಕಾಣಿಸುವುದಿಲ್ಲ. ಅವನನ್ನು ಕಂಡ ಮೇಲೆ ನಮಗೆ ಮನಸ್ಸಿಗೆ ಧೈರ್ಯವಾಯಿತು. ಹೆಮ್ಮೆಯೆನಿಸಿತು. ಯಾವುದೋ ಒಂದು ಹಳ್ಳಿಯ ಕೊಂಪೆಯಲ್ಲಿ ಹುಟ್ಟಿ ಬೆಳೆದವನೊಬ್ಬ ದೂರದ ನೀರಿನ ಆಳ ಹರವು ಅರಿಯದವನೊಬ್ಬ ಗುರಿ ಸಾಧಿಸಿದುದು ಅದ್ಭುತವಾಗಿತ್ತು. ಅವನು ಮತ್ತೆ ಹೇಳಿದ ತನ್ನ ಹುಚ್ಚು ಸಾಹಸದಲ್ಲಿ ಜೊತೆಗೆ ನೀವು ಇದ್ದುದರಿಂದ ಧೈರ್ಯ ಇಮ್ಮಡಿಯಾಗಿತ್ತು ಎಂದ. ಮತ್ತೆ ಸೈಕಲ್ ಸವಾರಿ ಮಾತ್ರ ಸ್ವಲ್ಪ ವಿಳಂಬವಾಗಿ ಹೋಯಿತು. ಒಂದು ಲಟಾರಿ ಸೈಕಲ್ ಅವನದಾಗಿದ್ದುದರಿಂದ ತುಂಬ ಕಷ್ಟಪಡಬೇಕಾಯಿತು. ಎರಡು ಸಾವಿರ ಡಾಲರ್ ಬೆಲೆ ಬಾಳುವ ಸೈಕಲ್ ತಂದವರೂ ಇದ್ದರು. ಅದು ಓಡುವ ವೇಗ ಅದ್ಭುತವಾಗಿತ್ತು. ಇವನಲ್ಲಿದ್ದುದು ಸ್ಪರ್ಧೆಗಾಗಿ ತೆಗೆದದ್ದಲ್ಲ. ಒಂದು ಹಳತು ಸೈಕಲ್. ಅದನ್ನೂ ಮುಗಿಸಿ ಓಟವನ್ನೂ ಮುಗಿಸಿದವನನ್ನು ನೋಡಿದಾಗ ನಾವೆಲ್ಲ ಹೆಮ್ಮೆ ಪಟ್ಟೆವು ಇಂತಹ ಮಗನನ್ನು ಪಡೆದ ನಾವು ಭಾಗ್ಯವಂತರೆಂದು ನಮ್ಮ ಧನ್ಯತೆಗಾಗಿ ಪುಳಕಗೊಂಡೆವು. ಮೊಮ್ಮಗನಂತೂ ಹಿರಿ ಹಿರಿ ಹಿಗ್ಗಿ ಅಪ್ಪನನ್ನು ಅಪ್ಪಿ ಮುದ್ದಾಡಿದನು. ಸ್ಪರ್ಧೆಯಲ್ಲಿ ಗೆದ್ದವನು ೭೦ ಮಿನಿಟಿನಲ್ಲಿ ಪೂರೈಸಿದ ಗುರಿಯನ್ನು ಇವನು ಎರಡು ಗಂಟೆಯಲ್ಲಿ ಮುಗಿಸಿದ್ದಾದರೂ ಹೆಚ್ಚಿನ ಅಭ್ಯಾಸವಿಲ್ಲದೆ ಗುರಿಮುಟ್ಟಿದ್ದು ನಮಗೆ ಹೆಮ್ಮೆಯ ವಿಷಯವಾಗಿ ಕುಶಿಕೊಟ್ಟಿತು. ಮತ್ತೆ ಅವನ ಕಂಪೆನಿಯವರು ಇವರಿಗೆಲ್ಲ ಉಪಹಾರದ ವ್ಯವಸ್ಥೆ ಮಾಡಿದ್ದರು ನಮಗೂ ಸಿಕ್ಕಿತು. ಎಲ್ಲರೂ ಒಟ್ಟಾಗಿ ಅಲ್ಲಿಂದ ಹೊರಡುವಾಗ ಹನ್ನೊಂದು ಗಂಟೆ. ಆ ಮೇಲೆ ನಾವೆಲ್ಲರೂ ಮನೆಗೆ ಬಂದೆವು. ಅಮೇರಿಕ ಪ್ರವಾಸದಲ್ಲಿ ಚಿರಕಾಲ ಉಳಿಯಬಹುದಾದ ಈ ಸನ್ನಿವೇಶಕ್ಕೆ ಪ್ರತ್ಯಕ್ಷದರ್ಶಿಯನ್ನಾಗಿ ಮಾಡಿಬಿಟ್ಟ ನಮ್ಮ ಮಗ. ಇಲ್ಲಿಯವರಿಗೆ ಇದು ಅವರ ಹವ್ಯಾಸವದರೂ ನಮಗೆ ಹೊಸತಾಗಿತ್ತು
ಎಲೆ ಅಪ್ಪ.;- ಅಮೇರಿಕದಲ್ಲಿ ಕೆಲಸಕ್ಕಾಗಿ ಬಂದ ಭಾರತೀಯರು ಇಲ್ಲಿ ಅನ್ಯೋನ್ಯವಾ ಗಿ ಬಾಳುವೆ ನಡೆಸುತ್ತಿರುತ್ತಾರೆ. ವಾರದ ಕೊನೆಗೆ ಅವರೆಲ್ಲ ಸ್ವತಂತ್ರ ಹಕ್ಕಿಗಳು. ಬೇಕೆಂದಲ್ಲಿಗೆ ಹಾರಿ ಹೋಗಲು ಸ್ವತಂತ್ರರು. ಇಲ್ಲಿ ಕೆಲಸ ಮಾಡುವವರ ಹೆತ್ತವರು ಇವರನ್ನು ನೋಡಲೆಂದು ತಾತ್ಕಾಲಿಕ ವಿಸಾ ಅಥವಾ ಖಾಯಂ ಆಗಿ ಇರುವುದಾದರೆ ಗ್ರೀನ್ ಕಾರ್ಡ್ ಮಾಡಿಸಿಕೊಂಡು ಮಕ್ಕಳೊಡನೆ, ಮೊಮ್ಮಕ್ಕಳೊಡನೆ ಬೆರೆಯಲು ಸಂತೋಷ ಪಡುತ್ತಾರೆ. ಜೊತೆಗೆ ಹೀಗೆ ಬಂದವರನ್ನೂ ಆಚೀಚೆ ಮನೆಯವರು ಆಗಾಗ ಊಟಕ್ಕೆ ಕರೆಯುತ್ತಿರುವುದು ವಾಡಿಕೆ. ಊರವರ ಜೊತೆ ಇದ್ದ ತೃಪ್ತಿ ಅವರದಾಗುವುದಂತೆ. ಹಗೆ ಊಟಕ್ಕೆ ನಾವೂ ಈ ಒಂದು ವರ್ಷದಲ್ಲಿ ಕೆಲವು ಮನೆಗಳಿಗೆ ಮಕ್ಕಳೊಡನೆ ಹೋಗಿದ್ದೆವು. ಮೊನ್ನೆ ಮೈಸೂರಿನವರೊಬ್ಬರ ಮನೆಗೆ ಹೋಗಿದ್ದೆವು.ಅವರ ಮಡದಿ ಮಂಗಳೂರಿನವಳಂತೆ. ಮೂಲ ಎಂದರೆ ಅವಳ ತಾಯಿಮನೆ ಕೇರಳದ ತಿರುವನಂತಪುರವಂತೆ. ೫ ವರ್ಶದ ಒಬ್ಬ ಗಂಡು ಮಗ ಮತ್ತು ಒಂದುವರ್ಷ ಪೂರೈಸಿದ ಹೆಣ್ಣು ಮಗು ಹೀಗಿತ್ತು ಅವರ ಕುಟುಂಬ. ಹೆಣ್ನು ಮಗುವಿನ ಪ್ರಥಮ ವರ್ಷಾಚರಣೆಯನ್ನು ಒಂದು ರೆಸ್ಟೋರೆಂಟ್ ನಲ್ಲಿ ತುಂಬ ಭರ್ಜರಿಯಾಗಿ ಮಾಡಿದ್ದರು. ಕೂಟಕ್ಕೆ ನಾವೂ ಹೋಗಿದ್ದೆವು.೬೦ ಜನಕ್ಕಿಂತಲು ಹೆಚ್ಚು ಜನಕ್ಕೆ ಊಟ ಹಾಕಿದ್ದರು.ಈ ದಿನ ಒಂದು ಸೌಹಾರ್ದ ಕೂಟ. ನಾವೂ ಮಂಗಳೂರವರೆಂಬ ಅಭಿಮಾನದಿಂದ ಕರೆದಿದ್ದರು. ನಾನು ನನ್ನ ಮಡದಿ,ಮಗ ಸೊಸೆ,ಮೊಮ್ಮಗ ಮತ್ತು ಸೊಸೆಯ ತಾಯಿ ಒಟ್ಟು ಆರು ಜನ ಅವರಿಗೆ ಅತಿಥಿಗಳು. ಊರಲ್ಲಿ ಕೂಡಾ ಅಂತಹ ಸತ್ಕಾರ ಸಿಕ್ಕಿರಲಿಲ್ಲ. ತಲಪುವಾಗಲೇ ಒಂದು ಗಂಟೆಯಾಗಿದ್ದುದರಿಂದ ಊಟಕ್ಕೇ ಕುಳಿತೆವು.ಮೊದಲು ಬಡಿಸಿದ್ದು,ಎಲೆಯಪ್ಪ ಎಂಬ ಹೆಸರಿನ ಶಾವಿಗೆಯನ್ನು. ಮತ್ತೆ ನಮ್ಮ ಮನೆಗಳಲ್ಲಿ ಮಾಡುವ ತರದ ಮೇಲೋಗರ. ಅಚ್ಚ ಹವ್ಯಕ ಶೈಲಿಯ ಮೇಲೋಗರ ರುಚಿ ರುಚಿಯಾಗಿತ್ತು. ಸಾರು,ಹಪ್ಪಳ, ಮತ್ತೆ ಟೊಮೆಟೋದಿಂದ ಮಾಡಿದ ಗೊಜ್ಜು, ಸ್ಪೈನೇಚಿನಿಂದ ಮಾದಿದ ತಂಬುಳಿ,ಮೊಸರು, ಜೊತೆಗೆ ಅಪ್ಪೆ ಮಿಡಿ ಉಪ್ಪಿನ ಕಾಯಿ ತರ ತರದ ಪದಾರ್ಥಗಳನ್ನು ಕೂಡಿ ಉಂಡವರಿಗೆ ಊಖ್ಯವಗಿ ನನಗೆ ಹೊಟ್ಟೆ ಬಂದು ಮಡಿಲಲ್ಲಿ ಕುಳಿತದ್ದು ಗೊತ್ತಾದ ಮೇಲೆಯೇ ಎದ್ದದ್ದು. ಕುಳಿತು ಉಸಿರು ಬಿಡಬೇಕಾದರೆ ಮತ್ತೆ ಬಂತು ಕೇರಟ್ಟಿನ ಜೊತೆ ಕೇಸರಿ ಮತ್ತು ಗೇರುಬೀಜ ಹಾಕಿದ ಖೀರು ಕಂಡ ಮೇಲೆ ಬಿಡುವುದಕ್ಕಗುತ್ತದೆಯೇ! ತಯಾರಿಸಿದ ಮೇಲೆ ಒಂದು ಕಪ್ ಮಾತ್ರ ತಿಂದುದಾದರೂ ಬಾಯಿರುಚಿ ಮರೆಯುವಂತಿಲ್ಲ. ಮತ್ತೆ ತಾಂಬೂಲ ಹಾಕಿಕೊಳ್ಳುವಿರೋ ಎಂದೆಲ್ಲ ಊರಿನ ತರವೆ ಕೇಳಿದರು. ಎಲೆ ಅಪ್ಪ,ಕೇರಳದಲ್ಲಿ ಕರೆಯುವ ಹೆಸರು. ಶಾವಿಗೆ ಮತ್ರ ನಮ್ಮೂರ ತರ ತಯಾರಿಸುವುದಲ್ಲ ಎಂದು ಸಂಯುಕ್ತ ಎಂಬ ಹೆಸರಿನ ಅಕೆ ಹೇಳಿದರು. ಮೂರು ಕಪ್ ಅಕ್ಕಿ ಹುಡಿಗೆ ನಾಲ್ಕು ಕಪ್ ನೀರು ಸೇರಿಸಿ ಸ್ವಲ್ಪ ರುಬ್ಬಿ ಗಟ್ತಿ ಹಿಟ್ಟನ್ನು ಚಕ್ಕುಲಿ ಮುಟ್ಟಿನಲ್ಲಿ ಶಾವಿಗೆಯ ಅಚ್ಚನ್ನುಪಯೋಗಿಸಿ ಇಡ್ಲಿಯಂತೆ ತಟ್ಟೆಯಲ್ಲಿ ಹಾಕಿ ಇಡ್ಲಿ ಪಾತ್ರೆಯೊಳಗಿಟ್ಟು ಬೇಯಿಸುವುದು. ಬೇಯಿಸುವುದು. ಬೇಯುವ ಹೊತ್ತಿಗೆ ಇಡ್ಲಿಯಂತೆ ಗರಿ ಗರಿಯಾಗಿ ಬಾಯಲ್ಲಿ ನೀರೂರುವಂತೆ ಕಾಣುತ್ತಿದೆ. ಕೇರಳದಲ್ಲಿ ಹೀಗೆ ಬೇಯಿಸುವ ತಿಂಡಿಯನ್ನು ಅಪ್ಪ ಎನ್ನುತ್ತಾರೆ. ಇದನ್ನು ತಯಾರಿಸುವ ವಿಧಾನವನ್ನು ಕೇಳಿಕೊಂಡು ಬಂದ ನನ್ನ ಮಡದಿ ಮರುದಿ ಸಂಜೆಗೆ ಇದೇ ತಿಂಡಿಯನ್ನು ಮಾಡುವೆನೆಂದು ಪ್ರಯತ್ನಿಸಿ ನಮಗೆಲ್ಲ ತಿನಬಡಿಸಿದ್ದು ಆಕೆಯ ಸಾಧನೆ.ಬೆರೆ ಮನೆಗಳಿಗೆ ಹೋದಾಗ ತಿಂದ ಹೊಸ ತಿಂಡಿಯನ್ನು ಮಾಡುವ ವಿಧಾನವನ್ನು ಕೇಳಿಕೊಂಡು ಬಂದು ಪ್ರಯೋಗಿಸುವುದು ಅವಳ ಜಾಯಮನವಾಗಿ ನನಗು ಹೊಸ ತಿಂಡಿಗಳನ್ನು ತಿನ್ನುವ ಭಾಗ್ಯ ಆಗಾಗ ಬಂದೊದಗುತ್ತಿತ್ತು. ಊರಿಗೆ ಹೋದ ಮೇಲೆಯೂ ಹೊಸ ತಿಂಡಿಗಳನ್ನು ತಿಂದುಕೊಂಡಿರಬಹುದೆಂಬ ಆಸೆಯಲ್ಲಿದ್ದೇನೆ.
ಜನ್ಮ ದಿನದ ಕೂಟ
ಜನ್ಮ ದಿನದ ಕೂಟ
ಹುಟ್ಟು ಹಬ್ಬ ಆಚರಿಸುವದು ಈಗ ಸಾಮಾನ್ಯ. ನಮ್ಮೂರಿಲ್ಲಿ ಜನ್ಮ ದಿನಾಚರಣೆ ಹೇಳುವದು ಈಗ ಚಾಲ್ತಿಲ್ಲಿದ್ದರೂ ಮದಲು ಇತ್ತಿಲ್ಲೆ. ಹುಟ್ಟು ಹಬ್ಬದ ದಿನ ಮನೆಲ್ಲೇ ಭಟ್ರ ಬಪ್ಪಲೆ ಹೇಳಿ ಏನಾದರೂ ವಿಶೇಷ ಪೂಜೆ ಮಾಡುವದೋ, ಅಥವಾ ಹತ್ತರೆ ದೇವಸ್ಥಾನ ಇದ್ದರೆ ಅಲ್ಲಿಗೆ ಹೋಪದೋ ಮಾಡುವದು ಇದ್ದತ್ತು. ಈಗ ನಮ್ಮೂರಿಲ್ಲಿಯೂ ಅದೇ ಪ್ರಾಯದ ನೆರೆಕರೆಲ್ಲಿಪ್ಪ ಮಕ್ಕಳನ್ನೂ ಮನೆಗೆ ಬಪ್ಪಲೆ ಹೇಳುವದು, ಕೇಕ್ ಕಟ್ ಮಾಡುವದು ಮೇಣದ ಬತ್ತಿ ಹೊತ್ತುಸುವದು ಎಲ್ಲ ಶುರುವಾಯಿದು. ನಿಜಕ್ಕೂ ಈ ಸಂಪ್ರದಾಯ ಇತ್ತೀಚೆಗೆ ವಿದೇಶಿಗರ ಸಂಪರ್ಕಂದಲೇ ಆದ್ದಿರೆಕ್ಕು. ದೀಪ ಹೊತ್ತುಸಿ ಊದಿ ನಂದುಸುವದು ನಮ್ಮ ಧಾರ್ಮಿಕ ಭಾವನೆಗೆ ವಿರೋಧವಾವುತ್ತಾದರೂ, ಜನಂಗೊ ಅದು ಮೂಢನಂಬಿಕೆ ಹೇಳಿ ಬಾಯಿ ಮುಚ್ಚುಸುತ್ತವು. ಎಲ್ಲ ಕಾಲಕ್ಕೆ ತಕ್ಕ ಕೋಲ! ಒಳುದೋರೆಲ್ಲ ಮಾಡಿ ಸಂತೋಷ ಪಡುವಗ, ನಾವುದೇ ಮಾಡದ್ದರೆ ಮಕ್ಕೊಗೂ ಕೊರತ್ತೆಯಾಗಿ ಕಾಣುತ್ತು. ರಾಜಕೀಯ ನಾಯಕಂಗೊಅವರ ದೊಡ್ಡಸ್ತಿಕೆಯ ತೋರುಸಿಗೊಂಬಲೆ ಭಾರೀ ಗೌಜಿಲ್ಲಿ ಆಚರುವದಿದ್ದು. ಸರಕಾರದ ಹೇಳಿದರೆ ಜನರ ಹಣವ, ಬೇಕಾದಷ್ಟು ತಿಂದು ಕೊಬ್ಬಿದ ಮುಂದಾಳುಗೊ, ಅವರ ಶ್ರೀಮಂತಿಕೆಯ ತೋರುಸುಲೆ ಸಾವಿರಾರು ಜನಂಗೊಕ್ಕೆ ಅನ್ನದಾನ, ವಸ್ತ್ರದಾನ ಹೇಳಿ ಮಾಡಿಕ್ಕಿ ಮತ್ತೆ ಆ ಖರ್ಚಿನ ಸಾರ್ವಜನಿಕ ಫಂಡಿಂದ ಭರ್ತಿ ಮಾಡ್ಯೊಳ್ಳುತ್ತವು. ಇದರ ನಾವು ಮಾತಾಡಿ ಪ್ರಯೋಜನ ಇಲ್ಲೆ. ಅಧಿಕಾರ ಸಿಕ್ಕುವನ್ನಾರ ಜನಂಗಳ ಕೈಕಾಲು ಹಿಡುದು ಮತ್ತೆ ಇತ್ಲಾಗ್ಯಂಗೆ ತಿರುಗಿಯೂ ನೋಡವು. ಆದರೆ ವಿದೇಶಲ್ಲಿ ಹುಟ್ಟು ಹಬ್ಬವ ಗೌಜಿಲ್ಲಿ ಆಚರಿಸುವುದರಲ್ಲಿಯೂ ಒಂದು ವಿಶಿಷ್ಟತೆ ಕಂಡತ್ತು.
ಅಮೇರಿಕಲ್ಲಿ ಆನಿಪ್ಪಗ, ಹತ್ತಿಪ್ಪತ್ತು ಹೀಂಗಿಪ್ಪ ಹುಟ್ಟು ಹಬ್ಬಂಗೊಕ್ಕೆ ಆನು ಹೋಗಿತ್ತಿದ್ದೆ. ಅಮೇರಿಕಲ್ಲಿ ಉದ್ಯೋಗ ಮಾಡ್ಯೊಂಡಿಪ್ಪ ಭಾರತೀಯರು, ಒಬ್ಬಕ್ಕೊಬ್ಬ ಸಂಪರ್ಕ ಮಡಿಕ್ಕೊಂಬಲೆ ಈ ಹುಟ್ಟು ಹಬ್ಬವೂ ಸಹಾಯ ಅವುತ್ತು. ಊರು ಬಿಟ್ಟು ದೂರಲ್ಲಿಪ್ಪವಕ್ಕೆ, ಉದ್ಯೋಗದ ಎಡೆಲ್ಲಿ ಮನಸ್ಸಂತೋಷಕ್ಕಾಗಿ ಪರಸ್ಪರ ಒಟ್ಟು ಸೇರಿಗೊಂಡು,ಕೊಶಿಪಡುತ್ತವು. ಕೆಲವು ಜನ ಅವರ ಮಕ್ಕಳ ಎರಡನೆಯ ಹೇಳಿದರೆ ಹುಟ್ಟಿ ಒಂದು ವರ್ಷ ಕಳುದ ಮೇಲೆ ಕೊಶಿಲ್ಲಿ ಹೆಚ್ಚು ಭರ್ಜರಿಯಾಗಿ ಆಚರುಸುತ್ತವು. ಕೆಲವು ಜನ ಅವರವರ ಮನೆಲ್ಲಿ, ಇನ್ನು ಕೆಲವು ಜನ ಕೆಲವು ರೆಸ್ಟೋರೆಂಟ್ ಗಳಲ್ಲಿ ಊಟದ ವ್ಯವಸ್ಥೆಯೂ ಮಾಡುತ್ತವು . ಐವತ್ತು ಅರುವತ್ತು ಜನ ಸೇರುವದೂ ಇದ್ದು. ಅರುವತ್ತು ಮೈಲು ದೂರಂದಲೂ ಬಂದು ಸೇರುತ್ತವು. ಅದೇ ಪ್ರಾಯದ ಮಕ್ಕಳೂ ಒಟ್ಟು ಸೇರಿ ಆಡುವದು, ಪಿಸ್ಸ ತಿಂಬದು, ಹೀಂಗೆಲ್ಲ. ದೂರಂದ ಬಂದೋರಿಂಗೆ ಆಸರಿಂಗೆ ಹೇಳಿಯೋ, ಎಪಿಟೈಸರ್ ಹೇಳಿಯೋ ಸಣ್ಣ ಪಾರ್ಟಿ, ಬಂದ ಕೂಡಲೇ ಇರುತ್ತು. ಮಕ್ಕಳೂ ಜ್ಯೂಸ್ ಮತ್ತೆ ಕುರು ಕುರು ತಿಂಡಿ ತಿಂದಿಕ್ಕಿ ಆಡಿಗೊಂಡು ಇರುತ್ತವು. ದೊಡ್ಡಾದೋರು, ಸ್ನೇಕ್ಸ್ ತಿಂದು ಜ್ಯೂಸ್ ಕುಡಿತ್ತವು. ಮತ್ತೆ ಒಂದೊಂದು ಶುದ್ದಿ ಮಾತಾಡ್ಯೊಂಡು ಇರುತ್ತವು. ಮತ್ತೆ ಊಟ. ಆದಮೇಲೆ ಕೇಕ್ ಕಟ್ ಮಾಡುವದು ಆದ ಮೇಲೆ , ಕೇಕ್ ಎಲ್ಲೋರು ತಿಂದಿಕ್ಕಿ ಸಭೆ ಬಿರಿತ್ತು. ಮುಖ್ಯವಾಗಿ ಹೀಂಗಿಪ್ಪ ಹೆಳೆಲ್ಲಿ ಒಟ್ಟುಸೇರಿ ವಿಚಾರ ವಿನಿಮಯ ಮಾಡ್ಯೊಂಡು, ಜೀವನದ ಸುಖವ ಸವುಕ್ಕೊಂಡು ಸುಖವಾಗಿ ಇಪ್ಪದರ ನೋಡಿದರೆ ನಮಗೂ ಕೊಶಿ ಆವುತ್ತು. ಇಲ್ಲಿಪ್ಪ ನಮ್ಮ ಮಕ್ಕಳೊಟ್ಟಿಂಗೆ ನಾವಿದ್ದರೆ ನಮಗೂ ಊರು ಬಿಟ್ಟು ದೂರದ ಒಂದು ರಾಜ್ಯಲ್ಲಿ ಇದ್ದೆಯೊ ಹೇಳುವ ಚಿಂತೆಯೂ ಇರುತ್ತಿಲ್ಲೆ. ಜೀವನ ಸುಖವ ಅನುಭವಿವ ಭಾಗ್ಯ ವಿದೇಶಂಗಲಲ್ಲಿಪ್ಪೋವಕ್ಕೆ ಇದ್ದು ಹೇಳಿರೆ ತಪ್ಪಲ್ಲ. ನಮ್ಮ ದೇಶಲ್ಲಿ ಪೇಪರ್ ನೋಡಿದರೆ ಸಿಕ್ಕುವ ಶುದ್ದಿಗೊ, ಅಲ್ಲಲ್ಲಿ ನಡವ ಗಲಾಟಗೊ,ರಾಜಕೀಯ ಡೊಂಬರಾಟಂಗೊ ತಪ್ಪಿದರೆ ಬೇರೆಂತದೂ ಇಲ್ಲೆ. ವಿದೇಶಲ್ಲಿಪ್ಪೋವಕ್ಕೆ ಒಂದು ರೀತಿಲ್ಲಿ ಅವರ ಕೆಲಸ ಮತ್ತು ಕುಟುಂಬದ ಯೋಚನೆ ಬಿಟ್ಟರೆ ಬೇರೆ ಚಿಂತೆ ಇರುತ್ತಿಲ್ಲೆ. ಅದಕ್ಕೆ ಹೀಂಗೆ ಒಟ್ಟು ಸೇರುವಗ ಅವರ ಕೆಲಸದ ಶುದ್ದಿ, ಮತ್ತೆ ಮಕ್ಕಳ ಶುದ್ದಿ, ಮತ್ತೆ ವಾರದ ಕೊನೆಗೆ ಎಲ್ಲಿಗಾದರೂ ಪ್ರವಾಸ ಹೋದ ಶುದ್ದಿ ಹೀಂಗೆಲ್ಲ ಮಾತಾಡುಲೆ ಇದೇ ಸಮಯ. ಇಂಡಿಯಕ್ಕೆ ಹೋಯಿದೆಯೊ? ಊರಿಲ್ಲೆಲ್ಲ ಎಂತ ಆಡುತ್ತವು? ಇದರ ಎಲ್ಲ ಮಾತಾಡುವಗ ಎಡೆಲ್ಲಿ ಕೇಳಿಗೊಳ್ಳುತ್ತವು.ಸಣ್ಣ ಪುಟ್ಟ ಕಾಯಿಲೆಗೊಕ್ಕೆ ಇನ್ಶೂರೆನ್ಸ್ ಚಿಕಿತ್ಸಾ ಸೌಲಭ್ಯ ಕೊಡುತ್ತು. ವರ್ಷಕ್ಕೊಂದರಿ ನಮ್ಮ ಬಪ್ಪಲೆ ಹೇಳಿ ಚೆಕಪ್ ಮಾಡಿ ಆರೋಗ್ಯದ ಮಟ್ಟಿಂಗೆ ಸಲಹೆ ಕೊಡುತ್ತವು. ಮತ್ತೆ ಸಾಧ್ಯವಾದರೆ ಆಧ್ಯಾತ್ಮಿಕ ಚಿಂತೆ ಮಾಡುಲೂ ಎಡೆ ಇದ್ದು. ಬೇರೆ ಬೇರೆ ದೇವಸ್ಥಾನಂಗಳಲ್ಲಿ ಕೂಟ ಕೂಡುವದೂ ಇದ್ದು. ಅಲ್ಲದ್ದರೆ ಅಲ್ಲಲ್ಲಿ ಟೆನ್ನಿಸ್ ಕೋರ್ಟ್ ಗೊ ಮತ್ತೆ ಕ್ಲಬ್ ಗೊ ಇರುತ್ತು.ಮನಸ್ಸಿಂಗೂ ದೇಹಕ್ಕೂ ಆರೋಗ್ಯ ಕಪಾಡುಲೆ ಬೇರೆಂತ ಬೇಕು!
ಒಂದು ವರ್ಷಂದಲೂ ಹೆಚ್ಚು ಸಮಯಂದ ಹೀಂಗಿಪ್ಪ ಕೂಟಕ್ಕೆ ಹೋದರೂ ಇಂದ್ರಾಣದ್ದು ಬಹುಶಃ ಈ ಸರ್ತಿ ಅಖೈರಿಯ ಕೂಟ ಹೇಳಿ ಕಾಣುತ್ತು. ಕಾಸರಗೋಡಿನ ಕುಳೂರಿನವಡೊ.ಗೋಪಾಲಣ್ನ ಹೇಳಿ ಹೆಸರು.ಇಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಲ್ಲಿದ್ದವು. ಒಂದು ಕೂಸು ಒಬ್ಬ ಮಾಣಿ ಹೀಂಗೆ ಎರಡು ಮಕ್ಕೊ ಅವಂಗೆ. ಹುಡುಗಿ ಸಣ್ಣದು. ಆರು ವರ್ಷ ಕಳುದು ಏಳನೆಯ ಜನ್ಮ ದಿನದ ಕೂಟಕ್ಕೆ ಐದಾರು ಮನೆಯೋರ ಬಪ್ಪಲೆ ಹೇಳಿ ಶನಿವಾರ ಹೊತ್ತೋಪಗ ಈ ಕೂಟ ಇತ್ತು. ಬಂದೋರೆಲ್ಲ ಹವೀಕರೇ. ಮಾತಾಡಿ ನೋಡುವಗ ಎಲ್ಲೋರುದೆ ಸಂಬಂಧಿಕರೇ ಆಗಿತ್ತಿದ್ದವು. ಬಂದೋರಲ್ಲಿ ಕೆಲವು ಜನಂಗಳ ಒಂದೆರಡು ಸರ್ತಿ ಅವರ ಭೇಟಿಯಾಗಿತ್ತು. ಹೀಂಗಿಪ್ಪ ಕೂಟಂಗಳ ವ್ಯವಸ್ಥೆ ಮಾಡುವದು ಮುಖ್ಯವಾಗಿ ಒಬ್ಬಕ್ಕೊಬ್ಬನ ಸಂಪರ್ಕ ಹೆಚ್ಚಪ್ಪಲೆ ಒಳ್ಳೆದಾವುತ್ತುಎನ್ನ ಎರಡನೆಯ ಮಗನ ಮಗಳು ಪುಳಿಯೂ ಎಂಗಳೊಟ್ಟಿಂಗೆ ಇತ್ತು. ಸಣ್ಣ ಮಗನ ಮಗನೂ ಸೇರಿ ಹತ್ತು ಮಕ್ಕೊ ಇತ್ತಿದ್ದವು. ಮಕ್ಕೊ ಎಲ್ಲ ಹೀಂಗಿಪ್ಪ ಕೂಟಂಗಳಲ್ಲಿ ಕಾಂಬಲೆ ಸಿಕ್ಕಿದೋವೇ. ಒಬ್ಬಕ್ಕೊಬ್ಬಂಗೆ ಪರಿಚಯ ಇತ್ತು. ಹೊಸಬ್ಬೆತ್ತಿ ಹೇಳಿರೆ ಟೊರೊಂಟೋಂದ ಬಂದಿದ್ದ ಪುಳ್ಳಿ ಮಾಂತ್ರ. ಮಕ್ಕೊ ಕಂಡ ಕೂಡಲೇ ಒಬ್ಬಕ್ಕೊಬ್ಬನ ದಿನಿಗೇಳ್ಯೊಂಡು ಜಾಗೆ ಇದ್ದಲ್ಲಿ ಕೂದು ಆಟವೋ ಮೇಲೆ ಉಪ್ಪರಿಗ್ಗೆ ಹತ್ತಿ ಇಳುದು ಮಾಡುವದೋ ಎಂತೆಲ್ಲ ಆಟ ಆಡುಲೆ ಶುರು ಮಾಡಿರೆ ದಿನಿಗೇಳಿರೆ ಕೇಳ ಅವಕ್ಕೆ. ತಿಂಬಲೂ ಒತ್ತಾಯಲ್ಲಿ ತಿನಿಸೆಕ್ಕು.ತುಂಬ ಸಂತೋಷಲ್ಲಿ ಇತ್ತಿದ್ದವು. ಮಕ್ಕೊಗೆ ಬೇಕಪ್ಪ ಆಟದ ಸಾಮಾನು ಪ್ರತಿ ಮನೆಲ್ಲೂ ಇರುತ್ತು. ಆಡುವ ಕ್ರಮವೂ ಅವಕ್ಕೆ ಗೊಂತಿರುತ್ತು.ಎಡೆಯೆಡೆಲ್ಲಿ ಜಗಳ ಬಂದರೂ ಮತ್ತೆ ರಾಜಿ ಆಗ್ಯೊಳ್ಳುತ್ತವು. ಸಾಲದ್ದದಕ್ಕೆ ಈ ಸಮಯಲ್ಲೇ ಅವರ ಸೆಕೆಗಾಲದ ರಜೆಯೂ ಇದ್ದು. ಆಟದ ಸಾಮಾನುಗಳ ಒಬ್ಬಕ್ಕೊಬ್ಬ ಹಂಚಿಗೊ<ಡು ಜಗಳ ಇಲ್ಲದೆ ಆಡುತ್ತವು. ಅವರ ಆಟ ನೋಡುಲೇ ಚೆಂದ. ಬಂದೋರಲ್ಲಿ ಒಬ್ಬ ೮೯ ವರ್ಷ ಪ್ರಾಯದೋನು ಎನ್ನ ಗುರ್ತ ಮಾಡ್ಯೊಂಡು "ನಾವು ಸೀನಿಯರ್ ಸಿಟಿಸನ್ಸ್ ಅಲ್ಲದೋ ಇಲ್ಲಿಯೆ ಮಾತಾಡ್ಯೊಂಡಿಪ್ಪ ಹೇಳಿ ಮಾತಾಡ್ಯೊಂಡಿದ್ದವು. ಅವರ ಮಗಳ ಮಗಳು ಅಮೇರಿಕಲ್ಲಿ ಡಾಕ್ಟರಡೊ. ಅಳಿಯನೂ ಡಾಕ್ಟರೇ ಅಪ್ಪು. ಆದರೆ ಅವು ಅಜ್ಜನನ್ನೂ ಮಾವ ಅತ್ತೆಯನ್ನೂ ಇಲ್ಲಿ ಬಿಟ್ಟಿಕ್ಕಿ ಹೋಗಿತ್ತವು. ಮತ್ತೆ ಮನೆಯೋನ ದೊಡ್ಡ ಮಾವನ ಹೆಂಡತ್ತಿ. ಉಕ್ಕಿನಡ್ಕದ ಹೆಮ್ಮಕ್ಕೊ. ಮತ್ತೆ ನೋಡುವಗ ಅವರ ಅಜ್ಜನ ಮನೆ ಎಂಗಳ ಬಾಳಿಕೆ ಹತ್ರೆ ಆಗಿತ್ತು. ಹಾಂಗೆ ಮಾತಾಡುಲೆ ತುಂಬ ಅನುಕೂಲ ಆತು. ಹೋದ ಕೂಡಲೇ ಗೋಧಿ ರೊಟ್ಟಿಯೋ,ಚಿಪ್ಸೋ, ಹೀಂಗೆಲ್ಲ ತಿಂಬಲೆ ಮತ್ತೆ ಕುಡಿವಲೆ ಜ್ಯೂಸ್ ಕೊಟ್ಟವು.ಒಂದರ್ಧ ಘಂಟೆ ಕಳುದು ಮಕ್ಕಳ ಬರುಸಿ ಪಿಸ್ಸ ಕುಡಿವಲೆ ಜ್ಯೂಸ್ ಎಲ್ಲ ಕೊಟ್ಟವು. ಈ ಸಮಯಲ್ಲಿ ಸೂರ್ಯ ಕಂತುವಗಳೇ ಎಂಟೂವರೆ ಗಂಟೆ ಲ್ಕಳಿತ್ತು. ಮತ್ತೆ ಊಟದ ವ್ಯವಸ್ಥೆ ಎಲ್ಲ ಮನೆದೇ ಆಡಿಗೆ. ಊರಿಲ್ಲಿ ನೆರೆಕರೆಂಗೆ ಹೋದ ಹಾಂಗೆ . ಆದರೆ ದೂರ ಮಾಂತ್ರ ಮಗನ ಮನೆಂದ ಒಂದೂವರೆ ಗಂಟೆ ದಾರಿ. ಮೇಜಿ ಮೇಲೆ ಸಾರು ಸಾಂಬಾರು, ಮೇಲಾರ.ತಂಬುಳಿ,ಚಟ್ಣಿ. ಮಾವಿನ ಹಣ್ಣಿನ ರಸಾಯನ, ಹಸರು ಪಾಯಸ,ಚಪಾತಿ, ಎರಡು ಬಗೆ ಪಲ್ಯ,ಅನ್ನ, ಮೊಸರು ಹೀಂಗೆಲ್ಲ ಮಡಗಿತ್ತಿದ್ದವು. ಅಂತೂ ಊಟ ಗಡದ್ದಾಗಿತ್ತು. ಸ್ವೀಟ್ ಸೆವೆನ್ ಕಪ್ ಕೂಡಾ ಇತ್ತು. ಬೇಕಾದ್ದರ ಅವವು ಪೇಪರ್ ತಟ್ಟೆಗೆ ಹಾಯ್ಕೊಂಡು ಆಚಿಕೆ ಮೇಜಿನ ಹತ್ತರೆ ಕೂದು ತಿಂದೊಂಬದು.ಎನಗೆ ಶನಿವಾರ ಒಂದೇ ಹೊತ್ತು ಊಟ . ಅದಕ್ಕೆ ಎರಡು ಚಪಾತಿ ತೆಕ್ಕೊಂಡು ಒಂದು ಕಪ್ಪಿಲ್ಲಿ ರಸಾಯನವೂ ಹಾಯ್ಕೊಂಡು ತಿಂಬಲೆ ಶುರು ಮಾಡಿದೆ. ಸಾರು ಕಪ್ಪಿಲ್ಲಿ ತಂದು ಕುಡುದೆ.ಪಾಯಸವನ್ನೂ ತಿಂದೆ. ಎನ್ನ ಊಟ ಅಷ್ಟಕ್ಕೆ ಆತು. ಎಲ್ಲೋರೂ ಮತಾಡ್ಯೊಂಡು ಒಂದರ್ಧ ಗಂಟೆಲ್ಲಿ ಊಟ ಕಳಾತು. ಎಲ್ಲೋರದ್ದೂ ಊಟ ಮುಗುದ ಮೇಲೆ ಇನ್ನೊಂದು ಹಾಲಿಲ್ಲಿ ಉದ್ದದ ಮೇಜಿತ್ತು ಅದರಲ್ಲಿ ಎರಡು ಕೇಕ್ ತಂದು ಮಡಗಿದವು. ಮಗಲ ಹತ್ತರೆ ಕೇಕ್ ಕಟ್ ಮಾಡುಲೆ ಹೇಳಿದವು. ಅಲ್ಲಿದ್ದ ಮಕ್ಕೊ ಎಲ್ಲ ಒಂದು ಕಾಗದ ಟೊಪ್ಪಿ ಮಡಿಕ್ಕೊಂಡಿಪ್ಪಗ ಫೋಟೋ ತೆಗೆದವು. ಹೇಪ್ಪಿ ಬರ್ತ್ ಡೇ ಹೇಳಿದವು. ಮತ್ತೆ ಕೇಕಿನ ತುಂಡು ತುಂಡು ಮಾಡಿ ಎಲ್ಲೋರೂ ತಿಂದೆಯೋ. ಇಷ್ಟೆಲ್ಲ ಆಗಿ ಮುಗಿವಗ ಒಂಬತ್ತೂವರೆ ಗಂಟೆ. ಮತ್ತೆ ಬಂದೋರಿಂಗೆಲ್ಲ ವಿದಾಯ ಹೇಳಿಕ್ಕಿ ಮನೆಂದ ಹೆರಡುವಗ ಗಂಟೆ ಹತ್ತು ಕಳುದ್ದು. ಒಂದು ಗಂತೆಲ್ಲಿ ಮನಗೆ ಎತ್ತಿದೆಯೋ.ರಾತ್ರಿಯಾದರೂ ವಾಹನಂಗೊ ಸಾರಿಗಟ್ಟಿ ಹೋಯ್ಕೊಂಡಿದ್ದ ಕಾರಣ,ವಾಹನ ಓಡುಸುಲೆ ಕಷ್ಟ ಆದರೂ,ಮಗ ವೆಗವ ಹೊಂದಿಸಿಗೊಂಡು ಮನೆಗೆ ಎತ್ತುವಗ ಹನ್ನೊಂದೂವರೆ. ಇಲ್ಲಿಯಾಣವಕ್ಕೆ ರಾತ್ರಿ ಹಗಲಿನ ವ್ಯತ್ಯಾಸ ಗೊಂತಿಲ್ಲೆಯೊ ಏನೋ! ಮಾಎಗವೂ ಒಳ್ಳೆದಿಪ್ಪ ಕಾರಣ ನಿರ್ಭೀತಿಂದ ಹೆಮ್ಮಕ್ಕೊ ಆದರೂ ಒಂದೂರಿಂದ ಇನ್ನೊಂದು ಊರಿಂಗೆ ವಹನ ಓಡುಸ್ಯೊಂಡು ಹೋಪದು ನೋಡುವಗ ತುಂಬ ಕೊಶಿ ಅವುತ್ತು. ಭಯೋತ್ಪಾದನೆ, ಒಂದು ಸಮುದಾಯಕ್ಕೆ ಮಾಂತ್ರ ರಕ್ಷಣೆ ಕೊಡುವ ಸಂಪ್ರದಾಯ ಓಟಿನ ಆಟಂಗೊ ನಮ್ಮ ದೇಶಲ್ಲಿ ಮುಂದುವರಿತ್ತಾ ಇಪ್ಪದು ಕಾಂಬಗ ನಾಚಿಕೆ ಅವುತ್ತು. ಧಾರ್ಮಿಕತೆ ಒಂದಿಷ್ಟು ಇದ್ದರೂ ನೈತಿಕತೆ, ಭ್ರಷ್ಟಾಚಾರ ಬಿಟ್ಟಿಕ್ಕುಲೆ ಒಂದು ಸಮುದಾಯಕ್ಕೆ ಇನ್ನೂ ಇಷ್ಟ ಇಲ್ಲೆ ಹೇಳಿ ಕಾಣುತ್ತು. ರಾಮ ರಾಜ್ಯ ಹೇಳಿ ಕನಸು ಕಂಡಿದ್ದೋನೊಬ್ಬ ಸತ್ತು ಹೋಯಿದ. ಮತ್ತೆ ಆರೂ ಹುಟ್ಟಿದ್ದವಿಲ್ಲೆ. ಮುಂದೆ ಯಾವಗಲೋ ಹುಟ್ಟಿ ಬಂದು ದೇಶವ ಮುಕ್ತಗೊಳುಸಿದರೆ ಮತ್ತಾದರೂ ಒಳ್ಳೆದಕ್ಕೋ ಏನೋ? ಆದಿನ ಬೇಗ ಬರಲಿ ಹೇಳಿ ಕೇಳಿಗೊಳ್ಳುತ್ತೆ.
ಹುಟ್ಟು ಹಬ್ಬ ಆಚರಿಸುವದು ಈಗ ಸಾಮಾನ್ಯ. ನಮ್ಮೂರಿಲ್ಲಿ ಜನ್ಮ ದಿನಾಚರಣೆ ಹೇಳುವದು ಈಗ ಚಾಲ್ತಿಲ್ಲಿದ್ದರೂ ಮದಲು ಇತ್ತಿಲ್ಲೆ. ಹುಟ್ಟು ಹಬ್ಬದ ದಿನ ಮನೆಲ್ಲೇ ಭಟ್ರ ಬಪ್ಪಲೆ ಹೇಳಿ ಏನಾದರೂ ವಿಶೇಷ ಪೂಜೆ ಮಾಡುವದೋ, ಅಥವಾ ಹತ್ತರೆ ದೇವಸ್ಥಾನ ಇದ್ದರೆ ಅಲ್ಲಿಗೆ ಹೋಪದೋ ಮಾಡುವದು ಇದ್ದತ್ತು. ಈಗ ನಮ್ಮೂರಿಲ್ಲಿಯೂ ಅದೇ ಪ್ರಾಯದ ನೆರೆಕರೆಲ್ಲಿಪ್ಪ ಮಕ್ಕಳನ್ನೂ ಮನೆಗೆ ಬಪ್ಪಲೆ ಹೇಳುವದು, ಕೇಕ್ ಕಟ್ ಮಾಡುವದು ಮೇಣದ ಬತ್ತಿ ಹೊತ್ತುಸುವದು ಎಲ್ಲ ಶುರುವಾಯಿದು. ನಿಜಕ್ಕೂ ಈ ಸಂಪ್ರದಾಯ ಇತ್ತೀಚೆಗೆ ವಿದೇಶಿಗರ ಸಂಪರ್ಕಂದಲೇ ಆದ್ದಿರೆಕ್ಕು. ದೀಪ ಹೊತ್ತುಸಿ ಊದಿ ನಂದುಸುವದು ನಮ್ಮ ಧಾರ್ಮಿಕ ಭಾವನೆಗೆ ವಿರೋಧವಾವುತ್ತಾದರೂ, ಜನಂಗೊ ಅದು ಮೂಢನಂಬಿಕೆ ಹೇಳಿ ಬಾಯಿ ಮುಚ್ಚುಸುತ್ತವು. ಎಲ್ಲ ಕಾಲಕ್ಕೆ ತಕ್ಕ ಕೋಲ! ಒಳುದೋರೆಲ್ಲ ಮಾಡಿ ಸಂತೋಷ ಪಡುವಗ, ನಾವುದೇ ಮಾಡದ್ದರೆ ಮಕ್ಕೊಗೂ ಕೊರತ್ತೆಯಾಗಿ ಕಾಣುತ್ತು. ರಾಜಕೀಯ ನಾಯಕಂಗೊಅವರ ದೊಡ್ಡಸ್ತಿಕೆಯ ತೋರುಸಿಗೊಂಬಲೆ ಭಾರೀ ಗೌಜಿಲ್ಲಿ ಆಚರುವದಿದ್ದು. ಸರಕಾರದ ಹೇಳಿದರೆ ಜನರ ಹಣವ, ಬೇಕಾದಷ್ಟು ತಿಂದು ಕೊಬ್ಬಿದ ಮುಂದಾಳುಗೊ, ಅವರ ಶ್ರೀಮಂತಿಕೆಯ ತೋರುಸುಲೆ ಸಾವಿರಾರು ಜನಂಗೊಕ್ಕೆ ಅನ್ನದಾನ, ವಸ್ತ್ರದಾನ ಹೇಳಿ ಮಾಡಿಕ್ಕಿ ಮತ್ತೆ ಆ ಖರ್ಚಿನ ಸಾರ್ವಜನಿಕ ಫಂಡಿಂದ ಭರ್ತಿ ಮಾಡ್ಯೊಳ್ಳುತ್ತವು. ಇದರ ನಾವು ಮಾತಾಡಿ ಪ್ರಯೋಜನ ಇಲ್ಲೆ. ಅಧಿಕಾರ ಸಿಕ್ಕುವನ್ನಾರ ಜನಂಗಳ ಕೈಕಾಲು ಹಿಡುದು ಮತ್ತೆ ಇತ್ಲಾಗ್ಯಂಗೆ ತಿರುಗಿಯೂ ನೋಡವು. ಆದರೆ ವಿದೇಶಲ್ಲಿ ಹುಟ್ಟು ಹಬ್ಬವ ಗೌಜಿಲ್ಲಿ ಆಚರಿಸುವುದರಲ್ಲಿಯೂ ಒಂದು ವಿಶಿಷ್ಟತೆ ಕಂಡತ್ತು.
ಅಮೇರಿಕಲ್ಲಿ ಆನಿಪ್ಪಗ, ಹತ್ತಿಪ್ಪತ್ತು ಹೀಂಗಿಪ್ಪ ಹುಟ್ಟು ಹಬ್ಬಂಗೊಕ್ಕೆ ಆನು ಹೋಗಿತ್ತಿದ್ದೆ. ಅಮೇರಿಕಲ್ಲಿ ಉದ್ಯೋಗ ಮಾಡ್ಯೊಂಡಿಪ್ಪ ಭಾರತೀಯರು, ಒಬ್ಬಕ್ಕೊಬ್ಬ ಸಂಪರ್ಕ ಮಡಿಕ್ಕೊಂಬಲೆ ಈ ಹುಟ್ಟು ಹಬ್ಬವೂ ಸಹಾಯ ಅವುತ್ತು. ಊರು ಬಿಟ್ಟು ದೂರಲ್ಲಿಪ್ಪವಕ್ಕೆ, ಉದ್ಯೋಗದ ಎಡೆಲ್ಲಿ ಮನಸ್ಸಂತೋಷಕ್ಕಾಗಿ ಪರಸ್ಪರ ಒಟ್ಟು ಸೇರಿಗೊಂಡು,ಕೊಶಿಪಡುತ್ತವು. ಕೆಲವು ಜನ ಅವರ ಮಕ್ಕಳ ಎರಡನೆಯ ಹೇಳಿದರೆ ಹುಟ್ಟಿ ಒಂದು ವರ್ಷ ಕಳುದ ಮೇಲೆ ಕೊಶಿಲ್ಲಿ ಹೆಚ್ಚು ಭರ್ಜರಿಯಾಗಿ ಆಚರುಸುತ್ತವು. ಕೆಲವು ಜನ ಅವರವರ ಮನೆಲ್ಲಿ, ಇನ್ನು ಕೆಲವು ಜನ ಕೆಲವು ರೆಸ್ಟೋರೆಂಟ್ ಗಳಲ್ಲಿ ಊಟದ ವ್ಯವಸ್ಥೆಯೂ ಮಾಡುತ್ತವು . ಐವತ್ತು ಅರುವತ್ತು ಜನ ಸೇರುವದೂ ಇದ್ದು. ಅರುವತ್ತು ಮೈಲು ದೂರಂದಲೂ ಬಂದು ಸೇರುತ್ತವು. ಅದೇ ಪ್ರಾಯದ ಮಕ್ಕಳೂ ಒಟ್ಟು ಸೇರಿ ಆಡುವದು, ಪಿಸ್ಸ ತಿಂಬದು, ಹೀಂಗೆಲ್ಲ. ದೂರಂದ ಬಂದೋರಿಂಗೆ ಆಸರಿಂಗೆ ಹೇಳಿಯೋ, ಎಪಿಟೈಸರ್ ಹೇಳಿಯೋ ಸಣ್ಣ ಪಾರ್ಟಿ, ಬಂದ ಕೂಡಲೇ ಇರುತ್ತು. ಮಕ್ಕಳೂ ಜ್ಯೂಸ್ ಮತ್ತೆ ಕುರು ಕುರು ತಿಂಡಿ ತಿಂದಿಕ್ಕಿ ಆಡಿಗೊಂಡು ಇರುತ್ತವು. ದೊಡ್ಡಾದೋರು, ಸ್ನೇಕ್ಸ್ ತಿಂದು ಜ್ಯೂಸ್ ಕುಡಿತ್ತವು. ಮತ್ತೆ ಒಂದೊಂದು ಶುದ್ದಿ ಮಾತಾಡ್ಯೊಂಡು ಇರುತ್ತವು. ಮತ್ತೆ ಊಟ. ಆದಮೇಲೆ ಕೇಕ್ ಕಟ್ ಮಾಡುವದು ಆದ ಮೇಲೆ , ಕೇಕ್ ಎಲ್ಲೋರು ತಿಂದಿಕ್ಕಿ ಸಭೆ ಬಿರಿತ್ತು. ಮುಖ್ಯವಾಗಿ ಹೀಂಗಿಪ್ಪ ಹೆಳೆಲ್ಲಿ ಒಟ್ಟುಸೇರಿ ವಿಚಾರ ವಿನಿಮಯ ಮಾಡ್ಯೊಂಡು, ಜೀವನದ ಸುಖವ ಸವುಕ್ಕೊಂಡು ಸುಖವಾಗಿ ಇಪ್ಪದರ ನೋಡಿದರೆ ನಮಗೂ ಕೊಶಿ ಆವುತ್ತು. ಇಲ್ಲಿಪ್ಪ ನಮ್ಮ ಮಕ್ಕಳೊಟ್ಟಿಂಗೆ ನಾವಿದ್ದರೆ ನಮಗೂ ಊರು ಬಿಟ್ಟು ದೂರದ ಒಂದು ರಾಜ್ಯಲ್ಲಿ ಇದ್ದೆಯೊ ಹೇಳುವ ಚಿಂತೆಯೂ ಇರುತ್ತಿಲ್ಲೆ. ಜೀವನ ಸುಖವ ಅನುಭವಿವ ಭಾಗ್ಯ ವಿದೇಶಂಗಲಲ್ಲಿಪ್ಪೋವಕ್ಕೆ ಇದ್ದು ಹೇಳಿರೆ ತಪ್ಪಲ್ಲ. ನಮ್ಮ ದೇಶಲ್ಲಿ ಪೇಪರ್ ನೋಡಿದರೆ ಸಿಕ್ಕುವ ಶುದ್ದಿಗೊ, ಅಲ್ಲಲ್ಲಿ ನಡವ ಗಲಾಟಗೊ,ರಾಜಕೀಯ ಡೊಂಬರಾಟಂಗೊ ತಪ್ಪಿದರೆ ಬೇರೆಂತದೂ ಇಲ್ಲೆ. ವಿದೇಶಲ್ಲಿಪ್ಪೋವಕ್ಕೆ ಒಂದು ರೀತಿಲ್ಲಿ ಅವರ ಕೆಲಸ ಮತ್ತು ಕುಟುಂಬದ ಯೋಚನೆ ಬಿಟ್ಟರೆ ಬೇರೆ ಚಿಂತೆ ಇರುತ್ತಿಲ್ಲೆ. ಅದಕ್ಕೆ ಹೀಂಗೆ ಒಟ್ಟು ಸೇರುವಗ ಅವರ ಕೆಲಸದ ಶುದ್ದಿ, ಮತ್ತೆ ಮಕ್ಕಳ ಶುದ್ದಿ, ಮತ್ತೆ ವಾರದ ಕೊನೆಗೆ ಎಲ್ಲಿಗಾದರೂ ಪ್ರವಾಸ ಹೋದ ಶುದ್ದಿ ಹೀಂಗೆಲ್ಲ ಮಾತಾಡುಲೆ ಇದೇ ಸಮಯ. ಇಂಡಿಯಕ್ಕೆ ಹೋಯಿದೆಯೊ? ಊರಿಲ್ಲೆಲ್ಲ ಎಂತ ಆಡುತ್ತವು? ಇದರ ಎಲ್ಲ ಮಾತಾಡುವಗ ಎಡೆಲ್ಲಿ ಕೇಳಿಗೊಳ್ಳುತ್ತವು.ಸಣ್ಣ ಪುಟ್ಟ ಕಾಯಿಲೆಗೊಕ್ಕೆ ಇನ್ಶೂರೆನ್ಸ್ ಚಿಕಿತ್ಸಾ ಸೌಲಭ್ಯ ಕೊಡುತ್ತು. ವರ್ಷಕ್ಕೊಂದರಿ ನಮ್ಮ ಬಪ್ಪಲೆ ಹೇಳಿ ಚೆಕಪ್ ಮಾಡಿ ಆರೋಗ್ಯದ ಮಟ್ಟಿಂಗೆ ಸಲಹೆ ಕೊಡುತ್ತವು. ಮತ್ತೆ ಸಾಧ್ಯವಾದರೆ ಆಧ್ಯಾತ್ಮಿಕ ಚಿಂತೆ ಮಾಡುಲೂ ಎಡೆ ಇದ್ದು. ಬೇರೆ ಬೇರೆ ದೇವಸ್ಥಾನಂಗಳಲ್ಲಿ ಕೂಟ ಕೂಡುವದೂ ಇದ್ದು. ಅಲ್ಲದ್ದರೆ ಅಲ್ಲಲ್ಲಿ ಟೆನ್ನಿಸ್ ಕೋರ್ಟ್ ಗೊ ಮತ್ತೆ ಕ್ಲಬ್ ಗೊ ಇರುತ್ತು.ಮನಸ್ಸಿಂಗೂ ದೇಹಕ್ಕೂ ಆರೋಗ್ಯ ಕಪಾಡುಲೆ ಬೇರೆಂತ ಬೇಕು!
ಒಂದು ವರ್ಷಂದಲೂ ಹೆಚ್ಚು ಸಮಯಂದ ಹೀಂಗಿಪ್ಪ ಕೂಟಕ್ಕೆ ಹೋದರೂ ಇಂದ್ರಾಣದ್ದು ಬಹುಶಃ ಈ ಸರ್ತಿ ಅಖೈರಿಯ ಕೂಟ ಹೇಳಿ ಕಾಣುತ್ತು. ಕಾಸರಗೋಡಿನ ಕುಳೂರಿನವಡೊ.ಗೋಪಾಲಣ್ನ ಹೇಳಿ ಹೆಸರು.ಇಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಲ್ಲಿದ್ದವು. ಒಂದು ಕೂಸು ಒಬ್ಬ ಮಾಣಿ ಹೀಂಗೆ ಎರಡು ಮಕ್ಕೊ ಅವಂಗೆ. ಹುಡುಗಿ ಸಣ್ಣದು. ಆರು ವರ್ಷ ಕಳುದು ಏಳನೆಯ ಜನ್ಮ ದಿನದ ಕೂಟಕ್ಕೆ ಐದಾರು ಮನೆಯೋರ ಬಪ್ಪಲೆ ಹೇಳಿ ಶನಿವಾರ ಹೊತ್ತೋಪಗ ಈ ಕೂಟ ಇತ್ತು. ಬಂದೋರೆಲ್ಲ ಹವೀಕರೇ. ಮಾತಾಡಿ ನೋಡುವಗ ಎಲ್ಲೋರುದೆ ಸಂಬಂಧಿಕರೇ ಆಗಿತ್ತಿದ್ದವು. ಬಂದೋರಲ್ಲಿ ಕೆಲವು ಜನಂಗಳ ಒಂದೆರಡು ಸರ್ತಿ ಅವರ ಭೇಟಿಯಾಗಿತ್ತು. ಹೀಂಗಿಪ್ಪ ಕೂಟಂಗಳ ವ್ಯವಸ್ಥೆ ಮಾಡುವದು ಮುಖ್ಯವಾಗಿ ಒಬ್ಬಕ್ಕೊಬ್ಬನ ಸಂಪರ್ಕ ಹೆಚ್ಚಪ್ಪಲೆ ಒಳ್ಳೆದಾವುತ್ತುಎನ್ನ ಎರಡನೆಯ ಮಗನ ಮಗಳು ಪುಳಿಯೂ ಎಂಗಳೊಟ್ಟಿಂಗೆ ಇತ್ತು. ಸಣ್ಣ ಮಗನ ಮಗನೂ ಸೇರಿ ಹತ್ತು ಮಕ್ಕೊ ಇತ್ತಿದ್ದವು. ಮಕ್ಕೊ ಎಲ್ಲ ಹೀಂಗಿಪ್ಪ ಕೂಟಂಗಳಲ್ಲಿ ಕಾಂಬಲೆ ಸಿಕ್ಕಿದೋವೇ. ಒಬ್ಬಕ್ಕೊಬ್ಬಂಗೆ ಪರಿಚಯ ಇತ್ತು. ಹೊಸಬ್ಬೆತ್ತಿ ಹೇಳಿರೆ ಟೊರೊಂಟೋಂದ ಬಂದಿದ್ದ ಪುಳ್ಳಿ ಮಾಂತ್ರ. ಮಕ್ಕೊ ಕಂಡ ಕೂಡಲೇ ಒಬ್ಬಕ್ಕೊಬ್ಬನ ದಿನಿಗೇಳ್ಯೊಂಡು ಜಾಗೆ ಇದ್ದಲ್ಲಿ ಕೂದು ಆಟವೋ ಮೇಲೆ ಉಪ್ಪರಿಗ್ಗೆ ಹತ್ತಿ ಇಳುದು ಮಾಡುವದೋ ಎಂತೆಲ್ಲ ಆಟ ಆಡುಲೆ ಶುರು ಮಾಡಿರೆ ದಿನಿಗೇಳಿರೆ ಕೇಳ ಅವಕ್ಕೆ. ತಿಂಬಲೂ ಒತ್ತಾಯಲ್ಲಿ ತಿನಿಸೆಕ್ಕು.ತುಂಬ ಸಂತೋಷಲ್ಲಿ ಇತ್ತಿದ್ದವು. ಮಕ್ಕೊಗೆ ಬೇಕಪ್ಪ ಆಟದ ಸಾಮಾನು ಪ್ರತಿ ಮನೆಲ್ಲೂ ಇರುತ್ತು. ಆಡುವ ಕ್ರಮವೂ ಅವಕ್ಕೆ ಗೊಂತಿರುತ್ತು.ಎಡೆಯೆಡೆಲ್ಲಿ ಜಗಳ ಬಂದರೂ ಮತ್ತೆ ರಾಜಿ ಆಗ್ಯೊಳ್ಳುತ್ತವು. ಸಾಲದ್ದದಕ್ಕೆ ಈ ಸಮಯಲ್ಲೇ ಅವರ ಸೆಕೆಗಾಲದ ರಜೆಯೂ ಇದ್ದು. ಆಟದ ಸಾಮಾನುಗಳ ಒಬ್ಬಕ್ಕೊಬ್ಬ ಹಂಚಿಗೊ<ಡು ಜಗಳ ಇಲ್ಲದೆ ಆಡುತ್ತವು. ಅವರ ಆಟ ನೋಡುಲೇ ಚೆಂದ. ಬಂದೋರಲ್ಲಿ ಒಬ್ಬ ೮೯ ವರ್ಷ ಪ್ರಾಯದೋನು ಎನ್ನ ಗುರ್ತ ಮಾಡ್ಯೊಂಡು "ನಾವು ಸೀನಿಯರ್ ಸಿಟಿಸನ್ಸ್ ಅಲ್ಲದೋ ಇಲ್ಲಿಯೆ ಮಾತಾಡ್ಯೊಂಡಿಪ್ಪ ಹೇಳಿ ಮಾತಾಡ್ಯೊಂಡಿದ್ದವು. ಅವರ ಮಗಳ ಮಗಳು ಅಮೇರಿಕಲ್ಲಿ ಡಾಕ್ಟರಡೊ. ಅಳಿಯನೂ ಡಾಕ್ಟರೇ ಅಪ್ಪು. ಆದರೆ ಅವು ಅಜ್ಜನನ್ನೂ ಮಾವ ಅತ್ತೆಯನ್ನೂ ಇಲ್ಲಿ ಬಿಟ್ಟಿಕ್ಕಿ ಹೋಗಿತ್ತವು. ಮತ್ತೆ ಮನೆಯೋನ ದೊಡ್ಡ ಮಾವನ ಹೆಂಡತ್ತಿ. ಉಕ್ಕಿನಡ್ಕದ ಹೆಮ್ಮಕ್ಕೊ. ಮತ್ತೆ ನೋಡುವಗ ಅವರ ಅಜ್ಜನ ಮನೆ ಎಂಗಳ ಬಾಳಿಕೆ ಹತ್ರೆ ಆಗಿತ್ತು. ಹಾಂಗೆ ಮಾತಾಡುಲೆ ತುಂಬ ಅನುಕೂಲ ಆತು. ಹೋದ ಕೂಡಲೇ ಗೋಧಿ ರೊಟ್ಟಿಯೋ,ಚಿಪ್ಸೋ, ಹೀಂಗೆಲ್ಲ ತಿಂಬಲೆ ಮತ್ತೆ ಕುಡಿವಲೆ ಜ್ಯೂಸ್ ಕೊಟ್ಟವು.ಒಂದರ್ಧ ಘಂಟೆ ಕಳುದು ಮಕ್ಕಳ ಬರುಸಿ ಪಿಸ್ಸ ಕುಡಿವಲೆ ಜ್ಯೂಸ್ ಎಲ್ಲ ಕೊಟ್ಟವು. ಈ ಸಮಯಲ್ಲಿ ಸೂರ್ಯ ಕಂತುವಗಳೇ ಎಂಟೂವರೆ ಗಂಟೆ ಲ್ಕಳಿತ್ತು. ಮತ್ತೆ ಊಟದ ವ್ಯವಸ್ಥೆ ಎಲ್ಲ ಮನೆದೇ ಆಡಿಗೆ. ಊರಿಲ್ಲಿ ನೆರೆಕರೆಂಗೆ ಹೋದ ಹಾಂಗೆ . ಆದರೆ ದೂರ ಮಾಂತ್ರ ಮಗನ ಮನೆಂದ ಒಂದೂವರೆ ಗಂಟೆ ದಾರಿ. ಮೇಜಿ ಮೇಲೆ ಸಾರು ಸಾಂಬಾರು, ಮೇಲಾರ.ತಂಬುಳಿ,ಚಟ್ಣಿ. ಮಾವಿನ ಹಣ್ಣಿನ ರಸಾಯನ, ಹಸರು ಪಾಯಸ,ಚಪಾತಿ, ಎರಡು ಬಗೆ ಪಲ್ಯ,ಅನ್ನ, ಮೊಸರು ಹೀಂಗೆಲ್ಲ ಮಡಗಿತ್ತಿದ್ದವು. ಅಂತೂ ಊಟ ಗಡದ್ದಾಗಿತ್ತು. ಸ್ವೀಟ್ ಸೆವೆನ್ ಕಪ್ ಕೂಡಾ ಇತ್ತು. ಬೇಕಾದ್ದರ ಅವವು ಪೇಪರ್ ತಟ್ಟೆಗೆ ಹಾಯ್ಕೊಂಡು ಆಚಿಕೆ ಮೇಜಿನ ಹತ್ತರೆ ಕೂದು ತಿಂದೊಂಬದು.ಎನಗೆ ಶನಿವಾರ ಒಂದೇ ಹೊತ್ತು ಊಟ . ಅದಕ್ಕೆ ಎರಡು ಚಪಾತಿ ತೆಕ್ಕೊಂಡು ಒಂದು ಕಪ್ಪಿಲ್ಲಿ ರಸಾಯನವೂ ಹಾಯ್ಕೊಂಡು ತಿಂಬಲೆ ಶುರು ಮಾಡಿದೆ. ಸಾರು ಕಪ್ಪಿಲ್ಲಿ ತಂದು ಕುಡುದೆ.ಪಾಯಸವನ್ನೂ ತಿಂದೆ. ಎನ್ನ ಊಟ ಅಷ್ಟಕ್ಕೆ ಆತು. ಎಲ್ಲೋರೂ ಮತಾಡ್ಯೊಂಡು ಒಂದರ್ಧ ಗಂಟೆಲ್ಲಿ ಊಟ ಕಳಾತು. ಎಲ್ಲೋರದ್ದೂ ಊಟ ಮುಗುದ ಮೇಲೆ ಇನ್ನೊಂದು ಹಾಲಿಲ್ಲಿ ಉದ್ದದ ಮೇಜಿತ್ತು ಅದರಲ್ಲಿ ಎರಡು ಕೇಕ್ ತಂದು ಮಡಗಿದವು. ಮಗಲ ಹತ್ತರೆ ಕೇಕ್ ಕಟ್ ಮಾಡುಲೆ ಹೇಳಿದವು. ಅಲ್ಲಿದ್ದ ಮಕ್ಕೊ ಎಲ್ಲ ಒಂದು ಕಾಗದ ಟೊಪ್ಪಿ ಮಡಿಕ್ಕೊಂಡಿಪ್ಪಗ ಫೋಟೋ ತೆಗೆದವು. ಹೇಪ್ಪಿ ಬರ್ತ್ ಡೇ ಹೇಳಿದವು. ಮತ್ತೆ ಕೇಕಿನ ತುಂಡು ತುಂಡು ಮಾಡಿ ಎಲ್ಲೋರೂ ತಿಂದೆಯೋ. ಇಷ್ಟೆಲ್ಲ ಆಗಿ ಮುಗಿವಗ ಒಂಬತ್ತೂವರೆ ಗಂಟೆ. ಮತ್ತೆ ಬಂದೋರಿಂಗೆಲ್ಲ ವಿದಾಯ ಹೇಳಿಕ್ಕಿ ಮನೆಂದ ಹೆರಡುವಗ ಗಂಟೆ ಹತ್ತು ಕಳುದ್ದು. ಒಂದು ಗಂತೆಲ್ಲಿ ಮನಗೆ ಎತ್ತಿದೆಯೋ.ರಾತ್ರಿಯಾದರೂ ವಾಹನಂಗೊ ಸಾರಿಗಟ್ಟಿ ಹೋಯ್ಕೊಂಡಿದ್ದ ಕಾರಣ,ವಾಹನ ಓಡುಸುಲೆ ಕಷ್ಟ ಆದರೂ,ಮಗ ವೆಗವ ಹೊಂದಿಸಿಗೊಂಡು ಮನೆಗೆ ಎತ್ತುವಗ ಹನ್ನೊಂದೂವರೆ. ಇಲ್ಲಿಯಾಣವಕ್ಕೆ ರಾತ್ರಿ ಹಗಲಿನ ವ್ಯತ್ಯಾಸ ಗೊಂತಿಲ್ಲೆಯೊ ಏನೋ! ಮಾಎಗವೂ ಒಳ್ಳೆದಿಪ್ಪ ಕಾರಣ ನಿರ್ಭೀತಿಂದ ಹೆಮ್ಮಕ್ಕೊ ಆದರೂ ಒಂದೂರಿಂದ ಇನ್ನೊಂದು ಊರಿಂಗೆ ವಹನ ಓಡುಸ್ಯೊಂಡು ಹೋಪದು ನೋಡುವಗ ತುಂಬ ಕೊಶಿ ಅವುತ್ತು. ಭಯೋತ್ಪಾದನೆ, ಒಂದು ಸಮುದಾಯಕ್ಕೆ ಮಾಂತ್ರ ರಕ್ಷಣೆ ಕೊಡುವ ಸಂಪ್ರದಾಯ ಓಟಿನ ಆಟಂಗೊ ನಮ್ಮ ದೇಶಲ್ಲಿ ಮುಂದುವರಿತ್ತಾ ಇಪ್ಪದು ಕಾಂಬಗ ನಾಚಿಕೆ ಅವುತ್ತು. ಧಾರ್ಮಿಕತೆ ಒಂದಿಷ್ಟು ಇದ್ದರೂ ನೈತಿಕತೆ, ಭ್ರಷ್ಟಾಚಾರ ಬಿಟ್ಟಿಕ್ಕುಲೆ ಒಂದು ಸಮುದಾಯಕ್ಕೆ ಇನ್ನೂ ಇಷ್ಟ ಇಲ್ಲೆ ಹೇಳಿ ಕಾಣುತ್ತು. ರಾಮ ರಾಜ್ಯ ಹೇಳಿ ಕನಸು ಕಂಡಿದ್ದೋನೊಬ್ಬ ಸತ್ತು ಹೋಯಿದ. ಮತ್ತೆ ಆರೂ ಹುಟ್ಟಿದ್ದವಿಲ್ಲೆ. ಮುಂದೆ ಯಾವಗಲೋ ಹುಟ್ಟಿ ಬಂದು ದೇಶವ ಮುಕ್ತಗೊಳುಸಿದರೆ ಮತ್ತಾದರೂ ಒಳ್ಳೆದಕ್ಕೋ ಏನೋ? ಆದಿನ ಬೇಗ ಬರಲಿ ಹೇಳಿ ಕೇಳಿಗೊಳ್ಳುತ್ತೆ.
Thursday, July 12, 2012
ನಾಲಗೆ
ನಾಲಗೆ
ನಾರಾಯಣ ದೇವರ ಹಾಸಿಗೆಯಾಗಿಪ್ಪ ಶೇಷಂಗೆ ಸಾವಿರ ನಾಲಗೆಯಡ. ಕವಿಗೊ ಹೇಳುಗು ದೇವರ ಮಹಿಮೆಯ ಹೊಗಳುಲೆ ಆದಿಶೇಷಂಗೂ ಎಡಿಯ ಹೇಳಿ.ಒಂದು ನಾಲಗೆಲ್ಲಿ ಹೊಗಳಿದ್ದರ ಕೇಳುಲೆ ನಮ್ಮ ರಡು ಕಿವಿಯೇ ಸಾಕು. ಚಿತ್ರಂಗಳಲ್ಲಿಪ್ಪಂತೆ ದೇವರಿಂಗೆ ಎರಡೇ ಕೆಮಿ ಇಪ್ಪದು. ಹಾಂಗಾದರೆ ಸಾವಿರ ನಾಲಗೆಲ್ಲಿ ಹೊಗಳಿದ್ದರ ಅವ ಹೇಂಗೆ ಕೇಳಿಗೊಳ್ಳುತ್ತನೋ! ಮತ್ತೆ ನಮಗೆ ಈ ಒಂದು ನಾಲಗೆಯೇ ಕೆಲವೊಂದರಿ ತುಂಬ ಕಷ್ಟ ಆಗಿ ಹೋವುತ್ತು. ಇಪ್ಪದು ಬಾಯಿಯೊಳದಿಕ್ಕಾದರೂ ಅದರ ಕಾರುಭಾರು ಭಯಂಕರ.ಸುತ್ತಲೂ ಇಪ್ಪ ಹಲ್ಲುಗಳ ಬೇಲಿ ದಾಂಟಿಕ್ಕಿ ಅದು ಹೆರ ಬಾರದ್ದರೂ ಒಳಂದಲೇ ಅದರ ಕಾರುಭಾರು ಜಾಸ್ತಿ. ಹೇಳುತ್ತವಪ್ಪ ಅವಂಗೆ ಕೊರಳು ಸುತ್ತಲೂ ನಾಲಗೆ ಹೇಳಿ. ಆದರೆ ನಾಲಗೆ ಒಳದಿಕ್ಕೇ ಇಪ್ಪದಾದರೂ ಹೇಂಗೆ ಬೇಕಾದರೂ ತಿರುಗುತ್ತಲ್ಲದೋ? ನಾವು ತಿಂಬ ಆಹಾರ ಅಗಿವಗ ನಾಲಗೆ ಸಟ್ಟುಗಿನ ಹಾಂಗೆ ಮೊಗಚ್ಚಿ ಕೊಡದ್ದರೆ, ಹಲ್ಲಿಂಗೆ ಅಗಿವಲೆಡಿಯ. ಅಗುದು ಸಣ್ಣ ಆಯೆಕ್ಕಾರೆ ನಾಲಗೆ ತೊಳಸುತ್ತಾ ಇರೆಕ್ಕು. ಹಲ್ಲಿನೆಡೆಲ್ಲಿ ಸಿಕ್ಕಿದ್ದರನ್ನೂ ಹೆರ ಎಳದು ಹಾಕಿ ನುಂಗುಲೆಡಿತ್ತು. ಅಂಬಗ ಆಹಾರ ಜೀರ್ಣಕ್ರಿಯೆಯ ಮೊದಲ ಕಾರಸ್ಥಾನ ಹಲ್ಲಾದರೂ ನಾಲಗೆಯ ಉಪಯೋಗ ದೊಡ್ಡದು.ರುಚಿ ನೊಡೆಕ್ಕಾರೂ ನಾಲಗೆಯೇ ಆಯೆಕ್ಕು. ಮೂಗಿಂಗೆ ವಾಸನೆ ಬಡಿದರೆ ಮತ್ತೆ ತಿನ್ನೆಕ್ಕೋ ಬೇಡದೋ ಹೇಳುವದು ನಾಲಗೆ. ಕೊಡಿನಾಲಗೆಲ್ಲಿ ಉಪ್ಪು ಹಿಡುದ್ದೋ ಇಲ್ಲೆಯೋ ಹೇಳಿ ರುಚಿ ನೋಡಿದ ಮೇಲೆಯೇ ಪಾಕ ಸರಿಮಾಡುವದು. ಷಡ್ರಸಂಗಳ ಬೇರೆ ಬೇರೆ ಗುರ್ತು ಹಿಡಿವದು ನಾಲಗೆ. ರುಚಿಯಾಗಿದ್ದು ಹೇಳಿ ಆದರೆ ಮತ್ತೆ ತಿಂದುಗೊಂಬದು ಹೇಳಿ ಮನಸ್ಸಿಂಗಾಗಿ ತಿಂಬಲೆ ಶುರು. ನಾಲಗೆಯ ಚಪಲ ಹೆಚ್ಚಾದರೆ ಕೆಲವು ಜನಕ್ಕೆ ಉಪ್ಪು ಸಾಕಾವುತ್ತಿಲ್ಲೆ. ಖಾರ ಸರಿಯಿರುತ್ತಿಲ್ಲೆ. ಕೊದಿಲಿಂಗೂ ಸೀವು ಹಾಯೆಕ್ಕಾವುತ್ತು. ಒಟ್ಟಾರೆ ಮತ್ತೆ ಹೊಟ್ಟೆ ತುಂಬ್ಯೊಂಡು ಬಪ್ಪಗ ಮೆಚ್ಚದ್ದ ಅಶನಲ್ಲಿ, ಮೊಸರಿಲ್ಲೂ ಕಲ್ಲಿರುತ್ತಡೊ.
ಕೆಲವು ಜನಕ್ಕೆ ನಾಲಗೆಯ ತೀಟೆ ತೀರುಸುಲೆ ಬೈಗಳು ತಿನ್ನೆಕ್ಕಾಗಿ ಬಂದರೂ ಬೇಜಾರಾವುತ್ತಿಲ್ಲೆ. ಬೇಕು ಹೇಳಿ ಮನಸ್ಸಿಂಗೆ ಕಂಡರೆ ಬೇರೆಯೋರಿಂಗೆ ಕಾಣದ್ದೆ ಆದರೂ ತಿಂದು ಹೋವುತ್ತು. ಆಸೆ ಹುಟ್ತಿದರೆ ಕೊದಿ ತಡಕ್ಕೊಂಬಲಎಡಿತ್ತಿಲ್ಲೆ. ಮಕ್ಕೊ ಅದರೆ ಅರಡಿತ್ತಿಲ್ಲೆ. ದೊಡ್ಡೋರಾದರೂ ತಿನ್ನೆಕ್ಕು ಹೇಳಿ ತೋರಿದರೆ ಕೇಳಿ ಆದರೂ ತಿಂತವು. ಎಲೆ ತಿಂಬೋರು ಹೇಳುವದು ಕೇಳಿದ್ದೆ. ಹೊಗೆಸೊಪ್ಪಿನ ರುಚಿ ಹಿಡುದರೆ ಸಾಮಾನ್ಯ ಹೊಗೆಸೊಪ್ಪು ಅವಕ್ಕೆ ಕಣ್ಣಿಂಗೇ ಕಾಣುತ್ತಿಲ್ಲೆಡೊ. ಕುಣಿಯ ಇದ್ದೋ ಹೇಳಿ ಕೇಳುತ್ತವಡೊ. ಅಲ್ಲಿ ನಾಲಗೆಂದ ಹೆಚ್ಚು ಹಲ್ಲಿಂಗೆ ದೂರು ಬೀಳುತ್ತು. ಅವರವರ ಮನಸ್ಸಿಂಗೆ ಹೀಂಗೆಲ್ಲ ತೋರುವದರ ನಾಲಗೆಯ ಮೇಲಂಗೋ ಹಲ್ಲಿನ ಮೇಲಂಗೊ ದೂರು ಹಾಕುವದು. ಚಾ ಕುಡಿಯದ್ದರೆ ಮನಸ್ಸಿಂಗೆ ಉತ್ಸಾಹವೇ ಬತ್ತಿಲ್ಲೆ ಹೇಳುತ್ತವು. ಕಾಫಿ ಚಾ ಕುಡುದರೆ ಒರಕ್ಕು ಬತ್ತಿಲ್ಲೆ ಹೇಳುತ್ತವು. ಒರಕ್ಕಿಂಗೂ ಚಾ,ಕಾಫಿಗೂ ಎಂತ ಸಂಬಂಧವೊಗೊಂತಿಲ್ಲೆ. ಅಂತೂ ನಾಲಗೆ ರುಚಿ ಹಿಡುದರೆ ಜೊಲ್ಲು ಸುರಿಸುತ್ತ ಇರುತ್ತು. ಒಂದರಿ ಕೊದಿ ಬಿರಿವನ್ನಾರ ತಿಂದರೆ ಮತ್ತೆ ಶುದ್ದಿ ಇಲ್ಲೆ. ನಾಲಗೆ ಮನುಷ್ಯಂಗೆ ತಿಂಬಲೆ ಮಾಂತ್ರ ಅಲ್ಲ. ಯಾವುದೇ ಭಾಷೆಲ್ಲಿ ಮಾತಾಡೆಕ್ಕಾರೆ ನಾಲಗೆಯ ಸಹಾಯ ಬೇಕೇ ಬೇಕು. ಮನುಷ್ಯ ಜೀವಾಳ ಆಗಿಪ್ಪ ಭಾಷೆ ವ್ಯಕ್ತವಾಯೆಕ್ಕಾರೆ ನಾಲಗೆ ಬೇಕಾದ ಹಾಂಗೆ ಹಂದೆಕ್ಕು. ಹೇಳುವ ಕ್ರಮ ಇದ್ದಲ್ಲದೋ? ಎಂತ ನಿನ್ನ ನಾಲಗೆ ಸುಮ್ಮನೆ ಕೂಯಿದು. ಈಗ ಉಸಿರೆಕ್ಕದ್ದೆ ಬಾಯಿ ಹೇಳುವ ಪೆಟ್ಟಿಗೆಯೊಳ ಭದ್ರವಾಗಿ ಸುಮ್ಮನೆ ಕೂಯಿದಲ್ಲದೋ? ಸುತ್ತಲುದೆ ಹಲ್ಲುಗಳ ಬೇಲಿ ಹಾಕಿದಕಾರಣ ಆವುತ್ತು. ನಾಲಗೆ ಜೋರು ಹಂದುಲೆ ಶುರು ಮಾಡಿದರೆ ಹತೋಟಿ ತಪ್ಪಿ, ಮತ್ತೆ ಹಲ್ಲುಗೊಕ್ಕೆ ಶಿಕ್ಷೆ. ಹತೋಟಿ ತಪ್ಪುವದು ನಾಲಗ್ಗೆ ಅಲ್ಲ. ಮನಸ್ಸಿಂಗೆ. ಮನಸ್ಸು ಆಶೆ ಪಡುವದು ಇದ್ದದೇ. ಆದರೆ ಅದರ ಪೂರ್ವಾಪರ ತಿಳುದು, ಹೇಂಗೆ ಅಪೇಕ್ಷೆ ಸರಿಯೋ? ಮುಂದರಿಯೆಕ್ಕೋ ಬೇಡದೋ ಹೇಳುವದರ ರಜ ಯೋಚನೆ ಮಾಡಿದರೆ, ಹತೋಟಿ ಕಳಕ್ಕೊಳ್ಳೆಕ್ಕಾವುತ್ತಿಲ್ಲೆ. ಮಕ್ಕಳ ಹಾಂಗೆ "ಕಂಡದ್ದೆಲ್ಲ ಬೇಕು ಕುಂಡಿಬಟ್ಟಂಗೆ" ಹೇಳಿ ವಿಚರ ವಿಮರ್ಶೆ ಮಾಡದ್ದೆ ದುಡುಕಿದರೆ ಮತ್ತೆ ಹಲ್ಲೂ ಹೋಕು; ತಲೆಯೂ ಕೆಟ್ಟು ಹೋಕು.
ಹಿಂದಾಣೋರು ಹೇಳಿದ ಮಲಯಾಳದ ಗಾದೆ "ಚಿಂತಿಚ್ಚಾಲ್ ದುಃಖಿಕ್ಕೇಂಡ". ಮದಲೇ ಯೋಚನೆ ಮಾಡದ್ದೆ ಬಾವಿಯ ಆಳ ಎಷ್ಟಿದ್ದು, ಮೀಸುಲೆ ಎಡಿಗೊ ಎಲ್ಲ ವಿಚಾರ ಮಾಡಿಯೇ ಬಾವಿಗೆ ಹಾರೆಕ್ಕಡೊ. ಭಾಷೆ ಮಾತಾಡುವಗ ಅಕ್ಷರ ಉಚ್ಚಾರ ಸರಿ ಮಾಡ್ಯೊಳ್ಳೆಕ್ಕಲ್ಲದೋ? ಸ್ವರ ಉಚ್ಚಾರಣೆಗೆ ನಾಲಗೆಯ ಉಪಯೋಗೆ ಹೆಚ್ಚಿಲ್ಲೆ ಹೇಳಿ ಆದರೂ ವ್ಯಂಜನಾಕ್ಷರಂಗೊಕ್ಕೆ ನಾಲಗೆಯ ಅಗತ್ಯ ತುಂಬ ಇದ್ದು. ಎಲ್ಲಕ್ಕೂ ದೊಂಡೆ ಗುಳಿಲ್ಲಿ ಇಪ್ಪ ಕುಂಞಿನಾಲಗೆ ಸ್ವರ ಪೆಟ್ಟಿಗೆಯಡೊ.ನಾಭಿಂದ ಹೆರಟ ಸ್ವರ ದೊಂಡೆಗುಳಿಂದ ಹೆರಡುವಗ ಹೆರಂಗೆ ಅಸ್ವರ ಕೇಳುವದಡೊ. ಸ್ವರಾಕ್ಷರ ಉಚ್ಚರಿಸುವಗ ನಾಲಗೆ ಉದ್ದಕ್ಕೆ ಮನಿಕ್ಕೊಂಡಿರುತ್ತು. ವ್ಯಂಜನಾಕ್ಷರ ಉಚ್ಚರಿಸೆಕ್ಕಾರೆ ನಾಲಗೆ ಸರಿಯಾಗಿ ಉಪಯೋಗ ಆವುತ್ತು. ಕವರ್ಗ ಉಚ್ಚರಿಸುವಗ ನಾಲಗೆ ಮನಿಕ್ಕೊಂಡು ಹಲ್ಲಿನ ಒತ್ತಿ ಹಿಡುಕ್ಕೊಂಡರೆ, ಚವರ್ಗ ಉಚ್ಚರಿಸುವಗ ನಾಲಗೆ ಮೂರ್ಧನ್ಯ, ಹೇಳಿರೆ ಬಾಯಿಯ ಮೇಲ್ಭಾಗ ಒತ್ತಿ ಹಿಡುಕ್ಕೊಳ್ಳೆಕ್ಕು. ಟವರ್ಗ ಉಚ್ಚರಿಸುವಗ ನಾಲಗೆ ಕೊಡಿ ಮಾಂತ್ರ ಮೇಲಂಗೆ ಒತ್ತಿ ಹಿಡುಕೊಳ್ಳೆಕ್ಕು. ತವರ್ಗ ದಂತ್ಯ ನಾಲಗೆ ಕೊಡಿ ಹಲ್ಲುಗಳ ಒತ್ತಿಗೊಳ್ಳೆಕ್ಕು. ಆದರೆ ಪವರ್ಗಕ್ಕೆ ನಾಲಗೆಯ ಹೆಚ್ಚಿನ ಉಪಯೋಗಗ ಬತ್ತಿಲ್ಲೆ. ಅಪ್ಪ,ಅಮ್ಮ ಹೇಳುವ ಪದಂಗಳ ತೊದಲ್ನುಡಿವಲೂ ಎಡಿಗಾವುತ್ತು. ಇನ್ನು ಅವರ್ಗೀಯ ವ್ಯಂಜನಂಗೊ. ಯ, ಚ ಇದ್ದ ಹಾಂಗೆ; ರ- ಟಕ್ಕೆ ಹತ್ತರೆ,ಲ, ಹಲ್ಲುಗಳ ಬುಡಕ್ಕೆ,ಳ ನಾಲಗೆ ಕೊಡಿ ಮೇಲಂಗೆ; ವ ತುಟಿ ಮಾಂತ್ರ ಸಾಕು. ಸ ದಂತ್ಯ. ಶ-ನಾಲಗೆ ಮೇಲಂಗೆ ಒತ್ತಿ ಹಿಡುದು ಗಾಳಿ ಹೆರಡುಸುವದು; ಇನ್ನು ಪಟ್ಟೆ 'ಷ' ನಾಲಗೆ ಮಡುಸಿ ಗಾಳಿ ಹೆರಡುಸುವದು. ಹ ಉಚ್ಚರುಸುವಗಅಂತೆ ದೊಂಡೆಯೊಳದಿಕ್ಕಂದ ಶಕ್ತಿ ಹಾಕಿ ಗಾಳಿ ಹರಡುಸುವದು ಹೀಂಗೆ ಅಕ್ಷರಂಗಳ ಉಚ್ಚರಿಸುವಲ್ಲಿ ನಾಲಗೆಯ ಉಪಯೋಗವೇ ಬೇಕು. ನಾಲಗೆ ತೆರ್ಚುವದು ಹೇಳುತ್ತವು . ಸರಿಯಾದ ಸ್ಥಿತಿಲ್ಲಿ ನಾಲಗೆಯ ಮಡಿಕ್ಕೊಂಡು ಉಚ್ಚರುಸುವಗ ಸ್ಥಾನ ಸರಿಯಾಗದ್ದೆ ಉಚ್ಚಾರ ಸರಿಯಗದ್ದೆ ಹೋವುತ್ತು. ಉಚ್ಚರ ಸರಿ ಮಾಡೆಕ್ಕಾರೆ ಬೇರೆಯೋರು ಉಚ್ಚರುಸುವಗ ಅವರ ಮುಖ ಭಾವ ನಲಗೆಯ ಸ್ಥಿತಿಯ ಬದಲುಸುವದರ ನೋಡ್ಯೊಂಡು ಉಚ್ಚರಿಸಿದರೆ ಕ್ರಮೇಣ ಸರಿಯಾವುತ್ತು. ಎಲ್ಲದಕ್ಕು ಶ್ರದ್ಧೆ ಮುಖ್ಯ. ಕಲಿಯೆಕ್ಕು ಹೇಳಿ ಇದ್ದೋನಿಂಗೆ ಮನಸ್ಸು ಶ್ರದ್ಧೆ ತಾನಾಗಿಯೇ ಬತ್ತು.
ಸಂಗೀತ ಕಲಿವೊರಿಂಗೆ ನಾಲಗೆಯ ಉಪಯೋಗೆ ಸರಿಯಾಗಿ ಗೊಂತಾವುತ್ತು. ಸಪ್ತ ಸ್ವರಂಗಳ ಉಚ್ಚರುಸುವಗ ನಾಲಗೆ ಬೇಕಾದ ಹಾಂಗೆ ಸ್ಥಿತಿ ಬದಲಾವಣೆ ಮಾಡ್ಯೊಂಡರೆ ಸ್ವರ ಸರಿಯಾಗಿ ಬತ್ತು. ಆಲಾಪನೆಲ್ಲಿ,ಏರು ಇಳಿತಂಗಳಲ್ಲಿಯೂ ನಾಲಗೆ ಬೇಕಾದ ಹಾಂಗೆ ಉಪಯೋಗಿಸಿದರೆ ಕೇಳುವೋರಿಂಗೆ ಕರ್ಣ ರಸಾಯನ ಅವುತ್ತು. ಪ್ರಸಿದ್ಧ ಸಂಗೀತ ವಿದ್ವಾಂಸರುಗೊ,ಅವರ ಹಾಡುಗಾರಿಕೆಯೊಟ್ಟಿಂಗೆ ಸ್ವರ ವಿನ್ಯಾಸಂಗಳಿಂದ ಹಾಡಿನ ಮೋಡಿಂದ ಲೋಕ ವಿಖ್ಯಾತರಾವುತ್ತವು. ಎಲ್ಲ ನಲಗೆಯ ಮಹಿಮೆ! ನಾಟಕ ಸಿನೇಮ ನಟರೂ ಅವರ ಅಭಿನಯದೊಟ್ಟಿಂಗೆ ನಾಲಗೆಯ ಚಮತ್ಕಾರಂದ,ಜನ ಮೆಚ್ಚುಗೆ ಪಡಕ್ಕೊಳ್ಳುತ್ತವು. ರಸಿಕರಿಂಗೆ ರಸದೂಟ ಉಣುಸೆಕ್ಕಾರೆ, ಮಾತಿನ ಮೋಡಿ ವರಸೆ, ಸ್ಪಷ್ಟವಾಗಿ ರೂಪುಸೆಕ್ಕಾರೆ ನಾಲಗೆಯ ಪಾತ್ರ ದೊಡ್ಡದು. ಸ್ತಿಮಿತ ಕಳಕ್ಕೊಂಬೋರಿಂಗೆ ಅಭಿನಯ ಕಷ್ಟ ಆಗದೋ? ನಾಲಗೆಯ ಚಮತ್ಕಾರಿಗೊ ತಾಳಂಗಳನ್ನೂ ಬಾಯಿಲ್ಲೇ ನುಡಿಸುತ್ತವಡೊ.ಮಾತಾಡುವಗಲೂತೂಕದ ಮಾತಾಡುವೋರು ನಾಲಗೆಯ ಹಿಡಿತಲ್ಲಿ ಮಡಿಕ್ಕೊಳ್ಳುತ್ತವು. ಮಾತಿನ ವರಸೆ, ವ್ಯತ್ಯಾಸ ಅಪ್ಪದು, ನಾಲಗೆಲ್ಲಿ ಮಾತಾಡುವ ರೀತಿಲ್ಲೇ ಇದ್ದು. ಹೇಳುವ ವಿಷಯ ಸಮಾಧಾನಲ್ಲಿ ಹೇಳಿದರೆ ಆರುದೇ ಕೇಳುತ್ತವು. ಗಡಿಬಿಡಿಲ್ಲಿ ಹೇಳುವಗ ಒಂದು ಹೋಗಿ ಹೇಳಿದ್ದು ಮತ್ತೊಂದಕ್ಕು. ಬೇರೆಯೋರೊಟ್ಟಿಂಗೆ ಮಾತಾಡುವಗಳೂ ಅವರ ಇಷ್ಟಾನಿಷ್ಟಂಗಳ ತಿಳಿದು ಮಾತಾಡದ್ದರೆ ನಮ್ಮ ಗ್ರಹಿಕೆ ತಪ್ಪಾಗಿ ಹೋಕು.ಮುತ್ತು ಉದುರಿದ್ದರ ಹೆರ್ಕಿಗೊಂಬಲಕ್ಕಡೊ; ಆದರೆ ಆಡಿದ ಮಾತಿನ ಮತ್ತೆ ಹಿಂದೆ ತೆಕ್ಕೊಂಬದು ಮರ್ಯಾದೆ ಅಲ್ಲ. ಅದಲ್ಲ ಇಲ್ಲಿ ಹೇಳಿದ್ದು ನಾಲಗೆ ಅದರ ಕೆಲಸ ಮಾಡಿದರೆ ಕಷ್ಟ ಅಪ್ಪದು ಒಳುದೋವಕ್ಕೆ. ಪೆಟ್ಟು ತಿಂಬದು; ಮಾತಿನ ಪೆಟ್ಟಾದರೂ ನಾವೇ ಅಲ್ಲದೋ? ಕೆಲವೊಂದರಿ ಮೌನಂ ಪಂಡಿತ ಲಕ್ಷಣ ಹೇಳಿ ಸುಮ್ಮನೆ ಇರೆಕ್ಕಾವುತ್ತು. ನಮಗೆ ಗೊಂತಿಲ್ಲೆ ಹೇಳಿ ಆದರೆ ಬೇಜಾರು ಇಲ್ಲೆ. ಎನಗೊಬ್ಬ ಮೇಧಾವಿ ಹೇಳಿತ್ತಿದ್ದ. ನಾವು ತರಗತಿಲ್ಲಿ ಒಂದು ವಿಷಯ ಮಕ್ಕೊಗೆ ಹೇಳೆಕ್ಕಾರೆ ಅದರ ಕುರಿತಾದ ಆಮೂಲಾಗ್ರವಾಗಿ ಹೇಳುಲೆ ಗೊಂತಿದ್ದರೆ ಮಾಂತ್ರ ಹೇಳೆಕ್ಕು;ಗೊಂತಿಲ್ಲದ್ದೆ ಹೇಳಿ ಸಿಕ್ಕಿ ಬೀಳುವದರ ಬದಲು ಅದು ಎನಗೆ ಸರಿಯಾಗಿ ಗೊಂತಿಲ್ಲೆ; ನಾಳಂಗೆ ಬೇರೆ ಪುಸ್ತಕ ನೋಡಿ ಹೇಳುತ್ತೆ ಹೇಳಿದರೆ ನಾಚಿಕೆಯಿಲ್ಲೆ. ತಪ್ಪು ಹೇಳಿಕೊಡೊವದಕ್ಕಿಂತ ಗೊಂತಿಲ್ಲೆ ಹೇಳುವದೇ ಒಳ್ಳೆದು ಹೇಳಿತ್ತಿದ್ದ. ನಾವು ಅವಕ್ಕೆ ಹೇಳುವದು ಅವು ಬೇರೆಯವಕ್ಕೆ ಹೇಳುವದು ಹೀಂಗೆ ಶುದ್ದಿ ಹರಡಿ ನಮಗೆ ಊರೆಲ್ಲ ಬೆಲೆಕಟ್ಟುವದು ಸರಿ ಆವುತ್ತೋ ಹೇಳಿತ್ತಿದ್ದ. ನಮ್ಮ ನಾಲಗೆ ಒಳ್ಳೆದಿದ್ದರೆ ನಾವು ಎಲ್ಲಿಯೂ ಬದುಕ್ಕುಲೆಡಿಗಲ್ಲದೋ? ಎಲುಬಿಲ್ಲದ್ದ ನಾಲಗೆ ಹೇಳಿದ್ದೆಲ್ಲ ಸತ್ಯವೇ ಆಗಿರೆಕ್ಕು. ಗಾಂಧೀಜಿ ಆಶ್ರಮಲ್ಲಿದ್ದ ಮೂರು ಮಂಗಂಗಳ ಶುದ್ದಿ ಹೇಳಿದರೆ ಹೆಚ್ಚಾಗ ಹೇಳಿ ಕಾಣುತ್ತು. ಒಂದು ಮಂಗ "ಆನು ಕೆಟ್ಟದರ ಹೇಳುತ್ತಿಲ್ಲೆ ಹೇಳಿ ಬಾಯಿ ಮುಚ್ಚಿಗೊಂಡಿದಡ; ಇನ್ನೊಂದು ಕೆಟ್ಟದರ ಕೇಳುತ್ತಿಲ್ಲೆ ಹೇಳಿ ಕೆಮಿ ಮುಚ್ಚಿಗೊಂಡಿದಡ; ಮೂರನೇದು ಕೆಟ್ಟದರ ಎನ್ನ ಕಣ್ಣಿಂದ ನೋಡುತ್ತಿಲ್ಲೆ ಹೇಳಿ ಕಣ್ಣುಗಳಮುಚ್ಚಿಗೊಂಡಿದಡ.ನಾವು ಮನುಷ್ಯರಾದ ಕಾರಣ ಮುಚ್ಚಿಗೊಂಡೇ ಇರೆಕ್ಕು ಹೇಳಿ ಇಲ್ಲೆ ನೋಡದ್ದೆ, ಕೇಳದ್ದೆ, ಮಾತಾಡದ್ದೆ ಇದ್ದರೆ ,ನಮ್ಮ ಹಾಂಗೆ ಬೇರೆಯೋರುದೆ ಇದ್ದರೆ ಲೋಕ ಒಳ್ಳೆದಕ್ಕು.
ಇನ್ನು "ಈಗ ನಿನ್ನ ನಾಲಗೆ ಬಿದ್ದತ್ತೋ? ಏಕೆ ಮಾತಾಡುತ್ತಿಲ್ಲೆ"ಹೇಳಿ ಕೇಳುವದಿದ್ದು. ಅರ್ಥವೇ ಮಾತು ಬಿದ್ದು ಹೋಪದು ಹೇಳಿರೆ, ಮಾತು ಬಿದ್ದು ಹೋಪದು ಒಂದೋ ಸೌಖ್ಯ ಇಲ್ಲದ್ದರೆ. ಅಲ್ಲದ್ದರೆ ಜೀವ ಹೋಪಗ. ಹೇಳುತ್ತವಿಲ್ಲೆಯೋ ಒಂದರಿ ಮಾತು ಕೊಟ್ಟ ಮೇಲೆ ತಪ್ಪುವ ಮಗ ಆನಲ್ಲ" ಹೇಳುತ್ತವು. ಒಂದರಿ ಒಪ್ಪಿಕ್ಕಿಮಾತಿಂಗೆ ತಪ್ಪಿರೆ ಎಂತ, ನಿನ್ನೆ ಮತ್ತೆಂತೆಗೆ ನಾಲಗೆ ಮಾರಿದ್ದು? ಕೇಳುತ್ತವು.ಸತ್ತ ಮೇಲೆಯೂ ನಾಲಗೆ ಅಡಿಂಗೆ ಚೂರು ಸ್ವರ್ಣ ಹಾಕೆಕ್ಕ ಡೊ. ಸಸ್ರ್ಪ ಜಾತಿಗೆ ಎರಡು ನಾಲಗೆಯಡೊ.ಒಂದರಿ ಒಂದು ಹೇಳಿ ಮತ್ತೆ ತಪ್ಪಿದರೆ ಹೇಳುವದ್ದು ಎಂತ ನಿನಗೆ ಎರಡು ನಾಲಗೆಯೋ ಹೇಳಿ ಕೇಳುತ್ತವು.ಎಲ್ಲವೂ ಕೊಟ್ಟ ಮಾತಿಂಗೆ, ಸಂಬಂಧಿಸಿದ ಅಭಿಪ್ರಾಯ. ಕೆಲವು ಜನ ಮಾತಾಡ್ಯೊಂಡೇ ಇದ್ದರೆ ಎಂತ ನಿನ್ನ ನಾಲಗೆ ಸುಮ್ಮನೆ ಕೂರುತ್ತಿಲ್ಲೆಯೋ? ಹೇಳಿ ಕೇಳುತ್ತವು. ನಾಲಗೆ ಮನಸ್ಸಿಂಗೆ ತೋರಿದ್ದರ ಹೇಳಿರೆ ಸೋಲುವದು ನಾವು. ಅದು ಬಾಯಿಯೊಳದಿಕ್ಕೆ ಹಲ್ಲುಗಳ ಬೇಲಿ ಇಪ್ಪ ಕಾರಣ ಅದಕ್ಕೆ ತೊಂದರೆ ಇಲ್ಲೆ. ಸೋಲುವದು ಹಲ್ಲುಗಳೇ. ದೌಡೆಗೆ ಬಿದ್ದರೆ ಹಲ್ಲು ಉದುರಿ ಹೋಕು ಹೇಳುತ್ತವಿಲ್ಲೆಯೋ?. ನಮ್ಮ ನಾಲಗೆಯ ಬೇಕಾದಷ್ಟೆ ಉಪಯೋಗುಸಿ,ಬಾಯಿಯ ಮೂಲೆಲ್ಲಿ ಸುಮ್ಮನೆ ಇಪ್ಪ ಹಾಂಗೆ ಮಾಡುವದೇ ಕ್ಷೇಮ. ಆದರೆ ದೇವರ ಧ್ಯಾನಿಸುವಗ,ಜಪ ಮಾಡುಲೆ ಮಾಂತ್ರ ನಾಲಗೆ ಉಪಯೋಗೆ ಇದ್ದು. ಮಂತ್ರ ಹೇಳುವಗ ಭಜನೆ ಮಾಡುವಗ, ರಾಮ ಜಪವೋ ಅಥವ ಬೇರೆ ದೇವರ ಜಪ ಮಾಡುವಗ ಭಕ್ತಿಂದ ಜಪ ಮಾಡಿರೆ ನಾಲಗೆಯ ಉಪಯೋಗ ಸರಿಯಾಗಿ ಆದ ಹಾಂಗೆ!ಯಮ ದೂತರು ಬಂದು ಎಳಕ್ಕೊಂಡು ಹೋವುತ್ತವು ಹೇಳಿ ಅಪ್ಪಗ ಒಂದರಿ ಮಗನ ದಿನಿಗೇಳಿದ್ದಡೊ. ನಾರಾಯಣಾ ಶಬ್ದ ಕೇಳಿದ ಕೂಡಲೇ ವಿಷ್ಣು ದೂತರು ಬಂದು ವೈಕುಂಠಕ್ಕೆ ಕೊಂಡು ಹೋದವಡೊ. ನಾವು ಅದಕ್ಕೆ ಮದಲೇ ರಾಮ ಜಪ ಮಾಡ್ಯೊಂಡು ಇಪ್ಪೊ
ತಲೆ
ತಲೆ
ತಲೆ ಇದ್ದೋರಿಂಗೆ ತಲೆಯ ಬಗ್ಗೆ ಹೆಚ್ಚು ಹೇಳೆಕ್ಕದ ಅಗತ್ಯ ಇಲ್ಲದ್ದರೂ ಎನ್ನ ತಲೆಗೆ ಹೊಳದ್ದರ ನಿಂಗಳ ತಲೆಗೂ ಕೊಡೆಕ್ಕು ಹೇಳಿ ಕಂಡತ್ತು. ರಾವಣಂಗೆ ಹತ್ತು ತಲೆಯಿತ್ತಡೊ.ಹತ್ತು ತಲೆಗಳನ್ನೂ ತೆಗೆಯೆಕ್ಕಾರೆ ಶ್ರೀರಾಮಂಗೆ ತುಂಬ ಕಷ್ಟ ಅಯಿದಡೊ.ಬ್ರಹ್ಮಂಗೆ ಐದು ತಲೆ ಇದ್ದದರ ಶಿವ ಒಂದು ತಲೆ ಚೂಂಟಿ ಚತುರ್ಮುಖ ಮಾಡಿದ್ದು ಗೊಂತಿದ್ದನ್ನೆ. ಅದರೆ ಬ್ರಹ್ಮ ಕಪಾಲ ಶಿವನ ನೆತ್ತರು ಹೀರುಲೆ ಶುರುಮಾಡಿ, ಉಪಾಯ ಇಲ್ಲದ್ದೆ ಸೀದಾ ನಾರಾಯಣ ದೇವರಲ್ಲಿಗೆ ಹೋದ್ದು, ಶಿವನ ಕೈಂದ ಎನ್ನ ಕೈಗೆ ಬ ಹೇಳಿ ಸೋಲುಸಿದ್ದು, ಮತ್ತೆ ಬ್ರಹ್ಮ ಕಪಾಲದ ರಕ್ತದಾಹ ತೀರುಸುಲೆ, ಮುಂದೆ ಮಹಾಭಾರತ ಯುದ್ಧಲ್ಲಿ ನಿನಗೆ ಬೇಕಾದಷ್ಟು ನೆತ್ತರು ಕೊಡ್ತೆ ಹೇಳಿದ್ದು, ಮಾತು ನಡೆಶುಲೆ ಯುದ್ಧವೇ ಅಪ್ಪ ಹಾಂಗೆ ಮಾಡಿದ್ದು, ಭೂಭಾರ ಕಳವಲೆ ಮಾದಿದ ಅವತಾರ ಎಲ್ಲ ಬ್ರಹ್ಮನ ತಲೆಗೂ ತೃಪ್ತಿ ಕೊಟ್ಟತ್ತು. ಮತ್ತೆ ಆ ತಲೆಯ ಅರ ಕೈಂದ ಅಪ್ಪ ಭೀಮ ಕೈಂದಲೇ ಬಡುದು ನಾಶ ಮಾಡಿದ್ದು ಎಲ್ಲ ಪುರಾಣ ಕತೆ. ದತ್ತಾತ್ರೇಯಂಗೂ ಮೂರು ತಲೆಯಡೊ. ಮೂರು ಮೂರ್ತಿಗಳ ಅವತಾರ ಅಲ್ಲದೋ? ಮತ್ತೆ ರಾಮಾಯಣಲ್ಲಿ ಶ್ರೀರಾಮ ಪಂಚವಟಿಲ್ಲಿಪ್ಪಗ ಮೂರು ತಲೆಯ ದಾನವನನ್ನೂ ಕೊಂದಿದ್ದಡೋ. ನಮಗಿಪ್ಪ ಒಂದು ತಲೆಲ್ಲೇ ವಿವಿಧ ಆಲೋಚನಗೋ ಬತ್ತಿದ್ದರೆ, ತಲೆ ಹೆಚ್ಚಿಪ್ಪೋರ ಒಂದೊಂದು ತಲೆಯ ಯೋಚನೆ ಒಂದೊಂದಾದರೆ... ಎಷ್ಟು ಅಸಬಡುದ್ದವೋ! ವಿಜ್ಞಾನದ ಲೆಕ್ಕಲ್ಲಿಯೂ ಮೆದುಳಿಪ್ಪದು ತಲೆಯೊಳದಿಕ್ಕೇ ಅಲ್ಲದೋ? ನಮ್ಮ ಇಡೀ ದೇಹದ ಹಿತವನ್ನೂ ಹಾಕು ಚೋಕುಗಳನ್ನೂ ಯೋಚನೆ ಮಾಡೆಕ್ಕಾದ್ದು ಮಿದುಳು ಹೇಳುವ ಯಂತ್ರಲ್ಲಿ. ರಕ್ತ ಪರಿಚಲನೆ ಹದಕ್ಕಿದ್ದರೆ ತೊಂದರೆ ಇಲ್ಲೆ. ತಲೆಲ್ಲಿ ಆಲೋಚನೆ ಹೆಚ್ಚಾದರೆ ರಕ್ತ ಪ್ರವಾಹ ಹೆಚ್ಚೆಕ್ಕಾವುತ್ತು. ಹಾಂಗೆ ಒತ್ತಡಲ್ಲಿ ನೆತ್ತರು ತಲೆಯ ಕಡೆಂಗೆ ಹೋದರೆ ಒತ್ತಡ ಜಾಸ್ತಿ ಆಯೆಕ್ಕನ್ನೆ! ಒಂದರಿಯೋ,ಎರಡು ಸರ್ತಿಯೋ ಪರವಾಗಿಲ್ಲೆ. ಅವರವರ ದೈನಂದಿನದ ಕೆಲಸಂಗಳ ಬಗ್ಗೆ ಯೋಚನೇ ಹದಕ್ಕೆ ಮಾಡಿದರೆ ತೊಂದರೆ ಇಲ್ಲೆ. ಆದರೆ ಬೇಕಾದ್ದರ ಬೇಡದ್ದದರ ತಲೆಲ್ಲಿ ತುಂಬ್ಯೊಂಡು ತಲೆ ಹಾಳು ಮಾಡಿಗೊಂಬೋರು ಬೆಶಿ ಜೋರಾದರೆ ಸೀದ ಹೋಪದು ಡಾಕ್ಟ್ರ ಹತ್ತರಂಗೆ. ಮತ್ತೆ ಅವಕ್ಕೂ ಉದ್ಯೊಗ ಬೇಕನ್ನೆ. ಹಾಂಗಲ್ಲ ಅನು ಡಾಕ್ಟ್ರಕ್ಕಳ ವಿರೋಧಿ ಅಲ್ಲ. ದೇಹಾರೋಗ್ಯಲ್ಲಿ ಸೋತು ಹೋದ ಕಾಲಕ್ಕೆ ನಮ್ಮ ಕಾಪಾಡುವದು ಭಿಷಗ್ವರೇಣ್ಯಂಗೊ. ಅವು ನಮಗೆ ಯಾವಾಗಲೂ ಬೇಕು. ಆದರೆ ಡಾಕ್ಟ್ರ ಒಟ್ಟಿಂಗೆ ಇದ್ದ ಹೇಳಿ ಮಧು ಮೇಹ ಇದ್ದೋರು ಸೀವು ಹೆಚ್ಚು ತಿಂದರೆ ಅಕ್ಕೊ. ತತ್ಕಾಲ ಉಪಶಮನ ಒಂದೆರಡು ಸರ್ತಿ ಮಾಡುಗು. ಮತ್ತೆ ಎಲ್ಲ ದೇವರ ಮೇಲೆಯೇ ಭಾರ ಹಾಕೆಕ್ಕಷ್ಟೆ. ಬೇಕು ಬೇಕು ಹೇಳಿ ಬಲುಗಿ ಹಾಕ್ಯೋಂಡು ಮತ್ತೆ ದೇವರ ದೂರುವದೆಂತಗೆ?
ಇದರ ಎಲ್ಲ, ಮದಲೇ ಯೋಚನೆ ಮಾಡೆಕ್ಕಾದ್ದು ನಮ್ಮ ತಲೆ. ಯೋಚನೆಗೂ ಒಂದು ಮಿತಿಯಿದ್ದಲ್ಲದೋ?ಒಬ್ಬೊಬ್ಬನ ತಲೆ ಒಂದೊಂದು ರೀತಿಲ್ಲಿ ಓಡುತ್ತಾದರೂ ಹಲವು ಜನ ಒಟ್ಟು ಸೇರಿ ಬೇಕಾದಷ್ಟು ಅಭಿಪ್ರಾಯ ಹಂಚ್ಯೊಂಡು ಒಂದು ನಿರ್ಧಾರಕ್ಕೆ ಬರೆಕ್ಕಾದ್ದು ಕ್ರಮ. ದೇಶದ, ರಾಜ್ಯದ ಹಿತವ ಮಂತ್ರಿ ಮಂಡಲ ಒಂದು ನಿರ್ಣಯಕ್ಕೆ ಬಂದು ಶಾಸನ ಸಭೆಲ್ಲಿ ಚರ್ಚಿಸಿ ಕಾನೂನು ರೂಪವ ಕೊಟ್ಟ ಮೇಲೆ,ಎಂಕಿಂಚ ಹೇಳಿ ನ್ಯಾಯ ತಪ್ಪಿ ಹೋಪದು, ಸಿಕ್ಕಿ ಬಿದ್ದರೆ ದೇವಸ್ಥಾನಂಗಳಲ್ಲಿ ಪೂಜೆ ಮಾಡುಸ್ಯೊಂಡೋ, ಹರಕೆ ಪುಜೆ ಒಪ್ಪಿಸಿಯೋ ಬಚಾವಪ್ಪಲೆ ತಲೆ ಖರ್ಚು ಮಾಡುವದಕ್ಕೆ ಎಂತಪ್ಪ ಹಿರಿಯೋರು ಒಂದು ಗಾದೆ ಹೇಳುಗು "ಬೇಕೆಂದು ಮಾಡುಸ್ಯೊಂಡ ಬೇಕು ಹೆಬ್ಬಾರ" ಹೇಳಿ. ಪೂಜೆ ಮಾಡುಸುಲೆ ಆಗ ಹೇಳಿದ್ದಲ್ಲ,ಮಾಡುಸದ್ದರೆ ದೇವರಿಂಗೆ ಪೂಜೆಯೇ ಇಲ್ಲೆ ಹೇಳಿ ಆಗಿ ಹೋಗ. ಪೂಜೆಯೋ, ಯಾಗವೋ ಬರೇ ನಮ್ಮ ಹಿತಕ್ಕಾಗಿ ಮಾಂತ್ರ ಅಲ್ಲ, ಎಲ್ಲೋರ ಹಿತಕ್ಕಾಗಿ ಮಾಡುಸ್ಯೊಳ್ಳೆಕ್ಕು. ಅಖೇರಿಗೆ ಪೂಜೆಯೋ ,ಹೋಮವೋ ಮುಗಿಶುವಗ ನವು ಹೇಳುವದೆಂತರ? ಗೋಬ್ರಾಹ್ಮಣೇಭ್ಯೋ ಶುಭಮಸ್ತು ನಿತ್ಯಂ ಲೋಕಾಸ್ಸಮಸ್ತಾಸ್ಸುಖಿನೋ ಭವಂತು. ಹೇಳುತ್ತನ್ನೇ.
ಆದರೆ ತಲೆ ಉಪಯೋಗುಸೆಕ್ಕಾದಲ್ಲಿ ತಲೆ ಉಪಯೋಗುಸದ್ದರೆ ತಲೆಯಿದ್ದೂ ಇಲ್ಲದ್ದ ಹಾಂಗೆ ಆಗಿಹೋಕು. ಕೆಲವು ಸರ್ತಿ ಎಷ್ಟು ತಲೆಯಿದ್ದೋನೂ ಸೋತು ಹೋಪದಿದ್ದು. ತಲೆಯಿದ್ದೋವಕ್ಕೇ ಅಡೊ ತಲೆ ಬೇನೆ ಬಪ್ಪದು.ಹಾಮ್ಗೇ ತುಂಬಾ ತಲೆಯಿದ್ದೋವಕ್ಕೆ ತಲೆಲ್ಲಿದ್ದ ಕೂದಲು ಉದುರಿ ಹೋವುತ್ತಡೊ. ಬೋಳು ತಲೆಯೋರೆಲ್ಲ ಬುದ್ಧಿವಂತರು ಹೇಳಿ ಬಾರ.ವಿಷಯ ತಲೆಯಿದ್ದೋರಿಂಗೆ ಅರ್ಥ ಅಕ್ಕು. ಒಂದರಿ ಶಿವ ಪಾರ್ವತಿಯರೊಟ್ಟಿಂಗೆ ಇಬ್ರು ಮಕ್ಕಳುದೆ ಕೂದೊಂಡಿಪ್ಪಗ ಅಲ್ಲಿಗೆ ನಾರದ ಬಂದಡ. ಬಂದೋನು ಎಂತಾರೊಂದು ಕುಸೃ್ಟಿ ತಂದೇ ತತ್ತ. ಒಂದು ಹಣ್ಣಿನ ಶಿವನ ಕೈಲಿ ಕೊಟ್ಟು, ಆರು ಮದಲು ಲೋಕವ ಮೂರು ಪ್ರದಕ್ಷಿಣೆ ಮುಗಿಶಿ ಬತ್ತವೋ ಅವಕ್ಕೆ ಈ ಹಣ್ಣಿನ ಕೊಡು ಹೇಳಿದನಡ.ಕೇಳುವದೇ ತಡವು. ಸುಬ್ರಹ್ಮಣ್ಯ ಹಣ್ಣಿನ ಪಡೆಯೆಕ್ಕು ಹೇಳಿ ಹೆರಟಡೊ ನವಿಲೇರಿಗೊಂಡು. ಗಣಪತಿ ಮಾಂತ್ರ ಅಲ್ಲೇ ಇತ್ತಿದ್ದಡ. ರಜ ಹೊತ್ತು ಕಳುದು ನಿಧಾನಕ್ಕೆ ಎಲಿಯ ಮೇಲೆ ಕೂದೊಂಡು,ಅಬ್ಬೆ ಅಪ್ಪಂಗೆ ಅವು ಕೂದಲ್ಲಿಗೇ ಮೂರುಸುತ್ತು ಬಂದನಡ. ಸುತ್ತು ಹಾಕಿಕ್ಕಿ ಬಂದು ಹಣ್ಣಿನ ಎನಗೆ ಕೊಡಿ ಹೇಳಿದನಡ. ಶಿವ-ಪಾರ್ವತಿಯರು ಮೂರು ಲೋಕಕ್ಕೂ ಒಡೆಯರು.ಅವಕ್ಕೆ ಸುತ್ತು ಬಂದರೆ ಲೋಕಕ್ಕೆ ಸುತ್ತು ಬಂದ ಹಾಂಗೆ ಆತಲ್ಲದೋ/ ಹಣ್ನಿನ ಕೊಡಿ ಹೇಳಿದ್ದಕ್ಕೆ ನಾರದ ಅಲ್ಲೆ ಇದ್ದೋನು ಸರಿ ಗಣಪತಿ ಹೇಳಿದ್ದು ನಿಂಗೊ ಇಬ್ರಿಂಗೆ ಸುತ್ತೂ ಹಾಕಿದರೆ ಜಗತ್ತಿಂಗೇ ಸುತ್ತು ಬಂದ ಹಾಂಗೆ ಆತು. ಹಣ್ಣಿನ ಗಣಪತಿಗೆ ಕೊಡುಲಕ್ಕು" ಹೇಳಿದನಡ. ಮತ್ತೆ ವಿರೋಧ ಇಲ್ಲೆ. ಹಣ್ಣು ಸುಲಭದ ಹಾದಿ ಹಿಡುದ ಗಣಪತಿಯ ತ್ಬುದ್ಧಿವಂತಿಕೆಗೆ ಸಿಕ್ಕಿತ್ತು. ಎಲ್ಲವು ಅಷ್ಟೆ ಸಮಯ ಸಂದರ್ಭ ನೋಡಿ ನಾವು ನಡಕ್ಕೊಳ್ಳೆಕ್ಕು. ಮದಲೊಂದು ಕುಟುಂಬದ ಯಜಮಾನ ಅವ ಬಂದ ಮೇಲೆಯೇ ಎಲ್ಲೋರಿಂಗೂ ಊಟ ಸಿಕ್ಕುವದು. ಕೆಲಸದೋವು ಬಂದು ಹೇಳಿದವಡ.ಗೋಣ ಕಂಜಿ ಹಾಕಿದ್ದು ಹೇಳಿ. ಕೆಲಸದೋನು ಹೇಳಿದ್ದು ಗೋಣ ಕರು ಹೇಳಿ. ಯಜಮಾನ ಯೋಚನೆ ಮಾಡದ್ದೇ ಕೊಟ್ಟಗೆಲ್ಲಿ ಕಟ್ಟು ಹೇಳಿತ್ತಿದ್ದನಡ. ದನಿಯ ತಲೆ ಎಲ್ಲ್ಯೋ ಕೆಲಸದೋನು ತಲೆ ಎಲ್ಲಿಯೋ?ಕ್ಲಾಸಿಲ್ಲಿ ಪಾಠ ಮಾಡ್ಯೊಂದಿಪ್ಪಗ ಒಬ್ಬ ಮಾಣಿ ಕ್ಲಾಸಿಲ್ಲಿ ಮೇಲೆಮಾಡಿನ ನೋಡ್ಯೊಂಡಿದ್ದೋನಿಂಗೆ ಒಂದು ಕೇರೆ ಹಾವು ಗೋಡೆ ಎಡೆಲ್ಲಿ ಹೋಗ್ಯೋಂಡಿಪ್ಪದು ಕಂಡದರ ನೋಡುವರಲ್ಲೆ ತಲ್ಲೀನನಾಗಿತ್ತಿದ್ದನಡ. ಇವ ಬೇರೆಲ್ಲಿಯೋ ನೋಡ್ಯೊಂಡಿದ್ದ ಹೇಳಿ ಮಾಷ್ಟ್ರ ಅವನತ್ರೆ ಪ್ರಶ್ನೆ ಕೇಳಿದನಡ. ಆನು ಹೇಳಿದ್ದು ನಿನಗೆ ಅರ್ಥ ಆತೋ ಹೇಳಿ ಕೇಳಿದನಡ. ಅಂಬಗ ಈ ಮಾಣಿ ಹೇಳಿದ್ದೆಂತರ " ಬೀಲ ಮಾಂತ್ರ ಬಾಕಿ ಇದ್ದು. ಮತ್ತೆ ತಲೆ ಶರೀರ ಒಳ ಹೋಗಿ ಆತು ಹೇಳಿ. ಮುಂಡಾಸನ್ನೇ ಯೋಚನೆ ಮಾಡ್ಯೊಂಡಿದ್ದ ಮದಿಮ್ಮಾಯನತ್ರೆ, ಊಟ ಆತೊ ಕೇಳಿದ್ದಕ್ಕೆ ಮುಂಡಾಸು ಮೂವತ್ತು ಮಳ ಬೇಕಡೊ ಹೇಳಿದನಡ. ನಾವೆಲ್ಲಿಯೋ ನಮ್ಮ ತಲೆ ಎಲ್ಲಿಯೋ ಅಪ್ಪಲಗ. ತಲೆ ನಮ್ಮೊಟ್ಟಿಂಗೇ ಇದ್ದರೂ ಯೋಚನೆ ಬೇರಾದರೆ ಒಂದು ಹೋಗಿ ಮತ್ತೊಂದಕ್ಕು.ಹಾಂಗೆ ತಲೆ ತಿರುಗುಲೆ ಬಿಡ್ಲಾಗ.ಕೆಲವು ಜನಕ್ಕೆ ಚಯ ಕುಡಿಯದ್ದರೆ, ಕಾಫಿ ಕುಡಿಯದ್ದರೆ ತಲೆಬೇನೆ, ತಲೆ ಸೆಳಿವದು ಶುರು ಆವುತ್ತಡೊ. ಚಾ,ಕಾಫಿಯೇ ತಲೆಲ್ಲಿ ತುಂಬ್ಯೊಂಡಿದ್ದರೆ ಬೇರೆಂತಕ್ಕೆ? ಅದು ಸಿಕ್ಕದ್ದರೆ ತಲೆ ಬೆಶಿ ಆಗೆಡದೊ.ಆಶೆಯೇ ದುಃಖಕ್ಕೆ ಕಾರಣ ಹೇಳಿದ ಬುದ್ಧ ಈಗ ಇಲ್ಲೆ. ಆಶೆ ಪಟ್ಟದು ಸಿಕ್ಕದ್ದರೆ, ಬೇಜಾರು ಬಪ್ಪದು ಸ್ವಾಭಾವಿಕ. ನಮ್ಮ ವೇದಾಂತಲ್ಲಿ ಹೇಳುತ್ತವು. ಎಲ್ಲ ಅವರವರ ಭಾಗ್ಯಂದ ಬತ್ತು, ಹೋವುತ್ತು. ಹೋದರೆ ಬೇಜಾರು ಮಾಡದ್ದೆ, ಸಿಕ್ಕ ರೆ ಹೆಚ್ಚು ಸಂತೋಷಪಡದ್ದೆ, ಸಮಚಿತ್ತಲ್ಲಿ ಇರೆಕ್ಕಡೊ. ಕಳಕ್ಕೊಂಡದಕ್ಕಾಗಿ ಚಿಂತೆ ಮಾಡಿದರೆ ಮತ್ತೆ ಸಿಕ್ಕುಗೋ? ಸಿಕ್ಕಿದರೂ ಎಷ್ಟು ದಿನಕ್ಕೆ? ಎಲ್ಲ ಮೂರು ದಿನದ ಬಾಳ್ವೆ. ಮತ್ತೆ ತಲೆ ತಲೆ ಸೇರಿದರೆ,ಅಲ್ಲಿ ಜಗಳ ಬರೆಕ್ಕಡೊ.ರತ್ನಾಕರ ಕವಿ ಹೇಳಿದ್ದಲ್ಲದೋ? ಸಾವಿರ ಹೆಂಡತ್ಯಕ್ಕಳನ್ನೂ ಭಾಅರತ ಚಕ್ರವರ್ಅವಕ್ಕೆ ಬೇಜಾರು ಆಗದ್ದ ಹಾಂಗೆ ನೋಡ್ಯೊಂಡಿತ್ತಿದ್ದನಡ. ಮತ್ತೆ ಕೃಷ್ಣನ ಕತೆ ಗೊಂತಿದ್ದನ್ನೆ. ಆನು ಅವನತ್ರೆ ಒಂದು ಕೇಳಿದೆ. ಅವ ತಲೆಯಾಡುಸಿದ್ದನೇ ಇಲ್ಲೆ ಹೇಳುತ್ತವು. ಬಾಯಿ ಬಪ್ಪೋನು ತಲೆಯಾಡುಸುವದೆಂತಗೋ? ಶೀತ ಅಪ್ಪಗ ತಲೆ ಬೇನೆ ಅಪ್ಪದು ಇದ್ದು. ಆದರೆ ಕೆಲವು ಜನಕ್ಕೆ ಬೇರೊಬ್ಬ ಒಳ್ಳೆದಪ್ಪದು ನೋಡಿದರೆ ತಲೆ ಬೇನೆಯಾವುತ್ತಡೊ.ಅವಂಗೆ ತಲೆ ಜೆಪ್ಯೊಂಡು ಹೇಳಿದೆ ಕೇಳಿದ ಇಲ್ಲೆ.ಈಗ ಅನುಭವಿಸುತ್ತ ಹೇಳುವದಿದ್ದನ್ನೆ.ಅವ ಒಳ್ಳೆ ಬುದ್ಧಿವಂತ ಹೇಳುವಗಳೂ "ಅವಂಗೆ ತಲೆಯಿದ್ದು ಹೇಳುತ್ತವು. ಕಣ್ಣಿಂಗೆ ಕಾಂಬ ತಲೆ ಅಲ್ಲ. ತಲೆಲ್ಲಿಪ್ಪ ಮೆದುಳು ಶಕ್ತಿ ಒಳ್ಳೆದಿದ್ದು ಹೇಳಿ ಅಲ್ಲದೋ? ಬೇಡದ್ದದರ ಮಾಡ್ಯೊಂಡು ಸಿಕ್ಕಿ ಬಿದ್ದು, ಮತ್ತೆ ತಲೆ ಬೆಶಿ ಮಾಡ್ಯೊಂಡು ಊರೆಲ್ಲ ನಾರುಸುವೋರು ಇದ್ದಷ್ಟು ದಿನ ಲೋಕ ಉದ್ಧಾರ ಅಕ್ಕೋ?ಎಲ್ಲ ಅವರವರ ಮನಸ್ಸಿಲ್ಲಿ ಕೂದುಗೋಂಡು ಒಂದೊಂದು ಬುದ್ಧಿ ಕೊಟ್ಟು, ಒಬ್ಬಕ್ಕೊಬ್ಬ ಜಗಳ ಮಾಡ್ಯೊಂಡಿಪ್ಪದೇ ದೇವರಿಂಗೆ ಬೇಕಾದ್ದೊ ಗೊಂತಿಲ್ಲೆ. ಎಲ್ಲ ಅವಂಗೇ ಅರ್ಪಿತ
ನಮ್ಮ ಈ ಶರೀರವ ಮೂರು ವಿಭಾಗ ಮಾಡಿದ್ದವು-ರುಂಡ, ಮುಂಡ. ಕೈಕಾಲುಗೊ. ಅಡಿ ಕಂಬ ನಡು ಮಡಕೆ ಕೊಡಿ ಕುಡಿಕೆ ಹೇಳಿಯೂ ಮೂರು ವಿಭಾಗ ಹೇಳುತ್ತವು. ಕುಡಿಕೆ ಹೇಳುವದು ತಲೆಯ.ಇಡೀ ಶರೀರದ ಕೇಂದ್ರ ಸ್ಥಾನ- ಮೆದುಳು ಇಪ್ಪದು ಇಲ್ಲೇ ಅಲ್ಲದೋ? ಒಳುದ ಎಲ್ಲ ಅಂಗಂಗೊಕ್ಕೆ ಬೇಕಾದ ನಿರ್ದೇಶನ ಕೊಟ್ಟು ನಿಯಂತ್ರಣಲ್ಲಿ ಮಡಿಕ್ಕೊಂಬದು ತಲೆ. ಕೆಲವು ಜನಕ್ಕೆ ನಖ ಶಿಖಾಂತವಾಗಿ ಕೋಪ ಬತ್ತನ್ನೇ! ಹೀಂಗಿಪ್ಪ ಕೋಪವೇ ಮುಂದೆ ರಕ್ತದ ಒತ್ತಡಕ್ಕೆ ಕಾರಣ ಅಪ್ಪದಡೊ. ಕೋಪ ಬಂದರೆ ಅದು ಒಂದು ಕ್ಷಣದ ಆವೇಶ. ಆ ಘಳಿಗೆಲ್ಲಿ ಮನಸ್ಸಿನ ಹತೋಟಿಲ್ಲಿ ಮಡಿಕ್ಕೊಂಡರೆ ಮರುಕ್ಷಣಲ್ಲೇ ಕೋಪ ದೂರ ಹೋವ್ತು. ಆತ್ಮ ಹತ್ಯೆ ಮಾಡಿಗೊಂಬೋರುದೇ ಹಿಂದೆ ಮುಂದೆ ಯೋಚನೆ ಮಾಡದ್ದೆ ಆ ಕ್ಷಣದ ಆವೇಶಕ್ಕೆ ಒಳಗಾದರೆ ಜೀವ ತೆಕ್ಕೊಳ್ಳುತ್ತವು. ಒಂದು ಕ್ಷಣ ಕಳುದರೆ ಮತ್ತೆ ಅವರ ಯೋಚನೆ ಬದಲಾವುತ್ತಡೊ. ಅದಕ್ಕೇ ಹೇಳುತ್ತವು. ತಾಳಿದವನು ಬಾಳಿಯಾನು ಹೇಳಿ. ಸಹನೆ ವಜ್ರದ ಕವಚ ಹೇಳಿ ಡಿ ವಿ ಜಿ ಹೇಳಿದ್ದ. ಕೂಪದೊಳು ನೇಣು ಹರಿದಂತೆ ಕೋಪಿ ತಾನಿಳಿವ ನರಕಕ್ಕೆ ಹೇಳಿ ಸರ್ವಜ್ಞ ಹೇಳಿದ್ದಡೊ. ಹಾಂಗಿಪ್ಪ ಅನುಭವಸ್ಥರ ಮಾತೇ ನಮಗೆ ವೇದ ವಾಕ್ಯ ಆಗಿಪ್ಪಗ, ಯವ ಕೆಲಸಲ್ಲಿ ಮುಂದೆ ಹೋಪಗಳೂ ಸಾಕಷ್ಟು ಚಿಂತನೆ ಮಾಡ್ಯೊಂಡೇ ಮುಂದುವರಿಯೆಕ್ಕು. ಬಿದ್ದ ಹಣ್ಣು ಮತ್ತೆ ಮರಕ್ಕೆ ಹೋಕೋ? ಅದಕ್ಕೇ ತಲೆಯಿಪ್ಪೋರಿಂಗೆ ಇಂತಹ ಮಾತು ಸದಾ ನೆಂಪಿರುತ್ತು. ಲೋಕಲ್ಲಿ ಹೆಚ್ಚು ತಲೆಯಿಪ್ಪ ಹೇಳಿರೆ ಬುದ್ಧಿವಂತ ಜನಂಗೊ ಹೊಸ ಹೊಸ ಸಂಶೋಧನೆ,ಮಾಡ್ಯೊಂಡು ಒಳುದೋರ ತಲಗೂ ಹೊಗುಸಿ ಲೋಕ ಹಿತವ ಯೋಚನೆ ಮಾಡುವ್ಮಾಡ್ಯೊಂಡಿಪ್ಪ ವಿಜ್ಞಾನಿಗಳ ಕೊಡುಗೆ ಲೋಕ ಹಿತಕ್ಕಾಗಿ ನಡದ್ದರಿಂದ ಪ್ರಪಂಚ ವಿಜ್ಞಾನಲ್ಲಿ ಲೋಕ ಮುಂದುವರುದ್ದು.ನಮ್ಮ ದೇಶಲ್ಲಿಯೂ ದೊಡ್ಡ ದೊಡ್ಡ ವಿಜ್ಞಾನಿಗೊ ಇಪ್ಪದು ನಮಗೆ ಹೆಮ್ಮೆ.ಮನ್ನೆ ತಾನೆ ಪತ್ರಿಕೆಲ್ಲಿ ಬಂದದೇವಕಣಂಗಳ ಶುದ್ದಿಲ್ಲಿ ಬೋಸೋನ್ ದೇವಕನ ಹೇಳುವ ಹೆಸರು ಮಡಗಿದ್ದು ನಮ್ಮ ಜನಂಗೊ ವಿಜ್ಞಾನ ಲೋಕಲ್ಲಿ ಮದಲೆ ಪಾದಾರ್ಪಣೆ ಮಾಡಿದ್ದವು ಹೇಳುವದಕ್ಕೆ ಉದಾಹರಣೆ. ನಮ್ಮ ತಲೆಯ ಲೋಕೋದ್ಧರಕ್ಕೆ ಉಪಯೋಗಿಸಿದರೆ ನಮ್ಮ ದೇಶವ ಎಲ್ಲ ದೇಶದೋರುದೆ ಕೊಂಡಾಡುವ ಹಾಂಗೆ ಅಕ್ಕು.ಕೊಡಾಡೆಕ್ಕು ಹೇಳಿ ಅಲ್ಲ ನಮ್ಮ ಪಾಲನ್ನು ಕೊಡುವ ಯೋಗ್ಯತೆ ನಮಗೂ ಬಂದರೆ ಅದಕ್ಕಿಂತ ಹೆಚ್ಚು ನಮಗೇನೂ ಬೇಡ. ದಾಸರ ಪದಲ್ಲಿದ್ದಲ್ಲದೋ? "ಏನ ಬೇಡಲಿ ನಿನ್ನ ಬಳಿಗೆ ನಾ ಬಂದು; ನೀನಿತ್ತ ಸೌಭಾಗ್ಯ ನಿಖಿಳವಾಗಿರಲು" ನಾವು ಮತ್ತೆ ಏನನ್ನು ಕೇಳುವದು ಬೇಡ. ಅವ ಕೊಟ್ಟದರನ್ನೇ ಸದ್ವಿನಿಯೋಗ ಮಾಡಿ ಸೈ ಎನಿಸಿಗೊಂಡರೆ ಜೀವನ ಸಾರ್ಥಕ!
Sunday, July 8, 2012
ಒಂದು ಮಾವಿನ ಮರ
ಒಂದು ಮಾವಿನ ಮರ
ತುಂಬ ಹಿಂದೆ ನಡದ ಘಟನೆ. ಅ ಕಾಲಲ್ಲಿ ರಾಜಕೀಯವೂ ಇಷ್ಟು ಬದಲಾಯಿದಿಲ್ಲೆ. ಅಂದ್ರಾಣ ಜನಂಗಳೂ ಈಗ ಇಲ್ಲೆ. ಇದ್ದರು ನೆಂಪೂ ಇರ ಹೇಳಿ ಕಾಣುತ್ತು. ಕಾಲವೆ ಎಲ್ಲವನ್ನೂ ನುಂಗಿ ಹಾಕುತ್ತು. ಕೆಲವು ವರ್ಷ ಕಳದ ಮೇಲೆ ಇಂದ್ರಾಣದ್ದೂ ಮುಂದಿನವಕ್ಕೆ ನೆಂಪು ಬಾರ. ಮರೆದುಹೋಪದು ಒಂದು ಲೆಕ್ಕಲ್ಲಿ ಒಳ್ಳೆಯದೇ. ಜೀವನಲ್ಲಿ ಬಂದ ಕಷ್ಟಂಗಳನ್ನೋ, ಸೋಲುಗಳನ್ನೋ ನೆಂಪು ಮಾಡಿಗೊಂಡಿದ್ದರೆ ನಮ್ಮ ತಲೆಯೊಳ ಜಾಗೆಯೇ ಸಾಕಾಗ. ಯಾವಾಗಲೂ ನೆಂಪು ಮಾಡಿಗೊಂಡಿದ್ದರೆ ಮಾಂತ್ರ ಹಳತ್ತು ನೆಂಪಪ್ಪದು. ಕಷ್ಟ ಸೋಲು ಮನುಷ್ಯಂಗಲ್ಲದ್ದೆ ಮರಕ್ಕೋ ಬಪ್ಪದು? ಒಂದರಿ ಬಂದ ಕಷ್ಟವ ನುಂಗಿಗೊಂಡರೆ ಮತ್ತೆ ಮರವಲೆಡಿಗು. ಮತ್ತೆ ಮತ್ತೆ ನೆಂಪು ಮಾಡಿಗೊಂಡೇ ಇದ್ದರೆ, ಜೀವನಲ್ಲಿ ಬೇಜಾರು ಹೆಚ್ಚಾವುತ್ತು. ಏನೋ ಇದೆಲ್ಲಾ ಸಾಮಾನ್ಯ ಇಪ್ಪದೇ ಹೇಳಿ ಗ್ರೇಶಿಗೊಂಡರೆ ಕಷ್ಟ. ಆಟಲ್ಲಿ ಬಂದ ಸೋಲಿನ ಹಾಂಗೆ, ಇನ್ನೊಂದರಿ ಪ್ರಯತ್ನ ಮಾಡಿ ಗೆಲ್ಲುಲೆ ಎಡಿತ್ತೋ ನೋಡುವದು. ಆಗದ್ದರೆ ಸುಮ್ಮನೆ ಕೂಪದು. ಹೇಂಗಿದ್ದರೂ ಗೆದ್ದೇ ಗೆಲ್ಲೆಕ್ಕು ಹೇಳುವ ಹಟ ಬಂದರೆ ನಮ್ಮ ಮನಸ್ಸು ಹಟ ಸಾಧುಸುವದು ಹೇಂಗೆ ಹೇಳುವ ಯೋಚನೆಲ್ಲೇ ಇರೆಕ್ಕಾವುತ್ತು. ಕಿಚ್ಚು ಹೊತ್ತಿದರೆ, ಕಿಚ್ಚು ಅಲ್ಲಿದ್ದ ಅದರ ಆಹಾರ ಎಲ್ಲ ಮುಗಿಶಿಕ್ಕಿ ಮತ್ತೆ ತಣ್ಣಂಗಾವುತ್ತು. ಆದರೆ ಆಹುತಿ ಮುಗಿಶದ್ದೆ ಸುಮ್ಮನೆ ಕೂರುತ್ತಿಲ್ಲೆ. ಅಥವಾ ಕಿಚ್ಚು ದೊಡ್ಡ ಮಾಡೆಕ್ಕಾರೆ ಆರಾರುದೆ ಅದಕ್ಕೆ ತಿಂಬಲೆ ಆಹಾರ ಕೊಡುತ್ತಾ ಇರೆಕ್ಕು.ಕೆಲವು ಜನಕ್ಕೆ ಕಿಚ್ಚಿಂಗೆ ತುಪ್ಪ ಎರವದು ಅಭ್ಯಾಸ. ಪಾಕಿಸ್ಥಾನ-ಭಾರತದ ಜಗಳ ಮುಂದುವರಿತ್ತಾ ಇಪ್ಪಲೆದೆ ಅವಕ್ಕೆ ಅದರ ಮುಗಿಶೆಕ್ಕು ಹೇಳಿ ಇಲ್ಲದ್ದ ಕಾರಣ ಮಾಂತ್ರ ಅಲ್ಲ ನಾವು ಹೀಂಗೆ ಜಗಳಾಡಿಗೊಂಡಿದ್ದರೆ ಬೇರೆಯವಕ್ಕೆ ನೋಡ್ಯೊಂಡಿದ್ದರಾತು. ಬೇರೆ ದೇಶಂಗೊ ಸಹಾಯ ಮಾಡುತ್ತೆಯೋ ಹೇಳಿ ಆಯುಧ ಸಾಮಗ್ರಿ ಕೊಟ್ಟುಗೊಂಡು ಇನ್ನೂ ತುಪ್ಪ ಎರೆತ್ತಾ ಇದ್ದವಲ್ಲದೋ? ಮುಗಿವ ಯೋಗ ಬಯಿಂದಿಲ್ಲೆ. ಮಹಾಭಾರತ ಯುದ್ಧ ಕೌರವರ ಅವಸಾನ ಆದ ಮೇಲೆ ಮುಗುದಿತ್ತಲ್ಲದೋ? ಹಾಂಗೆ ಒಂದು ಕಾಲ ಬಕ್ಕು ಎಲ್ಲ ತಣ್ಣಂಗಕ್ಕು.
ಒಂದು ಕಶಿ ಮಾವಿನ ಮರ ಎಂಗಾಲ ಊರಿನ ಒಂದು ಜಾಗೆಲ್ಲಿ ಇತ್ತು. ಮಾಂತ್ರ ಅಲ್ಲ, ಒಂದು ಕುಂಟುಕಾನ ಮಾವಿನ ಮರವೂ ಇತ್ತು ಆ ಜಾಗೆಲ್ಲಿ. ಒಂದು ಮನೆ, ಏಳೆಂಟು ತೆಂಗಿನ ಮರಂಗೊ. ಜಾಗೆಯ ಒಡಮಸ್ತ ಸಾಲ ಆಗಿ ಜಾಗೆಯ ಮಾರೆಕ್ಕಾಗಿ ಬಂತು. ಮಾರುವದು ಆ ಊರಿನ ಒಬ್ಬ ರಾಮಣ್ಣ ಹೇಳುವ ಊರಿನ ಪ್ರಮುಖಂಗೆ ಗೊಂತಾತು.ಮದಲೆಲ್ಲ ಒಂದೊಂದು ಊರಿಲ್ಲಿ ಹೀಂಗಿಪ್ಪ ಆಢ್ಯರು, ಊರನ್ನೇ ಕಲಂಕುಸಿ ತನ್ನ ಬೇಳೆ ಬೇಶಿಗೊಂಡಿದ್ದೋವು! ಅವ ಒಬ್ಬ ಪಾಪದೋನ ,ಬೇರೆ ಆರ ಸುದ್ದಿಗೂ ಹೋಗದ್ದೋನ ಹಿಡುದು ಹಾಕಿ ಅವನತ್ರೆ "ಜಾಗೆಯ ನೀನು ತೆಕ್ಕೊ. ಕಮ್ಮಿಗೆ ಬತ್ತು. ಹೇಂಗಿದ್ದರೂ ಬರೇ ಒಂಡು ಸಾವಿರ ರೂಪಾಯಿಗೆ ೨೫ ಸೆಂಟ್ಸ್ ಜಾಗೆಯೂ ಮನೆ ಎಲ್ಲ ಬತ್ತು. ಮನೆಲ್ಲಿ ಎರಡು ಜನ ಕೂಲಿಯೋವು ಬಾಡಿಗೆಗೆ ಇದ್ದವು. ಬಡ್ದಿ ಪೈಸೆ ಬಾಡಿಗೆಲ್ಲಿ ಬಕ್ಕು ತೆಕ್ಕೋ" ಹೇಳಿದ.ಅವಂಗೆ ಪಾಪ ದಾರಿಲ್ಲಿ ಹೋಗಿಗೊಂಡಿದ್ದ ಮಾರಿಯ ಮನೆ ಬಾಗಿಂಗೇ ಬರುಸಿದ ಹಾಂಗೆ ಆಗಿ ಹೋತು. ಜಾಗೆಲ್ಲಿ ಒಂದು ಕಶಿ ಮಾವಿನ ಮರಲ್ಲಿ ಒಳ್ಳೆ ಜಾತಿ ಕಶಿ ಮಾವಿನ ಕಾಯಿಗೊ ಸಿಕ್ಕುತ್ತು. ಜಾಗೆ ದೂರಲ್ಲಿಪ್ಪ ಕಾರಣ ಆನು ಇಲ್ಲಿಗೆ ಯಾವಾಗಲೂ ಬಪ್ಪ ಕಾರಣ ಜಾಗ್ರತೆ ನೋಡ್ಯೊಳ್ಳುತ್ತೆ. ಕೊಯ್ವಗ ಎನಗೂ ಮಾವಿನ ಕಾಯಿ ಕೊಡೆಕ್ಕು ಹೇಳಿ ಒಂದು ಮಾತಿನ ಮುಳ್ಳು ಮಡಗಿತ್ತಿದ್ದ. ಸರಿ! ಅವನ ಮಾತಿಂಗೆ ಮರುಳಾಗಿ ದಾರಿಲ್ಲಿ ಹೋಪ ಮಾರಿಯ ಮನೆಗೇ ತಂದು ಹಾಕಿಗೊಂಡ ಇವ.
ಆ ವರ್ಷ ಮಾವಿನ ಕಾಯಿ ಮುಗುದಿತ್ತು. ಮತ್ತಾಣ ವರ್ಷ ಮರ ತುಂಬ ಮಾವಿನ ಕಾಯಿಗೊ! ಜಾಗೆ ತೆಕ್ಕೊಂಡವಂಗೆ ಬೇರೆ ಕೆಲಸದ ಎಡಕ್ಕಿಲ್ಲಿ ಮಾವಿನ ಕಾಯಿ ಕೊಯ್ವಲೆ ನೆಂಪಾಗಿತ್ತಿದ್ದಿಲ್ಲೆ. ಜನಂಗೊ ಎಲ್ಲ ತನ್ನ ಕಚ್ಚೆಯೊಳ ಇರೆಕ್ಕು ಹೇಳುವ ಯೋಚನೆ ಇದ್ದ ಪ್ರಮುಖಂಗೆ. ಎಲ್ಲಿ, ಯಾವಗ, ಹೇಂಗೆ, ಆರಿಂಗೆ ಬೆಶಿ ಮುಟ್ಟುಸೆಕ್ಕು, ತನ್ನ ಪತ್ತಿಂಗೆ ಬರುಸ್ಯೊಳ್ಳೆಕ್ಕು ಹೇಳುವದೇ ಯೋಚನೆಯಾಗಿತ್ತು. ಹೋದಲ್ಲೆಲ್ಲ ಜಾಗೆ ಅವಂಗೆ. ಎಲ್ಯಾದರೂ ದಾರಿ ನಡಕ್ಕೊಂಡು ಹೋಪಗ ಒಳ್ಳೆ ಆಯಕಟ್ಟಿನ ಫಲವತ್ತಾದ ಭೂಮಿ ಕಂಡರೂ, ಆ ಪರಿಸರಲ್ಲಿಪ್ಪ ಪಾಪದೋನು ಒಬ್ಬನ ದಿನಿಗೇಳಿ, ನಿನಗೊಂದು ಜಾಗೆ ನೋಡಿದ್ದೆ. ಅದರ ದರಕಾಸ್ತು ಮಾಡುಸಿ ಕೊಡುತ್ತೆ. ಸೇನವಂಗೆ, ಮಣೆಗಾರಂಗೆಲ್ಲ ಆನೇ ಕೊಡುತ್ತೆ. ಜಾಗೆಯ ನೀನೇ ನೋಡಿಗೋ' ಹೇಳಿಕ್ಕಿ, ಇವ ಪಾಪ! ಬೆಗರು ಸುರಿಸಿ ಕಷ್ಟಪಟ್ಟು ಕೆಲಸ ಮಾಡಿ, ತೋಟವೊ ಗೆದ್ದೆಯೋ ಮಾಡ್ಯೊಂಡಿದ್ದರೆ, ಇವ ಬತ್ತ ಅಲ್ಲಿಗೆ. "ಜಾಗೆ ಈಗ ಭಾರಿ ಒಳ್ಳೆದಾಯಿದು. ಚೆಂದ ಆಯಿದು. ನಿನಗೆ ಈ ಜಾಗೆ ಮಾಡಿಕೊಡೆಕ್ಕಾರೆ ಎನಗೆ ತುಂಬ ಕಷ್ಟ ಆಯಿದು. ತುಂಬ ಖರ್ಚಾಯಿದು. ಅದರ ನೀನು ಕೊಡುತ್ತೆಯೋ ಅಲ್ಲ; ವರ್ಷವೂ ಅಷ್ಟೋ ಇಷ್ಟೋ ಕೊಟ್ಟುಗೊಂಡಿರುತ್ತೆಯೋ ಹೇಂಗೆ? ಒಂದು ಗೇಣಿ ಚೀಟು ಮಾಡಿಕ್ಕುವೋ. ಈಗ ನಿನ್ನ ಸ್ವಾಧೀನವೇ ಇರಲಿ. ರೆಕೋರ್ಡ್ ನಿನ್ನ ಹೆಸರಿಂಗೆ ಮಾಡೆಕ್ಕಾರೆ ಎಷ್ಟು ಕೊಡುತ್ತೆ?" ಹೇಳಿ ಎಲ್ಲ ಇವನ ಪೀಡುಸುಲೆ ಸುರು ಮಾಡುವದು ಅವನ ಜಾಯಮಾನ! ವಿಷಯ ಗೊಂತಿದ್ದರೂ ಹೆಚ್ಚಿನೋವು ಅವನ ಬಾಯಿಗೆ ಬೀಳುವೋರೇ. ಈ ಮಾವಿನ ಮರದ ಕತೆಯೂ ಹಾಂಗೇ ಆಗಿತ್ತು. ಒಂದು ದಿನ ಹೊತ್ತೋಪಗ ಆ ಜಾಗಗೆ ಬಂದೋನು, ಕೆಲಸದೋರ ದಿನಿಗೇಳಿ( ಬರೇ ಚಾಯ ಕೊಟ್ಟರೆ ಸಾಕು; ಚಾಯ ಕುಡಿವ ಆಸೆಗೆ ಕೆಲವು ಜನ ಓಡಿ ಬಂದೊಂಡಿತ್ತಿದ್ದವು. ಬೆಳೆದ ಕಾಯಿಗಳೆಲ್ಲ ಕೊಯ್ಸಿ, ಒಂದಷ್ಟು ಕಾಯಿಗಳ "ಇದರ ಅವ ಬಂದರೆ ಕೊಟ್ಟಿಕ್ಕು'" ಹೇಳಿ ಕೊಟ್ಟಿಕ್ಕಿ, ಊರೆಲ್ಲ ಹಂಚಿ ಅರೆವಾಶಿ ಕಾಯಿಗಳನ್ನೂ ಕೊಂಡು ಹೋದಡ. ಎರಡು ದಿನ ಕಳುದು ಹೋಪಗ ಹೋಟ್ಲಿನೋನು "ಇದ, ಇಲ್ಲಿ ರಜ ಮಾವಿನ ಕಾಯಿ ಇದ್ದು ನಿನಗೇಳಿ ರಾಮಣ್ಣ ಮಡುಗಿದ್ದು ಕೊಂಡೋಗು, ಕೊಂಡೋಗದ್ದರೆ ಹಾಳಕ್ಕು" ಹೇಳಿದಡ. ಸರಿ ಇವ ಪಾಪ ಕೊಂಡೋದ. ಒಂದು ವರ್ಷ ಹಾಂಗೆ ಹೋತು. ಎಲ್ಲೋರುದೆ 'ಇದು ಊರ ರಾಮಣ್ಣನ ಮರ ಹೇಳುಲೆ ಸುರುಮಾಡಿದವು. "ಜಾಗೆ ಮತ್ತೊಬ್ಬಂದಾದರೂ ಕ್ರಯಚೀಟು ಅಪ್ಪಗಳೇ ಮಾತು ಹಾಂಗೆ ಇದ್ದಡೋ. ಹೇಳುಲೆ ಸುರುಮಾಡಿದವು. ಒಂದೆರಡು ವರ್ಷ ಹೀಂಗೇ ಕಳುತ್ತು. ಊರೋರೆಲ್ಲ ಹೇಳುವದು ಪ್ರಚಾರ ಆಗಿದ್ದರೂ ಇವಂಗೆ ಗೊಂತಾದು ಒಂದು ವರ್ಷ ಕಳುದ ಮೇಲೆ.
ಮತ್ತೆ ಒಂದರಿ ಇವನೇ ಮದಲು ಹೋಗಿ ಕಾಯಿ ಕೊಯ್ದಕ್ಕೆ, ಅವಂಗೆ ಕೋಪ ಬಂದು, ಮತ್ತಾಣ ಸರ್ತಿ ಇವ ಹೋಪಗ ಮರ ಖಾಲಿ. ಆ ಸಮಯಲ್ಲಿ ಜಾಗೆಲ್ಲಿದ್ದ ಬಾಡಿಗೆಯೋರುದೆ ಪ್ರಮುಖನ ಕಡೆಯಾಗಿತ್ತಿದ್ದವು. ಮತ್ತೆ ಬಾಡಿಗೆ ಸರಿ ಕೊಡದ್ದ ಕಾರಣಂದ ಜಾಗೆಂದಲೇ ಏಳೆಕ್ಕು ಹೇಳಿ ಬಾಡಿಗೆಯೋರತ್ರೆ ಹೇಳಿದ್ದಕ್ಕೆ ಒಪ್ಪದ್ದೆ, ಮಾತಿಂಗೆ ಬಗ್ಗದ್ದೆ, ಜಾಗೆಲ್ಲಿದ್ದೋರ ಮೇಲೆ ಕೇಸ್ ಮಾಡಿಯೂ ಆತು. ಕೇಸಿಲ್ಲಿ ಒಕ್ಕಲಾಗಿಪ್ಪೋರು ಜಾಗೆ ಬಿಡೆಕ್ಕು ಹೇಳಿ ಅಪ್ಪಗ,ಸುಲಭಲ್ಲಿ ಬಿಟ್ಟು ಹೋಗದ್ದೆ ಪೋಲಿಸ್ ಕೇಸ್ ಆದಮೇಲೆ ಮನೆ ಬಿಟ್ಟಿಕ್ಕಿ ಹೋದವು. ಆಮೇಲೆ ಇವರೊಳದಿಕ್ಕೆ "ಇತ್ತಲು ಹತ್ತಿತು ಕರ್ಣಾರ್ಜುನರೊಳಗೆ" ಹೇಳಿ ನೇರ ಸಮರವೇ ಸುರುವಾತು. ಅವನ ಕಡೆಲ್ಲಿ ಊರೋರೆಲ್ಲ ಇತ್ತಿದ್ದವು. ಕಾರಣ ವರ್ಷಕ್ಕೊಂದರಿ ಮಾವಿನ ಕಾಯಿ ಸಿಕ್ಕುತ್ತಿತ್ತಲ್ಲದೋ? ಆರದ್ದೋ ಬದುಕ್ಕಿಂಗೆ ಅವ ಯಜಮಾನ ಆಗಿಹೋದ ಊರೋರ ಮಟ್ಟಿಂಗೆ. ಇವಂಗೆ ನಿವೃತ್ತಿ ಇಲ್ಲೆ. ಜಾಗೆಲ್ಲಿದ್ದ ಮನೆಯ ಮುರುದು ತಂದಿತ್ತಿದ್ದ ಹಾಂಗೆ ಈಗ ಮನೆ ಖಾಲಿ. ಒಬ್ಬ ಪಾಪದೋನು "ಆನು ಜಾಗೆಲ್ಲಿ ಅಂಗಡಿ ಕಟ್ಟಿ ವ್ಯಪಾರ ಮಾಡುತ್ತೆ. ಜಾಗ್ಗೆ ,ಮಾಂತ್ರ ಬಾಡಿಗೆ ಚೀಟು ಮಾಡಿಕೊಡುತ್ತೆ ಹೇಳಿದಡ. ಹಾಂಗಿಪ್ಪಗ ಜಾಗೆಲ್ಲಿ ಹಾಂಗೆ ಒಂದು ಒಕ್ಕಲಿನ ಹಾಂಗೆ ಇದ್ದರೆ ಮರದ ಕಾವಲಿಂಗೂ ಅಕ್ಕು ಹೇಳಿ ಇವ ಒಪ್ಪಿದಡಾ. ಆ ವರ್ಷ ಮಾವಿನ ಕಾಯಿ ಬೆಳೆದು ಅವ ಕೊಯ್ವಲೆ ಬಪ್ಪಗ ಅಂಗ್ಡಿಲ್ಲಿದ್ದೋನು ಬಿಟ್ಟ ಇಲ್ಲೆ. ರಾಮಣ್ಣ ಕೊಯ್ವಲೆ ಬತ್ತ ಹೇಳುವದು ಜಾಗೆಲ್ಲಿಪ್ಪವಂಗೆ ಗೊಂತಾಗಿ ಬಂದು ಹೇಳಿದಡ. ಇವ ಹೋಪಗ ರಾಮಣ್ಣ ಕಾಯಿ ಕೊಯ್ಕೊಂಡು ಇತ್ತಿದ್ದಡ. ಇವ ಸೀದಾ ಹೋಗಿ ಅವನ ದೂಡಿ ಬಿಟ್ಟಪ್ಪಗ ಅಲ್ಲಿಂದ ಹೋಯೆಕ್ಕಾಗಿ ಬಂತು. ಮತ್ತೆ ಸುದ್ದಿ ಇಲ್ಲೆ.
ಒಂದೆರಡು ವರ್ಷವೂ ಹೀಂಗೇ ಹೋತು. ಮಾವಿನ ಕಾಯಿ ವರ್ಷವೂ ಒಡಮಸ್ಥನೇ ಕೊಯ್ದು ಕೊಂಡೋಗ್ಯೊಂಡು ಇತ್ತಿದ್ದಡ. ಆ ಸಮಯಲ್ಲೇ ಏನೋ ಒಂದು ಕಾರಣಕ್ಕೆ ಈ ಅಂಗ್ಡಿಯೋನಿಂಗೂ ಬೇರೊಬ್ಬಂಗೂ ಜಗಳ ವಿಕೋಪಕ್ಕೆ ಹೋಗಿ ಕೇಸ್ ಆತು. ಅಂಗ್ಡಿಯೋನ ಮೇಲೆ ಕೋಪ ಇದ್ದ ಪ್ರಮುಖ ಅಂಗ್ಡಿಲ್ಲಿದ್ದೋನ ವಿರುದ್ಧ ಸಾಕ್ಷಿ ಕೂಡಾ ಹೇಳಿ ಜೈಲಿಂಗೆ ಹೋಪ ಹಾಂಗೆ ಮಾಡಿದನದ. ಮತ್ತೆ ಮದಲಾಣ ಹಾಂಗೆ ಮಾವಿನ ಕಾಯಿ ಕೊಯ್ವಲೆ ಅನುಕೂಲವೇ ಆಗಿಹೋತು. ಒಂದೆರಡು ವರ್ಷ ಕಳಿವಗ ಅವ ಜೈಲಿಂದ ಬಂದ. ಅಂಗ್ಡಿಯ ಬೇರೆ ಜನಕ್ಕೆ ಮಾರಿದ. ತೆಕ್ಕೊಂಡೋನನ್ನೂ ಮಂಕಾಡುಸಿ ತನ್ನ ಕಡೆಂಗೆ ಪ್ರಮುಖ ಮಾಡಿಗೊಂಡ.ಮತ್ತೆ ಮಾವಿನ ಕಾಯಿ ಕೊಯ್ವದು ಕೊಂಡೋಪದು ಅವನೇ ಆಗಿತ್ತು. ಅಂಗ್ಡಿಲ್ಲಿದ್ದೋನುದೆ ವ್ಯಾಪಾರ ಇಲ್ಲದ್ದ ಕಾರಣ ಆನು ಇದರ ಮಾರುತ್ತೆ. ಆನು ಕೊಟ್ಟ ಪೈಸೆ ಎನಗೆ ಸಿಕ್ಕೆಕ್ಕು ಹೇಳಿದ್ದಕ್ಕೆ ಏನೋ ಒಪ್ಪಂದಕ್ಕೆ ಬಂದು ಪೈಸೆ ಕೊಟ್ಟು ಬೀಗದ ಕೈ ತೆಕ್ಕೊಂಬದು ಹೇಳಿ ರಾಝಿ ಆಗಿತ್ತಡೋ. ಸೆರೆ ನೋಡಿ ಉಳಿ ಮಡಗುಲೆ ಹೆರಟ ಪ್ರಮುಖ ಆ ಅಂಡಿಯೋನ ದಿನಿಗೇಳಿ ನಿನಗೆ ಆನು ಹೆಚ್ಚು ಪೈಸೆ ಕೊಡುತ್ತೆ ಹೇಳಿ ಒಪ್ಪಿಸಿದಡೋ. ಮತ್ತೆ ರೆಕೋರ್ಡು ಅವನ ದಸ್ಕತ್ ತೆಕ್ಕೊಂಡ ಅಡೊ.ಈ ಜಾಗೆಯ ಎನಗೆ ಗೇಣಿಗೆ ಕೊಟ್ಟಿದವು ಹೇಳಿ ಕೋರ್ಟಿಂಗೆ ಅರ್ಜಿ ಮಾಡುಸಿಕ್ಕಿ ಅವನ ಹಕ್ಕಿನ ತಾನು ತೆಕ್ಕೊಂಡಡ. ಅಂಬಗ ಕಾಲ ಬದಲಾಗಿ ಉಳುವವನೇ ಹೊಲದೊಡೆಯ ಹೇಳಿ ಕೆಲವು ಜನ ಅಂತೆ ಮಣೆಗಾರಂಗೆ ಪೈಸೆ ಕೊಟ್ಟು, ರಿಪೋರ್ಟ್ ಮಾಡುಸ್ಯೊಂಡು ಆರಾರ ಜಾಗೆಯ ತನ್ನದು ಹೇಳಿ ಮಾಡಿಗೊಂಡದು ತುಂಬ ಉದಾಹರಣೆ ಇದ್ದು. ಕೋರ್ಟಿಲ್ಲಿಯೂ ತಹಶಿಲ್ದಾರಂಗೆ ಪೈಸೆ ಕೊಟ್ಟರೆ ಬೇಕಾದ ಹಾಂಗೆ ತೀರ್ಪು ಕೊಟ್ಟುಗೊಂಡಿಕ್ಕು.ಹೀಂಗೆಲ್ಲ ಜಾಗೆ ಸುಲಭಲ್ಲಿ ಪ್ರಮುಖಂಗೆ ಜಾಗೆಯೇ ಹೋತು. ಇವನೂ ಹಾಂಗೆ ಪಾಪದ ವಕೀಲನ ಹಿಡುದ ಕಾರಣ ಇವನ ಮಾತು, ಸತ್ಯ ಮುಚ್ಚಿಹೋತು. ಇದರೆಡೆಲ್ಲಿ ಪ್ರಮುಖನೂ ಸತ್ತು ಹೋದ. ಜಾಗೆ ತೆಕ್ಕೊಂಡೋನೂ ಸತ್ತು ಹೋದ. ಜಾಗೆ ತೆಕ್ಕೊಂಡೋನ ಮಕ್ಕೊಗೆ ಹೀಂಗೊಂಡು ಜಾಗೆಯ ಜಗಳ ಇತ್ತು ಹೇಳುವದು ಮತ್ತೆ ಆರ್‍ಓ ಹೇಳಿ ಗೊಂತಪ್ಪಗ ಜಾಗೆ ಕೈ ಬದಲಿಗೊಂಡು ಹೋಗಿತ್ತು. ಆದರೆ ಮಾವಿನ ಮರ ಮಾಂತ್ರ ಮೂಕಸಾಕ್ಷಿಯಾಗಿ ಈಗಳೂ ಇದ್ದು.
Subscribe to:
Posts (Atom)