Sunday, June 17, 2012
ಹೊಟ್ಟೆ
ಹೊಟ್ಟೆ
ಹೊಟ್ಟೆಯ ಸುದ್ದಿ ತೆಗೆವಗಳೇ ಮದಲು ನೆಂಪಪ್ಪದು ಹೊಟ್ಟೆಯ ದೇವರು ಗಣಪ್ಪನ! ಅವಂಗೆ ಮದಲು ಕೈಮುಗುದು ಸುರು ಮಾಡುತ್ತೆ ಹೊಟ್ಟೆ ಸುದ್ದಿಯ. ದೇವರಕ್ಕಳ ಪೈಕಿ ಹೊಟ್ಟೆ ಕಾಂಬದು ಅವಂಗೊಬ್ಬಂಗೇ. ಅವನ ಹೊಟ್ಟೆಯ ಕತೆ ಗೊಂತಿದ್ದನ್ನೇ! ಚೌತಿ ದಿನ ಎಲ್ಲೋಡಿಕ್ಕೂ ಕೊಟ್ಟದರ ತಿಂದು ಹೊಟ್ಟೆ ದೊಡ್ಡ ಆದ್ದು; ನಡಕ್ಕೋಂಡು ಗೆದ್ದೆ ಹುಣಿಲ್ಲಿ ಹೋಪಗ ಬಿದ್ದದು; ಬಿದ್ದು ಹೊಟ್ಟೆ ಒಡದ್ದು; ಚಂದ್ರ ನೋಡಿ ನೆಗೆ ಮಾಡಿದ್ದು, ಚಂದ್ರಂಗೆ ಶಾಪ ಕೊಟ್ಟದು; ಹೊಟ್ಟೆ ಒಡದ್ದಕ್ಕೆ ಹಾವಿನ ಸೊಂಟಕ್ಕೆ ಸುತ್ಯೊಂಡದು ಹಿಂದೆ ನಡೆದ ಕತೆಯಡೊ. ನಿಜವೋ ಹೇಂಗೆ ಗೊಂತಿಲ್ಲೆ. ಅಂತೂ ಅವನ ಹೊಟ್ಟೆ ದೊಡ್ಡ ಇಪ್ಪ ಕಾರಣವೋ ಎಂತದೋ, ಲಂಬೋದರ ಹೇಳುತ್ತವು. ಆನು ಬರವ ಈ ಸುದ್ದಿಗೆ ಯಾವ ವಿಘ್ನವೂ ಆಗದ್ದ ಹಾಂಗೆ ಅವನೇ ನೋಡಿಗೊಳ್ಳೆಕ್ಕು ಹೇಳಿ ಬೇಡುಗೊಳ್ಳುತ್ತೆ. .ಎನ್ನ ಹೊಟ್ತೆ ದೊಡ್ಡ ಇದ್ದ ಕಾರಣ ಅಲ್ಲ. ಈಗ ಹೊಟ್ಟೆಯ ಸುದ್ದಿ ತೆಗದ್ದು. ದಾಸರ ಪದಲ್ಲಿ ಹೇಳುತ್ತಲ್ಲದೋ? "ಎಲ್ಲಾರು ಮಾಡುವುದು ಹೊಟ್ಟೆಗಾಗಿ,ತುತ್ತು ಹಿಟ್ಟಿಗಾಗಿ'" ಲೋಕದ ಎಲ್ಲ ಜನಂಗಳುದೆ ಮಾಡುವ ಎಲ್ಲ ಕೆಲಸಂಗಳು ಈ ಹೊಟ್ಟೆಯ ತುಂಬುಸುಲೇ ಅಲ್ಲದೋ? ಗಣಪತಿಯ ದಿನಿಗೇಳಿ ಎಲ್ಲೋರು ಕೊಟ್ಟ ಹಾಂಗೆ ನಮಗೆಲ್ಲ ಈ ಹೊಟ್ಟೆ ತುಂಬುಸಲೆ ಸಿಕ್ಕಿದರೆ ಆರೂ ಕೆಲಸವೂ ಮಾಡದ್ದೆ ಸುಮ್ಮನೆ ಆರಾಮವಾಗಿ ಕೂರುತ್ತಿತ್ತವು. ಮದಲೊಂದರಿ ಹೊಟ್ಟೆಯ ಪಕ್ಷ ಹೇಳಿ ಒಂದು ಪಕ್ಷ ಇತ್ತಡೊ. ಎಲ್ಲೋರಿಂಗು ಹೊಟ್ಟೆಯ ಬಗ್ಗೆ ಗೊಂತಿದ್ದರುದೆ ಆರುದೆ ಆ ಪಕ್ಷಕ್ಕೆ ಸೇರದ್ದೆ ಓಟಿ ಕೊಡದ್ದೆ ಈಗ ಅ ಪಕ್ಷದ ಹೆಸರೇ ಇಲ್ಲೆ. ಎಲ್ಲ ಜೀವಿಗೊಕ್ಕು ಬದುಕ್ಕೆಕ್ಕಾರೆ ಈ ಹೊಟ್ಟೆ ತುಂಬುಸಿಗೊಳ್ಳೆಕ್ಕು. ಅದರ ತುಂಬುಸುಲೆ ಜನಂಗೊ ಯಾವ ಕೆಲಸ ಮಾಡುಲೂ ಹೇಸುತ್ತವಿಲ್ಲೆ. ಹೇಳುವದು ಎಂತ ಮಾಡಲಿ ಸುಮ್ಮನಿಪ್ಪಲೆ ಹೊಟ್ಟೆ ಬಿಡೆಕ್ಕನ್ನೆ ಹೇಳಿಗೊಳ್ಳುತ್ತವು. ದೂರಿಂಗೆ ಮಾಂತ್ರ ಹೊಟ್ಟೆ. ಈ ಹೊಟ್ಟೆ ತುಂಬುಸಿದರೇ ನಮ್ಮ ರಥ ನಡವದು. ಅನ್ಯಾಯ ಅಧರ್ಮ ಮಾಡುವೋರು ಹೇಳುವದು ಮಾಂತ್ರ ಹೊಟ್ಟೆಯನ್ನೇ ದೂರ್ಯೊಂಡು. ಹೊಟ್ಟೆ ಎಲ್ಲೋರಿಂಗು ಇದ್ದರುದೆ, ಬೇಕಾದರುದೆ ಈ ಹೊಟ್ಟೆ ತುಂಬುಸುಲೆ ಜನಂಗೊ ಬೇಡದ್ದ ಕೆಲಸವನ್ನೂ ಮಾಡ್ಯೊಳ್ಳುತ್ತವು. ಇನ್ನೊಬ್ಬಂಗೆ ತೊಂದರೆ ಕೊಡದ್ದೆ ಎಂತ ಬೇಕಾರು ಮಾಡಲಿ. ಈಗ ನಡವದು ಸಮಾಜಕ್ಕೇ ದ್ರೋಹ. ನಮ್ಮ ಹೊತ್ತಿಪ್ಪ ಭೂಮಾತೆಗೂ ಅನ್ಯಾಯ! ಅಬ್ಬೆಯ ಹೊಟ್ಟೆಯನ್ನೇ ಬಗದು ಅದಿರು ಬೇರೆ ದೇಶಕ್ಕೆ ಕಳುಸಿ ಸಂಪತ್ತು ಹೆಚ್ಚಿಸ್ಯೊಂಬದು, ಮಾತೃ ದ್ರೋಹ ಹೇಳುವದು ಅವಕ್ಕೆ ಗೊಂತಿಲ್ಲೆ! ಈಗಂಗೆ ಸರಿ ಇನ್ನು ಎಷ್ಟು ವರ್ಷ ಹೀಂಗೆ ಗರ್ಪಿ ತೆಗೆವಲಕ್ಕು? ಮತ್ತಾಣೋರಿಂಗೆ ಅವು ಗರ್ಪಿ ತೆಗವಲೆ ಎಲ್ಲಿಗೆ ಹೋಯೆಕ್ಕು? ಈ ಯೋಚನೆ ಜನಂಗೊಕ್ಕೆ ಇಲ್ಲೆ. ಇಂದು ಕಳುದ್ದು ಎನ್ನ ದಿನ. ನಾಳಂಗೆ ಹೇಂಗೋ ಎಂತದೋ ಯೋಚನೆ ಇಲ್ಲೆ.
ಕೆಲವು ಜನ ಹುಟ್ಟುವಗಳೇ ಆಗರ್ಭ ಶ್ರೀಮಂತರಾಗಿದ್ದರೆ ಹೊಟ್ಟೆ ತುಂಬುಸುಲೆ ಯೋಚನೆ ಇಲ್ಲೆ. ಕೂದು ತಿಂದರೂ ಮುಗಿಯದ್ದಷ್ಟು ಇರ್ತು! ಆದರೆ ಬಡವರಾಗಿ ಹುಟ್ಟಿದೋರು ತಿಂಬಲೆ,ಹೊಟ್ಟೆ ತುಂಬುಸುಲೆ ಕಷ್ಟ. ಇದ್ದೋವು ದಿನಾ ದೋಸೆ ಅದು ಇದು ಹೇಳಿ ಬಗೆ ಬಗೆ ತಿಂಡಿಗಳ ಅಬ್ಬೆ ಮಾಡಿಕೊಟ್ಟರೆ ತಿಂದೊಂಡು ಹಾರಿಗೊಂಡು ಇಪ್ಪಲಕ್ಕು. ಈ ಮಕ್ಕಳ ಹೊಟ್ತೆ ತುಂಬುಸುಲೆ ನಾಳಂಗೆ ಎಲ್ಲಿಗೆ ಹೋಪದು? ಆರ ಕೈಕಾಲು ಹಿಡಿವದು ಹೇಳಿ ಯೋಚನೆ ಮಾಡೆಕ್ಕಾದ ಪರಿಸ್ಥಿತಿ ಬಡವರಿಂಗೆ. ಹಳ್ಲಿಗಳಲ್ಲಿ ಅಲ್ಲಿ ಅಲ್ಲಿ ಜಂಬ್ರಂಗೊಕ್ಕೇಲ್ಲ ಹೋದರೆ ಹೊಟ್ಟೆಲ್ಲಿ ಹಿಡ್ಡಿತ್ತಷ್ಟು ತಿಂಬದು.ಮರದಿನ ಎಲ್ಲಿಯೂ ಸಿಕ್ಕದ್ದರೆ ಉಪವಾಸ! ಹೀಂಗಾದರೆಅವು ಎಂತ ಮಾಡೆಕ್ಕು? ಇದರಿಂದಲೇ ಹೇಳಿ ಕಾಣುತ್ತು "ಬೊಳ್ಳದ ಮನಂತಾನಿ ಬೊಟ್ಟೊ" ಹೇಳುವ ಗಾದೆ ಹುಟ್ಟಿದ್ದು.ದೇವರು ಸೃಷ್ಟಿ ಮಾಡುವಗಲೇ ಈ ವ್ಯತ್ಯಾಸ ಮಾಡಿದ್ದು ಹೇಳುತ್ತವು. ಆದರೆ ನಮ್ಮ ಹತ್ತರೆ ಹೆಚ್ಚು ಇಪ್ಪಗ ಇಲ್ಲದ್ದೋರಿಂಗೆ ರಜ ರಜ ಕೊಟ್ಟರೆ ಅವಕ್ಕೂ ಚಿಂತೆ ಇಲ್ಲೆ. ಅವುದೇ ಕಲ್ತು ಮುಂದೆ ಬಕ್ಕು.ಮತ್ತೆಂತಾದರು ಉದ್ಯೋಗ ಮಾಡ್ಯೊಂಡು ಇಪ್ಪಲಕ್ಕು. ಆದರೆ ಹಂಚಿ ತಿಂಬ ಬುದ್ಧಿ ಮನುಷ್ಯಂಗೆ ಬತ್ತಿಲ್ಲೆ ಏಕೆ?ಆನು ವಿದೇಶಲ್ಲಿಪ್ಪಗ ಅಲ್ಲಿ ಕೆಲಸ ಮಾಡ್ಯೊಂದು ಇಪ್ಪ ಮಕ್ಕೊ ಅವರ ಮಕ್ಕಳತ್ರೆ ಹೇಳುವದು ಕೇಳಿದ್ದೆ. "ಪರಸ್ಪರ ಹಂಚಿಗೊಳ್ಳಿ" ಹೇಳಿ ಮಕ್ಕಳ ಒಪ್ಪುಸುವದು ಹಾಂಗೆ ಒಬ್ಬನತ್ರೆ ಇಪ್ಪ ಆಟದ ಸಾಮಾನು ಇನ್ನೊಬ್ಬಂಗೆ ಕೊಡುವದು, ಅವನತ್ರೆ ಇಪ್ಪದರ ಮತ್ತೊಬ್ಬಂಗೆ ಕೊಡುವದು ಹೀಂಗೆಲ್ಲ ಹೊಂದಿಸಿಗೊಳ್ಳುತ್ತವು. ಅವಕ್ಕೆ ಸಣ್ಣಾದಿಪ್ಪಗ ಶಾಲೆಲ್ಲಿಯೂ ಇದರನ್ನೇ ಹೇಳಿಕೊಡುತ್ತವಡೊ. ತಿಂಡಿಯನ್ನೂ ಹಾಂಗೆ ಹಂಚಿಗೊಳ್ಳುತ್ತವು. ಹೀಂಗೆ ಮಾಡ್ಯೊಂಡರೆ ಜಗಳ ಬತ್ತಿಲ್ಲೆ. ಒಂದೇ ಸೈಕಲ್ ಇಪ್ಪದು ಒಂದು ಮನೆಲ್ಲಿ ಹೇಳಿ ಆದರೆ ಒಬ್ಬ ಹತ್ತು ಮಿನಿಟ್ ಮೆಟ್ಟಿ ಆದಮೇಲೆ ಇನ್ನೊಬ್ಬ ಹೇಳಿ ಮನೆಲ್ಲೇ ಇಪ್ಪ ಮಕ್ಕಳೆ ಒಪ್ಪಂದಲ್ಲಿ ಸರಿ ಮಾಡಿಗೊಂಡರೆ ಚರ್ಚೆ ಬಪ್ಪಲಿಲ್ಲೆ. ಮನೆಲ್ಲಿಪ್ಪ ಎಲ್ಲೋರಿಂಗು ಬೇರೆ ಬೇರೆ ತೆಗೆಯಕ್ಕಾದ ಅಗತ್ಯವು ಇಲ್ಲೆ. ಮನೆಲ್ಲೇ ಹೀಂಗೆ ಅಭ್ಯಾಸ ಮಾಡ್ಯೊಂಡರೆ ಆ ಊರಿಲ್ಲಿ, ದೇಶಲ್ಲಿಯೇ ಎಲ್ಲೋರು ಹೊಂದಿ ಬಾಳುಲಕ್ಕು. ದೇವರು ಭೇದ ಮಾಡಿದ ಹೇಳುವದಕ್ಕೆ ಬದಲು ದೇವರು ಕೊಟ್ಟದರ ಹೀಂಗೆ ಹಂಚ್ಯೊಂಡರೆ ಸರಿ ಅಕ್ಕಲ್ಲದೋ? ಅದಲ್ಲ ಇದು ಎನಗೆ ಇಪ್ಪದು. ಎನ್ನ ಅಧಿಕಾರ,ಇಲ್ಲಿ ಆನು ಹೇಳಿದ ಹಾಂಗೆ ಎಲ್ಲೋರು ಕೇಳೆಕ್ಕು. ಈ ಮಾತುಗೊ ಬಂದರೆ ತನ್ನಷ್ಟಕ್ಕೇ ಜಗಳ, ಮತ್ಸರ,ಕೋಪ ಹೀಂಗೆಲ್ಲ ಷಡ್ವೈರಿಗಳ ಒಡನಾಟ ಬತ್ತು. ಇಡೀ ಲೋಕಲ್ಲೇ ಘರ್ಷಣೆ ಉಂಟಾವುತ್ತು.
ಮೇಲಾಟ,,ಸ್ಪರ್ಧೆ ಎಲ್ಲ ಬಪ್ಪದು ಆನು- ಹೇಳುವ ಅಹಂಕಾರಂದ ಹೇಳಿ ಎನ್ನ ಅಭಿಪ್ರಾಯ. ಹೊಟ್ಟೆ ಇದ್ದು ಹೇಳಿ ಹೆಚ್ಚು ತುಂಬುಸುಲೆ ಹೋದರೆ ಅದಕ್ಕೆ ಇನ್ನು ಸಾಕು ಹೇಳಿ ತೋರುಗೋ? ಮದಲೊಂದು ಮನುಷ್ಯ ಹಡಗು ತುಂಬುಸುಲೆ ಹೋತಡೊ.ಇನ್ನೊಂದು ಮನುಷ್ಯ ಹೊಟ್ಟೆ ತುಂಬುಸುಲೆ ಹೋತಡೊ.ಹಡಗು ತುಂಬುಸುಲೆ ಹೋದ್ದು ಹನಿಯ ದಿನ ಅಪ್ಪಗ ಬಂತಡೊ ಆದರೆ ಹೊಟ್ಟೆ ತುಂಬುಸುಲೆ ಹೋದ್ದು, ಅದಕ್ಕೆ ತುಂಬುಸಿದ ಹಾಂಗ ಖಾಲಿ ಆವುತ್ತಾ ಇದ್ದದರಿಂದ ತುಂಬುಸಿಯೇ ಆಗದ್ದೆ ಇನ್ನೂತುಂಬುಸಿಗೊಂಡೇಇದ್ದಡೋ. ಒಂದು ಮಾತು ಕೇಳಿದ್ದೆ.ತಿಂದಂಗೆ ಕೊದಿ ಹೆಚ್ಚು. ಉಂಡವಂಗೆ ಹಶು ಹೆಚ್ಚು ಹೇಳಿ. ಉಣ್ಣದ್ದೇ ಇದ್ದರುದೆ ಒಂದೆರಡು ದಿನ ಹಶು ಕಟ್ಟಿಗೊಂಡು ಇಪ್ಪಲೆಡಿಗಲ್ಲದೊ. ಹಾಂಗೆ ದಿನಗಟ್ಟಲೆ ಬರೇ ನೀರು ಕುಡುಕ್ಕೊಂಡೂ ಇಪ್ಪಲೆಡಿಗು.
ಹೊಟ್ಟೆ ಸರಿ ಇದ್ದರೆ ಮಾಂತ್ರ ಅದರ ತುಂಬುಸುವ ಯೋಚನೆ ಅದುವೇ ಸರಿಯಿಲ್ಲದ್ದರೆ ಕಷ್ಟ ಅಲ್ಲದೋ? ಊ(ಟ) ಮ(ಮಲಗುವುದು) ಹೇ(ಶೋಧನೆ) ಈ ಮೂರೂ ಸರಿಯಿದ್ದರೆ ಅವ ಆರೋಗ್ಯವಂತ ಹೇಳಿ ಲೆಕ್ಕಡೊ. ನಾಲಗ್ಗೇ ರುಚಿಯಿಲ್ಲದ್ದೆಯೋ ಅಥವಾ ಹೊಟ್ಟೆಲ್ಲಿ ಗೇಸ್ ತುಂಬಿಯೋ ಉಂಬದೇ ಬೇಡ ಹೇಳಿ ತೋರಿದರೆ ಆರೋಗ್ಯ ಸರಿಯಿದ್ದು ಹೇಳಿ ಆತೋ? ಮತ್ತೆ ಮನುಗಿದರೆ ಒರಕ್ಕೇ ಬತ್ತಿಲ್ಲೆ ಹೇಳುವದು, ಏನಾದರೂ ಚಿಂತೆ ತುಂಬ್ಯೊಂಡಿಪ್ಪಗ ಒರಕ್ಕು ಬತ್ತೋ? ಹಾಂಗಾದರೂ ಆರೋಗ್ಯ ಕೈಕೊಟ್ಟ ಹಾಂಗೆ. ಮತ್ತೆ ತಿಂದದು ಜೀರ್ಣ ಆಗಿ ತ್ಯಾಜ್ಯ ಹೆರ ಹೋಗದ್ದರೆ, ಮಲ ಬದ್ಧತೆ, ಮೂಲವ್ಯಾಧಿ, ಹೀಂಗೆ ಮಲ ರೋಗಂಗಳುದೇ ಬಂದರೆ ಕಷ್ಟ! ತಿಂದದು ಜೀರ್ಣ ಆವುತ್ತು, ಒರಕ್ಕು ಸರಿಯಾಗಿ ಇದ್ದು, ಶೋಧನೆ ಸರಿಯಿದ್ದು ಹೇಳಿ ಆದರೆ ಅವನ ಆರೋಗ್ಯ ಸರಿಯಿದ್ದು ಹೇಳಿ ಅಲ್ಲದೋ?ಧಾರಾಳ ಶ್ರೀಮಂತ ಆಗಿದ್ದರು ಆರೋಗ್ಯ ಸರಿಯಿಲ್ಲದ್ದರೆ ಹೇಂಗೆ? ಶರೀರ ಹೇಳುವದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಂಗೆಲ್ಲ ರೋಗಂಗಳ ಗೂಡಾದರೆ ಮನುಷ್ಯನ ಮನಸ್ಸೇ ಚಿಂತೆಯ ಮನೆಯಾವುತ್ತು. ಹಾಂಗಾದರೆ ಇದೆಲ್ಲ ಹೊಟ್ಟೆಯ ದೋಷಂಗಳಿಂದಲೇ ಬಪ್ಪದಲ್ಲದೋ? ಹೊಟ್ಟೆ ಸರಿ ಇದ್ದರೆ ಅವ ಸರಿ ಇದ್ದ ಹೇಳಿ ಲೆಕ್ಕ. ಇಂದು ಹುಟ್ಟಿದ ಹಿಳ್ಳೆಯೇ ಆಗಲಿ ಹಶು ಅಪ್ಪಗ ಅದಕ್ಕೆ ತಡಕ್ಕೊಂಬಲೆಡಿತ್ತೊ? ರಟ್ಟಿ ರಟ್ಟಿ ಕೂಗುತ್ತು. ಹೊತ್ತು ಹೊತ್ತಿಂಗೆ ಹಾಲು ಕೊಟ್ಟರೆ ಒರಗ್ಯೊಂಡೋ ಮತ್ತೆ ದಿನ ಹೋದ ಹಾಂಗೆ ಆಡ್ಯೊಂಡೋ ಇರುತ್ತು. ಇಡೀ ಶರೀರದ ಆರೋಗ್ಯ ನಿಯಂತ್ರಣ ಇಪ್ಪದು ಹೊಟ್ಟೆಲ್ಲಿ. ರುಚಿ ಆತು ಹೇಳಿ ಲೆಕ್ಕಂದ ಹೆಚ್ಚು ತಿಂದರೆ ಜೀರ್ಣ ಆವುತ್ತೋ? ಹೊತ್ತು ತಪ್ಪುಸಿ ಉಂಡು ತಿಂದು ಮಾಡಿದರೂ ಹಶು ಕೆಡುತ್ತು. ಅಂಬಗ ಹೊಟ್ಟೆಯ ಸರಿ ನೋಡ್ಯೊಂಡರೆ ಎಲ್ಲ ಸರಿ ಆವುತ್ತು. ಅದಕ್ಕೇ ಹಿಂದಾಣೋರು ಒಂದು ಗಾದೆ ಮಾಡಿದ್ದವಲ್ಲದೋ?"ಊಟ ಬಲ್ಲವಂಗೆ ರೋಗವಿಲ್ಲ, ಮತ್ತೆ ಮಾತು ಬಲವಂಗೆ ಜಗಳವಿಲ್ಲ" ಹಾಂಗೆ ನಮ್ಮ ಆರೋಗ್ಯ ನಮ್ಮ ಕೈಲ್ಲಿಯೇ ಇದ್ದು.
ಎಲ್ಲೋರು ಶರೀರ ಶಾಸ್ತ್ರ ಓದಿದೋವೇ ಇಪ್ಪದು ಈಗ. ತಿಂದ ಆಹಾರ ಹೊಟ್ಟೆಗೆ ಎತ್ತಿದ ಮೇಲೆ ಎಂತಾವುತ್ತು?ಎಷ್ಟು ಹೊತ್ತು ಅಲ್ಲಿ ಇರುತ್ತು.ಮತ್ತೆ ಮುಂದೆ ಎಲ್ಲಿಗೆ ಹೊವುತ್ತು? ಹೇಳುವದೆಲ್ಲ ಕಲಿವಗಳೇ ಗೊಂತಾವುತ್ತು.ಯಾವುದೇ ಒಂದು ಯಂತ್ರದ ಶಬ್ದ ವ್ಯತ್ಯಾಸಂದಲೇ ಅದು ಇಲ್ಲಿಯೇ ಹಾಳಯಿದು. ಅದಕ್ಕೆ ಈ ಒಂದು ಭಾಗ ತಂದು ಹಾಕಿದರೆ ಸರಿ ಆವುತ್ತು ಹೇಳಿದ ಹಾಂಗೆ.ಹೊಟ್ಟೆಲ್ಲಿಯೂ ಅಪ್ಪ ತಾತ್ಕಾಲಿಕ ವ್ಯತ್ಯಾಸ ತಿಳುಕ್ಕೊಂಡರೆ ಅದಕ್ಕೆ ಅಲ್ಲಲ್ಲಿಗಿಪ್ಪ ಮದ್ದುಗಳ ತೆಕ್ಕೊಂಡರೆ ರೋಗ ಮುಂದುವರಿತ್ತಿಲ್ಲೆ. ಮುಳ್ಳು ತಾಗಿದ ಕೂಡಲೇ ಅದರ ತೆಗದು ಕಾಸಿ ಮಡಿಗಿದರೆ ಅದರಷ್ಟಕ್ಕೆ ಬೇನೇ ಸಾಯುತ್ತು.ಗುಣ ಆವುತ್ತು. ಮುಳ್ಳು ಮಡಗಿ ಮದ್ದು ಕಿಟ್ಟಿದರೆ ಬೇನೆ ಹೋಕೋ? ಈಗ ಐಗಾಡಿಗ ತಿಂದುಗೊಂಡೆ ಇಪ್ಪೋರು ಇದ್ದವು. ಅದಕ್ಕೆ ಹೇಳುತ್ತವು ಗಾಣ ಹಾಕುವದು ಹೇಳಿ. ಃಆಂಗೆ ಗಾಣ ಹಾಕಿಗೊಂಡೆ ಇದ್ದರೆ ನಮ್ಮ ಹೊಟ್ಟೆಯೊಳದಿಕ್ಕಿಪ್ಪ ಯಂತ್ರಕ್ಕೆ ವಿರಾಮವೇ ಇಲ್ಲದ್ದೆ ಆವುತ್ತು. ಅಂಬಗ ಅದುದೇ ಸ್ಟ್ರೈಕ್ ಮಾಡುತ್ತು.ಕೂಡ್ಲೇ ನಮಗೆ ಗೊಂತಾಗದ್ದರೂ ಕೆಲವು ದಿನಲ್ಲಿ ಜ್ವರವೋ,ಅಜೀರ್ಣವೋ ಶುರುವಾಗಿ ಅದೊಂದು ರೋಗವೇ ಆವುತ್ತು.ಹಾಂಗೆ ಅಪ್ಪಲಾಗ ಹೇಳಿಯೇ ಹಿಂದಾಣೋರು ಉಪವಾಸ ಶುರು ಮಾಡಿದವು ನಿಜಕ್ಕಾದರೂ ಇಡೀ ದಿನ ಏಕಾದಶಿಯ ಹಾಂಗೆ ಉಪವಾಸ ಮಾಡಿದರೆ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕಿ ಮತ್ತೆ ಅವರ ಕೆಲಸಲ್ಲಿ ಚುರುಕಾವುತ್ತವು. "ಲಂಘನಂ ಪರಮೌಷಧಂ" ಹೇಳಿರೆ ಹಾರುವದು ಅಲ್ಲ. ಉಪವಾಸ ಕೂಪದು ಹೇಳಿ. ಇಂಗ್ಲಿಷಿಲ್ಲಿ ಹೇಳುತ್ತರೆ ರಿಫ್ರೆಶ್ ಅಪ್ಪದು ಉಪವಾಸ ಇದ್ದರೆ.ಚಾಂದ್ರಾಯಣ ವ್ರತ ಹೇಳಿ ಇದ್ದಡೊ. ಹದಿನೈದು ದಿನ ದಿನಾಗಳುದೇ ತಿಂಬ ಆಹಾರ ರಜ ರಜವೇ ಕಡಮ್ಮೆ ಮಾಡ್ಯೊಂಡು ಹೇಳಿರೆ ಪಾಡ್ಯಕ್ಕೆ ಸುರು ಮಾಡಿದರೆ,ಅಮಾವಾಸ್ಯೆಗೆ ಪೂರ್ತಿ ನಿರಾಹಾರ. ಮತ್ತೆ ರಜ ರಜವೇ ತಿಂಬದರ ಹೆಚ್ಚಿಸಿಗೊಂಡುಹುಣ್ಣಮೆಗಪ್ಪಗ ಹೊಟ್ಟೆ ತುಂಬ ಉಂಬದು.ಅಂಬಗ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕುತ್ತು.ಕೆಲಸ ಸರಿ ಮಾಡುತ್ತವು. ಆರೋಗ್ಯ ಸರಿ ಇರುತ್ತು. ಈಗ ನಾವು ಉಪವಾಸ ಮಾಡುವದಾದರೆ, ಅಕ್ಕಿಯ ಆಹಾರ ತಿಂಬಲಾಗ, ಗೋಧಿದು ಹೊಟ್ತೆ ತುಂಬ ತಿಂಬಲಕ್ಕು ಹೇಳಿ ಮಾಡುತ್ತು. ಪ್ರಯೋಜನ ಇದ್ದೋ? ಉಪವಾಸ ಹೇಳಿರೆ ನಿಜವಾಗಿಯೂ ದೇವರ ಹತ್ತರೆ ಮನೆಲ್ಲೇ ಇಪ್ಪದು. ಎಲ್ಲೆಲ್ಲಿಯಾರೂ ತಿರಿಕ್ಕೊಂಡು ಸಿಕ್ಕಿದ್ದರ ಎಲ್ಲ ತಿಂದರೆ ಉಪವಾಸ ಆವುತ್ತೋ? ನಾವು ಉಂಬದು ಹೇಳಿರೆ ಅದು ಒಂದು ಯಜ್ಞ! ದೇಹಲ್ಲಿಪ್ಪ ಪಂಚ ಪ್ರಾಣಂಗೊಕ್ಕೆ ಪ್ರಾಣಾಹುತಿ ಕೊಡೆಕ್ಕು. ಮತ್ತೆ ಊಟ ಸುರು! ಪ್ರಾಣಯ ಸ್ವಾಹಾ, ಅಪಾನಾಯ ಸ್ವಾಹಾ,ವ್ಯಾನಾಯಸ್ವಾಹಾ,ಉದಾನಯಸ್ವಾಹಾ,ಸಮಾನಾಯಸ್ವಾಹಾ ಹೇಳಿ ಆಹುತಿ ಕೊಟ್ಟ ಮೇಲೆ ಊಟ ಸುರು.ಊಟದ ನಡುಕೆ ಹಾಳು ಹರಟೆ ಮಾತಾಡುವದು, ಅಲ್ಲಿ ಇಲ್ಲಿ ನಡಕ್ಕೊಂಡು ತಿಂಬದು ಎಲ್ಲ ನಾಗರಿಕರಾಗಿಪ್ಪ ನಾವು ಮಾಡಲಾಗ. ಹಾಂಗೆ ಮಾಡಿದರೆ ಪ್ರಾಣಿಗೊಕ್ಕೂ ನಮಗೂ ವ್ಯತ್ಯಾಸ ಇದ್ದೋ?
ಜನಂಗೊ ಈ ಹೊಟ್ಟೆಗೆ ದೂರು ಹಾಕಿ ಮಾಡುವ ಅನರ್ಥ ಸಾಮಾನ್ಯವೋ? ರಾಶಿ ರಾಶಿ ಕೂಡಿ ಹಾಕುವದು,ಮಕ್ಕೊ ಮರಿಮಕ್ಕೊ ಕೂದು ತಿನ್ನೆಕ್ಕು ಹೇಳಿ ಅಡ್ಡ ದಾರಿಲ್ಲಿ ಸಂಪಾದನೆ ಮಾಡಿ ಮತ್ತೆ ಭ್ರಷ್ಟಾಚಾರ ತುಂಬಿತ್ತಪ್ಪ ಹೇಳಿ ಹೇಳುವದು..ಅಂತೂ ಅನ್ಯಾಯ ಅಧರ್ಮಕ್ಕೆ ಆರೋ ಹೊಣೆ.ತಾನು ಸರಿಯಿದ್ದೇ ಹೇಳುವದು ಎಲ್ಲ ಈ ಹೊಟ್ಟಗೆ ಬೇಕಾಗಿಯೇ ಅಲ್ಲದೋ? ಉಸಿರು ನಿಂದ ಮೇಲೆ ಹೊಟ್ಟೆ ಆರಿಂಗೆ ಬೇಕು? ಗಾಂಧೀಜಿ ಹೇಳಿದ ಹಾಂಗೆ ಅಪರಿಗ್ರಹ ಪಾಲಿಸಿದರೆ ಕೂಡಿ ಹಾಕುವ ಅಭ್ಯಾಸ ರಜ ಕಡಮ್ಮೆ ಮಾಡಿದರೆ ಲೋಕ ಒಳ್ಳೆದಕ್ಕೋ ಏನೋ?ಹೊಟ್ಟೆಯ ಬಗ್ಗೆ ಹೇಳುವಗ ಕೆಲವು ಜನ ಸಿಕಿ ಸಿಕ್ಕಿದ ಕಾಟ್ಮ್ಕೋಟಿಯ ಅಡಿಗಾಡಿಗ ತಿಂದೋಡು ಹೊಟ್ಟೆ ಬೆಳೆಸಿಗೊಳ್ಳುತ್ತವು. ಅದು ಬಿಡೆಕ್ಕು. ಹೊಟ್ಟೆಗೂ ವ್ಯಾಯಾಮ ಬೇಕು. ಇಡೀ ನಮ್ಮ ರಥ ನಡವದೇ ಹೊಟ್ಟೆಂದಾಗಿ . ಹೊಟ್ಟೆಯ ಮಟ್ಟಿಂಗೆ ಜಾಗ್ರತೆ ಎಷ್ಟು ತೆಕ್ಕೊಂಡರು ಸಾಲ. ಹೊಟ್ಟೆ ನಮಗೆ ಹೊರೆಯಲ್ಲ. ಹೊರೆಯಾಗದ್ದ ಹಾಂಗೆ ಹತೋಟಿಲ್ಲಿ ಮಡಿಕ್ಕೊಳ್ಳೆಕ್ಕು. ಕೆಲವು ಜನರ ಹೊಟ್ಟೆ ಆನು ವಿದೇಶಲ್ಲಿ ನೋಡಿದ್ದು.ಅವು ಹೊಟ್ಟೆ ನೆಗ್ಗಿಗೊಂಡು ನಡವಲೇ ಇಲ್ಲೆ.ಎಲ್ಲೋರೂ ವಾಹನಲ್ಲೇ ಹೋಪದಾದರೂ ಎಲ್ಯಾರು ನಡೆಕ್ಕಾರೆ ಬಪ್ಪ ಒದ್ದಾಟ ದೇವರಿಂಗೇ ಪ್ರೀತಿ! ಈ ಹೊಟ್ಟೆ ಬಗ್ಗೆ ಬರದ ಲೇಖನವೂ ಆ ಹೊಟ್ಟೆ ಗಣಪ್ಪಜ್ಜಂಗೇ ಅರ್ಪಿತ!
Saturday, June 16, 2012
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
·
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಮಾನವನ ಕಣ್ಣು ತಾನು ಕಂಡ ದೃಶ್ಯಗಳ ಗುಣ ವಿಭಾಗ ಮಾಡುತ್ತದೆ. ಕಣ್ಣಿಗೆ ರಮ್ಯ ನೋಟಗಳೇ ಇಷ್ಟವಾಗಿರುತ್ತವೆ. ಕಣ್ಣಿಗೆ ನುಣ್ಣಗೆ ಕಾಣುವುದು ಎಂದರೆ ಸುಂದರವಾಗಿ ಕಂಡು ಮನಸ್ಸಿಗೆ ಆನಂದವುಂಟು ಮಾಡುವುದು. ಕರ್ಕಶವಾಗಿ ಕಂಡುದನ್ನು ಮತ್ತೊಮ್ಮೆ ನೋಡಲೂ ಮನಸ್ಸು ಇಷ್ಟಪಡುವುದಿಲ್ಲ. ಬಣ್ಣಗಳಲ್ಲಿಯೂ ಕೆಲವು ಬಣ್ಣಗಳು ಇಷ್ಟವಾಗುವುದಿಲ್ಲ ತಾನೆ! ಹತ್ತಿರದ ಪ್ರೇಕ್ಷಣೀಯ ಸ್ಥಳಗಳಿಗೆ ನಾವು ಮತ್ತೊಮ್ಮೆ ಹೋಗಿ ನೋಡಲು ಬಯಸುವುದಿಲ್ಲ. ಯಾವಾಗಲು ನೋಡುತ್ತಿರುವ ನೋಟಗಳು ಮನಸ್ಸಿಗೆ ಹಬ್ಬವುಂಟುಮಾಡುವುದಿಲ್ಲವಷ್ಟೆ. ನೋಡಿ ನೋಡಿ ಬೇಸತ್ತಿರುತ್ತೇವೆ. ಯಾರೋ ಹೇಳಿದ್ದನ್ನು ಕೇಳಿ, ಅಥವಾ ಅಲ್ಲಿಯ ಪ್ರಕಟಣೆಗಳನ್ನು ನೋಡಿ ಒಮ್ಮೆ ಹೋಗಿ ನೋಡಿಬಿಡುವ ಎಂಬ ಆಸೆ ಸಹಜವೇ ಆಗಿರುತ್ತದೆ. ಜಗಿದದ್ದನ್ನೇ ಮತ್ತೆ ಜಗಿದರೆ ರುಚಿಯಿರುವುದಿಲ್ಲ!ಪ್ರಾಣಿಗಳಲ್ಲಿಯೂ ಹುಲ್ಲು ಮೇಯುವ ಹಸು ನೋಡುವುದು ಮುಂದಕ್ಕೆ ಇರುವ ಹುಲ್ಲು ಇನ್ನೂ ಹೆಚ್ಚು ಹಸುರಾಗಿದೆಯೆಂದೋ ಸುಂದರವಾಗಿದೆಯೆಂದೋ. ಧಾರಾಳವಿದೆ ಬೇಗ ಹೊಟ್ಟೆ ತುಂಬಿಸಿಕೊಳ್ಳಬಹುದೆಂದೋ ಹೀಗೆಲ್ಲ ಯೋಚಿಸಿಕೊಂಡು ಮುಂದು ಮುಂದಕ್ಕೆ ಹೋಗುತ್ತಿರುತ್ತದೆ. ನಮಗೂ ಹೊಸತರಲ್ಲಿ ಸ್ವಾಭಾವಿಕವಾಗಿ ಆಸಕ್ತಿಯಿರುತ್ತದೆ. ಮನೆ ಹತ್ತಿರವಿರುವ ಗುಡ್ಡ ನಮಗೆ ಚೆನ್ನಾಗಿ ಕಾಣಿಸುವುದಿಲ್ಲ. ದೂರದಲ್ಲಿರುವ ಬೆಟ್ಟಗಳೇ ಹೆಚ್ಚು ಸುಂದರವೆಂಬ ತೀರ್ಮಾನಕ್ಕೆ ಬರುತ್ತೇವೆ. ಹಿತ್ತಿಲ ಗಿಡವಾದರೋ ನಮಗೆ ಔಷಧಿಯಲ್ಲ. ಅದು ಒಂದು ಔಷಧಿಯೆನ್ನುವುದನ್ನು ವೈದ್ಯರೇ ಹೇಳಬೇಕು. ಅಂದರೆ ಇಂತಹ ಸಾಮಾನ್ಯ ಗಿಡ ಮೂಲಿಕೆಗಳ ಬಗ್ಗೆ ನಮಗೇನೂ ಗೊತ್ತಿರುವುದಿಲ್ಲ. ಅದನ್ನು ತಿಳಿಯುವ ಕುತೂಹಲವು ನಮಗಿಲ್ಲ. ಅಲ್ಲೆಲ್ಲೋ ಒಂದು ಮಹೌಷಧವಿದೆ ಎಂದು ಅದನ್ನು ತರಲು ಸೀದಾ ಮದ್ದಿನ ಅಂಗಡಿಗೇ ಹೋಗುತ್ತೇವೆ. ವನಸ್ಪತಿಗಳ ಪರಿಚಯ ಯಾರಿಗೂ ಇರುವುದಿಲ್ಲ. ಅಂಗಡಿಯವನು ಕೊಡುವ ಔಷಧಿ ನೋಡಿ ಮತ್ತೆ ಇದು ನಮ್ಮ ತೋಟದಲ್ಲಿಯೇ ಇದೆಯಲ್ಲ ಎಂದುಕೊಳ್ಳುತ್ತಾನೆ. ಅಥವಾ ಆ ಔಷಧಿ ವೈದ್ಯ ಹೇಳಿದರೇನೇ ಸಮಾಧಾನ! ಗೊತ್ತಿರುವ ಬೇರೆ ಯಾರು ಹೇಳಿದರೂ ಕೇಳುವ ಸಹನೆಯಿಲ್ಲ. ಈಗ ಇಂಟರ್ರ್ನೆಟ್ ನಲ್ಲಿ ಔಷಧಿಗಳ ಬಗ್ಗೆಯೂ ವಿವರ ಕೊಡುತ್ತಾರೆ. ಅದರಲ್ಲಿ ಕಂಡರೆ ಅದು ವೇದವಾಕ್ಯ. ಉಳಿದವರು ಹೇಳಿದರೂ ಕೇಳುವವರಿಲ್ಲ. ಅದಕ್ಕೇ ಶಂಖದಿಂದ ಬಂದರೇ ತೀರ್ಥವೆಂಬ ಮಾತು ಹುಟ್ಟಿಕೊಂಡಿದೆ. ಯಾವುದೋ ನದಿಯಲ್ಲಿ ತೀರ್ಥ ಮೀಯಲು ಯಾರೂ ಹೋಗುವುದಿಲ್ಲ. ಆದರೆ ಅದು ಹೆಚ್ಚು ಜನ ಸ್ನಾನ ಮಾಡಿ ಪುಣ್ಯ ಗಳಿಸುತ್ತಾರೆ ಎಂದು ಜನಜನಿತವಾಗಿರಬೇಕು. ಗಂಗ ನದಿಯ ನೀರು ಮಾತ್ರ ಪವಿತ್ರ ಉಳಿದೆಲ್ಲ ನದೀ ನೀರಿಗೆ ಪ್ರಾಶಸ್ತ್ಯವಿಲ್ಲ. ಯಾವ ನೀರಿನಲ್ಲಿ ಸ್ನಾನ ಮಾಡಿದರೂ ಮೈಯ ಕೊಳೆ ಹೋಗುವುದಿಲ್ಲವೇ? ಎಲ್ಲ ಮನಸ್ಸಿನಲ್ಲಿಯೇ ಮಹಾದೇವನಿದ್ದಾನೆ ಎಂಬ ಮಾತೇ ಸತ್ಯವಲ್ಲವೇ? ಶ್ರದ್ಧಾಭಕ್ತಿಗಳೇ ಬೇಕಿರುವುದು ಎಂಬುದನ್ನು ತಿಳಿದುಕೊಳ್ಳುವುದಿಲ್ಲ. "ಒಳಗೆ ಶೃಂಗಾರ ಹೊರಗೆ ಗೋಳಿಸೊಪ್ಪು" ಆಗುವ ಸಾಧ್ಯತೆಯೂ ಇದೆಯಷ್ಟೆ!
ನಮ್ಮ ಕಣ್ಣುಗಳಿಗೆ ಯಾವಾಗಲೂ ಗೋಚರವಾಗುವ ವಸ್ತುಗಳೋ ,ದೃಶ್ಯಗಳೋ ನಮಗೆ ವಿಶೇಷವೆನಿಸುವುದಿಲ್ಲ. ಅಂದರೆ ಯಾವಾಗಲೂ ಕಾಣುತ್ತಿದ್ದೇವಲ್ಲ, ಅದು ವಿಶೇಷವಲ್ಲ. ದೂರದಲ್ಲಿರುವ ವಸ್ತುಗಳೇ ನಮಗೆ ಆಸಕ್ತಿಯನ್ನು ಹುಟ್ಟಿಸುತ್ತವೆ. ಮನೆಯಲ್ಲಿಯೇ ದೇವರ ಕೋಣೆಯಿದೆ. ಅಲ್ಲಿ ಕುಳಿತು ಹುಚ್ಚು ಕುದುರೆಯಂತಿರುವ ಮನಸ್ಸನ್ನು ಏಕಾಗ್ರಗೊಳಿಸಿ ಒಂದರ್ಧ ಗಂಟೆಯೋ ಕುಳಿತುಕೊಂಡರೆ ಸ್ವಲ್ಪ ನೆಮ್ಮದಿ ಸಿಗಬಹುದು. ಎಲ್ಲೆಲ್ಲಿಯೋ ಮರ್ಕಟನಂತೆ ಹಾರುವ ಮನಸ್ಸಿನ ಹತೋಟಿ ಯಿದ್ದರೆ ಹಲವು ಹಂಬಲಿಸುವ ಯೋಚನೆಗಳು ಬರಲಾರವು. ಪತ್ರಿಕೆಯಲ್ಲೋ ಅಥವಾ ಟಿ ವಿ ಯಲ್ಲೋ ಅದರ ಬಗ್ಗೆ ವಿಶೇಷ ವರದಿಗಳು ಬಂದರೆ ಆಶ್ಚರ್ಯವಾಗುತ್ತದೆ. ಒಮ್ಮೆ ಹೋಗಿ ನೋಡಬೇಕು ಎನ್ನಿಸುತ್ತದೆ. ಎಲ್ಲ ಬರುವುದು ಮಾಧ್ಯಮಗಳ ಪ್ರಚಾರದಿಂದ. ಯಾವುದೊ ಒಂದು ದೇವಸ್ಥಾನದ ದೇವರಿಗೆ ಹರಸಿಕೊಂಡರೆ ನೆನೆಸಿದ ಕಾರ್ಯಗಳೆಲ್ಲವು ಕೈಗೂಡುತ್ತವೆ ಎಂದೊಡನೆ ಜನ ಮುಗಿಬಿದ್ದು ಹೋಗುತ್ತಾರೆ. ಒಬ್ಬ ಮಂತ್ರವಾದಿ ಅಥವಾ ಜೋಯಿಸನ ಬಗ್ಗೆ ಸುದ್ದಿ ಹರಡಿಬಿಟ್ಟರೆ ಎಲ್ಲರೂ ಆ ಕಡೆಗೆ ಮುಖ ಮಾಡುತ್ತಾರೆ. ಎಲ್ಲರಿಗೂ ಸುಲಭೋಪಾಯಗಳೇ ಬೇಕು. ಸುಲಭದಲ್ಲಿ ಶ್ರೀಮಂತನಾಗಬೇಕು. ದೊಡ್ಡ ಮನೆ ಕಟ್ಟಿಸಬೇಕು. ತುಂಬ ಆಸ್ತಿ ಇರಬೇಕು ಎಂಬೆಲ್ಲ ಹಂಬಲಗಳು ಮಾನವನನ್ನು ಯಾವಾಗಲೂ ಕಾಡುತ್ತವೆ. ಆಸೆಗೆ ಮಿತಿಯಿರುವುದಿಲ್ಲ. ಇದ್ದುದರಲ್ಲಿ ತೃಪ್ತಿ ಪಡುವ ಗುಣವಿದ್ದರೆ ಅವನ ಬಾಳು ನೆಮ್ಮದಿಯಿಂದಿರಬಹುದು. ಬಯಸಿದ್ದು ಸಿಕ್ಕದಿದ್ದರೆ ದುಃಖವಾಗುತ್ತದೆ. ಮತ್ತೊಮ್ಮೆ ಪ್ರಯತ್ನಿಸಿ ಪಡೆಯಬೇಕೆಂಬಾಸೆ ಹೆಚ್ಚುತ್ತದೆ. ಆಗ ಬಾಳು ಯವಾಗಲೂ ಚಿಂತೆಯಿಂದ ಕೂಡಿರುತ್ತದೆ. ಎಂದೋ ಒಂದು ದಿನ ಕೊನೆಗೊಳ್ಳಬೇಕಾದ ಬದಿಕಿಗಾಗಿ ಜೀವನವಿಡೀ ಚಿಂತಾಭರಿತರಾಗಿದ್ದರೆ ಅಂತಹ ಚಿಂತೆಗೆ ಕೊನೆಯಿದೆಯೇ? ಬದುಕು ಒಂದು ಸವಾಲಲ್ಲ. ಈಸಬೇಕು ಈಸಿ ಜೈಸಬೇಕು. ಎಲ್ಲವನ್ನೂ ನಡೆಸುವವನೊಬ್ಬನಿದ್ದಾನೆ ಎಂಬ ವೇದಾಂತಿಗಳ ಮಾತು ಸತ್ಯವಲ್ಲವೇ! ಹರಕೆಯ ಕುರಿಗಳಂತಿರುವ ನಾವು ಮೂರು ದಿನದ ಬಾಳಿಗಾಗಿ ಪರಸ್ಪರ ಪೈಪೋಟಿ ನಡೆಸುವುದು ಸರಿಯೇ? ನಾಟಕ ನಟರಂತೆ ಅಭಿನಯ ಮುಗಿದು ಹೊರಗೆ ಬಂದಾಗ ಯಾವುದೇ ವೈರವೋ ದ್ವೇಷವೋ ಇರಬಾರದಲ್ಲವೇ?
ಹಿಂದಿನವರ ಮಾತು ಹೀಗಿದೆ. ಕಾಶಿಗೆ ಹೋದರೆ ಕಾಸಿಗೆ ಒಂದು ಕುದುರೆ ಸಿಗುವುದಂತೆ! ಕಾಶಿಗೆ ಹೋಗಲೂ ಸಮಯ ಬೇಕು ಒಂದು ಕುದುರೆ ತರುವುದಕ್ಕಾಗಿ ಕಾಶಿಗೆ ಹೋಗಿ ಬರುವುದಕ್ಕೂ ಖರ್ಚು ತುಂಬಾ ಆಗಬಹುದು.ಮಾತ್ರವಲ್ಲ ಕೆಲವು ಪ್ರಾಣಿಗಳು ಆ ಪ್ರದೇಶದ ಹವೆಗೆ ಮಾತ್ರ ಒಗ್ಗುತ್ತವೆ. ಹೊಸ ಊರಿನ ಹವೆಯೋ ಪರಿಸರವೋ ಅದಕ್ಕೆ ಹಿಡಿಸದಿದ್ದರೆ ಅದಕ್ಕೂ ತಾನೇನನ್ನೋ ಕಳೆದಿಕೊಂಡೆನೆಂಬ ಬೇಸರದಿಂದ ಕೊನೆಗೆ ಸಾಯಲೂ ಬಹುದು. ಕಾಶಿಯ ಕುದುರೆ ಅಲ್ಲಿಗೇ ಸರಿ. ಇಲ್ಲಿಗೆ ಇಲ್ಲಿಯ ಕುದುರೆಗಳೇ ಬೇಕಲ್ಲವೇ?ದೂರದ ಹಿಮಲಯವನ್ನು ಒಮ್ಮೆ ಹೋಗಿ ನೋಡಿ ಬಂದರೆ, ಅದರ ಎತ್ತರ ಬಿತ್ತರಗಳಿಗೆ ಬೆರಗಾಗಿ ಈಚೆ ಬರುತ್ತೇವಷ್ಟೆ!ಅಲ್ಲಿಯೇ ನಿಲ್ಲುವುದಿಲ್ಲ. ಏನೋ ಕಣ್ಣಿನ ಪಾಪ ಕಳೆಯಲು ಒಮ್ಮೆ ಹೋಗಿ ನೋಡಿ ಬಂದರಾಯಿತು. ನಮ್ಮ ದೇಶದ ವಿಜ್ಞಾನಿಯನ್ನು ಕವಿಗಳನ್ನು ಗುರುತಿಸಲು ನೋಬೆಲ್ ಪ್ರಶಸ್ತಿ ಬೇಕಯಿತು. ಮತ್ತೆ ನಮ್ಮವರೇ ಹೆಮ್ಮೆಯಿಂದ ಅವರು ನಮ್ಮ ದೇಶದವರು ಎಂದು ಹೇಳಿಕೊಂಡರು. ಅಮೇರಿಕಾದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ಬಂದ ಮೇಲೆ ವಿವೇಕಾನಂದರ ಹೆಸರು ನಮ್ಮ ಆದರ್ಶವಾಯಿತು.ಅಂದರೆ ನಮ್ಮ ಜನರ ಹಿರಿಮೆ ಗರಿಮೆಗಳನ್ನು ಗುರುತಿಸಬೇಕಾದ ನಾವು ಮತ್ತೆ ಎಚ್ಚರಗೊಂಡೆವು. ಆದರೆ ವೇದ ಪುರಾಣಗಳನ್ನು ನೋಡಲು ನಮಗೆ ವ್ಯವಧಾನವಿಲ್ಲ. ಕನ್ನಡದ ಶಬ್ದ ಕೋಶ ರಚಿಸಿದ್ದು ವಿದೇಶೀಯರೊಬ್ಬರು. ಆಗ ಅಧಿಕಾರದಲ್ಲಿದ್ದ ಬ್ರಿಟಿಷರ ಮತ ಪ್ರಚಾರಕ್ಕೆ ಅವರಿಗೆ ಕನ್ನಡ ಭಾಷೆ ಕಲಿಯ ಬೇಕಾಯಿತು. ಇಲ್ಲಿ ಊರ್ವಶಿಯ ಶಾಪ ಅರ್ಜುನನಿಗೆ ಭೀಷ್ಮನೆದುರು ನಿಲ್ಲಲು, ಅಜ್ಞಾತ ವಸದಲ್ಲಿ ಬೃಹನ್ನಳೆಯಾಗಿ ನಾಟ್ಯ ಕಲಿಸಲು ಪ್ರಯೋಜನವಾಗಿತ್ತಲ್ಲವೇ?ನಮ್ಮ ಪೂರ್ವಜರಿಂದ ಬಂದ ಬಳುವಳಿಗಳೇ ಬೇಕಷ್ಟಿರುವಾಗ ದೂರದ ಬೆಟ್ಟಗಳ ಕಡೆಗೆ ಬೆಟ್ಟು ಮಾಡುವುದೂ ಮೂರ್ಖತನವಾದರೂ ಗುಣಕ್ಕೆ ಮತ್ಸರವಿದೆಯೇ? ಸರ್ವಜ್ಞರಾಗಬೇಕಾದರೆ ಆತ ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ ಎಂಬಂತೆ ಎಲ್ಲವೂ ನಮ್ಮ ಜ್ಞಾನಾರ್ಜನೆಗೆ ಸಹಾಯಕವಲ್ಲವೇ?
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಮಾನವನ ಕಣ್ಣು ತಾನು ಕಂಡ ದೃಶ್ಯಗಳ ಗುಣ ವಿಭಾಗ ಮಾಡುತ್ತದೆ. ಕಣ್ಣಿಗೆ ರಮ್ಯ ನೋಟಗಳೇ ಇಷ್ಟವಾಗಿರುತ್ತವೆ. ಕಣ್ಣಿಗೆ ನುಣ್ಣಗೆ ಕಾಣುವುದು ಎಂದರೆ ಸುಂದರವಾಗಿ ಕಂಡು ಮನಸ್ಸಿಗೆ ಆನಂದವುಂಟು ಮಾಡುವುದು. ಕರ್ಕಶವಾಗಿ ಕಂಡುದನ್ನು ಮತ್ತೊಮ್ಮೆ ನೋಡಲೂ ಮನಸ್ಸು ಇಷ್ಟಪಡುವುದಿಲ್ಲ. ಬಣ್ಣಗಳಲ್ಲಿಯೂ ಕೆಲವು ಬಣ್ಣಗಳು ಇಷ್ಟವಾಗುವುದಿಲ್ಲ ತಾನೆ! ಹತ್ತಿರದ ಪ್ರೇಕ್ಷಣೀಯ ಸ್ಥಳಗಳಿಗೆ ನಾವು ಮತ್ತೊಮ್ಮೆ ಹೋಗಿ ನೋಡಲು ಬಯಸುವುದಿಲ್ಲ. ಯಾವಾಗಲು ನೋಡುತ್ತಿರುವ ನೋಟಗಳು ಮನಸ್ಸಿಗೆ ಹಬ್ಬವುಂಟುಮಾಡುವುದಿಲ್ಲವಷ್ಟೆ. ನೋಡಿ ನೋಡಿ ಬೇಸತ್ತಿರುತ್ತೇವೆ. ಯಾರೋ ಹೇಳಿದ್ದನ್ನು ಕೇಳಿ, ಅಥವಾ ಅಲ್ಲಿಯ ಪ್ರಕಟಣೆಗಳನ್ನು ನೋಡಿ ಒಮ್ಮೆ ಹೋಗಿ ನೋಡಿಬಿಡುವ ಎಂಬ ಆಸೆ ಸಹಜವೇ ಆಗಿರುತ್ತದೆ. ಜಗಿದದ್ದನ್ನೇ ಮತ್ತೆ ಜಗಿದರೆ ರುಚಿಯಿರುವುದಿಲ್ಲ!ಪ್ರಾಣಿಗಳಲ್ಲಿಯೂ ಹುಲ್ಲು ಮೇಯುವ ಹಸು ನೋಡುವುದು ಮುಂದಕ್ಕೆ ಇರುವ ಹುಲ್ಲು ಇನ್ನೂ ಹೆಚ್ಚು ಹಸುರಾಗಿದೆಯೆಂದೋ ಸುಂದರವಾಗಿದೆಯೆಂದೋ. ಧಾರಾಳವಿದೆ ಬೇಗ ಹೊಟ್ಟೆ ತುಂಬಿಸಿಕೊಳ್ಳಬಹುದೆಂದೋ ಹೀಗೆಲ್ಲ ಯೋಚಿಸಿಕೊಂಡು ಮುಂದು ಮುಂದಕ್ಕೆ ಹೋಗುತ್ತಿರುತ್ತದೆ. ನಮಗೂ ಹೊಸತರಲ್ಲಿ ಸ್ವಾಭಾವಿಕವಾಗಿ ಆಸಕ್ತಿಯಿರುತ್ತದೆ. ಮನೆ ಹತ್ತಿರವಿರುವ ಗುಡ್ಡ ನಮಗೆ ಚೆನ್ನಾಗಿ ಕಾಣಿಸುವುದಿಲ್ಲ. ದೂರದಲ್ಲಿರುವ ಬೆಟ್ಟಗಳೇ ಹೆಚ್ಚು ಸುಂದರವೆಂಬ ತೀರ್ಮಾನಕ್ಕೆ ಬರುತ್ತೇವೆ. ಹಿತ್ತಿಲ ಗಿಡವಾದರೋ ನಮಗೆ ಔಷಧಿಯಲ್ಲ. ಅದು ಒಂದು ಔಷಧಿಯೆನ್ನುವುದನ್ನು ವೈದ್ಯರೇ ಹೇಳಬೇಕು. ಅಂದರೆ ಇಂತಹ ಸಾಮಾನ್ಯ ಗಿಡ ಮೂಲಿಕೆಗಳ ಬಗ್ಗೆ ನಮಗೇನೂ ಗೊತ್ತಿರುವುದಿಲ್ಲ. ಅದನ್ನು ತಿಳಿಯುವ ಕುತೂಹಲವು ನಮಗಿಲ್ಲ. ಅಲ್ಲೆಲ್ಲೋ ಒಂದು ಮಹೌಷಧವಿದೆ ಎಂದು ಅದನ್ನು ತರಲು ಸೀದಾ ಮದ್ದಿನ ಅಂಗಡಿಗೇ ಹೋಗುತ್ತೇವೆ. ವನಸ್ಪತಿಗಳ ಪರಿಚಯ ಯಾರಿಗೂ ಇರುವುದಿಲ್ಲ. ಅಂಗಡಿಯವನು ಕೊಡುವ ಔಷಧಿ ನೋಡಿ ಮತ್ತೆ ಇದು ನಮ್ಮ ತೋಟದಲ್ಲಿಯೇ ಇದೆಯಲ್ಲ ಎಂದುಕೊಳ್ಳುತ್ತಾನೆ. ಅಥವಾ ಆ ಔಷಧಿ ವೈದ್ಯ ಹೇಳಿದರೇನೇ ಸಮಾಧಾನ! ಗೊತ್ತಿರುವ ಬೇರೆ ಯಾರು ಹೇಳಿದರೂ ಕೇಳುವ ಸಹನೆಯಿಲ್ಲ. ಈಗ ಇಂಟರ್ರ್ನೆಟ್ ನಲ್ಲಿ ಔಷಧಿಗಳ ಬಗ್ಗೆಯೂ ವಿವರ ಕೊಡುತ್ತಾರೆ. ಅದರಲ್ಲಿ ಕಂಡರೆ ಅದು ವೇದವಾಕ್ಯ. ಉಳಿದವರು ಹೇಳಿದರೂ ಕೇಳುವವರಿಲ್ಲ. ಅದಕ್ಕೇ ಶಂಖದಿಂದ ಬಂದರೇ ತೀರ್ಥವೆಂಬ ಮಾತು ಹುಟ್ಟಿಕೊಂಡಿದೆ. ಯಾವುದೋ ನದಿಯಲ್ಲಿ ತೀರ್ಥ ಮೀಯಲು ಯಾರೂ ಹೋಗುವುದಿಲ್ಲ. ಆದರೆ ಅದು ಹೆಚ್ಚು ಜನ ಸ್ನಾನ ಮಾಡಿ ಪುಣ್ಯ ಗಳಿಸುತ್ತಾರೆ ಎಂದು ಜನಜನಿತವಾಗಿರಬೇಕು. ಗಂಗ ನದಿಯ ನೀರು ಮಾತ್ರ ಪವಿತ್ರ ಉಳಿದೆಲ್ಲ ನದೀ ನೀರಿಗೆ ಪ್ರಾಶಸ್ತ್ಯವಿಲ್ಲ. ಯಾವ ನೀರಿನಲ್ಲಿ ಸ್ನಾನ ಮಾಡಿದರೂ ಮೈಯ ಕೊಳೆ ಹೋಗುವುದಿಲ್ಲವೇ? ಎಲ್ಲ ಮನಸ್ಸಿನಲ್ಲಿಯೇ ಮಹಾದೇವನಿದ್ದಾನೆ ಎಂಬ ಮಾತೇ ಸತ್ಯವಲ್ಲವೇ? ಶ್ರದ್ಧಾಭಕ್ತಿಗಳೇ ಬೇಕಿರುವುದು ಎಂಬುದನ್ನು ತಿಳಿದುಕೊಳ್ಳುವುದಿಲ್ಲ. "ಒಳಗೆ ಶೃಂಗಾರ ಹೊರಗೆ ಗೋಳಿಸೊಪ್ಪು" ಆಗುವ ಸಾಧ್ಯತೆಯೂ ಇದೆಯಷ್ಟೆ!
ನಮ್ಮ ಕಣ್ಣುಗಳಿಗೆ ಯಾವಾಗಲೂ ಗೋಚರವಾಗುವ ವಸ್ತುಗಳೋ ,ದೃಶ್ಯಗಳೋ ನಮಗೆ ವಿಶೇಷವೆನಿಸುವುದಿಲ್ಲ. ಅಂದರೆ ಯಾವಾಗಲೂ ಕಾಣುತ್ತಿದ್ದೇವಲ್ಲ, ಅದು ವಿಶೇಷವಲ್ಲ. ದೂರದಲ್ಲಿರುವ ವಸ್ತುಗಳೇ ನಮಗೆ ಆಸಕ್ತಿಯನ್ನು ಹುಟ್ಟಿಸುತ್ತವೆ. ಮನೆಯಲ್ಲಿಯೇ ದೇವರ ಕೋಣೆಯಿದೆ. ಅಲ್ಲಿ ಕುಳಿತು ಹುಚ್ಚು ಕುದುರೆಯಂತಿರುವ ಮನಸ್ಸನ್ನು ಏಕಾಗ್ರಗೊಳಿಸಿ ಒಂದರ್ಧ ಗಂಟೆಯೋ ಕುಳಿತುಕೊಂಡರೆ ಸ್ವಲ್ಪ ನೆಮ್ಮದಿ ಸಿಗಬಹುದು. ಎಲ್ಲೆಲ್ಲಿಯೋ ಮರ್ಕಟನಂತೆ ಹಾರುವ ಮನಸ್ಸಿನ ಹತೋಟಿ ಯಿದ್ದರೆ ಹಲವು ಹಂಬಲಿಸುವ ಯೋಚನೆಗಳು ಬರಲಾರವು. ಪತ್ರಿಕೆಯಲ್ಲೋ ಅಥವಾ ಟಿ ವಿ ಯಲ್ಲೋ ಅದರ ಬಗ್ಗೆ ವಿಶೇಷ ವರದಿಗಳು ಬಂದರೆ ಆಶ್ಚರ್ಯವಾಗುತ್ತದೆ. ಒಮ್ಮೆ ಹೋಗಿ ನೋಡಬೇಕು ಎನ್ನಿಸುತ್ತದೆ. ಎಲ್ಲ ಬರುವುದು ಮಾಧ್ಯಮಗಳ ಪ್ರಚಾರದಿಂದ. ಯಾವುದೊ ಒಂದು ದೇವಸ್ಥಾನದ ದೇವರಿಗೆ ಹರಸಿಕೊಂಡರೆ ನೆನೆಸಿದ ಕಾರ್ಯಗಳೆಲ್ಲವು ಕೈಗೂಡುತ್ತವೆ ಎಂದೊಡನೆ ಜನ ಮುಗಿಬಿದ್ದು ಹೋಗುತ್ತಾರೆ. ಒಬ್ಬ ಮಂತ್ರವಾದಿ ಅಥವಾ ಜೋಯಿಸನ ಬಗ್ಗೆ ಸುದ್ದಿ ಹರಡಿಬಿಟ್ಟರೆ ಎಲ್ಲರೂ ಆ ಕಡೆಗೆ ಮುಖ ಮಾಡುತ್ತಾರೆ. ಎಲ್ಲರಿಗೂ ಸುಲಭೋಪಾಯಗಳೇ ಬೇಕು. ಸುಲಭದಲ್ಲಿ ಶ್ರೀಮಂತನಾಗಬೇಕು. ದೊಡ್ಡ ಮನೆ ಕಟ್ಟಿಸಬೇಕು. ತುಂಬ ಆಸ್ತಿ ಇರಬೇಕು ಎಂಬೆಲ್ಲ ಹಂಬಲಗಳು ಮಾನವನನ್ನು ಯಾವಾಗಲೂ ಕಾಡುತ್ತವೆ. ಆಸೆಗೆ ಮಿತಿಯಿರುವುದಿಲ್ಲ. ಇದ್ದುದರಲ್ಲಿ ತೃಪ್ತಿ ಪಡುವ ಗುಣವಿದ್ದರೆ ಅವನ ಬಾಳು ನೆಮ್ಮದಿಯಿಂದಿರಬಹುದು. ಬಯಸಿದ್ದು ಸಿಕ್ಕದಿದ್ದರೆ ದುಃಖವಾಗುತ್ತದೆ. ಮತ್ತೊಮ್ಮೆ ಪ್ರಯತ್ನಿಸಿ ಪಡೆಯಬೇಕೆಂಬಾಸೆ ಹೆಚ್ಚುತ್ತದೆ. ಆಗ ಬಾಳು ಯವಾಗಲೂ ಚಿಂತೆಯಿಂದ ಕೂಡಿರುತ್ತದೆ. ಎಂದೋ ಒಂದು ದಿನ ಕೊನೆಗೊಳ್ಳಬೇಕಾದ ಬದಿಕಿಗಾಗಿ ಜೀವನವಿಡೀ ಚಿಂತಾಭರಿತರಾಗಿದ್ದರೆ ಅಂತಹ ಚಿಂತೆಗೆ ಕೊನೆಯಿದೆಯೇ? ಬದುಕು ಒಂದು ಸವಾಲಲ್ಲ. ಈಸಬೇಕು ಈಸಿ ಜೈಸಬೇಕು. ಎಲ್ಲವನ್ನೂ ನಡೆಸುವವನೊಬ್ಬನಿದ್ದಾನೆ ಎಂಬ ವೇದಾಂತಿಗಳ ಮಾತು ಸತ್ಯವಲ್ಲವೇ! ಹರಕೆಯ ಕುರಿಗಳಂತಿರುವ ನಾವು ಮೂರು ದಿನದ ಬಾಳಿಗಾಗಿ ಪರಸ್ಪರ ಪೈಪೋಟಿ ನಡೆಸುವುದು ಸರಿಯೇ? ನಾಟಕ ನಟರಂತೆ ಅಭಿನಯ ಮುಗಿದು ಹೊರಗೆ ಬಂದಾಗ ಯಾವುದೇ ವೈರವೋ ದ್ವೇಷವೋ ಇರಬಾರದಲ್ಲವೇ?
ಹಿಂದಿನವರ ಮಾತು ಹೀಗಿದೆ. ಕಾಶಿಗೆ ಹೋದರೆ ಕಾಸಿಗೆ ಒಂದು ಕುದುರೆ ಸಿಗುವುದಂತೆ! ಕಾಶಿಗೆ ಹೋಗಲೂ ಸಮಯ ಬೇಕು ಒಂದು ಕುದುರೆ ತರುವುದಕ್ಕಾಗಿ ಕಾಶಿಗೆ ಹೋಗಿ ಬರುವುದಕ್ಕೂ ಖರ್ಚು ತುಂಬಾ ಆಗಬಹುದು.ಮಾತ್ರವಲ್ಲ ಕೆಲವು ಪ್ರಾಣಿಗಳು ಆ ಪ್ರದೇಶದ ಹವೆಗೆ ಮಾತ್ರ ಒಗ್ಗುತ್ತವೆ. ಹೊಸ ಊರಿನ ಹವೆಯೋ ಪರಿಸರವೋ ಅದಕ್ಕೆ ಹಿಡಿಸದಿದ್ದರೆ ಅದಕ್ಕೂ ತಾನೇನನ್ನೋ ಕಳೆದಿಕೊಂಡೆನೆಂಬ ಬೇಸರದಿಂದ ಕೊನೆಗೆ ಸಾಯಲೂ ಬಹುದು. ಕಾಶಿಯ ಕುದುರೆ ಅಲ್ಲಿಗೇ ಸರಿ. ಇಲ್ಲಿಗೆ ಇಲ್ಲಿಯ ಕುದುರೆಗಳೇ ಬೇಕಲ್ಲವೇ?ದೂರದ ಹಿಮಲಯವನ್ನು ಒಮ್ಮೆ ಹೋಗಿ ನೋಡಿ ಬಂದರೆ, ಅದರ ಎತ್ತರ ಬಿತ್ತರಗಳಿಗೆ ಬೆರಗಾಗಿ ಈಚೆ ಬರುತ್ತೇವಷ್ಟೆ!ಅಲ್ಲಿಯೇ ನಿಲ್ಲುವುದಿಲ್ಲ. ಏನೋ ಕಣ್ಣಿನ ಪಾಪ ಕಳೆಯಲು ಒಮ್ಮೆ ಹೋಗಿ ನೋಡಿ ಬಂದರಾಯಿತು. ನಮ್ಮ ದೇಶದ ವಿಜ್ಞಾನಿಯನ್ನು ಕವಿಗಳನ್ನು ಗುರುತಿಸಲು ನೋಬೆಲ್ ಪ್ರಶಸ್ತಿ ಬೇಕಯಿತು. ಮತ್ತೆ ನಮ್ಮವರೇ ಹೆಮ್ಮೆಯಿಂದ ಅವರು ನಮ್ಮ ದೇಶದವರು ಎಂದು ಹೇಳಿಕೊಂಡರು. ಅಮೇರಿಕಾದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ಬಂದ ಮೇಲೆ ವಿವೇಕಾನಂದರ ಹೆಸರು ನಮ್ಮ ಆದರ್ಶವಾಯಿತು.ಅಂದರೆ ನಮ್ಮ ಜನರ ಹಿರಿಮೆ ಗರಿಮೆಗಳನ್ನು ಗುರುತಿಸಬೇಕಾದ ನಾವು ಮತ್ತೆ ಎಚ್ಚರಗೊಂಡೆವು. ಆದರೆ ವೇದ ಪುರಾಣಗಳನ್ನು ನೋಡಲು ನಮಗೆ ವ್ಯವಧಾನವಿಲ್ಲ. ಕನ್ನಡದ ಶಬ್ದ ಕೋಶ ರಚಿಸಿದ್ದು ವಿದೇಶೀಯರೊಬ್ಬರು. ಆಗ ಅಧಿಕಾರದಲ್ಲಿದ್ದ ಬ್ರಿಟಿಷರ ಮತ ಪ್ರಚಾರಕ್ಕೆ ಅವರಿಗೆ ಕನ್ನಡ ಭಾಷೆ ಕಲಿಯ ಬೇಕಾಯಿತು. ಇಲ್ಲಿ ಊರ್ವಶಿಯ ಶಾಪ ಅರ್ಜುನನಿಗೆ ಭೀಷ್ಮನೆದುರು ನಿಲ್ಲಲು, ಅಜ್ಞಾತ ವಸದಲ್ಲಿ ಬೃಹನ್ನಳೆಯಾಗಿ ನಾಟ್ಯ ಕಲಿಸಲು ಪ್ರಯೋಜನವಾಗಿತ್ತಲ್ಲವೇ?ನಮ್ಮ ಪೂರ್ವಜರಿಂದ ಬಂದ ಬಳುವಳಿಗಳೇ ಬೇಕಷ್ಟಿರುವಾಗ ದೂರದ ಬೆಟ್ಟಗಳ ಕಡೆಗೆ ಬೆಟ್ಟು ಮಾಡುವುದೂ ಮೂರ್ಖತನವಾದರೂ ಗುಣಕ್ಕೆ ಮತ್ಸರವಿದೆಯೇ? ಸರ್ವಜ್ಞರಾಗಬೇಕಾದರೆ ಆತ ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ ಎಂಬಂತೆ ಎಲ್ಲವೂ ನಮ್ಮ ಜ್ಞಾನಾರ್ಜನೆಗೆ ಸಹಾಯಕವಲ್ಲವೇ?
Tuesday, June 12, 2012
ಉಂಡಾಡಿ ಭಟ್ಟ
ಉಂಡಾಡಿ ಭಟ್ಟ
ಉಂಡಾಡಿ ಭಟ್ಟನ ಮೇಲೆ ಕೊಂಡಾಟ ಹೆಚ್ಚಾಗಿ
ಅವನ ಗುಣ ಕೊಂಡಾಡಿದರೆ ಕೋಪ ಬಕ್ಕು ಹೆಚ್ಚಾಗಿ
ಮೊಂಡಾಟ ಹೆಚ್ಚಾಗಿ ಬಡಿವಲೆ ಬಕ್ಕು ಕೋಪಂದಾಗಿ
ಪೈಸೆ ಕೊಟ್ಟರೆ ರಾಜಿ ಮಾಡ್ಯೊಂಡು ಹತ್ತರೆ ಬಕ್ಕು ಹೆಚ್ಚಾಗಿ
ಸಣ್ಣ ಸಣ್ಣ ಮಕ್ಕಳ ಕಂಡರೆ ಓಡ್ಯೊಂಡು ಬಕ್ಕು ಹತ್ತರಾಗಿ
ಪ್ರೀತಿ ಮಾಡ್ಯೊಂಡು ಅಪ್ಪ್ಯೊಂಡು ಹೇಳುಗು ಖುಶಿಯಾಗಿ
ಎಲ್ಯೆಲ್ಲಿ ಊಟ ಇದ್ದರು ಅವಂಗೆ ಶುದ್ದಿ ಸಿಕ್ಕುಗು ಮೇಲಾಗಿ
ಕಂಡೋರತ್ರೆಲ್ಲ ಕೇಳೋಂಡಿಕ್ಕು ಹೋಪಲೆ ಎಲ್ಯಾಗಿ
ಬಂದೋರತ್ರೆ ನಾಳೆಯ ಬಗ್ಗೆ ಕೇಳ್ಯೊಂಡಿಕ್ಕು ಮುಂದಾಗಿ
ಬಂದೋರ ಎಲ್ಲ ಮಾತಾಡ್ಸುತ್ತ ಪರಿಚಯವಿಕ್ಕು ಮೊದಲಾಗಿ
ಎಲ್ಲೋರನ್ನು ಮಾತಾಡ್ಸುಗು ಕಷ್ಟ ಸುಖ ಕೇಳ್ಯೊಂಡು
ಮೊದಲೇ ಅವ ನಮಸ್ಕಾರ ಹೇಳ್ಯೊಂಡು ಬಕ್ಕು
ಮತ್ತೆ ಅವಂಗೇ ನಮಸ್ಕಾರ ಮೊದಲೆ ಹೇಳುತ್ತವು
ಹಾಂಗೆ ಎಲ್ಲೋರಿಂಗೂ ಅವನ ಗುರ್ತವೇ ಇಕ್ಕು
ಊಟಕ್ಕೆ ಬರೆಕು ಹೇಳಿ ಹೇಳಿಕೆಹೇಳ್ಸ್ಯೊಂಡಿಕ್ಕು
ಬಂದರೆ ಸುಧರಿಕೆಯಾಗಿ ಬಳುಸಲೂ ಬಕ್ಕುಊಟಕ್ಕೆ
ಬಂದರೆ ಆರಿಂಗು ಬೇಜಾರಾಗ ಸೇರ್ಸೊಂಗು ಕೂಟಕ್ಕೆ
ಬಯ್ದರೂ ಕೋಪ ಬಾರ ಕೂಡ್ಯೊಂಗು ಎಲ್ಲ ಬಗೆ ಆಟಕ್ಕೆ
ಕಂಡರೆ ಮಾಣಿ ಉಂಡರೆ ಗೋಣಿ ಹತ್ತುಗು ಏಣಿ
ಅಂಡಲೆಯುತಿಕ್ಕು ಉಂಬಲೆ ಎಲ್ಲಾ ಓಣಿ ಓಣಿ
ಊರೆಲ್ಲ ಮನೆ ಅವಂಗೆ ಬೇರಿಲ್ಲೆ ಮನೆ
ಹೋಯ್ಕೊಂಡಿಕ್ಕು ದಿನವೆಲ್ಲ ಮನೆ ಮನೆ
ಎಲ್ಲೋರು ಸೇರಿ ಅವಂಗೊಂದು ಕೂಸಿನ ಹುಡುಕಿ
ಮದುವೆ ಮಾಡಿಕ್ಕುಲೆ ಹೆರಟೇ ಬಿಟ್ಟವು
ಮದುವೆಯಾದರೆ ಸಾಕೊ ಅವು ಇಪ್ಪಲೊಂದು
ಮನೆಯನ್ನೂ ಹುಡುಕಿ ಒಕ್ಕಲೂ ಮಾಡಿದವು
ಮನೆ ಹೊಕ್ಕ ರಜ ಹೊತ್ತಿಂಗೆ ಹೋಗಿತ್ತಿದ್ದವು
ಹತ್ರಾಣ ಮನೆಲಿ ಇಬ್ರುದೆ ಒಟ್ಟಿಂಗೆ ಕೂದು
ತಿಥಿ ಊಟವೇ ಉಂಡುಗೊಂಡಿತ್ತಿದ್ದವು
ಓಟೆಲ್ಲಿ ಹಾಕಿ ಸರ್ತ ಮಾಡಿದರೂ ನಾಯಿ
ಬಾಲ ಡೊಂಕು ಡೊಂಕೇ ಆಗಿಕ್ಕು ಅಲ್ಲದೋ?
ಇನ್ನೂ ಹೇಳಿದರೆ ಕತೆ ಕೇಳುವೋರಿರವು
ಕೇಳಿಗೊಂಡಿದ್ದುದಕ್ಕೆ ನಿಂಗೊಗೆಲ್ಲ ಥೇಂಕ್ಸ್
ಮಾವಿನ ಕಾಯಿ
ಮಾವಿನ ಕಾಯಿ
ಡಿಸೆಂಬರ್ ಬರೆಕ್ಕಾರೇ ಹೆಮ್ಮಕ್ಕೊ ಕೇಳುತ್ತವು
ನಿಂಗಳ ಮರ ಹೂಗು ಹೋಯಿದೋ ಹೇಂಗೆ?
ಜನವರಿ ಬಂದರೆ ಕೇಳೆಡ ಅವರ ಗಡಿಬಿಡಿ
ಕಂಡೋರತ್ರೆಲ್ಲ ಕೇಳುಗು ಮೆಡಿ ಸಿಕ್ಕುಗೋ ಹೇಳಿ
ಒಂದು ಸೇರು ಮೆಡಿಯಾದರೂ ಸಿಕ್ಕಿರೆ ಅವಕ್ಕೆ ಖುಶಿ
ಪೇಟೆಗೆ ಹೋವುತ್ತರೆ ನೆಂಪು ಮಾಡುಗು ಸಂತೆಲ್ಲಿ ಕೇಳುಲೆ
ನಮ್ಮದೆ ಮರಲ್ಲಿದ್ದರೆ ಕೇಳೆಡ ಅವರ ಸಂಭ್ರಮ
ಆದರೆ ಕೊಯ್ಯೆಕ್ಕಾರೆ ಬೇಕು ಮರ ಹತ್ತುವ ಆಳುಗೊ
ಕಾಂಬಲೆ ಸಿಕ್ಕಿದ ಆಳುಗಳತ್ರೆಲ್ಲ ಕೇಳುಗು
ಮೆಡಿ ದೊಡ್ಡದಪ್ಪಂದ ಮದಲೆ ಬುಕ್ ಮಾಡುತ್ತವು
ಆಳುಗಳತ್ತರೆ ಕೊಯ್ವಲೆಡಿಗೋ ಹೇಳಿ
ಕೊಯ್ದಾದ ಮೇಲೆ ಮೆಣಸು ಸಾಸಮೆ ತರೆಕು ಹೇಳಿ
ಗಿರ್ಗಾಣ ಕೊಡುತ್ತವು ಅಂಗ್ಡಿಗೆ ಹೋಪಗ
ಮೆಣಸು ಒಣಗುಸಿ ಹೊಡಿ ಮಾಡುಸೆಕ್ಕು
ಸಾಸಮೆ ಅರಿಶಿ ಒಣಗುಸಿ ಹೊಡಿ ಮಾಡೆಕ್ಕು
ಅವರ ಗೌಜಿಯೋ ಗೌಜಿ ಮನೆಯೋರತ್ರೆ
ಮಕ್ಕಳತ್ರೆ ಮಾತಾಡುಲೇ ಪುರುಸೊತ್ತಿಲ್ಲೆ,
ಆಚೆಮನೆ ಅಕ್ಕನತ್ತರೆ ಶುದ್ದಿ ಮಾತಾಡುವದು
ಅಕ್ಕಂಗೆ ಮೆಣಸು ತಂದದೋ ಹೊಡಿಯೇ ತಂದದೋ?
ಅಕ್ಕಂದ ಮದಲೆ ಉಪ್ಪಿನಕಾಯಿ ಹಾಕೆಕ್ಕು ಹೇಳಿ
ಸೊಕ್ಕು ಬೇರೆ ಈಚೆ ಮನೆ ಅಕ್ಕಂಗೆ
ಸಮಯಕ್ಕೆ ಆಳುಗೊ ಬಾರದ್ರೆ ಮತ್ತೆ ಗಡಿಬಿಡಿ
ಹೋಗಿ ದಿನಗೇಳದ್ದಕ್ಕೆ ಮತ್ತೆ ಸಿಡಿಮಿಡಿ
ನಮಗೆ ಮಾಂತ್ರ ಕೊಯ್ದಾಗದ್ದೆ ಮಾವಿನ ಮಿಡಿ
ನಿತ್ಯ ಸಿಕ್ಕುಗು ಬೈಗಳ ಮುಡಿ ಮುಡಿ
ನಾವೇ ಮರ ಹತ್ತಿ ಕೊಯ್ದರೆ ಸಿಕ್ಕುಗು ನಮಗೆ
ಅವರ ಹೊಗಳಿಕೆಯ ಮಾತು ಅಡಿಗಡಿ
ಕಾಯಿ ಬೆಳದರೆ ಮತ್ತೆ ಕೆತ್ತಿ ಉಪ್ಪಿನ ಕಾಯಿ
ಹಸಿ ಕೆತ್ತೆ ಬೇರೆ ಬೇಯಿಸಿದ ಕೆತ್ತೆ ಬೇರೆ,
ಇಡಿಕಾಯಿಯೂ ಇದ್ದು, ತಿಂಬಲೆ ಕೊಶಿ ಅವುತ್ತು,
ಕೆತ್ತೆ ತಿಂದು ನೀರು ಕುಡುದರೆ ಹೊಟ್ಟೆ ತುಂಬುಗು,
ಕೆಪ್ಪಟೆ ಕೆತ್ತೆ ಎರಡು ತುಂಡು ಮಾಡೆಕ್ಕು,
ಕರೆ ಕೆತ್ತೆ ಹಾಂಗೇ ಇದ್ದರೆ ಸಾಕು
ಗೊರಟು ಮಾಂತ್ರ ಆರಿಂಗು ಬೇಡ
ಕೋಗಿಲೆ ತಿಂಬಲೆ ತುಂಬ ಕೊಶಿ
ಮಿಡಿ ತಿಂದರು ಅಕ್ಕು, ಮಜ್ಜಿಗೆ ಕೂಡುಸಿ ಉಂಡರೆ
ಬೇರೆ ಬೆಂದಿ ಗಿಂದಿ ಒಂದುದೆ ಬೇಡ,ಅದಕ್ಕೆ ಹೆಮ್ಮಕ್ಕೊ
ಊಟಕ್ಕಿಲ್ಲದ್ದ ಉಪ್ಪಿಕಾಯಿ ಹೇಳುತ್ತವು
ಹೊತ್ತಿಂಗೆ ಬಂದರೆ ಊಟ ಯಾವಾಗಳೊ ಬಂದರೆ
ಎಂತಗೆ ಊಟ ಕೊಡೆಕ್ಕು?ಅಪ್ಪೆ ಮಿಡಿ ಈಗ
ಸಿಕ್ಕುವದೆ ಕಷ್ಟ ಆದರೆ ಅದರ ರುಚಿ ಅದಕ್ಕೇ ಸರಿ
ಹಣ್ಣಿನ ರಸಾಯನ ಗ್ರೇಶುವಗ ಜೊಲ್ಲು ಸುರಿ
ಕಾಟು ಹಣ್ಣಿನ ಸಾಸಮೆ ಇದ್ದರೆ ಉಂಬಗ ಸುರಿ
ಹಣ್ಣಿ ಕಾಲ ಮುಗುದರೆ ತಿಂಬಲಕ್ಕು ಮಾಂಬ್ಳ
ಅಂತು ಮಾವಿನ ಮರಂದ ಸಂತೋಷದ ಚೊರಿ
ಡಿಸೆಂಬರ್ ಬರೆಕ್ಕಾರೇ ಹೆಮ್ಮಕ್ಕೊ ಕೇಳುತ್ತವು
ನಿಂಗಳ ಮರ ಹೂಗು ಹೋಯಿದೋ ಹೇಂಗೆ?
ಜನವರಿ ಬಂದರೆ ಕೇಳೆಡ ಅವರ ಗಡಿಬಿಡಿ
ಕಂಡೋರತ್ರೆಲ್ಲ ಕೇಳುಗು ಮೆಡಿ ಸಿಕ್ಕುಗೋ ಹೇಳಿ
ಒಂದು ಸೇರು ಮೆಡಿಯಾದರೂ ಸಿಕ್ಕಿರೆ ಅವಕ್ಕೆ ಖುಶಿ
ಪೇಟೆಗೆ ಹೋವುತ್ತರೆ ನೆಂಪು ಮಾಡುಗು ಸಂತೆಲ್ಲಿ ಕೇಳುಲೆ
ನಮ್ಮದೆ ಮರಲ್ಲಿದ್ದರೆ ಕೇಳೆಡ ಅವರ ಸಂಭ್ರಮ
ಆದರೆ ಕೊಯ್ಯೆಕ್ಕಾರೆ ಬೇಕು ಮರ ಹತ್ತುವ ಆಳುಗೊ
ಕಾಂಬಲೆ ಸಿಕ್ಕಿದ ಆಳುಗಳತ್ರೆಲ್ಲ ಕೇಳುಗು
ಮೆಡಿ ದೊಡ್ಡದಪ್ಪಂದ ಮದಲೆ ಬುಕ್ ಮಾಡುತ್ತವು
ಆಳುಗಳತ್ತರೆ ಕೊಯ್ವಲೆಡಿಗೋ ಹೇಳಿ
ಕೊಯ್ದಾದ ಮೇಲೆ ಮೆಣಸು ಸಾಸಮೆ ತರೆಕು ಹೇಳಿ
ಗಿರ್ಗಾಣ ಕೊಡುತ್ತವು ಅಂಗ್ಡಿಗೆ ಹೋಪಗ
ಮೆಣಸು ಒಣಗುಸಿ ಹೊಡಿ ಮಾಡುಸೆಕ್ಕು
ಸಾಸಮೆ ಅರಿಶಿ ಒಣಗುಸಿ ಹೊಡಿ ಮಾಡೆಕ್ಕು
ಅವರ ಗೌಜಿಯೋ ಗೌಜಿ ಮನೆಯೋರತ್ರೆ
ಮಕ್ಕಳತ್ರೆ ಮಾತಾಡುಲೇ ಪುರುಸೊತ್ತಿಲ್ಲೆ,
ಆಚೆಮನೆ ಅಕ್ಕನತ್ತರೆ ಶುದ್ದಿ ಮಾತಾಡುವದು
ಅಕ್ಕಂಗೆ ಮೆಣಸು ತಂದದೋ ಹೊಡಿಯೇ ತಂದದೋ?
ಅಕ್ಕಂದ ಮದಲೆ ಉಪ್ಪಿನಕಾಯಿ ಹಾಕೆಕ್ಕು ಹೇಳಿ
ಸೊಕ್ಕು ಬೇರೆ ಈಚೆ ಮನೆ ಅಕ್ಕಂಗೆ
ಸಮಯಕ್ಕೆ ಆಳುಗೊ ಬಾರದ್ರೆ ಮತ್ತೆ ಗಡಿಬಿಡಿ
ಹೋಗಿ ದಿನಗೇಳದ್ದಕ್ಕೆ ಮತ್ತೆ ಸಿಡಿಮಿಡಿ
ನಮಗೆ ಮಾಂತ್ರ ಕೊಯ್ದಾಗದ್ದೆ ಮಾವಿನ ಮಿಡಿ
ನಿತ್ಯ ಸಿಕ್ಕುಗು ಬೈಗಳ ಮುಡಿ ಮುಡಿ
ನಾವೇ ಮರ ಹತ್ತಿ ಕೊಯ್ದರೆ ಸಿಕ್ಕುಗು ನಮಗೆ
ಅವರ ಹೊಗಳಿಕೆಯ ಮಾತು ಅಡಿಗಡಿ
ಕಾಯಿ ಬೆಳದರೆ ಮತ್ತೆ ಕೆತ್ತಿ ಉಪ್ಪಿನ ಕಾಯಿ
ಹಸಿ ಕೆತ್ತೆ ಬೇರೆ ಬೇಯಿಸಿದ ಕೆತ್ತೆ ಬೇರೆ,
ಇಡಿಕಾಯಿಯೂ ಇದ್ದು, ತಿಂಬಲೆ ಕೊಶಿ ಅವುತ್ತು,
ಕೆತ್ತೆ ತಿಂದು ನೀರು ಕುಡುದರೆ ಹೊಟ್ಟೆ ತುಂಬುಗು,
ಕೆಪ್ಪಟೆ ಕೆತ್ತೆ ಎರಡು ತುಂಡು ಮಾಡೆಕ್ಕು,
ಕರೆ ಕೆತ್ತೆ ಹಾಂಗೇ ಇದ್ದರೆ ಸಾಕು
ಗೊರಟು ಮಾಂತ್ರ ಆರಿಂಗು ಬೇಡ
ಕೋಗಿಲೆ ತಿಂಬಲೆ ತುಂಬ ಕೊಶಿ
ಮಿಡಿ ತಿಂದರು ಅಕ್ಕು, ಮಜ್ಜಿಗೆ ಕೂಡುಸಿ ಉಂಡರೆ
ಬೇರೆ ಬೆಂದಿ ಗಿಂದಿ ಒಂದುದೆ ಬೇಡ,ಅದಕ್ಕೆ ಹೆಮ್ಮಕ್ಕೊ
ಊಟಕ್ಕಿಲ್ಲದ್ದ ಉಪ್ಪಿಕಾಯಿ ಹೇಳುತ್ತವು
ಹೊತ್ತಿಂಗೆ ಬಂದರೆ ಊಟ ಯಾವಾಗಳೊ ಬಂದರೆ
ಎಂತಗೆ ಊಟ ಕೊಡೆಕ್ಕು?ಅಪ್ಪೆ ಮಿಡಿ ಈಗ
ಸಿಕ್ಕುವದೆ ಕಷ್ಟ ಆದರೆ ಅದರ ರುಚಿ ಅದಕ್ಕೇ ಸರಿ
ಹಣ್ಣಿನ ರಸಾಯನ ಗ್ರೇಶುವಗ ಜೊಲ್ಲು ಸುರಿ
ಕಾಟು ಹಣ್ಣಿನ ಸಾಸಮೆ ಇದ್ದರೆ ಉಂಬಗ ಸುರಿ
ಹಣ್ಣಿ ಕಾಲ ಮುಗುದರೆ ತಿಂಬಲಕ್ಕು ಮಾಂಬ್ಳ
ಅಂತು ಮಾವಿನ ಮರಂದ ಸಂತೋಷದ ಚೊರಿ
ಹಲಸಿನ ಹಣ್ಣು
ಹಲಸಿನ ಹಣ್ಣು
ರುಚಿ ರುಚಿಯಾದ ಹಲಸಿನ ಹಣ್ಣು
ಮರದ ಮೇಲೆ ನಮ್ಮ ಕಣ್ಣು
ಬೆಳದು ಹಣ್ಣಾದರೆ ಮಾತ್ರ
ಅದರ ಪಾಯಸ ಉಣ್ಣು
ಕೊಟ್ಟಿಗೆ ಮಾಡಿದರೆ ಮಾತ್ರ ಕೇಳೆಡ ಅದರ ರುಚಿ
ಮುರುದು ತಿಂದಷ್ಟು ಸಾಲ ನಾಲಗ್ಗೆ ಅದರ ರುಚಿ
ಗೆಣಸಲೆಯಾದರೆ ಕೊಟ್ಟಿಗೆ ಬೇಡ ಅದು ಮತ್ತೂ ರುಚಿ
ಮೂಗಿನ ವರೆಗೆ ತಿಂದರೂ ಹೋಗ ಅದರ ರುಚಿ.
ಹಲಸಿನ ದೋಸೆ ಜೇನು ಕೂಡಿ ತಿಂಬಲೆ ಆಸೆ
ಹಸ್ಸಿ ಮಾಡ್ಯೊಂಡಿತ್ತು ಆಚೆ ಮನೆ ಕೂಸೆ
ಕಾಯಿ ಮಾಂತ್ರ ಬೆಳೆದರೆ ಮಾಂತ್ರ ದೋಸೆ
ರುಚಿ ರುಚಿಯಾಗಿ ತಿಂದು ಎಳವಲಕ್ಕು ಮೀಸೆ
ಕಾಯಿ ಸೊಳೆ ಒಣಗುಸಿದರೂ ಮಳೆಗಾಲಕ್ಕೆ ಅಕ್ಕು
ಬೊದುಲ್ಲೆ ಹಾಕಿ ಕಡೆದರುದೆ ದೋಸೆ ಮಾಡಲಕ್ಕು
ರುಚಿ ಮಾಂತ್ರ ಹಲಸಿನ ಕಾಯಿ ದೋಸೆದೇ ಇಕ್ಕು
ಹಲಸಿನ ಕಾಯಿ ಸಿಕ್ಕದ್ದಿಪ್ಪಗ ರುಚಿ ರುಚು ಅಕ್ಕು
ಹಸಿ ಸೊಳೆ ಸಿಗುದು ಹೊರುದರದುವೇ ಕುರ್ ಕುರೇ
ಸೊಳೆ ಬೇಶಿ ಕಡೆದರೆ ಮಾಡುಲಕ್ಕು ಹಪ್ಪಳ
ಒಣಗಿ ಸಿಕ್ಕಿದರೆ ಮಳೆಗಾಲಲ್ಲಿ ಹೊರುದು ತಿಂಬಲಕ್ಕು
ಉಪ್ಪು ಮೆಣಸು ಸೇರಿಸಿದರೆ ಅದರ ಹಿಟ್ಟಿಂಗೆ
ಊಟಕ್ಕೆ ಉಪ್ಯೋಗವಕ್ಕು ಕೂಡುಸುಲೆ ಒಟ್ಟಿಂಗೆ
ಹಣ್ಣಿನ ತಿಂದು ಬೊಡುದು ಮಾಡಿದವಡೊ ಪೆರಟಿ
ಪೆರಟಿ ಕಾಸುಲೆ ಬಕ್ಕೆ ತುಳುವ ಭೇದ ಇಲ್ಲೆಡೊ
ಒಟ್ಟಿಂಗೆ ಕಾಸಿ ಮಡುಗಿದರೆ ಮಳೆಗಾಲಲ್ಲಿ ತಿಂಬಲಕ್ಕು
ಪೆರಟಿ ಪಾಯಸ ಪೆರಟಿ ದೋಸೆ,ಪೆರಟಿ ಮುಳ್ಕ
ಸಾಂತಾಣಿ ತಿಂಬಲೆ ಮಳೆಗಾಲ ಬರೆಕಡೊ
ಬೇಳೇ ಹೋಳಿಗೆ ತಿಂಬಲೆ ರುಚಿರುಚಿ
ಅದ್ದಿಟ್ಟಿಲ್ಲಿ ಹಾಕಿ ಬೇಶಿದರೆ ಕೂಡ ಸಾಕು
ಬೇಳೆ ಸೌತೆ ಬೆಂದಿ ಮಳೆಗಾಲದ ಸುಲಭ ತರಕಾರಿ.
ಉಪ್ಪಿಲ್ಲಿ ಹಾಕಿದ ಸೊಳೆ ತೆಗವದು ಮಳೆಗಾಲಲ್ಲಿ
ಸೊಳೆ ಬೆಂದಿ ಉಪ್ಪು ಬಿಡುಸಿ ಮಾಡೆಕ್ಕು
ಉಂಡ್ಳಕಾಳು ಮಾಡ್ಲೆ ಕಷ್ಟ ಇದ್ದರೂ
ಕೂದು ತಿಂಬಲೆ ಎಲ್ಲೋರಿಂಗೂ ಖುಶಿ
ರುಚಿ ರುಚಿಯಾದ ಹಲಸಿನ ಹಣ್ಣು
ಮರದ ಮೇಲೆ ನಮ್ಮ ಕಣ್ಣು
ಬೆಳದು ಹಣ್ಣಾದರೆ ಮಾತ್ರ
ಅದರ ಪಾಯಸ ಉಣ್ಣು
ಕೊಟ್ಟಿಗೆ ಮಾಡಿದರೆ ಮಾತ್ರ ಕೇಳೆಡ ಅದರ ರುಚಿ
ಮುರುದು ತಿಂದಷ್ಟು ಸಾಲ ನಾಲಗ್ಗೆ ಅದರ ರುಚಿ
ಗೆಣಸಲೆಯಾದರೆ ಕೊಟ್ಟಿಗೆ ಬೇಡ ಅದು ಮತ್ತೂ ರುಚಿ
ಮೂಗಿನ ವರೆಗೆ ತಿಂದರೂ ಹೋಗ ಅದರ ರುಚಿ.
ಹಲಸಿನ ದೋಸೆ ಜೇನು ಕೂಡಿ ತಿಂಬಲೆ ಆಸೆ
ಹಸ್ಸಿ ಮಾಡ್ಯೊಂಡಿತ್ತು ಆಚೆ ಮನೆ ಕೂಸೆ
ಕಾಯಿ ಮಾಂತ್ರ ಬೆಳೆದರೆ ಮಾಂತ್ರ ದೋಸೆ
ರುಚಿ ರುಚಿಯಾಗಿ ತಿಂದು ಎಳವಲಕ್ಕು ಮೀಸೆ
ಕಾಯಿ ಸೊಳೆ ಒಣಗುಸಿದರೂ ಮಳೆಗಾಲಕ್ಕೆ ಅಕ್ಕು
ಬೊದುಲ್ಲೆ ಹಾಕಿ ಕಡೆದರುದೆ ದೋಸೆ ಮಾಡಲಕ್ಕು
ರುಚಿ ಮಾಂತ್ರ ಹಲಸಿನ ಕಾಯಿ ದೋಸೆದೇ ಇಕ್ಕು
ಹಲಸಿನ ಕಾಯಿ ಸಿಕ್ಕದ್ದಿಪ್ಪಗ ರುಚಿ ರುಚು ಅಕ್ಕು
ಹಸಿ ಸೊಳೆ ಸಿಗುದು ಹೊರುದರದುವೇ ಕುರ್ ಕುರೇ
ಸೊಳೆ ಬೇಶಿ ಕಡೆದರೆ ಮಾಡುಲಕ್ಕು ಹಪ್ಪಳ
ಒಣಗಿ ಸಿಕ್ಕಿದರೆ ಮಳೆಗಾಲಲ್ಲಿ ಹೊರುದು ತಿಂಬಲಕ್ಕು
ಉಪ್ಪು ಮೆಣಸು ಸೇರಿಸಿದರೆ ಅದರ ಹಿಟ್ಟಿಂಗೆ
ಊಟಕ್ಕೆ ಉಪ್ಯೋಗವಕ್ಕು ಕೂಡುಸುಲೆ ಒಟ್ಟಿಂಗೆ
ಹಣ್ಣಿನ ತಿಂದು ಬೊಡುದು ಮಾಡಿದವಡೊ ಪೆರಟಿ
ಪೆರಟಿ ಕಾಸುಲೆ ಬಕ್ಕೆ ತುಳುವ ಭೇದ ಇಲ್ಲೆಡೊ
ಒಟ್ಟಿಂಗೆ ಕಾಸಿ ಮಡುಗಿದರೆ ಮಳೆಗಾಲಲ್ಲಿ ತಿಂಬಲಕ್ಕು
ಪೆರಟಿ ಪಾಯಸ ಪೆರಟಿ ದೋಸೆ,ಪೆರಟಿ ಮುಳ್ಕ
ಸಾಂತಾಣಿ ತಿಂಬಲೆ ಮಳೆಗಾಲ ಬರೆಕಡೊ
ಬೇಳೇ ಹೋಳಿಗೆ ತಿಂಬಲೆ ರುಚಿರುಚಿ
ಅದ್ದಿಟ್ಟಿಲ್ಲಿ ಹಾಕಿ ಬೇಶಿದರೆ ಕೂಡ ಸಾಕು
ಬೇಳೆ ಸೌತೆ ಬೆಂದಿ ಮಳೆಗಾಲದ ಸುಲಭ ತರಕಾರಿ.
ಉಪ್ಪಿಲ್ಲಿ ಹಾಕಿದ ಸೊಳೆ ತೆಗವದು ಮಳೆಗಾಲಲ್ಲಿ
ಸೊಳೆ ಬೆಂದಿ ಉಪ್ಪು ಬಿಡುಸಿ ಮಾಡೆಕ್ಕು
ಉಂಡ್ಳಕಾಳು ಮಾಡ್ಲೆ ಕಷ್ಟ ಇದ್ದರೂ
ಕೂದು ತಿಂಬಲೆ ಎಲ್ಲೋರಿಂಗೂ ಖುಶಿ
ಅಮೇರಿಕದಲ್ಲಿ ಕನ್ನಡಿಗರು ಆಚರಿಸಿದ ಯುಗಾದಿ
CªÉÄÃjPÁzÀ°è PÀ£ÀßrUÀgÀÄ DZÀj¹zÀ 0iÀÄÄUÁ¢
«zÉñÀUÀ¼À°è GzÉÆåÃUÀ ºÀÄqÀÄQPÉÆAqÀÄ ºÉÆÃzÀªÀgÀÄ
¨ÉÃgÉ zÉñÀUÀ¼À°è GzÉÆåÃUÀ VnÖ¹ ªÀi0iÀiÁðzɬÄAzÀ §zÀÄPÀÄ ¸ÁV¸ÀÄwÛzÁÝgÉ. £ÀªÀÄä
¸ÀtÚ ªÀÄUÀ£ÀÆ CªÉÄÃjPÁzÀ
¦ü®qɰá0iÀiÁzÀ°è ¸ÀéAvÀ ªÀÄ£É ªÀiÁrPÉÆAqzÀÄÝzÀjAzÀ £ÁªÀÇ ¦ü®qɰá0iÀiÁPÉÌ
§A¢zÉݪÀÅ.ºÁUÉ £ÀªÀÄUÉE°è0iÀÄ d£ÀgÀÄ DZÀj¹zÀ 0iÀÄÄUÁ¢0iÀÄ£ÀÄß £ÉÆÃqÀ®Ä
¸ÁzsÀåªÁ¬ÄvÀÄ. E°è0iÀÄ MAzÀÄ «±ÉõÀªÉAzÀgÉ £ÀªÀÄä zÉñÀzÀ°èzÀÝAvÉ eÁvÀåwÃvÀ JA§
£ÁªÀÄ ¥sÀ®PÀ EvÀgÀ zÉñÀUÀ¼À°è PÁtĪÀÅ¢®è. CªÀgÀªÀgÀ zsÀªÀiÁðZÀgÀuÉUÀ¼À£ÀÄß
DZÀj¸ÀĪÀÅzÀPÉÌ E°è ¤§ðAzsÀUÀ½®è. zsÁ«ÄðPÀ ºÀ§âUÀ¼À£ÀÄß MmÁÖV ¸ÉÃj
DZÀj¸ÀĪÀÅzÀPÉÌ ¸ÀgÀPÁgÀzÉÆÝà E°è0iÀÄ d£ÀvÉ0iÀÄzÉÆÝà «gÉÆÃzsÀ
PÁtĪÀÅ¢®è.UÀuÉñÀ ZÀvÀÄyð, 0iÀÄÄUÁ¢ ªÉÆzÀ¯ÁzÀ ºÀ§âUÀ¼À£ÀÄß ¸ÀܽÃ0iÀÄgÉ®è
MlÄÖUÀÆr DZÀj¸ÀÄvÁÛgÉ. ªÀiÁvÀȨsÁµÉ0iÀÄ£ÀÄß E°è §AzÀªÀgÀÄ ªÀÄgÉw®è. PÀ£ÀßrUÀgÀÄ
ºÉaÑgÀĪÀ ¥ÀæzÉñÀUÀ¼À°è £ÀªÀ
ªÀµÁðZÀgÀuÉ0iÀÄ£ÀÄß «dÈA¨sÀuɬÄAzÀ DZÀj¸ÀĪÀÅzÀ£ÀÄß £ÉÆÃqÀĪÀ ¨sÁUÀå E°èUÉ
¸ÀAzÀ±Àð£ÀPÁÌV §AzÀ £ÀªÀÄUÉÆzÀVvÀÄ. J¦æ¯ï 28£Éà vÁjÃQ£ÀAzÀÄ £Á«gÀĪÀ ªÀÄ£É0iÀÄ
¸À«ÄÃ¥ÀªÉà F ¸ÀªÀiÁgÀA¨sÀ £ÀqɬÄvÀÄ.¸ÀªÀiÁgÀA¨sÀ MAzÀÄ ±Á¯É0iÀİè
£ÀqɸÀĪÀÅzÉAzÀÄ ªÀåªÀ¸ÉÜ0iÀiÁVvÀÄÛ. »ÃUÉ MAzÀÄ PÀ£ÀßqÀ ¸ÀAWÀªÀ£ÀÄß PÀnÖPÉÆAqÀÄ
E¢ÃUÀ §gÉà LzÀÄ ªÀµÀð ªÀiÁvÀæªÁVvÁÛzÀgÀÆ F ªÀµÀð E£ÀÆßgÀPÀÆÌ ºÉZÀÄÑ d£À
¸ÉÃjzÀÝgÀÄ. ªÀiÁvÀæªÀ®è Cwy PÀ¯Á«zÀgÁV ¹º PÀ» ZÀAzÀÄæ §¼ÀUÀªÀ£ÀÆß
PÀgɹPÉÆArzÀÄÝzÀjAzÀ CzÀPÉÆÌAzÀÄ PÀ¼É §A¢vÀÄÛ. £ÀªÀÄÆäj¤AzÀ §AzgÀĪÀ PÀ£ÀßqÀ
§¼ÀUÀªÀ£ÀÄß £ÉÆÃqÀĪÀ D¸ÀQÛ d£ÀjVvÀÄÛ.
¨sÁUÀªÀ»¸ÀĪÀ PÀÄlÄA§zÀªÀgÀÄ
MAzÀµÀÄÖ ¥ÀæªÉñÀ zsÀ£À ªÀÄvÀÄÛ ¸ÀAWÀzÀ ¸ÀzÀ¸ÀåvÀ£ÀPÉÌAzÀÄ 25 qÁ®gï
PÉÆqÀ¨ÉÃQvÀÄÛ. CªÀgÀªÀgÀ ªÀÄ£É0iÀİè vÀ0iÀiÁj¹zÀ ¥ÀzÁxÀðUÀ¼À£ÀÄß ªÀÄzsÁåºÀßzÀ
HlPÉÌAzÀÄ vÀgÀ¨ÉÃQvÀÄÛ. MAzÀƪÀgÉ WÀAmÉUÉ J®ègÀÆ ¸ÉÃjzÀÝgÀÄ. ªÉÆzÀ®Ä HlzÀ
ªÀåªÀ¸ÉÜ. HlzÀ ¥ÉnÖUÉUÀ¼À°è C£Àß,ªÉƸÀgÀ£Àß,¥À®å,¸ÁA¨Ágï ZÀ¥Áw
ªÉÆzÀ¯ÁzÀªÀÅUÀ¼À£ÀÄß vÀÄA©¹ mÉÆÃPÀ£ï vÉÆÃj¸zÀªÀjUÉ Hl PÉÆqÀÄwÛzÀÝgÀÄ. ªÀÄPÀ̽UÉ
¦¸ÁÓ ¨ÉÃgÉ EvÀÄÛ.JgÀqÀÄ UÀAmÉUɯÁè Hl ªÀÄÄV¬ÄvÀÄ. ¹» PÀ» ZÀAzÀÄæ §¼ÀUÀzÀ°è
CªÀgÀÄ,CªÀgÀ ªÀÄqÀ¢ VÃvÁ, ªÀÄUÀ¼ÀÄ »vÀ, ²æÃ£Áxï PÀ±Àå¥ï, ªÀÄvÉÛ 0iÀÄA 0iÀĸï
ªÀÄÆwð »ÃUÉ LzÀÄ d£ÀjzÀÝgÀÄ. £ÀÆå eɹð0iÀİè PÁ0iÀÄðPÀæªÀÄ ªÀÄÄV¹ E°èUÉ
§A¢zÀÝgÀÄ. CªÀgÀÄ JgÀqÀÄ wAUÀ¼ÀÄ CªÉÄÃjPÀzÀ°è0iÉÄà EzÀÄÝ,««zsÀ PÁ0iÀÄðPÀæªÀÄUÀ¼À°è
¥À®ÄUÉÆ¼ÀÄîªÀÅzÀ®èzÉ,ZÀAzÀÄægÀªÀgÀ ¨ÉÆA¨Ámï HlzÀ ¥ÁPÀzÀ «±ÉõÀ
PÁ0iÀÄðPÀæªÀÄUÀ¼À£ÀÄß ¹Ãj0iÀįï UÀ¼ÁVºÀ«ÄäPÉÆArzÀÝgÀÄ.CªÀgÀÄ §AzÀÄzÀÄ
¸ÀªÉÄäüÀ£ÀPÉÆÌAzÀÄ PÀ¼É0iÉÄÃjvÀÄÛ.Hl ªÀÄÄVzÀÄ ªÀÄÆgÀÄ UÀAmÉUÉ ªÀÄPÀ̼À
zÉÆqÀتÀgÀ qÁ£ïì UÀ¼ÀÄ,ºÁqÀÄUÀ¼ÀÄ,£ÁlPÀUÀ¼ÀÄ DgÀA¨sÀªÁzÀĪÀÅ.
¥ÀÅgÀAzÀgÀ
zÁ¸ÀgÀ PÀvÉ0iÀÄ£ÀÄß DzsÀj¹,MAzÀÄ ¸ÀÄAzÀgÀªÁzÀ £ÀÈvÀå gÀÆ¥ÀPÀªÀ£ÀÄß§ºÀ¼À ZÉ£ÁßV
Dr vÉÆÃj¹zÀgÀÄ. PÀ£Àßrw0iÉÆÃ§âgÀÄ E°è
¸ÀAVÃvÀ qÁ£ïì UÀ¼À£ÀÄß ªÀÄPÀ̽UÉ PÀ°¸ÀÄwÛzÁÝgÉ. CªÀgÉà ¸ÀévÀB C©ü£À¬Ä¹ ¤ævÀå
gÀÆ¥ÀPÀªÀ£ÀÄß ,£Á®ÄÌ ªÀiÁ«ÄÝ ¸ÀtÚ ªÀÄPÀ̼ÀÄ,ªÀÄvÀÄÛ DgÀÄ ªÀÄA¢ zÉÆqÀتÀgÀÄ
EzÀgÀ°è ¨sÁUÀªÀ»¹zÀÄÝ §ºÀ¼À PÉ®ªÀÅ
ºÁqÀÄUÀ½UÉ ªÀģɯÃdÕªÁV C©ü£À¬Ä¹ ¥ÉæÃPÀëPÀgÀ£ÀÄß gÀAf¹zÀgÀÄ. gÁªÀÄ JA§ÄªÀ
JgÀqÀPÀëgÀzÀ ªÀÄ»ªÉÄ0iÀÄ JA§ ºÁrUÉE§âgÀÄ ¨sÀQÛ ¥ÀÅgÀ¸ÀìgÀªÁV C©ü£À¬ÄzÀgÀÄ.
vÁgÀPÀÌ ©A¢UÉ £Áªï ¤ÃjUÉ ºÉÆÃUÀĪÀ JAzÀÄ ºÉüÀÄwÛzÁÝUÀ ¸À¨sɬÄAzÀ JzÀÄÝ
CªÀgÉÆA¢UÉ PÀÄtÂ0iÀÄĪÀÅzÉÆÃ JAzÀÄ 0iÉÆÃa¹gÀ¨ÉÃPÀÄ.ªÀÄvÉÛ gÀAUÀ£ÀÄ gÀAUÀ
¥ÀæªÉñÀ ªÀiÁr,ºÁ« vÀ¯É0iÀÄ ªÉÄÃ¯É PÀÄtÂzÀÄzÀ£Éßà £ÉÆÃqÀÄwÛzÉÝêÉÇà JA§AvÉ
DrzÀ£ÉÆÃ gÀAUÀ ºÁqÀ£ÀÄß ¥ÀÇwð0iÀiÁV
C©ü£À¬Ä¹zÀgÀÄ.
10£É0iÀÄ vÀgÀUÀw0iÀÄ°è ¨Á¯É0iÉÆ§â¼ÀÄ, ªÀÄÄzÀÄÝ vÁgÉÆÃ JA§ ºÁqÀÄ, ªÀÄvÀÄÛ ¯Á°¹zÀ¼ÀÄ
ªÀÄUÀ£À JA§ ºÁqÀ£ÀÄß E£ÉÆß§â¼ÀÄ ºÀÄqÀÄV »ÃUÉ gÀ¹PÀgÀ ªÀÄ£À gÀAf¹zÀgÀÄ.E£ÀÄß ‘ZÀAzÀæ ZÀÆqÀ ²ªÀ ±ÀAPÀgÀ’ ºÁrUÉ ªÀÄvÀÄÛ PÉÆ£ÉUÉ
¨sÁUÀåzÀ ®Që÷ä ¨ÁgÀªÀÄä JA§ ºÁrUÉ MlÄÖ ºÀvÀÄÛ ªÀÄA¢ ¨Á¯É0iÀÄgÀÄ »ÃUÉ §AzÀªÀgÀ
ªÉÄʪÀÄ£À ¥ÀżÀQvÀUÉÆ¼ÀÄîªÀAvÉ gÀAf¹zÀgÀÄ. E£ÀÄß PÉ®ªÀgÀÄ EA¥ÁV ºÁqÀĪÀÅzÀgÀ
ªÀÄÆ®PÀ ¥ÉæÃPÀëPÀgÀ ªÀÄ£À ¸ÀÆgÉUÉÆAqÀgÀÄ. aPÀÌ ªÀÄPÀ̽AzÀ MAzÀÄ avÀæ VÃvÉUÉ
ªÀÄÄzÁÝV PÀÄtÂ0iÀÄĪÀÅzÀgÀ ªÀÄÆ®PÀ zÉÆqÀتÀjUÉ £ÁªÉãÀÆ ©nÖ®è JA§AvÉ
£Àwð¹zÀgÀÄ.
MAzÀÄ ®WÀÄ
ºÁ¸Àå £ÁlPÀ PÉ®ªÀÅ 0iÀÄĪÀ UɼÉ0iÀÄjAzÀ C©ü£À¬Ä¸À®ànÖvÀÄ. EAf¤Ã0iÀÄgï M§â L n
¥ÁPïð ªÀiÁqÀĪÀÅzÉAzÀÄ ºÉÆgÀlÄ EzÀÝ PÀȶ ¨sÀÄ«Ä0iÀÄ£ÀÄß ªÀiÁj PÉÊ ¸ÀÄlÄÖPÉÆAqÀ
¸ÀAUÀw0iÀÄ£ÁßzsÀj¹ ¸ÀÄAzÀgÀªÁV ªÀÄ£À ªÀÄÄlÄÖªÀAvÉ C©ü£À¬Ä¹zÀgÀÄ.
ªÀÄzsÀåzÀ¯ÉÆèªÉÄä
«gÁªÀÄ«vÀÄÛ. EµÁÖUÀĪÁUÀ¯Éà PÀvÀÛ¯É0iÀiÁVzÀÄÝ ºÉÆgÀUÉ §AzÁUÀ¯Éà UÉÆvÁÛ¬ÄvÀÄ. «gÁªÀÄ
ªÉüÉ0iÀİè,£ÀªÀÄUÉ PÁ¦ü, ZÁ ¹QÌvÀÄ. ªÀÄzsÀåAvÀgÀ «gÁªÀÄ ªÉÃ¼É ªÀÄÄVzÀÄ
CwyUÀ¼ÁV §AzÀ ¹» PÀ» ZÀAzÀÄæ §¼ÀUÀ¢AzÀ PÁ0iÀÄðPÀæªÀÄ DgÀA¨sÀªÁ¬ÄvÀÄ. ªÉÆzÀ°UÉ
ZÀAzÀÄæ vÀªÀÄä ªÉÆzÀ® ¨sÁµÀtzÀ°è CªÀgÉ®ègÀ ¥ÀjZÀ0iÀÄ ºÉýzÀgÀÄ. ºÁ¸Àå ¯ÉÃRPÀgÀÆ
vÀªÀÄä ªÀiÁv£AzÀ gÀ¹PÀgÀ d£À ªÀiÁ£À¸ÀªÀ£ÀÄß ¸ÀÆgÉUÉÆAqÀ 0iÀÄA 0iÀÄ¸ï ªÀÄÆwð0iÀĪÀ vÀªÀÄä ¨ÉÃAPï
GzÉÆåÃUÀ PÁ®zÀ°è ºÀ½î d£ÀgÀ MqÀ£ÁlzÀ°è ¥ÀqÉzÀ C£ÀĨsÀªÀªÀ£ÀÄß ºÁ¸ÀåªÀÄ0iÀĪÁV
«ªÀj¹zÀÄÝ ¸ÉÃjzÀªÀgÀÄ ºÉÆmÉÖ ºÀÄuÁÚUÀĪÀAvÉ £ÀUÀ®Ä PÁgÀtªÁ¬ÄvÀÄ. ¯ÉÃRPÀgÀÄ
C£ÉÃPÀ ºÁ¸Àå §gÀºÀUÀ¼ÀļÀî LªÀvÀÛPÀÆÌ ºÉZÀÄÑ ¥ÀŸÀÛPÀUÀ¼À£ÀÄß. r « rUÀ¼À£ÀÄß ©qÀÄUÀqÉUÉÆ½¹zÁÝgÉ
JA§ÄzÀ£ÀÄß ºÉýzÀgÀÄ. n « ¹Ãj0iÀÄ®UÀ¼UÀÆ ¸ÀA¨sÁµÀuÉ §gÉ¢zÁÝgÀAvÉ. ZÀAzÀÄæ
GvÀÛªÀÄ ¥ÁPÀ ¤¥ÀÅt£ÀÆ ºËzÀÄ.CªÀgÀ ¨ÉÆA¨Ámï ¨sÉÆÃd£À PÁ0iÀÄðPÀæªÀÄ n « 0iÀİè
DUÁUÀ §gÀÄwÛgÀÄvÀÛzÉ.¸ÀĪÀtð n « UÉ EAvÀºÀ gÀ¸À¥ÁPÀUÀ¼À£ÀÄß gÀa¸ÀĪÀ
zÀȱÀåUÀ¼À£ÀÄß ¸ÉgÉ »r0iÀÄĪÀÅzÀPÁÌV0iÉÄà CªÀgÀÄ §A¢zÀÝgÀÄ.PÀ£ÀßqÀ
¹£ÉªÀiÁUÀ¼À°è0iÀÄÆ ZÀAzÀÄæ C©ü£À¬Ä¹zÁÝgÉ. ZÀAzÀÄæ, CªÀgÀ ªÀÄqÀ¢ ¥Á¥À
¥ÁAqÀÄ«£ÀAvÀºÀ CzÀÄãvÀ ºÁ¸Àå ¯ÉÆÃPÀªÀ£Éßà ¸Àȶֹ d£ÀjUÉ £ÀUÀÄ«£À ºÀ§â ªÀ£ÉßÃ
PÉÆlÖªÀgÀÄ. E£ÉÆß§âgÀÄ ²æÃ£ÁxÀ PÀ±Àå¥ï PÀÆqÀ ¹Ãj0iÀÄ®UÀ¼À°è C©ü£À¬ÄzÀÝ®èzÉ,
¤zÉðñÀ£À PÉÆlÖªÀgÀÄ MAzÀÄ ºÁr¤zÀ £ÀªÀÄä£ÀÄß gÀAf¹zÀgÀÄ.
ªÀÄvÉÛ MAzÀÄ
®WÀÄ ºÁ¸Àå £ÁlPÀ CªÀgÉ®èjAzÀ C©ü£À¬Ä¸À®ànÖvÀÄ.ZÀAzÀÄæ M§â GzÉÆåÃUÀ¸ÀÛ
,ºÉAqÀw0iÀÄ d£Àä ¢£ÁZÀgÀuÉUÉ gÀd ¨ÉÃQvÀÄÛ. ¨ÉÆÃ¸ï £À°è K£ÉÆÃ ªÀÄqÀ¢0iÀÄ PÁ®Ä
ªÀÄÄjzÀÄ ºÉÆÃVzÉ0iÉÄAzÀÄ ¸ÀļÀÄè ºÉý gÀeÉ ¥ÀqÉ¢zÀÝ. gÀħÄâUÀÄAqÀÄ ©zÀÄÝ GAmÁzÀ
UÁ0iÀiÁ¼ÀĪÀ£ÀÄß £ÉÆÃqÀ®Ä ¨ÉÆÃ¸ï ZÀAzÀÄæ«£À ªÀÄ£ÉUÉ §AzÀzÀÄÝ. CUÀgÀ§wÛ ªÀiÁjPÉÆAqÀÄ
§AzÀªÀ¼À£Éßà vÀ£Àß ªÀÄqÀ¢0iÉÄAzÀÄ ºÉýzÀ
ZÀAzÀÄæ ¹QÌ ©zÀÝzÀÄÝ EzÉ®è ºÁ¸Àå¨sÀjvÀªÁV C©ü£À¬Ä¹ ¥ÉæÃPÀëPÀgÀ£ÀÄß £ÀUÉUÀqÀ®°è
vÉð¹zÀgÀÄ. PÀqÉUÉ Cwy PÀ¯Á«zÀjUÉ ¸ÁPÀµÀÄÖ zsÀ£ÀåªÁzÀ ¸ÀªÀÄ¥ÀðuÉ0iÀiÁ¬ÄvÀÄ. E°è0iÀÄ
PÀ£ÀßrUÀgÀ ¥ÀgÀªÁV QgÀÄPÁtÂPÉ PÉÆqÀ¯Á¬ÄvÀÄ. §AzÀªÀgÀÆ C©üªÀiÁ£À¢AzÀ E°è0iÀÄ
PÀ£ÀßrUÀgÀ MUÀÎlÖ£ÀÄß, MmÁÖV »ÃUÉ «dÈA¨sÀuɬÄAzÀ »ÃUÉ ºÀ§â ºÀj¢£ÀUÀ¼À£ÀÄß
DZÀj¸ÀĪÀ ªÀÄÆ®PÀ ªÀÄÄA¢£À d£ÁAUÀPÉÌ £ÀªÀÄä zÉòÃ0iÀÄ ºÀ§âUÀ¼À PÀÄjvÀÄ,PÀ£ÀßqÀ
¸ÁgÀ¸ÀévÀ ¯ÉÆÃPÀzÀ zsÀÄæªÀ vÁgÉ0iÀÄAwgÀĪÀ ¥ÀÅgÀAzÀgÀ zÁ¸ÀgÀAvÀºÀ PÀª
¥ÀÅAUÀªÀgÀ ¸ÀägÀuÉ0iÀÄ£ÀÄß ªÀiÁrPÉÆ¼ÀÄîwÛgÀĪÀÅzÀPÉÌ ºÉªÉÄä ¥ÀqÀÄvÁÛ £Ár£À
£ÀÄr0iÀÄ£ÁßqÀÄwÛgÀĪÀ E°è0iÀiªÀgÀ£ÀÄß £ÉÆÃr ºÉªÉÄä¬ÄAzÀ
¥ÀżÀQvÀgÁzÀgÀÄ.«zÉñÀªÉÇAzÀgÀ°è ªÀiÁvÀȨsÁµÉ0iÀÄ ¸ÉÆUÀqÀÄ ªÀÄÄAzÀĪÀj0iÀÄÄwÛgÀĪÀÅzÀÄ,
J°è0iÉÄ EgÀÄ, PÀ£ÀßrUÀ£ÁVgÀÄ JA§ PÀ£ÀßqÀ PÀ«ªÁtÂ0iÀÄ£ÀÄß ¸ÁxÀðPÀUÉÆ½¹PÉÆArgÀĪÀ
E°è0iÀÄ 0iÀÄĪÀPÀgÀ ¸ÁºÀ¸ÀªÀÅ £ÀªÀÄä£ÀÄß ¨ÉgÀUÀÄUÉÆ½¹vÀÄ.
Sunday, June 10, 2012
ಪುಟಾಣಿಗಳ ಹಬ್ಬ
ಪುಟಾಣಿಗಳ ಹಬ್ಬ
ಪಾಶ್ಚಿಮಾತ್ಯ ದೇಶಗಳಲ್ಲಿ ಚಿಕ್ಕ ಮಕ್ಕಳ ಬಗ್ಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಾರೆ. ಮನೆಗಳಲ್ಲಂತೂ ಶಾಲೆಗೆ ಹೋಗತೊಡಗಿದ ಮೇಲೆಯೂ ಮಕ್ಕಳಿಗೆ ಅಪ್ಪನೋ ಅಮ್ಮನೋ ಊಟ ಮಾಡಿಸುವುದು ಸಾಮಾನ್ಯವಾಗಿದೆ. ನಮ್ಮಲ್ಲಿ ಕೈತುತ್ತು ಎನ್ನುವ ರೀತಿಯಲ್ಲಿ ಬಟ್ಟಲಿನಲ್ಲಿ ಅನ್ನ ಸಾಂಬಾರು ತರಕರಿ ಎಲ್ಲ ಬೆರಸಿ ಚಮಚದಲ್ಲಿ ಅದೂ ಅವರನ್ನು ಓಲೈಸುತ್ತಾ ತಿನ್ನಿಸಬೇಕು. ಏನಾದರೂ ಮೂವಿಗಳನ್ನು ನೋಡಿಕೊಂಡೋ ಅಥವಾ ಬೇರೇನಾದರೂ ಆಟವಾಡಿಕೊಂಡೋ ತಿನ್ನಿಸಿದರೆ ಅವರಿಗೆ ಗೊತ್ತಿಲ್ಲದೇ ಹೊಟ್ಟೆ ತುಂಬುತ್ತದೆ. ಅಂತೂ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಾರೆ.ಮತ್ತೇ ಮನೆಯಲ್ಲಿ ಒಂದು ಟೋಯ್ ರೂಮ್ ಇರುತ್ತದೆ. ಅದರೊಳಗೆ ತುಂಬಾ ಆಟದ ಸಾಮಾನುಗಳು. ಪ್ರತಿ ಸಲ ಅಂಗಡಿಗೆ ಹೋದಾಗಲೂ ಏನಾದರೂ ಟೋಯ್ ಗಳನ್ನು ಖರೀದಿಸುವುದೋ, ಗಿಫ್ಟ್ ರೂಪದಲ್ಲಿ ಸಿಕ್ಕಿದ್ದೋ ವಿವಿಧ ತರದ ಪಜ್ಲುಗಳು ದೊರಕಿದ್ದನ್ನು ಮಕ್ಕಳು ಚುರುಕಾಗಿ ಜೋಡಿಸುತ್ತಾರೆ. ಆಡಿದ ಮೇಲೆ ಅಲ್ಲಲ್ಲಿ ಬಿಸಾಕಿ ಹೋಗುವುದು ಸಾಮಾನ್ಯ. ದೊಡ್ಡವರು ಅವುಗಳನ್ನು ಎತ್ತಿಡಬೇಕು. ಆದರೆ ಮಕ್ಕಳು ತುಂಬಾ ಚುರುಕಾಗಿರುತ್ತಾರೆ. ಬೇಕಾದ್ದನ್ನೆಲ್ಲ ಕೊಡಿಸುವುದು ಹೆತ್ತವರ ಕರ್ತವ್ಯವೆಂದು ತಿಳಿದುಕೊಂಡಿದ್ದಾರೆ. ಆಗಾಗ ಮನೆಗೆ ಬೇರೆ ಮನೆಯವರು ಸಂದರ್ಶಿಸುವಾಗ ಆ ಮನೆಯಲ್ಲಿ ಮಕ್ಕಳಿದ್ದರೆ ಹೊಸ ಆಟದ ಸಾಮಾನು ತಂದು ಕೊಡುವುದು ಪದ್ಧತಿಯಾಗಿದೆ.ಮೂರು ವರ್ಷದ ಮಕ್ಕಳೂ ಸೈಕಲ್ ಸವಾರಿ ಮಾಡಿವುದು, ಸ್ಕೂಟರ್ ಬಿಡುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೇರೆ ಬೇರೆ ಪ್ರೇಕ್ಷಣೀಯ ಜಾಗಗಳಿಗೆ ಕರಕೊಂಡು ಹೋಗುತ್ತಿರುತ್ತಾರೆ. ಮತ್ತೆ ದೊಡ್ಡ ದೊಡ್ಡ ಮೋಲ್ ಗಳಲ್ಲಿ ಮಕ್ಕಳ ಆಟಕ್ಕೇನೇ ಆಟದ ಜಾಗವಿರುತ್ತದೆ. ಮಕ್ಕಳನ್ನು ಆದಲು ಬಿಟ್ಟು ಒಬ್ಬ ಅಲ್ಲಿ ನಿಲ್ಲುವುದು ಮತ್ತೊಬ್ಬ ಬೇಕಾದ ಸಾಮಾನು ಕೊಂಡುಕೊಂಳ್ಳುವುದು ನಡೆಯುತ್ತದೆ. ಚಳಿಗಾಲದಲ್ಲಂತೂ ಗಂಟೆಕಟ್ಟಲೆ ಮೋಲ್ ನೊಳಗೆ ಇದ್ದುಬಿಡುವುದೂ ಇದೆ.ಚಿಕ್ಕ ಮಕ್ಕಳಿಗೆ ಈಜು ಕಲಿಸುವುದು,ಅಥವಾ ಸಂಗೀತ,ಗಿಟಾರ್ ಡಾನ್ಸ್ ಕರಾಟೆ ಕಲಿಸುವುದು ನಡೆಯುತ್ತದೆ.ಒಟ್ಟಾರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನವೂ ನಡೆಯುತ್ತದೆ.
ಗಿರಾಕಿಗಳನ್ನು ಆಕರ್ಶಿಸಲು ಮಕ್ಕಳಿಗೆ ಕೆಲವು ಕಡೆ ಮಕ್ಕಳ ಹಲವು ಬಗೆಯ ಆಟಗಳನ್ನೊಳಗೊಂಡ ಚೆಕ್ ಇ ಚೀಸ್ ಎಂಬ ಹಣ ಮಾಡುವ ದಂಧೆಯೂ ಇದೆ. ಮಕ್ಕಳು ಇದಕ್ಕೆ ಮುಗಿಬಿದ್ದು ಹೋಗುತ್ತಾರೆ. ಒಂದು ಆಟಕ್ಕೆ ಕಾಲು ಡಾಲರ್ ಒಳಗೆ ಹೋದ ಮಕ್ಕಳು ಹಿರಿಯರ ಬೊಕ್ಕಸಕ್ಕೆ ಏಳೆಂಟು ಡಾಲರಾದರೂ ಲೂಟಿ ಮಾಡುತ್ತಾರೆ. ಇನ್ನು ವಿವಿಧ ಆಟಗಳನ್ನೊಳಗೊಂಡ ರೈಡುಗಳೂ ಇವೆ. ಸೆಸಮೆ ಸ್ಟ್ರೀಟ್ ನಲ್ಲಿ ಅವಿರತವಾಗಿ ಇಂತಹ ಆಟಗಳನ್ನು ಆಡಲು ಮಕ್ಕಳು ಇಷ್ಟಪಡುತ್ತಾರೆ. ಕೆಲವು ರೈಡುಗಳಿಗೆ ದೊಡ್ಡವರು ಜೊತೆಯಲ್ಲಿಯೇ ಇರಬೇಕೆಂದಿದೆಯಾದರೂ ಮಕ್ಕಳಿಗೆ ತುಂಬಾ ಖೂಶಿ ತರುತ್ತದೆ. ಆ ಪ್ರದೇಶದಲ್ಲಿ ಯಾವಾಗಲೂ ಜನಸಂದಣಿಯಿರುತ್ತದೆ. ಕೆಲವು ಕಡೆ ನಮ್ಮಲ್ಲಿಯಂತೆ ತಾತ್ಕಾಲಿಕವಗಿ ಇಂತಹ ರೈಡುಗಳನ್ನು ಹಮ್ಮಿಕೊಳ್ಳುತ್ತಾರೆ. ಅಂತೂ ಸುದ್ದಿ ಮಕ್ಕಳಿಗೆ ಸಿಕ್ಕಿಬಿಟ್ಟರೆ ಕೇಳುವುದೇ ಬೇಡ. ಡಾಡಿ ನನ್ನನ್ನು ರೈಡುಗಳಿಗೆ ಕರಕೊಂಡುಹೋಗಿ ಎಂದು ಅಂಗಲಾಚುತ್ತಾರೆ. ಹೋದರೆ ಒಂದು ಆಟಕ್ಕೆ ಒಂದು ಡಾಲರ್ ಜೈಂಟ್ ವೀಲ್ ಮೊದಲಾದ ಆಟಗಳು ,ವಿಮನದಲ್ಲಿ ಕುಳಿತಂತೆ ಕುಳ್ಳಿರಿಸಿ ಎಂಟು ಹತ್ತು ಸುತ್ತು ತಿರುಗಿಸಿ ಇಳಿಸಿದರಾಯಿತು. ಮಖ್ಖಳೂ ಎರಡು ಮೂರು ರೈಡುಗಳಿಗೆ ಮೂರು ನಾಲ್ಕು ಡಾಲರ್ ಗಳಂತೆ ಹತ್ತಿಪ್ಪತ್ತು ಡಾಲರ್ ನಷ್ಟವೇ ಆಗುತ್ತದೆ. ಆದರೆ ಮಕ್ಕಳ ಉತ್ಸಾಹ, ಅದರಿಂದ ಅವರಿಗೊದಗುವ ಸಂತೃಪ್ತಿ ಹಿರಿಯರಿಗೆ ಹೆಮ್ಮೆಯೆನಿಸುತ್ತದೆ.
ಮೊನ್ನೆ ನಾವಿರುವ ನಗರದಲ್ಲಿ ಮಕ್ಕಳಿಗಾಗಿ ಒಂದು ವಿಶಿಷ್ಟ ಪ್ರದರ್ಶನ ಏರ್ಪಡಿಸಿದ್ದರು.ಅದುವೇ ಪುಟಾಣಿಗಳ ಹಬ್ಬ!ಸುದ್ದಿ ತಿಳಿದೊಡನೆ ಈ ಪ್ರದೇಶದಲ್ಲಿರುವ ಜನರೆಲ್ಲರೂ ಉತ್ಸಾಹದಿಂದ ಅವರವರ ಮಕ್ಕಳನ್ನು ಕರಕೊಂಡು ಹೊರಟರು. ಅದರಲ್ಲೂ ಧರ್ಮಾರ್ಥವಾದ ಕಾರಣ ಖರ್ಚಿಲ್ಲವಲ್ಲ೧ನಾವಿರುವಲ್ಲಿಂದ ಹತ್ತು ಮೈಲು ದೂರದಲ್ಲಿ ಪ್ರದರ್ಶನ ನಡೆಯುವುದೆಂದು ಗೊತ್ತಾಗಿ ನಾವೂ ಮೊಮ್ಮಗನನ್ನು ಕರಕೊಂಡು ಹೊರಟೆವು. ನಗರ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ವಿಶಲವಾದ ಬಯಲಲ್ಲಿರುವ ದೊಡ್ಡ ಕಟ್ಟಡದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ವಾಹನಗಳನ್ನು ನಿಲ್ಲಿಸುವುದಕ್ಕೂ ಪಾರ್ಕಿಂಗ್ ಜಾಗಗಳಿಲ್ಲ. ಎಲ್ಲೆಂದರಲ್ಲಿ ಸಾಲಾಗಿ ಶಿಸ್ತಿನಿಂದ ಸಾವಿರಾರು ವಾಹನಗಾಳು ನಿಂತಿದ್ದವು.ಹಾಗೆ ನಮಗೆ ಕಾರ್ ಪಾರ್ಕ್ ಮಾಡಿ ನಡೆಯಬೇಕಾಯಿತು. ಸಾವಿರಾರು ಜನ ಓಡಾಡುತ್ತಿದ್ದರು. ಒಳಗೆ ಪ್ರವೇಶ ಮಾಡಿದರೆ ಅಲ್ಲಿಯೂ ನೋಡುವುದಕ್ಕೆ ಜನ ಸಾಲುಗಟ್ಟಿ ನಿಂತಿದ್ದರು.ಒಂದು ಕಡೆ ವಿವಿಧ ಬಣ್ಣದ ಪೈಂಟಿಂಗ್ ನಡೇಯುತ್ತಿತ್ತು. ಮಕ್ಕಳೇ ಉತ್ಸಾಹದಿಂದ ಕೊಟ್ಟ ಪ್ಲೇಟಿಗೆ ಬಣ್ಣ ಕೊಡುತ್ತಿದ್ದರು.ಮೊಮ್ಮಗನಿಗಂತೂ ಕೂಶಿಯಾಗಿತ್ತು. ಮತ್ತೊಂದು ಕಡೆ ಅಲ್ಲೇ ಇಟ್ತಿದ್ದ ಕಾಗದಕ್ಕೆ ಬಣ್ಣ ಕೊಡುವುದು.ಬಣ್ನ ಕೊಟ್ಟ ಕಾಕ್ಕಳಿಗೇಮತ್ತೊಂದು ಕಡೆ ಹೆಲಿಕೋಪ್ಟರ್ ಅಂತೆ ಅತ್ತಿಂದಿತ್ತ ಸುತ್ತಾಡುತ್ತಿತ್ತು. ಕೋಷ್ಟ್ ಗಾರ್ಡಿನವರದಂತೆ ಆ ಪ್ರದರ್ಶನ ಒಮ್ದು ಮಕ್ಕಳಿಗೆ ಜಾರು ಬಂಡಿಯಿತ್ತು. ಬಹಳ ಎತ್ತರದಿಂದ ಜಾರುವ ವ್ಯವಸ್ಥೆಯಿತ್ತು. ಮೊಮ್ಮಗ ಮೂರು ನಾಲ್ಕು ಸಲ ಜಾರಿದ. ಕಗದಲ್ಲಿರುವ ಚಿತ್ರವನ್ನು ಅಲ್ಲೇ ಇಟ್ಟ ಕತ್ತರಿಯಿಂದ ಕತ್ತರಿಸಿ ಒಂದು ದಪ್ಪದ ರಟ್ಟಿನ ತುಂಡಿಗೆ ಅಂಟಿಸಿ ಎರಡು ಬದಿಯಲ್ಲಿಯೂ ಕಟ್ಟಿದ ನೂಲಿಅನ್ನು ತಿರುಗಿಸುವುದು ಹೀಗೆಲ್ಲ ತುಂಬಾ ಆಟಗಳಿದ್ದುವು ಈ ಎಲ್ಲ ಆಟಗಳಾಗುತ್ತಿದ್ದಂತೆಯೇ ಕೇಂಡಿ,ಜೋಳದ ಅರಳು ಮೊದಲಾದುವುಗಳು ಮಕ್ಕಳಿಗೆ ತಿನ್ನಲು ಸಿಗುತ್ತಿತ್ತು.ಕುಡಿಯುವುದಕ್ಕೆ ಹಣ್ಣಿನ ರಸ ಕೊಡುತ್ತಿದ್ದರು. ಒಂದೊಂದು ಕಂಪೆನಿಯವರು ಪ್ರಚಾರಕ್ಕಾಗಿ ಅವರ ಪ್ರೊಡಕ್ಟ್ ಗಳನ್ನು ತಂದಿದ್ದರು. ಎಲ್ಲ ಮಕ್ಕಳಿಗೆ ಸಂಬಂಧಪಟ್ಟುದು. ಮಕ್ಕಳಿಗೆ ಮಾತ್ರ ಬೆಳಿಗ್ಗೆ ಆರಂಭವಾದ ಶೋ ಮಧ್ಯಾಹ್ನ ಒಂದೂವರೆ ಘಂಟೆಯ ವರೆಗೆ ಖುಶಿ ಕೊಟ್ಟುದಂತೂ ನಿಜ. ಪ್ರದರ್ಶನದ ಅವಧಿ ಮುಗಿದೊಡನೆ ಕಟ್ಟಡಗಳು ಮಾತ್ರವೇ ಅಲ್ಲಿದ್ದುದು.
Subscribe to:
Posts (Atom)